ಬುಧವಾರ, ಜುಲೈ 9, 2014

ಕೊರಗ ಸಮುದಾಯದ ಚಿತ್ರಗಳು

ಮೆರವಣಿಗೆಗಳಲ್ಲಿ ಕೊರಗರ ಡೋಲು ಮುಂದೆ (?!) ಯಾಕೆ?

ಹಿಂದಿನ ಕಾಲದಲ್ಲಿ ಊರಿನ ಮಾರಿ ಓಡಿಸುವಾಗ, ಕೋಲ - ನೇಮದ ಭಂಡಾರ ಹೋಗುವಾಗ ಅಥವಾ ಇನ್ನಾವುದೇ ಮೆರವಣಿಗೆಯಲ್ಲಿ ಡೊಳ್ಳಿನ ಕೊರಗರು ಮುಂದಿನ ಸಾಲಿನಲ್ಲಿಯೇ ಹೋಗಬೇಕಿತ್ತು. ಉಳಿದ ವಾದ್ಯದವರು ಮತ್ತು ಗುತ್ತು- ಬರ್ಕೆಯ ಉತ್ತಮರು ತುಂಬಾ ಹಿಂದಿನಿಂದ ಅಂದರೆ ಸುಮಾರು ಇಪ್ಪತ್ತು ಅಡಿ ದೂರ ಅಂತರದಲ್ಲಿ - ನಿಧಾನವಾಗಿ 'ಗತ್ತು ಗಾಂಭೀರ್ಯತೆ'ಯಿಂದ ಸಾಗುತ್ತಿದ್ದರು!

ದೈವ ದೇವರುಗಳ ಜಾತ್ರೆಯಲ್ಲಿ, ದೈವಸ್ಥಾನ ದೇವಸ್ಥಾನದ ಸುಮಾರು ದೂರದ ಗದ್ದೆಯ ಮೂಲೆಯಲ್ಲಿ ಡೋಲು ಬಡಿಯಬೇಕಿದ್ದ ಅಸ್ಪ್ರಶ್ಯ ಕೊರಗರು, ಮೆರವಣಿಗೆಯಲ್ಲಿ ಮಾತ್ರ ಮುಂದೆ ಯಾಕೆ..?! ಅಸ್ಪ್ರಶ್ಯರಾಗಿದ್ದ ಕೊರಗರಿಗೆ ಈ ಒಂದು ವಿಚಾರದಲ್ಲಿ ಇಷ್ಟೊಂದು ರಾಜ ಮರ್ಯಾದೆ ಯಾಕೆ?!

ಶೋಷಣೆಯ ಕಟ್ಟಕಡೆಗೆ ತಳ್ಳಲ್ಪಟ್ಟ ಈ ಕೊರಗ ಸಮುದಾಯ ಆ ಒಂದು ವಿಚಾರದಲ್ಲಿ ಭಾರೀ ಮರ್ಯಾದೆ ಪಡೆಯುತ್ತಿತ್ತೆಂದು ತಿಳಿಯಬೇಡಿ!
ಕಾರಣವಿಷ್ಠೇ, ಅಂದಿನ ಕಾಲದಲ್ಲಿ ಕಾಲು ದಾರಿಗಳು ಬಹಳ ದುರ್ಗಮವಾಗಿತ್ತು. ದಟ್ಟ ಕಾಡಿತ್ತು! ಹಳ್ಳ ಕೊಳ್ಳದ ಮಧ್ಯೆ ಹಾದು ಹೋಗಬೇಕಾದರೆ ಆಳ ಅರಿವು ಗೊತ್ತಿರಲ್ಲಿಲ್ಲ. ಒಟ್ಟಾರೆಯಾಗಿ ದುರ್ಗಮ ದಾರಿ ಬಹಳ ಅಪಾಯಕಾರಿಯಾಗಿತ್ತು. ಕಾಡಿನ ಕ್ರೂರ ಮೃಗಗಳು ಹಸಿವೆಗಾಗಿ ಮನುಷ್ಯರ ಮೇಲೆ ದಾಳಿಯಿಟ್ಟರೆ, ಅದು ಕೊರಗರನ್ನು ತಿನ್ನಲಿ. ಏನಾದರೂ ಅನಾಹುತವಾದರೆ - ಅದು ಕೊರಗರಿಗೇ ಆಗಲಿ. ನಮಗೆ ಏನೂ ಆಗಬಾರದು ಎನ್ನುವ ದುರಾಲೋಚನೆ ಮತ್ತು ದೂರಾಲೋಚನೆ ಅಂದಿನ ಗುತ್ತು ಬರ್ಕೆ ಬೂಡಿನ ಉತ್ತಮರಿಗಿತ್ತು!!
- ಹೃದಯ

ಕೊರಗರ ಕುರಿತು ಅಧ್ಯಯನ ಮಾಡಿದ ಇತಿಹಾಸಕಾರರು

ಕೊರಗ ಸಮುದಾಯದ ಸಮಗ್ರ ಬದುಕಿನ ಕುರಿತಾಗಿ - ಹಲವಾರು ಇತಿಹಾಸಕಾರರು, ಲೇಖಕರು, ಸಾಹಿತಿಗಳು ಮತ್ತು ಸಂಘ ಸಂಸ್ಥೆಗಳು ಅಧ್ಯಯನ ಮಾಡಿ ವರದಿಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ.

ಪ್ರಪ್ರಥಮವಾಗಿ 1875ರಲ್ಲಿ M.T. Wallhouse ಎಂಬ ವಿದೇಶಿ ಇತಿಹಾಸಕಾರನಿಂದ ಆರಂಭವಾಗಿ, ಈ ವರೆಗೆ ಸುಮಾರು ಎಪ್ಪತ್ತಕ್ಕೂ ಹೆಚ್ಚು ಅಧ್ಯಯನಕಾರರು ಸಮಗ್ರ ವರದಿಗಳನ್ನು ತಯಾರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಿದ್ದಾರೆ.

1985 ರಲ್ಲಿ ಮಂಗಳೂರಿನವರೇ ಆದ - ಉಳ್ಳಾಲ ರಾಘವೇಂದ್ರ ರಾವ್ ಎಂಬವರು ಕೂಡ ಕೊರಗರ ಬಗ್ಗೆ ಅಧ್ಯಯನ ಮಾಡಿದ್ದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ - ಕರ್ನಾಟಕ ಮತ್ತು ಕೇರಳ (ರಿ) ಇವರ ಒಕ್ಕೊರಳ ಆಗ್ರಹದ ಮೇರೆಗೆ, ಕರ್ನಾಟಕ ಸರಕಾರದ ಪರವಾಗಿ ಮಂಗಳೂರು ವಿಶ್ವವಿಧ್ಯಾನಿಯದ ಉಪನ್ಯಾಸಕರಾಗಿದ್ದ ದಿವಂಗತ. ಡಾ. ಮಹಮ್ಮದ್ ಪೀರ್ ಎಂಬವರು ಸಮಗ್ರ ಅಧ್ಯಯನ ಮಾಡಿ 1994ರಲ್ಲಿ ವರದಿ ಸಲ್ಲಿಸಿ, ಕೊರಗರ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿದ್ದರು.
(ಅದನ್ನು 'ಡಾ. ಮಹಮ್ಮದ್ ಪೀರ್ ವರದಿ' ಎನ್ನಲಾಗುತ್ತದೆ.)

ಈ ಎಲ್ಲಾ ಚಿಂತಕರನ್ನು ನೆನೆಯುತ್ತಾ, ಅವರು ಮಾಡಿದ ಅಧ್ಯಯನ ಗ್ರಂಥಗಳ ಒಂದು ಟಿಪ್ಪಣಿ ನಿಮಗಾಗಿ...

La Missione the Mangalore Mumero Unico Pro Koraga
- Maggio (1910 ರಲ್ಲಿ)

Koraga - Census of India 1971
(a Scheduled tribe in Karnataka)
- Office of the Registrar General India,
Ministry of Home Affairs,
New Delhi

Castes and Tribes of India
- Edgur Thurston

My Rambles Through the Missions of the Diocese of Mangalore
- Very Rew. R.D.Sequeira

Among the Outcasts
- Fr. Emmanuel Banfi S J

Tribes of Mysore
- A. A. D. Luiz

The Tribes and Castes of Madras Presidency
- M. B. Sherring

India - Reference Annual
- Ministry of Information and Broadcasting,
Government of India

Year Book
- S. K. Sachdeva,
Competition Review Pvt Ltd,
New Delhi

The Koraga Language
- D. N. S. Bhat,
Deccan College,
Post Graduate Research Institute,
Poona

Koragas
(A Primitive Tribe of South India)
- Lawrence D'Souza S J

ಕೊರಗರು
- Dr. Amrith Someshwar

ಕೊರಗ ಜನಾಂಗ
- Dr. Aravinda Malagathi
&
Dr. Wodeyar D Heggade
University of Mangalore.

ಕೊರಗ
(ಕವನ ಸಂಕಲನ)
- Kayyara Kinhanna Rai

ಅಜಲು
ಒಂದು ವಿಶ್ಲೇಷಣೆ
- Babu Koraga Pangala

ಕೊರಗರು
ಸಮಕಾಲೀನ ಸ್ಪಂದನ
- Dr. Gangadhar Dheivajna
University of Hampy.

ಎಲ್ಲಾ ಲೇಖಕರ ಹೆಸರನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಕ್ಷಮೆ ಇರಲಿ...
- ಹೃದಯ

ಜಾತಿ ಮೀರಿದ ಜಗಳ!!
(ಕ್ಷಮಿಸಿ ಇದೊಂದು ಖಾಸಾಗಿ ವಿಷಯ...)

ಅದೊಂದು ಮಧ್ಯಾಹ್ನ, ನನ್ನೊಬ್ಬ ಮಿತ್ರ ಕಾಲೇಜು ಮುಗಿಸಿ ಬಂದವನೇ - ನನ್ನೊಂದಿಗೆ ಹರಟೆ ಹೊಡೆಯಲು ಆರಂಭಿಸಿದ. ಅವನು ಜಾತಿಯಲ್ಲಿ ಉನ್ನತ ವರ್ಗಕ್ಕೆ ಸೇರಿದವನು, ಸಾಕಷ್ಟು ಸ್ಥಿತಿವಂತ. ಅವನಿಗೆ ನಾನೆಂದರೆ ಅಚ್ಚುಮೆಚ್ಚು. ಅದೇಕೋ, ನನ್ನ 'ಕೊರಗ' ಜಾತಿಯ ಬಗ್ಗೆಯೂ ಆತನಿಗೆ ಒಳ್ಳೆಯ ಅಭಿಮಾನ. ಆತ ಜಾತಿ ಪ್ರತಿಷ್ಟೆಯನ್ನು ಮೆರೆದವನೇ ಅಲ್ಲ. ಆ ದಿನದ ಹರಟೆಯ ಸಮಯದಲ್ಲಿ ಇನ್ನೊಬ್ಬ 'ಕಿರಿಕ್ ಮಿತ್ರ' ಎಂಟ್ರಿ ಆಗಿ ಬಿಟ್ಟ. ನಾವೆಲ್ಲ 'ನಗು'ವನ್ನು ಹಂಚಿಕೊಂಡವರೇ! ಅಂದು ನಗುವಿನ ತಮಾಷೆಯ ವಿಪರೀತತೆಯಿಂದಾಗಿ ಆತ ನನ್ ಮೇಲೆ ರೇಗಿಬಿಟ್ಟ... 'ನಿಕ್ ಕೊರಗಗ್ ಭಾರೀ ಅಹಂಕಾರ ಉಂಡು' ಎಂದ! ಮಾತಿನಲ್ಲೇ ಜಗಳ ಮಾಡುತ್ತಿದ್ದ ನನಗೆ ಆತನ ಮಾತೇನು ಸಿಟ್ಟು ತರಲೇ ಇಲ್ಲ. ಏಕೆಂದರೆ ಅದು ಆತನ ಮಾಮೂಲಿ ಡೈಲಾಗ್ ಆಗಿತ್ತು. ವಿಷೇಶವೆಂದರೆ ಆ ದಿನ ಆತ ತನ್ನ ಡೈಲಾಗ್ ಜೊತೆ 'ಜಾತಿ' ಸೇರಿಸಿದ್ದ ಅಷ್ಟೆ. ಆದರೆ, ಕಾಲೇಜಿಗೆ ಹೋಗುತ್ತಿದ್ದ ಆ ಮಿತ್ರನಿಗೆ ಅದು ಏನಾಯ್ತೋ ಗೊತ್ತಿಲ್ಲ, ಕಾಲರ್ ಪಟ್ಟಿ ಹಿಡಿದು ದಬಾಯಿಸಿಯೇ ಬಿಟ್ಟ! 'ದಾದ... ಕೊರಗೆ ಪಂಡ್ದ್ ಸಸಾರ ಮಲ್ಪುವನ? ಯಾನ್ಲ ಕೊರಗೆಂಬೆ...' ಎಂದು ಪ್ರಕಟಿಸಲಾಗದ ಮಾತಿನಲ್ಲಿ ಬೈದುಬಿಟ್ಟ. ರೋಷದಿಂದ ಕುದಿಯುತ್ತಿದ್ದ ಆತನ ಮಾತು ಕೇಳಿ ನಾನು ದಂಗಾಗಿಬಿಟ್ಟೆ! ಆ ಕ್ಷಣ ಏನು ನಡೆಯುತ್ತದೇ ಎನ್ನುವುದೇ ನನಗೆ ಗೊಂದಲವಾಯಿತು. ಆತನನ್ನು ಸಮಧಾನಿಸುವುದೇ ನನಗೆ ಸವಾಲಾಗಿತ್ತು. ಸಾವಧಾನಿಸಿದ ಆ ಕಿರಿಕ್ ಮಿತ್ರ.. 'ನಮ ಮಾತ ಒಂಜೇ...' ಅಂದು ಬಿಟ್ಟ! ನನಗೆ ಮಾತೇ ಮರೆತಂತಾಗಿತ್ತು. ಬೇರೆ ಯಾರಾದರು ಇದ್ದಿದ್ದರೆ, ನನ್ನೊಂದಿಗೆ ಅವರೂ ನಗುತ್ತಿದ್ದರೋ ಏನೋ?! ಆದರೆ, ಅ ಮಿತ್ರ ತನ್ನ ಉನ್ನತ ವರ್ಗದ ಸ್ಥಾನಮಾನವನ್ನು ಮರೆತು ತನ್ನನ್ನು ತಾನು 'ಕೊರಗ' ಎಂದಿದ್ದ, ಜಗಳಕ್ಕೆ ನಿಂತಿದ್ದ. ನಾನಂತೂ ಕೊರಗ, ಹಂಗಿಸುವವರ ಮಾತಿಗೆ ಕೊರಗುವವನೇ ಅಲ್ಲ! ನನಗೆ ನನ್ನ ಜಾತಿ ಬಗ್ಗೆ ಕೀಳರಿಮೆಯೂ ಇಲ್ಲ. ಆದರೆ ಆ ಮಿತ್ರನಿಗೆ...?! ಅದ್ಹೇಗೆ ಅಂಥ ಒಂದು ಅಭಿಮಾನ ಮೂಡಿಬಂದಿರಬಹುದು?! ಜಗಳ ಆಡಿದ ನಾವ್ಯಾರು ಧ್ವೇಷಿಗಳಲ್ಲ. ಆ ಘಟನೆಯ ನಂತರ ನಾವೆಲ್ಲ ಸ್ನೇಹಿತರಾಗಿಯೇ ಇದ್ದೇವೆ. ಆದರೆ,
ಜಾತ್ಯಾಭಿಮಾನ ಮರೆತ ನನಗೆ ಆತ ಆ ಜಗಳದಲ್ಲಿ ಜಾಗೃತಿಯನ್ನು ಮೂಡಿಸಿದ್ದ. ಯಾರಿದ್ದಾರೆ ಇಂಥವರು?
ಈ ಉಸಿರಿರುವವರೆಗೂ ಮರೆಯಲಾಗದ - ಪ್ರೀತಿ ಮೀರಿದ, ಜಾತಿ ಮೀರಿದ, ಬೆಲೆ ಕಟ್ಟಲಾಗದ ಆ ಆತ್ಮೀಯತೆಗೆ ಕ್ಷಣಕ್ಕೆ, ನಾ ಏನೆಂದು ಹೆಸರಿಡಲಿ...?!
- ಹೃದಯ

ಕೊರಗ ಭಾಷೆಯ ಕುರಿತು ಅಧ್ಯಯನ ಮಾಡಿದ ಭಟ್ಟರು!

ಶ್ರೇಷ್ಠ ಭಾಷಾತಜ್ಙ, ಸಂಶೋಧಕ ಹಾಗು ಮಾನವತವಾದಿ ಎಂದು ಹೆಗ್ಗಳಿಕೆಗೆ ಪಾತ್ರರಾಗಿರುವ - ಡಾ.ಡಿ.ಎನ್. ಶಂಕರ ಭಟ್ಟರು, ಕೊರಗ ಭಾಷೆಯ ಕುರಿತಾಗಿ ಆಳವಾದ ಅಧ್ಯಯನ ನಡೆಸಿದವರಲ್ಲಿ ಪ್ರಮುಖರಾಗಿದ್ದಾರೆ.
ಕನ್ನಡ ಭಾಷೆ, ವ್ಯಾಕರಣ, ಛಂದಸ್ಸು ಮುಂತಾದ ಅಧ್ಯಯನಶೀಲ ಸಂಶೋಧನೆ ಹಾಗು ತುಳು, ಬೋಡೊ, ಥಂಕರ್, ನಾಗಾ, ಹವ್ಯಕ್ ಮುಂತಾದ ಪ್ರಾದೇಶಿಕ ಮತ್ತು ಬುಡಕಟ್ಟು ಭಾಷೆಗಳ ಕುರಿತಾಗಿಯೂ ಅಧ್ಯಯನ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ - 'ದರ್ಬೆ ನಾರಾಯಣ ಶಂಕರ ಭಟ್ಟ' (D.N.S.BHAT)ರು 15 ಜುಲೈ 1935ರಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ಟರು - ಸಂಸ್ಕ್ರತ ವೇದ ಪಂಡಿತರು.
1962ರಲ್ಲಿ ಮದ್ರಾಸು ವಿವಿಯಲ್ಲಿ ಭಾಷಾಶಾಸ್ತ್ರದಲ್ಲಿ ಪಿ.ಹೆಚ್.ಡಿ ಗಳಿಸಿದ ಡಿ.ಎನ್.ಶಂಕರ ಭಟ್ಟರು, 1966ರಲ್ಲಿ ಬ್ರಿಟೀಷ್ ಕೌನ್ಸಿಲ್ ನಲ್ಲಿ 'ಪೆಲೋಶಿಪ್' ಆಯ್ಕೆಯಾಗಿ ಇಂಗ್ಲೀಷ್ನಲ್ಲಿ 'ಉಪಭಾಷಾಪರಿವೀಕ್ಷಣೆಯ ವಿಧಾನ' ಕುರಿತು ಅಧ್ಯಯನ ಮಾಡಿದರು.

1962ರಿಂದ 65ರವರೆಗೆ ಪುಣೆ ವಿವಿದಿಂದ 'ದ್ರಾವಿಡಿಯನ್ ಭಾಷಾಶಾಸ್ತ್ರ'ದ ಅಧ್ಯಯನ,
1965ರಿಂದ 79ರವರೆಗೆ ಪುಣೆ ಡೆಕ್ಕನ್ ಕಾಲೇಜಿನಲ್ಲಿ 'ಟಿಬೆಟ್ ಬರ್ಬನ್' ಭಾಷೆಗಳ ರೀಡರ್ ಆಗಿ ಸೇವೆ ಸಲ್ಲಿಸಿದರು. 1979ರಿಂದ 85ರ ವರೆಗೆ 'ತಿರುವನಂತಪುರ ISDL'ನಲ್ಲಿ ಭಾಷಾ ಅಧ್ಯಾಪಕರಾಗಿ, 1988ರಿಂದ 95ರವರೆಗೆ ಮಣಿಪುರದ ಇಂಪಾಲ್ ವಿವಿಯಲ್ಲಿ ಭಾಷಾ ಪ್ರಾಧ್ಯಾಪಕರಾಗಿ ಹಾಗು ಮೈಸೂರಿನ ಸಿಐಎಲ್ ನಲ್ಲಿ ಯುಜಿಸಿ ವತಿಯಿಂದ ನಿಯೋಜಿತ 'ಪ್ರಖ್ಯಾತ ವಿಜ್ಙಾನಿ'ಯಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ, ಸ್ಟಾನ್ ಫರ್ಡ್ ವಿವಿಯಲ್ಲಿ ಭಾಷಾಶಾಸ್ತ್ರಗಳ ಕುರಿತಂತೆ ಯೋಜನೆಗಳ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಬೆಲ್ಜಿಯಂನ ಆಂಟ್ ವರ್ಪ್ ವಿವಿಯಲ್ಲಿ ಹಾಗು ಆಸ್ಟ್ರೇಲಿಯದ ಮೆಲ್ಬೊರ್ನ್ ನಗರದ LAW BROBE ವಿವಿಯಲ್ಲಿ ಅತಿಥಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2002ರಲ್ಲಿ ಜರ್ಮನಿಯ ಲೀಪ್ಝಿನ್ ನಗರದ MAXPLANC INSTITUTEನಲ್ಲಿ ಅತಿಥಿ ವಿಜ್ಙಾನಿಯಾಗಿ ಸೇವೆಸಲ್ಲಿಸಿದ್ದಾರೆ.
ಇಷ್ಟೆಲ್ಲ ಅವಕಾಶಗಳ ಮಧ್ಯೆಯೂ ತೀರಾ ಹಿಂದುಳಿದ ಅಳಿವಿನಂಚಿನಲ್ಲಿರುವ ಕೊರಗ ಬುಡಕಟ್ಟು ಭಾಷೆಯ ಕುರಿತಾಗಿಯೂ ಅಭ್ಯಸಿಸಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಪ್ರಸ್ತುತ ಅವರು ನಿರ್ವತ್ತಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಪರವಾಗಿ ಅವರಿಗೊಂದು ಅಭಿನಂದನೆಗಳು.
(ಅವರು ಸಂಗ್ರಹಿಸಿದ - ಕೊರಗ ಭಾಷೆಯಲ್ಲಿರುವ ಒಂದು ಆಡು ಮಾತಿನ ಕತೆಯನ್ನು ಇಲ್ಲಿ, ನಿಮಗಾಗಿ ದಾಖಲಿಸಿದ್ದೇವೆ.)
- ಹೃದಯ

ಇದು ಹುಚ್ಚರ ಕುಣಿತವಲ್ಲದೆ ಇನ್ನೇನು?!!

ಪ್ರತೀ ಬುಡಕಟ್ಟು ಪಂಗಡಗಳೂ ತಮ್ಮದೇ ಆದ ವೇಷಭೂಷಣ, ಭಾಷೆ, ಆಚಾರ ವಿಚಾರ, ಸಂಪ್ರದಾಯ ಮತ್ತು ಕುಣಿತಗಳಿಂದ ತಮ್ಮ ಅಸ್ಥಿತ್ವವನ್ನು ದಾಖಲಿಸಿಕೊಂಡು - ಉಳಿಸಿಕೊಂಡು ಬಂದಿದೆ. ತಮ್ಮ ಸಂಪ್ರದಾಯ ಬದ್ಧ ಕುಣಿತ ಮತ್ತು ಹಾಡುಗಳು ಇತರರಿಗೂ ಮಾದರಿಯಾಗುವಂತೆ ಅದನ್ನು ಪ್ರಸ್ತುತಪಡಿಸುತ್ತಿದೆ. ಈ ಕೊರಗ ಸಮುದಾಯವೂ ತಮ್ಮ ಪ್ರಾಚೀನ ಡೋಲಿನ ಟಕ್ಕು (ಹೊಡೆತ)ಗಳೊಂದಿಗೆ ತಮ್ಮ ಮೂಲದ ನೃತ್ಯ ಪ್ರಕಾರವನ್ನು ಸಮಾಜದ ಮುಂದೆ ಆಕರ್ಷನೀಯವಾಗಿ ಪ್ರದರ್ಶಿಸುತ್ತಿದೆ. ಹಲವಾರು ಕಲಾತಂಡಗಳು ಇದೀಗ ಅಸ್ಥಿತ್ವದಲ್ಲಿದ್ದು - ಹಲವಾರು ಕಡೆ ನೃತ್ಯ ಪ್ರದರ್ಶನಗಳನ್ನು ನೀಡಿದೆ. ಇದೊಂದು ಒಳ್ಳೆಯ ವಿಚಾರವೇ. ಆದರೆ, ಅದ್ಯಾವುದೂ ಆಧುನೀಕರಣಗೊಂಡಿಲ್ಲ. ಏಕೆಂದರೆ ಅದು ರಕ್ತದಲ್ಲಿ ಕರಗತಗೊಂಡಿದೆ.
ಆದರೆ, 'ಕೊರಗ ಕುಣಿತ' ಎಂದು ಪ್ರದರ್ಶಿಸುವ ಕೊರಗರೇತರರು ( ಕೊರಗರಲ್ಲದವರು) ಕುಣಿವ ನೃತ್ಯವಿದೆಯಲ್ಲಾ... ಅದೆಷ್ಟು ಆಧುನೀಕರಣಗೊಂಡಿದೆ ಎಂಬುದಕ್ಕಾಗಿ ಒಂದು ಚಿತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ. ಕನ್ನಡ ರಾಜ್ಯೋತ್ಸವಕ್ಕೆ ಕಾಲೇಜೊಂದರ ವಿದ್ಯಾರ್ಥಿಗಳು 'ಕೊರಗ ಕುಣಿತ' ಅನ್ನೋ ನೃತ್ಯ ಪ್ರಕಾರವನ್ನು ಪ್ರದರ್ಶಿಸಿದ್ದರು. ಈ ಕುಣಿತಗಾರರು ಮೈಗೆಲ್ಲಾ ಕಪ್ಪು ಬಣ್ಣ ಬಳಿದುಕೊಂಡು, ತಲೆಗೊಂದು ಅಡಿಕೆ ಹಾಲೆಯ ಶಿರಸ್ತ್ರಾಣವನ್ನು ಧರಿಸಿ (ತುಳುವಿನಲ್ಲಿ- ಮುಠ್ಠಾಲೆ ಎನ್ನುತ್ತಾರೆ) ಅಬ್ಬರದ ನಾಸಿಕ್ ಬ್ಯಾಂಡ್ ಗೆ ಕುಣಿಯುವುದು! ಕಳೆದ ಮೈಸೂರು ದಸರಾ ಮೆರವಣಿಗೆಯಲ್ಲಿಯೂ 'ಕೊರಗ ಕುಣಿತ' ಅನ್ನೋ ಇಂಥದ್ದೇ ನೃತ್ಯವನ್ನು ಪ್ರದರ್ಶಿಸಲಾಗಿತ್ತು. ಅಲ್ಲಿಯೂ ಮೈಗೆಲ್ಲಾ ಕಪ್ಪು ಬಣ್ಣ ಬಳಿದು, ತಲೆಗೊಂದು ಮುಠ್ಠಾಲೆ ಧರಿಸಿ ನಾಸಿಕ್ ಬ್ಯಾಂಡ್ ಗೆ ಶಿವಮೊಗ್ಗದ ಜಿಲ್ಲೆಯ ತೀರ್ಥಹಳ್ಳಿಯ ತೆಂಕ್ ಬೈಲ್ - ನವರಸ ಕಲಾತಂಡದ ಸದಸ್ಯರು ಕುಣಿಯುತ್ತಿದ್ದರು. (ಆ ಚಿತ್ರವನ್ನು ನಾವು - 'ಕೊರಗೆರ್ನ ಅಳಿಪು ಒರಿಪು'ವಿನಲ್ಲಿ ಪ್ರಕಟಿಸಿದ್ದೆವು.) ಆದರೆ, ಇಲ್ಲಿರುವ ಚಿತ್ರವನ್ನೊಮ್ಮೆ ಸರಿಯಾಗಿ ನೋಡಿ... ಸಿನೇಮಾ ಹಾಡೊಂದಕ್ಕೆ ಮಾಡುವ ಟಪ್ಪಾಂಗುಚ್ಚಿ ಶೈಲಿಯಂತಿದೆ! ಎಡಗಡೆಯಲ್ಲಿ ನಾಸಿಕ್ ಬ್ಯಾಂಡ್ ಹೊಡೆಯುತ್ತಿದ್ದರೆ, ಬಲಗಡೆಯಲ್ಲಿ ಸೌಂಡ್ ಬಾಕ್ಸ್ ಇಡಲಾಗಿದೆ. ಇದನ್ನು 'ಕೊರಗ ಕುಣಿತ' ಎಂದು ನವಂಬರ್ 2, 2012ರಂದು Flickrನಲ್ಲಿ ದಾಖಲಿಸಲಾಗಿದೆ. ಇಲ್ಲಿರುವ 'ಆಧುನೀಕರಣದ' ವಿಷಯವೆಂದರೆ - ನಾಸಿಕ್ ಬ್ಯಾಂಡ್ ಅನ್ನೋ 'ಡಬ್ಬ'ದ ಅಬ್ಬರ! ಮತ್ತು ಅದಕ್ಕವರು ಕುಣಿವ ಶೈಲಿ!! ಇದನ್ನು ಆ 'ಆಧುನಿಕರು' - ಕೊರಗ ಕುಣಿತ ಎನ್ನುವುದು.. ಎಂದು ಕರೆದಿರುವುದು!!

ಇಲ್ಲಿ ನನಗಿರುವ ಜಿಜ್ಙಾಸೆ ಏನೆಂದ್ರೆ... ಕೊರಗ ಕುಣಿತ ಎನ್ನುವ ಇವರು, ಕೊರಗರ ಮರದ ಡೋಲು ಏಕೆ ಬಳಸಲ್ಲ? ಕೊರಗರು ಬಳಸುವ ಕೊಳಲನ್ನು ಏಕೆ ಉಪಯೋಗಿಸಲ್ಲ? ಅದಿರಲಿ, ಕೊರಗರ ಸಂಪ್ರದಾಯಕ ಶೈಲಿಯಲ್ಲಿಯೇ ಏಕೆ ಬ್ಯಾಂಡ್ ಬಡಿಯೊಲ್ಲ?! ಕೊರಗರ ಸಂಪ್ರದಾಯಕ ಶೈಲಿಯಲ್ಲಿಯೇ ಕುಣಿಯಬಾರದು ಯಾಕೆ? ಮೈಗೆಲ್ಲಾ ಕಪ್ಪು ಬಣ್ಣ ಬಳಿದು, ತಲೆ ಮೇಲೊಂದು ಮುಠ್ಠಾಲೆ ಇಟ್ಟು, ಆಧುನಿಕ ಶೈಲಿಯಲ್ಲಿ ಕುಣಿದ ತಕ್ಷಣ - ಅದು 'ಕೊರಗ ಕುಣಿತ' ಅಥವಾ 'ಕೊರಗರದ್ದೇ ಕುಣಿತ' ಹೇಗಾಗುತ್ತದೆ?! ಇದನ್ನು 'ವಿಕೃತ(ರ) ಕುಣಿತ' ಎನ್ನಬಾರದೇ?!
- ಹೃದಯ

ಕೊರಗನೊಬ್ಬನ ಆಕ್ರೋಶಿತ ನುಡಿ...

ಅಂದು ಪಂಚಾಯತಿನಲ್ಲಿ ಶೌಚಾಲಯಕ್ಕೆ ಸಂಬಂಧಿಸಿದ್ದ ಒಂದು ಸಭೆ ನಡೆಯುತ್ತಿತ್ತು. ಆಗ ಹಠತ್ತಾಗಿ ಕೊರಗರ ಹುಡುಗನೊಬ್ಬ ಒಳ ಬಂದು - 'ನಮಗೆ ಮಳೆಗಾಲದ ಒಳಗೆ ಮನೆ ಕಟ್ಟಿಸಿ ಕೊಡುತ್ತಿರೋ, ಇಲ್ಲವೋ? ಇಲ್ಲವಾದರೆ ಪಂಚಾಯಿತಿಯ ಅಂಗಳದಲ್ಲೇ ಬಿಡಾರ ಹೂಡುತ್ತೇವೆ..' ಎಂದನಾತ. ಎಲ್ಲರೂ ಒಮ್ಮೆಲೇ ಅವಕ್ಕಾದರು! ಕೊರಗರು ಹೆಚ್ಚಾಗಿ ಕಾಡಿನಲ್ಲೇ ಇದ್ದವರು, ಎಲ್ಲರಿಗೂ ತಗ್ಗಿ ಬಗ್ಗಿ ನಡೆಯುವುದು ಅವರ ಅಭ್ಯಾಸ. ಹೀಗಿರುವಾಗ ಒಬ್ಬ ಕೊರಗರ ಹುಡುಗ ಧೈರ್ಯವಾಗಿ ತನ್ನ ಹಕ್ಕನ್ನು ಕೇಳುವುದು, ಪ್ರತಿಭಟಿನೆಗೆ ಮನಸ್ಸಾದರೂ ಮಾಡುವುದು, ಅದಕ್ಕಾಗಿ ಗ್ರಾಮ ಪಂಚಾಯತಿಯನ್ನೇ ಆರಿಸಿಕೊಳ್ಳುವುದು, ವಿಕೇಂದ್ರಿಕರಣದ ಶಕ್ತಿಯಲ್ಲದೆ ಇನ್ನೇನು?!
(ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತಿನಲ್ಲಿ ನಡೆದ ಘಟನೆ)
- ನಿಖಿಲ್ ಕೋಲ್ಪೆ (ಪತ್ರಕರ್ತರು),
ಜನಜಾಗೃತಿ ಸಮಿತಿ ನರಿಕೊಂಬು

ಕಲಾತಂಡಗಳಿಂದ ಕೊರಗರ ಸಾಂಸ್ಕ್ರತಿಕ ಸಿರಿತನದ ಸೊಬಗು ಅನಾವರಣ

ಕೊರಗರ 'ಕಾಡಿ ಕೂಜೆ - ಹುಭಾಶಿಕ'ನ ಕಾಲಘಟ್ಟದಲ್ಲಿ ತಮ್ಮ ಸಾಮ್ರಾಜ್ಯವೆಂಬ ದಟ್ಟಾರಣ್ಯದಲ್ಲಿ ಕಡ್ಡಾಯಿ (ಅಂದರೆ - ಡೋಲು) ಕಂರ್ಡೆ (ಚೆಂಡೆ) ಕೊರಲ್ (ಕೊಳಲು) ಚಾವಲ (ಕೈ ತಾಲ)ದ ಅಬ್ಬರದ ಮಾರ್ಧನಿಗೆ ಇಡೀ ಕಾಡೇ ಹಬ್ಬ ಆಚರಿಸುತ್ತಿತ್ತು. ಇದು ಗತಿಸಿ ಹೋದ ಮಾತು.

ಕೊರಗರು ಅನಿಷ್ಟ 'ಅಜಲು' ಚಾಕರಿಗೆ ಒಳಪಟ್ಟ ನಂತರ, ಅವರ ಆ ಸಾಂಸ್ಕೃತಿಕ ಸೊಗಡು ಕಣ್ಮರೆಯಾಗುತ್ತಾ ಬಂತು. ಕಡ್ಡಾಯಿ ಕಂರ್ಡೆ ಕೊರಲ್ ಚಾವಲ ಊರವರ ಬಿಟ್ಟಿ ಚಾಕರಿಗೆ ಒಳಪಟ್ಟಿತು. ತನ್ನ ಸಮುದಾಯದ ಶ್ರೀಮಂತ ಕಲೆ ಯೆಂಬುದು ಈ ನಾಡಿನ ಶ್ರೀಮಂತ ವರ್ಗದವರಿಂದಾಗಿ ಅವಸಾನದ ಅಂಚಿಗೆ ಬಂದು ತಲುಪಿತು.

ಕಾಲ ಬದಲಾಗಿದೆ. ಕೊರಗರು 'ಅಜಲು' ಎಂಬ 'ಮಾರಿ'ಯ ಆಚರಣೆಯಿಂದ ಮುಕ್ತರಾಗಿದ್ದಾರೆ. ಮತ್ತೆ ತಮ್ಮ ಗತಿಸಿಹೋದ ಆ ಕಾಡಿನ ಶ್ರೀಮಂತ ಕಲೆ - ಕಡ್ಡಾಯಿ ಕಂರ್ಡೆ ಕೊರಲ್ ಚಾವಲದ ಧನಿ ವಿಶಿಷ್ಟತೆ, ಸಾಮೂಹಿಕ ನೃತ್ಯ, ಒಂದು ರೀತಿಯ ವಿಶಿಷ್ಟ ಸ್ವರ ಹೊಮ್ಮಿಸುತ್ತಾ ಆ ಕಲೆಯನ್ನು ಈ ನಾಡಿಗೆ ಸಾದರಪಡಿಸುತ್ತಿದ್ದಾರೆ ಕೊರಗ ಬಂಧುಗಳು. ಆ ಮೂಲಕ ಗತಿಸಿಹೋದ ತಮ್ಮ ಜಾತಿಯ ಮತ್ತು ಕಲೆಯ ಘನತೆಯನ್ನು ಮರಳಿ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಈ ಹುಮ್ಮಸ್ಸಿನಿಂದಾಗಿ ಇಂದು ಕೊರಗರ ಹಲವಾರು ಕಲಾ ತಂಡಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಕರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದೆ. ಅದರಲ್ಲಿ ಬಹುಮುಖ್ಯವಾಗಿ ಮಂಗಳೂರಿನ 'ಕೊರಲ್' ಕಲಾ ತಂಡ 'ಗಜಮೇಳ' ಎಂಬ ಹೆಸರಿನಲ್ಲಿ ರಾಜ್ಯಾದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ. ಕೊರಲ್ ಕಲಾ ತಂಡ ತಮ್ಮ ಸಾಂಸ್ಕೃತಿಕ ಪರಿಕರಗಳೊಂದಿಗೆ - ಕೊರಗ ಸಮುದಾಯದ ಮದುವೆ, ದಿಬ್ಬಣ, ಮದುಮಗಳನ್ನು ಬೀಳ್ಕೊಡುವ ಸಂದರ್ಭ, ದೂರ ನಡಿಗೆ, ಸಂತೋಷ ಕೂಟಗಳು ಮತ್ತು ಸಾವಿನ ಸಂದರ್ಭ ಸೂತಕದ ಛಾಯೆಯನ್ನು ಮೂಡಿಸುವ ಟಕ್ಕು (ಪ್ರಕಾರ/ ಲಯ)ಗಳನ್ನು ಪ್ರಸ್ತುತ ಪಡಿಸುತ್ತಾ, ಅದರ ಲಯಬದ್ಧತೆಯ ಸೊಬಗಿನಿಂದ ಜನಮನ ರಂಜಿಸುತ್ತಿದ್ದಾರೆ. ಆದಿವಾಸಿಗಳು ಪ್ರಾಣಿಗಳ ತಾಣವನ್ನು ಹುಡುಕುವ, ಪಕ್ಷಿಗಳ ಚಿಲಿಪಿಲಿಯನ್ನು ಆಲಿಸುವ ಮತ್ತು ಬೇಟೆಯಾಡುವ ರೀತಿ, ಬಿಳಲು ಸಂಗ್ರಹಿಸುವ ವಿಧಾನ, ಆದಿವಾಸಿಗಳ ಪರಾಕ್ರಮದ ಕಸರತ್ತುಗಳನ್ನು ನೃತ್ಯ ರೂಪಕದೊಂದಿಗೆ ಸಾದರಪಡಿಸುತ್ತಿದ್ದಾರೆ. ಈ ಕಲಾ ತಂಡವು ಬೆಂಗಳೂರಿನ ಚಿತ್ರ ಕಲಾ ಪರಿಷತ್, ರವೀಂದ್ರ ಕಲಾ ಕೇಂದ್ರ, ಕೋಲಾರದ ಆದಿಮ ಬೆಟ್ಟ, ಕೊಡಗಿನ ತಿತಿಮತಿ, ಮಂಗಳೂರು ಶಕ್ತಿನಗರದ ಕಲಾಂಗಣ, ಗುರುಪುರ, ಜಜ್ಪೆ ಸಿದ್ದಾರ್ಥ ನಗರ, ವಿಟ್ಲದ ಕುದ್ದು ಪದವು ಮತ್ತು ಮಾನಿಲ, ಕಾಕುಳ ಭುವನೇಂದ್ರ ಕಾಲೇಜು, ಆದಿವಾಸಿ ಜೀವನ ಕೇಂದ್ರ ಪೆರ್ನಾಲು, ಅಷ್ಟೇ ಅಲ್ಲದೆ ಕೇರಳದಲ್ಲಿಯೂ ಪ್ರದರ್ಶನ ನೀಡಿದೆ.

ಮಂಚಕಲ್ ರಮೇಶ ಕೊರಗರ ನೇತೃತ್ವದ ಈ ಕಲಾತಂಡದಲ್ಲಿ ಆರು ಮಂದಿ ಮಹಿಳೆಯರನ್ನು ಒಳಗೊಂಡು ಒಟ್ಟು ಹದಿನಾರು ಮಂದಿ ಸದಸ್ಯರಿದ್ದಾರೆ. ಬಾಲರಾಜ್ ಕೋಡಿಕಲ್, ಕೊಗ್ಗ ಕೋಡಿಕಲ್, ಸುಂದರ ಬೆಳುವಾಯಿ, ಸಂಜೀವ ಕೋಡಿಕಲ್, ಸುಮತಿ ಕಿನ್ನಿಗೋಳಿ, ಮಾಲತಿ ಕೋಡಿಕಲ್, ಗೀತಾ ಮೂಡುಶೆಡ್ಡೆ, ರಮೇಶ ಗುಂಡಾವು ಪದವು, ರವಿ ಕೈಕಂಬ, ಹರೀಶ ಅತ್ತೂರು, ಶಶಿಕಲಾ ಕೋಡಿಕಲ್, ಬಾಬು ಪಾಂಗಾಲರನೊಳಗೊಂಡ ತಂಡ ತನ್ನ ಆದಿ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.

ಬಾರ್ಕೂರಿನ ಹುಭಾಶಿಕ ಕಲಾ ವೇದಿಕೆ, ಬೈಂದೂರಿನ ಜ್ಯೋತಿ ಬಾಪುಲೆ ಕಲಾತಂಡ, ಕುಂದಾಪುರದ ಕೊರಗ ತನಿಯ ಕಲಾ ತಂಡ, ಕಿನ್ನಿಗೋಳಿಯ ಬೈಕಾಡ್ತಿ ಕಲಾತಂಡ, ಕುಂದಾಪುರ ನಾಡಾದ ಸರ್ವೋದಯ ಕಲಾತಂಡ ಕೊರಗರ ಸಾಂಸ್ಕೃತಿಕ ಸಿರಿತನ ಮಂಕಾಗಿಲ್ಲ ಎಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಅವರ ಕಡ್ಡಾಯಿ ಕಂರ್ಡೆ ಕೊರಲ್ ಚಾವಲ ಹೊಸ ಲೋಕವನ್ನೇ ಸೃಷ್ಠಿಸಿದೆ.
- ಹೃದಯ

ಅನ್ಯಧರ್ಮದ ಬಂಧನದಲ್ಲಿಕೊರಗರು

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಮುಂತಾದ ಗಂಭೀರ ಸ್ಥಾಪಿತ ಸಮಸ್ಯೆಗಳ ಒಳಸುಳಿಯಲ್ಲಿ ನಲುಗುತ್ತಿರುವ ಸಮಾಜದ ಮದ್ಯೆಯೇ - ಮುಂದುವರಿಯುತ್ತಿರುವ ‘ಕೊರಗ‘ ಆದಿವಾಸಿ ಸಮುದಾಯ, ತನ್ನ ಮೂಲ ಸಂಸ್ಕೃತಿ, ಕಲೆ, ಭಾಷೆ ಮತ್ತು ಆಚಾರ ವಿಚಾರಗಳನ್ನು ಮರೆತು - ಹಿಂದೂ, ಕ್ರೈಸ್ತ ಮುಂತಾದ ಧರ್ಮದ ಸಂಸ್ಕೃತಿ ಮತ್ತು ಅದರ ಜೀವನ ಪದ್ಧತಿಯನ್ನು ಮೈಗೂಡಿಸಿಕೊಂಡಿರುವುದು ಮತ್ತು ತನ್ನ ಕಟ್ಟುಪಾಡುಗಳನ್ನು ಮರೆತು ಅನ್ಯ ಧರ್ಮದ ಬುನಾದಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ವಿಷಾದನೀಯ ಬೆಳವಣಿಗೆ.

ಹುಟ್ಟುತ್ತಾ ಸ್ವತಂತ್ರವಾಗಿರುವ ಮಗು ಬೆಳೆದಂತೆ ಧರ್ಮದ ಬಂಧನದಲ್ಲಿ ಒಗ್ಗೂಡುವುದು ಸಹಜ ಪ್ರಕ್ರಿಯೆಯಾದರೆ, ಕೊರಗರು ಧರ್ಮದ ಹಂಗಿಲ್ಲದೆ ಬೆಳೆದವರು. ಬದುಕೆಂದರೆ- ಕಾಡು, ಕಾಡೆಂದರೆ- ದೇವರು ಎಂದು ಅಚಲವಾಗಿ ನಂಬಿಕೊಂಡು ಬಂದವರು, ಪ್ರಕೃತಿ ಆರಾಧಕರು, ಪ್ರಕೃತಿ ಪೋಷಕರು ಮತ್ತು ಸೂರ್ಯೋಪಾಸಕರು (ಸೂರ್ಯನನ್ನು ಪೂಜಿಸುವವರು). ಧರ್ಮವೆಂಬ ಪದಕ್ಕೆ ‘ನ್ಯಾಯ - ನಿಷ್ಠೆ‘ ಎಂಬ ಪರ್ಯಾಯಾರ್ಥವನ್ನು ಕೊಟ್ಟು, ಹಾಗೆ ಬದುಕಿಕೊಂಡು ಬಂದವರು.

ಹುಲಿಯ ಮಾಂಸ, ದನದ ಮಾಂಸ, ಆಮೆ- ಮೀನುಗಳು ಆಹಾರ ಪದ್ಧತಿಗಳಾಗಿದ್ದವು. ಕಾಡಿನಲ್ಲಿ ಹೇರಳವಾಗಿ ದೊರಕುತ್ತಿದ್ದ ಬಿದಿರು ಬಿಳಲುಗಳಿಂದ - ತಮ್ಮ ನೈಪುಣ್ಯತೆಯನ್ನು ಬಳಸಿ - ಬುಟ್ಟಿ ಮತ್ತಿತರ ಪರಿಕರಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಬೇಟೆಯಾಡುವುದು, ಅರಣ್ಯೋತ್ಪನ್ನಗಳನ್ನು ಸಂಗ್ರಹಿಸುವುದು ಕುಲ ಕಸುಬುಗಳಾಗಿತ್ತು. ಸುಶ್ರಾವ್ಯವಾಗಿ ಡೋಲು ಬಾರಿಸುವುದು, ಕೊಳಲು ಊದುವುದು ಸಾಂಸ್ಕೃತಿಕ ಮತ್ತು ಮನೋರಂಜನಾತ್ಮಕ ಕಲೆಯಾಗಿತ್ತು. ತನ್ನದೇ ಆದ ವಿಶಿಷ್ಠ ಆಚಾರ -ವಿಚಾರ ಸಂಪ್ರದಾಯ ಮತ್ತು ಭಾಷೆಯನ್ನು ಮೈಗೂಡಿಸಿದ್ದರು. ಈ ದೇಶದ ಧರ್ಮಾತೀತ ಬುಡಕಟ್ಟು ಪಂಗಡದಲ್ಲಿ ‘ ಕೊರಗ’ ಸಮುದಾಯವೂ ಒಂದಾಗಿತ್ತು.

ಧರ್ಮಾತೀತರೆನಿಸಿಕೊಂಡ ಕೊರಗರು, ಹಿಂದೂಗಳ ‘ ಚಾಕರಿ ಸೇವೆ ’ (ಅದನ್ನು ಅಜಲು ಚಾಕರಿ ಎನ್ನುತ್ತಾರೆ) ಮಾಡಿಕೊಂಡು, ಅವರ ಕೆಲವೊಂದು ಸಂಸ್ಕೃತಿ, ಸಂಸ್ಕಾರಗಳನ್ನು ತಮ್ಮದಾಗಿಸಿಕೊಂಡರು. ಕಾಡು - ಪ್ರಕೃತಿಯ ಸುಂದರ ಮಡಿಲಲ್ಲಿ ಹುಟ್ಟಿ ಬಳೆದು ಪ್ರಾಣಿ- ಪಕ್ಷಿ- ಜೀವ ಜಂತುಗಳ, ಹೆಸರನ್ನು ಇಡುತ್ತಿದ್ದ ಕೊರಗರು ಹಿಂದೂಗಳ ಹೆಸರು ಆಕರ್ಷಣೀಯವಾಗಿ ತಮ್ಮ ಮಕ್ಕಳಿಗೂ ಹಿಂದೂ ಹೆಸರನ್ನು ಇಡಲು ಪ್ರಾರಂಭಿಸಿದರು. ಇದು ಮತಾಂತರ ಮತ್ತು ಸಂಸ್ಕೃತಿಕರಣದ ಮೊದಲ ಹೆಜ್ಜೆಯಾಯಿತು. ಆ ಮೂಲಕ ಕೊರಗರು ನಿಧಾನವಾಗಿ ‘ಧರ್ಮ‘ದ ಬಂಧನಕ್ಕೆ ಸಿಲುಕುವಂತಾಯಿತು.

ಇಂದು ಕೊರಗರು ಮನೆ ಕಟ್ಟುವುದಾದರೆ - ವಾಸ್ತು ನೋಡಲೇಬೇಕು! ಗೃಹ ಪ್ರವೇಶಕ್ಕೆ - ಪುರೋಹಿತ ವರ್ಗದವರು ಬಂದು ಹೋಮ ಮಾಡಲೇಬೇಕು. ಕೊರಗರನ್ನು ಮುಟ್ಟಿಯೂ ನೋಡದ ತಟ್ಟಿಯೂ ನೋಡದ - ಭಟ್ಟರ ಉಪಸ್ಥಿತಿ ಕೊರಗರ ಮದುವೆಗೆ ಬೇಕೇ - ಬೇಕು! ಕೊರಗ ಸಮುದಾಯದ ಕುಲದೈವ ‘ಕೊರಗ -ತನಿಯ’ನನ್ನು ಪ್ರತಿಷ್ಠಾಪಿಸಲೂ ಬ್ರಾಹ್ಮಣರೇ ಬೇಕು. ಶುಭ ಕಾರ್ಯಕ್ರಮಗಳಿಗೂ - ಭಟ್ಟರ ಬಳಿ ಹೋಗಿ ಒಳ್ಳೆಯ ದಿನವನ್ನು ‘ಹುಡುಕ‘ಬೇಕು. ಸತ್ತವರ - ಪಿಂಡ ಬಿಡಬೇಕು. ಅಥವಾ ಕದ್ರಿ ಅರ್ಚಕರ ಬಳಿಗೆ ಹೋಗಿ ‘ಶ್ರಾದ್ಧ‘ ಮಾಡಬೇಕು! ಇದು ಇಪ್ಪತ್ತು ವರ್ಷಗಳಿಂದೀಚಿಗಿನ ಬದಲಾವಣೆಗಳು. ಇಂತಹ ಆಚರಣೆಗಳನ್ನು ಎಂದಾದರು ಕೊರಗ ಸಮುದಾಯದ ಹಿರಿಯ ಜೀವಿಗಳು ಮಾದಿದ್ದಾರೆಯೇ? ಅವರು ಎಂದಾದರೂ ತಮ್ಮನ್ನು ಆ ಧರ್ಮದವರು ಈ ಧರ್ಮದವರು ಎಂದು ಹೇಳಿದ್ದಾರೆಯೇ? ಇಂದಿನವರಿಗೇಕೆ ಈ ‘ಅನ್ಯ ಧರ್ಮ‘ದ ಹಂಗು? ತಮ್ಮ ಮೂಲದ ಅದೆಷ್ಟೋ ಆಚರಣೆಗಳನ್ನು ಕಳೆದುಕೊಂಡು, ಹಿಂದು - ಮುಸ್ಲಿಂ- ಕ್ರೈಸ್ತ ಮುಂತಾದ ಧರ್ಮಗಳ ಮತಾಂತರದ ಮನ್ವಂತರಕ್ಕೆ ಅಥವಾ ಸಂಸ್ಕೃತಿಕರಣಕ್ಕೆ ಮಾರು ಹೋಗುವ ಮುನ್ನ, ಕೊರಗ ಬಂಧುಗಳು ಆಲೋಚಿಸುತ್ತಾರೆಯೇ?
- ಹೃದಯ

ಹಸಿದಾಗ ಎಂಜಲನ್ನ ನೀಡಿದವರು ಸಭ್ಯರೇ?

Photo: ಹಸಿದಾಗ ಎಂಜಲನ್ನ ನೀಡಿದವರು ಸಭ್ಯರೇ?

ಶತಮಾನಗಳಿಂದ ಬವಣೆ ಬೇಗುದಿಗಳನ್ನೇ ಉಂಡು, ನೋವು - ಹಸಿವು - ಅಸಹಾಯಕತೆಗಳ ಮೂಟೆಯನ್ನೇ ಹೊತ್ತು, ಮೈಯ ಇಂಚಿಂಚೂ ದೇಹವನ್ನು ದಂಡಿಸಿಕೊಂಡು, ಬೆವರು ರಕ್ತವನ್ನು ಚೆಲ್ಲಿ, ಈ ನಾಡಿನ ಪಾಲೆಗಾರರ ಬಟ್ಟೆ - ಬಂಗಲೆ - ವೈಭವಗಳಿಗೆ ತಮ್ಮ ಸರ್ವಸ್ವವನ್ನು ಧಾರೆಯೆರೆದಿರುವ, ಶತ ಶತಮಾನಗಳಿಂದ ಶೋಷಣೆಯ ಕಟ್ಟಕಡೆಗೆ ತುಳಿಯಲ್ಪಟ್ಟ ಈ ನಾಡಿನ ಮೂಲನಿವಾಸಿಗಳಾದ ಕೊರಗ ಜನಾಂಗದ ಮೇಲೆ ಬುದ್ಧಿವಂತರೆನಿಸಿಕೊಂಡ ಲೇಖಕರ ಮತಿಹೀನತೆ ಖಂಡನೀಯ.

ಗುರುನಾಥ ಜೋಶಿ ಹಾಗು ಬಿ ಅಶ್ವಥ್ ನಾರಾಯಣ ಎಂಬ ಮಹಾನುಭಾವರ ಸಂಪಾದಕತ್ವದಲ್ಲಿ 1998ರಲ್ಲಿ ಪುನರ್ ಮುದ್ರಿಸಲಾದ 'ಕನ್ನಡ - ಕನ್ನಡ ಶಬ್ಧಕೋಶ'ದ ಪುಟ ಸಂಖ್ಯೆ 160ರಲ್ಲಿ 'ಕೊರಗ' ಎಂಬ ಪದದ ಅರ್ಥ ವಿವರಣೆಯನ್ನು ನೀಡಲಾಗಿದೆ. ಈ ಅರ್ಥಕೋಶವನ್ನು 'ಸಂಕೇಶ್ವರ ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್, ಗದಗ' ಹೊರತಂದಿದೆ. ಇದರಲ್ಲಿ --
ಕೊರಗ (ನಾಮಪದ) = 'ದಕ್ಷಿಣ ಕನ್ನಡ ಜಿಲ್ಲೆಯ ಅಸಭ್ಯ ಜನಾಂಗ' ವೆಂದು ಬರೆಯಲಾಗಿದೆ.

ಆತನ ದೃಷ್ಟಿಯಲ್ಲಿ ಕೊರಗರು ಅಸಭ್ಯರೆ ಆಗಿರಬಹುದು. ಆದರೆ,
ಹಸಿದ ಹೊಟ್ಟೆಗೆ ಎಂಜಲನ್ನ ನೀಡಿದ,
ಮೈ ಮುಚ್ಚಿಕೊಳ್ಳಲು ಹೆಣದ ಬಟ್ಟೆಯನ್ನು ನೀಡಿದ,
ಅಕ್ಷರ ಕಲಿಯಲು ಬಿಡದ,
ದೇವಸ್ಥಾಸ ದೈವಸ್ಥಾನ ಪ್ರವೇಶಿಸಲು ಬಿಡದ,
ಮನೆಯ ಅಂಗಳಕ್ಕೂ ಪ್ರವೇಶ  ನೀಡದ,
ತಾವು ಮಡಿವಂತರೆನಿಸಿಕೊಂಡು ಕೊರಗರನ್ನು ಅಸ್ಪ್ರಶ್ಯರನ್ನಾಗಿಸಿದ,
ಬದುಕು ಪೂರ್ತಿ 'ಅಜಲು' ಎಂಬ ಅನಿಷ್ಟ ಆಚರಣೆಯಲ್ಲಿ ಕೊರಗರನ್ನು ಹಿಂಸಿಸಿದ ಮಡಿವಂತರು ಸಭ್ಯರೇ?!

ಮಹಾನುಭಾವರಾದ ಗುರುನಾಥ ಜೋಶಿ ಹಾಗು ಬಿ ಅಶ್ವಥ ನಾರಾಯಣರವರು ಉತ್ತರಿಸಲು ಅರ್ಹರು!

ಮಾನವೀಯತೆಯ ಮಹಾ ಮನುಜ...

Photo: ಇಂದು ಕುದ್ಮಲ್ ರಂಗರಾಯರ ಜನ್ಮದಿನ.( 1859-1928) ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿಜನಿಸಿದ್ದ ರಂಗರಾಯರು ಸಮಾಜದಲ್ಲಿ ತುಳಿತಕ್ಕೊಳಗಾದವರ ಬೆನ್ನೆಲುಬಾಗಿ ನಿಂತವರು. ವ್ರತ್ತಿಯಲ್ಲಿ ವಕೀಲರಾಗಿದ್ದು 1897 ರಲ್ಲಿ ಡಿಪ್ರೆಸ್ಡ್ ಕ್ಲಾಸಸ್ ಮಿಶನ್ ಎಂಬ ಸಂಸ್ಥೆಯನ್ನು   ಕಟ್ತಿ ಹಗಲೂ ರಾತ್ರಿ ದಲಿತೋದ್ಧಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು. ದಲಿತರಿಗೆ ಶಿಕ್ಷಣ ಗಗನ ಕುಸುಮವಾಗಿದ್ದ ಆ ಕಾಲದಲ್ಲಿ ಬನ್ನಂಜೆ, ನೇಜಾರು, ಕಂಕನಾಡಿ , ದಡ್ಡಲಕಾಡು, ಅತ್ತಾವರ ಬಾಬುಗುಡ್ಡೆ ಇತ್ಯಾದಿ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆದು ಅವುಗಳನ್ನು ಪಂಚಮ ಶಾಲೆಗಳೆಂದು ಕರೆದರು. ಸ್ವತಃ ಗಾಂಧಿಜಿಯವರೇ ಇವರಿಂದ ಪ್ರೇರಿತರಾಗಿದ್ದರು. ವ್ರತ್ತಿ ಜೀವನದಲ್ಲಿ ಸಂಪಾದಿಸಿದ ಹಣವನ್ನೆಲ್ಲಾ ದಲಿತರ ಸೇವೆಗಾಗಿ ಬಳಸಿ , ಮಕ್ಕಳ ಜೊತೆಯಲ್ಲಿ  ಬೆರೆತು, ದಲಿತೋದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಚೇತನ. 1928 ಜನವರಿ 30ರಂದು ಇವರು ನಿಧನರಾದಾಗ ಶೋಕತಪ್ತ ದಲಿತರು ಇವರ ಪಾರ್ಥೀವ ಶರೀರಕ್ಕೆ ಹೆಗಲ್ ಕೊಟ್ಟು ಮೆರವಣಿಗೆ ಮಾಡಿದ ಸಮಯವನ್ನು ನಮ್ಮ ಹಿರಿಯರು ಹೇಳುತ್ತಿದ್ದುದನ್ನು ನೆನೆಯುವಾಗ ಈಗಲೂ ಕಣ್ಣಾಲಿಗಳು ತುಂಬಿ ಬರುತ್ತವೆ.

ಒಂದು ದಿನ ಆ ಹುಡುಗ ಒಂದು ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಜಮೀನ್ದಾರನೊಬ್ಬನ ಮನೆಯ ಮುಂದೆ ಒಬ್ಬ ಕಪ್ಪು ಹುಡುಗನನ್ನು ಮರಕ್ಕೆ ಕಟ್ಟಿ ಹಾಕಿ ಬೆತ್ತಲೆ ಮಾಡಿ ಹೊಡೆಯುತ್ತಿದ್ದನ್ನು ಕಂಡ. ಆತ ಕಳ್ಳನೂ ಅಲ್ಲ, ಸುಳ್ಳನ್ನೂ ಹೇಳಿರಲಿಲ್ಲ. ಆತ ಮಾಡಿದ ಒಂದೇ ಒಂದು ಮಹಾಪರಾಧವೆಂದರೆ ಹೊಸ ಬಟ್ಟೆ ಧರಿಸಿದ್ದು. ಆ ಕಪ್ಪು ಹುಡುಗ ಜಾತಿಯಲ್ಲಿ ಕೊರಗ. ಆ ಅಸ್ಪ್ರಶ್ಯ ಜಾತಿಗಯವರು ಹೊಸ ಬಟ್ಟೆ ತೊಡುವಂತಿರಲಿಲ್ಲ. ಯಾಕೆಂದರೆ ಆ ಹಕ್ಕು ಅವರಿಗಿರಲಿಲ್ಲ. ಸವರ್ಣೀಯರು ಉಟ್ಟು ಹರಿದು ಚಿಂದಿಯಾದ ಬಟ್ಟೆಯಿಂದಲೇ ಕೊರಗರು ಮಾನ ಮುಚ್ಚಿಕೊಳ್ಳಬೇಕಿತ್ತು. ಆ ತಪ್ಪಿಗಾಗಿ ಆ ಕಪ್ಪುಹುಡುಗ ಬಾಸುಂಡೆ ಬರುವಂತೆ ಏಟು ತಿಂದ. ಅದೇ ಕೊರಗರು ಕಷ್ಟಪಟ್ಟು ಬಿಳಲುಗಳನ್ನು ಹುಡುಕಿ ತಯಾರಿಸಿದ ಬುಟ್ಟಿಗಳು ಆ ಮೇಲ್ವರ್ಗದ ಜನರಿಗೆ ಅಸ್ಪ್ರಶ್ಯವಲ್ಲ. ಅಸ್ಪ್ರಶ್ಯರು ಮುಟ್ಟಿದರೆ ಮೈಲಿಗೆ. ಅವರು ಊರಿಂದಲೇ ದೂರವಿರಬೇಕು. ಆದರೆ, ಅವರು ತಯಾರಿಸಿದ ಸಮಾಗ್ರಿಗಳಿಗೆ ಅಶುದ್ಧವಿಲ್ಲ. ಏಕೆ ಹೀಗೆ?

ಎಲ್ಲ ತಿನ್ನುವುದು ಒಂದೇ ಆಹಾರ. ಎಲ್ಲ ಸೇವಿಸುವುದು ಒಂದೇ ಗಾಳಿ. ಎಲ್ಲ ಕುಡಿಯುವುದು ಒಂದೇ ನೀರು. ಎಲ್ಲರಿಗೂ ದುಃಖ ಸಂತೋಷ ಉಂಟು. ಎಲ್ಲ ಕಡೆಗೆ ಸಾಯುವವರೇ. ಹೀಗಿರುವಾಗ ಹುಟ್ಟಿನಿಂದ ಇವರು ದೊಡ್ಡವರು ಅವರು ಕೀಳು ಎಂದೇಕೆ? ಆ ವಿದ್ಯಾರ್ಥಿ ಬಹಳ ಯೋಚಿಸಿದ. ಕೆಳಗಿನ ಜಾತಿಯವವರು ಎನಿಸಿಕೊಂಡವರಿಗೆ ಬಹಳ ಅನ್ಯಾಯವಾಗುತ್ತಿದೆ ಎಂದೆನಿಸಿ ಅವನ ಹೃದಯ ಬಂದಿತು. ಆ ಹುಡುಗನೇ ಕುದ್ಮುಲ್ ರಂಗರಾವ್.

ಕುಪೋಷಣೆಯೇ ಕೊರಗರನ್ನು ಬಿಟ್ಟು ತೊಲಗು...

'ಕುಪೋಷಣೆ ಎಂದರೆ ಶಾರೀರಿಕ ಮತ್ತು ಮಾನಸಿಕ ದುರ್ಬಲತೆ' ಎನ್ನುತ್ತಾರೆ - ಕುಪೋಷಣೆ ವಿರುದ್ಧ ಜಾಗೃತಿ ಮೂಡಿಸುವ ಜಾಹಿರಾತೊಂದರಲ್ಲಿ ನಟ ಅಮೀರ್ ಖಾನ್.

ಕುಪೋಷಣೆ ಮತ್ತು ಹಸಿವು ರಾಷ್ಟ್ರೀಯ ಸಮಸ್ಯೆಯಾಗಿದೆ. ಸಧೃಡ ಸಮಾಜಕ್ಕೆ ಮಕ್ಕಳೇ ಆಧಾರ. ಎಳೆಯ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದಿದ್ದರೆ ಮಕ್ಕಳಲ್ಲಿ ಕುಪೋಷಣೆ ಉಂಟಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಪೋಷಕಾಂಶಗಳ ಕೊರತೆಯಿಂದ ಅಂಗಹೀನತೆ ಉಂಟಾಗುತ್ತದೆ.
ಕುಪೋಷಣೆ ಹೊಂದಿರುವ ಮಗು ಕಡಿಮೆ ತೂಕ ಹೊಂದಿರುತ್ತದೆ. ಹಾಗು ಮಗು ಬೆಳೆದಂತೆಲ್ಲಾ ವಯಸ್ಸಿಗೆ ತಕ್ಕ ತೂಕವನ್ನು ಹೊಂದುವುದಿಲ್ಲ. ಮಗುವಿನ ಚಟುವಟಿಕೆಗಳು ಚೈತನ್ಯಪೂರಕವಾಗಿರುವುದಿಲ್ಲ. ತೀವ್ರ ಬಲಹೀನತೆ, ಪಾದ ಮತ್ತು ಮುಖದಲ್ಲಿ ಊತ, ಅತಿಸಾರ ಬೇಧಿ ,ಕೂದಲು ಕಂದು ಬಣ್ಣಕ್ಕೆ ತಿರುಗುವುದು, ಹಸಿವು ಕಡಿಮೆಯಾಗುವುದು, ರಕ್ತಹೀನತೆ, ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು - ಇವು ಕುಪೋಷಣೆಯ ಲಕ್ಷಣಗಳು.
ಬಡತನ, ಮೂಡನಂಬಿಕೆ, ಅನಕ್ಷರತೆ, ಲಿಂಗ ತಾರತಮ್ಯ, ಬಾಲ್ಯ ವಿವಾಹ, ಎಳೆಯ ವಯಸ್ಸಿನಲ್ಲಿ ಗರ್ಭಧಾರಣೆ, ಸಮರ್ಪಕ ಎದೆಹಾಲು ಉಣಿಸದೇ ಇರುವುದು, ಗರ್ಭಿಣಿಯರಿಗೆ ಪೂರಕ ಆಹಾರ ನೀಡದೆ ಇರುವುದು, ಸ್ವಚ್ಛತೆ ಅನುಸರಿಸದಿರುವುದು ಇವು ಅಪೌಷ್ಟಿಕತೆ ಮತ್ತು ಕುಪೋಷಣೆಗೆ ಕಾರಣವಾಗುತ್ತದೆ.

ಕೊರಗ ಆದಿವಾಸಿಗಳಲ್ಲಿ ಕುಪೋಷಣೆ...

ಕುಪೋಷಣೆಯೇ ಕೊರಗರನ್ನು ಬಿಟ್ಟು ತೊಲಗು...
Photo: ಕುಪೋಷಣೆಯೇ ಕೊರಗರನ್ನು ಬಿಟ್ಟು ತೊಲಗು...

ಕಾಡಿನ ಮಕ್ಕಳಾಗಿ - ಪ್ರಕೃತಿಯ ಆರಾಧಕರಾಗಿ, ತಮ್ಮ ಹಸಿವು, ಉಸಿರು, ಬಾಯಾರಿಕೆ, ನೋವು, ನಲಿವು, ಸಾಮಾಜಿಕ - ಸಾಂಸ್ಕ್ರತಿಕ ಬದುಕನ್ನೆಲ್ಲವನ್ನೂ - ಕಾಡಿನೊಂದಿಗೆ ಬೆಸೆದುಕೊಂಡಿರುವ ಆದಿವಾಸಿಗಳ ಬದುಕು ಖಂಡಿತವಾಗಿಯೂ ಆರೋಗ್ಯಪೂರ್ಣವೇ ಆಗಿತ್ತು. ಎಲ್ಲೂ ಕಲುಷಿತವಾಗದ ನೀರು, ಗಾಳಿ, ಪೌಷ್ಟಿಕಾಂಶದ ಎಲ್ಲಾ ಘಟಕಗಳನ್ನು ತನ್ನಲ್ಲಿ ಮೇಳೈಸಿಕೊಂಡ - ಪ್ರಕೃತಿಯ ಕೊಡುಗೆಗಳಾದ ಗೆಡ್ಡೆ, ಗೆಣಸು, ಸೊಪ್ಪು, ನಾರು, ಬೇರು, ವನಸ್ಪತಿಗಳು, ಪ್ರಾಣಿ - ಪಕ್ಷಿಗಳು ಆದಿವಾಸಿಗಳ ಆಹಾರದ ಮೂಲಗಳಾಗಿದ್ದವು.
ಹಸಿವು ಬಾಯಾರಿಕೆಗಾಗಿ ಕಾಡಿನಲ್ಲಿ ಯತೇಚ್ಛವಾಗಿ ದೊರಕುತ್ತಿದ್ದ ಗೆಡ್ಡೆ ಗೆಣಸು, ಸೊಪ್ಪು, ಉತ್ಕೃಷ್ಟಮಟ್ಟದ ಜೇನು ಇತ್ಯಾದಿಗಳೊಂದಿಗೆ ಸಚ್ಚಂದವಾಗಿ ಬೇಟೆಯಾಡಿ ತಂದ ಪೌಷ್ಟಿಕಾಂಶಯುಕ್ತ ಪ್ರಾಣಿ ಪಕ್ಷಿಗಳ ಮಾಂಸಗಳ ಮೂಲಕ ಆಹಾರ ಸೇವನೆ ಸಾಧ್ಯವಾಗಿದ್ದ ಕಾಲವಿತ್ತು. ಕಾಡು ಮತ್ತು ಕಾಡಿನ ಮೇಲೆ ಸರಕಾರದ ಹಿಡಿತ ಬಿಗಿಯಾದಾಗ ಆದಿವಾಸಿಗಳ ಬದುಕಿನಲ್ಲಿಯೂ ಗಾಢ ಪರಿಣಾಮವನ್ನು ಬೀರಿತು.
ಕಾಡು ಕಡಿದು ನಾಡಾಗಿಸಿದ, ತೋಟವಾಗಿಸಿದ ನಾಗರೀಕತೆ ಎನಿಸಿಕೊಂಡ - ಅಭಿವೃದ್ಧಿ ಹೆಸರಿನ ಭರಾಟೆಯಲ್ಲಿ ಸಿಲುಕಿ ಒದ್ದಾಡುವ ಆದಿವಾಸಿ ಸಮುದಾಯದ ಜನರ ಸ್ಥಿತಿ ಚಿಂತಾಜನಕವಾಯಿತು. ಪ್ರಕೃತಿಯಲ್ಲಿ ಸಂಭವಿಸಿದ ವಿಕೃತಿಯ ಅಭಿವೃದ್ಧಿಯ ಮಧ್ಯೆ ತುತ್ತು ಹೊತ್ತಿನ ಬದುಕಿಗಾಗಿ ವಿಲವಿಲನೆ ಒದ್ದಾಡುವ ಸನ್ನಿವೇಶ ನಿರ್ಮಾಣವಾಯಿತು. ಕಾಲ ಬದಲಾದಂತೆ ಆದಿವಾಸಿಗಳು ಕೂಡಾ ಬದಲಾವಣೆಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ವಾಲಬೇಕಾಯಿತು. ಸಂಮೃದ್ಧ ಆಹಾರ ವಸ್ತುಗಳಿಗೆ ಕೊರತೆಯುಂಟಾಯಿತು. ನೈಸರ್ಗಿಕವಾಗಿ ದೊರಕುತ್ತಿದ್ದ ಗೆಡ್ಡೆ - ಗೆಣಸುಗಳ ಜಾಗದಲ್ಲಿ ಯಾರೋ, ಹೇಗೋ ಬೆಳೆಸಿದ ತರಕಾರಿಗಳು ಬಂದವು. ಪರಿಶುದ್ಧ ತಂಪು ಪಾನೀಯಗಳ ಬದಲು ನಗರೀಕರಣ, ಕೈಗಾರೀಕರಣ, ಯಾಂತ್ರೀಕರಣ ಮುಂತಾದವುಗಳಿಂದ ಸೃಷ್ಠಿಯಾದ ಉಷ್ಣಗಾಳಿಯನ್ನು ಉಸಿರಾಡುವಂತಾಯಿತು. ಅರಣ್ಯ ಇಲಾಖೆಯ ಕಾನೂನು ಕಟ್ಟಳೆಗಳಿಗೆ ಹೆದರಿ ಬೇಟೆಯಾಡುವುದಕ್ಕೆ ತಿಲಾಂಜಲಿ ಇಡಬೇಕಾಯಿತು. ನಿಧಾನವಾಗಿ ಆದಿವಾಸಿಗಳ ದೇಹದೊಳಗೆ ಕಲುಷಿತ ನೀರು, ಗಾಳಿ, ಆಹಾರ ರೂಪದಲ್ಲಿ ವಿಷ ಪ್ರವೇಶವಾಗಿ ತನ್ನಷ್ಟಕ್ಕೆ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತ ಬಂತು. ಅವಕಾಶವಾದಿ ರೋಗ ರುಜಿನಗಳ ಪ್ರವೇಶಕ್ಕೆ ದಾರಿಯಾಯಿತು. ಕುಪೋಷಣೆಯ ವಂಶಪಾರಂಪರ್ಯಕ್ಕೆ ಎಡೆಯಾಯಿತು. 

ಕುಪೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮತ್ತು ಅಳಿವಿನಂಚಿನಲ್ಲಿರುವ ಸಮುದಾಯದ ಉಳಿವಿನ ಕಡೆಗೆ ಆಲೋಚನೆ ಮಾಡುವವರು, ಮಾಡಬೇಕಾದವರು, ಆಳುವವರು, ನಿರ್ಣಯಿಸುವವರು, ಸಮಾನ ಮನಸ್ಸು - ಸಮಾನ ಆಸಕ್ತಿಯೊಂದಿಗೆ ಧ್ಯೇಯ ಬದ್ಧತೆಗಳಲ್ಲಿ ಕಾರ್ಯನಿರ್ವಹಣೆ ಸಾಧ್ಯವಾದರೆ ಕುಪೋಷಣೆಯನ್ನು ತಡೆಗಟ್ಟಬಹುದು, ನಿಯಂತ್ರಿಸಬಹುದು ಮತ್ತು ಅಳಿವಿನಂಚಿನಲ್ಲಿರುವ ಒಂದು ಸಮುದಾಯವನ್ನು ಉಳಿಸಬಹುದು. 'ಕುಪೋಷಣೆಯೇ ಭಾರತವನ್ನು ಬಿಟ್ಟು ತೊಲಗು...' ಜಾಗೃತಿ ಮನೆ ಮನೆಗಳನ್ನು, ಮನ ಮನಗಳನ್ನು ತಟ್ಟಬೇಕು...

ವರನ ಗುರಿಕಾರನಿಂದ ತಾಳಿ ಭಾಗ್ಯ!

ಹಿಂದಿನ ಕಾಲದಲ್ಲಿ ಕೊರಗ ಸಮುದಾಯದ ಎಲ್ಲ ಕಾರ್ಯಗಳಲ್ಲೂ ಕುಟುಂಬದ ಗುರಿಕಾರನೇ (ಮುಖ್ಯಸ್ಥ) ಪ್ರಮುಖನಾಗಿದ್ದ. ಯಾವುದೇ ಕಾರ್ಯಕ್ರಮಗಳಿದ್ದರೂ ಗುರಿಕಾರನ ಉಪಸ್ಥಿತಿ ಬೇಕೆ ಬೇಕು. ಕುಟುಂಬದ ಪ್ರತಿ ಆಗು - ಹೋಗುಗಳಿಗೆ ಅವನೇ ಜವಾಬ್ದಾರ. ಕುಟುಂಬವನ್ನು ಸನ್ನಡತೆಯಲ್ಲಿ ಮುನ್ನಡೆಸುವುದು, ತಪ್ಪಿ ನಡೆದಾಗ ತಿದ್ದಿ ಬುದ್ಧಿ ಹೇಳುವುದು, ಆಚಾರ ವಿಚಾರಗಳನ್ನು ತಿಳಿಸಿ ಹೇಳುವುದು, ಕುಟುಂಬವನ್ನು ಒಂದು ಗೂಡಿಸಿ ಪಾಲಿಸುವುದು ಆತನ ಕರ್ತವ್ಯ.

ಆ ಗುರಿಕಾರನ ಜವಬ್ಧಾರಿ ಯಾವ ರೀತಿಯ ಉತ್ಕೃಷ್ಟ (ಶ್ರೇಷ್ಠ) ಮಟ್ಟದಲ್ಲಿತ್ತು ಎಂದರೆ, ಮದುಮಗಳ ಕೊರಳಿಗೆ ತಾಳಿ ಕಟ್ಟುವುದು ಮದುಮಗನಲ್ಲ! ಬದಲಾಗಿ ಮದುಮಗನ ಗುರಿಕಾರ!!
ಆಗ ಸಣ್ಣ ಪ್ರಾಯದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಡುವುದು ರೂಢಿಯಾಗಿತ್ತು. ಹುಡುಗಿಗೆ ಎಂಟು ವರ್ಷ, ಗಂಡಿಗೆ ಹತ್ತು ವರ್ಷ ತುಂಬಿತೆಂದರೆ ಮದುವೆ. ಗಂಡು ಕೂಡ ಸಣ್ಣ ಪ್ರಾಯದವನಾಗಿರುತ್ತಿದ್ದರಿಂದ ಮದುವೆಯಾಗಿ ಬಂದ ಆ ಚಿಕ್ಕ ಹುಡುಗಿಗೆ ಸರಿ - ತಪ್ಪುಗಳನ್ನು ತಿದ್ದಿ ಗುರಿಕಾರನೇ ಬುದ್ದಿ ಹೇಳಬೇಕಾಗಿತ್ತು. ಆದ್ದರಿಂದ ಆ ಕಾಲದಲ್ಲಿ ತಾಳಿ ಕಟ್ಟುವುದು ಗುರಿಕಾರನಿಗೆ ಅನಿವಾರ್ಯತೆಯಾಗಿತ್ತು. ಆ ಕಾಲಕ್ಕೆ ಅದು ಪ್ರಸ್ತುತವೂ ಆಗಿತ್ತು. ಆದರೆ, ಈಗ ಬಾಲ್ಯ ವಿವಾಹವೂ ಇಲ್ಲ. ಆ ಕ್ರಮವೂ ಇಲ್ಲ! ಸಮುದಾಯ ತನ್ನ ಆ ಒಂದು ಸಂಪ್ರದಾಯವನ್ನು ಬದಿಗಿರಿಸಿ ಪ್ರಗತಿಪರ ಹಾದಿಯಲ್ಲಿ ನಡೆಯುತ್ತಿದೆ.
- ಹೃದಯ

ಕೊರಗರ ಡೋಲಿನ (ಕೊರಗರು ಡೋಲಿಗೆ 'ಕಡ್ಡಾಯಿ' ಎನ್ನುತ್ತಾರೆ) ಕುರಿತು ಹಲವಾರು ಕಥೆಗಳು ಜನಪದರ ಬಾಯಿಯಲ್ಲಿ ಹರಿದಾಡುತ್ತಿತ್ತು. ಮನರಂಜನೆಗೋ ವಾಸ್ತವವೋ ಅಂತೂ ಬಾಯಿಯಲ್ಲಿ ಚಾಲ್ತಿಯಲ್ಲಿತ್ತು. ಒಂದು ಕಾಲದಲ್ಲಿ ಕೊರಗ ಜನಾಂಗವು ಲೋಹದ ಕಡ್ಡಾಯಿ ಬಳಸುತ್ತಿದ್ದರು ಎಂಬಇತಿಹಾಸಕ್ಕೆ ಪೂರಕವಾದ ಮೌಖಿಕ ಕಥೆಯೊಂದು ನಿಮಗಾಗಿ..

ಉಡುಪಿ ಜಿಲ್ಲೆಯ ಹಿರಿಯಡ್ಕ ಗ್ರಾಮದ, ಪಡ್ಡಂಬೂಡು ಜೈನ ಮನೆತನದ ವ್ಯಾಪ್ತಿಯಲ್ಲಿ ಅಜಲು ಚಾಕರಿ ಮಾಡುತ್ತಿದ್ದ ಕೊರಗರು 'ಕಂಚಿನ ಕಡ್ಡಾಯಿ' ಹೊಂದಿದ್ದರು. ಕ್ರಿ ಶ 1783 - 84 ರಲ್ಲಿ ಟಿಪ್ಪು ಸುಲ್ತಾನನ ಕಡೆಯವರು ಕರಾವಳಿ ಕರ್ನಾಟಕದತ್ತ ದಾಳಿ ನಡೆಸಿದರು. ಒಮ್ಮೆ ಸುಲ್ತಾನನ ದಂಡು ಹಿರಿಯಡ್ಕಕ್ಕೆ ಭಾಗದತ್ತ ಆಗಮಿಸಿ, ಲೋಹದ ಮೂರ್ತಿ, ಲೋಹದ ಸರಂಜಾಮುಗಳನ್ನು - ಮದ್ದು ಗುಂಡು ತಯಾರಿಸಲು ಬೆಳ್ತಂಗಡಿ ಸಮೀಪದ ಜಮಾಲಗಡ ಕೋಟೆಗೆ ಕೊಂಡೊಯ್ದಿದ್ದರು. ಇದನ್ನರಿತ ಜೈನ ಆಳ್ವಿಕೆಯ ಬೀಡಿನವರು ಕಂಚಿನ ಕಡ್ಡಾಯಿ ಸುಲ್ತಾನರ ಪಾಲಾಗಬಾರದೆಂಬ ಮುಂಜಾಗ್ರತೆಯಿಂದಾಗಿ - ಕೊರಗರಿಗೆ ಕಡ್ಡಾಯಿಯನ್ನು ಬೀಡಿನ ಬಾವಿಗೆ ಹಾಕುವಂತೆ ಹೇಳಿದರು. ಹೀಗೆ ಕೊರಗರ ಕಂಚಿನ ಕಡ್ಡಾಯಿ ನೀರು ಪಾಲಾಯ್ತು. ಕಳೆದುಕೊಂಡ ಕಂಚಿನ ಕಡ್ಡಾಯಿ ಮತ್ತೆಂದೂ ದಕ್ಕಿಸಿಕೊಳ್ಳಲಾಗಿಲ್ಲ. ಇದನ್ನು ಬಾಯ್ದೆರೆಯ ಕಥೆಯಾಗಿ ಕೊರಗ ಜನಾಂಗದವರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಕಂಚಿನ ಕಡ್ಡಾಯಿ ಮಾತ್ರವಲ್ಲ, ಕಂಚಿನ ಪಾತ್ರೆಗಳೂ ಕೊರಗರಲ್ಲಿ ವ್ಯಾಪಕ ಬಳಕೆಯಲ್ಲಿತ್ತು. ಮಂಗಳೂರು ತಾಲೂಕಿನ ಕಡಂದಲೆ ಗ್ರಾಮದ ಸಚ್ಚೇರಿಪೇಟೆ ಕೊರಗರ ಕಾಲೋನಿಯ ಪ್ರತಿ ಕೊಟ್ಟ (ಮನೆ) ಕೊಟ್ಟದಲ್ಲೂ ಕಂಚಿನ ಬಟ್ಟಲು ಉಪಯೋಗಿಸುತ್ತಿದುದನ್ನು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ.
- ಹೃದಯ

ಕಾಮೆಂಟ್‌ಗಳಿಲ್ಲ: