ಮಂಗಳವಾರ, ಜನವರಿ 10, 2017

ಮಿಶೆಲ್ ಫುಕೋ : ಅಸಲಿ ವಿದ್ವಾಂಸನ ಅಕ್ಷರವಿಲ್ಲದ ಚರಿತ್ರೆ


ಪ್ರೊ.ಕಿಕ್ಕೇರಿ ನಾರಾಯಣ

profile

ಸೌಜನ್ಯ: http://kikkerinarayana.in/

೧೯೮೩ ರ ಡಿಸೆಂಬರ್ ತಿಂಗಳ ಚುಮುಚುಮು ಚಳಿಗಾಲ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ನಾಲ್ಕು ವಾರಗಳ ಕಾಲ′ ಸಂಜ್ಞಾಶಾಸ್ತ್ರ ಮತ್ತು ಸಂರಚನವಾದ ‘ದ ಅಂತರ್ರಾಷ್ಷ್ಟ್ರೀಯ ಶಿಬಿರ ಏರ್ಪಟಿಸಿತ್ತು . ವಿಶ್ವದ ದಿಗ್ಗಜ ಭಾಷಾಶಾಸ್ತ್ರಜ್ಞರು ಬಂದಿಳಿದ್ದಿದ್ದರು . ಅಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಯಾಗಿತ್ತು . ನಮ್ಮಂಥ ಕಿರಿಯರಿಗೆ ಬೌದ್ಧಿಕ ಹಬ್ಬ . ೮೦ ವರ್ಷದ ಋಷಿ ಸದೃಶ ಅಮೇರಿಕಾದ ಡೇವಿಡ್ ಸಾವನ್ , ಜರ್ಮನಿಯ ರೋಲಾನ್ಡ್ ಪೋಸ್ನರ್ . ಕೆನಡಾದ ಟೊರೊಂಟೋ ವಿಶ್ವವಿದ್ಯಾಲಯದ ಪಾಲ್  ಬ್ಯುಸ್ಸಾಕ್ , ಫ್ರಾನ್ಸಿನ ಕ್ರಾಮವೆಲ್, ಭಾರತದ ಅಶೋಕ ಕೇಲ್ಕರ್ , ಆರ್ .ಏನ್ .ಶ್ರೀವಾಸ್ತವ ಮುಂತಾದ ವಿದ್ವಾಂಸರ ಸಂಗಮವಾಗಿತ್ತು . ಇವರೆಲ್ಲರ ಜೊತೆಯಲ್ಲಿ ನಾವು ಬಹುನಿರೀಕ್ಷೆಯಲ್ಲಿದ್ದ ಮತ್ತೊಬ್ಬ ವಿದಾಂಸ ಫ್ರಾನ್ಸಿನ ಮಿಶೆಲ್ ಫುಕೋ ಬರಬೇಕಿತ್ತು. ಅವರು ಬುದ್ದಿಜೀವಿಗಳಲ್ಲೆಲ್ಲ ಅಗ್ರಗಣ್ಯರೆಂದು ಮಾನ್ಯರಾದವರು. ಅಮೇರಿಕಾದಲ್ಲಿ ಅವರ ಉಪನ್ಯಾಸಕ್ಕಾಗಿ ಅಕ್ಷರಶಃ ಸಾವಿರಾರು ಮಂದಿ ನೆರೆಯುತ್ತಿದ್ದರಂತೆ. ಅವರ ಬರುವಿಗಾಗಿ ಕಾಯುತ್ತಿದ್ದ ನಮಗೊಂದು ಆಘಾತಕರ ಸುದ್ದಿ ತಲುಪಿತು .
f1

f1ಫುಕೋ ಬರುವುದಿಲ್ಲವಂತೆ, ಅವರಿಗೆ ಏಡ್ಸ್ ಸಂಬಂಧಿ ರೋಗ ತಗುಲಿದೆ ಅಂಬಾ ಸುದ್ದಿ, ಇದಾದ ಕೇವಲ ಆರು ತಿಂಗಳಿಗೆ ಅವರು ತೀರಿಕೊಂಡರೆಂಬ ಸುದ್ದಿ ತಲುಪಿತು. ಕೊನೆಗೂ  ನಮಗೇ ಅವರನ್ನು ನೋಡುವ, ಕೇಳುವ ಭಾಗ್ಯ ಸಿಗಲೇ ಇಲ್ಲ. ಈ ಮಿಶೆಲ್ ಫುಕೋ ಕೊನೆಯ ಉಸಿರೆಳೆದದ್ದು ೨೫ ಜೂನ್ ೧೯೮೪. ಒಂದು ಸಾಹಿತ್ಯಕೃತಿ ಎಂದರೆ ಅದು ತನ್ನೊಳಗೆ ಅರ್ಥವನ್ನು ಸೃಷ್ಟಿಸುವ ಪುಸ್ತಕವಲ್ಲ. ಅದು ಶುದ್ಧವಾದ ಪ್ರಜ್ಞೆಯನ್ನು ಮುಗ್ದವಾಗಿ ಹುದುಗಿಸಿಕೊಂಡಿರುವ ಪ್ರಪಂಚವಲ್ಲ. ಅದೊಂದು ಸಂಕೀರ್ಣ ಸಂಸ್ಕೃತಿಯ ಸಂದರ್ಭದಲ್ಲಿ ಹುಟ್ಟುವ ನೈಜಕ್ರಿಯೆ. ಅದನ್ನು ಹೇಗೆ ಸರಿಯಾಗಿ, ತಪ್ಪಾಗಿ ಓದುತ್ತೇವೆ ಅಥವಾ ಓದುವುದಿಲ್ಲ ಎಂಬುದು ಆ ಕ್ರಿಯೆಯ ಭಾಗ. ಯಾವ ಪಠ್ಯವೂ  ಅ-ರ್ರಾಜಕೀಯವಾಗಿರುವುದಿಲ್ಲ ಎಂದು ವಿಶ್ಲೇಷಿಸಿ ತೋರಿಸಿದವನು ಫುಕೋ . ಮಾನಸಿಕ ಅಸ್ವಸ್ಥತೆ ಭಾಷೆಯಲ್ಲಿ ಘಟಿಸುವ ಒಂದು ಅನುಭವ. ಮನುಷ್ಯನ ಸ್ವಭಾವಕ್ಕೆ ನಿಯಮಕ್ಕೆ ಮುಖಾಮುಖಿಯಾಗುವ ಕ್ರಿಯೆ. ಆದರೆ ಈ ಭಾಷೆಯನ್ನೂ ನಾವು ಕೇಳಿಸಿಕೊಂಡೆ ಇಲ್ಲ. ‘ಪ್ರತಿಯೊಬ್ಬ ಮನುಷ್ಯನೂ ಒಂದು ರೀತಿಯಲ್ಲಿ ಮಾನಸಿಕವಾಗಿ ಅಸ್ವಸ್ತನೆ. ನೂರಕ್ಕೆ ನೂರರಷ್ಟು ಸಹಜ ಸ್ಥಿತಿಯನ್ನು ಪಡೆಯುವ ಯತ್ನವೇ ಹುಚ್ಚುತನದ್ದು ಎಂದು ತನ್ನ ಮೊದಲ ಮೇರು ಕೃತಿ ‘ಡಿ ಹಿಸ್ಟರಿ ಆ ಮ್ಯಾಡ್ನೆಸ್ಸ್’ (೧೯೬೧)ನಲ್ಲಿ ವಿಶ್ಲೇಷಿಸಿದ್ದಾನೆ . ಇದು ‘ಜಾಣಹುಚ್ಚಾ’ಜಿ ಪರಿವರ್ತಿತವಾಗಿರುವದು ಕಲೆಯಲ್ಲಿ. ಭಾಷೆ ಅ -ಕಾರಣ ಬಡಬಡಿಕೆ ಎಂದು ತಿಳಿದರೆ ಅದು ಸಕಾರಣವಾಗಿದ್ದರೆ – ಸ್ವಾಭಾವಿಕ ಭಾಷೆ ಎಂದು ತಿಳಿಯುತ್ತೇವೆ.
f2

ಚರಿತ್ರೆಯಲ್ಲಿ ‘ಹುಚ್ಚುದೊರೆ’ ಎಂದು ಕರೆಸಿಕೊಂಡಿದ್ದ ತುಘಲಕ್ ನಾಟಕದಲ್ಲಿ ಅತ್ಯಂತ ಕ್ರಿಯಾಶೀಲನಾದ, ಮಾದರಿ ರಾಜ್ಯವನ್ನು ಕಟ್ಟುವು ಹಂಬಲವುಳ್ಳ -ಆದರೆ ಅದರಲ್ಲಿ ಸೋಲುವ ಆತನ ಘನತೆ ಹೆಚ್ಚುವಂತೆ ಗಿರೀಶ್ ಕಾರ್ನಾಡ್ ಮಾಡಿದ್ದಾರೆ. ಇದು ಸಾಧ್ಯವಾಗಿರುವುದು ಕಾರ್ನಾಡರು ತುಘಲಕ್ನ ‘ಹುಚ್ಚು ಆಲೋಚನೆ’ಗೆ ಸಕಾರಣ ಸಂದರ್ಭವನ್ನು ಒದಗಿಸುವುದರಿಂದ .

ಇದೇ ರೀತಿ ಕಂಬಾರರು ಸಿರಿಸಂಪಿಗೆಯಲ್ಲ ದೇಹ ಮತ್ತು ಆತ್ಮದ ವಿಘಟನೆಯಿಂದಾಗುವ ಸಂವಾದವನ್ನು ಬೆಳೆಸಿದ್ದಾರೆ. ಆತ್ಮದ ಭಾಷೆ ಹುಚ್ಚನ ಭಾಷೆಯಂತೆ ಕಂಡುಬರುತ್ತದೆ. ತನ್ನ ತಾಯಿಯಿಂದ ಹಿಡಿದು ಎಲ್ಲರಿಗೂ ಅರ್ಥವಾಗದ ಕ್ರಿಯೆಯಾಗಿ ಭಾಷೆ ಅಭಿವ್ಯಕ್ತಗೊಂಡಿದೆ. ನಾಟಕದ ಕೊನೆಯಲ್ಲಿ ಈ ವಿಘಟನಾ ಭಾಷೆಗೆ ಅರ್ಥ ಸಿಕ್ಕಿ , ಅದುವರೆವಿಗೂ ಕಗ್ಗಂಟಾಗುವ ಭಾಷೆ ಸಾಮಾನ್ಯ ಭಾಷೆಯಾಗಿ ಕಾಣುತ್ತದೆ. ಅ -ಕಾರಣವಾದ ಭಾಷೆ ಸಕಾರಣ ಭಾಷೆಯಾಗಿ ಪರಿವರ್ತಿತವಾಗುತ್ತದೆ. ಇದೇ ರೀತಿ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯಲ್ಲಿ ‘ಮೂಕಜ್ಜಿಯ ಭಾಷೆ’ ಸಕಾರಣ ಭಾಷೆಯಾಗುತ್ತದೆ. ಆದ್ದರಿಂದ ‘ಹುಚ್ಚು ‘ ಎನ್ನುವುದು ಭಾಷೆಯಲ್ಲೇ ಆಗುವ ಅನುಭವವೆಂದು ಫುಕೋ ವಿಶ್ಲೇಷಿಸುತ್ತಾನೆ. ಮನುಷ್ಯ ತನ್ನ ಸ್ವಭಾವದ ನಿಯಮವನ್ನು ಯಾವಾಗಲಿ ಎದುರಿಸುತ್ತಿರುತ್ತಾನೆ. ಈ ನಿಯಮಾವಳಿಯಲ್ಲಿ ನಡೆಯುವ ತುಮುಲದಲ್ಲಿ ಹುಚ್ಚುತನ ತನ್ನ ಬಿಲ್ಲು ಬಾಣಗಳನ್ನು ಬತ್ತಳಿಕೆಯೊಳಗೆ ಇಟ್ಟುಕೊಂಡು ಬಿಟ್ಟಿತ್ತು . ‘ಹುಚ್ಚುತನ’ ಎಂಬುದು ಆಯಾ ಸಮಾಜದ, ಸಂಸ್ಕೃತಿಯ ವ್ಯಾಖ್ಯಾನವಾಗಿರುತ್ತದೆ. ೧೯ನೆ ಶತಮಾನದ ಆರಂಭದ ತನಕ ಮನುಷ್ಯ ಮನುಷ್ಯನನ್ನೇ ಕೇಂದ್ರವಾಗಿಟ್ಟುಕೊಂಡು ನೋಡುತ್ತಿರಲಿಲ್ಲ. ಆದ್ದರಿಂದ ಫ್ರಾನ್ಸಿನಲ್ಲಿ ಹುಚ್ಚರನ್ನು ಹಿಡಿದು ಹಡಗನ್ನು ಹತ್ತಿಸಿ ಹತ್ತಿರದ ದ್ವೀಪಗಳಲ್ಲಿ ಬಿಟ್ಟು ಬರುತ್ತಿದ್ದರಂತೆ. ಮನುಷ್ಯ ನಾಗರೀಕನಾಗಿ ಅಭಿವೃದ್ದಿ ಹೊಂದುತ್ತಾಹೊಂದುತ್ತಾ ಪ್ರಕ್ರುತ್ಯಿಂದ ದೂರವಾಗಿದ್ದೆ ಇದಕ್ಕೆ ಕಾರಣ ಎನ್ನುತ್ತಾನೆ. ಫುಕೋ ಅಲ್ಲದೆ ಧರ್ಮ ಎನ್ನುವುದು(ಅದರಲ್ಲೂ ಕ್ರಿಶ್ಚಿಯನ್ ಧರ್ಮ) ಮನುಷ್ಯನನ್ನು ತಪ್ಪೊಪ್ಪಿಗೆ ಒಯ್ಯುವ ಪ್ರಾಣಿಯನ್ನಾಗಿಸಿತು ಎಂದು ವಿಶ್ಲೇಷಿಸಿದ್ದಾನೆ.

ಸಾಹಿತ್ಯವು ವ್ಯಾಕರಣದ ನಿಯಮದಿಂದ ಭಾಷೆಯನ್ನೂ ನಗ್ನ ಸತ್ಯದ ಕಡೆಗೆ ಕೊಂಡೊಯ್ಯಲು ತುಡಿಯುತ್ತಿರುವ ಶಕ್ತಿ. ಅದು ಇನ್ನೂ ಪಳಗಿಸದ ಅನುಭವದೊಡನೆ ಗುದ್ದಾಡುತ್ತಿರುತ್ತದೆ. ಪ್ರತಿ ಪಟ್ಯ ರಚನೆಯಾಗುವಾಗಲು ಈ ಗುದ್ದಾಟ ಗೋಚರಿಸುತ್ತರಿತ್ತದೆ ಎಂದು ಬಾಲ್ಜಾಕ್, ಟಾಲ್ಸ್ಟಾಯ್ ಇವರ ಕೃತಿಗಳ ವಿಶ್ಲೇಷಣೆಯಿಂದ ತೋರಿಸಿಕೊಟ್ಟಿದ್ದಾನೆ ಫುಕೋ.

ಜ್ಞಾನದ ಉತ್ಖನನ ಹೊಸ ಚಾರಿತ್ರಿಕತೆ:

ಫುಕೋ ಮೂರನೇ ತರಗತಿಯಲ್ಲಿದ್ದಾಗ ತನ್ನ ಟೀಚರನ್ನು ‘ಗುಟ್ಟಾದ ಜ್ಞಾನ’ ಅಂದರೇನು ಎಂದು ಪ್ರಶ್ನಿಸಿದ್ದ. ಅದಕ್ಕೆ ‘ಈಗ ನಿನಗೆ ಅದು ಅರ್ಥವಾಗುವುದಿಲ್ಲ. ಹೈಸ್ಕ್ಕೂಲಿಗೆ ಹೋದಾಗ ಗೊತ್ತಾಗುತ್ತದೆ’ ಎಂಬ ಉತ್ತರ ಬಂದಿತ್ತು. ಹೈಸ್ಕ್ಕೂಲಿನಲ್ಲಿ ಕೇಳಿದಾಗ ಕೊನೆ ವರ್ಷದಲ್ಲಿ ಗೊತ್ತಾಗುತ್ತದೆ ಎಂಬ ಉತ್ತರ ಬಂತು. ಅಲ್ಲೂ ಅವನಿಗೆ ಗೊತ್ತಾಗಲಿಲ್ಲ. ಕಾಲೇಜಿನಲ್ಲಿ ಕೇಳಿದಾಗ ‘ದರ್ಶನ ಶಾಸ್ತ್ರ’ ಓದು ಆಗ ಗೊತ್ತಾಗುತ್ತದೆ ಎಂದರು . ಹೀಎಗೆ ಜ್ಞಾನದ ಮೂಲ ಏನು ಎಂಬ ಪ್ರಶ್ನೆ ಅವನನ್ನು ಜೀವಮಾನವಿಡೀ ಕಾಡಿತು. ಅದಕ್ಕಾಗಿ ಆಟ ಹುಡುಕಾಡತೊಡಗಿದ. ಇದರ ಪರಿಣಾಮವೇ ಆಟ ನಡೆಸಿದ್ದು ‘ಜ್ಞಾನದ ಉತ್ಖನನ’ವನ್ನು ಮನುಷ್ಯ ನಡೆಸಿಕೊಂಡು ಬಂದ ಜ್ಞಾನದ ಬೆಳವಣಿಗೆಯ ದಾರಿಯನ್ನು ಹುಡುಕಾಡತೊಡಗಿದ. ಇದರ ಪರಿಣಾಮವಾಗಿ ಆತ ರಚಿಸಿದ ಪುಸ್ತಕ ‘’.

f2ಚರಿತ್ರೆಯ ಸೃಷ್ಟಿಯಲ್ಲಿ ಮನುಷ್ಯನ ಪಾತ್ರವೇನು ಎಮ್ಬ ಪ್ರಶ್ನೆಯನ್ನು ಫುಕೋ ಹಾಕಿಕೊಂಡ. ಮಾಮೂಲಿ ‘ಚರಿತ್ರೆ’ಯಾ ಪರಿಕಲ್ಪನೆಯು ಕೆಲವು ಸಮಸ್ಯೆಗಳನ್ನು ಒಡ್ಡಿದವು. ಮೊದಲನೆಯದು ಕಾಲಕ್ರಮನಿಕೆಯಲ್ಲಿ ಬಿಡಿಬಿಡಿಯಾಗಿ ಘಟನೆಗಳ ಸರಮಾಲೆ ಎಂದು ವಿಂಗಡಿಸುವುದು. ಅದರಲ್ಲಿ ಒಂದಕ್ಕೊಂದು ಸಂಬಧವನ್ನು ಕಾಣದಿರುವುದು. ಈ ಚರಿತ್ರೆಕಾರನು ಅಸಂಬದ್ಧ ಘಟನೆಗಳನ್ನು ಸುಸಂಬದ್ದ ಮಾಡುವ ಕ್ರಿಯೆಯಲ್ಲಿ ತೊಡಗುತ್ತಾನೆ. ಅಂದರೆ ಕಾರ್ಯಕಾರಣೀ ಸಂಬಂಧವನ್ನು ಕಲ್ಪಿಸಲು ಪ್ರಯತ್ನಿಸುತ್ತ್ತಾನೆ. ಅದು ಯಾವ ವಿನ್ಯಾಸದಲ್ಲಿ ವಿಶ್ಲೇಷಿಸಲ್ಪಡಬೇಕೆಂದು ಹುಡುಕಾಟ ನಡೆಸುತ್ತಾನೆ. ಅಂದರೆ ನಿರಂತರತೆಯನ್ನು ಗುರುತಿಸುವ ಪರಿಪಾಟಲಲ್ಲಿ ತೊಡಗುತ್ತಾನೆ.

ಫುಕೋ ಕಾಲಕ್ರಮನಿಕ ಚರಿತ್ರೆಯು ಚಾರಿತ್ರಿಕ ಅರ್ಥ, ಲೋಕದೃಷ್ಟಿ , ನಾಗರೀಕತೆ ಇವುಗಳನ್ನು ಏಕಕೇಂದ್ರದಲ್ಲಿ ಬಂಧಿಸಲು ಪ್ರಯತ್ನಿಸುತ್ತದೆ. ಇದನ್ನು ಮಹಾಯುಗಗಳಾಗಿ ವಿಭಾಗಿಸಿ ನೋಡಲು ಪ್ರಯತ್ನಿಸುತ್ತದೆ.ಆರ್ಥಿಕ , ರಾಜಕೀಯ, ಸಾಂಸ್ಕೃತಿಕ ಮುಂತಾದ ಚರಿತ್ರೆಗಳನ್ನೆಲ್ಲ ಒಂದೇ ಚೀಲದಲ್ಲಿ ತುರುಕಲು ಪ್ರಯತ್ನಿಸುತ್ತದೆ ಎಂದು ವಿಶ್ಲೇಷಿಸಿದ. ಆದ್ದರಿಂದ ಚರಿತ್ರೆ ಘಟನಾವಳಿಗಳ ಚರಿತ್ರೆಯಾಗಬಾರದು. ಚರಿತ್ರೆಯು ಮಾನವನ ಮನಸ್ಸಿನ ಚರಿತ್ರೆಯಾಗಬೇಕು. ಆ ಚರಿತ್ರೆ ಕಾಲಾನುಕ್ರಮದ ಬೆಳವಣಿಗೆಯಲ್ಲಿ ಸಿಗುವುದಿಲ್ಲ. ನಾವೆಲ್ಲಾ ಈಗ ಬರೆದಿರುವುದು ಅಕ್ಷರ ಬಲ್ಲವರ ಚರಿತ್ರೆ, ಅಕ್ಷರದಲ್ಲಿ ಹಿಡಿದಿಟ್ಟಿಲ್ಲದ ಚರಿತ್ರೆ ಅಕ್ಷರ ಚರಿತ್ರೆಗಿಂತ ಎಷ್ಟೋ ಪಟ್ಟು ದೊಡ್ಡದು. ಇದನ್ನು ಅರಿಯಬೇಕಾದರೆ ಮತ್ತೆ ನಾವು ಕಥಾನಕಗಳಿಗೆ ಮರಳಬೇಕು. ವಿವಿಧ ಕೇಂದ್ರಗಳಲ್ಲಿ ನಿಂತು ನೋಡಿದಾಗ ಒಂದೇ ಘಟನೆಗೆ ವಿವಿಧ ಅರ್ಥ , ಲೋಕದೃಷ್ಟಿ , ಸ್ಥಾನ ಇರುತ್ತವೆ ಎಂದು ವಿಶ್ಲೇಷಿಸಿದ . ಅದಕ್ಕಾಗಿ ಅವನು ‘ಜ್ಞಾನದ ಉತ್ಖನನ’ ಎಂದು ಕರೆದ. ಇದರ ಪರಿಣಾಮವೇ ಎಡ್ವರ್ಡ್ ಸೈದನ ‘ಒರಿಯಂಟಲಿಸಂ’ ಭಾರತದಲ್ಲಿ ದಮನಿತರ (ಸಬಾಲ್ಟ್ರನ್) ಅಧ್ಯಯನ ಪ್ರಾರಂಭವಾಯಿತು . ಪ್ರಪಂಚದಲ್ಲಿರುವ ಅನಂತ ಪಟ್ಯಗಳ ವಿವಿಧ ಧ್ವನಿಗಳು ಕೇಳಿಸಲು ಪ್ರಾರಂಭವಾಯಿತು. ಈತ ಸಾವರ್ತಿಕತೆಯನ್ನು ತಿರಸ್ಕರಿಸಿ ಸ್ಥಳೀಯತೆಯನ್ನು ಅರಿವಿನ ಮುಂಚೂಣಿಗೆ ತಂದುಕೊಟ್ಟನು.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಒಂದು ಉತ್ತಮ ಉದಾಹರಣೆ. ಇಲ್ಲಿ ಮರುಳು ಮೂಕಜ್ಜಿ ಕೊಡುವ ಚರಿತ್ರೆ ದಿನಾಂಕಗಳುಳ್ಳ, ಬೆಳವಣಿಗೆಯ ಇತಿಹಾಸವಲ್ಲ. ಇಲ್ಲಿ ಸಾಮಾಜಿಕ , ಆರ್ಥಿಕ, ಸಾಂಸ್ಕೃತಿಕ, ಲೈಂಗಿಕ ನಡಾವಳಿಯ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ಹೆಚ್ಚು ಕಡಿಮೆ ಹೆಣ್ಣಿನ ಲೈಂಗಿಕಾತ್ಮತೆಯ ಚರಿತ್ರೆಯಂತೂ ಒಂದು ರೀತಿಯಲ್ಲಿ ರೂಪಕಾತ್ಮಕವಾಗಿ ಮರಳಿ ಮರಳಿ ಬರುವ ಸಾಂಕೇತಿಕವಾಗಿದೆ. ಆದಿಮಾನವ ಇನ್ನೊಂದು ಬಳಿಯಿಂದ ಹೊತ್ತುತಂದ ಹೆಣ್ಣಿನ ಲೈಂಗಿಕಾತ್ಮತೆಗೂ , ಸುಬ್ಬರಾಯನ ಸ್ನೇಹಿತನ ಜನ್ನನ ಲೈಂಗಿಕಾತ್ಮತೆಗೂ ವ್ಯತ್ಯಾಸವೇನಿಲ್ಲ. ಅಂದಿನ ಹೆಣ್ಣಿಗೆ ಅಲಂಕಾರಕ್ಕೆ ಇದ್ದ ಒಡವೆಯ ಆಸೆ ಇಂದಿನ ಹೆಣ್ಣಿನಲ್ಲೂ ಹುದುಗಿರುವುದು ಕಾಲದಿಂದಲೂ ಬಂದಿದ್ದೆ. ರಾಜಕೀಯ ಶಕ್ತಿಯಿಂದ, ಬಲಪ್ರಯೋಗದಿಂದ ಬದಲಾಗುತಿದ್ದ ಒಂದನ್ನು ಮೆಟ್ಟಿ ಇನ್ನೊಂದನ್ನು ಸ್ಥಾಪಿಸುವುದು. ನಾಗಿ ಲೈಂಗಿಕ ದೌರ್ಜನ್ಯ ಒಳಗಾಗುವುದು. ಆದರೂ ಅವಳ ಗಂಡ ರಾಮಣ್ಣ ಅವಳನ್ನು ಪ್ರೀತಿಸುವುದು, ಲೈಂಗಿಕತೆಯ ಅನುಭವದಿಂದ ವಂಚಿತಳಾಗೆ ಉಳಿಯುವ ಮೂಕಜ್ಜಿ. ಈ ಎಲ್ಲ ಚರಿತೆಯೂ ಮನುಷ್ಯನ ಇತಿಹಾಸದ ಚರಿತ್ರೆಯಾಗಿ ರೂಪುಗೊಳ್ಳುವುದು .ಮತ್ತು ಮೂಕಜ್ಜಿ ಮೂಲಕ ಇತಿಹಾಸದ ಒಡಪು ಬಿಚ್ಚಿಕೊಳ್ಳುವುದು. ಇವೆಲ್ಲ ದಿನಾಂಕ ಕಾರ್ಯಾ-ಕಾರಣಿ ಸರ್ಪಲಿಯುಲ್ಲ ಚರಿತ್ರ್ಯಲ್ಲ. ಇಲ್ಲಿ ಕಾರಂತರು ನಡೆಸುತ್ತಿರುವದು ಮನಸ್ಸಿನ ಚರಿತ್ರೆ. ಇದನ್ನೇ ಫುಕೋ ‘ಜ್ಞಾನದ ಉತ್ಖನನ’ ಎಂದು ಕರೆಯುವುದು.

ಇಲ್ಲಿ ಮತ್ತೊಂದು ಮಹತ್ವ ಪೂರ್ಣ ಅಂಶವೆಂದರೆ ಮೂಕಜ್ಜಿಯನ್ನು ‘ಮರುಳು’ ಎಂದು ಊರಿನ ಜನರೆಲ್ಲಾ ಭಾವಿಸುವುದು . ಆದರೆ ಆ ‘ಮರುಳಿ’ಗೆ ಅರ್ಥ ಸಿಗುವುದು ಮೂಕಜಿ ಮತ್ತು ಅವಳ ಮೊಮ್ಮಗ ಸುಬ್ಬರಾಯ ಇಬ್ಬರೀ ಸೇರಿ ನಾಲ್ಕೈದು ಸಾವಿರ ವರ್ಷಗಳಿಂದ ಹರಿದು ಬಂದ ‘ಸೃಷ್ಟಿ ಸಮಸ್ಯೆ’ಯೊಂದನ್ನು ಮಥಿಸಳು ಇಲ್ಲಿ ಯತ್ನಿಸುವುದು. ಅವಾಸ್ತವಿಕವೆನಿಸುವ ಅಜ್ಜಿ, ಅನೇಕ ವಾಸ್ತವಿಕ ಇತಿಹಾಸಾಮ್ಶಗಳನ್ನು ತನ್ನ ಒಳದಿಳಿವಿನಿಂದ ನಮ್ಮ ಮುಂದಕ್ಕೆ ಇರಿಸುವುದು.

ತಂತಮ್ಮ , ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನ ಕಥೆಯೂ ಇಲ್ಲಿದೆ. ಆದ್ದರಿಂದಾಗಿ ಇಂದಿನ

ನಮಗೆ ಕೇಳಿಸದೆ ಹೋದ ಕೆಲವು ಯಾತನೆಯ ಧ್ವನಿಗಳನ್ನು ಕೇಳುವಂತೆ ಮಾಡುತ್ತವೆ. ಈ ಮಾತುಗಳು ಫುಕೋನ ಹೊಸ ಚಾರಿತ್ರಿಕತೆಗೆ ಸಂವಾದಿಯಾದ ಮಾತುಗಳು. ಅಲ್ಲದೆ ಸತ್ಯಕ್ಕೆ ಒಂದು ಮುಖದಲ್ಲಿರಿವುದಿಲ್ಲ. ನಾನ ಮುಖಗಳಿರುತ್ತವೆ ಎಂಬ ಪ್ರಮುಖ ಅರಿವನ್ನು ತಂದುಕೊಡುತ್ತದೆ.

ಸಂವಾದ ಅಧಿಕಾರ ಮತ್ತು ಜ್ಞಾನ                                                                                                    

ನಾವು ಈ ಕಾಲದಲ್ಲಿ ನಿಂತು ನಡೆಸುವ ಅನುಸಂಧಾನವೆಲ್ಲ ಒಂದರ್ಥದಲ್ಲಿ ಭೂತಕಾಲದೊಡನೆ ನಡೆಸುವ ಸಂವಾದವೇ ಆಗಿರುತ್ತದೆ. ಆದ್ದರಿಂದ ಇಲ್ಲಿ ಸಂವಾದ ಎಂದರೆ ಪರಂಪರೆ ಎಂದೇ ತಿಳಿಯಬಹುದು.

ಅಧಿಕಾರ ಅಥವಾ ಪ್ರಭುತ್ವ ಎಂಬುದು ಅರಮನೆಯಲ್ಲೋ, ವಿಧಾನ ಸೌಧದಲ್ಲೋ , ಲೋಕಸಭೆಯಲ್ಲೋ ಕೇಂದ್ರೀಕೃತವಾಗಿರುವುದಿಲ್ಲ. ಅದು ಒಂದು ರೀತಿಯಲ್ಲಿ ಸರ್ವಾಂತರ್ಯಾಮಿ ಎಂದು ಫುಕೊಗೆ ವಿಶ್ಲೇಷಿಸುತ್ತಾನೆ. ಅಧಿಕಾರ ಗದ್ದುಗೆ ಏರುವುದರಲ್ಲಿ ಇಲ್ಲ. ಅದನ್ನು ನಿಭಾಯಿಸುವುದರಲ್ಲಿ ಮೇಲೆ ನಿಂತಿರುತ್ತದೆ. ಎಲ್ಲಾ ಜ್ಞಾನ ಶಾಖೆಗಳು ತಾರತಮ್ಯಗಳ ಮೇಲೆ ನಿಂತಿರುತ್ತದೆ. ಅಧಿಕಾರ ಯಾವಾಗಲೂ ಈ ತಾರತಮ್ಯಗಳನ್ನು ಬಳಸಿಕೊಂಡು ಸಮಾಜವನ್ನು ನಿರ್ಮಿಸುತ್ತವೆ. ಅದಕ್ಕೆ ತಕ್ಕ ಜ್ಞಾನವನ್ನು ಸೃಷ್ಟಿಸಿಕೊಳ್ಳುತ್ತದೆ.

ಅಧಿಕಾರ ನ್ನುವುದು ರಾಜಕೀಯ , ಧಾರ್ಮಿಕ, ಆರ್ಥಿಕ, ಸಾಮಾಜಿಕ ನೆಲೆಗಳೆಲ್ಲಾ ಸೂಕ್ಷ್ಮ ಶಕ್ತಿಯಾಗಿ ಕೆಲಸ ಮಾಡುತ್ತಿರುತ್ತದೆ. ಅಧಿಕಾರ, ಜ್ಞಾನ, ಲೈಂಗಿಕತೆಯ ಚಲಾವಣೆಯ ಬಗ್ಗೆ ಫುಕೋನ ಅರ್ಥದಲ್ಲಿ ಅರಿಯಬೇಕಾದರೆ ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು.

‘ಸಂಸ್ಕಾರ’ ಪರಂಪರಾಗತ ಮೌಲ್ಯವಾಗಿ ನಡೆದುಕೊಂಡು ಬಂದ, ಧಾರ್ಮಿಕ, ಆರ್ಥಿಕ, ಲೈಂಗಿಕ ವಿಷಯದ ಮೇಲಿನ ಸಂವಾದ, ಪ್ರತಿಕ್ರಿಯೆ ಮತ್ತು ವ್ಯಾಖ್ಯಾನ. ಇವೆಲ್ಲಕ್ಕೂ ಕೇಂದ್ರವೆಂದರೆ ಧರ್ಮ ಕೇಂದ್ರಿತ ಅಧಿಕಾರ. ಅದು ಸೃಷ್ಟಿಸಿದ ಜ್ಞಾನ ಮತ್ತು ನಿರೂಪಿಸಿದ ಸಾಮಾಜಿಕ, ಸಾಂಸ್ಕೃತಿಕ ನಿಯಮಗಳು ಮತ್ತು ಅವುಗಳ ಉಲ್ಲಂಘನೆ. ಪ್ರಾಣೆಶಾಚಾರ್ಯ ಕಾಶಿಗೆ ಹೋಗಿ ವೇದಾಧ್ಯಯನ ಮಾಡಿ ಧಾರ್ಮಿಕ ಚರ್ಚೆಯಲ್ಲಿ ಅನೇಕ ವಿದ್ವಾಂಸರನ್ನು ಸೋಲಿಸಿ ಪ್ರಶಸ್ತಿಗಳಿಸಿಕೊಂಡು ಬಂದಿರುವ ಜ್ಞಾನಿ. ಧಾರ್ಮಿಕ ನಿಯಮಗಳನ್ನು ಪಾಲಿಸಿ ಮುಂದಿನ ಪೀಳಿಗೆಗೆ ಅದನ್ನು ಅನುಸರಿಸಿಕೊಂಡು ಹೋಗುವಂತೆ ಪರಂಪರೆಯನ್ನು ರೂಢಿಸುತ್ತಿರುವವರು. ಧಾರ್ಮಿಕ ಸಂಸ್ಥೆ ಕೇವಲ ಜ್ಞಾನದ ವಾಹಿನಿಯಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಂದ್ರಿಯ ಮತ್ತು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದನ್ನೂ ಕಲಿಸುತ್ತದೆ.  ಇದನ್ನೇ ಫುಕೊದ ಸೂಕ್ಷ್ಮ ಅಧಿಕಾರ ಎಂದು ಕರೆಯುತ್ತಾನೆ. ಆತನ ಪ್ರಕಾರ ಅಧಿಕಾರ ಎಂಬುದು ಎಲ್ಲೆಲ್ಲೂ ಇರುತ್ತದೆ. ಇದರ ಪರಿಣಾಮವಾಗಿ ಆಚಾರ್ಯರು ತಮ್ಮ ದೇಹವನ್ನು ಲೈಂಗಿಕದಂಡನೆಗೆ ಒಪ್ಪಿಸಿಕೊಳ್ಳುವುದು ಒಂದು. ಅವರ ನಾನ, ತಿಳುವಲಿಕೀ ಅವರಿಗೆ ಅಗ್ರಹಾರದಲ್ಲಿ ಉನ್ನತ ಸ್ಥಾನಕೊಟ್ಟು ಮನ್ನಣೆ ಮಾಡಿರುತ್ತದೆ. ಆಚಾರ್ಯರು ಹಣವಂತರಲ್ಲದಿದ್ದರೂ ಧಾರ್ಮಿಕ ಅಧಿಕಾರ ಪದೆದವಾರು. ಇದಕ್ಕೆ ತದ್ವಿರುದ್ದವಾಗಿರುವವನು ನಾರಣಪ್ಪ. ಕುಡುಕ, ವಿಷಯಲಂಪಟ , ಸೂಳೆ ಚಂದ್ರಿಯನ್ನು ಅಗ್ರಹಾರದ ತನ್ನ ಮನೆಯಲ್ಲೇ ತಂದು ಇಟ್ಟುಕೊಂಡಿರುವವನು. ಆ ಸಮಾಜದ ಕಟ್ಟುಕಟ್ಟಳೆಯನ್ನು ಮೀರಿದವನು, ರಸಿಕ ಇತ್ಯಾದಿ. ಯಾವುದೇ ಧರ್ಮವೂ ತಾನು ವಿಧಿಸಿದ ನಿಯಮವನ್ನು ಮೀರಿದರೆ ಅಂಥವರನ್ನು ಶಿಕ್ಷಿಸುವ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಇಲ್ಲಿಯ ಸಂದಿಗ್ಧತೆ ಎಂದರೆ ಹಾಗೇನಾದರೂ ಮಾಡಿದರೆ ತಾನು ಮುಸಲ್ಮಾನನಾಗುವೆ ಎಂದು ನಾರಣಪ್ಪ ಹೆದುರುವುದು. ಇದರಿಂದ ಅವನನ್ನು ಆತಿಯಿಂದ ಹೊರಗಿಡಲು ಸಾಧ್ಯವಾಗುವುದಿಲ್ಲ. ಅವನು ಸತ್ತಾಗ ಸಂಸ್ಕಾರದ ಸಮಸ್ಯೆ ಉಧ್ಬವವಾಗುವುದು ಈ ಕಾರಣದಿಂದ, ಲೈಂಗಿಕಾತ್ಮಕತೆಯಿಂದ.ಅಗ್ರಹಾರದ ಬ್ರಾಹ್ಮಣರು ಯಾರೂ ಅವನ ಸಂಸ್ಕಾರ ಮಾಡಲು ಮುಂದಾಗುವುದಿಲ್ಲ. ಇಂಥಹ ಸ್ಥಿತಿಯಲ್ಲಿ ಧರ್ಮಶಾಸ್ತ್ರ ಏನು ಹೇಳುತ್ತದೆಯೆಂದು ಎಲ್ಲಾ ಸಮಸ್ಯೆ. ಇದರ ಸುತ್ತಲೇ ನಡೆಯುತ್ತಿದ್ದ ಸಂವಾದ ಚಂದ್ರಿಯು ತನ್ನ ಮೈಮೇಲೆ ಇದ್ದ ಒಡವೆಯೆನ್ನೆಲ್ಲಾ ಕಳಚಿ ಆಚಾರ್ಯರ ಮುಂದಿಟ್ಟಾಗ  ಇಲ್ಲಿ ಚಂದ್ರಿಗೂ , ಅಗ್ರಹಾರದ ಬ್ರಾಹ್ಮಣರಿಗೂ ಯಾವುದೇ ಸಂವಾದ ನಡೆಯುವುದಿಲ್ಲ. ಆದರೆ ಈ ಮೌನ ಪ್ರತಿಕ್ರಿಯೆ ಅಗ್ರಹಾರದ ಬ್ರಾಹ್ಮಣರ ಸಂವಾದವನ್ನೇ ತಿರುವು ಮುರುವು ಮಾಡುತ್ತದೆ. ಆಚಾರ್ಯರು ಧರ್ಮಶಾಸ್ತ್ರಾದ ಮೊರೆ ಹೋಗುತ್ತಾರೆ. ಉತ್ತರ ಸಿಗುವುದಿಲ್ಲ. ಆಚಾರ್ಯರ ಜ್ಞಾನ ಸಂಪತ್ತಿಗೆ ಇದೊಂದು ದೊಡ್ಡ ಸವಾಲಾಗುತ್ತದೆ.

ಚಂದ್ರಿಯ ಜೊತೆ ಅಚಾನಕ್ಕಾಗಿ ಆದ ಲೈಂಗಿಕ ಸಂಬಂಧದಿಂದ ಆಚಾರ್ಯರ ಇಡೀ ಜೀವನದೃಷ್ಟಿ , ತಪಸ್ಸು , ಲೈಂಗಿಕ ಹಿಡಿತ, ಜ್ಞಾನಾರ್ಜನೆ ಎಲ್ಲವೂಉ ಮುರಿದುಬಿದ್ದು ಇವರೂ ನಾರಣಪ್ಪನೇ ಆಗಿಬಿಡುತ್ತಾರೆ. ಅಗ್ರಹಾರದ ಯಾರಿಗೂ ಇವರು ಉತ್ತರ ಕೊಡುವ ಶಕ್ತಿಯನ್ನೇ ಕಳೆದುಕೊಂಡುಬಿಡುತ್ತಾರೆ . ಇಲ್ಲಿ ಅವರ ಮಾತು / ಭಾಷೆ ಸೋಲುತ್ತದೆ. ಹೆಂಡತಿ ಸಾಯುತ್ತಾಳೆ. ಕೊನೆಗೆ ನಾರಣಪ್ಪನ ಹೆಣದ ಸಂಸ್ಕಾರವಿರಲಿ, ತಮ್ಮ ಧರ್ಮದಂತೆ ಯಾವ ಸಂಸ್ಕಾರವನ್ನೂ ಪಾಲಿಸಲಾಗದೆ ಇವರೇ ನಾರಣಪ್ಪನಾಗಿ ಬಿಡುತ್ತಾರೆ.

ಇಷ್ಟೇ ಅಲ್ಲ. ಇಲ್ಲಿ ಮುಂದಿನ ಸಂವಾದ ನಡೆಯುವುದೇ ಇಲ್ಲ. ಭಾಷೆ ಮೂಕವಾಗುತ್ತದೆ. ಆಲೋಚನೆಗೆ ಅಂತ್ಯ ಒದಗುತ್ತದೆ. ಒಂದು ವ್ವ್ಯವಸ್ಥೆ ನಾಶವಾಗಿ ಇನ್ನೊಂದು ವ್ಯವಸ್ಥೆ ಹುಟ್ಟುವಾಗಿನ ಸಂದಿಗ್ದ ಹಾಗೆಯೇ ಉಳಿಯುತ್ತದೆ , ಮೌನವಾಗುತ್ತದೆ.  ಹೀಗೆ ಮೌಲ್ಯ, ಪಲ್ಲಟವಾಗುವಾಗ ಹೊಸ ಭಾಷೆಯ ಹೊಸ ಸಂವಾದದ ಶೂನ್ಯ ಆವರಿಸುತ್ತದೆ.

ಮಠ ಮಾತ್ರ ನಾರಣಪ್ಪನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ – ಬ್ರಾಹಮನರ ಅಹವಾಲನ್ನು ಕೇಳದೆ ಇಲ್ಲಿ ಉಳಿದ ಬ್ರಾಹ್ಮಣರ ಮಾತು ಮಠದ ಶಕ್ತಿಗೆ ಹೋಲುತ್ತದೆ. ಹೀಗೆ ಒಂದೊಂದು ಸಂವಾದದ ಸೋಲಾಗಿ ಕೊನೆಗೊಳ್ಳುತ್ತದೆ. ಮಾತನ್ನು ಮೌನವಾಗಿಸುತ್ತದೆ. ಕಾದಂಬರಿಯಲ್ಲಿ ಆಚಾರ್ಯರು ಅಧಿಕಾರ ಚಲಾಯಿಸಲು ಸಾಧ್ಯವಾಗುವುದೇ ಇಲ.

f3ಫುಕೋ ಪ್ರಕಾರ ಎಲ್ಲಾ ಅಧಿಕಾರ ಸಂಸ್ಥೆಗಳೂ ಅಧಿಕಾರ, ಜ್ಞಾನ ಮಾತು ಲೈಂಗಿಕತೆಯ ಸಂವಾದದ ಮೇಲೆ ನಿಂತಿರುತ್ತವೆ. ಅದು ರಾಜಕೀಯ, ಧಾರ್ಮಿಕ, ಶೈಕ್ಷಣಿಕ , ಸಾಮಾಜಿಕ, ಲೈಂಗಿಕ (ಮದುವೆ, ಮನೆ, ಯಜಮಾನ ಇತ್ಯಾದಿ) ಈ ಎಲ್ಲಾ ಸಂಸ್ಥೆಗಳಲ್ಲೂ  ಕೆಲಸ ಮಾಡುತ್ತಿರುತ್ತದೆ ಎಂದು ಹೇಳುವುದು ಇಂಥ ಸಂಧರ್ಭದಲ್ಲೇ. ದಮನಕ್ಕೊಳಗಾದವರು ದಮನಿಸುವವರಿಗೆ ಅವರ ಅಧಿಕಾರಕ್ಕೆ ತಿರುಗೇಟು ಕೊಡುತ್ತಿರುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ದೇವನೂರರ ಒಡಲಾಳ, ಶೈಶೂಕ ವರ್ಗದ ಎತ್ತಪ್ಪನ ಅಧಿಕಾರ/ ಬಲ ಮತ್ತು ಪ್ರಭುತ್ವದ ಪೋಲಿಸ್ ಬಲ ಎರಡೂ ಒಟ್ಟಿಗೆ ಪ್ರಯೋಗವಾದರೂ ಕಡೆಗೆ ಅವೆರಡನ್ನೂ ಎದುರಿಸಿ ಇಬ್ಬರಿಗೂ ಕೈಕೊಡುವು ರೀತಿ ಯಾವುದೇ ಅಧಿಕಾರ/ಬಲವನ್ನು ಮಾಡುವ ರೀತಿ ಉತ್ತಮ ಉದಾಹರಣೆ. ಅಂತೆಯೇ ಕುಸುಮಬಾಲೆಯಲ್ಲಿ ಗಾರೆ ಸಿದ್ದ ಮಾವ ತನ್ನನ್ನು ಥಳಿಸಿ ದಂಡ ಹಾಕಿವರಿಂದಲೇ ದಂಡ ವಸೂಲಿ ಮಾಡಿಕೊಳ್ಳುವ ಕ್ರಮ ಒಂದು ಅಧಿಕಾರವನ್ನು ವ್ಯಂಗ ಮಾಡುವ ಕ್ರಮ. ಹೀಗೆ ದಮನಿತರ ಅಧಿಕಾರ ಧಿಕ್ಕಾರ ಪ್ರತಿಭಟನೆಯಾಗಿ ಸಮಾಜದಲ್ಲಿ ಹೊಮ್ಮುತ್ತದೆ.

ಫುಕೋನ ಲೈಂಗಿಕಾತ್ಮಕತೆಯ ಮೇಲೆ ಬರೆದ ‘ಹಿಸ್ಟರಿ ಆಫ್ ಸೆಕ್ಶುವಾಲಿಟಿ’ ಹೆಣ್ಣಿನ ಬಿಡುಗಡೆಯ ಹಾದಿಯೆಡೆಗೆ ಹೊಸ ದಿಕ್ಕಿನಲ್ಲೂ ಕೊಂಡೊಯ್ಯುತ್ತದೆ . ಮನುಷ್ಯನು  ಬಂಧನದಿಂದ ಬಿಡುಗಡೆಯ ಕಡೆಗೆ ಕೊಂಡೊಯ್ಯುವ ಮಾರ್ಗದರ್ಶಕನಾಗಿ  ಹೊಸ ಮನುಷ್ಯನನ್ನು ಸೃಷ್ಟಿಸುವ ಕಡೆಗೆ ತುಡಿಯುವಂತೆ ಮಾಡುವ ದಾರ್ಶಿಕನಾಗಿ ಫುಕೋ ಮಾಡಿದ್ದಾನೆ.

ಈ ಮಿಷೆಲ್ ಫುಕೋ ಹುಟ್ಟಿದ್ದು ೧೫ ನೇ ಅಕ್ಟೋಬರ್ ೧೯೨೬ರಂದು. ಫ್ರಾನ್ಸಿನ ಪಾಯಿಟಲ್ಸ್ ಎಂಬ ಊರಲ್ಲಿ. ಈತನ ತಂದೆ ಹೆಸರಾಂತ ಡಾಕ್ಟರ್ . ತನ್ನ ಮಗನೂ ತನ್ನಂತೆ ಡಾಕ್ಟರ್ ಆಗಬೇಕೆಂದು ಅಪೇಕ್ಷಿಸುತ್ತಾನೆ . ಅವನ ವಿದ್ಯಾರ್ಥಿ ಜೀವನ ಅಷ್ಟು ಫಲಪ್ರದವಾಗಿರಲಿಲ್ಲ. ತುಂಬಾ ಬುದ್ದಿವಂತನಾದರೂ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದ , ಮನೋ ವಿಜ್ಞಾನಿಯ ಹತ್ತಿರ ಹೋದಾಗ ಅವನಿ ಮನೋವಿಜ್ಞಾನದ ಮೇಲೆ ಆಸಕ್ತಿ ಹುಟ್ಟಿತು. ಆಗ ೧೯೫೨ ರಲ್ಲಿ ಮನೋ ವಿಜ್ಞಾನದಲ್ಲಿ ಬಿ.ಎ ಪದವಿ ಪಡೆದ. ೧೯೫೦ ರಿಂದ ೧೯೫೩ ರ ವರೆಗೆ ಕಮ್ಯುನಿಸ್ಟ್ ಪಾರ್ಟಿಯನ್ನು ಸೇರಿದ್ದ. ಆದರೆ ಭ್ರಮಾನಿರಸನಗೊಂಡ. ೧೯೫೩ -೫೪ ರಲ್ಲಿ ಶಾಲೆಯ ಹುಡುಗರಿಗೆ ಮನೋ ವಿಜ್ಞಾನವನ್ನು ಪಾಠ ಮಾಡಿದ. ನಂತರ ದರ್ಶನ ಶಾಸ್ತ್ರದಲ್ಲಿ ಮಾಸ್ಟರ್ ಪದವಿಯನ್ನು ಪಡೆದ. ಆದರೆ ಅವನು ಯಾವ ವಿಷಯದಲ್ಲಿ ಪರಿಣತನೆಂದು ಕೇಳಿದರೆ ‘ದರ್ಶನ್ ಶಾಸ್ತ್ರ’ ದಲ್ಲಂತೂ ಅಲ್ಲ ಎಂಬ ಉತ್ತರ ಬರುತ್ತದೆ. ಮನಃಶಾಸ್ತ್ರಜ್ಞ ಅಂದರೆ ಮಾಮೂಲಿ ಮನಃಶಾಸ್ತ್ರಗ್ನನೂ ಅಲ್ಲ. ಚರಿತ್ರೆಕಾರನ ಅಂದರೆ ಅದೂ ಅಲ್ಲ. ಆದರೆ ಆಟ ಸಾಮಾಜಿಕ ಸಂಸ್ತೆಗಳ , ಮನಃಶಾಸ್ತ್ರ, ಮಾನಸಿಕ ವಿಜ್ಞಾನ , ಕಾರಾಗೃಹ ವ್ಯವಸ್ಥೆ ಮತ್ತು ಮಾನವನ ಲೈಂಗಿಕಾತ್ಮಕತೆಯ ವಿಶ್ಲೆಶಕನಾಗಿ ಕಂಡು ಬರುತ್ತಾನೆ. ಈತ ಸಂರಚನಾವಾದಕ್ಕೆ ಸಿಕ್ಕಿ ಬಿದ್ದಿದ್ದ ವಿದ್ವಾಂಸರನ್ನು ಬಿಡುಗಡೆಗೊಳಿಸಿ ರಚನೋತ್ತರವಾದವನ್ನು ಹುಟ್ಟು ಹಾಕಿದವರಲ್ಲಿ ಪ್ರಮುಖ. ಅಧಿಕಾರ, ಜ್ಞಾನ ಮತ್ತು ಭಾಷೆಗೂ ಇರುವ ಸಂಬಂಧವನ್ನು ಈಗ – ಅದರಲ್ಲೂ ಅಭಿವೃದ್ದಿ ಹೊಂದುತ್ತಿರುವ, ದಮನಕ್ಕೊಳಗಾದವರ ಚರಿತ್ರೆಯನ್ನು ಪುನಃರಚಿಸುವಲ್ಲಿ ಕ್ರಿಯಾಶೀಲವಾಗಿ ವಿಶ್ಲೇಷಿಸಲಾಗುತ್ತಿದೆ.

ಇದಕ್ಕೂ ಮುಖ್ಯವಾಗಿ ಲೈಂಗಿಕಾತ್ಮಕತೆ ಮತ್ತು ಸ್ತ್ರೀ ವಿಮೊಚನ್ನ ಚಳುವಳಿಗಳಲ್ಲಿ ಇವನ ಆಲೋಚನಾ ಕ್ರಮ ಮುಂಚೂಣಿಯಲ್ಲಿದೆ. ಲೈಂಗಿಕಾತ್ಮಕತೆಯ ಬಗ್ಗೆ ಆರು ಸಂಪುಟಗಳಲ್ಲಿ ಬರಬೇಕಾದ ಪುಸ್ತಕಗಳಲ್ಲಿ ಎರಡನ್ನೂ ಮಾತ್ರ ಪೂರ್ಣಗೊಳಿಸಿದ್ದ. ಸಂದರ್ಶಕರೊಬ್ಬರು ಈತನ ಜೀವನದ ಬಗ್ಗೆ ಕೇಳಿದಾಗ ಆಟ ಹೇಳಿದ್ದು “ನನ್ನ ವ್ಯಯಕ್ತಿಕ ವಿಷಯವನ್ನು ಪೋಲಿಸಿನವರ ದಾಖಲೆಯಲ್ಲಿ ನೋಡಬಹುದು. ನನ್ನ ಚಟುವಟಿಕೆಗಳನ್ನು ಅಧಿಕಾರಶಾಹಿಗಳ ದಫ್ತಿರನಲ್ಲಿ ನೋಡಬಹುದು. ಫುಕೋ ನ ಭಾಷಣಗಳ ಆಡಿಯೋಗಳು ಈಗ ಲಭ್ಯವಿದೆ. ಆಟ ನಡೆದದ್ದೇ ದ್ದರಿ. ಅಸಲಿ ವಿದ್ವಾಂಸನೊಬ್ಬನ ಅಂತ್ಯ ಅನಿರೀಕ್ಷಿತವಾಯಿತು.

ಕಾಮೆಂಟ್‌ಗಳಿಲ್ಲ: