ಶುಕ್ರವಾರ, ಜನವರಿ 17, 2014

ನೇಕಾರಿಕೆ ತೊರೆದವರು ಮರಳಿ ಬರುವ ತನಕ ಸತ್ಯದ ಆಗ್ರಹ

ಸಂದರ್ಶನ : ಪಿ.ಓಂಕಾರ್

ಸೌಜನ್ಯ: ವಿಯಕ ಕರ್ನಾಟಕ



ಗ್ರಾಮೀಣರ ಸುಸ್ಥಿರ ಬದುಕಿಗೆ ಆಧಾರವಾದ ಹಲವು ಕುಲ ಕಸುಬುಗಳೊಂದಿಗೆ 'ಒಳ ಕೊಂಡಿ' ಹೊಂದಿರುವ ಕೈಮಗ್ಗ ಕ್ಷೇತ್ರದ ಉಳಿವಿಗಾಗಿ ಅಖಿಲ ಭಾರತ ಕೈಮಗ್ಗ ಸಂಘಟ ನೆ ಗಳ ಒಕ್ಕೂಟ ಹೋರಾಟ ಆರಂಭಿಸಿದೆ. ಉತ್ತರ ಕರ್ನಾಟಕದ ಗಜೇಂದ್ರ ಗಡ ದಿಂದ ಮಂಗಳವಾರ ಹೊರಟು, ಜ.27ರಂದು ಬದಾಮಿಯಲ್ಲಿ ಸಂಪನ್ನಗೊಳ್ಳಲಿರುವ 'ಬನಶಂಕರಿ ಸತ್ಯಾಗ್ರಹ ಯಾತ್ರೆ' ಯಲ್ಲಿ ರಾಜ್ಯಾದ್ಯಂತದ ಪ್ರಜ್ಞಾವಂತರು ಕಾಲ್ಜೋಡಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ಶ್ರಮಜೀವಿ ಆಶ್ರಮದಲ್ಲಿ ಜ.30ರಿಂದ ಅನಿರ್ಧಿ ಷ್ಟಾವಧಿ ನಿರಶನ ಹೂಡಲಿರುವ ಚರಕ ಮತ್ತು ದೇಸಿ ಸಂಸ್ಥೆಗಳ ರೂವಾರಿ, ರಂಗಕರ್ಮಿ ಪ್ರಸನ್ನ ಹೋರಾಟದ ಕುರಿತು ಇಲ್ಲಿ ಮಾತನಾಡಿದ್ದಾರೆ.

1 ಕೈಮಗ್ಗ ಕ್ಷೇತ್ರ ಎದುರಿಸುತ್ತಿರುವ ಸಂಕಟಕ್ಕೆ ಏನು?ಯಾರು ಕಾರಣ?


ದೇಶದಲ್ಲಿ 1905ರಿಂದ ಜಾರಿಯಲ್ಲಿರುವ, 1985ರಲ್ಲಿ ಪರಿಷ್ಕೃತಗೊಂಡ 'ಕೈಮಗ್ಗ ಮೀಸಲು ಅಧಿನಿಯಮ'ದ ಪ್ರಕಾರ ಹಲವು ಪಾರಂಪರಿಕ ಬಟ್ಟೆಗಳನ್ನು ಕೈಮಗ್ಗದಲ್ಲಷ್ಟೆ ತಯಾರಿಸ ಬೇಕು. ಯಂತ್ರ, ವಿದ್ಯುತ್ ಮಗ್ಗಗಳಿಂದ ತಯಾರಿಸುವುದು ಶಿಕ್ಷಾರ್ಹ ಅಪ ರಾಧ. ಆದರೆ ಸರಕಾರಗಳು ಆಮಿಷ ವೊಡ್ಡಿ ವಿದ್ಯುತ್ ಮಗ್ಗ ಹಾಕಿಸಿ ಕಲಬೆರಕೆ ಬಟ್ಟೆ ಉತ್ಪಾದನೆಗೆ ಪ್ರಚೋದನೆ ನೀಡುತ್ತಿವೆ. ಇದರಿಂದ ನೇಕಾರ ಆತ್ಮಹತ್ಯೆ ಅಂಚಿಗೆ ತಲುಪಿದ್ದಾನೆ. 'ನೇಕಾರಿಕೆಯ ಯಾಂತ್ರೀಕರಣ ಪ್ರಕ್ರಿಯೆಯನ್ನು ನಿಲ್ಲಿಸಿ' ಎಂಬುದು ಹಕ್ಕೊತ್ತಾಯ.

2 ಇದು ಬುದ್ಧಿ ಪೂರ್ವಕವಾಗಿ ನಡೆದ ತಪ್ಪೇ? ಗೊತ್ತಿಲ್ಲದೆ ಆದದ್ದೆ?

ಬುದ್ಧಿಪೂರ್ವಕವಾಗಿಯೇ ನಡೆದದ್ದು. ಇದರ ಹಿಂದೆ ವಿದ್ಯುತ್ ಮಗ್ಗಗಳ ಮಾಲೀಕರು, ಬ್ರ್ಯಾಂಡೆಡ್ ಸಿದ್ಧ ಉಡುಪು ತಯಾರಿಸುವ ಬಹುರಾಷ್ಟ್ರೀಯ ಕಂಪನಿ ಗಳ ಹುನ್ನಾರವಿದೆ. ಇವರು ಕಳೆದ ವರ್ಷ 'ಕೈಮಗ್ಗ' ಹೆಸರಿನ ಮರು ನಾಮ ಕರಣಕ್ಕೆ ಒತ್ತಡ ಹೇರಿದರು. ಒತ್ತಾ ಯಕ್ಕೆ ಬಲಿಬಿದ್ದ ಕೇಂದ್ರ ಸರಕಾರ, ವಿದ್ಯುತ್ ಮಗ್ಗದ ಬಟ್ಟೆಯನ್ನು ಕೈಮಗ್ಗ ಬಟ್ಟೆ ಎಂದು ಘೋಷಿಸಲು ವಿಫಲ ಯತ್ನ ನಡೆಸಿತು. ಇದು ಸತ್ಯಾಗ್ರಹದ ಮೊದಲ ಜಯ.

3ಅಂದರೆ, ಈ ಹೋರಾಟ ವಿದ್ಯುತ್ ಮಗ್ಗಗಳ ವಿರುದ್ಧವೇ?

ಖಂಡಿತಾ ಅಲ್ಲ. ಸರಕಾರ ವಿದ್ಯುತ್ ಮಗ್ಗಗಳನ್ನು ಮಹಾ ನಗರ ಗಳಲ್ಲಿ ಧಾರಾಳವಾಗಿ ಹಾಕಲಿ. ಅಲ್ಲಿ, ಕೈಮಗ್ಗ ಮೀಸಲು ಅಧಿನಿ ಯ ಮ ದಡಿ ಬರದೆ ಇರುವ ಬಟ್ಟೆ ಗಳ ನ್ನು ಧಾರಾಳ ನೇಯ್ದು ರಫ್ತು ಮಾಡಲಿ. ಸತ್ಯಾಗ್ರಹವು ವಿದ್ಯುತ್ ಮಗ್ಗಗಳ ಸಂತ್ರಸ್ತ ಕಾರ್ಮಿ ಕರ ಸತ್ಯಾ ಗ್ರಹವೂ ಹೌದು. ಕೊಪ್ಪಳದಲ್ಲಿ ದಲಿತರಿಗೆ ಸೇರಿದ ವಿದ್ಯುತ್ ಮಗ್ಗಗಳ ಕಾರ್ಮಿ ಕರು 'ನಾವು ನೇಯ್ದ ಬಟ್ಟೆ ಗ ಳನ್ನು ತಮಿಳು ನಾಡು ಮಾದರಿ ಯಲ್ಲಿ ಸರಕಾರವೇ ಖರೀದಿಸಲಿ' ಎಂಬ ಬೇಡಿಕೆ ಇಟ್ಟು ನಡೆಸುತ್ತಿ ರುವ ಹೋರಾಟ ವನ್ನೂ ಬೆಂಬ ಲಿ ಸು ತ್ತೇವೆ. ರಾಜ್ಯದ ವಿದ್ಯುತ್ ಮಗ್ಗ ಅಭಿ ವೃದ್ಧಿ ನಿಗಮ ಭ್ರಷ್ಟವಾಗಿದೆ. ಬಡ ವಿದ್ಯುತ್ ಮಗ್ಗ ಗಳ ನೇಕಾರ ರಿಂದ ಬಟ್ಟೆ ಖರೀದಿ ಸುವ ಬದಲು ಹೊರ ರಾಜ್ಯ ಗ ಳಿಂದ ಬಟ್ಟೆ ಖರೀದಿ ಸುವ ದಲ್ಲಾಳಿ ಯಾಗಿದೆ. ಇದು ಖಂಡನಾರ್ಹ. ವಿದ್ಯುತ್ ಮಗ್ಗ ಗಳ ಅಭಿವೃದ್ಧಿ ನಿಗಮ ವನ್ನು ಮುಖ್ಯ ಮಂತ್ರಿ ಪುನರ್ ರಚಿಸಬೇಕು.

4 ಕೈಮಗ್ಗ ಮಾತ್ರವಲ್ಲ, ಉಳಿದ ಕ್ಷೇತ್ರಗಳದ್ದೂ ಇಂಥದೇ ಸಮಸ್ಯೆಯಲ್ಲವೇ?

ನಿಜ, ಗ್ರಾಮೀಣ ಕ್ಷೇತ್ರವೆನ್ನುವುದು ಸೂಕ್ಷ್ಮ ಪರ‌್ಯಾವರಣವಿದ್ದಂತೆ; ಎಲ್ಲ ಪರಸ್ಪರಾವಲಂಬಿ. ಪಾರಂಪರಿಕ ಕೃಷಿ ಹಾಳಾದರೆ ಹಲವು ಕುಶಲ ಕರ್ಮ ಗಳು ಮಣ್ಣು ಪಾಲಾಗು ತ್ತವೆ. ಈ ಎಲ್ಲ ಕ್ಷೇತ್ರಗಳ, ಎಲ್ಲ ಹೋರಾಟ ಗಳು ಒಗ್ಗೂಡದಿದ್ದರೆ ದೇಶ ಉಳಿ ಯಲ್ಲ. ಆದರೆ, ನಾವು ವಿವಿಧ ಕಾರ‌್ಯಕ್ರಮ, ಹಾಸ್ಯಾಸ್ಪದ ಯೋಜನೆ ಗಳ ಮೂಲಕ ಗ್ರಾಮೀಣ ರೈತ, ನೇಕಾರ, ಕುಶಲ ಕರ್ಮಿಗಳು, ಕೃಷಿ ಕಾರ್ಮಿಕರು ಎಲ್ಲರನ್ನೂ ಜೂಜುಗಾರ, ಭಿಕ್ಷುಕರನ್ನಾಗಿ ಮಾಡುತ್ತಿದ್ದೇವೆ. ಅವರೆಲ್ಲರಲ್ಲೂ ಅನಗತ್ಯ ಹತಾಶೆ ತಾಂಡವವಾಡುತ್ತಿದೆ. ನೇಕಾರರಿಗೆ ಕನ್ನಡಕ, ಗ್ರಾಮೀಣ ಜನರಿಗೆ ಟಿವಿ ಸೆಟ್ ಕೊಡುವುದನ್ನೇ ಪ್ರಗತಿ ಎಂದರೆ ಏನನ್ನುತ್ತೀರಿ?

5 ಸತ್ಯಾಗ್ರಹಕ್ಕೆ ಬೇರೆ ಬೇರೆ ಕ್ಷೇತ್ರದ ಜನರ ಬೆಂಬಲ ಹೇಗಿದೆ?

ಸ್ವಾತಂತ್ರ್ಯ ಚಳವಳಿಯಲ್ಲೂ ಲೇಖಕರು, ಸಮಾಜ ಕಾರ‌್ಯಕರ್ತರು ಮುಂಚೂಣಿಯಲ್ಲಿದ್ದರು. ಈ ಸತ್ಯಾಗ್ರಹ ನೇಕಾರರದ್ದಷ್ಟೇ ಅಲ್ಲ ಗ್ರಾಹಕರ ಸತ್ಯಾಗ್ರಹವೂ ಹೌದು. ಕೈಮಗ್ಗ ಗ್ರಾಹಕರೇ ಆದ ಲೇಖಕರು, ಕಲಾವಿದರು, ಯುವಜನರು, ಕಾಲೇಜು ವಿದ್ಯಾರ್ಥಿಗಳು ದೊಡ್ಡ ಮಟ್ಟ ದಲ್ಲಿ ಬೆಂಬಲಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ 'ನಮ್ಮ ನೇಕಾರ ಯಂತ್ರ ರಕ್ಕಸನ ದವಡೆಗೆ ಸಿಕ್ಕಿದ್ದಾನೆ' ಎಂದಿದ್ದಾರೆ. ಸಾಹಿತಿ ಯು.ಆರ್.ಅನಂತಮೂರ್ತಿ 'ಕೈಮಗ್ಗ ಸತ್ಯಾಗ್ರಹವು ಜಾತಿ ವಿನಾಶದ ಸತ್ಯಾಗ್ರಹವೂ ಆಗಬೇಕು' ಎಂದು ಹೇಳಿ ಸರಕಾರದ ಒಡೆದು ಆಳುವ ನೀತಿಯನ್ನು ಪ್ರಶ್ನೆ ಮಾಡಿದ್ದಾರೆ.

6 ಸರಕಾರಗಳ ಒಡೆದು ಆಳುವ ನೀತಿ ಎಂದರೆ?

ಎಲ್ಲ ಪಕ್ಷಗಳ ಎಲ್ಲ ಸರಕಾರಗಳೂ ಕುಲಕಸುಬು ಎಂಬ ಪದವನ್ನು ತಪ್ಪಾಗಿ ಅರ್ಥೈಸುತ್ತಿವೆ. ಕುಲವೇ ಕಸುಬು ಎಂದು ಹೇಳಿ, ಕಸುಬನ್ನು ನಾಶ ಮಾಡಿ 'ಕುಲ'ಗಳನ್ನು ಜಾತಿ ಸಂಘಟನೆ ಗಳನ್ನಾಗಿಸಿ ಮತ ಬ್ಯಾಂಕ್‌ಗಳನ್ನಾಗಿ ಪರಿವರ್ತಿಸತೊಡಗಿವೆ. ಕುಲ ಕಸುಬು ಎಂಬ ಪದದ ನಿಜ ಅರ್ಥ 'ಕಸುಬೇ ಕುಲವು' ಎಂಬುದು. ಒಬ್ಬ ಮುಸಲ್ಮಾನ, ದಲಿತ ನೇಕಾರ ಕೂಡ ನೇಕಾ ರನೇ. ಗ್ರಾಮೀಣ ಕಸುಬು ಗಳನ್ನು ಉಳಿಸಬೇಕು. ಕುಲಗಳನ್ನು ಜಾತಿ ಸಂಘಟನೆಗಳ ನ್ನಾಗಿಸುವ ಅಸಹ್ಯ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು.

7 ಕೈಮಗ್ಗಕ್ಕೆ ಸಂಬಂಧಿಸಿದ ಯಶಸ್ಸಿನ ಮಾದರಿಗಳು ಸರಕಾರಳಿಗೇಕೆ ಅಪಥ್ಯ?

ದಸ್ತಕಾರ್ ಆಂಧ್ರ, ಕರ್ನಾಟಕದ ಚರಕ, ದೇಸಿ, ದಿಲ್ಲಿಯ ದಸ್ತಕಾರ್, ಪಶ್ಚಿಮ ಬಂಗಾಳದ ಕ್ರಾಫ್ಟ್ ಕೌನ್ಸಿಲ್ ಮುಂತಾದವು ಆರ್ಥಿಕವಾಗಿ ಲಾಭದಾಯಕ ಮಾದರಿಗಳು. ಇಲ್ಲೆಲ್ಲ ನೇಕಾರರು ಶ್ರಮಕ್ಕೆ ತಕ್ಕ ಪ್ರತಿಫಲದ ಜತೆಗೆ ವರ್ಷಕ್ಕೆ ಕನಿಷ್ಠ 300 ದಿನಗಳ ಖಾತ್ರಿ ಕೆಲಸ ಪಡೆಯುತ್ತಾರೆ. ಇವು ದೇಶದ ಎಲ್ಲ ನೇಕಾರರ ಮಾದರಿಯಾಗುವುದು ಸಾಧ್ಯವಿದೆ. ಆದರೆ, ಸರಕಾರಗಳಿಗೆ ಗ್ರಾಮೀಣ ಕ್ಷೇತ್ರ ಆರ್ಥಿಕವಾಗಿ ತನ್ನ ಕಾಲಮೇಲೆ ತಾನು ನಿಲ್ಲಬಲ್ಲದು ಎಂಬ ನಂಬಿಕೆಯೇ ಇಲ್ಲ. ಎಲ್ಲಿಯವರೆಗೆ ಶ್ರಮ ಜೀವನದ ಉತ್ತಮ ಅಂಶಗಳ ಬಗ್ಗೆ ನಮಗೆ ನಂಬಿಕೆ ಬರುವುದಿಲ್ಲವೋ ಅಲ್ಲಿಯವರೆಗೆ ಇಚ್ಛಾಶಕ್ತಿ ಕೂಡ ಗಟ್ಟಿಗೊಳ್ಳಲಾರದು.

8ಸರಕಾರ ಸ್ಪಂದನೆ ಹೇಗಿದೆ? ಎಲ್ಲಿಯವರೆಗೆ ಸತ್ಯಾಗ್ರಹ?ನಿರೀಕ್ಷೆ ಏನು?

ಎಲ್ಲ ಸರಕಾರಗಳಿಗೆ ಇಬ್ಬಂದಿ ಸೆಳೆತಗಳಿರುತ್ತವೆ. ಒಂದು ಕಡೆ ವಿದ್ಯುತ್ ಮಗ್ಗ, ಬಹು ರಾಷ್ಟ್ರೀಯ ಕಂಪನಿಗಳು ಜಗ್ಗಿದರೆ ಇನ್ನೊಂದೆಡೆ ಜನ ಜಗ್ಗುತ್ತಿರುತ್ತಾರೆ. ಇದರಲ್ಲಿ ಜನರ ಕೈ ಬಲವಾಗಬೇಕೆಂದರೆ ಜನಪರ ಹೋರಾಟಗಳನ್ನು ಗಟ್ಟಿಗೊಳಿ ಸ ಬೇಕು. ಹಾಗೆಂದೇ ಈ ಜನ ಮುಖಿ ಸತ್ಯಾಗ್ರಹ. ರಾಜ್ಯ ಸರಕಾರ ಒಕ್ಕೂಟದ ಪ್ರತಿನಿಧಿಗಳ ಜತೆ ಮೊದಲ ಸುತ್ತಿನ ಮಾತು ಕತೆ ನಡೆಸಿದೆ. ನೇಕಾರಿಕೆ ತೊರೆದಿರುವವರು ಸಂತೋಷದಿಂದ ಕಸುಬಿಗೆ ಹಿಂತಿರುಗುವಂಥ ಸ್ಥಿತಿ ನಿರ್ಮಾಣವಾಗುವವರೆಗೆ ನಮ್ಮ ಸತ್ಯದ ಆಗ್ರಹ ಮುಂದುವರಿ ಯು ತ್ತದೆ. ಸರಕಾರಕ್ಕೆ ಮನಸ್ಸಿದ್ದರೆ ಈಗಲೂ ಕೈಮಗ್ಗವನ್ನು ಆರ್ಥಿಕ ಸಬಲೀಕರಣ ಕಾರ‌್ಯಕ್ರಮವನ್ನಾಗಿಸಬಹುದು.

ಕಾಮೆಂಟ್‌ಗಳಿಲ್ಲ: