ಗುರುವಾರ, ಜನವರಿ 22, 2015

ದೊಡ್ಡಾಟದಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ

-ಶಶಿಕಾಂತ ಯಡಹಳ್ಳಿ     

“ದೊಡ್ಡಾಟ ಶೈಲಿಯಲ್ಲಿ ಮೂಡಿಬಂದ “ವೀರ ರಾಣಿ ಕಿತ್ತೂರು ಚೆನ್ನಮ್ಮ”: ಒಂದು ಸಾರ್ಥಕ ಪ್ರಯತ್ನ.





                 ತುಂ ತಕಜನ ದೀಂ ತಕಜನ ತುಂ ತಕಜನ ತಾ...
              ತುಂ ತಕಜನ ದೀಂ ತಕಜನ ತುಂ ತಕಜನ ತಾ... ಥೈಯಾ
              ತುಂ ತಕಜನ ತಾ....

ಮೇಳದವರ ಸಿರಿಕಂಠದಿಂದ ಬರುವ  ಸಂಗೀತಾಲಾಪ ಕೇಳಿದರೆ ಸಾಕು ದೊಡ್ಡಾಟವೊಂದುಅನಾವರಣಗೊಳ್ಳುತ್ತಿದೆ ಎಂದೇ ಅರ್ಥಕೇಳುಗರ ಎದೆಬಡಿತ ತಾಳಕ್ಕೆ ತಕ್ಕಂತೆ ಸ್ಪಂದಿಸುತ್ತಿದೆ ಎಂದೇಅರ್ಥಹಾಡು ಸಂಗೀತ ಕುಣಿತ ವೇಷ ಮಾತುಗಾರಿಕೆಗಳು ವಿಜ್ರಂಭಿಸುತ್ತಿವೆ ಎಂದೇ ಅರ್ಥ ಎಲ್ಲಾರೀತಿಯ ಅರ್ಥಗಳನ್ನು ಸೇರಿಸಿದ ಸಾರ್ಥಕ ಪ್ರಯತ್ನವೊಂದನ್ನು ವೀರ ರಾಣಿ ಕಿತ್ತೂರು ಚೆನ್ನಮ್ಮದೊಡ್ಡಾಟದಲ್ಲಿ ನೋಡುವುದೇ ಒಂದು ಸಂಭ್ರಮ.

ದೊಡ್ಡಾಟ ಎನ್ನುವುದು ನಿಜವಾದ ಅರ್ಥದಲ್ಲಿ ವಿಶಿಷ್ಟ ಶೈಲಿಯ ಗಂಡು ಕಲೆಶತಮಾನಗಳಿಂದ ಉತ್ತರಕರ್ನಾಟಕದಲ್ಲಿ ತಲೆಮಾರುಗಳಿಂದ ತಲೆಮಾರಿಗೆ ಹರಿದು ಬಂದ ಜಾನಪದ ರಂಗಕಲೆಕಾಲನ ಗತಿಗೆಸ್ಪಂದಿಸದ ಕಾರಣದಿಂದಾಗಿ ಈಗ ಅವಸಾನದಂಚಿಗೆ ಬಂದು ನಿಂತಿದೆಕಾಯಕಲ್ಪಕ್ಕಾಗಿ ಕಾಯುತ್ತಿದೆ.ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಪರಿಷ್ಕರಣೆಗೊಳಗಾಗಬೇಕಾದ ಅಗತ್ಯತೆ ಇದೆ.


 ನಿಟ್ಟಿನಲ್ಲಿ ಜೂನ್ 28ರಂದು ತೀರಿಕೊಂಡ ಜಾನಪದ ಜಂಗಮಡಾ.ಬಸವರಾಜ ಮಲಶೆಟ್ಟಿಯವರು ತುಂಬಾ ಪ್ರಯತ್ನಿಸಿದ್ದರು.ಪರಿಷ್ಕೃತ ರೂಪದ ಗಿರಿಜಾ ಕಲ್ಯಾಣ ದೊಡ್ಡಾಟವನ್ನು ರಚಿಸಿಪ್ರದರ್ಶಿಸಿದರುಡಾ.ಮಲಶೆಟ್ಟಿಯವರ ಆಶಯವನ್ನುಮುಂದುವರೆಸಿರುವ ಗ್ರಾಮರಂಗ ತಂಡವು ಮೂಡಲಪಾಯದೊಡ್ಡಾಟದ ಕುರಿತು ತರಬೇತಿ ಶಿಬಿರಗಳನ್ನು ಆಯೋಜಿಸಿ ಯುವಜನರಿಗೆ ದೊಡ್ಡಾಟದ ಹೆಜ್ಜೆಹಾಡುಶೈಲಿಯ ಪ್ರಾಯೋಗಿಕತರಬೇತಿಯನ್ನು ಕೊಡುತ್ತಿದೆಗ್ರಾಮರಂಗ ರೂವಾರಿಎಂ.ಎಸ್.ಮಾಳವಾಡರು ದೊಡ್ಡಾಟವನ್ನು ಪ್ರಸ್ತುತ ಸಂದರ್ಭಕ್ಕೆತಕ್ಕಂತೆ ಪರಿಷ್ಕರಿಸಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಎನ್ನುವಐತಿಹಾಸಿಕ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.

ಜುಲೈ 20 ರಿಂದ 29 ರವರೆಗೆ ಗದುಗಿನ ಶ್ರೀ ತೋಂಟದಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಮೂಡಲಪಾಯ ದೊಡ್ಡಾಟ ರಂಗ ತರಬೇತಿಶಿಬಿರದ ಸಮಾರೋಪದ ದಿನವಾದ 2014 ಜುಲೈ 29ರಂದು ಶಿಬಿರಾರ್ಥಿಗಳಿಂದ ...ಕಿತ್ತೂರುಚೆನ್ನಮ್ಮ ದೊಡ್ಡಾಟವು ಪ್ರದರ್ಶನಗೊಂಡು ನೋಡುಗರಲ್ಲಿ ಒಂದು ರೀತಿಯಸಂಚಲನವನ್ನುಂಟುವಾಡುವಲ್ಲಿ ಯಶಸ್ವಿಯಾಯಿತುಎಂ.ಎಸ್.ಮಾಳವಾಡರು  ಐತಿಹಾಸಿಕವಸ್ತುವುಳ್ಳ ದೊಡ್ಡಾಟವನ್ನು ರಚಿಸಿ ನಿರ್ದೇಶಿಸುವ ಮೂಲಕ ದೊಡ್ಡಾಟದಲ್ಲಿ ಹಲವಾರುಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದಾರೆ.

ಆದಿಯಿಂದಲೂ ಪೌರಾಣಿಕ ಪರಿಕಲ್ಪನೆಯಲ್ಲಿಯೇ ಮೂಡಿಬಂದಿರುವ ದೊಡ್ಡಾಟ ಪ್ರಕಾರದಪರಂಪರಾಗತ ಚೌಕಟ್ಟನ್ನು ಒಡೆದು ಹಾಕಿ ಐತಿಹಾಸಿಕ ವಿಷಯವನ್ನಿಟ್ಟುಕೊಂಡು ದೊಡ್ಡಾಟವನ್ನುಕಟ್ಟಿಕೊಟ್ಟಿದ್ದೇ ದೊಡ್ಡಾಟ ಕ್ಷೇತ್ರದಲ್ಲಿ ಒಂದು ಹೊಸ ಹೆಜ್ಜೆಜಾನಪದ ರಂಗಭೂಮಿಯಲ್ಲಿ ಯಾವಾಗಲೂಆರಂಭದಲ್ಲಿ ಗಣಪತಿಯ ಪಾತ್ರ ಹಾಗೂ ಅವನ ಸ್ತುತಿಯೇ ನಾಟಕದ ಸಂವಿಧಾನವೇನೋಎನ್ನುವಂತಿತ್ತುಆದರೆ ಬ್ರಾಹ್ಮಿಣಿಕಲ್ ಪರಿಕಲ್ಪನೆಯ ಐಡೆಂಟಿಟಿಯಾದ ಕಾಲ್ಪನಿಕ ಗಣೇಶನನ್ನುಕೈಬಿಟ್ಟು ಅದರ ಬದಲಾಗಿ ಬಸವಣ್ಣನ ಪಾತ್ರ ಸೃಷ್ಟಿಸಿ ಸ್ತುತಿಸಿದ ರೀತಿ  ...ಚೆನ್ನಮ್ಮ ದೊಡ್ಡಾಟದವಿಶೇಷತೆಯಾಗಿದೆಹೀಗೆ ಮಿಥ್ಗಳನ್ನು ಒಡೆದು ಕಟ್ಟುವ ಕ್ರಿಯೆ ರಂಗಭೂಮಿಯಲ್ಲಿ ಅಗತ್ಯವಾಗಿದೆ.ಜೊತೆಗೆ ದೊಡ್ಡಾಟದ ಅವಧಿ ಅಹೋರಾತ್ರಿಯದ್ದಾಗಿರುತ್ತದೆಈಗ ಜನರಿಗೆ ರಾತ್ರಿಪೂರಾ ನಾಟಕನೊಡುವ ಆತುರ ಕಾತುರ ಸಹನೆ ಇಲ್ಲಹೀಗಾಗಿ ಎಂಟು ಗಂಟೆಗಳ ಕಾಲಾವಧಿಯಲ್ಲಿ ನಡೆಯುವದೊಡ್ಡಾಟ ಪರಂಪರೆಗೆ ಒಂದಿಷ್ಟು ಬದಲಾವಣೆ ತಂದು ಮೂರುವರೆ ಗಂಟೆಗೆ ಕಾಲಾವಧಿಯನ್ನು ಸೀಮಿತಿಗೊಳಿಸಿದ್ದು ...ಚಿನ್ನಮ್ಮ ನಾಟಕದ ಮತ್ತೊಂದು ವೈಶಿಷ್ಟ್ಯತೆಯಾಗಿದೆ.

ಕಿತ್ತೂರು ಚೆನ್ನಮ್ಮ ಕರ್ನಾಟಕದ ಹೆಮ್ಮೆಯ ವೀರಮಹಿಳೆಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿಬ್ರಿಟೀಷ ಸಾಮ್ರಾಜ್ಯವನ್ನು ವಿರೋಧಿಸಿ ಯುದ್ದಮಾಡಿದ ಮೊಟ್ಟಮೊದಲ ದಿಟ್ಟ ರಾಣಿನಾಡಪ್ರೀತಿಗೆ,ದೇಶಭಕ್ತಿಗೆ ಪ್ರೇರಕಳಾದ ಚೆನ್ನಮ್ಮನನ್ನು ನಾಟಕದಲ್ಲಿ ಕಟ್ಟಿಕೊಡುವುದೇ ಒಂದು ವಿಶಿಷ್ಟ ಅನುಭವ.ಅದರಲ್ಲೂ ಶೈಲೀಕೃತವಾದ ದೊಡ್ಡಾಟದಲ್ಲಿ ಚಾರಿತ್ರಿಕ ವೀರಗಾತೆಯನ್ನು ಹೇಳುವುದು ನಿಜಕ್ಕೂಸವಾಲಿನ ಕೆಲಸಯಾಕೆಂದರೆ ಐತಿಹಾಸಿಕ ವ್ಯಕ್ತಿಗಳಿಗೆ ಪೌರಾಣಿಕ ವೇಷಗಳನ್ನು ತೊಡಿಸಿಶೈಲೀಕೃತಿಕುಣಿತಗಳನ್ನು  ಕಲಿಸಿಕಾವ್ಯಾತ್ಮಕ ಪ್ರಾಸಬದ್ದ ಮಾತುಗಳನ್ನಾಡಿಸಿಹಾಡು ಸಂಗೀತಗಳ ಮೂಲಕಕಥೆಯನ್ನು ನಿರೂಪಿಸುವ ರೀತಿ ಸುಶಿಕ್ಷಿತ ನೋಡುಗರಿಗೆ ಅವಾಸ್ತವವೆನಿಸುತ್ತದೆಆದರೆ ವಾಸ್ತವಿಕಘಟನೆಗಳನ್ನು ಅವಾಸ್ತವಿಕ ರಂಗತಂತ್ರಗಳ ಮೂಲಕ ಪ್ರಸ್ತುತ ಪಡಿಸಿರುವ  ದೊಡ್ಡಾಟದ ನಿರ್ದೇಶಕಎಂ.ಎಸ್.ಮಾಳವಾಡರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆದೊಡ್ಡಾಟ ಕೇವಲ ಪೌರಾಣಿಕಸಂದರ್ಭಗಳಿಗೆ ಮಾತ್ರ ಅನ್ವಯವಾಗುತ್ತದೆ ಐತಿಹಾಸಿಕಕ್ಕಲ್ಲ ಎಂದು ಡಾ.ಮಲಶೆಟ್ಟಿಯಂತಹಜಾನಪದ ತಜ್ಞರೂ ಅಪಸ್ವರ ಎತ್ತಿದ್ದರುಆದರೆ ಮಾಳವಾಡರು ಇದನ್ನೇ ಸವಾಲಾಗಿ ತೆಗೆದುಕೊಂಡುವೀರ ರಾಣಿ ಕಿತ್ತೂರು ಚೆನ್ನಮ್ಮ ಚಾರಿತ್ರಿಕ ನಾಟಕವನ್ನು ರಚಿಸಿ ದೊಡ್ಡಾಟದ ಶೈಲಿಗೆ ಅಳವಡಿಸಿಪ್ರದರ್ಶಿಸಿದ್ದು ಸ್ಮರಣೀಯವಾಗಿದೆಹಾಗೂ ಐತಿಹಾಸಿಕ ಸಂದರ್ಭಗಳನ್ನೂ ದೊಡ್ಡಾಟದಲ್ಲಿಅಳವಡಿಸಬಹುದಾದ ಸಾಧ್ಯತೆಗಳನ್ನು ಮುಕ್ತವಾಗಿಸಿದೆ.



 ಜಗಮಗಿಸುವ ಪಾತ್ರಗಳ ವೇಷಗಾರಿಕೆರಂಗದಂಗಳದ ತುಂಬಾ ಪಾತ್ರಗಳ ಹೆಜ್ಜೆ ಕುಣಿತಕೇಳುಗರಎದೆಬಡಿತ ಹೆಚ್ಚಿಸುವ ಹಿಮ್ಮೇಳದ ಮದ್ದಲೆ ಸಂಗೀತವಿಶಿಷ್ಟ ಶೈಲಿಯ ಹಾಡುಗಾರಿಕೆ.... ಹೀಗೆದೊಡ್ಡಾಟವನ್ನು ಬರೀ ಕೇಳುವುದಲ್ಲ ನೋಡಿ ಅನುಭವಿಸಿಯೇ ಸವಿಯಬೇಕುಕೃಷಿ ಮೂಲ ಶ್ರಮಸಂಸ್ಕೃತಿಯ  ಕಲೆಯನ್ನು ರಂಗವೇದಿಕೆಯ ಮೇಲೆ ನೋಡುವುದೇ ಒಂದು ಸೌಭಾಗ್ಯಪ್ರೇಕ್ಷಕರಿಗೆ..... ಕಿತ್ತೂರು ಚೆನ್ನಮ್ಮ ದೊಡ್ಡಾಟ ಪ್ರದರ್ಶನವು ವಿಶಿಷ್ಟ ರೀತಿಯ ಅನುಭೂತಿಯನ್ನು ಕೊಟ್ಟಿದ್ದಂತೂಸುಳ್ಳಲ್ಲ ದೊಡ್ಡಾಟ ಪ್ರದರ್ಶನದಲ್ಲಿ ಹಲವಾರು ರೀತಿಯಲ್ಲಿ ಪರಿಷ್ಕರಣೆಗಳನ್ನು ಮಾಡಲಾಗಿದೆ.ದೊಡ್ಡಾಟದ ಉಳಿವಿಗಾಗಿ ಈಗ ಅದರ ಅಗತ್ಯವೂ ಇದೆ.

ಹಾಡು ಸಂಗೀತದಲ್ಲಿ ಪರಿಷ್ಕರಣೆ :ಹಳ್ಳೀಯ ಒಕ್ಕಲು ದುಡಿದುಡಿದುಸವೆದೋರು.. ಎನ್ನುವ  ದೊಡ್ಡಾಟದಆರಂಭದ ಹಾಡು ಶ್ರಮ ಸಂಸ್ಕೃತಿಯಗ್ರಾಮೀಣ ಜನಪದ ಕಲೆಗೆ ಸಂಕೇತವಾಗಿಮೂಡಿಬಂದಿದೆಇಡೀ ದೊಡ್ಡಾಟದಅಂತಃಸತ್ವ ಇರುವುದೇಹಾಡುಗಾರಿಕೆಯಲ್ಲಿಹಾಡಿಗೆ ತಕ್ಕಂತೆರಾಗರತಿಯ ರಂಗೇಳುವಂತೆ ಸ್ಪಂದಿಸುವಮೇಳ ಹಾಗೂ ಮೇಳಿಗರ ತಾಳಮದ್ದಲೆಗಳುಂಟುವಾಡುವ ಉನ್ಮಾದದಲ್ಲಿಬಹುತೇಕ ದೊಡ್ಡಾಟಗಳಲ್ಲಿಕತೆಗಾರನ ಬಾಯಲ್ಲಿ ಬರುವ ಹಾಡುಗಾರಿಕೆ ಕೇಳಲು ಅದ್ಭುತ ಎನಿಸಿದರೂ ಸುಲಭಕ್ಕೆಅರ್ಥವಾಗುವುದೇ ಇಲ್ಲಆದರೆ  ...ಕಿತ್ತೂರು ಚೆನ್ನಮ್ಮ ದೊಡ್ಡಾಟದ ವಿಶೇಷತೆ ಏನೆಂದರೆ ಬಳಸಿದಎಲ್ಲಾ ಹಾಡುಗಳ ಸಾಹಿತ್ಯ ಕೇಳುಗರಿಗೆ ಸ್ಪಷ್ಟವಾಗಿ ಅರ್ಥವಾಗುವಂತಿದೆಸಂಗೀತ ಎನ್ನುವುದು ಹಾಡಿನಸಾಹಿತ್ಯದ ಮೇಲೆ ಸವಾರಿ ಮಾಡದೇ ಜೊತೆಜೊತೆಗೆ ಮೂಡಿಬಂದಿದೆಪಾರಂಪರಿಕ ದೊಡ್ಡಾಟಗಳಲ್ಲಿಹಾಡಿನ ಭಾರವೇ ಹೆಚ್ಚಾಗಿದ್ದು  ನಾಟಕದಲ್ಲಿ ಅವುಗಳ ಸಂಖ್ಯೆಯನ್ನು ಮಿತಿಗೊಳಿಸಿ ೧೪ಹಾಡುಗಳನ್ನು ಮಾತ್ರ ಬಳಸಲಾಗಿದೆಇನ್ನೂ ವಿಶೇಷತೆ ಏನೆಂದರೆ ಆರುವರೆ ಕಪ್ ಸ್ವರಾಲಾಪವನ್ನುನಾಲ್ಕುವರೆ ಕಪ್ಗೆ ಇಳಿಸಿ ಹಾಡುಗಾರ (ಕಥೆಗಾರ) ಮೇಲಿದ್ದ ಶ್ರಮವನ್ನು ಕಡಿತಗೊಳಿಸಲಾಗಿದೆ.ಹೀಗಾಗಿ ಹಾಡಿನಲ್ಲಿ ಕಿರುಚಾಟ ಕಡಿಮೆಯಾಗಿ ಭಾವನೆಗಳು ಒಡಮೂಡಿ ಸಾಹಿತ್ಯದಲ್ಲಿ ಸ್ಪಷ್ಟತೆಮೂಡಿಬಂದಿದೆಇದರಿಂದಾಗಿ ಹಾಡಿನ ಸೌಂದರ್ಯ ಹೆಚ್ಚಾಗಿದೆಹಾಡು ಸಂಗೀತದಲ್ಲಾದ  ಹೊಸಪರಿಷ್ಕರಣೆ ಜನಮುಖಿಯಾಗಿದ್ದು ದೊಡ್ಡಾಟದ ಉಳಿವಿಗೆ ಇಂತಹ ಬದಲಾವಣೆ ತುರ್ತು ಅಗತ್ಯವಾಗಿದೆ.ರಾತ್ರಿಯಿಂದ ಬೆಳಿಗ್ಗೆವರೆಗೂ ದೊಡ್ಡಾಟ ಮಾಡಬೇಕಾದ ಅನಿವಾರ್ಯತೆ ಇದ್ದಾಗ ಪಾತ್ರಗಳು ಮಾತುನಟನೆಯಲ್ಲಿ ಮಾಡಿದ್ದನ್ನೇ ಮತ್ತೆ ಹಾಡಿನಲ್ಲಿ ಪುನರಾವರ್ತಿಸಲಾಗುತ್ತಿತ್ತುಇದು ಒಂದಿಷ್ಟುಬೇಸರವನ್ನುಂಟುಮಾಡುತ್ತಿತ್ತುಇಂತಹ ರಿಪಿಟೇಶನ್ನಿಗೆ  ಚೆನ್ನಮ್ಮ ದೊಡ್ಡಾಟದಲ್ಲಿಅವಕಾಶವಿಲ್ಲದ್ದರಿಂದ ನಾಟಕ ಎಲ್ಲೂ ಬೋರೆನ್ನಿಸದೇ ನೋಡಿಸಿಕೊಂಡು ಹೋಗುತ್ತದೆಜೊತೆಗೆದೊಡ್ಡಾಟ ಎನ್ನುವುದು ಹಾಡು ಕೇಂದ್ರಿತ ಕಲೆಯಾಗಿದೆಹಾಡುಗಳ ಮೂಲಕ ಕಥೆಯನ್ನು ಕಥೆಗಾರ(ಹಾಡುಗಾರಮುನ್ನೆಡೆಸುತ್ತಾನೆಅದಕ್ಕೆ ಪೂರಕವಾಗಿ ಪಾತ್ರಗಳು ಬಂದು ಕುಣಿದು ಒಂದೆರಡು ಮಾತುಹೇಳಿ ಹೋಗುತ್ತವೆ (ಸಾರಥಿ ಪಾತ್ರ ಇದಕ್ಕೆ ಅಪವಾದ). ಇದರಿಂದಾಗಿ ಅಭಿನಯ ಹಾಗೂ ಸಂಭಾಷಣೆಗೆಹೆಚ್ಚು ಅವಕಾಶವಿಲ್ಲದಾಗುತ್ತದೆ ಸಮಸ್ಯೆಯನ್ನು ಮನಗಂಡು  ... ಚೆನ್ನಮ್ಮ ನಾಟಕವನ್ನುಸಂಭಾಷನಾ ಕೇಂದ್ರಿತವಾಗಿ ಕಟ್ಟಿಕೊಟ್ಟಿದ್ದು ಹಾಗೂ ಹಾಡುಗಳನ್ನು ಪೂರಕವಾಗಿ ಬಳಸಿದ್ದರಿಂದಪ್ರದರ್ಶನ ನೋಡುಗರಿಗೆಲ್ಲರಿಗೂ ಅರ್ಥವಾಗುವಂತೆ ಸ್ಪಂದಿಸಿದೆ.  ಇದು  ನಾಟಕದ ಯಶಸ್ಸಿಗೆಮೂಲ ಕಾರಣವೂ ಆಗಿದೆ.

ಮೂಲ ಮಟ್ಟುಗಳ ಬಳಕೆ : ದೊಡ್ಡಾಟದ ಸಂಗೀತಕ್ಕೆ ತನ್ನದೇ ಆದ ಶೈಲಿ ಇದೆಅದಕ್ಕೆ ಮೂಡಲಪಾಯದೇಸಿ ಸಂಗೀತ ಮಟ್ಟುಗಳು ಎನ್ನುತ್ತಾರೆಇದು ನಮ್ಮ ಜಾನಪದರು ಅವಿಷ್ಕರಿಸಿದ ವಿಶಿಷ್ಟವಾದಸಂಗೀತ ಶೈಲಿದೊಡ್ಡಾಟದ ಸಂಗೀತವು ಎಂದೂ ಶುದ್ದ ಶಾಸ್ತ್ರೀಯ ಸಂಗೀತಕ್ಕೆ ಒಳಪಡಲೇ ಇಲ್ಲ.ಅದರ ಅಗತ್ಯವೂ ನಮ್ಮ ಜನಪದರಿಗೆ ಇರಲಿಲ್ಲಆದರೆ ಬರುಬರುತ್ತಾ ಉತ್ತರಾದಿ ಮತ್ತು ದಕ್ಷಿಣಾದಿಶಿಷ್ಟ ಸಂಗೀತದ ಛಾಯೆ ದೊಡ್ಡಾಟದ ಸಂಗೀತದಲ್ಲಿ ಮೂಡತೊಡಗಿತು .... ಕಿತ್ತೂರು ಚೆನ್ನಮ್ಮದೊಡ್ಡಾಟದಲ್ಲಿ ಶಾಸ್ತ್ರೀಯ ಸಂಗೀತದ ಪ್ರಭಾವವನ್ನು ನಗಣ್ಯಗೊಳಿಸಿ ಪಕ್ಕಾ ಮೂಡಲಪಾಯ ದೇಸಿಸಂಗೀತ ಶೈಲಿಯ ಮಟ್ಟುಗಳನ್ನೇ ಬಳಸಿ ಮೂಲ ಶೈಲಿಗೆ ಬದ್ದತೆಯನ್ನು ತೋರಲಾಗಿದ್ದು ಒಟ್ಟುಹದಿನಾಲ್ಕು ಮಟ್ಟುಗಳನ್ನು ಬಳಸಲಾಗಿದೆಇದರಿಂದಾಗಿ ಮೂಲ ಸಂಗೀತದ ಸೊಗಡನ್ನು ಕೆಳುಗರುಆನಂದಿಸಬಹುದಾಗಿದೆ.













ಮರುಹುಟ್ಟು
 ಪಡೆದ ವೇಶಭೂಷಣಗಳು : 
... ಚೆನ್ನಮ್ಮ ದೊಡ್ಡಾಟದಲ್ಲಿ ದೃಶ್ಯವೈಭವವನ್ನು ವೇಶಭೂಷಣಗಳುಕಟ್ಟಿಕೊಟ್ಟವುಈಗ ಅಳಿದುಳಿದಯಾವುದೇ ದೊಡ್ಡಾಟ ತಂಡಗಳನ್ನುಗಮನಿಸಿದರೂ ಶತಮಾಗಳಷ್ಟು ಹಳೆಯವೇಷಗಳೇ ಇನ್ನೂ ಬಳಕೆಯಲ್ಲಿವೆಇನ್ನೂದುರಂತವೇನೆಂದರೆ ಈಗ ದೊಡ್ಡಾಟದವೇಶಭೂಷಣಗಳನ್ನು ತಯಾರಿಸುವವರೇಇಲ್ಲವಾಗಿದ್ದಾರೆದೊಡ್ಡಾಟದಲ್ಲಿಸಕ್ರೀಯವಾಗಿದ್ದವರ ಮನೆಯಲ್ಲಿ ಕೆಲವುಹಳೆಯ ವೇಶಭೂಷಣಗಳಿವೆಯಾದರೂ ಅವರು ಅವುಗಳನ್ನು ಪೂರ್ವಿಕರ ಆಸ್ತಿ ಎನ್ನುವಂತೆ ಪೂಜೆಮಾಡುತ್ತಿದ್ದಾರೆಯೇ ಹೊರತು ಬೇರೆ ತಂಡಗಳಿಗೆ ಕೊಡುವುದೇ ಇಲ್ಲಹೀಗಾಗಿ ಅಪರೂಪಕ್ಕೊಮ್ಮೆದೊಡ್ಡಾಟ ಆಡುವ ತಂಡದವರಿಗೂ ಸಹ ವೇಶಭೂಷಣಗಳು ದೊರೆಯದೆ ರಟ್ಟಿನಲ್ಲಿ ಬಣ್ಣದ ಪೇಪರ್ಅಂಟಿಸಿ ಬಳಸುವ ಅನಿವಾರ್ಯತೆ ಇದೆ.  ಆದರೆ... ಎಂ.ಎಸ್.ಮಾಳವಾಡರ ಮಾರ್ಗದರ್ಶನದಲ್ಲಿಮರಿತಮ್ಮಪ್ಪ ಹಾಗೂ ರಾಮನಗೌಡ ಪಾಟೀಲರು ತುಂಬಾ ಪರಿಶ್ರಮವಹಿಸಿ ಮರುನಿರ್ಮಿಸಿದವೇಶಭೂಷಣಗಳು ... ಚೆನ್ನಮ್ಮ ದೊಡ್ಡಾಟದ ಪಾತ್ರಗಳನ್ನು ಜಗಮಗಿಸುವಂತೆ ಮಾಡಿವೆನೋಡುಗರ ಕಣ್ಮನ ಸೆಳೆಯುವಂತಿವೆಹೊಸದಾಗಿ ವೇಶಭೂಷಣಗಳನ್ನು ತಯಾರಿಸಿದ್ದೇನೋ ಸರಿ,ಹಾಗೆ ಮಾಡುವಾಗ ಅವುಗಳ ತೂಕವನ್ನು ಕಡಿಮೆ ಮಾಡಬೇಕಾಗಿತ್ತುಭುಜ ಕಿರೀಟತಲೆಕಿರೀಟಗಳಭಾರದಿಂದಾಗಿ ನಟರ ಗಮನ ಅಭಿನಯಕ್ಕಿಂತ ಅವುಗಳನ್ನು ನಿಭಾಯಿಸುವುದಕ್ಕೆ ವ್ಯಯವಾದಂತಿದೆಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ  ಭಾರವನ್ನು ತಡೆದುಕೊಳ್ಳುವ ಗಟ್ಟಿ ಮುಟ್ಟಾದ ಜಗಜಟ್ಟಿ ಗಂಡಸರಿದ್ದರು.ಆದರೆ ಈಗಿನ ವಿದ್ಯಾವಂತ ಯುವಕರಿಗೆ  ಶಕ್ತಿ ಇಲ್ಲಜೊತೆಗೆ ಭಾರ ಹೊರುವ ಅನುಭವವೂ ಇಲ್ಲ.ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಾಂಪ್ರದಾಯಿಕ ಮಾದರಿಯ  ವೇಶಭೂಷಣಗಳಿಗೆ ಹಗುರಾದಆಧುನಿಕ ವಸ್ತುಗಳನ್ನು ಬಳಸಿ ಭಾರವನ್ನು ಕಡಿತಗೊಳಿಸಿ ಯುವ ನಟರನ್ನು ಯಮಭಾರದಿಂದ ಪಾರುಮಾಡುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ.


ಕ್ರಿಯಾಮೂಲ ಕುಣಿತಗಳು : ದೊಡ್ಡಾಟದ ಬಲು ದೊಡ್ಡ ಶಕ್ತಿಇರುವುದು ಕುಣಿತಗಳಲ್ಲಿಶ್ರಮ ಮೂಲ ಸಂಸ್ಕೃತಿಯಪ್ರತೀಕವಾಗಿರುವ ದೊಡ್ಡಾಟದಲ್ಲಿ ಕ್ರಿಯಾಮೂಲ ಕುಣಿತಗಳಿವೆ.ರೈತಾಪಿ ಕೂಲಿ ಜನತೆ ತಮ್ಮ ದಿನನಿತ್ಯದ ಬದುಕಿನಚಟುವಟಿಕೆಗಳನ್ನೇ ಕುಣಿತಗಳಾಗಿ ಮಾರ್ಪಡಿಸಿ ದೊಡ್ಡಾಟದಲ್ಲಿತೊಡಗಿಸಿ ಕೊಂಡಿದ್ದಾರೆಕುಣಿತಗಳಲ್ಲಿ ಪ್ರಮುಖವಾಗಿ ಸ್ತ್ರೀ ಕುಣಿತಹಾಗೂ ಪುರುಷ ಕುಣಿತಗಳಿವೆಸ್ತ್ರೀ ಕುಣಿತಗಳಲ್ಲಿ ಹೂ ಹರಿಯೋಕುಣಿತನೀರು ಸೇದೋ ಕುಣಿತಕೊಡ ಹೊರುವಹೂಪೋಣಿಸುವತೋರಣ ಕಟ್ಟುವಹತ್ತಿ ಬಿಡಿಸುವಮಜ್ಜಿಗೆಕಡಿಯುವಕನ್ನಡಿ ನೋಡುವ... ಕುಣಿತ ಹಾಗೂ ಕಿರುಕುಣಿತಗಳಿವೆ.ಹಾಗೆಯೇ ಪುರುಷ ಕುಣಿತಗಳಲ್ಲಿ ಮುಖ್ಯವಾಗಿ ಕಣ ತುಳಿಯುವ,ಎತ್ತು ಗದರಿಸುವಬಿತ್ತುವ ಕುಣಿತಗಳಿವೆಲಾಲಿ ಕುಣಿತ ಹಾಗೂಯುದ್ದದ ಗತ್ತು ಕುಣಿತಗಳಿವೆಈಗ ಆಧುನಿಕ ದೊಡ್ಡಾಟದಕಲಾವಿದರು ಇವುಗಳನ್ನೇ ಪರಿಷ್ಕರಿಸಿ ಎರಡೆಜ್ಜೆ ಕುಣಿತನಾಲ್ಕೆಜ್ಜೆಕುಣಿತಆರು ಹೆಜ್ಜೆ ಕುಣಿತ ಎಂದು ಸರಳಗೊಳಿಸಿದ್ದಾರೆ ಎಲ್ಲಾಬಗೆಯ ಹೆಜ್ಜೆ ಕುಣಿತಗಳನ್ನು ...ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿ ಸೊಗಸಾಗಿ ಬಳಸಲಾಗಿದೆ.ಪಾತ್ರಗಳ ಆಗಮನ ಮತ್ತು ನಿರ್ಗಮನಕ್ಕೆ ಬಳಸಲಾದ ಶೈಲಿಕೃತ ಎರಡೆಜ್ಜೆ ಮತ್ತು ನಾಲ್ಕೆಜ್ಜೆಕುಣಿತಗಳು ನೋಡುಗರಿಗೆ ವಿಶಿಷ್ಟ ಅನುಭವವನ್ನು ಕೊಡುತ್ತವೆಹೆಜ್ಜೆಗಳೇನೋ ಸರಿಆದರೆ ಹೆಜ್ಜೆಗೆತಕ್ಕಂತ ನಟನೆ ಹಾಗೂ ಅದಕ್ಕೆ ತಕ್ಕ ಭಾವನೆಗಳೂ ಸಹ ಮೂಡಿಬರಬೇಕಿತ್ತುಬಹುಷಃ ಇದುದೊಡ್ಡಾಟದ ಕೊರತೆಯೇ ಆಗಿದೆಹಾಡು ಕುಣಿತಗಳಿಗೆ ಕೊಟ್ಟ ಮಹತ್ವವನ್ನು ಭಾವಾಭಿವ್ಯಕ್ತಿ ಹಾಗೂಆಂಗಿಕಾಭಿನಯಕ್ಕೆ ಕೊಡದೇ ಹೋಗಿದ್ದು ಸಹ ದೊಡ್ಡಾಟದ ಹಿನ್ನೆಡೆಗೆ ಕಾರಣವಾಗಿದೆ.  ಯಕ್ಷಗಾನಮತ್ತು ಕಥಕ್ಕಳಿಗಳಲ್ಲಿ ಕುಣಿತದಷ್ಟೇ ಮಹತ್ವವನ್ನು ಅಭಿನಯ ಮತ್ತು ಭಾವಾಭಿವ್ಯಕ್ತಿಗೆ ಕೊಡಲಾಗಿದೆ.ಆದರೆ ದೊಡ್ಡಾಟ ಪರಂಪರೆಯಲ್ಲಿ ಇದು ಸಪ್ಪೆಯಾಗಿದೆ ...ಚೆನ್ನಮ್ಮ ನಾಟಕದಲ್ಲೂ ಸಹ ಅಭಿನಯಅದರಲ್ಲೂ ಸಾತ್ವಿಕಾಭಿನಯದ ಕೊರತೆ ಎದ್ದು ಕಾಣಿಸುವಂತಿದೆನಿರ್ದೇಶಕರು  ನಿಟ್ಟಿನಲ್ಲಿಕಲಾವಿದರನ್ನು ತರಬೇತುಗೊಳಿಸಿ ರೂಪಿಸಿದರೆ ದೊಡ್ಡಾಟ ಇನ್ನೂ ಚೆನ್ನಾಗಿ ಮೂಡಿಬರುತ್ತದೆ.


ಮಹಿಳೆಯರ ಭಾಗವಹಿಸುವಿಕೆ : ಬಯಲಾಟ ಪ್ರದರ್ಶನಪರಂಪರೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಇಲ್ಲವೇ ಇಲ್ಲ.ಪುರುಷಪ್ರಧಾನ್ಯತೆ ಜಾನಪದ ರಂಗಭೂಮಿಯಲ್ಲಿ ಮೊದಲಿನಿಂದಲೂರೂಢಿಗತವಾಗಿ ಬಂದಿದೆಸ್ತ್ರೀ ಪಾತ್ರಗಳನ್ನೂ ಸಹ ಪುರುಷರೇಅಭಿನಯಿಸುವುದು ಸಾಂಪ್ರದಾಯಿಕವಾಗಿದೆ ರೂಢಿಗತಸಂಪ್ರದಾಯವನ್ನು  .... ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿಮುರಿದು ಹಾಕಲಾಗಿದೆ.  ರಾಣಿ ಚೆನ್ನಮ್ಮಳ ಪಾತ್ರಕ್ಕೆ ಮಹಿಳೆಯನ್ನೇಆಯ್ಕೆ ಮಾಡಲಾಗಿದೆಇದರಿಂದಾಗಿ ದೊಡ್ಡಾಟ ಪರಂಪರೆಯಲ್ಲಿಮೆರೆಯುವ ಪುರುಷ ಪಾರಂಪರ್ಯವನ್ನು ಒಡೆದು ಹಾಕಿ ಸ್ತ್ರೀಯರಭಾಗವಹಿಸುವಿಕೆಯನ್ನು ಅಳವಡಿಸಿ ಲಿಂಗತಾರತಮ್ಯವನ್ನುಸರಿಪಡಿಸಿದ್ದಕ್ಕೆ  ದೊಡ್ಡಾಟ ಸಾಕ್ಷಿಯಾಗಿದೆಸ್ತ್ರೀ ಪಾತ್ರವನ್ನುಸ್ತ್ರೀಯರೇ ಅಭಿನಯಿಸಿದ್ದರಿಂದ ದ್ವನಿ ಹಾಗೂ ನಟನೆಯಲ್ಲಿ ಕೃತಕತೆಇಲ್ಲದಂತಾಗಿ ಸಹಜ ಜೀವಂತಿಕೆ ಮೂಡಿ ಬಂದಿದೆಇದು ಇಡೀದೊಡ್ಡಾಟ ಪ್ರಯೋಗಕ್ಕೆ ಜೀವಕಳೆ ತಂದಿದೆಹಾಗೂ ಇದೀಗ ತಾನೆಕಾಲೇಜಿಗೆ ಹೋಗುತ್ತಿರುವ ನಂದಾ ಎನ್ನುವ ಯುವತಿಯು ರಾಣಿಚೆನ್ನಮ್ಮಳ ಪಾತ್ರವನ್ನು ಅದ್ಬುತವಾಗಿ ಅಭಿನಯಿಸಿ ನೋಡುಗರಲ್ಲಿ ಸಂಚಲನವನ್ನುಂಟು ಮಾಡಿದಳು.

ಶೃಂಗಾರ-ಹಾಸ್ಯ ರಸಗಳ ಬಳಕೆ : ದೊಡ್ಡಾಟ ಪರಂಪರೆಯಲ್ಲಿ ಶೃಂಗಾರ ರಸಕ್ಕೆ ಅಘೋಷಿತ ನಿರ್ಬಂಧಹಾಕಿದಂತಿದೆವೀರಕರುಣ ಇಲ್ಲವೇ ರೌದ್ರ ರಸಗಳೇ ಹೆಚ್ಚು ಬಳಕೆಯಾಗಿವೆಆದರೆ  ...ಚೆನ್ನಮ್ಮ ದೊಡ್ಡಾಟದಲ್ಲಿ ಆರಂಭದಲ್ಲೇ ಶೃಂಗಾರ ರಸದ ದೃಶ್ಯವನ್ನು ಅಳವಡಿಸಲಾಗಿದೆಕಿತ್ತೂರಿನದೊರೆ ಮಲ್ಲಸರ್ಜ ಹಾಗೂ ಚೆನ್ನಮ್ಮ ದಂಪತಿಗಳು ಉದ್ಯಾನವನಕ್ಕೆ ವಾಯುವಿಹಾರಕ್ಕೆ ಬಂದುಪ್ರಕೃತಿಯನ್ನು ವರ್ಣಿಸುತ್ತಾ ನಲಿಯುವ ದೃಶ್ಯ ಸೊಗಸಾಗಿ ಮೂಡಿಬಂದಿದೆ.  ಅದೇ ರೀತಿ ಹಾಸ್ಯರಸದೃಶ್ಯಗಳ ಸೃಷ್ಟಿಯೂ ದೊಡ್ಡಾಟದಲ್ಲಿ ಕಡಿಮೆಸಾರಥಿಯ ಸಾಂದರ್ಭಿಕ ಶಬ್ಧ ಪ್ರಾಸ ಪ್ರಯೋಗದಪಂಚ್ಗಳನ್ನು ಹೊರತುಪಡಿಸಿ ಹಾಸ್ಯ ದೃಶ್ಯಗಳನ್ನು ಮನರಂಜೆಗಾಗಿ ಸೃಷ್ಟಿಸಲಾಗಿಲ್ಲ.ಪಾರಿಜಾತಗಳಲ್ಲಿ ಹಾಸ್ಯಕ್ಕೆ ಪ್ರತ್ಯೇಕ ದೃಶ್ಯಗಳಿವೆಯಾದರೂ ದೊಡ್ಡಾಟದಲ್ಲಿ ಕಡಿಮೆ ಹಾಸ್ಯರಸದಕೊರತೆಯನ್ನು ನಿಗಲುನೋಡುಗರಿಗೆ ಮನರಂಜನೆಯನ್ನು ಕೊಡಲು ಸಾರಥಿ ಪಾತ್ರದ ಮೂಲಕಪ್ರಸ್ತುತ ಸಮಾಜವನ್ನು ವಿಶ್ಲೇಷಿಸುವಂತಹ ಕೆಲವು ಹಾಸ್ಯ ಪ್ರಸಂಗಗಳನ್ನು ಅಳವಡಿಸುವ ಮೂಲಕರೌದ್ರಕರುಣ ರಸಗಳ ಏಕತಾನತೆಯನ್ನು ಒಡೆದು ಹಾಕಿ ನೋಡುಗರಿಗೆ ಆಗಾಗ ರಿಲೀಪ್ ಕೊಡುವಕೆಲಸವನ್ನು  ದೊಡ್ಡಾಟ ಪ್ರಯೋಗದಲ್ಲಿ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆಮತ್ತು ಅದು ದೊಡ್ಡಾಟವನ್ನು ಇನ್ನೂ ಆಕರ್ಷನೀಯವಾಗಿಸಿದೆ.

ಸ್ತ್ರೀ ಪ್ರಧಾನ ಪ್ರಯೋಗ : ಗ್ರಾಮರಂಗದ  ವೀರ ರಾಣಿ ಕಿತ್ತೂರು ಚೆನ್ನಮ್ಮ ದೊಡ್ಡಾಟ ಪ್ರಯೋಗವುಭವಿಷ್ಯದಲ್ಲಿ ದೊಡ್ಡಾಟಗಳಿಗೆ ಮಾದರಿಯಾಗುವಂತೆ ಒಂದು ಹಂತದಲ್ಲಿ ಪರಿಷ್ಕರಣೆಗೊಳಗಾಗಿದೆ.ದೊಡ್ಡಾಟದ ಟೆಕ್ಸ್ಟನಲ್ಲಿ ಬದಲಾವಣೆ ಬರಬೇಕಿತ್ತುಬಂದಿದೆದೊಡ್ಡಾಟದ ಶೈಲಿಗೆ ಎಲ್ಲೂ ಭಂಗಬರದಂತೆ ಐತಿಹಾಸಿಕ ವಸ್ತುವುಳ್ಳ ವಿಷಯವನ್ನು ದೊಡ್ಡಾಟಕ್ಕೆ ಅಳವಡಿಸಿದ್ದೇ ದೊಡ್ಡಾಟ ಪರಂಪರೆಯಲ್ಲಿಹೊಸ ಮೈಲುಗಲ್ಲಾಗಿದೆಧಾರ್ಮಿಕ ಆಚರಣೆಗಳ ಭಾಗವಾದ ಪೌರಾಣಿಕ ಪರಿಕಲ್ಪನೆಯದೊಡ್ಡಾಟಗಳಲ್ಲಿ ಮನುವಾದಿ ಮಾತುಗಳು ಹಾಗೂ ದೃಶ್ಯಗಳು ಬೇಕಾದಷ್ಟಿರುತ್ತಿದ್ದವುಪುರುಷಪ್ರಧಾನತೆಗೆ ಹೆಚ್ಚು ಮಹತ್ವ ಕೊಡಲಾಗುತ್ತಿತ್ತುಮಹಿಳೆಯರನ್ನು ಲೇವಡಿ ಮಾಡಲಾಗುತ್ತಿತ್ತುಆದರೆಮೊದಲ ಬಾರಿಗೆ ಎನ್ನುವಂತೆ ಸ್ತ್ರೀ ಪ್ರಧಾನವಾದ ರಾಣಿ ಚೆನ್ನಮ್ಮಳ ವಸ್ತು ಆಧಾರಿತ ದೊಡ್ಡಾಟವನ್ನುರಚಿಸಿ ಆಡಿಸಿರುವುದು ಸ್ತ್ರುತ್ಯಾರ್ಹವೆನಿಸುವಂತಹುದುಚೆನ್ನಮ್ಮಳ ಮೂಲಕ ಮಹಿಳೆಯರ ಜಾಣ್ಮೆ,ದಿಟ್ಟತನಕಷ್ಟ ಸಹಿಷ್ಣುತೆಕ್ಲಿಷ್ಟಕರ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಗುಣದೇಶಭಕ್ತಿ,ಮುಂದಾಗುವ ಅಪಾಯಗಳನ್ನು ಮೊದಲೇ ಊಹಿಸುವ ಶಕ್ತಿ.... ಗಳನ್ನು  ದೊಡ್ಡಾಟದಲ್ಲಿಅಳವಡಿಸಿಕೊಳ್ಳಲಾಗಿದೆಪುರುಷ ಪಾರಂಪರ್ಯವನ್ನು ಮುರಿದು ಸ್ತ್ರೀ ಪ್ರಧಾನ ದೊಡ್ಡಾಟವನ್ನು ಕಟ್ಟಿಕೊಟ್ಟಿರುವುದೇ ಜಾನಪದ ರಂಗಪರಂಪರೆಯಲ್ಲಿ ಕ್ರಾಂತಿಕಾರಕ ಎನ್ನುವ ಬದಲಾವಣೆಯಾಗಿದೆ.

ಮಾತುಗಾರಿಕೆಯಲ್ಲಿ ಪರಿಷ್ಕರಣೆ : ಸಾಂಪ್ರದಾಯಿಕ ದೊಡ್ಡಾಟದಲ್ಲಿ ಹಾಡು-ಸಂಗೀತಗಳ ಅಬ್ಬರದಲ್ಲಿಪಾತ್ರಗಳ ಮಾತುಗಳು ಕ್ಷೀಣವೆನಿಸುತ್ತವೆಆದರೆ  ...ಕಿತ್ತೂರು ಚೆನ್ನಮ್ಮ ಪ್ರಯೋಗದ ವಿಶೇಷತೆಏನೆಂದರೆ ಹಾಡುಗಳನ್ನು ಅಗತ್ಯಕ್ಕೆ ತಕ್ಕಷ್ಟೇ ಬಳಸಿ ಸಂಭಾಷಣೆಗಳ ಮೂಲಕ ಇಡೀ ದೊಡ್ಡಾಟವನ್ನುಕಟ್ಟಿಕೊಡಲಾಗಿದೆ.  ಕೇವಲ ಹಾಡು-ಸಂಗೀತ ಪ್ರಧಾನವಾದ ದೊಡ್ಡಾಟ ರಂಗಪ್ರಕಾರವನ್ನು ಪರಿಷ್ಕರಿಸಿಕಥಾ ನಿರೂಪಣೆಗೆ ಅತ್ಯಗತ್ಯವಾದ ಸಂಭಾಷಣೆಗಳನ್ನು ಬಳಸಿ ಪ್ರೇಕ್ಷಕರ ಗ್ರಹಿಕೆಗೆ ಸರಳವಾಗಿಸಂವಹನವಾಗುವಂತೆ ಮಾಡಿದ್ದು  ದೊಡ್ಡಾಟದ ಬಹುದೊಡ್ಡ ಸಕಾರಾತ್ಮಕ ಅಂಶವಾಗಿದೆಮೂಲದೊಡ್ಡಾಟದಲ್ಲಿ ಕೆಳುತ್ತೇನೆ ಹೇಳುವಂತವನಾಗು... ಹೇಳುತ್ತೇನೆ ಕೇಳುವಂತವನಾಗು.. ಎನ್ನುವಮಾತುಗಳು ತುಂಬಾ ಸಲ ಪುನರಾವರ್ತನೆಗೊಂಡು ಕೇಳುಗರಲ್ಲಿ ಏಕತಾನತೆಯನ್ನುಂಟು ಮಾಡುತ್ತವೆ. ಏಕತಾನತೆಯನ್ನು .... ಚೆನ್ನಮ್ಮ ದೊಡ್ಡಾಟದಲ್ಲಿ ಕಡಿತಗೊಳಿಸಿ ಅಗತ್ಯವಿದ್ದಾಗ ಅಪರೂಪಕ್ಕೆ ಮಾತು ಬಳಸಿದ್ದು ಉತ್ತಮವಾಗಿದೆಅದೇ ರೀತಿ ಪ್ರಾಸಬದ್ದತೆ ಎನ್ನುವುದು ದೊಡ್ಡಾಟ ಶೈಲಿಯಗುಣವಿಶೇಷಪ್ರತಿ ಪಾತ್ರವೂ ತನ್ನ ಒಂದು ಸಂಭಾಷಣೆಯನ್ನು ಪೂರ್ಣಗೊಳಿಸುವ ಮುನ್ನ ಪ್ರಾಸಬದ್ಧಶಬ್ದಗಳಿಂದ ಮುಕ್ತಾಯ ಮಾಡುತ್ತವೆಉದಾಹರಣೆಗೆ... ಕಾಂತಾ ನನ್ನ  ಮನಸ್ಸೀಗ ಶಾಂತಾಅಲ್ಲವೆಕಾಂತೆ ನೀ ಬಲು ಗುಣವಂತೆಹೋಗಿ ಬಾ ಕಂದ ನಿನ್ನ ಮಾತು ಬಲು ಚೆಂದ,.... ಹೀಗೆ ಪ್ರಾಸಬದ್ದತೆಪ್ರತಿಯೊಂದು ಪಾತ್ರದ ಮೂಲಕ ಇಡೀ ನಾಟಕದಾದ್ಯಂತ ಪ್ರಸ್ತಾಪಗೊಳ್ಳುತ್ತದೆಮೂಲದೊಡ್ಡಾಟಗಳಲ್ಲಿ ಕಡಿಮೆ ಸಂಭಾಷಣೆಗಳಿದ್ದುದರಿಂದ ಪ್ರಾಸ ಎನ್ನುವುದು  ಅತೀ ಎನ್ನಿಸುವಂತಿದ್ದವು.ಆದರೆ....ಚೆನ್ನಮ್ಮ  ನಾಟಕವನ್ನು ಸಂಭಾಷಣಾ ಪ್ರಧಾನ ನಾಟಕವಾಗಿಸಿದ್ದರಿಂದ ಪ್ರತಿಸಂಭಾಷನೆಯ ಅಂತ್ಯದ ಪ್ರಾಸಬದ್ದತೆ ಕೇಳುಗರಿಗೆ ಭಾರವೆನಿಸದೇ ಸೋಜಿಗವೆನ್ನಿಸುವಂತಿದ್ದವು.ಸಂಭಾಷಣೆಗಳ ರಚನೆ  ನಾಟಕಕ್ಕೆ ಒಂದು ರೀತಿಯ ಪೋರ್ಸನ್ನು ಕೊಟ್ಟಿವೆ.

ವೈಚಾರಿಕತೆಯ ಅಳವಡಿಕೆ : ಜಾನಪದ ರಂಗಭೂಮಿಯಲ್ಲಿ ವೈಚಾರಿಕತೆಯ ಕೊರತೆ ಕಂಡುಬರುತ್ತದೆ.ಆಧುನಿಕ ರಂಗಭೂಮಿಯ ಹಾಗೆ ವಿಚಾರಪೂರ್ಣ ತಾರ್ಕಿಕ ನಾಟಕಗಳು ದೊಡ್ಡಾಟದಲ್ಲಿ ಇರುವುದಿಲ್ಲ.ಆಧುನಿಕ ರಂಗಭೂಮಿಯವರು ಪೌರಾಣಿಕ ವಸ್ತುಗಳನ್ನು ಆಯ್ದು ನಾಟಕವಾಗಿ ಕಟ್ಟಿದರೂ ಪೌರಾಣಿಕರೂಪಕಗಳಲ್ಲಿ ಸಾಂಕೇತಿಕವಾಗಿಯಾದರೂ ಪ್ರಸ್ತುತತೆಯನ್ನು ಚರ್ಚಿಸುತ್ತಾರೆಗ್ರಾಮೀಣ ಮೂಲದಅನಕ್ಷರಸ್ತ ಶ್ರಮಿಕ ಜನಾಂಗ ಬೆಳೆಸಿಕೊಂಡು ಬಂದ ಬಯಲಾಟಗಳಲ್ಲಿ  ವೈಚಾರಿಕತೆ ಅಥವಾ ಬೌದ್ಧಕಪ್ರಕರತೆ ಹಾಗೂ ತಾತ್ವಿಕ ನಿಖರತೆ ಎನ್ನುವುದಕ್ಕೆ ಅವಕಾಶವೇ ಇಲ್ಲವಾಗಿತ್ತು ಕೊರತೆಯನ್ನುಮನಗಂಡ ಸುಶಿಕ್ಷಿತರಾದ ಎಂ.ಎಸ್.ಮಾಳವಾಡರು ...ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿ ಹಲವಾರುವೈಚಾರಿಕ ಅಂಶಗಳನ್ನು ಸೇರಿಸಿ ಐತಿಹಾಸಿಕ ವಸ್ತುವುಳ್ಳ ದೊಡ್ಡಾಟದಲ್ಲಿ ಸಮಕಾಲೀನ ಸಮಸ್ಯೆಗಳನ್ನುಚರ್ಚಿಸುತ್ತಾರೆ.

ಉದಾಹರಣೆಗೆ...   ...ಚೆನ್ನಮ್ಮ ನಾಟಕದಲ್ಲಿ ಕೋಮು ಸೌಹಾರ್ಧತೆಗೆ ಒತ್ತು  ಕೊಡಲಾಗಿದೆತನ್ನತವರಿನ ಚಿನ್ನಾಭರಣಗಳನ್ನು ಮಸೀದಿ  ನಿರ್ಮಾಣಕ್ಕೆ ಚೆನ್ನಮ್ಮ ಮುಸ್ಲೀಮರಿಗೆ ಕೊಟ್ಟು ಸರ್ವಧರ್ಮಸಮನ್ವಯದ ಮಾತಾಡುತ್ತಾಳೆಅದೇ ಸಂದರ್ಭಕ್ಕೆ ಮಾನವೀಯತೆ ಮೆರೆಯೋಣಹೃದಯಗಳಬೆಸೆಯೋಣ..ಸರ್ವಧರ್ಮೀಯರ ಬೀಡು ಕಿತ್ತೂರುಶಾಂತಿ ಸಹನೆಯ ನಾಡು... ಎನ್ನುವ ಹಾಡುಕತೆಗಾರನ ಬಾಯಿಂದ ಹೊಮ್ಮುತ್ತದೆಜೊತೆಗೆ ಭಿನ್ನಾಭಿಪ್ರಾಯ ಅಳಿಸೋಣಭಾವೈಕೈತೆಬೆಳೆಸೋಣ ಎನ್ನುವ ಸಾರ್ವಕಾಲಿಕ ಸಂದೇಶ ಕೊಡುವ ಮೂಲಕ  ನಾಟಕ ಕೋಮುಸೌಹಾರ್ಧತೆಗೆಪ್ರೇರಕವಾಗಿ ಮೂಡಿಬಂದಿದೆಕೋಮುದ್ವೇಶವನ್ನೇ ಬಿತ್ತಿ ಅಧಿಕಾರದ ಬೆಳೆ ಬೆಳೆಯುವ ಪ್ರಸ್ತುತಕೋಮುವಾದಿ ವ್ಯವಸ್ಥೆಗೆ ವಿರುದ್ಧವಾಗಿ ಎಲ್ಲಾ ಕೋಮಿನ ಜನ ಒಟ್ಟಾಗಿ ಬದುಕುವಂತೆ ಪ್ರೇರೇಪಿಸುವಸ್ತುತ್ಯಾರ್ಹ ಕೆಲಸವನ್ನು ..ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿ ಮಾಡಲಾಗಿದೆಹಾಗೂ ಕೋಮುಸಾಮರಸ್ಯ ಎನ್ನುವುದು  ಸಧ್ಯದ ತುರ್ತು ಅಗತ್ಯವೂ ಆಗಿದೆ.

ಉಳಿಗಮಾನ್ಯ ಶೋಷಣೆಯನ್ನು ವಿರೋಧಿಸಿ ದುಡಿಯುವ ವರ್ಗಗಳ ಪರ ನಿಲ್ಲುವ ಚೆನ್ನಮ್ಮನನ್ನು ದೊಡ್ಡಾಟದಲ್ಲಿ ಸಮಾನತೆಯ ಹರಿಕಾರಳನ್ನಾಗಿ ಚಿತ್ರಿಸಲಾಗಿದೆನಾಡಿನ ಅಭಿವೃದ್ದಿ ಎನ್ನುವುದು ಧನಸಂಗ್ರಹದಲ್ಲಿಲ್ಲನಾಡಿನ ಪ್ರಜೆಗಳ ಸಮೃದ್ದಿಯಲ್ಲಿದೆ.. ಎಂದು ಹೇಳುವ ಚೆನ್ನಮ್ಮ ತನ್ನ ಜನಪರಕಳಕಳಿಯನ್ನು ತೋರಿಸುತ್ತಾಳೆಜೊತೆಗೆ ಬ್ರಿಟೀಷರ ವಿಸ್ತರಣಾವಾದಸಾಮ್ರಾಜ್ಯವಾದಗಳನ್ನುವಿರೋಧಿಸುವ ಚೆನ್ನಮ್ಮ ನಾವು ಶಸ್ತ್ರಾಸ್ತ್ರಗಳನ್ನು ಆತ್ಮರಕ್ಷಣೆಗೆ ಬಳಸಿದರೆ ವಿದೇಶಿಗಳುಮಾರಣಹೋಮಕ್ಕೆ ಬಳಸುತ್ತಾರೆ... ಎಂದು ಹೇಳುತ್ತಾ ಶಸ್ತ್ರಗಳ ದುರ್ಬಳಕೆ ಕುರಿತು ಎಚ್ಚರಿಸುತ್ತಾಳೆ.ಖಡ್ಗಕ್ಕಿಂತ ಕ್ರೂರವಾದ ಬ್ರಿಟೀಷ್ ಸಂಸ್ಕೃತಿಯ ಬಗ್ಗೆ ನಾವು ಎಚ್ಚರದಿಂದಿರಬೇಕುವಿದೇಶಿ ವಿಕೃತಸಂಸ್ಕೃತಿಯನ್ನು ಎಲ್ಲರೂ ವಿರೋಧಿಸಲೇಬೇಕು ಎನ್ನುವ ಮಾತುಗಳನ್ನು ಚೆನ್ನಮ್ಮಳಿಂದಹೇಳಿಸಲಾಗಿದೆದೇಸಿ ಸಂಸ್ಕೃತಿಯನ್ನು ತುಳಿದು ವಿದೇಶಿ ವಿಕೃತ ಸಂಸ್ಕೃತಿ ದೇಶಾದ್ಯಂತ ಅಟ್ಟಹಾಸಮಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಚೆನ್ನಮ್ಮ ಹೇಳುವ  ಮಾತುಗಳು ಅತ್ಯಂತ ಸೂಕ್ತವಾಗಿವೆ.ಮನುಷ್ಯನ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯಕ್ಕಿಂತ ಮೇಲು ಯಾವುದೂ ಇಲ್ಲ ಎಂದು ಹೇಳುವಚೆನ್ನಮ್ಮ ನೋಡುಗರಲ್ಲಿ ಸ್ವಾಭಿಮಾನದ ಕಿಚ್ಚನ್ನು ಪ್ರೇರೇಪಿಸುತ್ತಾಳೆಅದೇ ಸಂದರ್ಭಕ್ಕೆ ತೊಲಗಲಿಪರತಂತ್ರದೊರೆಯಲಿ ಸ್ವಾತಂತ್ರ್ಯ.. ಎನ್ನುವ ಹಾಡು ಕೇಳುಗರೆದೆಯಲ್ಲಿ ಪ್ರತಿದ್ವನಿಸುತ್ತದೆ.ಒಟ್ಟಾರೆಯಾಗಿ ಕಿತ್ತೂರು ಚೆನ್ನಮ್ಮನನ್ನು  ನೆಪವಾಗಿರಿಸಿಕೊಂಡು ಪ್ರಸ್ತುತ ಸಂದರ್ಭದ ಅಗತ್ಯಕ್ಕೆಸ್ಪಂದಿಸುವಂತೆ ಸಂಭಾಷಣೆಗಳನ್ನು ಕಟ್ಟಿಕೊಡಲಾಗಿದೆಐತಿಹಾಸಿಕ ನಾಟಕದಲ್ಲಿ ಸಮಕಾಲೀನವಿಚಾರಗಳನ್ನು ಪ್ರಸ್ತುತಪಡಿಸುತ್ತಾ ಸಾರ್ವಕಾಲಿಕ ನಾಟಕವನ್ನಾಗಿಸುವಲ್ಲಿ ಎಂ.ಎಸ್.ಮಾಳವಾಡರುಶ್ರಮಿಸಿದ್ದಾರೆವೈಚಾರಿಕ ನೆಲೆಯಲ್ಲಿ ಕಿತ್ತೂರು ಚೆನ್ನಮ್ಮ ದೊಡ್ಡಾಟವನ್ನು ಪ್ರಸ್ತುತಪಡಿಸಿದ್ದಾರೆ.

ಹೀಗೆ... ಪಾರಂಪರಿಕ ದೊಡ್ಡಾಟಗಳಿಗೆ ಹೋಲಿಸಿದರೆ ವೀರ ರಾಣಿ ಕಿತ್ತೂರು ಚೆನ್ನಮ್ಮ ದೊಡ್ಡಾಟವುಹಲವಾರು ಆಯಾಮಗಳಲ್ಲಿ ಪರಿಷ್ಕರಣೆಗೊಂಡಿದೆಸುದೀರ್ಘ ಕಾಲಾವಧಿಯನ್ನು ಕಡಿತಗೊಳಿಸಿಮೂರುವರೆ ಗಂಟೆಯೊಳಗೆ ಇಡೀ ನಾಟಕವನ್ನು ಪ್ರದರ್ಶಿಸಲಾಗಿದೆಆದರೂ ಇನ್ನೂ  ಪ್ರಯೋಗಇನ್ನೂ ಪರಿಪೂರ್ಣ ಎನ್ನಿಸುವುದಿಲ್ಲಇನ್ನೂ ತಲಸ್ಪರ್ಷಿ ಪರಿಷ್ಕರಣೆಯ ಅಗತ್ಯವಿದೆ ಎಂದೆನಿಸುತ್ತದೆ.ಸಕಾರಾತ್ಮಕ ಅಂಶಗಳಷ್ಟೇ ನಕಾರಾತ್ಮಕ ಅಂಶಗಳೂ ಇವೆದೊಡ್ಡಾಟದ ಕಾಯಕಲ್ಪದ ಆಶಯದಿಂದಅವುಗಳನ್ನಿಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.
 
ದೊಡ್ಡಾಟದ ರಚನೆಸಂಭಾಷಣೆವೇಷಗಾರಿಕೆ ಹಾಗೂ ಹಾಡುಗಳ ಅಳವಡಿಕೆಯವರೆಗೂಎಂ.ಎಸ್.ಮಾಳವಾಡರು ಯಶಸ್ವಿಯಾಗಿದ್ದಾರೆರಂಗಸಂಘಟಕರಾಗಿಯೂ ಅವರ ಶ್ರಮಅಲ್ಲಗಳೆಯುವಂತಿಲ್ಲಆದರೆ... ಏಕಕಾಲಕ್ಕೆ ಸಕಲೆಂಟು ಜವಾಬ್ದಾರಿಗಳನ್ನು ಒಬ್ಬರೇನಿರ್ವಹಿಸಿದ್ದರಿಂದಲೋ ಏನೋ  ದೊಡ್ಡಾಟದ ನಿರ್ದೇಶನದಲ್ಲಿ ಮಾಳವಾಡರು ನಿರೀಕ್ಷಿತ ಯಶಸ್ಸನ್ನುಹೊಂದಲಾಗಿಲ್ಲಹಾಗೆ ನೋಡಿದರೆ ಜಾನಪದ ರಂಗಭೂಮಿಯಲ್ಲಿ ನಿರ್ದೇಶಕನೆನ್ನುವವನೇ ಅಪ್ರಸ್ತುತ.ಗ್ರಾಮೀಣ ಹವ್ಯಾಸಿ ರಂಗಭೂಮಿಯಲ್ಲಿ ಪೇಟಿ ಮಾಸ್ತರ್ ಇರುವಂತೆ ಜಾನಪದ ರಂಗಭೂಮಿಯದೊಡ್ಡಾಟದಲ್ಲಿ ಕತೆಗಾರನೇ ಒಂದು ರೀತಿಯಲ್ಲಿ ನಿರ್ದೇಶಕಹಾಡುಗಾರಸಂಗೀತಗಾರ ಎಲ್ಲವೂಆಗಿರುತ್ತಾನೆಆದರೆ..  ಕಥೆಗಾರ ಎನ್ನುವವ ಹೆಚ್ಚಾಗಿ ಅನಕ್ಷರಸ್ತನಾಗಿರುತ್ತಾನೆಇಲ್ಲವೇಅಕ್ಷರಸ್ತನಾಗಿದ್ದರೂ ಪಾರಂಪರಿಕ ಶೈಲಿವಸ್ತುವನ್ನೇ ಮುಂದುವರೆಸಿರುತ್ತಾನೆಪಾರಂಪರಿಕದೊಡ್ಡಾಟದ ದೌರ್ಬಲ್ಯವಿರುವುದು ಅದರ ಶೈಲಿಯಲ್ಲಲ್ಲ ಅಶಿಸ್ತಿನಲ್ಲಿವ್ಯಕ್ತಿಗತ ವೈಭವೀಕರಣಗಳುಗ್ರಾಮೀಣ ಕಲೆಯಲ್ಲಿ ವಿಜ್ರಂಭಿಸುತ್ತವೆಅಗತ್ಯ ಇರಲಿ ಬಿಡಲಿ ವೇದಿಕೆ ಮೇಲೆ ಮುಖ ತೋರಿಸುವುದು,ಪಾತ್ರಗಳು ಅತಿರೇಕವಾಗಿ ಮಾತಾಡುವುದುಮೇಳದವರು ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದುತಮ್ಮತನ ಮರೆಯುವುದು.. ಇದೆಲ್ಲಾ ಗ್ರಾಮೀಣ ಪ್ರದೇಶಗಳ ದೊಡ್ಡಾಟಗಳಲ್ಲಿ ಮಾಮೂಲುಜಾನಪದ ರಂಗಭೂಮಿಯ ಮಿತಿಗಳು ಹಾಗೂ ಆಧುನಿಕ ರಂಗಭೂಮಿಯ ಸಾಧ್ಯತೆಗಳ ಬಗ್ಗೆ ಅರಿವುಳ್ಳಎಂ.ಎಸ್.ಮಾಳವಾಡರು ದೊಡ್ಡಾಟದಲ್ಲಿ ಪರಿಷ್ಕರಣೆ ತರುವಲ್ಲಿ ಒಂದು ಹಂತದವರೆಗೂಯಶಸ್ವಿಯಾಗಿದ್ದಾರಾದರೂ ರಂಗಶಿಸ್ತನ್ನು ಅಳವಡಿಸುವುದರಲ್ಲಿ ವಿಫಲರಾಗಿದ್ದಾರೆಸುಶಿಕ್ಷಿತನಿರ್ದೇಶಕನಟರುಮೇಳದವರೆಲ್ಲಾ ಸೇರಿ ನಗರಪ್ರದೇಶದಲ್ಲಿ ದೊಡ್ಡಾಟವನ್ನು ಪ್ರದರ್ಶಿಸುತ್ತಿರುವಾಗನಾಟಕದಾದ್ಯಂತ ಶಿಸ್ತನ್ನು ಅಪೇಕ್ಷಿಸಲಾಗಿತ್ತುಆದರೆ... ಗ್ರಾಮೀಣ ಕಲಾವಿದರಷ್ಟಲ್ಲದಿದ್ದರೂ ವಿದ್ಯವಂತ ಕಲಾವಿದರು ತಮ್ಮ ನಡೆನುಡಿ ಕಲಾಪ್ರದರ್ಶನಗಳಲ್ಲಿ ಸಂಯಮ ಹಾಗೂ ಶಿಸ್ತನ್ನುರೂಢಿಸಿಕೊಳ್ಳಬೇಕಾಗಿತ್ತುಆದರೆ ಅದು ಸಾಧ್ಯವಾಗದಿದ್ದುದೇ  ದೊಡ್ಡಾಟದ ಅತೀ ದೊಡ್ಡದೌರ್ಬಲ್ಯವಾಗಿದೆ.

ವ್ಯವಸ್ಥಾಪನೆ ಜವಾಬ್ದಾರಿ ಇರುವವರು ಪ್ರದರ್ಶನ ನಡೆದಾಗಲೇ ವೇದಿಕೆ ಮೇಲೆ ಅನಗತ್ಯವಾಗಿ ಮುಖತೋರಿಸುವುದು ವ್ಯವಸ್ಥಾಪಕರ ಮಕ್ಕಳು ನಿರಾತಂಕವಾಗಿ ಎಲ್ಲರಿಗೂ ಕಾಣುವಂತೆ ವೇದಿಕೆ ಹಿಂದೆಅಕ್ಕಪಕ್ಕದಲ್ಲಿ ಚೇಷ್ಟೆಗಳನ್ನು ಮಾಡುತ್ತಾ ಓಡಾಡುವುದುಕಲಾವಿದರಲ್ಲದವರೂ ವೇದಿಕೆ ಮೇಲೆಎಡಬಲಗಳಲ್ಲಿ ಸಂಚರಿಸುವುದು... ಇಂತಹ ಅನಗತ್ಯ ಕ್ರಿಯೆಗಳನ್ನು ನಿರ್ದೇಶಕರು ನಿರ್ಬಂಧಿಸಲೇಬೇಕಿತ್ತುಹೊರಗಿನವರು ಹೋಗಲಿ ಮೇಳದವರು ನಾಟಕ ನಡೆದಾಗಲೇ ಮೊಬೈಲಿನಲ್ಲಿಮಾತಾಡುವುದು,  ಅನಗತ್ಯವಾಗಿ ಒಳಹೊರಗೆ ಓಡಾಡುವುದುಕಲಾವಿದರಿಗೆ ಮೈಕಿನ ಸಾಧ್ಯತೆಹಾಗೂ ಸಾಮರ್ಥ್ಯದ ಅರಿವಿಲ್ಲದಿರುವುದುಪ್ರದರ್ಶನ ನಡೆದಾಗಲೇ ಹಲವಾರು ಬಾರಿ ಮೈಕನ್ನುಸರಿಪಡಿಸುವುದು... ಇಂತಹ ಅನೇಕ ಬೇಜವಾಬ್ದಾರಿಯ ಅತಿರೇಕಗಳು ನಾಟಕದ ಸ್ವಾರಸ್ಯವನ್ನುಹಾಳುಮಾಡಿದವುದೊಡ್ಡಾಟ ಎನ್ನುವುದು ನಿಜವಾಗಿ ಪರಿಷ್ಕರಣೆಗೆ ಒಳಗೊಳ್ಳಬೇಕಾದಲ್ಲಿ ಅದನ್ನುರಂಗಶಿಸ್ತಿನ ಮೂಲಕ ಮಾಡಲೇಬೇಕು ಎನ್ನುವುದು  ಪ್ರದರ್ಶನದಿಂದ ಮನದಟ್ಟಾಗುತ್ತದೆ.

 ದೊಡ್ಡಾಟದಲ್ಲಿ ನಟಿಸಿದ ಕಲಾವಿದರಿಗೆ ತಾಲಿಮಿನ ಕೊರತೆ ಕಂಡುಬರುತ್ತದೆಲೀಲಾಜಾಲವಾಗಿಅಭಿನಯಿಸಲು ಕಲಿಯಬೇಕಾಗಿದೆ.  ಇಡೀ ನಾಟಕದಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ನೋಡುಗರಗಮನವನ್ನು ಸೆಳೆದದ್ದು ಚೆನ್ನಮ್ಮನ ಪಾತ್ರದಾರಿ ಬಿ.ನಂದಾಮಲ್ಲಸರ್ಜನಾಗಿ ಬಸವರಾಜ ಹಾಗೂಶಿವಲಿಂಗರುದ್ರಸರ್ಜಾನಾಗಿ ಸಿದ್ದಾರೂಢ ಬಡಿಗೇರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲುಪ್ರಯತ್ನಿಸಿದ್ದಾರೆಮಹಾಪ್ರಧಾನಿಯಾಗಿ ನಟಿಸಿದ ರಾಜಶೇಖರ್ ಮಾಳವಾಡರ ನಟನೆಚೆನ್ನಾಗಿತ್ತಾದರೂ ವೇಶಭೂಷಣಗಳ ಭಾರದಲ್ಲಿ ನಟನೆ ಸೊರಗಿದಂತೆನಿಸಿತುಸಂಗೊಳ್ಳಿ ರಾಯಣ್ಣನಾಗಿಬಸವರಾಜ ದೊಡಮನಿ ಅಭಿನಯ ಸೊಗಸಾಗಿತ್ತಾದರೂ ಮಾತಿನ ಏರಿಳಿತಗಳನ್ನುರೂಢಿಸಿಕೊಳ್ಳಬೇಕಾಗಿತ್ತು ನಾಟಕದಲ್ಲಿ ಥ್ಯಾಕರೆ ಹಾಗೂ ಮನ್ರೋ ಬ್ರಿಟಿಷ್ ಅಧಿಕಾರಿಗಳನ್ನುಬಪೂನ್ಗಳ ಹಾಗೆ ತೋರಿಸಿದ್ದು ನೋಡುಗರಿಗೆ ಖುಷಿಕೊಡುತ್ತದಾದರೂ ಅದುಅವಾಸ್ತವವೆನಿಸುವವಂತೆ ಮೂಡಿ ಬಂದಿದೆಸಾರಥಿಯಾಗಿ ಶರಣಪ್ಪ ಅಯ್ಯಣ್ಣವರ ತನ್ನಟೈಂಸೆನ್ಸನಿಂದಾಗಿ ಪಾತ್ರವನ್ನು ಗೆಲ್ಲಿಸಿದ್ದಾರೆಅಭಿನಯದ ಜೊತೆಗೆ ಪ್ರತಿ ಪಾತ್ರಗಳಿಗೂ ಕಾಸ್ಟೂಮ್ಸರಿಹರ್ಸಲ್ಸ ಮಾಡಿಸದೇ ಇರುವುದರಿಂದ ಪ್ರಮುಖ ಪಾತ್ರಗಳು ವೇಶಭೂಷಣದ ಭಾರದಿಂದ ಬಳಲಿಅಭಿನಯದಲ್ಲಿ ಸೊರಗಿದಂತಿವೆಚೆನ್ನಮ್ಮನನ್ನು ಹೊರತು ಪಡಿಸಿ ಎಲ್ಲಾ ಕಲಾವಿದರೂಭಾವಾಭಿನಯದಲ್ಲಿ ಇನ್ನೂ ಪಳಗಬೇಕಿದೆನಿರ್ದೇಶಕರು ಬ್ಲಾಕಿಂಗ್ಮೂವಮೆಂಟ್ಎಂಟ್ರಿ-ಎಕ್ಸಿಟ್,ಸ್ಟೇಜ್ ಬ್ಯಾಲನ್ಸಿಂಗ್ಗಳನ್ನು ಕರಾರುವಕ್ಕಾಗಿ ಬಳಸಬೇಕಾಗಿದೆಪ್ರತಿಯೊಂದು ಪಾತ್ರವೂ ಮೈಕಿನಮುಂದೆ ನಿಂತು ಸರದಿಯ ಪ್ರಕಾರ ಸಂಭಾಷಣೆ ಹೇಳಿದರೆ ನಾಟಕವೆನಿಸುವುದಿಲ್ಲಸಹಜತೆಬರಬೇಕೆಂದರೆ ಪಾತ್ರಗಳಿಗೆ ಅಗತ್ಯ ಚಲನೆ ಬಲು ಮುಖ್ಯವೆನಿಸುತ್ತದೆಅಭಿನಯ ವಿಭಾಗದಲ್ಲಿನಿರ್ದೇಶಕರು ಇನ್ನೂ ತುಂಬಾ ಪರಿಶ್ರಮ ವಹಿಸಬೇಕಿದೆಆಧುನಿಕ ರಂಗಭೂಮಿಯ ಅಭಿನಯತಂತ್ರಗಳನ್ನು ದೊಡ್ಡಾಟದಲ್ಲಿ ಅಳವಡಿಸಿಕೊಂಡರೆ  ನಾಟಕವನ್ನು ಜನಪ್ರೀಯಗೊಳಿಸಬಹುದಾಗಿದೆ.ಏನೇ ಆದರೂ ಕಾಲೇಜು ಓದುವಅಭಿನಯಕ್ಕೆ ಹೊಸದಾಗಿ ತೊಡಗಿಸಿಕೊಂಡಿರುವ ಯುವಕರನ್ನುಹತ್ತೇದಿನಗಳ ಕಾರ್ಯಾಗಾರದಲ್ಲಿ ತರಬೇತುಗೊಳಿಸಿ ದೊಡ್ಡಾಟದಂತಹ ಕ್ಲಿಷ್ಟಕರವಾದ ನಾಟಕವನ್ನುಪ್ರದರ್ಶಿಸಿದ್ದು ನಿಜಕ್ಕೂ ಅಭಿನಂದನೀಯವಾಗಿದೆ.                   
ದೊಡ್ಡಾಟಕ್ಕೆ ಪೂರಕವಾಗಿ ತಾಂತ್ರಿಕತೆಯನ್ನು ಚೆನ್ನಾಗಿ ಬಳಸಿಕೊಳ್ಳಬಹುದಾಗಿತ್ತುನಾಟಕದಲ್ಲಿ ಅಗತ್ಯಮೂಡ್ ಸೃಷ್ಟಿಸಲು ಬೆಳಕು ವಿನ್ಯಾಸದ ಅಗತ್ಯವಿತ್ತುಆದರೆ ಜನರಲ್ ಲೈಟಿಂಗ್ ಮಾಡಿಕೊಂಡಿದ್ದು,ಬೆಳಕಿನಲ್ಲಿ ಯಾವುದೇ ವ್ಯತ್ಯಾಸ ಇಲ್ಲದೇ ಇರುವುದುದೃಶ್ಯಗಳ ನಡುವೆ ಬ್ಲಾಕ್ಔಟ್ಗಳನ್ನು ಕೊಡದೇಇರುವುದುಪೇಡ್ಇನ್ ಪೇಡ್ಔಟ್ಗಳನ್ನು ಬಳಸದೇ ಇರುವುದು  ದೊಡ್ಡಾಟದ ಬಹು ದೊಡ್ಡಕೊರತೆಯಾಗಿತ್ತು.  ಮೈಕ್ ವ್ಯವಸ್ಥೆ ಅದೆಷ್ಟು ಅದ್ವಾನ ಆಗಿತ್ತೆಂದರೆ ಪ್ರತಿ ಪಾತ್ರಗಳು ಮೈಕನ್ನುಹುಡುಕಿಕೊಂಡು ಬಂದು ಮಾತಾಡಿ ಹಿಂದೆ ಸರಿಯಬೇಕಾಗಿತ್ತುಇದು ನಿಜಕ್ಕೂಆಭಾಸವನ್ನುಂಟುಮಾಡಿತುನಾಟಕದ ತಯಾರಿಗೆ ಕೊಟ್ಟಷ್ಟೇ ಮಹತ್ವವನ್ನು ನಿರ್ದೇಶಕರು ತಾಂತ್ರಿಕ ಅಂಶಗಳಿಗೂ ಕೊಡಬೇಕಾಗಿತ್ತುಹಿಮ್ಮೇಳದವರು ಇನ್ನೂ ಹಾಡು ಸಂಗೀತದಲ್ಲಿಪಳಗಬೇಕಾಗಿದೆಹಾರ್ಮೋನಿಯಂ ನುಡಿಸುವ ಶಂಕ್ರಪ್ಪ ಸಂಕಣ್ಣವರಿಗೆ ಇನ್ನೂ ದೊಡ್ಡಾಟದ ನಾಡಿಮಿಡಿತ ಗೊತ್ತಾಗಿಲ್ಲದೊಡ್ಡಾಟದ ಅತೀ ಮುಖ್ಯ ಸಂಗೀತ ಸಾಧನವೆಂದರೆ ಮದ್ದಲೆಕೇಳುಗರಎದೆಬಡಿತ ಹೆಚ್ಚಿಸುವ ಕೆಲಸವನ್ನು ಮದ್ದಲೆ ಮಾಡುತ್ತದೆಆದರೆ ಚಂದ್ರಶೇಖರ್ ಗುರೆಣ್ಣನವರಬಾರಿಸುತ್ತಿದ್ದ ಮದ್ದಲೆ ನಾದ ಅದ್ಯಾಕೋ ಮಂದವಾಗಿತ್ತುಯುದ್ದದ ದೃಶ್ಯದಲ್ಲೂ ಸಹ ಮದ್ದಲೆವಿಜ್ರಂಭಿಸಲಿಲ್ಲಹೇಮಂತ ಭಜಂತ್ರಿಯವರ ಶಹನಾಯಿ ವಾದನ ಕೆಲವೊಮ್ಮೆ ಹಾಡಿನ ಪಿಚ್ ಮೀರಿಹೋಗುತ್ತಿತ್ತುಕಥೆಗಾರನಾಗಿ ವಿರೇಶ ಬಡಿಗೇರ್ ಹಾಗೂ ಹಿಮ್ಮೇಳದಲ್ಲಿ ಬಸವರಾಜ ಶಿಗ್ಗಾಂವಿ ಇಬ್ಬರೂ ತಮ್ಮ ಶಕ್ತಿ ಮೀರಿ ಹಾಡುಗಳಿಗೆ ಜೀವ ಕೊಡಲು ಪ್ರಯತ್ನಿಸಿದ್ದಾರೆ ಹೊಸ ತಲೆಮಾರಿನಹಾಡು ಸಂಗೀತದ ಮೇಳದವರಿಗೆ ಇನ್ನೂ ಅನುಭವದ ಕೊರತೆ ಇದ್ದು ಹಿರಿಯ ತಲೆಮಾರಿನವರಿಂದಹೆಚ್ಚಿನ ತರಬೇತಿಯ ಅಗತ್ಯವಿದೆ ಎಂದೆನಿಸುತ್ತದೆ.

ರಂಗತಂತ್ರಗಳ ಕೊರತೆಯನ್ನು ಮುಚ್ಚಿಹಾಕಿದ್ದು ಮರಿತಮ್ಮಪ್ಪ ಸುಣಗಾರರವರ ವಸ್ತ್ರವಿನ್ಯಾಸ.ಪ್ರತಿಯೊಂದು ಪಾತ್ರಗಳನ್ನು ವೇಶಭೂಷಣಗಳು ಕಳೆಗಟ್ಟಿಸಿದ್ದವುಸಮರ್ಪಕವಾಗಿ ಬಣ್ಣ ಬಣ್ಣದಬೆಳಕನ್ನು ಕೊಟ್ಟಿದ್ದರೆ ಅದರ ಖದರ್ರೇ ಅದ್ಬುತವಾಗಿರುತ್ತಿತ್ತುದೊಡ್ಡಾಟದ ದುರಂತವೇನೆಂದರೆ ಮೇಕಪ್ಮಾಡುವವರೇ ಇಲ್ಲದಿರುವುದುನಾಟಕಗಳಿಗೆ ಮೇಕಪ್ ಮಾಡುವ ವರ್ಣಾಲಂಕಾರದ ಹಿರಿಯಕಲಾವಿದ ಗಜಾನನ ಮಹಾಲೆಯವರನ್ನು ಕರೆತಂದು  ದೊಡ್ಡಾಟಕ್ಕೆ ಮೇಕಪ್ ಮಾಡಿಸಲಾಗಿತ್ತು.ಮಹಾಲೆಯವರ ಕೌಶಲದಲ್ಲಿ ಪಾತ್ರಗಳು ಕಳೆಗಟ್ಟಿದವುಆಂಗಿಕವಾಚಿಕ ಹಾಗೂ ಸಾತ್ವಿಕ ಅಭಿನಯದಕೊರತೆಯನ್ನು ಆಹಾರ್ಯಾಭಿನಯ ತುಂಬಿಕೊಟ್ಟಿತುನೋಡುಗರ ಕಣ್ಮನ ಸೆಳೆಯಿತು.

ವೀರ ರಾಣಿ ಕಿತ್ತೂರು ಚೆನ್ನಮ್ಮ ದೊಡ್ಡಾಟ ಇನ್ನೂ ಸೊಗಸಾಗಿ ಮೂಡಿ ಬರಬೇಕೆಂದರೆ ಒಂದಿಷ್ಟುಎಡಿಟ್ ಮಾಡಿಅನಗತ್ಯ ದೃಶ್ಯಗಳನ್ನು ತೆಗೆದು ಹಾಕಲೇಬೇಕಾಗಿದೆನಾಟಕದ ಕೊನೆಕೊನೆಗೆ ಚೆನ್ನಮ್ಮತೀರಿಕೊಂಡ ಸುದ್ದಿ ತಿಳಿದ ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರು ಗೋಳಾಡುವುದು ತುಂಬಾದೀರ್ಘವೆನಿಸಿ ಪಕ್ಕಾ ಮೆಲೋಡ್ರಾಮಾ ಆಗಿದೆ ಇಡೀ ದೃಶ್ಯವನ್ನು ಪರಿಷ್ಕರಿಸುವುದುತ್ತಮ.ಅಭಿನಯ ಹಾಗೂ ತಾಂತ್ರಿಕತೆಯಲ್ಲಿ ಇನ್ನೂ ಶ್ರಮವಹಿಸಬೇಕಾಗಿದೆಈಗಾಗಲೇ ಸ್ಕ್ರಿಪ್ಟನಲ್ಲಿಪರಿಷ್ಕೃತಗೊಂಡ  ದೊಡ್ಡಾಟ ಪ್ರದರ್ಶನದಲ್ಲಿ ಕೂಡಾ ಇನ್ನೂ ಪರಿಷ್ಕರಣೆಗೆ ಒಳಗಾಗಬೇಕಾಗಿದೆ.ಮರು ಪ್ರದರ್ಶನಗಳಲ್ಲಿ ಪ್ರಯತ್ನಿಸಬಹುದಾಗಿದೆ


ದೊಡ್ಡಾಟದ ಪರಿಷ್ಕರಣೆ ಎಂದರೆ ಕೇವಲ ಪ್ರದರ್ಶನದ ಅವಧಿಯಲ್ಲಿ,ರಚನೆಯಲ್ಲಿಶೈಲಿಯಲ್ಲಿಹಾಡು ಸಂಗೀತದ ಅಳವಡಿಕೆಯಲ್ಲಿಮಾತ್ರ ಮಾಡಿದರೆ ಸಾಲದುಹೊಸ ತಲೆಮಾರಿನ ಜನರಿಗೆದೊಡ್ಡಾಟವನ್ನು ತಲುಪಿಸಬೇಕೆಂದರೆ ದೊಡ್ಡಾಟದ ಶೈಲಿಯ ಜೊತೆಗೆಆಧುನಿಕ ರಂಗಭೂಮಿಯ ರಂಗಶಿಸ್ತುಅಭಿನಯಆಧುನಿಕತಾಂತ್ರಿಕತೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಬೇಕಾಗಿದೆನಿಟ್ಟಿನಲ್ಲಿ ಗ್ರಾಮರಂಗ ತಂಡವು ಮುನ್ನಡೆದರೆ,ಎಂ.ಎಸ್.ಮಾಳವಾಡರು  ನಾಟಕವನ್ನು ಇನ್ನೂ ಪರಿಷ್ಕರಿಸಿದರೆದೊಡ್ಡಾಟದ ಪರಂಪರೆಗೆ ಕಾಯಕಲ್ಪ ಕೊಡುವಂತಹ ಹೊಸಮಾರ್ಗವೊಂದನ್ನು ಹಾಕಿಕೊಟ್ಟಂತಾಗುತ್ತದೆಮತ್ತು ದೊಡ್ಡಾಟದಉಳಿವಿಗಾಗಿ ಅಂತಹ ಹೊಸ ಹೆಜ್ಜೆಗಳ ಅಗತ್ಯತೆಯೂ ಇದೆಏನೇಆಗಲಿ ಜಾನಪದ ರಂಗಭೂಮಿ ಮತ್ತೆ ತನ್ನ ಮೊದಲಿನಜನಪ್ರೀಯತೆಯನ್ನು ಉಳಿಸಿಕೊಳ್ಳಬೇಕಿದೆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಇಡುತ್ತಿರುವ ಗ್ರಾಮರಂಗ ರಂಗತಂಡಕ್ಕೂ ಹಾಗೂ ಅದರರೂವಾರಿಗಳಾದ ಎಂ.ಎಸ್ಮಾಳವಾಡರಿಗೂ ಅಭಿನಂದನೆಗಳನ್ನುಹೇಳಲೇಬೇಕಿದೆ.

ಕಾಮೆಂಟ್‌ಗಳಿಲ್ಲ: