ಮಂಗಳವಾರ, ಡಿಸೆಂಬರ್ 1, 2015

ಸಂಗೀತಕ್ಕೆ ಇರುವುದೇ ಏಳು ಸ್ವರ. ಅದರಲ್ಲಿ ನನ್ನದು ಯಾವುದು, ನಿನ್ನದು ಯಾವುದು?

ಡಾ. ಹನುಮಣ್ಣನಾಯಕ ದೊರೆ

ಸೌಜನ್ಯ : ಪ್ರಜಾವಾಣಿ

ಹಿಂದೂಸ್ತಾನಿ ಸಂಗೀತದಲ್ಲಿ ಅನೇಕ ಪ್ರಕಾರಗಳಿವೆ. ಅವುಗಳಲ್ಲಿ ಗಜಲ್ ಕೂಡ ಒಂದು. ಗಜಲ್ ಗಾಯಕರು ಪಾಕಿಸ್ತಾನದಲ್ಲೂ ಇದ್ದಾರೆ, ಭಾರತದಲ್ಲೂ ಇದ್ದಾರೆ.  ಪಾಕಿಸ್ತಾನದ ಶ್ರೇಷ್ಠ ಗಾಯಕರಾದ ಉಸ್ತಾದ ಬಡೇ ಗುಲಾಮ್‌ ಅಲಿಖಾನ್, ನಜಾಕತ್ ಅಲಿ ಸಲಾಮತ್ ಅಲಿ, ಅದ್ನಾನ್ ಸಮಿ, ಮೆಹದಿ ಹಸನ್, ಗುಲಾಮ್ ಅಲಿ ಮುಂತಾದವರ ಗಾಯನವೆಂದರೆ ಭಾರತದಲ್ಲಿ ಅಚ್ಚುಮೆಚ್ಚು. ಇತ್ತೀಚೆಗೆ ಭಾರತದಲ್ಲಿ ಹಾಡಲು ಬಂದ ಗುಲಾಮ್ ಅಲಿಯವರಿಗೆ ಇಲ್ಲಿ ಅಡ್ಡಿಯುಂಟಾಗಿದೆ. ಇದರಿಂದ ಸಂಗೀತ ಲೋಕಕ್ಕೆ ನಿರಾಶೆ, ಆಘಾತವುಂಟಾಗಿದೆ. ಮೇರು ಗಜಲ್‌ ಗಾಯಕ ಗುಲಾಮ್ ಅಲಿ ಅವರು ಭಾರತದಲ್ಲಿ ಹಾಡಬಾರದು ಎಂದಾದರೆ ಭಾರತದಲ್ಲಿ ಯಾರೂ ಕೂಡ ಹಿಂದೂಸ್ತಾನಿ ಸಂಗೀತವನ್ನು ಹಾಡಲು ಸಾಧ್ಯವಿಲ್ಲ ಎನ್ನುವ ಅರ್ಥವೂ ಹೊರಡುತ್ತದೆ. ಯಾರೂ ಎಂದರೆ ಹಿಂದೂ, ಮುಸ್ಲಿಂ, ಫಾರಸಿ, ಜೈನ್, ಕ್ರೈಸ್ತ, ಸಿಖ್ ಮುಂತಾದ ಧರ್ಮಗಳ ಗಾಯಕರು ಎಂದರ್ಥ.

ಪಾಕಿಸ್ತಾನ ಕುರಿತು ಭಾರತದ ಕೆಲವು ಮನಸ್ಸುಗಳಿಗೆ ಇರುವ ಹಲವು ದೃಷ್ಟಿಕೋನಗಳಲ್ಲಿ ಎರಡು ವಿಶೇಷ ಅನಿಸುತ್ತದೆ. ಒಂದು ರಾಷ್ಟ್ರೀಯತೆಯ ದೃಷ್ಟಿಕೋನ, ಮತ್ತೊಂದು ಧಾರ್ಮಿಕತೆಯ ದೃಷ್ಟಿಕೋನ. ಭಾರತದ ರಾಷ್ಟ್ರೀಯತೆಯ ದೃಷ್ಟಿಕೋನವು ಸದಾ ಪಾಕಿಸ್ತಾನವನ್ನು ಎದುರು ದೇಶವೆಂದು ನೋಡುತ್ತದೆ. ಧಾರ್ಮಿಕತೆಯ ದೃಷ್ಟಿಕೋನವು ಪಾಕಿಸ್ತಾನವನ್ನು ಮುಸ್ಲಿಂ ಎಂಬ ಉಪಾಧಿಯಿಂದ ನೋಡುತ್ತದೆ. ಈ ಎರಡೂ ದೃಷ್ಟಿಕೋನಗಳು ಪಾಕಿಸ್ತಾನವು ತನ್ನದಲ್ಲವೆನ್ನುವುದನ್ನೇ ಹಟವಾಗಿ ಸಾಧಿಸುತ್ತವೆ. ಒಂದು ವಿಚಿತ್ರವಾದ ಆತ್ಮಪ್ರಶ್ನೆ ಎಂದರೆ ಅಮುಸ್ಲಿಂ ಭಾರತದ ಅವತಾರವನ್ನು ಪ್ರತ್ಯಕ್ಷೀಕರಣ ಮಾಡಿಕೊಳ್ಳುವುದು ಹೇಗೆ ಎಂಬುದು. ಅಮುಸ್ಲಿಂ ಭಾರತವೊಂದು ಇದೆಯಾ ಅಥವಾ ಅಂಥಾದ್ದು ಇರಲು ಸಾಧ್ಯವೆ? ಹಾಗೆಯೇ ಅಮುಸ್ಲಿಂ ಹಿಂದೂಸ್ತಾನಿ ಸಂಗೀತವನ್ನು ಊಹಿಸಲೂ ಸಾಧ್ಯವಿಲ್ಲ.

ವಿಶೇಷವಾಗಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಮಾತಾಡುವಾಗ ಇಂತಹ ಪ್ರಶ್ನೆಗಳ ಬುಗ್ಗೆಗಳು ಪುಟಪುಟಿದು ಮೇಲೇಳುತ್ತವೆ. ಪಂಡಿತ ಬಸವರಾಜ ಬೆಂಡಿಗೇರಿಯವರೆಂಬ ತಬಲಾವಾದಕರು ಧಾರವಾಡದಲ್ಲಿದ್ದರು. ಬೆಂಡಿಗೇರಿಯವರು, ಮಹಾನ್ ತಬಲಾ ಗುರು ಉಸ್ತಾದ್ ಮೆಹಬೂಬ್‌ಸಾಬ್ ಮಿರಜಕರ್ ಅವರ ಖಾಸಾ ಶಿಷ್ಯರು. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಅವರು ಹೇಳುತ್ತಿದ್ದ ಒಂದು ಮಾತು ಕೇಳಿ ನಾವು ಗಾಬರಿಯಾಗುತ್ತಿದ್ದೆವು. ಉಸ್ತಾದರು ಬೆಂಡಿಗೇರಿಯವರ ಕೈಯಲ್ಲಿ ಮಾರ್ಕೆಟ್‌ನಿಂದ ಮಟನ್ ತರಿಸುತ್ತಿದ್ದರಂತೆ. ಬೆಂಡಿಗೇರಿಯವರೇ ಅದನ್ನು ತೊಳೆದುಕೊಂಡು ಅಡುಗೆ ಮನೆಗೆ ಹೋಗಿ ಗುರುಮಾತೆಗೆ ಕೊಡುತ್ತಿದ್ದರಂತೆ.ಗುರುಗಳು ತಮ್ಮ ಮಡದಿಗೆ ಹೀಗೆ ಹೇಳುತ್ತಿದ್ದರಂತೆ:‘ಏ ಬಚ್ಚೇಕೋ ದಾಲ ಚಾವಲ ಖಿಲಾವೋ ಕ್ಯೂಂಕೀ ಏ ಹಿಂದೂ ಹೈ, ಏ ಲಿಂಗಾಯತ ಹೈ’ ಗಜಲ್ ಗಾಯಕ ಗುಲಾಮ್ ಅಲಿ ಅವರು ಮೊನ್ನೆ ಆಲ್ ಇಂಡಿಯಾ ರೇಡಿಯೊ ಉರ್ದು ಸರ್ವೀಸ್‌ ಸ್ಟೇಷನ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಶ್ರೇಷ್ಠ ಮಾತುಗಳನ್ನಾಡಿದರು. ಅವರು ಹೀಗೆ ಹೇಳಿದರು. ‘ಬಿಬಿಸಿ ಲಂಡನ್‌ನ ಒಂದು ಸಂದರ್ಶನದಲ್ಲಿ ಪ್ರಖ್ಯಾತ ಸಂಗೀತ ನಿರ್ದೇಶಕ ಮದನ್‌ಮೋಹನ್ ಅವರು ನನ್ನ ಬಗ್ಗೆ ಬಹಳ ಪ್ರೀತಿಯ ಮಾತಾಡಿದ್ದರು’ ಎಂದು. ಸಂದರ್ಶಕರು ಅವರಿಗೆ ಕೇಳಿದ ಒಂದು ಪ್ರಶ್ನೆ ಹೀಗಿತ್ತು. ‘ಹಿಂದೂಸ್ತಾನದಲ್ಲಿ ನಿಮ್ಮ ಇಷ್ಟದ ಉಪ ಶಾಸ್ತ್ರೀಯ ಗಾಯಕರು ಯಾರು?’ ಎಂದು. ಅದಕ್ಕೆ ಗುಲಾಮ್ ಅಲಿ ಅವರು ‘ಮಾಶಲ್ಲಾ ಮಾಶಲ್ಲಾ! ಗಿರಿಜಾದೇವಿ, ನಿರ್ಮಲಾದೇವಿ, ಬೇಗಂ ಅಖ್ತರ್, ಲಕ್ಷ್ಮೀಶಂಕರ್ ಪಂಡಿತ್, ಜಗಜಿತ್‌ ಸಿಂಗ್ ಮುಂತಾದವರು ನನ್ನ ಇಷ್ಟದವರು’ ಎಂದರು. ಅವರು ಭಾರತದ ಗಜಲ್ ಗಾಯಕ ಜಗಜಿತ್‌ ಸಿಂಗ್ ಅವರನ್ನು ‘ಭಾಯಿ’ ಎಂದು ಕರೆಯುತ್ತಿದ್ದರು.

ನಾನು ಮತ್ತು ನನ್ನ ಸಂಗೀತ ಗೆಳೆಯರು ಗುಲಾಮ್ ಅಲಿ ಅವರ  ಹಾಡುಗಾರಿಕೆ ಕೇಳಿ ಮೂಕವಿಸ್ಮಿತರಾಗುತ್ತೇವೆ. ಪಂಡಿತ ಭೀಮಸೇನ ಜೋಶಿ ಅವರ ಗುರು ಸವಾಯಿ ಗಂಧರ್ವರು ಹಿಂದೂಗಳು (ಬ್ರಾಹ್ಮಣರು) ಮತ್ತು ಅವರ ಗುರು ಉಸ್ತಾದ್ ಅಬ್ದುಲ್ ಕರೀಂಖಾನ್ ಸಾಹೇಬರು ಮುಸ್ಲಿಮರು. ಆದರೆ ಅವರನ್ನು ಬರೀ ಧರ್ಮದ ಚೌಕಟ್ಟಿನಲ್ಲಿ ನೋಡಲಾದೀತೇ! ಅವರು ಭೈರವಿ ರಾಗದಲ್ಲಿ ‘ಜಮುನಾಕೇ ತೀರ’ ಎಂಬ ಠುಮ್ರಿಯನ್ನು ಹಾಡುತ್ತಿದ್ದರು. ಪಾಕಿಸ್ತಾನದ ಉಸ್ತಾದ್ ಬಡೇಗುಲಾಮ್ ಅಲಿ ಖಾನ್ ಸಾಹೇಬರು ಪಹಾಡಿ ರಾಗದಲ್ಲಿ ‘ಹರಿ ಓಂ’ ಹಾಡುತ್ತಿದ್ದರು.  ಮಹ್ಮದ್ ರಫಿ ಅವರು ‘ಬೈಜು ಬಾವರಾ’ ಸಿನಿಮಾದಲ್ಲಿ ಮಾಲಕೌಂಸ ರಾಗದಲ್ಲಿ ‘ಹರಿ ಓಂ ಮನ ತರಫತ ಹರಿ ದರುಶನಕೋ ಆಜ’ ಹಾಡಿದ್ದಾರೆ.

ಮೇರುಖಂಡ ಶೈಲಿಯ ಮೇರು ಗಾಯಕ ಉಸ್ತಾದ್ ಅಮೀರ್‌ಖಾನ್ ಸಾಹೇಬರ ಮಾನಸಗುರು ಹಾಗೂ ಮೇರುಖಂಡ ಗಾಯಕಿಯ ಸೃಷ್ಟಿಕರ್ತ ಉಸ್ತಾದ್ ವಹೀದ್ ಖಾನ್ ಸಾಹೇಬರು ಜಂಗಮ ಮೂರ್ತಿಗಳಾಗಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಗುರುಗಳು. ವಹೀದ್‌ಖಾನ್ ಸಾಹೇಬರು ಶಿವಯೋಗ ಮಂದಿರದಲ್ಲಿ ಹಲವು ವರ್ಷ ಇದ್ದು ಪಂಚಾಕ್ಷರ ಗವಾಯಿಗಳಿಗೆ, ಪುಟ್ಟರಾಜ ಗವಾಯಿಗಳಿಗೆ ಮತ್ತು ಬಸವರಾಜ ರಾಜಗುರುಗಳಿಗೆ ಸಂಗೀತ ಕಲಿಸಿ ಹೋಗಿದ್ದಾರೆ. ನಾನು ಭೈರವ ರಾಗದಲ್ಲಿ ವಿಲಂಬಿತ ಏಕತಾಲದಲ್ಲಿ ‘ಅಲ್ಲಾ ಹೋ ಅಕ್ಬರ್’ ಎಂಬ ಚೀಜ್ ಕಟ್ಟಿ ಹಾಡಿದ್ದೇನೆ. ಅದು ಗುಲ್ಬರ್ಗ ಆಕಾಶವಾಣಿಯಿಂದ ಪ್ರಸಾರವಾಗಿದೆ. ಪಂಡಿತ ಮಲ್ಲಿಕಾರ್ಜುನ ಮನ್ಸೂರರು ಶಿವಮತ ಭೈರವ ರಾಗದಲ್ಲಿ ‘ಪ್ರಥಮ ಅಲ್ಲಾ’ ಎಂಬ ಚೀಜನ್ನು ಹಾಡಿದ್ದಾರೆ. ಅವರ ಗುರು ಉಸ್ತಾದ್ ಮಂಜೀಖಾನ್, ಬುರ್ಜಿಖಾನ್‌ರ ತಂದೆ ಉಸ್ತಾದ್ ಅಲ್ಲಾದಿಯಾ ಖಾನ್ ಸಾಹೇಬರು ಬಹಾದ್ದೂರಿ ತೋಡಿ ರಾಗದಲ್ಲಿ ‘ಏ ಮಹಾದೇವ ಪಾರ್ವತಿ ಪತೇ’ ಎಂಬ ಚೀಜನ್ನು ಕಟ್ಟಿ ಹಾಡಿದ್ದಾರೆ ಮತ್ತು ಕಲಿಸಿದ್ದಾರೆ.ಅವರು ದಿನಾಲೂ ಮುಂಜಾನೆ ತಮ್ಮ ಮಕ್ಕಳೊಂದಿಗೆ ಈ ಚೀಜನ್ನು ಹಾಡುತ್ತಿದ್ದರಂತೆ. ಪರವೀನ್ ಸುಲ್ತಾನಾ ಅವರು ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ಅವರು ಭೈರವಿ ರಾಗದ ‘ಭವಾನಿ ದಯಾನಿ’ ಎಂಬ ಚೀಜನ್ನು ಬಹಳ ಸಂತೋಷದಿಂದ ಹಾಡುತ್ತಾರೆ. ನಮ್ಮ ಗುರುಗಳಾದ ಪಂಡಿತ ಬಸವರಾಜ ರಾಜಗುರು ಅವರು ಉಸ್ತಾದ್ ಅಮಾನ್ ಅಲಿ ಬೆಂಡಿಗೇರಿ ಅವರ ಬಳಿ ಮತ್ತು ತಾವು ಕ್ವೆಟ್ಟಾ, ಕರಾ
ಹಿಂದೂಸ್ತಾನಿ ಸಂಗೀತದಲ್ಲಿ ಅನೇಕ ಪ್ರಕಾರಗಳಿವೆ. ಅವುಗಳಲ್ಲಿ ಗಜಲ್ ಕೂಡ ಒಂದು. ಗಜಲ್ ಗಾಯಕರು ಪಾಕಿಸ್ತಾನದಲ್ಲೂ ಇದ್ದಾರೆ, ಭಾರತದಲ್ಲೂ ಇದ್ದಾರೆ.  ಪಾಕಿಸ್ತಾನದ ಶ್ರೇಷ್ಠ ಗಾಯಕರಾದ ಉಸ್ತಾದ ಬಡೇ ಗುಲಾಮ್‌ ಅಲಿಖಾನ್, ನಜಾಕತ್ ಅಲಿ ಸಲಾಮತ್ ಅಲಿ, ಅದ್ನಾನ್ ಸಮಿ, ಮೆಹದಿ ಹಸನ್, ಗುಲಾಮ್ ಅಲಿ ಮುಂತಾದವರ ಗಾಯನವೆಂದರೆ ಭಾರತದಲ್ಲಿ ಅಚ್ಚುಮೆಚ್ಚು. ಇತ್ತೀಚೆಗೆ ಭಾರತದಲ್ಲಿ ಹಾಡಲು ಬಂದ ಗುಲಾಮ್ ಅಲಿಯವರಿಗೆ ಇಲ್ಲಿ ಅಡ್ಡಿಯುಂಟಾಗಿದೆ. ಇದರಿಂದ ಸಂಗೀತ ಲೋಕಕ್ಕೆ ನಿರಾಶೆ, ಆಘಾತವುಂಟಾಗಿದೆ. ಮೇರು ಗಜಲ್‌ ಗಾಯಕ ಗುಲಾಮ್ ಅಲಿ ಅವರು ಭಾರತದಲ್ಲಿ ಹಾಡಬಾರದು ಎಂದಾದರೆ ಭಾರತದಲ್ಲಿ ಯಾರೂ ಕೂಡ ಹಿಂದೂಸ್ತಾನಿ ಸಂಗೀತವನ್ನು ಹಾಡಲು ಸಾಧ್ಯವಿಲ್ಲ ಎನ್ನುವ ಅರ್ಥವೂ ಹೊರಡುತ್ತದೆ. ಯಾರೂ ಎಂದರೆ ಹಿಂದೂ, ಮುಸ್ಲಿಂ, ಫಾರಸಿ, ಜೈನ್, ಕ್ರೈಸ್ತ, ಸಿಖ್ ಮುಂತಾದ ಧರ್ಮಗಳ ಗಾಯಕರು ಎಂದರ್ಥ.

ಪಾಕಿಸ್ತಾನ ಕುರಿತು ಭಾರತದ ಕೆಲವು ಮನಸ್ಸುಗಳಿಗೆ ಇರುವ ಹಲವು ದೃಷ್ಟಿಕೋನಗಳಲ್ಲಿ ಎರಡು ವಿಶೇಷ ಅನಿಸುತ್ತದೆ. ಒಂದು ರಾಷ್ಟ್ರೀಯತೆಯ ದೃಷ್ಟಿಕೋನ, ಮತ್ತೊಂದು ಧಾರ್ಮಿಕತೆಯ ದೃಷ್ಟಿಕೋನ. ಭಾರತದ ರಾಷ್ಟ್ರೀಯತೆಯ ದೃಷ್ಟಿಕೋನವು ಸದಾ ಪಾಕಿಸ್ತಾನವನ್ನು ಎದುರು ದೇಶವೆಂದು ನೋಡುತ್ತದೆ. ಧಾರ್ಮಿಕತೆಯ ದೃಷ್ಟಿಕೋನವು ಪಾಕಿಸ್ತಾನವನ್ನು ಮುಸ್ಲಿಂ ಎಂಬ ಉಪಾಧಿಯಿಂದ ನೋಡುತ್ತದೆ. ಈ ಎರಡೂ ದೃಷ್ಟಿಕೋನಗಳು ಪಾಕಿಸ್ತಾನವು ತನ್ನದಲ್ಲವೆನ್ನುವುದನ್ನೇ ಹಟವಾಗಿ ಸಾಧಿಸುತ್ತವೆ. ಒಂದು ವಿಚಿತ್ರವಾದ ಆತ್ಮಪ್ರಶ್ನೆ ಎಂದರೆ ಅಮುಸ್ಲಿಂ ಭಾರತದ ಅವತಾರವನ್ನು ಪ್ರತ್ಯಕ್ಷೀಕರಣ ಮಾಡಿಕೊಳ್ಳುವುದು ಹೇಗೆ ಎಂಬುದು. ಅಮುಸ್ಲಿಂ ಭಾರತವೊಂದು ಇದೆಯಾ ಅಥವಾ ಅಂಥಾದ್ದು ಇರಲು ಸಾಧ್ಯವೆ? ಹಾಗೆಯೇ ಅಮುಸ್ಲಿಂ ಹಿಂದೂಸ್ತಾನಿ ಸಂಗೀತವನ್ನು ಊಹಿಸಲೂ ಸಾಧ್ಯವಿಲ್ಲ.

ವಿಶೇಷವಾಗಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಮಾತಾಡುವಾಗ ಇಂತಹ ಪ್ರಶ್ನೆಗಳ ಬುಗ್ಗೆಗಳು ಪುಟಪುಟಿದು ಮೇಲೇಳುತ್ತವೆ. ಪಂಡಿತ ಬಸವರಾಜ ಬೆಂಡಿಗೇರಿಯವರೆಂಬ ತಬಲಾವಾದಕರು ಧಾರವಾಡದಲ್ಲಿದ್ದರು. ಬೆಂಡಿಗೇರಿಯವರು, ಮಹಾನ್ ತಬಲಾ ಗುರು ಉಸ್ತಾದ್ ಮೆಹಬೂಬ್‌ಸಾಬ್ ಮಿರಜಕರ್ ಅವರ ಖಾಸಾ ಶಿಷ್ಯರು. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಅವರು ಹೇಳುತ್ತಿದ್ದ ಒಂದು ಮಾತು ಕೇಳಿ ನಾವು ಗಾಬರಿಯಾಗುತ್ತಿದ್ದೆವು. ಉಸ್ತಾದರು ಬೆಂಡಿಗೇರಿಯವರ ಕೈಯಲ್ಲಿ ಮಾರ್ಕೆಟ್‌ನಿಂದ ಮಟನ್ ತರಿಸುತ್ತಿದ್ದರಂತೆ. ಬೆಂಡಿಗೇರಿಯವರೇ ಅದನ್ನು ತೊಳೆದುಕೊಂಡು ಅಡುಗೆ ಮನೆಗೆ ಹೋಗಿ ಗುರುಮಾತೆಗೆ ಕೊಡುತ್ತಿದ್ದರಂತೆ.ಗುರುಗಳು ತಮ್ಮ ಮಡದಿಗೆ ಹೀಗೆ ಹೇಳುತ್ತಿದ್ದರಂತೆ:‘ಏ ಬಚ್ಚೇಕೋ ದಾಲ ಚಾವಲ ಖಿಲಾವೋ ಕ್ಯೂಂಕೀ ಏ ಹಿಂದೂ ಹೈ, ಏ ಲಿಂಗಾಯತ ಹೈ’ ಗಜಲ್ ಗಾಯಕ ಗುಲಾಮ್ ಅಲಿ ಅವರು ಮೊನ್ನೆ ಆಲ್ ಇಂಡಿಯಾ ರೇಡಿಯೊ ಉರ್ದು ಸರ್ವೀಸ್‌ ಸ್ಟೇಷನ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಶ್ರೇಷ್ಠ ಮಾತುಗಳನ್ನಾಡಿದರು. ಅವರು ಹೀಗೆ ಹೇಳಿದರು. ‘ಬಿಬಿಸಿ ಲಂಡನ್‌ನ ಒಂದು ಸಂದರ್ಶನದಲ್ಲಿ ಪ್ರಖ್ಯಾತ ಸಂಗೀತ ನಿರ್ದೇಶಕ ಮದನ್‌ಮೋಹನ್ ಅವರು ನನ್ನ ಬಗ್ಗೆ ಬಹಳ ಪ್ರೀತಿಯ ಮಾತಾಡಿದ್ದರು’ ಎಂದು. ಸಂದರ್ಶಕರು ಅವರಿಗೆ ಕೇಳಿದ ಒಂದು ಪ್ರಶ್ನೆ ಹೀಗಿತ್ತು. ‘ಹಿಂದೂಸ್ತಾನದಲ್ಲಿ ನಿಮ್ಮ ಇಷ್ಟದ ಉಪ ಶಾಸ್ತ್ರೀಯ ಗಾಯಕರು ಯಾರು?’ ಎಂದು. ಅದಕ್ಕೆ ಗುಲಾಮ್ ಅಲಿ ಅವರು ‘ಮಾಶಲ್ಲಾ ಮಾಶಲ್ಲಾ! ಗಿರಿಜಾದೇವಿ, ನಿರ್ಮಲಾದೇವಿ, ಬೇಗಂ ಅಖ್ತರ್, ಲಕ್ಷ್ಮೀಶಂಕರ್ ಪಂಡಿತ್, ಜಗಜಿತ್‌ ಸಿಂಗ್ ಮುಂತಾದವರು ನನ್ನ ಇಷ್ಟದವರು’ ಎಂದರು. ಅವರು ಭಾರತದ ಗಜಲ್ ಗಾಯಕ ಜಗಜಿತ್‌ ಸಿಂಗ್ ಅವರನ್ನು ‘ಭಾಯಿ’ ಎಂದು ಕರೆಯುತ್ತಿದ್ದರು.

ನಾನು ಮತ್ತು ನನ್ನ ಸಂಗೀತ ಗೆಳೆಯರು ಗುಲಾಮ್ ಅಲಿ ಅವರ  ಹಾಡುಗಾರಿಕೆ ಕೇಳಿ ಮೂಕವಿಸ್ಮಿತರಾಗುತ್ತೇವೆ. ಪಂಡಿತ ಭೀಮಸೇನ ಜೋಶಿ ಅವರ ಗುರು ಸವಾಯಿ ಗಂಧರ್ವರು ಹಿಂದೂಗಳು (ಬ್ರಾಹ್ಮಣರು) ಮತ್ತು ಅವರ ಗುರು ಉಸ್ತಾದ್ ಅಬ್ದುಲ್ ಕರೀಂಖಾನ್ ಸಾಹೇಬರು ಮುಸ್ಲಿಮರು. ಆದರೆ ಅವರನ್ನು ಬರೀ ಧರ್ಮದ ಚೌಕಟ್ಟಿನಲ್ಲಿ ನೋಡಲಾದೀತೇ! ಅವರು ಭೈರವಿ ರಾಗದಲ್ಲಿ ‘ಜಮುನಾಕೇ ತೀರ’ ಎಂಬ ಠುಮ್ರಿಯನ್ನು ಹಾಡುತ್ತಿದ್ದರು. ಪಾಕಿಸ್ತಾನದ ಉಸ್ತಾದ್ ಬಡೇಗುಲಾಮ್ ಅಲಿ ಖಾನ್ ಸಾಹೇಬರು ಪಹಾಡಿ ರಾಗದಲ್ಲಿ ‘ಹರಿ ಓಂ’ ಹಾಡುತ್ತಿದ್ದರು.  ಮಹ್ಮದ್ ರಫಿ ಅವರು ‘ಬೈಜು ಬಾವರಾ’ ಸಿನಿಮಾದಲ್ಲಿ ಮಾಲಕೌಂಸ ರಾಗದಲ್ಲಿ ‘ಹರಿ ಓಂ ಮನ ತರಫತ ಹರಿ ದರುಶನಕೋ ಆಜ’ ಹಾಡಿದ್ದಾರೆ.

ಮೇರುಖಂಡ ಶೈಲಿಯ ಮೇರು ಗಾಯಕ ಉಸ್ತಾದ್ ಅಮೀರ್‌ಖಾನ್ ಸಾಹೇಬರ ಮಾನಸಗುರು ಹಾಗೂ ಮೇರುಖಂಡ ಗಾಯಕಿಯ ಸೃಷ್ಟಿಕರ್ತ ಉಸ್ತಾದ್ ವಹೀದ್ ಖಾನ್ ಸಾಹೇಬರು ಜಂಗಮ ಮೂರ್ತಿಗಳಾಗಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಗುರುಗಳು. ವಹೀದ್‌ಖಾನ್ ಸಾಹೇಬರು ಶಿವಯೋಗ ಮಂದಿರದಲ್ಲಿ ಹಲವು ವರ್ಷ ಇದ್ದು ಪಂಚಾಕ್ಷರ ಗವಾಯಿಗಳಿಗೆ, ಪುಟ್ಟರಾಜ ಗವಾಯಿಗಳಿಗೆ ಮತ್ತು ಬಸವರಾಜ ರಾಜಗುರುಗಳಿಗೆ ಸಂಗೀತ ಕಲಿಸಿ ಹೋಗಿದ್ದಾರೆ. ನಾನು ಭೈರವ ರಾಗದಲ್ಲಿ ವಿಲಂಬಿತ ಏಕತಾಲದಲ್ಲಿ ‘ಅಲ್ಲಾ ಹೋ ಅಕ್ಬರ್’ ಎಂಬ ಚೀಜ್ ಕಟ್ಟಿ ಹಾಡಿದ್ದೇನೆ. ಅದು ಗುಲ್ಬರ್ಗ ಆಕಾಶವಾಣಿಯಿಂದ ಪ್ರಸಾರವಾಗಿದೆ. ಪಂಡಿತ ಮಲ್ಲಿಕಾರ್ಜುನ ಮನ್ಸೂರರು ಶಿವಮತ ಭೈರವ ರಾಗದಲ್ಲಿ ‘ಪ್ರಥಮ ಅಲ್ಲಾ’ ಎಂಬ ಚೀಜನ್ನು ಹಾಡಿದ್ದಾರೆ. ಅವರ ಗುರು ಉಸ್ತಾದ್ ಮಂಜೀಖಾನ್, ಬುರ್ಜಿಖಾನ್‌ರ ತಂದೆ ಉಸ್ತಾದ್ ಅಲ್ಲಾದಿಯಾ ಖಾನ್ ಸಾಹೇಬರು ಬಹಾದ್ದೂರಿ ತೋಡಿ ರಾಗದಲ್ಲಿ ‘ಏ ಮಹಾದೇವ ಪಾರ್ವತಿ ಪತೇ’ ಎಂಬ ಚೀಜನ್ನು ಕಟ್ಟಿ ಹಾಡಿದ್ದಾರೆ ಮತ್ತು ಕಲಿಸಿದ್ದಾರೆ.ಅವರು ದಿನಾಲೂ ಮುಂಜಾನೆ ತಮ್ಮ ಮಕ್ಕಳೊಂದಿಗೆ ಈ ಚೀಜನ್ನು ಹಾಡುತ್ತಿದ್ದರಂತೆ. ಪರವೀನ್ ಸುಲ್ತಾನಾ ಅವರು ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ಅವರು ಭೈರವಿ ರಾಗದ ‘ಭವಾನಿ ದಯಾನಿ’ ಎಂಬ ಚೀಜನ್ನು ಬಹಳ ಸಂತೋಷದಿಂದ ಹಾಡುತ್ತಾರೆ. ನಮ್ಮ ಗುರುಗಳಾದ ಪಂಡಿತ ಬಸವರಾಜ ರಾಜಗುರು ಅವರು ಉಸ್ತಾದ್ ಅಮಾನ್ ಅಲಿ ಬೆಂಡಿಗೇರಿ ಅವರ ಬಳಿ ಮತ್ತು ತಾವು ಕ್ವೆಟ್ಟಾ, ಕರಾಚಿಯಲ್ಲಿದ್ದಾಗ ಕಲಿತುಬಂದ ‘ಬಾನ ನೈನೋಂಕಾ ಜಾಲಿಂನೇ’ ಮತ್ತು ‘ತೇರಿ ತಿರಚಿ ನಜರಿಯಾಕೇ ಬಾನ್’ ಎಂಬ ಉರ್ದು ಕವ್ವಾಲಿಗಳನ್ನು ಹಾರಾಡಿ ಹಾಡುತ್ತಿದಕಾಮೆಂಟ್‌ಗಳಿಲ್ಲ: