ಮಂಗಳವಾರ, ಜನವರಿ 10, 2017

ಮೈಸೂರು ದಸರಾ – ಸಾಂಸ್ಕೃತಿಕ ಮಹಾಪಠ್ಯ

  


ಪ್ರೊ.ಕಿಕ್ಕೇರಿ ನಾರಾಯಣ
profile

ಸೌಜನ್ಯ: http://kikkerinarayana.in/

 ಮೈಸೂರು ದಸರಾ ಮೆರವಣಿಗೆಯನ್ನು ನೋಡುವಾಗಲೆಲ್ಲ ನನಗೆ ದ.ರಾ.ಬೇಂದ್ರೆಯವರ ಖಂಡಖಂಡಗಳ ಸಾವ್ರಭೌಮರ ನೆತ್ತಿಯ ಕುಕ್ಕಿ ಸಾಗುವ ಹಾರುವ ಕಾಲದ ಹಕ್ಕಿ ನೆನಪಾಗುತ್ತದೆ. ಮೈಸೂರಿನ ನೆಲ, ಕಳೆದ ೪೦೦ ವರ್ಷಗಳಿಗೂ ಮಿಕ್ಕಿ ಮರೆವಣಿಗೆಯಾ ಹೆಜ್ಜೆ ಗುರುತುಗಳನ್ನು ಬಿಚ್ಚಿಟ್ಟಿದೆ. ನೂರಾರು ವರ್ಷ ಇತಿಹಾಸದ ರಾಜ ಮಹಾರಾಜರ ದಸರಾ ಇಂದೂ ಜನತಾ ದಸರವಾಗಿ ಪರಿವರ್ತಿತಗೊಂಡ ರೀತಿ ನನಗೆ ತುಂಬ ಕುತೂಹಲಕಾರಿ ಅನ್ನಿಸುತ್ತಿದೆ. ಅಂದಿನ ರಾಜಪ್ರಭುತ್ವದಿಂದ ಇಂದಿನ ಪ್ರಜಾಪ್ರಭುತ್ವದ ದಸರಾ ಆಗಿದೆ. 

 ರಾಜಾಧಿಕರ ಪ್ರಜಾ ಅಧಿಕಾರ ಉದ್ದಾರ ಮಾಡಿದ ಮಲೆಮಾದೇಶ್ವರ, ಮಂಟೆಸ್ವಾಮಿಗಳ ಸಹಾಯವನ್ನೂ ಅರಸರು ಮರೆತಿಲ್ಲ. ಇಂದೂ ದಸರಾ ಸಮಯದಲ್ಲಿ ಅರಮನೆಯಲ್ಲಿ ಅವರಿಗೆ ಸಾಂಕೇತಿಕ ಮರ್ಯದ ಸಲ್ಲುತ್ತದೆ. ಒಂದು ರಾಜ್ಯ್ವವನ್ನು ಕಟ್ಟುವುದೆಂದರೆ ಎಲ್ಲಾ ಜನತೆಯ ಸಹಾಯಬೇಕೆಂಬುದನ್ನು ಮೈಸೂರು ರಾಜರು ಅರಿತಿದ್ದರು. ಇವರ ರಾಜ್ಯದಲ್ಲಿ ಜೇನು ಕುರುಬ, ಬೆಟ್ಟಕುರುಬ, ಎರವ ಇತ್ಯಾದಿ ಬುಡಕಟ್ಟು ಜನಾಂಗಗಳ ಮೇಲೆ ನೇರವಾಗಿ ಯಾವ ಬಂಧನವನ್ನೂ ಹೇರದೆ ಕಾಡಿನ ಉತ್ಪನ್ನಗಳಲ್ಲಿ ಕೆಳಭಾಗ ಕಾಣಿಕೆಯನ್ನು ಪಡೆಯುತ್ತಿದ್ದರು.

ಇನ್ನೊಂದು ಮುಖ್ಯವಾದ ವಿಚಾರ ಬೆಳಕಿಗೆ ಬಂದದ್ದೆಂದರೆ ಈ ರಾಜರು ಬುಡಕಟ್ಟು ಜನಾಂಗದ ಮಾವುತರನ್ನೇ ಕರೆಸಿಕೊಂಡು ದಸರಾ ಮೆರವನಿಗೆಯಾಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡಿದ್ದು. ಈಗ ಮೈಸೂರು ದಸರಾಗೆ ೪೦೧ ವರ್ಷಗಳಾಗಿವೆ. ಅಷ್ಟು ವರ್ಷಗಳಿಂದಲೂ ಅಂಬಾರಿ ಹೊರುವ ಮತ್ತು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳನ್ನು ನಡೆಸುವ ಮಾವುತರು ಜೇನುಕುರುಬರೇ ಆಗಿದ್ದರು ಎಂಬುದರಿಂದಲೇ ದಮನಿತ್ರ ಚರಿತ್ರೆಯ ಮುಖ್ಯ ಮುಖ ಹೊರಬಂದದ್ದು. ಮೈಸೂರಿಗೆ ಸೇರಿದ ಕಾಗಿನಲ್ಲೇ ಆನೆ ಹಿಡಿದು ಪಳಗಿಸಿ ಕೆಲಸ ಮಾಡುವವರು ಇಂದಿಗೂ ಈ ಬುಡಕಟ್ಟು ಜನಾನ್ಗದವರಾದ ಮಾವುತರು ಮತ್ತು ಕಾವಾಡಿಗಳು, ಮುಸಲ್ಮಾನ ಮಾವುತರು ಇದ್ದಾರೆ.

ಪರಂಪರೆ ಮತ್ತು ಕ್ರಿಯಾವಿಧಿಗಳ ಚರಿತ್ರೆಯಲ್ಲಿ ಕೆಲವು ಅಂಶ ಬಿಟ್ಟು ಹೋಗುತ್ತವೆ. ಮತ್ತೆ ಕೆಲವು ಸೇರಿಕೊಳ್ಳುತ್ತವೆ. ಇಂದಿನ ದಸರಾದಲ್ಲಿ ಅತ್ಯಂತ ನವೀನವಾದ ತಂತ್ರಜ್ಞಾನವನ್ನು ಹೊಂದಿದ ಭವಿಷ್ಯ ಹೇಳುತ್ತದೆ. ವಿಜ್ಞಾನವನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಸಾಂಪ್ರದಾಯಿಕ ಜಾನಪದ ನೃತ್ಯ ಹಾಡುಗಳಲ್ಲಿ ಹಳತನ್ನು ಹೊಸದಾಗಿಸಿ ಮಾರ್ಪಡಿಸಿಕೊಂಡು ಪ್ರದರ್ಶನವೀಯುವ ಕಲೆಯಾಗಿದೆ. ಬಹಮಾಧ್ಯಮಗಳು ಜನಪವನ್ನು ಪಾಪ್ ಸಂಗೀತದೊಡನೆ ಮಿಶ್ರ ಮಾಡುವುದು ಇನ್ನೊಂದು ರೀತಿಯದು. ದಸರಾ ಈಗ ಎಲೆಕ್ಟ್ರಾನಿಕ್ಸ್ ಮಾಧ್ಯಮದಲ್ಲಿ ಪ್ರದರ್ಶನಗೋಳ್ಳುವುದರಿಂದ ಕಾಲ ಮತ್ತು ದೇಶಗಳನ್ನು ಪ್ರತ್ಯೇಕಿಸಿ ಎಲ್ಲರೂ ತಾವಿದ್ದ ಕಡೆಯೇ ವೀಕ್ಷಿಸುವಂತೆ ಆಗಿದೆ. ಈ ಕಾರಣಕ್ಕಾಗಿ ಜಾನಪದದಲ್ಲೂ ಅನೇಕ ಬದಲಾವಣೆಗಳು ಕಂಡುಬಂದಿವೆ. ಅವರ ಹಾಡುಗಾರಿಕೆ , ಕುಣಿತ , ದೇಹಭಾಷೆ ಎಲ್ಲದರಲ್ಲೂ ಬದಲಾವಣೆಯನ್ನು ಗಮನಿಸಬಹುದು. ಸಿನೆಮಾ, ನಾಟಕಗಳು ದಸರಾ ಕಾಲದಲ್ಲಿ ಹೊಸ ಆಕರ್ಷಣೆಯಾಗಿ ಪ್ರದರ್ಶನಗೊಳ್ಳುವುದು ಇತ್ತೀಚಿನ ಬೆಳವಣಿಗೆ. ದಸರಾ ಸಂದರ್ಭದಲ್ಲಿ ನಡೆಯುವ ವಿವಿಧ ಭಾಷಾ ಕವಿ ಸಮ್ಮೇಳನಗಳು ಭಾಷಾ ಸೌಹಾರ್ದತೆಗೆ ಕಾರಣವಾಗಿವೆ. ದಸರಾ ಅನ್ನುವುದು ಅನೇಕ ಪಠ್ಯಗಳನ್ನೊಳಗೊಂಡ ಆಚರಣೆ. ಆದ್ದರಿಂದಲೇ ದಸರಾ ಒಂದು ಸಾಂಸ್ಕೃತಿಕ ಬಹುಮುಖೀ ಪಠ್ಯವೂ ಆಗಿದೆ.

ಕಾಮೆಂಟ್‌ಗಳಿಲ್ಲ: