ಮಂಗಳವಾರ, ನವೆಂಬರ್ 29, 2011
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆಯಾದುದು ಸಂತಸದ ಸಂಗತಿ. ಕರ್ನಾಟಕ ಜಾನಪದ ಚರಿತ್ರೆಯಲ್ಲಿ ಇದೊಂದು ಚಾರಿತ್ರಿಕವಾದ ಘಟನೆ . ವೆಬ್ ಸೈಟ್ ಕಾಲ ಕಾಲಕ್ಕೆ ಅಪ್ ಡೇಟ್ ಆಗುವ ಮೂಲಕ ಜಾನಪದ ಜಗತ್ತಿನ ಸಂಗತಿಗಳನ್ನು ನಿರಂತರವಾಗಿ
ವೆಬ್ ಹುಡುಕಾಟಗಾರರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆಗಿ ಇಷ್ಟು ಕಡಿಮೆ ಅವಧಿಯಲ್ಲಿ ಇಂತಹ ಬೆಳವಣಿಗೆಗೆ ಕಾರಣರಾದ ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರ ಕ್ರಿಯಾಶೀಲತೆಯನ್ನು ಮೆಚ್ಚಬೇಕು. ಕನ್ನಡ ಜಾನಪದ ಬ್ಲಾಗ್ ನಲ್ಲಿ ವೆಬ್ ಸೈಟ್ ಲಿಂಕನ್ನು ಕೊಡಲಾಗಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆಗೆಯಾದ
ಈ ಸಂದರ್ಭದಲ್ಲಿ ಮಾನ್ಯ ಕುಲಪತಿಗಳಿಗೂ ಮತ್ತು ಅದಕ್ಕೆ ಕಾರಣರಾದ ತಾಂತ್ರಿಕ ವರ್ಗಕ್ಕೂ ಕನ್ನಡ ಜಾನಪದ ಬ್ಲಾಗ್ ಅಭಿನಂದನೆಗಳನ್ನು ತಿಳಿಸುತ್ತದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಕುರಿ ಕಾಯುವ ಯುವಕನ ಜಾಣ್ಮೆ ಒಮ್ಮೆ ಮಗಧ ರಾಜ್ಯಕ್ಕೆ ಒಬ್ಬ ಘನ ಪಂಡಿತ ಬರುತ್ತಾನೆ. ಆತನು ತನ್ನ ವಿದ್ವತ್ತಿನಿಂದ ಹಲವು ಪಂಡಿತರನ್ನು ಸೋಲಿಸಿ ಕೀರ್ತಿ ಪಡೆದವನು. ಆತ ರಾ...
1 ಕಾಮೆಂಟ್:
ಕನ್ನಡ ಜಾನಪದ ಲೋಕಕ್ಕೆ, ಜಾನಪದ ವಿಶ್ವವಿದ್ಯಾಲಯದ ಮುಖಾಂತರ ನಾವೆಲ್ಲಾ ಕೊಡಬಹುದಾದ ಕಿರು ಕಾಣಿಕೆ ಇದು. ಎಲ್ಲೋ, ಯಾರೂ ನೋಡದ ಊರಿನ, ಯಾರೂ ನೋಡದ ಜನಪದ ಬೆಡಗನ್ನು ಎಲ್ಲರ ಮುಂದೆ ಬಿಚ್ಚಿಟ್ಟು ಮಾನವನ ಬದುಕನ್ನು ಯಾಂತ್ರಿಕತೆಯಿಂದ ವಿಮುಕ್ತಗೊಳಿಸಿ, ಮಾನವೀಯತೆಯ ಮಾಂತ್ರಿಕತೆಗೆ ಮನಸೋಲುವಂತೆ ಮಾಡುವ ತಾಕತ್ತು ಈ ಅಂತರ್ ಜಾಲ ತಾಣಕ್ಕೂ, ವಿಶ್ವವಿದ್ಯಾಲಯಕ್ಕೂ, ಕನ್ನಡಿಗರಿಗೂ ಬರುವಂತಾಗಲಿ.
- ಹರೀಶ್ ಗಂಗಭೈರಯ್ಯ.
ಕಾಮೆಂಟ್ ಪೋಸ್ಟ್ ಮಾಡಿ