ಗುರುವಾರ, ಜನವರಿ 22, 2015

ವಿರುಪಾಪುರ ಮಹಿಳೆಯರ `ಸಂಗ್ಯಾ ಬಾಳ್ಯಾ' ನಾಟಕ




-ಅರುಣ್ ಜೋಳದಕೂಡ್ಲಿಗಿ

  ಈಚೆಗೆ ಜನವರಿ 18 ರಂದು ಚಿತ್ರದುರ್ಗದಲ್ಲಿ ಯಕ್ಷಗಾನ ಬಯಲಾಟ ರಂಗ ಸಂಭ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ತೊಗಲು ಗೊಂಬೆಯಾಟ, ಸಣ್ಣಾಟ, ದೊಡ್ಡಾಟ, ಕೃಷ್ಣಪಾರಿಜಾತ, ಸಂಗ್ಯಾ ಬಾಳ್ಯಾ ಆಟಗಳ ಅಭಿನಯ ಕೂಡ ಇತ್ತು. ಈ ಅಭಿನಯಗಳು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಈ ಸಂಬ್ರಮವನ್ನು ಆಯೋಜಿಸಿದ ಗೆಳೆಯ ಡಾ.ಗುರುನಾಥ ಅವರಿಗೆ ಅಭಿನಂದನಾರ್ಹರು.

  ವಿರುಪಾಪುರ ಗ್ರಾಮದ ಪರಿಶಿಷ್ಠ ಪಂಗಡಕ್ಕೆ ಸೇರಿದ ಇಲ್ಲಿಯ ಹಿರಿಯ ರಂಗನಟಿ ಎಸ್.ಅಂಜಿನಮ್ಮ , ಬಿ.ಗಂಗಮ್ಮ, ಕೆ.ನಾಗರತ್ನಮ್ಮ, ಯು.ಶಾರಾದಾ, ಕೂಡ್ಲಿಗಿ ದುರುಗಮ್ಮ, ಟಿ.ಹಂಪಮ್ಮ, ಬಿ.ನಾಗಮ್ಮ, ಎಸ್.ನಾಗವೇಣಿ, ಕೆ.ರಂಗವೇಣಿ, ಬಿ.ಭಾಗ್ಯ, ಬಿ.ವಿಜಯಲಕ್ಷ್ಮಿ ಸೇರಿದಂತೆ ಇಲ್ಲಿಯ ಹತ್ತಾರು ರಂಗನಟಿಯರು ಈಗಾಗಲೇ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದು, ಈ ಎಲ್ಲಾ ರಂಗನಟಿಯರು ಶೖತಿಲಯ ಮಹಿಳಾ ಕಲಾಸಂಘ ರಚಿಸಿಕೊಂಡಿದ್ದಾರೆ. ಇವರ ಹೊಸ ಅಭಿನಯದ ಸಂಗ್ಯಾ ಬಾಳ್ಯಾ ನಾಟಕ ಗಮನ ಸೆಳೆಯುವಂತಿದೆ.

ಆಸಕ್ತರು ಕಲಾವಿದೆಯರನ್ನು ಅಭಿನಯದ ಅವಕಾಶಕ್ಕಾಗಿ ಸಂಪರ್ಕಿಸಬಹುದು: 9740491580, 9620153003, 9845342110.


















ಕಾಮೆಂಟ್‌ಗಳಿಲ್ಲ: