ಗುರುವಾರ, ಫೆಬ್ರವರಿ 12, 2015

ಎಂ ಡಿ ನಂಜುಂಡಸ್ವಾಮಿ ಅವರ ಜತೆ ರಹಮತ್ ತರೀಕೆರೆ ಸಂದರ್ಶನ

ಸಂದರ್ಶನ: ರಹಮತ್ ತರೀಕೆರೆ

ಎಂ ಡಿ ನಂಜುಂಡಸ್ವಾಮಿ ಅವರ ಜತೆ

ನೀವು ದೊಡ್ಡ ಫ್ಯೂಡಲ್ ಕುಟುಂಬದಿಂದ ಬಂದವರು ಅಂತ ಕೇಳಿದ್ದೇನೆ.

 ನಮ್ಮ ತಂದೆಯವರು ಮಹಾಂತದೇವರು ಅಂತ, ಮೊದಲನೇ ಪೀಳಿಗೆ ವಕೀಲರು. ೨೬ ವರ್ಷ ಶಾಸಕರಾಗಿದ್ದರು ಮೈಸೂರು ಜಿಲ್ಲೆಯಲ್ಲಿ. ಮತ್ತೆ ’ಫ್ಯೂಡಲ್’ ಅಂತ ಶಬ್ದ ಉಪಯೋಗಿಸಿದಿರಲ್ಲ, ಅದು ಕೇವಲ ಆಸ್ತಿಗೆ ಸಂಬಂಧಪಟ್ಟಂತೆ ಅನ್ವಯಿಸುತ್ತೆ. ನಮ್ಮ ತಾತನಿಗೆ ಸಾವಿರ ಎಕರೆ ಮೇಲಿತ್ತು ಭೂಮಿ. ಆ ಕಾರಣ ನಾನು ಹುಟ್ತಾನೇ ಒಬ್ಬ ಶಾಸಕನ ಮಗ ಮತ್ತು ಫ್ಯೂಡಲ್ ಲಾರ್ಡನ ಮೊಮ್ಮಗ(ನಗು). ಆಸ್ತಿ ದೃಷ್ಟಿಯಿಂದ ಫ್ಯೂಡಲ್ ಅಂತ ಕರೀಬಹುದೇ ಹೊರತು, ತಾತನ ವಿಚಾರಗಳು ತಂದೆಯ ವಿಚಾರಗಳು ಈ ಆಧಾರದ ಮೇಲೆ ಫ್ಯೂಡಲ್ ಅಂತ ಕರೆಯಕ್ಕೆ ಸಾಧ್ಯಾನೇ ಇಲ್ಲ. ಕಾರಣ, ನಮ್ಮ ಆ ಭಾಗದ ಜನ ಮೂಲತಃ ಉತ್ತರ ಕರ್ನಾಟಕದಿಂದ ಬಂದವರು. ಕಲ್ಯಾಣಕ್ರಾಂತಿ ಆದನಂತರ ಅಲ್ಲಿ ಗೊಂದಲಗಳಿದ್ದಾಗ ಬಂದವರು ಅಂತ ದಾಖಲೆಗಳಿವೆ. ಬಂದು ಗ್ರಾಮಸ್ಥಾಪನೆ ಮಾಡಿದರು. ಮಾಡರಹಳ್ಳಿ ಅಂತ, ಟಿ. ನರಸೀಪುರ ತಾಲ್ಲೂಕಲ್ಲಿ. ಅದೆಲ್ಲ ಕಪುಮಣ್ಣಿನ ಪ್ರದೇಶ. ಅಲ್ಲೇ ಬಂದು ಗ್ರಾಮಸ್ಥಾಪನೆ ಮಾಡೋಕೆ ಕಾರಣ, ಅವರ ವ್ಯವಸಾಯದ ಅಭ್ಯಾಸಗಳು, ಬೆಳೆ ಪದ್ಧತಿ. ಅವರು ಯಾವ ಮಣ್ಣಿಗೆ ಹೋಗಿದ್ರು ಅವೆಲ್ಲಾನೂ ಸಂಬಂಧ ಉಂಟು. ಉತ್ತರ ಕರ್ನಾಟಕದಲ್ಲಿನ ಬೆಳೆಗಳನ್ನ ನಮ್ಮ ಗ್ರಾಮದಲ್ಲಿ ನೀರಾವರಿ ಆಗಕೂ ಮುಂಚೆ ನಾನೆ ನೋಡಿದೀನಿ. ಅದೇ ಬಿಳಿಜೋಳ, ಕಡ್ಲೆ, ಕುಸುಬಿ, ದನಿಯಾ, ಹತ್ತಿ, ಕಬ್ಬು- ಕಪುಮಣ್ಣಲ್ಲಿ ಏನೇನು ಬೆಳೀತಾರೆ, ಅವನ್ನೆಲ್ಲ ಬೆಳೀತಾಯಿದ್ರು. ನಮ್ಮ ತಾತ ಕಟ್ಟಿದ ಮನೇನೆ ಸುಮಾರು ೨೦೦ ವರ್ಷದ್ದು ಇದೆ ಹಳ್ಳೀಲಿ. ಅದಕ್ಕಿಂತ ಎಷ್ಟು ವರ್ಷ ಹಿಂದೆ ಬಂದವರೋ ಗೊತ್ತಿಲ್ಲ. ಆ ಕಾರಣ ಭೂಮಿ ಯಾರಿಗೆ ಬೇಕಾದರೂ ಲಭ್ಯ ಇತ್ತು. ಆಗ ಭೂಮಿ ಕಷ್ಟದ ಆಸ್ತಿ ಆಗಿರಲಿಲ್ಲ. ಇದು ಒಂದು ದೃಷ್ಟಿಯಿಂದ ಫ್ಯೂಡಲ್ ಅಂತ ಕಾಣಿಸಬಹುದು. ಅಷ್ಟೇ ಹೊರತು, ಅವರು ಯಾವ ರೀತಿ ಜೀವನ ನಡೆಸಿದರು, ಏನು ವಿಚಾರ ಇಟ್ಟುಕೊಂಡಿದ್ರು, ಇದನ್ನೆಲ್ಲ ನೋಡಿದರೆ ಇನ್ನೂ ಶರಣ ಚಳುವಳಿಯ ಅಂಶಗಳು ಅವರಲ್ಲಿದ್ದವು ಅಂತ ಅನಿಸುತ್ತೆ.

ಶರಣ ಚಳುವಳಿಯ ಅಂಶಗಳು ಅಂದರೆ?

ಅಂದರೆ, ಹಳ್ಳಿ ಒಳಗಿನ ಸಂಬಂಧಗಳು, ಮತ್ತೆ ಜಾತಿ ಪದ್ಧತಿ ಬಗ್ಗೆ ಇದ್ದಂತಹ ಅವರ ಧೋರಣೆಗಳು, ಮತ್ತೆ ಈ ವ್ಯವಸ್ಥೆ ಬಗ್ಗೆ ಇದ್ದಂತಹ ಸಿಟ್ಟುಗಳು, ಹಳ್ಳೀ ಒಳಗೇನೆ ನಡೆಯೋವಂಥ ಕುತಂತ್ರಗಳನ್ನ ನಾಶ ಮಾಡೋವಂಥ ಘಟನೆಗಳು ಇವೆಲ್ಲಾನು.

ಇವೆಲ್ಲ ನೈತಿಕ ಉದಾರವಾದಿ ಗುಣಗಳೊ ಅಥವಾ ಚಳುವಳಿಯಿಂದ ಬಂದಂತಹವಾಗಿದ್ದವೋ?

ಒಂದು ಚಳುವಳಿಯ ಭಾಗವಾದ ಮೇಲೆ, ವ್ಯಕ್ತಿಯ ಗುಣಗಳು ಚಳುವಳಿಗೆ ವರ್ಗಾವಣೆಯಾಗೋದು, ಚಳುವಳಿಯ ಗುಣಗಳು ವ್ಯಕ್ತಿಗೆ ವರ್ಗಾವಣೆಯಾಗೋದು ನಿರಂತರವಾಗಿ ನಡೀತಾ ಇರ್ತದೆ. ಅದರ ಆಧಾರದ ಮೇಲೆ ಚಳುವಳಿ ಯಶಸ್ಸುಗಳಿಸೋದು ಅಥವಾ ಸೋಲೋದು ಅವಲಂಬಿತವಾಗಿರುತ್ತೆ. ಆ ಕಾರಣಾನೇ ಒಂದು ಚಾರಿತ್ರ್ಯದ ದೃಢತೆ ಚಳುವಳಿಯಲ್ಲಿರೋ ವ್ಯಕ್ತಿಗಳಲ್ಲೂ ಇರೋದು ಬಹಳ ಮುಖ್ಯ. ಅದನ್ನು ಕಳಕೊಂಡಂಥವರ ಸಂಖ್ಯೆ ಹೆಚ್ಚಾದಾಗ ಆ ಚಳುವಳಿ ನಾಶವಾಗಿ ಹೋಗುತ್ತೆ.

ತಂದೆಯವರು ಶಾಸಕರಾಗಿದ್ದರು ಅಂದಿರಿ. ಯಾವ ಪಕ್ಷವನ್ನು ಪ್ರತಿನಿದಿsಸ್ತಿದ್ರು?

ಸ್ವಾತಂತ್ರ್ಯ ಬರೋಕು ಮುಂಚೆ ಜಸ್ಟೀಸ್ ಪಾರ್ಟಿ ಅಂತ ಒಂದು ರಚನೆ ಆಗಿತ್ತು ತಮಿಳುನಾಡಿನಲ್ಲಿ ಮತ್ತು ಕರ್ನಾಟಕದಲ್ಲಿ. ಈ ನಾನ್ ಬ್ರಾಹ್ಮಿನ್ ಮೂಮೆಂಟ್  ತಮಿಳುನಾಡಲ್ಲೂ ಬಹಳ ಶಕ್ತಿಯುತವಾಗಿ ಸಂಘಟನೆ ಆಗಿತ್ತು. ಸರಕಾರವನ್ನು ರಚನೆ ಮಾಡಿತ್ತು. ಅದೇ ಒಂದು ಚಳುವಳಿ ಕರ್ನಾಟಕದಲ್ಲಿ ಇತ್ತು. ಹಳೇ ಮೈಸೂರಿನಲ್ಲೂ  ಮಹಾರಾಜರ ಕಾಲದಲ್ಲಿನಡೀತಾಇತ್ತು. ಆ ಕಾರಣಾನೇ ಸರೆಂವಿಶ್ವೇಶ್ವರಯ್ಯನವರ ಕಾಲದಲ್ಲಿ ಮೊದಲನೇ ಬಾರಿಗೆ ಮೀಸಲಾತಿ ಜಾರಿಗೆ ತಂದಾಗ, ನಮ್ಮ ತಂದೆಯವರು ಆ ಚಳವಳಿಯ ಭಾಗವಾಗಿದ್ದರು.

ಮಾಡರಹಳ್ಳಿಯ ಯಾವ ನೆನಪುಗಳು ನಿಮಗೆ ಇವೆ?

ಇಲ್ಲ, ನಾನು ಹುಟ್ಟಿದ್ದೇ ಮೈಸೂರು ಸಿಟಿನಲ್ಲಿ. ಅಷ್ಟೊತ್ತಿಗಾಗಲೇ ತಂದೆಯವರು ವಕೀಲರಾಗಿದ್ದರು. ಶಾಸಕರಾಗಿದ್ದರು. ಮೈಸೂರಲ್ಲಿ ವಾಸ ಮಾಡ್ತಾ ಇದ್ದೆವು. ರಜಾ ಬಂದಾಗಲೆಲ್ಲಾ ನಮ್ಮ ತಂದೆ ಹಳ್ಳಿಗೆ ಕರಕೊಂಡು ಹೋಗೋರು. ಜಮೀನೆಲ್ಲಾ ಸುತ್ತಾಡಾದು ಮಾಡ್ತಾ ಇದ್ದೆವು. ಅಷ್ಟೆ ಸಂಪರ್ಕ.

ನೀವು ಕಾನೂನುಶಾಸ್ತ್ರ ಓದಿದೀರಿ, ತಂದೆಯವರ ಒತ್ತಡದಿಂದಲಾ?

ನಾನು ಮೂಲತಃ ವಿeನದ ವಿದ್ಯಾರ್ಥಿ. ಅದರಲ್ಲೂ ನ್ಯಾಚುರಲ್ ಸೈನ್ಸಸ್ ಏನು ಕರೀತಾರೆ ಅದರ ವಿದ್ಯಾರ್ಥಿ. ನನ್ನ ಮೊದಲನೇ ಡಿಗ್ರಿ ವಿeನಾನೆ. ಆನಂತರ ತಂದೆಯವರ ಆಸೆಗೆ ಸ್ವಲ್ಪ ತಲೆಬಾಗಿ ಲಾ ಓದೋದಕ್ಕೆ ಶುರುಮಾಡಿದ್ದು.

ಕಾಲೇಜಲ್ಲಿ ನಿಮ್ಮ ಗುರುಗಳು ಯಾರು?

ಅಂಥ ಹೇಳಿಕೊಳ್ಳೋವಂಥ ಪ್ರಿಯವಾದ ಗುರುಗಳು ದುರದೃಷ್ಟವಶಾತ್ ನಮಗೆ ಯಾರೂ ಸಿಗಲಿಲ್ಲ. ಅವರೆಲ್ಲ ಪಕ್ಕದ ಮಹಾರಾಜ ಕಾಲೇಜಲ್ಲಿ ಇದ್ದರು. ಕುವೆಂಪು ಆವಾಗ ಅಸಿಸ್ಟೆಂಟ್ ಪ್ರೊಫೆಸರ್ ಅಲ್ಲಿ. ಆಗಲೇ ದೊಡ್ಡ ಹೆಸರು ಪಡೆದಿದ್ದರು. ಮತ್ತೆ ಅವರ ಸಭೆಗಳಿಗೆ ತಪ್ಪದೇನೇ ಹಾಜರಾಗುತ್ತಿದ್ದೆ.

೧೦೬೦ರ ದಶಕದ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದ ಚಟುವಟಿಕೆಗಳಲ್ಲಿ, ನಿಮ್ಮ ಹೆಸರ ಜತೆ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅಡಿಗರು ಕಡಿದಾಳು ಶಾಮಣ್ಣ ಹೀಗೆ ಅನೇಕ ಹೆಸರುಗಳು ಪ್ರಸ್ತಾಪವಾಗುತ್ತವೆ. ತೇಜಸ್ವಿಯವರ ಜತೆ ನಿಮ್ಮ ಒಡನಾಟ ಬಹಳ ಹೆಚ್ಚು. ಇಬ್ಬರೂ ರೈತರ ಬಗ್ಗೆ ಚಿಂತೆ ಮಾಡಿಕೊಂಡು ಬಂದೋರು. ನೀವು ರೈತಾಪಿ ಚಿಂತನೆಗೆ ಹೊರಳಲು ಏನು ಕಾರಣ?

 ನನಗೂ ತೇಜಸ್ವಿಗೂ ಪರಿಚಯ ಸುಮಾರು ೧೯೬೦ನೇ ಇಸ್ವಿಯಿಂದ. ಅಷ್ಟೊತ್ತಿಗಾಗಲೇ ನಾನು ಎಲ್‌ಎಲ್‌ಎಂ ಮುಗಿಸಿದ್ದೆ, ಕರ್ನಾಟಕ ಯೂನಿವರ್ಸಿಟಿಯಿಂದ. ಮುಗಿಸಿ ಜರ್ಮನಿ ಹೋಗಿಬಿಟ್ಟೆ ೪ ವರ್ಷ. ಅಲ್ಲಿಂದ ವಾಪಸು ಬರೋವಾಗಲೇನೆ ರೈತ ಸಂಘಟನೆ ಮಾಡಬೇಕು ವ್ಯವಸಾಯನೇ ಮಾಡಬೇಕು ಅಂತಲೇ ತೀರ್ಮಾನ ಮಾಡಿಕೊಂಡು ಬಂದಿದ್ದು. ಅಷ್ಟರಲ್ಲಿ ತೇಜಸ್ವಿಯವರು ವ್ಯವಸಾಯ ಶುರು ಮಾಡಿದ್ದರು. ಮತ್ತೆ ಸುಂದರೇಶ್, ನಮ್ಮ ರೈತಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರಲ್ಲ ಅವರೂ ವ್ಯವಸಾಯ ಶುರುಮಾಡಿದ್ದರು. ೧೬೫ರಲ್ಲಿ ನಾನೂ ವ್ಯವಸಾಯ ಶುರುಮಾಡಿದೆ.

ನೀವು ಮೂಲತಃ ಕಾನೂನಿನ ವಿದ್ಯಾರ್ಥಿ. ರೈತಪರ ಚಿಂತನೆಗೆ ಜರ್ಮನಿಯಲ್ಲಿ ಹೇಗೆ ಪ್ರೇರಣೆ ಸಿಕ್ತು?

ಕಾನೂನಲ್ಲಿ ನಾನು ಇಂಟರ್‌ನ್ಯಾಶನಲ್ ಲಾ ಅಂಡ್ ಇಂಟರ್‌ನ್ಯಾಶನಲ್ ರಿಲೇಶನ್ಸ್ ಅಧ್ಯಯನ ಮಾಡದೋನು. ಅದರಲ್ಲಿ ಸಾಮ್ರಾಜ್ಯಶಾಹಿ ಮಾಡ್ತಾ ಇರೊ ಜಾಗತಿಕ ಶೋಷಣೆ, ಇವೆಲ್ಲ ಸ್ಪಷ್ಟವಾಗಿ ಗೊತ್ತಾಗಲಿಕ್ಕೆ ಶುರುವಾಯಿತು. ಆಮೇಲೆ ಸ್ವಾತಂತ್ರ್ಯ ಬಂದ ಮೇಲೂ ಯಾವ ರೀತಿ ಕಲೋನಿಯಲಿಜಂ ಮುಂದುವರಿಸೋದರಲ್ಲಿ ಬಿಳೀ ರಾಷ್ಟ್ರಗಳೂ ಯಶಸ್ವಿಯಾಗಿದಾವೆ ಅನ್ನೋದು ಗೊತ್ತಾಯಿತು.

ಜರ್ಮನಿ ಕೂಡ ಒಂದು ಬಿಳೀರಾಷ್ಟ್ರವೆ. ಅಲ್ಲಿನ ಪಠ್ಯಕ್ರಮದಲ್ಲಿ ಇವೆಲ್ಲ ಇದ್ದವಾ?

ಯುಸೀ, ಇಂಟರ್‌ನ್ಯಾಶನಲ್ ಲಾದಲ್ಲಿ ಜರ್ಮನಿ ಪಠ್ಯಕ್ರಮ ಅಂತ ಏನಿರಲ್ಲ. ಎಲ್ಲಾ ದೇಶದಲ್ಲೂ ಒಂದೇ ಪಠ್ಯಕ್ರಮ ಇರಬೇಕಾಗುತ್ತೆ. ಜತೆಗೆ ನನ್ನ ಸುತ್ತ ಇದ್ದ ವಾತಾವರಣ ಕೂಡ ಇದಕ್ಕೆ ಕಾರಣವಾಯಿತು. ಹೇಳಿದೆನಲ್ಲ, ನಾನು ಬ್ರಾಹ್ಮಣೇತರ ಚಳುವಳಿ ನಡೀತಿದ್ದಂತಹ ವಾತಾವರಣದಲ್ಲಿ ಹುಟ್ಟಿದೆ ಅಂತ. ಆನಂತರ ಸ್ವಾತಂತ್ರ್ಯ ಬಂದ ಮೇಲೆ, ಕಿಸಾನ್ ಮಜದೂರ್ ಪ್ರಜಾಪಾರ್ಟಿ ಸದಸ್ಯರು ನಮ್ಮ ತಂದೆ. ಆನಂತರ ಪ್ರಜಾ ಸೋಶಲಿಸ್ಟ್ ಪಾರ್ಟಿ ಆಯಿತು. ಆಗಲೂ ನಮ್ಮ ತಂದೆ ಆ ಪಾರ್ಟಿ ಸದಸ್ಯರು. ಹಾಗಾಗಿ ಸಮಾಜವಾದಿ ವಾತಾವರಣದಲ್ಲೆ ಬೆಳೆದೆ.

ವಿದ್ಯಾಭ್ಯಾಸಕ್ಕೆ ಭಾರತದವರು ಸಾಮಾನ್ಯವಾಗಿ ಇಂಗ್ಲೆಂಡಿಗೆ ಹೋಗ್ತಾರೆ. ನೀವು ಜರ್ಮನಿ ಆರಿಸಿಕೊಂಡಿರಿ!

ಇಲ್ಲ. ವಿದ್ಯಾಭ್ಯಾಸಕ್ಕೆ ಅಂತ ಹೋಗಿದ್ದು ಜರ್ಮನಿ, ಫ್ರಾನ್ಸ್ ಮತ್ತು ಹಾಲೆಂಡ್‌ಗೆ. ಬ್ರಿಟಿಷರು ಮಾಡಿದಂಥ ಕೆಲಸಗಳೆಲ್ಲ ಗೊತ್ತಿದ್ದರಿಂದ ನನಗೆ ಇಂಗ್ಲೆಂಡ್ ಹೋಗಲಿಕ್ಕೆ ಮನಸ್ಸೇ ಇರಲಿಲ್ಲ. ಇನ್ನುವರೆಗೂ ನಾನು ಹೋಗಿಲ್ಲ. ಇಂಗ್ಲೆಂಡೂ ನನ್ನನ್ನು ಕರೆಸ್ಕೊಂಡಿಲ್ಲ(ನಗು). 

ನೀವು ಭಾರತ ಮತ್ತು ಯುರೋಪ್ ಎರಡೂ ಪರಿಸರಗಳಲ್ಲಿ ಕಲಿತಿದ್ದೀರಿ. ಎರಡೂ ಕಡೆ ಶಿಕ್ಷಣದ ವಿಷಯದಲ್ಲಿ ಎದ್ದುಕಾಣೋ ಫರಕು ಯಾವುದು ಅನಸುತ್ತೆ ಸಾರ್?

ಮುಖ್ಯವಾಗಿ ಅಧ್ಯಯನದ ವಿಧಾನ, ಮತ್ತೆ ಶಿಕ್ಷಣ ಸ್ವಾತಂತ್ರ್ಯ, ಆ ಒಂದು ವೈಚಾರಿಕ ಮುಕ್ತತೆ, ಅದ್ಯಾವುದೂ ಇಲ್ಲಿ ಕಾಣಲ್ಲ. ಜೊತೆಗೆ ಇದಕ್ಕೆ ಬೇರೆ ಸಾಮಾಜಿಕ ವ್ಯವಸ್ಥೆಗಳು ಕಾರಣ ಆಗ್ತಾವೆ. ಯೂರೋಪಿನಲ್ಲಿ ಈ ವೈಚಾರಿಕ ಸ್ವಾತಂತ್ರ್ಯಕ್ಕೆ ಸಂಪೂರ್ಣ ಪೂರಕವಾದಂಥ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಇದೆ. ಇಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸೇರಿದ ಕೂಡಲೇ ಗುಲಾಮ ಮನೋಭಾವನೆ ಶುರುವಾಗಿಬಿಡುತ್ತೆ. ಮುಂದಿನ ಉದ್ಯೋಗದ ಯೋಚನೆ, ಕರಿಯರ್ ಯೋಚನೆ ಇತ್ಯಾದಿಗಳು ಒಂದು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವಾನೇ ವಕ್ರಗೊಳಿಸಿ ಕೊಂಡು ಬಿಡತಾರೆ.

ಒಂದು ನಾಗರಿಕ ಸಮಾಜದಲ್ಲಿ ಪ್ರಜೆಗಳಿಗೆ ಇರುವ ಸಾಮಾಜಿಕ ಆರ್ಥಿಕ ಭದ್ರತೆ ಅವರ ವೈಚಾರಿಕ ಸ್ವಾತಂತ್ರ್ಯಕ್ಕೆ ಕಾರಣವಾಗುತ್ತೆ ಅಂತ ಹೇಳತಾ ಇದೀರಾ?

ನಿಜವಾಗಲೂ.
ನಿಮ್ಮ ಚಿಂತನೆಗಳಿಗೆ ಲೋಹಿಯಾರ ಪ್ರೇರಣೆಯಿದೆ. ಅವರ ಚಿಂತನೆಗಳ ಸಂಪರ್ಕ ನಿಮಗೆ ಯಾವಾಗ ಬಂದಿತು?
ತಮಾಷೆ ಹೇಳತೀನಿ. ನಾನು ಯುರೋಪಲ್ಲಿ ನಾಲ್ಕು ವರ್ಷ ಸ್ವತಃ ಚಿಂತನೆ ಮಾಡಿದೆ. ಅಲ್ಲಿಯವರೆಗೂ ನಾನು ಲೋಹಿಯಾನ ಓದಿರಲಿಲ್ಲ. ನರೇಂದ್ರದೇವ ಅವರದೂ ಇವರದೂ ಲಿಟರೇಚರ್ ಮನೆಗೆ ಬರ್ತಾ ಇತ್ತು. ಆದರೆ ನಾನೇನು ಚಿಂತನೆಗಳನ್ನ ನಡಸಿದ್ದೆ, ದೇಶದ ರಾಜಕೀಯ ಬಗ್ಗೆ ಇರಲಿ, ಅಂತರರಾಷ್ಟ್ರೀಯ ರಾಜಕೀಯದ ಬಗ್ಗೆ ಇರಲಿ, ಇಂಡಿಯಾಕ್ಕೆ ಬಂದ ನಂತರ ಎಲ್ಲಾ ರಾಜಕೀಯ ಪಕ್ಷಗಳನ್ನು ನೋಡಿ ಇನ್ನು ಆಯ್ಕೆ ಮಾಡೋ ಸ್ಥಿತಿನಲ್ಲಿ ಇರೋವಾಗಲೇನೆ, ಲೋಹಿಯಾರ ’ಮಾರ್ಕ್ಸ್ ಗಾಂದಿs ಅಂಡ್ ಸೋಶಿಯಲಿಜಂ’ ಪುಸ್ತಕ ನನ್ನ ಕೈಗೆ ಸಿಕ್ತು. ಅದನ್ನು ಓದೋಕೆ ಶುರುಮಾಡದಾಗ,  ನಾನೇ ಬರದಂಗೆ ಕಾಣಸ್ತಾ ಇತ್ತು! ನಾನು ಆಲೋಚನೆ ಮಾಡಿದ ವಿಚಾರಗಳೆಲ್ಲಾ ಅಲ್ಲೇ ಇತ್ತು. ಆನಂತರ ಆಯ್ಕೆ ಮಾಡೋ ಸಮಸ್ಯೇನೆ ಬರ್ಲಿಲ್ಲ. ನೇರ ಸಮಾಜವಾದಿ ಪಕ್ಷ ಸೇರಿದ್ದು, ಸಮಾಜವಾದಿ ಯುವಜನ ಸಭಾ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡೋದಿಕ್ಕೆ ಒಪ್ಪಿಗೆ ಕೊಟ್ಟಿದ್ದು, ಎಲ್ಲಾ ನಡೀತಾ ಬಂತು.

ಲೋಹಿಯಾ ಚಿಂತನೆಯಲ್ಲಿ ನಿಮಗೆ ಸೆಳೆದ ಮುಖ್ಯ ಸಂಗತಿ ಯಾವುದು?

ಅವರು ಉಪಯೋಗಿಸೋ ಭಾಷೆ ಮತ್ತು ಶೈಲಿ. ಅದು ನನ್ನ ಶೈಲೀನೇ. ಆ ಕಾರಣಕ್ಕೆ ಆಕರ್ಷಕ ಆಯ್ತೊ ಏನೋ? ಆ ಶಾರ್ಪ್‌ನೆಸ್ ಇದೆಯಲ್ಲ ದಟ್ಸ್ ವಾಟ್ ಐ ಅಟ್ರಾಕ್ಟೆಡ್ ಮಿ. ಅಂಡ್ ದೆನ್ ಹಿಸ್ ಕನ್‌ಸಿಸ್ಟೆನ್ಸಿ ಇನ್ ಪಾಲಿಟಿಕ್ಸ್. ನಂತರ ಅದೇ ದಿಕ್ಕಿನಲ್ಲಿ ಇನ್ನೂ ಹೆಚ್ಚು ವೈeನಿಕವಾಗಿ ಆಲೋಚನೆ ಮಾಡಿದಂಥ ಏಕೈಕ ಚಿಂತಕ ಇವತ್ತಿಗೂ ಇಂಡಿಯಾದಲ್ಲಿ ಅಥವಾ ಜಗತ್ತಿನಲ್ಲೇ ಗಾಂದಿsಜಿ ಒಬ್ಬರೆ.

ಈಗಿನ ಭಾರತದ ಮತ್ತು ಅಂತಾರಾಷ್ಟ್ರೀಯ ಸನ್ನಿವೇಶದಲ್ಲಿ ಲೋಹಿಯಾ ಚಿಂತನೆ  ಪ್ರಸ್ತುತ ಅಂತ ಭಾವಿಸ್ತೀರಾ?

ಹೇಳ್ತೀನಿ, ಈಗ ೪-೫ ದಿವಸದಲ್ಲಿ ಅವರದೊಂದು ಲೇಖನ ಹುಡುಕ್ತಾ ಇದ್ದೆ. ಸಿಕ್ತು ಕೈಗೆ. ’ಎಕನಾಮಿಕ್ಸ್ ಆಫ್ಟರ್ ಮಾರ್ಕ್ಸ್’ ಅಂತ. ಮತ್ತೆ ಓದೋಣ ಅಂತ ಶುರು ಮಾಡಿದೆ. ಏನಾಗುತ್ತೆ, ಲೋಹಿಯಾ ಬರೆದಿರೋದು, ದಿನನಿತ್ಯ ಓದಬಹುದು ತಾವು. ಒಂದು ಹೊಸದು ಕಾಣ್ತಾ ಇರುತ್ತೆ ಅಲ್ಲಿ. ಇವತ್ತು ಏನು ಜಾಗತೀಕರಣ ಆಗ್ತಾ ಇದೆ, ಅಮೆರಿಕನ್ ಕ್ಯಾಪಿಟಲಿಜಂ ತಾನು ಉಳಿಬೇಕಾದರೆ ಏನನ್ನ ಮಾಡ್ಲೇಬೇಕಾಗಿದೆ, ಅದನ್ನು ಲೋಹಿಯಾ ೧೯೪೨ನೇ ಇಸವಿನಲ್ಲಿ ಬರದಿದಾರೆ. ಅವರು ಆಗ ಏನ್ ಬರದರೋ ಅದನ್ನ ಅಮೆರಿಕ ಈಗ ಮಾಡ್ತಾ ಇದೆ.

ಇಷ್ಟೊಂದು ಮುಂಗಾಣ್ಕೆಯುಳ್ಳ ರಾಜಕೀಯ ತತ್ವಶಾಸ್ತ್ರವನ್ನು ಲೋಹಿಯಾ ರಚಿಸಿದರು. ಆದರೆ ಭಾರತದಲ್ಲಿ ಅವರ ಚಿಂತನೆಯನ್ನು ಅನುಸರಿಸುವ ಸಮಾಜವಾದಿ ರಾಜಕಾರಣ ಯಾಕೆ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಲಿಲ್ಲ?

(ದೀರ್ಘಾಲೋಚನೆ ಮಾಡಿ) ಸೀ, ಕ್ಯಾರೆಕ್ಟರ್ ಅಂಡ್ ಕಂಡಕ್ಟ್, ನಡತೆ ಮತ್ತು ಗುಣ, ಲೋಹಿಯಾ ಸಿದ್ಧಾಂತದ ಒಂದು ಭಾಗ. ಇವನ್ನು ಲೋಹಿಯಾ ಮೀನ್ಸ್ ಅಂಡ್ ಎಂಡ್ಸ್‌ಗೆ ಲಿಂಕ್ ಮಾಡಿ ಸಿದ್ಧಾಂತ ನಿರೂಪಿಸ್ತಾರೆ. ಅವರ ಜೊತೆ ಕೆಲಸ ಮಾಡ್ತಾ ಇದ್ದವರಲ್ಲಿ ಈ ಅಂಶಗಳನ್ನ ಮೈಗೂಡಿಸಿಕೊಳ್ಳೋದರಲ್ಲಿ ಸೋತೋರೇ ಜಾಸ್ತಿ, ಜಾರ್ಜ್ ಫರ್ನಾಂಡೀಸ್ ಅವರಿಂದ ಹಿಡಿದು ನಮ್ಮ ಕರ್ನಾಟಕದ ಇವತ್ತಿನ ಅನೇಕ ಸಮಾಜವಾದಿ ರಾಜಕಾರಣಿಗಳವರೆಗೆ. ಲೋಹಿಯಾ ಮೀನ್ಸ್ ಅಂಡ್ ಎಂಡ್ಸ್ ಸಂಬಂಧವನ್ನ ಟೈಂ ಬಗ್ಗೆನೂ ಲಿಂಕ್ ಮಾಡ್ತಾ ಇದ್ದರು. ಟೈಂ ಈಸ್ ನಾಟ್ ಜಸ್ಟ್ ಎ ಮೂಮೆಂಟ್. ಇಟ್ ಈಜ್ ಆಲ್ಸೊ ಎಟರ್ನಿಟಿ. ಎವ್ವೆರಿ ಮೂಮೆಂಟ್ ಈಜ್ ಎಟರ್ನಿಟಿ ಅಂದಾಗ, ನೀವು ಇವತ್ತು ಸುಳ್ಳು ಹೇಳಿ ನಾಳೆ ಸತ್ಯಸ್ಥಾಪನೆ ಮಾಡ್ತೀನಿ ಅನ್ನೋಕೆ ಆಗೋಲ್ಲ.

ಲೋಹಿಯಾ ಇಂಡಿಯಾದ ಕಮ್ಯುನಿಸ್ಟರ ಮೇಲೆ ಕ್ರಿಟಿಕಲ್ ಆಗಿದ್ದರು. ಇದನ್ನ ನೀವು ಹೇಗೆ ವಿಶ್ಲೇಷಿಸ್ತೀರಿ?

 ಆಲ್ಸೊ ಅಕಾರ್ಡಿಂಗ್ ಟು ಲೋಹಿಯಾ, ದಿ ಗ್ರೇಟೆಸ್ಟ್ ಮಿಸ್ಟೇಕ್ ಮಾರ್ಕ್ಸ್ ಡಿಡ್ ವಾಜ್, ಅಕ್ಸೆಪ್ಟಿಂಗ್ ದಿ ಕ್ಯಾಪಿಟಿಲಿಸ್ಟ್ ಟೆಕ್ನಿಕ್ಸ್ ಆಫ್ ಪ್ರೊಡಕ್ಷನ್ ಅಂಡ್ ದಿ ಕ್ಯಾಪಿಟಿಲಿಸ್ಟ್ ಮೋಡ್ ಆಫ್ ಪ್ರೊಡಕ್ಷನ್, ಆಜ್ ಆನ್ ಐಡಿಯಲ್ ಮೋಡ್ ಆಫ್ ಪ್ರೊಡಕ್ಷನ್. ಲೋಹಿಯಾ ಅವರು ಹೇಳೋದು, ಇದನ್ನ ಒಪೊಕೆ ಮಾರ್ಕ್ಸ್‌ನ ಮನಸು ಯಾಕೆ ತಯಾರಾಯ್ತು ಅಂದ್ರೆ, ಬಿಕಾಸ್ ಹಿ ವಾಸ್ ಆಲ್ಸೋ ಯುರೋಪಿಯನ್. ಐ ವುಡ್ ಸೇ ದಟ್ ವಾಜ್ ದಿ ಬಿಗ್ಗೆಸ್ಟ್ ವೀಕ್‌ನೆಸ್. ಇವತ್ತು ಜಾಗತೀಕರಣದ ವಿರುದ್ಧ ಯುರೋಪಲ್ಲಿ ಏನು ಜನಾಂದೋಲನಗಳು ನಡೀತಾ ಇವೆ. ಅಲ್ಲೂನು ಇದನ್ನು ಕಾಣಬಹುದು. ದಿ ಸೇಮ್ ಯುರೋಪಿಯನ್ ಮೋಮೆಂಟ್ಸ್ ಹೂ ವರ್ ಅಪೋಸಿಂಗ್ ಗ್ಲೋಬಲೈಜೇಶನ್ ಅಲಾಂಗ್ ವಿತ್ ಅಸ್, ಎಕ್ಸಿಬಿಟ್ಸ್ ದಟ್ ಕೈಂಡ್ ಆಫ್ ವೀಕ್‌ನೆಸ್ ಆಕೇಶನಲಿ. ಅದೇ ಕಾರಣಕ್ಕೆ ಹೈದ್ರಾಬಾದ್‌ನಲ್ಲಿ ಮೊನ್ನೆ ಆಯಿತಲ್ಲ ಏಶಿಯನ್ ಸೋಶಿಯಲ್ ಪೋರಂ, ಅದಕ್ಕೆ ನಾನು ಹೋಗಲಿಲ್ಲ. ಹೋದ ವರ್ಷ ವರ್ಲ್ಡ್ ಸೋಶಿಯಲ್ ಫೋರಂ ಆಯ್ತು ಬ್ರೆಜಿಲ್‌ನಲ್ಲಿ. ಅಲ್ಲೂ ಭಾಷಣ ಮಾಡಬೇಕಿತ್ತು. ನಾನು ಹೋಗಲಿಲ್ಲ. ಅದಕ್ಕೆ ಕಾರಣ ಏನಂತಂದರೆ, ವರ್ಲ್ಡ್ ಸೋಶಿಯಲ್ ಫೋರಮ್‌ಗೆ ಯಾರು ಸಂಚಾಲಕರು ಅಂತ ಇದಾರೆ, ಆ ಸಂಚಾಲಕರು ಕ್ಯೂಬಾದ ಅಧ್ಯಕ್ಷ ಪಿsಡಲ್ ಕ್ಯಾಸ್ಟ್ರೋಗೆ ಬ್ರೆಜಿಲ್ ಸಮಾವೇಶಕ್ಕೆ ಆಹ್ವಾನ ಕೊಡೋದಕ್ಕೆ ವಿರೋಧ ಮಾಡಿದರು. ಅವರು ಹೇಳಿದ್ದು ಕ್ಯಾಸ್ಟ್ರೋಗೆ ಕರೆದರೆ ಜಾಗತೀಕರಣ ವಿರೋದಿs ಚಳುವಳಿಯಲ್ಲಿ ಒಡಕು ಬರುತ್ತೆ. ನಾನಂದೆ - ’ಕರೀದೇ ಇದ್ದರೂ ಒಡಕು ಬರುತ್ತೆ. ಆ ಕಾರಣಕ್ಕೆ ನಾನು ಬರಲ್ಲ’. ಈಗ ಇದೇ ೨೬-೨೭ಕ್ಕೆ ಅಲ್ಲಿ ನಡೀತಾ ಇದೆ. ನಾನು ಇರಬೇಕಿತ್ತಲ್ಲಿ. ನಾನು ಬರಲ್ಲ ಅಂದೆ. ಮುಂದಿನ ವರ್ಷ ಇಂಡಿಯಾದಲ್ಲಿ ವರ್ಲ್ಡ್ ಸೋಶಿಯಲ್ ಫೋರಂ ನಡೀಬೇಕು ಅಂತ ತೀರ್ಮಾನ ಮಾಡಿದಾರೆ. ಇಲ್ಲಿ ನಡೀಬೇಕು ಅನ್ನೋದಾದರೆ, ಇಲ್ಲಿಗೆ ಕ್ಯಾಸ್ಟ್ರೋ ಬಂದು ಉದ್ಭಾಟನೆ ಮಾಡಬೇಕು ಅಂತ ಸಂಚಾಲನಾ ಸಮಿತಿ ತೀರ್ಮಾನ ಮಾಡಿದರೆ, ನಾನು ಬರ್ತೀನಿ ಅಂತ ಹೇಳಿದೀನಿ.

ಈ ಒಂದು ನಿರ್ದಿಷ್ಟ ಅಂಶದ ಮೇಲೆ ನೀವು ಯಾಕೆ ಒತ್ತಾಯ ಮಾಡತಾ ಇದೀರಿ?

ಸೀ, ಬಿಕಾಸ್ ಆ ಆರ್ಗನೈಜರ್ಸ್ ಏನಿದಾರೆ, ಯುರೋಪಿನ ಕೆಲವು ಸಂಘ-ಸಂಸ್ಥೆಗಳ ಪದಾದಿsಕಾರಿಗಳು, ವರ್ಲ್ಡ್ ಸೋಶಿಯಲ್ ಫೋರಂನ ಸಂಚಾಲಕರು, ಅಮೆರಿಕನ್ ಕ್ಯಾಪಿಟಲಿಜಂ ಬಗ್ಗೆ ಬಹಳ ಒಂದು ಸಾಫ್ಟ್ ಲೈನ್ ತಗೋತಾರೆ. ಈವನ್ ದೆ ಗೋ ಟು ದಿ ಎಕ್ಸ್‌ಟೆಂಟ್ ದಟ್ ಆಂಟಿ ಗ್ಲೋಬಲೈಜೇಶನ್ ಈಜ್ ನಾಟ್ ಆಂಟಿ ಅಮೇರಿಕ. ವಿ ಆರ್ ನಾಟ್ ಆಂಟಿ 

ಜಾರ್ಜ್‌ಬುಶ್ ಅಂತಾರೆ. ಇಂಥಾವೆಲ್ಲ ಮಾತಾಡೋರ ಜೊತೆಗೆ ಏನೂಂತ ಚಳುವಳಿ ಮಾಡ್ತೀರಿ?

ಮಾರ್ಕ್ಸ್‌ವಾದವು ಯೂರೋಪಿನ ಒಂದು ಚಾರಿತ್ರಿಕ ಸಂದರ್ಭದಲ್ಲಿ ಹುಟ್ಟಕೊಂಡಿತು. ಅದರಲ್ಲಿ ಸಹಜವಾಗಿ ಆ ಕಾಲ ದೇಶ ಸನ್ನಿವೇಶಕ್ಕೆ ಅನುಸಾರವಾದ ಕೆಲವು ತತ್ವಗಳಿವೆ. ಅದು ಬೇರೆಬೇರೆ ದೇಶದ ಸಮಾಜಗಳ ಸಂದರ್ಭಗಳ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬೇಕು ಅಂತ ನಿರೀಕ್ಷಿಸೋಕೆ ಸಾಧ್ಯವಿಲ್ಲ. ಯಾವುದೇ ತತ್ವಕ್ಕೂ ಅಂತಹ ಸರ್ವಕಾಲೀನ ಶಕ್ತಿಯಿರೋಲ್ಲ. ವಾಸ್ತವ ಏನಂದರೆ, ಆ ತತ್ವಚಿಂತನೆಯನ್ನು ನಮ್ಮ ಚಾರಿತ್ರಿಕ ಸಂದರ್ಭಕ್ಕೆ ನಾವು ಹೇಗೆ ಪರಿವರ್ತಿಸಿ ಬಳಸ್ತೇವೆ ಹಾಗೂ ಅದನ್ನಿಟ್ಟುಕೊಂಡು ನಮ್ಮ ವರ್ತಮಾನದ ಪರಿಸರವನ್ನ ಮುಖಾಮುಖಿ ಮಾಡುತ್ತೇವೆ ಅನ್ನುವುದು. 

ಲೋಹಿಯಾ ಸಮಾಜವಾದವು ಮಾರ್ಕ್ಸ್‌ವಾದವನ್ನು ವಿಮರ್ಶೆ ಮಾಡತಾ ಇರುವಾಗ ಎತ್ತುವ ಮುಖ್ಯ ಪ್ರಶ್ನೆ ಯಾವುದು?

ಇಂಡಿಯನ್ ಮಾರ್ಕ್ಸಿಸ್ಟ್ ವರ್ ಜಸ್ಟ್ ಇಮಿಟೇಟರ್ಸ್ ಆಫ್ ರಶಿಯನ್ ಕಮ್ಯುನಿಸಂ ಆರ್ ಚೈನೀಸ್ ಕಮ್ಯುನಿಸಂ. ಇವತ್ತಿಗೂನೂ ಈ ಭಾರತದ ಕಮ್ಯೂನಿಸ್ಟ್ ಚಳುವಳಿ ಕೇಂದ್ರೀಕರಣವನ್ನ ವಿರೋಧ ಮಾಡಿಲ್ಲ. ಸೆಂಟ್ರಲೈಜೆಶನ್ಸ್ ಇನ್ ಎವರಿಥಿಂಗ್, ಅದನ್ನ ವಿರೋಧ ಮಾಡಿಲ್ಲ. ಕ್ಯಾಪಿಟಲಿಸ್ಟ್ ಮೋಡ್ ಆಫ್ ಪ್ರೊಡಕ್ಷನನ್ನ ವಿರೋಧ ಮಾಡಿಲ್ಲ. ಸೋಸಿಯಲೈಜೇಶನ್ಸ್ ಆಫ್ ಇಂಡಸ್ಟ್ರೀಸ್ ಬಗ್ಗೆ ಹೋರಾಟ ಮಾಡಿಲ್ಲ.

ಇಂಡಿಯನ್ ಕಮ್ಯುನಿಸಂ ಅನ್ನ ನೀವು ಬೀಸುಗ್ರಹಿಕೆಯಲ್ಲಿ ನೋಡತಾ ಇದೀರಾ ಅಂತ ಅನುಮಾನ. ಭಾರತದಲ್ಲಿ ಅನೇಕ ಸೈದ್ಧಾಂತಿಕ ನೆಲೆಯ ಕಮ್ಯೂನಿಸ್ಟ್ ಚಳುವಳಿಗಳಿದಾವೆ.

ಅವಕ್ಕೂ ಇದು ಅನ್ವಯಿಸುತ್ತೆ. ಈವನ್ ಫಾರ್ ದಿ ಪೀಪಲ್ಸ್ ವಾರ್‌ಗ್ರೂಪ್. ಆಂಧ್ರಪ್ರದೇಶದಲ್ಲಿ ೧೯೯೨ರಿಂದ ಈಚೆಗೆ ನಾನು ಅವರೇ ಕರೆದ ಬಹಳ ಸಭೆಗೆ ಹೋಗಿದೀನಿ. ಅವರು ಇಂಟ್ರನಲ್ ಕಾಂಟ್ರಡಿಕ್ಷನ್ ಅಂತ ಮಾತಾಡ್ತಾರೆ. ವಾಟ್ ಈಸ್ ದಿ ಸೀರಿಯಸ್ ಮೋಸ್ಟ್ ಕಾಂಟ್ರಡಿಕ್ಷನ್ ನೌ? ಹೂ ಈಜ್ ದಿ ಮೋಸ್ಟ್ ಸೀರಿಯಸ್ ಎನಿಮಿ ನೌ? ನಾನು ಕೇಳಿದೆ. ’ನೀವು ನಮ್ಮ ಪೋಲಿಸ್ ಸ್ಟೇಶನ್ಸ್‌ಗೆ ಬಾಂಬ್ ಹಾಕ್ತೀರಿ. ನಮ್ಮ ತಹಶೀಲ್ದಾರ್ ಕbsರಿಗೆ ಬಾಂಬ್ ಹಾಕ್ತೀರಿ. ವೈ ನಾಟ್ ಯು ಎಕ್ಸ್‌ಪ್ಲೋಡ್ ಮಲ್ಟಿನ್ಯಾಶನಲ್ ಕಾರ್ಪೋರೇಶನ್ಸ್?’ ಎಲ್ಲೋ ಒಂದು ಕೋಕಾ-ಕೋಲಾ ಬಾಟಲಿಂಗ್ ಯೂನಿಟ್ಟನ್ನ ಈಚೆಗೆ ಧ್ವಂಸ ಮಾಡಿದರೆ ಹೊರತು, ದೊಡ್ಡ ದೊಡ್ಡದನ್ನ ಎಕ್ಸ್‌ಫ್ಲೋಡ್ ಮಾಡಿ ಆಮೇಲೆ ಈ ಚಿಲ್ಲರೆ ಇಂಟರ್ನಲ್ ಕಾಂಟ್ರಡಿಕ್ಷನ್ ನಾವು ವಿಚಾರಿಸ್ಕೋಬಹುದು. ಅದನ್ನು ಮಾಡೋಕೆ ತಯಾರಿಲ್ಲ. ಈವನ್ ಸಿಪಿಎಂ ಗೌರ್ನಮೆಂಟ್ ಇನ್ ಕಲ್ಕತ್ತಾ, ಗ್ಲೋಬಲೈಜೇಶನ್ನ ಸಂಪೂರ್ಣ ವಿರೋಧ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಅದರ ಬದಲು ಜ್ಯೋತಿಬಸುಗೆ ಉತ್ತರಾದಿsಕಾರಿ ಅನ್ನೋವಂಥ ಸೋಮನಾಥ ಚಟರ್ಜಿ ಸೀನಿಯರ್ ಮೋಸ್ಟ್ ಮೆಂಬರ್ ಆಫ್ ಪಾರ್ಲಿಮೆಂಟ್, ಅವರನ್ನು ಒಂದು ಕಾರ್ಪೋರೇಷನ್ನಿಗೆ ಅಧ್ಯಕ್ಷ ಮಾಡಿದಾರೆ. ಆ ಕಾರ್ಪೋರೇಷನ್ ಕೆಲಸ ಅಟ್ರಾಕ್ಟಿಂಗ್ ಫಾರೀನ್ ಕ್ಯಾಪಿಟಲ್. ಇಂಥ ಒಂದು ಹಳಿತಪ್ಪಿದ ವಿಚಾರದ ಮೇಲೆ ಕಮ್ಯೂನಿಸ್ಟ್ ಚಳುವಳಿ ನಡೆದಿರೋದು ಇಂಡಿಯಾದಲ್ಲಿ.

ಕಮ್ಯೂನಿಸಂ ಕುರಿತ ಲೋಹಿಯಾ ಅವರ ನಿಲುವುಗಳು, ಅವರ ಕಾಲದ ಭಾರತದ ಕಮ್ಯುನಿಸ್ಟರ ನಿಲುವುಗಳನ್ನು ತೀವ್ರವಾಗಿ ವಿರೋದಿsಸುತ್ತ ರೂಪುಗೊಂಡಂತಹವು. ವಾಸ್ತವವಾಗಿ ಅವನ್ನು ಕಮ್ಯುನಿಸಂ ವಿರೋದಿsಯಾದವು ಎಂದು ಕರೆಯಬಾರದು ಎಂಬ ವ್ಯಾಖ್ಯಾನಗಳಿವೆ.

 ನೋನೋ. ಲೋಹಿಯಾನ ಸರಿಯಾಗಿ ಅರ್ಥಮಾಡಿಕೊಳ್ಳದೇನೆ ಮಾಡಿರುವ ವ್ಯಾಖ್ಯಾನ ವಿದು. ಅವರು ’ಎಕನಾಮಿಕ್ಸ್ ಆಫ್ಟರ್ ಮಾರ್ಕ್ಸ್’ ಅನ್ನೋ ಪ್ರಬಂಧ ಬರೆದಾಗ ಅವರ ಮನಸಲ್ಲಿ ಡಾಂಗೆ, ನಂಬೂದರಿ ಪಾದ್ ಇವರ‍್ಯಾರೂ ಇರಲಿಲ್ಲ.

ನೀವು ಸಮಾಜವಾದಿ ಯುವಜನ ಸಭಾ ಶುರುಮಾಡಿದಾಗ ಲೋಹಿಯಾವಾದಕ್ಕೂ ಆಗಿನ ಕರ್ನಾಟಕ ಸಾಮಾಜಿಕ ರಾಜಕೀಯ ಸಂದರ್ಭಕ್ಕೂ ಯಾವ ತರಹ ಸಂಬಂಧ ಇತ್ತು?

ನಾವು ಯುವಜನ ಸಭಾ ಪ್ರಾರಂಭ ಮಾಡಿದಾಗ ಲೋಹಿಯಾ ವಿಚಾರಗಳನ್ನು ಯುವ ಜನತೆ ಮತ್ತು ಬುದ್ಧಿಜೀವಿಗಳು ಯಾವ ರೀತಿ ಸ್ವೀಕರಿಸಿದರು ಅಂತ ನೋಡಿದರೆ, ಆಗಲೇ ಕಾಲ ಪಕ್ವವಾಗಿತ್ತು. ಆಕ್ಚುವಲಿ ನಾವು ಚಟುವಟಿಕೆ ಹೆಚ್ಚಿಗೆ ಮಾಡಿದ್ದು ೧೯೬೮ರ ನಂತರ. ಲೋಹಿಯಾ ತೀರಿಕೊಂಡ ಮೇಲೆ. ಆದರೆ ೧೯೬೭ರ ಹೊತ್ತಿಗೆ ಏಳು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳು ತೆಗೆದುಹಾಕಿ ಕಾಂಗ್ರೆಸ್ಸೇತರ ಸರಕಾರಗಳು ರಚನೆಯಾಗಿದ್ದವು. ಲೋಹಿಯಾ ಅವರ ಒಂದು ಸೂಚನೆ ಮೇರೆಗೆ ನಡೀತಾ ಇತ್ತು ಆ ಕೆಲಸ. ಮತ್ತೆ ಕೇಂದ್ರದಲ್ಲಿ ಕೂಡ ಕಾಂಗ್ರೆಸ್ಸನ್ನು ತೆಗೆಯುವಂತಹ ಒಂದು ಯೋಜನೆ ಪಕ್ವವಾಗಿತ್ತು. ದುರದೃಷ್ಟವಶಾತ್ ಲೋಹಿಯಾ ೧೯೬೭ರಲ್ಲಿ ತೀರಿಕೊಂಡರು. ಅಷ್ಟೊತ್ತಿಗಾಗಲೇ ದೇಶದ ತುಂಬಾ ’ನಾನ್ ಕಾಂಗ್ರೆಸ್ಸಿಸಂ’ ಒಂದು ವಿಚಾರವಾಗಿ ಸಾರ್ವತ್ರಿಕವಾಗಿ ಸ್ವೀಕಾರವಾಗಿತ್ತು. ಅಂಥ ಕಾಲದಲ್ಲಿ ನಾವು ಕರ್ನಾಟಕದಲ್ಲಿ ಸಮಾಜವಾದಿ ಚಳುವಳಿ ಶುರುಮಾಡಿದ್ದು.

ಕರ್ನಾಟಕ ಲೋಹಿಯಾವಾದಿ ರಾಜಕಾರಣಿಗಳು ಸಾಮಾನ್ಯವಾಗಿ ಸಾಹಿತ್ಯಾಸಕ್ತರು. ಕುವೆಂಪು ಅಬಿsಮಾನಿಗಳು. ಕುವೆಂಪು ಕೂಡ ಒಂದು ಬಗೆಯ ಸಮಾಜವಾದಿ ದರ್ಶನವನ್ನು ತಮ್ಮ ಕೃತಿಗಳಲ್ಲಿ ಪ್ರಕಟಿಸುತ್ತಿದ್ದವರು. ಲೋಹಿಯಾ ಹಾಗೂ ಕುವೆಂಪು ಇವರಿಬ್ಬರಲ್ಲಿ ಯಾವ ಬಗೆಯ ಸಾಮ್ಯ ಹಾಗೂ ಬಿsನ್ನತೆ ಕಾಣ್ತೀರಿ?

ಅಷ್ಟೊಂದು ವಿವರವಾಗಿ ನಾವು ಹೋಲಿಕೆ ಮಾಡಕೆ ಸಾಧ್ಯ ಇಲ್ಲದಿದ್ದರೂ, ಸ್ಥೂಲವಾಗಿ ನೋಡಿದಾಗ ಹೋಲಿಕೆಗಳು ಜಾಸ್ತಿ ಇವೆ. ಅದರಲ್ಲೂ ಮಾತೃಭಾಷೆ ಬಗ್ಗೆ ಇರಬಹುದು. ಜಾತಿಪದ್ಧತಿ ಬಗ್ಗೆ ಇರಬಹುದು. ರೈತನ ಬಗ್ಗೆ ಅಥವಾ ಆಸ್ತಿವ್ಯವಸ್ಥೆ ಬಗ್ಗೆ ಇರಬಹುದು. ವೈದಿಕಶಾಹಿ ಬಗ್ಗೆ ಇರಬಹುದು. ಕುವೆಂಪು ಲೋಹಿಯಾ ಅವರಷ್ಟು ವಿವರವಾಗಿ ಈ ಸಮಸ್ಯೆಗಳ ಬಗ್ಗೆ ಬರೆಯದಿದ್ದರೂನೂ ಇಬ್ಬರಲ್ಲೂ ಬಹಳ ಹೋಲಿಕೆಗಳೂ ಇದ್ದವು.

ನೀವು ತೇಜಸ್ವಿ, ಲಂಕೇಶ್, ಅನಂತಮೂರ್ತಿ, ಸುಂದರೇಶ್, ಕಡಿದಾಳು ಶಾಮಣ್ಣ, ಗೋಪಾಲಗೌಡರು, ಕೋಣಂದೂರು ಲಿಂಗಪ್ಪ ಹೀಗೆ ನಿಮ್ಮ ಗುಂಪನ್ನು ನೆನೆಸಿಕೊಂಡರೆ ಮುಖ್ಯವಾಗಿ ಅದೊಂದು ಬುದ್ಧಿಜೀವಿಗಳ ಗುಂಪಾಗಿತ್ತು. ಬಹುಶ ಅಡಿಗರೂ ಮೊದಲು ಅಲ್ಲಿದ್ದರು ಅಂತ ಕಾಣುತ್ತೆ. ನಿಮ್ಮನ್ನು ಒಂದು ಕೇಂದ್ರಕ್ಕೆ ತಂದಿದ್ದು ನಿಮ್ಮಲ್ಲಿ ಇದ್ದ ಸಾಹಿತ್ಯಾಸಕ್ತಿಯೊ ಅಥವಾ ರಾಜಕೀಯ ವಿಚಾರ ಧಾರೆಯೋ?

ವಿಚಾರವೇ ನಮ್ಮನ್ನು ಕೂಡಿಸಿದ್ದು. ಆದರೆ ನಿಜವಾಗಿ ವಿಚಾರ ಆಧಾರದ ಮೇಲೆ ಕೂಡಿದಂಥ ಹೆಸರುಗಳನ್ನ ನೀವು ಪ್ರತ್ಯೇಕಿಸಬಹುದು. ಪ್ರಾಮಾಣಿಕವಾಗಿ ವಿಚಾರದ ಮೇಲೆ ಕೂಡದೇ ಇದ್ದಂತಹ ಅಥವಾ ಕೂಡಿದಹಂಗೆ ತೋರಿಸಿಕೊಂಡ ವ್ಯಕ್ತಿಗಳನ್ನು ಪ್ರತ್ಯೇಕಿಸಬಹುದು. ನೀವು ಹೇಳಿದಿರಿ ಅಡಿಗ, ಅನಂತಮೂರ್ತಿ ಅಂತ. ಪ್ರಜಾಪ್ರಭುತ್ವವನ್ನೇ ವಿರೋಧ ಮಾಡಿದಂತಹ ಅಡಿಗರ ಹಲವಾರು ಲೇಖನಗಳು ಇವೆ. ನಂತರ ಜನಸಂಘದ ಅಭ್ಯರ್ಥಿಯಾದಾಗ, ಅದಕ್ಕೂ ಮುಂಚೆ ಅವರು ಬರೆದಂಥ ಲೇಖನಗಳು ಅಡಿಗರ ನಿಜವಾದ ವ್ಯಕ್ತಿತ್ವ ತೋರಿಸುತ್ತವೆ. ಮತ್ತೆ ಅನಂತಮೂರ್ತಿ ಕಾಲಕಾಲಕ್ಕೆ ಹೊಂದಿಕೊಳ್ಳೋವಂಥ ಹೇಳಿಕೆಗಳನ್ನು ಕೊಟ್ಟಿದ್ದನ್ನು ನೋಡಿದರೆ, ಅವರ ವ್ಯಕ್ತಿತ್ವಾನೂ ಏನೂ ಅಂತ ಗೊತ್ತಾಗುತ್ತೆ. ದಟ್ಸ್‌ವೇರ್, ಲ್ಯಾಕ್ಸ್ ದಿ ಕನ್‌ಸಿಸ್ಟನ್ಸಿ ಇನ್ ಕ್ಯಾರೆಕ್ಟರ್, ವಿಚೀಸ್ ವೆರಿ ಇಂಪಾರ್ಟೆಂಟ್ ಫಾರ್ ಎನಿ ಸೋಷಿಯಲಿಸ್ಟ್ , ಫಾರ್ ಎನಿ ಮೂಮೆಂಟ್, ಆರ್ ಫಾರ್ ಎನಿ ಪರ್ಸನ್ಸ್ ಹೂ ವಾಂಟ್ಸ್ ಎ ಸೋಶಿಯಲ್ ಟ್ರಾನ್ಸ್ ಫರ್ಮೇಶನ್ .

ಈ ಲ್ಯಾಕ್ ಆಫ್ ದಿ ಕನ್‌ಸಿಸ್ಟೆನ್ಸಿ ಇನ್ ಕ್ಯಾರಕ್ಟೆರ್ ಗೆ ಕಾರಣಗಳು, ಆ ಕಾಲದ ರಾಜಕೀಯ ಸಾಮಾಜಿಕ ಪರಿಸ್ಥಿತಿಗಳಲ್ಲಿ ಇದ್ದವೊ ಅಥವಾ ರಾಜಕೀಯ ಚಿಂತನೆಯಾಗಿ ಲೋಹಿಯಾವಾದದಲ್ಲಿ ಇದ್ದವೊ?

ಲೋಹಿಯಾವಾದದಲ್ಲೇ ಇದ್ದವು ಅಂತ ನಾನು ನಂಬಲ್ಲ. ಸೀ, ಎಲ್ಲರೂ ಬಿಟ್ಟು ಹೋದ ಮೇಲೆ ನಮ್ಮ ರೈತ ಚಳುವಳಿ ಪ್ರಾರಂಭವಾಯಿತು. ರೈತ ಚಳುವಳಿಗೂನೂ ಸಮಾಜವಾದಿ ಚಳುವಳಿಗೂನೂ ವ್ಯತ್ಯಾಸ ಇದೆ ಅಂತ ನಾನು ಹೇಳೋಲ್ಲ. ವೈಯಕ್ತಿಕವಾಗಿ ಕೇಳೋದಾದರೆ, ಸಮಾಜವಾದಿ ಯುವಜನಾ ಸಭಾ ಅಂದೋಲನದ ಎರಡನೇ ಅಧ್ಯಾಯ, ಈ ನಮ್ಮ ರೈತ ಚಳುವಳಿ ಅಂತ ಕರೆಯೋನು ನಾನು. ಈ ಚಳುವಳಿ ಬಹಳ ಪ್ರಬಲವಾಗೆ ಸಂಘಟನೆ ಆಯಿತು. ಆಗತಾ ಇದೆ. ಮಧ್ಯೆ ಮಧ್ಯೆ ಎಷ್ಟೇ ತಲೆನೋವು ಬಂದರೂನೂ ಇವತ್ತಿಗೂ ಆಗತಾ ಇದೆ.

ಲೋಹಿಯಾ ಪ್ರತಿವಾದಿಸುತ್ತಿದ್ದ ಸರಳತೆ ನೈತಿಕತೆಗಳನ್ನ ಬಹಳ ತೀವ್ರವಾಗಿ ಮೊದಲ ಘಟ್ಟದಲ್ಲಿ ಬದುಕ್ತಾ ಇದ್ದಂತಹ ಗೋಪಾಲಗೌಡರು, ಲೋಹಿಯಾವಾದ ಸೃಷ್ಟಿಸಿದ ಒಳ್ಳೇ ಜನನಾಯಕರಲ್ಲಿ ಒಬ್ಬರು. ಆದರೆ ಅವರು ಕರ್ನಾಟಕದ ರಾಜಕಾರಣದಲ್ಲಿ ಕೊನೆಕೊನೆಗೆ ತಮ್ಮ ಪ್ರಭಾವವನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ. ಸಮಸ್ಯೆ ನಿಜವಾಗಿ ಎಲ್ಲಿತ್ತು?

ಇಲ್ಲ. ಗೋಪಾಲಗೌಡ್ರ ಬಗ್ಗೆ ಬಹಳ ಹತ್ತಿರದಿಂದ ಪರಿಚಯ ಇರೋರು, ಅವರ ಬಗ್ಗೆ ಹಲವಾರು ಅಬಿsಪ್ರಾಯಗಳನ್ನು ಇಟ್ಟುಕೊಂಡಿದ್ದಾರೆ. ಒಂದೇ ಒಂದು ದೊಡ್ಡಗುಣ ಅವರಲ್ಲಿದ್ದುದು ಅಂದರೆ, ಒಂದು ಚಳುವಳಿಗೆ ಜೀವನದುದ್ದಕ್ಕೂ ಅಂಟಿಕೊಂಡಿದ್ದು. ಇದರ ಹೊರತು, ಅವರು ಕೊನೇ ಹತ್ತುವರ್ಷ ಕರ್ನಾಟಕದಲ್ಲಿ ಸಂಘಟನೆ ಪ್ರಯತ್ನಗಳನ್ನೇ ಮಾಡಲಿಲ್ಲ. ಹಿ ವಾಸ್ ನಾಟ್ ಎ ಗುಡ್ ಆರ್ಗನೈಜರ್ ಅಟಾಲ್. ಅದಕ್ಕೆ ಅವರ ವೈಯಕ್ತಿಕ ದೌರ್ಬಲ್ಯಗಳು ಕಾರಣ ಇರಬಹುದು. ಆ ಕಾರಣವೇ ’ಗೋಪಾಲಗೌಡರ ಬಗ್ಗೆ ಪುಸ್ತಕ ಪ್ರಕಟಣೆ ಮಾಡ್ತಾ ಇದೀವಿ, ಲೇಖನ ಬರೀರಿ’ ಅಂದ್ರೆ, ನಾನು ಬರೆಯೋಲ್ಲ. ಬರೆದರೆ ಪ್ರಾಮಾಣಿಕವಾಗಿ ಬರೀಬೇಕಾಗುತ್ತೆ. ಅದು ಕಹಿಯಾಗಿರುತ್ತೆ. ಈ ಕಹಿ ಸೇರಸೋದು ಬ್ಯಾಡ ಅಂತ್ಹೇಳಿ ನಾನು ಬರೀಲಿಲ್ಲ.

ಸಾಹಿತ್ಯದಲ್ಲಿ ನಿಮ್ಮ ಆಯ್ಕೆ ಕೇಳತೀನಿ. ನಿಮ್ಮ ಪ್ರಿಯವಾದ ಲೇಖಕ ಯಾರು?

 ಯೋಚನೆ ಮಾಡದೇನೆ ಹೇಳಬಹುದು ಕುವೆಂಪು ಅಂತ. ಕುವೆಂಪು ಮಟ್ಟಕ್ಕೆ ಏರುವಂಥ ಲೇಖಕ ಇನ್ನೂ ಹುಟ್ಟಿಲ್ಲ ಅಂತ ನನಗನಸುತ್ತೆ.

ಸಾಹಿತ್ಯ ವಿಮರ್ಶಕರಿಗೆ ಇದೇ ಪ್ರಶ್ನೆ ಕೇಳಿದರೆ, ಅವರದೇ ಆದ ಆಯ್ಕೆ, ಅದಕ್ಕೆ ಅವರದೇ ಆದ ಕಾರಣ ಇರುತ್ತೆ. ಒಬ್ಬ ಚಳುವಳಿಗಾರರಾಗಿ ನಿಮಗೆ ಕುವೆಂಪು ಯಾಕೆ ಮುಖ್ಯ ಅನಿಸ್ತಾರೆ?

ಅವರ ಸಾಮಾಜಿಕ ಕಳಕಳಿ, ಅವರ ವೈಚಾರಿಕ ವೈಶಾಲ್ಯ, ಮತ್ತೆ ಸಾಹಿತ್ಯಕ್ಕೂ ಒಂದು ಉದ್ದೇಶ ಅಂತ ಇರುತ್ತಲ್ಲ, ಆ ಉದ್ದೇಶಗಳ ಸ್ಪಷ್ಟತೆ, ಒಬ್ಬ ಸಾಹಿತಿಯ ಸಾಮಾಜಿಕ ಪಾತ್ರ ಅಂತ ಏನಂತೀವಿ ಅದನ್ನೆಲ್ಲ ಸಂಪೂರ್ಣ ಭರ್ತಿ ಮಾಡೋವಂಥ ವ್ಯಕ್ತಿತ್ವ ಅವರದು. ಅದರ್ ವೈಸ್ ಎ ರೈಟರ್ ಬಿಕಮ್ಸ್ ಇರೆಲವಂಟ್. ಸೀ, ಕುವೆಂಪು ಬಿಕಮ್ಸ್ ರಿಲವಂಟ್ ಇವನ್ ಟುಡೆ, ಬಿಕಾಸ್ ಆಫ್ ದೀಸ್ ಫ್ಯಾಕ್ಟರ್ಸ್.

ನಿಮ್ಮ ಗೆಳೆಯರಾದಂತಹ ತೇಜಸ್ವಿ ಎಂತಹ ಬರೆಹಗಾರ?

ತನ್ನ ಸುತ್ತಮುತ್ತ ಇರೋ ಸಮಸ್ಯೆಗಳ ಬಗ್ಗೆ ಬಹಳ ಸ್ಪಷ್ಟತೆ ಇರೋವಂಥ ಒಬ್ಬ ಲೇಖಕ ಅವರು. ಅದನ್ನು ಹಾಸ್ಯದ ರೂಪದಲ್ಲಿ ಹೇಳಿರಬಹುದು. ಕೆಲವು ಸಾರಿ ಗಂಬಿsರವಾಗಿ ಹೇಳಿರಬಹುದು. ಆದರೆ ಎ ರೈಟರ್ ವಿತ್ ಟೋಟಲ್ ಕ್ಲಾರಿಟಿ ಆನ್ ಇಶ್ಯೂಸ್. ಈಚೆಗೆ ಅವರು ಜಾಗತೀಕರಣ ಬಗ್ಗೆ ಸಡಿಲವಾಗಿ ಕೊಟ್ಟ ಒಂದೆರಡು ಹೇಳಿಕೆ ಬಿಟ್ಟರೆ, ಯಾವುದೇ ವಿಷಯದ ಬಗ್ಗೆ ಸಡಿಲವಾಗಿ ಹೇಳಿಕೆ ಕೊಟ್ಟಿದ್ದು ನನಗೆ ಕಾಣಿಸಲಿಲ್ಲ. ಅವರು ಜಾಗತೀಕರಣದ ಬಗ್ಗೆ ಹೇಳುವಾಗ, ನಡುವೆ ರೈತರ ಬಗ್ಗೆ ಚರ್ಚೆ ಬಂದಾಗ, ಒಂದು ಮಾತು ಹೇಳಿದ್ದರು -’ರೈತ ಯಾಕೆ ಆತ್ಮಹತ್ಯೆ ಮಾಡ್ಕೋಬೇಕು. ಸರಕಾರಗಳೇ ಆತ್ಮಹತ್ಯೆ ಮಾಡ್ಕೋಬೇಕು’ ಅಂತ. ಇನ್‌ಫ್ಯಾಕ್ಟ್ ದಟ್ ಹ್ಯಾಸ್ ಬಿಕಮ್ ದಿ ಸ್ಲೋಗನ್ ಆಫ್ ಅವರ್ ರ‍್ಯಾಲಿ ಟುಮಾರೊ. ಸರಕಾರಗಳು ಅಂತ ಹೇಳಿಲ್ಲ ಅವರು. ಯಾರು ಸಾಲ ಕೊಟ್ಟಿದಾರೋ ಅವರೇ ಆತ್ಮಹತ್ಯೆ ಮಾಡ್ಕೋಬೇಕು ಅಂತ ಹೇಳಿದ್ದಾರೆ. ಅದು ಅತ್ಯಂತ ಸ್ಪಷ್ಟವಾದ ವಿಚಾರ.
ತೇಜಸ್ವಿ ಗ್ಲೋಬಲೈಜೇಶನ್ ಬಗ್ಗೆ ಹಗುರವಾಗಿ ಯಾವುದೋ ಒಂದು ಮೂಡಿನಲ್ಲಿ ಹೇಳಿಕೆ ಮಾಡಿದರು ಅಂತ ನನಗೆ ಅನಸ್ತಾ ಇಲ್ಲ. ಅವರನ್ನ ಓದ್ತಾ ಇರೋರಿಗೆ ಜಾಗತೀಕರಣವನ್ನ ಅವರು ಆಧುನಿಕತೆ ಅಂತ ಅರ್ಥ ಮಾಡಿಕೊಳ್ಳುತಿದ್ದಾರಾ ಅಂತ ಸಂಶಯ.

ಅದೇ ಬರೋದು ತಾಪತ್ರಯ. ಜಾಗತೀಕರಣಕ್ಕೆ ಕಾರಣ ಆಗಿರೋವಂತಹ ಒಪ್ಪಂದ ಪತ್ರ ಅಥವಾ ಟ್ರೀಟಿನಲ್ಲಿ ಇರೋವಂಥ ಎಲ್ಲ ಅಂಶಗಳನ್ನು ಸಂಪುರ್ಣವಾಗಿ ಅಧ್ಯಯನ ಮಾಡಿದರೇನೇ ಜಾಗತೀಕರಣದ ಬಗ್ಗೆ ಸ್ಪಷ್ಟತೆ ಬರೋದು. ಆ ಕೆಲಸಾನ ನಮ್ಮ ದೇಶದಲ್ಲಿ ಮಾಡಿರೋದು ಬಹಳಾ ಕಡಿಮೆ. ಉದಾಹರಣೆಗೆ ಡಬ್ಲೂಟಿ ಟ್ರೀಟಿ. ಅದು ಸುಮಾರು ೫೬೦ ಪುಟ ಇದೆ. ಇದು ಇಂಗ್ಲಿಷಿನಲ್ಲಿ ಕಬ್ಬಿಣದ ಕಡಲೆ. ವೈದಿಕ ಭಾಷೆ ತರಹ ಅನ್ನಬಹುದು. ಅದನ್ನ ಸಂಪೂರ್ಣ ಅರ್ಥಮಾಡಿಕೊಂಡು ಅಬಿsಪ್ರಾಯ ವ್ಯಕ್ತಪಡಿಸಿರೋರು ಬಹಳ ಕಡಿಮೆ. ಸರಕಾರಿ ಮಟ್ಟದಲ್ಲೂ ನಾವು ಸಂಬಳ ಕೊಟ್ಟು ಇಟ್ಟುಕೊಂಡಿರೊ ಅರ್ಥಶಾಸ್ತ್ರಜ್ಞರೂ ಈ ಕೆಲಸ ಮಾಡಿಲ್ಲ. ಹಾಗಾಗಿ ತಪುಗಳಾಗ್ತವೆ. ನನಗೆ ಅನಿಸೋದು ತೇಜಸ್ವೀನೂ ಓದಿಲ್ಲ ಅಂತ. ಓದಿದ್ದರೆ ಅವರು ಆ ಅಬಿsಪ್ರಾಯ ಹೇಳ್ತಿರಲಿಲ್ಲ.

ತೇಜಸ್ವಿ ಲಂಕೇಶ್ ಅನಂತಮೂರ್ತಿ ಮುಂತಾದ ನಮ್ಮ ಲೇಖಕರು ಸಮಾಜಶಾಸ್ತ್ರಜ್ಞರ ಕೆಲಸಾನೂ ಮಾಡಿಕೊಂಡು ಬಂದಿದಾರೆ. ಆದರೆ ಅಂತಾರಾಷ್ಟ್ರೀಯ ರಾಜಕಾರಣದ ವಿಷಯ ಬಂದಾಗ, ಇವರು ಒಂದು ಬಗೆಯ ಅಮಾಯಕ ಹೇಳಿಕೆಗಳನ್ನ ಕೊಡೋದು ಕಾಣ್ತದೆ. ಇದಕ್ಕೆ ಕಾರಣ ಅಧ್ಯಯನದ ಕೊರತೇನಾ? ಅಥವಾ ಚಳುವಳಿಗಳ ಜತೆ  ಸಂಪರ್ಕ ಕಡಿಮೆಯಾಗಿರೋದಾ?

ನಿಜ, ಚಳುವಳಿಗಳ ಜತೆ ಸಂಬಂಧ ದೂರವಾದಾಗ ಹೀಗಾಗುತ್ತೆ. ಅವರು ಸ್ವತಃ ಅಧ್ಯಯನ ಮಾಡೋಲ್ಲ ಅಥವಾ ಅಧ್ಯಯನ ಮಾಡಿರೋವಂಥ ಚಳುವಳಿಗಳಲ್ಲಿ ಸಂಬಂಧಾನೂ ಇಟ್ಟುಕೊಳ್ಳೋಲ್ಲ. ಅದರಿಂದಾಗುವ ತಪುಗಳು ಇವು.

ಒಬ್ಬ ಚಳುವಳಿಗಾರನಾಗಿ ಕನ್ನಡದ ಲೇಖಕರು ಬುದ್ಧಿಜೀವಿಗಳು ಸಮಾಜ ಹಾಗೂ ವ್ಯವಸ್ಥೆಯ ಜತೆ ಇರಿಸಿಕೊಂಡಿರೋ ಸಂಬಂಧವನ್ನು ಹ್ಯಾಗೆ ವಿಶ್ಲೇಷಣೆ ಮಾಡತೀರಿ?

ಕರ್ನಾಟಕ ಲೇಖಕರುಗಳಲ್ಲಿ ಒಂದು ಅನ್‌ಡಿಸೈರಬಲ್ ಟ್ರೆಂಡ್ ಅಂತೀವಲ್ಲ, ಅಪೇಕ್ಷಣೀ ಯವಲ್ಲದಂಥ ಒಂದು ನಡತೆ, ಅದು ಕಾಣಿಸಿಕೊಳ್ಳೋದಿಕ್ಕೆ ಶುರುವಾಗಿದೆ. ಚಳುವಳಿಗಳಿಗೂ ಅವರಿಗೂ ನಡುವೆ ಕಂದರ ಪ್ರಾರಂಭವಾಗಿದೆ. ಇದು ಕೆಲವು ಚಳುವಳಿಗಳು ಕ್ಷೀಣ ಆಗಲಿಕ್ಕೂ ಕಾರಣ ಆಗಿದೆ. ಇದಕ್ಕೆ ಮುಖ್ಯ ಕಾರಣ, ವ್ಯವಸ್ಥೆ ಜೊತೆ ಹೊಂದಾಣಿಕೆ. ದಲಿತ ಚಳುವಳಿ ನಾಶವಾಗೋದಕ್ಕೆ ಕಾರಣ ವ್ಯವಸ್ಥೆ ಜೊತೆ ಹೊಂದಾಣಿಕೆ. ಪವರ್ ಪಾಲಿಟಿಕ್ಸ್ ಬಗ್ಗೆ, ರಾಜಕೀಯ ಪಕ್ಷಗಳ ಬಗ್ಗೆ, ಸ್ಪಷ್ಟವಾದಂಥ ಒಂದು ನಿಲುವು ತಾಳದೇ ಇರೋದು ನಮ್ಮ ಬುದ್ಧಿಜೀವಿಗಳು ಮಾಡ್ತಾ ಇರೋ ತಪು. ಬೇರೆ ದೇಶದ ಬುದ್ಧಿಜೀವಿಗಳಿಗೆ ಹೋಲಿಸಿದರೆ, ಜನಾಂದೋಳನಗಳಲ್ಲಿ ಭಾಗವಹಿಸದೇ  ಇರೋದು ಕಾಣ್ತಿದೆ. ಒಂದು ಸಾರಿ ಡಾ ಎಚ್ ನರಸಿಂಹಯ್ಯನವರು ಬಹಳ ದೊಡ್ಡ ಭಾಷಣ ಮಾಡಿದರು ಜಾಗತೀಕರಣದ ವಿರುದ್ಧ. ನರಸಿಂಹಯ್ಯ ಗಾಂದಿsವಾದಿ ಅಂತಲೇ ಬರೀತಾರೆ ಇವತ್ತಿಗೂ. ಆನಂತರ ನಾನು ಮಾತಾಡೋ ದಿತ್ತು. ಅವರ ಎದುರಿಗೇನೇ ಹೇಳಿದೆ : ’ಯಾಕೆ ನಮ್ಮ ದೇಶದ ಬುದ್ಧಿಜೀವಿಗಳಿಗೂ, ಬೇರೆ ದೇಶದ ಬುದ್ಧಿಜೀವಿಗಳಿಗೂ ವ್ಯತ್ಯಾಸ ಬರುತ್ತೆ? ಬರ್ಟಂಡ್ ರಸೆಲ್ ಸಾಯೋಕೆ ಮುಂಚೆ ಇಂಗ್ಲೆಂಡಿನ ರಸ್ತೆಗಳಲ್ಲಿ ಚಳುವಳಿ ಮಾಡಿದರು, ವಿಯಟ್ನಾಂ ವಾರ್ ವಿರುದ್ಧ. ನಮ್ಮ ದೇಶದ ಬುದ್ಧಿಜೀವಿಗಳಿಗೆ ಏನಾಗಿದೆ?’ ನರಸಿಂಹಯ್ಯನವರು ಇಷ್ಟೊಂದು ಮಾತಾಡುತ್ತಾರೆ. ಅವರು ಜಾಗತೀಕರಣದ ವಿರುದ್ಧ ನಡೀತಾ ಇರೋ ಚಳುವಳಿಗಳಲ್ಲಿ ಭಾಗವಹಿಸಬೇಕು; ಅದಾದ ಮೇಲೆ ಅವರು ಮತ್ತೆ ಮಾತಾಡಿದರು. ’ಇಲ್ಲ ನನ್ನಿಂದ ಭಾಗವಹಿಸೋಕೆ ಆಗಲ್ಲ.’ ಸೀ, ಈ ಧೋರಣೆಯಿದ್ದಾಗ ಕಂದರ ತನ್ನಿಂದ ತಾನೇ ಸೃಷ್ಟಿಯಾಗುತ್ತೆ. ಆ ತಪು ಮಾಡಬಾರದು ಅಂತ ನಮ್ಮ ಬುದ್ಧಿಜೀವಿಗಳಿಗೆ ವಿನಂತಿ ಮಾಡ್ಕೋಬಹುದೇನೊ ಈ ಸಂದರ್ಭದಲ್ಲಿ.
ಕರ್ನಾಟಕದಲ್ಲಿ ೮೦ರ ದಶಕದಲ್ಲಿ ಹುಟ್ಟಿದ ಬಂಡಾಯ ಸಾಹಿತ್ಯ ಚಳುವಳಿ, ದಲಿತ ಚಳುವಳಿ, ಭಾಷಾ ಚಳುವಳಿ, ಆನಂತರ ಬಂದ ರೈತಚಳುವಳಿ ಇವೆಲ್ಲ ಈಗ ೞsದ್ರ ಆಗಿವೆ. ಇದಕ್ಕೆ ಕಾರಣ ಈ ಚಳುವಳಿಯ ತಾತ್ವಿಕ ಸ್ವರೂಪದಲ್ಲಿ ಇದೆಯೋ ಅಥವಾ ದೇಶದ ರಾಜಕೀಯ ಪರಿಸರದಲ್ಲಿದೆಯೊ?

ನೀವು ಹೇಳಿದ ಬಂಡಾಯ ಚಳುವಳಿ ಡಿಸಿಂಟಿಟಿಗ್ರೇಟ್ ಆಗಿರಬಹುದು. ದಲಿತ ಚಳುವಳಿ ಡಿಸಿಂಟಿಗ್ರೇಟ್ ಆಗಿರಬಹುದು. ರೈತ ಚಳುವಳಿ ಮಾತ್ರ ಆಗಿಲ್ಲ. ನಾಲ್ಕು ಸಾರಿ ಅದಕ್ಕೆ ಸ್ವಲ್ಪ ತಲೆನೋವುಗಳು ಬಂದರೂನೂ ಡಿಸಿಂಟಿಗ್ರೇಟಂತೂ ಆಗಿಲ್ಲ. ಸಣ್ಣ ಸಣ್ಣ ಗುಂಪುಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಆಚೆ ಹೋಗಿವೆ. ಇದು ಪ್ರತಿ ವರ್ಷಕ್ಕೊಮ್ಮೆ ಅದೂ ಚುನಾವಣೆಗೆ ಪೂರ್ವಭಾವಿಯಾಗಿ ಇದಾಗುತ್ತೆ. ಇನ್ನೂ ಎರಡು ವರ್ಷಕ್ಕೆ ಮುಂದಿನ ಚುನಾವಣೆ ವೇಳೆಗೆ, ಐದನೇ ಗುಂಪು ಆಚೆ ಹೋಗಬಹುದು. ಕೆಲವು ವ್ಯಕ್ತಿಗಳು ಆಚೆ ಹೋಗಬಹುದು. ಆದರೆ ರೈತ ಚಳುವಳೀನ ಗಟ್ಟಿಯಾಗಿ ಇಟ್ಟಿರೋದು ಒಳಗೆ ಇರೋವಂಥ ಕಾರ್ಯಕರ್ತರು. ಅವರಿಗೆ ಇರೋವಂಥ ವೈಚಾರಿಕ ಸ್ಪಷ್ಟತೆ, ಸಂಘಟನಾತ್ಮಕ ನಿಲುವು, ನಮ್ಮ ಇವತ್ತಿನ ರಾಜಕೀಯ ಪಕ್ಷಗಳ ಬಗ್ಗೆ ಇರೋವಂಥ ಸ್ಪಷ್ಟ ನಿಲುವು, ಬೇರೆ ನೀವ್ಹೇಳಿದಂಥ ಚಳುವಳಿಗಳಿಗೆ ಇಲ್ಲ. ಬಂಡಾಯ ಸಾಹಿತಿಗಳಿಗೆ ರಾಜಕೀಯ ಪಕ್ಷಗಳ ಬಗ್ಗೆ ಸ್ಪಷ್ಟವಾದ ನಿಲುವು ಇದೆಯಾ? ಒಂದು ಸಂಘಟನೆಯಾಗಿ ದಲಿತ ಚಳುವಳಿಯಲ್ಲಿ ರಾಜಕೀಯ ಪಕ್ಷಗಳ ಬಗ್ಗೆ ಸ್ಪಷ್ಟ ನಿಲುವು ಇದೆಯಾ?

ಪವರ್ ಪಾಲಿಟಿಕ್ಸಿನ ಬಗ್ಗೆ ರಾಜಕೀಯ ಪ್ರe ಬೆಳೆಸಿಕೊಳ್ಳೋದು ಬೇರೆ. ಪವರ್ ಪಾಲಿಟಿಕ್ಸಿನಲ್ಲಿ ನೇರವಾಗಿ ದುಮುಕುವುದು ಬೇರೆ. ನೀವು ಚುನಾವಣೆಗೆ ನಿಂತಿದ್ರಿ. ಗೆದ್ರಿ, ಸೋತಿರಿ. ಚಳುವಳಿಗಳು ಜನಾಬಿsಪ್ರಾಯ ರೂಪಿಸುವ ಕೆಲಸವನ್ನು ಮಾಡ್ತಾ ಒತ್ತಡದ ಗುಂಪುಗಳಾಗಿ ಪ್ರಭುತ್ವಗಳನ್ನು ನಿಯಂತ್ರಿಸಬಲ್ಲ ಜನಾಂದೋಲನಗಳಾಗಿ ಇರುವುದು ಈ ಹೊತ್ತಲ್ಲಿ ಹೆಚ್ಚು ಅಗತ್ಯ ಅನಿಸೋದಿಲ್ಲವಾ?

ನೋ. ನಾಟ್ ನೆಸೆಸರೀಲಿ. ಯಾವುದೇ ಒಂದು ಆಂದೋಲನ ಆದರೂನೂ ಜನಾಬಿsಪ್ರಾಯ ರೂಪಿಸೋವಂಥ ಒಂದು ಚಳುವಳಿ ನಡೀತಾನೆ ಇರಬೇಕು. ಅದರ ಜೊತೆಗೆ ಅದಿsಕಾರ ಗ್ರಹಣಾನೂ ಒಂದು ಮುಖ್ಯ ಭಾಗ. ಅದಿsಕಾರ ಗ್ರಹಣ ಇಲ್ಲದೆ ಯಾವುದೇ ಚಳುವಳಿ ತನ್ನ ಆಶೋತ್ತರಗಳನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳೋದು ಅಸಾಧ್ಯ. ಆದರೆ ಅದಿsಕಾರ ಗ್ರಹಣ ಯಾವ ರೀತಿ ಮಾಡಬೇಕು ಇದು ಮುಖ್ಯ ಪ್ರಶ್ನೆ. ಕನ್ನಡ ಚಳುವಳಿಯವರಿಗೆ ನಾನು ಇದೇ ಮಾತು ಹೇಳಿದ್ದೆ: ’ಕಾಲಕಾಲಕ್ಕೆ ನೀವು ಯಾವುದೇ ಪಕ್ಷದ ಸರಕಾರ ಇದ್ದರೂನೂ ಹೊಂದಾಣಿಕೆ ಮಾಡಿಕೊಳ್ಳೋದು, ಆ ಸರಕಾರದಲ್ಲಿ ಕೆಲವು ಹುದ್ದೆಗಳಿಗೆ ಪ್ರಯತ್ನ ಮಾಡೋದು, ಇದನ್ನು ಎಷ್ಟು ಕಾಲ ಮಾಡ್ತೀರಿ? ಇದನ್ನ ಬಿಟ್ಟು ನೀವೇ ಒಂದು ರಾಜಕೀಯ ಶಕ್ತಿಯಾಗಿ ಉಳಿದಿದ್ದರೆ ಕನ್ನಡದ ಸ್ಥಿತಿ ಬೇರೇನೆ ಆಗ್ತಿತ್ತು.’

ಚಳುವಳಿಗಳು ಸದ್ಯ ಇರುವ ರಾಜಕೀಯ ಸಮೀಕರಣದಲ್ಲಿ ತಮ್ಮ ಆಶಯ ಹೇಗೆ ಈಡೇರಿಸಿಕೊಳ್ಳೋದು ಅಂತ ಯೋಚನೆ ಮಾಡದೆ, ತಾವೇ ಪರ್ಯಾಯ ರಾಜಕೀಯ ಶಕ್ತಿಯಾಗುವುದು ಹೇಗೆ ಎಂಬ ಚಿಂತನೆ ಮುಖ್ಯ ಅಂತಾದರೆ, ಈಗಿರುವ ಚುನಾವಣಾ ರಾಜಕೀಯದ ಮಾದರಿಯನ್ನು ಒಪ್ಪಿಕೊಂಡೇ ಈ ರಾಜಕೀಯ ಪರ್ಯಾಯವನ್ನು ಮಾಡಬೇಕು ಅಂತ ಆಯಿತಲ್ಲವಾ?

ಹೌದು. ಮೂಲಭೂತ ಪ್ರಶ್ನೆ, ಪಾರ್ಲಿಮೆಂಟರಿ ಡೆಮಾಕ್ರಸಿಯ ಬಗ್ಗೆ ನಿಮಗೆ ವಿಶ್ವಾಸ ಇದೆಯೋ ಇಲ್ಲವೋ ಅನ್ನೋದು. ಸಂಸದೀಯ ಪ್ರಜಾಪ್ರಭುತ್ವಾನ ಇದೇ ಅತ್ಯುತ್ತಮ ಮಾರ್ಗ ಅಂತ ಒಪ್ಪಿದ ಮೇಲೆ, ಗುಣಾತ್ಮಕವಾಗಿ ಅದನ್ನ ಹ್ಯಾಗೆ ಬದಲಾವಣೆ ಮಾಡಬೇಕು? ಬದಲಾಗಿ ಈ ಸಂಸದೀಯ ಪ್ರಜಾಪ್ರಭುತ್ವಾನ ಹಾಳಗೆಡವತಾ ಇರೋ ರಾಜಕೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಕೊಂಡು ಈ ಚಳುವಳಿಗಳೂ ಹಾಳಾಗ್ತಾ ಇವೆಯೋ ಇಲ್ಲವೋ? ರೈತ ಚಳುವಳಿ ಮಾಡ್ತಾ ಇರೋ ಕೆಲಸಾನೆ ಇದು. ಪ್ರಜಾಪ್ರಭುತ್ವದಲ್ಲಿ ಮತದಾರ ಯಾವ ರೀತಿ ಗುಣಮುಖವಾಗಿ ಪರಿವರ್ತನೆ ಆಗಬೇಕು? ಇದನ್ನ ಪ್ರತಿ ಸಭೇನಲ್ಲಿ ಪ್ರತಿನಿತ್ಯ ನಾವು ಮಾತಾಡ್ತಾ ಇದೀವಿ ಜನರ ಜೊತೆ. ಆ ಮೂಲಕ ನಾವು ಸಂಸದೀಯ ಪ್ರಜಾಪ್ರಭುತ್ವವನ್ನು ಗುಣಾತ್ಮಕವಾಗಿ ಬದಲಾವಣೇನೂ ಮಾಡಬಹುದು. ಜೊತೆಗೆ ಅದಿsಕಾರ ಗ್ರಹಣಾನೂ ಮಾಡಬಹುದು.

ರಾಜಕೀಯ ಪರ್ಯಾಯವನ್ನು ಸೃಷ್ಟಿ ಮಾಡೋಕೆ ನೀವು ಹೇಳತಾ ಇರೋ ದಾರಿಯನ್ನು ಒಪೊದಾ ದರೆ, ಈ ಕೆಲಸವನ್ನು ಯಾವುದೋ ಒಂದು ಚಳುವಳಿ, ಉದಾಹರಣೆಗೆ ರೈತ ಚಳುವಳಿ, ಮಾತ್ರ ಮಾಡೋಕಾಗುತ್ತಾ ಅಥವಾ ಎಲ್ಲ ಜನಪರ ಚಳುವಳಿಗಳು ಸೇರಿ ಈ ಕೆಲಸ ಮಾಡುವಂಥದ್ದಾ?

ಇಲ್ಲ, ಸಮಾನ ದೃಷ್ಟಿಕೋನ ಇರೋವಂಥ ಜನಾಂದೋಲನಗಳ ಜೊತೆ ಕೈ ಜೋಡಿಸುವ ಮೂಲಕ ಈ ಕೆಲಸ ಸುಲಭ ಅಗುತ್ತೆ. ನಾವು ತಯಾರಿದೀವಿ ಕೈ ಜೋಡಿಸೋದಿಕ್ಕೆ. ಆ ಗುಣಗಳು ಇರೋವಂಥ ಆಂದೋಲನಗಳು ನಮ್ಮ ಮುಂದೆ ಕಾಣಿಸ್ತಾ ಇಲ್ಲ ಕರ್ನಾಟಕದಲ್ಲಿ.

ಹೀಗೆ ಸಮಾನ ಮನಸ್ಕ ಆಂದೋಲನಗಳನ್ನ ಒಂದು ಕೇಂದ್ರಕ್ಕೆ ತರೋಕೆ ನಾಯಕತ್ವ ಇರೋ ವ್ಯಕ್ತಿಗಳ ಅಗತ್ಯಾನೂ ಇರುತ್ತೆ. ಅನೇಕ ಸಲ ನಿಮ್ಮ ಹಠಮಾರಿತನದಿಂದ ಇಂತಹ ಕೆಲಸಗಳು ಸಾಧ್ಯವಾಗತಾ ಇಲ್ಲ ಅಂತ ಕೇಳಿದೇನೆ.

ಹೌದು ನಾನು ಹಠಮಾರಿ. ಆದರೆ ಚಟಮಾರಿ ಅಲ್ಲ; ಚಟಮಾರಿ ಅಲ್ಲದ ಕಾರಣಕ್ಕೇ ನಾನು ಹಠಮಾರಿ ತರಹ ಕಾಣಿಸ್ತೀನಿ. ಒಬ್ಬ ಚಳುವಳಿಗಾರನಲ್ಲಿ ಇರಬೇಕಾದದ್ದು ಅತ್ಯಂತ ಮುಖ್ಯವಾದ ಗುಣ ಹಠ. ಚಟ ಅಲ್ಲ. ರೈತ ಚಳುವಳಿಯಿಂದ ಚಟವಾದಿಗಳು ಆಚೆ ಹೋಗಿದಾರೆ. ನಾನು ಯಾವ ಚಳುವಳೀನಲ್ಲಿ ಇದೀನೋ, ಅಲ್ಲಿ ಚಟವಾದಿಗಳಿಗೆ ಅವಕಾಶವಿಲ್ಲ. ಹಠವಾದಿಗಳಿಗೆ ಇದೆ. ಆಚೆ ಹೋದವರು ನನ್ನನ್ನು ಹಠವಾದಿ ಅಂತಾರೆ. ಸರ್ವಾದಿsಕಾರಿ ಅಂತಾರೆ. ಹೌದು ನಾನು ಸರ್ವಾದಿsಕಾರಿ. ಯಾವುದರ ಬಗ್ಗೆ? ಶಿಸ್ತಿನ ಬಗ್ಗೆ. ಚಾರಿತ್ರ್ಯದ ಬಗ್ಗೆ. ಈ ಗುಣಗಳು ಇರಬೇಕೊ ಬೇಡವೊ?

ನಿಮ್ಮ ಪ್ರಕಾರ ಜನಪರ ಚಳುವಳಿಗಳು ಒಂದು ರಾಜಕೀಯ ಪರ್ಯಾಯದತ್ತ ಹೋಗಬೇಕಾದರೆ ಮಾಡಬೇಕಾದ ಮೊದಲ ಕೆಲಸ ಯಾವುದು?

ಮೊದಲು ವೈಚಾರಿಕ ಸ್ಪಷ್ಟತೆ, ವೈಚಾರಿಕ ಹೊಂದಾಣಿಕೆ ಆಗಬೇಕು. ಅನಂತರ ಅದರ ಆಧಾರದ ಮೇಲೆ ಕಾರ್ಯಕ್ರಮಗಳನ್ನ ರೂಪಿಸಬೇಕು. ಎರಡು ಮೂರು ವರ್ಷ ಸತತ ಕೆಲಸ ಮಾಡಿದರೆ, ನಾವು ಕರ್ನಾಟಕದ ಪ್ರಜಾಪ್ರಭುತ್ವಾನ ಗುಣಾತ್ಮಕವಾಗಿ ಬದಲಾವಣೆ ಮಾಡಬಹುದು. ಅಷ್ಟು ಪ್ರಭಾವ ಬೀರಬಲ್ಲಂತಹ ಬುದ್ಧಿಜೀವಿಗಳ ಒಂದು ದೊಡ್ಡ ಸಂಖ್ಯೆ ಕರ್ನಾಟಕದಲ್ಲಿದೆ. ಆದರೆ ಈ ಕೆಲಸಾನ ಅವರು ಕೈಗೆ ತಗೊಂಡಿಲ್ಲ. ಇವತ್ತಿಗೂ ಎಲ್ಲರೂ ಈ ಒಂದು ವೈಚಾರಿಕ ಸ್ಪಷ್ಟತೆಯಿಂದ ಕೈಜೋಡಿಸಿದರೆ, ಆರೋಗ್ಯಕರವಾದಂತಹ ಪರ್ಯಾಯ ವ್ಯವಸ್ಥೆಯನ್ನ ನಾವು ಕರ್ನಾಟಕ್ಕೆ ಕೊಡಬಹುದು. ಆ ವಿಶ್ವಾಸ ನನಗಿದೆ.

ಸಮಾನ ಮನಸ್ಕರು ಒಂದು ಕಡೆ ಸೇರೋಕೆ ಕಾಮನ್ ಪ್ರೋಗ್ರಾಂ ಇರುವಂತೆ ಕಾಮನ್ ಎನಿಮಿ ಕೂಡ ಇರಬೇಕಾಗುತ್ತೆ. ಅಂತಹ ಸಮಾನ ಶತ್ರು ಯಾರು?

ಈಗಿರೋವಂಥ ರಾಜಕೀಯ ಪಕ್ಷಗಳು. ಅವನ್ನು ಸಾಕ್ತಾ ಇರೋವಂತಹ ಹಿತಾಸಕ್ತಿಗಳು. ಕೆಲವು ವೆಸ್ಟೆಡ್ ಇಂಟರೆಸ್ಟ್‌ಗಳು ಎಲ್ಲ ರಾಜಕೀಯ ಪಕ್ಷಗಳನ್ನು ಸಾಕ್ತಾಯಿವೆ. ಯಾವುದೇ ರಾಜಕೀಯ ಪಕ್ಷಗಳೂ ತಮ್ಮ ಸ್ವತಂತ್ರ ಅಸ್ತಿತ್ವ ಉಳಿಸಿಕೊಂಡಿಲ್ಲ ಇವತ್ತಿಗೂ. ಅವೆಲ್ಲ ಯಾರದೋ ಏಜೆಂಟ್ ಆಗಿ ಕೆಲಸ ಮಾಡೋವಂಥ ಗುಂಪುಗಳಾಗಿವೆ ಹೊರತು, ಒಂದು ರಾಜಕೀಯ ಪಕ್ಷಕ್ಕೆ ಬೇಕಾದಂತಹ ಚೌಕಟ್ಟಿನಲ್ಲಿ ಕೆಲಸ ಮಾಡೋವಂತಹ ಗುಂಪುಗಳಾಗಿ ಉಳಿದಿಲ್ಲ. ಆ ಕಾರಣ ನಮ್ಮ ಶತ್ರುಗಳು ಯಾರು ಅನ್ನೋದು ಸ್ಪಷ್ಟ. ಆದರೆ ಚಳುವಳಿಗಳ ಶಕ್ತಿ ಮುಂದೆ ಆ ಶತ್ರುಗಳು ನಿಲ್ಲಕ್ಕೆ ಸಾಧ್ಯ ಇಲ್ಲ. ಆ ಶಕ್ತಿಗಳ ವಿರುದ್ಧ ಜನಾಬಿsಪ್ರಾಯ ಈಗಾಗಲೇ ಸಿದ್ಧ ಆಗಿದೆ. ಆದರೆ ಈ ಜನಾಬಿsಪ್ರಾಯಕ್ಕೆ ಒಂದು ದಾರಿ ತೋರಿಸೋವಂಥ ಒಂದು ವೇದಿಕೆ ಸೃಷ್ಟಿಯಾಗಿಲ್ಲ ಅಷ್ಟೆ.
ರೈತ ಸಂಘವು ರಾಜಕಾರಣದಲ್ಲಿ ಇರಿಸಿಕೊಂಡಿರುವ ಎಚ್ಚರ, ತೋರಿಸುವ ಪ್ರe ಇವೆಲ್ಲ ಜನಪರ ವಾಗಿದೆ. ಬಹಳ ಪ್ರಖರವಾಗಿದೆ, ಸರಿ. ಆದರೆ ನಮ್ಮ ಹಳ್ಳಿಗಾಡಿನ ಜಾತಿ ಸಮಾಜದಲ್ಲಿ, ಭೂರಹಿತ ಕೂಲಿಕಾರ್ಮಿಕರು ಇರೋ ಸಮಾಜದಲ್ಲಿ, ಅವರ ಪಾತ್ರದ ಬಗ್ಗೆ ಈ ಜನಪರತೆ ಅನ್ನೋದು ಕಾಣತಾ ಇಲ್ಲ.

 ರೈತಸಂಘ ಈಗಲೂ ಊಳಿಗಮಾನ್ಯ ಪದ್ಧತಿಯನ್ನು ಒಪ್ಪಿಕೊಂಡಿರೊ ಭೂಮಾಲೀಕರಿಂದ ತುಂಬಿದೆ ಅಲ್ಲವಾ?

ಹಾಗೇನಿಲ್ಲ. ತಾವು ಗಮನಿಸಿಲ್ಲ ಅಂತ ಕಾಣುತ್ತೆ. ನಮ್ಮ ಸಂಘಟನೆ ಯಾವ್ಯಾವ ಗ್ರಾಮದಲ್ಲಿದೆ, ಅಲ್ಲೆಲ್ಲೂ ಕೋಮುಗಲಭೆ ಆಗಿಲ್ಲ. ಕಾರಣ, ಸಣ್ಣಪುಟ್ಟ ಸಮಸ್ಯೆಗಳು ಹಿಂದಿನಿಂದ ಏನು ಉಳಿದುಕೊಂಡು ಬಂದಿವೆ, ಊಳಿಗಮಾನ್ಯ ಪದ್ಧತಿ ಅಂದರಲ್ಲ, ಅದಕ್ಕಿಂತ ದೊಡ್ಡ ದೊಡ್ಡ ಸಮಸ್ಯೆಗಳ ಕಡೆ ಅವರ ಗಮನ ಬಿದ್ದಿದ್ದರಿಂದ ಈ ಸಾಂಪ್ರದಾಯಿಕ ವೈಷಮ್ಯಗಳು ಅಸಮಾನತೆ ತಾರತಮ್ಯ ಇತ್ಯಾದಿ ಹಳ್ಳಿಗಳಲ್ಲಿ ಕಾಣಿಸ್ತವೆ. ಅವು ಕ್ರಮೇಣ ಅದೃಶ್ಯ ಆಗ್ತಾಯಿವೆ. ಹಾಗಾಗಿ ನಮ್ಮ ಸಂಘ ಎಲ್ಲೆಲ್ಲಿದೆಯೊ ಅಲ್ಲಿ ಕೋಮು ಗಲಭೆ ಮಾತ್ರವಲ್ಲ, ಜಾತಿಗಲಭೆಗಳೂ ಆಗಿಲ್ಲ. ಚಳುವಳಿನಲ್ಲಿ ಕಂಡುಬರುವಂಥ ಈ ನಿಲುವು ನಿಧಾನಗತಿಯಲ್ಲೇ ಆಗಬಹುದು. ಅಂತೂ ಆಗ್ತಾ ಇದೆ.

ನನ್ನ ಪ್ರಶ್ನೆಯ ಉದ್ದೇಶ ಭೂಹಂಚಿಕೆ ಬಗ್ಗೆ ಸಂಘದ ನಿಲುವು ಏನು ಅಂತ ತಿಳಿಯೋದಾಗಿದೆ ಸಾರ್. ಕರ್ನಾಟಕದಲ್ಲಿ ಕಾಗೋಡು ಸತ್ಯಾಗ್ರಹ ಆಗಿದೆ. ದೇವರಾಜ ಅರಸರು ತಂದ ಭೂಸುಧಾರಣೆ ಆಗಿದೆ. ಆದರೂ ಭೂಹಂಚಿಕೆ ಅನ್ನೋದು ಪೂರ್ಣ ರೀತಿಯಲ್ಲಿ ನಡೆದಿಲ್ಲ.

ನಮ್ಮ ದೃಷ್ಟಿಕೋನದ ಪ್ರಕಾರ ಭೂಮಿತಿ ಎಷ್ಟಿರಬೇಕೆಂದರೆ, ಒಂದು ಕುಟುಂಬಕ್ಕೆ ಹೊರಗಿನಿಂದ ಕೂಲಿ ಇಲ್ಲದೆ ಕೆಲಸ ಮಾಡುವಷ್ಟು ಹಿಡುವಳಿ ಇರಬೇಕು. ಇದು ಒಂದು ಕುಟುಂಬದ ಹಿಡುವಳಿಗೆ ನಾವು ಕೊಟ್ಟಿರೋವಂಥ ವಿಶ್ಲೇಷಣೆ. ಆಜ್ ಮಚ್ ಲ್ಯಾಂಡ್ ಆಜ್ ಎ ಫ್ಯಾಮಿಲಿ ನೀಡ್ಸ್, ವಿತೌಟ್ ಹೈರಿಂಗ್ ಎಕ್ಸಟ್ರನಲ್ ಲೇಬರ್. ಇದು ಸಮಾಜವಾದದ ಕೊನೇ ಹಂತ. ನಿಮಗೆ ಒಂದು ಉದಾಹರಣೆ ಹೇಳಬೇಕು ಭೂಮಿ ಬಗ್ಗೆ ನಮ್ಮ ನಿಲುವು ಏನು ಅಂತ. ನಾವು ಚಿಕ್ಕಮಗಳೂರಿನಲ್ಲಿ ಬೆಂಬಲ ಕಳಕೊಂಡೆವು. ಕಾರಣ, ಕಾಪಿs ತೋಟಗಳಿಗೂ ಭೂಸುಧಾರಣೆ ಅನ್ವಯಿಸಬೇಕು ಅಂತ ನಾವು ಘೂಷಣೆ ಹಾಕಿದ್ದು. ಆ ದಿವಸದಿಂದ ಕಾಪಿs ತೋಟದ ರೈತರೆಲ್ಲ ನಮ್ಮನ್ನು ಬಿಟ್ಟು ಹೋಗಿಬಿಟ್ಟರು. ಇವತ್ತಿಗೂ ಅದೇ ನಿಲುವು ನಮ್ಮದು. ಲ್ಯಾಂಡ್ ರಿಫಾರ್ಮ್ಸ್ ಶುಡ್ ಬಿ ಅಪ್ಲೈಡ್ ಟು ಈವನ್ ಪ್ಲಾಂಟೆಷನ್ಸ್ . ಇನ್ನೂ ಭೂಸುಧಾರಣೆ ಆಗಬೇಕು. ಈಗ ಆಗಿರೋದು ಅಂತ ಸಮಪರ್ಕವಾದ ಭೂ ಸುಧಾರಣೆ ಏನಲ್ಲ. ಲ್ಯಾಂಡ್ ಟು ದ ಟಿಲ್ಲರ್ ಅಂತ ಏನಂತೀವಿ, ಆ ಸುಧಾರಣೆ ಇನ್ನೂ ಆಗಿಲ್ಲ. ಕಾಗೋಡು ಸತ್ಯಾಗ್ರಹ, ಅದು ಗೇಣಿದಾರರ ಚಳುವಳಿ ಅಷ್ಟೇ ಹೊರತು, ಉಳುವವನ ಚಳುವಳಿ ಅಲ್ಲ. ಆದಾದ ಮೇಲೆ ಟೆನೆನ್ಸಿ ಆಕ್ಟ್ ಬಂದಿದ್ದು. ದೇವರಾಜ ಅರಸು ಮಾಡಿದ್ದೂನೂ ಅಷ್ಟೇನೆ. ಟೆನೆನ್ಸಿ ಲಾ ಅಂತ ತಂದು ಆಬ್ಸೆಂಟಿವ್ ಲ್ಯಾಂಡ್ ಲಾರ್ಡಿಸಂ ತೆಗೆದುಹಾಕೋ ಪ್ರಯತ್ನ ಆಯ್ತೆ ಹೊರತು, ಲ್ಯಾಂಡ್ ಟು ದಿ ಟಿಲ್ಲರ್ ಆಗಲೇ ಇಲ್ಲ. ಇನ್ನೂ ಆಗಿಲ್ಲ.

ನೀವು ಹೇಳಿದಿರಿ, ಗುಣಾತ್ಮಕ ಬದಲಾವಣೆಗೆ ಬೇಕಾದಂಥ ಬುದ್ಧಿಜೀವಿಗಳ ದೊಡ್ಡ ಸಂಖ್ಯೆ ಕರ್ನಾಟಕದಲ್ಲಿದೆ ಅಂತ. ಆದರೆ ಬುದ್ಧಿಜೀವಿ ವರ್ಗದಲ್ಲಿ ಜಾಗತೀಕರಣ ಕುರಿತು ಬಗೆಬಗೆಯ ಅಬಿsಪ್ರಾಯಗಳಿವೆ. ಸೈದ್ಧಾಂತಿಕ ಗೊಂದಲ ಇದೆ. ನೀವು ಇಂಟರ್‌ನ್ಯಾಶನಲ್ ರಿಲೇಶನ್ಸ್ ಅಧ್ಯಯನ ಮಾಡದೋರು. ಪಾಠ ಹೇಳದೋರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರೈತಚಳುವಳಿಗಾರನಾಗಿ ಕೆಲಸ ಮಾಡದೋರು. ಗ್ಲೋಬಲೈಜೇಶನನ್ನ ಹೆಂಗೆ ವಿಶ್ಲೇಷಣೆ ಮಾಡ್ತೀರಿ?

ಗೊಂದಲ ಬರೋದಿಕ್ಕೆ ಕಾರಣ, ನಮ್ಮಲ್ಲಿ ಬಹುಪಾಲು ಅರ್ಥಶಾಸ್ತ್ರಜ್ಞರು ಪ್ರಾಮಾಣಿ ಕರಲ್ಲ. ಅವಕಾಶವಾದಿಗಳು. ಜೊತೆಗೆ ಆತ್ಮವಿಶ್ವಾಸ ಇಲ್ಲದವರು. ಜಾಗತೀಕರಣ ಇಟ್ ಹ್ಯಾಸ್ ಬಿಕಮ್ ಎ ರಿಯಾಲಿಟಿ. ವಿ ಕಾಂಟ್ ಗೋ ಎಗೆನೆಸ್ಟ್ ಇಟ್ ಅನ್ನೋ ತೀರ್ಮಾನಕ್ಕೆ ಬಂದ್ಬಿಟ್ಟಿರೋರು. ಇದನ್ನು ಕೆಲವು ಎಕಾನಮಿಸ್ಟ್ ಕೆಟ್ಟ ಭಾಷೆ ಉಪಯೋಗಿಸಿ ಹೇಳೋದುಂಟು. ’ಇಫ್ ಯು ಕಾಂಟ್ ರೆಸಿಸ್ಟ್, ಲೆಡೌನ್ ಅಂಡ್ ಎಂಜಾಯ್ ಇಟ್’ ಅಂತ. ಇದಕ್ಕಿಂತ ಹೇಸಿಗೆ ನಿಲುವು ಏನಾದರೂ ಇದೆಯಾ? ಇಂಥ ಅರ್ಥಶಾಸ್ತ್ರಜ್ಞರು ನಮ್ಮ ಸುತ್ತಮುತ್ತ ಇದಾರೆ ಸ್ವಾಮಿ. ಇದು ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ನನಗೆ ಇನ್ನೂ ವಿಶ್ವಾಸ ಇದೆ. ಇಫ್ ಇಂಡಿಯಾ ಟೇಕ್ಸ್ ದಿ ಲೀಡರ್‌ಶಿಪ್ ಆಫ್ ಥರ್ಡ್‌ವರ್ಲ್ಡ್ ಕಂಟ್ರೀಸ್, ವಿ ಕ್ಯಾನ್ ಡೆಸ್ಟ್ರಾಯ್ ದಿಸ್ ಕೈಂಡ್ ಆಫ್ ಗ್ಲೋಬಲೈಜೇಶನ್. ಇದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕಾಗು ತ್ತೇನೋ. ಒಂದೊಂದು ಸಾರಿ ಧೈರ್ಯವಾಗಿ ಮಾತಾಡೋ ಧ್ವನಿ ಕೇಳ್ತಾ ಇದೆ. ನಮ್ಮ ಸರಕಾರದ ವಕ್ತಾರರಬಾಯಿಂದ,ಯಾರುಅಂತಾರಾಷ್ಟ್ರೀಯ ಸಮಾಲೋಚನೆಗಳಿಗೆ ಹೋಗ್ತಾರೊ ಅವರಿಂದ, ಮತ್ಯಾವುದೋ ಪ್ರೆಶರ್‌ನಿಂದ ಧ್ವನಿ ಕ್ಷೀಣ ಆಗುತ್ತೆ. ಆದರೆ ಇಲ್ಲಿ ಸಮಸ್ಯೆ ಜಾಸ್ತಿ ಜಾಸ್ತಿ ಆಗ್ತಾ, ಜನಾಂದೋಲನದ ಒತ್ತಡಕ್ಕೆ ಅವರೂ ಧೈರ್ಯವಾಗಿ ಮಾತಾಡಲೇ ಬೇಕಾಗುತ್ತೆ. ಸೋ, ಈಗ ಇಂಡಿಯಾ ಮಲೇಶಿಯಾ ಪಾಕಿಸ್ತಾನ ಇವು ಸ್ವಲ್ಪಮಟ್ಟಿಗೆ ನಾಯಕತ್ವ ತಗೊಂಡಿವೆ. ಜಾಗತೀಕರಣದ ಸಮಸ್ಯೆ ಈ ದೇಶಗಳಲ್ಲಿ ಜಾಸ್ತಿ ಆಗ್ತಾ ಆಗ್ತಾ ಇನ್ನೂ ಗಟ್ಟಿ ಧ್ವನಿಯಲ್ಲಿ ಮಾತಾಡ್ಲಿಕ್ಕೆ ಪ್ರಾರಂಭ ಆಗಬಹುದು. ಫೈನಲೀ ಕ್ಯಾಪಿಟಲಿಜಂ ಹ್ಯಾಸ್ ಟು ಕೊಲ್ಯಾಪ್ಸ್; ಅಲಾಂಗ್ ವಿಥ್ ಡಬ್ಲ್ಯೂಟಿಒ ಹ್ಯಾಸ್ ಟು ಕೊಲ್ಯಾಪ್ಸ್. ಆದರೆ ಈ ಕುಸಿತ ಬೇಗ ಆಗೋದಕ್ಕೋಸ್ಕರವಾಗಿ ನಾವು ಮಾಡ್ತಾ ಇರೋ ಚಳುವಳಿಯಿದು. ತಡ ಆದರೆ, ಅವು ಕೊಲ್ಯಾಪ್ಸ್ ಆಗೋಕ್ ಮುಂಚೆ ಸಾಕಷ್ಟು ಹಾನಿ ಮಾಡಿಬಿಡುತ್ವೆ. ಈ ಹಾನಿ ತಪ್ಪಿಸೋಕೋಸ್ಕರ ಈ ಚಳುವಳಿಗಳು.

ಈಗ ಅಫಘಾನಿಸ್ಥಾನದ ಮೇಲೆ ಅಮೆರಿಕ ಭಯೋತ್ಪಾದನೆ ನಿವಾರಣೆ ಹೆಸರಲ್ಲಿ ದಾಳಿ ಮಾಡಿತು. ಇದಕ್ಕೂ ಗ್ಲೋಬಲೈಜೇಶನ್ನಿಗೂ ಇರೋ ಸಂಬಂಧ ಎಂಥದ್ದು?

ನಾವು ಜಾಗತೀಕರಣವನ್ನ ಕಲೋನಿಯಲಿಜಂನ ಮುಂದುವರಿಕೆ ಅಂತ ಕರೀತಾ ಇರೋದು. ಇಟೀಸ್ ಎ ಪ್ರೊಸೆಸ್ ಆಫ್ ಎ ರಿಕಲೋನೈಜೇಶನ್. ಆಫ್ಟರ್ ದಿ ಫಸ್ಟ್ ಫೇಸ್ ಆಫ್ ಕಲೋನೈಜೇಶನ್, ಇದನ್ನ ನಾವು ಗ್ಲೋಬಲೈಜೇಶನ್ ಅಂತ ಅರ್ಥೈಸಿರೋದು. ಈಗ ಇರಾಕ್ ಮೇಲೆ ಯುದ್ಧ ಮಾಡಬೇಕು ಅನ್ನೋದನ್ನ ನಾವು ಅಮೆರಿಕದ ಪೆಟ್ರೊಟೆರರಿಸಂ ಅಂತ ಮಾತ್ರ ನೋಡೋದು. ಅಂಡ್ ದಿ ಬಿಗ್ಗೆಸ್ಟ್ ಟೆರರಿಸ್ಟ್ ಈಜ್ ಜಾರ್ಜ್‌ಬುಶ್. ಅಂಡ್ ದಟೀಸ್ ದಿ ಟ್ರೂತ್. ಇವತ್ತು ಪ್ರಪಂಚದಲ್ಲಿ ಅತ್ಯಂತ ದೊಡ್ಡ ಭಯೋತ್ಪಾದಕ ಅಂದರೆ ಅಮೇರಿಕಾನೆ. ಇನ್ನು ಮಿಕ್ಕವರ‍್ಯಾರು ಭಯೋತ್ಪಾದಕರಲ್ಲವೇ ಅಲ್ಲ. ಅವರೆಲ್ಲ ಬೇರೆಬೇರೆ ರೂಪದಲ್ಲಿ ಅಮೇರಿಕದ ಭಯೋತ್ಪಾದನೆಯನ್ನ ವಿರೋಧ ಮಾಡ್ತಾ ಇರೋದು. ಅದರಲ್ಲಿ ಸದ್ದಾಂ ಕೂಡ ಒಬ್ಬರು. ಐ ವುಡ್ ಸೇ ಬಿನ್ ಲ್ಯಾಡೆನ್ ಆಲ್ಸೋ. ನಾನು ಒಂದು ರೀತಿ ಅವರ ಸ್ನೇಹಿತ. ಯಾಕಂದರೆ ಅವರು ಏನು ವಿರೋಧ ಮಾಡ್ತಾ ಇದಾರೊ ಅದನ್ನೇ ವಿರೋಧ ಮಾಡೋನು ನಾನು.

ನೀವು ಈ ಮೀಟರ್ ಅಳವಡಿಕೆಯಂತಹ ರೈತರ ಸಮಸ್ಯೆ ಬಗ್ಗೆ ಚಳುವಳಿ ಮಾಡತೀರಿ. ಅದೇ ಕಾಲಕ್ಕೆ ಈ ಬಗೆಯ ಅಂತಾರಾಷ್ಟ್ರೀಯ ರಾಜಕೀಯವನ್ನು ಕೂಡ ವಿಶ್ಲೇಷಣೆ ಮಾಡತೀರಿ. ಇವೆರಡಕ್ಕೂ ಇರೋ ಸಂಬಂಧವನ್ನ ರೈತರಿಗೆ ಒಂದು ರಾಜಕೀಯ ಪ್ರeಯಾಗಿ ಕೊಡೋ ವಿಷಯದಲ್ಲಿ ನಿಮ್ಮ ಅನುಭವ ಏನು?

ಕರ್ನಾಟಕದಲ್ಲಿ ಈ ಕೆಲಸ ಮಾಡ್ತಾ ಇರೋದು ರೈತ ಚಳುವಳಿ ಒಂದೇ. ಇದರ ಬಗ್ಗೆ ಅಧ್ಯಯನ ಶಿಬಿರಗಳನ್ನ ಇಟ್ಕೋತಾ ಇರೋದು ರೈತ ಚಳುವಳಿ ಒಂದೇ. ಮಿಕ್ಕ ಯಾವ ಸಂಘಟನೇನೂ ಈ ಕೆಲಸ ಮಾಡ್ತಾ ಇಲ್ಲ.

ಅಲ್ಲ. ರೈತರಿಗೆ ಇದನ್ನು ಕೊಡೋ ವಿಷಯದಲ್ಲಿರೊ ತೊಡಕುಗಳ ಬಗ್ಗೆ ಕೇಳಿದೆ....

ಜಾಗತೀಕರಣದ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಇರೋವಂಥವರು ಇವತ್ತಿಗೂ ಕರ್ನಾಟಕದ ರೈತರು ಅಂತ ಹೇಳಬಹುದು ತಾವು. ಪ್ರತಿಯೊಬ್ಬನಿಗೂ ಗೊತ್ತು ಏನಾಗ್ತಿದೆ? ಎಲ್ಲಿಂದ ಸಮಸ್ಯೆ ಬರ್ತಿದೆ? ಎಲ್ಲಿಂದ ಏನು ಬಂತು? ನನ್ನ ಮುಸುಕಿನ ಜೋಳ ಬೆಲೆ ಕಡಿಮೆ ಆಗಕೆ ಏನ್ ಕಾರಣ? ಯಾವ ದೇಶದಿಂದ ಎಷ್ಟು ಮುಸುಕಿನ ಜೋಳ ಬಂತು? ಯಾವ ರೇಟಿಗೆ ಬಂತು? ತಾಳೆ ಎಣ್ಣೆ ಯಾವ ರೇಟಿಗೆ ಬಂತು? ಇದು ನಮ್ಮ ದೇಶದ ಬುದ್ಧಿಜೀವಿಗಳಿಗಿಂತ ಹೆಚ್ಚಾಗಿ ರೈತ ಕಾರ್ಯಕರ್ತರಿಗೆ ಹೆಚ್ಚು ಮಾಹಿತಿ ಇದೆ(ನಗು).

ಈ ಜಾಗತೀಕರಣದ ಹೊತ್ತಲ್ಲೇ ಭಾರತದಲ್ಲಿ ಮತೀಯವಾದವು ತುಂಬ ಬಿರುಸಾಗಿ ಬೆಳೀತಿದೆ.

ದೇರ್ ಈಜ್ ನೋ ಡಿಫರೆನ್ಸ್ ಬಿಟ್ವೀನ್ ವಾಟ್ ಹ್ಯಾನ್ಡ್ ಇನ್ ಗುಜರಾತ್ ಅಂಡ್ ಆಫ್‌ಘಾನಿಸ್ಥಾನ್. ಭಾರತದ ಮತ್ತು ಅಂತರರಾಷ್ಟ್ರೀಯ ಮೇಲ್ವರ್ಗಗಳು ಕೈಜೋಡಿಸಿರೋದು ಅಷ್ಟೆ. ಜಾಗತೀಕರಣದಿಂದ ಈ ಎರಡು ವರ್ಗಗಳಿಗೆ ಮಾತ್ರ ಲಾಭ. ಸೋ ಅದಕ್ಕೆ ಅವರೇನೇನು ತಂತ್ರಗಳನ್ನ ಉಪಯೋಗಿಸಬೇಕೊ ಅವನ್ನೆಲ್ಲ ಉಪಯೋಗಿಸ್ತಿದಾರೆ. ಈವನ್ ಬಾಬ್ರಿ ಮಸೀದಿ ಡಿಮಾಲಿಶ್ ಡಿಸೆಂಬರ್ ೬ನೇ ತಾರೀಕು ಅಂತ ನಿಗದಿ ಆಗಿದ್ದೂನೂ ವಾಷಿಂಗ್ ಟನ್‌ನಲ್ಲಿ. ಡಿಸೆಂಬರ್ ೬ರ ಕಾಲಕ್ಕೆ ಮುಖ್ಯವಾದ ಸಭೆ ಜೀನೇವಾದಲ್ಲಿ ನಡೀತಾ ಇತ್ತು. ದೇಶದ ಗಮನ ಆ ಕಡೆ ಹೋಗಬಾರದು, ಬೇರೆ ಕಡೆ ಬರಬೇಕು ಅನ್ನೊ ದೃಷ್ಟಿಯಿಂದಾನೇ ಡಿಸೆಂಬರ್ ೬ ನಿಗದಿ ಮಾಡಿದ್ದು. ಅಂತಾರಾಷ್ಟ್ರೀಯವಾಗಿ ನಡೆಯೋವಂತಹ ಕುತಂತ್ರಗಳು ಇವೆಲ್ಲ. ಭಾರತದ ಮೇಲ್ವರ್ಗ ಹಾಗೂ ಈ ಅಂತಾರಾಷ್ಟ್ರೀಯ ಮೇಲ್ವರ್ಗಗಳ ನಡುವೆ ನಿಕಟವಾದ ಸಂಕರ್ಪ ಉಂಟು. ಯಾವ್ಯಾವ ದೇಶದಲ್ಲಿ ಯಾವ್ಯಾವ ಸ್ಟ್ರ್ಯಾಟೆಜಿ ಉಪಯೋಗಿಸಬೇಕು? ಉದಾಹರಣೆಗೆ ಆಪಿsಕಾ ದೇಶದಲ್ಲಿ ರೂವಾಂಡಾ ಬುರುಂಡಿಗಳಲ್ಲಿ ಯಾವ ಸ್ಟ್ರ್ಯಾಟೆಜಿ ಉಪಯೋಗಿಸಬೇಕು? ಅಲ್ಲಿ ಹೆಂಗೆ ಜನಾಂಗೀಯ ಕಲಹಗಳನ್ನು ಸೃಷ್ಟಿ ಮಾಡಬೇಕು? ಇದನ್ನೂನು ಅಮೇರಿಕಾದ ತಜ್ಞರು ರೂಪಿಸೋವಂಥ ಕಾರ್ಯಕ್ರಮ. ಅದೇ ರೀತಿ ಭಾರತದಂಥ ದೇಶದಲ್ಲಿ ಯಾವ ರೀತಿ ಕೋಮುವಾದದ ಬೆಂಕಿ ಹಚ್ಚಬೇಕು? ಇದರ ಒಂದು ತಂತ್ರವನ್ನು ರೂಪಿಸೋರು ಅವರೇ. ಇದಕ್ಕೆ ತಯಾರಿ ಇರೋವಂಥ ಒಂದು ವರ್ಗ ಇದೆ ಭಾರತದಲ್ಲಿ. ಭಾರತದ ಜಾತಿಪದ್ಧತಿ ಯಿಂದ ಉದ್ಭವವಾಗಿರೊಂಥ ಆಲೋಚನೆಗಳು ಏನು ಇವೆ, ಅವನ್ನು ಸದ್ವಿನಿಯೋಗ ಪಡಿಸಿಕೊಳ್ಳೋವಂಥ ಮುಂದುವರಿದ ದೇಶಗಳನ್ನ ನಾನು ಅಂತಾರಾಷ್ಟ್ರೀಯ ಬ್ರಾಹ್ಮಣರು ಅಂತ ಕರೆಯೋದು.

ಬೇವಿನ ಮೇಲೆ, ಅರಿಶಿನದ ಮೇಲೆ, ಅಮೆರಿಕಾದ ಕಂಪನಿಗಳು ಪೇಟೆಂಟ್ ಮಾಡಿಸಿದವು ಅನ್ನೋ ಮಾತನ್ನ ಕೇಳತೀವಿ. ಜನ ನಮ್ಮದೇನನ್ನೊ ಯಾರೋ ಕದೀತಾ ಇದಾರೆ ಅನ್ನೋ ಆತಂಕವ ವ್ಯಕ್ತಪಡಿಸೋದನ್ನ ಕಾಣತೀವಿ. ವಾಸ್ತವವಾಗಿ ಪೇಟೆಂಟ್ ವಿಷಯದಲ್ಲಿ ನಮ್ಮ ರೈತರಿಗೆ ಯಾವ ತರಹ ಅನ್ಯಾಯವಾಗ್ತಾ ಇದೆ?

ನಮ್ಮಲ್ಲಿರೋವಂಥ ನೈಸರ್ಗಿಕ ಸಂಪತ್ತನ್ನು ನಾವೇ ಬಳಸಲಿಕ್ಕೆ ಆಗದಂಥ ವ್ಯವಸ್ಥೆ ತರೋದು ಪೇಟೆಂಟಿನ ಉದ್ದೇಶ. ಉದಾ : ಬೇವು. ಅಮೇರಿಕಾದಲ್ಲಿ ಒಂದು ಕಂಪನಿ ನೀಮ್ ಪೇಟೆಂಟ್ ಯಾವ ರೀತಿ ಮಾಡಿದೆ ಅಂದರೆ, ಆ ಬೇವಿನ ಬೀಜದಿಂದ ಯಾವ್ಯಾವ ಪ್ರಾಸೆಸ್‌ನಿಂದ ಏನೇನು ಮಾಡಬಹುದು, ೪ ಡಿಗ್ರೀಸ್‌ನಲ್ಲಿ ಏನು ಮಾಡಬಹುದು. ೬೦ ಡಿಗ್ರೀಸ್‌ನಲ್ಲಿ ಏನು ಮಾಡಬಹುದು ಇತ್ಯಾದಿ ಎಲ್ಲಾ ಪ್ರಾಸೆಸನ್ನೂ ಪೇಟೆಂಟ್ ಮಾಡಿ ಬಿಟ್ಟಿದೆ. ಒರಿಜಿನಲ್ ಡಾಕ್ಯುಮೆಂಟ್ ನನ್ನ ಕಡೆ ಇದೆ. ಆ ಪೇಟೆಂಟ್ ಚೌಕಟ್ಟಿಗೆ ನೀವು ಒಪ್ಪಿಗೆ ಕೊಟ್ಟರೆ, ನಿಮ್ಮಲ್ಲಿ ಎಷ್ಟೇ ಬೇವಿನ ಬೀಜ ಇರಲಿ, ಅದನ್ನ ತಗೊಂಡು ನೀವು ಪ್ರಾಸೆಸ್ ಮಾಡಕ್ಕೇ ಆಗಲ್ಲ. ಟ್ರೇಡ್ ರಿಲೇಟೆಡ್ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಅಗ್ರಿಮೆಂಟ್ ರುಜು ಹಾಕೋಕೆ ನಮ್ಮ ಸರಕಾರದವರು, ಇನ್ನೂ ಚರ್ಚೆ ಮಾಡ್ತಾ ಇದಾರೆ. ರುಜು ಹಾಕ್ತು ಅಂತಂದ್ರೆ, ರುಜು ಹಾಕಿದ ದೇಶದಲ್ಲಿ ಏನಾದರೂ ರಿಪಿಟೇಶನ್ಸ್ ಆಫ್ ದಿ ಸೇಮ್ ಪ್ರಾಸೆಸ್ ನಡೆದರೆ, ದಂಡ ಕೊಡಬೇಕು. ದಂಡ ಬಹಳ ದೊಡ್ಡ ಪ್ರಮಾಣದ್ದಾದ್ದರಿಂದ, ನಿಮ್ಮ ಸಂಪನ್ಮೂಲವನ್ನ ನೀವೇ ಬಳಸೋಕೆ ಆಗದೇ ಇರೋ ಸ್ಥಿತಿಗೆ ತಲುಪುತ್ತೀರಿ. ಈಗ ಬಿತ್ತನೆ ಬೀಜಗಳೂ ಪೇಟೆಂಟ್ ಆಗಿವೆ. ಜೆನಿಟಿಕಲಿ ಮಾಡಿಫೈಯ್ಡ್ ಅಂತ ಏನು ಹೇಳ್ತೀವಿ, ಈ ಕುಲಾಂತರಿಗಳಿಂದ ಬೇರೆ ತಳಿಗಳಿಗೂ ಪರಾಗ ಮಾಲಿನ್ಯದಿಂದ ಸೋಂಕು ತಗಲುತ್ತೆ. ಮೊನ್ನೆ ಒಂದು ಕೇಸಾಯಿತು ಕೆನಡಾ ದೇಶದಲ್ಲಿ. ಒಬ್ಬ ಆರ್ಗ್ಯಾನಿಕ್ ಫಾರ್ಮರ್. ಮಾನ್ಸಂಟೊ ಕಂಪನಿಯ ಬೀಜ ಉಪಯೋಗಿಸಿಲ್ಲ. ಆದರೆ ಪಕ್ಕದ ಜಮೀನಿನವನು ಆ ಬೀಜ ಉಪಯೋಗಿಸಿದಾನೆ. ಅದು ಪರಾಗ ಮಾಲಿನ್ಯ ಆಗಿ ಇಲ್ಲಿರೋ ಗುಣಗಳು ಅವನ ಬೆಳೆಗೆ ಬಂದ್ ಬಿಟ್ಟಿವೆ. ಕಂಪನಿ ಅವನ ಮೇಲೆ ಕೇಸ್ ಹಾಕ್ತು. ನೀನು ಕದ್ದಿದಿಯಾ ನಮ್ಮ ಬೀಜ ಅಂತ. ಕೋರ್ಟಲ್ಲಿ ಮಾನ್ಸಾಂಟೊ ಕಂಪನಿ ಪರ ತೀರ್ಮಾನ ಆಯಿತು. ಆ ರೈತ ಜುಲ್ಮಾನೆ ಕಟ್ಟಬೇಕಾಯಿತು. ಈಚೆಗೆ ನಡೆದಿದ್ದು ಇದು. ಸೋ, ಅಲ್ಲಿಗೆ ನಾಗುತ್ತೆ? ನಾವು ನಮ್ಮ ಸ್ವಂತ ತಳಿಗಳನ್ನೇ ಉಪಯೋಗಿಸೋಕೆ ಆಗದೇ ಇರೋ ಸ್ಥಿತಿಗೆ ಬಂದ್ ಬಿಡ್ತೀವಿ. ನಿಮ್ಮ ಸಂಪನ್ಮೂಲಗಳನ್ನ ನೀವೇ ಉಪಯೋಗಿಸೋಕಾಗದೇ ಇರೋದು, ನಿಮ್ಮ ಸ್ವಂತ ತಳೀನ ನೀವೇ ಉಪಯೋಗಿಸೋಕಾಗದೇ ಇರೋದಕ್ಕಿಂತ ಅಪಾಯ ಬೇಕೆ? ಇನ್ನೊಂದು ಅಪಾಯ ಇದೆ. ಯು ಸೀ, ಬಿತ್ತನೆಬೀಜ ಮಾರೋವಾಗ ಟೆಕ್ನಾಲಜಿ ಪಿs ಅಂತ ಚಾರ್ಜ್ ಮಾಡ್ತಾರೆ. ರಾಯಲ್ಟಿ ಅಂತ ಚಾರ್ಜ್ ಮಾಡೋಲ್ಲ. ಈಗ ಮಾನ್ಸಾಂಟೊ ಕಂಪನಿ ಬಿಟಿ ಹತ್ತಿ. ೪೫೦ ಗ್ರಾಂಗೆ ೧೬೦೦ ರೂಪಾಯಿ. ಯಾಕೆ ೧೬೦೦ ಅಂದರೆ, ಟೆಕ್ನಾಲಜಿ ಪಿs ಅಂತಾರೆ. ಇಟ್ಸ್ ಆಲ್‌ಮೋಸ್ಟ್ ರಾಯಲ್ಟಿ ಟು ದ ಪೇಟೆಂಟ್. ಹಂಗಾಗಿ ಕೃಷಿ ದುಬಾರಿಯಾಗೋದು ಒಂದು. ಇನ್ನೊಂದು ಕಡೆ ನಿಮ್ಮ ಬಿತ್ತನೆ ಬೀಜ ಬಳಸೋಕಾಗದೇ ಇರೋದು ಮತ್ತೊಂದು.

ರೈತ ಸಂಘವು ಕರ್ನಾಟಕದಲ್ಲಿರೊ ಅನೇಕ ಬಹುರಾಷ್ಟ್ರೀಯ ಬೀಜಕಂಪನಿಗಳ ಮೇಲೆ ಆಕ್ರಮಣ ಮಾಡಿದೆ. ಈ ಕಂಪನಿಗಳನ್ನ ಸಂಘ ತನ್ನ ಮುಖ್ಯ ಎದುರಾಳಿಯನ್ನಾಗಿ ಮಾಡಿಕೊಳ್ಳೋಕೆ ತರ್ಕ ಏನು?

ಒಂದು ದೇಶದ ಬಿತ್ತನೆ ಬೀಜದ ಮೇಲೆ ಮತ್ತೊಂದು ದೇಶದ ಕಂಪನಿ ಸಂಪೂರ್ಣ ಹತೋಟಿ ಸಾದಿsಸಿದರೆ, ಆ ದೇಶದ ಸ್ವಾತಂತ್ರ್ಯ ಉಳೀತು ಅಂತೀರಿ? ಅಂಡ್ ಸೀಡ್ ಈಸ್ ದ ಫಸ್ಟ್ ಲಿಂಕ್ ಇನ್ ದಿ ಫುಡ್ ಚೈನ್. ಒಂದು ದೇಶದ ಆಹಾರ ವ್ಯವಸ್ಥೇನ ನಿಯಂತ್ರಣ ಮಾಡೋವಂಥ ಒಂದು ಸ್ಥಾನಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಬಂದು ಕೂತರೆ, ಫುಡ್ ಸಾವರನ್‌ಟಿ ಅಂತ ಏನಂತೀವಿ, ಆಹಾರ ಸಾರ್ವಭೌಮತ್ವ, ಅದು ಹೋಯಿತು. ಅದು ಹೋಯಿತು ಅಂದರೆ ದೇಶದ ಸಾವರನ್‌ಟಿ ಹೋಯಿತು ಅಂತ. ಅದು ಅಪಾಯ ಇರೋದು.

ಈ ಫುಡ್ ಸಾವರನ್‌ಟಿ ಜತೆಗೆ ಆಹಾರ ವೈವಿಧ್ಯ ಕೂಡ ಈ ಜಾಗತೀಕರಣದಿಂದ ನಾಶವಾಗ್ತಾ ಇರೋ ಹಾಗಿದೆ.

ಹೌದು. ಯಾವ ಪ್ರದೇಶದಲ್ಲಿ ಜೈವಿಕ ವೈವಿಧ್ಯತೆ ಇದೆ, ಅಂಥ ದೇಶಗಳಲ್ಲಿ ಈ ಕಂಪನಿಗಳು ಹೆಚ್ಚು ಗಮನ ಕೊಟ್ಟು ಕೆಲಸ ಮಾಡ್ತಿವೆ. ಚಾರಿತ್ರಿಕ ಕಾರಣಕ್ಕೆ ಬಯೋಡೈವರ್ಸಿಟಿ ಇರೋದು ಗ್ಲೋಬಿನ ಕೆಳಭಾಗದಲ್ಲಿ ಮಾತ್ರ. ಅದಕ್ಕೆ ಕಾರಣ ಗ್ಲೋಬಿನ ಮೇಲ್ಭಾಗಕ್ಕೆ ಹಿಮಯುಗದಲ್ಲಿ ಬಯೋಡೈವರ್ಸಿಟಿ ಎಲ್ಲ ನಾಶವಾಗಿ ಹೋಯಿತು. ಸೋ, ಆಪಿsಕಾ ಏಶ್ಯಾ ಲ್ಯಾಟಿನ್ ಅಮೇರಿಕಾ ಇಲ್ಲೇ ಅವರ ಚಟುವಟಿಕೆ ನಡೀತಾ ಇರೋದು. ಇಲ್ಲೇ ವಿರೋಧಗಳು ಈಗ ವ್ಯಕ್ತ ಆಗ್ತಾ ಇವೆ. ಉದಾಹರಣೆಗೆ ಮೆಕ್ಸಿಕೋದಲ್ಲಿ. ಅದು ಮುಸುಕಿನ ಜೋಳದ ತೌರು. ನಮ್ಮಲ್ಲಿ ಏನು ೧೬೦೦೦ ಭತ್ತದ ತಳಿಗಳು ಇವೆ, ಇನ್ನೂ ಹೆಚ್ಚಿದ್ದವು.. ಅದೇ ರೀತಿ ಒಂದೊಂದು ಪ್ರದೇಶದಲ್ಲೂ ಸಮೀಕ್ಷೆ ನಡೀತಾ ಇತ್ತು- ಮಲ್ಟಿನ್ಯಾಶನಲ್ ಕಂಪನಿಗಳ ಜೆನಿಟಿಕಲಿ ಮಾಡಿಫೈಡ್ ಸೀಡ್ಸ್ ನಿಂದ. ಅದನ್ನು ರೈತರು ವಿರೋಧ ಮಾಡ್ತಾ ಇದಾರೆ. ಈ ವಿರೋಧ ಸಾಕಷ್ಟು ಯಶಸ್ವಿ ಆಗ್ತಾ ಇದೆ. ಇದು ಆಪಿsಕಾ ದೇಶಗಳಲ್ಲೂ ಪ್ರಾರಂಭ ಆಗಿದೆ. ಮೊನ್ನೆಮೊನ್ನೆ ಜಾಂಬಿಯಾ ದೇಶ, Pಮ ಬಂದಿದ್ದರೂನೂ, ಅಮೇರಿಕಾ ಜೆನಿಟಿಕಲಿ ಮಾಡಿಫೈಡ್ ಫುಡ್ ಕಳಿಸಿದಾಗ ರಿಜೆಕ್ಟ್ ಮಾಡ್ತು. ನಾವು ಉಪವಾಸ ಇರ್ತೀವಿ ಆ ವಿಷ ತಿನ್ನಲ್ಲ ಅಂತು.

ಈ ಬೀಜ ವೈವಿಧ್ಯದ ಪರವಾಗಿ, ಆಹಾರ ವೈವಿಧ್ಯದ ಪರವಾಗಿ ಕೆಲಸ ಮಾಡೊ ಜನತೆಯ ವಿeನಿಗಳು ಇದಾರಾ?

ಬಹಳ ಕಡಿಮೆ ಸಂಖ್ಯೆಯಲ್ಲಿ ಇದಾರೆ. ಆದರೆ ರೈತರು ದೊಡ್ಡ ಸಂಖ್ಯೆಯಲ್ಲಿ ಬೆಳೀತಿದಾರೆ. ನಮ್ಮ ಸ್ಥಳೀಯ ತಳಿಗಳನ್ನೇ ಉಪಯೋಗಿಸಿ ಅತ್ಯಂತ ಹೆಚ್ಚಿಗೆ ಉತ್ಪಾದನೆ ಮಾಡೋಕೆ ಪ್ರಯತ್ನ ಪಡ್ತಾ ಇರೋ ಕೃಷಿಕರ ಸಂಖ್ಯೆ ದಿನೇದಿನೇ ಜಾಸ್ತಿ ಆಗ್ತಾ ಇದೆ. ಆದಕಾರಣ ನಮ್ಮ ದೃಷ್ಟಿಯಲ್ಲಿ ಕೃಷಿಕರೆ ಮೊದಲನೇ ವಿeನಿಗಳು. ಅವರು ಸಾವಿರಾರು ವರ್ಷದಿಂದ ಪ್ರಯೋಗ ಮಾಡಿಕೊಂಡು ಬಂದಿರೋವಂಥ ವಿeನಿಗಳು. ಆ ಕಾರಣಾನೆ ಈವನ್ ಇನ್ ದಿ ಕನ್ವೆನ್‌ಶನಲ್ ಬಯಲಾಜಿಕಲ್ ಡೈವರ್ಸಿಟಿ, ಸಿಬಿಡಿ ಅಂತ ಏನ್ ಕರೀತೀವಿ ಅದು, ಟ್ರೆಡಿಶನಲ್ ನಾಲೆಜ್ ಸಿಸ್ಟಮ್ಸ್ ಆರ್ ನಾಟ್ ಇನ್‌ಪಿsರಿಯರ್ ಟು ಮಾಡರ್ನ್ ಸೈಂಟಿಪಿsಕ್ ಸಿಸ್ಟಮ್ಸ್. ದೇ ಶುಡ್ ಬಿ ಗೀವನ್ ಆನ್ ಈಕ್ವಲ್ ಸ್ಟೇಟಸ್.

ಜಾಗತೀಕರಣ ಜೀವವೈವಿಧ್ಯವನ್ನ ನಾಶಮಾಡುವಂತಹದ್ದು ಅನ್ನೊ ತರಹಾನೇ, ಪ್ರಾದೇಶಿಕ ಭಾಷೆಗಳ ಮೇಲೆ ಕೂಡ ಕೆಟ್ಟ ಪ್ರಭಾವ ಮಾಡ್ತಿದೆ. ಅಂತನ್ನೋ ಆತಂಕವಿದೆ.

ನಾವು ಸುಮ್ಮನೆ ಕೂತರೆ ಭಾಷೆ ಕೂಡಾ ನಾಶವಾಗಿ ಹೋಗುತ್ತೆ. ಅದರಲ್ಲಿ ಅನುಮಾನ ಇಲ್ಲ. ಸಂಸ್ಕೃತಿಯ ಬೇರೆ ಬೇರೆ ಮುಖಗಳು ಏನಿವೆ, ಆವಕ್ಕೆಲ್ಲ ಭಾಷೇನೇ ಒಂದು ದೊಡ್ಡ ಅಡಿಗಲ್ಲು. ಅದರ ಜೊತೆಗೆ ಕೃಷೀನೂ ಸಂಸ್ಕೃತಿಯ ಒಂದು ಭಾಗ. ಅದರ ಜೊತೆಗೆ ಆಹಾರದ ಸಂಸ್ಕೃತಿ. ಫುಡ್ ಕಲ್ಚರ್ ಈಜ್ ಆಲ್ ಸೋ ಗೆಟ್ಸ್ ಡಿಸ್ಟ್ರಾಯ್ಡ್. ವೆನ್ ಫುಡ್ ಕಲ್ಚರ್ ಗೆಟ್ಸ್ ಡಿಸ್ಟ್ರಾಯಿಡ್, ದಿ ಕನೆಕ್ಟೆಡ್ ಕ್ರಾಪ್ ಕಲ್ಚರ್ ಆಲ್ಸೋ ಗೆಟ್ಸ್ ಡಿಸ್ಟ್ರಾಯ್ಡ್. ವೆನ್ ದಿ ಕ್ರಾಪ್ ಕಲ್ಚರ್ ಗೆಟ್ಸ್ ಡಿಸ್ಟ್ರಾಯ್ಡ್, ದಿ ಅಗ್ರಿಕಲ್ಚರ್ ಗೆಟ್ಸ್ ಡಿಸ್ಟ್ರಾಯ್ಡ್. ವೆನ್ ಅಗ್ರಿಕಲ್ಚರ್ ಗೆಟ್ಸ್ ಡಿಸ್ಟ್ರಾಯ್ಡ್, ಬಯೋ ಡೈವರ್ಸಿಟಿ ಗೆಟ್ಸ್ ಡಿಸ್ಟ್ರಾಯ್ಡ್. ಜೈವಿಕ ವೈವಿಧ್ಯತೆ ಸಂಪೂರ್ಣ ನಾಶ ಆಗಿ ಹೋಗಿಬಿಡುತೆ. ಅಗೇನಾಗುತ್ತೆ, ಈ ಗ್ಲೋಬಲ್ ಮಾನೊ ಕಲ್ಚರಿಗೆ ನಾವು ಸೇರ್ಕೊಂಡು ಬಿಡ್ತೀವಿ. ಅಂಡ್ ಗ್ಲೊಬಲ್ ಮಾನೊಕಲ್ಚರ್ ಈಜ್ ಕಂಟ್ರೋಲ್ಡ್ ಬೈ ಮಲ್ಟಿನ್ಯಾಶನಲ್ ಕಾರ್ಫೋರೇಷನ್ಸ್ ! ವೆನ್ ಯು ಬಿಕಮ್ ಎ ಪಾರ್ಟ್ ಆಫ್ ಮಾನೊಕಲ್ಚರ್ ಕಂಟ್ರೊಲ್ಡ್ ಬೈ ಮಲ್ಟಿನ್ಯಾಶನಲ್ ಕಾರ್ಫೋರೇಷನ್ಸ್ , ಯು ಸೀಜಡ್ ಟು ಬಿ ಎ ನೇಶನ್ ಅಟಾಲ್. ಇವೆಲ್ಲ ಒಂದಕ್ಕೊಂದು ಸಂಬಂಧ ಇರೋವಂಥ ಬೆಳವಣಿಗೆಗಳು. ಇದರ ಪ್ರeನೆ ಇಲ್ಲ ನಮ್ಮ ದೇಶದ ಬುದ್ಧಿಜೀವಿಗಳಿಗೆ. ಎಲ್ಲಾ ವಿಷಯಾನೂ ಲಘುವಾಗಿ ತಗೊಳ್ಳೋದು. ಅಮೆರಿಕಾದ ಬಗ್ಗೆ ಆಕರ್ಷಣೆ ಮತ್ತು ದೌರ್ಬಲ್ಯ. ಅದರ ಒಂದು ಭಾಗ ಆಗೋದಿಕ್ಕೆ ಆಸೆ. ಇಂತಹ ಮನಸ್ಸು ಇರೋವಾಗ ತಡಿಯೋದು ಹ್ಯಾಗೆ?

ನಮ್ಮ ಬೀಜಪದ್ಧತಿಯನ್ನ ಭಾಷೆಯನ್ನ ಸಂಸ್ಕೃತಿಯನ್ನ ಯಾರೋ ಹೊರಗಿನವರು ಬಂದು ಹಾಳುಮಾಡ್ತಾ ಇದಾರೆ ಅನ್ನೋ ಆತಂಕ, ಯಾವಾಗಲೂ ನಮ್ಮನ್ನ ರಕ್ಷಣಾತ್ಮಕ ಮನಸ್ಥಿತಿಯಲ್ಲೇ ಇಡುತ್ತೆ. ಇದು ಒಂದು ಬಗೆಯಲ್ಲಿ ನಮ್ಮ ಸಂಪ್ರದಾಯಗಳ ಬಗ್ಗೆ ಸ್ವವಿಮರ್ಶೆಯಿಲ್ಲದ ಸ್ಥಿತಿಗೆ ಹಾಗೂ ಆಧುನಿಕತೆಯನ್ನು ಕುರುಡಾಗಿ ವಿರೋದಿsಸುವ ಸ್ಥಿತಿಗೆ ಕರೆದುಕೊಂಡು ಹೋಗೋ ಸಾಧ್ಯತೆ ಇದೆ.

ಆಧುನಿಕತೆ ಅನ್ನೋದರ ಬಗ್ಗೆ ಸ್ಪಷ್ಟ ಕಲ್ಪನೆ ಬರಬೇಕು. ಈಗ ಏನು ಆಧುನಿಕತೆ ಅಂತೀವಿ, ಅದು ನಿಜವಾಗಲೂ ಆಧುನಿಕವೇ? 

ಉದಾಹರಣೆಗೆ ಆಧುನಿಕ ಕೃಷಿ ಪದ್ಧತಿ. ಮೊದಲನೇ ಹಸಿರುಕ್ರಾಂತಿ ಅಂತ ಏನು ಕರೀತೀವಿ, ಇದನ್ನ ಸುಮಾರು ೫೦ ವರ್ಷ ಬಳಿಸಿದೀವಿ. ಇದು ನಿಜವಾಗಲೂನೂ ಆಧುನಿಕ ಪದ್ಧತಿನೋ? ಇದು ನಿಸರ್ಗಕ್ಕೆ ವಿರೋಧವಾದಂಥ ಅತ್ಯಂತ ಅವೈeನಿಕವಾದ ಪದ್ಧತಿ ಅನ್ನೋದು ಈಗ ಸ್ಪಷ್ಟ ಆಗ್ತಾ ಇದೆ. ನಾವು ರಾಸಾಯನಿಕಗಳ ಆಧಾರದ ಮೇಲೆ ಹಸಿರುಕ್ರಾಂತಿ ಅನ್ನೋ ಹೆಸರಲ್ಲಿ ಕೃಷಿ ಮಾಡಿದೆವು. ಅದರಿಂದ ಏನೇನು  ಕೆಟ್ಟ ಪರಿಣಾಮಗಳು ಆದವು? ಎಷ್ಟು ಪ್ರಮಾಣದಲ್ಲಿ ನಾವು ಮಣ್ಣಿನ ಫಲವತ್ತತೆಯನ್ನ ಹಾಳು ಮಾಡಿದೆವು? ಮಣ್ಣಲ್ಲಿರೋ ಅಮೂಲ್ಯವಾಗಿರತಕ್ಕಂತಹ ಕ್ರಿಮಿಗಳನ್ನ ಹಾಳು ಮಾಡಿದೆವು. ಪಕ್ಷಿಗಳನ್ನ ನಾಶಮಾಡಿದೆವು. ದುಂಬಿಗಳನ್ನ ಹಾಳುಮಾಡಿದೆವು. ಚಿಟ್ಟೆಗಳನ್ನ ಹಾಳು ಮಾಡಿದೆವು. ಜೇನು ಹಾಳುಮಾಡಿದೆವು. ಕೃಷಿಗೆ ಅತ್ಯಂತ ಅವಶ್ಯಕವಾದಂಥ ಕೀಟ ವೈವಿಧ್ಯತೆ, ಇನ್‌ಸೆಕ್ಟ್ ಡೈವರ್ಸಿಟಿ, ಹಾಳು ಮಾಡಿದೀವಿ. ಇದೆಲ್ಲ ಮನವರಿಕೆಯಾಗಿ, ಮತ್ತೆ ಇದ್ಯಾವುದೂ ಹಾಳಾಗದೇ ಇರೋವಂಥ ಪದ್ಧತಿ ಯಾವುದು ಅಂತ ಹುಡುಕಿ ಹುಡುಕಿ, ಈಗ ಮತ್ತೆ ’ಸಸ್ಟೈನಬಲ್ ಅಗ್ರಿಕಲ್ಚರ್’ ಅಂತ ಹೊಸಹೆಸರಲ್ಲಿ ಎಲ್ಲ ದೇಶಗಳು ಪ್ರಾರಂಭ ಮಾಡಿವೆ. ಸಸ್ಟೈನಬಲ್ ಅಗ್ರಿಕಲ್ಚರ್ ಅಂದರೆ ಬೇರೆ ಏನೂ ಅಲ್ಲ. ನಮ್ಮ ದೇಶದಲ್ಲಿ ನಮ್ಮ ಪೂರ್ವಜರು ನಡೆಸಿಕೊಂಡು ಬಂದಂತಹ ಕೃಷೀನೆ!

ಸಮಸ್ಯೆ ಇರೋದು ಇಲ್ಲೆ. ’ನಮ್ಮ ಪೂರ್ವಜರು’ ನಡೆಸಿಕೊಂಡು ಬಂದದ್ದು ಅಂತ ರೈತರು ಹೇಳಿದರೆ ಒಂದರ್ಥ ಬರುತ್ತೆ. ಸಾಮಾಜಿಕವಾಗಿ ಸಂಪ್ರದಾಯವಾದಿಗಳು ಹೇಳುವಾಗ ಮತ್ತೊಂದರ್ಥ ಬರುತ್ತೆ. ಜಾಗತೀಕರಣದ ಹೊತ್ತಲ್ಲಿ ಈ ಎರಡನೇ ಸಾಧ್ಯತೆ-ಮೂಲಭೂತವಾದಿಗಳ ಕನ್ಸರ್ವೇಟಿವ್ ಆಟಿಟೂಡ್ -ಕೂಡ ಮೇಲಕ್ಕೆ ಏಳ್ತಾ ಇದೆ. ಹೀಗಾಗಿ ಹಿಂದಕ್ಕೆ ಹೋಗೋದು ಯಾರು ಯಾವುದಕ್ಕಾಗಿ ಅನ್ನೋ ಪ್ರಶ್ನೇನ ಎಚ್ಚರದಿಂದ ಗಮನಿಸಬೇಕಾಗಿದೆ.

ನಿಜ, ಈಗ ನಮ್ಮದು ಅಂತ ನಾವು ಹೇಳೂದಕ್ಕೂ, ನಮ್ಮದು ಅಂತ ಮತೀಯ ಸಂಪ್ರದಾಯವಾದಿಗಳು ಹೇಳೋದಕ್ಕೂ ಭಾರಿ ವ್ಯತ್ಯಾಸ ಇದೆ. ಕನ್ಸರ್ವೇಟಿವ್ ಆಟಿಟೂಡ್ ಅಂತ ಏನಂದಿರಿ, ಆ ಅಂಶ ನಾವು ಹೇಳೋದು ವೈeನಿಕ ಸತ್ಯದ ಆಧಾರದ ಮೇಲೆ. ಯಾಕಂದರೆ ಈ ಪ್ರಪಂಚ ಸಂಪೂರ್ಣ ವೈವಿಧ್ಯತೆಯಿಂದ ಕೂಡಿದೆ. ಅದರಲ್ಲೂ ವಿಶೇಷವಾಗಿ ಪ್ರಪಂಚದ ಕೃಷಿಪದ್ಧತಿಗಳು ಸಂಪೂರ್ಣ ವೈವಿಧ್ಯತೆಯಿಂದ ಕೂಡಿವೆ. ಇದಕ್ಕೆ ಕಾರಣ ಆಗ್ರೋ ಕ್ಲೈಮ್ಯಾಟಿಕ್ ಕಂಡಿಶನ್ಸ್ ಅಂತ ಏನು ಕರೀತೀವಿ ಅದು ಒಂದೊಂದು ಪ್ರದೇಶದಲ್ಲಿ ಒಂದೊಂದು ತರಹ ಇರೋದು. ಹಂಗಾಗಿ ಬೇರೆ ಬೇರೆ ಪ್ರದೇಶದಲ್ಲಿ ಬೇರೆಬೇರೆ ಕೃಷಿ ಪದ್ಧತಿಗಳು ಇವೆ. ಅವು ಸಾವಿರಾರು ವರ್ಷಗಳಿಂದ ಪರೀಕ್ಷೆಗೆ ಒಳಗಾಗಿರೋವು. ಸಸ್ಟೈನಬಲ್ ಪ್ಲಾನೆಟ್ ಹ್ಯಾಜ್ ಬೀನ್ ದೇರ್, ಬಿಕಾಸ್ ಆಫ್ ದೀಸ್ ಡೈವೋರ್ಸ್ ಅಗ್ರಿಕಲ್ಚರ್ ಸಿಸ್ಟಮ್ಸ್. ಆಕಾರಣ ಮಾನೋ ಕಲ್ಚರ್‌ನಿಂದ ಪ್ಲಾನೆಟ್ ಹಾಳು ಮಾಡ್ತೀವಿ. ಮಾನೋ ಕಲ್ಚರ್ ಬಿಟ್ಟು, ಡೈವರ್ಸಿಟಿಗೆ ಇರೋವಂಥ ಒಂದು ಪದ್ಧತಿಗೆ ನಾವು ಬರಬೇಕು ಅಂತ ವೈeನಿಕವಾಗಿ ಹೇಳ್ತಾ ಇರೋ ಮಾತು. ಅದರೆ ಸ್ವದೇಶಿ ಸ್ವದೇಶಿ ಅಂತ ಸಂಪ್ರದಾಯವಾದಿಗಳು ಹೇಳೋ ಮಾತು ಇದೆಯಲ್ಲ, ಅದು ಆಷಾಢಭೂತಿತನದ ಮಾತು.

ಜಾಗತೀಕರಣವು ಏಕರೂಪೀ ಸಂಸ್ಕೃತಿಯನ್ನ ಹೇರುತ್ತೆ ಅಂತನ್ನೊ ಆತಂಕ ರೈತರು ಮಾಡೋವಾಗ, ಅದು ಬೀಜ ವೈವಿಧ್ಯವನ್ನ ಆಹಾರ ವೈವಿಧ್ಯವನ್ನ ರಕ್ಷಿಸಿಕೊಳ್ಳೋ ಕ್ರಿಯೆಯಾಗಿದೆ. ವಿಚಿತ್ರ ಅಂದರೆ, ನಮ್ಮ ಸಂಸ್ಕೃತಿಯಲ್ಲಿರೋ ಜಾನಾಂಗಿಕ ವೈವಿಧ್ಯಗಳನ್ನು ಉಳಿಸಿಕೋಬೇಕು ಅಂತ ಅನೇಕ ಎನ್‌ಜಿಓಗಳು ಕೆಲಸ ಮಾಡ್ತಾ ಇವೆ. ಜಾಗತೀಕರಣದ ಸಂದರ್ಭದಲ್ಲಿ ತುಂಬ ಕ್ರಿಯಾಶೀಲವಾಗಿರುವ ಈ ಎನ್‌ಜಿಓಗಳ ಪಾತ್ರವನ್ನ  ಚಳುವಳಿಗಾರರಾಗಿ ಹೇಗೆ ನೋಡುತ್ತೀರಿ?

ನಮ್ಮಲ್ಲಿರೋವಂಥ ಬಹುಪಾಲು ಸರಕಾರೇತರ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳ ಅಥವಾ ಫೋರ್ಡು, ರಾಕ್‌ಫೆಲರ್ ಮುಂತಾದ ವಿದೇಶಿ ಫೌಂಡೇಶನ್ಸುಗಳ ಏಜೆಂಟರಾಗಿ ಕೆಲಸ ಮಾಡ್ತಾ ಇವೆ. ಈ ಫೌಂಡೇಶನ್‌ಗಳು ಎಲ್ಲಾ ದೇಶದಲ್ಲೂ ದೊಡ್ಡ ಪ್ರಮಾಣದಲ್ಲಿವೆ. ಜೊತೆಗೆ ನೀವೇನು ಆಧುನಿಕತೆ ಅಂದಿರಿ, ಅದಕ್ಕೆ ಯಾವ ರೀತಿ ವೈeನಿಕವಾದ ಒಂದು ಅರ್ಥ ಕೊಡಬೇಕೋ, ಅದೇ ರೀತಿ ಕಲ್ಚರ್ ಅಂತನ್ನೋದಕ್ಕೂ ಒಂದು ವೈeನಿಕ ಅರ್ಥ ಕೊಡಬೇಕಾಗುತ್ತೆ. ನಮ್ಮ ಕಲ್ಚರ್ ಅಂದರೆ ಏನದು? ಅವರು ಹೇಳೋದೆ ನಮ್ಮ ಕಲ್ಚರೋ ಅಥವಾ ಅದು ಬೇರೇನೇ ಇದೆಯೋ? ನಮ್ಮ ನಿಜವಾದ ಕಲ್ಚರ್ ಏನಿದೆ, ಅದನ್ನು ಉಳಿಸ್ಕೋಬೇಕು. ಅದನ್ನ ಉಳಿಸ್ಕೋಬೇಕು ಅನ್ನೋದರ ಹಿನ್ನೆಲೆಯಲ್ಲಿ ವೈeನಿಕ ಕಾರಣಗಳು ಇರಬೇಕು. ಇಂಡಿಯನ್ ಕಲ್ಚರ್ ಅಂತ ಮಾತಾಡಿದರೆ ಸ್ವದೇಶಿ ಜಾಗರಣ ಮಂಚ್‌ನ ಮನಸ್ಸಿನಲ್ಲಿ ಅದಕ್ಕೆ ಬೇರೆ ಅರ್ಥ ಇದೆ. ಈಗ ನಾನು ಇಂಡಿಯನ್ ಕಲ್ಚರ್ ಅಂದರೆ, ನನ್ನ ಮನಸಲ್ಲಿ ಅದಕ್ಕೆ ಸಂಪೂರ್ಣ ಬೇರೆ ಅರ್ಥ ಇದೆ. ನನ್ನ ಮನಸ್ಸು ಜಾನಪದದ ದಿಕ್ನಲ್ಲಿ ಹೋಗ್ತದೆ. ಅದು ನಮ್ಮ ದೇಶದ ದುಡಿಯುವ ಜನರ ಸಂಸ್ಕೃತಿ.

ಟಿಪ್ಪಣಿ
೧. ಕನ್ನಡದಲ್ಲಿ ಚಿಂತನ ಪರಂಪರೆ ದೀರ್ಘವಾಗಿದೆ ಮತ್ತು ಸದೃಢವಾಗಿದೆ. ಕುವೆಂಪು ಕಾರಂತ ಡಿವಿಜಿ ಶಂಬಾ ಜೋಶಿ ಅವರಿಂದ ಹಿಡಿದು ಈಚಿನ ಚಿಂತಕರವರೆಗೆ ಅದರ ಹರಹು ಇದೆ. ಆದರೆ ಹೆಚ್ಚಿನವರು ಸಾಹಿತ್ಯ ಸಂಸ್ಕೃತಿ ನೆಲೆಯಿಂದ ಚಿಂತನೆ ಮಾಡುವವರು. ಕರ್ನಾಟಕದ ರಾಜಕಾರಣ ಆರ್ಥಿಕತೆಯ ನೆಲೆಯಿಂದ ಚಿಂತನೆ ಮಾಡುವವರು ಕಡಿಮೆ. ಸಮಾಜವಿeನದ ವೃತ್ತಿಪರ ಪ್ರಾಧ್ಯಾಪಕರು  ಕನ್ನಡದಲ್ಲಿ ಬರೆಯುವುದೇ ಕಡಿಮೆ. ಬರೆದರೆ ಅದರಲ್ಲಿ ಸಮುದಾಯ ಬದುಕಿನ ರಾಜಕಾರಣ ಇರುವುದಿಲ್ಲ. ರಾಜಕೀಯ ಅರ್ಥಶಾಸ್ತ್ರಗಳನ್ನು ತರಗತಿಯ ಗಿಳಿಪಾಠವನ್ನಾಗಿ ಮಾಡಿರುವ, ಬೌದ್ಧಿಕತೆಯನ್ನು ಪ್ರಭುತ್ವ ಪರವಾದ ಸೇವೆಯನ್ನಾಗಿ ಮಾಡಿರುವ  ಅಕೆಡೆಮಿಕ್ ವಿದ್ವತ್ತಿಗೆ ಒಂದು ಮಂಕು ಬಡಿದಿರುತ್ತದೆ. ಇಂತಹದೊಂದು ಹಿನ್ನೆಲೆಯಲ್ಲಿ ಪ್ರೊ. ನಂಜುಂಡಸ್ವಾಮಿ ಅವರ ರಾಜಕೀಯ ಚಿಂತನೆಗಳನ್ನು ಇಟ್ಟು ನೋಡಿದರೆ, ಅವುಗಳ ಮಹತ್ವ ತಿಳಿಯುತ್ತದೆ. ಅಧ್ಯಯನದಿಂದ ಚಿಂತನೆಗೆ ಸೈದ್ಧಾಂತಿಕತೆ ಮತ್ತು ಪಾಂಡಿತ್ಯ ಒದಗುತ್ತದೆ. ಚಳುವಳಿಗಳ ನಡುವಿಂದ ಹುಟ್ಟುವ ಚಿಂತನೆಗೆ ಸೈದ್ಧಾಂತಿಕ ಸ್ಪಷ್ಟತೆ, ಸರಳತೆ ಮತ್ತು ಆನ್ವಯಿಕತೆ ಇರುತ್ತದೆ. ಅಂತಹ ಉಪಯುಕ್ತತೆಯ ಆಯಾಮ ನಂಜುಂಡಸ್ವಾಮಿ ಚಿಂತನೆಗೆ ಇದೆ. ಅತ್ಯಂತ ಸ್ಥಳೀಯವಾದುದನ್ನು ಅಂತಾರಾಷ್ಟ್ರೀಯ ರಾಜಕೀಯ ತಿಳಿವಳಿಕೆಯಲ್ಲಿ ಇಟ್ಟು ವಿಶ್ಲೇಷಿಸುವ ಪ್ರಬುದ್ಧತೆಯಿದೆ. ಹೀಗೆ ಅವರ ಚಿಂತನೆಯು ಸಮುದಾಯ, ಅಂತರಾಷ್ಟ್ರೀಯ ರಾಜಕಾರಣ, ಸಾಹಿತ್ಯ ಸಂಸ್ಕೃತಿಗಳ ಒಬ್ಬ ವಿಚಿತ್ರ ಮಿಲನವಾಗಿದೆ.

ನಂಜುಂಡಸ್ವಾಮಿ ಚಳುವಳಿಗಾರರೂ ಹಾಗೂ ಮಾಸ್‌ಲೀಡರೂ ಆಗಿದ್ದರು. ಇದರ ಜತೆಯಲ್ಲಿ ಅವರೊಬ್ಬ ರಾಜಕೀಯ ಚಿಂತಕರೂ ಆಗಿದ್ದರು. ಅದರಲ್ಲೂ ಚಳುವಳಿಗಳು ಹಾಗೂ ಪ್ರಭುತ್ವ, ಜಾಗತೀಕರಣ ಹಾಗೂ ಭಾರತದಂತಹ ದೇಶಗಳ ಆರ್ಥಿಕತೆ ವಿಶ್ಲೇಷಣೆ, ಎನ್‌ಜಿಓ ಹಾಗೂ ಸಾಮ್ರಾಜ್ಯಶಾಹಿ ಸಂಬಂಧಗಳು, ಬೆಳೆಪದ್ಧತಿ, ಆಹಾರ ಸಂಸ್ಕೃತಿ ಹಾಗೂ ಬೀಜೋತ್ಪಾದನೆ ಮಾಡುವ ಬಹುರಾಷ್ಟ್ರೀಯ ಕಂಪನಿಗಳ ಅಂತರ್‌ಸಂಬಂಧ, ಪ್ರಭುತ್ವಪೋಷಕ ಅರ್ಥಶಾಸ್ತ್ರಜ್ಞರ ಸ್ವಭಾವ, ನಕ್ಸಲ್ ಹೋರಾಟದ  ಸ್ವರೂಪ, ಲೋಹಿಯಾವಾದದ ದೃಷ್ಟಿಯಿಂದ ಕಮ್ಯುನಿಸಂನ ವಿಮರ್ಶೆ ಇತ್ಯಾದಿ ಕುರಿತಂತೆ ಅವರ ತಿಳಿವಳಿಕೆಯು ವಿಶಿಷ್ಟವಾಗಿದೆ.

ಆದರೆ ವರ್ಗಕಲ್ಪನೆಯ ಬಗೆಗಿನ ಪೂರ್ವಗ್ರಹಗಳಿಂದ ಬಂದಿರುವ ಮಿತಿಗಳು ಸ್ವಾಮಿಯವರಲ್ಲಿವೆ. ಇದನ್ನು ಭೂಮಾಲೀಕತ್ವದ ಬಗೆಗಿನ ಅವರ ಮೆದು ಧೋರಣೆಯಲ್ಲಿಯೂ  ದಲಿತ ಮತ್ತು ಭೂರಹಿತ ಕೃಷಿಕಾರ್ಮಿಕರ ಸಮಸ್ಯೆಗಳ ಬಗೆಗಿನ ನಿರ್ಲಕ್ಷ್ಯದಲ್ಲಿಯೂ ಕಾಣಬಹುದು. ಇದು ಬಹುಶಃ ಬಹುತೇಕ ಲೋಹಿಯಾವಾದಿಗಳ ಸಮಸ್ಯೆ ಕೂಡ. ಇದರ ಜತೆಗೆ ವ್ಯಕ್ತಿವಾದಿ ಹಠವೂ  ಸೇರಿದೆ. ಸಿರಿವಂತ ಕುಟುಂಬಗಳಲ್ಲಿ ಹುಟ್ಟಿಬಂದವರು ಸಮಾಜವಾದಿ ಚಳುವಳಿಗಳಲ್ಲಿ ತೊಡಗಿಕೊಂಡರು ಎನ್ನುವುದು ಮೆಚ್ಚುಗೆಯ ಸಂಗತಿಯಾದರೆ, ಅವರಿಗೆ ಜಮೀನುದಾರಿ ದರ್ಪಗಳನ್ನು ಬಿಡಲಾಗಲಿಲ್ಲ ಎನ್ನುವುದು ಒಂದು ವೈರುಧ್ಯ. ಕೋಮುವಾದ ಮತ್ತು ಸಾಮ್ರಾಜ್ಯಶಾಹಿಯ ಬಗ್ಗೆ ಖಚಿತವಾಗಿ ಮಾತಾಡಬಲ್ಲ ಸ್ವಾಮಿ, ಸಾಮಾಜಿಕ ಸಮಸ್ಯೆಗಳಿಗೆ ಬಂದಂತೆ ಅಸೂಕ್ಷ್ಮರಾಗುತ್ತಾರೆಯೆ? ಇದು ಕರ್ನಾಟಕದ ರಾಜಕೀಯ ಚಿಂತನೆಯಲ್ಲಿರುವ ಸಮಸ್ಯೆಯೂ ಆಗಿದೆ. ಈ ಸಮಸ್ಯೆಗೆ ಪರ‍್ಯಾಯ ಉತ್ತರವನ್ನು ಕಡಿದಾಳು  ಹಾಗೂ ಗಣಪತಿಯಪ್ಪನವರ ಸಂದರ್ಶನಗಳಲ್ಲಿ ಕಾಣಬಹುದು. 






























ಕಾಮೆಂಟ್‌ಗಳಿಲ್ಲ: