ಮಂಗಳವಾರ, ಆಗಸ್ಟ್ 12, 2014

ಕೆ.ಟಿ.ಶಿವಪ್ರಸಾದ್ ಅವರಿಗೆ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ


-ನಾಗರಾಜ ಹೆತ್ತೂರು



  2 ದಿನದಿಂದ ಫೆಸ್ ಬುಕ್ ಕಡೆ ತಲೆ ಹಾಕಿರಲಿಲ್ಲ. ಕೆಲಸದ ಒತ್ತಡ ಜೊತೆಗೆ ಇದರ ಮಾಯೆಯಿಂದ ಸಾಧ್ಯವಾದಷ್ಟು ದೂರ ಇರಬೇಕು ಎಂದು ನಿರ್ಧರಿಸಿಕೊಂಡಿದ್ದೇನೆ. ಆದರೂ ಕೆಲವೊಂದನ್ನು ಹಂಚಿಕೊಳ್ಳಲೇಬೇಕು. ನೆನ್ನೆ ಸುವರ್ಣ ಮೈಸೂರಿನಿಂದ ಕರೆ ಮಾಡಿ ನಿಮ್ಮ ಗುರುಗಳಿಗೆ ವರ್ಣಶಿಲ್ಪಿ venkatappa ಪ್ರಶಸ್ತಿ ಬಂದಿದೆ ಎಂದರು. ನನಗೋ ಖುಷಿ ಮೇಲೆ ಖುಷಿ.... 


  ನೆನ್ನೆ ಹಾಸನದಲ್ಲಿ ಅಹಿಂದ ಐಕ್ಯತಾ ಸಮೇವೇಶದಲ್ಲಿ ಇದ್ದ ಕಾರಣ ಮಾತನಾಡಲು ಸಾಧ್ಯವಾಗಿರಲಿಲ್ಲ. ಬೆಳಗ್ಗೆ ಎದ್ದು ಮಾತನಾಡಿದೆ. ಗುರುಗಳು ಪ್ರಶಸ್ತಿ ಹಿಂದೆ ಹೋದವರಲ್ಲ. ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದಾಗ ಸ್ವೀಕರಿಸಲಿಲ್ಲ. ಜಿಲ್ಲಾಧಿಕಾರಿ ಮೂಲಕ ಅವರ ಮನೆಗೆ ತಲುಪಿಸಲಾಯಿತು.. ಆ ಸಂದರ್ಭ ಅವರ ಮನೆಗೆ ಬೇಟಿ ನೀಡಿ ಪ್ರಶಸ್ತಿ ನೀಡಲು ಜಿಲ್ಲಾಧಿಕಾರಿ ಹೋಗಿದ್ದರು. ಕೆ.ಟಿ ಯವರನ್ನು ಸಾರ್ ಒಂದು ಫೋಟೋಗೆ ಬನ್ನಿ ಎಂದು ಕರೆದರು. ಕೆ.ಟಿ ಒಪ್ಪಲಿಲ್ಲ. ಕೊನೆಗೆ ಡಿಸಿ ನೋಡಿ ಕಲಾವಿದರೆ ನಮಗೂ ಇಂತಹ ಸಂದರ್ಭ ಸಿಕ್ಕುವುದು ಅಪರೂಪ. ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂದರ್ಭ ಸಿಕ್ಕಿದೆ ಬನ್ನಿ ಎಂದು ಒಪ್ಪಿಸಿ ಫೋಟೋ ತೆಗೆಸಿಕೊಂಡರು. 


 ಇಂತಹ ನಮ್ಮ ಗುರುಗಳಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ.. 3 ಲಕ್ಷ ರೂ. ನಗದು... ತಗಂಡು ಏನು ಮಾಡ್ತೀರಿ ನಮ್ ಗೆ ಕೊಡಿ ನಾವು ಬುದ್ದ ವಿಹಾರ ಮಾಡ್ತಿವಿ ಎಂದೆ. ಲೋ ಇಲ್ಲ ಕಣೋ ಆಗ್ಲೆ ದುಡ್ಡನ್ನು ಒಡನಾಡಿ ಸಂಸ್ಥಗೆ ಕೊಡ್ತಿನಿ ಅಂತಾ ಹೇಳಿ ಬಂದೆ ಎಂದರು... ಮೈಸೂರಿನ ಒಡನಾಡಿ ಸಂಸ್ಥೆಯ ಟ್ರಸ್ಟಿಯೂ ಆಗಿರುವ ಕೆಟಿ. ಬಂದ ಪ್ರಶಸ್ತಿ ಹಣದಲ್ಲಿ 1` ಲಕ್ಷ ರೂ ಗಳನ್ನು ಒಡನಾಡಿಗೆ ಘೋಷಿಸಿದ್ದಾರೆ.. ಅಲ್ಲಿಗೆ ಬಂದು ನೋಡೋ.. ಅವರ ಪಾಡು ಏನು ಗೊತ್ತಾಗುತ್ತದೆ. ಹಾಗೆ ನೋಡಿದರೆ ಎಲ್ಲಾ ಹಣವನ್ನು ಅಲ್ಲಿಗೆ ಕೊಡಬೇಕಿತ್ತು. ಆದರೆ ಈಗ ಸಾಧ್ಯವಾಗುತ್ತಿಲ್ಲ. ಎಂದರು. ಎಂಥಾ ದೊಡ್ಡ ಮನಸ್ಸು... ಉಳಿದೆ ಹಣ ಎಂದೆ... 2 ವರ್ಷದಿಂದ ಒಂದು ಪೇಯಿಂಟಿಂಗ್ ಸೇಲ್ ಮಾಡಿಲ್ಲ.. ನಾವು ಬದುಕ್ಬೇಡ್ವೆನೋ ಎಂದು ನಕ್ಕರು.... ಸದಾ ಸಮಾಜಮುಖಿಯಾಗಿ, ದಲಿತ ಅಲ್ಲದಿದ್ದರೂ ದೀನ ದಲಿತರ ಪರವಾಗಿ ಚಿಂತಿಸುವ ದಲಿತ ಸಂಘರ್ಷ ಸಮಿತಿಯಲ್ಲಿ ದುಡಿಯುತ್ತಿರುವ ಗುರುಗಳಿಗೊಂದು ವಿಶ್ ಹೇಳಿ...

ಕಾಮೆಂಟ್‌ಗಳಿಲ್ಲ: