ಗುರುವಾರ, ಜನವರಿ 22, 2015

ಮಂಟೂರಿನ ಶ್ರೀಕೃಷ್ಣಪಾರಿಜಾತ

-ಅರುಣ್ ಜೋಳದಕೂಡ್ಲಿಗಿ

  ಈಚೆಗೆ ಜನವರಿ 18 ರಂದು ಚಿತ್ರದುರ್ಗದಲ್ಲಿ ಯಕ್ಷಗಾನ ಬಯಲಾಟ ರಂಗ ಸಂಭ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ತೊಗಲು ಗೊಂಬೆಯಾಟ, ಸಣ್ಣಾಟ, ದೊಡ್ಡಾಟ, ಕೃಷ್ಣಪಾರಿಜಾತ, ಸಂಗ್ಯಾ ಬಾಳ್ಯಾ ಆಟಗಳ ಅಭಿನಯ ಕೂಡ ಇತ್ತು. ಈ ಅಭಿನಯಗಳು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಈ ಸಂಬ್ರಮವನ್ನು ಆಯೋಜಿಸಿದ ಗೆಳೆಯ ಡಾ.ಗುರುನಾಥ ಅವರಿಗೆ ಅಭಿನಂದನಾರ್ಹರು.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಬೆಳಗಾವಿ ಜಿ. ರಾಯಭಾಗ ತಾ. ಮಂಟೂರಿನ ನಿಜಗುಣಕಲಾಪೋಷಕರ ಶ್ರೀಕೃಷ್ಣಪಾರಿಜಾತ ಕಂಪಂನಿಯ ಕಲಾತಂಡ ಪಾರಿಜಾತ ಪ್ರದರ್ಶನ ನೀಡಿತು.


ಕಾಮೆಂಟ್‌ಗಳಿಲ್ಲ: