ಪ್ರೊ.ಕಿಕ್ಕೇರಿ ನಾರಾಯಣ
ಸೌಜನ್ಯ: http://kikkerinarayana.in/
“ಕತೆ ಹಿರಿದಾದರೂ ಆ ಕತೆಯ ಮೈಗೆಡಲೀಯದೆ – ಈ ಹಿಂದೆ “ಸಮಸ್ತ। ಭಾರತ’ವನ್ನು (ಹೀಗೆ) ಅಪರೂರ್ವವಾಗಿ ಸಲ್ಲುವಂತೆ (ಸ್ವಾಗತರ್ಹವಾಗುವಂತೆ) ಹೇಳಿದ ಕವೀಶ್ವರರಿಲ್ಲ. “ವರ್ಣಕ”ವು ಕತೆಯಲ್ಲಿ ಔಚಿತ್ಯ ಪಡೆಯುವಂತೆ ಹೇಳುವುದಾದರೆ – ಪಂಪನೇ ಹೇಳುವ(ಅಂಥವ)ನು ಎಂದು ಪಂಡಿತರೆ ಬಿಡದೆ ಪ್ರಶಂಸೆ ಮಾಡಲು ಈ ಆಗ ನಾನು ಈ ಪ್ರಬಂಧವನ್ನು ಹೇಳಲು ಪ್ರಾರಂಭಿಸಿದೆ (೧.೧೧)ಲಲಿತಪದ, ಪ್ರಸನ್ನ ಕವಿತಾಗುಣ – ಇವು ಎರಡೂ ಇಲ್ಲದೆ ಬರೆಯುವನೆಂದು ಕಾವ್ಯವನ್ನು ಹೇಳಿದ ಬೆಪ್ಪರ ಕೃತಿಬ೦ದವಾದರೋ ಬರೆಯುವರ (ಅಂದರೆ ಪ್ರತಿ ಎತ್ತುವರ) ಕೈಗಳ ಹಾಳು, ನುಣ್ಣನೆಯ ತಾಳೆಯ ಗರಿಗಳ ಹಾಳು, ಹೇಳಿಸಿದರೆ ಅರ್ಥದ ಹಾಳು – ಎಂಬಂತೆ (ಕಾವ್ಯವನ್ನು) ಹೇಳಿ ಬೀಗಿ ಬಿರಿದು, ಕೀರ್ತಿಗೆ ಆಶೆ ಪಡುವ ದುಷ್ಕಮಿಯೂ ಒಬ್ಬ ಕವಿ ಎಂಬ ಲೆಕ್ಕವೇ? (೧.೧೨)
‘ಪಂಪನ ಸಮಸ್ತ ಭಾರತ ಕಥಾಮೃತ’ (ಛಾಯಾನುವಾದ ಎಲ್.ಬಸವರಾಜು) ಕವಿಯ ಪೀಠಿಕೆ ವಿಭಾಗದಲ್ಲಿ ಬರುವ ಈ ಸಾಲುಗಳು ಭಾರತದ ಕಥೆಗೆ ಸಂಬಂಧ ಪಟ್ಟಿದ್ದಲ್ಲವಾದರೂ ಇದು ಒಂದು ಪರಂಪರೆಯ ಸಾವಿರ ವರ್ಷದ ಹಿಂದೆ ಮೈದಾಳುವ ರೀತಿಯನ್ನು ಚಿತ್ರಿಸುತ್ತದೆ. ಕನ್ನಡ ಕಾವ್ಯ ರಚನೆ ಸೃಷ್ಟಿಯಾಗುವ ಕ್ರಿಯೆಇಲ್ಲಿ ವ್ಯಕ್ತವಾಗಿದೆ. ನಮ್ಮ ಬರಹ ಪರಂಪರೆಗೂ ಮೌಖಿಕ ಪರಂಪರೆಗೂ, ಕೃತಿಗೂ ಇರುವ ಸಂಬಂಧ ಇಲ್ಲಿ ವ್ಯಕ್ತವಾಗುತ್ತದೆ. ಪಾಯಶಃ ಕನ್ನಡ ಸಾಹಿತ್ಯ ಪರಂಪರೆಯಲ್ಲಿ / ಭಾರತದ ಸಾಹಿತ್ಯ ರಚನಾ ಸಂದರ್ಭಕ್ಕೆ ಸಾಲಗಳು ಕನ್ನಡಿ ಹಿಡಿಯುತ್ತವೆ. ಇಡೀ ವಿಶ್ವದ ಚರಿತ್ರೆಯನ್ನು ಗಮನಿಸಿದಾಗ ಅತ್ಯಂತ ಪ್ರಾಚೀನ ಸಂಸ್ಕೃತಿಯನ್ನು ಹೊಂದಿದ ಐದು ಸಂಸ್ಕೃತಿಗಳಲ್ಲಿ ಭಾರತವೂ ಒಂದು. ಆದರೆ ಇಲ್ಲಿ ಬರಹ ಸಂಸ್ಕೃತಿ ಕಾಲಿಟ್ಟಿದ್ದ ಉಳಿದ ಪ್ರಾಚೀನ ಸಂಸ್ಕೃತಿಗಳಿಗೆ ಹೋಲಿಸಿದರೆ ಬಹಳ ಇತ್ತೀಚಿನದು. ಇಲ್ಲಿ ಎಲ್ಲಾ ಕಲಿಕೆಯೂ ಮೌಖಿಕ ಸಂಪ್ರದಾಯವನ್ನು ಹೊಂದಿತ್ತು ಆ ರೀತಿಯಲ್ಲಿ ಕಲಿಸಲು/ಕಲಿಯಲು ಪಠ್ಯಗಳನ್ನು ಸಿದ್ಧಪಡಿಸಲಾಗುತ್ತಿತ್ತು. ‘ಉಪನಿಷತ್ತು ಎಂಬ ಪರಿಕಲ್ಪನೆಯೇ ಇಂಥದ್ದು. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಹೇಳುವುದಾದರೆ ಮೇಲಿನ ಪಂಪನ ಸಾಲುಗಳು ಮೌಖಿಕ ಮತ್ತು ಬರಹ ಸಾಹಿತ್ಯದ ಪಲ್ಲಟ ಸ್ಥಿತಿಯನ್ನು ಹೇಳುತ್ತದೆ. ಸುಮಾರು ಒಂದೂವರೆ ಶತಮಾನದಿಂದ ನಮ್ಮಲ್ಲಿ ಬರಹದ ಸಾಹಿತ್ಯ ಮತ್ತು ಮೌಖಿಕ ಸಾಹಿತ್ಯ ಎಂಬ ಎರಡು ವೈರುಧ್ಯ ಸಾಹಿತ್ಯದ ಪರಿಕಲ್ಪನೆ ಮೂಡಿತು. ಆದರೆ ಅದಕ್ಕೆ ಮುಂಚೆ ಬರೆವಣಿಗೆಗೂ ಮೌಖಿಕತೆಗೂ ಹೆಚ್ಚು ವ್ಯತ್ಯಾಸವಿರಲಿಲ್ಲ .ಎಂದು ಕಾಣುತ್ತದೆ. ಇವೆರಡೂ ಒಂದಕ್ಕೊಂದು ಷೂರಕವಾಗಿದ್ದಿರಬೇಕು. “ಅಪರೂರ್ವವಾಗಿ ಸಲ್ಲವಂತೆ ಹೇಳಿದ ಕವೀಶ್ವರರಿಲ್ಲ.” “ಹೇಳುವುದಾದರೆ ಪಂಪನೇ ಹೇಳುವಂಥವನು.” “ಈ ಪ್ರಬಂಧವನ್ನು ಹೇಳಲು ಪ್ರಾರ೦ಭಿಸಿದೆ.” ಬರೆಯುವೆನೆಂದು ಕಾವ್ಯವನ್ನು ಹೇಳಿದೆ”, ಬರೆಯುವ (ಪ್ರತಿ ಎತ್ತುವವರ) ಈ ಉಕ್ತಿಗಳನ್ನು ನೋಡಿದಾಗ ಬರಹ ಸಂಸ್ಕೃತಿಗಳು ಕನ್ನಡಕ್ಕೆ ಮೊದಲು ಬಂದಾಗಲೂ ಅದು ಹೇಳುವ / ಶೃತಿಯ ಸಂಸ್ಕೃತಿಯ ವಿಸ್ತರಣೆಯಾಗೆ ಕಂಡು ಬರುತ್ತದೆ. ಅಂದರೆ ಬರಹ ಸಂಸ್ಕೃತಿ ಮೌಖಿಕ ಸಂಸ್ಕೃತಿಗೆ ವೈರುಧ್ಯವಲ್ಲದ ಪೂರಕ ಸಂಸ್ಕೃತಿಯಾಗಿ ಕಂಡುಬರುತ್ತದೆ.
ಮೇಲಿನ ರೀತಿ ಮೌಖಿಕ ಮತ್ತು ಬರಹ ಸಂಸ್ಕೃತಿಯ ತಾಕಲಾಟ ಬರೀ ಕನ್ನಡ / ಭಾರತದ ಸಂಸ್ಕೃತಿಯ ತಾಕಲಾಟವಲ್ಲ. ಇದು ಪಾಶ್ಚಾತ್ಯ ಪ್ರಾಚೀನ ಸಂಸ್ಕೃತಿಯ ತಾಕಲಾಟವೂ ಆಗಿತ್ತು.
ಜಾಕ್ ಡೆರಿಡಾ ಈ ವಿಷಯವನ್ನೇ ತನ್ನ ಮೊದಲ ಪುಸ್ತಕ Of Grammatologyಯಲ್ಲಿ ಎತ್ತಿಕೊಂಡು ಏತಕ್ಕಾಗಿ ಪ್ಲೇಟೋ ಬರವಣಿಗೆಯ ವಿರುದ್ಧ ತನ್ನ ತರ್ಕವನ್ನು ಮಂಡಿಸುತ್ತಿದ್ದ ಎಂದು ವಿಶ್ಲೇಷಿಸುತ್ತ್ತಾನೆ. ಪ್ಲಾಟೋಗೆ ಬರವಣಿಗೆ ಎನ್ನುವುದು “ಕಪೋಲಕಲ್ಪಿತ’ವಾದದ್ದು. ಬರವಣಿಗೆ ಸಮಾಜದಲ್ಲಿ ‘ನೈತಿಕತೆ’ ಮತ್ತು ‘ಸತ್ಯವನ್ನು ನಾಶಮಾಡುವ ಸಾಧನ ಎಂದು ಪ್ಲಾಟೋನ ನಿಲುವು. ಅಲ್ಲದೆ ಬರೆವಣಿಗೆ ಒಂದು ಮಿಥ್ಯಾಲೋಕವನ್ನು ಸೃಷ್ಟಿಸುತ್ತದೆ. ಇದನ್ನು ಪ್ರತಿಪಾದಿಸುವ ಈಜಿಪ್ಟಿನಲ್ಲಿ ಒಂದು ಕಥೆ ಇದೆ. ಅದೇನೆಂದರೆ ಈಜಿಪ್ಪಿನ ದೊರೆ ಥಮುಸ್ ಎಂಬುವವನ ಆಸ್ಥಾನಕ್ಕೆ ಥೋಥ್ ಎಂಬ ದೇವರು ಬರುತ್ತಾನೆ.
ಆಟ ಜ್ಯಾಮಿತಿ.ಲೆಕ್ಕ. ಖಗೋಳವಿಜ್ಞಾನ ಮತ್ತು ಬರವಣಿಗೆಯ ದೇವತೆ. ಈ ಎಲ್ಲದರ ಜ್ಞಾನವನ್ನು ಆತ ದೊರೆಗೆ ಥಮುಸ್ ಗೆ ಕೊಡುತ್ತಾನೆ. ಆದರೆ ಬರವಣಿಗೆಯನ್ನು ಮಾತ್ರ ನಿರಾಕರಿಸುತ್ತಾನೆ. ಕಾರಣ ಮನುಷ್ಯನಿಗೆ ಬರವಣಿಗೆ ಕೊಟ್ಟರೆ ಆಟ ಬಹಳ ಅಪಾಯಕಾರಿಯಾಗುತಾನೆ, ಏಕೆಂದರೆ ಬರವಣಿಗೆಯನ್ನು ಮನುಷ್ಯ ಅಸ್ತ್ರವನ್ನಾಗಿಸಿಕೊಂಡು ಸಮಾಜದಲ್ಲಿ ದೇವರಂತೆ ಆಗಿ ಬಿಡುತ್ತಾನೆ. ಅದು ಸಜೀವವಾದ ಮಾತನ್ನು ನಿರ್ಜೀವವನ್ನಾಗಿಸಿ ಬಿಡುತ್ತದೆ, ಅಥೆಂಟಿಕ್ ಪ್ರಪಂಚವನ್ನು ನಾಶಮಾಡುತ್ತದೆ, ಮೌಖಿಕ ಸಂಪ್ರದಾಯವನ್ನು ನಾಶಪಡಿಸುತ್ತಾರೆ. ತಾರತಮ್ಯವನ್ನು ಸೃಷ್ಟಿಸುತ್ತದೆ ಎಂದು ಹೇಳಿ ಬರವಣಿಗೆಯನ್ನು ತನ್ನಲ್ಲೇ ಇಟ್ಟುಕೊಳ್ಳುತ್ತಾನೆ.
ಪ್ಲಾಟೋನ ಪ್ರಕಾರ ಭಾಷೆ ಮೌಖಿಕವಾಗಿದ್ದಷ್ಟು ಅಲ್ಲಿ ಮಾತನಾಡುವವನ / ಕೇಳುವವನ ಹಾಜರಿ ಅತ್ಯವಶ್ಯಕವಾಗಿರುತ್ತದೆ. ಜೀವಂತವಾಗಿ ರೂಪತಾಳುತ್ತಿರುತ್ತದೆ ಮತ್ತು ಭಾಷೆಯೂ ಹಾಜರಿರುತ್ತದೆ. ಜ್ಞಾಪಕಶಕ್ತಿ ಇಲ್ಲಿ ಮುಖ್ಯವಾಗಿರುತ್ತದೆ. ಬರವಣಿಗೆ ಜ್ಞಾಪಕಶಕ್ತಿಯನ್ನು ಕುಂದಿಸುತ್ತದೆ. ಮಾತು ಆಡುವವನ ಆತ್ಮವನ್ನು ತೆರೆದಿಡುತ್ತದೆ. ಬರವಣಿಗೆ ಭಾಷೆಯ ಅರ್ಥದ ಸಂದಿಗ್ನತೆಗೆ ಎಡೆಮಾಡಿಕೊಡುತ್ತದೆ. ಅದನ್ನು ಓದುವವನು ತನಗೆ ಬೇಕಾದ ಅರ್ಥವನ್ನು ಕೊಟ್ಟುಕೊಳ್ಳುತ್ತಾನೆ. ಬರಹ ನಿಜವಾದ ಜ್ಞಾನವನ್ನು ಪರೀಕ್ಷಿಸುವುದಿಲ್ಲ ಏಕೆಂದರೆ ಬರೆದದ್ದನ್ನು ಉರುಹೊಡೆದು ಗಿಳಿ ಪಾಠ ಒಪ್ಪಿಸಬಹುದು. ಆದರೆ ಆ ಜ್ಞಾನ ಅವನಲ್ಲಿದೆ ಎಂದು ಸಾದರಪಡಿಸಲಿಕ್ಕಾಗುವುದಿಲ್ಲ.
3ಇಷ್ಟೇ ಅಲ್ಲ ಪಾಶ್ಚಾತ್ಯ ಸಮಾಜ ತನ್ನ ಆಲೋಚನೆಯಲ್ಲಿ ಮಾತನ್ನೇ ಮುಖ್ಯವಾಗಿರಿಸಿಕೊಂಡು ದರ್ಶನಶಾಸ್ತ್ರ ಮತ್ತು ಭಾಷಾಶಾಸ್ತ್ರಗಳು ಇವತ್ತಿನವರೆವಿಗೂ ತನ್ನ ಸೈದಾಂತಿಕ ಧಾರೆಯನ್ನು ಹರಿಯಬಿಡುತ್ತಿದೆ ಎಂದು ವಿಶ್ಲೇಷಿಸುತ್ತಾನೆ. ಭಾಷಾಶಾಸ್ತ್ರವೂ ಆಡುಮಾತಿನ ಶ್ರೇಷ್ಠತೆಯ ಮೇಲೆ ನಿಂತಿದೆ ಎಂದು ತೋರಿಸಿಕೊಟ್ಟಿದ್ದಾನೆ. ಆದರೆ ನಿಜವಾಗಿ ಭಾಷೆ ಆಡುಮಾತಿನ ಮೇಲೂ ನಿಂತಿಲ್ಲ ಬರಹದ ಮೇಲೂ ನಿಂತಿಲ್ಲ, ಇವೆರಡರ ಪೂರಕ ಸಂಬಂಧದಲ್ಲಿ ನಿಂತಿದೆ. ಇದು ಕನ್ನಡದ ಪಂಪನ ತಿಳಿವಿನ ಸಂಸ್ಕೃತಿ. ಮಾತು – ಬರಹ ವೈರುಧ್ಯದಲ್ಲಿ ಇಲ್ಲ. ವೈರುಧ್ಯದಲ್ಲಿದ್ದರೆ ಅದು ಒಂದು ರಚನೆಯನ್ನು ಸೃಷ್ಟಿಸುತ್ತದೆ. ಮನುಷ್ಯನ ಗ್ರಹಿಕೆ ವೈರುಧ್ಯದಿಂದ ಮಾತ್ರ ಸಾಧ್ಯ ಆದರೆ ಅದು ಅಲ್ಲಿಯೇ ನಿಲ್ಲುವುದಿಲ್ಲ. ವೈರುಧ್ಯಗಳು ಒಂದರೆ ಮೇಲೆ ಒಂದು ಆಡುತ್ತಿರುತ್ತದೆ. ಆದ್ದರಿಂದ ಭಾಷೆಯಲ್ಲಿ ಅರ್ಥ ಸದಾ ಚಲನೆಯಲ್ಲಿರುತ್ತದೆ, ನಿಘಂಟಿನಲ್ಲಿ ಮಾತ್ರ ಅರ್ಥ ಸ್ಥಗಿತವಾಗಿ ನಿಂತು ಬಿಡುತ್ತದೆ. ಆದ್ದರಿಂದ ಮಾತು ಮತ್ತು ಬರಹ ಒಂದಕ್ಕೊಂದು ವಿರೋಧದಲ್ಲಿ ನಿಲ್ಲವುದಿಲ್ಲ, ಒಂದರ ಮೇಲೊಂದು ಆಡುತ್ತಿರುತ್ತದೆ, ಪಂಪನ ‘ಹೇಳುವ ಮತ್ತು ‘ಬರೆ’ಯುವ ಕ್ರಿಯೆ ಪೂರಕ ಎಂದು ತೋರಿಸಿರುವುದಕ್ಕೂ ಡೆರಿಡಾ ಹೇಳುವ ಭಾಷಾ – ಬರಹ ವಿಶ್ಲೇಷಣೆಯೂ ಹೊಂದಿಕೊಳ್ಳುವುದು. ಪಂಪ ಹೇಳಿ ಬರೆದರೂ ಆ ಕೃತಿ ಇರುವುದು ಓದಲು ಗೊತ್ತಿದ್ದವನು ಓದುಗೊತ್ತಿಲ್ಲದವನಿಗೂ ಹೇಳುವ ಸಾಧನ (ಗಮಕ ಇತ್ಯಾದಿ ರೀತಿಯಲ್ಲಿ)ವಾಗಿ ಬರಹವಿದೆ. ಆದ್ದರಿಂದಲೇ ಅಂಥ ಒಂದು ತಂತ್ರವನ್ನು ಪಂಪ ಬಳಸಿದ್ದಾನೆ. ಈ ತಂತ್ರ ಬರಹವೂ ಮೌಖಿಕವಾಗಿ ಓದುವವನ ಮೂಲಕ ಧ್ವನಿಯಾಗಿ ಪರಿವರ್ತಿತವಾಗಿ ಕೇಳುಗ ಇರುತ್ತಾನೆ. ಪಂಪನು ಕೃತಿಯ ಬಗ್ಗೆ – ಓದುಗನ ಬಗ್ಗೆ ಈ ರೀತಿಯಲ್ಲಿ ತನ್ನ ಸಿದ್ಧಾಂತವನ್ನು ಮುಂದಿಡುತ್ತಾನೆ.
ಪರಮ ಜಿನೇಂದ್ರ ವಾಣಿಯೆ ಸರಸ್ವತಿ ಬೇಜ* ಅದು ಪೆಣ್ಣು ರೂಪಮಂ’ ಧರಿಯಿಸಿ ನಿಂದುದು ಆಲ್ತು-ಅದುವೆ ಭಾವಿಸುವ ಓದುವ ಕೇಲ್ವಪೂಜಿಪ ಆದರಿಸುವ ಭವ್ಯ ಕೋಟಿಗೆ ನಿರಂತರ ಸೌಖ್ಯಮನ್ ಈವುದು, ಆನ್ ಅದ ಕೆ ಎರೆದಪೆನ್
ಮೃದು ಪದಗತಿಯಂ.
ರಸ-ಭಾವದ ಪರ್ಚಿ೦ ಪಣ್ಯ ವನಿತೆಯೋಲ್ ಕೃತಿ ಸೌಂದರ್ಯದ ಚಾತುರ್ಯದ ಕಣಿ ಏನೇ’ –
ವಿದಗ್ದ ಬುಧಜನದ ಮನಮನ್ ಅಲೆಯಲೇ ವೇಡಾ ?
ಕವಿತಾ ರಹಸ್ಯಮಂ ಸತ್ಕವಿ ಆಚೆಗುಮ್ – ಅನೆಡಮೂಕನ್ ಇಡೊ ಜಡನ್ ಎಂಬವನಾಗುಮೆ?
ವಿತನ ಆಚೆಗಮ್ ಕುವಿತಂ ಸ್ಥ್ರೀರತ ರಹಸ್ಯದ ಒಳಗ(ನ್)ಆದಪನೆ?
ಭಾಶಾವಿದರ್ ಕವಿತ್ವ ವಿಶೇಷಗ್ನರ್ ನಿಕಶಂ ಅಪ್ಪೋದೆ ಅಪ್ಪುದು ಸಭೆಯೋಳ್ .
ಡೆರಿಡಾನಿಗೆ ಬರವಣಿಗೆ ಎಂದರೆ ‘ಅಕ್ಷರ’ ಮಾತ್ರವಲ್ಲ, ಅಕ್ಷರವಿಲ್ಲದೆಯೂ ಮನುಷ್ಯ ಬರವಣಿಗೆಯನ್ನು ಮಾಡುತ್ತಿರುತ್ತಾನೆ. ಯಾವುದಾದರೂ ವಿಷಯವನ್ನು ಮೌಖಿಕವಾಗಿಯೇ ತನ್ನ ವ್ಯಾಖ್ಯಾನದ ಮೂಲಕ ಹಿಂದಿನ ಪರಿಕಲ್ಪನೆಗೆ ತನ್ನ ಅನಿಸಿಕೆಯನ್ನು ಸೇರಿಸಿ ಅನುಭವವನ್ನು ಬದಲಾಯಿಸುತ್ತಿರುತ್ತಾನೆ. ಒಬ್ಬ ಕ್ರಿಯಾಶೀಲ ಬರಹಗಾರನೂ ಇದೇ ಕೆಲಸವನ್ನು ತನ ಕೃತಿಯ ಮೂಲಕ ಮಾಡುತ್ತಿರುತ್ತಾನೆ.
ಆದ್ದರಿಂದ ಡೆರಿಡಾನ ಪ್ರಕಾರ ಬರವಣಿಗೆ ಎಂದರೆ ಮನುಷ್ಯನ ಗ್ರಹಿಕೆಯ ಬಗೆಗಿನ ವ್ಯಾಖ್ಯಾನದ ಮೇಲಿನ ವ್ಯಾಖ್ಯಾನ. ಓದುಗ ಈ ಬರಹಗಾರನ ವ್ಯಾಖ್ಯಾನದ ವ್ಯಾಖ್ಯಾನಕಾರನಾಗುತ್ತಾನೆ. ಒಂದು ಸಂಸ್ಕೃತಿಯ ಬೆಳವಣಿಗೆ ಎಂದರೆ ಇದೇ. ಅದ್ದರಿಂದ ಒಂದು ಸಾಂಸ್ಕೃತಿಕ ಪತ್ಯವೆಂದರೆ ಅದು ಬರವಣಿಗೆಯಲ್ಲೂ ಮೌಖಿಕ ಸಂಪ್ರದಾಯದಲ್ಲೂ ಇರಬಹುದು. ಅವೆರಡೂ ಒಂದೇ ರೀತಿಯ ಪರಿವರ್ತನೆಗೆ ಒಳಗಾಗುತ್ತಿರುತ್ತವೆ. ಪ್ರಾಯಶಃ ನಮ್ಮಲ್ಲಿದ್ದ ಪತ್ಯಗಳಿಗೆ ಟೀಕು-ಟಿಪ್ಪಣಿ ಬರೆಯುವ ಸಂಪ್ರದಾಯ ಪಠ್ಯವನ್ನು ಬದಲಿಸದೆ ಓದುಗ ಆ ಪತ್ಯಕ್ಕೆ ಪ್ರಕ್ರಿಯಿಸುವ ರೀತಿ ಇದೇ ತೆರನಾಗಿದ್ದರಬಹುದು.
ಆದರಿಂದ ಕುಮಾರವ್ಯಾಸ ತನ್ನ ಕರ್ನಾಟಕ ಭಾರತ ಕಥಾಮಂಜರಿದಲ್ಲಿ ಹೇಳುವ ಪದ್ಯ ನಮಗೆ ವಿಶೇಷ ರೀತಿಯಲ್ಲಿ ಕಾಣುತ್ತದೆ.
ಕೃತಿಯನವಧರಿಸುವುದು ಸುಕವಿಯ
ಮಾತಿಗೆ ಮಂಗಳವೀವುದಧಿಕರು
ಮಧಿಸುವುದು ತಿದ್ದುವುದು ಮೆರೆವುದು ಲೆಸ ಸಂಚಿಪುದು
ನತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರನಾರಾಯಣನ ಕಿಂಕರಗೆ
ಡೆರಿಡಾನ ಪ್ರಕಾರ ಪಠ್ಯಕ್ಕೆ ಜೀವ ಬರುವುದು ಓದುಗ/ಕೇಳುಗ ಅದನ್ನು ಓದಲು ಪ್ರಾರಂಭಿಸಿದಾಗ ಮಾತ್ರ. ಅಲ್ಲಿ ಅದು ಜೀವತಾಳುತ್ತದೆ. ಇಲ್ಲದಿದ್ದರೆ ಅದೊಂದು ಮುದ್ರಣವಾದ ಹಾಳೆಗಳ ಕಟ್ಟು, ಕಪಾಟಿನಲ್ಲಿ ಜಾಗಪಡೆಯುವ ವಸ್ತು, ಜೀವತಳೆಯುವುದು ಯಾವಾಗ ಎಂದರೆ ಅಧಿಕರು ಆ ಪಠ್ಯವನ್ನು ಮಥಿಸುವುದರಿಂದ, ತಿದ್ದುವುದರಿಂದ ಇಲ್ಲಿ ಕೃತಿಯ ಕರ್ತೃವಿನ ಅರ್ಥವೇ ಓದುಗನ ಅಧಿಕವಾಗಿರಬೇಕಾಗಿಲ್ಲ. ಓದುಗ/ಕೇಳುಗ ಅರ್ಥವನ್ನು ಹೆಚ್ಚಿಸುತ್ತಿರುತ್ತಾನೆ. ಇಲ್ಲಿ ಭಾವುಕರು – ಪಂಡಿತರು – ಸುಜನರು- ಸೂಕ್ತಿಕಾರರು ಇವರೆಲ್ಲರೂ ಕ್ರಿಯಾಶೀಲವಾಗಿ ಆ ಪಠ್ಯದ ಓದಿನಲ್ಲಿ / ಬರಹದಲ್ಲಿ ಭಾಗವಹಿಸಿದಾಗ ಮಾತ್ರ ಪಠ್ಯ ಜೀವತಳೆಯುತ್ತದೆ. ಆದ್ದರಿಂದ ವಿವಿಧ ರೀತಿಯ ಓದುಗರು ಪಠ್ಯವನ್ನು ತಮ್ಮ ಮನಸ್ಸಿನಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಹೀಗೆ ಪಠ್ಯದ ಅರ್ಥ ಯಾವಾಗಲೂ ಹರಿಯುತ್ತಲೇ ಇರುತ್ತದೆ. ಹೀಗೆ ಪ್ರತೀ ಬಾರಿ ಓದಿದಾಗಲೂ ಪಠ್ಯ ಅವತರಿಸುತ್ತಿರುತ್ತದೆ
. ಡೆರಿಡಾನ ಪ್ರಕಾರ ಪಠ್ಯಕ್ಕೆ ಒಂದು ಕೇಂದ್ರ ಅಥವಾ ಒಂದು ಧ್ವನಿ ಇರುವುದಿಲ್ಲ. ಪಠ್ಯವು ಬಹು ಕೇಂದ್ರಿತವಾಗಿರಬಹುದು. ಬಹುಕೇಂದ್ರತೆ ಹುಟ್ಟುವುದು ಓದುಗನ ಹಿನ್ನೆಲೆಯಿಂದ, ಆತನ ದೃಷ್ಟಿಕೋನ ಪಠ್ಯವನ್ನು ಬೇರೆ ಬೇರೆ ಕೋನಗಳಲ್ಲಿ ಗಮನಿಸಿದಾಗ ಅದು ಬೇರೆ ಬೇರೆ ಧ್ವನಿಯನ್ನೇ ಹೊರಡಿಸಬಹುದು. ಮಹಾಭಾರತ-ರಾಮಾಯಣದಂಥ ಕೃತಿಗಳು ವಿಫುಲ ಸಂಖ್ಯೆಯಲ್ಲಿ ಇರುವುದೇ ಇದಕ್ಕೆ ಉದಾಹರಣೆ. ಒಂದು ವ್ಯಾಸಭಾರತವಿದ್ದಂತೆ ಪಂಪಭಾರತವಿರಬೇಕಾಗಿಲ್ಲ. ಪಂಪನ ದೃಷ್ಟಿಕೋನದಲ್ಲಿ ಕೇಂದ್ರ ದೃಷ್ಟಿ ಅರ್ಜುನ/ಅರಿಕೆಸರಿಗೆ ಸ್ಥಳಾಂತರಗೊಳ್ಳಬಹುದು. ಇದೊಂದು ರೀತಿಯ ಕುಮಾರವ್ಯಾಸನ ಭಾರತದ ‘ವ್ಯಾಖ್ಯಾನ’ ಮತ್ತೊಂದು ರೀತಿಯದಾಗಿರಬಹುದು. ಅಲ್ಲದೆ ಒಂದೇ ಪಠ್ಯ ಓದುಗನಿಗೆ ನಾನಾ ರೀತಿಯಲ್ಲಿ ಕಾಣಬಹುದು. ಕುವೆಂಪುರವರಿಗೆ ಮಂಥರೆ ಮತ್ತೊಂದು ದೃಷ್ಟಿಯಿಂದ ಕಂಡಿರಬಹುದು. ಇವಕ್ಕೆಲ್ಲ ಮುಖ್ಯ ಕಾರಣ ಡೆರಿಡಾ ಹೇಳುವಂತೆ ಭಾಷೆಯಲ್ಲಿ / ಕಥಾನಕಗಳಲ್ಲಿ “ಕುರುಡುದಾಣ” (Blind spots) ಇರುವುದೇ, ಮತ್ತೊಬ್ಬನ ರಚನೆ / ಓದು ಈ ಕುರುಡುದಾಣಗಳನ್ನು ಪತ್ತೆ ಹಚ್ಚಿ ಅದನ್ನು ಹೊಸ ಕಾಣುವಿಕೆಯಿಂದ ತುಂಬುವುದಾಗಿರುತ್ತದೆ. ಆದ್ದರಿಂದ ಕುಮಾರವ್ಯಾಸ ಹೇಳುವುದು,
ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ದಿಗುಣವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ……
ಇಲ್ಲಿ ಒಬ್ಬೊಬ್ಬ ಓದುಗನೂ ಒ೦ದೊ೦ದು ವಿಷಯವನ್ನು ಕೇಂದ್ರವಾಗಿರಿಸಿಕೊಂಡು ಆತನ ಕಥೆಯನ್ನು ಓದಬಹುದು / ಅಥವಾ ಒಬ್ಬನೇ ಎಲ್ಲ ಕೇಂದ್ರಗಳಲ್ಲಿ ನಿಂತು ವಿವಿಧ ರೀತಿಯಲ್ಲಿ ಸಂಯೋಜಿಸಿಕೊಂಡು ಪಠ್ಯವನ್ನು ಕಾಣಬಹುದು. ಪಠ್ಯದ ಬಗ್ಗೆ ಕುಮಾರವ್ಯಾಸನ ಸಿದ್ದಾಂತ ಇಲ್ಲಿ ನಮಗೆ ಸ್ಪಷ್ಟವಾಗುತ್ತದೆ. ಆದ್ದರಿಂದ ಪಠ್ಯ ಎನ್ನುವುದು ನಿರಂತರವಾಗಿ ಚಲನಶೀಲತೆಯನ್ನು ಪಡೆದಿರುತ್ತದೆ. ಇಲ್ಲಿಯವರೆಗೆ ಈ ಲೇಖನ ಓದಿದ ನಂತರ ಓದುಗರಿಗೆ ಒಂದು ವಿಷಯ ಸ್ಪಷ್ಟವಾಗಿರಬಹುದು.
ಕನ್ನಡದಲ್ಲಿ ಸಾಹಿತ್ಯಕ/ಸಾಂಸ್ಕೃತಿಕ ಸಿದ್ಧಾಂತಗಳು ಇಲ್ಲ ಎಂದುಕೊಂಡವರು ಮನವರಿಕೆ ಮಾಡಿಕೊಳ್ಳಬಹುದಾದ ವಿಷಯವೆಂದರೆ ಸಿದ್ದಾಂತಗಳು ಪ್ರತ್ಯೇಕ ಸಿದ್ದಾಂತಿಗಳಿಂದ ಬಂದದ್ದಲ್ಲ. ನಮ್ಮ ಕವಿಗಳೇ ನಮಗೆ ಸಿದ್ದಾಂತವನ್ನು ಕೊಟ್ಟಿದ್ದಾರೆ. ಅದನ್ನು ನಾವು ಕಾಣಬೇಕಾಗುತ್ತದೆ. ಇವೆಲ್ಲ ಇರುವುದು ಮುಖ್ಯಪಠ್ಯದಲ್ಲಿಲ್ಲ. ಪಠ್ಯದ ಅಂಚಿನಲ್ಲಿ ಇದನ್ನು ನಾವು ಓದಿಕೊಳ್ಳಬೇಕಾಗುತ್ತದೆ/ ಬರೆದುಕೊಳ್ಳಬೇಕಾಗುತ್ತದೆ.
ಪ್ರತಿಯೊಂದು ಕೃತಿಯೂ ಮೈದಾಳುವುದು ಭಾಷೆಯಲ್ಲಾದುದರಿಂದ ಭಾಷೆಯ ಶಕ್ತಿ ಬರಹಗಾರರನ್ನು ಅಣಕಿಸುತ್ತಿರುತ್ತದೆ. ಅವನಿಗೆ ಸವಾಲನ್ನು ಎಸೆಯುತ್ತಿರುತ್ತದೆ. ಒಬ್ಬ ಶಕ್ತಿಯುತ ಬರಹಗಾರ ಈ ಭಾಷೆಯ ಶಕ್ತಿಯನ್ನು ಪ್ರತಿಬಾರಿಯೂ ಎದುರಿಸುತ್ತಿರುತ್ತಾನೆ. ಕೆಲವು ಬಾರಿ ಭಾಷೆ ಬರಹಗಾರನ ಎದುರು ಹೆಡೆ ಬಿಚ್ಚಿದ ನಾಗನಂತೆ ನಿಲ್ಲಬಹುದು.
ಹೀಗೆ ಪಠ್ಯವನ್ನು ಬರಹಗಾರ / ಓದುಗ (ವೈರುಧ್ಯಗಳಿಲ್ಲ – ಡೆರಿಡಾನ ಪ್ರಕಾರ) ಎದುರಿಸುತ್ತಲೇ ಇರುತ್ತಾನೆ. ಈ ಕ್ರಿಯೆಯನ್ನೇ ಡೆರಿಡಾ ನಿರ್ವಚನ (detruction)cons ಎಂದು ಕರೆಯುತ್ತಾನೆ. ನಿರ್ವಚನವೆಂದರೆ ಪಠ್ಯವನ್ನು ಎದುರಿಸುವ ಲೀಲೆ (Play) ಪಠ್ಯವನ್ನು ಬಿಚ್ಚಿ – ಸೇರಿಸಿ – ಕಟ್ಟಿ ಆಡುವ ಕ್ರಿಯೆ, ಈ ಲೀಲೆಯಲ್ಲಿ ಪ್ರತೀಬಾರಿಯೂ ಪಠ್ಯದ – ಪ್ರಸ್ತುತದಲ್ಲಿ ಹಾಜರಿಯಾಗುವ ಕ್ರಿಯೆ. ನಿರಂತರವಾಗಿ ಗ್ರಹಿಕೆಯು ಒಂದನನ್ನು ಅಳಿಸಿ ಮತ್ತೊಂದನು ಹಾಜರಿಗೊಳಿಸುವ ಕ್ರಿಯೆ.
ಇಲ್ಲಿ ಪಠ್ಯಕ್ಕೆ ಒಂದು ಅರ್ಥ ಇರುವುದಿಲ್ಲ. ಇದೇ ಅರ್ಥ ಎಂದು ಹೇಳಿ ವಿರಮಿಸಲು ಸಾಧ್ಯವಾಗುವುದಿಲ್ಲ. ಈ ಪಠ್ಯಕ್ಕೆ ಇದೇ ಅರ್ಥ ಎಂದು ಹೇಳುವವರು ಮೂಲಭೂತವಾದಿಗಳಾಗಿರುತ್ತಾರೆ. ರಾಮ ಬಾಬರಿ ಮಸೀದಿಯಲ್ಲಿ ಮಾತ್ರ ಹುಟ್ಟಲು ಸಾಧ್ಯ. ಆದರೆ ಡೆರಿಡಾನ ಪ್ರಕಾರ ಪ್ರತಿ ಪಠ್ಯ ಸೃಷ್ಟಿಯೂ ಬಹುಮುಖಿ ಅರ್ಥಗಳನ್ನು ಸೃಷ್ಟಿಸುವ ಡೆಮಾಕ್ರಟಿಕ್ ಪ್ರಕ್ರಿಯೆ. ಡೆರಿಡಾನ ಇನ್ನೊಂದು ಪ್ರಮುಖ ಪರಿಕಲ್ಪನೆ ‘ಅಂತರ್ ಪಠ್ಯ’. ಈ ಪರಿಕಲ್ಪನೆ ನಮ್ಮ ಸಾಮಾನ್ಯ ಆಡುನುಡಿಯಲ್ಲಿ ನಮಗೆ ಗೊತ್ತಾಗದಂತೆ ಅವಿತುಕೊಂಡಿರುತ್ತದೆ. ಉದಾಹರಣೆಗೆ ಮಾತಿನ ಬಾಣ ಬಿಟ್ಟ ಮಾತಿನಲ್ಲಿ ಚುಚ್ಚಿದ ಮೊನಚಾದ ಮಾತು ಮಾತಿನಲ್ಲಿ ಗೆದ್ದ/ ಸೋತ ವ್ಯಂಗ್ಯದಿಂದ ಇರಿದ ವಾಗ್ಯುದ್ದ ನಡೆಸಿದ ಮಾತಿನ ಚಾಟ ಬೀಸಿದ ಇಲ್ಲಿ ಮಾತು/ಭಾಷೆ ಯುದ್ಧದ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಸೋಲು, ಗೆಲುವು, ಚುಚ್ಚು ಇರಿ, ಯುದ್ಧ ಇತ್ಯಾದಿ ಪದಗಳೆಲ್ಲ ಮಾತಿನ ಗುಣಕ್ಕೆ ‘ತಗುಳ್ಳಿ’ ಕೊಂಡಿವೆ. ಇದೇ ರೀತಿ ಸಾಹಿತ್ಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ