ಶುಕ್ರವಾರ, ಜೂನ್ 3, 2016

ಕಣಜ-ಪದವಿನ್ಯಾಸ

-ಡಾ. ಅಶೋಕಕುಮಾರ ರಂಜೇರೆ
ಸೌಜನ್ಯ: ಕಣಜ
   ಕರ್ನಾಟಕದ ಒಳನಾಡಿನಾದ್ಯಂತ ಉರ್ದು ಭಾಷಿಕರು ಇರುವಡೆಯಲ್ಲಿ ಉರ್ದು ಕೂಡ ಅನೇಕರು ಬಳಸುವ ಭಾಷೆಯಾಗಿದೆ. ಇದರಿಂದ ಕರ್ನಾಟಕದಲ್ಲಿ ಬಳಸುವ ಕನ್ನಡ ಕಾಲಾಂತರದಿಂದಲೂ ತನ್ನ ಸುತ್ತಮುತ್ತಲಿನ ಭಾಷೆಗಳೊಂದಿಗೆ ಮತ್ತು ಒಳನಾಡಿನಲ್ಲಿ ಬಳಸುವ ಉರ್ದು, ತುಳು ಭಾಷೆಗಳೊಂದಿಗೆ ಮತ್ತು ಆಡಳಿತ ಮತ್ತು ಶಿಕ್ಷಣದ ಭಾಷೆಯಾಗಿ ಬಳಕೆಯಾಗುತ್ತಿರುವ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೊಂದಿಗೆ ಸದಾ ಕೊಡು ಕೊಳೆ ಮಾಡುತ್ತಲೇ ಬಂದಿದೆ. ಇದರಿಂದ ಕನ್ನಡ ಭಾಷೆಯಲ್ಲಿ ಸಾಕಷ್ಟು ಪಲ್ಲಟವಾಗಿರುವುದನ್ನು ನೋಡಲು ಸಾಧ್ಯವಿದೆ. ಹೀಗೆ ಚಾರಿತ್ರಿಕವಾಗಿ ಮತ್ತು ಪ್ರಸ್ತುತ ಸಂದರ್ಭದಲ್ಲಿ ಇತರ ಅನೇಕ ಭಾಷೆಗಳೊಂದಿಗೆ ಕೊಡು ಕೊಳೆ ಮಾಡುತ್ತ ಬೆಳೆಯುತ್ತ ಬದಲಾಗುತ್ತ ಬಂದಿದೆ. ಹೀಗೆ ಬೆಳೆಯುತ್ತ, ಸಾಕಷ್ಟು ಬದಲಾಗುತ್ತ ಬಂದಿರುವ ಕನ್ನಡ ಕೃಷಿ ಮತ್ತಿತರ ವೃತ್ತಿಗಳಲ್ಲಿ ಹೇಗೆ ಬಳಕೆಯಾಗುತ್ತಿದೆ ಎನ್ನುವುದು ಕುತೂಹಲಕಾರಿ ಸಂಗತಿಯಾಗಿ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಉಪಕರಣವಾದ ಕಣಜ ಪದವನ್ನು ತೆಗೆದುಕೊಂಡು ಅದು ಕರ್ನಾಟಕದಾದ್ಯಂತ ಹೇಗೆ ಬಳಕೆಯಾಗಿದೆ. ಅದರ ಪರ‍್ಯಾಯ ರೂಪಗಳಾವುವು ಮತ್ತು ಅದರ ಧ್ವನಿ ವ್ಯತ್ಯಾಸ ರೂಪಗಳು ಎಷ್ಟಿವೆ. ಅವು ಎಲ್ಲೆಲ್ಲಿ ಕಂಡು ಬರುತ್ತವೆ ಎನ್ನುವುದನ್ನು ಕಂಡುಕೊಳ್ಳಲು ಈ ಲೇಖನವನ್ನು ಸಿದ್ಧಗೊಳಿಸಲಾಗಿದೆ. 

  ಕಣಜ ಎನ್ನುವ ಪದ ಕೃಷಿ ಉತ್ಪನ್ನದ ದವಸ ಧಾನ್ಯಗಳನ್ನು ಸಂಗ್ರಹಿಸಿಡಲು ಬಳಸುವ ಉಪಕರಣ ಅಥವ ಸ್ಥಳ. ಕರ್ನಾಟಕದಾದ್ಯಂತ ಕಣಜ ಪದ ಒಂದೇ ಅರ್ಥದಲ್ಲಿ ಬಳಕೆಯಾಗಿಲ್ಲ. ವಸ್ತು, ಸ್ಥಳ ಮತ್ತು ಅದರ ಪ್ರಮಾಣದಲ್ಲೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ಕಂಡು ಬಂದಿದೆ. ಹಾಗಾಗಿ ಕಣಜ ಪದದ ಬಳಕೆ ಕುತೂಹಲ ಮೂಡಿಸಿದೆ. ಬಿದಿರಿನ ಬೆತ್ತದಿಂದ ತಯಾರಿಸಿದ ದೊಡ್ಡ ಗಾತ್ರದ ಪಾತ್ರೆಯಂತಿರುವ ಸಾಧನದಿಂದ ಹಿಡಿದು ಕಲ್ಲಿನಿಂದ ನೆಲದ ಒಳಗೆ ನಿರ್ಮಿಸಿದ ಮಾಳಿಗೆಯೂ ಇದರ ವ್ಯಾಪ್ತಿಗೆ ಬಂದಿದೆ. ಈ ಲೇಖನದಲ್ಲಿ ಕಣಜ ರೂಪಕ್ಕೆ ಸಿಕ್ಕ ಪರ‍್ಯಾಯ ರೂಪಗಳನ್ನು ಆ ಪರ‍್ಯಾಯ ರೂಪಕ್ಕೆ ಇರುವ ಧ್ವನಿ ವ್ಯತ್ಯಾಸ ರೂಪಗಳನ್ನು ಕೋಷ್ಟಕಗಳ ಮೂಲಕ ಮತ್ತು ಕರ್ನಾಟಕದ ನಕ್ಷೆಯ ಮೂಲಕ ತೋರಿಸಲು ಪ್ರಯತ್ನಿಸಲಾಗಿದೆ. ಇಲ್ಲಿ ಭಾಷಿಕ ರಚನೆ ಮತ್ತು ಬಳಕೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಲು ಹೋಗಿಲ್ಲ. ಬದಲಿಗೆ ಆ ರೂಪಗಳ ಬಳಕೆಯ ವಿನ್ಯಾಸವನ್ನು ಕೋಷ್ಟಕ ಮತ್ತು ನಕ್ಷೆಯ ಮೂಲಕವಷ್ಟೆ ವಿವರಿಸಲು ಪ್ರಯತ್ನಿಸಲಾಗಿದೆ.

ಕಣಜ ರೂಪದ ಬಳಕೆ ಉತ್ತರ ಕರ್ನಾಟಕದ ಗುಲಬರ್ಗಾ, ವಿಜಾಪುರ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಕಂಡು ಬಂದಿಲ್ಲ. ರಾಯಚೂರು, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಯ ಕೆಲವೇ ತಾಲೂಕುಗಳಲ್ಲಿ ಕಂಡು ಬಂದರೆ ದಕ್ಷಿಣ ಕರ್ನಾಟಕದ ಅದರಲ್ಲೂ ತುಂಗಭದ್ರ ನದಿ ಕೆಳಕ್ಕೆ ಇದರ ಬಳಕೆ ವ್ಯಾಪಕವಾಗಿ ಕಂಡು ಬಂದಿದೆ. ಕಣಜ ಬಳಕೆಯ ವಿವರ ಕರ್ನಾಟಕದಲ್ಲಿ ಈ ಕೆಳಗಿನಂತಿದೆ.
೧. ಕೋಷ್ಟಕ ೧ ರಲ್ಲಿ ಕಣಜ ಮತ್ತು ಅದರ ಪರ‍್ಯಾಯ ರೂಪಗಳು ಮತ್ತು ಅವುಗಳಿಗೆ ಸಿಗುವ ಧ್ವನಿ ವ್ಯತ್ಯಾಸ ರೂಪಗಳನ್ನು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಬಳಕೆಯಾದ ವಿವರವನ್ನು ನೀಡಲಾಗಿದೆ.
೨. ಕೋಷ್ಟಕ ೨ ರಲ್ಲಿ ಕಣಜದ ಪ್ರತಿ ಪರ‍್ಯಾಯ ರೂಪಗಳಿಗೆ ದೊರೆಯುವ ಧ್ವನಿ ವ್ಯತ್ಯಾಸ ಕಂಡುಬರುವ ಪದಗಳನ್ನು ನೀಡಲಾಗಿದೆ.
೩. ಕೋಷ್ಟಕ ೩ ರಲ್ಲಿ ಈ ಎಲ್ಲ ವಿವರ ಇರುವ ನಕ್ಷೆಯನ್ನು ನೀಡಲಾಗಿದೆ.
ಕೋಷ್ಟಕ ೧ – ಕಣಜ ಮತ್ತು ಅದರ ಪರ‍್ಯಾಯ ರೂಪಗಳು ಮತ್ತು ಅವುಗಳ ಧ್ವನಿ ವ್ಯತ್ಯಾಸ ರೂಪಗಳು ಬಳಕೆಯಾದ ಜಿಲ್ಲೆ ಮತ್ತು ಅವುಗಳಲ್ಲಿನ ತಾಲೂಕುಗಳ ವಿವರ
ಕೋಷ್ಟಕ ೧ – ಕಣಜ ಮತ್ತು ಅದರ ಪರ್ಯಾಯ ರೂಪಗಳು ಮತ್ತು ಅವುಗಳ ಧ್ವನಿ ವ್ಯತ್ಯಾಸ ರೂಪಗಳುಬಳಕೆಯಾದ ಜಿಲ್ಲೆ ಮತ್ತು ಅವುಗಳಲ್ಲಿನ ತಾಲೂಕುಗಳ ವಿವರ
೧. ಕಣಜಬೆಳಗಾವಿ (ಬೈಲಹೊಂಗಲ, ಚಿಕ್ಕೋಡಿ, ರಾಮದುರ್ಗ ಮತ್ತು ಸವದತ್ತಿ)
ಧಾರವಾಡ (ಹಿರೇಕೆರೂರು)
ಉತ್ತರ ಕನ್ನಡ (ಹೊನ್ನಾವರ)
ಹಾವೇರಿ (ಹಿರೇಕೆರೂರು)
೨. ಕಣ್ಜಬೆಂಗಳೂರು ( ಎಲ್ಲ ತಾಲೂಕು)
ಕೋಲಾರ (ಎಲ್ಲ ತಾಲೂಕು)
ತುಮಕೂರು (ಎಲ್ಲ ತಾಲೂಕು)
ಮೈಸೂರು(ಎಲ್ಲ ತಾಲೂಕು)
ಮಂಡ್ಯ (ಎಲ್ಲ ತಾಲೂಕು)
ಹಾಸನ (ಎಲ್ಲ ತಾಲೂಕು)
ಕೊಡಗು (ಎಲ್ಲ ತಾಲೂಕು)
ಚಿತ್ರದುರ್ಗ (ಎಲ್ಲ ತಾಲೂಕು, ಚಿತ್ರದುರ್ಗ ತಾಲೂಕು ಬಿಟ್ಟು)
ಚಿಕ್ಕಮಗಳೂರು (ಕಡೂರು, ಕೊಪ್ಪ, ಚಿಕ್ಕಮಗಳೂರು, ನರಸಿಂಹರಾಜಪುರ, ಶೃಂಗೇರಿ)
ಶಿವಮೊಗ್ಗ (ಎಲ್ಲ ತಾಲೂಕು, ಸೊರಬ, ಹೊನ್ನಳ್ಳಿ, ಹೊಸನಗರ ಬಿಟ್ಟು)
ಉತ್ತರ ಕನ್ನಡ (ಅಂಕೋಲ, ಭಟ್ಕಳ, ಯಲ್ಲಾಪುರ, ಸಿದ್ದಾಪುರ, ಸೂಪಾ, ಹಳಿಯಾಳ)
೩. ಖಣಜಶಿವಮೊಗ್ಗ (ಸೊರಬ)
೪. ಕನಜಬೆಳಗಾವಿ (ಗೋಕಾಕ್)
ಧಾರವಾಡ (ಕಲಘಟಗಿ, ಧಾರವಾಡ, ಹುಬ್ಬಳ್ಳಿ, ಹಾನಗಲ್) ಕೊಪ್ಪಳ (ಯಲಬುರ್ಗ)
ಬಳ್ಳಾರಿ (ಹಗರಿಬೊಮ್ಮನಹಳ್ಳಿ)
೫. ಕಂದಕೋಲಾರ (ಚಿಂತಾಮಣಿ)
೬. ಪಣ್ತಹಾಸನ (ಅರಸಿಕೆರೆ, ಬೇಲೂರು)
ಚಿತ್ರದುರ್ಗ (ಎಲ್ಲ ತಾಲೂಕು, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಬಿಟ್ಟು)
ಚಿಕ್ಕಮಗಳೂರು (ಕಡೂರು, ತರೀಕೆರೆ)
ಶಿವಮೊಗ್ಗ (ತೀರ್ಥಹಳ್ಳಿ)
ಉತ್ತರ ಕನ್ನಡ (ಸಿದ್ದಾಪುರ, ಹೊನ್ನಾವರ)
೮. ಪಾಳ್ತಚಿತ್ರದುರ್ಗ (ಚಿತ್ರದುರ್ಗ)
೧೦. ಬಣ್ತಶಿವಮೊಗ್ಗ (ಹೊಸನಗರ)
೧೧. ಪತಾಯ್ಕೊಡಗು (ಮಡಿಕೇರಿ, ವಿರಾಜಪೇಟೆ)
೧೨. ಪೆಟಾವುಕೊಡಗು (ಸೋಮವಾರಪೇಟೆ)
೧೩. ತಟ್ಟಿಚಿಕ್ಕಮಗಳೂರು (ನರಸಿಂಹರಾಜಪುರ)
೧೪. ಹೆಮ್ಮುಡಿಉತ್ತರ ಕನ್ನಡ (ಭಟ್ಕಳ)
೧೫. ಕಡಾತ್ರಉತ್ತರ ಕನ್ನಡ (ಕಾರವಾರ)
೧೬. ಅಮರ್ಖಣಉತ್ತರ ಕನ್ನಡ (ಹಳಿಯಾಳ)
೧೭. ಗಳಕೆಉಡುಪಿ (ಕಾರ್ಕಾಳ)
೧೮. ಗಳಗೆಉಡುಪಿ (ಉಡುಪಿ, ಕಾರ್ಕಳ)
೨೦. ಪೊಳಿಉಡುಪಿ (ಉಡುಪಿ)
೨೧. ಕದ್ಕೆದಕ್ಷಿಣ ಕನ್ನಡ (ಬಂಟವಾಳ, ಸೂಳ್ಯ)
೨೨. ತುಪ್ಪೆದಕ್ಷಿಣ ಕನ್ನಡ (ಮಂಗಳೂರು)
೨೩. ತಿರಿಉಡುಪಿ (ಉಡುಪಿ)
೨೪. ಗುಮ್ಮಿರಾಯಚೂರು (ಮಾನ್ವಿ)
ಬಳ್ಳಾರಿ (ಸಿರಗುಪ್ಪ)
ಬೀದರ್ (ಹುಮನಾಬಾದ, ಬಸವಕಲ್ಯಾಣ)
೨೫. ಹಗೆವುಶಿವಮೊಗ್ಗ (ಹೊನ್ನಾಳಿ)
೨೬. ವಾಡೆಮಂಡ್ಯ (ಕೆ.ಆರ್.ಪೇಟೆ, ಮದ್ದೂರು, ಮಳವಳ್ಳಿ)
ಹಾಸನ (ಅರಕಲಗೂಡು, ಹಾಸನ, ಹೊಳೆನರಸಿಪುರ)
೨೭. ಪತೇಯಕೊಡಗು (ಮಡಿಕೇರಿ)
೨೮. ಗೊಡಾವ್ಕೊಡಗು (ವಿರಾಜಪೇಟೆ)

ಕೋಷ್ಟಕ ೨ – ಕಣಜ ಪದದ ಪರ‍್ಯಾಯ ರೂಪಗಳು ಮತ್ತು ಅವುಗಳ ಧ್ವನಿ ವ್ಯತ್ಯಾಸ ರೂಪಗಳ ಬಳಕೆ
೧. ಕಣಜ : ಕಣಜ, ಕಣ್ಜ, ಖಣಜ, ಕನಜ, ಅಮರ‍್ಬಣ
೨. ಕಂದನ
೩. ಪಣ್ತ : ಪಣ್ತ, ಪಳ್ತ, ಪಾಳ್ತ, ಬಣ್ತ
೪. ಪತಾಯ್ : ಪತಾಯ್, ಪತೇಯ
೫. ಪೆಟಾವು
೬. ತಟ್ಟಿ
೭. ಹೆಮ್ಮುಡಿ
೮. ಕೆಡಾತ್ರ
೯. ಗಳಕೆ : ಗಳಕೆ, ಗಳಗೆ
೧೦. ಪೊಳಿ
೧೧. ಕದ್ಗೆ
೧೨. ತುಪ್ಪೆ
೧೩. ತಿರಿ
೧೪. ಗುಮ್ಮಿ
೧೫. ಹಗೇವು
೧೬. ವಾಡೆ
೧೭. ಗೊಡಾವ್

1 ಕಾಮೆಂಟ್‌:

ಗೋನವಾರ ಕಿಶನರಾವ್ ಹೇಳಿದರು...

ನಾವು ರಾಯಚೂರು ಕಡೆ ಕಣಜಕ್ಕೆ ಪರ್ಯಾಯ ಪದವಾಗಿ "ಕೆರಸೆ " ಎಂದು ಬಳಸುತ್ತೇವೆ. ಅದರ ಇನ್ನೊಂದು ರೂಪವೂ ಇದೆ ಅದು "ಗುಮ್ಮಿ". ವ್ಯತ್ಯಾಸವೆಂದರೆ ಗುಮ್ಮಿ ರೆಡಿಮೇಡ್ ಸಿಗುತ್ತದೆ,ಕೆರಸೆಯನ್ನು ಮನೆಯಲ್ಲಿ ನಿರ್ಮಿಸುತ್ತಾರೆ.ಇನ್ನು ಹಗೇವು ಎಂದರೆ ಭೂಮಿಯನ್ನು ಆಳವಾಗಿ ಅಗೆದು ಅದರ ಒಳಸುತ್ತು ಮೇವು ಜೋಡಿಸಿ ಅದರಲ್ಲಿ ಧಾನ್ಯ ತುಂಬಿಸಿ ಮುಚ್ಚಿಡುತ್ತಾರೆ.