ಸೋಮವಾರ, ಮೇ 29, 2017

ಕಳವಳಕಾರಿ ಆರ್ಥಿಕ ಸೂಚನೆಗಳು


ವಿದೇಶಗಳಲ್ಲಿರುವ ಭಾರತೀಯ ಕಾರ್ಮಿಕರಿಂದ  ಭಾರತಕ್ಕೆ ಹರಿಯುತ್ತಿದ್ದ ಹಣಪಾವತಿಗಳು ಇಳಿಮುಖಗೊಂಡಿರುವುದು ಹಲವಾರು ಕಾರಣಗಳಿಂದ ಕಳವಳಕಾರಿಯಾಗಿದೆ.

indian economics ಗೆ ಚಿತ್ರದ ಫಲಿತಾಂಶ

 ಅನುಶಿವಸುಂದರ್

ಮುಂದುವರೆದ ದೇಶಗಳಲ್ಲಿ ದುಡಿಯುತ್ತಿರುವ ಭಾರತೀಯ ಮೂಲದ ಕಾರ್ಮಿಕರ ಮೂಲಕ ಭಾರತಕ್ಕೆ ಹರಿದು ಬರುತ್ತಿದ್ದ ಪಾವತಿಗಳ ಮೊತ್ತವು ೨೦೧೫ ಮತ್ತು ೨೦೧೬ರ ಎರಡೂ ಸಾಲಿನಲ್ಲೂ ಇಳಿಮುಖಗೊಂಡಿದೆ. ೨೦೧೫ರಲ್ಲಿ ಒಳಹರಿವಿನ ಪ್ರಮಾಣ ಶೇ. ರಷ್ಟು ಕಡಿತವಾದರೆ, ೨೦೧೬ರಲ್ಲಿ ಪ್ರಮಾಣ ಶೇ..೪ಕ್ಕೆ ಕುಸಿದಿದೆ. ಭಾರತದ ಮಟ್ಟಿಗಂತೂ ಕುಸಿತ ಶೇ. ರಷ್ಟಾಗಿದೆ ಹಾಗೆ ನೋಡಿದರೆ ಜಗತ್ತಿನ ಅನಿವಾಸಿ ಕಾರ್ಮಿಕ ಮೂಲದಿಂದ ಪಾವತಿಯ ಒಳಹರಿವನ್ನು ಅತಿಹೆಚ್ಚು ಪಡೆಯುವ ದೇಶಗಳಲ್ಲಿ ಭಾರತವೇ ಅಗ್ರಮಾನ್ಯವಾಗಿದೆ. ಪ್ರವೃತ್ತಿ ಹೀಗೆ ಮುಂದುವರೆದಲ್ಲಿ ವಿದೇಶಿ ವಿನಿಮಯ ಸಂಗ್ರಹದ ಚಾಲ್ತಿ ಖಾತೆ (ಕರೆಂಟ್ ಅಕೌಂಟ್)ನಲ್ಲಿ ಏರುಪೇರು ಆಗುತ್ತದೆ. ಅಷ್ಟು ಮಾತ್ರವಲ್ಲ. ಪಶ್ಚಿಮ ಏಷಿಯಾ ಮತ್ತಿತರ ದೇಶಗಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಕಾರ್ಮಿಕರನ್ನು ಕಳಿಸುವ ಕೇರಳಂಥ ರಾಜ್ಯಗಳ ಮೇಲೆ ತೀವ್ರವಾದ ಪ್ರಭಾವವನ್ನೇ ಬೀರುತ್ತದೆ. ವಿದೇಶದಿಂದ ಹರಿದು ಬರುವ ಹಣಪಾವತಿಗಳಿಂದ ಮಿಶ್ರ ಪರಿಣಾಮಗಳುಂಟಾಗುತ್ತವೆ. ಒಂದೆಡೆ ಸರ್ಕಾರಗಳು ಖಾಸಗಿ ವಿದೇಶಿ ಬಂಡವಾಳಿಗರಿಗೆ ಕೆಂಪುಹಾಸಿನ ಸ್ವಾಗತವನ್ನು ಬಯಸುತ್ತಿದೆ. ಆದರೆ ಮತ್ತೊಂದೆಡೆ ಇಳಿಮುಖಗೊಳ್ಳುತ್ತಿರುವ ವಿದೇಶಿ ಒಳಪಾವತಿಗಳು ಮತ್ತು ಸ್ಥಗಿತಗೊಂಡಿರುವ ತಥಾಕಥಿತ ವಿದೇಶಿ ನೆರವುಗಳು ದೇಶಕ್ಕೆ ಒಳ್ಳೆಯದನ್ನೇನೂ ಮಾಡುವುದಿಲ್ಲ.

ಅಂದಾಜುಗಳನ್ನು ವಿಶ್ವಬ್ಯಾಂಕ್ ಮತ್ತು ಜರ್ಮನಿ, ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ ಸರ್ಕಾರಿ ಸಂಸ್ಥೆಗಳಂಥ ಬಹುದಾನಿಗಳುಳ್ಳ ಸಂಸ್ಥೆಯಾದ ಗ್ಲೋಬಲ್ ನಾಲೆಡ್ಜ್ ಪಾರ್ಟ್ನರ್ಶಿಪ್ ಆನ್ ಮೈಗ್ರೇಷನ್ ಅಂಡ್ ಡೆವಲಪ್ಮೆಂಟ್-ಕೆಎನ್ಒಎಂಎಡಿ- (ವಲಸೆ ಮತ್ತು ಅಭಿವೃದ್ಧಿಯ ಕುರಿತಾದ ಜಾಗತಿಕ ಜ್ನಾನ ಸಹಕಾರ) ಎಂಬ ಸಂಸ್ಥೆಯು ಕಳೆದ ಏಪ್ರಿಲ್ನಲ್ಲಿ ಬಿಡುಗಡೆ ಮಾಡಿದ ಮೈಗ್ರೇಷನ್ ಅಂಡ್ ರೆಮಿಟೆನ್ಸ್ (ವಲಸೆ ಮತ್ತು ಹಣಪಾವತಿಯ ಒಳಹರಿವು)ಎಂಬ ವರದಿಯಿಂದ ತೆಗೆದುಕೊಳ್ಳಲಾಗಿದೆ. ವರದಿಯ ಪ್ರಕಾರ ೨೦೦೮ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರದಲ್ಲಿ ಅಭಿವೃದ್ಧಿಶೀಲ ದೇಶಗಳಿಗೆ ಪಾವತಿಯ ಒಳಹರಿವು ಕುಸಿದರೂ ಮರುವರ್ಷವೇ ಅದು ವಾಪಸ್ ಮರಳಿತ್ತು. ಆದರೆ ಕಳೆದೆರಡು ವರ್ಷಗಳಿಂದ ಮತ್ತೆ ಪಾವತಿಯಲ್ಲಿ ಇಳಿಮುಖತೆ ಕಂಡುಬಂದಿದೆ. ಅದಕ್ಕೆ ಹಲವಾರು ಕಾರಣಗಳಿವೆ: ಕಚ್ಚಾ ತೈಲ ಬೆಲೆಯಲ್ಲಿ ಕುಸಿತ;ಗಲ್ಫ್ ಕೋ ಆಪರೇಷನ್ ಕೌನ್ಸಿಲ್ (ಕೊಲ್ಲಿ ಸಹಕಾರ ಪರಿಷತ್) ದೇಶಗಳು ಮತ್ತು ರಷಿಯಾ ಎದುರಿಸುತ್ತಿರುವ ದುರ್ಬಲ ಆರ್ಥಿಕ ಅಭಿವೃದ್ಧಿ;ವಿದೇಶಿ ವಿನಿಮಯ ದರಗಳಲ್ಲಿ ಆಗುತ್ತಿರುವ ಏರುಪೇರುಗಳು. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್) ಹಾಗು ಮೇಲಿನ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕಂಡುಬಂದಂತೆ ಅರೆ ಕುಶಲ ಕಾರ್ಮಿಕರು ವಿದೇಶಗಳಲ್ಲಿ ಕೆಲಸ ಕೊಡಿಸುವ ಏಜೆನ್ಸಿಗಳಿಗೆ ಹೆಚ್ಚೂ ಕಡಿಮೆ ತಮ್ಮ ಇಡೀ ಒಂದು ವರ್ಷದ ವೇತನವನ್ನು ಶುಲ್ಕವಾಗಿ ತೆರಬೇಕಾಗುತ್ತದೆ. ಮತ್ತೊಂದೆಡೆ ಸ್ವದೇಶಗಳಲ್ಲಿನ ತಮ್ಮ ಮನೆಗಳಿಗೆ ಪಾವತಿಯನ್ನು ವರ್ಗಾಯಿಸುವಂಥ ಸೇವೆಗಳಿಗೆ ಹೆಚ್ಚೂ ಕಡಿಮೆ ತಾವು ಕಳಿಸುವ ಹಣದ ಶೇ..೫ರಷ್ಟು ಹಣವನ್ನು ಶುಲ್ಕವಾಗಿ ತೆರಬೇಕಾಗುತ್ತದೆಂದು ವರದಿ ತಿಳಿಸುತ್ತದೆ. ಇದರ ಜೊತೆಗೆ ಹಲವಾರು ಸಂಪತ್ಭರಿತ ಕೊಲ್ಲಿ ರಾಷ್ಟ್ರಗಳಿಗೆ ಭಾರತದಿಂದ ವಲಸೆ ಹೋಗಿರುವ ಕಟ್ಟಡ ಕಾರ್ಮಿಕರು ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆಂಬ ವರದಿಗಳು ಸಹ ಲಭ್ಯವಿವೆ.

ಇಂಥಾ ಒಳಪಾವತಿಗಳು ದೇಶಗಳು ಆರ್ಥಿಕ ಹಿನ್ನೆಡೆಯನ್ನು ಅನುಭವಿಸುತ್ತಿರುವಾಗ ವಿದೇಶಿ ವಿನಿಮಯವನ್ನು ಪಡೆದುಕೊಳ್ಳಬಹುದಾದ ಸ್ಥಿರವಾದ ಮೂಲವನ್ನು ಒದಗಿಸುತ್ತವೆ. ಕುಸಿತ ಕಂಡುಬಂದಿರುವ ಕಳೆದೆರಡು ವರ್ಷಗಳಿಗೆ ಮುಂಚಿನ ೧೫ ವರ್ಷಗಳಲ್ಲಿ ವಿದೇಶಿ ಪಾವತಿಗಳ ಪ್ರಮಾಣ ಮೂರುಪಟ್ಟು ಹೆಚ್ಚಿತ್ತು. ಪಾವತಿಗಳು ೨೦೧೪ರಲ್ಲಿ ಉತ್ತುಂಗವನ್ನು ಮುಟ್ಟಿತ್ತು. ವರ್ಷ ಭಾರತವೇ ಅತಿಹೆಚ್ಚು ಪಾವತಿಯನ್ನು ಪಡೆದ ದೇಶವಾಗಿ ೭೦ ಬಿಲಿಯನ್ ಡಾಲರ್ನಷ್ಟು ವಿದೇಶಿ ವಿನಿಮಯವನ್ನು ಪಡೆದಿತ್ತು. ನಂತರದ ಸ್ಥಾನದಲ್ಲಿ ಚೀನಾ ಇದ್ದು ೬೪ ಬಿಲಿಯನ್ ಡಾಲರಿನಷ್ಟು ಪಾವತಿಯನ್ನು ಪಡೆದುಕೊಂಡಿತ್ತು. ಅದನ್ನು ಪಡೆದುಕೊಳ್ಳುವ ಕುಟುಂಬಗಳು ಗೃಹ ನಿರ್ಮಾಣ ಇತ್ಯಾದಿಗಳ ಮೇಲೆ ವೆಚ್ಚ ಮಾಡುವ ಮೂಲಕ ಆರ್ಥಿಕತೆಯ ಮನ್ನೆಡೆಗೆ ಸಹಾಯ ಮಾಡಬಹುದು. ಆದರೆ ಇದರಿಂದ ಅಸಮಾನತೆಗಳು ಹೆಚ್ಚುವಂಥ, ಶ್ರಮಶಕ್ತಿಯ ಸರರಾಜಿನಲ್ಲಿ ವ್ಯತ್ಯಯವಾಗಬಹುದಾz ಮತ್ತು ಲಿಂಗ ಅಸಮತೋಲನದಂಥ  ಕೆಲವು ನಕಾರಾತ್ಮಕ ಪರಿಣಾಮಗಳೂ ಉಂಟಾಗಬಹುದು. ವಿಶ್ವಬ್ಯಾಂಕ್ನಂಥ ಸಂಸ್ಥೆಗಳ ಪ್ರಕಾರ ಹಣಪಾವತಿಗಳನ್ನು ಪಡೆದುಕೊಳ್ಳುವವರು ಬ್ಯಾಂಕುಗಳಲ್ಲಿ ಖಾತೆಯನ್ನು ತೆಗೆಯುವುದರಿಂದ ಹಣಕಾಸು ಸೇವೆಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ವಿದ್ವಾಂಸರು ಮತ್ತು ಸಂಶೋಧಕರು ಇಂಥಾ ವಾದಸರಣಿಯ ಬಗ್ಗೆ ಗಂಭೀರವಾದ ತಕರಾರುಗಳನ್ನೆತ್ತುತ್ತಾರೆ. ಅವರ ಪ್ರಕಾರ ವಿದೇಶಿ ಹಣ ಪಾವತಿಗಳು ಅಸಮರ್ಪಕ ಆರ್ಥಿಕ ಬೆಳವಣಿಗೆಗೆ ಕರಣವಾದ ಮೂಲಭೂತ ಕಾರಣಗಳನ್ನು ಬಗೆಹರಿಸುವುದಿಲ್ಲ ಮತ್ತು ತಥಾಕಥಿತ ಸ್ವಯಂ ಅಭಿವೃದ್ಧಿಯನ್ನು ಉತ್ತೇಜಿಸಲು ಹಣಕಾಸಿನ ಮೇಲೆ ನೀಡುವ ವಿಶೇಷ ಒತ್ತು ಅಂತಿಮವಾಗಿ ಬಡವರ ಮೇಲೆಯೇ ಹೆಚ್ಚಿನ ಹೊರೆಯನ್ನು ಹೇರುತ್ತದೆ.

ಭಾರತದ ವಿದೇಶಿ ಬ್ಯಾಲೆನ್ಸ್ ಆಫ್ ಪೇಮೆಂಟ್ (ಒಂದು ದೇಶವು ವಿದೇಶಗಳಿಗೆ ತನ್ನ ಸರಕು ಮತ್ತು ಸೇವೆಗಳನ್ನು ರಫ್ತು ಮಾಡುವ ಮೂಲಕ ವಿದೇಶಿ ವಿನಿಮಯವನ್ನು ಪಡೆದುಕೊಳ್ಳುತ್ತದೆ. ಹಾಗು ಮೂಲಕ ವಿದೇಶಗಳಿಂದ ತಾನು ಆಮದು ಮಾಡಿಕೊಳ್ಳುವ ಸೇವೆ ಮತ್ತು ಸರಕುಗಳಿಗೆ ಸಂದಾಯ ಮಾಡಬೇಕಾದ ವಿದೇಶಿ ವಿನಿಮಯವನ್ನು ಪಡೆದುಕೊಳ್ಳುತ್ತದೆ. ಆದರೆ ರಫ್ತಿಗಿಂತ ಆಮದೇ ಜಾಸ್ತಿಯಾಗುತ್ತಾ ಹೋದಲ್ಲಿ ಅದಕ್ಕೆ ತೆರೆಬೇಕಾದ ವಿನಿಮಯದ ಕೊರತೆ ಉಂಟಾಗುತ್ತಾ ಬಿಕ್ಕಟ್ಟಿನ ಹಂತವನ್ನೇ ಮುಟ್ಟಬಹುದು. ಅಂಥಾ ಪರಿಸ್ಥಿತಿಯನ್ನು ಬ್ಯಾಲೆನ್ಸ್ ಆಫ್ ಪೇಮೆಂಟ್ ಬಿಕ್ಕಟ್ಟು- ಸಂದಾಯ ಪಾವತಿ ಬಿಕ್ಕಟ್ಟು ಎಂದು ಕರೆಯುತ್ತಾರೆ.- ಅನುವಾದಕನ ಟಿಪ್ಪಣಿ) -ಸಂದಾಯ ಪಾವತಿ ಸಮತೋಲನವು  ಏಕರೂಪವಾಗಿಲ್ಲ. ಒಂದು ವರ್ಷದ ಸತತ ಇಳಿಮುಖವನ್ನು ಕಂಡ ಭಾರತದ ರಫ್ತು ಮಾರುಕಟ್ಟೆ ಕಳೆದ ಕೆಲವು ತಿಂಗಳಿಂದಷ್ಟೇ ಚೇತರಿಸಿಕೊಂಡಿದೆ. ೨೦೧೬ರ ಏಪ್ರಿಲ್-ಡಿಸೆಂಬರ್ ನಡುವಿನ ರಿಸರ್ವ್ ಬ್ಯಾಂಕಿನ ಬ್ಯಾಲೆನ್ಸ್ ಆಫ್ ಪೇಮೆಂಟ್ ಅಂಕಿಅಂಶಗಳನ್ನು ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿ ನೋಡಿದಲ್ಲಿ ಚಾಲ್ತಿ ಖಾತೆ ಕೊರತೆ ಮತ್ತು ಸರಕು ಸಾಮಗ್ರಿಗಳ ವಾಣಿಜ್ಯ ಕೊರತೆಗಳು ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ. ಒಟ್ಟಾರೆ ವಿದೇಶಿ ಬಂಡವಾಳ ಮತ್ತು ಒಟ್ಟಾರೆ ವಿದೇಶಿ ವಿನಿಮಯ ಸಂಗ್ರಹಗಳು ಹೆಚ್ಚಿವೆ. ತೈಲಬೆಲೆಗಳು ಕಳೆದ ಮೂರು ವರ್ಷಗಳಿಂದ ಏರಿಕೆಯಾಗಿಲ್ಲವಾದರೂ ಇದೇ ರೀತಿಯ ಪರಿಸ್ಥಿತಿ ಮುಂದುವರೆಯುತ್ತದೆಂದು ಹೇಳಲಾಗುವುದಿಲ್ಲ. ಶೇರು ಮಾರುಕಟ್ಟೆಯಲ್ಲಿ ಒಟ್ಟಾರೆ ವಿದೇಶಿ ಹೂಡಿಕೆಯು ಸಂಕುಚಿತಗೊಂಡಿದೆ. ಲಾಭ, ಬಡ್ಡಿ ಮತ್ತು ಡಿವಿಡೆಂಡ್ಗಳ ಹೊರ ಹರಿವು ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಮಾಹಿತಿ ತಂತ್ರಜ್ನಾನ ಬೆಂಬಲಿತ ಸೇವೆಗಳ ರಫ್ತಿನ ಬೆಳವಣಿಗೆಯಲ್ಲಿ ಕಂಡುಬಂದಿರುವ ಕುಸಿತವು ಕಳವಳವನ್ನುಂಟುಮಾಡುವಂತಿದೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಹೊರಗುತ್ತಿಗೆ ವಿರೋಧಿ -ಗೃಹ ಮಾರುಕಟ್ಟೆ ರಕ್ಷಣಾ ನೀತಿಗಳಿಂದಾಗಿ (ಪ್ರೊಟೆಕ್ಷನಿಸ್ಟ್ ಪಾಲಿಸಿ) ಬಗೆಯ ರಫ್ತುಗಳ ಮಾರುಕಟ್ಟೆಯ ಮೇಲೆ ನಿಯಂತ್ರಣಗಳು ಮುಂದುವರೆಯಲಿದೆ. ಅದೇರೀತಿ ಭಾರತದ ಇತರ ರಫ್ತುಗಳಿಗೂ ಅಮೆರಿಕ, ಪಶ್ಚಿಮ ಯೂರೋಪ್ ಮತ್ತು ಜಪಾನುಗಳಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಯಾವುದೇ ಹೆಚ್ಚುವರಿ ಬೇಡಿಕೆ ಕಂಡುಬರುವ ಖಾತರಿಯೇನಿಲ್ಲ.

ವಿಶಾಲ ಸಂದರ್ಭದೊಳಗಿಟ್ಟೇ ಅನಿವಾಸಿ ಭಾರತೀಯ ಕಾರ್ಮಿಕರ ಹಣಪಾವತಿಯಲ್ಲಿ ಕಂಡುಬರುತ್ತಿರುವ ಕುಸಿತವನ್ನು ಅರ್ಥಮಾಡಿಕೊಳ್ಳಬೇಕಿದೆ. ಅನಿವಾಸಿ ಕಾರ್ಮಿಕರ ಪಾವತಿಗಳು ಗುತ್ತಿಗೆ ವಲಸಿಗರಿಗೆ ಮತ್ತು ಅರೆಕುಶಲ ಕಾರ್ಮಿಕರಿಗೆ ಜೀವನೋಪಾಯವನ್ನು ಕಲ್ಪಿಸುತ್ತಾ ಭಾರತವನ್ನೂ ಒಳಗೊಂಡಂತೆ ಇತರ ಹಲವಾರು ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆಯಲ್ಲಿ ಹೆಚ್ಚಿನ ಪಾತ್ರವನ್ನು ನಿರ್ವಹಿಸುತ್ತಿವೆ. ಪಾವತಿಗಳ ಮತ್ತೊಂದು ಮೂಲ ಉತ್ತರ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಭಾರತೀಯ ಸಾಫ್ಟ್ವೇರ್ ಇಂಜನಿಯರ್ಗಳು. ಇವರು ಕಳಿಸುತ್ತಿದ್ದ ಪಾವತಿಗಳ ಬಹುಪಾಲು ವಸತಿಯಂಥ ಆಸ್ತಿಪಾಸ್ತಿಗಳ ಖರೀದಿಯ ಮೇಲೆ ಹೂಡಿಕೆಯಾಗುತ್ತಿತ್ತುಇತ್ತೀಚೆಗೆ ಎಚ್೧ಬಿ ವೀಸಾಗಳ ಮೇಲೆ ಹೇರಿರುವ ನಿರ್ಬಂಧಗಳು ಮೂಲವನ್ನೂ ಸಹ ಬರುವ ದಿನಗಳಲ್ಲಿ ಬತ್ತಿಸಲಿದೆ.

ಒಟ್ಟಾರೆಯಾಗಿ ನೋಡುವುದಾದರೆ ಬಗೆಯ ಪಾವತಿಗಳ ಹರಿವಿನಲ್ಲಿ ಕಂಡುಬರುತ್ತಿರುವ ಕುಸಿತವನ್ನು ತಡೆಯುವುದು ಸರ್ಕಾರದ ವ್ಯಾಪ್ತಿಯಲ್ಲಿ ಇಲ್ಲವಾದರೂ ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆಯೆಂಬುದಂತೂ ಖಂಡಿತವಾಗಿದೆ.

      ಕೃಪೆ: Economic and Political Weekly
              May 20, 2017. Vol 52. No. 20
                                                                                                                            
ಚೀನಾ ಪ್ರಾರಂಭಿಸಿರುವ ಹೊಸ ಸಿಲ್ಕ್ ರಸ್ತೆ


ಚೀನಾ ಪ್ರಾರಂಭಿಸಿರುವ ಒನ್ ರೋಡ್-ಒನ್ ಬೆಲ್ಟ್ (ಒಂದು ವಲಯ- ಒಂದು ರಸ್ತೆ) ಯೋಜನೆಯು ಒಂದು ಅತ್ಯಂತ ಜಾಣತನದ ರಾಜಕೀಯ-ಭೌಗೋಳಿಕ ಮತ್ತು ಆರ್ಥಿಕ ನಡೆಯಾಗಿದೆ

ಸಂಬಂಧಿತ ಚಿತ್ರ

ಅನುಶಿವಸುಂದರ್
ಜಗತ್ತಿನ ಎರಡನೇ ದೊಡ್ಡ ಆರ್ಥಿಕತೆಯೆಂಬ ಸ್ಥಾನ ಪಡೆದಿರುವ ಚೀನಾ ಈಗ ಅತ್ಯಂತ ತ್ವರಿತವಾಗಿ ಮೊದಲನೇ ಸ್ಥಾನವನ್ನು ಆಕ್ರಮಿಸುವತ್ತ ದಾಪುಗಾಲಿಡುತ್ತಿದೆ. ಇದನ್ನು ಅದು ಏಕಕಾಲಕ್ಕೆ ರಾಜಕೀಯ-ಭೌಗೋಳಿಕ ಲಾಭವನ್ನೂ ಮತ್ತು ಸ್ಪರ್ಧಾತ್ಮಕ ಆರ್ಥಿಕ ಲಾಭಗಳೆರಡನ್ನೂ ಸಾಧಿಸುವ ಒಂದು ದೊಡ್ಡ ವ್ಯೂಹತಂತ್ರದ ಭಾಗವಾಗಿಯೇ ಯೋಜಿಸಿದೆ. ಮೇ ೧೪ ಮತ್ತು ೧೫ ರಂದು ಚೀನಾದ ಬೀಜಿಂಗ್ನಲ್ಲಿ ಆಯೋಜಿಸಲಾಗಿದ್ದ ಬೆಲ್ಟ್ ಅಂಡ್ ರೋಡ್ ಫೋರಮ್ ಫಾರ್ ಇಂಟರ್ನ್ಯಾಷನಲ್ ಕೋ ಆಪರೇಷನ್ (ಅಂತರರಾಷ್ಟ್ರೀಯ ಸಹಕಾರಕ್ಕಾಗಿ ವಲಯ  (ಬೆಲ್ಟ್) ಮತು ರಸ್ತೆ (ರೋಡ್) ಒಕ್ಕೂಟ) ಸಮ್ಮೇಳನದಲ್ಲಿ ೨೮ ಸರ್ಕಾರ/ಪ್ರಭುತ್ವಗಳ ಮುಖ್ಯಸ್ಥರುಗಳು, ೧೦೦ ದೇಶಗಳ ಪ್ರತಿನಿಧಿಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳೂ ನೆರೆದಿದ್ದವು. ಅವರೆಲ್ಲರೂ ಸೇರಿ ಸಿಲ್ಕ್ ರೋಡ್ ಎಕಾನಾಮಿಕ್ ಬೆಲ್ಟ್ (ರೇಷ್ಮೆ ರಸ್ತೆಯ ಆರ್ಥಿಕ ವಲಯ)ಮತ್ತು ೨೧ ನೇ ಶತಮಾನದ ಮಾರಿಟೈಮ್ ಸಿಲ್ಕ್ ರೋಡ್ ಪ್ರಾಜೆಕ್ಟ್ (ರೇಷ್ಮೆ ನೌಕಾ ರಹದಾರಿ ಯೋಜನೆ)ಯನ್ನು ಪ್ರಾರಂಭಿಸಿದ್ದಾರೆ. ಅದನ್ನು ಬೆಲ್ಟ್ ಅಂಡ್ ರೋಡ್ ಇನಿಷಿಯೇಟೀವ್ (ಬಿಆರ್- ವಲಯ ಮತ್ತು ರಸ್ತೆಗಾಗಿನ ಜಂಟಿ ಮುಂದೊಡಗು) ಅಥವಾ ಸರಳವಾಗಿ ಒನ್ ಬೆಲ್ಟ್ ಒನ್ ರೋಡ್ (ಒಂದು ವಲಯ ಮತ್ತು ಒಂದು ರಸ್ತೆ) ಎಂದು ಕರೆಯಲಾಗುತ್ತದೆ. ಬಿಆರ್ ಎಂಬುದು ಒಂದು ಬೃಹತ್ ಅಂತರರಾಷ್ಟ್ರೀಯ ಯೋಜನೆಯಾಗಿದ್ದು ಏನಿಲ್ಲವೆಂದರೂ ಅದು ಚೀನಾದ ಪ್ರಮುಖ ಆರ್ಥಿಕ ಕೇಂದ್ರಗಳನ್ನು ಹಲವು ಮಾರ್ಗಗಳ ಮೂಲಕ ಯೂರೋಪಿನೊಂದಿಗೆ ಜೋಡಿಸುತ್ತದೆ. ಅದಕ್ಕಾಗಿ ಹಲವಾರು ರಸ್ತೆಗಳನ್ನೂ, ರೈಲ್ವೆ ಲೈನ್ಗಳನ್ನೂ, ಮತ್ತು ಬಂದರುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಹಾಗಿದ್ದರೂ ಏಶಿಯಾದ ಎರಡನೇ ಮತ್ತು ಮೂರನೇ ಅತಿದೊಡ್ಡ ಆರ್ಥಿಕತೆಗಳಾದ ಜಪಾನ್ ಮತ್ತು ಭಾರತಗಳು ಸಮ್ಮೇಳನವನ್ನು ಬಹಿಷ್ಕರಿಸಿದ್ದವು. ಭಾರತವು ಯೊಜನೆಯು ತನ್ನ ಸಾರ್ವಭೌಮತೆ ಮತ್ತು ಭೌಗೋಳಿಕ ಸಮಗ್ರತೆಗೆ ಧಕ್ಕೆ ತರುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದೆ.

ಚೀನಾದ ಅಧಕ್ಷ ಕ್ಸಿ ಜಿನ್ಪಿಂಗ್ ಅವರಂತೂ ಕ್ರಿ.ಪೂ.೧೫೦ ರಿಂದ ಕ್ರಿ.. ೧೪೫೦ರವರೆಗೆ ಅಸ್ಥಿದ್ವಲ್ಲಿದ್ದ, ಏಷಿಯಾ ಖಂಡದ ಪೂರ್ವ ಪಶ್ಚಿಮಗಳನ್ನು ಕೊರಿಯಾ ಮತ್ತು ಜಪಾನ್ ಪರ್ಯಾಯ ದ್ವೀಪಗಳ ಮೂಲಕ ಮೆಡಿಟರೇನಿಯನ್ ಸಮುದ್ರದೊಡನೆ ಸಂಪರ್ಕ ಕಲ್ಪಿಸುತ್ತಿದ್ದ ಐತಿಹಾಸಿಕ ಸಿಲ್ಕ್ ರೂಟ್ (ರೇಷ್ಮೆ ಮಾರ್ಗ) ಐತಿಹಾಸಿಕ ನೆನಪುಗಳನ್ನು ಉಲ್ಲೇಖಿಸಿದರು. ಅತ್ಯಂತ ಸಂಪದ್ಭರಿತವಾಗಿದ್ದ ಮತ್ತು ಲಾಭದಾಯಕವಾಗಿದ್ದ ರೇಷ್ಮೆ ವ್ಯಾಪಾರದಿಂದಾಗಿಯೇ ಹೆಸರು ಚಾಲ್ತಿಗೆ ಬಂದಿತ್ತು. ಅಂತರರಾಷ್ಟ್ರೀಯ ವಾಣಿಜ್ಯದ ಉಪ ಉತ್ಪನ್ನವಾಗಿ ಸಂಸ್ಕೃತಿ ಮತ್ತು ತಂತ್ರಜ್ನಾನಗಳೂ ಸಹ ಹರಡಿಕೊಂಡವು. ಐತಿಹಾಸಿಕ ರೇಷ್ಮೆ ರಸ್ತೆಗೆ ಭಾವುಕ ಸ್ಪರ್ಷವನ್ನು ಕೊಟ್ಟ ಚೀನಾದ ಅಧ್ಯಕ್ಷ  ಕ್ಸಿ ಯವರು ರಸ್ತೆಯಿಂದ ಪ್ರತಿಯೊಬ್ಬರೂ ಪಡೆದುಕೊಂಡ ಅರಿವು ಮತ್ತು ಪ್ರಯೋಜನಗಳಿಗೆ, ಮುಕ್ತತೆ ಮತ್ತು ಒಳಗೊಳ್ಳುವಿಕೆಗೆ ಒತ್ತುಕೊಡುತ್ತಾ ಹೊಸ ರೇಷ್ಮೆ ರಸ್ತೆ-ಬಿಆರ್- ಅನ್ನು ೨೧ನೇ ಶತಮಾನದ ಯೋಜನೆ ಎಂದು ಕರೆದಿದ್ದಾರೆಆದರೆ, ಘೋಷಿತ ಉದ್ದೇಶಗಳಾಚೆ ಇರುವ  ರಾಜಕೀಯ-ಭೌಗೋಳಿಕ ಹಿತಾಸಕ್ತಿಗಳು ಮತ್ತು ರಾಜಕೀಯ ಆರ್ಥಿಕತೆಯನ್ನು  ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಬಿಆರ್ ಭೌಗೋಳಿಕವಾಗಿ ಆರು ರಸ್ತೆ ಕಾರಿಡಾರ್ಗಳನ್ನೂ ಮತ್ತು ಒಂದು ನೌಕಾ ಮಾರ್ಗವನ್ನೂ ಹೊಂದಿದೆ. ಆರು ರಸ್ತೆ ಕಾರಿಡಾರ್ಗಳು ಹೀಗೆ ಹಾದುಹೋಗುತ್ತವೆ-ಪಶ್ಚಿಮ ಚೀನಾದಿಂದ ಪಶ್ಚಿಮ ರಷಿಯಾಗೆ; ಉತ್ತರ ಚೀನಾದಿಂದ ಮಂಗೋಲಿಯಾದ ಮೂಲಕ ಪೂರ್ವ ರಷಿಯಾಗೆ;ಪಶ್ಚಿಮ ಚೀನಾದಿಂದ, ಪಶ್ಚಿಮ ಹಾಗೂ ಮಧ್ಯ ಏಶಿಯಾದ ಮೂಲಕ ಟರ್ಕಿಗೆ; ದಕ್ಷಿಣ ಚೀನಾದಿಂದ ಇಂಡೋಚೀನಾದ ಮೂಲಕ ಸಿಂಗಾಪುರಕ್ಕೆ; ನೈರುತ್ಯ ಚೀನಾದಿಂದ ಸಿಂಗಾಪುರಕ್ಕೆ; ಮತ್ತು ದಕ್ಷಿಣ ಚೀನಾದಿಂದ, ಬಾಂಗ್ಲಾದೇಶ ಮತ್ತು ಮಯನ್ಮಾರ್ ಮೂಲಕ ಭಾರತಕ್ಕೆ. ನೌಕಾ ರೇಷ್ಮೆ ಮಾರ್ಗವು ಚೀನಾದ ಕರಾವಳಿಯಿಂದ ಸಿಂಗಪೂರ್-ಮಲೇಷಿಯಾ, ಹಿಂದೂ ಮಹಾ ಸಾಗರ, ಅರಬ್ಬಿ ಸಮುದ್ರಗಳ ಮೂಲಕ ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸಲಿದೆ.

ಹಾಗಿದ್ದರೆ ಬಿಆರ್ ರಾಜಕೀಯ-ಭೌಗೋಳಿಕತೆ ಮತ್ತು ರಾಜಕೀಯ ಆರ್ಥಿಕತೆ ಏನು?

ಬಿಆರ್ ಯೋಜನೆಯು ಜಾಗತಿಕ ಆರ್ಥಿಕತೆಯಲ್ಲಿ ತನಗಿರುವ ಸ್ಠಾನಮಾನಕ್ಕೆ ಎರಗಿರುವ ದೊಡ್ಡ ಸವಾಲೆಂದೂ, ಜಾಗತಿಕ ಆರ್ಥಿಕತೆಗೆ ತಾನು ಕೊಡುತಿದ್ದ ನಾಯಕತ್ವ ಸ್ಥಾನವನ್ನು ಕಬಳಿಸಿಕೊಳ್ಳಲು ಚೀನಾ ಮಾಡಿರುವ ದೊಡ್ಡ ಹುನ್ನಾರವೆಂದು ಅಮೆರಿಕ ಭಾವಿಸುತ್ತಿದೆ. ಸಮಾವೇಶವನ್ನು ಬಹಿಷ್ಕರಿಸಿದ, ಅಮೆರಿಕದ ಕಿರಿಯ ಪಾಲುದಾರರಾದ ಜಪಾನ್ ಮತ್ತು ಭಾರತಕ್ಕೆ ಚೀನಾವು ಒಂದು ಬೃಹತ್ ಪ್ರಾದೇಶಿಕ ಶಕ್ತಿಯಾಗಿ ಬೆಳೆಯುವುದು ಪಥ್ಯವಾಗುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಿಆರ್ಐನ ಆರು ರಸ್ತೆ ಕಾರಿಡಾರ್ಗಳಲ್ಲಿ ಒಂದಾದ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ (ಚೀನಾ-ಪಾಕಿಸ್ತಾನ ಆರ್ಥಿಕ ರಹಮಾರ್ಗ) ಮಾರ್ಗವು ಭಾರತವು ತನಗೆ ಸೇರಿದ್ದೆಂದು ಪ್ರತಿಪಾದಿಸುವ ಮತ್ತು  ಈಗ ಪಾಕಿಸ್ತಾನದ ಸುಫರ್ದಿಗೆ ಒಳಪಟ್ಟಿರುವ ಪಾಕಿಸ್ತಾನೀ ಕಾಶ್ಮೀರದ ಮೂಲಕ ಹಾದುಹೋಗುವುದನ್ನು ತೀವ್ರವಾಗಿ ವಿರೋಧಿಸುತ್ತಿದೆ.

ಶೀತಲ ಯುದ್ಧದ ನಂತರದ ಅವಧಿಯಲ್ಲಿ  (ಎರಡನೇ ಪ್ರಪಂಚ ಯುದ್ಧದ ನಂತರದಲ್ಲಿ ಜಗತ್ತಿನ ಎರಡು ಬಲಶಾಲಿ ದೇಶಗಳಾಗಿ ಹೊರಹೊಮ್ಮಿದ ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳು ತಮ್ಮ ಜಾಗತಿಕ ಪ್ರಾಬಲ್ಯಕ್ಕಾಗಿ ಪರಸ್ಪರರ ವಿರುದ್ಧ ಮತ್ತವರ ಪ್ರಭಾವಿ ವಲಯಗಳ ವಿರುದ್ಧ ಪರೋಕ್ಷವಾಗಿ ನಡೆಸಿದ ಯುದ್ಧ ಮತ್ತಿತರ ಸೆಣಸಾಟಗಳನ್ನು ಶೀತಲ ಯುದ್ಧ ಎಂದು ಬಣ್ಣಿಸುತ್ತಾರೆ. ೧೯೯೦ರಲ್ಲಿ ಸೋವಿಯತ್ ಒಕ್ಕೂಟದ ಪತನದ ಮೂಲಕ ಶೀತಲ ಯುದ್ಧ ಕೊನೆಗೊಂಡಿತು. ನಂತರದ ಅವಧಿಯನ್ನು ಶೀತಲ ಯುದ್ಧದ ನಂತರದ ಅವಧಿಯೆಂದು ವಿಶ್ಲೇಷಕರು ವರ್ಗೀಕರಿಸುತ್ತಾರೆ - ಅನುವಾದಕನ ಟಿಪ್ಪಣಿ). ಅಮೆರಿಕವು ಜಗತ್ತಿನ ದೇಶಗಳ ಮೇಲೆ, ಭೂಭಾಗಗಳ ಮೇಲೆ, ಸಂನ್ಮೂಲಗಳ ಮೇಲೆ (ಮುಖ್ಯವಾಗಿ ತೈ ಮತ್ತು ಅನಿಲ), ಜಗತ್ತಿನ ಮಹಾ ಸಮುದ್ರಗಳು, ಬಂದರು ಮತ್ತು ನೌಕಾ ನಿಲ್ದಾಣಗಳ ಮೇಲೆ ಹತೋಟಿ ಸಾಧಿಸಲು ನಿರಂತರವಾದ ಪ್ರಯತ್ನಗಳನ್ನು ನಡೆಸಿದೆ.

ತನ್ನ ಉದ್ದೇಶಕ್ಕೆ ರಷಿಯಾ, ಜಪಾನ್ ಮತ್ತು ಜರ್ಮನಿಯ ನೇತೃತ್ವದಲ್ಲಿ ಒಂದುಗೂಡಿರುವ ಕೆಲವು ಐರೋಪ್ಯ ದೇಶಗಳು ಎದುರಾಳಿಗಳೆಂದು ಅಮೆರಿಕ ಪರಿಗಣಿಸುತ್ತಿದೆ. ಅಮೆರಿಕವು ತನ್ನ ಸೇನೆಯ ಮೇಲೆ ಎಷ್ಟು ವೆಚ್ಚವನ್ನು ಮಾಡುತ್ತಿದೆಯೆಂದರೆ ಸದ್ಯಕ್ಕಂತೂ ಅದರ ಯಾವ ಎದುರಾಳಿಗಳಾಗಲೀ, ಎದುರಾಳಿಗಳ ಕೂಟವಾಗಲೀ ಅದಕ್ಕೆ ಸರಿಸಾಟಿಯಾಗಲು ಸಾಧ್ಯವೇ ಇಲ್ಲ. ೨೦೦೩ರ ಇರಾಕ್ ಯುದ್ದ ಮತ್ತು ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಅಮೆರಿಕವು ಯುರೇಷಿಯಾದ ರಾಜಕೀಯ-ಭೌಗೋಳಿಕತೆಯ ಭೂಪಟವನ್ನು ತಿದ್ದಿ ಬರೆಯಲು ಸೈನಿಕವಾಗಿ ತೊಡಗಿಕೊಂಡಿದೆಯೆಂದು ಅನಿಸುತ್ತದೆ. (ಯೂರೇಷಿಯಾ ಎಂಬುದು ಯೂರೋಪ್ ಮತ್ತು ಏಷಿಯಾಗಳ ಒಟ್ಟು ಭೂಭಾಗ. ಏಕೆಂದರೆ ಅವೆರಡನ್ನು ಬೇರೆ ಮಾಡುವ ಯಾವುದೇ ಭೌಗೋಳಿಕ ಗಡಿಗಳಿಲ್ಲ.). ಅದರಲ್ಲೂ ವಿಶೇಷವಾಗಿ ಅದರ ಗಮನವು ಪರ್ಷಿಯನ್ ಕೊಲ್ಲಿ, ಕ್ಯಾಸ್ಪಿಯನ್ ಸಮುದ್ರಕ್ಕಂಟಿದ ಭೂಭಾಗ, ಮಧ್ಯ ಏಷಿಯಾದ ಸುತ್ತ ಇರುವ ದೇಶಗಳ ಮೇಲಿದೆ. ಶೀತಲ ಯುದ್ಧದ ನಂತರದ ಅವಧಿಯಲ್ಲಿ ಯುರೇಷಿಯಾದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಅಮೆರಿಕವು ಹೊಸದಾಗಿ ಸ್ಥಾಪಿಸಿರುವ ನೌಕಾನೆಲೆಗಳ ಸಂಖ್ಯೆಯನ್ನು ಗಮನಿಸಿದರೆ ಸಾಕು, ಅದರ ವ್ಯೂಹತಂತ್ರಗಳು ಯಾರಿಗಾದರೂ ಸ್ಪಷ್ಟವಾಗುತ್ತವೆ

ಆದರೆ ಯುರೇಷಿಯಾದ ಮಧ್ಯ ಹಾಗೂ ಕೇಂದ್ರ ಭಾಗಗಳ ಮೇಲೆ ತನ್ನ ಹಿಡಿತವನ್ನು ಗಟ್ಟಿಗೊಳಿಸುತ್ತಲೇ ಅಮೆರಿಕವು ಚೀನಾದ ಆರ್ಥಿಕ ಪುನರುತ್ಥಾನವನ್ನೂ ಮತ್ತು ಮಧ್ಯಯುಗೀನ ಸಾಮ್ರಾಜ್ಯವು ಏಷಿಯಾದ ಪ್ರಾದೇಶಿಕ ಶಕ್ತಿಯಾಗಿ ಉಗಮವಾಗುವುದನ್ನು ತಡೆಗಟ್ಟಲು ಬೇಕಾದ ಎಲ್ಲಾ ತಂತ್ರಗಳನ್ನೂ ಹೆಣೆಯುತ್ತಿದೆ. ಉದ್ದೇಶದಿಂದಲೇ ಅದು ೨೦೧೧ರಲ್ಲಿ ಪಿವಟ್ ಟು ಏಷಿಯಾ (ಏಷಿಯಾದ ತಿರುಗಾಣಿ) ಎಂಬ ವ್ಯೂಹತಂತ್ರವನ್ನು ರೂಪಿಸಿದೆ. ಮತ್ತು ಏಷಿಯಾ-ಪೆಸಿಫಿಕ್ ಪ್ರದೇಶದ ಭೂಭಾಗಗಳು ತನU ಸೈನಿಕವಾಗಿ ಎಟುಕುವಂತೆ ಮಾಡಿಕೊಳ್ಳಲು ಆಷ್ಟ್ರೇಲಿಯಾ, ಜಪಾನ್ ಮತ್ತು ಭಾರತವನ್ನೂ  ಸೆಳೆದುಕೊಂಡಿದೆ.

ಚೀನಾವು ಅಮೆರಿಕ ಮಾಡುತ್ತಿರುವ ಸೈನಿಕ ವೆಚ್ಚಕ್ಕೆ ಸರಿಸಾಟಿಯಾಗಲು ಸಾಧ್ಯವೇ ಇಲ್ಲ. ಅಮೆರಿಕ ಸರ್ಕಾರವು ತನ್ನ ಸೈನಿಕ ಬಲದ ಮೇಲೆ ವೆಚ್ಚ ಮಾಡುತ್ತಿರುವ ಕಾಲು ಭಾಗವನ್ನೂ ಸಹ ಚೀನಾ ವೆಚ್ಚ ಮಾಡುತ್ತಿಲ್ಲ. ಇದರೊಂದಿಗೆ ಆಷ್ಟ್ರೇಲಿಯಾ, ಜಪಾನ್ ಮತ್ತು ಭಾರತದಂಥ ಮಿತ್ರ ರಾಷ್ಟ್ರಗಳು ಮತ್ತು ಅವರೊಂದಿಗೆ ದಕ್ಷಿಣ ಕೊರಿಯಾ ಮತ್ತು ಟೈವಾನ್ಗಳು ಹಾಗೂ ಅದರೊಂದಿಗೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಅದರ ಸೈನಿಕ ನೆಲೆಗಳು. (ಚೀನಾಗೆ ಯಾವುದೇ ಸೈನಿಕ ನೆಲೆಗಳಿಲ್ಲ).
ಆದರೆ ಹೀಗೆ ಜಗತ್ತಿನ ಸಾಮ್ರಾಜ್ಯಶಾಹಿ ಅಗ್ರರಾಷ್ಟ್ರವೊಂದು ದುರುದ್ದೇಶಪೂರ್ವಕವಾಗಿ ವಿಭಜಿಸಿ ಅವಲಂಬಿತವಾಗಿಸಿರುವ ಯುರೇಷಿಯಾ ಪ್ರದೇಶವನ್ನು ಚೀನಾವು ಅಂತರರಾಷ್ಟ್ರೀಯ ಸಹಕಾರದೊಂದಿಗೆ ಸಂಪೂರ್ಣವಾಗಿ ತನ್ನೆಡೆಗೆ ಗೆದ್ದುಕೊಳ್ಳಲು ಬಿಆರ್ ಯೋಜನೆಯನ್ನು ರೂಪಿಸಿದೆ. ಇದರೊಂದಿಗೆ ಬಿಆರ್ ಯೋಜನೆಯು ಹುಟ್ಟುಹಾಕುವ ಅಪಾರವಾದ ಬೇಡಿಕೆಯ ಮೂಲಕ ತನ್ನ ದೇಶದೊಳಗಿನ ಕಬ್ಬಿಣ ಮತ್ತು ಉಕ್ಕಿನಂಥ ಉದ್ದಿಮೆಗಳು ಎದುರಿಸುತ್ತಿರುವ ಅಪಾರ ಹೆಚ್ಚುವರಿ ಸಾಮರ್ಥ್ಯದ ಸಮಸ್ಯೆಯನ್ನೂ ನೀಗಿಕೊಳ್ಳಲಿದೆ. ಬಂಡವಾಳವೇ ಪ್ರಭುತ್ವವನ್ನು ನಿಯಂತ್ರಿಸುವುಂಥ ಪರಿಸ್ಥಿತಿಯನ್ನು ರಾಜಕೀಯ ನಾಯಕತ್ವವು ಬರಗೊಡುವುದಿಲ್ಲವೆಂಬುದು ದಿಟವಾದರೂ ಸಂಪತನ್ನು ಉತ್ಪಾದಿಸಲು ಅದು ಮಾರುಕಟ್ಟೆಯನ್ನಂತೂ ಖಂಡಿತಾ ಬಳಸಿಕೊಳ್ಳುತ್ತದೆ.

ಒಂದೆಡೆ ಚೀನಾದ ಉದಯವನ್ನು ತಡೆಗಟ್ಟಲು ಅಮೆರಿಕವು ಹೆಣಗಾಡುತ್ತಿದ್ದರೆ ಅದನ್ನು ಯಶಸ್ವಿಯಾಗಿ ಎದುರಿಸಲು ಚೀನಾವು ಒಂದು ಅಸಾಧಾರಣ ರಾಜಕೀಯ ನಾಯಕತ್ವವನ್ನೇ ಹುಟ್ಟುಹಾಕಿದೆ. ಬಿಆರ್ ಎಂಬುದು ಅತ್ಯಂತ ಜಾಣತನದ ನಡೆಯಾಗಿದೆ. ಇನ್ನು ಅದರ ಹಿಂದಿರುವ ರಾಜಕೀಯ ಆರ್ಥಿಕತೆಯ ಬಗ್ಗೆ ಹೇಳುವುದಾದರೆ ಆಡಮ್ ಸ್ಮಿತ್ ಮತ್ತು ಜಾನ್ ಮೆನಾರ್ಡ್ ಕೀನ್ಸ್ ಅವರ ಮೂಲ ರಾಜಕೀಯ ಚಿಂತನೆಗಳು ಬೀಜಿಂಗ್ನಲ್ಲಿ ಜೀವಂತವಾಗಿವೆ ಎನ್ನುವುದಂತೂ ಸತ್ಯ.
        \

ಕೃಪೆ:  Economic and Political Weekly
         May 20, 2017. Vol. 52. No. 20