ಮಂಗಳವಾರ, ಸೆಪ್ಟೆಂಬರ್ 26, 2017

ಸಾರ್ವಜನಿಕ ಬ್ಯಾಂಕುಗಳ ವಿಲೀನ: ಅಕಾಲಿಕ ಮಧ್ಯಪ್ರವೇಶ


 ಅನುಶಿವಸುಂದರ್
Image result for public banks
ಬಂಡವಾಳದ ಕೊರತೆಯಿಂದ ಬಳಲುತ್ತಿರುವ ಸಾರ್ವಜನಿಕ ಬ್ಯಾಂಕುಗಳನ್ನು ವಿಲೀನಗೊಳಿಸುವುದರಿಂದ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಲಿವೆ.


ದೊಡ್ಡದೊಡ್ಡ ಕಾರ್ಪೊರೇಟ್ ಕಂಪನಿಗಳು ತಮಗೆ ಕೊಟ್ಟಿರುವ ಸಾಲಗಳನ್ನು ತೀರಿಸದ ಪರಿಸ್ಥಿತಿಂiಲ್ಲಿರುವುದರಿಂದ ಅಥವಾ ತೀರಿಸುವ ಉದ್ದೇಶವನ್ನೇ ತೋರದಿರುವುದರಿಂದ ಸಾರ್ವಜನಿಕ ಬ್ಯಾಂಕುಗಳು ಮರುಪಾವತಿಯಾಗದ ಸಾಲಗಳ ಹೊರೆಯಲ್ಲಿ ಸಿಕ್ಕಿ ಬಳಲುತ್ತಿವೆ. ಇಂಥಾ ಹೊತ್ತಿನಲ್ಲಿ ಕೇಂದ್ರ ಸರ್ಕಾರದ ಸಚಿವ ಸಂಪುಟವು ಸಾರ್ವಜನಿಕ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಪರ್ಯಾಯ ಮಾರ್ಗ ವೊಂದನ್ನು ಘೋಷಿಸಿದೆ. ಇದರಲ್ಲಿ ಯಾವ್ಯಾವ ಬ್ಯಾಂಕುಗಳ ನಿರ್ವಹಣಾ ಮಂಡಳಿಗಳು ವಿಲೀನದ ಪ್ರಸ್ತಾಪವನ್ನು ಮುಂದಿಟ್ಟಿವೆಯೋ ಅವೆಲ್ಲಕ್ಕೂ ತಾತ್ವಿಕ ಒಪ್ಪಿಗೆಯನ್ನೂ ನೀಡಿಬಿಡುವುದೂ ಸೇರಿಕೊಂಡಿದೆ. ಇದು ಅತ್ಯಂತ ಅಕಾಲಿಕ-ಕಾಲಗೇಡಿ ಕ್ರಮವಾಗಿದೆ. ಇಂದು ಭಾರತದ ಸಾರ್ವಜನಿಕ ಬ್ಯಾಂಕುಗಳನ್ನು ಕಳವಳಕ್ಕೀಡುಮಾಡಿರುವುದು ದೊಡ್ಡ ದೊಡ್ಡ ಕಂಪನಿಗಳಿಗೆ ಕೊಟ್ಟಿರುವ ಸಾಲಗಳು ಮರುಪಾವತಿಯಾಗದಿರುವುದು. ಸಾಲಗಳನ್ನು ಮತ್ತು ಅದರ ಮೇಲಿನ ಬಡ್ಡಿಗಳನ್ನು ವಸೂಲಿಮಾಡಿ  ಬ್ಯಾಂಕುಗಳಿಗೆ ಬಂಡವಾಳವು ವಾಪಸ್ ಹರಿದುಬರುವಂತೆ ಮಾಡುವ ಮೂಲಕ ಬ್ಯಾಂಕುಗಳ ಸಾಲ ನೀಡುವ ಸಾಮರ್ಥ್ಯವನ್ನು ಹೆಚ್ಚಿಸಿ ಮತ್ತೆ ಆರ್ಥಿಕತೆಯಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಮಾರ್ಗೋಪಾಯಗಳೇನು ಎಂಬುದೇ ಇಂದು ಭಾರತದ ಆರ್ಥಿಕತೆಯ ಮುಂದಿರುವ ಪ್ರಧಾನ ಪ್ರಶ್ನೆ. ಸಾರ್ವಜನಿಕ ಬ್ಯಾಕುಗಳನ್ನು ತ್ವರಿತವಾಗಿ ವಿಲೀನ ಮಾಡುವ ಮೂಲಕ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕುವುದಿಲ್ಲ. ಬದಲಿಗೆ ಕ್ರಮದಿಂದ ವಿಲೀನಗೊಂಡ ಬ್ಯಾಂಕುಗಳಲ್ಲಿ ಮರುಪಾವತಿಯಾಗದ ಸಾಲದ ಹೊರೆಗಳು ಒಂದೇ ಕಡೆ ಕೇಂದ್ರೀಕರಣಗೊಳ್ಳುವ ಅಪಾಯವು ಹೆಚ್ಚುತ್ತದೆ

ಒಂದು ವಿಲೀನ ಕ್ರಮವು ಯಶಸ್ವಿಯಾಗಬೇಕೆಂದರೆ ಅದನ್ನು ಸೂಕ್ತ ಸಮಯದಲ್ಲಿ ಮಾಡಬೇಕು. ಮರುಪಾವತಿಯಾಗದ ಸಾಲದ ಹೊರೆಯನ್ನು ಹೊತ್ತಿರುವ ಎರಡು ಬ್ಯಾಂಕುಗಳನ್ನು ವಿಲೀನ ಮಾಡುವ ಮೂಲಕ ಅವುಗಳ ಆಯ-ವ್ಯಯದ ಗಾತ್ರ ಹೆಚ್ಚುವುದು ಮಾತ್ರವಲ್ಲದೆ ಒಟ್ಟಾರೆ ಖಾತೆಯಲ್ಲಿ ಮರುಪಾವತಿಯಾಗದ ಸಾಲದ ಅನುಪಾತವೂ ಹೆಚ್ಚುತ್ತದೆ. ಬಗೆಯ ಸಾಲ ಹೊತ್ತ ಬ್ಯಾಂಕುಗಳ ವಿಲೀನದಿಂದ ದೊಡ್ಡ ಆಯ-ವ್ಯಯ ಪಟ್ಟಿ ಸೃಷ್ಟಿಯಾಗುವುದು ಬಿಟ್ಟರೆ ಅವುಗಳ ಹಣಕಾಸು ಪರಿಸ್ಥಿತಿಗಳು ಮಾತ್ರ ಒಂದಿನಿತೂ ಸುಧಾರಿಸುವುದಿಲ್ಲ. ಮರುಪಾವತಿಯಾಗದ ಸಾಲದ ಕೇಂದ್ರೀಕರಣವು ಸಮಯದಲ್ಲಿ ಬ್ಯಾಂಕುಗಳ ಪರಿಸ್ಥಿತಿಯನ್ನು ಹೇಗೆ ಸುಧಾರಿಸಬಲ್ಲದು? ಎಲ್ಲಕ್ಕಿಂತ ಹೆಚ್ಚಾಗಿ ಬ್ಯಾಂಕುಗಳ ಪರಿಸ್ಥಿತಿಯನ್ನು ಸುಧಾರಿಸಲು ಹೂಡಬೇಕಿರುವ ಬಂಡವಾಳದ ಪ್ರಮಾಣವನ್ನು ವಿಲೀನವು ಹೇಗೆ ಕಡಿತಗೊಳಿಸಬಲ್ಲದು?

ಉದಾಹರಣೆಗೆ ವರ್ಷ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ)ನೊಂದಿಗೆ ಅವುಗಳ ಸಹವರ್ತಿ ಬ್ಯಾಂಕುಗಳು ವಿಲೀನಗೊಂಡವುಇದರಿಂದ ಎಸ್ಬಿಐ   ಒಟ್ಟಾರೆ ಆಯ-ವ್ಯಯ ಪಟ್ಟಿಯ ಗಾತ್ರ ಹೆಚ್ಚಾದದ್ದು ಮಾತ್ರವಲ್ಲದೆ ಒಟ್ಟಾರೆಯಾಗಿ ಮರುಪಾವತಿಯಾಗದ ಸಾಲದ ಅನುಪಾತವ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿತು. ಎಸ್ಬಿಐ ನೊಂದಿಗೆ ಅವುಗಳ ಸಹವರ್ತಿ ಬ್ಯಾಂಕುಗಳ ವಿಲೀನದ ಶಿಫಾರಸ್ಸನ್ನು ನರಸಿಂಹಮ್ ಸಮಿತಿ ೧೯೯೧ರಲ್ಲೇ ನೀಡಿತ್ತು. ಏಳು ಸಹವರ್ತಿ ಬ್ಯಾಂಕುಗಳನ್ನು ಸ್ವಾತಂತ್ರ್ಯಪೂರ್ವದಲ್ಲಿ ಅಂದಿನ ರಾಜಸಂಸ್ಥಾನಗಳು ಸ್ಥಾಪಿಸಿದ್ದವುಸ್ವಾತಂತ್ರ್ಯಾನಂತರದಲ್ಲಿ ಅವೆಲ್ಲ್ಲವನ್ನೂ ರಾಷ್ಟ್ರೀಕರಿಸಲಾಗಿತ್ತು. ವಾಸ್ತವವಾಗಿ ಸಹವರ್ತಿ ಬ್ಯಾಂಕುಗಳು ತಮ್ಮ ನಿಷ್ಖ್ರಿಯ ಸಂಪತ್ತುಗಳ(ಎನ್ಪಿಎ- ಮರುಪಾವತಿಯಾಗದ ಸಾಲದ ಮತ್ತೊಂದು ಹೆಸರು- ಅನು)ಪ್ರಮಾಣವನ್ನು ಕಡಿಮೆಗೊಳಿಸಿಕೊಳ್ಳುವ ತನಕ ಕಾದಿದ್ದು ನಂತರ ವಿಲೀನಗೊಳಿಸಿಕೊಳ್ಳುವುದರಲ್ಲೇ ಎಸ್ಬಿಐ ಹಿತಾಸಕ್ತಿಯು ಅಡಗಿತ್ತು. ೨೦೧೬-೧೭ರಲ್ಲಿ ಎಸ್ಬಿಐನ ಒಟ್ಟಾರೆ ಲಾಭವು ವಿಲೀನಗೊಂಡ ಸಹವರ್ತಿ ಬ್ಯಾಂಕುಗಳ ಒಟ್ಟು ನಷ್ಟಕ್ಕಿಂತ ಕಡಿಮೆ ಇತ್ತು. ಇತರ ಸಾರ್ವಜನಿಕ ಬ್ಯಾಂಕುಗಳು ಎಸ್ಬಿಐ ನಷ್ಟು ದೊಡ್ಡ ಗಾತ್ರದವಲ್ಲ. ಆದ್ದರಿಂದ ಅವುಗಳು ಇಂಥಾ ಪೆಟ್ಟನ್ನು ತಡೆದುಕೊಳ್ಳಲಾರವು. ಇದೊಂದು ವಿಶೇಷ ಪ್ರಕರಣವಾಗಿದ್ದು ಪರಸ್ಪರ ಸಂಬಂಧವಿರದ ಎರಡು ಬ್ಯಾಂಕುಗಳ ವಿಲೀನವೂ ಇಷ್ಟು ಸರಳವಾಗಿರುವುದಿಲ್ಲ.

ಎಸ್ಬಿಐ ಸಮೂಹವು ಒಂದೇ ಲಾಂಛನವನ್ನು ಮತ್ತು ಬ್ರಾಂಡುಗಳನ್ನು ಮತ್ತು ಒಂದೇ ರೀತಿಯ ಮಾಹಿತಿ ತಂತ್ರಜ್ನಾವನ್ನು ಬಳಸುತ್ತಿದ್ದವು. ಅವುಗಳ ನಡುವೆ ವಿಲೀನಕ್ಕೆ ಮೊದಲೇ ಒಂದು ಕೇಂದ್ರೀಕೃತ ಆಡಳಿತ ರಚನೆಯು ಚಾಲ್ತಿಯಲ್ಲಿತ್ತು ಮತ್ತು ಸಹವರ್ತಿ ಬ್ಯಾಂಕುಗಳ ಮುಖ್ಯ ತೀರ್ಮಾನಗಳಲ್ಲಿ ಎಸ್ಬಿಐನ ಮಧ್ಯಪ್ರವೇಶಕ್ಕೆ ಅವಕಾಶವಿತ್ತು. ಆದರೂ ಬೃಹತ್ ಗಾತ್ರದ ವಿಲೀನವು ನೀಡಿರುವ ಭರವಸೆಗಳು ಈಡೇರಬೇಕೆಂದರೆ ಸಿಬ್ಬಂದಿ ಮತ್ತು ಶಾಖೆಗಳ ಸಾಮರ್ಥ್ಯಗಳು ಉಪಯುಕ್ತರೀತಿಯಲ್ಲಿ ಸದ್ಬಳಕೆಯಾಗಬೇಕು. ಅದಕ್ಕಾಗಿ ಸುದೀರ್ಘ ಕಾಲ ಕಾಯಬೇಕು. ಅವುಗಳ ಸಂಘಟನಾ ಸಂಸ್ಕೃತಿಗಳು ಬೆಸೆಯಬೇಕು. ಇವೆಲ್ಲಕ್ಕೂ ಸಾಕಷ್ಟು ಸಮಯಬೇಕಿದ್ದು ಸಾಕಷ್ಟು ಗಮನವನ್ನೂ ಕೊಡಬೇಕಾಗುತ್ತದೆ. ಇವೆಲ್ಲದರ ನಡುವೆ ಮರೆಯಬಾರದ ಮತ್ತೊಂದು ನೈಜ ಸಂಗತಿಯೆಂದರೆ ೧೯೯೧ರ ನಂತರ ನಡೆದಿರುವ ವಿಲೀನಗಳು ವಿಲೀನಗೊಂಡ ಸಂಸ್ಥೆಗಳಲ್ಲಿ ಹೆಚ್ಚಿನ ಸಾಮರ್ಥ್ಯವನ್ನೇನೂ ಹುಟ್ಟುಹಾಕಿಲ್ಲ.

ಮರುಪಾವತಿಯಾಗದ ಸಾಲದ ಸಮಸ್ಯೆಗಳ ಜವಾಬ್ದಾರಿಯನ್ನು ಸಾಮಾನ್ಯವಾಗಿ ಸಾರ್ವಜನಿಕ ಬ್ಯಾಂಕುಗಳ ಮತ್ತು ಅವುಗಳ ಭ್ರಷ್ಟ ಮತ್ತು ಅಸಮರ್ಥ ನಿರ್ವಾಹಕ ಅಧಿಕಾರಿಗಳ ತಲೆಗೆ ಮಾತ್ರ ಕಟ್ಟಲಾಗುತ್ತದೆ. ಇದರಲ್ಲಿ ಒಂದಷ್ಟು ಸತ್ಯವೂ ಇರಬಹುದು. ಸಾರ್ವಜನಿಕ ಬ್ಯಾಂಕುಗಳು ಸಾಲ ನೀಡಿದ ಬಹಳಷ್ಟು ಕಾರ್ಪೊರೇಟ್ ಯೋಜನೆಗಳಲ್ಲಿ ಲಾಭದಾಯಕತೆ ಇರಲಿಲ್ಲ. ಆದರೂ ಅವುಗಳಿಗೆ ನಷ್ಟ ಅನುಭವಿಸಿದಕ್ಕೆ ಇರುವ ಪ್ರಧಾನ ಕಾರಣಗಳು ಬ್ಯಾಂಕುಗಳ ನಿಯಂತ್ರಣದಲ್ಲಿಯೇನೂ ಇರಲಿಲ್ಲ. ಖಂಡಿತವಾಗಿಯೂ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗಗಳ ಪಾಲೂ ಇದರಲ್ಲಿದೆ. ಆದರೆ ಅದೇ ಅವುಗಳ ನಷ್ಟಕ್ಕೆ ಮೂಲಕಾರಣವಲ್ಲ. ಹಿಂದೆ ದೊಡ್ಡ ದೊಡ್ಡ ಅಭಿವೃದ್ಧಿ ಯೋಜನೆಗಳಿಗೆ ಅಭಿವೃದ್ಧಿ ಯೋಜನೆಗಳ ಹಣಕಾಸು ಸಂಸ್ಥೆಗಳು (ಡೆವಲೆಪ್ಮೆಂಟ್ ಫೈನಾನ್ಷಿಯಲ್ ಇನ್ಸ್ಟಿಟ್ಯೂಷನ್ಸ್-ಡಿಎಫ್) ಕಂತಿನ ಸಾಲವನ್ನು ಒದಗಿಸುತ್ತಿದ್ದವು. ನಿಧಾನವಾಗಿ ಜಾಗವನ್ನು ವಾಣಿಜ್ಯ ಬ್ಯಾಂಕುಗಳು ಆಕ್ರಮಿಸಲಾರಂಭಿಸಿದವು. ೨೦೦೦ದ ವೇಳೆಗೆ ಬಹಳಷ್ಟು ಡಿಎಫ್ ಐಗಳು ಒಂದೋ ಸಾಲ ನೀಡುವುದನ್ನು ನಿಲ್ಲಿಸಿದ್ದವು, ಅಥವಾ ಮುಚ್ಚಿಹೋಗಿದ್ದವು ಅಥವಾ ವಾಣಿಜ್ಯ ಬ್ಯಾಂಕುಗಳಾಗಿ ಪರಿವರ್ತನೆಗೊಂಡಿದ್ದವು. ಇದು ಹಣಕಾಸು ನೀತಿಯ ಉದಾರೀಕರಣದ ನೇರ ಪರಿಣಾಮವಾಗಿತ್ತು. ವಾಣಿಜ್ಯ ಬ್ಯಾಂಕುಗಳು ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳಿಗೆ ಸಾಲ-ಬಂಡವಾಳವನ್ನು ನೀಡಲು ಪ್ರಾರಂಭಿಸಿದವು. ೨೦೦೦ದ ಮಧ್ಯಭಾಗದಲ್ಲಿ ಕಂಡುಬಂದ ಹೂಡಿಕೆಯ ಉಬ್ಬರಕ್ಕೆ ಇದೇ ಬ್ಯಾಂಕುಗಳೇ ಸಾ-ಬಂಡವಾಳವನ್ನು ಒದಗಿಸಿದ್ದವು. ಅದರ ಪರಿಣಾಮವಾಗಿ ಈಗ ಬ್ಯಾಂಕುಗಳ ಲಾಭದ ಪ್ರಮಾಣ ಕುಸಿಯುತ್ತಿದೆ ಮತ್ತು ಮರುಪಾವತಿಯಾಗದ ಸಾಲದ  ಅರ್ಥಾತ್ ನಿಷ್ಕ್ರಿಯ ಸಂಪತ್ತಿನ ಪ್ರಮಾಣ ಹೆಚ್ಚಾಗುತ್ತಿದೆ. ನಿಜ ಹೇಳಬೇಕೆಂದರೆ ಕೆಲವು ಬ್ಯಾಂಕುಗಳು ಸಾಲವನ್ನು ವಸೂಲಿ ಮಾಡಲು ಮತ್ತು ಪುನರ್ ರಚನೆ ಮಾಡಲು ಗಂಭೀರ ಪ್ರಯತ್ನಗಳನ್ನು ಹಾಕುತ್ತಿವೆ. ಸಾಲ ಮರುಪಾವತಿಯಾಗಲಾರದ ಪ್ರಕರಣಗಳಲ್ಲಿ ೨೦೧೬ರ ಹಣಕಾಸು ದಿವಾಳಿ ಸಂಹಿತೆಯ ಪ್ರಕಾರ ಪ್ರಕ್ರಿಯೆಗಳು ಜಾರಿಯಲ್ಲಿವೆ. ಕೆಲವು ನಿರ್ದಿಷ್ಟ ಸಾಲ ಖಾತೆಗಳ ಬೆನ್ನುಹತ್ತಬೇಕೆಂದು ರಿಸರ್ವ್ ಬ್ಯಾಂಕು ಮಾಡಿರುವ ಸೂಚನೆಗಳಿಂದಾಗಿಯೂ ಒಂದಷ್ಟು ಸಾಲವಸೂಲಿಯಾಗಬಹುದು. ಆದರೆ ಇವೆಲ್ಲಾ ಬಹಳ ದೀರ್ಘಕಾಲದ ಪ್ರಕ್ರಿಯೆಗಳು. ಕೆಲವು ಸಾಲಗಾರು ತಮ್ಮ ಆಸ್ತಿ ಮತ್ತು ವಹಿವಾಟುಗಳ ಮೇಲೆ ಬ್ಯಾಂಕುಗಳು ನಿಯಂತ್ರಣ ಸಾಧಿಸುವುದನ್ನು ತಡೆಗಟ್ಟಲು ನ್ಯಾಯಂಗದ ಮೊರೆ ಹೋಗಬಹುದು. ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳಿಗೆ ಹೆಚ್ಚಿನ ಬಂಡವಾಳ ಪೂರಣ ಮಾಡುವುದನ್ನು ಬಿಟ್ಟರೆ ಸರ್ಕಾರಕ್ಕೆ ಬೇರೆ ದಾರಿಯಿಲ್ಲ.

ಈವರೆಗೆ ಸರ್ಕಾರ ಮಾಡಿರುವುದೇನು? ೨೦೧೪ರ ಮಾರ್ಚ ವೇಳೆಗೆ ಸಾರ್ವಜನಿಕ ಮತ್ತು ಖಾಸಗಿ ವಾಣಿಜ್ಯ ಬ್ಯಾಂಕುಗಳೆಲ್ಲಾ ಸೇರಿ  ಕೊಡಮಾಡಿದ್ದ ಒಟ್ಟು ಸಾಲದಲ್ಲಿ ನಿಷ್ಕ್ರಿಯ ಸಂಪತ್ತಿನ (ಮರುಪಾವತಿಯಾಗದ ಸಾಲಗಳ) ಪ್ರಮಾಣ ಶೇ. ರಷ್ಟಿತ್ತು; ಅದು ೨೦೧೭ರ ಮಾರ್ಚ್ ವೇಳೆಗೆ ಶೇ. .೫ಕ್ಕೆ ಎಂದರೆ .೨೮ ಲಕ್ಷ ಕೋಟಿ ರೂ.ಗಳಿಗೆ ಏರಿತು. ೧೯೭೦ರ ಬ್ಯಾಂಕುಗಳ ರಾಷ್ಟ್ರೀಕರಣದ ನಂತರ ಕೈಗೊಳ್ಳಲಾದ ಅತ್ಯಂತ ಸಮಗ್ರ ಸುಧಾರಣ ಕ್ರಮ ವೆಂಬ ಹೆಗ್ಗಳಿಕೆಯೊಂದಿಗೆ ೨೦೧೫ರಲ್ಲಿ ನರೇಂದ್ರಮೋದಿ ಸರ್ಕಾರ ಪ್ರಾರಂಭಿಸಿದ ಇಂಧ್ರಧನುಷ್ ಯೋಜನೆ ಯು ಸ್ವಲ್ಪ ಮಟ್ಟಿನ ಪರಿಹಾರವನ್ನು ನೀಡಬಹುದೆಂದು ಎಣಿಸಲಾಗಿತ್ತು. ಎರಡು ವರ್ಷಗಳ ನಂತರ ಹಿಂತಿರುಗಿ ನೋಡಿದರೆ ಅಂಥದ್ದೇನೂ ಸಂಭವಿಸಿಲ್ಲ. ಇಂಧ್ರಧನುಷ್ ಯೋಜನೆಯು ಪ್ರಧಾನವಾಗಿ ಬ್ಯಾಂಕುಗಳಿಗೆ ಬಂಡವಾಳ ಪೂರಣ ಮಾಡುವುದರ ಮೇಲೆ ಮತ್ತು ಸಾರ್ವಜನಿಕ ಬ್ಯಾಂಕುಗಳ ನಿರ್ವಹಣಾ ಮಂಡಳಿಯ ನೇಮಕಾತಿಗೆ ಒಂದು ಸ್ವತಂತ್ರ ಪ್ರಕ್ರಿಯೆಯನ್ನು ರೂಪಿಸುವ ಸುತ್ತಾ ತನ್ನ ಗಮನವನ್ನು ಕೇಂದ್ರೀಕರಿಸಿತ್ತು. ಬಹಳಷ್ಟು  ಪರಿಣಿತರು ಪ್ರಾರಂಭದಲ್ಲೇ ಊಹಿಸಿದ್ದಂತೆ ನಾಲಕ್ಕು ವರ್ಷಗಳಲ್ಲಿ ಹಂತಹಂತವಾಗಿ ಒದಗಿಸಲು ನಿಗದಿಯಾದ ೭೦,೦೦೦ ಕೋಟಿ ರೂ. ಏನೇನೂ ಸಾಲದಾಗಿತ್ತು. ಈಗಾಗಲೇ ನೀಡಿರುವ ೧೦,೦೦೦ ಕೋಟಿ ರೂ.ಗಳ ಜೊತೆಜೊತೆಗೆ ಸಾರ್ವಜನಿಕ ಬ್ಯಾಂಕುಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮತ್ತಷ್ಟು ಹಣವನ್ನು ಬಿಡುಗಡೆ ಮಾಡುವುದಾಗಿ ಹಣಕಾಸು ಇಲಾಖೆಯು ಹೇಳಿದೆ. ಕೆಲವರು ಇದನ್ನು ಇಂದ್ರಧನುಷ್ . ಯೋಜನೆ ಎಂದೂ ಕರೆಯಲಾರಂಭಿಸಿದ್ದಾರೆ. ಆದರೆ ಸಮಸ್ಯೆ ಇರುವುದು ಬಂಡವಾಳ ಮರುಪೂರಣಕ್ಕೆ ಮತ್ತಷ್ಟು ಹಣಕಾಸು ಒದಗಿಸಬೇಕೋ ಬೇಡವೋ ಎಂಬುದಲ್ಲ. ಯಾವ ಸಮಯದಲ್ಲಿ ಒದಗಿಸಬೇಕೆಂಬುದೇ ನಿಜವಾದ ಪ್ರಶ್ನೆ. ಮತ್ತು ಬಂಡವಾಳ ಪೂರಣ ಮಾಡಲು ಇದೇ ಸರಿಯಾದ ಸಮಯವಾಗಿದೆ.

ಕೃಪೆ: Economic and Political Weekly,Sep 9, 2017. Vol. 52. No. 36.

                                                                                               








ಕಾಮೆಂಟ್‌ಗಳಿಲ್ಲ: