ಬುಧವಾರ, ಜುಲೈ 20, 2016

ಗುಜರಾತ್ನಲ್ಲಿ ಹುಟ್ಟಿಕೊಂಡ ದಲಿತರ ಧಂಗೆ

-ಹಾರೋಹಳ್ಳಿ ರವೀಂದ್ರ

 ಗೋ ಹತ್ಯೆ ಎಂಬ ಹೆಸರಿನಲ್ಲಿ ಅಥವಾ ಗೋ ಮಾತೆ ಎಂಬ ಪೂಜ್ಯಾ ಮನೋಭಾವನೆಯ ಹೆಸರಿನಲ್ಲಿ ದಲಿತರನ್ನು ಹತ್ತಿಕ್ಕಲು ಏನೆಲ್ಲಾ ರಣತಂತ್ರಗಳನ್ನು ಉಪಯೋಗಿಸಬೇಕಿತ್ತೋ? ಅದನ್ನು ಮೋದಿ ಸಕರ್ಾರ ಮಾಡುತ್ತಲೇ ಬರುತ್ತಿದೆ. ಗೋ ಮಾಂಸವು ಇಡೀ ಜಗತ್ತಿನಲ್ಲಿ ಸಾರ್ವತ್ರಿಕ ಆಹಾರವಾಗಿದ್ದರು ಕೂಡ ಭಾರತದಲ್ಲಿ ಅದನ್ನು ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಆ ಮೂಲಕ ಆಹಾರ ಸಂಸ್ಕೃತಿಯ ಮೇಲೆ ಹಿಡಿತ ಸಾಧಿಸಲು ಸಂಘ ಪರಿವಾರ ಬಹಿರಂಗವಾಗಿಯೇ ತನ್ನೆಲ್ಲಾ ದಬ್ಬಾಳಿಕೆ ಚಟುವಟಿಕೆಗಳನ್ನು ಮಾಡುತ್ತಿದೆ.

ದಿನಾಂಕ 11-07-2016 ರಂದು ಗುಜರಾತ್ ನಲ್ಲಿ ಸೋಮನಾಥಪುರ ಜಿಲ್ಲೆಯ ಉನಾ ಎಂಬಲ್ಲಿ ನಡೆದ ಘಟನೆ, ನಮಗೆ ಹಿಂದೂ ಮತೀಯವಾದಿಗಳ ವರ್ತನೆ ಏನೆಂದ ಸಾಭಿತಾಯಿತು. ನಾಲ್ಕು ಜನ ದಲಿತ ಹುಡುಗರು ಮೂಲತಹ ಚರ್ಮಗಾರಿಕೆಯ ಕಾಮರ್ಿಕರು. ಯಾವುದಾದರೊಂದು ದನ ಸತ್ತರೆ ಅದರ ಚರ್ಮ ತೆಗೆದು ಕಾಖರ್ಾನೆಗೆ ಸಾಗಿಸುವುದೇ ಅವರ ಕಾಯಕವಾಗಿದೆ. ಆದರೆ ದನದ ಚರ್ಮವನ್ನು ಸುಲಿದು ಸಾಗಿಸುತ್ತಿದ್ದಾಗ ಸಂಘ ಪರಿವಾರ ಕೇಂದ್ರಿತ ಗೋ ರಕ್ಷಕಾ ದಳ ಅವರನ್ನು ಅಡ್ಡಗಟ್ಟಿ ನಡುಬೀದಿಯಲ್ಲಿ ಅರೆಬೆತ್ತಲೆಯಾಗಿ ಕಬ್ಬಿಣದ ಮತ್ತು ಮರದ ವಸ್ತುಗಳಿಂದ ಹೊಡಯಲಾಗಿದೆ. ಅದಲ್ಲದೆ ಅವರ ಕೈಗೆಗಳನ್ನು ಕಟ್ಟಿಹಾಕಿ ಪಟ್ಟಣದ ತುಂಬೆಲ್ಲಾ ಅರೆಬೆತ್ತಲೆ ನಡೆಸಲಾಗಿದೆ. ಈ ಸುದ್ದಿಯು ವಿಡಿಯೊ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಂದು ಸದ್ದು ಮಾಡಿತು. ಅಷ್ಟರಲ್ಲಿಯೇ ಇನ್ನೆರಡು ದಿನ ಕಳೆಯುತ್ತಿದ್ದಂತೆಯೆ ಚರ್ಮ ಸುಲಿವ 12 ಕಾಮರ್ಿಕರನ್ನು ಅದೇ ಉನಾ ಎಂಬಲ್ಲಿ ಗೋ ರಕ್ಷಕಾ ದಳದವರು ಜನನಿ ಬೀಡ ಸ್ಥಳದಲ್ಲಿ ಕಬ್ಬಿಣದ ಹತಾರಗಳಿಂದ ಹೊಡೆಯಲಾಗಿದೆ. ಈ ಎರಡು ಘಟನೆಗಳು ಭಾರತದ ಒಂದು ಬಹುತ್ವದ ಪರಂಪರೆಯನ್ನೆ ನಾಚಿಸುತ್ತಿದೆ. ಚರ್ಮ ಸುಲಿಯುವುದೇ ಇಲ್ಲಿ ಅಪರಾಧವಾಗಿದೆ. ಹಾಗೆ ತೆಗೆದುಕೊಂಡರೆ ಇಂದಿಗೂ ಕೂಡ ಭಾರತದ ಬಹುಪಾಲು ಹಳ್ಳಿಗಳಲ್ಲಿ ದಲಿತರೆ ಚರ್ಮ ಸುಲಿಯುವವರಾಗಿದ್ದಾರೆ. ಆದರೆ ಹಿಂದುತ್ವದ ಉಮೇದುವಾರಿಕೆಯಲ್ಲಿ ಅವರ ಮೇಲೆ ನಿಯಂತ್ರಣ ಸಾಧಿಸಲು ಸಂಘ ಪರಿವಾರ ಸಜ್ಜಾಗಿದೆ.

ಗುಜರಾತ್ ನಲ್ಲಿ ಈ ಘಟನೆ ನಡೆದು ರಾಷ್ಟ್ರದಾದ್ಯಂತ ವೈರಲ್ ಆದಮೇಲೆ ಎಲ್ಲಾ ಕಡೆಗೂ ಬಿಜೆಪಿಯ ಅಜೆಂಡಾ ಬಹಿರಂಗವಾಗಿಯೇ ಸಾಬೀತಾಯಿತು. ಆದರೂ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯದಲ್ಲಿ ಹೀಗಾದರೂ ನನಗೆ ಕಣ್ಣು ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ ಎನ್ನುವ ಅಂಗವಿಕಲರಂತೆ ಸುಮ್ಮನಿದ್ದಾರೆ. ಈ ಘಟನೆಯಿಂದ ಬೇಸತ್ತ ದಲಿತ ಹುಡುಗರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಉಂಟು. ಆದರೆ ಅಚಾನಕ ಬದುಕುಳಿದಿದ್ದಾರೆ. ಗುಜರಾತ್ ನಾದ್ಯಂತ ವ್ಯಾಪಕ ಚಚರ್ೆಗೆ ಗುರಿಯಾಗಿ ಗುಜರಾತ್ ನ ಎಲ್ಲಾ ದಲಿತರಿಗೂ ಈ ವಿಷಯ ಮುಟ್ಟಿದ ಪರಿಣಾಮವಾಗಿ ಆ ರಾಜ್ಯದ ಎಲ್ಲಾ ದಲಿತರು ಧಂಗೆ ಎದ್ದು ಕೂತಿದ್ದಾರೆ. ದಿನಾಂಕ-18-07-2016 ರಿಂದ ಪ್ರತಿಭಟನೆಗಳ ಮೇಲೆ ಪ್ರತಿಭಟನೆಗಳು ಪ್ರಾರಂಭವಾಗಿ ಭಾರಿ ಜನಸ್ತೋಮದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಘಟನೆಯಿಂದ ಹಲವು ಕಡೆ ಖಿನ್ನತೆಗೆ ಒಳಗಾದ ದಲಿತರು 13 ಮಂದಿ ವಿಷಸೇವಿಸಿದ್ದಾರೆ. ಅದರಲ್ಲಿ 12 ಮಂದಿ ಬದುಕುಳಿದಿದ್ದು ಒಬ್ಬ ಗತಿಸಿದ್ದಾನೆ. ಇದರಿಂದ ಗುಜರಾತ್ ಹಿಂಸಾಚಾರಕ್ಕೆ ತಿರುಗಿದೆ. ಇಡೀ ರಾಜ್ಯದ್ಯಾಂತ ಎಲ್ಲಾ ದಲಿತ ಸಂಘಟನೆಗಳು ಒಕ್ಕೂರಿ ನಡೆಸಿದ ಪ್ರತಿಭನೆ ಹಿಂಸಾಚಾರಕ್ಕೆ ತಿರುಗಿ 12ಕ್ಕು ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರೊಂದಿಗೆ ನಡೆದ ಸಂಘರ್ಷದಿಂದ ಒಬ್ಬ ಪೊಲೀಸ್ ಪೇದೆ ಸಾವನ್ನಪ್ಪಿದ್ದಾನೆ. ಇಷ್ಟಲ್ಲದೆ ಗುಜರಾತ್ ಬಂದ್ ಗೆ ಅಲ್ಲಿನ ದಲಿತ ಸಂಘಟನೆಗಳು ಕರೆ ನೀಡಿವೆ. ಇಂತಹ ಗಂಬೀರ ಪರಿಸ್ಥಿತಿಯನ್ನು ಕಂಡ ಗುಜರಾತ್ ಡಿಜಿಪಿ ಪಿ.ಪಿ. ಪಾಂಡೆ ತನಿಖೆಗೆ ಆದೇಶ ಮಾಡಿದ್ದು ನಾಲ್ಕು ಜನರನ್ನು ಈಗಾಗಲೇ ಬಂಧಿಸಲಾಗಿದೆ.
ಗೋ ರಕ್ಷಕಾ ದಳದವರು ದಲಿತರು ಸಿಕ್ಕರೆಂದು ಹೊಡೆದು ಹೋಗಿ ಅವಿತುಕೊಂಡರು ಆದರೆ ಇಂದು ನಡೆಯುತ್ತಿರುವ ಹಿಂಸಾಚಾರಕ್ಕೆ ಅವರು ಹೊಣೆಯೆ? ಅಥವಾ ಮೋದಿ ಹೊಣೆಯೆ? ಭಾರತದಲ್ಲಿ ಗೋವನ್ನು ತಿನ್ನುವುದೇ ಅಪರಾಧವಾದರೆ ಗೋ ಹತ್ಯೆಯನ್ನು ನಡೆಸುತ್ತಿರುವ ಕಂಪನಿಗಳು ಯಾರವು? ಅವುಗಲೆಲ್ಲಾ ದಲಿತರವೇ? ಅಥವಾ ಮುಸಲ್ಮಾನರವೇ? ಗೋವು ತಾಯಿಯೇ ಎಂದಾದರೆ, ನಿಮ್ಮ ಪೂಜ್ಯ ಪ್ರಾಣಿಯೇ ಎಂದಾದರೆ, ದನದ ಮಾಂಸವನ್ನು ರಫ್ತು ಮಾಡುತ್ತಿರುವ ಹಿಂದೂ ಜನರಿಗೆ ಸೇರಿದ ಕಂಪನಿಗಳ ಮೇಲೆ ಈ ಗೋರಕ್ಷಕ ದಳವಾಗಲಿ, ಸಂಘಪರಿವಾರವೇ ಆಗಲಿ ಯಾಕೆ ದಾಳಿ ಮಾಡಿಲ್ಲ? ಗೋ ಹತ್ಯೆ ಮಾಡಿ ಅದರ ಮಾಂಸವನ್ನು ಹೊರದೇಶಗಳಿಗೆ ರಫ್ತು ಮಾಡುವ ಕಂಪನಿಗಳು ಹಿಂದೂಗಳೆ ಆಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಭಾರತೀಯ ಜನತಾ ಪಕ್ಷದ ರಾಜಕಾರಣಿಗಳ ಆಪ್ತರೇ ಆಗಿದ್ದಾರೆ. ಯು ಎಸ್ ಡಿಪಾಟರ್್ಮೆಂಟ್ ಆಫ್ ಅಗ್ರಿಕಲ್ಚರ್ ನ ವರದಿಯ ಪ್ರಕಾರ ಪ್ರಪಂಚದ ಹಲವು ಕಡೆ ದನದ ಮಾಂಸವನ್ನು ರಫ್ತು ಮಾಡುವ ದೇಶಗಳಲ್ಲಿ ಭಾರತ ಪ್ರಥಮಸ್ಥಾನವನ್ನು ಅಲಂಕರಿಸಿಕೊಂಡಿದೆ. ಬ್ರೆಜಿಲ್ 2 ಮಿಲಿಯನ್ ಟನ್ ರಫ್ತು ಮಾಡಿದರೆ, ಆಸ್ಟ್ರೇಲಿಯಾ 1 ಮಿಲಿಯನ್ ಟನ್ ರಫ್ತು ಮಾಡುತ್ತದೆ ಆದರೆ ಭಾರತ ಇವೆರಡಕ್ಕಿಂತ ಹೆಚ್ಚಾಗಿ ಭಾರತ 2.4 ಮಿಲಿಯನ್ ಟನ್ ಭಾರತದಿಂದ ಹೊರದೇಶಗಳಿಗೆ ಮಾಂಸ ರಪ್ತು ಮಾಡುತ್ತದೆ. ಸೆಂಟರ್ ಆಫ್ ಮಾನಿಟರಿಂಗ್ ಇಂಡಿಯನ್ ಎಕನಾಮಿ ವರದಿಯ ಪ್ರಕಾರ ಏಷ್ಯಾದೇಶಗಳಿಗೆ ಭಾರತ 80% ಮಾಂಸವನ್ನು ರಪ್ತು ಮಾಡುವ ದೇಶವಾಗಿದೆ. ಆಫ್ರಿಕನ್ ದೇಶಗಳಿಗೆ 15% ಮಾಂಸವನ್ನು ರಫ್ತು ಮಾಡಿದರೆ, ವಿಯಟ್ನಾಂ 45% ರಫ್ತಾಗುತ್ತದೆ. ಹಾಗೆಯೆ ಇನ್ನುಳಿದ ಕಡೆಯೂ ಮಾಂಸವು ರಫ್ತಾಗುತ್ತದೆ. ಇಂತಹ ದನದ ಮಾಂಸದ ವ್ಯಾಪಾರ ವಹಿವಾಟುಗಳನ್ನು ಹಿಂದೂ ಜನಾಂಗಿಯ ಕಂಪನಿಗಳೆ ನಡೆಸುತ್ತವೆ. ಅವು ಯಾವುವೆಂದರೆ,
1. ಆಲ್-ಕಬೀರ್ ಪ್ರೈಲಿ. ಕಂಪನಿಯು ಮುಂಬೈನಲ್ಲಿದ್ದು, ಇದರ ಮಾಲೀಕರು ಸತಿಶ್ ಮತ್ತು ಅತುಲ್ ಸಬರ್ವಾಲ್ ಎನ್ನುವವರಾಗಿದ್ದಾರೆ. 
2. ಅರೇಬಿಯನ್ ಎಕ್ಸ್ ಪೋಟರ್್ ಪ್ರೈಲಿ. ಕಂಪನಿಯು ಮುಂಬೈನಲ್ಲಿದ್ದು, ಇದರ ಮಾಲೀಕರು ಸುನೀಲ್ ಕಪೂರ್ ಎನ್ನುವವರಾಗಿದ್ದಾರೆ. 
3. ಎಂ ಕೆ ಆರ್ ಫಾರಿಝನ್ ಫುಡ್ ಎಕ್ಸ್ ಪೋಟರ್್ ಪ್ರೈಲಿ. ಕಂಪನಿಯು ನ್ಯೂ ಡೆಲ್ಲಿಯಲ್ಲಿದ್ದು, ಇದರ ಮಾಲೀಕರು ಮದನ್ ಅಬೋಟ್ ಎನ್ನುವವರಾಗಿದ್ದಾರೆ. 
4. ಪಿಎಂಎಲ್ ಇಂಡಸ್ಟ್ರೀಸ್ ಪ್ರೈಲಿ. ಕಂಪನಿಯು ಚಂಢಿಗಢದಲ್ಲಿದ್ದು, ಇದರ ಮಾಲೀಕರು ಎ.ಎಸ್.ಬಿಂದ್ರಾ ಎನ್ನುವವರಾಗಿದ್ದಾರೆ.

ಸ್ನೇಹಿತರೆ, ನಾವು ಈ ಮೇಲಿದ್ದನ್ನು ಪರಿಶೀಲಿಸಿದರೆ ಭಾರತದಲ್ಲಿ ಗೋವನ್ನು, ಸ್ವತಹ ಮಾತೆ ಎಂದು ಕರೆಯುವವರೇ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಮನಗಾಣಬಹುದು. ಚರ್ಮವನ್ನು ಸುಲಿಯುವ ಅಮಾಯಕರಿಗೆ ತಳಿಸಿದ ಗೋ ರಕ್ಷಕಾ ದಳದವರಿಗೆ ಕಂಪನಿಯವರನ್ನು ಹೊರಗೆಳೆದು ಬೀದಿಯಲ್ಲಿ ತಳಿಸುವ ತಾಕತ್ತಿದೆಯೆ? ಗುಟ್ಟಾಗಿಯೇ ದನವನ್ನು ಕಡಿಯಲು ಅನುಮತಿ ಕೊಟ್ಟು, ಇತ್ತ ಮುಸಲ್ಮಾನರು ಮತ್ತು ದಲಿತರು ದನ ತಿಂದರು, ಚರ್ಮ ಸುಲಿದರು ಎಂದು ಬೀದಿ ರಂಪ ಮಾಡುವ ಇಂತಹ ವಿಷಕಾರಕ ಸಂಘಟನೆಗಳನ್ನು ಏನು ಮಾಡಬೇಕು?

ಇವೆಲ್ಲಕ್ಕಿಂತ ಹೆಚ್ಚಾಗಿ ಈ ಮೂಲಕ ಇವರ ಮಾನಸಿಕ ಅಜೆಂಡಾವನ್ನು ನಾವು ಮನಗಾಣಬೇಕಿದೆ. ದಲಿತರು ಮತ್ತು ಮುಸಲ್ಮಾನರು ಮೂಲತಹ ದನದ ಮಾಂಸಹಾರಿಗಳಾಗಿರುವುದರಿಂದ. ಮಾಂಸವನ್ನು ರಪ್ತು ಮಾಡುವ ಕಂಪನಿಗಳಿಗೆ ತೊಡಕಾಗಿದೆ. ಸಂಪೂರ್ಣವಾಗಿ ಭಾರತದಲ್ಲಿ ಮಾತೆ ಎಂಬ ಅಕ್ಷರವನ್ನಿಟ್ಟುಕೊಂಡು ಗೋ ಹತ್ಯೆಯನ್ನು ನಿಷೇಧಿಸಿಬಿಟ್ಟರೆ ಭಾರತದ ಎಲ್ಲಾ ಹಸುಗಳ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಬಹುದು ಎಂಬ ದೂರಾಲೋಚನೆಯಿಂದ ಆಹಾರವನ್ನು ಸಂಸ್ಕೃತಿಯ ಹೆಸರಿನಲ್ಲಿ ಸಂಘಪರಿವಾರ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ. ಆ ಕಾರಣದಿಂದಲೇ ಮಾಂಸದ ಹೆಸರಿನಲ್ಲಿ ಮುಸಲ್ಮಾನರು ಮತ್ತು ದಲಿತರ ಮೇಲೆ ಹಿಂದುತ್ವವಾದಿಗಳು ಹಲ್ಲೆ ನಡೆಸುತ್ತಿರುವುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳಬೇಕಿದೆ. ಇಂತಹ ಷಡ್ಯಂತ್ರದಿಂದ ನಾವು ಹೊರಬರದೇ ಹೊದಲ್ಲಿ, ಭಾರತೀಯ ಜನತಾ ಪಕ್ಷವು ಗೋ ಮಾಂಸವನ್ನು ರಫ್ತು ಮಾಡಲು ಅನುಮತಿ ನಿಡಿದೆ. ನಾಳೆ ದಲಿತರನ್ನು ಕೂಡ ಗುಲಾಮರು ಎಂಬಂತೆ ವಿದೇಶಗಳಿಗೆ ಮಾರುವುದಕ್ಕು ಹೇಸುವವರಲ್ಲ.

ಗುಜರಾತ್ನಲ್ಲಿ ಈಗಾಗಲೇ ಹಿಂಸಾಚಾರಕ್ಕೆ ಭುಗಿಲೆದಿದೆ. ಅಲ್ಲಿನ ಸಂಘಟನೆಗಳು ಬಂದ್ ಘೊಷಿಸಿವೆ. ಗೋ ಸಮಸ್ಯೆ ಗುಜರಾತ್ ನ ಸಮಸ್ಯೆ ಅಷ್ಟೆ ಅಲ್ಲ. ಇದು ರಾಷ್ಟ್ರದ ಸಮಸ್ಯೆಯಾಗಿದೆ. ಹಾಗಾಗಿ ರಾಷ್ಟ್ರದಾದ್ಯಂತ ದಲಿತರು ಧಂಗೆ ಹೇಳಬೇಕಿದೆ. ಗುಜರಾತ್ ನಲ್ಲಿ ದಲಿತರಿಗಾದ ಅನ್ಯಾಯವನ್ನು ಖಂಡಿಸಿ ಎಲ್ಲಾ ರಾಜ್ಯಗಳನ್ನು ಬಂದ್ ಮಾಡಬೇಕಿದೆ. ಕೇಂದ್ರ ಸಕರ್ಾರದ ಯಾವುದೇ ಕೆಲಸವು ಆಗದಂತೆ ಏಕಕಾಲದಲ್ಲಿ ಭಾರತವನ್ನೆ ಬಂದ್ ಮಾಡಬೇಕಿದೆ. ಅಸ್ಪೃಶ್ಯತೆ ಆಚರಿಸಿದರೆ 6 ತಿಂಗಳು ಸಜಾ ಅಷ್ಟೆ ಸಾಲದು. ಅದಕ್ಕೊಂದು ಹೊಸ ತಿದ್ದುಪಡಿಯನ್ನೆ ತರುವ ಕಡೆ ನಾವು ನಡೆಯಬೇಕಿದೆ. ಅಸ್ಪೃಶ್ಯತೆ ಜಾತಿ ಹೆಸರಿನಲ್ಲಿ ದೌರ್ಜನ್ಯ ಎಸಗುವವರಿಗೆ ದೇಶದ್ರೋಹದ ಅಪರಾಧಿಯನ್ನಾಗಿ, ಆತನನ್ನು ಈ ದೇಶದಿಂದ ಗಡಿಪಾರು ಮಾಡುವಂತಹ ಹೊಸ ಕಾನೂನು ತಿದ್ದುಪಡಿಗೆ ನಾವೆಲ್ಲರು ಶ್ರಮಿಸಬೇಕಿದೆ. ಆ ರಿತಿಯ ಒಂದು ದೊಡ್ಡ ಮಟ್ಟದ ಸಂಘರ್ಷವಾದರೆ ಮಾತ್ರ ಈ ಹಿಂದುತ್ವವಾದಿಗಳ ಸರ್ವಧಿಕಾರ ಧೋರಣೆಯಿಂದ ಹೊರಬರಲು ಸಾಧ್ಯ. ಇಲ್ಲವಾದರೆ ಸಂಸ್ಕೃತಿಯ ಹೆಸರಿನಲ್ಲಿ ಈ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಿಗೆ ನಿಲ್ಲಿಸುತ್ತಾರೆ.

ಕಾಮೆಂಟ್‌ಗಳಿಲ್ಲ: