ಶನಿವಾರ, ಜೂನ್ 18, 2016

ಜಾನಪದ ನಿಂತ ನೀರಲ್ಲ...

ಜಾನಪದ ಪರಿಧಿಯೊಳಗೆ ಅಡಗಿರುವ ಎಲ್ಲವೂ ಜನಪದ

-ಪದ್ಮ ಶ್ರೀಧರ

    ‘ಜಾನಪದ ಜನವಾಣಿಯ ಬೇರುಕವಿವಾಣಿಯ ಹೂ’ ಎಂಬ ಹಾಡುವಕ್ಕಿ ಶ್ರೀಯವರ ನುಡಿಯಲ್ಲಿ ಜಾನಪದ ಸ್ವರೂಪಅರ್ಥಗರ್ಭಿತವಾಗಿ ಅಡಕವಾಗಿದೆ. ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳಿಂದ ರಚಿತವಾದ ಜಾನಪದವುತುಂಬಾ ಪ್ರಾಚೀನವೂಆಧುನಿಕ ಬದುಕಿಗೆ ಪ್ರೇರಕವೂ ಆಗಿದೆಸಮಸ್ತ ಜೀವನಾನುಭವದ ಮೊತ್ತವಾದ ಜನಪದವು ಹಲವರಅನುಭವವು ಒಬ್ಬನ ಜಾಣ್ಮೆಯಿಂದ ಕಲಾತ್ಮಕ ರೂಪವನ್ನು ಪಡೆದು ಎಲ್ಲರ ಸೊತ್ತಾಗಿದೆಜನಪದ ಸಾಹಿತ್ಯರೂಪಗಳುಸಂಸ್ಕೃತಿಯಲ್ಲಿ ರೂಪುಗೊಂಡು ಪಕ್ವವಾಗಿವೆ.
   ಸಮಾಜ ಸಮ್ಮತಿಸಿದ ಕಲಿಕೆಯಿಂದ ಬಂದ ನಡವಳಿಕೆಗಳೆಲ್ಲವೂ ಸಂಸ್ಕೃತಿಯ ಅಂಗವೆಂದು ಪರಿಗಣಿಸುವುದರಿಂದ ಜಾನಪದವುಸಂಸ್ಕೃತಿಯ ಪ್ರಮುಖ ಅಂಗವೇ ಆಗಿದೆಮಾನವ ತನ್ನ ಬಗೆಗೆಮನುಕುಲದ ಬಗೆಗೆಒಟ್ಟು ಸಮುದಾಯದ ಬಗೆಗೆಸಮಷ್ಟಿಬದುಕಿನ ಬಗೆಗೆ,  ಲೋಕದ ಬಗೆಗೆ ತಳೆದ ನಿಲುವುಗಳುಶೇಖರಗೊಂಡಿರುವ ಪರಂಪರಾಗತ ತಿಳಿವೇ ಜಾನಪದಕೇಳಿದ್ದನ್ನುನೆನಪಿನಲ್ಲಿಡುವುದುನೋಡಿದ್ದನ್ನು ಅನುಕರಣೆ ಮಾಡುವುದುಮೌಖಿಕ ಪರಂಪರೆಯಲ್ಲಿ ಅನೂಚಾನವಾಗಿ ಸಾಗಿಬರುವನಡವಳಿಕೆಗಳ ಒಟ್ಟು ಮೊತ್ತವೇ ಜಾನಪದ ಸಾಮಗ್ರಿಮಾನವನ ಬದುಕಿನ ಸಮಸ್ತವೂ ಅದರಲ್ಲಿ ಸಮಾವೇಶವಾಗುತ್ತದೆ.
   ಮಾನವ ತನ್ನ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆಯಿಂದ ನಿಸರ್ಗವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಜ್ಞಾನ ವಿಜ್ಞಾನವನ್ನುಸಂವರ್ಧನೆ ಮಾಡಿಕೊಂಡು ಸುಖ ಸಂತೋಷವನ್ನು  ಅನುಭವಿಸತೊಡಗಿದನುಮಾತು-ಕಥೆಹಾಡು-ಪಾಡುಕುಣಿತ-ಮೆರೆತ,ಹಬ್ಬ-ಹರಿದಿನಆಟೋಟಗಳು ನಂಬಿಕೆ ಸಂಪ್ರದಾಯಗಳುಆಚರಣೆ ಆರಾಧನೆಗಳೆಲ್ಲವನ್ನೂ ಬದುಕಿನೊಂದಿಗೆ ಬೆಸೆದುಕೊಂಡನು.ಬದುಕಿನ ಪ್ರತಿಯೊಂದು ಕ್ರಿಯೆಯೂ ಸಹ್ಯವಾಗುವಂತೆ ತನ್ನನ್ನು ತಾನು ತೊಡಗಿಸಿಕೊಂಡನುಅದರ ಫಲವೋ ಎಂಬಂತೆ ಮೌಖಿಕ,ವಾಚಿಕಕಂಠಸ್ಥಥೋಡೀ ಸಂಪ್ರದಾಯವು ಎಲ್ಲಿಯೂ ಸ್ಥಗಿತವಾಗದೆ ಪರಂಪರಾಗತವಾಗಿ ಮುಂದುವರಿಯಿತುಪುರಾಣಐತಿಹ್ಯ,ಗೀತೆಕಥೆಗಾದೆಒಗಟುಲಾವಣಿಭಾಷೆನಂಬಿಕೆವಿಭಿನ್ನ ಆಚರಣೆವೈದ್ಯವ್ಯವಸಾಯಅಡಿಗೆಬೇಟೆಆಟಮಂತ್ರ-ಮಾಟ ಮುಂತಾದ ಕಲೆಗಳು ಸಮೃದ್ಧವಾಗಿ ಬೆಳೆಯುತ್ತಾಅವಿನಾಭಾವವಾಗಿ ಬದುಕಿನೊಂದಿಗೆ ಬೆರೆತು ಪಿತ್ರಾರ್ಜಿತ ಆಸ್ತಿಯಂತೆಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಾ ಬಂದಿತು
     ಬಾಳಪಯಣದ ನೋವು-ನಲಿವುಸೋಲು-ಗೆಲುವುಎತ್ತರ-ಬಿತ್ತರಸುಖ-ದುಃಖಕಷ್ಟ-ಕಾರ್ಪಣ್ಯ ಎಲ್ಲಾ ಭಾವನೆಗಳುಅನುಭವದ ಮೂಸೆಯಲ್ಲಿ ಬೆಂದು ಪರಿಶುದ್ಧವಾಗಿ ಅಲ್ಲಲ್ಲಿಯ ಪರಿಸರಕ್ಕೆ ಅನುಗುಣವಾಗಿ ಹಾಡುಹಸೆಕಥೆಕುಣಿತಮೆರೆತ,ಗಾದೆಒಗಟು ಮುಂತಾದ ರೂಪವನ್ನು ತಳೆದು ಆಯಾಯ  ಜನಪದ ಸಮುದಾಯದ ಆತ್ಮಚರಿತ್ರೆಯಂತಾಯಿತುಜನಪದವುಅಪ್ಪಟ ಸಂಸ್ಕೃತಿಯ ಪ್ರತಿನಿಧಿಯಂತೆ ರೂಪು ತಳೆಯಿತು.     
    ಅನಾದಿ ಕಾಲದಿಂದಲೂ ಭಾರತದಲ್ಲಿ ‘ಜನಪದ’ ಎಂಬ ಪದ ಬಳಕೆಯಲ್ಲಿದೆಬುದ್ಧಮಹಾವೀರರ ಕಾಲದಲ್ಲಿ ರಾಷ್ಟ್ರಗಳನ್ನುಜನಪದವೆಂದು ಪರಿಭಾವಿಸಿದ್ದರುಜನಪದ ಎನ್ನುವುದು ಸಮುದಾಯಜನ ಸಮೂಹಜನ ಸಮುದಾಯಗಳನ್ನು ಒಳಗೊಂಡಆಡಳಿತವೆಂದು ಅರ್ಥೈಸಬಹುದುಕೋಸಲ ಜನಪದವಿದರ್ಭ ಜನಪದಕರ್ನಾಟಕ ಜನಪದ ಇತ್ಯಾದಿ.ಕವಿರಾಜಮಾರ್ಗದಲ್ಲಿಯೂ  ಪದ ಬಳಕೆಯಾಗಿದೆ.
                                          ಕಾವೇರಿಯಿಂದ ಮಾ ಗೋ
                                          ದಾವರಿವರಮಿರ್ದ ನಾಡದಾ ಕನ್ನಡದೊಳ್ 
                                          ಭಾವಿಸಿದ ‘ಜನಪದಂ’ ವಸು
                                          ಧಾವಳಯವಿಲೀನ ವಿಶದ ವಿಷಯವಿಶೇಷಂ
   ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಜನ ಸಮುದಾಯವನ್ನು ‘ಜನಪದವೆಂದು ಕರೆಯಬಹುದುಸಂಕೀರ್ಣ ಸ್ವಭಾವದನಾಗರಿಕ ಸಮಾಜದಲ್ಲಿ ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು ಮೂಲ ಸಂಸ್ಕೃತಿಯನ್ನು ಪರಂಪರಾಗತವಾಗಿ ಒಯ್ಯುವಸಾಮಾಜಿಕ ವರ್ಗ ಅಥವಾ ಸಂಪ್ರದಾಯದೊಂದಿಗೆ ಹೆಣೆದುಕೊಂಡಿರುವ ಒಂದು ಗೊತ್ತಾದ ವರ್ಗದ ಜನಸಾಮಾನ್ಯರ ಸಮೂಹನ್ನುಜನಪದ ಎನ್ನಬಹುದುಒಂದು ಜನಾಂಗಕೆಳಗಿನ ಸ್ತರಸಂಕೀರ್ಣ ಸ್ವಭಾವದ ನಾಗರಿಕ ಸಮಾಜದ ಹಳೆಯ ಗುಂಪು,ಮುಂತಾಗಿಯೂ ಅರ್ಥೈಸುತ್ತಾರೆFolk ಪದಕ್ಕೆ ಸಂವಾದಿಯಾಗಿ ‘ಜನಪದ’ ಎಂಬ ಪದವನ್ನು ಡಾ ಹಾ.ಮಾನಾಯಕ್ ಬಳಕೆಗೆತಂದಿದ್ದಾರೆ
ಕನ್ನಡದಲ್ಲಿ ಜನಪದರು ಎಂದರೆ ಗ್ರಾಮೀಣರುಹಳ್ಳಿಗಾಡಿನ ಜನರುಹಳ್ಳಿಗರು ಮುಂತಾಗಿ ಅತ್ಯಂತ ಸರಳವಾಗಿ ಹೇಳಿಬಿಡಬಹುದುಜನಪದ ಎಂಬ ಪದವು ಎಷ್ಟು ಸರಳವಾಗಿ ಕಾಣುತ್ತದೆಯೋ ಅಷ್ಟೇ ಸಂಕೀರ್ಣವೂ ಆಗಿದೆ
ಆಕ್ಸ್ಫರ್ಡ್ ಅರ್ಥಕೋಶದ ಪ್ರಕಾರ ಜನಪದವೆಂದರೆ
 • ಒಂದೇ ಮೂಲಕ್ಕೆ ಸೇರಿದತಮ್ಮದೇ ಆದ ಪ್ರದೇಶ ಅಥವಾ ರಾಜ್ಯವನ್ನು ಪಡೆದ ಒಂದು ಜನಾಂಗದ ಗುಂಪು,ಮೂಲ ನಿವಾಸಿಗಳ ಸ್ಥಿತಿಯಿಂದ ರಾಜಕೀಯ ಅಥವಾ ಸಾಮಾಜಿಕ ವ್ಯವಸ್ಥೆಯತ್ತ ಹೊರಳುತ್ತಿರುವ ಜನ.
 • ಜನಾಂಗಭಾಷೆಧರ್ಮಗಳಿಗೆ ಬದ್ಧರಾದದ ಒಂದು ಪ್ರಜಾ ಸಮೂಹದ ಸಮಾಜದ ಕೆಳಗಿನ ಸ್ತರತನ್ನದೇ ಆದಒಂದು ಸಮೂಹದ ಗುಣವನ್ನು ಪಡೆದುಕೊಂಡು ತನ್ನದೇ ಸಂಪ್ರದಾಯಕಲೆಕೈಗಾರಿಕೆಐತಿಹ್ಯನಂಬಿಕೆಗಳನ್ನುತಲೆಮಾರಿಗೆ ಬದಲಾಗದಂತೆ ಉಳಿಸಿಕೊಂಡು ಬಂದ ಜನ ಸಮೂಹ.
 • ಒಂದು ರಾಜ್ಯದ ಒಂದು ದೈವದ ಒಂದು ಮತದ ಒಬ್ಬ ಸರ್ವಾಧಿಕಾರಿಯ ಒಬ್ಬ ನಾಯಕನ ಪ್ರಭಾವ ವಲಯಕ್ಕೆಅಧಿಕಾರ ವ್ಯಾಪ್ತಿಗೆ ಒಳಗಾದ ಜನತೆಯ ಮೊತ್ತ.
 • ದೇಶದ ಜನಪದ ಎಂದು ಕರೆಸಿಕೊಳ್ಳುವ ಪ್ರಜಾಸಮೂಹ.
 • ಒಂದು ಕುಟುಂಬದ ಸದಸ್ಯರು ಬಂಧು-ಬಳಗ ಇತ್ಯಾದಿ.
     ಸಮಾನ ಅಂಶ ಅಥವಾ ಅಂಶಗಳುಳ್ಳ ಜನರ ಗುಂಪನ್ನು ‘ಜನಎನ್ನಬಹುದುತಮ್ಮದೇ ಆದ ಪರಂಪರೆಯನ್ನು ಹೊಂದಿದಧರ್ಮಮತಜಾತಿಭಾಷೆಕಸುಬು ಯಾವುದಾದರೂ ಸಮಾನ ಅಂಶವಾಗಿರಬಹುದುಪರಂಪರೆ  ಗುಂಪಿನ ಆರಾಧನೆ,ಆಚಾರ ವಿಚಾರನಂಬಿಕೆಧೋರಣೆಗಳನ್ನು ವ್ಯಕ್ತಪಡಿಸುತ್ತದೆಇದು ತಾವು ಇನ್ನೊಂದು ಗುಂಪಿನವರಿಗಿಂತ ಬೇರೆ ಎನ್ನುವಸಮೂಹ ಪ್ರಜ್ಞೆಯನ್ನು ಮೂಡಿಸುತ್ತದೆದೇವರಿಗೆ ನಡೆದುಕೊಳ್ಳುವುದುಆಚರಿಸುವ ಆರಾಧನೆಉತ್ಸವಹಬ್ಬಹರಿದಿನಗಳು,ಮದುವೆಯ ಪದ್ಧತಿಗಳನ್ನು ಒಳಗೊಂಡಂತೆ ಪುರಾಣಐತಿಹ್ಯಕಟ್ಟುಕಥೆಕಥೆಚೇಷ್ಟೆಗಾದೆಒಗಟುಧಾರ್ಮಿಕವ್ಯಾವಹಾರಿಕಹಾಗೂ ಮೂಢನಂಬಿಕೆಗಳುಹಾಡುಕುಣಿತಆಟಪಾಟಬಯಲಾಟಸಂಗೀತಔಷಧಿಹೆಸರುಉಪನಾಮಉಪಭಾಷೆ,ಬೈಗಳುಅವಮಾನಿಸುವಾಗಅಭಿನಂದಿಸುವಾಗಆಣೆಮಾಡುವಾಗಬೇಟಿಯಾದಾಗಅಗಲುವಾಗ ಹೇಳುವ ಮಾತುಗಳುಇತ್ಯಾದಿ ಇತ್ಯಾದಿ ಅನೇಕ ವಿಚಾರಗಳನ್ನು ಪ್ರತಿ ಗುಂಪಿನಲ್ಲೂ ಕಾಣಬಹುದುಒಂದು ನಿರ್ದಿಷ್ಟ ಜನಸಮುದಾಯದಲ್ಲಿತಲೆಮಾರಿನಿಂದ ತಲೆಮಾರಿಗೆ ಮೌಖಿಕ ರೂಪದಲ್ಲಿ ಸಾಗಿಬರುವ ಸಂಗೀತಸಾಹಿತ್ಯಕರಕುಶಲ ಕಲೆನಡವಳಿಕೆಸಂಪ್ರದಾಯ,ಆಚರಣೆಆಟಪಾಠಮೊದಲಾದ ಜನಪದದ ಸಮಗ್ರ ಮೊತ್ತವೇ ಜಾನಪದ’ 
ಪರಂಪರಾನುಗತವಾಗಿ ಬಂದ ಆಚಾರವಿಚಾರಪದ್ಧತಿರೂಢಿಉಡುಗೆ ತೊಡುಗೆಆಟ ಪಾಠಹಾಡು ಹಸೆ ಎಲ್ಲವೂ ಜನಪದ. ಎಲ್ಲವನ್ನೂ ಒಳಗೊಂಡಿದ್ದು ಜಾನಪದಹಾಮಾನಾಯಕರು ಹೇಳುವಂತೆ ಜಾನಪದ ಒಂದು ಚಕ್ರದ ಪರಿಧಿಯಾದರೆಅದರಒಳಗಿನ ಪ್ರತಿಯೊಂದು ಪುಟಿಗಳು(ಅರಗಳುಜನಪದಅಂದರೆ ಜಾನಪದ ಪರಿಧಿಯೊಳಗೆ ಎಲ್ಲಾ ಜನಪದವೂ ಅಡಕವಾಗಿದೆ.
ಜಾನಪದ ಎಂದರೇನುಎಂಬ ಪ್ರಶ್ನೆಗೆ ಖಚಿತವಾದ ವ್ಯಾಖ್ಯಾನವನ್ನು ವಿದ್ವಾಂಸರು ಮಾಡುವುದಿಲ್ಲಪ್ರಾರಂಭದ ದಿನಗಳಲ್ಲಿಜನಪ್ರಿಯ ನಡಾವಳಿ (Popular Antiquities), ಜನಪ್ರಿಯ ಸಾಹಿತ್ಯ (Popular literatureಹಿಂದಿನ ನಾಶಹೊಂದಿದ ಗುರುತುಗಳು (Fast perishing Relies) ಎಂದು ಜಾನಪದವನ್ನು ಕರೆದಿದ್ದಾರೆ.
ಬಿ.ಎಂ.ಶ್ರೀಕಂಠಯ್ಯ : ಮೊದಲು ಹುಟ್ಟಿದುದು ಜನವಾಣಿಅದು ಬೆಳೆದುಪರಿಷ್ಕೃತವಾಗಿ ವೃದ್ಧಿಯಾದುದು ಕವಿವಾಣಿಜನವಾಣಿಬೇರುಕವಿವಾಣಿ ಹೂವುಶಾಸ್ತ್ರಕಾವ್ಯಗಳ ಪರಿಚಯವೇ ಇಲ್ಲದ ಜನಸಾಮಾನ್ಯರೆಲ್ಲರೂ ಹಾಡಿನ ಮಟ್ಟನ್ನು  ಅಂದರೆ ಅಷ್ಟುಮಟ್ಟಿಗೆ ಛಂದಸ್ಸನ್ನು ಬಲ್ಲವರು.’

ವರಕವಿ ಬೇಂದ್ರೆ : ಜೀವನವೇ ದೇವತೆಯಾದತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ‘ಗರತಿಯ ಹಾಡುಗಳ ಕರ್ತೃಗಳಾದ ಹೆಣ್ಣುಮಕ್ಕಳು ನಮ್ಮ ತಾಯಿತಂಗಿಯರುಅಮ್ಮ ಅಕ್ಕಂದಿರುಮಡದಿ ಮಕ್ಕಳು ನಿಜ ಅರ್ಥದಲ್ಲಿ ಋಷಿಗಳುಹಾಗೆ ನೋಡಿದರೆ ಅವರದೇನಿಜವಾದ ಕಾವ್ಯ ಜನಪದ ವೇದವೇ ಎಲ್ಲ ಕನ್ನಡಿಗರಿಗೂ ಸಾಮಾನ್ಯವಾದ ತಾಯ ಮೊಲೆಹಾಲು ಎಂಬುದು ಇದನ್ನೋದಿದವರಅನುಭವಕ್ಕೆ ಬಾರದೆ ಇರದು.’
ದೇವುಡು ನರಸಿಂಹ ಶಾಸ್ತ್ರಿಗಳು : ಪ್ರಾಚೀನ ಕಾಲದವರ ಮನೋಭಾವನೆಯ ಪ್ರಕಟರೂಪವೇ  ಜನತೆಯ ಸಂಸ್ಕೃತಿಜನತೆಯಸಂಸ್ಕೃತಿಯು ಅಪಂಡಿತನ ಪ್ರಪಂಚವನ್ನೆಲ್ಲ ಒಳಗೊಂಡಿದೆ.
ದೇಜವರೇ ಗೌಡ : ಜಾನಪದ ಸಂಪ್ರದಾಯ ಒಂದು ಜನಸಮುದಾಯದ ಸಮಷ್ಟಿ ಸೃಷ್ಟಿಸಾಮಾಜಿಕ ಜೀವನದ ಸಂಕೇತ,ರಾಷ್ಟ್ರೀಯ ಸಂಸ್ಕೃತಿಯ ತಾಯಿಬೇರುಅದು ಜನಸಾಮಾನ್ಯರ ಶ್ರುತಿಯೂ ಅಹುದುಸ್ಮೃತಿಯೂ ಅಹುದು
ವ್ಯಾಪಕವೂ ವಿಶ್ವಮೌಲಿಕವೂ ಆದ ವಿದ್ವಾಂಸರ  ಅಭಿಪ್ರಾಯಗಳು ಅವಿನಾಶಿಯೂ ಚಲನಶೀಲವೂ ಆದ ಜಾನಪದವನ್ನುಸೂತ್ರೀಕರಿಸಿ ಹೀಗೆ ಹೇಳಬಹುದು.
 • ಜಾನಪದ ನಿಂತ ನೀರಲ್ಲಸ್ವಾರ್ಥಮೂಲವಾದದ್ದೂ ಅಲ್ಲಸಂಚಲನೆಪರಿವರ್ತನೆಸ್ವೀಕಾರಕೊಳ್ಳುಕೊಡು ಅದರಮೂಲ ಮಂತ್ರ.
 • ಜಾನಪದ ಎನ್ನುವುದು ಒಂದು ಜನತೆಯ ಗ್ರಂಥಸ್ಥವಲ್ಲದ ಮೊತ್ತ ಹಾಗೂ ಅದನ್ನು ಕುರಿತ ವಿಜ್ಞಾನಅಂದರೆಸಂಪ್ರದಾಯವನ್ನು ಕುರಿತ ವಿಜ್ಞಾನ.
 • ಮೌಖಿಕತೆಪರಂಪರೆಅನಾಮಧೇಯತೆ ಜಾನಪದದ ಮುಖ್ಯ ಲಕ್ಷಣಗಳುಜಾನಪದದಲ್ಲಿ ಕಂಠಸ್ಥ ಸಂಪ್ರದಾಯಮತ್ತು ಅದರ ಪ್ರಭಾವ ಪ್ರಮುಖವಾಗಿದೆ.
 • ಕೇಳುವುದು-ನೆನಪಿಡುವುದುನೋಡುವುದು-ಅನುಕರಣೆ ಮಾಡುವುದು – ಎರಡು ಸೂತ್ರಗಳ ಮೇಲೆ ಜಾನಪದನಿಂತಿರುತ್ತದೆ.
 • ಜಾನಪದವು ವ್ಯಕ್ತಿಯ ಸೃಷ್ಟಿಯಾಗಿರದೆ ಸಮಷ್ಟಿಯ ಸೃಷ್ಟಿಯಾಗಿರುತ್ತದೆಒಬ್ಬನ ಸೃಷ್ಟಿ ಜನಪದರ ಕೈಯಲ್ಲಿಪುನರ್ಸೃಷ್ಟಿಯಾಗುತ್ತದೆ.
 • ಜಾನಪದ ಪ್ರಾಚೀನ ಹಾಗೂ ನಾಗರಿಕ ಸಮಾಜಗಳೆರಡರಲ್ಲೂ ಇರುತ್ತದೆ.

    ಭಾರತದಲ್ಲಿ ಜಾನಪದದ ಸಂಗ್ರಹ ಮತ್ತು ಅಧ್ಯಯನ ಕಾರ್ಯ ಆರಂಭವಾದುದು ಬ್ರಿಟಿಷರಿಂದ ಭಾರತದ ಜಾನಪದದ ಮೊದಲಸಂಗ್ರಹ ಕೃತಿಯಾದ Annals and Antiquities of Rajasthanಅನ್ನು ಕ್ರಿ..1829 ಕರ್ನಲ್ ಟಾಡ್ಪ್ರಕಟಿಸಿದನುಕ್ರಿ..1816ರಲ್ಲಿ ಅಬ್ಬೆ ಡುಬಾಯ್ Hindu Manners, Customs and Ceremonies ಎಂಬಗ್ರಂಥವನ್ನು ಪ್ರಕಟಿಸಿದರುಭಾರತೀಯ ಸಂಸ್ಕೃತಿ ಮತ್ತು ಜಾನಪದ ಅಧ್ಯಯನದ ದೃಷ್ಟಿಯಿಂದ ಗಮನಾರ್ಹ ಕೃತಿಯಾದಬಂಗಾಳದ ಗಾದೆಗಳು’ ಕೃತಿಯನ್ನು ಕ್ರಿ.. 1932ರಲ್ಲಿ ರೆವೆರೆಂಡರ್ ಮಾರ್ಡಿನ್ ಪ್ರಕಟಿಸಿದರುಅದೇ ವರ್ಷ ಸಿ.ಗೋವರ್ಇಂಡಿಯಾದ ಜನಪದ ಗೀತೆಗಳು ಎಂಬ ಕೃತಿಯನ್ನು ಪ್ರಕಟಿಸಿದರು.
     ಕರ್ನಾಟಕದಲ್ಲೂ ಜಾನಪದದ ಸಂಗ್ರಹ ಮತ್ತು ಅಧ್ಯಯನ ಕಾರ್ಯಕ್ಕೆ ಮೊದಲು ಚಾಲನೆ ನೀಡಿದವರು ಆಂಗ್ಲ ಪಾದ್ರಿಗಳೇ.ಕನ್ನಡದ ಮೊದಲ ಜನಪದ ಸಾಹಿತ್ಯ ಸಂಗ್ರಹ ‘ಜನಪದಗೀತೆಯನ್ನು ಕ್ರಿ.. 1871ರಲ್ಲಿ ಚಾಲ್ರ್ಸ್  ಗೋವರ್ ಪ್ರಕಟಿಸಿದರು.ಕ್ರಿ.. 1885ರಲ್ಲಿ ಫ್ಲೀಟರ್ ಲಾವಣಿಗಳನ್ನು ಸಂಗ್ರಹಿಸಿ ಪ್ರಕಟಿಸಿದರುಕನ್ನಡಿಗರ ಪ್ರಥಮ ಹಾಗೂ ಉತ್ಕøಷ್ಟ ಗೀತಗಳಸಂಗ್ರಹವಾದ ‘ಗರತಿಯ ಹಾಡು’ ಕೃತಿಯನ್ನು ಕ್ರಿ..1931ರಲ್ಲಿ ಹಲಸಂಗಿ ಸೋದರರಾದ ಕಾಪಸೆರೇವಣ್ಣಸಿಂಪಿಲಿಂಗಣ್ಣ ಮತ್ತುಮಧುರಚನ್ನರು ಜನಪದ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದರುಕ್ರಿ.. 1933ರಲ್ಲಿ ‘ಹಳ್ಳಿಯ ಹಾಡುಗಳು’ ಸಂಗ್ರಹವನ್ನುವಿಠೋಭ ವೆಂಕನಾಯಕರು, ‘ಹುಟ್ಟಿದ ಹಳ್ಳಿ ಹಳ್ಳಿಯ ಹಾಡು’ ಸಂಗ್ರಹವನ್ನು ಅರ್ಚಕ ಬಿರಂಗಸ್ವಾಮಿ ಅವರು ಪ್ರಕಟಿಸಿದರು.ಗೊರೂರು ಮತ್ತು ಬಿಎಂರಂಗಸ್ವಾಮಿಯವರಿಂದ ಕ್ರಿ.. 1938ರಲ್ಲಿ ‘ಹಳ್ಳಿಯ ಹಾಡುಗಳು’ ಜನಪದ ಗೀತೆಗಳ ಸಂಗ್ರಹಪ್ರಕಟವಾಯಿತುಮತಿಘಟ್ಟ ಕೃಷ್ಣಮೂರ್ತಿಜೀ.ಶಂ.ಪರಮಶಿವಯ್ಯಗೊ.ರು.ಚನ್ನಬಸಪ್ಪಹೆಚ್.ಎಲ್.ನಾಗೇಗೌಡ,ಮುದೇನೂರು ಸಂಗಣ್ಣಕ್ಯಾತನಹಳ್ಳಿ ರಾಮಣ್ಣ ಮುಂತಾದ ಅನೇಕ ವಿದ್ವಾಂಸರು ಜಾನಪದ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದುಡಿದರುಕ್ರಿ. 1966 ಕನ್ನಡ ಜಾನಪದ ಇತಿಹಾಸದಲ್ಲಿ ಅತಿ ಪ್ರಮುಖವಾದ ವರ್ಷವಾಗಿದೆಪ್ರೊ.ದೇ.ಜವರೇಗೌಡರಪ್ರಯತ್ನದಿಂದ ಜಾನಪದ ಅಧ್ಯಯನ ಖಚಿತ ರೂಪುರೇಷೆಯನ್ನು ಪಡೆದುಕೊಂಡಿತುಮೈಸೂರು ವಿಶ್ವವಿದ್ಯಾನಿಲಯದ ಸುವರ್ಣಮಹೋತ್ಸವದ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಲೇಖಕರ ಸಮ್ಮೇಳನವು ನಡೆದ ‘ಜನಪದ ಸಾಹಿತ್ಯಗೋಷ್ಠಿಯಲ್ಲಿ’ ಡಾಹಾ.ಮಾ ನಾಯಕರು ‘ಜನಪದ ಸಾಹಿತ್ಯ ಅದರ ಸ್ವರೂಪ’ ಎಂಬ ಪ್ರಬಂಧವನ್ನು ಮಂಡಿಸಿದರು.  ವೈಜ್ಞಾನಿಕದೃಷ್ಟಿಯಿಂದ ಇದು ಮಹತ್ವದ್ದೆನಿಸಿದೆಫೋಕ್ಲೋರ್(Folk Loreಎಂಬ ಆಂಗ್ಲ ಭಾಷೆಯ ಪದಕ್ಕೆ ಪರ್ಯಾಯವಾಗಿಜಾನಪದ’ ಎಂಬ ಖಚಿತವಾದ ಪದವನ್ನು ಸೂಚಿಸಿ ಜಾನಪದ ಅಧ್ಯಯನಕ್ಕೆ ದಾರಿದೀಪವಾದರುಅದೇ ವರ್ಷ ಮೈಸೂರುವಿಶ್ವವಿದ್ಯಾನಿಲಯದಲ್ಲಿ ‘ಜಾನಪದ’ ಐಚ್ಛಿಕ ವಿಷಯವಾಗಿ ಜಾರಿಗೆ ಬಂದಿತು.
   ಸಾಮಾನ್ಯತೆಸಾಮೂಹಿಕತೆಸರಳತೆಸಜೀವತೆಸೋಪಜ್ಞತೆಯಿಂದ ಕೂಡಿರುವ ಜಾನಪದದ ಮುಖ್ಯ ಲಕ್ಷಣಗಳು ಇಂತಿವೆ.
     ಕಂಠಸ್ಥ ಸಂಪ್ರದಾಯ : ಜನಪದ ಸಾಹಿತ್ಯ ನೋಡಿ ಕಲಿಯುವಂಥದಲ್ಲಕೇಳಿಯೇ ಕಲಿಯುವಂಥದ್ದುತೋಂಡಿತನ ಇದರಜೀವವಾಚಿಕಮೌಖಿಲಥೋಡೀ ಎಂದೆಲ್ಲಾ ಹೆಸರುಗಳಿದೆಅನಕ್ಷರಸ್ಥರ ಸಮಾಜದಲ್ಲಿ ಕಂಠಸ್ಥ ಸಂಪ್ರದಾಯದ ಪಾತ್ರ ಹಿರಿದು.ಗೀತೆಕಥೆಗಾದೆಒಗಟುಪುರಾಣಐತಿಹ್ಯಭಾಷೆನಂಬಿಕೆಆಚರಣೆಕಲೆವೈದ್ಯಮಾಟಮಂತ್ರವೃತ್ತಿ ಎಲ್ಲವೂಅನುಕರಣೆಯಿಂದ ಕಲಿತು ಮತ್ತು ನೆನಪಿನಿಂದ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತದೆ.
ಸಾಮೂಹಿಕ ಪುನರ್ಸೃಷ್ಟಿಜಾನಪದ ವ್ಯಷ್ಟೀಕೃತವಾದರೂ ಸಮಷ್ಟಿಯ ಸ್ವತ್ತುಅಜ್ಞಾತ ಕವಿಯೊಬ್ಬನ ರಚನೆ ನೂರು ಜನರಬಾಯಲ್ಲಿ ಮಾರ್ಪಾಡಾಗಿ ಜನತೆಯ ಕೃತಿಯಾಗಿ ಬಿಡುತ್ತದೆನಿರಂತರ ಸಾಮೂಹಿಕ ಪುನರ್ ಸೃಷ್ಟಿಗೆ ಒಳಗಾಗುತ್ತಿರುತ್ತದೆ.
   ವ್ಯಾಪಕತೆ : ಜಾನಪದ ಜನತೆಯ ಸರ್ವತೋಮುಖ ಅಭಿವ್ಯಕ್ತಿಯಾದ್ದರಿಂದ ಬದುಕಿನಲ್ಲಿ ಹಾಸುಹೊಕ್ಕಾಗಿದೆನಿಖರವಾಗಿ ಇದರವ್ಯಾಪ್ತಿಯನ್ನು ಗುರುತಿಸಲು ವಿದ್ವಾಂಸರಿಗೇ ಸಾಧ್ಯವಾಗಿಲ್ಲಇದು ಸಮುದ್ರದಷ್ಟು ವಿಸ್ತಾರವಾಗಿಯೂ ಆಕಾಶದಷ್ಟು ಎತ್ತರವಾಗಿಯೂಇದೆ.
   ಅವಿನಾಶಿ : ಜಾನಪದಕ್ಕೆ ಸಾವಿಲ್ಲಅದು ಚಿರಂತನತನ್ನಲ್ಲಿ ಒಳಗೊಂಡಿರುವ ಸಾಂಸ್ಕೃತಿಕ ಚೈತನ್ಯದಿಂದಾಗಿ ಅತ್ಯಾಧುನಿಕಸಂಸ್ಕೃತಿಯಲ್ಲಿಯೂ ತನ್ನ ರೂಪವನ್ನು ಉಳಿಸಿಕೊಳ್ಳುವ ಅಂತಃಶಕ್ತಿಯನ್ನು ಹೊಂದಿದೆ.
   ಪರಂಪರೆ : ರಾಹುಕಾಲ ನೋಡುವುದುವಿನಾಯಕನನ್ನು ಪೂಜಿಸಿ ಕೆಲಸ ಆರಂಭಿಸುವುದುಹೀಗೆ ಹಿಂದಿನಿಂದರೂಢಿಯಲ್ಲಿರುವುದನ್ನು ಅನೂಚಾನವಾಗಿ ಮುಂದುವರಿಸಿಕೊಂಡು ಬರುತ್ತಿರುವುದೇ ಇದಕ್ಕೆ ಸಾಕ್ಷಿ.
    ಸರಳತೆ-ಸ್ಪಷ್ಟತೆ : ಮುಚ್ಚು ಮನಸ್ಸಲ್ಲಬಿಚ್ಚುಮನಸ್ಸುನೇರ ಮಾತಿನ ಅಭಿವ್ಯಕ್ತಿಎಲ್ಲವೂ ಸರಳಕೃತಕತೆನಯ ನಾಜೂಕು,ತಂತ್ರ ಕುತಂತ್ರಗಳು ಇಲ್ಲಿಲ್ಲಕೊಂಕುವ್ಯಂಗ್ಯಕಟಕಿಬೌದ್ಧಿಕ ಚಮತ್ಕಾರ ಇಲ್ಲ.
    ಪರಿವರ್ತನಶೀಲತೆ : ಜನಪದ ಹಾಡು ಹಾಡುವುದಕ್ಕಾಗಿ ರಚಿಸಿದ ಗೀತೆಗಳಲ್ಲಹಾಡುವಾಗಲೇ ಸೃಷ್ಟಿಗೊಳ್ಳುತ್ತದೆಹಾಡುಗಾರ,ಪ್ರದರ್ಶನಕಾರಕವಿ ಮೂರೂ ಒಬ್ಬನೇ ಆಗಿರುತ್ತಾನೆಇಷ್ಟವಾಗುವ ಅಂಶಗಳನ್ನು ಅನಂತರದ ಹಾಡುಗಾರಿಕೆಯಲ್ಲಿ ಹೆಚ್ಚಾಗಿಸೇರಿಸುತ್ತ ಹೋಗುತ್ತಾರೆಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಮತ್ತಷ್ಟು ಮಾರ್ಪಾಡುಗಳಾಗುತ್ತಾಹೋಗುತ್ತವೆ.  ಸಾಮೂಹಿಕಪುನರ್ಸೃಷ್ಟಿಗೆ ಒಳಗಾಗುವುದರಿಂದ ಪರಿವರ್ತನೆ ಮತ್ತು ರೂಪಾಂತರ ಸಹಜ.
   ವಿಶ್ವಮೌಲಿಕತೆ : ಜಗದ್ವ್ಯಾಪಿಯಾದುದುಜಾನಪದ ಸ್ವರೂಪಲಕ್ಷಣಸ್ವಭಾವಗುಣಧರ್ಮಗಳನ್ನು ಕುರಿತು ವಿಶ್ವದಾದ್ಯಂತವಿದ್ವಾಂಸರು  ಹಿಂದಿನಿಂದಲೂ ಚಿಂತಿಸುತ್ತಾ ಬಂದಿದ್ದಾರೆ.  ಭಾರತದ ಕಥೆಗಳು ಯುರೋಪಿನಲ್ಲಿ ಸಂಚಾರ ಮಾಡ ಬಲ್ಲವು.
    ಸಾಮಾನ್ಯರ ವೇದವೆಂದೇ ಹೇಳುವ ಜಾನಪದ ಸಾಮಾನ್ಯರ ಸಾರ್ವಕಾಲಿಕ ವಿಶ್ವಕೋಶವೇ ಆಗಿರುವುದರಿಂದ ಇದರಅಧ್ಯಯನ ತುಂಬಾ ಮಹತ್ವದಾಗಿದೆಯಾವುದೇ ವಿಷಯವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವಾಗ  ಕ್ಷೇತ್ರಕಾರ್ಯ(ಸಾಮಗ್ರಿಗಳ ಸಂಗ್ರಹ), ವರ್ಗೀಕರಣ (ವಿಂಗಡಣೆ), ವಿಶ್ಲೇಷಣೆ (ವ್ಯಾಖ್ಯಾನ ಮೂರು ಹಂತಗಳನ್ನು ಬಳಸಬೇಕಾಗುತ್ತದೆ,ಜಾನಪದ ಕ್ಷೇತ್ರವೂ ಇದಕ್ಕೆ ಹೊರತಲ್ಕಜಾನಪದವನ್ನು ವೈಜ್ಞಾನಿಕವಾಗಿ ಅಧ್ಯಯನಮಾಡಲು ಜಾನಪದದ ವರ್ಗೀಕರಣ ಅತ್ಯಂತಮುಖ್ಯವಾಗುತ್ತದೆಹೆಚ್ಚು ಸಂಕೀರ್ಣವೂಬಹು ವೈವಿಧ್ಯಮಯವೂ ಆದ ಜಾನಪದವನ್ನು ವರ್ಗೀಕರಿಸುವುದು ಬಹಳ ಕಠಿಣಕಾರ್ಯವಾಗಿದೆಯಾವ ಆಧಾರದ ಮೇಲೆ ವಿಂಗಡಿಸಿದರೂ ಸಮರ್ಪಕವಾಗಿ ವಿಂಗಡಿಸಲು ಸಾಧ್ಯವೇ ಇಲ್ಲ.
   ಸಾಮೂಹಿಕ ಪುನರ್ಸೃಷ್ಟಿಜಾನಪದ ವ್ಯಷ್ಟೀಕೃತವಾದರೂ ಸಮಷ್ಟಿಯ ಸ್ವತ್ತು.  ಅಜ್ಞಾತ ಕವಿಯೊಬ್ಬನ ರಚನೆ ನೂರು ಜನರಬಾಯಲ್ಲಿ ಮಾರ್ಪಾಡಾಗಿ ಜನತೆಯ ಕೃತಿಯಾಗಿ ಬಿಡುತ್ತದೆ.  ನಿರಂತರ ಸಾಮೂಹಿಕ ಪುನರ್ ಸೃಷ್ಟಿಗೆ ಒಳಗಾಗುತ್ತಿರುತ್ತದೆ.       
    ಕತೆಗಳು ಮತ್ತು ಸಂಪ್ರದಾಯಗಳು, ಹಾಡುಗಳು – ಕಥಾನಾತ್ಮಕ ಲಾವಣಿಗಳು, ಭಾವಗೀತೆಗಳು, ಕೆಲಸದ ಹಾಡುಗಳು-ಆಟದ ಹಾಡುಗಳು-ಮಕ್ಕಳ ಹಾಡುಗಳು, ಒಗಟು-ಗದೆ-ಹೇಳಿಕೆಗಳು-ಮಾಂತ್ರಿಕ ನುಡಿಗಳನ್ನು ಒಳಗೊಂಡ ಶಾಬ್ದಿಕ ಜಾನಪದ ಎಂದೂ, ನಿರ್ದಿಷ್ಟ ಕಾಲದ ಆಚರಣೆಗಳು(ಕೆಲವು ಹಬ್ಬಗಳು), ವ್ಯವಸಾಯ ಸಂಬಂಧಿ ಆಚರಣೆಗಳು, ಮೂಢನಂಬಿಕೆಗೆ ಸಂಬಂಧಿಸಿದನ್ನು ಆಚರಣೆಗಳು ಎಂದು ಕರೆದರು.
     ನಿರಂತರವಾಗಿ ಚಲನಶೀಲತೆಯುಳ್ಳ ಸಂವಹನ ಮಾಧ್ಯಮವಾಗಿರುವ ಜನಪದ ಸಾಹಿತ್ಯ ಭಾಷಾ ಸಾಹಿತ್ಯ ಚರಿತ್ರೆಯಲ್ಲೇ ಪ್ರಾಚೀನವಾದುದು. ವಾಚಿಕ ಜಾನಪದ, ಜಾನಪದದ ವಾಙ್ಮಯ ರೂಪ ಎಂದು ಗುರುತಿಸುವ ಜನಪದ ಸಾಹಿತ್ಯ ಜಾನಪದ ಕ್ಷೇತ್ರದ ಒಂದು ವಿಭಾಗ ಮಾತ್ರವಾಗಿದೆ. ಜನಪದ ಸಾಹಿತ್ಯದಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳನ್ನು ಕಾಣುತ್ತೇವೆ
                                                                  ಜನಪದ ಗೀತೆ
                                                                  ಜನಪದ ಕಥೆಗಳು
                                                                  ಒಗಟುಗಳು
                                                                  ಗಾದೆಗಳು       
       ವಸ್ತು ವೈವಿಧ್ಯ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಜನಪದ ಸಾಹಿತ್ಯದಲ್ಲಿ ವೈವಿಧ್ಯಮಯವಾ ಜೀವನಾನುಭವವು ಗದ್ಯ ಮತ್ತು ಪದ್ಯಗಳೆರಡರಲ್ಲೂ ರಚಿತವಾಗಿದೆ. ಅಭಿವ್ಯಕ್ತಿಯ ವೈವಿಧ್ಯತೆಯನ್ನು ಹೊಂದಿರುವ ಜನಪದ ಸಾಹಿತ್ಯದ ವರ್ಗೀಕರಣ ಅಷ್ಟು ಸುಲಭವಲ್ಲ. 
       ಆರ್.ಎಸ್.ಬಾಗ್ಸ್ ನ ಚತುರ್ಮುಖ ವಿಭಜನೆಯ ವಿಭಜನಾ ಕ್ರಮದಲ್ಲಿ 
                                                                 ಸಾಹಿತ್ಯದ ಬಗೆ, 
                                                                 ಭಾಷಿಕ ಬಗೆ, 
                                                                 ವೈಜ್ಞಾನಿಕ ಬಗೆ, 
                                                                  ಕ್ರಿಯಾತ್ಮಕ ಬಗೆ
       ಇವುಗಳಲ್ಲಿ ಜನಪದ ಸಾಹಿತ್ಯದ ರೂಪಗಳು ಗೋಚರಿಸುತ್ತವೆ. ಸಾಹಿತ್ಯದ ಬಗೆಗಳಲ್ಲಿ ಗೀತೆ, ಕಥೆ, ಪುರಾಣ, ಐತಿಹ್ಯಗಳು ಸೇರಿದರೆ, ಭಾಷಿಕ ಬಗೆಯಲ್ಲಿ ಗಾದೆ, ಒಗಟು, ಒಡಪು ಇತ್ಯಾದಿಗಳು, ವೈಜ್ಞಾನಿಕ ಬಗೆಯಲ್ಲಿ ನಂಬಿಕೆ, ಸಂಪ್ರದಾಯ, ಮಾಟ ಮಂತ್ರ, ವೈದ್ಯ ಮುಂತಾದವು ಸೇರುತ್ತವೆ.
      ರವೀಂದ್ರನಾಥ ಠಾಕೂರರು ಹೇಳಿರುವಂತೆ ‘ಎಲ್ಲಾ ಕಾವ್ಯಗಳಂತೆ ಜನಪದ ಗೀತೆಗಳ ಗುಣದಲ್ಲಿ ಬೇರೆ ಬೇರೆ ಮಟ್ಟಗಳಿವೆ. ಪೌರಾಣಿಕ ನದಿ ಮಂದಾಕಿನಿಯಂತೆ ನಿಜವಾದ ಕವಿ ಪ್ರತಿಭೆಯಿಂದ ಹೊರಹೊಮ್ಮುವ ಜೀವವಾಹಿನಿ ಅಪ್ರಾಪ್ಯಲೋಕದಲ್ಲಿ ಉಗಮಗೊಳ್ಳುತ್ತದೆ.’
      ವಸ್ತು ವೈವಿಧ್ಯತೆಯಿಂದ ಕೂಡಿ ಪೂರ್ವಾರ್ಜಿತ ಆಸ್ತಿಯಂತಿರುವ ಕಥಾಕೋಶವು  ಡಾ. ದೇ. ಜವರೇಗೌಡರು ಹೇಳಿರುವಂತೆ ಚಂಡಿ ಹಿಡಿಯುವ ಕಣ್ಣಿಗೆ ನಿದ್ದೆ ಹತ್ತದಿರುವ ದೇಹಾಲಸ್ಯದಿಂದ ನರಳುವ ಮಗುವಿಗೆ ಕಥೆ ಸನ್ಮೋಹನಾಂಜನವಾಗುತ್ತದೆ. ಕಥಾಶ್ರವಣ ರೋಗಿಗೆ ವೈದ್ಯವಾಗುತ್ತದೆ. ದಡ್ಡನಿಗೆ ವಿದ್ಯೆಯಾಗುತ್ತದೆ. ದುಡಿಮೆಗಾರನಿಗೆ ಚೇತೊಹಾರಿಯಾಗುತ್ತದೆ. ದುಷ್ಟನಿಗೆ ಶಿವಶಕ್ತಿಯಾಗುತ್ತದೆ. ಸೋಮಾರಿಗೆ ಚೈತನ್ನದಾಯಿಯಾಗುತ್ತದೆ. ರಸಿಕನಿಗೆ ರಸಾಯನವಾಗುತ್ತದೆ. ಒಡೆಯ-ಆಳು, ದೊರೆ-ಮಂತ್ರಿ, ರೈತ-ಯೋಧ, ಸನ್ಯಾಸಿ-ಸಂಸಾರಿ, ಹೆಂಗಸು-ಗಂಡಸು ಎಂಬ ಭೇದವಿಲ್ಲದೆ ಕಥೆ ಸರ್ವರನ್ನು ಏಕರೀತಿಯಾಗಿ ತೃಪ್ತಿಪಡಿಸುತ್ತದೆ. ಅದು ಬಾಳಿನ ಬವಣೆಯನ್ನು ಮರೆಸುತ್ತದೆ. ಮಾನಸಿಕ ಯಾತನೆಯನ್ನು ಒರೆಸುತ್ತದೆ. ಕೇಳುಗನಿಗೆ ಕೇಳುವ ಕುತೂಹಲವಿರುವಂತೆ ಹೇಳುಗನಿಗೆ ಹೇಳುವ ಹವ್ಯಾಸವಿರುತ್ತದೆ.
ಜನಪದ ಸಾಹಿತ್ಯದಲ್ಲಿ ಜನಪ್ರಿಯವಾದ ಪ್ರಮುಖವಾದ ಮತ್ತೆರಡು ಪ್ರಕಾರವಿದೆ. ಅವೇ ಗಾದೆ ಮತ್ತು ಒಗಟುಗಳು.
ಪ್ರತಿನಿತ್ಯ, ಪ್ರತಿಕ್ಷಣ ವೈವಿಧ್ಯಮಯವಾದ ಅನುಭವವನ್ನು ನೀಡುತ್ತಿರುವ ಚಲನಶೀಲ ಬದುಕಿನ ಪರಿಣಾಮ ಹಲವರ ಮೇಲಾಗಿ, ಹಲವರ ಅನುಭವ ಒಬ್ಬರ ಬಾಯಲ್ಲಿ ಹರಳುಗಟ್ಟಿ ಸಮುದಾಯದ ಸ್ಮøತಿಪಟಲದಲ್ಲಿ ಭದ್ರವಾಗಿ ನಿಂತು ಬಿಡುತ್ತದೆ. ಅನುಭವಾಧಾರಿತವಾದನುಡಿಗಳು  ಗಹನವಾದ ಅರ್ಥ ಶ್ರೀಮಂತಿಕೆಯಿಂದ ಹೊರಹೊಮ್ಮುತ್ತವೆ. ನಿತ್ಯದ ಬದುಕಿನಲ್ಲಿ ಬಳಕೆಯಾಗುವ ಈ ಮಾತುಗಳನ್ನು ಜನಪದರು ಗಾದೆ ಎಂದು ಕರೆದರು. ನೂರಾರು ಮಾತುಗಳಲ್ಲಿ ಹೇಳಬಹುದಾದ ಬದುಕಿನ ಅನುಭವವು ಸಾರವತ್ತಾಗಿ, ಸಂಕ್ಷಿಪ್ತವಾಗಿ, ನೀತಿಬೋಧಕವಾಗಿ ಕೇಳುಗರ ಮನಸ್ಸಿಗೆ ಆಹ್ಲಾದಕರವಾಗಿಯೂ ಮನಮುಟ್ಟುವಂತೆಯೂ ಒಂದೆರಡು ಮಾತಿನಲ್ಲಿ ನಿರೂಪಣೆಯಾಗಿರುತ್ತದೆ.
     ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು,’ ಆಡುಮುಟ್ದ ಸೊಪ್ಪಲ್ಲ ಗಾದೆ ಹೇಳದ ವಿಷಯವಿಲ್ಲ,’ ‘ಹಸಿಗೋಡೆಯಲ್ಲಿ ಹರಳು ಮೆಟ್ಟಿದಂತೆ,’ ‘ಆಕಾರದಲ್ಲಿ ಬಿಂಧು ಅರ್ಥದಲ್ಲಿ ಸಿಂಧೂ,’ ‘ರೂಪದಲ್ಲಿ ವಾಮನ ಅರ್ಥದಲ್ಲಿ ತ್ರಿವಿಕ್ರಮ,’ ಮುಂತಾದ ಗಾದೆಯನ್ನು ಕುರಿತಾದ ಗಾದೆಗಳೇ ಗಾದೆಯ ಮಹತ್ವವನ್ನು ಎತ್ತಿ ಹಿಡಿಯುತ್ತವೆ. 
       ವೇದಗಳು ಅಕ್ಷರ ಬಲ್ಲವರಿಗೆ ಮಾತ್ರ ಸೀಮಿವಾದರೆ, ಗಾದೆ ಸಕಲರ ಸೊತ್ತು. ಗಾದೆಗಳು ವೇದದ ಜ್ಞಾನದಂತೆ ನಿರ್ದಿಷ್ಟವಾದುದಲ್ಲ, ಕಾಲ ಕಾಲಕ್ಕೆ ಬೆಳೆಯುತ್ತಾ ಹೋಗುವ ಜ್ಞಾನ ಶಾಖೆಯಾಗಿದೆ.
       ಡಾ. ದೇ.ಜವರೇಗೌಡರು ತಮ್ಮ ‘ಜಾನಪದ ಅಧ್ಯಯನ’ ಎಂಬ ಗ್ರಂಥದಲ್ಲಿ ಹೇಳುವಂತೆ ಕೆಲವೇ ಕೆಲವು ಅರ್ಥಗರ್ಭಿತವಾದ ಮಾತುಗಳುಳ್ಳ ಚಿಕ್ಕದೂ ಚೊಕ್ಕವಾದದ್ದು ಆದ ವಾಕ್ಯವೇ ಗಾದೆ. ಗದ್ಯ ಮತ್ತು ಪದ್ಯಗಳ ಲಕ್ಷಣವನ್ನು ಅರ್ಥಪೂರ್ಣವಾಗಿ ಮೇಳೈಸಿಕೊಂಡ ವಿಶಿಷ್ಟ ಪ್ರಕಾರವದು.’
       ಸಂಸಂಸ್ಕೃತದ ‘ಗಾಥಾ’ ಶಬ್ದದ ತದ್ಭವವೇ ‘ಗಾದೆ’ಯಾಗಿದೆ ಎನ್ನುತ್ತಾರೆ. ನಾಣ್ಣುಡಿ ಎಂಬ ಅಚ್ಚ ಕನ್ನಡ ಶಬ್ದ ‘ಗಾದೆ’ಯ ಅರ್ಥವನ್ನು ಧ್ವನಿಸುತ್ತದೆ. ಗಾದೆಗೆ ಬಳಕೆಯಲ್ಲಿರುವ ಸಂವಾದಿ ಶಬ್ದಗಳು ಹೀಗಿವೆ: ಲೋಕೋಕ್ತಿ, ಪ್ರಾಚೀನೋಕ್ತಿ, ಸಾಮತಿ, ಸೂಕ್ತಿ, ಸೂತ್ರ, ಸಾರೋಕ್ತಿ, ಹೇಳಿಕೆ, ಉದ್ಧರಣೆ, ವಿಧಿ, ನಿಯಮ, ಪ್ರಮಾಣ, ಸುಭಾಷಿತ, ನಾಣ್ನುಡಿ ಇತ್ಯಾದಿ. 
ಮಾನವ ಜಗತ್ತನ ಸಮಸ್ತವನ್ನೂ ಅಡಗಿಸಿಕೊಂಡು ವಿಶಾಲವ್ಯಾಪ್ತಿಯನ್ನು ಹೊಂದಿರುವ ಗಾದೆಯ ಅರ್ಥ ಹಾಗೂ ಲಕ್ಷಣಗಳನ್ನು ಒಂದೇ ಸೂತ್ರದಲ್ಲಿ ಹಿಡಿದಿಡುವುದು ಕಷ್ಟ. ಬೇರೆ ಬೇರೆ ದೇಶದ ಜನತೆಯ ಹಾಗೂ ವಿದ್ವಾಂಸರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ನೋಡಿದಾದ ಗಾದೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. 
      ಕನ್ನಡದ ಜನತೆ: ‘ಗಾದೆ ವೇದಕ್ಕೆ ಸಮಾನ’
      ದ.ರಾ. ಬೇಂದ್ರೆ : ‘ಗಾದೆ ಮಾತುಗಳೆಂದರೆ ಅಚ್ಚುಕಟ್ಟಾದ ನಿರ್ಣಯಗಳಲ್ಲ, ವಿವೇಕ ಜಾಗೃತಿ ಮಾಡುವ ಸುಭಾಷಿತಗಳು.’
      ರಾಗೌ- ‘ಗಾದೆಯೆಂದರೆ ಸದ್ಯೋಜಾತ ನುಡಿಗಟ್ಟು; ಸೂಕ್ತ ಸಂದರ್ಭದಲ್ಲಿ ತಾಳಿದ ಯೋಗ್ಯ ನಿರ್ಣಯಗಳು.’
      ಮಾಸ್ತಿ ವೆಂಕಟೇಶ್ ಅಯ್ಯಂಗಾರ್ : ‘ಜನಾಂಗದಲ್ಲಿ ಪ್ರಚಾರದಲ್ಲಿರುವ ತಿಳಿವು ತನ್ನ ಮನಸ್ಸಿನಲ್ಲಿ ಬಿದ್ದಾಗ ನಾಲ್ಕು ಮಾತಿನಲ್ಲಿ ಘನಿಸಿ ಮುತ್ತಿನಂತಾಗುತ್ತದೆ. ಹಲವರ ಭಾವ ಒಬ್ಬನ ಮಾತಿನಲ್ಲಿ ಕಂಡು ಆ ಮಾತು ಹಲವರ ಮಾತಾಗುತ್ತದೆ.  ಗಾದೆಗಳನ್ನು ನೋಡಿದರೆ ಜನಾಂಗಗದ ಮನಸ್ಸು ಎಂಥದೆಂದು ಊಹಿಸಲು ಸಾಧ್ಯವಾಗುವುದಕ್ಕೆ ಇದೇ ಕಾರಣ.’
      ಗೊರೂರು ರಾಮಸ್ವಾಮಿ ಅಯ್ಯಂಗಾರ್ ; ಸತ್ಯ, ಗಾದೆ, ಮೂರ್ಖ ಈ ಮೂರನ್ನೂ ಎದುರಿಸಲಾಗದು. ಗಾದೆ ದೇವ ಭೇರಿ’ 
      ಎ.ಕೆ. ರಾಮಾನುಜಂ ಅವರು ‘ಗಾದೆ’ ಮಾತು ಜನತೆಯ ಮನಸ್ಸನ್ನು ಒಂದು ಮುಖದಲ್ಲಿ ಬಿಂಬಿಸುತ್ತದೆ. ಮತ್ತೊಂದು ಮುಖದಲ್ಲಿ ಆಳುತ್ತದೆ. ಅವರ ಅನುದಿನದ ನಂಟುಗಳನ್ನು ನಡೆಸುತ್ತದೆ. ಗಂಟುಗಳನ್ನು ಬಿಡಿಸುತ್ತದೆ.’
      ಅರಿಸ್ಟಾಟಲ್ ; ಗಾದೆಗಳು ಪ್ರಾಚೀನ ತತ್ವಶಾಸ್ತ್ರದ ಪಳೆಯುಳಿಕೆಗಳು’
      ಸ್ಕಾಟ್ ಜನತೆ : ಕೆಲವರು ಹೇಳಿದಾಗ ಅದು ಸತ್ಯವಿರಬಹುದು, ಆದರೆ ಎಲ್ಲರೂ ಹೇಳುತ್ತಿರುವಾಗ ಅದು ಸತ್ಯವಿರಲೇ ಬೇಕು’.
      ಐರಿಷ್ ಜನತೆ: ಗಾದೆಗಳನ್ನು ಯಾವ ಶಬ್ದಗಳೂ ಸೋಲಿಸಲಾರವು. ಗಾದೆಗಳು ದೊಡ್ಡ ಪುಸ್ತಕವಿದ್ದಂತೆ. ಅವುಗಳಿಂದ ಜನರ ಗುಣಧರ್ಮಗಳನ್ನು ಸುಲಭವಾಗಿ ಓದಬಹುದು. 
      ಫ್ರಾನ್ಸಿಸ್ ಬೇಕನ್ : ಜನಾಂಗದ ಕುಶಾಗ್ರತೆ, ಚತುರತೆ ಮತ್ತು ಶಕ್ತಿಯನ್ನು ಗಾದೆಗಳಲ್ಲಿ ಕಾಣಬಹುದು. 
ಜೆ.ಎ.ಕೆಲ್ಸೊ : ಸಂಕ್ಷಿಪ್ತತೆ, ವಿವೇಕಪೂರ್ಣತೆ ಅಥವಾ ಸಂವೇದನಾಶೀತೆ, ತೀಕ್ಷಣತೆ ಮತ್ತು ಜನಪ್ರಿಯತೆ –ಇವು ಗಾದೆಯ ನಾಲ್ಕು ಗುಣಗಳಾಗಿವೆ.
      ಥಾಮಸ್ ಫುಲ್ಲರ್ –‘ಸರ್ವೇಸಾಮಾನ್ಯವಾದ ಮತ್ತು ಗಮನಾರ್ಹವಾದ ಉಪಯೋಗದಲ್ಲಿನ ಅಡಕವೂ ಸಾರಭೂತವೂ ಆದ ಮಾತು ಅಥವಾಹೆಚ್ಚು ವಿಷಯಗಳನ್ನು ಕೆಲವೇ ಮಾತುಗಳಲ್ಲಿ ಭಟ್ಟಿ ಇಳಿಸಿದುದು ಗಾದೆ’
ಲಾರ್ಡ್ ಜಾನ್ ರಸೆಲ್ : ‘ಗಾದೆ ಹಲವರ ಜ್ಞಾನ, ಒಬ್ಬನ ವಿವೇಕ’
      ಗಾದೆಗಳನ್ನು ವಸ್ತುವಿನ ಆಧಾರದ ಮೇಲೆ ಹೀಗೆ ವರ್ಗೀಕರಿಸಬಹುದು. ಪೌರಾಣಿಕ ಗಾದೆಗಳು, ಚಾರಿತ್ರಿಕ ಗಾದೆಗಳು, ಐತಿಹ್ಯ ಗಾದೆಗಳು, ಸಾಮಾಜಿಕ ಗಾದೆಗಳು, ಸಾಹಿತ್ಯದ ಗಾದೆಗಳು, ವೃತ್ತಿಪರಗಾದೆಗಳು, ವೈದ್ಯಕೀಯ ಗಾದೆಗಳು, ಹವಾಮಾನ ಗಾದೆಗಳು, ಕೃಷಿ ಸಂಬಂಧಿ ಗಾದೆಗಳು. ಕೌಟುಂಬಿಕ ಗಾದೆಗಳು, ಸಾಂಪ್ರದಾಯಿಕ ಗಾದೆಗಳು, ನೀತಿ ಗಾದೆಗಳು, ಕಥನಾತ್ಮಕ ಗಾದೆಗಳು ಇತ್ಯಾದಿ.  
      ಸುಲಭವಾಗಿ ಅಳೆಯಲಾಗದ ಪ್ರಭಾವ, ಆಳ, ಅಗಲ, ಸೂಕ್ಷ್ಮಗಳನ್ನು ಹೊಂದಿರುವ ಗಾದೆಗಳು ಎಲ್ಲಾ ಕ್ಷೇತ್ರಗಳ ವಿದ್ವಾಂಸರಿಗೂ ಅಧ್ಯಯನಕ್ಕೆ ವಿಪುಲ ಸಾಮಗ್ರಿಯನ್ನು ಒದಗಿಸುತ್ತದೆ. ಧ್ವನಿಪೂರ್ಣವಾದ ಶಬ್ದಸಂಪತ್ತು ಗಾದೆಗಳ ಕಸುವಾದ ಮಾತಿನಲ್ಲಿ ತುಂಬಿಕೊಂಡಿದೆ. ಕುರಿತೋದದೆಯು ಕಾವ್ಯ ಪ್ರಯೋಗ ಪರಿಣತಮತಿಗಳಾದ ಜನತೆ ಕಿರಿದರಲ್ಲಿ ಹಿರಿದರ್ಥವನ್ನು ಹೂರಣವಾಗಿಟ್ಟು ತೋರಿಸಲು ಬಳಸಿಕೊಂಡ ಸಾಧನವಾದ ಗಾದೆಯು ದೇಶ, ಕಾಲ, ಭಾಷೆ, ಸಂಸ್ಕøತಿ ಹಂಗಿಲ್ಲದೆ ಜನತೆಯ ವಿಶ್ವಕೋಶವಾಗಿದೆ.
     ಸೂತ್ರೀಕೃತ ಆಲೋಚನಾ ಪ್ರಕಾರವಾದ ಒಗಟುಗಳು ಜನಪದರ ವಿವೇಕ, ಜಾಣ್ಮೆ, ಸೃಜನಶೀಲತೆ, ಚತುರತೆ, ಪ್ರತಿಭೆ ಮತ್ತು ಕಲ್ಪನಾಶಕ್ತಿಗೆ ಹಿಡಿದ ಕನ್ನಡಿಯಂತಿವೆ. ಆಬಾಲವೃದ್ಧರೆಲ್ಲರನ್ನೂ ಆಕರ್ಷಿಸುತ್ತದೆ. ಇತರ ಜನಪದ ಸಾಹಿತ್ಯ ಪ್ರಕಾರಗಳಂತೆ ಒಗಟೂ ಸಹ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಎಲ್ಲರ ಮನೆಯಂಗಳದಲ್ಲೂ ರಾರಾಜಿಸುತ್ತಿದೆ. 
      ಸಮಸ್ಯಾತ್ಮಕವಾದ ಅಭಿವ್ಯಕ್ತಿ ಯಾಗಿರುವ ‘ಒಗಟು’ ಪದವು ಸಂಸ್ಕøತದ ಮುಂಡಿಗೆ, ಪ್ರಹೇಳಿಕಾ, ಪ್ರಶ್ನೆ,ಕೂಟ, ಬ್ರಹ್ಮೋದ್ಯ, ವಿವಾದ, ಸಮಸ್ಯಾ ಇತ್ಯಾದಿ ಪದಗಳಿಗೆ ಸಂವಾದಿಯಾಗಿದೆ. ಒಗಟಿನ ಭಾಷೆ ಸರಳವದುದಲ್ಲ, ಸಾಂಕೇತಿಕವಾದದ್ದು, ರಹಸ್ಯವನ್ನು ಕಾಪಾಡಿಕೊಂಡಿರುತ್ತದೆ. ಸುಲಭವಾಗಿ ಅರ್ಥವಾಗದ, ಜಟಿಲವಾದ, ನಿಗೂಡವಾದ ಸಮಸ್ಯೆಯಂತಿರುತ್ತವೆ. 
      ಒಗಟು ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಒಡಗತೆ, ಒಂಟು, ಒಡಚುಕತೆ ಇತ್ಯಾದಿ ಪದಗಳು ರೂಢಿಯಲ್ಲದ್ದರೂ ‘ಒಗಟು’ ಪದವೇ ಜನಪ್ರಿಯವಾಗಿರುವುದು. ‘ಒಗಟು’ ‘ಒಗೆ’ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ‘ಒಗೆ’ ಎಂದರೆ ಎಸೆ. ಒಡ್ಡು, ಹಾಕು ಇತ್ಯಾದಿ ಅರ್ಥಗಳಿವೆ. ಸಮಸ್ಯೆಯನ್ನು ಒಡ್ಡು, ಪ್ರಶ್ನೆಯನ್ನು ಎಸೆ, ಸವಾಲು ಹಾಕು ಎಂದರ್ಥದಲ್ಲಿ ಒಗಟು ಬಳಕೆಯಾಗುತ್ತಿದೆ.
       ಡಾ. ಸೊಮಶೇಖರ ಇಮ್ರಾಪುರರ ಅಭಿಪ್ರಾಯದಲ್ಲಿ ‘ ಗೂಡಾರ್ಥದ್ಯೋತಕವಾದ, ಸಾಂಕೇತಿಕತೆ, ಪ್ರತಿಮೆ, ರೂಪಕ ಇಲ್ಲವೆ ಸರಮಾಲೆ ಅನ್ಯೋಕ್ತಿಪ್ರಧಾನವಾದ, ಉಪಮಾನ ವಾಚ್ಯ ಉಪಮೇಯ ಗೌಪ್ಯವಾದ, ಉತ್ತಾರಾಪೇಕ್ಷಿಯಾದ ಚಿನ್ಮನಶೀಲ ಪರಂಪರಾಗತ ಅಭಿವ್ಯಕ್ತಿಯೇ ಒಗಟು’
        ಅಲೆಕ್ಸಾಂಡರ್ ಎಚ್. ಕ್ರಾಪೆಯವರು ವಾಕ್ ಸಂಪ್ರದಾಯದಲ್ಲಿ ಒಗಟೇ ಕೊನೆಯದು ಎಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಸಿ.ಎಫ್.ಪಾಟರ್ ಅವರು ‘ಪುರಾತನ ಮನಸ್ಸಿನ ಪ್ರಾಥಮಿಕ ಅಭ್ಯಾಸದ ಫಲವೇ ಒಗಟು ಎಂದಿದ್ದಾರೆ. ‘ಮಾನವನ ಶೈಶವಾವಸ್ಥೆಯಲ್ಲಿಯೇ ಒಗಟುಗಳು ಸೃಷ್ಟಿಯಾದವು’ ಎನ್ನುವ ಜೇಮ್ಸ್ ಎ. ಕೆಲ್ಸೋ ಅವರು ಹೇಳಿಕೆಯೂ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತದೆ. ಅರಿಸ್ಟಾಟಲ್ ‘ಒಗಟಿಗೂ ರೂಪಕಕ್ಕೂ ನಿಕಟ ಸಂಬಂಧ. ರೂಪಕಗಳ  ಸರಣಿಯೇ ಒಗಟು ಎಂದಿದ್ದಾನೆ. 
        ದೇವುಡು ನರಸಿಂಹ ಶಾಸ್ತ್ರಿಗಳು ‘ಕಣ್ಣಾಮುಚ್ಚಾಲೆಯ ಕಾವ್ಯದ ಸ್ವರೂಪವೇ ಒಗಟು’ ಎಂದಿದ್ದಾರೆ.
       ಸಿ.ಪಿ. ಕೃಷ್ಣಕುಮಾರ್ ಅವರು ‘ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ವ್ಯಾಜದಿಂದ ಚಮತ್ಕಾರವಾಗಿ ವರ್ಣಿಸುವುದು, ಆವಸ್ತುವನ್ನು ಕಂಡು ಹಿಡಿಯುವಂತೆ ಹೇಳುವುದು ಒಗಟು’ ಎಂದಿದ್ದಾರೆ.
ಹಾ.ಮಾ.ನಾಯಕರು ‘ಇದು ಪ್ರಾಚೀನವಾದ ಸುವ್ಯವಸ್ಥಿತಗೊಂಡ ಆಲೋಚನೆಯ ಪಲವಾಗಿದೆ. ಒಗಟುಗಳ ಪ್ರಾಧಾನ ಗುರಿ ಬುದ್ಧಿಯ ಕಸರತ್ತು’ ಎಂದಿದ್ದಾರೆ.
       ರಾಮೇಗೌಡರು (ರಾಗೌ) ‘ಒಗಟು ಪ್ರಯತ್ನಪೂರ್ವಕ ಸೃಷ್ಟಿ ಪ್ರಜ್ಞಾಪೂರ್ವಕವಾದ ಸಾಹಿತ್ಯ ಕ್ರಿಯೆ. ವಾಸ್ತವ ಅರ್ಥವನ್ನು ಮುಚ್ಚಿಸುವ ವ್ಯಾಖ್ಯೆಯೇ ಒಗಟು. ಅನುಮಾನದ ಮೂಲಕ ಅರ್ಥಾನ್ವೇಷಣೆಗೆ ಹೊರಡಲು ಪ್ರೇರೇಪಿಸುವ ಸಂದಿಗ್ದಪ್ರಾಸಬದ್ಧ ರಚನೆ, ಕೂಡಲೇ ಕಾರಣ ಕೊಡಲಾಗದ ಸಮಸ್ಯೆ’ ಎಂದಿದ್ದಾರೆ.
ಗಾದೆಗಳು ಸಾಮಾನ್ಯವಾಗಿ ಉಪದೇಶವನ್ನು ಮುಖ್ಯ ಉದ್ದೇಶವಾಗಿಸಿಕೊಂಡರೆ, ಒಗಟುಗಳು ಜನಪದರ ಜಾಣ್ಮೆಯನ್ನು ಬಿಂಬಿಸುವ ಸಾಧನವಾಗಿವೆ.
       ಮಾತಿಗೆ ಮಾಧ್ಯಮವಾದ ಜನಪದ ಕಥೆ, ನೀತಿ, ಗಾದೆ, ಒಗಟು, ಲಾವಣಿ, ಮೊಲಾದ ಶಾಬ್ದಿಕ ಪ್ರಕಾರಗಳು, ಕ್ರಿಯೆಗೆ ಮಾಧ್ಯಮವಾದ ಸಂಪ್ರದಾಯ, ಆಚರಣೆ, ಕುಣಿತ, ಆಟಪಾಟ, ನಂಬಿಕೆ, ಪೂಜೆ ಮುಂತಾದವುಗಳು ಜನಪದ ಸಂಸ್ಕøತಿಯ ಅಂಗವಾಗಿವೆ. ಸಮಸ್ತ ಜನಪದ ಸಂಸ್ಕøತಿಯ ತಿಳುವಳಿಕೆಯೇ ಜಾನಪದ. ಜಾನಪದದ ಅರಿವು ಮನುಕುಲದ ಅರಿವೇ ಆಗಿದೆ.
ಪ್ರಾಕ್ತನ ಶಾಸ್ತ್ರಜ್ಞ ಫ್ರಾನ್ಸಿಸ್ ಗ್ರಾಸ್ ಹೇಳಿರುವಂತೆ ‘ಒಂದು ದೇಶದ ಜಾನಪದ ಇತಿಹಾಸವನ್ನು ತಿಳಿಯದವ ರಾಜನೂ ಆಗಲಾರ, ರಾಜಕಾರಣಿಯೂ ಆಗಲಾರ’
         ನಾವು ಎಷ್ಟೇ ಮುಂದುವರಿದವರಾದರೂ ನಮ್ಮ ಪೂರ್ವೀಕರ ಪ್ರಾಚೀನ ಜನತೆಯ ಸಾಹಿತ್ಯ, ಸಂಸ್ಕøತಿ, ಸಂಪ್ರದಾಯ, ಪರಂಪರೆಯನ್ನು ಕಡೆಣಿಸಲಾಗದು. ನಮ್ಮ ಪೂರ್ವಿಕರು ನಮಗೆ ಬಿಟ್ಟು ಹೋಗಿರುವ ಅಮೂಲ್ಯವದ ಜಾನಪದ ಸಂಪತ್ತು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದೆ. ನಿತ್ಯ ನಿರಂತರ ಕೆಲಸದ ಶ್ರಮದ ತೀವ್ರತೆಯನ್ನು ಕುಗ್ಗಿಸಿ, ಬದುಕಿನ ಏಕತಾನತೆಯನ್ನು  ಹೋಗಲಾಡಿಸಿ ಮನಸ್ಸನ್ನು ಮುದಗೊಳಿಸುತ್ತದೆ. ಮಲ್ಲಿಗೆಯಂತೆ ಮನವನ್ನು ಅರಳಿಸಿ ಶ್ರೀಗಂಧದಂತೆ ಸುವಾಸನೆಯನ್ನು ಪಸರಿಸುವಂತೆ ಮಾಡಿ ಸಾಮರಸ್ಯದಿಂದ ಬದುಕಿ ಬಾಳಲು ನೆರವಾಗುವಂತೆ ವ್ಯಕ್ತಿತ್ವವನ್ನು ರೂಪಿಸುತ್ತದೆ. 
ಬದುಕಿನ ಎಲ್ಲಾ ಮುಖಗಳನ್ನು ಒಳಗೊಂಡ ಸಮಷ್ಟಿ ಪ್ರಜ್ಞೆಯ ಸೃಷ್ಟಿಯೇ ಆಗಿರುವ ಜಾನಪದದ ಅಧ್ಯಯನ ಊಹಾತ್ಮಕ ಶಾಸ್ತ್ರವಲ್ಲ; ವಾಸ್ತವಿಕ ಆಧಾರಗಳ ಮೇಲೆ ನಿಂತಿರುವ ವಿಜ್ಞಾನ. ಆಧುನಿಕ ಬದುಕನ್ನು ವ್ಯವಸ್ಥೆಯನ್ನಾಗಿ ರೂಪಿಸಿಕೊಳ್ಳಲು  ಜಾನಪದದ ಅರಿವು ಸಹಾಯಕವಾಗುತ್ತದೆ.
         ಮನುಷ್ಯನ ಸಂಸ್ಕøತಿಯ ಪರಿಪೂರ್ಣ ಅರಿವಿಗೆ ಜಾನಪದ ಅಧ್ಯಯನ ಅತ್ಯಗತ್ಯ.  ಸಂಸ್ಕøತಿಯ ಅಧ್ಯಯನದಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಜಾನಪದವನ್ನು ಹೊರತುಪಡಿಸಿ ಸಂಸ್ಕøತಿಯ ಅಧ್ಯಯನ ಸಾಧ್ಯವೇಯಿಲ್ಲ ಎನ್ನುವುದು ನಿರ್ವಿವಾದ. 
        ಜಾನಪದವು ಕಲೆಯೂ ಹೌದು, ಶಾಸ್ತ್ರವೂ ಹೌದು. ಜಾನಪದ ಅಧ್ಯಯನ ಒಂದು ಶಾಸ್ತ್ರವಲ್ಲ; ಹಲವು ಶಾಸ್ತ್ರಗಳ ಸಮಷ್ಟಿ. ಯಾರೂ ತಮ್ಮ ಶಾಖೆಯದೆಂದು ಹಕ್ಕು ಚಲಾಯಿಸುವಂತಿಲ್ಲ. ಎಷ್ಟೋ ವಿಷಯಗಳ ಮೇಲೆ ಜಾನಪದ ಅಮೂಲ್ಯವಾದ ಬೆಳಕು ಚೆಲ್ಲುತ್ತದೆ. ಸಾಂಪ್ರದಾಯಿಕ ಶಿಕ್ಷಣದ ಸಾಧನವಾಗಿರುವ ಜಾನಪದ ಪುರಾಣ, ಐತಿಹ್ಯಗಳ ಅರಿವಿಗೆ ಸಹಾಯಕವಾಗಿದೆ. ಸಾಹಿತ್ಯ ವಿದ್ವಾಂಸರು, ಭಾಷಾ ವಿದ್ವಾಂಸರು, ಮಾನವ ಶಾಸ್ತ್ರೀಯ ವಿದ್ವಾಂಸರು ಜಾನಪದವನ್ನೇ ಅವಲಂಬಿಸಿದ್ದಾರೆ.
ಜಾನಪದದೊಂದಿಗೆ ಸಾಹಿತ್ಯಯು ಬಿಡಿಸಲಾಗದ ಅತ್ಯಂತ ಗಾಢವಾದ ಸಂಬಂಧವನ್ನು ಹೊಂದಿದೆ. ಜಗತ್ತಿನ ಶ್ರೇಷ್ಟ ಕೃತಿಗಳಾದ ರಾಮಾಯಣ, ಮಹಾಭಾರತ, ಇಲಿಯಡ್, ಗಿಲ್ಗಮೇಶ್, ಕಥಾಸರಿತ್ಸಾಗರ---ಮುಂತಾದವುಗಳಲ್ಲಿ ಜನಪದ ಸಾಹಿತ್ಯದ ಹಿನ್ನೆಲೆಯನ್ನು ಗುರುತಿಸಬಹುದು.
        ಶ್ರಮಿಕ ವರ್ಗಗಳ ವಾಸ್ತವಗಳು ಮತ್ತು ಆಕಾಂಕ್ಷೆಗಳ ಅಭಿವ್ಯಕ್ತಿಯೇ ಆಗಿರುವ ಜಾನಪದವು ಗ್ರಾಂಥಿಕ ಸಾಹಿತ್ಯರಚನೆಯು ಸೊರಗಿ ಸತ್ವಹೀನವಾದಾಗಲೆಲ್ಲಾ ಸಾಹಿತ್ಯಕ್ಕೆ ಚೈತನ್ಯವನ್ನು ನೀಡಿ ಪುನರುಜ್ಜೀವನಗೊಳ್ಳುವಂತೆ ಮಾಡಿದೆ.  
ನಾಗರಿಕತೆಯ ಕೆಳಹಂತದ ಜನರ ಪಾಲಿಗೆ ಜಾನಪದ ವಿಶ್ವಕೋಶವೇ ಆಗಿದ. ಎಲ್ಲಾ ವರ್ಗದ ಬಾಹ್ಯ ಮತ್ತು ಆಂತರಿ ಜೀವನವ್ಯಾಪಾರಗಳು, ನಂಬಿಕೆ ನಡವಳಿಕೆಗಳು, ಆಚಾರ ವಿಚಾರಗಳು ಜಾನಪದ ಪರಿಧಿಯಲ್ಲಿ ಸಮಾವೇಶಗೊಳ್ಳುತ್ತವೆ. 
ಸಂಸ್ಕøತಿಯನ್ನು ಊರ್ಜಿತಗೊಳಿಸುವಲ್ಲಿ ಜಾನಪದವು ಪ್ರಮುಖ ಪಾತ್ರವಹಿಸುತ್ತದೆ. ಸಂಸ್ಕøತಿಯ ಎಲ್ಲಾ ಅಂಶಗಳನ್ನೂ ಸೂಕ್ಷವಾಗಿ ಅಭಿವೃದ್ಧಿಗೊಳಿಸುತ್ತದೆ. ಗಾದೆಗಳು ಸಂಸ್ಕøತಿಯ ಮೌಲ್ಯವನ್ನು ಬಿತ್ತರಿಸುತ್ತವೆ. ಒಗಟುಗಳು ನಿಸರ್ಗದ ನಿಗೂಢ ಲಕ್ಷಣಗಳನ್ನು ಅರಿಯುವಲ್ಲಿ, ಭೌತಿಕ ಸಂಸ್ಕೃತಿ ಮತ್ತು ಸಾಮಾಜಿಕ ಸಂಸ್ಕøತಿಯ ಲಕ್ಷಣವನ್ನು ತಿಳಿಯುವಲ್ಲಿ ಸಹಕಾರಿಯಾಗಿವೆ. ಆಬಾಲವೃದ್ಧರಿಗೆ ನೈತಿಕ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸು ಜನಪದ ಕಥೆಗಳು, ಸಾಂಸ್ಕøತಿಕ ಮೌಲ್ಯಗಳನ್ನು ಎತ್ತಿ ಹಿಡಿದು, ಜನಸಮುದಾಯ ದಾರಿತಪ್ಪದಂತೆ ಎಚ್ಚರಿಸಿ ಸಮಾಜವನ್ನು ನಿಯಂತ್ರಿಸುವ, ಆಪತ್ತಿನಿಂದ ಪಾರುಮಾಡುವ ಚೈತನ್ಯವನ್ನು ಹೊಂದಿವೆ. 
        ಜನಪದ ಗೀತೆಗಳು, ಲಾವಣಿಗಳು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿವೆ.ಪರಕೀಯರ ದಾಳಿಯನ್ನು, ದಬ್ಬಾಳಿಕೆಯನ್ನು ವಿರೋಧಿಸಿ, ಐಕ್ಯತೆ, ಪ್ರಾಂತೀಯತೆ, ರಾಷ್ಟ್ರೀಯತೆ ಮುಂತಾದ ಭಾವನೆಗಳನ್ನು ಉದ್ದೀಪನಗೊಳಿಸಿ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿಯ ಕಪಿಮುಷ್ಟಿಯಿಂದ ಪಾರಾಗುವಲ್ಲಿ ಉಪಯುಕ್ತವಾಗಿವೆ. 
ಪ್ರಕೃತಿ ವಿಕೋಪದ ಮುನ್ಸೂಚನೆಯನ್ನು ನೀಡಬಲ್ಲ, ನಿಸರ್ಗದ ವಿಚಿತ್ರಗಳನ್ನು ಗುರುತಿಸಿ ಅಪಾಯದಿಂದ ಪಾರುಮಾಡಬಲ್ಲ ಜ್ಞಾನಸಂಪತ್ತು ಜಾನಪದದಲ್ಲಡಗಿದೆ. ಸುನಾಮಿ ದುರಂತದಿಂದ ಪಾರಾದ ಅಂಡಮಾನ್ ನಿಕೋಬಾರ್ ದ್ವೀಪದ ಬುಡಕಟ್ಟಿನವರೇ ಇದಕ್ಕೆ ಸಾಕ್ಷಿ.
        ಪ್ರೇಮ, ತ್ಯಾಗ, ಮಾತ್ಸರ್ಯ, ಸಾಹಸ, ಛಲ, ದ್ವೇಷ, ಬಂಜೆತನ, ಹೆಣ್ಣಿನ ಪಾತಿವ್ರತ್ಯ, ಮನುಷ್ಯನ ಜಿಪುಣತನ, ಕಷ್ಟ ಕಾರ್ಪಣ್ಯ, ಸೋಲು, ನಿರಾಸೆ ಇತ್ಯಾದಿ ಮನುಷ್ಯನ ನಿತ್ಯ ಜೀವನದ ಸಮಸ್ತವನ್ನೂ ಅಭಿವ್ಯಕ್ತಗೊಳುತ್ತದೆ. ಜೀವನದ ಆದರ್ಶವನ್ನು ಉಳಿಸುವ, ನೈತಿಕ ಮೌಲ್ಯವನ್ನು ಎತ್ತಿ ಹಿಡಿಯುವ ಮೌಲ್ಯಾನುಸರಣೆಯ ಸಂದೇಶನ್ನು ಸಾರುವ, ಆದರ್ಶ ಸಮಾಜವನ್ನು ಉಳಿಸಿ ಬೆಳೆಸುವ ಸಾಮಥ್ರ್ಯವು ಜಾನಪದ ಸಂಸ್ಕøತಿಯಲ್ಲಿ ಅಡಕವಾಗಿದೆ.
       ಜಾನಪದದಲ್ಲಿರುವುದೆಲ್ಲ ಜೀವನದಲ್ಲಿದೆ. ಜೀವನದ ಸಮಸ್ತವೂ ಜಾನಪದದಲ್ಲಿದೆ. ಜೀವನವೇ ಜಾನಪದ ಜಾನಪದವೇ ಜೀವನವೆಂದಾದರೆ, ಯಾವ ಸಂಕಷ್ಟಗಳೂ ಹತ್ತಿರ ಸುಳಿಯವು. ಮೋಹ-ದಾಹ, ಮದ-ಮತ್ಸರ, ತಳಮಳ-ತಲ್ಲಣಗಳು ತಾವಾಗಿಯೇ ದೂರ ಸರಿಯುತ್ತವೆ. ಬಾಳು ಬಂಗಾರವಾಗುತ್ತದೆ.
                                               ಆಚಾರಕರಸಾಗು ನೀತಿಗೆ ಪ್ರಭುವಾಗು
                                               ಮಾತಿನಲ್ಲಿ ಚೂಡಮಣಿಯಾಗು ನನಕಂದ 
                                               ಜ್ಯೋತಿಯೆ ಆಗು ಜಗಕೆಲ್ಲ||
      ನಮ್ಮ ಜನಪದ ಮಾತೆಯರ ಮುತ್ತಿನಂತಹ ಮಾತಿನ ಆಶೀರ್ವಾಚನಗಳ ಜನಪದ ಭಂಡಾರವೇ ಹೇರಳವಾಗಿರುವಾಗ ನಮ್ಮ ಬಾಳು ಬಂಗಾರವಾಗದೆ ಇನ್ನೇನು. 
                                               ಮುತ್ತು ಮಾಣಿಕ ಬೇಡ ಮತ್ತೆ ಸಂಪದ ಬೇಡ
                                               ಸುತ್ತ ಕೋಟೆಯ ವೈಭವ ಬೇಡ ನನ್ನವ್ವ
                                               ಸುತ್ತೆಲ್ಲ ಜನಪದ ಹಾಡಿರಲಿ||
ಎಂದು ಹಾಡುತ್ತಾ ಜನಪದ ಸೊಗಡನ್ನು ಸುತ್ತೆಲ್ಲ ಪಸರಿಸ ಬಯಸಿದ್ದಾರೆ ನಮ್ಮ ಜನಪದರು.

ಕಾಮೆಂಟ್‌ಗಳಿಲ್ಲ: