ಶುಕ್ರವಾರ, ಜನವರಿ 23, 2015

ಬಯಲಾಟಕ್ಕೆ ಬೇಕಿದೆ ಕಾಯಕಲ್ಪ

ಕ್ಷೀಣಗೊಂಡಿರುವ ಜನಪದರಾಟ: ಕಾಯಕಲ್ಪಕ್ಕೆ ಕಾಯುತ್ತಿದೆ ಬಯಲಾಟ


   -ಶಶಿಕಾಂತ ಯಡಹಳ್ಳಿ    


'ವೀರ ರಾಣಿ ಕಿತ್ತೂರ ಚೆನ್ನಮ್ಮ ' ದೊಡ್ಡಾಟದ ಚಿತ್ರ

ಕಳೆದ ಶತಮಾನದ ಮಧ್ಯಭಾಗದವರೆಗೂ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಶ್ರಮಸಂಸ್ಕೃತಿಕಪ್ರತೀಕವಾಗಿ ಹುಟ್ಟಿ ಬೆಳೆದು ವಿಜ್ರಂಭಿಸಿದ್ದು ಬಯಲಾಟಕಂಪನಿ ನಾಟಕಗಳು ಕರ್ನಾಟಕದರಂಗಭೂಮಿಯನ್ನು ಆಪೋಷನ ತೆಗೆದುಕೊಳ್ಳುವ ಮೊದಲು ಇಡೀ ಕರ್ನಾಟಕವನ್ನು ಗ್ರಾಮೀಣ ಜನರಮನರಂಜನೆಯ ಮಾಧ್ಯಮವಾಗಿ ಆಳಿದ್ದು ಬಯಲಾಟ ಕಲಾಪ್ರಕಾರಗಳುಸಿದ್ದರಂಗಮಂದಿರಗಳಿಲ್ಲದೇಬಯಲಿನಲ್ಲೇ ತಾತ್ಕಾಲಿಕ ವೇದಿಕೆಗಳನ್ನು ನಿರ್ಮಿಸಿ ಆಟಗಳನ್ನು ಪ್ರದರ್ಶಿಸುತ್ತಿದ್ದುದರಿಂದ  ಜಾನಪದಕಲೆಗಳಿಗೆ ಬಯಲಾಟ ಎಂದು ಹೆಸರು ಜನಜನಿತಹೀಗೆ ಬಯಲಲ್ಲಿ ಆಡುವ ಆಟಗಳು ಒಂದೆರಡಲ್ಲ.ಅನೇಕ ಪ್ರಕಾರಗಳಿವೆಅವುಗಳಲ್ಲಿ ಮುಖ್ಯವಾದವುಗಳು ಮೂಡಲಪಾಯ ಮತ್ತು ಪಡುವಲುಪಾಯಎರಡೂ ಪ್ರಮುಖ ಜಾನಪದ ಪ್ರದರ್ಶಕ ಕಲಾಪ್ರಕಾರಗಳು ಕರ್ನಾಟಕವನ್ನು ಪ್ರಾದೇಶಿಕವಾಗಿಹಂಚಿಕೊಂಡಿವೆಆಯಾ ಭಾಗದ ಕೃಷಿ ಮತ್ತು ಕ್ರಿಯಾಮೂಲದ ಅಗತ್ಯಕ್ಕೆ ತಕ್ಕಂತೆ ಭಿನ್ನವಾಗಿಬೆಳವಣಿಗೆ ಹೊಂದಿವೆಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಶಿವಮೊಗ್ಗಚಿಕ್ಕಮಂಗಳೂರು ಜಿಲ್ಲೆಗಳ ಕೆಲ ಭಾಗದಲ್ಲಿ ಪಡುವಲುಪಾಯ ಬಯಲಾಟ ಪ್ರಸಿದ್ಧಿಯನ್ನು ಪಡೆಯಿತು.ಇದಕ್ಕೆ ಯಕ್ಷಗಾನ ಬಯಲಾಟ ಎಂದು ಹೆಸರಾಯಿತುಅದೇ ರೀತಿ ಮಧ್ಯ ಕರ್ನಾಟಕಉತ್ತರಕರ್ನಾಟಕಹೈದರಾಬಾದ ಕರ್ನಾಟಕಬಾಂಬೆ ಕರ್ನಾಟಕ ಭಾಗಗಳಲ್ಲಿ ಮೂಡಲಪಾಯಬಯಲಾಟಗಳು ತುಂಬಾ ಜನಪ್ರೀಯವಾಗಿದ್ದವುಮೂಡಲಪಾಯ ಬಯಲಾಟದಲ್ಲಿ ದೊಡ್ಡಾಟಸಣ್ಣಾಟ,ಶ್ರೀಕೃಷ್ಣ ಪಾರಿಜಾತರಾಧಾನಾಟಅಟ್ಟದಾಟಘಟ್ಟದಕೋರೆ.. ಮುಂತಾದ ಪ್ರಕಾರಗಳುಚಾಲ್ತಿಯಲ್ಲಿದ್ದವುಈಗಲೂ ಅಲ್ಲಲ್ಲಿ ಪಳುವಳಿಕೆಗಳಂತೆ ಇವೆ.

ಮೂಡಲಪಾಯ ಬಯಲಾಟಕ್ಕೆ ಧಾರವಾಡಬೆಳಗಾಂಬಿಜಾಪುರ ಜಿಲ್ಲೆಗಳಲ್ಲಿ ದೊಡ್ಡಾಟವೆಂದೂ,ಬೀದರ ಗುಲಬರ್ಗಾ ಜಿಲ್ಲೆಗಳಲ್ಲಿ ಅಟ್ಟದಾಟವೆಂದೂರಾಯಚೂರು ಬಳ್ಳಾರಿ ಭಾಗದಲ್ಲಿಹಿರೇಆಟವೆಂದೂಮೈಸೂರು ಮಂಡ್ಯ ಶಿವಮೊಗ್ಗ ಪ್ರದೇಶಗಳಲ್ಲಿ ಮೂಡಲಪಾಯಯಕ್ಷಗಾನವೆಂದೂ ಕರೆಯಲಾಗುತ್ತದೆನಿರ್ದಿಷ್ಟವಾಗಿ ಹೇಳಬೇಕೆಂದರೆ ಕರಾವಳಿ ಕರ್ನಾಟಕದಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮೂಡಲಪಾಯ ಬಯಲಾಟದ ಪ್ರಕಾರಗಳು ಪ್ರಚಲಿತದಲ್ಲಿದ್ದವು.ಪ್ರದೇಶದಿಂದ ಪ್ರದೇಶಕ್ಕೆ ಕೆಲವು ಬದಲಾವಣೆಭಿನ್ನತೆ ಹಾಗೂ ಬೇರೆ ಹೆಸರುಗಳನ್ನು ಹೊಂದಿದ್ದರೂ ಮೂಲದಲ್ಲಿ ಇವೆಲ್ಲಾ ಮೂಡಲಪಾಯ ಬಯಲಾಟಗಳೇ ಆಗಿವೆ.


'ವೀರ ರಾಣಿ ಕಿತ್ತೂರ ಚೆನ್ನಮ್ಮ ' ದೊಡ್ಡಾಟದ ಚಿತ್ರ


ಜನಪದ ಪರಂಪರೆಯ ಪ್ರದರ್ಶಕ ಕಲೆಯಾದ  ಬಯಲಾಟಗಳು ಕೇವಲ ಮನರಂಜನೆಯಸಾಧನಗಳಾಗಿರದೇ ಗ್ರಾಮೀಣ ಪ್ರದೇಶಗಳ ಶ್ರಮ ಸಂಸ್ಕೃತಿಯ ಪ್ರತೀಕವಾಗಿವೆಶ್ರಮದಾಯಕವಾದಕೃಷಿ ಬದುಕನ್ನೇ ಒಂದು ಕಲಾಪ್ರಕಾರವಾಗಿ ಗ್ರಾಮೀಣ ಜನಪದರು ರೂಪಿಸಿದ್ದಾರೆಬಹುತೇಕದುಡಿಯುವ ಜನರು ಕಟ್ಟಿ ಬೆಳೆಸಿದ  ಬಯಲಾಟ ಕಲಾಮಧ್ಯಮವು ಎಲ್ಲಾ ಜಾತಿ ಧರ್ಮ ವರ್ಗದಜನರ ಸಹಭಾಗಿತ್ವದಲ್ಲಿ ನಿರ್ಮಿತಿಯಾಗಿದ್ದು ನಿಜವಾದ ಅರ್ಥದಲ್ಲಿ ಗ್ರಾಮಗ್ರಾಮಗಳಲ್ಲಿ ಸಾಮರಸ್ಯಹಾಗೂ ಸೌಹಾರ್ಧತೆಯ ದ್ಯೋತಕವಾಗಿವೆಬದುಕಿಗಾಗಿ ಕೃಷಿ ಹಾಗೂ ಮನೋರಂಜನೆಗಾಗಿಬಯಲಾಟವನ್ನು ಶತಮಾನಗಳಿಂದ ರೂಢಿಸಿಕೊಂಡು ಬಂದ ಅನಕ್ಷರಸ್ತ ಜನಪದ ಕಲಾವಿದರುಬಯಲಾಟ ಕಲಾಪ್ರಕಾರದ ಮೂಲಕ  ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಬಹುದೊಡ್ಡಕೊಡುಗೆಯನ್ನು ಕೊಟ್ಟಿದ್ದಾರೆ.

ಪಡುವಲುಪಾಯ ಯಕ್ಷಗಾನವು ಮೇಲ್ವರ್ಗಗಳ ಕೈಗೆ ಸಿಕ್ಕುಮೇಲ್ಜಾತಿಯವರ ಕೃಪಾಪೋಷಣೆಹೊಂದಿಸರಕಾರಗಳ ಸಹಕಾರವನ್ನು ಪಡೆದು ಅದು ಹೇಗೋ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು.ಶಿವರಾಮ ಕಾರಂತರಂತಹ ಪ್ರತಿಭಾನ್ವಿತರು ಯಕ್ಷಗಾನಕ್ಕೆ ಕಾಯಕಲ್ಪವನ್ನು ಕೊಟ್ಟು ಬೆಳೆಸಿದರು.ಯಕ್ಷಗಾನ ಮಂಡಳಿಗಳು ಕರಾವಳಿ ಕರ್ನಾಟಕದುದ್ದಕ್ಕೂ ಈಗಲೂ ಜನಪ್ರೀಯವಾಗಿವೆದಕ್ಷಿನೋತ್ತರಜಿಲ್ಲೆಗಳ ಅಕ್ಷರಸ್ತರು ಯಕ್ಷಗಾನದಲ್ಲಿ ಆಸಕ್ತಿಹೊಂದಿ  ಹಲವಾರು ಮಾರ್ಪಾಡುಗಳೊಂದಿಗೆ  ಕಲೆಯನ್ನುಸದೃಢವಾಗಿ ಬೆಳೆಸಿದರುಅಪಾರವಾದ ಯಕ್ಷಗಾನ ಪ್ರೇಮಿಗಳ ಪ್ರೇಕ್ಷಕವೃಂದ ಹಳ್ಳಿ ಮತ್ತುಪಟ್ಟಣಗಳಲ್ಲಿ ಯಕ್ಷಗಾನ ಕಲಾ ಪ್ರಕಾರಕ್ಕೆ ಬೆಂಬಲವಾಗಿ ನಿಂತಿತುಧರ್ಮಸ್ಥಳದಂತಹ ಧಾರ್ಮಿಕಕ್ಷೇತ್ರಗಳೂ ಯಕ್ಷಗಾನಕ್ಕೆ ಬೆಂಗಾವಲುಗಳಾದವುಕೇವಲ ಎರಡು ಜಿಲ್ಲೆಗಳಲ್ಲಿ ಅಸ್ತಿತ್ವ ಇರುವಯಕ್ಷಗಾನದ ಅಭಿವೃದ್ದಿಗೆ ಸರಕಾರ ಯಕ್ಷಗಾನ ಅಕಾಡೆಮಿಯನ್ನೇ ಸ್ಥಾಪಿಸಿತುಹೀಗಾಗಿ ಮೇಲ್ಚಾತಿ,ಧರ್ಮಧರ್ಮಪೀಠವಿದ್ಯಾವಂತರುಬುದ್ದಿಜೀವಿಗಳು ಹಾಗೂ ಸರಕಾರದ ಬೆಂಬಲದಿಂದಾಗಿ ಪಡುವಲುಪಾಯ ಯಕ್ಷಗಾನ ಕಲಾ ಪ್ರಕಾರವು ತನ್ನ ಸಮೃದ್ದತೆಯನ್ನು ಕಾಯ್ದುಕೊಂಡಿದೆ.

ಆದರೆ  ಭಾಗ್ಯ ಮೂಡಲಪಾಯ ಬಯಲಾಟಕ್ಕಿರಲಿಲ್ಲಮೊದಲುಒಂದೊಂದು ಊರುಗಳಲ್ಲೂ ಎರಡು ಮೂರು ಹವ್ಯಾಸಿ ಬಯಲಾಟತಂಡಗಳು ಹುಟ್ಟಿ ಪೈಪೋಟಿಯ ಮೇಲೆ ನಾಟಕಗಳನ್ನು ಕಟ್ಟಲಾಗುತ್ತಿತ್ತು.ಊರ ಜಾತ್ರೆಹಬ್ಬ ಹರಿದಿನಗಳಂದು ಊರವರಿಂದಲೇ ಬಯಲಾಟಗಳುನಿರ್ಮಾಣಗೊಂಡು ಸಂಭ್ರಮದಿಂದ ಪ್ರದರ್ಶನಗೊಳ್ಳುತ್ತಿದ್ದವು.ಬಯಲಾಟಗಳು ಗ್ರಾಮಗಳ ಆಚರಣೆಗಳ ಭಾಗವಾಗಿಯೇ ಬೆಳೆದಿದ್ದವು.ಗ್ರಾಮೀಣ ಪ್ರದೇಶಗಳ ಅಶಿಕ್ಷಿತ ಶ್ರಮಿಕ ವರ್ಗಗಳ ಭಾಗವಾಗಿಯೇ ಉಳಿದ ಬಯಲಾಟಗಳು ಕಂಪನಿ ನಾಟಕಗಳ ಹಾವಳಿಯಿಂದ ಒಂದಿಷ್ಟುಹಿನ್ನಡೆಯನ್ನು ಅನುಭವಿಸಿತುತದನಂತರ ನೆರೆ ಬರಗಳಿಂದ ಕಂಗೆಟ್ಟಹಳ್ಳಿಗಳಲ್ಲಿ ಆರ್ಥಿಕ ಸಮಸ್ಯೆಗಳುಂಟಾಗಿ ಯುವಕರು ಕೆಲಸಹುಡುಕಿಕೊಂಡು ನಗರಗಳಿಗೆ ವಲಸೆ ಹೋಗಿದ್ದರಿಂದ ಬಯಲಾಟಕ್ಕೆ ಯುವಪ್ರತಿಭೆಗಳ ಕೊರತೆಯುಂಟಾಯಿತುಬುದ್ದಿಜೀವಿಗಳು ಬಯಲಾಟಗಳನ್ನು ಡಾಕ್ಟರೇಟ್ ಮಾಡಲುಆಕರವಾಗಿ ಬಳಸಿಕೊಂಡರೇ ಹೊರತು ಬಯಲಾಟದ ಬದಲಾವಣೆಗೆಅಭಿವೃದ್ದಿಗೆ ಶಿವರಾಮಕಾರಂತರಂತೆ ಶ್ರಮವಹಿಸಲಿಲ್ಲನಗರೀಕರಣಜಾಗತೀಕರಣಗಳು ಹಾಗೂ ಸರಕಾರಗಳ ವಿವೇಚನಾರಹಿತ ಯೋಜನೆಗಳು ಹಳ್ಳಿಗಳನ್ನು ಅತಂತ್ರಗೊಳಿಸಿದವುಆಧುನಿಕ ದೃಶ್ಯ ಮಾಧ್ಯಮಗಳು ದೇಸಿಕಲೆಗಳನ್ನು ಆಪೋಷಣ ತೆಗೆದುಕೊಳ್ಳತೊಡಗಿತುಟಿವಿ ಮತ್ತು ಸಿನೆಮಾ ಮಾಧ್ಯಮಗಳೂ ಸಹಗ್ರಾಮೀಣ ಪ್ರೇಕ್ಷಕವರ್ಗವನ್ನು ಆಕ್ರಮಿಸಿಕೊಂಡಿತುಈಕಡೆ ಬಯಲಾಟ ಮಾಡುವವರೂ ಇಲ್ಲಾ,ಮಾಡಿದರೆ ನೋಡುವವರೂ ಇಲ್ಲ ಎನ್ನುವ ಹಂತಕ್ಕೆ ನಮ್ಮ ಜಾನಪದ ಕಲೆ ನಿತ್ರಾಣಗೊಂಡಿತುಎಲ್ಲಾ ಕಾರಣಗಳಿಂದಾಗಿ ಬಯಲಾಟ ಕಲಾ ಪರಂಪರೆ ನಿಧಾನವಾಗಿ ನೇಪತ್ಯಕ್ಕೆ ಸರಿಯತೊಡಗಿತು.ಈಗಲೂ ಅಲ್ಲಲ್ಲಿ ಅಳಿದುಳಿದ ಬಯಲುಸೀಮೆಯ ಕೆಲವು ಭಾಗಗಳಲ್ಲಿ ಅಪರೂಪಕ್ಕೆಂಬಂತೆ ಇರುವಬಯಲಾಟದ ಕಥೆಗಾರರುಹಾಡುಗಾರರು ಹಾಗೂ ಸಂಗೀತಗಾರರ ಕೊನೆಯ ತಲೆಮಾರುಮುಗಿದುಹೋದರೆ ಮುಂದಿನ ತಲೆಮಾರಿಗೆ ಬಯಲಾಟವನ್ನು ತೆಗೆದುಕೊಂಡು ಹೋಗುವ ಸಾಧ್ಯತೆಗಳುತುಂಬಾ ಕ್ಷೀಣವಾಗಿವೆ.

ಗ್ರಾಮೀಣ ಜನರ ಬದುಕೇ ಅತಂತ್ರವಾಗಿರುವಾಗಅವರ ಬದುಕಿನ ಮೂಲವಾದ ಕೃಷಿಯೇ ಇಂದುನಶಿಸುತ್ತಿರುವಾಗತಿನ್ನುವ ಅನ್ನ ಬೆಳೆಯುವ ಹೊಲಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವಾಗ,ಕೃಷಿ ಚಟುವಟಿಕೆಗಳನ್ನು ಯಂತ್ರಗಳೇ ನಿಭಾಯಿಸುತ್ತಿರುವಾಗ ಕೃಷಿಮೂಲ-ಶ್ರಮಮೂಲ ಜನಪದಕಲಾ ಪ್ರಕಾರವಾದ ಬಯಲಾಟಗಳು ಬದುಕಿ ಬಾಳುವ ಸಾಧ್ಯತೆಗಳಾದರೂ ಎಲ್ಲಿವೆಶ್ರಮಮೂಲದಜಾನಪದ ಕಲೆಯನ್ನು ನಿರ್ಲಕ್ಷಿಸಿ ವಿದೇಶಿ ಮೂಲದ ವಿಲಾಸಿ ಸಂಸ್ಕೃತಿಯನ್ನು ಜನರ ಮನಸ್ಸಿನಲ್ಲಿಬಿತ್ತುವ ಅನಾಹುತಕಾರಿ ಕೆಲಸಗಳು ಮಾಧ್ಯಮಗಳ ಮೂಲಕ ಸಮರೋಪಾದಿಯಲ್ಲಿ ನಡೆಯುತ್ತಿವೆ.ನೆಲಮೂಲದ ದೇಸಿ ಸಂಸ್ಕೃತಿಯನ್ನು ಕಡೆಗಣಿಸಿ ಶಿಷ್ಟ ಕಲೆಗಳನ್ನೇ  ನಾಡಿನ ನಿಜವಾದ ಕಲೆ ಎಂದುಬಿಂಬಿಸುವ ಹುನ್ನಾರವನ್ನು ಆಳುವ ವರ್ಗಗಳು ವ್ಯವಸ್ಥಿತವಾಗಿ ಮಾಡುತ್ತಿವೆ.  ಜಾಗತೀಕರಣದಜಾಗತಿಕ ವಿಕ್ಷಿಪ್ತ ಸಂಸ್ಕೃತಿಯನ್ನು ಆಧುನಿಕ ಸಾಮೂಹಿಕ ಸಂವಹನ ಮಾಧ್ಯಮಗಳ ಮೂಲಕನಿರಂತರವಾಗಿ ಬಿತ್ತರಿಸುವ ಬಂಡವಾಳಶಾಹಿಗಳು ನಡೆಸುವ ವಾಹಿನಿಗಳು ಹಾಗೂ ಕಾರ್ಪೋರೇಟ್ಕಂಪನಿಗಳ ಹಿಡಿತದಲ್ಲಿರುವ ಕೆಲವು ಪತ್ರಿಕೆಗಳು ದೇಸಿ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿನಿರ್ಲಕ್ಷಿಸುತ್ತಿವೆನಶಿಸುತ್ತಿರುವ ಜನಕಲೆಯನ್ನು ಪೋಷಿಸಿ ಬೆಳೆಸಬೇಕಾದ ಸರಕಾರಗಳು ಮಲತಾಯಿದೋರಣೆ ತಳೆದು ಮೂಡಲಪಾಯ ಬಯಲಾಟದ ಕಲಾ ಪ್ರಕಾರಗಳನ್ನು ಪರಿಗಣನೆಗೆತೆಗೆದುಕೊಳ್ಳುತ್ತಿಲ್ಲಕಾಯಕಲ್ಪಕ್ಕೆ ಯೋಜನೆಗಳನ್ನು ರೂಪಿಸುತ್ತಿಲ್ಲ.

'ವೀರ ರಾಣಿ ಕಿತ್ತೂರ ಚೆನ್ನಮ್ಮ ' ದೊಡ್ಡಾಟದ ಚಿತ್ರ
ಇದಕ್ಕೆ ಉದಾಹರಣೆ ಇಲ್ಲಿದೆಶಿಷ್ಟ ಕಲೆಯಾಗಿ ರೂಪಾಂತರಗೊಂಡ ಯಕ್ಷಗಾನ ಜಾನಪದ ಕಲೆಯಅಭಿವೃದ್ದಿಗಾಗಿ ಸರಕಾರವು ಪ್ರತ್ಯೇಕ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಿತುತಪ್ಪೇನಿಲ್ಲಅದೂಕೂಡಾ ಮೂಲದಲ್ಲಿ ಜಾನಪದ ಬಯಲಾಟ ಕಲಾ ಪ್ರಕಾರವಾಗಿರುವುದರಿಂದ  ಕಲೆಯೂ ಉಳಿದುಬೆಳೆಯಬೇಕಿದೆಆದರೆ ಕೇವಲ ಎರಡು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿಸ್ಥಾಪಿಸಿ ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಕುಟುಕು ಜೀವ ಹಿಡಿದುಕೊಂಡು ಆಗಲೋ ಈಗಲೋಸಾಯುವ ಸ್ಥಿತಿಯಲ್ಲಿರುವ ಮೂಡಲಪಾಯ ಬಯಲಾಟ ಕಲಾ ಪ್ರಕಾರಗಳ ಬಗ್ಗೆ ಸರಕಾರ ದಿವ್ಯನಿರ್ಲಕ್ಷ ತೋರಿಸಿತುಹಲವು ಮೂಲಗಳಿಂದ ಬಂದ ಪ್ರತಿರೋಧ ಹಾಗೂ ಟೀಕೆಗಳಿಂದಾಗಿ ಎಚ್ಚೆತ್ತರಾಜ್ಯ ಸರಕಾರವು ಇತ್ತೀಚೆಗೆ ಯಕ್ಷಗಾನ ಅಕಾಡೆಮಿಗೆ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಎಂದು ಹೆಸರನ್ನು ಮಾತ್ರ ಬದಲಾಯಿಸಿತುಆದರೆ  ಬದಲಾವಣೆಯಿಂದ ಮೂಡಲಪಾಯಬಯಲಾಟದ ಅಭಿವೃದ್ದಿಗೆ ಯಾವುದೇ ರೀತಿಯಲ್ಲೂ ಪ್ರಯೋಜನವಾಗಲೇ ಇಲ್ಲಾಈಗಲೂ ಅಕಾಡೆಮಿಗೆ ಸರಕಾರ ಕೊಡುವ ಅನುದಾನದ ಬಹುತೇಕ ಭಾಗವನ್ನು ಯಕ್ಷಗಾನಕ್ಕೆ ಬಳಸಲಾಗುತ್ತಿದೆ.ಕಲಾವಿದರಿಗೆ ಪ್ರಶಸ್ತಿಮಾಶಾಸನ ಕೊಡುವಾಗಲೂ ಸಹ ಮೂಡಲಪಾಯ ಬಯಲಾಟದಕಲಾವಿದರನ್ನು ನಿರ್ಲಕ್ಷಿಸಲಾಗುತ್ತಿದೆ ಅಕಾಡೆಮಿಗಳಿಂದ ಹೆಚ್ಚಿಗೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.ಆದರೆ ಯಾಕೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಬಯಲಾಟದ ಕಲಾವಿದರುಕೇಳುತ್ತಿದ್ದಾರೆ.


 ಸಲ ಯಕ್ಷಗಾನ ಬಯಲಾಟ ಅಕಾಡೆಮಿಗೆಸರಕಾರ ಬೆಳಗಲ್ ವೀರಣ್ಣ ರವರನ್ನುಅಧ್ಯಕ್ಷರನ್ನಾಗಿ ನಿಯಮಿಸಿದೆಆದರೆಅಕಾಡೆಮಿಯ ಸದಸ್ಯರಲ್ಲಿ ಬಹುಪಾಲುಯಕ್ಷಗಾನ ಕಲೆಗೆ ಸಂಬಂಧಿಸಿದವರೇ ಆಗಿದ್ದುಅಲ್ಲೂ ಬಯಲಾಟದ ಕಲಾವಿದರ ಪ್ರಾತಿನಿದ್ಯತೆಕನಿಷ್ಟವೆನಿಸುವಷ್ಟಿದೆಕರ್ನಾಟಕದಕಲಾಪ್ರಕಾರಗಳಾದ ಯಕ್ಷಗಾನವೂಬೆಳೆಯಬೇಕು ಹಾಗೂ ಬಯಲಾಟವೂಪುನರುಜ್ಜೀವನಗೊಳ್ಳಬೇಕುನೆಲಮೂಲದದೇಸಿ ಕಲೆಗಳು ಯಾವುದೇ ಇದ್ದರೂ ಅವುಗಳಿಗೆಸರಕಾರ ಹಾಗೂ ಸರಕಾರದ ಅಕಾಡೆಮಿಗಳು ಬೆಂಬಲಿಸಲೇಬೇಕುಇಲ್ಲವಾದರೆ ಶತಮಾನಗಳಿಂದಬೆಳೆದು ಬಂದ ಶ್ರಮಿಕ ಪರಂಪರೆಯ ಮೂಡಲಪಾಯ ಬಯಲಾಟವು ಮುಂದಿನ ತಲೆಮಾರಿಗೆಇಲ್ಲವಾಗುತ್ತದೆಒಂದು ಕಲೆ ಅಥವಾ ಸಂಸ್ಕೃತಿ ನಾಶವಾದರೆ  ಪ್ರದೇಶದ ಜನಾಂಗವೇವಿಕಲಾಂಗವಾದಂತೆನಿಸುತ್ತದೆಕ್ರಿಯಾ ಮೂಲ ಕಲೆ-ಸಂಸ್ಕೃತಿ ಇಲ್ಲದ ಗ್ರಾಮೀಣ ಜನತೆಅನಿವಾರ್ಯವಾಗಿ ತಮ್ಮ ಕ್ರಿಯಾಶೀಲತೆ ಕಳೆದುಕೊಂಡು  ಹಿಂಸೆ ಮತ್ತು ಸೆಕ್ಸನ್ನು ವೈಭವಿಸುತ್ತಿರುವಆಧುನಿಕ ಜಾಗತಿಕ ವಿಕ್ಷಿಪ್ತ ಸಂಸ್ಕೃತಿಯತ್ತ ಒಲಿಯುತ್ತಾರೆಆಗ ಇಡೀ ಸಮಾಜ ಸ್ವಾಯತ್ತತೆ,ಸ್ವಾಭಿಮಾನ ಕಳೆದುಕೊಂಡು ಜಾಗತೀಕರಣದ ಷಡ್ಯಂತ್ರಕ್ಕೆ ಬಲಿಯಾಗಿ ಮತ್ತೆ ಮಾನಸಿಕವಾಗಿಗುಲಾಮಗಿರಿಗೆ ಒಳಗಾಗುವ ಸಂಭವನೀಯತೆ ಹೆಚ್ಚಾಗಿದೆ.

ಒಂದು ಕಾಲಕ್ಕೆ ಜನಪ್ರೀಯವಾಗಿದ್ದ ಬಯಲಾಟಗಳು ಇಂದು ಯಾಕೆ ನಶಿಸುತ್ತಿವೆಬಯಲಾಟದಕಲಾವಿದರ ನಿಜವಾದ ಸಮಸ್ಯೆಗಳೇನುಬಯಲಾಟ ಕಲೆಯಲ್ಲಿರುವ ನ್ಯೂನ್ಯತೆಗಳೇನುಬದಲಾದಕಾಲಕ್ಕೆ ತಕ್ಕಂತೆ ಬಯಲಾಟಗಳ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಾಪುರಾಣಪರಿಕಲ್ಪನೆಗಳ ಪ್ರಸಂಗಗಳನ್ನೇ ಆಧರಿಸಿದ ಬಯಲಾಟಗಳಿಗೆ ಚಾರಿತ್ರಿಕಸಾಮಾಜಿಕ ವಿಷಯಗಳನ್ನುಅಳವಡಿಸಲು ಸಾಧ್ಯವಾಹಾಡು ಸಂಗೀತ ನೃತ್ಯಗಳೇ ವಿಜ್ರಂಭಿಸುವ ದೊಡ್ಡಾಟದಂತಹ ಕಲೆಗಳಲ್ಲಿಆಧುನಿಕ ಅಭಿನಯ ತಂತ್ರಗಳನ್ನು     ಅಳವಡಿಸಿ ಹೊಸ ರೀತಿಯ ಕಾಯಕಲ್ಪ ಕೊಡಲು ಆಗುತ್ತದಾ?ಸರಳವಾದ ಅರ್ಥಗ್ರಹಿಕೆಗೆ ಅಡೆತಡೆ ಒಡ್ಡಬಹುದಾಗಿರುವ ಬಯಲಾಟದೊಳಗಿನ ಕ್ಲಿಷ್ಟತೆಯನ್ನುಕಡಿಮೆಗೊಳಿಸಿ ಇನ್ನಷ್ಟು ಸುಲಭಗೊಳಿಸಲು ಸಾಧ್ಯವಾ?  ಹೀಗೆ... ಕೆಲವಾರು ಪ್ರಶ್ನೆಗಳಿಗೆ ಉತ್ತರವನ್ನುಕಂಡುಹಿಡಿಯುವ ಕೆಲಸಗಳನ್ನು ಸರಕಾರಗಳುಅಕಾಡೆಮಿಗಳುಜಾನಪದ ವಿಶ್ವವಿದ್ಯಾಲಯಗಳು,ವಿದ್ಯಾವಂತ ಕಲಾವಿದರುಗಳುಡಾಕ್ಟರೇಟ್ ಮಾಡಿದ ಬುದ್ದಿಜೀವಿಗಳು ಆಲೋಚಿಸಬೇಕಿದೆಕಾಲಕ್ಕೆತಕ್ಕಂತೆ ರೂಪಾಂತರ ಹೊಂದದಿದ್ದರೆ ಯಾವ ಕಲೆಯೂ ಬದುಕಲಾರದುಹೀಗಾಗಿ ಬಯಲಾಟಗಳೂಸಹ  ಬದಲಾಗಬೇಕಿದೆ  ನಿಟ್ಟಿನಲ್ಲಿ ಕಾರ್ಯಯೋಜನೆಗಳು ಪ್ರಾಮಾಣಿಕವಾಗಿ ನಡೆಯಬೇಕಿದೆಆದರೆಇದನ್ನು ಮಾಡುವವರು ಯಾರು?

ಎಂ.ಎಸ್.ಮಾಳವಾಡ
 ನಿಟ್ಟಿನಲ್ಲಿ ಒಂದು ಸಣ್ಣ ಆಶಾಕಿರಣ ಮೂಡಿದೆಅದು ಗ್ರಾಮರಂಗತಂಡದ ಕಾರ್ಯಾಗಾರಗ್ರಾಮರಂಗ ಎನ್ನುವ ಗ್ರಾಮೀಣ ಹವ್ಯಾಸಿರಂಗತಂಡವು ದಿ2014 ಮೇ 26 ರಿಂದ ಜೂನ್ 6 ರವರೆಗೆ ಹಾವೇರಿಯಲ್ಲಿದೊಡ್ಡಾಟ ಕುರಿತ ಹತ್ತು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.ದೊಡ್ಡಾಟ ಎನ್ನುವ ಬಯಲಾಟದ ರಂಗಪರಂಪರೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೆಲವಾರು ಗ್ರಾಮೀಣ ಯುವಕ-ಯುವತಿಯರನ್ನುಒಟ್ಟು ಸೇರಿಸಿ ಅವರಿಗೆ ರಂಗಭೂಮಿ ಕುರಿತ ಅರಿವನ್ನು ಕೊಡುವ ಹಾಗೂದೊಡ್ಡಾಟದ ಕುರಿತು ಪ್ರಾತಕ್ಷಿತೆಯನ್ನು ತೋರಿಸುವ ಮತ್ತು ಪರಿಣಿತರಿಂದದೊಡ್ಡಾಟವನ್ನು ಕಲಿಸುವ ಸ್ತುತ್ಯಾರ್ಹ ಕೆಲಸವನ್ನು ಗ್ರಾಮರಂಗದ ಎಂ.ಎಸ್.ಮಾಳವಾಡರವರನೇತೃತ್ವದಲ್ಲಿ ಆಯೋಜಿಸುತ್ತುಒಂದು ಸರಕಾರಿ ಇಲಾಖೆ ಅಥವಾ ಅಕಾಡೆಮಿ ಮಾಡಬಹುದಾದಕೆಲಸವನ್ನು ಇಂಗಳಿಗಿಯಂತಹ ಗ್ರಾಮದ ರಂಗತಂಡವೊಂದು ಮಾಡಿತುಅದೂ ಯಾವುದೇ ಸರಕಾರಿಇಲಾಖೆ ಅಕಾಡೆಮಿಗಳ ಆರ್ಥಿಕ ನೆರವಿಲ್ಲದೆರಾಜಾಶ್ರಿತ ಸಿಗದೆ ಜನಾಶ್ರಿತವಾಗಿ ರೂಪಗೊಂಡ ರೈತಮಕ್ಕಳ ಕಲೆ ಮೂಡಲಪಾಯ ದೊಡ್ಡಾಟಕ್ಕೆ ಕಾಯಕಲ್ಪ ಎನ್ನುವ ಕಾರ್ಯಾಗಾರ ಯಶಸ್ವಿಯಾಯಿತು.

 ದೊಡ್ಡಾಟದ ಕಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಇನ್ನಷ್ಟು ಸರಳಗೊಳಿಸಿ,ಅಭಿನಯಕ್ಕೆ ಹಾಗೂ ಸಂಭಾಷನೆಗೆ ಪ್ರಾಧಾನ್ಯತೆಯನ್ನು ಕೊಟ್ಟು ವೀರ ರಾಣಿ ಕಿತ್ತೂರು ಚೆನ್ನಮ್ಮಎನ್ನುವ ದೊಡ್ಡಾಟವನ್ನು  ಕಾರ್ಯಾಗಾರದಲ್ಲಿ ಸಿದ್ದಗೊಳಿಸಲಾಗಿದೆ ದೊಡ್ಡಾಟದ ವಿಶೇಷತೆಏನೆಂದರೆ ಪೌರಾಣಿಕ ವಸ್ತುವನ್ನೇ ಆಧರಿಸಿದ ದೊಡ್ಡಾಟ ಬಯಲಾಟ ಪರಂಪರೆಯನ್ನು ಮುರಿದುಮೊದಲ ಬಾರಿಗೆ ಚಾರಿತ್ರಿಕ ವಿಷಯವೊಂದನ್ನು ಆಧರಿಸಿ ದೊಡ್ಡಾಟವನ್ನು ಆಡಿಸುತ್ತಿರುವುದುಹಾಗೂದೊಡ್ಡಾಟದಲ್ಲಿ ಎಂದೂ ಹೆಣ್ಣುಮಕ್ಕಳು ಭಾಗವಹಿಸುವುದಿಲ್ಲಸ್ತ್ರೀ ಪಾತ್ರಗಳನ್ನೂ ಸಹ ಪುರುಷರೇಮಾಡುತ್ತಾ ಬಂದಿದ್ದಾರೆಆದರೆ ಮೊದಲ ಬಾರಿಗೆ ಸ್ತ್ರೀ ಪಾತ್ರಗಳಿಗೆ ಮಹಿಳೆಯರೇಅಭಿನಯಿಸುತ್ತಿದ್ದಾರೆಜೊತೆಗೆ ದೊಡ್ಡಾಟದೊಳಗಿನ ಕ್ಲಿಷ್ಟತೆಗಳನ್ನು ಸರಳಗೊಳಿಸಿ ನೋಡಿದವರಿಗೆಸುಲಭವಾಗಿ ಕಥಾನಕತೆ ಅರ್ಥವಾಗುವಂತೆ ... ಕಿತ್ತೂರು ಚೆನ್ನಮ್ಮ ದೊಡ್ಡಾಟವನ್ನು ವಿಭಿನ್ನವಾಗಿಕಟ್ಟಲಾಗಿದೆ ಐತಿಹಾಸಿಕ ವಿಷಯವಾಧರಿಸಿದ ದೊಡ್ಡಾಟವನ್ನು ಗ್ರಾಮರಂಗ  ಅಧ್ಯಕ್ಷರಾದಹಿರಿಯ ಗ್ರಾಮೀಣ ರಂಗಕರ್ಮಿ ಎಂ.ಎಸ್.ಮಾಳವಾಡರವರು ರಚಿಸಿ ನಿರ್ದೇಶಿಸಿದ್ದಾರೆಕಾರ್ಯಾಗಾರದ ನಿರ್ದೇಶಕರಾಗಿ ವಿರೇಶ ಬಡಿಗೇರ್ಸುನಂದಾ ನಿಂಬನಗೌಡರ್ಬಸವರಾಜಸಿಗ್ಗಾಂವಿಮತ್ತು ರಾಜಶೇಖರ ಮಳವಾಡರವರು ಅಹೋರಾತ್ರಿ ಶ್ರಮಿಸಿದ್ದಾರೆದೊಡ್ಡಾಟಕಾರ್ಯಾಗಾರದ ಕೊನೆಯ ದಿನವಾದ ಮೇ 6 ರಂದು ಶಿಬಿರಾರ್ಥಿಗಳಿಂದ .. ಕಿತ್ತೂರು ಚೆನ್ನಮ್ಮಬಯಲಾಟವು ಯಶಸ್ವಿಯಾಗಿ ಪ್ರದರ್ಶನಗೊಂಡಿತು ನಾಟಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳುವಅಗತ್ಯತೆ ಇದೆ
ಬಯಲಾಟದ ಕಾಯಕಲ್ಪ ಕುರಿತ ಒಂದು ಪುಟ್ಟ ಪ್ರಯತ್ನ ಗ್ರಾಮರಂಗ ದಿಂದ ಆರಂಭಗೊಂಡಿದೆ.ಇದು ಒಬ್ಬ ವ್ಯಕ್ತಿ ಅಥವಾ ಒಂದು ತಂಡದಿಂದ ಮಾಡುವ ಕೆಲಸವಲ್ಲಹಲವಾರು ಕ್ರಿಯಾಶೀಲಮನಸುಗಳು ಕೈಜೋಡಿಸಬೇಕುಹಲವಾರು ಆಯಾಮಗಳಲ್ಲಿ   ಪ್ರಾಮಾಣಿಕ ಕೆಲಸಗಳಾಗಬೇಕು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ನಾಟಕ ಅಕಾಡೆಮಿ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿಗಳುಇಂತಹ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವ್ಯಾಪಕವಾಗಿ ರೂಪಿಸಬೇಕುಅದೂ ಆಗದಿದ್ದರೆ ಕೆಲಸ ಮಾಡುವಂತಹ ಉತ್ಸಾಹಿ ರಂಗತಂಡಗಳಿಗೆ ಆರ್ಥಿಕ ನೈತಿಕ ಸಹಕಾರವನ್ನಾದರೂಕೊಡಬೇಕು.  ಜಾನಪದ ಕಲಾ ಪ್ರಕಾರಗಳಲ್ಲಿ ಡಾಕ್ಟರೇಟ್ ಮಾಡಿದಂತಹ ಸ್ಕಾಲರ್ಗಳು ತಮ್ಮಪ್ರತಿಭೆಯನ್ನು ಬಯಲಾಟದ ಕಾಯಕಲ್ಪಕ್ಕೆ ಧಾರೆಯೆರೆಯಬೇಕುಒಟ್ಟಾರೆಯಾಗಿ ನೆಲಮೂಲ ದೇಸಿಸಂಸ್ಕೃತಿಯಾದ ಬಯಲಾಟ ಪರಂಪರೆ ಸಕಾರಾತ್ಮಕವಾಗಿ ಬದಲಾಗಬೇಕುಕಾಲಕ್ಕೆ ತಕ್ಕಂತೆರೂಪಾಂತರಗೊಳ್ಳಬೇಕು ಹಾಗೂ ಮುಂದುವರೆಯಬೇಕು.   

                                             

ಕಾಮೆಂಟ್‌ಗಳಿಲ್ಲ: