ಬುಧವಾರ, ಮೇ 6, 2015

ಕಣ್ಮನ ಸೆಳೆಯುವ ದೃಶ್ಯಕಾವ್ಯ “ಕರ್ಣಭಾರ”:

ಶಶಿಕಾಂತ ಯಡಹಳ್ಳಿ 
ಭಾಸಕವಿಯ ಕರ್ಣಭಾರ ರೂಪಕವು ಮಹಾಭಾರತದ ದುರಂತ ಪಾತ್ರವಾದ ಕರ್ಣನ ತಲ್ಲಣಗಳನ್ನುಚಿತ್ರಿಸುತ್ತದೆ ರೂಪಕದೊಳಗಿನ ರಂಗ ಸಾಧ್ಯತೆಗಳನ್ನು ಕಲಾತ್ಮಕವಾಗಿ ವಿಸ್ತರಿಸಿದೃಶ್ಯಕಾವ್ಯವೊಂದನ್ನು ಡಾ.ಶ್ರೀಪಾದ ಭಟ್ ರವರು ತುಳು ಭಾಷೆಯಲ್ಲಿ ವಿನ್ಯಾಸಗೊಳಿಸಿನಿರ್ದೇಶಿಸಿದ್ದಾರೆಸತ್ಯ ಉಡುಪಿರವರು  ತುಳುವಿನಲ್ಲಿ ರಂಗರೂಪಗೊಳಿಸಿದ್ದಾರೆ.  ಮಣಿಪಾಲದಸಂಗಮ ಕಲಾವಿದೆರ್ ತಂಡ  ನಾಟಕವನ್ನು ನಿರ್ಮಿಸಿದೆಸಂಸ ಬಯಲು ರಂಗಮಂದಿರದಲ್ಲಿರಂಗನಿರಂತರ ಆಯೋಜಿಸಿದ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ 2015 ಏಪ್ರಿಲ್ 7 ರಂದುಕರ್ಣಭಾರ ಪ್ರದರ್ಶನಗೊಂಡು ನೋಡುಗರನ್ನು ವಿಸ್ಮಯಗೊಳಿಸಿತು.

ಭಾಸ ಮಹಾಕವಿಯ ಕರ್ಣಭಾರ ಎನ್ನುವ ಕಿರುನಾಟಕಕ್ಕೆ ಅದೇ ಭಾಸನ ಧೂತ ಘಟೋದ್ಘಜನಾಟಕದ ಕೆಲವು ಅಂಶಗಳನ್ನು ಕಸಿ ಮಾಡಿ ವಿಶಿಷ್ಟವಾದ ರೂಪಕವೊಂದನ್ನು ಡಾ.ಶ್ರೀಪಾದರುಕಟ್ಟಿಕೊಟ್ಟಿದ್ದಾರೆಕುರುಕ್ಷೇತ್ರ ಯುದ್ದಕ್ಕೆ ಸಿದ್ಧನಾಗಿ ಹೊರಟಿದ್ದ ಸೇನಾಧಿಪತಿ ಕರ್ಣನು ತನ್ನ ರಥದಸಾರಥಿಯಾಗಿದ್ದ ಶಲ್ಯನಿಗೆ ತನ್ನ ಬದುಕಿನ ದುರಂತಗಾಥೆಯನ್ನು ಹೇಳುತ್ತಲೇ ವ್ಯವಸ್ಥೆಯಕುತಂತ್ರವನ್ನು ಬಯಲುಗೊಳಿಸುವುದು  ನಾಟಕದ ಸಾರವಾಗಿದೆಆದರೆ ಕರ್ಣ ತೆರೆದಿಟ್ಟ ಕಠೋರಸತ್ಯಗಳು ಮಾತ್ರ ತಾಯಿ ಗುರು ದೈವದ ಸ್ವಾರ್ಥವನ್ನು ರಂಗದಂಗಳದಲ್ಲಿ ಬೆತ್ತಲುಗೊಳಿಸುತ್ತವೆ.ಹೆತ್ತು ತೊರೆದ ತಾಯಿ ಕುಂತಿ ಬಂದು ಕರ್ಣನಿಗೆ ತೊಟ್ಟ ಬಾಣವ ಮತ್ತೆ ತೊಡದಿರು ಎಂಬ ವರಪಡೆದು ಆತನ ಯುದ್ಧ ಸಾಮರ್ಥ್ಯವನ್ನು ಮಿತಿಗೊಳಿಸಿದರೆಗುರು ಪರುಷರಾಮ ಅಗತ್ಯವಿದ್ದಾಗಶಸ್ತ್ರಪ್ರಯೋಗ ಮಂತ್ರಗಳೇ ಮರೆತುಹೋಗಲಿ ಎಂದು ಶಾಪ ಕೊಟ್ಟು ಕರ್ಣನ ಅವನತಿಗೆಕಾರಣನಾಗುತ್ತಾನೆತನ್ನ ಮಗ ಅರ್ಜುನನನ್ನು ರಕ್ಷಿಸಲು ತಂತ್ರ ಹೂಡಿದ ಇಂದ್ರದೇವನು ಬ್ರಾಹ್ಮಣವೇಷದಲ್ಲಿ ಬಂದು ಕರ್ಣನ ಕವಚ ಕುಂಡಲಗಳನ್ನು ದಾನವಾಗಿ ಪಡೆದು ಕರ್ಣನ ಅವಸಾನಕ್ಕೆಪೂರ್ವಸಿದ್ದತೆ ಮಾಡಿಕೊಳ್ಳುತ್ತಾನೆಇದೇ ಇಂದ್ರನೇ ದುಂಬಿಯಾಗಿ ಬಂದು ಕರ್ಣ ಕ್ಷತ್ರೀಯ ಎಂಬುದನ್ನುಸಾಬೀತು ಪಡಿಸಿ ಪರುಷುರಾಮನ ಶಾಪ ಪ್ರಕರಣಕ್ಕೂ ಪ್ರೇರಕನಾಗುತ್ತಾನೆಹೀಗೆ....ಕಾಯಬೇಕಾದವರೇ ಕೊಲ್ಲುವ ಕಾರ್ಯಕ್ಕೆ ಕಾರಣೀಭೂತರಾಗಿ ಕರ್ಣನ ಬದುಕನ್ನೇಸರ್ವನಾಶಮಾಡಿದ್ದನ್ನು  ನಾಟಕ ಪ್ರಶ್ನಿಸುತ್ತದೆನಾಟಕದ ಕರ್ತು ಭಾಸನ ಆಶಯಕ್ಕೆ ಎಲ್ಲಿಯೂಧಕ್ಕೆಯಾಗದಂತೆ ಇಡೀ ನಾಟಕವನ್ನು ಮರುವ್ಯಾಖ್ಯಾನ ಮಾಡುವ ಪ್ರಯತ್ನ ಕರ್ಣಭಾರದಲ್ಲಿದೆ.


ಇಡೀ ನಾಟಕದಲ್ಲಿ ನಾಯಕನಾದ ಕರ್ಣ ಕೇಂದ್ರದಲ್ಲಿದ್ದು,ಪರೀಧಿಯಲ್ಲಿ ಕುಂತಿಪರುಷುರಾಮ ಹಾಗೂ ಇಂದ್ರರುಖಳನಾಯಕರಾಗಿ  ಚಿತ್ರಿತರಾಗಿದ್ದಾರೆಕರ್ಣನದೃಷ್ಟಿಕೋನದಲ್ಲಿ ಇಡೀ ನಾಟಕ ಪ್ರಸ್ತುತಗೊಂಡಿದ್ದು ವ್ಯವಸ್ಥೆಯಕುತಂತ್ರಕ್ಕೆ ಸಮರ್ಥ ಪ್ರತಿಭಾನ್ವಿತ ಯೋಧನೊಬ್ಬ ಹೇಗೆಬಲಿಪಶುವಾಗುತ್ತಾನೆ ಎನ್ನುವುದನ್ನು ಕರ್ಣಭಾರ ನಾಟಕಅತ್ಯಂತ ಸೊಗಸಾಗಿ ಬಿಂಬಿಸುತ್ತದೆಆದರೆ ಸೂಕ್ಷ್ಮವಾಗಿಅವಲೋಕಿಸಿದಾಗ  ಭಾಸನ ಕರ್ಣನು ಬಾಹ್ಯಒತ್ತಡಗಳಿಗಿಂತ ತನ್ನ ಆಂತರಿಕ ಉದಾತ್ತತೆಯಅವಿವೇಕತನಕ್ಕೆ ತನ್ನನ್ನು ತಾನೇ ಬಲಿಪಶುವಾಗಿಸಲು ಸಿದ್ಧತೆಮಾಡಿಕೊಂಡನೇನೋ ಎನ್ನುವ ಭಾವನೆ ನೋಡುಗರಿಗೆಬಾರದೇ ಇರದುಯಾಕೆಂದರೆ ಖಳಪಾತ್ರಗಳತಂತ್ರಗಾರಿಕೆಯ ಬಗ್ಗೆ ಅರಿವಿದ್ದೂತನ್ನ ಅವಸಾನಕ್ಕೆನಡೆಯುತ್ತಿರುವ ಕುತಂತ್ರಗಳ ಕುರಿತು ತಿಳುವಳಿಕೆ ಇದ್ದೂ ಸಹಕರ್ಣ ಕೇಳಿದವರಿಗೆ ಕೇಳಿದ್ದನ್ನೆಲ್ಲಾ ಕೊಟ್ಟು ಬರಿದಾಗಿಬಲಿಯಾಗಿದ್ದು ಅತಿರೇಕ ಆದರ್ಶವೆನಿಸುತ್ತದೆ ಮಾತಿಗೆ ಉದಾಹರಣೆಯೊಂದು ಇದೇನಾಟಕದಲ್ಲಿದೆಬ್ರಾಹ್ಮಣ ವೇಷದಲ್ಲಿ ಬಂದು ಕವಚ ದಾನ ಪಡೆದಿದ್ದು ಇಂದ್ರನೇ ಎಂದು ಶಲ್ಯಎಚ್ಚರಿಸುತ್ತಾನೆತನ್ನ ಕುಕಾರ್ಯದಿಂದ ನಾಚಿಕೆಪಟ್ಟ ಇಂದ್ರ ಒಂದು ಆಯುಧವನ್ನು ತನ್ನ ಧೂತನಕೈಯಲ್ಲಿ ಕೊಟ್ಟು ಕಳುಹಿಸಿದಾಗಲೂ ಕರ್ಣ ಅದನ್ನೂ ನಿರಾಕರಿಸುತ್ತಾನೆಎಲ್ಲರಿಂದಲೂ ಹವಿಸ್ಸನ್ನುದಾನವಾಗಿ ಪಡೆಯುವ ದೇವೆಂದ್ರ ಬಂದು ನನ್ನ ಮುಂದೆ ಭಿಕ್ಷುಕನಂತೆ ಬೇಡಿ ದಾನ ಪಡೆದಿದ್ದಕ್ಕೆ ಕರ್ಣಹೆಮ್ಮೆ ಪಡುತ್ತಾನೆಸೋತಿದ್ದು ತಾನಲ್ಲ ಇಂದ್ರ ಎಂದು ಗರ್ವ ಪಡುತ್ತಾನೆಆದರೆ ತನ್ನಅವಸಾನಕ್ಕಿಂತಲೂತನ್ನನ್ನೇ ನಂಬಿದ ಕುರುಸೇನೆಯ ಸೋಲಿಗಿಂತಲೂ ಕರ್ಣನಿಗೆ ತನ್ನ ವ್ಯಕ್ತಿಗತಪ್ರತಿಷ್ಠೆಹಾಗೂ ವ್ಯಯಕ್ತಿಕ ಕೀರ್ತಿ ಬಲು ಮುಖ್ಯವಾಗಿತ್ತೇನೋ ಎಂಬ ಸಂದೇಹ  ನಾಟಕವನ್ನುಸೂಕ್ಷ್ಮವಾಗಿ ಅವಲೋಕಿಸಿದಾಗ ಅರ್ಥವಾಗುತ್ತದೆ.

 ನಾಟಕದ ಕೊನೆಗೆ ಭಾಸನದ್ದಲ್ಲದ ಸಂದೇಶವನ್ನು ನಿರ್ದೇಶಕ ಶ್ರೀಪಾದರು ಕೊಟ್ಟಿದ್ದಾರೆತಾಯಿ-ಗುರು-ದೈವದ ಬೆಂಬಲವಿಲ್ಲದಿದ್ದರೂ ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಸಶಕ್ತಸಂದೇಶವನ್ನು ಸೂತ್ರದಾರನ ಮೂಲಕ ಹೇಳಿಸುತ್ತಾರೆಇದು ನಿಜಕ್ಕೂ ಸಮಾಜಕ್ಕೆ  ನಾಟಕಕೊಡುವ ಸಕಾರಾತ್ಮಕವಾದ ಸಂದೇಶವಾಗಿದೆ ನಾಟಕ ಪ್ರದರ್ಶನದ ಉದ್ದೇಶವೂ ಇದೇ ಆಗಿದೆ.ಆದರೆ ಕರ್ಣ ಹಾಳಾಗಿದ್ದು ಅತಿಯಾದ ಆತ್ಮವಿಶ್ವಾಸದಿಂದಮಾತಿಗೆ ಕಟ್ಟುಬಿದ್ದು ತನ್ನಲ್ಲಿರುವಪ್ರಭಲವಾದ ಶಸ್ತ್ರಪ್ರಯೋಗ ಸಾಮರ್ಥ್ಯವನ್ನು ಮಿತಿಗೊಳಿಸಿಕೊಂಡು,  ತನ್ನ ಪ್ರಾಣ ರಕ್ಷಣೆಗಿದ್ದಕವಚಗಳನ್ನೇ ಶತ್ರುಪಕ್ಷದವರಿಗೆ ದಾನ ಮಾಡಿ... ಕೇವಲ ಆತ್ಮವಿಶ್ವಾಸದಿಂದಲೆ ಗೆಲ್ಲುವೆನೆಂಬಅತಿಯಾದ ಆತ್ಮಸ್ತೈರ್ಯವೇ ಕರ್ಣನ ಅವಸಾನಕ್ಕೆ ಕಾರಣವಾಯಿತುಆತ್ಮವಿಶ್ವಾಸದ ಆಶಯವನ್ನುಹೇಳುವ  ನಾಟಕ ಅತಿಯಾದ ಆತ್ಮವಿಶ್ವಾಸದಿಂದಾಗಿ ಕರ್ಣನಂತಾ ಕರ್ಣನೇಸರ್ವನಾಶವಾಗಿರುವುದನ್ನೂ ತೋರಿಸುತ್ತದೆ.


ಕುಮಾರವ್ಯಾಸ ಭಾರತದಲ್ಲಿ ಕೃಷ್ಣನೇ ಬ್ರಾಹ್ಮಣ ವೇಷದಲ್ಲಿಬಂದು ಕವಚಕುಂಡಲಗಳ ದಾನವನ್ನು ಕರ್ಣನಿಂದ ಪಡೆದರೆ,ಭಾಸಕವಿಯ ಕರ್ಣಭಾರದಲ್ಲಿ ಇಂದ್ರನೇ ಹಾರವನ ವೇಷದಲ್ಲಿಬಂದು ದಾನ ಪಡೆಯುತ್ತಾನೆಶ್ರೀಪಾದರು ಇಂದ್ರನಕಪಟತನವನ್ನು ಹಾಗೂ ಬ್ರಾಹ್ಮಣನ ವಂಚಕತನವನ್ನು ನಾಟಕದಲ್ಲಿ ಲೇವಡಿ ಮಾಡಿದ ರೀತಿಯಂತೂ ಅವಿಸ್ಮರಣೀಯ.ಸ್ವತಃ ಬ್ರಾಹ್ಮಣರಾದ ಶ್ರೀಪಾದ ಭಟ್ರವರು  ಬ್ರಾಹ್ಮಣ್ಯದಕುತಂತ್ರವನ್ನು ವಿಡಂಬನಾತ್ಮಕವಾಗಿ ತೋರಿಸಿದ್ದು ಅವರಜ್ಯಾತ್ಯಾತೀತ ಮನೋಭಾವಕ್ಕೆ ಸಾಕ್ಷಿಯಾಗಿದೆಭಾಸಕವಿಯುಇಂದ್ರನನ್ನು ಮಾತ್ರ ವಂಚಕ ಎಂದು ಹೇಳಲು ಕರ್ಣಭಾರದಲ್ಲಿಪ್ರಯತ್ನಿಸಿದ್ದರೆ,  ಶ್ರೀಪಾದರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಬ್ರಾಹ್ಮಣ್ಯದ ವಂಚಕತನದ ಹಲವು ಆಯಾಮಗಳನ್ನುಅತಿಶಯವಾಗಿಯೇ ಚಿತ್ರಿಸಿದ್ದಾರೆಇದು  ನಾಟಕದಪ್ರಮುಖವಾದ ಆಕರ್ಷಣೆಯಾಗಿದ್ದು ಗಂಭೀರವಾದ ನಾಟಕನಿರೂಪಣೆಯ ನಡುವೆ  ಬ್ರಾಹ್ಮಣ ಪ್ರಹಸನವು ಪ್ರೇಕ್ಷಕರಿಗೆ ರಿಲೀಪ್ ನೀಡುವ ಜೊತೆಗೆ ಅಪಾರವಾದಮನರಂಜನೆ ಕೊಡುವಲ್ಲಿ ಸಫಲವಾಗಿದೆ.

 ಕರ್ಣಭಾರ ನಾಟಕದ ಸೊಗಸಿರುವುದು ಅದರ ಕಲಾತ್ಮಕ ನಿರೂಪನಾ ಕ್ರಮದಲ್ಲಿಅಭಿನಯ,ಹಾಡುಸಂಗೀತ ಹಾಗೂ ನೃತ್ಯಗಳ ಹದವಾದ ಸಂಯೋಜನೆಯಲ್ಲಿಚಿಕ್ಕಪುಟ್ಟಬದಲಾಯಿಸಬಹುದಾದ ನ್ಯೂನ್ಯತೆಗಳನ್ನು ಹೊರತು ಪಡಿಸಿದರೆ ನಾಟಕವೆಂದರೆ ಹೀಗಿರಬೇಕು ಎಂದುಹೇಳಬಹುದಾದ ಪ್ರಯೋಗವನ್ನು ಡಾ.ಶ್ರೀಪಾದ ಭಟ್ರವರು ಕಟ್ಟಿಕೊಟ್ಟಿದ್ದಾರೆಮತ್ತೊಮ್ಮೆ ತಮ್ಮನಿರ್ದೇಶನದ ಪ್ರತಿಭೆಯನ್ನು ಕರ್ಣಭಾರದಲ್ಲಿ ಸಾಬೀತು ಪಡಿಸಿದ್ದಾರೆರಂಗಭೂಮಿ ಕುರಿತುಅಕಾಡೆಮಿಕ್ ಶಿಕ್ಷಣ ಪಡೆದ ನಿರ್ದೇಶಕರನ್ನು ಮೀರಿಸುವ ಹಾಗೆ  ನಾನ್ಅಕಾಡೆಮಿಕ್ ಪ್ರತಿಭೆಡಾ.ಶ್ರೀಪಾದ ಭಟ್ರವರು ನೋಡುಗರನ್ನು ವಿಸ್ಮಯಗೊಳಿಸುವಂತೆ ನಾಟಕವನ್ನು ನಿರ್ದೇಶಿಸಿ ತಮ್ಮಸಾಮರ್ಥ್ಯವನ್ನು ತೋರಿಸಿದ್ದಾರೆ.


 ನಾಟಕ ತುಳು ಭಾಷೆಯಲ್ಲಿದ್ದರೂ  ಭಾಷೆ ಗೊತ್ತಿಲ್ಲದವರಿಗೂಸಹ ದೃಶ್ಯವೈಭವದ ಮೂಲಕವೇ ಸಂವಹನವಾಗುವಂತಿದೆ.ಇದಕ್ಕೆ ಪ್ರಮುಖ ಕಾರಣವೇನೆಂದರೆ ಅತೀ ಕಡಿಮೆ ಮಾತುಹಾಗೂ ಹೆಚ್ಚು ಕ್ರಿಯೆಗಳು ನಾಟಕದಾದ್ಯಂತ ಸಕ್ರೀಯವಾಗಿವೆ.ನಾಟಕದಲ್ಲಿರುವ ನಿರಂತರ ಕ್ರಿಯೆ ಹಾಗೂ ಚಲನಶೀಲತೆಗಳುನೋಡುಗರನ್ನು ಅತ್ತಿತ್ತ ನೋಡಲೂ ಪುರುಸೊತ್ತು ಕೊಡದಂತೆಸೆಳೆಯುತ್ತವೆಆದರೆ....  ಕರ್ಣಭಾರವು ಕೆಲವಾರುಸಾಂಕೇತಿಕ ಭಾರಗಳನ್ನೂ ಸಹ ಸಾಮಾನ್ಯ ಪ್ರೇಕ್ಷಕನ ಮೇಲೆಹೇರುತ್ತದೆಯಾರಿಗೆ ಈಗಾಗಲೇ ಮಹಾಭಾರತದ ಕರ್ಣನ ಕಥೆಗೊತ್ತಿದೆಯೋ ಅಂತವರು ಮಾತ್ರ ದೃಶ್ಯಗಳನ್ನು ಕಥೆಗೆ ರಿಲೇಟ್ಮಾಡುತ್ತಾ ಅರ್ಥ್ಯಸಿಕೊಳ್ಳುತ್ತಾ ನಾಟಕ ನೋಡಿಖುಷಿಪಡಬಹುದಾಗಿದೆಆದರೆ ಕರ್ಣಭಾರದ ಹಿನ್ನೆಲೆಗೊತ್ತಿಲ್ಲದವರಿಗೆ ಇಡೀ ನಾಟಕ ಸಂಪೂರ್ಣವಾಗಿಅರ್ಥವಾಗುವುದು ತುಸು ಕಷ್ಟವೇಇದಕ್ಕೆ ಕಾರಣ ನಾಟಕದಉಲ್ಟಾಪಲ್ಟಾ ನಿರೂಪಣಾ ಕ್ರಮವಾಗಿದೆವಿಭಿನ್ನ ಕಾಲಘಟ್ಟದಲ್ಲಿನಡೆದಿರುವ ಮೂರು ಪ್ರಮುಖ ಘಟನೆಗಳನ್ನು (ಕುಂತಿಪರಶುರಾಮ ಮತ್ತು ಇಂದ್ರಒಂದೇ ಸಮಯಕ್ಕೆಪ್ಲಾಶ್ಬ್ಯಾಕ್ ತಂತ್ರದಲ್ಲಿ ತೋರಿಸಿದ್ದು ಒಂದಿಷ್ಟು ಗಲಿಬಿಲಿಯನ್ನುಂಟುಮಾಡಿದರೆ ಕ್ಲೈಮ್ಯಾಕ್ಸನಲ್ಲಿ ರಥದಚಕ್ರ ಭೂಮಿಯಲ್ಲಿ ಹೂತಾಗ ಎತ್ತಲು ಪ್ರಯತ್ನಿಸಿದ ಕರ್ಣ ವಿಫಲನಾದ ನಂತರ ಮತ್ತೆ ರಥವೇರಿಯುದ್ಧಕ್ಕೆ ಹೊರಡುತ್ತಾನೆಕಥಾಕತಿತ ಕರ್ಣನ ಸಾವನ್ನು ಹಾಗೂ ಸೋಲನ್ನು ತೋರಿಸದೇ ಮತ್ತೆ ಕರ್ಣಎಲ್ಲಾ ಸಂಕಷ್ಟಗಳನ್ನು ಮೀರಿ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಯುದ್ದಕ್ಕೆ ಹೊರಡುವುದು ನಾಟಕದ ಸಕಾರಾತ್ಮಕ ಅಂಶವಾದರೂ ಅದು  ನಾಟಕದಲ್ಲಿ ಸ್ಪಷ್ಟವಾಗಿ ಮೂಡಿಬಂದಿಲ್ಲದಿರುವುದುನೋಡುಗರ ಗೊಂದಲಕ್ಕೆ ಕಾರಣವಾದಂತಿದೆ ನಾಟಕದ ನಿರೂಪನಾ ಕ್ರಮದಲ್ಲಿರುವ ಬೌದ್ದಿಕಕಲಾತ್ಮಕ ಅಭಿವ್ಯಕ್ತಿ ನಾಟಕದ ಶಕ್ತಿಯಾದಂತೆಯೇ ಸ್ಪಷ್ಟತೆಯನ್ನು ಸಾಂಕೇತಿಕತೆಯಲ್ಲಿ ಡೈಲ್ಯೂಟ್ಮಾಡಿರುವುದು  ನಾಟಕದ ದೌರ್ಬಲ್ಯವೂ ಆಗಿದೆಆದರೆ....ಕರ್ಣಭಾರ ನಾಟಕದ ದೃಶ್ಯಸಾಮರ್ಥ್ಯ ಎಷ್ಟಿದೆ ಎಂದರೆ ಕಥೆಯ ಅರ್ಥವಂತಿಕೆಯ ಸಂವಹನವನ್ನೂ ಮೀರಿ ನಾಟಕವುದೃಶ್ಯವೈಭವದಲ್ಲಿ ನೋಡುಗರನ್ನು ಹಿಡಿದಿಡುತ್ತದೆಅರ್ಥವಂತಿಕೆಕಥಾನಕತೆತಾತ್ವಿಕತೆ,ತಾರ್ಕಿಕತೆಗಳೆಲ್ಲವನ್ನೂ ಬದಿಗೆ ತಳ್ಳಿ  ನಾಟಕ ಪ್ರೇಕ್ಷಕರನ್ನು ಭ್ರಮಾಲೋಕಕ್ಕೆ ಕರೆದುಕೊಂಡುಹೋಗಿ ತೇಲಿಸುತ್ತದೆ.

ಕರ್ಣಭಾರ ನಾಟಕದಲ್ಲಿ ಅಭಿನಯಕ್ಕೆ ಪೂರಕವಾಗಿರಂಗತಂತ್ರಗಳನ್ನು ಸಮರ್ಥವಾಗಿ ಬಳಸಿಕೊಂಡುಸಮತೂಕದ ದೃಶ್ಯಗಳನ್ನು ಸೃಷ್ಟಿಸಿದ್ದು  ನಾಟಕದ ಗೆಲುವಿಗೆಪ್ರಮುಖ ಕಾರಣವಾಗಿದೆಯಕ್ಷಗಾನದ ಕಲಾತ್ಮಕಅಂಶಗಳಾದ ಪಾತ್ರ ಚಲನೆದೇಹಭಾಷೆಎನರ್ಜಿಹಿನ್ನೆಲೆಸಂಗೀತ ಹಾಗೂ ನೃತ್ಯ ಸಂಯೋಜನೆಗಳು ಇಡೀ ನಾಟಕಕ್ಕೆಆಕರ್ಷಣೆಯನ್ನು ತಂದುಕೊಟ್ಟಿವೆಯಾವುದೇ ಒಂದು ನಿರ್ದಿಷ್ಟಸಂಗೀತ ಪ್ರಕಾರವನ್ನು ಅಳವಡಿಸದೇ ದೃಶ್ಯದ ಅಗತ್ಯಕ್ಕೆತಕ್ಕಂತೆ ಸಂಗೀತದ ಹಲವಾರು ಪ್ರಕಾರಗಳನ್ನು ಬಳಸಿಕೊಂಡುಸಂಗೀತ ವಿಭಾಗವನ್ನು  ನಾಟಕದಲ್ಲಿ ವಿಶಿಷ್ಟವಾಗಿಸಂಯೋಜಿಸಿದ ಶ್ರೀಪಾದಭಟ್ರವರು ಹೊಸರೀತಿಯರಂಗಸಂಗೀತ ಭಾಷೆಯನ್ನು ರಂಗಭೂಮಿಗೆ  ನಾಟಕದಮೂಲಕ ಕೊಡಮಾಡಿದ್ದಾರೆಸಂಗೀತದಲ್ಲಿ  ರೀತಿಯಪ್ರಯೋಗಗಳನ್ನು ಬಿ.ವಿ.ಕಾರಂತರು ಮಾಡಿ ರಂಗಸಂಗೀತಕ್ಕೆಹೊಸ ಭಾಷ್ಯವನ್ನು ಕೊಟ್ಟಿದ್ದರುಕಾರಂತರ ರಂಗಸಂಗೀತಸಾಧ್ಯತೆಯನ್ನು ಶ್ರೀಪಾದರು ಇನ್ನೂ ವಿಸ್ತರಿಸಿ ಕರ್ಣಭಾರವನ್ನು ಹಿನ್ನೆಲೆ ಸಂಗೀತಪ್ರಧಾನನಾಟಕವನ್ನಾಗಿಸಿದ್ದಾರೆ ನಾಟಕದ ಪ್ರಮುಖ ವಿಶೇಷತೆ ಏನೆಂದರೆ ಚಕ್ರತಾಳವನ್ನುನಾಟಕದಾದ್ಯಂತ ಬಳಸಿರುವುದು ಹಾಗೂ ಕಲಾವಿದರೆ ವೇದಿಕೆಯಲ್ಲಿ ಅದನ್ನು ನುಡಿಸಿರುವುದುಚಕ್ರತಾಳದ ಪೋರ್ಸಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಂತೂ ಸುಳ್ಳಲ್ಲಕೇವಲ ಚಕ್ರತಾಳವನ್ನು ಒಂದುಸಂಗೀತ ವಾಧ್ಯವನ್ನಾಗಿ ಮಾತ್ರ ಬಳಸದೇ ಅದನ್ನು ವಿವಿಧ ಆಯಮಗಳಲ್ಲಿ ನಾಟಕದ ಪ್ರಾಪರ್ಟಿಯಾಗಿಬಳಿಸಿದ್ದೇ ಅನನ್ಯವಾದ ಪರಿಕಲ್ಪನೆಯಾಗಿದೆಚಕ್ರತಾಳ ಇಲ್ಲಿ  ಯುದ್ದಾಸ್ತ್ರವಾಗಿಹಸುವಿನ ಕೊಂಬಾಗಿಇನ್ನೂ ಏನೇನೋ ಆಗಿ ಸಾಂಕೇತಿಕ ಬಳಕೆಗೊಳಗಾಗಿ ನೋಡುಗರಲ್ಲಿ ವಿಸ್ಮಯವನ್ನು ಸೃಷ್ಟಿಸಿತುಸಂಗೀತವಾದ್ಯವೊಂದನ್ನು ಇಷ್ಟೊಂದು ಬಗೆಯಲ್ಲಿ ರಂಗಪರಿಕರವಾಗಿ ಬಳಸಬಹುದಾದ ಸಾಧ್ಯತೆಗಳನ್ನುಕರ್ಣಭಾರ ನಾಟಕ ತೋರಿಸಿಕೊಟ್ಟಿತುತಾ ತತ್ ತರಿಕಿತ ತತ್ ತಾ...  ಎನ್ನುವ ಹಿಮ್ಮೇಳದಆಲಾಪಕ್ಕೆ ತಕ್ಕಂತೆ ನಟರು ಹೆಜ್ಜೆ ಹಾಕುವ ಪರಿಯನ್ನು ನೋಡಿಯೇ ಅನುಭವಿಸಬೇಕು  ನಾಟಕದಪ್ರತಿಯೊಂದು ಚಲನೆಯೂ ಸಹ ಒಂದು ರೀತಿಯ ಮ್ಯೂಸಿಕಲ್ ನೋಟ್ಸ್ ಆಗಿರುವುದು ಹಾಗೂಪ್ರತಿಯೊಂದು ಪ್ರೇಮ್ ಸಹ ಕಲಾತ್ಮಕವಾಗಿ ಚಿತ್ರಿತವಾಗಿರುವುದು ನಿರ್ದೇಶಕರ ಕ್ರಿಯಾಶೀಲತೆ ಹಾಗೂರಂಗಬದ್ದತೆಗೆ ಸಾಕ್ಷಿಯಾಗಿವೆರಂಗಸಂಗೀತದಲ್ಲಿ ಹಿಮ್ಮೇಳ ಅದರಲ್ಲೂ ಚಂಡೆ ವಾದ್ಯದ ಬಳಕೆಕೇಳುಗರಲ್ಲಿ ರೋಮಾಂಚನವನ್ನುಂಟು ಮಾಡಿತು.

ಅಭಿನಯದಲ್ಲಿ ಪ್ರತಿ ಪಾತ್ರವೂ ತಮ್ಮ ದೇಹಭಾಷೆಯನ್ನುಸಮರ್ಥವಾಗಿ ಬಳಸಿಕೊಂಡಿವೆವಾಚಿಕಾಭಿನಯ ತುಂಬಾ ಕಡಿಮೆಇರುವುದರಿಂದ ಆಂಗಿಕಾಭಿನಯದಲ್ಲೇ ನಾಟಕವನ್ನುಸಂವಹನಮಾಡುವ ಅನಿವಾರ್ಯತೆ ಕಲಾವಿದರದ್ದಾಗಿದ್ದು ಅದರಲ್ಲಿಬಹುತೇಕ ಎಲ್ಲಾ ಕಲಾವಿದರೂ ಯಶಸ್ವಿಯಾಗಿದ್ದಾರೆಕರ್ಣನಪಾತ್ರವನ್ನು ಆವಾಹಿಸಿಕೊಂಡು ನಟಿಸಿದ ದಿವಾಕರ್ ಕಟೀಲುರವರನಟನೆ ಹಾಗೂ ಶಲ್ಯನಾಗಿ ಸಂದೀಪ್ ಪೆರ್ಡೂರ್ರವರ ಅಭಿನಯಸಾಮರ್ಥ್ಯ ಗಮನಸೆಳೆಯುವಂತಿತ್ತುನಾಟಕದಲ್ಲಿ ತಮ್ಮ ವಿಚಿತ್ರಹಾಗೂ ವಿಶಿಷ್ಟ ಅಭಿನಯದಿಂದ ಹಾಸ್ಯದ ಹೊನಲನ್ನು ಹರಿಸುವಲ್ಲಿಬ್ರಾಹ್ಮಣ ಪಾತ್ರಧಾರಿ ಪ್ರಶಾಂತ್ ಉದ್ಯಾವರ ಯಶಸ್ವಿಯಾದರು.ಇಂದ್ರನಾಗಿ ಭೂಷನ್ ನಟನೆ ಪಾತ್ರೋಚಿತವಾಗಿದ್ದು ಇಂದ್ರನದೂತನ ನಟನೆ ಮಾತ್ರ ರೊಬೋಟ್ ಮಾದರಿಯಲ್ಲಿದ್ದು ವೇಶಕ್ಕೂಅಭಿನಯಕ್ಕೂ ಸಂಬಂಧವೇ ಇರದಂತಿತ್ತುಚಕ್ರತಾಳದ ಗುಂಪಿನಎಲ್ಲಾ ಕಿರಿಯ ನಟಿಯರ ಚಲನೆಯಲ್ಲಿದ್ದ ಪೋರ್ಸ ಹಾಗೂ ಚಕ್ರತಾಳಬಳಕೆಯಲ್ಲಿದ್ದ ಕೌಶಲ ನಾಟಕದಲ್ಲಿ ಪ್ರಮುಖವಾಗಿ ಎದ್ದುಕಾಣಿಸುವಂತಿತ್ತುದುರಂತ ನಾಯಕ ಕರ್ಣನ ಭಾವತೀವ್ರತೆಯ ಕೊರತೆಯನ್ನು ಅಭಿನಯ ಹಾಗೂಇತರೇ ರಂಗತಂತ್ರಗಳು ಮರೆಸಿ ಮೆರೆಯುತ್ತವೆ.  
         
 ನಾಟಕ ಮೊದಲ ನೋಟಕ್ಕೆ ಗಮನ ಸೆಳೆಯುವುದು ದಾಮೋದರ ನಾಯ್ಕರವರರಂಗವಿನ್ಯಾಸದಿಂದಾಗಿಸೆಟ್ ಅದೆಷ್ಟು ಸಾಂಕೇತಿಕವಾಗಿ ಹಾಗೂ ಕಲಾತ್ಮಕವಾಗಿ ಮೂಡಿಬಂದಿದೆಎಂದರೆ ಅದು ಇಡೀ ನಾಟಕದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆಹತ್ತುವ ಮೆಟ್ಟಿಲ ಅಕ್ಕಪಕ್ಕದಲ್ಲಿರಥದ ಎರಡು ಗಾಲಿಗಳು ಹಾಗೂ ಎಡಬಲಕ್ಕೆ ಪ್ಲಾಟ್ ಪಾರಂಗಳು ಇಷ್ಟೇ  ನಾಟಕದಲ್ಲಿ ಬಳಸಲಾದಸ್ಥಿರ ಸೆಟ್ಗಳಾಗಿದ್ದರೂ ಪ್ರತಿಯೊಂದು ದೃಶ್ಯಕ್ಕೂ ಹಲವು ಆಯಾಮಗಳಲ್ಲಿ ಬಳಕೆಯಾಗಿದ್ದು ನಾಟಕದಸೌಂದರ್ಯವನ್ನು ಹೆಚ್ಚಿಸಿದೆಪ್ರತಿ ಪಾತ್ರದ ವಸ್ತ್ರಾಲಂಕಾರವನ್ನು ನೋಡುವುದೇ ಒಂದು ಚೆಂದಸೆಟ್ ಹಾಗೂ ಕಾಸ್ಟ್ರೂಮ್ಗಳ ಮೇಲೆ ಬಣ್ಣಬಣ್ಣದ ಬೆಳಕು (ಬೆಳಕಿನ ವಿನ್ಯಾಸ ರಾಜು ಮಣಿಪಾಲಬಿದ್ದುಪ್ರತಿ ದೃಶ್ಯಗಳೂ ಶ್ರಿಮಂತವಾಗಿ ಮೂಡಿಬಂದಿವೆಆದರೆ ಯಕ್ಷಗಾನದ ರಾಕ್ಷಸ ಪಾತ್ರದಂತೆ ಕಾಣುವಇಂದ್ರನ ಧೂತನ ಗೆಟಪ್ ಮಾತ್ರ ಇಡೀ ನಾಟಕದಲ್ಲಿ ಆಭಾಸಕಾರಿಯಾಗಿದೆಪಂಜುಗಳ ಬಳಕೆ ಅದರಮಂದ ಬೆಳಕು ದೃಶ್ಯಕ್ಕೆ ಅಂದವನ್ನು ತಂದಿದೆಆದರೆ.... ಹಿಂದೆ ಬಿಳಿ ಪರದೆ (ಸೈಕ್ಇತ್ತಾದರೂಅದನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿತ್ತುದೃಶ್ಯದ ಮೂಡಿಗೆ ತಕ್ಕಂತೆ ಸೈಕ್ ತನ್ನಬಣ್ಣ ಬದಲಿಸಿದ್ದರೆ  ನಾಟಕದ ನೋಟ ಇನ್ನೂ ಹೆಚ್ಚು ಅರ್ಥಪೂರ್ಣವಾಗಬಹುದಾಗಿತ್ತುಕೊನೆಗೂಸೈಕ್ ಬಳಕೆಯ ಕೊರತೆ  ನಾಟಕದ ಒಂದು ನ್ಯೂನ್ಯತೆಯಾಗಿಯೇ ಉಳಿಯಿತು.
   
 ಪಸ್ತುತ ಪ್ರಯೋಗದಲ್ಲಿ ಮಾಸ್ಕ್ ನ್ಯೂನ್ಯತೆಯನ್ನು ಸರಿಪಡಿಸಲೇಬೇಕಾಗಿತ್ತುಅಭಿಮನ್ಯುಯುದ್ದಪ್ರಕರಣದಲ್ಲಿ ನೋಡುಗರಿಗೆ ಅಭಿಮನ್ಯು ಕಾಣಿಸದೇ ಆತನ ಸುತ್ತಲೂ ಸೈನಿಕರೇವಿಜ್ರಂಭಿಸುವುದು ಆಭಾಸವೆನಿಸಿತುಚಕ್ರತಾಳದ ಗುಂಪು ಸಹ ವೇದಿಕೆಯ ಮುಂಬಾಗದಲ್ಲಿ ಸಾಲಾಗಿನಿಂತಿದ್ದರಿಂದ ಪ್ರೇಕ್ಷಾಗ್ರಹದ ಎಡ ಹಾಗೂ ಬಲಭಾಗದ ಪ್ರೇಕ್ಷಕರಿಗೆ ವೇದಿಕೆಯ ನಡುವೆ ನಡೆಯುವಕರ್ಣ ಹಾಗೂ ಶಲ್ಯರ ಮಹತ್ವದ ಅಭಿನಯ ಕಾಣದೇ ಹೋಯಿತುಗುಂಪು ಬಳಕೆಯಲ್ಲಿ ನಿರ್ದೇಶಕರುಇನ್ನಷ್ಟು ಮುತುವರ್ಜಿ ವಹಿಸಿದರೆ  ನ್ಯೂನ್ಯತೆಯನ್ನು ತಡೆಯಬಹುದಾಗಿದೆ ಹಾಗೂ ಪ್ರತಿ ದೃಶ್ಯಹಾಗೂ ಪಾತ್ರದ ಅಭಿನಯವನ್ನು ಪ್ರೇಕ್ಷಕರಿಗೆ ಅಡೆತಡೆ ಇಲ್ಲದಂತೆ ಮುಟ್ಟಿಸಬಹುದಾಗಿದೆ.


 ಇದನ್ನು ಹೊರತು ಪಡಿಸಿ ನೋಡಿದರೆಪ್ರತಿಯೊಂದು ದೃಶ್ಯ ಸಂಯೋಜನೆಯೂ ಅನನ್ಯವಾಗಿವೆ.ಅಭಿಮನ್ಯುವಿನ ಚಕ್ರವ್ಯೂಹ ಪ್ರವೇಶ ಹಾಗೂ ಸಾಂಕೇತಿಕ ಹತ್ಯೆಇಂದ್ರ ದುಂಬಿಯಾಗುವ ಹಾಗೂಬ್ರಾಹ್ಮಣನಾಗಿ ರೂಪಾಂತರ ಹೊಂದುವ ದೃಶ್ಯ ಸಂಯೋಜನೆಕರ್ಣ ಹಾಗೂ ಶಲ್ಯರ ರಥದಸಂಚಲನತೆಯುದ್ಧದ ದೃಶ್ಯಸೃಷ್ಟಿಗಳು ನಾಟಕವನ್ನು ಆಕರ್ಷಣೀಯವಾಗಿಸಿವೆಅದರಲ್ಲೂ ಬ್ರಾಹ್ಮಣದಾನ ಕೇಳಲು ಬಂದಾಗ ಹಸುಗಳುಅಶ್ವಗಳುಆನೆಗಳನ್ನು ಗುಂಪು ಬಳಕೆ ಹಾಗೂ ಚಕ್ರತಾಳದಸಹಾಯದಿಂದ ಸಂಯೋಜಿಸಿದ ರೀತಿಯಂತೂ ಮರೆಯಲು ಸಾಧ್ಯವೇ ಇಲ್ಲದಂತಹ ದೃಶ್ಯವಾಗಿವೆ.ಬರೀ ಮಾತಲ್ಲಿ ಹೇಳಬಹುದಾದದ್ದನ್ನೆಲ್ಲಾ ದೃಶ್ಯ ಸಂಯೋಜನೆಯ ಮೂಲಕವೇ ತೋರಿಸುವನಿರ್ದೇಶಕರ ಸೃಜನಶೀಲತೆ ನಿಜಕ್ಕೂ ಅಭಿನಂದನಾರ್ಹವಾಗಿದೆಇನ್ನೊಂದು ವಿಶೇಷತೆ ಏನೆಂದರೆ  ನಾಟಕದ ನಿರ್ದೇಶನ ಮಾಡಿದ ಡಾ.ಶ್ರಿಪಾದ ಭಟ್ರಿಗೆ ತುಳು ಭಾಷೆಯ ಗಂಧಗಾಳಿ ಗೊತ್ತಿಲ್ಲಸದಾದುಭಾಷಿಯನ್ನಿಟ್ಟುಕೊಂಡೇ ಇಡೀ ನಾಟಕವನ್ನು ಅದ್ಭುತವಾಗಿ ಕಟ್ಟಿಕೊಟ್ಟ ರೀತಿ ವಿಶೇಷವೆನಿಸುತ್ತದೆ.ಕ್ರಿಯಾಶೀಲ ನಿರ್ದೇಶಕನಿಗೆ ಭಾಷೆಗಿಂತಲೂ ರಂಗಭಾಷೆಅಂಗಭಾಷೆಸಂಗೀತ ಭಾಷೆ ಪ್ರಮುಖವಾಗುತ್ತದೆ ಎನ್ನುವುದಕ್ಕೆ ತುಳು ಬರದ ಶ್ರೀಪಾದರು ತುಳುವಿನಲ್ಲಿ ನಾಟಕವನ್ನು ನಿರ್ದೇಶಿಸಿದ್ದೇಪುರಾವೆಯಾಗಿದೆ.
  
 ಕರ್ಣಭಾರ ಯಾಕೆ ಭಾಷಾತೀತವಾಗಿ ಜನರನ್ನು ಆಕರ್ಷಿಸಿತುಅದಕ್ಕೆ ಪ್ರಮುಖ ಕಾರಣನಾಟಕದೊಳಗಿನ ಈಸ್ತಟಿಕ್ ಸೆನ್ಸ್ ಮತ್ತು ದೃಶ್ಯ ಸೃಷ್ಟಿಯಲ್ಲಿನ ಸಿನಿಮಿಯಾಟಿಕ್ಸ್ನಾಟಕದ ಎಲ್ಲಾವಿಭಾಗದಲ್ಲೂ ಸಹ ರಂಗಶಿಸ್ತು ಹಾಗೂ ಸೌಂದರ್ಯ ಪ್ರಜ್ಞೆ ಎದ್ದು ಕಾಣಿಸುತ್ತದೆ ರೀತಿಯರಂಗತಂತ್ರ ಬಳಕೆಯಲ್ಲಿ ಪ್ರಸ್ತುತ ರಂಗಭೂಮಿಯಲ್ಲಿ ಶ್ರೀಪಾದ ಭಟ್ಟರಿಗೆ ಶ್ರೀಪಾದ ಭಟ್ಟರೇಹೋಲಿಕೆಯಾಗಿದ್ದಾರೆಬಿ.ವಿ.ಕಾರಂತರ ನಂತರ ಸಿನಿಮಿಯಾಟಿಕ್ಸ ತಂತ್ರಗಳನ್ನು ವ್ಯಾಪಕವಾಗಿಬಳಸುವ ಹಾಗೂ ಪ್ರತಿಯೊಂದು ರಂಗವಿಭಾಗದಲ್ಲೂ ಸೌಂದರ್ಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವನಿರ್ದೇಶಕ ಡಾ.ಶ್ರೀಪಾದ ಭಟ್ ಎನ್ನುವುದರಲ್ಲಿ ಸಂದೇಹವೇ ಇಲ್ಲಬಹುದಿನಗಳ ಕಾಲ  ಕರ್ಣಭಾರರೂಪಕವು ನೋಡುಗರನ್ನು ಕಾಡದೇ ಬಿಡುವುದಿಲ್ಲ.  

ಕಾಮೆಂಟ್‌ಗಳಿಲ್ಲ: