ಬುಧವಾರ, ಫೆಬ್ರವರಿ 21, 2018

ಮೋದಿಯವರ ಪ್ಯಾಲೆಸ್ತೀನ್ ಭೇಟಿ: ಬಾಯುಪಚಾರದ ತಂತ್ರಗಳು

                      ಅನುಶಿವಸುಂದರ್ 
Image result for modi palestine
ಮೋದಿಯವರ ಪ್ಯಾಲೆಸ್ತೀನ್ ಭೇಟಿಯು ಭಾರತ ಮತ್ತು ಇಸ್ರೇಲ್ ನಡುವೆ ಗಾಢವಾಗುತ್ತಿರುವ ಸಂಬಂಧಗಳು ಸೃಷ್ಟಿಸಿರುವ ಆತಂಕವನ್ನೇನೂ ಕಡಿಮೆ ಮಾಡುವುದಿಲ್ಲ.

ಪ್ರಕ್ರಿಯೆಗೆ ರಾಜತಾಂತ್ರಿಕರ ಪರಿಭಾಷೆಯಲ್ಲಿ ಡಿ-ಹೈಫನೇಷನ್ ಎಂದು ಕರೆಯುತ್ತಾರೆ. ಸರಳವಾದ ಮಾತುಗಳಲ್ಲಿ ಇದಕ್ಕೆ ಎಲ್ಲ ಬಗೆಯ ತತ್ವ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಹಿಂಸಾತ್ಮಕ ಮತ್ತು ಕೊನೆಯಿಲ್ಲದ ವಸಾಹತುವಾದದ ಸಂಸ್ಕೃತಿಯನ್ನು ಅಪ್ಪಿಕೊಳ್ಳುವುದು ಎಂದರ್ಥ. ಆಕ್ರಮಿತ ಪ್ಯಾಲೇಸ್ತೀನ್ ಪ್ರದೇಶಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ನೀಡಿದ ಭೇಟಿಯು ಪ್ರದೇಶದ ವಿವಿಧ ರಾಷ್ಟ್ರಗಳಿಗೆ ನೀಡಿದ ವಿಸ್ತೃತ ಭೇಟಿಯ ಒಂದು ಭಾಗವಾಗಿತ್ತಷ್ಟೆ. ಕಳೆದ ಜುಲೈನಲ್ಲಿ ಪ್ರಧಾನಿಯವರು ಇಸ್ರೇಲಿಗೆ ನೀಡಿದ ಭೇಟಿದ್ದರು. ಅದಕ್ಕೆ ಪೂರಕವಾಗಿ ಇದೇ ಜನವರಿಯಲ್ಲಿ ಇಸ್ರೇಲಿನ ಪ್ರಧಾನಿ ಸಹ ಭಾರತಕ್ಕೆ ನೀಡಿದ್ದರು. ಭೇಟಿಗಳಿಂದಾಗಿ ತಪ್ಪಿಹೋಗಿದ್ದ  ರಾಜತಾಂತ್ರಿಕ ಸಮತೋಲನವನ್ನು ಮತ್ತೆ ಸಾಧಿಸುವ ಪ್ರಯತ್ನದ ಭಾಗವಾಗಿಯೂ ಭೇಟಿಯು ನಡೆದಿರಬಹುದು. ಆದರೆ ಹಿಂದೆ ಇಸ್ರೇಲಿನ  ಜೊತೆ ಭಾರತದ ಬಾಂಧವ್ಯವು ಆಪ್ತಗೊಳ್ಳುತ್ತಿದ್ದ ಪ್ರಾರಂಭದ ದಿನಗಳಲ್ಲಿ ಭಾರತವು ಪ್ಯಾಲೆಸ್ತೀನ್ ಪ್ರಶ್ನೆಗೆ ಬಾಯಿ ಮಾತಿನಲ್ಲಿ ತೋರುತ್ತಿದ್ದ ಸಹಾನುಭೂತಿಯೂ ಸಹ ಭೇಟಿಯಲ್ಲಿ ಇರಲಿಲ್ಲ.

ಇಂಥ ಅರ್ಥವಿಲ್ಲದ ಭೇಟಿಯ ರಿವಾಜುಗಳು ಯಾರ ಗಮನಕ್ಕೂ ಬಾರದಂತೆ ಸರಿದುಹೋಗಬಹುದಿತ್ತು. ಆದರೆ ವಿದೇಶಾಂಗ ಇಲಾಖೆಗೆ ಅದರದೇ ಆದ ಸಾಂಸ್ಥಿಕ ಒತ್ತಡಗಳಿರುತ್ತವೆ. ಭಾರತವು ಪ್ಯಲೇಸ್ತೀನ್ ಬಗ್ಗೆ ತನ್ನ ಹಿಂದಿನ ನೀತಿ ನಿಲುವುಗಳನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದೆ ಎಂಬ ಅಭಿಪ್ರಾಯ ಏರ್ಪಟ್ಟು ಜಗತ್ತಿನ ದೃಷ್ಟಿಯಲ್ಲಿ ಭಾರತದ ಪ್ರತಿಷ್ಟೆಗೆ ಆಗಿಬಿಡಬಹುದಾದ ಹಾನಿಯನ್ನು ತಡೆಯಲೆಂದೇ ಮೋದಿಯವರ ಪ್ಯಾಲೆಸ್ತೀನ್ ಭೇಟಿಗೆ ಇಷ್ಟು ಪ್ರಚಾರ ನೀಡಿರಬಹುದು. ಅಥವಾ ಅತ್ಯಂತ ಸ್ಪೊಟಕ ರಾಜಕೀಯ ವಾತಾವರಣವನ್ನು ಹೊಂದಿರುವ ಪ್ರದೇಶದಲ್ಲಿ ಮುಂದೆ ನಡೆಯಬಹುದಾದ ಯಾವುದೇ ಬಗೆಯ ವಿಚ್ಚಿದ್ರಕಾರಿ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಮಾಡಿರಬಹುದಾದ ನಡೆಯೂ ಆಗಿರಬಹುದು.

ಆದರೆ ಮೋದಿಯವರ ಪ್ಯಾಲೆಸ್ತೀನ್ ಭೇಟಿಯು ಭಾರತ ಮತ್ತು ಇಸ್ರೇಲ್ ನಡುವೆ ಏರ್ಪಡುತ್ತಿರುವ ಅಪೂರ್ವ ಮೈತ್ರಿಯ ಆಪ್ತತೆಯನ್ನೇನೂ ಗೌಣಗೊಳಿಸುವುದಿಲ್ಲ ಎಂಬುದನ್ನಂತೂ ಖಚಿತವಾಗಿ ಹೇಳಬಹುದು. ಭಾರತದ ವಿದೇಶಾಂಗ ಸೇವೆಯ ಮಾಜಿ ಕಾರ್ಯದರ್ಶಿಯಾದ ಕನ್ವಲ್ ಸಿಬಾಲ್ ಅವರು ವಿಷಯದ ಬಗ್ಗೆ ನೀಡಿರುವ ಅತ್ಯಂತ ತ್ರಾಸದಾಯಕ ಹೇಳಿಕೆಯಲ್ಲೂ ವಿಷಯ ಸ್ಪಷ್ಟವಾಗುತ್ತದೆ. ಮಹಾಶಯರು ಈಗ ಮೋದಿ ಆಡಳಿತಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ಸರಬರಾಜು ಮಾಡುತ್ತಿರುವ ಬಲಪಂಥೀಯ ವಿದ್ವಾಂಸರ ಸಂಸ್ಥೆಯ ಸದಸ್ಯರೂ ಆಗಿದ್ದಾರೆ. ಅವರ ಪ್ರಕಾರ  ಇಸ್ರೇಲ್ ಆಡಳಿತವು ಪ್ಯಾಲೆಸ್ತೀನೀಯರ ಬೇಡಿಕೆಯ ಬಗ್ಗೆ ಗಡುಸಾದ ಧೋರಣೆಯನ್ನು ಹೊಂದಿದೆ. ಆದರೆ ಇಸ್ರೇಲ್ ಮತ್ತು ಪ್ಯಲೇಸ್ತೀನಿಯರ ನಡುವಿನ ವಿವಾದವು ವಿಶ್ವಸಂಸ್ಥೆಯ ಗೊತ್ತುವಳಿಗಳು ಹಾಗೂ ಇನ್ನಿತರ ಶಾಂತಿ ಪ್ರಕ್ರಿಯೆಗಳು ಪ್ರಸ್ತಾಪಿಸ್ರುವ ಮಾದರಿಯಲ್ಲಿ ಒಂದು ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಭಾರತವು ಪ್ರತಿಪಾದಿಸುತ್ತದೆ. ಹೀಗಾಗಿ ಎರಡೂ ವಾಸ್ತವಗಳ ನಡುವೆ ಸಮತೋಲವನ್ನು ಕಾದುಕೊಳ್ಳಬೇಕಾದ ಸವಾಲು ಭಾರತಕ್ಕಿದೆ. ಆದರಿಂದ ಅವರು  ಹೀಗಾಗಿ ಎರಡೂ ಸಂಬಂಧಗಳನ್ನೂ ಡಿ-ಹೈಫನೇಟ್ ಮಾಡಿ ನಿಭಾಯಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಕೂಡಾ ಘೋಷಿಸಿಕೊಂಡಿದ್ದಾರೆ.

 ಬೇರೆ ಮಾತಿನಲ್ಲಿ ಹೇಳುವುದಾದರೆ ಈಗಾಗಲೇ ಇಸ್ರೇಲ್ ತಾನು ಯಾವುದೇ ನ್ಯಾಯಬದ್ಧ ಶಾಂತಿಯುತ ಪರಿಹಾರದ ಪರವಾಗಿಲ್ಲವೆಂದು ಸಂಪೂರ್ಣವಾಗಿ ಸ್ಪಷ್ಟಪಡಿಸಿರುವುದರಿಂದ ಭಾರತವು ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ. ಇಸ್ರೇಲ್ ಜೊತೆ ಭಾರತದ ಸಂಬಂಧಗಳು ಗಟ್ಟಿಯಾಗುತ್ತಲೇ ಹೋಗುತ್ತಿವೆ. ಮತ್ತು ಪ್ರಕ್ರಿಯೆಯಲ್ಲಿ ಭಾರತವು ಯೆಹೂದಿವಾದಿ ಪ್ರಭುತ್ವದ ಸೈನಿಕ-ಕೈಗಾರಿಕಾ ಸಂಕೀರ್ಣಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಒದಗಿಸುತ್ತಾ ಪ್ರದೇಶದಲ್ಲಿ ಇಸ್ರೇಲ್ ತನ್ನ ಕ್ರೂರ ಆಕ್ರಮಣವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಪರೋಕ್ಷವಾಗಿ ಸಹಕರಿಸುತ್ತಿದೆ.

ಹೈಫನೇಷನ್ ಎಂಬುದು ಎಂದಿಗೂ ಒಂದು ಉತ್ತಮ ತಂತ್ರೋಪಾಯವಾಗಿರಲಿಲ್ಲ (ರಾಜತಾಂತ್ರಿಕ ಭಾಷೆಯಲ್ಲಿ ಹೈಫನೇಷನ್ ಎಂದರೆ ಪ್ರಾಯೊಗಿಕ ಪ್ರಯೋಜನಗಳಿಗಿಂತ ಹೆಚ್ಚಾಗಿ ಒಂದು ಪೂರ್ವನಿರ್ಧಾರಿತ ಮತ್ತು ಇತಿಹಾಸ ಪ್ರೇರಿತ ಕಾರಣಗಳು ಮತ್ತೊಂದು ದೇಶದೊಡಗಿನ ಸಂಬಂಧವನ್ನು ನಿರ್ಧರಿಸುವ ನೀತಿ- ಅನು ). ಆದರೆ ಅದನ್ನು ಅನುಸರಿಸುವ ಮೂಲಕ ಶಾಂತಿ ಮಾತುಕತೆಗಳಲ್ಲಿ ಸದುದ್ದೇಶದಿಂದ ಭಾಗವಹಿಸುವಂತೆ ಇಸ್ರೇಲಿನ ಮೇಲೆ ಭಾರತವು ತನ್ನ ಒತ್ತಡವನ್ನು ಹಾಕುತ್ತದೆ ಎಂಬ ನಾಟಕಕ್ಕಾದರೂ ಅದು ಅನೂಕೂಲವಾಗುತ್ತಿತ್ತು. ಭಾರತವು ಇಸ್ರೇಲಿನೊಡನೆ ೧೯೯೨ರಲ್ಲಿ ಪೂರ್ಣಪ್ರಮಾಣದ ರಾಜತಾಂತ್ರಿಕ ಸಂಬಂಧಗಳನ್ನು ಏರ್ಪಡಿಸಿಕೊಳ್ಳುವ ಮುನ್ನ ಶಾಂತಿ ಮಾತುಕತೆಯಲ್ಲಿ ಉತ್ತಮ ಫಲಿತಾಂಶವು ಬರಬೇಕೆಂಬ ಉದ್ದೇಶದಿಂದ ಪ್ಯಾಲೆಸ್ತೀನ್ ನಾಯಕರಾದ ಯಾಸೀರ್ ಅರಾಫತ್ತರಿಗೆ ಆಶ್ರಯ ಕೊಟ್ಟಿತ್ತು. ಹಾಗೆಂದು ೧೯೯೨ರಲ್ಲಿ ಇಸ್ರೇಲಿನೊಡನೆ ಭಾರತದ ಸಂಬಂಧಗಳು ಪುನರ್ಸ್ಥಾಪನೆಗೊಳ್ಳುವ ವೇಳೆಗೆ ಶಾಂತಿ ಮಾತುಕತೆಗಳು ಯಾವುದೇ ಸಕಾರಾತ್ಮಕ ಸೂಚನೆಗಳನ್ನೇನೂ ಕೊಟ್ಟಿರಲಿಲ್ಲ. ಹೀಗಾಗಿ ರಾಜತಾಂತ್ರಿಕ ನಡೆಯು ಯಾವುದೇ ವಾಸ್ತವದ ಬುನಾದಿಯಿಲ್ಲದೆ ನಿರೀಕ್ಷೆಗಳ ಅತಿರೇಕದಲ್ಲೆ ತೆಗೆದುಕೊಂಡ ಕ್ರಮವೇ ಆಗಿತ್ತು.

ನಡೆಯು ಮತ್ತೊಂದು  ರಾಜಕೀಯ ಉದ್ದೇಶಕ್ಕೂ ಸಹಕರಿಸಿತ್ತು. ಭಾರತದ ಬಹುದೀರ್ಘಕಾಲದ ವ್ಯೂಹಾತ್ಮಕ ಮಿತ್ರ ಮತ್ತು ಇಂಧನ ಮತ್ತು ಶಸ್ತ್ರಾಸ್ತ್ರಗಳ ಪ್ರಧಾನ ಸರಬರಾಜುದಾರನಾಗಿದ್ದ ಸೋವಿಯತ್ ಒಕ್ಕೂಟ ವೇಳೆಗೆ ಪತನವಾಗಿತ್ತು. ಹೀಗಾಗಿ ಪಶ್ಚಿಮದ ದೇಶಗಳಿಗೆ ತಾನು ಶತ್ರುವಲ್ಲನೆಂಬ ಸಂದೇವನ್ನು ಕಳಿಸುವ ಒಟ್ಟಾರೆ ತಂತ್ರೋಪಾಯಗಳ ಭಾಗವಾಗಿಯೂ ಇಸ್ರೇಲ್ ಬಗೆಗಿನ ನಿಲುವು ಒಂದು ಹೆಜ್ಜೆಯಾಗಿ ಬಳಕೆಯಾಗಿತ್ತು. ಆದರೆ ತನ್ನ ಇಸ್ರೇಲ್ ಪ್ರೇಮವನ್ನು ಪ್ರಥಮವಾಗಿ ಬಹಿರಂಗಗೊಳಿಸಿದ ನಂತರದಲ್ಲಿ ಭಾರತ ಇಸ್ರೇಲ್ ಜೊತೆ ಕೂಡಲೇ ಅತ್ಯುತ್ಸಾಹದ ರಾಜತಾಂತ್ರಿಕ ಸಂಬಂಧವನ್ನೇನೂ ಮುಂದುವರೆಸಲಿಲ್ಲ. ಇಡೀ ೯೦ರ ದಶಕದಲ್ಲಿ ಎರಡೂ ದೇಶಗಳ ನಡುವೆ ಸಂಭವಿಸಿದ ಅತ್ಯುನ್ನತ ರಾಜತಾಂತ್ರಿಕ ನಡೆಯೆಂದರೆ ಇಸ್ರೇಲಿನ ವಿದೇಶಾಂಗ ಮಂತ್ರಿ ಶಿಮಾನ್ ಪರೇಜ್ ನೇತೃತ್ವದ ರಾಜತಾಂತ್ರಿಕ ಭೇಟಿಯೊಂದೇ. ೧೯೯೩ರಲ್ಲಿ ಆಗಿನ್ನೂ ಶಾಂತಿ ಮಾತುಕತೆ ಪ್ರಾರಂಭವಾಗಿತ್ತು ಮತ್ತು ಶಿಮೋನ್ ಪರೇಜ್ ಅವರಿಗೆ ಶಾಂತಿಮಾತುಕತೆಯ ಕಿರೀಟವು ಇನ್ನೂ ತಗಲಿಕೊಂಡಿತ್ತು.

ಆದರೆ ೨೦೦೩ರಲ್ಲಿ ಪ್ರಧಾನ ಮಂತ್ರಿ ಮಟ್ಟದ ಭೇಟಿಯ ಬಗ್ಗೆ ಸಮಾಲೋಚಿಸುವ ಹೊತ್ತಿಗಾಗಲೇ ಇಸ್ರೇಲ್ ತನ್ನ ಎಲ್ಲ ಶಾಂತಿ ನಾಟಕಗಳಿಗೆ ತೆರೆ ಎಳೆದಿತ್ತು. ಆಗಿನ ಇಸ್ರೇಲ್ ಪ್ರಧಾನಿ ಏರಿಯಲ್ ಶೆರೀನ್ಆಪರೇಷನ್ ಡಿಫೆನ್ಸೀವ್ ಶೀಲ್ಡ್ ಎಂಬ ಹೆಸರಿನಲ್ಲಿ ಪಶ್ಚಿಮ ದಂಡೆ ಪ್ರದೇಶದಲ್ಲಿ ನಡೆಸಿದ ಬರ್ಬರ ಆಕ್ರಮಣಗಳು, ಕ್ರೂರ ದಮನಗಳು ಹಾಗೂ ಜೆನಿನ್ ನಲ್ಲಿ ನಡೆಸಿದ ಹತ್ಯಾಕಾಂಡಗಳು ಸರ್ವವಿದಿತವಾಗಿತ್ತು.

ಆಗ ರಮಲ್ಲಾ ನಗರದಲ್ಲಿದ್ದ ಯಸೀರ್ ಅರಫತ್ ಅವರ ನಿವಾವನ್ನು ಇಸ್ರೇಲ್ ಸೇನೆ ಸುತ್ತುವರೆದು ಅವರನ್ನು ದಿಗ್ಭಂಧನದಲ್ಲಿಟ್ಟಿದ್ದರಿಂದ ಯಾವುದೇ ಪ್ಯಲೇಸ್ತೀನಿ ರಾಜತಾಂತ್ರಿಕರು ಸ್ಥಳಕ್ಕೆ ಭೇಟಿನೀಡಿ ತೋರಿಕೆಯ ಸಮತೋಲನವನ್ನು ಒದಗಿಸುವಂತಿರಲಿಲ್ಲ್ಲ. ಆದರೆ ೨೦೧೫ರಲ್ಲಿ ಜೋರ್ಡಾನಿಗೆ ಭೇಟಿ ನೀಡಿದ್ದ ಭಾರತದ ಅಧ್ಯಕ್ಷ ಪ್ರಣಬ್ ಮುಖರ್ಜಿಯವರು ಸಂಕ್ಷೋಭೆಯಿಂದ ಕೂಡಿದ್ದ ಆಕ್ರಮಿತ ಪ್ಯಲೇಸ್ತೀನಿಗೂ ಭೇಟಿ ನೀಡಿದರು. ಮತ್ತು ಮೂಲಕ ಹಳೆ ರೀತಿ ರಿವಾಜುಗಳು ಮತ್ತೆ ಜೀವ ಪಡೆದವು. ಭಾರತದ ಅಧ್ಯಕ್ಷರು ದಮನಕ್ಕೊಳಗಾಗಿದ್ದ ಪ್ಯಾಲೇಸ್ತೀನ್ ರಾಷ್ಟ್ರೀಯ ಪ್ರಾಧಿಕಾರದ ರಾಜಕೀಯ ನಾಯಕತ್ವದೊಡನೆ ಮಾಡಬೇಕಿದ್ದ ಮಾತುಕತೆಗೆ ಇಸ್ರೇಲಿನೊಡನೆ ನಿಗದಿಯಾಗಿದ್ದ ಕಾರ್ಯಕ್ರಮಗಳಿಗಿಂತ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಯಿತು. ಇದು ಒಂದೆಡೆ ಪ್ಯಾಲೆಸ್ತೀನಿಗೆ ಸಾಂಕೇತಿಕ ಬೆಂಬಲವನ್ನು ಸೂಚಿಸುತ್ತಲೇ ಇಸ್ರೇಲಿನೊಡನೆ ವ್ಯೂಹಾತ್ಮಕ ಮೈತ್ರಿಯನ್ನು ಆಳವಾಗಿ ಗಟ್ಟಿಗೊಳಿಸಿಕೊಳ್ಳಲು ಭಾರತವು ನಡೆಸುತ್ತಿದ್ದ ಕಸರತ್ತಿನ ಭಾಗವಾಗಿತ್ತು.

ಹೀಗಾಗಿ ಭಾರತದ ಪ್ರಧಾನಿಯು ಪ್ಯಾಲೆಸ್ತೀನಿಗೆ ನೀಡಿದ ಭೇಟಿಯನ್ನು ಇಸ್ರೇಲ್ vಪ್ಪಾಗಿಯೂ ತಿಳಿದುಕೊಳ್ಳುವುದಿಲ್ಲ. ಯಾವುದೇ ಮಹತ್ವವನ್ನೂ ಕೊಡುವುದಿಲ್ಲ. ಅಮೆರಿಕವು ಜೆರುಸೆಲೆಂ ಅನ್ನು ಇಸ್ರೇಲಿನ ರಾಜಧಾನಿಯನ್ನಾಗಿ ಮಾನ್ಯ ಮಾಡಿದ್ದರ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತವು ತನ್ನ ಮತವನ್ನು ಚಲಾಯಿಸಿದ್ದರ ಬಗ್ಗೆ ಭಾರತಕ್ಕೆ ಭೇಟಿ ನೀಡಿದ್ದ ಇಸ್ರೇಲಿನ ಪ್ರಧಾನಿ ನೇತನ್ಯಾಹು ಅವರನ್ನು  ಪತ್ರಕರ್ತರು ಕೇಳಿದಾಗ ಅವರು ಪ್ರಶ್ನೆಗೆ ಯಾವ ಮಹತ್ವವನ್ನೂ ನೀಡಲಿಲ್ಲ. ಭಾರತದ ಜೊತೆ ತನ್ನ ಮೈತ್ರಿಯು ಆಳಗೊಳ್ಳುತ್ತಿರುವ ಬಗ್ಗೆ ಇಸ್ರೇಲಿಗೆ ಸಂಪೂರ್ಣ ಸಮಾಧಾನವಿದ್ದು ಕೇವಲ ಸಾಂಕೇತಿಕ ಅರ್ಥವುಳ್ಳ ಭಾರತ ಪ್ರಧಾನಿಯ ಪ್ಯಲೆಸ್ತೀನ್ ಭೇಟಿಯ ಬಗ್ಗೆ ಅದಕ್ಕೆ ಯಾವುದೇ ಆತಂಕವಿಲ್ಲ.
ಯೂರೋಪಿನೊಂದಿಗೆ ಇಸ್ರೇಲಿನ ಸಂಬಂಧ ಳಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಭಾರತದೊಂದಿಗೆ ಕುದುರುತ್ತಿರುವ ಮೈತ್ರಿಯು ಇಸ್ರೇಲಿನ ಒಟ್ಟಾರೆ ವೂಹಾತ್ಮಕ ಯೋಜನೆಗಳ ಜೊತೆ ನಿಖರವಾಗಿ ಹೊಂದಿಕೊಳ್ಳುತ್ತದೆ. ಯೂರೋಪು ಇಸ್ರೇಲ್ ಬಗ್ಗೆ ತೋರುತ್ತಿರುವ ಧೋರಣೆಯ ಬಗ್ಗೆ ವ್ಯಗ್ರಗೊಂಡಿರುವ ಪ್ರಧಾನಿ ನೇತನ್ಯಾಹು ಅವರು ಅದಕ್ಕೆ  ಯೆಹೂದಿ ದಮನದ ಬಗ್ಗೆ ಯೂರೋಪ್ ತೋರಿದ ಸಮ್ಮತಿಯ ಐತಿಹಾಸಿಕ ತಪ್ಪುಗಳನ್ನು ಎತ್ತಾಡುತ್ತಿದ್ದಾರೆ. ಯೂರೋಪನ್ನು ಹೊರತುಪಡಿಸಿಯೂ ತಾವು ಜಗತ್ತಿನಲ್ಲಿ ಇತರರ ಜೊತೆ ವ್ಯೂಹಾತ್ಮಕ ಮತ್ತು ಆರ್ಥಿಕ ಮೈತ್ರಿಗಳನ್ನು ಮಾಡಿಕೊಳ್ಳಬಲ್ಲೆವು ಒಂದು ಒರಟೊರಟಾದ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.

ಮತ್ತೊಂದೆಡೆ ಪ್ಯಾಲೆಸ್ತೀನ್ ಪ್ರತಿರೋಧವನ್ನು ಸಂಪೂರ್ಣವಾಗಿ ಹತ್ತಿಕ್ಕುವ ಉದ್ದೇಶದಿಂದ ಇಸ್ರೇಲ್ ನಡೆಸುತ್ತಿರುವ ಬರ್ಬರ ದಮನವನ್ನು ಮೌನವಾಗಿ ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿಗೆ ಭಾರತವು ಸರಿದಿದೆ. ಅಮೆರಿಕವು ವಿಷಯದಲ್ಲಿ ಮಧ್ಯವರ್ತಿಯಾಗುವುದನ್ನು ಪ್ಯಾಲೆಸ್ತೀನ್ ಖಂಡತುಂಡವಾಗಿ ನಿರಾಕರಿಸಿದೆ. ಆದರೆ ಸಿರಿಯಾವನ್ನು ಒಳಗೊಂಡಂತೆ  ವಲಯದ ಇತರ ಪ್ರದೇಶಗಳಲ್ಲಿ ಮುಂದುವರೆಯುತ್ತಿರುವ ಸಂಕ್ಷೋಭೆಗಳನ್ನು ಗಮನಿಸಿದಾಗ ಜಾಗತಿಕ ಗಮನವು ಪ್ಯಾಲೆಸ್ತೀನಿನ ಮೇಲೆ ಮರಳಿ ಕೇಂದ್ರೀಕರಣಗೊಳ್ಳಲು ಸಾಕಷ್ಟು ವರ್ಷಗಳೇ ಬೇಕಾಗಬಹುದು. ಅವಧಿಯಲ್ಲಿ ಭಾರತವು ಇಸ್ರೇಲಿನೊಡನೆ ತನ್ನ ತಾತ್ಕಾಲಿಕ ಕೂಡಾವಳಿಯ ಮೂಲಕ ತನಗೆ ಬೇಕಾದದ್ದನ್ನೆಲ್ಲ ಪಡೆದುಕೊಂಡುಬಿಡಬಹುದಾದರೂ ಮೈತ್ರಿಯು ದೇಶದೊಳಗಿನ ಸೌಹಾರ್ದತೆಯ ಮೇಲೆ ಮತ್ತು ಜಗತ್ತಿನ ಎದಿರು ಭಾರತದ ವಿಶ್ವಾಸಾರ್ಹತೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನಂತೂ ಬೀರಿರುತ್ತದೆ.

 ಕೃಪೆ: Economic and Political Weekly,Feb 17,  2018. Vol. 53. No.7
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

ಕಾಮೆಂಟ್‌ಗಳಿಲ್ಲ: