ಬುಧವಾರ, ಜುಲೈ 20, 2016

ಕಾಶ್ಮೀರ - ಎಂದೂ ಮುಗಿಯದ ಧಂಗೆ.


-ಹಾರೋಹಳ್ಳಿ ರವೀಂದ್ರ

ಭಾರತದ ವಿಭಜನೆಯ ನಂತರ ಕಾಶ್ಮೀರದ ಹಿಂದೂ ದೊರೆ ಹರಿಸಿಂಗ್ ಸ್ವತಂತ್ರನಾಗಲು ಬಯಸಿದ್ದನು. ಕಾಶ್ಮೀರದ ದಕ್ಷಿಣದ ಭಾಗದ ಜಮ್ಮು ಪ್ರಾಂತ್ಯದ ಉದಾಂಪುರ್, ಕಥುವಾ, ಜಮ್ಮು, ರಿಯಾಸಿ ಜಿಲ್ಲೆಗಳಲ್ಲಿ ಹಿಂದೂಗಳು ಬಹುಸಂಖ್ಯಾತರಾದರೆ, ಕಾಶ್ಮೀರ ಪ್ರಾಂತ್ಯದ ಮೀರ್ಪುರ್ ಮುಜಾಫರ್ ಬಾದ್, ಬಾರಾಮುಲ್ಲಾ, ಪೂಂಚ್, ಶ್ರೀನಗರ್, ಗಿಲ್ಗಿಟ್, ಶಿಲಾಸ್ ಮೊದಲಾದ ಜಿಲ್ಲೆಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಲಡಾಕ್ ಪ್ರಾಂತ್ಯದಲ್ಲಿ ಬೌದ್ಧರು ಬಹುಸಂಖ್ಯಾತರಾಗಿದ್ದಾರೆ. ಒಟ್ಟು ರಾಜ್ಯದ ಜನಸಂಖ್ಯೆಯಲ್ಲಿ ಧಾಮರ್ಿಕವಾಗಿ ಮುಸ್ಲೀಮರು ಹೆಚ್ಚು ಸಂಖ್ಯೆಯವರಿದ್ದುದರಿಂದ ಕಾಶ್ಮೀರ ತನಗೆ ಸೇರಬೇಕೆಂದು ಪಾಕಿಸ್ತಾನ ಅಕ್ಟೋಬರ್ 1947ರಲ್ಲಿ ಆಕ್ರಮಿಸಿತು. ಇಲ್ಲಿಯವರೆಗೂ ಭಾರತ ಒಕ್ಕೂಟ ಸೇರದೆ ಸ್ವತಂತ್ರವಾಗಿರಲು ಇಚ್ಚಿಸಿದ್ದ ಹರಿಸಿಂಗ್ ತಕ್ಷಣವೇ ಭಾರತ ಒಕ್ಕೂಟಕ್ಕೆ ಸೇರುವ ವಿಲೀನ ಪತ್ರಕ್ಕೆ ಸಹಿ ಹಾಕಿ ಕಾಶ್ಮೀರವನ್ನು ಭಾರತದಲ್ಲೇ ವಿಲೀನಗೊಳಿಸಿದನು. ಆಗ ಕಾಶ್ಮೀರದಲ್ಲಿ ಧಾವಿಸಿದ ಭಾರತದ ಸೇನಾಪಡೆ ಪಾಕ್ ವಿರುದ್ಧ ಸಮರ ಸಾರಿತು.


ಸದರ್ಾರ್ ಪಟೇಲ್ ಇನ್ನೂ ಬಹುಚುರಕಾಗಿ ಕಾರ್ಯನಿರ್ವಹಿಸಿ ಕಾಶ್ಮೀರಕ್ಕೆ ಸೈನ್ಯ ರವಾನಿಸಿ ದಾಳಿ ಕೋರರನ್ನು ಕಾಶ್ಮೀರದಿಂದ ಆಚೆ ದೂಡಿದರು. ಹರಿಸಿಂಗನನ್ನು ನೆಲೆಯೂರಿಸಿದ ತಕ್ಷಣವೇ ಪಾಕಿಸ್ತಾನ ಕಾಶ್ಮೀರದ ಪ್ರಶ್ನೆಯನ್ನು ಜನಾಭಿಪ್ರಾಯದಂತೆ ನಿರ್ಣಯಿಸಲು ಕೇಳಿಕೊಂಡಿತು. ಅದಕ್ಕೆ ಮುನ್ನ ದಾಳಿಕೋರರು ಕಾಶ್ಮೀರವನ್ನು ಪೂರ್ಣ ಖಾಲಿ ಮಾಡುವುದಾದರೆ ತಾನು ಸಿದ್ಧ ಎಂಬ ಕರಾರಿನ ಮೇಲೆ ಭಾರತ ಜನಾಭಿಪ್ರಾಯಕ್ಕೆ ಸಮ್ಮತಿಸಿತು. ಪಾಕಿಸ್ತಾನಿ ಸೈನಿಕರು ಕಾಶ್ಮೀರದ ಹಲವು ಭಾಗಗಳಲ್ಲಿ ಉಳಿದುದರಿಂದ ಜನಮತಾಭಿಪ್ರಾಯ ಸಂಗ್ರಹಣೆ ಜರುಗಲೇ ಇಲ್ಲ. ಭಾರತ ಮತ್ತು ಪಾಕಿಸ್ತಾನ ಸೈನ್ಯಗಳ ಸಂಘರ್ಷ ನಿಲ್ಲದೆ, 1947 ಮತ್ತು 1948ರಾದ್ಯಂತ ಜರುಗಿದವು. ಭಾರತ ಈ ವಿವಾದವನ್ನು ವಿಶ್ವಸಂಸ್ಥೆಯ ಮುಂದೆ ಮಂಡಿಸಲಾಗಿ ಅದು 1949 ಜನವರಿ ಒಂದರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ 'ಕದನ ನಿಲುಗಡೆ' ಘೋಷಿಸಿ ಶಾಂತಿ ಸ್ಥಾಪಿಸಿತು. ಆ ಪ್ರಕಾರ ಕಾಶ್ಮೀರದ ವಾಯುವ್ಯ ಭಾಗದಲ್ಲಿರುವ 'ಅಜಾದ್ ಕಾಶ್ಮೀರ ಪಾಕಿಸ್ತಾನದ ಅಧೀನದಲ್ಲೂ ಉಳಿದ ಕಾಶ್ಮೀರ ಭಾರತದ ಅಧೀನದಲ್ಲೂ ಉಳಿಯಿತು.
1949ರಲ್ಲಿ ಸಂವಿಧಾನ ರಚನೆಯಾದಾಗ ಜಮ್ಮು ಕಾಶ್ಮೀರಕ್ಕೆ 370ರ ಅಧಿನಿಯಮದ ಪ್ರಕಾರ ವಿಶೇಷ ಸ್ಥಾನಮಾನಗಳನ್ನು ನೀಡಲಾಯಿತು.
1. ಜಮ್ಮು ಕಾಶ್ಮೀರ ರಾಜ್ಯ : ರಕ್ಷಣೆ, ನಾಣ್ಯ ಚಲಾವಣೆ, ವಿದೇಶಾಂಗ ವ್ಯವಹಾರ ಮತ್ತು ಸಾರಿಗೆ ಸಂಪರ್ಕ ವಿಚಾರಗಳಲ್ಲಿ ಕೇಂದ್ರ ಸಕರ್ಾರಕ್ಕೆ ಅಧೀನವಾಗಿರುವುದು.
2. ಕಾಶ್ಮೀರ ತನ್ನ ಆಡಳಿತದಲ್ಲಿ ಪೂರ್ಣ ಸ್ವಾಯತ್ತತೆ ಪಡೆದಿರುತ್ತದೆ.
3. ತನ್ನದೇ ಆದ ಸಂವಿಧಾನವನ್ನು ರಚಿಸಿಕೊಳ್ಳುವ ಅವಕಾಶ.
4. ರಾಜ್ಯದ ರಾಜ್ಯಪಾಲರನ್ನು ಅವರೇ ಆರಿಸಿಕೊಳ್ಳಬಹುದು.
5. ಮುಖ್ಯಮಂತ್ರಿಯವರನ್ನು ಪ್ರಧಾನಿ ಎಂದು ಸಂಬೋಧಿಸಿಕೊಳ್ಳುವುದು
6. ಪ್ರತ್ಯೇಕ ಸುಪ್ರೀಮ್ ಕೋಟರ್್, ಪ್ರತ್ಯೇಕ ಎಲೆಕ್ಷನ್ ಕಮಿಷನ್ಗಳನ್ನು ಅದು ರಚಿಸಿಕೊಳ್ಳಬಹುದು. ಇತ್ಯಾದಿ
ಇವೆಲ್ಲ ಸವಲತ್ತುಗಳನ್ನು ಪಡೆದ ಜಮ್ಮು ಕಾಶ್ಮೀರ ರಾಜ್ಯ ಭಾರತದ ರಕ್ಷಣೆ ಪಡೆದ ಸ್ವತಂತ್ರ ರಾಷ್ಟ್ರವಾಗಿ ಉಳಿದಿದೆ.

1956ರಲ್ಲಿ ಸಂವಿಧಾನಕ್ಕೆ ತಿದ್ದುಪಡಿತಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನಗಳಲ್ಲಿ ಬದಲಾವಣೆ ತರಲಾಯಿತು. ರಾಜ್ಯದ ಮುಖಂಡನಾದ ರಾಜ ಪ್ರಮುಖ್ನನ್ನು ರಾಜ್ಯಪಾಲನೆಂದು ಕರೆಯಲಾಯಿತು. ಅವನ ನೇಮಕ ಭಾರತ ಸಕರ್ಾರದಿಂದಲೇ ಆಗುವಂತಾಯಿತು. ಪ್ರಧಾನಿ ಎಂಬುದಾಗಿ ಸಂಬೋಧಿಸಿಕೊಳ್ಳುತ್ತಿದ್ದ ಮುಖ್ಯಮಂತ್ರಿಯನ್ನು ಇನ್ನು ಮುಂದೆ ಆ ರೀತಿ ಸಂಬೋಧಿಸಿಕೊಳ್ಳುವಂತಿಲ್ಲ ವಾಯಿತು. ಅಲ್ಲಿನ ಸುಪ್ರೀಮ್ ಕೋರ್ಟನ್ನು ರಾಜ್ಯ ಹೈಕೋಟರ್್ ಆಗಿ ಪರಿವತರ್ಿಸಲಾಯಿತು. 
1947ಕ್ಕಿಂತ ಮುಂಚೆ ಪಾಕಿಸ್ತಾನ ಭಾರತದ ಅವಿಭಾಜ್ಯ ಅಂಗವಾಗಿತ್ತು. ಪರಿಸ್ಥಿತಿಯ ಅನಿವಾರ್ಯತೆ ಹಾಗೂ ಹೊಸ ವಿದ್ಯಮಾನಗಳ ಬೆಳವಣಿಗೆಯಿಂದಾಗಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಕೊನೆಗೆ ಪಾಕಿಸ್ತಾನದ ಸ್ವತಂತ್ರ ಅಸ್ತಿತ್ವಕ್ಕೆ ಮನ್ನಿಸಬೇಕಾಯಿತು. ಹೀಗೆ ಅಸ್ತಿತ್ವಕ್ಕೆ ಬಂದ ಪಾಕಿಸ್ತಾನ ಭೌಗೋಳಿಕವಾಗಿ ಒಂದಕ್ಕೊಂದು ದೂರದ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳು ಒಳಗೊಂಡಿದ್ದಿತ್ತು. ಈ ಮುನ್ನ ಬ್ರಿಟಿಷರಿಂದ ಸ್ವಾತಂತ್ರ ಪಡೆಯುವುದು ಭಾರತದಲ್ಲಿ ಹಿಂದೂಗಳಿಗಿದ್ದ ಕಾಳಜಿ ಮುಸ್ಲಿಮರಿಗೂ ಇದ್ದಿತು. ಆರಂಭದ ಕಾಲದಲ್ಲಿ ಇವರಿಬ್ಬರು ಒಟ್ಟಿಗೆ ಭಾರತದ ವಿಮೋಚನೆಗಾಗಿ ಶ್ರಮಿಸಿದವರು. ಆದರೆ ಬ್ರಿಟನ್ ಬೇದೋಪಾಯ ನೀತಿಯಿಂದಾಗಿ ಕಾಂಗ್ರೆಸ್ನಿಂದ ಸಿಡಿದ ಮುಸ್ಲಿಮರು ಮುಸ್ಲಿಂ ಲೀಗ್ ಪಕ್ಷವನ್ನು ಸ್ಥಾಪಿಸಿಕೊಂಡರು.


ಭಾರತದ ನೆಲದಲ್ಲಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ನಿಮರ್ಾಣಕ್ಕಾಗಿ ಹೋರಾಟ ಆರಂಭಿಸಿದರು. ಹಾಗಾಗಿ ಕಾಂಗ್ರೆಸ್ ಮತ್ತು ಮುಸ್ಲಿಂಲೀಗ್ಗಳ ನಡುವಿನ ಸಂಬಂಧ ಆರಂಭದಿಂದಲೂ ಅನ್ಯೋನ್ಯವಾಗಿ ಇರಲಿಲ್ಲ. ಪಾಕಿಸ್ತಾನ ಉದಯವಾದ ಮೇಲೂ ಇದೇ ಪರಿಸ್ಥಿತಿ ಇವರೆಡರ ನಡುವೆ ಮುಂದುವರಿಯಿತು. ಒಟ್ಟಿನಲ್ಲಿ ದೇಶದ ವಿಭಜನೆಗೆ ಈ ವಿರಸಕ್ಕೆ ಪ್ರಧಾನ ಕಾರಣವಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಭಾರತ ತನ್ನ ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ಹೊಂದುವ ಯತ್ನ ನಡೆಸಿತು. ಪಾಕಿಸ್ತಾನದ ಬಗ್ಗೆ ಬಾಂಧವ್ಯಕ್ಕೆ ಮುಂದಾಯಿತು. ಆದರೆ ದೇಶದ ವಿಭಜನೆಯನ್ನು ಸಹಿಸದ ಭಾರತ ಅದಕ್ಕೆ ಕಾರಣವಾದ ಪಾಕಿಸ್ತಾನವನ್ನು ಪೂರ್ಣನಾಶ ಮಾಡುವ ಪ್ರಯತ್ನ ನಡೆಸಿದೆ ಎಂಬ ಭಾವನೆಯನ್ನು ಪಾಕಿಸ್ತಾನ ಪ್ರಚುರಪಡಿಸುತ್ತಲೇ ಬಂದಿದೆ.
ಪಾಕಿಸ್ತಾನದೊಡನೆ ಭಾರತದ ಬಾಂಧವ್ಯ ಕೆಡಲು ಕಾರಣವಾದ ಅಂಶಗಳಲ್ಲಿ ಪ್ರಮುಖವಾದವು:
1. ಚೀನಾ ಮತ್ತು ಪಾಕಿಸ್ತಾನಗಳ ನಡುವೆ ಸಂಭವಿಸಿದ ಒಪ್ಪಂದ.
2. ಭಾರತದಿಂದ ವಷಪಡಿಸಿಕೊಂಡಿದ್ದ ಗಡಿ ಪ್ರದೇಶವನ್ನು ಪಾಕಿಸ್ತಾನ ಚೀನಾಕ್ಕೆ ವಗರ್ಾಯಿಸಿದರು.
3. ನದಿ ನೀರಿನ ವಿವಾದ.
4. ಕಾಶ್ಮೀರ ಸಮಸ್ಯೆ.
ಇವುಗಳಲ್ಲಿ ಈ ಎರಡು ದೇಶಗಳ ನಡುವಿನ ಸಂಬಂಧ ಹದಗೆಡಲು ಮುಖ್ಯವಾದದ್ದು ಕಾಶ್ಮೀರದ ಸಮಸ್ಯೆ. ಆಗಾಗಿಯೇ ಮೇ, ಜುಲೈ 1999ರಲ್ಲಿ ಕಾಗರ್ಿಲ್ ಕದನ ಜರುಗಿತು. ಭಾರತ ಪಾಕಿಸ್ತಾನಗಳ ನಡುವಿನ ಸಂಬಂಧದಲ್ಲಿ 1999 ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೈಗೊಂಡ ದೆಹಲಿ ಲಾಹೋರ್ ಬಸ್ ಸಂಚಾರ ಆರಂಭ ಪ್ರಮುಖ ಮೈಲುಗಲ್ಲಾಗಿದೆ. ಪಾಕಿಸ್ತಾನದ ಪ್ರಧಾನಿ ನವಾಜ್-ಷರೀಫ್ ಮತ್ತು ವಾಜಪೇಯಿ ಅವರ ನಡುವೆ ಲಾಹೋರ್ ಮಾತುಕತೆಯಲ್ಲಿ ಎರಡು ದೇಶಗಳ ನಡುವಿನ ಬಸ್ ಸಂಪರ್ಕಕ್ಕೆ ಸಮ್ಮತಿ ಏರ್ಪಟ್ಟಿತು. ಆದರೆ ಮೇ 26ರಂದು ಕಾಶ್ಮೀರದ ಕಾಗರ್ಿಲ್ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೈನ್ಯಾಚಾರಣೆ ವಾಯುದಾಳಿ ಆರಂಭಿಸಲಾಗಿ ಭಾರತ ದಿಗ್ಭ್ರಮೆಗೊಂಡಿತು. ಪಾಕಿಸ್ತಾನದ ಈ ಅಘೋಷಿತ ಕದನಕ್ಕೆ ಕಾರಣಗಳನ್ನು ಈ ರೀತಿ ಪಟ್ಟಿಮಾಡಲಾಗಿದೆ.
1. ಭಾರತದ ಮೇಲೆ ಪಾಕಿಸ್ತಾನದ ಸೇನೆ ಮೇಲುಗೈ ಸಾಧಿಸುವುದು.
2. ಕಾಶ್ಮೀರದ ಸಮಸ್ಯೆಯನ್ನು ಅಂತರರಾಷ್ಟ್ರೀಯ ವಿವಾದವನ್ನಾಗಿಸುವುದು.
3. ಈ ವಿವಾದವನ್ನು ಅಣ್ವಸ್ತ್ರ ಸಂಕಟಕ್ಕೆ ಒಳಪಡಿಸುವುದು.
4. ಭಾರತವನ್ನು ಸಂಧಾನಕ್ಕೆ ಬರುವಂತೆ ಮಾಡುವುದು.



ಒಂದು ತಿಂಗಳುಗಳ ಕಾಲ ಜರುಗಿದ ಸಮರ ಜೂನ್ 24ರಂದು ಕೊನೆಗೊಂಡಿತು. ಪಾಕಿಸ್ತಾನ ದಯನೀಯ ಸೋಲನ್ನನುಭವಿಸಿ ಹಿಂದಕ್ಕೆ ಸರಿಯಿತು. ಅದರ ಉದ್ದೇಶ ಭಂಗಗೊಂಡವು. ಭಾರತ ಸಂಭ್ರಮದ ವಿಜಯೋತ್ಸವ ಆಚರಿಸಿತು. ಶಾಂತಿಪ್ರಿಯ ದೇಶವಾದ ಭಾರತದ ಮೇಲೆ ಪಾಕಿಸ್ತಾನ ಎಸಗಿದ ಈ ಅಘೋಷಿತ ಯುದ್ಧ ವಿಶ್ವದ ಗಮನ ಸೆಳೆಯಿತು. ಬೃಹತ್ ರಾಷ್ಟ್ರಗಳು ಭಾರತದ ನಿಲುವನ್ನು ಶ್ಲಾಘಿಸಿವೆ. ಅಕ್ಟೋಬರ್ 12, 1999ರಲ್ಲಿ ನವಾಜ್ ಶರೀಫರನ್ನು ಪದಚ್ಯುತಿಗೊಳಿಸಿ ಪಾಕಿಸ್ತಾನದ ಅಧ್ಯಕ್ಷರಾಗಿ ಬಂದ ಪವರ್ೇಜ್ ಮುಷರಫ್ರ ಆಕ್ರಮಣ ನೀತಿ (ಕಾಶ್ಮೀರದಲ್ಲಿ) ಮುಂದುವರೆಯಿತು. ಕಾಶ್ಮೀರ ಗಡಿಯಲ್ಲಿ ವಾಯುದಾಳಿ, ಅಮಾಯಕ ಗ್ರಾಮಸ್ಥರ ಕೊಲೆ ಸುಲಿಗೆ ಹೇಳತೀರದಾಯಿತು. ಅತ್ಯಾಚಾರ, ಅನಾಚಾರಗಳಿಗೆ ಕೊನೆಯೇ ಇಲ್ಲವಾಗಿದೆ. ಇದನ್ನೆಲ್ಲ ತಡೆಗಟ್ಟುವ ಸಲುವಾಗಿ ಎರಡು ರಾಷ್ಟ್ರಗಳ ಉಭಯ ಸಹಬಾಳ್ವೆಗಾಗಿ 2004ರಲ್ಲಿ ಜೂನ್ ಒಪ್ಪಂದ ಜರುಗಿತು. ಈ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದವರು ಭಾರತದ ವಿದೇಶಾಂಗ ಮಂತ್ರಿ ನಟವರ್ಸಿಂಗ್, ಸಲಹೆಗಾರ ಜೆ.ಎನ್.ದೀಕ್ಷಿತ್ ಮತ್ತು ಪಾಕಿಸ್ತಾನದ ವಿದೇಶಾಂಗ ನೀತಿ ಕುಶ್ರಿದ್ ಮಹಮ್ಮದ್ ಕಸೂರಿ, ಸಲಹೆಗಾರ ತಾರಿಖ್ ಅಜೀಜ್ ಪ್ರಮುಖ ಪಾತ್ರ ವಹಿಸಿದರು. ಈ ಒಪ್ಪಂದದ ಪ್ರಮುಖ ಅಂಶಗಳೆಂದರೆ
1. ಎರಡೂ ದೇಶಗಳ ಸೇನಾ ಕಾರ್ಯಚರಣೆಯ ನಿದರ್ೇಶಕರ ನಡುವೆ ವಿಶೇಷ ಹಾಟ್ಲೈನ್ ಸಂಪರ್ಕ ಏರ್ಪಡಿಸುವುದು.
2. ಅಣ್ವಸ್ತ್ರಗಳ ವಿಷಯದಲ್ಲಿ ತಪ್ಪು ಕಲ್ಪನೆ ದೂರಮಾಡಲು ಎರಡೂ ದೇಶಗಳ ವಿದೇಶಾಂಗ ಸಚಿವರ ನಡುವೆ ನಿರಂತರ ಸಂಪರ್ಕ ಏರ್ಪಡಿಸುವುದು.
3. ಕ್ಷಿಪಣಿ ಪರೀಕ್ಷೆ ನಡೆಸುವ ಮುನ್ನ ತಾಂತ್ರಿಕ ವಿವರಗಳನ್ನು ಪರಸ್ಪರ ದೇಶಗಳು ವಿನಿಮಯ ಮಾಡಿಕೊಳ್ಳುವುದು.
4. ದೇಶದ ಪರಮಾಧಿಕಾರ ಅಪಾಯದ ಸ್ಥಿತಿ ತಲುಪಿದಾಗ ಮಾತ್ರ ಅಣ್ವಸ್ತ್ರ ಪ್ರಯೋಗ ಮಾಡಬಹುದು. ಅಲ್ಲಿಯವರೆಗೆ ಶಾಂತಿ ಸ್ಥಿತಿ ಕಾಪಾಡಿಕೊಂಡು ಹೋಗುವುದು.
5. ಹಿಂದಿನ ಅಂದರೆ 1999ರ ಲಾಹೋರ್ ಗೊತ್ತುವಳಿಯನ್ನು ಸಂಪೂರ್ಣವಾಗಿ ಕಾರ್ಯ ರೂಪಕ್ಕೆ ತರುವುದು.
6. ದೇಶದ ರಕ್ಷಣೆ ಮತ್ತು ಅಣ್ವಸ್ತ್ರ ನಿಷೇಧಗಳ ಬಗ್ಗೆ ಮಾತುಕತೆ ಮುಂದುವರಿಸುವುದು.
2005 ಏಪ್ರಿಲ್ನಲ್ಲಿ ಪಾಕಿಸ್ತಾನದ ಅಧ್ಯಕ್ಷ ಪವರ್ೆಜ್ ಮುಷ್ರಫ್ ಭಾರತ ಪಾಕಿಸ್ತಾನ ನಡುವಿನ ಹತೋಟಿ ರೇಖೆಯನ್ನು ಸೌಮ್ಯಗಡಿಯಾಗಿ ಪರಿವತರ್ಿಸಿ ವ್ಯಾಪಾರ ಮತ್ತು ಸಾಮಾಜಿಕ ಸಂಬಂಧಗಳಿಗೆ ಅನುಕೂಲ ನೀಡಲು ಸಲಹೆ ನೀಡಿದರು. ನಿಂತುಹೋಗಿದ್ದ ಬಸ್ ಸಂಚಾರವನ್ನು ಶ್ರೀನಗರದಿಂದ ಮುಜಾಫರ್ಬಾದ್ಗೆ ಪುನಃ ಆರಂಭಿಸಲು ಇಚ್ಛಿಸಿದರು. ಇದನ್ನು ಸ್ವಾಗತಿಸಿದ ಡಾ.ಮನಮೋಹನಸಿಂಗ್ ಬಸ್ ಸಂಚಾರಕ್ಕೆ ಅನುಮತಿ ನೀಡಿದರು. ಈ ಅವಕಾಶವನ್ನು ಬಳಸಿಕೊಂಡ ತೀವ್ರ ರೋಗಪೀಡಿತಿ ಪಾಕಿಸ್ತಾನ ಕುಟುಂಬಗಳು ಭಾರತಕ್ಕೆ ಅದರಲ್ಲೂ ಬೆಂಗಳೂರಿನ ವಕರ್್ಹಾಡರ್್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಹಿಂತಿರುಗಿ ಹರ್ಷ ವ್ಯಕ್ತಪಡಿಸಿದರು. ಅಂದರೆ ಈ ಸಾಮಾನ್ಯ ಜನರಲ್ಲಿ ಕಂಡುಬಂದ ಸೌಹಾರ್ಧತೆ ಸರಕಾರದ ಹಾಗೂ ಮೌಲ್ಯಗಳ ಅವಗಾಹನೆ ಸುಳಿಯುವುದೇ ಇಲ್ಲವೇನೊ. ಕಾಶ್ಮೀರ ವಿಧಾನ ಸಭೆಯ ಪ್ರವೇಶದ್ವಾರದಲ್ಲೆ ಸಿಕ್ಕವರನ್ನೆಲ್ಲ ಗುಂಡು ಹಾರಿಸಿ ಮಾರಣಹೋಮ ಗೈದ ಪಾಕಿಸ್ತಾನಿ ಭಯೋತ್ಪಾದಕರು ಅಟ್ಟಹಾಸ ಮೆರೆದರು.



ಇಂದಿಗೂ ಕೂಡ ಕಾಶ್ಮೀರದ ಸಮಸ್ಯೆ ಬಗೆಹರಿಯದೆ ಉಳಿದಿರುವುದಕ್ಕೆ ಪ್ರಬಲ ಕಾರಣವಿದೆಯೇ ಅಲ್ಲಿನ ನ್ಯಾಷನಲ್ ಕಾನ್ಫರೆನ್ಸ್, ಹುರಿಯಕ್ ಕಾನ್ಫರೆನ್ಸ್ ಮೊದಲಾದ ಪಕ್ಷಗಳು ಭಾರತದ ಭಾಗವಾಗಿ ಮುಂದುವರಿಯಲು ಉತ್ಸುಕವಾಗಿರುವುದರಿಂದಲೇ ಇದು ದೊಡ್ಡ ಸಮಸ್ಯೆಯಾಗಿರುವುದು. ಆದರೆ ಜೆ.ಕೆ.ಎಲ್.ಎಫ್, 1971ರ ನಂತರ ಪ್ರಾಬಲಗಳಿಸಿದ್ದು, ಪ್ರತ್ಯೇಕ ಸ್ವತಂತ್ರ ಕಾಶ್ಮೀರ ರಾಷ್ಟ್ರಕ್ಕಾಗಿ ಹೋರಾಟದಲ್ಲಿ ತೊಡಗಿಕೊಂಡಿವೆ. ಈ ಹೋರಾಠದಲ್ಲಿ ಬಹುಪಾಲು ಶಿಯಾಪಂಥಿಗಳಾಗಿದ್ದು, ದೋಗ್ರಿ ಮತ್ತು ಕಾಶ್ಮೀರಿ ಭಾಷೆ ಬಳಸುತ್ತಾರೆ. ಮುಸ್ಲಿಂ ಸಂತರ ದಗರ್ಾಗಳು ಉಪಾಸಕರಾಗಿದ್ದಾರೆ. ಹಾಗಾಗಿ ಸುನ್ನಿ ಪಂಥದ ಪಾಕಿಸ್ತಾನವನ್ನು ಸೇರುವುದು ಅವರಿಗೆ ಇಷ್ಟವಿಲ್ಲ. ಮೇಲಾಗಿ ಆಕ್ರಮಣಕಾರಿ ಪಾಕಿಸ್ತಾನದ ಬಾಯಿಯಲ್ಲಿ ಸ್ವತಂತ್ರ ರಾಷ್ಟ್ರವಾಗಿ ಕಾಶ್ಮೀರವನ್ನು ಜೆ.ಕೆ.ಎಲ್.ಎಫ್, ಸಂರಕ್ಷಿಸಿಕೊಳ್ಳಲಾರದು ಎಂಬ ಕಟು ಸತ್ಯ ತಿಳಿಯದಿರುವ ಬಹುತೇಕ ಕಾಶ್ಮೀರಿಗಳು ಅದಕ್ಕೆ ಅರೆಮನಸ್ಸಿನ ಸಮ್ಮತಿ ನೀಡಿದ್ದವು.

ಇಂದು ಪ್ರಸ್ತುತದಲ್ಲಿ ಕಾಶ್ಮೀರದ ಪರಿಸ್ಥಿತಿ ಏನಾಗಿದೆ. ಈ ದಿನದಲ್ಲಿಯೂ ಕೂಡ ಅಲ್ಲಿ ಹಿಂಸಾಚಾರ, ಭಯೋತ್ಪಾದನೆ, ಏಕ ಸಂಸ್ಕೃತಿಯ ಪ್ರತಿಪಾದನೆ, ಪ್ರತ್ಯೇಕತೆಯ ಧ್ವಂದ್ವ, ಭಯೋತ್ಪಾದನೆಯ ಹೆಸರಿನಲ್ಲಿ ನಕಲಿ ಎನ್ಕೌಂಟರ್ ಹೀಗೆ ನಾನಾ ಕಾರಣಗಳಿಂದ ಅದು ಮುಕ್ತವಾಗಿಲ್ಲ. ಬುಹರ್ಾನ್ ವಾನಿಯ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಕಮಾಂಡರ್ ಎಂದು ಎನ್ಕೌಂಟರ್ ಮಾಡಲಾಗಿದೆ. ಹತ್ಯೆಯ ನಂತರ ಅಲ್ಲಿನ ಜನರು ಆತ ಯಾವ ಭಯೋತ್ಪಾದಕನಲ್ಲ ಎಂದು ಚಳವಳಿ ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಕಾಶ್ಮೀರ ಲಾ ಅಂಡ್ ಆರ್ಡರ್ ಮುಸಲ್ಮಾನರನ್ನು ಹತ್ತಿಕ್ಕಲು ಬಳಕೆಯಾಗುತ್ತಿದೆಯೆ? ಎಂಬ ಅನುಮಾನವೂ ಕೂಡ ಸಾರ್ವಜನಿಕರಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯ ನಂತರ 25ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿರುವುದನ್ನು ತಡೆಯಲು ಈಗಿನ ಕೇಂದ್ರ ಸಕರ್ಾರಕ್ಕೆ ಏಕೆ ಸಾಧ್ಯವಾಗಿಲ್ಲ? ಇಂದಿಗೂ ಕೂಡ ಕಾಶ್ಮೀರದ ಜನರನ್ನು ಎರಡನೇ ದಜರ್ೆಯ ಪ್ರಜೆಗಳನ್ನಾಗಿ ನೋಡಲಾಗುತ್ತಿದೆ.

 ಇಂತಹ ಸಿಕ್ಕುಗಳಿಂದ ನಾವು ಕಾಶ್ಮೀರವನ್ನು ಹೊರತರುವುದು ಹೇಗೆ?  ಬುಹರ್ಾನ ವಾನಿಯ ಹತ್ಯೆಯ ನಂತರ ಕಂಡು ಬಂದ ಕಣಿವೆ ರಾಜ್ಯದ ಸಮಸ್ಯೆಗಳು ಕೇಳತೀರದಾಗಿವೆ. ಅಲ್ಲಿನ ವಿಶೇಷಾ ಮಿಲಿಟರಿ ಪಡೆ ಕಾಶ್ಮೀರಿ ಮುಸಲ್ಮಾನರರನ್ನು ಸಣ್ಣ ಸಣ್ಣ ವಿಷಯಗಳಿಗೂ ಗುಂಡು ಹಾರಿಸುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಕಾಶ್ಮೀರದಲ್ಲಿ ಮನೆ ಕುಸಿದು ಬಿದ್ದ ಪರಿಣಾಮ ಒಬ್ಬ ಮುಸಲ್ಮಾನ ಅಡಿ ಪಾಯಕ್ಕೆ ಸಿಕ್ಕಿ ನರಳುತ್ತಿದ್ದ. ಅದನ್ನು ಒಬ್ಬ ಸೇನಿಕ ಆತನನ್ನು ಎತ್ತಲು ಮುಂದಾಗುತ್ತಿದ್ದ. ಆದರೆ ಗಡ್ಡ ಬಿಡ್ಡಿದ್ದ ಪರಿಣಾಮ ಆತನನ್ನು ರಕ್ಷಿಸದೆ ಸೈನ್ಯ ಪಡೆ ಗುಂಡುಹಾರಿಸಿ ಸ್ಥಳದಲ್ಲೆ ಕೊಂದಿದ್ದಾರೆ. ಕೇಂದ್ರ ಸಕರ್ಾರವು ಕಾಶ್ಮೀರದಲ್ಲಿರುವ ವಿಶೇಷಾ ಮಿಲಿಟರಿ ಪಡೆಯನ್ನು ದೇಶದ ಹಿತಕ್ಕಾಗಿ ನೇಮಿಸಿದೆಯೆ? ಅಥವಾ ಮುಸಲ್ಮಾನರನ್ನು ಹತ್ತಿಕ್ಕಲು ನೇಮಿಸಿಕೊಂಡಿದೆಯೊ? ಎಂಬ ಅನುಮಾನ ಮೂಡತೊಡಗಿವೆ. ಇದಲ್ಲದೇ ಕಣಿವೆ ರಾಜ್ಯದಲ್ಲಿ ಮಿಲಿಟರಿ ಹೆಣ್ಣು ಮಕ್ಕಳನ್ನು ಅಮಾನುಷವಾಗಿ ಅತ್ಯಾಚಾರ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ನಮ್ಮನ್ನು ಭಯೋತ್ಪಾದಕರು ಎಂದು ಶೂಟೌಟ್ ಮಾಡಲಾಗುತ್ತಿದೆ. ಆ ಕಾರಣಕ್ಕೆ ನಮ್ಮ ಹೆಣ್ಣು ಮಕ್ಕಳು ಅತ್ಯಾಚಾರವಾದರು ನಾವು ಸುಮ್ಮನಿರಬೇಕಾದ ಪರಿಸ್ಥಿತಿ ಇದೆ ಎಂಬ ಆರೋಪಗಳು ಕೂಡ ಮಿಲಿಟರಿ ಮೇಲೆ ಇದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೇಂದ್ರ ಸಕರ್ಾರ ಇದರ ಸಮಸ್ಯೆಯನ್ನು ಬಗೆಹರಿಸದೇ ಉಳಿಸಿಕೊಂಡಿರುವುದಾದರು ಏತಕ್ಕೆ? ಕಣಿವೆ ರಾಜ್ಯವನ್ನು ಭಾರತದೊಟ್ಟಿಗೆ ಜೋಡಿಸಿಕೊಳ್ಳಿ, ಅಲ್ಲಿರುವ ವಿಶೇಷಾ ಮಿಲಿಟರಿ ಪಡೆಯನ್ನು ಕಿತ್ತು ಹಾಕಿ, ಇಲ್ಲವಾದರೆ ಅದನ್ನು ಪ್ರತ್ಯೇಕ ರಾಷ್ಟ್ರವಾಗಿ ಮಾಡಿಕೊಳ್ಳಲು ಒಪ್ಪಿಗೆ ಕೊಡಿ. ಅದು ಕೂಡ ಹಾಗದಿದ್ದರೆ ಅದನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಡಿ. ಯಾವುದಾದರು ಒಂದು ಶಾಶ್ವತ ನಿಧರ್ಾರಕ್ಕೆ ಬನ್ನಿ. ಅದನ್ನು ಹೊರತು ಪಡಿಸಿ ಅದೊಂದು ಹಿಂಸಾತಾಣವಾಗಿ ಬಲಸಿಕೊಳ್ಳುವುದು ನಾಚಿಗೇಡಿನ ಸಂಗತಿ. ವಿಶ್ವಸಂಸ್ಥೆಯ ಶಾಶ್ವತ ಸದಸ್ಯತ್ವ ಹೊಂದಿರುವ ಐದು ರಾಷ್ಟ್ರಗಳಿಗೆ ಪಾಕಿಸ್ತಾನ ಮನವಿ ಮಾಡಿದೆ. ಹಿಂಸಾಚಾರ ನಡೆಯುವ ಸಂದರ್ಭದಲ್ಲಿ ಜನರಿಗೆ ಸಾಂತ್ವಾನ ಹೇಳಿದರಷ್ಟೆ ಸಾಲದು. ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಬಹುತೇಕವಾಗಿ ಸ್ವತಂತ್ರ್ರ ಭಾರತದ ಸಂದರ್ಭದಿಂದಲೂ ಹಿಂಸಾಚಾರ ಅಲ್ಲಿ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಇಂದಿಗೂ ನಡೆಯುತ್ತಲೇ ಇದೆ. ಅದನ್ನು ತಪ್ಪಿಸಿ ಕಾನೂನಾತ್ಮಕ ಜೀವನ ನಡೆಸುವ ಶಾಂತಿಯುತ ಬದುಕನ್ನು ನಿಮರ್ಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಬೇಕಿದೆ.

ಕಾಶ್ಮೀರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಿವೇಶನಗಳಾಗಿರಬಹುದು, ಧಮರ್ಾಂಧತೆಯಾಗಿರ ಬಹುದು, ಸಂಸ್ಕೃತಿಯ ಸಮಸ್ಯೆಯಾಗಿರಬಹುದು ನಾನಾ ರೀತಿಗಳಲ್ಲಿ ತೊಳಲಾಡುತ್ತಿದೆ. ಇಂದು ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ ನೀವು ಬರೀ ಹಿಂದೂ ಜಾಗೃತಿಗಾಗಿ ತಲೆಕೆಡಿಸಿಕೊಂಡರೆ ಸಾಲದು, ಕಾಶ್ಮೀರಕ್ಕೂ ಸ್ವಲ್ಪ ಗಮನ ಹರಿಸಿದರೆ ಒಳಿತು. ಈಗಷ್ಟೇ ಕಾಶ್ಮೀರಿ ಪಂಡಿತರಿಗೆ ವಿಶೇಷ ಸವಲತ್ತುಗಳನ್ನು ಮಾಡಿಕೊಟ್ಟಿದ್ದೀರಿ, ಅದಕ್ಕೆ ಯಾವುದೇ ರೀತಿಯ ತಕರಾರಿಲ್ಲ. ಸವಲತ್ತುಗಳನ್ನು ಪಡೆದುಕೊಳ್ಳಲೀ, ಅದರ ಜೊತಗೆ ಆ ರಾಜ್ಯವನ್ನು ಭಾರತದ ತೆಕ್ಕೆಯಲ್ಲಿ ಉಪರಾಷ್ಟ್ರವಾಗಿ ಉಳಿಸಿಕೊಳ್ಳದೆ ಅದಕ್ಕೊಂದು ಶಾಶ್ವಾತ ಪರಿಹಾರ ಕಲ್ಪಿಸಬೇಕಿದೆ. ಹಿಂದೆ ಆಳ್ವಿಕೆ ಮಾಡಿದ ಕಾಂಗ್ರೆಸ್ ಸಕರ್ಾರ ಸಮಸ್ಯೆಗಳನ್ನು ಸಮಸ್ಯೆಗಳಾಗಿ ಬಿಟ್ಟು ಕೆಳಗಿಳಿದುಬಿಟ್ಟವು. ಬಹುಶಃ ಮುಂದೆಯೂ ಅದೇ ರೀತಿ ಮಾಡಬಹುದು. ಯಾಕೆಂದೆರೆ ಇಡೀ ಭಾರತದ ಜನತಾ ಪಕ್ಷ ನಿಂತಿರುವುದೇ ಕಾಶ್ಮೀರಕ್ಕೆ ಅವಲಂಭಿತವಾಗಿ. ಕಾಶ್ಮೀರದಲ್ಲಿ ನಡೆಯುವ ಹಿಂಸಾಚಾರ ಮತ್ತು ಹಿಂದೂ ಮುಸ್ಲೀಂ ಗಲಭೆಗಳನ್ನೆ ಮುಂದಿಟ್ಟುಕೊಂಡು ತಮ್ಮ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಇಂದು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿದರೆ ಮತಬ್ಯಾಂಕ್ ಅನ್ನು ಹೇಗೆ ಸೃಷ್ಟಿಮಾಡಿಕೊಳ್ಳುವುದು, ಯಾವ ರೀತಿ ಸೃಷ್ಟಿ ಮಾಡಿಕೊಳ್ಳುವುದು ಎಂಬ ಆತಂಕವಿರಬೇಕು ಎನಿಸುತ್ತದೆ. ಆ ಕಾರಣಕ್ಕೆ ಇರಬೇಕು ಮೋದಿ ಅವರು ಇಷ್ಟು ದಿನವಾದರೂ ಕಾಶ್ಮೀರದ ಶಾಶ್ವತ ಪರಿಹಾರಕ್ಕೆ ಮುಂದಾಗದೇ ಇರುವುದು ಅನಿಸುತ್ತದೆ.

ಹೀಗೆ ಇತ್ತೀಚಿನ ವರ್ಷಗಳಲ್ಲಿ ಭಾರತದ ರಾಷ್ಟ್ರೀಯತೆ ಜಾತಿ, ಭಾಷೆ, ಧರ್ಮ, ಸಂಸ್ಕೃತಿ, ಬುಡಕಟ್ಟು ಜನಾಂಗಗಳ ಹಿನ್ನೆಲೆಯಲ್ಲಿ ಹೊಸ ಪರಿಕಲ್ಪನೆಯನ್ನು ಪಡೆಯುತ್ತಿದೆ. ಇದರಲ್ಲಿ ರಾಷ್ಟ್ರದೊಳಗೊಂದು ರಾಷ್ಟ್ರ ಎಂಬ ಉಪರಾಷ್ಟ್ರದ ಕಲ್ಪನೆ ಎದ್ದು ಕಾಣುತ್ತಿದೆ. ನೋಡೋಣ.. ಅಪ್ಪಟ ದೇಶಪ್ರೇಮಿ ಎಂದು ಹೊರಹೊಮ್ಮಿದ ನರೇಂದ್ರ ಮೋದಿಯವರು ಕಾಶ್ಮೀರ ಸಮಸ್ಯೆಗೆ ತಿಲಾಂಜಲಿ ಇಡುತ್ತಾರೋ ಅಥವಾ ಎಂದೂ ಮುಗಿಯದ ಧಂಗೆಯಾಗಿಯೇ ಮುಂದುವರಿಸುತ್ತಾರೋ? ಕಾದು ನೋಡಬೇಕಿದೆ.


ಕಾಮೆಂಟ್‌ಗಳಿಲ್ಲ: