ಭಾನುವಾರ, ಮೇ 24, 2015

Bhimrao Ambedkar: The song he died for


-indiatimes




'Kara kitihi halla, majboot Bhimacha killa.'(Attack all you want, Bhim's fortress is strong) 

Dalit student Sagar Shejwal was killed for this song, allegedly by eight upperclass youths in Maharashtra's temple town, Shirdi. The song, praising Dr B R Ambedkar, was Shejwal's mobile ringtone and it apparently offended the group, according to Shejwal's brother. An altercation ensued, and the youngster was brutally assaulted. He succumbed to his injuries on Friday afternoon. 

Songs like 'kara kitihi halla' are called Bhim Geet — songs espousing Ambedkar's social and political philosophy. A pre-Independence musical form that grew around Dalit activism, Bhim Geet continue to draw followers across ages. Long before writers like Baburao Bagul and Namdeo Dhasal and organizations like Dalit Panther made their mark, Bhim Geet were the community's voice. 

"When Babasaheb Ambedkar began his activism in the 1920s, Bhim Geet singers played a vital role in spreading his philosophy," says Ganesh Chandanshive, professor at Mumbai University and a folk performer himself. He recalls Keruba Ghegde, Bhau Phakkad and Hariharrao Sonule as some of the earliest singers of the genre. 

"There used to be a saying, 'Bamna ghari lihina, kunbya ghari daana, mahara ghari gaana (there is scholarship in a Brahmin's home, grains at a Kunbi's, and music in a Dalit's)," says professor Prakash Khandge, head of Mumbai University's Lok Kala Academy. The folk songs and ballads spoke of equality and fraternity to the then largely illiterate community. 

"Like the protest songs of the Civil Rights movement in the US, Dalit activists used Bhim Geet to challenge the system," says poet Vaibhav Chhaya. In the 1940s and early 1950s, the songs of men like Wamandada Kardak captivated audiences, soon followed by Shravan Yeshwante, Prahlad Shinde, Pirajirao Sarnaik and Annabhau Sathe. "Ganatich majhi gulaamaat hoti, zindagich majhi salaamaat hoti... Todlis majhi gulaamachi bedi (I used to be counted as a slave, I spent my life bowing before others...You were the one who broke my chains)," sings Shinde. 

The Bhim Geet movement, says Khandge, slowed down with the start of the Samyukta Maharashtra movement in the mid-1950s. "Ambedkar, too, was part of the movement. The primary concern then was the creation of a separate state," explains Khandge. The Bhim Geet movement fell further behind in the 60s with the Shiv Sena raising the decibel on the Marathi manoos issue. "Slowly, all those who were singing Bhim Geet began to explore broader social themes. Some moved to folk theatre," Khandge says. 

It was around the same time that Dalit activism found new voices in writers like Bagul and Dhasal. "Golpitha by Dhasal and Baluta by Daya Pawar were written. The 'little magazine' movement that began then produced several writers and poets," Khandge says. "The work that used to be done by the Bhim Geet singers was then taken on by the new wave of activists." 

Though largely replaced by literature, the Bhim Geet movement refused to disappear. The songs continued to thrive in pockets of Mumbai and outside, through qawwali events. "The Dalit community lived in areas that also had a large Muslim population," says Chhaya. Bhim Geet qawwalis flourished in Mumbai neighbourhoods like Bhendi Bazaar, Mazgaon, Naigaon, and also inside Worli's BDD chawls. "Both were minority communities," Khandge says. "That created a bond and they learnt from each other." Repartee and animated ditties flew back and forth, and Bhim Geet qawwali events ensured that the tradition adapted to the changing times. In fact, in time, these performances began featuring film-inspired romantic themes. 

But through shahirs like Sambhaji Bhagat, the ballads began exploring themes like globalization and feminism. "My performances have female sutradhaars," says Bhagat, who has just returned from a rousing event in a slum settlement at Pune's Mangalvar Peth. "There are many young performers on the scene today. And it's the younger generation that makes up most of the audience at these events." 

Those like Kabeer Shakya and his band Dhamma Wings have even adapted songs written by veterans for newer audiences. Shakya's repertoire includes a popular, guitar-accompanied version of Wamandada Kardak's 'Chaandanyachi Chhaya'. "These songs had played a huge role in changing society during their time," says Shakya. "We want to do whatever it takes to bring them, and the path-breaking ideas they talk about, to today's generation."

ಗುರುವಾರ, ಮೇ 14, 2015

ಜಡೆ ಜಾನಪದ


ಮೊಗ್ಗಿನ ಜಡೆ
ಮೂರು ಕಾಲಿನ ಜಡೆ
ಹೆಣ್ಣಿನ ಸೌಂದರ್ಯವೆಲ್ಲ ಅವಳ ಕೇಶದಲ್ಲಿ ಅಡಗಿದೆ ಎನ್ನುತ್ತಾರೆ ಬಲ್ಲವರು. ಪ್ರಾಚೀನ ಕಾಲದಿಂದಲೂ ಜಡೆಯ ಬಹುರೂಪವನ್ನು ಕವಿಗಳು ವರ್ಣನಾತ್ಮಕವಾಗಿ ಚಿತ್ರಿಸಿದ್ದಾರೆ. ಆಧುನಿಕ ರಾಷ್ಟ್ರಕವಿಗಳಾದ ಜಿ.ಎಸ್.ಶಿವರುದ್ರಪ್ಪನವರು 'ಜಡೆ'ಯಿಂದ ಆಕರ್ಷಿತರಾಗಿ "ಜಡೆ" ಎಂಬ ಕವಿತೆಯನ್ನೇ ರಚಿಸಿದ್ದಾರೆ.

'ಸೌಂದರ್ಯ' ಎಂಬುದು ನೋಡುಗರ ಕಣ್ಣಿನಲ್ಲಿ, ಮನಸ್ಸಿನಲ್ಲಿ ಅವಿರ್ಭವಿಸುವಂತಹುದು. ಪ್ರಾಚೀನ ಕಾಲದಲ್ಲಿ ಗಂಡು-ಹೆಣ್ಣನ್ನು ಗುರ್ತಿಸಲು ಅವರ ಅಂಗಾಂಗಗಳನ್ನು ನೋಡ ಬೇಕಾಗುತ್ತಿತ್ತು. ಏಕೆಂದರೆ ಗಂಡಿಗೂ ಹೆಣ್ಣಿನಷ್ಟೇ ಉದ್ದವಾದ ತಲೆಗೂದಲಿರುತ್ತಿತ್ತು. ಯಾವುದಾದರೊಂದು ವಿಶೇಷ ಸಂದರ್ಭದಲ್ಲಿ ಹೆಣ್ಣು-ಗಂಡು ತಮ್ಮ ಮನಸ್ಸಿಗೊಪ್ಪುವಂತೆ ಅಲಂಕರಿಸಿಕೊಳ್ಳುತ್ತಿದ್ದರು. ಪ್ರಾಚೀನ ಕಾಲದಿಂದಲೂ ಕನ್ನಡತಿಯರು ಕೇಶಾಲಂಕಾರ ಕಲೆಯಲ್ಲಿ ನಿಪುಣರೆನಿಸಿ ಕೊಂಡಿದ್ದಾರೆ. ನಮ್ಮಲ್ಲಿ ಪುರುಷರ ಕೂದಲಿಗಿಂತ ಮಹಿಳೆಯರ ಕೂದಲಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಹೆಣ್ಣಿನ ಸೌಂದರ್ಯವೆಲ್ಲ ಅವಳ ಕೇಶದಲ್ಲಿ ಅಡಗಿದೆ ಎನ್ನುತ್ತಾರೆ. ನಿಸರ್ಗದಲ್ಲಿ ಸಾಕಷ್ಟು ವೈವಿಧ್ಯವಿರುವಂತೆ, ಪ್ರಕೃತಿ ಎಂದು ಕರೆಯಲ್ಪಡುವ ಹೆಣ್ಣಿನಲ್ಲೂ ಆಕೆಯ ಕೂದಲಿನಲ್ಲೂ ಬಹಳಷ್ಟು ವಿಶಿಷ್ಟತೆಗಳಿವೆ. ಮದುವೆ, ನಾಮಕರಣ ಮುಂತಾದ ಶುಭ ಸಂದರ್ಭಗಳಲ್ಲಿ ಹೆಣ್ಣು ತನ್ನನ್ನು ,ತನ್ನ ಜಡೆಯನ್ನು ವಿಶೇಷವಾಗಿ ಅಲಂಕರಿಸಿಕೊಂಡು ಬೀಗುತ್ತಾಳೆ. ಕೂದಲಿನಲ್ಲಿ ಹಲವು ವಿಧಗಳಿವೆ- ದಟ್ಟ ಕೂದಲು, ನೀಳ ಕೂದಲು, ಗುಂಗುರು ಕೂದಲು, ವಿರಳ ಕೂದಲು, ಕಪ್ಪು ಕೂದಲು, ಕೆಂಚು ಕೂದಲು, ಬಿಳಿಮಿಶ್ರಿತ ಕಪ್ಪು ಕೂದಲು ಮುಖ್ಯವಾಗುತ್ತವೆ.

ಜನಪದ ಪುರಾಣಗಳಲ್ಲಿ ಜಡೆ

ಜಡೆ ಬಹಳ ಹಿಂದಿನಿಂದಲೂ ಸಾಹಿತ್ಯದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಹಾಗಾಗಿ ಪುರಾಣ, ಚರಿತ್ರೆಯೊಂದಿಗೆ ಜಡೆ ತಳಕು ಹಾಕಿಕೊಂಡಿದೆ. ಸರ್ವಜ್ಞನ ಸೋಮೇಶ್ವರ ಶತಕದಲ್ಲಿ ೧೨೦ ಜಡೆಗಳ ಬಗ್ಗೆ ಉಲ್ಲೇಖಗಳಿವೆ. ಕಾಡಿನಲ್ಲಿದ್ದ ಋಷಿಪುಂಗವರು ಉದ್ದನೆ ಜಡೆ ಬಿಡುತ್ತಿದ್ದೂ, ಆ ಜಡೆ ಗಂಟಾದರೆ ಅವರನ್ನು 'ಜಡೆಸಿದ್ದಯ್ಯ'ನೆಂದು ಕರೆದಿದ್ದಾರೆ. ಋಷಿ ಪತ್ನಿಯರು ನಾಗವೇಣಿಯರಾಗಿರುತ್ತಿದ್ದರು. ಪುರಾಣದಲ್ಲಿ ದೇವಾನುದೇವತೆಗಳಿಗೆಲ್ಲ ನೀಳಕೇಶವಿರುತ್ತಿತ್ತು. ಶಿಷ್ಟಪುರಾಣಕ್ಕೂ ಜನಪದ ಪುರಾಣಕ್ಕೂ ಬಹಳ ವ್ಯತ್ಯಾಸಗಳಿವೆ. ಶಿಷ್ಟ ಪುರಾಣದಲ್ಲಿ ದೈವತ್ವದ ಪರಿಕಲ್ಪನೆ ಭಯಭಕ್ತಿಯಿಂದ ಕೂಡಿದ್ದರೆ, ಜನಪದ ಪುರಾಣದಲ್ಲಿ ದೈವತ್ವದ ಪಾತ್ರಗಳನ್ನು ಜನಪದರೇ ಅನುಭವಿಸುತ್ತಾರೆ. ಸೀತೆಯ ಸಿರಿಮುಡಿಗೆ ರಾವಣ ಕೈ ಹಾಕಿದ್ದರಿಂದಲೇ ರಾಮಾಯಣ ನಡೆಯಿತು, ದ್ರೌಪದಿಯ ಶ್ರೀಮುಡಿಗೆ ದುಶ್ಯಾಸನ ಕೈ ಹಾಕಿದ್ದರಿಂದ ಮಹಾಭಾರತ ನಡೆಯಿತು. ಪರಶಿವ ಗಂಗೆಯನ್ನು ನಿಯಂತ್ರಿಸಲು ತನ್ನ ಜಟೆ ಬಳಸಿದ್ದಾನೆ. ಅದೇ ರೀತಿ ಮಾರಮ್ಮನ ಜಡೆ, ಎಲ್ಲಮ್ಮನ ಹಾವಿನ ಜಡೆ, ಮಂಟೇಸ್ವಾಮಿ/ಜುಂಜಪ್ಪರ ಚೇಳಿನಜಡೆ, ಶಿವನ ವ್ಯೂಮಕೇಶ ,ಅಕ್ಕಮಹಾದೇವಿಯ ನೀಳ ಕೇಶ ಮುಖ್ಯವಾಗುತ್ತದೆ. ಚಾಲುಕ್ಯನ ಜಡೆ ನಂದರ ನಾಶಕ್ಕೆ ಕಾರಣ ವಾಯಿತಂತೆ. ಬ್ರಹ್ಮ ಕಲಶ ಸ್ಥಾಪನೆ ಸಂದರ್ಭದಲ್ಲಿ ಕೂದಲಿನ ಪ್ರಸ್ತಾಪ ಬರುತ್ತದೆ. ಕೇಶ ಎಂಬುದು ಗೌರವ, ಪಾತಿವ್ರತ್ಯೆ, ಮರ್ಯಾದೆಯ ಸೂಚಕ.

ಶಿಲೆಗಳಲ್ಲಿ ಜಡೆಯ ಪರಿಕಲ್ಪನೆ

ಪ್ರಾಚೀನ ಕರ್ನಾಟಕದ ಶಿಲ್ಪಕಲೆಗಳಲ್ಲಿ, ಕನ್ನಡ ಕಾವ್ಯಗಳಲ್ಲಿ ದೊರೆಯುವ ಜಡೆ/ಮುಡಿಗಳ ವರ್ಣನೆ ಅಸಾಧಾರಣವಾದುದು. ಚಾಲುಕ್ಯರ ರಾಜಧಾನಿಯಾಗಿದ್ದ ಐಹೊಳೆ, ಪಟ್ಟದಕಲ್ಲು, ಲಡಖಾನ ವೊದಲಾದ ದೇವಾಲಯಗಳ ಕೇಶಲಂಕಾರ ವೈವಿಧ್ಯಮಯವಾಗಿವೆ. ಅವುಗಳಲ್ಲಿ ಪ್ರಮುಖ ವಾದುವುಗಳೆಂದರೆ-ಬಿಡುಮುಡಿ, ಸೋಗೆ ದುರುಂಬು, ಮುತ್ತಿನ ಮುಡಿ, ಎಳಲ್ಮುಡಿ, ಬಳಲ್ಮುಡಿ, ಗೋಡಂಬಿ ಮುಡಿ, ತೋರು ಮುಡಿ, ನಾಗರ ಜಡೆ, ಕೇದಗೆ ಹೂವಿನ ಜಡೆ ಮುಂತಾದುವು. ಬೇಲೂರು-ಹಳೇಬೀಡು ದೇವಾಲಯಗಳ ಶಿಲಾಬಾಲಿಕೆಯರ ಜಡೆ/ಮುಡಿಗಳು ಆಕರ್ಷಣೀಯ ವಾಗಿವೆ. ಬೀಸಣಿಗೆಯಾಕಾರದ ಜಡೆಮುಡಿಗೆ ಜರದ ಗೊಂಡೆಗಳನ್ನು ಕಟ್ಟಲಾಗಿದೆ. ಈ ಜಡೆ/ಮುಡಿಗೆ ಸಿರಿಮುಡಿ, ಬೇಲೂರ ಮುಡಿ ಎಂಬ ಹೆಸರಿದೆ. ವಿಜಯನಗರದ ಅರಸರ ಕಾಲದ ಶಿಲ್ಪಸುಂದರಿಯರ ಮುಡಿಗಳೆಲ್ಲ ಬಂಬಲ್ಮುಡಿ ಅಥವಾ ತೆಕ್ಕೆದುರುಂಬುಗಳಾಗಿವೆ. ಮಾಲೆ ಸೂಡಿನ ಕೇಶಾಲಂಕಾರವನ್ನು ಮಾಡಲಾಗಿದೆ. ಮುಡಿಗೆ ಗಂಗಾವನ ಮತ್ತು ಸಿಂಬಿ, ವಿವಿಧ ಬಗೆಯ ಜಾಲರಿಗಳನ್ನು ಬಳಸಿದ್ದಾರೆ.

ಜಡೆಯ ವಿಧಗಳು/ವಿನ್ಯಾಸಗಳು

೧.ಮೂರುಕಾಲಿನ ಜಡೆ, ೨.ಒಂದು ಜಡೆ, ೩.ಸಾವಿರ ಕಾಲಿನ ಜಡೆ, ೪.ತಲೆಗಂಟು/ಹೆಣೆಗಂಟು, ೫.ತೆಳು ಜಡೆ, ೬.ನಾಲ್ಕು ಕಾಲಿನ ಜಡೆ, ೭.ಎರಡು ಜಡೆ, ೮.ಬದನೆಕಾಯಿ ಜಡೆ, ೯.ಸೌತೆ ಕಾಯಿ ಜಡೆ, ೧೦.ಗಟ್ಟಿ ಜಡೆ, ೧೧.ಕತ್ತರಿ ಜಡೆ, ೧೨.ಮೊಲದ ಕಿವಿ ಜುಟ್ಟು, ೧೩.ಕೃಷ್ಣಗೊಂಡೆ, ೧೪.ನೀರು ಜಡೆ, ೧೫.ಬಾದಾಮಿ ಜಡೆ, ೧೬.ಕುದುರೆ ಜುಟ್ಟು, ೧೭.ಕುಂಡೆ ಹೆಣೆಗಂಟು, ೧೮.ಕೊತ್ತಂಬರಿ ಜುಟ್ಟು, ೧೯.ವೊಗ್ಗಿನ ಜಡೆ, ೨೦.ತುರುಬು, ೨೧.ಬಿಚ್ಚು ಮುಡಿ ಮುಂತಾದುವು.

ಜಡೆ ವಿವರಣೆ

ಜಡೆ ಹೆಣೆಯುವುದು/ಕಟ್ಟುವುದು ಒಂದು ವಿಶಿಷ್ಟ ಕಲೆ. ಬೈತಲೆ, ಎಡ ವಾರೆಗೆರೆ, ಬಲ ವಾರೆಗೆರೆ, ಚಿಕ್ಕಗೆರೆ, ನೇರ ತೆಗೆಯದೆ ಮುಡಿಕಟ್ಟುವವರಿದ್ದಾರೆ. ಮೇಲೆ ಹೇಳಿರುವ ಜನಪದ ಜಡೆಗಳಲ್ಲಿ ಒಂದೈದನ್ನು ಮಾತ್ರ ವಿವರಿಸುವೆ.
೧.ಕೃಷ್ಣಗೊಂಡೆ- ಈ ಮುಡಿ ಶೈಲಿಯನ್ನು ಸಾಮಾನ್ಯವಾಗಿ ಮಕ್ಕಳಿಗೆ ಹಾಕುವರು. ಮಗುವಿನ ನೆತ್ತಿಯ ಮೇಲೆ ನಾಲ್ಕು ಕಡೆ ಕೂದಲನ್ನು ಬಿಟ್ಟು ನಡುವೆ ಉಳಿದ ಕೂದಲನ್ನು ಎತ್ತಿಕಟ್ಟಿ ಕುಚ್ಚಿನಾಕಾರ ಮಾಡಿ ಗಂಟು ಕಟ್ಟುವುದು. ಇದನ್ನು ವೊದಲು ಯಶೋಧೆ ಬಾಲಕೃಷ್ಣನಿಗೆ ಹಾಕಿದ್ದಳಂತೆ.
೨.ಮೊಲದ ಕಿವಿ ಜುಟ್ಟು-ಕೂದಲನ್ನು ಸಿಕ್ಕಿಲ್ಲದಂತೆ ಬಾಚಿ, ನೇರ ತೆಗೆದು ಎರಡು ಬದಿಯಲ್ಲೂ ಸಮಾನ ಕೂದಲನ್ನು ತೆಗೆದು ಕೊಂಡು ಒಂದೊಂದು ಕಡೆಯು ಮುಕ್ಕಾಲು ಪಾಲು ಕೂದಲನ್ನು ಹಾಗೆ ಬಿಟ್ಟು, ಕಾಲು ಭಾಗದ ಕೂದಲನ್ನು ತುದಿವರೆವಿಗೂ ಹೆಣೆದು ರಬ್ಬರ್/ಟೇಪಿನಿಂದ ಕೂದಲನ್ನು ಭದ್ರಗೊಳಿಸಿ ಎರಡು ಕಡೆಯೂ ಆ ಕೂದಲನ್ನು ಮೇಲಕ್ಕೆತ್ತಿ ಕಟ್ಟುವರು. ಆಗ ಕಟ್ಟಿರುವ ಕೂದಲು ವೊಲದ ಕಿವಿಯಂತೆ ಕಾಣುತ್ತದೆ.
೩.ಸಾವಿರ ಕಾಲಿನ ಜಡೆ- ಹೆಸರಿಗೆ ಇದನ್ನು ಹಾಗನ್ನುತ್ತಾರಷ್ಟೆ. ಇದರಲ್ಲಿ ೨ವಿಧ. ೧.ಕೂದಲಿನ ಸಣ್ಣ ಸಣ್ಣ ಎಳೆ ತೆಗೆದು ಆ ಭಾಗಗಳನ್ನೇಲ್ಲ ಮೂರು ಕಾಲಿನ ಜಡೆಯ ಮಾದರಿಯಲ್ಲಿ ನಾಜೂಕಾಗಿ ಹೆಣೆಯುವುದು. ಜಡೆ ಹೆಣೆದಾಗ ದಟ್ಟಕೂದಲಿದ್ದರೆ ಜಡೆ ಅಂಗೈ ಅಗಲ ಕಾಣಿಸುತ್ತದೆ. ೨.ಕೂದಲನ್ನು ಚಿಕ್ಕ ಚಿಕ್ಕದಾಗಿ ತೆಗೆದು ಕೊಂಡು,೨೧ ಭಾಗಮಾಡಿ ಅವುಗಳಲ್ಲಿ ಚಿಕ್ಕ ಚಿಕ್ಕ ಜಡೆಗಳನ್ನು ಹೆಣೆದು(ನಿಗ್ರೊಗಳ ಜಡೆ ಮಾದರಿಯಲ್ಲಿ) ಅವನ್ನೇಲ್ಲ ಒಟ್ಟುಗೂಡಿಸಿ, ಮೂರುಕಾಲಿನ ಜಡೆ ಹೆಣೆದು ಮೇಲಕ್ಕೆತ್ತಿ ಕಟ್ಟುವುದು.
೪.ಮೊಗ್ಗಿನ ಜಡೆ-ಶ್ರೀಮಂತರು ಮತ್ತು ಮಧ್ಯಮ ವರ್ಗದ ಜನರು ಮಾತ್ರ ವೊಗ್ಗಿನ ಜಡೆ ಹಾಕಿಸುತ್ತಿದ್ದರು. ಸಾಮಾನ್ಯವಾಗಿ ಮೈಸೂರಿನ ದುಂಡು ಮಲ್ಲಿಗೆ ವೊಗ್ಗಿನಿಂದಲೆ ಜಡೆ ಹಾಕುವುದು ರೂಢಿ. ವೊದಲು ಮೂರು ಕಾಲಿನ ಜಡೆ ಹೆಣೆದು, ಜಡೆಯ ಕೊನೆಯಲ್ಲಿ ಕುಚ್ಚಾಕಿ ಅದನ್ನು ಬಿಗಿ ಭದ್ರಗೊಳಿಸಿ, ಉದ್ದವಾದ ಸೂಜಿಗೆ ಗಟ್ಟಿಯಾದ ದಾರದಿಂದ ಮೂರು ಮೂರು ಸಾಲು ವೊಗ್ಗನ್ನು ಪೋಣಿಸಿ ನಾಜೂಕಾಗಿ ಜಡೆಯ ಮೇಲೆ ವೊಗ್ಗನ್ನು ಕೂರಿಸುತ್ತಾ ನಡು ನಡುವೆ ಒಂದೊಂದು ಪುಟ್ಟ ಗುಲಾಬಿಯನ್ನು ಸೇರಿಸಿ, ಅದರ ಸುತ್ತಲೂ ತುಳಸಿ/ಪಚ್ಚೆ ಎಲೆಗಳನ್ನು ಜೋಡಿಸಿ ಮೂರು ಗಂಟೆಗಳ ಕಾಲ ತನ್ಮಯವಾಗಿ ಜಡೆ ಹೆಣೆಯುತ್ತಿದ್ದರು. ಆ ಜಡೆಯನ್ನು ಮೂರು ನಾಲ್ಕು ದಿನಗಳ ಕಾಲ ಬಿಚ್ಚುವ ಹಾಗಿರಲಿಲ್ಲ. ಜಡೆ ಹಾಕಿಸಿ ಕೊಂಡವರು ಮಲಗುವಾಗ ಮಖಾಡೆಯಾಗಿ ಮಲಗ ಬೇಕಾಗಿತ್ತು. ಇದರಲ್ಲಿ ಸಾಧಕಕ್ಕಿಂತ ಬಾಧಕವೇ ಅಧಿಕವಾದುದರಿಂದ, ಇಂದಿನವರು ಕೃತಕ ವೊಗ್ಗಿನ ಜಡೆಯ ವೊರೆ ಹೋಗುತ್ತಿದ್ದಾರೆ. ಅಪರೂಪಕ್ಕೆ ಸೂಜಿ ಮಲ್ಲಿಗೆಯಿಂದಲೂ ವೊಗ್ಗಿನ ಜಡೆ ಹಾಕಿಸಿಕೊಳ್ಳುತ್ತಿದ್ದರು.
೫.ತುರುಬು-ಇದರಲ್ಲಿ ಹಲವಾರು ವಿಧಗಳಿವೆ. ತಲೆಗಂಟು, ಬಿಚ್ಚೋಡೆ, ಸಿರಿ ಮುಡಿ, ಪೂಮುಡಿ, ಜೋಲ್ಮುಡಿ, ಜಡೆಮುಡಿ, ಸೋರ್ಮುಡಿ, ಮುತ್ತಿನ ಮುಡಿ, ಬಿಡು ಮುಡಿ, ಬಂಬಲ್ಮುಡಿ ಪ್ರಮುಖವಾದುವು. ಈ ತುರುಬುಗಳೆಲ್ಲ ಕಲಾತ್ಮಕವಾಗಿ ಹಾಕಲ್ಪಡುವಂತಹವು. ವೊದಲು ಒಂದು ಸಿಂಬಿ ಇಟ್ಟು ಕೂದಲಿನಿಂದ ದೊಡ್ಡ ಗಂಟನ್ನು ಕಟ್ಟ ಬೇಕು. ಉಳಿದರ್ಧ ಕೂದಲನ್ನು ಓರಣವಾಗಿ ಬಾಚಿ ಅರ್ಧ ಚಂದ್ರಾಕಾರದ ಸಿಂಬಿಯನ್ನು ಒಳಗಿಟ್ಟು ಸುತ್ತಲೂ ಕೂದಲನ್ನು ಸುತ್ತಿ ,ಅದನ್ನು ಮುಡಿಯ ಕೆಳಭಾಗದಿಂದ ನೆಟ್ಟಗೆ ಮುಡಿವರೆಗೆ ಬರುವಂತೆ ಮತ್ತೆ ಸುತ್ತಿ ಪಿನ್ನುಗಳನ್ನು ಹಾಕಿದರೆ ಬಿಡುಮುಡಿ ಸಿದ್ದ. ಇತ್ತೀಚಿನ ತುರುಬಿಗೆ ನೆಟ್ ಹಾಕುವುದು ನವೀನಶೈಲಿ ಎನಿಸಿದರೂ, ಹಿಂದೆ ನೆಟ್ ಗೆ ಮಣಿಬಲೆ ಎನ್ನುತ್ತಿದ್ದರು. ಸಣ್ಣ ಮುತ್ತು, ದೊಡ್ಡಮುತ್ತು, ಮಣಿ, ಸುರಗಿ, ಬಕುಲದಂತಹ ನಾಜೂಕಾದ ಹೂಗಳಿಂದ ಮುಡಿ ಬಲೆ ರಚಿಸಿ ಧರಿಸುತ್ತಿದ್ದರು.

ಜನಪದಗೀತೆಗಳಲ್ಲಿ ಜಡೆ

  • ೧.ಕನ್ನೇರ ಕೈಲಿ ಚಿನ್ನದ ಬಾಚಣಿಗೆ
ಕೆನ್ನೆ ಕೂದಲ ನಿಗೋರಿ ಬಾಚಾರಲ್ಲೆ
ಪುಟ್ಟಣ್ಣನೆಂಬೋ ಚೌಲಿಯ ತೂಬಿನ
ಮೇಲೆ ಹೂಡ್ಯಾರೆ ಹೊಸಹೂವ
  • ೨.ಕೆಳದಿಯ ಕೂದಲು ಚೊಗಚೀಯ ಕಾಯಂಗೆ
ನಿಗುಚಿ ಬೈತಲೆ ತೆಗೆದಾಳೆ ನನ/ಗೆಳತಿ
ಗೆಳತ್ಯಾರ ಬಳಗಕೆ ಅತಿ ಚೆಲುವಿ
  • ೩.ಕೆನ್ನೆ ಕೂದಲಿಗೆ ಚಿನ್ನದ ಗೊಜಲಿಂಡು
ಮುಕ್ಕಣ್ಣೇಶ್ವರನ ಮಡದಿ/ಗೌರಮ್ಮಗೆ
ಹೂವಿನ ಹೊನ್ನಾಲಿ ಬಿಗಿಸ್ಯಾರೆ
  • ೪.ತಂದೀಯ ನೆನೆದರ ತಂಗಳು ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದವ್ನ/ನೆನೆದರ
ಮಾಸಿದ ತಲೆಯು ಮಡಿಯಾಯ್ತು
  • ೫. ಮುತ್ತಿನ ಮೂಗುತಿ ಮೂರೆಸಳ ಕೇದಿಗಿ
ಮುಚ್ಚಿ ಕೊಂಡಾಳ ಹೆರಳಾಗ/ಕಂದಮ್ಮನ
ಎತ್ತಿ ಕೊಂಡವರಿಗೆ ಅನುಮಾನ

ಗಾದೆ ನಂಬಿಕೆಗಳಲ್ಲಿ ಜಡೆಯ ಪಾತ್ರ[ಬದಲಾಯಿಸಿ]

  • ೧. ದಿನವೂ ಮುಡಿ ಬಿಚ್ಚಿ ತಲೆ ಬಾಚಬೇಕು; ಇಲ್ಲದಿದ್ದರೆ ಕೂದಲು ಗಂಟಾಗುತ್ತದೆ.
  • ೨. ಬಿಚ್ಚು ಕೂದಲು ಪುರುಷರನ್ನು ಆಕರ್ಷಿಸುತ್ತದೆ; ಆದುದರಿಂದ ಮನೆಯಿಂದ ಹೊರಗೋಗುವಾಗ ಕೂದಲನ್ನು ಹರಡಿಕೊಂಡು ಹೋಗಬಾರದು.
  • ೩. ಬಿಳಿ ಕೂದಲನ್ನು ಕೀಳಬಾರದು ಅದು ಕಿತ್ತಷ್ಟೂ ಹೆಚ್ಚಾಗುತ್ತದೆ; ಬಿಳಿ ಕೂದಲಿನವರಿಗೆ ಕೀಳರಿಮೆ ಜಾಸ್ತಿ.
  • ೪. ಜೇನು ತುಪ್ಪ ಹಚ್ಚಿದ್ರೆ ಕೂದಲು ಬೆಳ್ಳಗಾಗುತ್ತೆ; ಅರಿಶಿನ ಹಚ್ಚಿದ್ರೆ ಕೂದಲು ನಾಶವಾಗುತ್ತೆ.
  • ೫. ರಾತ್ರಿ ಹೊತ್ತಲ್ಲಿ ತಲೆ ಬಾಚಬಾರದು; ಕೂದಲನ್ನು ಕತ್ತರಿಸ ಬಾರದು.

ಕೇಶರಾಶಿಯನ್ನು ಶುಚಿಗೊಳಿಸುವ ವಿಧಾನ

ಕೂದಲನ್ನು ವಾರಕ್ಕೆರಡು ಬಾರಿ ಶುಚಿಗೊಳಿಸ ಬೇಕು. ಶುಚಿಗೊಳಿಸುವಾಗ ಕೂದಲಿಗೆ ಸೀಗೆಕಾಯಿ ಪುಡಿ, ಚಿಗರೆ ಪುಡಿ, ಬೇವಿನ ಎಲೆ, ದಾಸವಾಳದ ಎಲೆ, ಮದರಂಗಿ ಎಲೆ, ಕಡಲೆ ಹಿಟ್ಟು, ಮತ್ತಿಸೊಪ್ಪು, ಮೆಂತ್ಯೆ ಸೊಪ್ಪು, ಮೆಂತ್ಯೆಕಾಳು,ಹೆಸರುಕಾಳು ಮುಂತಾದುವನ್ನು ಪುಡಿಮಾಡಿ, ಸೀಗೆಪುಡಿತೊಂದಿಗೆ ಕಲೆಸಿ ತಲೆ ಕೂದಲನ್ನು ತೊಳೆದು ಕೊಂಡರೆ ಶಾಂಪುವಿಗಿಂತಲೂ ಆಹ್ಲಾದಕಾರಿಯಾಗಿರುತ್ತದೆ. ಕೂದಲು ಉದುರುವುದಿಲ್ಲ. ಹೊಟ್ಟು, ಹೇನು, ಸೀರು ಬರುವುದಿಲ್ಲ. ಹಾಗೊಂದು ವೇಳೆ ಕೂದಲಿಗೆ ಹೇನು ಬಂದರೆ, ತುಸು ಗರಿಕೆ, ಕರಿಬೇವು, ಮದರಂಗಿ ಎಲೆಗಳೊಂದಿಗೆ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಆರಿಸಿ ಕೂದಲಿಗೆ ಹಚ್ಚುವುದರಿಂದ ಅವುಗಳನ್ನು ನಿವಾರಿಸ ಬಹುದು.

ಡಾ.ಜಿ.ಎಸ್.ಎಸ್ ಅವರ ಜಡೆ ಕವಿತೆ

ಲಲನೆಯರ ಬೆನ್ನಿನೆಡೆ
ಹಾವಿನೊಲು ಜೋಲ್ವ ಜಡೆ
ಅತ್ತಿತ್ತ ಹರಿದ ಜಡೆ!
ಚೇಳ್ ಕೊಂಡಿಯಂತಹ ಜಡೆ
ಮೋಟು ಜಡೆ, ಚೋಟು ಜಡೆ
ಚಿಕ್ಕವರ ಚಿನ್ನ ಜಡೆ!
ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬಡವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ
ಗಂಟು ಜಡೆ!
ಅಕ್ಕ ತಂಗಿಯ ಮುಡಿಯ
ಹಿಡಿದು ನಾನೆಳೆದಂಥ
ಮಲ್ಲಿಗೆಯ ಕಂಪು ಜಡೆ
ಮಾತೃ ಮಮತಾವೃಕ್ಷ ಬಿಟ್ಟ ಬೀಳಲಿನಂತೆ
ಹರಿವ ತಾಯ ಜಡೆ!
"ಕುರುಕುಲ ಜೀವಾಕರ್ಷಣ ಪರಿಣತ"-ಆ
ಪಾಂಚಾಲಿಯ ಜಡೆ!
ಸೀತೆಯ ಕಣ್ಣೀರೊಳು ಮಿಂದ ಜಡೆ
ಓ ಓ ಈ ಜಡೆಗೆಲ್ಲಿ ಕಡೆ!

  * * * * * * *
ಸಂಜೆಯಲಿ ಹಗಲು ಕೆದರುವ ಕತ್ತಲೆಯ
ಕಪ್ಪು ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ
ಬೆಳಕು ಜಡೆ
ಒಮ್ಮೊಮ್ಮ ಮುಗಿಲಲ್ಲಿ ತೇಲುತ ಬರುವಂಥ
ಬೆಳ್ಳಕ್ಕಿಗಳ ಜಡೆ
ಕ್ರೌಂಚೆಗಳ ಜಡೆ
ಮರಮರದಿ ಬಳುತಿಹ ಹೂಬಿಟ್ಟ ಬಳ್ಳಿ ಜಡೆ
ಕಾಡು ಬಯಲಿನ ಹಸುರು ಹಸರದಲಿ ಹರಿ ಹರಿದು
ಮುನ್ನಡೆವ ಹೊಳೆಯ ಜಡೆ!
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ!
ಗಿರಿ ಶಿವನ ಶಿರದಿಂದ ಹಬ್ಬಿ ಹಸರಿಸಿನಿಂದ
ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ!
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ!
ಚಂದ್ರಚೂಡನ
ವ್ಯೋಮಕೇಶನ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ ಕಾವ್ಯಗಳ ಶಲ್ಪಗಳ ಕಲೆಯ ಜಡೆ
ಎಲ್ಲವೊ ರಮ್ಯವೆಲ್ಲ!
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ
ಕಾಣದಲ್ಲ!

ಸಮಾರೋಪ

ಲಲಿತಕಲೆಗಳಲ್ಲಿ ಅಲಂಕಾರ ಕಲೆಯು ಒಂದು. ಅಲಂಕಾರಪ್ರಿಯತೆ ಹೆಣ್ಣಿನಲ್ಲಿ ರಕ್ತಗತವಾಗಿ ಬಂದಿದೆ. ಕೂದಲು ತುಂಬಾ ಗಟ್ಟಿಯಾದುದು. ಹೇಗೆಂದರೆ ದೊಂಬರಾಟದ ಹುಡುಗುಯೊಬ್ಬಳು ತನ್ನ ಜಡೆಗೆ ಕಲ್ಲನ್ನು ಕಟ್ಟಿ ಗಿರಿಗಿಟ್ಟೆಯಾಡಿದರೂ ಅದು ಕಿತ್ತು ಬರುವುದಿಲ್ಲ. ಜನಪದ ಕ್ರೀಡೆಯಾದ ಕೋಲಾಟದಲ್ಲಿ ಜಡೆಕೋಲಾಟವು ತುಂಬ ಪ್ರಸಿದ್ದಿ ಪಡೆದಿದೆ. ಆ ಆಟದಲ್ಲಿ ಅವರು ಸೀರೆಗಳನ್ನು ಕೂದಲಿಗೆ ಸಾಂಕೇತಿಕವಾಗಿ ಬಳಸಿಕೊಂಡು ಮೂರು ಕಾಲಿನ ಜಡೆ ಎಣೆದು, ಬಿಚ್ಚುತ್ತಾರೆ. ಜಡೆ ಹೆಣೆಯುವುದು ಒಗ್ಗಟ್ಟನ್ನು ಸೂಚಿಸಿದರೆ, ಜಡೆ ಬಿಚ್ಚುವುದು ಜೀವನ ಸಮಸ್ಯೆಗಳಿಂದ ಹೊರ ಬರುವ ಮಾರ್ಗವನ್ನು ತಿಳಿಸಿ ಕೊಡುತ್ತದೆ. ಗ್ರಾಮೀಣ ಜನಪದರು ನಗರ ಸಂಸ್ಕೃತಿಗೆ ಮಾರು ಹೋಗಿ, ತಮ್ಮ ಜೀವನ ಮೌಲ್ಯಗಳನ್ನು ಬಲಿಕೊಡುತ್ತಿದ್ದಾರೆ. ನೀಳವೇಣಿಯರು ಕಡಿಮೆಯಾಗಿದ್ದಾರೆ. ಈಗಿನವರಿಗೆ ಕೂದಲನ್ನು ಬೆಳೆಸುವುದರ ಬಗ್ಗೆ ನಿರಾಸಕ್ತಿಯಿದೆ. ಬ್ಯೂಟಿಪಾರ್ಲರ್ ಗಳು ಹೆಣ್ಣಿನಲ್ಲಿ ಅಲಂಕಾರದ ಅರಿವನ್ನು ಮೂಡಿಸುವ ಪ್ರಯತ್ನದಲ್ಲಿ ವಿಫಲವಾಗಿವೆ.

ಕೃತಿ ನೆರವು

  • ೧. ಕನ್ನಡ ವಿಷಯ ವಿಶ್ವ ಕೋಶ ಸುವರ್ಣ ಸಂಪುಟ
  • ೨. ಜಡೆ ಕವನ- ಡಾ.ಜಿ.ಎಸ್.ಶಿವರುದ್ರಪ್ಪ
  • ೩. ಮಹಿಳೆಯರ ಅಲಂಕಾರಗಳು - ಶಾಂತದೇವಿ ಮಾಳವಾಡ
  • ೪. ಜಾನಪದ ವಿಶ್ವಕೋಶ -ಮೈಸೂರು ವಿಶ್ವ ವಿದ್ಯಾ ನಿಲಯದ ಪ್ರಕಟಣೆ

ಚಿತ್ರಶಾಲೆ

ಸೋಮವಾರ, ಮೇ 11, 2015

ಜಾನಪದ:ಹೊಸ ತಲೆಮಾರು- ಚಿತ್ರಸಂಪುಟ

10.05.2015 ರಂದು ಹೊನ್ನಾವರ ಸಮೀಪದ ಕೆರೆಕೋಣದ ಸಹಯಾನ(ಆರ್.ವಿ.ಭಂಡಾರಿ ಅವರ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ `ಜಾನಪದ:ಹೊಸ ತಲೆಮಾರು' ವಿಷಯದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ ಮೌಲ್ಯಯುತವಾಗಿತ್ತು. ಒಂದು ಒಳ್ಳೆಯ ದಿನ ಕಳೆದ ಅನುಭವ. ಕಾರ್ಯಕ್ರಮ ಆಯೋಜಿಸಿದ ವಿಠ್ಠಲ ಬಂಡಾರಿ, ಮಾಧವಿ ಬಂಡಾರಿ ಒಳಗೊಂಡಂತೆ ಸಹಯಾನದ ಎಲ್ಲಾ ಸಂಗಾತಿಗಳು ಶ್ರಮವಹಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿದ್ದರು. ಎಲ್ಲಾ ಸಂಗಾತಿಗಳಿಗೂ ಸಲಾಂ.
ಸಹಯಾನದಲ್ಲಿ ಕಂಡ ಚಿತ್ರಗಳು





































ಜನಪರ ಹೋರಾಟಗಳ ಸಂಗಾತಿಯಾಗಿ ಜಾನಪದ ಅಧ್ಯಯನ



-ಪುರುಷೋತ್ತಮ ಬಿಳಿಮಲೆ



  ಈಗ ಕಾಲ ಬದಲಾಗಿದೆ.ಬಲಪಂಥೀಯ ಶಕ್ತಿಗಳು ಭಾರತದಲ್ಲಿ ಅಧಿಕಾರ ಹಿಡಿದಿವೆ. ಈ ಜನವಿರೋಧಿ ಶಕ್ತಿಗಳೊಡನೆ ಅಂತಾರಾಷ್ಟ್ರೀಯ ಬಂಡವಾಳಶಾಹೀ ಶಕ್ತಿಗಳೂ ಕೈಜೋಡಿಸಿವೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮತ್ತೆ ಪರಮಾಧಿಕಾರ ರೂಪುಗೊಳ್ಳುತ್ತಿದೆ.  ಅಸಹನೆ ಮತ್ತು ಆಕ್ರಮಣಶೀಲತೆಗಳು ನಮ್ಮ ಕಾಲದ ಪ್ರಮುಖ ಗುಣಗಳಾಗಿ ಕಾಣಿಸಿಕೊಳ್ಳುತ್ತಿವೆ. ಇಂಥ ಸಂದರ್ಭಗಳಲ್ಲಿ ಬಹಳ ಎಚ್ಚರದಿಂದ ಕೆಲಸಮಾಡಬೇಕಾಗಿದ್ದ ಮಾಧ್ಯಮಗಳು ದಯನೀಯವಾಗಿ ಸೋತಿವೆ, ಕಾರ್ಪೊರೇಟ್ ಜಗತ್ತಿನ ಕೈಗೊಂಬೆಗಳಾಗಿರುವ ಅವು ತಮ್ಮ ಕರ್ತವ್ಯದಿಂದ ಬಹಳ ದೂರ ಸರಿದಿವೆ. ಪ್ರಜಾಪ್ರಭುತ್ವ ಎಲ್ಲೆಡೆಯೂ ದಣಿದಂತೆ ಭಾಸವಾಗುತ್ತಿದೆ. ನೆಲದ ಗುಣದ ಬಗೆಗೆ ಭಾವುಕವಾದ ಮಾತುಗಳು, ಗಡಿಯ ರಕ್ಷಣೆಯ ಬಗೆಗೆ ಆವೇಶಭರಿತ ಭಾಷಣಗಳು,   ತನ್ನದೇ ಶ್ರೇಷ್ಠವೆಂಬ ಅಹಂಕಾರ ಮತ್ತು ಅನ್ಯರ ಬಗೆಗಣ ಅಸಾಧ್ಯ ಅಸಹನೆಗಳು ಇಂದು ವಿಶ್ವದಾದ್ಯಂತ  ಸರ್ವಾಧಿಕಾರಿಗಳ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಭಾರತದ ಘಟನಾವಳಿಗಳಂತೂ ನಮ್ಮ ಕಣ್ಣೆದುರೇ ಇವೆ.

ಹಾಗೆ ನೋಡಿದರೆ, ಪ್ರಬಲ ನಾಯಕ ಹಾಗೂ ಸರ್ವಾಧಿಕಾರಿಯೊಬ್ಬನ ನಡುವಣ ವ್ಯತ್ಯಾಸವನ್ನು ಸರಿಯಾಗಿ ವಿವರಿಸಿದವರಿಲ್ಲ. ಇವರಿಬ್ಬರೂ ಜನರ ಉದ್ಧಾರಕ್ಕಾಗಿ ದೇವರೇ ತನ್ನನ್ನು ಭೂಮಿಗೆ ಕಳಿಸಿದ್ದಾರೆ ಎಂದು ಅಮಾಯಕರನ್ನು ನಂಬಿಸುತ್ತಾರೆ, ಜನರ ಮುಗ್ಧ ಭಾವನೆಗಳೊಡನೆ ಇವರು ಚೆಲ್ಲಾಟವಾಡುತ್ತಾರೆ. ಎಲ್ಲರಿಗೂ ನ್ಯಾಯ ಒದಗಿಸಬೇಕಾದ್ದು ತನ್ನ ಕರ್ತವ್ಯವೆಂದು ಆಣೆ ಮಾಡುತ್ತಾರೆ.ಜನರ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸುತ್ತಾರೆ.  ಅಧಿಕಾರ ಹಿಡಿದ ಮೇಲೆ ಇದೇ ಮಾತುಗಳನ್ನು ಆಧರಿಸಿ ಸರ್ವಾಧಿಕಾರಿಗಳಾಗಿ ಮಾರ್ಪಾಡು ಹೊಂದುತ್ತಾರೆ.ದೇಶ, ಭಾಷೆ, ಜನಾಂಗವನ್ನು ಆಧರಿಸಿಯೇ ಹಿಟ್ಲರನು ಬೆಳೆದದ್ದು ಮತ್ತು ಲಕ್ಷಾಂತರ ಜನರನ್ನು ಕೊಂದದ್ದು.ರಾಬರ್ಟ್ ಮುಗಾಬೆಯು ತಾನು ಬಡಜನರ ಉದ್ದಾರಕ್ಕೆ ಭೂಮಸೂದೆಯನ್ನು ಜ್ಯಾರಿಗೆ ತರುತ್ತೇನೆ ಎಂದು ಹೇಳಿ ಲಕ್ಷಾಂತರ ಜನರನ್ನು ಸಾಯಿಸಿದ, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಹೆಸರಲ್ಲಿ ೩೦ ಲಕ್ಷಕ್ಕೂ ಹೆಚ್ಚು  ಜನರನ್ನು ಬೀದಿಗೆ ತಳ್ಳಿದ. ಉಗಾಂಡಾದ ಇದಿ ಅಮಿನ್‌ನು ನ್ಯಾಯದ ಹೆಸರಿನಲ್ಲಿ ಸುಮಾರು ೫೦ ಸಾವಿರ ಜನರನ್ನು ಕೊಂದಿದ್ದ.ಸರ್ವಾಧಿಕಾರಿಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿಯೇ ಹುಟ್ಟಿಕೊಳ್ಳುತ್ತಿರುದು ಇಂದಿನ ವಿಪರ್ಯಾಸಗಳಲ್ಲಿ ಒಂದು.

  ಈ ಕುರಿತು ನಿಜವಾಗಲೂ ಎಚ್ಚರ ವಹಿಸಬೇಕಾದ್ದು ಬರೆಹಗಾರರು.ಆಳುವ ವರ್ಗವನ್ನು ಓಲೈಸಿ ಲಾಭ ಪಡೆದುಕೊಳ್ಳುವ ವಂದಿ ಮಾಗಧರು ಎಲ್ಲ ಕಾಲಕ್ಕೂ ಇರುತ್ತಾರೆ.ಆದರೆ ಒಳ್ಳೆಯ ಬರಹಗಾರರು ಮುಂದಾಗುವ ಅಪಾಯಗಳನ್ನು ಸೂಕ್ಷ್ಮವಾಗಿ ಬಹಳ ಬೇಗನೆ ಗ್ರಹಿಸುತ್ತಾರೆ. ಪಂಪನು ತನಗೆ ಅನ್ನ ಕೊಡುತ್ತಿದ್ದ ಅರಿಕೇಸರಿಯ ಆಸ್ಥಾನದಲ್ಲಿ ಕುಳಿತೇ ’ ತಲೆಗೆ ಅಭಿಷೇಕ ಮಾಡಿಕೊಂಡ ಅರಸರು ಅಧಿಕಾರ ಸಿಕ್ಕೊಡನೆ, ತಮ್ಮನ್ನು ತಾವೇ ಮರೆತು, ಧರ್ಮವೆಂಬ ದೋಣಿಯಿಂದ ಜಾರಿ ಬೀಳುತ್ತಾರೆ’ ಎಂದು ಆದಿ ಪುರಾಣದಲ್ಲಿ ಬರೆದ. ಬಸವಣ್ಣ  ತನ್ನ ಆಶ್ರಯದಾತನಾದ ಬಿಜ್ಜಳನನ್ನು ಪ್ರಶ್ನಿಸಿದ. ಕುಮಾರವ್ಯಾಸನು  ’ಅರಸು ರಾಕ್ಷಸ, ಪರಿವಾರ ಹದ್ದಿನ ನೆರವಿ’ ಎಂದು ಕರೆದ. ವಿಜಯನಗರದ ಅರಸರು ರಸ್ತೆ ಬದಿಯಲ್ಲಿ ಚಿನ್ನ ಬೆಳ್ಳಿ ಮಾರುತ್ತಿದ್ದಾಗ, ನಮ್ಮ ದಾಸರು ಲಂಗೋಟಿ ಉಟ್ಟುಕೊಂಡು ’ಇದೆಲ್ಲಾ ಲೊಳಲೊಟ್ಟೆ’ ಎಂದು ಹಾಡುತ್ತಾ ಅದೇ ಬೀದಿಯಲ್ಲಿ ಓಡಾಡಿದರು. ೨೦ ನೇ ಶತಮಾನದ ಕನ್ನಡದ ಮುಖ್ಯ  ಬರೆಹಗಾರರು ಎಲ್ಲ ಬಗೆಯ ಸರ್ವಾಧಿಕಾರೀ ಶಕ್ತಿಗಳ ವಿರುದ್ಧ ಸಮರ ಸಾರುತ್ತಲೇ ಬಂದಿದ್ದಾರೆ. ಅಧಿಕಾರಕ್ಕೆ ಏರಿದವರನ್ನು ಅನುಮಾನದಿಂದ ನೋಡುತ್ತಾ ಬಂದಿರುವುದು ಕನ್ನಡದ ಪ್ರಮುಖ ಬರೆಹಗಾರರ ಒಂದು ಗುಣ.ಈ ಪರಂಪರೆ ನಮ್ಮ ಜಾನಪದ ಅಧ್ಯಯನಗಳಲ್ಲಿ ಮುಂದುವರಿಯಬೇಕಾದ್ದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ.ಬಲಪಂಥೀಯ ಶಕ್ತಿಗಳನ್ನು ಮತ್ತು ಸರ್ವಾಧಿಕಾರೀ ಪ್ರವೃತ್ತಿಗಳನ್ನು ನಾವು ನಮ್ಮ ಅಧ್ಯಯನಗಳ ಮೂಲಕ ನಿರಾಕರಿಸಬೇಕಾಗಿದೆ.ಹೀಗೆ ಮಾಡಲು ನಮಗೆ ಜಾನಪದದ ಬಗೆಗೆ ತಿಳುವಳಿಕೆ ಹೇಗೆ ಅಗತ್ಯವೋ ಹಾಗೇಯೇ  ನಮ್ಮ ಕಾಲದ ರಾಜಕೀಯ ಬೆಳವಣಿಗೆಗಳ ಕುರಿತಾದ ಎಚ್ಚರವೂ ಅಗತ್ಯ. ಒಂದು ಮುಗ್ಧವಾದ ವಾತಾವರಣದಲ್ಲಿ ಕುಳಿತು ಜಾನಪದವನ್ನು ಭಾವುಕವಾಗಿ ಗ್ರಹಿಸಿ ಮಂಡಿಸುವ ಕಾಲ ಮುಗಿದಿದೆ.


ಒಂದೆರಡು ಉದಾಹರಣೆಗಳ ಮೂಲಕ ಇದನ್ನು ಇನ್ನಷ್ಟು ವಿವರಿಸಬಯಸುತ್ತೇನೆ.

ಹಲವು ಪಠ್ಯಗಳ ಮರು ಅಧ್ಯಯನ: 

ಬ್ರಿಟಿಷರು ಭಾರತಕ್ಕೆ ಕಾಲಿರಿಸಿದಾಗ ಅವರಿಗೆ ಇಲ್ಲಿಯ ವೈವಿಧ್ಯಗಳನ್ನು ಕಂಡು ಆಶ್ಚರ್ಯವಾಗಿತ್ತು. ಬಗೆಬಗೆಯ ಭಾಷೆ, ಸಮುದಾಯಗಳು, ಆಚರಣೆಗಳು, ಭೌಗೋಳಿಕತೆ ಇತ್ಯಾದಿಗಳನ್ನೆಲ್ಲ ಒಂದು ಬಲವಾದ ಚೌಕಟ್ಟಿನೊಳಗೆ ತಾರದ ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ  ಎಂಬುದನ್ನು ಅವರು ಮನಗಂಡಿದ್ದರಲ್ಲದೆ ಭಾರತವನ್ನು ಯಾವುದಾದದರೂ ಒಂದು ನಿರ್ದಿಷ್ಟ ಪರಿಭಾಷೆಯಲ್ಲಿ ವಿವರಿಸಲು ಅವರು ಹೆಣಗುತ್ತಿದ್ದರು. ಭಾರತಕ್ಕೆ ಹೋಲಿಸಿದರೆ ಬಹುಮಟ್ಟಿಗೆ ಏಕರೂಪದಲ್ಲಿರುವಂತೆ ಕಾಣುತ್ತಿದ್ದ ಯುರೋಪಿನ ವಿದ್ವಾಂಸರಿಗೆ ಭಾರತದ ಬಹುರೂಪತೆಯೇ ದೊಡ್ಡ ಸಮಸ್ಯೆಯಾಗಿತ್ತು.ಇಲ್ಲಿನ ’ಅವ್ಯವಸ್ಥೆ’ ಯ ಗರ್ಭದಿಂದ ’ಸುವ್ಯವಸ್ಥೆ’ ಯ ಒಂದು ವಿವರಣೆಯನ್ನು ಪ್ರತೀತಗೊಳಿಸುವುದು ಅವರ ಆ ಕಾಲದ ರಾಜಕೀಯ ಮತ್ತು ಬೌದ್ಧಿಕ ಅಗತ್ಯಗಳಲ್ಲಿ ಒಂದಾಗಿತ್ತು.ಭಾರತೀಯ ಸಂಸ್ಕೃತಿಯೆಂದರೆ ಅವರಿಗೆ ’ವಿವರಿಸಲಾಗದ ಒಂದು ಗೊಂದಲದ ಗೂಡು’.ಉದಾಹರಣೆಗೆ ಅವರು ಮಹಾಭಾರತ ಮಹಾಕಾವ್ಯವನ್ನು ಗ್ರಹಿಸಿದ ಬಗೆ ನೋಡಿ.ಮಹಾಭಾರತ ಮಹಾಕಾವ್ಯದ ಬಗ್ಗೆ ೧೮೯೭, ೧೮೯೮ ಮತ್ತು ೧೮೯೯ರಲ್ಲಿ ಮೂರು ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಯುರೋಪಿನ ವಿವಿಧ ನಗರಗಳಲ್ಲಿ ನಡೆಸಲಾಯಿತು.ಪ್ಯಾರೀಸ್‌ನಲ್ಲಿ ನಡೆದ ೧೧ನೇ " ಇಂಟರ್ ನ್ಯಾಶನಲ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್’ ನಲ್ಲಿ ಸಂಸ್ಕೃತ ಪಂಡಿತನಾಗಿದ್ದ ಎಂ. ವಿಂಟರ್ ನೀಟ್ಜ ಅವರು ದಕ್ಷಿಣ ಭಾರತದಲ್ಲಿ ಲಭ್ಯವಿರುವ ಹಲವು ಮಹಾಭಾರತ ಪಠ್ಯಗಳ ಬಗ್ಗೆ ಪ್ರಬಂಧ ಮಂಡಿಸಿ,  ಪ್ರಬಂಧದ ಕೊನೆಯಲ್ಲಿ ’ ಅಗತ್ಯಬೇಕಾಗಿರುವ ಒಂದು ಅಧಿಕೃತ ಪಠ್ಯದ’ ಬಗ್ಗೆ ವಾದ ಮಂಡಿಸಿದ. ಮುಂದಿನ ಒಂದು ವರ್ಷಗಳ ಕಾಲ ಇದರ ಕುರಿತು ಚರ್ಚೆ ನಡೆದು, ವಿಂಟರ್ ನೀಟ್ಜ ಅವರೇ ’ ಸಂಸ್ಕೃತ್ ಎಪಿಕ್ ಟೆಕ್ಸ್ಟ್ ಸೊಸಾಯಿಟಿ’(Sanskrit epic texts society)ಯನ್ನು ರಚಿಸಿ ರೋಮ್ ನಲ್ಲಿ ನಡೆದ ೧೨ನೇ ಇಂಟರ್ ನ್ಯಾಶನಲ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್’ ನಲ್ಲಿ ಅಧಿಕೃತ ಪಠ್ಯ ಸಂಪಾದನೆಯ ಕುರಿತ ತಮ್ಮ ವಾದ ಮಂಡನೆ ಮಾಡಿದ. ಮತ್ತೆ ಸುದೀರ್ಘ ಚರ್ಚೆ ನಡೆದು, ಮೂರು ವರ್ಷಗಳ ಆನಂತರ ೧೯೦೨ರಲ್ಲಿ ಹಂಬರ್ಗನಲ್ಲಿ ನಡೆದ ಸಮ್ಮೇಳನದಲ್ಲಿ ವಿಂಟರ್ ನೀಟ್ಜ ಅವರ ವಾದವನ್ನು ಅಧಿಕೃತವಾಗಿ ಒಪ್ಪಿಕೊಳ್ಳಲಾಯಿತು.

 ಪರಿಣಾಮವಾಗಿ ಸಂಸ್ಕೃತ ವಿದ್ವಾಂಸ ಶ್ರೀ ವಿಷ್ಣು ದಿಗಂಬರ ಸೂಕ್ತಂಕರ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ವ್ಯಾಸರು ಬರೆದ ಮಹಾಭಾರತದ ನೂರಾರು ಪಠ್ಯಗಳನ್ನು ಸಂಗ್ರಹಿಸಿ, ಅವುಗಳಿಂದ ’ಒಂದು ಅಧಿಕೃತ’ ಮಹಾಭಾರತವನ್ನು ಸಿದ್ಧಪಡಿಸಿಕೊಡುವುದು ಈ ಸಮಿತಿಯ ಕೆಲಸ. ಸೂಕ್ತಂಕರ್ ಅವರು ಪಿ.ವಿ ಕಾಣೆ, ಆರ್ ಡಿ.ಕರಮರ‍್ಕರ್, ವಿ.ಜಿ.ಪರಾಂಜಪೆ, ವಿಂಟರ್‌ನೀಟ್ಜ  ಮೊದಲಾದ ಸಮರ್ಥ ವಿದ್ವಾಂಸರ ತಂಡದೊಂದಿಗೆ ಸುಮಾರು ೧೫ ವರ್ಷಗಳ ಕಾಲ ದುಡಿದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿವಿಧ ಪ್ರದೇಶಗಳಲ್ಲಿ ಲಭ್ಯವಿದ್ದ  ಸುಮಾರು ೧೬೦ ಹಸ್ತ ಪ್ರತಿಗಳನ್ನು ಸಂಗ್ರಹಿಸಿದರು. ಅವೆಲ್ಲವುಗಳನ್ನು ಅಧ್ಯಯನ ಮಾಡಿ ಮೂಲಕ್ಕೆ ಹತ್ತಿರ ಅನ್ನಬಹುದಾದ ಪಠ್ಯವೊಂದನ್ನು ಸಿದ್ಧಪಡಿಸಿ, ಅದನ್ನು ಪೂನಾದ ಭಂಡಾರ್‌ಕಾರ್ ಓರಿಯಂಟಲ್ ರಿಸರ್ಚ ಇನ್ಸ್ಟಿಟ್ಯೂಟ್‌ನಿಂದ ಪ್ರಕಟಿಸಿದರು( ೧೯೩೩). ಆದರೆ ಹಾಗೆ ಪ್ರಕಟಿಸುವಾಗ "ವ್ಯಾಸರು ಬರೆದ ಮೂಲ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಸಾಧ್ಯವಿಲ್ಲದ ಕೆಲಸ, ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ ಅಷ್ಟೆ’ ಅಂತ ಹೇಳಿ ಪ್ರಸ್ಥಾವನೆಯನ್ನು ಕೊನೆಗೊಳಿಸಿಬಿಟ್ಟರು.

  ಆನಂತರದ ಕಾಲಘಟ್ಟದಲ್ಲಿ  ಇಂಥ ಒಂದು ಪ್ರಯತ್ನದ ಪರಿಣಾಮವಾಗಿ ಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಗ್ರಂಥ ಸಂಪಾದನಾ ಶಾಸ್ತ್ರ ಬೆಳೆಯಿತು. ಲಭ್ಯವಿರುವ ಹಲವು ಪಠ್ಯಗಳಿಂದ ಒಂದು ಪಠ್ಯವನ್ನು ಪ್ರತೀತಗೊಳಿಸಿ, ಅದನ್ನು ಅಧಿಕೃತಗೊಳಿಸುವುದು ವಸಾಹತು ಕಾಲದ ಗ್ರಂಥ ಸಂಪಾದನಾ ಶಾಸ್ತ್ರದ ಮುಖ್ಯ ಕೆಲಸ. ೧೯ನೇ ಶತಮಾನದ ವಿದೇಶೀ ವಿದ್ವಾಂಸರು ಈ ಕೆಲಸವನ್ನು ದೇಶದಾದ್ಯಂತ ಬಹಳ ಅದ್ಭುತವಾಗಿ ಮಾಡಿದರು.ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೆಲ್ಲ ಈಗ ಮಾಡುತ್ತಿರುವುದು ಅದೇ ಕೆಲಸ. ಪಠ್ಯಗಳಿಗೂ ಸಮಾಜಕ್ಕೂ ಏಕ ರೂಪ ಕೊಡುವುದು, ಮತ್ತು ಅದರ ಬಹುರೂಪತೆಯನ್ನು ನಿರಾಕರಿಸುವುದು.

  ವಸಾಹತು ಕಾಲದ ಇಂಥ ಚಿಂತನಾ ಕ್ರಮವನ್ನು ಇದೀಗ ನಿರ್ದಯವಾಗಿ ಮುಂದುವರೆಸುತ್ತಿರುವವರು ಬಲಪಂಥೀಯ ಸಂಘಟನೆಗಳು.ವಿಶ್ವ ಹಿಂದೂ ಪರಿಷತ್ತು, ಭಜರಂಗ ದಳ, ಶ್ರೀ ರಾಮ ಸೇನೆ ಮೊದಲಾದ ಹಿಂದೂ ಸಂಘಟನೆಗಳು ಭಾರತದ ವೈವಿಧ್ಯವನ್ನು ಅಲ್ಲಗಳೆದು ಅದಕ್ಕೊಂದು ಏಕ ರೂಪವನ್ನು ಕೊಡಲು ಹೋರಾಡುತ್ತಿವೆ. ಈ ಏಕ ರೂಪಕ್ಕೆ ಬೇಕಾದ ತಳಹದಿಯನ್ನು ಅವು ವೈದಿಕ ಪರಂಪರೆಯಿಂದ ನಿಷ್ಪನ್ನಗೊಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಭಾರತದ ಅವೈದಿಕ ಲೋಕದ ಅತಿ ದೊಡ್ಡ ಪರಂಪರೆ ಇಂದು ಅಪಾಯಕ್ಕೆ ಸಿಕ್ಕಿಕೊಂಡಿದೆ.ಯಾರೂ ಓದದ, ಓದಬಾರದೆಂದು ನಿಷೇಧ ಹೇರಲಾಗಿದ್ದ, ಶೇಕಡಾ ೯೯ ಭಾರತೀಯರಿಗೆ ಅನ್ಯವಾಗಿದ್ದ ಭಗವದ್ಗೀತೆಗೆ ರಾಷ್ಟ್ರೀಯ ಮನ್ನಣೆ ತಂದುಕೊಡುವ ಇಂದಿನ ಪ್ರಯತ್ನಗಳು ಬಹುದೊಡ್ಡ ಅಪಾಯದ ಮುನ್ಸೂಚನೆಯಾಗಿದೆ.

ಜಾನಪದದ ವಿದ್ಯಾರ್ಥಿಗಳಾದ ನಾವು ಈಗ ಈ ಬಲಪಂಥೀಯರು ಅನುಸರಿಸುತ್ತಿರುವ ವಿಧಾನಗಳಬಗ್ಗೆ ಗಂಭೀರವಾಗಿ  ಆಲೋಚನೆ ಮಾಡ ಬೇಕಾಗಿದೆ. ಹಲವು ಪಠ್ಯಗಳಿಂದ ಒಂದು ಪಠ್ಯವನ್ನು ಪ್ರತೀತಗೊಳಿಸುವುದು ಬಲಪಂಥೀಯರ ಇಂದಿನ ಅಗತ್ಯಗಳಲ್ಲಿ ಒಂದು. ಇದಕ್ಕೆ ವಿರುದ್ಧವಾಗಿ ನಾವೀಗ ಒಂದು ಪಠ್ಯದಿಂದ ಹಲವು ಪಠ್ಯಗಳು ಹೇಗೆ ನಿಷ್ಪನ್ನಗೊಳ್ಳುತ್ತವೆ ಎಂಬ ಪ್ರಶ್ನೆಯನ್ನು ಕೇಳಿಕೊಂಡು ಭಿನ್ನ ಪಠ್ಯಗಳನ್ನು ತೀವ್ರವಾಗಿ ಅಭ್ಯಸಿಸಬೇಕಾಗಿದೆ.ಈ ದೇಶದಲ್ಲಿ ವಿವಿಧ ಸಮುದಾಯಗಳು ಕಾವ್ಯವನ್ನು ತನಗೆ ಬೇಕಾದಂತೆ ಮತ್ತೆ ಮತ್ತೆ ಹೇಗೆ ಬರೆದುಕೊಳ್ಳುತ್ತವೆ. ತನ್ನ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಹೇಗೆ ಪುನಾರಚಿಸಿಕೊಳ್ಳುತ್ತವೆ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಜಾನಪದ ಅಧ್ಯಯನಕ್ಕೆ ಹೊಸ ಹಾದಿ ತೋರಿಸಬೇಕಾಗಿದೆ.

  ನಮಗೆಲ್ಲಾ ತಿಳಿದಿರುವ ಹಾಗೆ, ನೆರೆಯ ತಮಿಳುನಾಡಿನಲ್ಲಿ ಕರಗವಿದೆ.ಅದು ದ್ರೌಪದಿಯನ್ನು ಆಧರಿಸಿದ ಆಚರಣೆ.ತಮಿಳರಿಗೆ ದ್ರೌಪದಿ ಮಹಾಭಾರತದ ಕೇವಲ ಒಂದು ಪಾತ್ರವಲ್ಲ, ಬದಲು ಆಕೆ ಅವರಿಗೆ ದೈವವೂ ಹೌದು. ಹಾಗಾಗಿ ತಮಿಳು ನಾಡಿನ ಮಹಾಭಾರತಗಳೆಲ್ಲ ದ್ರೌಪದಿ ಕೇಂದ್ರಿತವಾಗಿಯೇ ಬೆಳೆದವು. ಕೆಲವು ವರ್ಷಗಳ ಹಿಂದೆ ನಾನು ಮಧುರೈಯಲ್ಲಿ ತೆರುಕೂತ್ತು ನೋಡುತ್ತಿದ್ದೆ.ದ್ರೌಪದಿ ವಸ್ತ್ರಾಪಹಾರ ಅಂದಿನ ಪ್ರಸಂಗ.ದುಶ್ಯಾಸನ ಅಬ್ಬರದಿಂದಲೇ ರಂಗ ಪ್ರವೇಶ ಮಾಡಿದ.ದ್ರೌಪದಿ ಅಳುತ್ತಾ ರಂಗದ ನಡುವೆಯೇ ನಿಂತಿದ್ದಳು. ಇದ್ದಕ್ಕಿದ್ದಂತೆ ನನ್ನ ಊಹೆಗೂ ಮೀರಿ ದುಶ್ಯಾಸನನು ದ್ರೌಪದಿಯ ಕಾಲಿಗೆ ಧೊಪ್ಪನೆ ಬಿದ್ದು  ಹೇಳಿದ-’ ಅಮ್ಮಾ ತಾಯಿ, ನೀನು ನಮ್ಮ ದೈವ, ನಿನ್ನನ್ನು ಮುಟ್ಟಬಾರದು, ನಿನ್ನ ಸೆರಗಿಗೆ ಕೈ ಹಾಕಬಾರದು, ಆದರೆ, ನಾನು ಒಬ್ಬ ನಟ, ಇದನ್ನು ಈಗ ಮಾಡಲೇ ಬೇಕಾಗಿದೆ, ನನ್ನ ತಪ್ಪನ್ನು ಮನ್ನಿಸು’ ಅಂದವನೇ ಆಕೆಯ ಕಾಲು ಮುಟ್ಟಿ ನಮಸ್ಕರಿಸಿ, ಮತ್ತೆ ಎದ್ದು ನಿಂತು ಆರ್ಭಟಿಸತೊಡಗಿದ. ಕನ್ನಡದ ಕುಮಾರವ್ಯಾಸನಿಗಾಗಲೀ, ಸಂಸ್ಕೃತದ ವ್ಯಾಸನಿಗಾಗಲೀ ಇಂಥ ಒಂದು ಸ್ಥಿತಿಯನ್ನು ಊಹಿಸಿಕೊಳ್ಳುವುದೂ ಕಷ್ಟ.ಆದರೆ ಜನ ಕಲ್ಪಿಸಿಕೊಂಡಿದ್ದಾರೆ.ಇಲ್ಲಿ ಕಾಫಿ ರೈಟಿನ ಪ್ರಶ್ನೆಯೇ ಇಲ್ಲ.

 ತೆಲುಗು ಭಾಷೆಯಲ್ಲಿ ದೊರೆಯುವ ಅನೇಕ ಮಹಾಭಾರತಗಳಲ್ಲಿ ಪಾಂಡುವಿನ ಹೆಣವನ್ನು ಅವನ ಮಕ್ಕಳು ತಿನ್ನುವ ಪ್ರಸಂಗ ವಿಶೇಷವಾಗಿ ಬರುತ್ತದೆ. ಅಪ್ಪನ ಹೆಣವನ್ನು ಮಕ್ಕಳು ತಿಂದರೆ, ಮಕ್ಕಳು ಅಜರಾಮರವಾಗುತ್ತಾರೆ ಎಂಬ ನಂಬಿಕೆಯಲ್ಲಿ ಹಾಗೆ ಮಾಡಲಾಗುತ್ತದೆ. ಆದರೆ ಕೃಷ್ಣ ಅದನ್ನು ತಪ್ಪಿಸಿ ಪಾಂಡವರಿಗೂ ಮರಣಬರುವಂತೆ ಮಾಡುತ್ತಾನೆ. ಅದು ಹೇಗೋ ಪಾಂಡುವಿನ ಕಿರುಬೆರಳನ್ನು ತಿಂದ ಸಹದೇವನು ಭವಿಷ್ಯವನ್ನು ತಿಳಿಯಬಲ್ಲ ಮಹಾಜ್ಞಾನಿಯಾಗುತ್ತಾನೆ. ಕೌರವನೊಡನೆ ಕಾಲ ಬೆರಳಲ್ಲಿ ಪಗಡೆಯಡುವ ದ್ರೌಪದಿಯ ಕಲ್ಪನೆ ಮೂಲತಹ ತೆಲುಗು ಭಾಷೆಯದ್ದು.ಮಲೆಯಾಳಂ ಭಾಷೆಯಲ್ಲಿ ಲಭ್ಯವಿರುವ ಮಹಾಭಾರತಗಳಲ್ಲಿ ಕೌರವ ಪಾಂಡವರ ದ್ವೇಷವೇ ವಿಜೃಂಭಿಸಿದೆ. ನಿಶಾಲಕೂತ್ತುವಿನಲ್ಲ ಕೌರವರು ಪಾಂಡವರನ್ನು ಮಾಟದ ಮೂಲಕ ಕೊಲ್ಲಲು ಮಾಡುವ ಅಪೂರ್ವ ವಿವರಗಳಿವೆ.

ಸಂಸ್ಕೃತ ಓದಲಾಗದ ನನಗೆ ವೈಯಕ್ತಿಕವಾಗಿ ಗೊತ್ತಿರುವ ಮಹಾಭಾರತವು ಯಕ್ಷಗಾ, ತಾಳಮದ್ದಳೆ ಮತ್ತು ಹರಿಕತೆಗಳಿಂದ ತಿಳಿದದ್ದು. ಬಿಡಿ ಬಿಡಿಯಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಕೇಳಿದ ಅನೇಕ ಪ್ರಸಂಗಗಳಿಂದ ನಾನು ನನ್ನದೇ ಆದ ಮಹಾಭಾರತವೊಂದನ್ನು  ಮನಸಿನಲ್ಲಿ ಕಂಡರಿಸಿಕೊಂಡಿದ್ದೇನೆ. ಆ ಮಹಾಭಾರತದಲ್ಲಿ, ಭದ್ರಗಿರಿ ಕೇಶವ ದಾಸರಿದ್ದಾರೆ, ಅಚ್ಯುತ ದಾಸರಿದ್ದಾರೆ, ಮಲ್ಪೆ ಶಂಕರನಾರಾಯಣ ಸಾಮಗರೋ, ಶ್ರೇಣಿ ಗೋಪಾಲಕೃಷ್ಣ ಭಟ್ಟರೋ ಇದ್ದಾರೆ. ನೂರಾರು ಯಕ್ಷಗಾನ ಕಲಾವಿದರು ಕಟ್ಟದ ಪಾತ್ರಗಳಿವೆ.ಎಲ್ಲೋ ಒಂದೆಡೆ ಕುಮಾರವ್ಯಾಸ ಕಾವ್ಯದ ಗಮಕವೂ ಇದೆ.ಕಲಾವಿದರು ಮಹಾಭಾರತದ ಕತೆಯನ್ನು ಎಲ್ಲಿಂದಲೇ ಸುರು ಮಾಡಲಿ, ಪೀಠಿಕಾ ರೂಪದ ಮಾತುಗಳಲ್ಲಿ ಹಿಂದಿನ ಕತೆಯನ್ನು ಹೇಳಿ, ಕತೆಯ ಎಳೆ ಕಡಿಯದಂತೆ ನೋಡಿಕೊಳ್ಳುತ್ತಾರೆ.ಎಳವೆಯಲ್ಲಿ ತಲೆ ಕೂದಲು ಕತ್ತರಿಸುವಾಗ ಪಂಜದ ಕೃಷ್ಣಪ್ಪ ಹೇಳುತ್ತಿದ್ದ ಮಹಾಭಾರತವೇ ಬೇರೆ.ಆತ ಅದನ್ನು ಯಾರಿಂದ, ಯಾವಾಗ ಕಲಿತನೋ ದೇವರೇ ಬಲ್ಲ.  ಒಮ್ಮೆ ಪಂಜ ಜಾತ್ರೆಯಲ್ಲಿ ಅದೇ ಕೃಷ್ಣಪ್ಪ  ಕೀಚಕನ ಪಾತ್ರ ಮಾಡಿದ್ದರು. ಅವರ ವೇಷ ರಂಗಪ್ರವೇಶವಾಗುವಾಗ ಮಧ್ಯರಾತ್ರಿ ಎರಡು ಗಂಟೆಯಾದರೂ ಆಗಿರಬೇಕು, ಕೃಷ್ಣಪ್ಪನವರು ಆ ದಿನ ಅತ್ಯುತ್ಸಾಹದಲ್ಲಿದ್ದರು.ಆದರೇನು ಮಾಡೋಣ? ಕೀಚಕ ರಂಗಪ್ರವೇಶಿಸಿ ಸೈರೇಂದ್ರಿಯನ್ನು ಕಂಡು ಇನ್ನೂ ಹೆಚ್ಚು ಮತ್ತೇರಿಸಿಕೊಳ್ಳಬೇಕು, ಅಷ್ಟರಲ್ಲಿ ರಂಗದ ಎರಡೂ ಬದಿಯಲ್ಲಿದ್ದ ಗ್ಯಾಸ್‌ಲೈಟ್ ಭಗ್.. ಭಗ್..ಅನ್ನ ತೊಡಗಿತು.ಅದರಲ್ಲಿ ಗ್ಯಾಸ್ ಕಡಿಮೆಯಾಗಿತ್ತು.ಆಗ ಯಾರಾದರೂ ಬಂದು ಅದನ್ನು ಸರಿ ಮಾಡಬೇಕು.ಆದರೆ ಯಾರೂ ಬರಲಿಲ್ಲ. ಸೈರೇಂದ್ರಿಯನ್ನು ಕಂಡ ಕೀಚPನ ಮತ್ತೇರುತ್ತಿತ್ತು.ಆದರೆ ಗ್ಯಾಸ್ ಲೈಟ್‌ನ ಬೆಳಕು ಕಡಿಮೆಯಾಗುತ್ತಿತ್ತು.ಕೀಚಕ ಥಟ್ಟನೆ, ’ಎಲೈ ಸೈರೇಂದ್ರಿಯೇ ಸ್ವಲ್ಪ ತಡೆ’ ಎಂದು ಸೈರೇಂದ್ರಿಯನ್ನು ನಿಲ್ಲಿಸಿದ, ಭಾಗವತರ ಬಳಿ ಸಿಂಹಾಸನವೆಂದು ಇರಿಸಲಾದ ಮರದ ಕುರ್ಚಿಯನ್ನು ಇದಿರು ತಂದು ಅದರ ಮೇಲೇರಿದ, ಗ್ಯಾಸ್‌ಲೈಟನ್ನು ಕೆಳಗಿಳಿಸಿ ಚೆನ್ನಾಗಿ ಪಂಪುಹೊಡೆದು ಮತ್ತೆ ಮೇಲೇರಿಸಿದ. ಕುರ್ಚಿಯನ್ನು ಮತ್ತೆ ಹಿಂದೆ ಇರಿಸಿ ’ಎಲೈ ಸೈರೇಂದ್ರಿಯೇ..’ಅಂತ ಪಾತ್ರ ಮುಂದವರಿಸಿದ.ನನ್ನ ನೆನಪಿನ ಮಹಾಭಾರತದಲ್ಲಿ ಗ್ಯಾಸ್ ಲೈಟಿಗೆ ಗಾಳಿ ಹಾಕಿದ ಕೀಚಕನೂ ಇದ್ದಾನೆ, ಬೀಡಿ ಸೇದುವ ಸುಯೋಧನನೂ ಇದ್ದಾನೆ.

ಕಳೆದ ಸುಮಾರು ೧೬ ವರ್ಷಗಳಿಂದ ನಾನು ಉತ್ತರ ಭಾರತದಲ್ಲಿ ಓಡಾಡುತ್ತಿದ್ದೇನೆ. ಅಲ್ಲಿನ ಮೌಖಿಕ ನಿರೂಪಣೆಗಳನ್ನು ಅರ್ಥ ಮಾಡಿಕೊಳ್ಳಲು ಹಿಂದಿ ಭಾಷೆಯ ಪ್ರಾದೇಶಿಕ ಪ್ರಬೇಧಗಳು ಒಂದು ದೊಡ್ಡ ತೊಡಕಾದರೂ ಪಂಡ್ವಾನಿ, ಪಾಂಡವಲೀಲಾ ಮೊದಲಾದ ಪ್ರದರ್ಶನಗಳನ್ನು ಕಂಡು ಸಂತಸ ಪಟ್ಟಿದ್ದೇನೆ. ಹಿಮಾಲಯದ ತಪ್ಪಲಿನಲ್ಲಿರುವ ಜನರಿಗೆ ಮಹಾಭಾರತ ಎಂದರೆ ಅದು ಹಿಡಿಂಬೆಯ ಕತೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಹಿಡಿಂಬಾ ದೇವಸ್ಥಾನವೂ ಇದೆ. ನನ್ನ ಅಮೇರಿಕನ್ ವಿದ್ಯಾರ್ಥಿಯೊಬ್ಬನ ಸಂಶೋಧನಾ ವಿಷಯವೇ ಹಿಡಿಂಬೆ. ಆತ ಆಕೆಯ ಬಗ್ಗೆ ಸಂಗ್ರಹಿಸಿದ ವಿವರಗಳು ನನ್ನ ಊಹೆಗೂ ನಿಲುಕದು ಈಗಿನ ಉತ್ತರಾ ಖಂಡದಾದ್ಯಂತ ಇರುವ ಗಡ್ಡಿ ಬುಡಕಟ್ಟಿನ ಜನರಿಗೆ ಜರಾಸಂಧನೇ ದೈವ. ಅವರ ನಂಬಿಕೆಯ ಪ್ರಕಾರ ಜರಾಸಂಧನು ಕಲಿಯುಗವನ್ನು ಬಂಧಿಸಿಟ್ಟು, ಜನರನ್ನು ಅನಾಹುತಗಳಿಂದ ರಕ್ಷಿಸಿದ್ದ, ಆದರೆ ಭೀಮನೆಂಬ ದ್ರೋಹಿಯು ಮೋಸದಿಂದ ಜರಾಸಂಧನನ್ನು ಕೊಂದು ಕಲಿಯುಗವನ್ನು ಸೆರೆಯಿಂದ ಬಿಡಿಸಿದ್ದರಿಂದ ಈಗ ಕೆಟ್ಟ  ಘಟನೆಗಳೆಲ್ಲ ನಡೆಯುತ್ತಿವೆ. ಗಡ್ಡಿಗಳ ಪ್ರದರ್ಶನವೊಂದರಲ್ಲಿ, ಜರಾಸಂಧನ ದೂತನೊಬ್ಬ ಊರು ಸುತ್ತುವಾಗ ಅಟಲ ಬಿಹಾರಿ ವಾಜಪೇಯಿಯವರನ್ನು ಭೇಟಿ ಮಾಡಿ, ಪ್ರಶ್ನೆಯೊಂದನ್ನು ಕೇಳಿದಾಗ, ಅವರು ಉತ್ತರ ಕೊಡಲು ತೆರೆದ ಬಾಯಿ ಮುಚ್ಚುವುದರೊಳಗಾಗಿ ಆತ ಪಾರ್ಲಿಮೆಂಟ್ ಭವನವನ್ನೂ ನೋಡಿ ಬಂದಿದ್ದ. ಕಾಂಗ್ರಾ ಪ್ರದೇಶದಲ್ಲಿ ದೊರೆಯುವ ನಿರೂಪಣೆಗಳ ಪ್ರಕಾರ ಪಾಂಡು ಸತ್ತ ೧೨ ವರ್ಷಗಳ ಆನಂತರ ಕುಂತಿಗೆ ಮಾಂಸ ತಿನ್ನುವ ಬಯಕೆಯಾಗುತ್ತದೆ.ಆಗ ಭೀಮಾರ್ಜುನರು ಜೊತೆಯಾಗಿ ಬೇಟೆಯಾಡುತ್ತಾರೆ.ಕಥನದ ಮುಂದಿನ ವಿವರಗಳೆಲ್ಲ ಭೀಮಾರ್ಜುನರ ಬೇಟೆಗೇ ಸೀಮಿತವಾಗಿದೆ.

  ಈಗಿನ ಹಿಮಾಚಲ ಪ್ರದೇಶದ ಕಿನ್ನೂರ್ ಪ್ರದೇಶದಲ್ಲಿ ಜನಪ್ರಿಯವಾಗಿರುವ ನಿರೂಪಣೆಗಳ ಪ್ರಕಾರ ಮರಿಗಳೊಡನೆ ಆಡುವ ಮಂಗಗಳನ್ನು ನೋಡಿದ ಕುಂತಿಗೆ ಮಗುವಿನ ಬಯಕೆ ಮೂಡಿ, ೧೨ ವರ್ಷಗಳ ವರೆಗೆ ’ಋಷಿ ಮಾಮ’ನ ಸೇವೆ ಮಾಡಿ, ಮಕ್ಕಳನ್ನು ಪಡೆಯುತ್ತಾಳೆ.ಇಲ್ಲಿನ ದಲಿತರ ಪ್ರಕಾರ, ಪಾಂಡವರು ಬೆಟ್ಟದ ಮೇಲೆಯೂ, ಕೌರವರು ಅದೇ ಬೆಟ್ಟದ ಬುಡದಲ್ಲಿಯೂ ವಾಸಿಸುತ್ತಿದ್ದರು.ಪಾಂಡವರಿಗೆ ಒಬ್ಬಳು  ತಂಗಿಯೂ ಇದ್ದಳು. ಅವಳೇ ಬೂರಾದೇವಿ.ನೀರಿನ ವಿಷಯದಲ್ಲಿ ಅವರ ನಡುವೆ ಜಗಳ ಬಂದಾಗ ಸೆಗಣಿಯ ಮನೆಮಾಡಿ ಪಾಂಡವರನ್ನು ಕೊಲ್ಲಲು ಕೌರವ ಪ್ರಯತ್ನಿಸುತ್ತಾನೆ. ಗಢವಾಲದ ಜನಪ್ರಿಯ ಪಾಂಡವ ಲೀಲಾದಲ್ಲಿ ಐವರು ಪಾತ್ರಧಾರಿಗಳ ಮೇಲೆ ಪಾಂಡವರು ಆವೇಶಿತರಾಗಿ ಜನರನ್ನು ಹರಸುತ್ತಾರೆ.ಜಮ್ಮು ಪ್ರದೇಶದ ಜನರು ತಮ್ಮನ್ನು ಶಲ್ಯ ಮಹಾರಾಜನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ.ವನವಾಸದ ಸಂದರ್ಭದಲ್ಲಿ ಪಾಂಡವರು ಅಲ್ಲಯೇ ತಂಗಿದ್ದರಂತೆ.ಸ್ಥೂಲವಾಗಿ ಉತ್ತರ ಭಾರತೀಯ ಜನಪದರ ಪ್ರಕಾರ ಕೌರವರ ಒಟ್ಟು ಸಂಖ್ಯೆ ೬೦, ಪಾಂಡವರ ಸಂಖ್ಯೆ ಐದು. ಪಾಂಡವರ  ತಾಯಿ ಕಾತಮ, ಕೌರವರ ತಾಯಿ ನಿತಿನಿ.

ಭಾರತದ ಈಶಾನ್ಯ ಭಾಗಗಳಿಗೆ ಹೋದರೆ ಅಲ್ಲಿ ಕೌರವನ ಪಕ್ಷದವರೇ ಹೆಚ್ಚು ಪ್ರಸಿದ್ಧರು. ಭಗದತ್ತ, ಬಾಣಾಸುರ, ರುಕ್ಮ, ಬಭ್ರುವಾಹನರನ್ನು ಅಸ್ಸಾಮಿನ ಜನರು ತಮ್ಮ ಪೂರ್ವಜರೆಂದು  ಭಾವಿಸುತ್ತಾರೆ. ಬೋಡೋಗಳ ಪ್ರಕಾರ ಕೃಷ್ಣನ ಹೆಂಡತಿ ರುಕ್ಮಿಣಿಯು ಬೋಡೋ ಕನ್ಯೆ.

ಮಧ್ಯಬಾರತದ ಮಹಾಭಾರತ ಕಥನಗಳಲ್ಲಿ ಭೀಮನೇ ನಾಯಕ.ಕೊಂಡ ಬುದಕಟ್ಟಿನ ಜನರಲ್ಲಿ ಬಹಳ ಪ್ರಿದ್ಧವಾಗಿರುವ ’ಭೀಮ ಸಿದಿ’ ಎಂಬ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹಾರಕ.ಚೆಂದದ ಹುಡುಗಿಯರನ್ನು ನೋಡಿದಾಗ ಆತ ತನ್ನ ತಂದೆ ಪವನಾರ್ ದೇವನನ್ನು ಪ್ರಾರ್ಥಿಸುತ್ತಾನೆ. ಪವನಾರ್‌ನು ಜೋರಾಗಿ ಬೀಸಿ ಹುಡುಗಿಯರ ಬಟ್ಟೆ ಹಾರಿಸುತ್ತಾನೆ. ಭೀಮನು ಅಲ್ಲಿ ಮಳೆ ತರುವ ದೈವವೂ ಆಗಿರುವುದು ಇದಕ್ಕೆ ಪೂರಕವಾದ ವಿಚಾರ.ಕೊಂಡರಿಗೆ ಭೀಮನು ಫಲವಂತಿಕೆಯ ದೈವವೂ ಹೌದು.ಬಿಂಜಾಲ್ ಬುಡಕಟ್ಟಿನವರಿಗೆ ಕೀಚಕನೆಂದರೆ ಇಷ್ಟ.

ದ್ರೌಪದಿ ಮತ್ತು ಕೃಷ್ಣರ ನಡವಣ ಸಂಬಂಧವೂ ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಕುತೂಹಲ ಹುಟ್ಟಿಸುವ ರೀತಿಯಲ್ಲಿ  ಪ್ರತೀತಗೊಂಡಿದೆ. ಚತ್ತೀಸಗಢ ಪರಿಸರದಲ್ಲಿ ಪ್ರಚಲಿತದಲ್ಲಿರುವ ಪುಟ್ಟ ಕಥನ ಕಾವ್ಯವೊಂದರಲ್ಲಿ ಬಾಣದ ಮೊನೆಯನ್ನು ಕೃಷ್ಣನು ಹರಿತಗೊಳಿಸುತ್ತಿರುವಾಗ ಕೈಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿಯು ತನ್ನ ಸೆರಗಿಂದ ಹರಿದ ಬಟ್ಟೆಯ ತುಂಡೊಂದನ್ನು ಕೃಷ್ಣನ ಬೆರಳಿಗೆ ಕಟ್ಟಿ, ರಕ್ತ ಒಸರುವುದನ್ನು ನಿಲ್ಲಿಸುತ್ತಾಳೆ.ಅದೇ ಪ್ರದೇಶದ ಇನ್ನೊಂದು ನಿರೂಪಣೆಯ ಪ್ರಕಾರ, ಒಮ್ಮೆ ಕೃಷ್ನನು ಪಾಂಡವರೊಡನೆ ಕೆರೆಯೊಂದರಲ್ಲಿ ಈಜುತ್ತಿರುವಾಗ ಆತ ಲಂಗೋಟಿ ಕಳೆದು ಹೋಗುತ್ತದೆ.ಪಾಂಡವರು ಸ್ನಾನದ ಆನಂತರ ಮೇಲೆ ಬಂದರೂ ಕೃಷ್ಣ ಬಾರದಾದ.ಆಗ ಪಕ್ಕದ ಕೆರೆಯಲ್ಲಿ ಗೆಳತಿಯರೊಂದಿಗೆ ಈಜಾಡುತ್ತದ್ದ ದ್ರೌಪದಿಗೆ ಅದು ಗೊತ್ತಾಗುತ್ತದೆ.ಅವಳು ಸೆರಗಿನಿಂದ ಹರಿದ ಸೀರೆಯ ತುಣುಕನ್ನು ಕೃಷ್ಣನೆಡೆಗೆ ಎಸೆಯುತ್ತಾಳೆ. ಅದನ್ನು ಲಂಗೋಟಿ ಮಾಡಿಕೊಂಡ ಕೃಷ್ನನು ಮೇಲೆ ಬಂದು-ನನ್ನ ಕಷ್ಟಕ್ಕೆ ಆದೆ, ನಿನ್ನ ಕಷ್ಟಕ್ಕೆ ಸಹಾಯ ಮಾಡುತ್ತೇನೆ ’ ಅನ್ನುತ್ತಾನೆ. ಹೀಗೆ ದ್ರೌಪದಿ ಕೊಟ್ಟ ಒಂದು ತುಂಡು ಬಟ್ಟೆಯನ್ನು ಮುಂದೆ ಕೃಷ್ಣನು ಅಕ್ಷಯಾಂಬರ ಮಾಡಿ ಕೃತಜ್ಞತೆ ಸಲ್ಲಿಸುತ್ತಾನೆ. ಏನಿದ್ದರೂ ಬೆರಳು, ರಕ್ತ, ಸೆರಗು ಮತ್ತು ಲಂಗೋಟಿಗಳ ಸುತ್ತ ಹೆಣೆಯಲಾದ ಈ ಕತೆಯು ಮತ್ತಷ್ಟು ವಿಶ್ಲೇಷಣೆಗೆ ಅರ್ಹವಾದುದು. 

ಇಷ್ಟಿದ್ದರೂ ನಾವು ಈ ಬಗೆಯ, ಸಾಮುದಾಯಿಕ ರಚನೆಗಳತ್ತ ಹೆಚ್ಚು ಗಮನಹರಿಸಿಲ್ಲ. ಹಾಗೆ ಗಮನ ಹರಿಸದ್ದರಿಂದ ನಮ್ಮಲ್ಲಿ ಭಿನ್ನ ಪಠ್ಯಗಳ ಅಧ್ಯಯನ ಹೆಚ್ಚಾಗಿ  ನಡೆಯಲೇ ಇಲ್ಲ. ನಮ್ಮಲ್ಲಿ ದೊರೆಯುವ ಜನಪದ ರಾಮಾಯಣಗಳಲ್ಲಿ ರಾಮ ಎಲ್ಲೆಲ್ಲೋ ಹುಟ್ಟಿದ್ದಾನೆ. ಆದರೆ ಬಲಪಂಥೀಯ ರಾಜಕಾರಣವು ಆತನನ್ನು ಅಯೋಧ್ಯೆಗೆ ಕಟ್ಟಿಹಾಕಿತು.ಕನ್ನಡಕ್ಕೆ ಬಹಳ ಅನನ್ಯವಾದ ವಚನಗಳನ್ನು ನಾವು ’ಸಾಮೂಹಿಕ ಸೃಷ್ಟಿ’ ಎಂದೇನೋ ಕರೆದಿದ್ದೇವೆ. ಆದರೆ ವಚನಗಳನ್ನು ಸಂಪಾದನೆ ಮಾಡುವಾಗ ’ಇದು ಬಸವಣ್ಣನ ವಚನ, ಅದು ಅಕ್ಕನ ವಚನ’ ಎಂಬಿತ್ಯಾದಿಯಾಗಿ ಗುರುತಿಸಿ, ಬೇರ್ಪಡಿಸಿ, ಸಂಕಲಿಸಿ ಪ್ರಕಟಿಸಿದ್ದೇವೆ; ಚರ್ಚಿಸಿದ್ದೇವೆ. ಅಂದರೆ ತಮ್ಮ ಪಠ್ಯಗಳ ಮೇಲೆ ಹಕ್ಕು ಸ್ಥಾಪಿಸಬಯಸದ ವಚನಕಾರರನ್ನು ಹಕ್ಕು ಸ್ಥಾಪಿಸಿಕೊಳ್ಳಲು ನಾವು ಒತ್ತಾಯಿಸಿದ್ದೇವೆ. ಬಸವಣ್ಣನವರ ಪ್ರಖ್ಯಾತ ವಚನವೊಂದು ಇಂತಿದೆ-

"ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡುವೆ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರ ಹೊನ್ನ ಕಳಸವಯ್ಯ"

ಪ್ರಭು ದೇವರ ಈ ಕೆಳಗಿನ ವಚನವನ್ನು ಗಮನಿಸಿ :

"ಕಾಲೇ ಕಂಭಗಳಾದುವೆನ್ನ
ದೇಹವೇ ದೇಗುಳಾದುವೆನ್ನ
ದೇಹವೇ ದೇಗುಲವಾಯಿತ್ತಯ್ಯ
ಎನ್ನ ನಾಲಿಗೆಯೆ ಗಂಟೆ
ಶಿರ ಸುವರ್ಣದ ಕಲಶ-ಇದೇನಯ್ಯ

ಮೇಲಿನ ಎರಡೂ ವಚನಗಳಲ್ಲಿ ಅನೇಕ ಸಾಮ್ಯಗಳಿವೆ. ಈಗ ನಾವು ಇವನ್ನು ’ಇದು ಮೂಲತಃ ಯಾರದಿರಬಹುದು" ಎಂದು ಕೇಳಿಕೊಂಡು ಮುಂದುವರೆಯುವುದಕ್ಕಿಂತ, ಬೇರೆ ಬೇರೆಯವರ ವಚನಗಳನ್ನು ಜನರು ಹೇಗೆ ಸಂಮಿಶ್ರ ಮಾಡಿಕೊಂಡು ತಮಗೆ ಬೇಕಾದ  ಪಠ್ಯಗಳನ್ನು ಸೃಷ್ಟಿ ಮಾಡಿಕೊಂಡರು ಎಂಬ ಅರಿವಿನಲ್ಲಿ ಮುಂದುವರೆದರೆ ನಮಗೆ ನಮ್ಮ ಸಮಾಜವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಸರ್ವಜ್ಞನ ಜನಪ್ರಿಯ ವಚನಗಳಲ್ಲಿ ಒಂದಾದ "ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು" ಎಂಬ ಸಾಲು ಪ್ರಭುದೇವರ ’ಅನ್ನವನಿಕ್ಕಿ ನನ್ನಿಯ ನುಡಿದು’ ಎಂಬ ಸಾಲನ್ನು ನೆನಪಿಗೆ ತರುತ್ತದೆ ಅಲ್ಲವೇ?

ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ  ಲಕ್ಷ್ಮಣದಾಸ ಎಂಬ ಹಾಡುಗಾರರೊಬ್ಬರು ಪರಿಚಯವಾಗಿದ್ದರು.  ಹಂಪಿಯ ಬೀದಿಗಳಲ್ಲಿ ಹಾಡು ಹೇಳುತ್ತಾ ತಿರುಗಾಡುತ್ತಿದ್ದ ಅವರ ಕಂಠಶ್ರಿ ಅದ್ಬುತವಾಗಿತ್ತು. ಬಿಡುವಿದ್ದಾಗಲೆಲ್ಲ ಅವರು ನನ್ನ ಮನೆಗೆ ಬರುತ್ತಿದ್ದರು, ಹಾಡು ಹೇಳುತ್ತಿದ್ದರು.ಆದರೆ ಅವರ ಹಾಡು ಕೇಳಿದಾಗಲೆಲ್ಲ ನಾನು ಬೆಚ್ಚಿ ಬೀಳುತ್ತಿದ್ದೆ.ಏಕೆಂದರೆ ಅವರ ಎಷ್ಟೋ ಹಾಡುಗಳು ಶಿಶುನಾಳ ಶರೀಫರ ತತ್ವಪದಗಳಿಂದ ಆರಂಭವಾಗಿ, ಪುರಂದರದಾಸರ ಕೀರ್ತನೆಯ ಸಾಲಿನೊಂದಿಗೆ ಮುಂದುವರೆದು ’ಕೂಡಲ ಸಂಗಮದೇವಾ’ ಎಂದು ಕೊನೆಗೊಳ್ಳುತ್ತಿತ್ತು.ಸುಮಾರು ಏಳು ನೂರು ವರ್ಷಗಳ ಅವಧಿಯಲ್ಲಿ ರಚಿತವಾದ ಪಠ್ಯಗಳಿಂದ ತಮಗೆ ಬೇಕಾದ ಸಾಲುಗಳನ್ನು ಆರಿಸಿಕೊಂಡು ೨೦ನೇ ಶತಮಾನಕ್ಕೆ ಬೇಕಾದ ಪಠ್ಯವೊಂದನ್ನು ಅವರು ಸೃಜಿಸುತ್ತಿದ್ದರು. ನನ್ನ ವೈಯಕ್ತಿಕ ಸಂಗ್ರಹದಲ್ಲಿರುವ ಲಕ್ಷ್ಮಣ ದಾಸರ ಹಾಡೊಂದರ ಕೊನೆಯ ಸಾಲುಗಳು ಇಂತಿವೆ-

"ಹೀನ ಕೃತ್ಯಗಳ ಮಾಡುತ ನದಿಯಲಿ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಕೂಡಲ ಸಂಗನ ನೆನೆಯದೆ
ಮೌನದ ಮಾಡಿದರೇನು ಫಲ?"

ಪುರಂದರದಾಸ ’ಬೇವು ಬೆಲ್ಲದೊಡಲೇನು ಫಲ" ಕೀರ್ತನೆಯು ಬಸವಣ್ಣನ ಅಂಕಿತನಾಮದೊಂದಿಗೆ ಕೊನೆಯಾದಾಗ ನಾನು ಅವಕ್ಕಾಗಿದ್ದೆ.

ಉತ್ತರ ಕರ್ನಾಟಕದಾದ್ಯಂತ ಅತ್ಯಂತ ವೈಭವದಿಂದ ಜರುಗುವ ಹಂಪಿ ಜಾತ್ರೆ, ಮೈಲಾರನ ಜಾತ್ರೆ, ಕುಮಾರ ರಾಮನ ಜಾತ್ರೆ, ತಿಂಥಿಣಿ ಜಾತ್ರೆ, ಹುಲಿಗೆಮ್ಮನ ಜಾತ್ರೆ ಮೊದಲಾದೆಡೆಗಳಲ್ಲಿ ಲಕ್ಷ್ಮಣದಾಸರ ಹಾಗೆ ಹಾಡುವ ನೂರಾರು ಕಲಾವಿದರನ್ನು ನಾವು ಇಂದಿಗೂ ಕಾಣಬಹುದು.ಇವರುಗಳು ಹಾಡುವ ವಚನಗಳನ್ನು, ಕೀರ್ತನೆಗಳನ್ನು ಮತ್ತು ತತ್ವಪದಗಳನ್ನು ಇದೀಗ ನಾವು ಸಂಗ್ರಹಿಸಬೇಕು.ಅವು ೨೧ನೇ ಶತಮಾನದ ಆರಂಭದ ಕಾಲದ ಪಠ್ಯಗಳಾಗಿ ಕನ್ನಡ ಸಂಸ್ಕೃತಿಯ ಬಗೆಗಣ ನಮ್ಮ ತಿಳುವಳಿಕೆಯನ್ನು ಅಗಾಧವಾಗಿ ವಿಸ್ತರಿಸಬಲ್ಲುವು.ನಮ್ಮ ಸಾಹಿತ್ಯ ಪರಂಪರೆಯಲ್ಲಿ ಪಠ್ಯದ ಹಕ್ಕನ್ನು ಯಾರೋ ಕಾದಿರಿಸಿಲ್ಲ. ಹಾಗಾಗಿ ಪಠ್ಯಗಳೆಲ್ಲ ಒಂದರೊಡನೊಂದು ಸೇರಿಕೊಂಡು, ಒಬ್ಬರ ಸೃಷ್ಟಿ ಎಲ್ಲರ ಸೃಷ್ಟಿಯಾಗಿ ಮಾರ್ಪಟ್ಟು, ಕಾಲಾತೀತವಾದ ಪಠ್ಯಗಳು ನಿರ್ಮಾಣಗೊಂಡಿವೆ. ಇದರ ಕಡೆಗೆ ನಮ್ಮ ಗಮನಹರಿಯಬೇಕಾದ್ದು ಇಂದಿನ ಅಗತ್ಯಗಳಲ್ಲೊಂದಾಗಿದೆ.

ಜಾನಪದ ನಿರೂಪಣೆಗಳ ಅನನ್ಯತೆ: 

ನಮ್ಮ ಜಾನಪದವೇ ನಮ್ಮ ಸಂಸ್ಕೃತಿ.ಇದು ಬಲಪಂಥೀಯರು ಹೇಳುವ, ಪ್ರತಿಪಾದಿಸುವ ಸಂಸ್ಕೃತಿಗಿಂತ ತುಂಬಾ ಭಿನ್ನ.ಮಲೆಯ ಮಾದೇಶ್ವರ, ಜುಂಜಪ್ಪ, ಸಿರಿ, ಕೋಟಿ-ಚೆನ್ನಯ, ಮೈಲಾರಲಿಂಗ, ದೇವನಾರಾಯಣ, ಧೋಲಾ, ಮೊದಲಾದುವು ನಮ್ಮ ಪ್ರಸಿದ್ಧ ಜನಪದ ಕಾವ್ಯಗಳು.ಜಾನಪದವನ್ನು ಒಬ್ಬ ಲೇಖಕ ಬರೆಯುವುದಿಲ್ಲ, ಬದಲು ಇಡೀ ಸಮುದಾಯವೇ ಮತ್ತೆ ಮತ್ತೆ ಇವುಗಳನ್ನು ಬರೆಯುತ್ತಿರುತ್ತದೆ. ಮೌಖಿಕವಾಗಿ ಇವು ಪ್ರಸರಣ ಹೊಂದುತ್ತಿರುತ್ತವೆ.  ಹಾಗಾಗಿ ಇವುಗಳ ಒಡೆತನ ಇಡೀ ಸಮುದಾಯಕ್ಕೆ ಸೇರುತ್ತದೆ ಮತ್ತು ಇದರ ಪಠ್ಯಗಳು ಸ್ಥಿರವಾಗಿರದೆ ತುಂಬ ಚಲನಶೀಲವಾಗಿರುತ್ತವೆ. 

ಜಾನಪದವು ಶಿಷ್ಟ ನಿರೂಪಣೆಗಳಿಗಿಂತ ತುಂಬಾ ಭಿನ್ನವಾಗಿರುತ್ತವೆ. ಕೆಲವೇ ಕೆಲವು ಅಪವಾದಗಳನ್ನು ಬಿಟ್ಟರೆ ಜನಪದ ನಿರೂಪಣೆಗಳಲ್ಲಿರುವ ನಾಯಕರು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ ಸತ್ತು ಹೋಗಿರುತ್ತಾರೆ. ತುಳುನಾಡಿನ ಜನಪ್ರಿಯ ದೈವ ’ಕಲ್ಕುಡ’ನಿಗೆ ಸಂಬಂಧಿಸಿದ ಪುರಾಣವೊಂದರಲ್ಲಿ ಆತ ಗೊಮ್ಮಟನನ್ನು ಪ್ರತಿಷ್ಠಾಪಿಸಿ, ಅರಸನ ಅವಕೃಪೆಗೆ ತುತ್ತಾಗಿ ಸಾಯುತ್ತಾನೆ. ಕದರಿ ದೇವಸ್ಥಾನದ ಛಾವಣಿಯ ಮೇಲಿದ್ದ ಹಣ್ಣನ್ನು ತಿನ್ನಲು ಹೋದ ಅಸ್ಪೃಶ್ಯ ಕೊರಗ ತನಿಯನು, ಅದೇ ಕಾರಣಕ್ಕೆ ಮಾಯವಾಗುತ್ತಾನೆ. ಸ್ವಾಭಿಮಾನಿಗಳಾದ ಕೋಟಿ-ಚೆನ್ನಯರು ರಣರಂಗದಲ್ಲಿ ಹೋರಾಡಿ ಸಾಯುತ್ತಾರೆ. ಗಂಡಸರ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸಿದ ಸಿರಿಯು ಸತ್ತು ದೈವವಾಗುತ್ತಾಳೆ.ವೈದಿಕಪಠ್ಯಗಳಲ್ಲಿ ನಾಯಕರು ಸಾಯಲಾರರು, ಸಾಯಬಾರದು.ಆದರೆ ಹೋರಾಟಗಳಲ್ಲಿ ಸತ್ತವರೇ ನಮ್ಮ ನಾಯಕರು.

ವಸ್ತುವಿನ ನಿರ್ವಹಣೆಯ ದೃಷ್ಟಿಯಿಂದ ಜನಪದ ನಿರೂಪಣೆಗಳಲ್ಲಿನ ನಾಯಕನು ತೋರುವ ವೀರತ್ವದಲ್ಲಿ ಒಂದು ಬಗೆಯ ಕ್ರಿಯಾತ್ಮಕ ಗುಣ ನೆಗೆದು ತೋರುತ್ತದೆ. ಇಲ್ಲಿಯ ವೀರರು, ವೀರರಾಗಲು ಕಾರಣ ಅವರು ದೈವದ ಅವತಾರವಾಗಿರುವುದು ಅಲ್ಲ. ಅವರಿಗೆ ಯಾವುದೇ ಪೂರ್ವ ಜನ್ಮದ ಪುಣ್ಯ ವಿಶೇಷಗಳಿಲ್ಲ. ಅವರ ತಾಯಂದಿರು ಗರ್ಭ ಧರಿಸುವಾಗ ಯಾವುದೇ ಶುಭ ಶಕುನಗಳು ಸಂಭವಿಸುವುದಿಲ್ಲ. ಅಥವಾ ಅವರು ಜನಿಸುವಾಗ ದೇವತೆಗಳು ಪುಷ್ಪವೃಷ್ಟಿ ಮಾಡುವುದಿಲ್ಲ. ಅವರ ಸಾಮಾಜಿಕ ಸ್ಥಾನಮಾನಗಳು (ಉದಾ: ಬ್ರಾಹ್ಮಣನಾಗಿರುವುದು, ಅರಸು ಕುಮಾರನಾಗಿರುವುದು) ಅವರ ವೀರತ್ವವನ್ನು ನಿರ್ಧರಿಸುವುದಿಲ್ಲ. ಜನಪದ ನಿರೂಪಣೆಗಳ  ನಾಯಕನು ಎಲ್ಲರಂತೆ ಜನಿಸುತ್ತಾನೆ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಬಗೆ ಬಗೆಯ ಸಾಮಾಜಿಕ ಒತ್ತಡಗಳಿಗೆ  ಒಳಗಾಗುತ್ತಾನೆ. ತನ್ನ ಪ್ರಾಮಾಣಿಕತೆ, ಬುದ್ಧಿಮತ್ತೆ,  ಮತ್ತು ಸಾಹಸಗಳಿಂದ ಜನಾನುರಾಗಿಯಾದ ನಾಯಕನು ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ದಿಟ್ಟವಾಗಿ  ಉತ್ತರಿಸುತ್ತಾನೆ. ಮತ್ತು ಅದೇ ಕಾರಣಕ್ಕೆ ಸಾಯುತ್ತಾನೆ. ಜೀವನದ ಅತ್ಯಂತ ಕ್ಲಿಷ್ಟಕರ ಸಂದರ್ಭಗಳಲ್ಲಿ ಈ ಬಗೆಯ  ನಾಯಕರು ತೋರುವ ಕ್ರಿಯಾತ್ಮಕತೆಯೇ ಅವರನ್ನು ಜನರ ಕಣ್ಣಲ್ಲಿ ನಾಯಕರನ್ನಾಗಿ ಬೆಳೆಸುತ್ತದೆ. ಸಾಮಾನ್ಯ ಕಲ್ಲು ಕುಟಿಗನಾಗಿ ಹುಟ್ಟಿದ ವೀರು ಕಲ್ಕುಡನು ಗೊಮ್ಮಟನ ಪ್ರತಿಮೆ ಸ್ಥಾಪಿಸುವುದು, ಗೌಡರ ಗರ್ಭಿಣಿ ಸೊಸೆ ಊರಿನ ಒಳಿತಿಗಾಗಿ ತಾನೇ ಕೆರೆಗೆ ಬಲಿಯಾಗುವುದು ಇತ್ಯಾದಿಗಳು ಇವಕ್ಕೆ ಒಳ್ಳೆಯ ಉದಾಹರಣೆಗಳು. ಆದರೆ ಶಿಷ್ಟ ಪರಂಪರೆಯಲ್ಲಿ  ನಾಯಕರು ಹುಟ್ಟುವಾಗಲೇ ಅಸಾಮಾನ್ಯ ಪರಾಕ್ರಮಿಗಳು. ಅವರು ತಾಯಿಯ ಗರ್ಭದಲ್ಲಿರುವಾಗಲೇ ಪುಷ್ಪ ವೃಷ್ಟಿಯಾಗುತ್ತದೆ.ಜೊತೆಗೆ ಶಿಷ್ಟ ಪರಂಪರೆಯು ಈಗಾಗಲೇ ಅಸ್ತಿತ್ವದಲ್ಲಿರುವ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಒಪ್ಪಿಕೊಂಡು ಅದನ್ನು ಕಾನೂನುಬದ್ಧಗೊಳಿಸುತ್ತದೆ. ಜಾತಿ-ವರ್ಣ ವ್ಯತ್ಯಾಸಗಳನ್ನು ಅವು ಬಹುಮಟ್ಟಿಗೆ ಸಮರ್ಥಿಸುತ್ತವೆ. ಹಾಗಾಗಿ ರಾಮನು ಶೂದ್ರ ಯೋನಿಯಲ್ಲಿ ಜನಿಸಿದ ಶಂಭೂಕನ್ನು ಕೊಲ್ಲುವಂಥ ಕಥೆ ರಾಮಾಯಣದೊಳಕ್ಕೆ ಸುಲಭವಾಗಿ ಸೇರಿಕೊಳ್ಳುತ್ತದೆ.  ಆದರೆ ಜನಪದ ನಿರೂಪಣೆಗಳು  ಜಾತಿ ಸಮಾಜದ ಒಳಗಿನ ಕೆಲವು ಸಂಘರ್ಷಗಳನ್ನು ಬಹಿರಂಗಕ್ಕೆ ತರುತ್ತವೆ. ಅದರ ಹುಳುಕುಗಳನ್ನು ಬಯಲಿಗೆಳೆಯುತ್ತವೆ.  ಇದಕ್ಕೆ ಜನಪದ ನಿರೂಪಣೆಗಳಲ್ಲಿ ಅನುಸರಿಸಲಾಗುವ ವಿಧಾನವೂ ತುಂಬಾ ಕುತೂಹಲಕರವಾಗಿರುತ್ತದೆ. ಈ ಜನಪದ  ನಾಯಕರು ಜಾತಿ ಸಮಾಜದ ವೈರುಧ್ಯಗಳಿಗೆ ಬಲಿಯಾಗುತ್ತಾರೆ ಹಾಗೆ ಬಲಿಯಾದಾಗಲೂ ಜನಪದರ  ನಿರೂಪಣಾ ಪ್ರಜ್ಞೆ ನಾಯಕನ ಪರವಾಗಿ ನಿಲ್ಲುವುದರಿಂದಾಗಿ ಆತನನ್ನು ಬಲಿ ತೆಗೆದುಕೊಂಡ ಸಾಮಾಜಿಕ ವ್ಯವಸ್ಥೆಯ ಬಗೆಗೆ ಅಸಹನೆ ಹುಟ್ಟಿಸುತ್ತದೆ. ಈ ಅಸಹನೆ ತೀವ್ರಗೊಳ್ಳುವುದು ನಾಯಕನ ಅಕಾಲ ಮೃತ್ಯುವಿನಲ್ಲಿ.ದಲಿತ ಹುಡುಗನ್ನು ಸಂರಕ್ಷಿಸುವ ಬ್ರಾಹ್ಮಣ ಕನ್ಯೆಯರು, ಕ್ಷತ್ರಿಯರ ಅಹಂಕಾರವನ್ನು ಪ್ರಶ್ನಿಸುವ ಶೂದ್ರ ನಾಯಕರು, ವೈದಿಕ ದೇವರ ಆಜ್ಞೆಗಳನ್ನು ಧಿಕ್ಕರಿಸುವ ಸಾಮಾನ್ಯರು ಜಾನಪದದಲ್ಲಿ  ಹೇರಳವಾಗಿ ಕಂಡು ಬರುತ್ತಾರೆ. ಮೈಲಾರ ಲಿಂಗನ ಕಥೆಯಲ್ಲಿ ಆತ ತಿರುಪತಿ ತಿಮ್ಮಪ್ಪನಿಗೆ ಚಳ್ಳೆ ಹಣ್ಣು ತಿನ್ನಿಸುವ ವಿವರ ತುಂಬ ಸೊಗಸಾಗಿ ಬರುತ್ತದೆ.ಜನಪದ ನಿರೂಪಣೆಗಳು ಅವುಗಳ ನಾಯಕನ ಸಾವಿನ ಅನಂತರವೂ ಸಾಕಷ್ಟು ದೀರ್ಘವಾಗಿ ಬೆಳೆಯುತ್ತವೆ.  ಅಕಾಲ ಮರಣವನ್ನಪ್ಪುವ ನಾಯಕರು , ಸತ್ತ ಆನಂತರ ಅತಿಮಾನುಷ ವಲಯದಲ್ಲಿ ಉಗ್ರರೂಪಿಯಾಗಿ ಪರಿವರ್ತನೆ ಹೊಂದುತ್ತಾರೆ ಮತ್ತು ತನ್ನ ಸಾವಿಗೆ ಕಾರಣವಾದ ಶಕ್ತಿಗಳ ವಿರುದ್ದ ಹೋರಾಟ ನಡೆಸುತ್ತಾರೆ.ಪ್ರತಿವರ್ಷ ನಿಗದಿತ ದಿನದಂದು ನಡೆಯುವ ಆಚರಣೆಗಳಲ್ಲಿ ಈ ನಾಯಕರು ಪೂಜಾರಿಯೊಬ್ಬನ ಮೂಲಕ ಪ್ರತ್ಯಕ್ಷವಾಗಿ ಜನಗಳ ಕಷ್ಟಗಳಿಗೆ ಕಿವಿಗೊಡುತ್ತಾರೆ.

ಭಾರತದ ಶ್ರೇಣೀಕೃತ ಸಮಾಜದ ಕೆಳ ಹಂತದಲ್ಲಿರುವ ಜನ ವರ್ಗಗಳ ಪರಂಪರೆ, ಆಧುನಿಕತೆ ಮತ್ತು ಭವಿಷ್ಯಗಳೆಲ್ಲ ಬಹುತೇಕವಾಗಿ ಉಳಿದಿರುವುದು ಇಂಥ ಮೌಖಿಕ ರೂಪಗಳಲ್ಲಿ.ಆದರೆ ನಮ್ಮ ದೌರ್ಭಾಗ್ಯ ಎಂದರೆ  ಜಾನಪದವನ್ನು ಇನ್ನು  ಕೂಡಾ ನಾವು ಭಾರತೀಯ ಸಂಸ್ಕೃತಿಯ ಮುಖ್ಯಭಾಗವೆಂದು ಪರಿಗಣಿಸದಿರುವುದು. ಕಾರಣ ಸುಮಾರು ಶೇಕಡಾ ೯೫ ರಷ್ಟು ಜನರ ಸಂಸ್ಕೃತಿಯು ಇಂದಿಗೂ ಉಪೇಕ್ಷೆಗೆ ಗುರಿಯಾಗುತ್ತಿದೆ.ಇಂಥ ಅನ್ಯಾದ ವಿರುದ್ಧ ನಾವು ಇದೀಗ ಹೋರಾಡಬೇಕಾಗಿದೆ.

ಜಾನಪದದ ಮೂಲಕ ಹೊಸತಿಳುವಳಿಕೆ: ಸಾವಿನ ಆಚರಣೆಗಳು: 

ಭಾರತದ ಜಾನಪದವನ್ನು ಅಭ್ಯಸಿಸುವ ಮೂಲಕ ನಮಗೆ ಭಾರೆತದ ಬಗೆಗಣ ತಿಳುವಳಿಕೆಗಳನ್ನು ಹೆಚ್ಚು ಮಾಡಿಕೊಳ್ಳಲು ಸಾಧ್ಯ.ಉದಾಹರಣೆಗೆ ಅಂತ್ಯ ಸಂಸ್ಕಾರದ ವಿಧಿಗಳನ್ನೇ ಗಮನಿಸೋಣ- ನಮಗೆಲ್ಲ ಗೊತ್ತಿರುವ ಹಾಗೆ ಹಿಂದೂ ಧರ್ಮದ ಅಂತ್ಯ ಸಂಸ್ಕಾರ ವಿಧಿಗಳ ಬಗೆಗೆ ಗೃಹ್ಯ ಸೂತ್ರವು ಮಾಹಿತಿಯನ್ನು ನೀಡುತ್ತದೆ.ಈ ಪಠ್ಯವನ್ನು ಆಧರಿಸಿ ಅನೇಕ ಸಂಶೋಧನಾ ಗೃಂಥಗಳೂ, ಲೇಖನಗಳೂ ಪ್ರಕಟವಾಗಿವೆ. ಭಾರತೀಯರು ಹೇಗೆ ಸತ್ತವರನ್ನು ಮರುಹುಟ್ಟಿಗೆ ಒಳ ಪಡಿಸುತ್ತಾರೆ ಎಂಬುದನ್ನು ಆ ಲೇಖನಗಳಲ್ಲಿ ಸಾಬೀತು ಪಡಿಸಲಾಗಿದೆ.ಆದರೆ ಈ ವಿಶ್ಲೇಷಣೆಗಳು ಭಾರತದಲ್ಲಿರುವ ಸಾವಿರಾರು ಬ್ರಾಹ್ಮಣೇತರ ಸಮುದಾಯಗಳಿಗೆ ಅನ್ವಯ ಆಗುವುದಿಲ್ಲ. ಮೂಲತಹ ಸಾವು ವ್ಯಕ್ತಿಯೊಬ್ಬನನ್ನು ಕಳಕೊಳ್ಳುವ ಪ್ರಕ್ರಿಯೆ.ಮನೆಯಲ್ಲಿ ಇದ್ದ ಮನುಷ್ಯನೊಬ್ಬ ಸಾವಿನಿಂದ ಇಲ್ಲವಾದಾಗ ಆ ಮನೆ ತನ್ನ ಸಮತೋಲವನ್ನು ಕಳೆದುಕೊಳ್ಳುತ್ತದೆ.ಆಗ ಉಂಟಾದ ಅಸಮತೋಲವನ್ನು ಶಮನಿಸಿಕೊಳ್ಳಲು ನಿರ್ದಿಷ್ಟ ಸಂಸ್ಕೃತಿಯೊಂದು ಕೆಲವು ಬಗೆಯ ಆಚರಣೆಗಳನ್ನು ರೂಪಿಸಿಕೊಳ್ಳುತ್ತದೆ.ಈ ಆಚರಣೆಗಳು ಕೆಳ ಸಮುದಾಯಗಳಲ್ಲಿ ಸಾವಿನ ಆನಂತರ ಸಾಮಾನ್ಯವಾಗಿ ೧೬ ದಿನಗಳ ವರೆಗೆ ಅಸ್ತಿತ್ವದಲ್ಲಿರುತ್ತದೆ ಈ ಅವಧಿಯಲ್ಲಿ ಸತ್ತವನನ್ನು ನಿಜವಾಗಿಯೂ ’ಇಲ್ಲ’ ಎಂದು ಜನರು ಭಾವಿಸುವುದಿಲ್ಲ.ಬದಲು ಮುಂದಿನ ಹದಿನಾರು ದಿವಸಗಳ ಕಾಲ ಮೃತನು ’ಕುಲೆ’ಯ ರೂಪದಲ್ಲಿ ತಮ್ಮೊಡನೆಯೇ ಇರುತ್ತಾನೆಂದು ಭಾವಿಸುತ್ತಾರೆ. ಹಾಗೆ ಭಾವಿಸುವುದರಿಂದಲೇ ಸತ್ತುಹೋದ ವ್ಯಕ್ತಿಗೆ ನೀರು, ಆಹಾರ ಮತ್ತು ಸ್ಥಳವೊಂದನ್ನು ಒದಗಿಸಿ ಕೊಡುತ್ತಾರೆ. ಹದಿನಾರನೇ ದಿನ ಒಟ್ಟು ಹದಿನಾರು ಬಾಳೆ ಎಲೆಗಳನ್ನು ಸಾಲಾಗಿ ಇರಿಸಿ, ಅದರಿಂದ ಒಂದನ್ನು ತೆಗೆದು, ಕೊನೆಗೆ ಹೊಸದಾದ ಇನ್ನೊಂದನ್ನು ಸೇರಿಸಿ, ಮತ್ತೆ ಹದಿನಾರು ಎಲೆಗಳನ್ನು ಉಳಿಸಿಕೊಳ್ಳುತ್ತಾರೆ. ಈ ಹದಿನಾರು ಕುಲೆಗಳೇ ಕೇರಳದಲ್ಲಿ ’ಕಾರಣವರ್’ ಎಂದು ಪ್ರಸಿದ್ಧ.ಗತಿಸಿದ ಹಿರಿಯರನ್ನು ಈ ಪದ ಸಂಕೇತಿಸುತ್ತದೆ. ಹದಿನಾರರ ಈ ಗುಂಪಿನಲ್ಲಿ ಗಂಡಸರಿಗೂ ಹೆಂಗಸರಿಗೂ ಸಮಾನ ಸ್ಥಾನ. ಇವನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ಸಮುದಾಯಗಳ ಜಾನಪದವೇ ಬೇಕು. ಹಿಂದೂ ಧರ್ಮದಲ್ಲಿ ಪುನರ್ ಜನ್ಮದ ಕಲ್ಪನೆ ಇದೆ ಎಂದು ಹೇಳಿಕೊಂಡು ತಿರುಗುವ ಪುರೋಹಿತರು ಯಾರ ಬಗ್ಗೆ ಮಾತಾಡುತ್ತಿದ್ದಾರೆ?

ಇತಿಹಾಸದ ಬರೆವಣಿಗೆಗಳು: 

ಆಚರಣೆಗಳಿಂದ ಇತಿಹಾಸಕ್ಕೆ ಬರೋಣ.ವಿಜಯನಗರ ಸಾಮ್ರಾಜ್ಯದ ಮೊದಲ ಅರಸರಲ್ಲಿ ಕಂಪಿಲನೂ ಒಬ್ಬ. ಇವನ ಮಗ ಕುಮಾರರಾಮ ಚಾರಿತ್ರಿಕವಾಗಿ ಪ್ರಸಿದ್ಧ ಅರಸನೇನೂ ಅಲ್ಲ. ರಾಜಕೀಯವಾಗಿ ಆತನಿಗೆ ಮಹತ್ವದ ಸ್ಥಾನವೇನೂ ಇಲ್ಲ. ಏಕೆಂದರೆ ಆತ ರಾಜ್ಯ ವಿಸ್ತರಣೆ ಮಾಡಿಲ್ಲ. ಶಾಶ್ವತವಾಗಿ ನೆನಪಿಟ್ಟುಕೊಳ್ಳಬಲ್ಲಂಥ ಬೃಹತ್ ದೇವಾಲಯಗಳನ್ನು ಕಟ್ಟಿಲ್ಲ. ಧಾರ್ಮಿಕ ಆಂದೋಲನವನ್ನು ಹುಟ್ಟುಹಾಕಿಲ್ಲ. ಹೀಗಿದ್ದರೂ ಕರ್ನಾಟಕದ ಜನಸಾಮಾನ್ಯರ ನಡುವೆ ಮತ್ತು ಕನ್ನಡ ಜಾನಪದದಲ್ಲಿ ಇಂದಿಗೂ ಜನಪ್ರಿಯನಾಗಿರುವವನೆಂದರೆ ಕುಮಾರರಾಮನೇ ಆಗಿದ್ದಾನೆ.ಕನ್ನಡ ಸಾಹಿತ್ಯದಲ್ಲಿ ಆತನ ಬಗ್ಗೆ ಮೂರು ಮಹಾಕಾವ್ಯಗಳು ಸೃಷ್ಟಿಯಾಗಿವೆ. ೧೫೧೨ರಲ್ಲಿ ನಂಜುಂಡ ಕವಿ ಬರೆದ ’ಕುಮಾರರಾಮ ಚರಿತೆ’, ೧೬೫೦ರಲ್ಲಿ ಪಾಂಚಾಳಗಂಗ ಬರೆದ ’ಚೆನ್ನರಾಮನ ಸಾಂಗತ್ಯ’ ಮತ್ತು ೧೭೫೦ರಲ್ಲಿ ಮಹಲಿಂಗ ಸ್ವಾಮಿ ಬರೆದ ’ಬಾಲರಾಮನ ಸಾಂಗತ್ಯ’ ಕೃತಿಗಳು ನಮ್ಮೆದುರು ಇಂದಿಗೂ ಇವೆ. ನಂಜುಂಡನ ಕಾವ್ಯವು ವಿದ್ವಜ್ಜನ ಪ್ರಿಯವಾಗಿದೆ. ಆತ ಕುಮಾರರಾಮನನ್ನು ಶ್ರೀರಾಮನೊಡನೆ ಮತ್ತು ಅರ್ಜುನನೊಡನೆ ಸಮೀಕರಿಸಿ, ಅವನನ್ನು ಭಾರತೀಯ ಸಂಸ್ಕೃತ ಪರಂಪರೆಗೆ ಜೋಡಿಸಿದರೆ,  ಪಾಂಚಾಳಗಂಗನು ಕುಮಾರರಾಮನನ್ನು ಜಾನಪದ ಲೋಕಕ್ಕೆ ಅನುಸಂಧಾನಗೊಳಿಸಿದ್ದಾನೆ. ಮಹಲಿಂಗಸ್ವಾಮಿಯ ಕಾವ್ಯ ಭಕ್ತಿಯುಗದಲ್ಲಿ ಹುಟ್ಟಿಕೊಂಡ ಹರಿಕಥೆ ಪರಂಪರೆಗೆ ಹತ್ತಿರವಾಗಿದ್ದು ಬಹುಜನರನ್ನು ತಲುಪುವ ಇರಾದೆಯನ್ನು ಪ್ರಕಟಪಡಿಸುತ್ತದೆ. ಇವುಗಳ ಜೊತೆಗೆ ಕನ್ನಡ ಜಾನಪದವನ್ನು ನೋಡಬೇಕು.ಬಿ.ಎಸ್. ಗದ್ದಗೀಮಠರು ಸಂಗ್ರಹಿಸಿದ ’ಕುಮಾರರಾಮನ ದುಂದುಮೆ,  ಕ.ರಾ. ಕೃಷ್ಣಸ್ವಾಮಿಯವರು ಸಂಪಾದಿಸಿದ ’ಧೀರಕುಮಾರರಾಮ’, ಜೀ.ಶಂ ಪರಮಶಿವಯ್ಯನವರು ವಿವರಿಸಿದ ’ಚೆನ್ನಿಗರಾಮ’, ಡಿ. ಲಿಂಗಯ್ಯನವರು ಮರುಸೃಷ್ಟಿಸಿದ ’ಚೆನ್ನಿಗರಾಮ’,  ಡಾ. ಕೆ.ಎಂ. ಮೈತ್ರಿಯವರು ಸಂಪಾದಿಸಿದ ’ಕೃಷ್ಣಗೊಲ್ಲರ ಕಾವ್ಯ’ ಮತ್ತಿತರ ಕೃತಿಗಳು ನೆನಪಿಗೆ ಬರುತ್ತವೆ. ಆತನ ಬಗ್ಗೆ ಯಕ್ಷಗಾನ ಲಭ್ಯವಿದೆ, ಗೊಂಬೆಯಾಟ ಲಭ್ಯವಿದೆ, ದುಂದುಮೆ ಪದ ಪ್ರಚಲಿತದಲ್ಲಿದೆ.ಎಲ್ಲಕ್ಕಿಂತ ಮೇಲಾಗಿ ಅವನ ಹೆಸರಿನ ಜಾತ್ರೆಯೊಂದು ಕುಮ್ಮಟ ದುರ್ಗದಲ್ಲಿ ನಡೆಯುತ್ತಿದ್ದು, ಅದನ್ನು ಕನ್ನಡ ಸಂಸ್ಕೃತಿಯ ಬಗೆಗೆ ಆಸಕ್ತಿಯುಳ್ಳವರೆಲ್ಲ ಹೋಗಿ ನೋಡಬೇಕು.ಕುಮಾರರಾಮ ವಾಸಿಸಿದ್ದ ಎನ್ನಲಾದ ಕುಮ್ಮಟದುರ್ಗದಲ್ಲಿ ಕುಮಾರರಾಮನು ’ರಾಮಸ್ವಾಮಿ’ಯಾಗಿ ಆರಾಧನೆಗೊಳ್ಳುತ್ತಿದ್ದಾನೆ.ಯುದ್ಧ, ಕೋಟೆ ನಿರ್ಮಾಣ, ದೇವಸ್ಥಾನಗಳನ್ನು ಕಟ್ಟುವುದು ಇತ್ಯಾದಿ ಕೆಲಸಗಳಿಗಿಂತ ಭಿನ್ನವಾಗಿ, ಮಳೆನೀರನ್ನು ಸಂಗ್ರಹಿಸಿ ಬಡವರಿಗೆ ಬದುಕುವ ಹಾದಿ ತೋರಿದ ಕುಮಾರ ರಾಮ ಇಂದು ಎಲ್ಲರಿಗೂ ಇಷ್ಟವಾಗಿದ್ದಾನೆ. ಜಾನಪದವನ್ನು ಆಧರಿಸಿ ಈ ಬಗೆಯ ಚರಿತ್ರೆಯನ್ನು ನಾವಿಂದು ಬರೆಯಬೇಕಾಗಿದೆ.ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಡಾ. ವಸು ಮಳಲಿಯವರನ್ನು ಕಳೆದುಕೊಂಡು ನಾವು ಅನಾಥರಾಗಿಬಿಟ್ಟೆವು 

ಹೀಗೆ ಒಟ್ಟಿನಿಂದ ಜಾನೆಪದ ಆಧ್ಯಯನಗಳು ಇಂದು ಜನಪರ ಹೋರಾಟಗಳ ಭಾಗವಾಗಿ ಬೆಳೆಯಬೇಕು.ಅದು ಬಲಪಂಥೀಯ ವೈದಿಕ ಚಿಂತನಾಕ್ರಮಗಳನ್ನು ಪ್ರಶ್ನಿಸಬೇಕು ಮಾತ್ರವಲ್ಲ ಪರ‍್ಯಾಯ ಸಂಸ್ಕೃತಿಯ ಬಗೆಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು.ಭಾರತೀಯ ಸಂಸ್ಕೃತಿಗೆ ಏಕ ರೂಪ ನೀಡುವ ಪ್ರಯತ್ನಗಳನ್ನು ಅದು ಬಹುಪಠ್ಯಗಳ ಮೂಲಕ ನಿರಾಕರಿಸಬೇಕು.ಜನಪರ ಇತಿಹಾಸ ರಚನೆಗೆ ಅದು ಆಕರವಾಗಬೇಕು. 

ಪುರುಷೋತ್ತಮ ಬಿಳಿಮಲೆ
ನಿರ್ದೇಶಕ, 
ಭಾರತೀಯ ಅಧ್ಯಯನಗಳ ಅಮೇರಿಕಾ ಸಂಸ್ಥೆ, 
ನವದೆಹಲಿ 

ಬುಧವಾರ, ಮೇ 6, 2015

ಕಣ್ಮನ ಸೆಳೆಯುವ ದೃಶ್ಯಕಾವ್ಯ “ಕರ್ಣಭಾರ”:

ಶಶಿಕಾಂತ ಯಡಹಳ್ಳಿ 




ಭಾಸಕವಿಯ ‘ಕರ್ಣಭಾರ’ ರೂಪಕವು ಮಹಾಭಾರತದ ದುರಂತ ಪಾತ್ರವಾದ ಕರ್ಣನ ತಲ್ಲಣಗಳನ್ನುಚಿತ್ರಿಸುತ್ತದೆ. ಈ ರೂಪಕದೊಳಗಿನ ರಂಗ ಸಾಧ್ಯತೆಗಳನ್ನು ಕಲಾತ್ಮಕವಾಗಿ ವಿಸ್ತರಿಸಿದೃಶ್ಯಕಾವ್ಯವೊಂದನ್ನು ಡಾ.ಶ್ರೀಪಾದ ಭಟ್ ರವರು ತುಳು ಭಾಷೆಯಲ್ಲಿ ವಿನ್ಯಾಸಗೊಳಿಸಿನಿರ್ದೇಶಿಸಿದ್ದಾರೆ. ಸತ್ಯ ಉಡುಪಿರವರು  ತುಳುವಿನಲ್ಲಿ ರಂಗರೂಪಗೊಳಿಸಿದ್ದಾರೆ.  ಮಣಿಪಾಲದ‘ಸಂಗಮ ಕಲಾವಿದೆರ್’ ತಂಡ ಈ ನಾಟಕವನ್ನು ನಿರ್ಮಿಸಿದೆ. ‘ಸಂಸ’ ಬಯಲು ರಂಗಮಂದಿರದಲ್ಲಿ‘ರಂಗನಿರಂತರ’ ಆಯೋಜಿಸಿದ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ 2015 ಏಪ್ರಿಲ್ 7 ರಂದು‘ಕರ್ಣಭಾರ’ ಪ್ರದರ್ಶನಗೊಂಡು ನೋಡುಗರನ್ನು ವಿಸ್ಮಯಗೊಳಿಸಿತು.

ಭಾಸ ಮಹಾಕವಿಯ ‘ಕರ್ಣಭಾರ’ ಎನ್ನುವ ಕಿರುನಾಟಕಕ್ಕೆ ಅದೇ ಭಾಸನ ‘ಧೂತ ಘಟೋದ್ಘಜ’ನಾಟಕದ ಕೆಲವು ಅಂಶಗಳನ್ನು ಕಸಿ ಮಾಡಿ ವಿಶಿಷ್ಟವಾದ ರೂಪಕವೊಂದನ್ನು ಡಾ.ಶ್ರೀಪಾದರುಕಟ್ಟಿಕೊಟ್ಟಿದ್ದಾರೆ. ಕುರುಕ್ಷೇತ್ರ ಯುದ್ದಕ್ಕೆ ಸಿದ್ಧನಾಗಿ ಹೊರಟಿದ್ದ ಸೇನಾಧಿಪತಿ ಕರ್ಣನು ತನ್ನ ರಥದಸಾರಥಿಯಾಗಿದ್ದ ‘ಶಲ್ಯ’ನಿಗೆ ತನ್ನ ಬದುಕಿನ ದುರಂತಗಾಥೆಯನ್ನು ಹೇಳುತ್ತಲೇ ವ್ಯವಸ್ಥೆಯಕುತಂತ್ರವನ್ನು ಬಯಲುಗೊಳಿಸುವುದು ಈ ನಾಟಕದ ಸಾರವಾಗಿದೆ. ಆದರೆ ಕರ್ಣ ತೆರೆದಿಟ್ಟ ಕಠೋರಸತ್ಯಗಳು ಮಾತ್ರ ತಾಯಿ ಗುರು ದೈವದ ಸ್ವಾರ್ಥವನ್ನು ರಂಗದಂಗಳದಲ್ಲಿ ಬೆತ್ತಲುಗೊಳಿಸುತ್ತವೆ.



ಹೆತ್ತು ತೊರೆದ ತಾಯಿ ಕುಂತಿ ಬಂದು ಕರ್ಣನಿಗೆ ‘ತೊಟ್ಟ ಬಾಣವ ಮತ್ತೆ ತೊಡದಿರು’ ಎಂಬ ವರಪಡೆದು ಆತನ ಯುದ್ಧ ಸಾಮರ್ಥ್ಯವನ್ನು ಮಿತಿಗೊಳಿಸಿದರೆ, ಗುರು ಪರುಷರಾಮ ‘ಅಗತ್ಯವಿದ್ದಾಗಶಸ್ತ್ರಪ್ರಯೋಗ ಮಂತ್ರಗಳೇ ಮರೆತುಹೋಗಲಿ’ ಎಂದು ಶಾಪ ಕೊಟ್ಟು ಕರ್ಣನ ಅವನತಿಗೆಕಾರಣನಾಗುತ್ತಾನೆ. ತನ್ನ ಮಗ ಅರ್ಜುನನನ್ನು ರಕ್ಷಿಸಲು ತಂತ್ರ ಹೂಡಿದ ಇಂದ್ರದೇವನು ಬ್ರಾಹ್ಮಣವೇಷದಲ್ಲಿ ಬಂದು ಕರ್ಣನ ಕವಚ ಕುಂಡಲಗಳನ್ನು ದಾನವಾಗಿ ಪಡೆದು ಕರ್ಣನ ಅವಸಾನಕ್ಕೆಪೂರ್ವಸಿದ್ದತೆ ಮಾಡಿಕೊಳ್ಳುತ್ತಾನೆ. ಇದೇ ಇಂದ್ರನೇ ದುಂಬಿಯಾಗಿ ಬಂದು ಕರ್ಣ ಕ್ಷತ್ರೀಯ ಎಂಬುದನ್ನುಸಾಬೀತು ಪಡಿಸಿ ಪರುಷುರಾಮನ ಶಾಪ ಪ್ರಕರಣಕ್ಕೂ ಪ್ರೇರಕನಾಗುತ್ತಾನೆ. ಹೀಗೆ....ಕಾಯಬೇಕಾದವರೇ ಕೊಲ್ಲುವ ಕಾರ್ಯಕ್ಕೆ ಕಾರಣೀಭೂತರಾಗಿ ಕರ್ಣನ ಬದುಕನ್ನೇಸರ್ವನಾಶಮಾಡಿದ್ದನ್ನು ಈ ನಾಟಕ ಪ್ರಶ್ನಿಸುತ್ತದೆ. ನಾಟಕದ ಕರ್ತು ಭಾಸನ ಆಶಯಕ್ಕೆ ಎಲ್ಲಿಯೂಧಕ್ಕೆಯಾಗದಂತೆ ಇಡೀ ನಾಟಕವನ್ನು ಮರುವ್ಯಾಖ್ಯಾನ ಮಾಡುವ ಪ್ರಯತ್ನ ‘ಕರ್ಣಭಾರ’ದಲ್ಲಿದೆ.


ಇಡೀ ನಾಟಕದಲ್ಲಿ ನಾಯಕನಾದ ಕರ್ಣ ಕೇಂದ್ರದಲ್ಲಿದ್ದು,ಪರೀಧಿಯಲ್ಲಿ ಕುಂತಿ, ಪರುಷುರಾಮ ಹಾಗೂ ಇಂದ್ರರುಖಳನಾಯಕರಾಗಿ  ಚಿತ್ರಿತರಾಗಿದ್ದಾರೆ. ಕರ್ಣನದೃಷ್ಟಿಕೋನದಲ್ಲಿ ಇಡೀ ನಾಟಕ ಪ್ರಸ್ತುತಗೊಂಡಿದ್ದು ವ್ಯವಸ್ಥೆಯಕುತಂತ್ರಕ್ಕೆ ಸಮರ್ಥ ಪ್ರತಿಭಾನ್ವಿತ ಯೋಧನೊಬ್ಬ ಹೇಗೆಬಲಿಪಶುವಾಗುತ್ತಾನೆ ಎನ್ನುವುದನ್ನು ‘ಕರ್ಣಭಾರ’ ನಾಟಕಅತ್ಯಂತ ಸೊಗಸಾಗಿ ಬಿಂಬಿಸುತ್ತದೆ. ಆದರೆ ಸೂಕ್ಷ್ಮವಾಗಿಅವಲೋಕಿಸಿದಾಗ ಈ ಭಾಸನ ಕರ್ಣನು ಬಾಹ್ಯಒತ್ತಡಗಳಿಗಿಂತ ತನ್ನ ಆಂತರಿಕ ಉದಾತ್ತತೆಯಅವಿವೇಕತನಕ್ಕೆ ತನ್ನನ್ನು ತಾನೇ ಬಲಿಪಶುವಾಗಿಸಲು ಸಿದ್ಧತೆಮಾಡಿಕೊಂಡನೇನೋ ಎನ್ನುವ ಭಾವನೆ ನೋಡುಗರಿಗೆಬಾರದೇ ಇರದು. ಯಾಕೆಂದರೆ ಖಳಪಾತ್ರಗಳತಂತ್ರಗಾರಿಕೆಯ ಬಗ್ಗೆ ಅರಿವಿದ್ದೂ, ತನ್ನ ಅವಸಾನಕ್ಕೆನಡೆಯುತ್ತಿರುವ ಕುತಂತ್ರಗಳ ಕುರಿತು ತಿಳುವಳಿಕೆ ಇದ್ದೂ ಸಹಕರ್ಣ ಕೇಳಿದವರಿಗೆ ಕೇಳಿದ್ದನ್ನೆಲ್ಲಾ ಕೊಟ್ಟು ಬರಿದಾಗಿಬಲಿಯಾಗಿದ್ದು ಅತಿರೇಕ ಆದರ್ಶವೆನಿಸುತ್ತದೆ. ಈ ಮಾತಿಗೆ ಉದಾಹರಣೆಯೊಂದು ಇದೇನಾಟಕದಲ್ಲಿದೆ. ಬ್ರಾಹ್ಮಣ ವೇಷದಲ್ಲಿ ಬಂದು ಕವಚ ದಾನ ಪಡೆದಿದ್ದು ಇಂದ್ರನೇ ಎಂದು ಶಲ್ಯಎಚ್ಚರಿಸುತ್ತಾನೆ. ತನ್ನ ಕುಕಾರ್ಯದಿಂದ ನಾಚಿಕೆಪಟ್ಟ ಇಂದ್ರ ಒಂದು ಆಯುಧವನ್ನು ತನ್ನ ಧೂತನಕೈಯಲ್ಲಿ ಕೊಟ್ಟು ಕಳುಹಿಸಿದಾಗಲೂ ಕರ್ಣ ಅದನ್ನೂ ನಿರಾಕರಿಸುತ್ತಾನೆ. ಎಲ್ಲರಿಂದಲೂ ಹವಿಸ್ಸನ್ನುದಾನವಾಗಿ ಪಡೆಯುವ ದೇವೆಂದ್ರ ಬಂದು ನನ್ನ ಮುಂದೆ ಭಿಕ್ಷುಕನಂತೆ ಬೇಡಿ ದಾನ ಪಡೆದಿದ್ದಕ್ಕೆ ಕರ್ಣಹೆಮ್ಮೆ ಪಡುತ್ತಾನೆ. ಸೋತಿದ್ದು ತಾನಲ್ಲ ಇಂದ್ರ ಎಂದು ಗರ್ವ ಪಡುತ್ತಾನೆ. ಆದರೆ ತನ್ನಅವಸಾನಕ್ಕಿಂತಲೂ, ತನ್ನನ್ನೇ ನಂಬಿದ ಕುರುಸೇನೆಯ ಸೋಲಿಗಿಂತಲೂ ಕರ್ಣನಿಗೆ ತನ್ನ ವ್ಯಕ್ತಿಗತಪ್ರತಿಷ್ಠೆ, ಹಾಗೂ ವ್ಯಯಕ್ತಿಕ ಕೀರ್ತಿ ಬಲು ಮುಖ್ಯವಾಗಿತ್ತೇನೋ ಎಂಬ ಸಂದೇಹ ಈ ನಾಟಕವನ್ನುಸೂಕ್ಷ್ಮವಾಗಿ ಅವಲೋಕಿಸಿದಾಗ ಅರ್ಥವಾಗುತ್ತದೆ.

ಈ ನಾಟಕದ ಕೊನೆಗೆ ಭಾಸನದ್ದಲ್ಲದ ಸಂದೇಶವನ್ನು ನಿರ್ದೇಶಕ ಶ್ರೀಪಾದರು ಕೊಟ್ಟಿದ್ದಾರೆ. ‘ತಾಯಿ-ಗುರು-ದೈವದ ಬೆಂಬಲವಿಲ್ಲದಿದ್ದರೂ ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು’ ಎಂಬ ಸಶಕ್ತಸಂದೇಶವನ್ನು ಸೂತ್ರದಾರನ ಮೂಲಕ ಹೇಳಿಸುತ್ತಾರೆ. ಇದು ನಿಜಕ್ಕೂ ಸಮಾಜಕ್ಕೆ ಈ ನಾಟಕಕೊಡುವ ಸಕಾರಾತ್ಮಕವಾದ ಸಂದೇಶವಾಗಿದೆ. ಈ ನಾಟಕ ಪ್ರದರ್ಶನದ ಉದ್ದೇಶವೂ ಇದೇ ಆಗಿದೆ.ಆದರೆ ಕರ್ಣ ಹಾಳಾಗಿದ್ದು ಅತಿಯಾದ ಆತ್ಮವಿಶ್ವಾಸದಿಂದ. ಮಾತಿಗೆ ಕಟ್ಟುಬಿದ್ದು ತನ್ನಲ್ಲಿರುವಪ್ರಭಲವಾದ ಶಸ್ತ್ರಪ್ರಯೋಗ ಸಾಮರ್ಥ್ಯವನ್ನು ಮಿತಿಗೊಳಿಸಿಕೊಂಡು,  ತನ್ನ ಪ್ರಾಣ ರಕ್ಷಣೆಗಿದ್ದಕವಚಗಳನ್ನೇ ಶತ್ರುಪಕ್ಷದವರಿಗೆ ದಾನ ಮಾಡಿ... ಕೇವಲ ಆತ್ಮವಿಶ್ವಾಸದಿಂದಲೆ ಗೆಲ್ಲುವೆನೆಂಬಅತಿಯಾದ ಆತ್ಮಸ್ತೈರ್ಯವೇ ಕರ್ಣನ ಅವಸಾನಕ್ಕೆ ಕಾರಣವಾಯಿತು. ಆತ್ಮವಿಶ್ವಾಸದ ಆಶಯವನ್ನುಹೇಳುವ ಈ ನಾಟಕ ಅತಿಯಾದ ಆತ್ಮವಿಶ್ವಾಸದಿಂದಾಗಿ ಕರ್ಣನಂತಾ ಕರ್ಣನೇಸರ್ವನಾಶವಾಗಿರುವುದನ್ನೂ ತೋರಿಸುತ್ತದೆ.


ಕುಮಾರವ್ಯಾಸ ಭಾರತದಲ್ಲಿ ಕೃಷ್ಣನೇ ಬ್ರಾಹ್ಮಣ ವೇಷದಲ್ಲಿಬಂದು ಕವಚಕುಂಡಲಗಳ ದಾನವನ್ನು ಕರ್ಣನಿಂದ ಪಡೆದರೆ,ಭಾಸಕವಿಯ ‘ಕರ್ಣಭಾರ’ದಲ್ಲಿ ಇಂದ್ರನೇ ಹಾರವನ ವೇಷದಲ್ಲಿಬಂದು ದಾನ ಪಡೆಯುತ್ತಾನೆ. ಶ್ರೀಪಾದರು ಇಂದ್ರನಕಪಟತನವನ್ನು ಹಾಗೂ ಬ್ರಾಹ್ಮಣನ ವಂಚಕತನವನ್ನು ಈನಾಟಕದಲ್ಲಿ ಲೇವಡಿ ಮಾಡಿದ ರೀತಿಯಂತೂ ಅವಿಸ್ಮರಣೀಯ.ಸ್ವತಃ ಬ್ರಾಹ್ಮಣರಾದ ಶ್ರೀಪಾದ ಭಟ್‌ರವರು  ಬ್ರಾಹ್ಮಣ್ಯದಕುತಂತ್ರವನ್ನು ವಿಡಂಬನಾತ್ಮಕವಾಗಿ ತೋರಿಸಿದ್ದು ಅವರಜ್ಯಾತ್ಯಾತೀತ ಮನೋಭಾವಕ್ಕೆ ಸಾಕ್ಷಿಯಾಗಿದೆ. ಭಾಸಕವಿಯುಇಂದ್ರನನ್ನು ಮಾತ್ರ ವಂಚಕ ಎಂದು ಹೇಳಲು ‘ಕರ್ಣಭಾರ’ದಲ್ಲಿಪ್ರಯತ್ನಿಸಿದ್ದರೆ,  ಶ್ರೀಪಾದರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಬ್ರಾಹ್ಮಣ್ಯದ ವಂಚಕತನದ ಹಲವು ಆಯಾಮಗಳನ್ನುಅತಿಶಯವಾಗಿಯೇ ಚಿತ್ರಿಸಿದ್ದಾರೆ. ಇದು ಈ ನಾಟಕದಪ್ರಮುಖವಾದ ಆಕರ್ಷಣೆಯಾಗಿದ್ದು ಗಂಭೀರವಾದ ನಾಟಕನಿರೂಪಣೆಯ ನಡುವೆ ಈ ಬ್ರಾಹ್ಮಣ ಪ್ರಹಸನವು ಪ್ರೇಕ್ಷಕರಿಗೆ ರಿಲೀಪ್ ನೀಡುವ ಜೊತೆಗೆ ಅಪಾರವಾದಮನರಂಜನೆ ಕೊಡುವಲ್ಲಿ ಸಫಲವಾಗಿದೆ.

ಈ ‘ಕರ್ಣಭಾರ’ ನಾಟಕದ ಸೊಗಸಿರುವುದು ಅದರ ಕಲಾತ್ಮಕ ನಿರೂಪನಾ ಕ್ರಮದಲ್ಲಿ. ಅಭಿನಯ,ಹಾಡು, ಸಂಗೀತ ಹಾಗೂ ನೃತ್ಯಗಳ ಹದವಾದ ಸಂಯೋಜನೆಯಲ್ಲಿ. ಚಿಕ್ಕಪುಟ್ಟಬದಲಾಯಿಸಬಹುದಾದ ನ್ಯೂನ್ಯತೆಗಳನ್ನು ಹೊರತು ಪಡಿಸಿದರೆ ‘ನಾಟಕವೆಂದರೆ ಹೀಗಿರಬೇಕು’ ಎಂದುಹೇಳಬಹುದಾದ ಪ್ರಯೋಗವನ್ನು ಡಾ.ಶ್ರೀಪಾದ ಭಟ್‌ರವರು ಕಟ್ಟಿಕೊಟ್ಟಿದ್ದಾರೆ. ಮತ್ತೊಮ್ಮೆ ತಮ್ಮನಿರ್ದೇಶನದ ಪ್ರತಿಭೆಯನ್ನು ‘ಕರ್ಣಭಾರ’ದಲ್ಲಿ ಸಾಬೀತು ಪಡಿಸಿದ್ದಾರೆ. ರಂಗಭೂಮಿ ಕುರಿತುಅಕಾಡೆಮಿಕ್ ಶಿಕ್ಷಣ ಪಡೆದ ನಿರ್ದೇಶಕರನ್ನು ಮೀರಿಸುವ ಹಾಗೆ ಈ ನಾನ್‌ಅಕಾಡೆಮಿಕ್ ಪ್ರತಿಭೆಡಾ.ಶ್ರೀಪಾದ ಭಟ್‌ರವರು ನೋಡುಗರನ್ನು ವಿಸ್ಮಯಗೊಳಿಸುವಂತೆ ನಾಟಕವನ್ನು ನಿರ್ದೇಶಿಸಿ ತಮ್ಮಸಾಮರ್ಥ್ಯವನ್ನು ತೋರಿಸಿದ್ದಾರೆ.


ಈ ನಾಟಕ ತುಳು ಭಾಷೆಯಲ್ಲಿದ್ದರೂ ಆ ಭಾಷೆ ಗೊತ್ತಿಲ್ಲದವರಿಗೂಸಹ ದೃಶ್ಯವೈಭವದ ಮೂಲಕವೇ ಸಂವಹನವಾಗುವಂತಿದೆ.ಇದಕ್ಕೆ ಪ್ರಮುಖ ಕಾರಣವೇನೆಂದರೆ ಅತೀ ಕಡಿಮೆ ಮಾತುಹಾಗೂ ಹೆಚ್ಚು ಕ್ರಿಯೆಗಳು ನಾಟಕದಾದ್ಯಂತ ಸಕ್ರೀಯವಾಗಿವೆ.ನಾಟಕದಲ್ಲಿರುವ ನಿರಂತರ ಕ್ರಿಯೆ ಹಾಗೂ ಚಲನಶೀಲತೆಗಳುನೋಡುಗರನ್ನು ಅತ್ತಿತ್ತ ನೋಡಲೂ ಪುರುಸೊತ್ತು ಕೊಡದಂತೆಸೆಳೆಯುತ್ತವೆ. ಆದರೆ.... ಈ ‘ಕರ್ಣಭಾರ’ವು ಕೆಲವಾರುಸಾಂಕೇತಿಕ ಭಾರಗಳನ್ನೂ ಸಹ ಸಾಮಾನ್ಯ ಪ್ರೇಕ್ಷಕನ ಮೇಲೆಹೇರುತ್ತದೆ. ಯಾರಿಗೆ ಈಗಾಗಲೇ ಮಹಾಭಾರತದ ಕರ್ಣನ ಕಥೆಗೊತ್ತಿದೆಯೋ ಅಂತವರು ಮಾತ್ರ ದೃಶ್ಯಗಳನ್ನು ಕಥೆಗೆ ರಿಲೇಟ್ಮಾಡುತ್ತಾ ಅರ್ಥ್ಯಸಿಕೊಳ್ಳುತ್ತಾ ನಾಟಕ ನೋಡಿಖುಷಿಪಡಬಹುದಾಗಿದೆ. ಆದರೆ ಕರ್ಣಭಾರದ ಹಿನ್ನೆಲೆಗೊತ್ತಿಲ್ಲದವರಿಗೆ ಇಡೀ ನಾಟಕ ಸಂಪೂರ್ಣವಾಗಿಅರ್ಥವಾಗುವುದು ತುಸು ಕಷ್ಟವೇ. ಇದಕ್ಕೆ ಕಾರಣ ನಾಟಕದಉಲ್ಟಾಪಲ್ಟಾ ನಿರೂಪಣಾ ಕ್ರಮವಾಗಿದೆ. ವಿಭಿನ್ನ ಕಾಲಘಟ್ಟದಲ್ಲಿನಡೆದಿರುವ ಮೂರು ಪ್ರಮುಖ ಘಟನೆಗಳನ್ನು (ಕುಂತಿ, ಪರಶುರಾಮ ಮತ್ತು ಇಂದ್ರ) ಒಂದೇ ಸಮಯಕ್ಕೆಪ್ಲಾಶ್‌ಬ್ಯಾಕ್ ತಂತ್ರದಲ್ಲಿ ತೋರಿಸಿದ್ದು ಒಂದಿಷ್ಟು ಗಲಿಬಿಲಿಯನ್ನುಂಟುಮಾಡಿದರೆ ಕ್ಲೈಮ್ಯಾಕ್ಸನಲ್ಲಿ ರಥದಚಕ್ರ ಭೂಮಿಯಲ್ಲಿ ಹೂತಾಗ ಎತ್ತಲು ಪ್ರಯತ್ನಿಸಿದ ಕರ್ಣ ವಿಫಲನಾದ ನಂತರ ಮತ್ತೆ ರಥವೇರಿಯುದ್ಧಕ್ಕೆ ಹೊರಡುತ್ತಾನೆ. ಕಥಾಕತಿತ ಕರ್ಣನ ಸಾವನ್ನು ಹಾಗೂ ಸೋಲನ್ನು ತೋರಿಸದೇ ಮತ್ತೆ ಕರ್ಣಎಲ್ಲಾ ಸಂಕಷ್ಟಗಳನ್ನು ಮೀರಿ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಯುದ್ದಕ್ಕೆ ಹೊರಡುವುದು ಈನಾಟಕದ ಸಕಾರಾತ್ಮಕ ಅಂಶವಾದರೂ ಅದು ಈ ನಾಟಕದಲ್ಲಿ ಸ್ಪಷ್ಟವಾಗಿ ಮೂಡಿಬಂದಿಲ್ಲದಿರುವುದುನೋಡುಗರ ಗೊಂದಲಕ್ಕೆ ಕಾರಣವಾದಂತಿದೆ. ಈ ನಾಟಕದ ನಿರೂಪನಾ ಕ್ರಮದಲ್ಲಿರುವ ಬೌದ್ದಿಕಕಲಾತ್ಮಕ ಅಭಿವ್ಯಕ್ತಿ ನಾಟಕದ ಶಕ್ತಿಯಾದಂತೆಯೇ ಸ್ಪಷ್ಟತೆಯನ್ನು ಸಾಂಕೇತಿಕತೆಯಲ್ಲಿ ಡೈಲ್ಯೂಟ್ಮಾಡಿರುವುದು ಈ ನಾಟಕದ ದೌರ್ಬಲ್ಯವೂ ಆಗಿದೆ. ಆದರೆ....’ಕರ್ಣಭಾರ’ ನಾಟಕದ ದೃಶ್ಯಸಾಮರ್ಥ್ಯ ಎಷ್ಟಿದೆ ಎಂದರೆ ಕಥೆಯ ಅರ್ಥವಂತಿಕೆಯ ಸಂವಹನವನ್ನೂ ಮೀರಿ ನಾಟಕವುದೃಶ್ಯವೈಭವದಲ್ಲಿ ನೋಡುಗರನ್ನು ಹಿಡಿದಿಡುತ್ತದೆ. ಅರ್ಥವಂತಿಕೆ, ಕಥಾನಕತೆ, ತಾತ್ವಿಕತೆ,ತಾರ್ಕಿಕತೆಗಳೆಲ್ಲವನ್ನೂ ಬದಿಗೆ ತಳ್ಳಿ ಈ ನಾಟಕ ಪ್ರೇಕ್ಷಕರನ್ನು ಭ್ರಮಾಲೋಕಕ್ಕೆ ಕರೆದುಕೊಂಡುಹೋಗಿ ತೇಲಿಸುತ್ತದೆ.

‘ಕರ್ಣಭಾರ’ ನಾಟಕದಲ್ಲಿ ಅಭಿನಯಕ್ಕೆ ಪೂರಕವಾಗಿರಂಗತಂತ್ರಗಳನ್ನು ಸಮರ್ಥವಾಗಿ ಬಳಸಿಕೊಂಡುಸಮತೂಕದ ದೃಶ್ಯಗಳನ್ನು ಸೃಷ್ಟಿಸಿದ್ದು ಈ ನಾಟಕದ ಗೆಲುವಿಗೆಪ್ರಮುಖ ಕಾರಣವಾಗಿದೆ. ಯಕ್ಷಗಾನದ ಕಲಾತ್ಮಕಅಂಶಗಳಾದ ಪಾತ್ರ ಚಲನೆ, ದೇಹಭಾಷೆ, ಎನರ್ಜಿ, ಹಿನ್ನೆಲೆಸಂಗೀತ ಹಾಗೂ ನೃತ್ಯ ಸಂಯೋಜನೆಗಳು ಇಡೀ ನಾಟಕಕ್ಕೆಆಕರ್ಷಣೆಯನ್ನು ತಂದುಕೊಟ್ಟಿವೆ. ಯಾವುದೇ ಒಂದು ನಿರ್ದಿಷ್ಟಸಂಗೀತ ಪ್ರಕಾರವನ್ನು ಅಳವಡಿಸದೇ ದೃಶ್ಯದ ಅಗತ್ಯಕ್ಕೆತಕ್ಕಂತೆ ಸಂಗೀತದ ಹಲವಾರು ಪ್ರಕಾರಗಳನ್ನು ಬಳಸಿಕೊಂಡುಸಂಗೀತ ವಿಭಾಗವನ್ನು ಈ ನಾಟಕದಲ್ಲಿ ವಿಶಿಷ್ಟವಾಗಿಸಂಯೋಜಿಸಿದ ಶ್ರೀಪಾದಭಟ್‌ರವರು ಹೊಸರೀತಿಯರಂಗಸಂಗೀತ ಭಾಷೆಯನ್ನು ರಂಗಭೂಮಿಗೆ ಈ ನಾಟಕದಮೂಲಕ ಕೊಡಮಾಡಿದ್ದಾರೆ. ಸಂಗೀತದಲ್ಲಿ ಈ ರೀತಿಯಪ್ರಯೋಗಗಳನ್ನು ಬಿ.ವಿ.ಕಾರಂತರು ಮಾಡಿ ರಂಗಸಂಗೀತಕ್ಕೆಹೊಸ ಭಾಷ್ಯವನ್ನು ಕೊಟ್ಟಿದ್ದರು. ಕಾರಂತರ ರಂಗಸಂಗೀತಸಾಧ್ಯತೆಯನ್ನು ಶ್ರೀಪಾದರು ಇನ್ನೂ ವಿಸ್ತರಿಸಿ ಕರ್ಣಭಾರವನ್ನು ಹಿನ್ನೆಲೆ ಸಂಗೀತಪ್ರಧಾನನಾಟಕವನ್ನಾಗಿಸಿದ್ದಾರೆ. ಈ ನಾಟಕದ ಪ್ರಮುಖ ವಿಶೇಷತೆ ಏನೆಂದರೆ ಚಕ್ರತಾಳವನ್ನುನಾಟಕದಾದ್ಯಂತ ಬಳಸಿರುವುದು ಹಾಗೂ ಕಲಾವಿದರೆ ವೇದಿಕೆಯಲ್ಲಿ ಅದನ್ನು ನುಡಿಸಿರುವುದು. ಈಚಕ್ರತಾಳದ ಪೋರ್ಸಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಂತೂ ಸುಳ್ಳಲ್ಲ. ಕೇವಲ ಚಕ್ರತಾಳವನ್ನು ಒಂದುಸಂಗೀತ ವಾಧ್ಯವನ್ನಾಗಿ ಮಾತ್ರ ಬಳಸದೇ ಅದನ್ನು ವಿವಿಧ ಆಯಮಗಳಲ್ಲಿ ನಾಟಕದ ಪ್ರಾಪರ್ಟಿಯಾಗಿಬಳಿಸಿದ್ದೇ ಅನನ್ಯವಾದ ಪರಿಕಲ್ಪನೆಯಾಗಿದೆ. ಚಕ್ರತಾಳ ಇಲ್ಲಿ  ಯುದ್ದಾಸ್ತ್ರವಾಗಿ, ಹಸುವಿನ ಕೊಂಬಾಗಿಇನ್ನೂ ಏನೇನೋ ಆಗಿ ಸಾಂಕೇತಿಕ ಬಳಕೆಗೊಳಗಾಗಿ ನೋಡುಗರಲ್ಲಿ ವಿಸ್ಮಯವನ್ನು ಸೃಷ್ಟಿಸಿತು. ಸಂಗೀತವಾದ್ಯವೊಂದನ್ನು ಇಷ್ಟೊಂದು ಬಗೆಯಲ್ಲಿ ರಂಗಪರಿಕರವಾಗಿ ಬಳಸಬಹುದಾದ ಸಾಧ್ಯತೆಗಳನ್ನು‘ಕರ್ಣಭಾರ’ ನಾಟಕ ತೋರಿಸಿಕೊಟ್ಟಿತು. “ತಾ ತತ್ ತರಿಕಿತ ತತ್ ತಾ...”  ಎನ್ನುವ ಹಿಮ್ಮೇಳದಆಲಾಪಕ್ಕೆ ತಕ್ಕಂತೆ ನಟರು ಹೆಜ್ಜೆ ಹಾಕುವ ಪರಿಯನ್ನು ನೋಡಿಯೇ ಅನುಭವಿಸಬೇಕು. ಈ  ನಾಟಕದಪ್ರತಿಯೊಂದು ಚಲನೆಯೂ ಸಹ ಒಂದು ರೀತಿಯ ‘ಮ್ಯೂಸಿಕಲ್ ನೋಟ್ಸ್’ ಆಗಿರುವುದು ಹಾಗೂಪ್ರತಿಯೊಂದು ಪ್ರೇಮ್ ಸಹ ಕಲಾತ್ಮಕವಾಗಿ ಚಿತ್ರಿತವಾಗಿರುವುದು ನಿರ್ದೇಶಕರ ಕ್ರಿಯಾಶೀಲತೆ ಹಾಗೂರಂಗಬದ್ದತೆಗೆ ಸಾಕ್ಷಿಯಾಗಿವೆ. ರಂಗಸಂಗೀತದಲ್ಲಿ ಹಿಮ್ಮೇಳ ಅದರಲ್ಲೂ ಚಂಡೆ ವಾದ್ಯದ ಬಳಕೆಕೇಳುಗರಲ್ಲಿ ರೋಮಾಂಚನವನ್ನುಂಟು ಮಾಡಿತು.

ಅಭಿನಯದಲ್ಲಿ ಪ್ರತಿ ಪಾತ್ರವೂ ತಮ್ಮ ದೇಹಭಾಷೆಯನ್ನುಸಮರ್ಥವಾಗಿ ಬಳಸಿಕೊಂಡಿವೆ. ವಾಚಿಕಾಭಿನಯ ತುಂಬಾ ಕಡಿಮೆಇರುವುದರಿಂದ ಆಂಗಿಕಾಭಿನಯದಲ್ಲೇ ನಾಟಕವನ್ನುಸಂವಹನಮಾಡುವ ಅನಿವಾರ್ಯತೆ ಕಲಾವಿದರದ್ದಾಗಿದ್ದು ಅದರಲ್ಲಿಬಹುತೇಕ ಎಲ್ಲಾ ಕಲಾವಿದರೂ ಯಶಸ್ವಿಯಾಗಿದ್ದಾರೆ. ಕರ್ಣನಪಾತ್ರವನ್ನು ಆವಾಹಿಸಿಕೊಂಡು ನಟಿಸಿದ ದಿವಾಕರ್ ಕಟೀಲುರವರನಟನೆ ಹಾಗೂ ಶಲ್ಯನಾಗಿ ಸಂದೀಪ್ ಪೆರ್ಡೂರ್‌ರವರ ಅಭಿನಯಸಾಮರ್ಥ್ಯ ಗಮನಸೆಳೆಯುವಂತಿತ್ತು. ನಾಟಕದಲ್ಲಿ ತಮ್ಮ ವಿಚಿತ್ರಹಾಗೂ ವಿಶಿಷ್ಟ ಅಭಿನಯದಿಂದ ಹಾಸ್ಯದ ಹೊನಲನ್ನು ಹರಿಸುವಲ್ಲಿಬ್ರಾಹ್ಮಣ ಪಾತ್ರಧಾರಿ ಪ್ರಶಾಂತ್ ಉದ್ಯಾವರ ಯಶಸ್ವಿಯಾದರು.ಇಂದ್ರನಾಗಿ ಭೂಷನ್ ನಟನೆ ಪಾತ್ರೋಚಿತವಾಗಿದ್ದು ಇಂದ್ರನದೂತನ ನಟನೆ ಮಾತ್ರ ರೊಬೋಟ್ ಮಾದರಿಯಲ್ಲಿದ್ದು ವೇಶಕ್ಕೂಅಭಿನಯಕ್ಕೂ ಸಂಬಂಧವೇ ಇರದಂತಿತ್ತು. ಚಕ್ರತಾಳದ ಗುಂಪಿನಎಲ್ಲಾ ಕಿರಿಯ ನಟಿಯರ ಚಲನೆಯಲ್ಲಿದ್ದ ಪೋರ್ಸ ಹಾಗೂ ಚಕ್ರತಾಳಬಳಕೆಯಲ್ಲಿದ್ದ ಕೌಶಲ ನಾಟಕದಲ್ಲಿ ಪ್ರಮುಖವಾಗಿ ಎದ್ದುಕಾಣಿಸುವಂತಿತ್ತು. ದುರಂತ ನಾಯಕ ಕರ್ಣನ ಭಾವತೀವ್ರತೆಯ ಕೊರತೆಯನ್ನು ಅಭಿನಯ ಹಾಗೂಇತರೇ ರಂಗತಂತ್ರಗಳು ಮರೆಸಿ ಮೆರೆಯುತ್ತವೆ.  
         
ಈ ನಾಟಕ ಮೊದಲ ನೋಟಕ್ಕೆ ಗಮನ ಸೆಳೆಯುವುದು ದಾಮೋದರ ನಾಯ್ಕರವರರಂಗವಿನ್ಯಾಸದಿಂದಾಗಿ. ಸೆಟ್ ಅದೆಷ್ಟು ಸಾಂಕೇತಿಕವಾಗಿ ಹಾಗೂ ಕಲಾತ್ಮಕವಾಗಿ ಮೂಡಿಬಂದಿದೆಎಂದರೆ ಅದು ಇಡೀ ನಾಟಕದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಹತ್ತುವ ಮೆಟ್ಟಿಲ ಅಕ್ಕಪಕ್ಕದಲ್ಲಿರಥದ ಎರಡು ಗಾಲಿಗಳು ಹಾಗೂ ಎಡಬಲಕ್ಕೆ ಪ್ಲಾಟ್ ಪಾರಂಗಳು ಇಷ್ಟೇ ಈ ನಾಟಕದಲ್ಲಿ ಬಳಸಲಾದಸ್ಥಿರ ಸೆಟ್‌ಗಳಾಗಿದ್ದರೂ ಪ್ರತಿಯೊಂದು ದೃಶ್ಯಕ್ಕೂ ಹಲವು ಆಯಾಮಗಳಲ್ಲಿ ಬಳಕೆಯಾಗಿದ್ದು ನಾಟಕದಸೌಂದರ್ಯವನ್ನು ಹೆಚ್ಚಿಸಿದೆ. ಪ್ರತಿ ಪಾತ್ರದ ವಸ್ತ್ರಾಲಂಕಾರವನ್ನು ನೋಡುವುದೇ ಒಂದು ಚೆಂದ. ಈಸೆಟ್ ಹಾಗೂ ಕಾಸ್ಟ್ರೂಮ್‌ಗಳ ಮೇಲೆ ಬಣ್ಣಬಣ್ಣದ ಬೆಳಕು (ಬೆಳಕಿನ ವಿನ್ಯಾಸ ರಾಜು ಮಣಿಪಾಲ) ಬಿದ್ದುಪ್ರತಿ ದೃಶ್ಯಗಳೂ ಶ್ರಿಮಂತವಾಗಿ ಮೂಡಿಬಂದಿವೆ. ಆದರೆ ಯಕ್ಷಗಾನದ ರಾಕ್ಷಸ ಪಾತ್ರದಂತೆ ಕಾಣುವಇಂದ್ರನ ಧೂತನ ಗೆಟಪ್ ಮಾತ್ರ ಇಡೀ ನಾಟಕದಲ್ಲಿ ಆಭಾಸಕಾರಿಯಾಗಿದೆ. ಪಂಜುಗಳ ಬಳಕೆ ಅದರಮಂದ ಬೆಳಕು ದೃಶ್ಯಕ್ಕೆ ಅಂದವನ್ನು ತಂದಿದೆ. ಆದರೆ.... ಹಿಂದೆ ಬಿಳಿ ಪರದೆ (ಸೈಕ್) ಇತ್ತಾದರೂಅದನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿತ್ತು. ದೃಶ್ಯದ ಮೂಡಿಗೆ ತಕ್ಕಂತೆ ಸೈಕ್ ತನ್ನಬಣ್ಣ ಬದಲಿಸಿದ್ದರೆ ಈ ನಾಟಕದ ನೋಟ ಇನ್ನೂ ಹೆಚ್ಚು ಅರ್ಥಪೂರ್ಣವಾಗಬಹುದಾಗಿತ್ತು. ಕೊನೆಗೂಸೈಕ್ ಬಳಕೆಯ ಕೊರತೆ ಈ ನಾಟಕದ ಒಂದು ನ್ಯೂನ್ಯತೆಯಾಗಿಯೇ ಉಳಿಯಿತು.
   
ಈ ಪಸ್ತುತ ಪ್ರಯೋಗದಲ್ಲಿ ಮಾಸ್ಕ್ ನ್ಯೂನ್ಯತೆಯನ್ನು ಸರಿಪಡಿಸಲೇಬೇಕಾಗಿತ್ತು. ಅಭಿಮನ್ಯುಯುದ್ದಪ್ರಕರಣದಲ್ಲಿ ನೋಡುಗರಿಗೆ ಅಭಿಮನ್ಯು ಕಾಣಿಸದೇ ಆತನ ಸುತ್ತಲೂ ಸೈನಿಕರೇವಿಜ್ರಂಭಿಸುವುದು ಆಭಾಸವೆನಿಸಿತು. ಚಕ್ರತಾಳದ ಗುಂಪು ಸಹ ವೇದಿಕೆಯ ಮುಂಬಾಗದಲ್ಲಿ ಸಾಲಾಗಿನಿಂತಿದ್ದರಿಂದ ಪ್ರೇಕ್ಷಾಗ್ರಹದ ಎಡ ಹಾಗೂ ಬಲಭಾಗದ ಪ್ರೇಕ್ಷಕರಿಗೆ ವೇದಿಕೆಯ ನಡುವೆ ನಡೆಯುವಕರ್ಣ ಹಾಗೂ ಶಲ್ಯರ ಮಹತ್ವದ ಅಭಿನಯ ಕಾಣದೇ ಹೋಯಿತು. ಗುಂಪು ಬಳಕೆಯಲ್ಲಿ ನಿರ್ದೇಶಕರುಇನ್ನಷ್ಟು ಮುತುವರ್ಜಿ ವಹಿಸಿದರೆ ಈ ನ್ಯೂನ್ಯತೆಯನ್ನು ತಡೆಯಬಹುದಾಗಿದೆ ಹಾಗೂ ಪ್ರತಿ ದೃಶ್ಯಹಾಗೂ ಪಾತ್ರದ ಅಭಿನಯವನ್ನು ಪ್ರೇಕ್ಷಕರಿಗೆ ಅಡೆತಡೆ ಇಲ್ಲದಂತೆ ಮುಟ್ಟಿಸಬಹುದಾಗಿದೆ.


 ಇದನ್ನು ಹೊರತು ಪಡಿಸಿ ನೋಡಿದರೆ, ಪ್ರತಿಯೊಂದು ದೃಶ್ಯ ಸಂಯೋಜನೆಯೂ ಅನನ್ಯವಾಗಿವೆ.ಅಭಿಮನ್ಯುವಿನ ಚಕ್ರವ್ಯೂಹ ಪ್ರವೇಶ ಹಾಗೂ ಸಾಂಕೇತಿಕ ಹತ್ಯೆ, ಇಂದ್ರ ದುಂಬಿಯಾಗುವ ಹಾಗೂಬ್ರಾಹ್ಮಣನಾಗಿ ರೂಪಾಂತರ ಹೊಂದುವ ದೃಶ್ಯ ಸಂಯೋಜನೆ, ಕರ್ಣ ಹಾಗೂ ಶಲ್ಯರ ರಥದಸಂಚಲನತೆ, ಯುದ್ಧದ ದೃಶ್ಯಸೃಷ್ಟಿಗಳು ನಾಟಕವನ್ನು ಆಕರ್ಷಣೀಯವಾಗಿಸಿವೆ. ಅದರಲ್ಲೂ ಬ್ರಾಹ್ಮಣದಾನ ಕೇಳಲು ಬಂದಾಗ ಹಸುಗಳು, ಅಶ್ವಗಳು, ಆನೆಗಳನ್ನು ಗುಂಪು ಬಳಕೆ ಹಾಗೂ ಚಕ್ರತಾಳದಸಹಾಯದಿಂದ ಸಂಯೋಜಿಸಿದ ರೀತಿಯಂತೂ ಮರೆಯಲು ಸಾಧ್ಯವೇ ಇಲ್ಲದಂತಹ ದೃಶ್ಯವಾಗಿವೆ.ಬರೀ ಮಾತಲ್ಲಿ ಹೇಳಬಹುದಾದದ್ದನ್ನೆಲ್ಲಾ ದೃಶ್ಯ ಸಂಯೋಜನೆಯ ಮೂಲಕವೇ ತೋರಿಸುವನಿರ್ದೇಶಕರ ಸೃಜನಶೀಲತೆ ನಿಜಕ್ಕೂ ಅಭಿನಂದನಾರ್ಹವಾಗಿದೆ. ಇನ್ನೊಂದು ವಿಶೇಷತೆ ಏನೆಂದರೆ ಈ ನಾಟಕದ ನಿರ್ದೇಶನ ಮಾಡಿದ ಡಾ.ಶ್ರಿಪಾದ ಭಟ್‌ರಿಗೆ ತುಳು ಭಾಷೆಯ ಗಂಧಗಾಳಿ ಗೊತ್ತಿಲ್ಲ. ಸದಾದುಭಾಷಿಯನ್ನಿಟ್ಟುಕೊಂಡೇ ಇಡೀ ನಾಟಕವನ್ನು ಅದ್ಭುತವಾಗಿ ಕಟ್ಟಿಕೊಟ್ಟ ರೀತಿ ವಿಶೇಷವೆನಿಸುತ್ತದೆ.ಕ್ರಿಯಾಶೀಲ ನಿರ್ದೇಶಕನಿಗೆ ಭಾಷೆಗಿಂತಲೂ ರಂಗಭಾಷೆ, ಅಂಗಭಾಷೆ, ಸಂಗೀತ ಭಾಷೆ ಪ್ರಮುಖವಾಗುತ್ತದೆ ಎನ್ನುವುದಕ್ಕೆ ತುಳು ಬರದ ಶ್ರೀಪಾದರು ತುಳುವಿನಲ್ಲಿ ನಾಟಕವನ್ನು ನಿರ್ದೇಶಿಸಿದ್ದೇಪುರಾವೆಯಾಗಿದೆ.
  
ಈ ‘ಕರ್ಣಭಾರ’ ಯಾಕೆ ಭಾಷಾತೀತವಾಗಿ ಜನರನ್ನು ಆಕರ್ಷಿಸಿತು? ಅದಕ್ಕೆ ಪ್ರಮುಖ ಕಾರಣನಾಟಕದೊಳಗಿನ ಈಸ್ತಟಿಕ್ ಸೆನ್ಸ್ ಮತ್ತು ದೃಶ್ಯ ಸೃಷ್ಟಿಯಲ್ಲಿನ ಸಿನಿಮಿಯಾಟಿಕ್ಸ್. ನಾಟಕದ ಎಲ್ಲಾವಿಭಾಗದಲ್ಲೂ ಸಹ ರಂಗಶಿಸ್ತು ಹಾಗೂ ಸೌಂದರ್ಯ ಪ್ರಜ್ಞೆ ಎದ್ದು ಕಾಣಿಸುತ್ತದೆ. ಈ ರೀತಿಯರಂಗತಂತ್ರ ಬಳಕೆಯಲ್ಲಿ ಪ್ರಸ್ತುತ ರಂಗಭೂಮಿಯಲ್ಲಿ ಶ್ರೀಪಾದ ಭಟ್ಟರಿಗೆ ಶ್ರೀಪಾದ ಭಟ್ಟರೇಹೋಲಿಕೆಯಾಗಿದ್ದಾರೆ. ಬಿ.ವಿ.ಕಾರಂತರ ನಂತರ ಸಿನಿಮಿಯಾಟಿಕ್ಸ ತಂತ್ರಗಳನ್ನು ವ್ಯಾಪಕವಾಗಿಬಳಸುವ ಹಾಗೂ ಪ್ರತಿಯೊಂದು ರಂಗವಿಭಾಗದಲ್ಲೂ ಸೌಂದರ್ಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವನಿರ್ದೇಶಕ ಡಾ.ಶ್ರೀಪಾದ ಭಟ್ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಬಹುದಿನಗಳ ಕಾಲ ಈ ‘ಕರ್ಣಭಾರ’ರೂಪಕವು ನೋಡುಗರನ್ನು ಕಾಡದೇ ಬಿಡುವುದಿಲ್ಲ.