ಗುರುವಾರ, ಆಗಸ್ಟ್ 15, 2013

ಮಳೆಯ ಮೊಳಕೆ ಅಣಬೆ

-ಅರುಣ್ ಜೋಳದಕೂಡ್ಲಿಗಿ

ಸಾಮಾನ್ಯವಾಗಿ ಜುಲೈ-ಆಗಸ್ಟ್ ತಿಂಗಳಲ್ಲಿ ಸಹಜವಾಗಿ ಬೆಳೆಯುವ ಒಂದು ನೈಸಗರ್ಿಕ ಫಲ ಈ ಅಣಬೆ. ಹೊಲದ ಬದುವುಗಳಲ್ಲಿ, ಬೆಟ್ಟಗುಡ್ಡಗಳ ಬಯಲಲ್ಲಿ, ನೆಲದಲ್ಲಿ ಮಲ್ಲಿಗೆ ಚೆಲ್ಲಿದಂತಹ ಪುಟಾಣಿ ಗುಂಪೊಂದು ಕಾಣುತ್ತದೆ, ಯಾರೋ ಮಲ್ಲಿಗೆ ಹೂ ಚೆಲ್ಲಿದ್ದಾರೆಂದು ಆ ಗುಂಪಿನ ಹತ್ತಿರ ಹೋದಾಗಲೇ ತಿಳಿಯುವುದು ಅದು ಅಣಬೆ ಎನ್ನುವುದು. ಅಣಬೆ ನೈಸಗರ್ಿಕವಾಗಿ ವಾತಾವರಣದ ಬದಲಾವಣೆಯ ಕಾರಣಕ್ಕೆ ಮಳೆ ಬಿದ್ದ ನಂತರ ಗುಡುಗಿನ ಅಬ್ಬರಕ್ಕೆ ತಾನಾಗಿಯೇ ಹುಟ್ಟುತ್ತದೆ.
ಅಣಬೆ ಬೇಟೆ
ಅಚ್ಚರಿಯಾಗಬಹುದು ಈಗಲೂ ನಮ್ಮ ಭಾಗದಲ್ಲಿ ಅಣಬೆ ಎಂದರೆ ಮಾಂಸಾಹಾರ ಎನ್ನುವ ನಂಬಿಕೆ ಇದೆ. ಹಾಗಾಗಿ ಮಾಂಸಾಹಾರ ಸೇವನೆ ಮಾಡುವ ಕೆಳಜಾತಿಗಳು ಮಾತ್ರ ಅಣಬೆಯನ್ನು ಆಹಾರವಾಗಿ ಬಳಸುತ್ತಾರೆ. ಮೇಲು ಜಾತಿಗಳವರಿಗೆ ಅಣಬೆ ಸಿಕ್ಕರೆ ಅವರಿಗೆ ಆಪ್ತರಿರುವ ಕೆಳಜಾತಿಗಳ ಕುಟುಂಬಗಳಿಗೆ ಕೊಡುತ್ತಾರೆ. ಅರೆ ! ಅಪ್ಪಟ ಸಸ್ಯಹಾರಕ್ಕೆ ಮಾಂಸಾಹಾರ ಎನ್ನುವ ನಂಬಿಕೆಯಾದರೂ ಯಾಕೆ ಹುಟ್ಟಿರಬಹುದು ಎನ್ನುವ ಸಹಜ ಕುತೂಹಲದಿಂದ ಜನರನ್ನು ಕೇಳಿದಾಗ ಕುತೂಹಲಕಾರಿ ಸಂಗತಿಯೊಂದು ಹೊರಬಿತ್ತು.
ಅದೇನೆಂದರೆ ಕೆಲವು ಕೆಳಜಾತಿಗಳು ಓಣಿಯೊಂದರಲ್ಲಿ ನಾಲ್ಕಾರು ಜನ ಸೇರಿ ಒನ್ರೋ ಅಣಬೆ ಬೇಟೆಗೆ ಹೋಗೋಣ ಅಂದರಂತೆ. ಈ ಮಾತು ಕೇಳಿಸಿಕೊಂಡ ಮಾಂಸಾಹಾರ ಸೇವಿಸದ ಸಮುದಾಯಗಳು `ಅರೆ ಅಣಬೆ ಬೇಟೆ ಅನ್ನಿಸಿಕೊಳ್ಳುತ್ತದೆ, ಬೇಟೆ ಎನ್ನಿಸಿಕೊಂಡರೆ ಅದು ಮಾಂಸಾಹಾರವಾಗುತ್ತದೆ’ ಎನ್ನುವುದು ಅವರ ಮನದಲ್ಲಿ ಬಂತಂತೆ. ಅಂದಿನಿಂದ ಸಸ್ಯಾಹಾರವನ್ನು ಸೇವಿಸುವ ಸಮುದಾಯಗಳು ಅಣಬೆಯನ್ನು ಸೇವಿಸುವುದಿಲ್ಲ ಎನ್ನುವ ಕಥೆಯೊಂದಿದೆ. ಇಂತಹ ಪೌಷ್ಟಿಕಾಂಶವಿರುವ ಆಹಾರವನ್ನು ಮೇಲು ಜಾತಿಗಳು ತಿನ್ನದಂತೆ ಕತೆ ಕಟ್ಟಿರುವ ಕೆಳಜಾತಿಯ ಮಂದಿ ಚಾಲಾಕಿಗಳೇ ಇರಬೇಕು. ವೈಜಾನಿಕವಾಗಿ ನೋಡುವುದಾದರೆ, ಅಣಬೆ ಸಸ್ಯಹಾರಿಯಾದರೂ ಅದು ಶಿಲಿಂಧ್ರವಾಹಕವಾಗಿರುದರಿಂದ ಶಾಖಹಾರಿಗಳು ಇದನ್ನು ಸೇವಿಸದಿರುವ ಸಾದ್ಯತೆ ಇದೆ.

ಅಣಬೆ ನಂಬಿಕೆ
ಅಣಬೆಯೂ ಕೆಲವು ನಂಬಿಕೆಗಳನ್ನು ಹುಟ್ಟಿಸಿದೆ. ವರ್ಷಕ್ಕೆ ಒಂದು ಬಾರಿಯಾದರೂ ಅಣಬೆ ತಿನ್ನಬೇಕು ಎನ್ನುವ ಲೋಕ ರೂಢಿ ಹಳ್ಳಿಗಳಲ್ಲಿದೆ. ಒಂದು ಗುಂಪು ಅಣಬೆ ಕಾಣಿಸಿಕೊಂಡರೆ ಅದು ಸುತ್ತಮುತ್ತಲ ಮೂರು ಗುಂಪುಗಳನ್ನು ಹೊಂದಿರುತ್ತದೆ. ಎನ್ನುವ ನಂಬಿಕೆ ಇದೆ. ಕಾರಣ ಅಣಬೆ ಒಂಟಿಯಲ್ಲ ಎನ್ನುವುದು ಜನರ ನಂಬಿಕೆ. ಹಾಗಾಗಿ ಕೆಲವು ಕೂಡು ಕುಟುಂಬಗಳಿಗೆ ಅಣಬೆ ಮನೆ ಎನ್ನುವುದೂ ಇದೆ. ಆಗ ಒಂದು ಗುಂಪು ಕಾಣಿಸಿಕೊಳ್ಳುತ್ತಲೂ ಮತ್ತೆರಡು ಕಡೆ ಇರುವುದನ್ನು ಶೋಧಿಸುತ್ತಾರೆ.

ಅಣಬೆಯನ್ನು ಕೀಳುವಾಗ ಕುಳಿತು ಕೀಳಬಾರದು, ಕುಳಿತು ಕಿತ್ತರೆ ಮರು ವರ್ಷ ಮತ್ತೆ ಈ ಜಾಗದಲ್ಲಿ ಅಣಬೆ ಹುಟ್ಟುವುದಿಲ್ಲ ಎನ್ನುವುದು ನಂಬಿಕೆ. ಅಂತೆಯೇ ಒಂದು ಜಾಗದಲ್ಲಿ ಅಣಬೆ ಇದ್ದರೆ ಅದೇ ಜಾಗದಲ್ಲಿ ಮರು ವರ್ಷವೂ ಅಣಬೆ ಏಳುತ್ತವೆ ಎಂದು ಜನ ನಂಬುತ್ತಾರೆ. ಹಳ್ಳಿಗಳಲ್ಲಿ ಮೊಗ್ಗಿನಂತಿರುವ ಮಿಡಿ ಅಣಬೆಗೆ ಕಾಮೋತ್ತೇಜಕ ಗುಣವಿದೆ ಎನ್ನುವುದಿದೆ.
ಅಣಬೆ ಸಾರು
ಅಣಬೆ ಸಾರಿಗೆ ತನ್ನದೇ ಆದ ವಿಶಿಷ್ಟವಾದ ರುಚಿಯೊಂದಿರುತ್ತದೆ. `ಸಾರು ಅಂದ್ರೆ ಅಣಬೆ ಸಾರು’ ಎನ್ನುವ ನುಡಿಗಟ್ಟೊಂದು ಜನಪದರಲ್ಲಿ ಬಳಕೆಯಲ್ಲಿದೆ. ಅಣಬೆ ಸಾರಿಗೆ ಉಳಿ ಮುಂದು ಮಾಡಿ, ಒಂದಷ್ಟು ಜೋಳದ ಹಿಟ್ಟು ಕಲಸಿ ಹಾಕಿದರೆ ಅದರ ರುಚಿಯನ್ನು ಹಿಡಿಯಬಹುದು ಎನ್ನುವುದು ಅನುಭವಿಗಳ ಮಾತು. ಹಾಗಾಗಿ ಅಣಬೆ ಸಾರಿನ ರುಚಿಯನ್ನು ಪದಗಳಲ್ಲಿ ಹಿಡಿದು ರುಚಿ ತೋರಿಸುವಷ್ಟು ಸುಲಭವಲ್ಲ. ಸಾರಿನಲ್ಲಿ ಸಿಗುವ ಅಣಬೆಯನ್ನು ತಿನ್ನುವಾಗ ಒಂದು ರೀತಿಯ ಮೋಜಿರುತ್ತದೆ. ಕಾರಣ ಅಣಬೆ ಸಾರಿನಲ್ಲಿ ಕೈಗೆ ಸಿಗದಂತೆ ಜಾರುತ್ತದೆ. ಅಷ್ಟು ನಯವಾಗಿರುತ್ತದೆ. ಈ ನಯವಾದ ಅಣಬೆಯನ್ನು ಬಾಯಿಗೆ ಹಾಕಿಕೊಂಡಾಗ ಚಂಗನೆ ಜಿಗಿಯುವ ಪ್ರಸಂಗಗಳೂ ನಡೆಯುತ್ತವೆ. ಆಗ ಅಣಬೆ ಅತಿ ನಾಜೂಕಿನದು ಎನ್ನಿಸದೆ ಇರುವುದಿಲ್ಲ.

ಸಾಮಾನ್ಯವಾಗಿ ದನ, ಆಡು, ಕುರಿ ಕಾಯುವವರಿಗೆ, ಕಟ್ಟಿಗೆ ತರಲೆಂದು ಕಾಡಿಗೆ ಹೋದವರಿಗೆ, ಹೊಲಗಳಿಗೆ ಕೆಲಸಕ್ಕೆ ಹೋದವರಿಗೆ ಅಣಬೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಕಾಡಿನಲ್ಲಿ ತೊಳೆದುಕೊಂಡು ಹಸಿ ಹಣಬೆಯನ್ನೇ ಬ್ರೆಡ್ಡಿನಂತೆ ತಿನ್ನುತ್ತಾರೆ. ಇನ್ನು ಕೆಲವರು ಬೆಳಗಿನ ಜಾವ ಎದ್ದು ಅಣಬೆಯನ್ನು ಹುಡುಕಿಕೊಂಡೇ ಒಂದು ಗುಂಪು ಹೊಲ ಬದುವು, ಕಾಡು ಮೇಡು ಸುತ್ತುವುದಿದೆ. ಹೀಗೆ ಸುತ್ತಿ ಸುತ್ತಿ ಅಣಬೆ ಹುಡುಕುವ ಕಾರಣಕ್ಕೂ ಅಣಬೆ ಬೇಟೆ ಎನ್ನುವ ನುಡಿಗಟ್ಟು ಹುಟ್ಟಿರುವ ಸಾದ್ಯತೆಯೂ ಇದೆ.

ಈಗೀಗ ಹಣಬೆ ಸುಗ್ಗಿಯಲ್ಲಿ ಹಣಬೆಗಳನ್ನು ಸಂಗ್ರಹಿಸಿ ಪೇಟೆಗೆ ಹೋಗಿ ಮಾರುವುದೂ ಇದೆ. ಹೀಗೆ ಮಾರುವವರು ಆಯಾ ಭಾಗದಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಮಾರುತ್ತಾರೆ. ನಮ್ಮ ಕೂಡ್ಲಿಗಿ ಭಾಗದಲ್ಲಿ ಒಂದು ಗುಂಪಿನ ಹಣಬೆಗೆ ನೂರರಿಂದ ಇನ್ನೂರು ರೂಗಳವರೆಗೆ ಬೆಲೆ ಇರುತ್ತದೆ. ನಗರದಲ್ಲಿ ಮಾರಲು ಹೋದಾಗ ಗಬದಾಡಿ ಕೊಳ್ಳುತ್ತಾರೆ ಎನ್ನುವುದು ಅಣಬೆ ಮಾರುವವರ ಅಂಬೋಣ. ಅಣಬೆ ಅರಳಿದ್ದರೆ ಕಡಿಮೆ ಹಣಕ್ಕೆ ಕೊಳ್ಳುತ್ತಾರೆ, ಅಣಬೆ ಮಿಡಿಯಾಗಿದ್ದರೆ ಹೆಚ್ಚು ಬೆಲೆಕೊಟ್ಟು ಕೊಳ್ಳುವುದಿದೆ.
ಅಣಬೆಯನ್ನು ಗೆದ್ದಲು ಹುಳುಗಳು ಸಾಕುತ್ತವೆ ಎನ್ನುವ ಪ್ರತೀತಿಯೂ ಇದೆ. ಕೆಲವು ಜಾತಿಯ ಕೀಟಗಳು ಅಣಬೆಯನ್ನು ತಿಂದರೆ ಸಂತಾನೋತ್ಪತ್ತಿಯಾಗುತ್ತದೆ ಎಂದೂ ಕೀಟ ತಜ್ಞರು ಹೇಳುತ್ತಾರೆ. ಮಲೆನಾಡಿನಲ್ಲಿ 550 ಕ್ಕೂ ಹೆಚ್ಚಿನ ವಿಧದ ಹಣಬೆಗಳಿರುವ ಬಗ್ಗೆ ಮಾಹಿತಿ ಇದೆ.

ಅಣಬೆ ಔಷಧಿ
ಅಣಬೆ ಶಿಲಿಂಧ್ರ ಜಾತಿಗೆ ಸೇರಿದ ಸಸ್ಯ. ಹಾಗಾಗಿ ದೇಹಕ್ಕೆ ಅಗತ್ಯವಿರುವ ಪ್ರೋಟಿನ್, ವಿಟಮಿನ್ ,ಮಿನರಲ್, ಅಮಿನೋ ಆಸಿಡ್ ಎಂಬ ಅಂಶವಿರುವ ಕಾರಣ ರೋಗ ನಿರೋಧಕ ಶಕ್ತಿ ಹೊಂದಲು   ಸಹಕರಿಸುವ ಪೂರಕವಾದ ಆಹಾರವಾಗಿದೆ. ಜನಪದ ವೈಧ್ಯದಲ್ಲಿ ಹಲವಾರು ಖಾಯಲೆಗಳಿಗೆ ಔಷಧಿಯಾಗಿ ಬಳಸುವುದೂ ಇದೆ. 

ಆಯುರ್ವೇದ ಗ್ರಂಥಗಳಲ್ಲಿ ಅಣಬೆಯನ್ನು ಸಸ್ಯಗಳ ರಾಜನೆಂದೂ, ಮಗುವಿನಿಂದ ಮುಪ್ಪಿನವರೆಗೆ ಮಾನಸಿಕ, ದೈಹಿಕ, ಶಾರೀರಿಕವಲ್ಲದೇ ಅಧ್ಯಾತ್ಮಿಕವಾಗಿಯೂ ಸಮತೋಲನ ಆಹಾರವಾಗಿತ್ತು ಎಂಬ ಉಲ್ಲೇಖಗಳಿವೆ. ಅಣಬೆ ಬಗ್ಗೆ ಭಾರತಕ್ಕಿಂತ ಚೈನಾದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆದ ಬಗ್ಗೆ ವಿವರಗಳಿವೆ. ಅಲ್ಲಿನ ಪಂಡಿತರು ಆಯುರ್ವೇದ ತಜ್ಞರು ಅನೇಕ ವಿಧದ ಪ್ರಯೋಗಗಳನ್ನು ನಡೆಸಿದ್ದಾರೆ. ಔಷಧ ಸಂಯೋಜಕರು ಪ್ರಯೋಗ ಮಾಡಿ ಅಣಬೆಯ ಔಷಧೀಯ ಗುಣಗಳನ್ನು ಗುರುತಿಸಿದ್ದಾರೆ.

ಸಸ್ಯಶಾಸ್ತ್ರದ ಪ್ರಕಾರ ಗ್ಯಾನೋಡರ್ಮ (ಅಣಬೆ) ವಾತ ಪಿತ್ತ ಕಫ ಶಮನಕಾರಿಯಾಗಿದೆ. ಅಣಬೆಯ ಬೇರು, ಕಾಂಡ, ತೊಗಟೆಗಳನ್ನು ಸಂಸ್ಕರಿಸಿ ಅವುಗಳ ಜೊತೆೆ ಆಯುವರ್ೇದಿಕ್ ಸಸ್ಯಗಳಾದ ತಾಳರಸ, ಪುದಿನಾ, ಪಾಚಿಗಳ ಸೇರಿಸಿ ಮಾತ್ರೆ, ಚಹಾ, ಪೇಸ್ಟ್, ಸೋಪು, ಜ್ಯೂಸ್ ಶ್ಯಾಂಪು ಮಸಾಜ್ ಎಣ್ಣೆಗಳಾಗಿ ವಿಂಗಡಿಸಿ ಉಪಯೋಗಿಸುವುದು ಚೈನಾ ಜಪಾನ್ ಮೊದಲಾದ ದೇಶದಲ್ಲಿದೆಯಂತೆ.

ಅಣಬೆ ಕಾಣೆಯಾಗುತ್ತಿವೆ
ಈಚೆಗೆ ಅಣಬೆಗಳು ಮೊದಲಿನಷ್ಟು ಸಿಗುವುದಿಲ್ಲ ಎನ್ನುವುದು ಹಳ್ಳಿಗರ ಕೊರಗು. ಕಾರಣ ಅಣಬೆಗೆ ಮಳೆಯೊಂದೇ ಅಲ್ಲ, ವಾತಾವರಣವೂ ತಂಪಾಗಿರಬೇಕಾಗುತ್ತದೆ, ನೆಲವೂ ಮಿದುವಾಗಿರಬೇಕು. ಅಲ್ಲದೆ ಹೊಲಗಳಿಗೆ ರಾಸಾಯಿನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸುವುದರಿಂದ ಹೊಲಗಳಲ್ಲಿ ನೈಸಗರ್ಿಕವಾಗಿ ಬೆಳೆವ ಕ್ರಿಯೆ ನಾಶವಾಗಿರುತ್ತದೆ ಎಂದು ಕೃಷಿ ತಜ್ಞರು ಹೇಳುತ್ತಾರೆ. ಹಾಗಾಗಿ ಸಾಗುವಳಿ ಹೊಲ ಮತ್ತು ಹೊಲದ ಬದುವುಗಳಲ್ಲಿ ಅಣಬೆ ಏಳುವ ಪ್ರಮಾಣ ತುಂಬಾ ಕಡಿಮೆಯಾಗಿದೆ. ಇನ್ನು ಕಾಡಿನ ಪ್ರಮಾಣವೂ ಕಡಿಮೆಯಾಗಿರುವುದರಿಂದ ಅಣಬೆ ಏಳುವುದು ಕಡಿಮೆಯೇ. ಹತ್ತು ವರ್ಷದ ಹಿಂದೆ ಏಳುತ್ತಿದ್ದ ಅಣಬೆಗಳ ಪ್ರಮಾಣಕ್ಕೂ ಈಗ ಏಳುವ ಪ್ರಮಾಣಕ್ಕೂ ಗಣನೀಯ ಬದಲಾವಣೆಯಾಗಿದೆ. ಇದು ವಾತಾವರಣದಲ್ಲಿ ಹೆಚ್ಚುತ್ತಿರುವ ಶಾಖದ ಪ್ರಮಾಣವನ್ನು ಗ್ರಹಿಸಲೂ, ಪರಿಸರದಲ್ಲಿ ಆಗಿರುವ ಬದಲಾವಣೆಯನ್ನು ತಿಳಿಯುವ ಸೂಚಕವೂ ಹೌದು.

ಅಣಬೆ ಬೇಸಾಯ
ಅಣಬೆಯನ್ನು ಕೃತಕವಾಗಿ ಬೆಳೆಯಬಹುದು ಎಂಬ ಶೋಧ ಆರಂಭವಾಗಿ ಎರಡು ದಶಕಗಳೇ ಕಳೆದಿವೆ. ಆದರೆ ಇದು ಗ್ರಾಮೀಣ ಭಾಗದ ರೈತರನ್ನು ಅಷ್ಟಾಗಿ ತಲುಪಿದಂತಿಲ್ಲ. ಸಾಮಾನ್ಯವಾಗಿ ಆಧುನಿಕ ಕೃಷಿಕರು, ಕೃಷಿ ವಿವಿಗಳಲ್ಲಿ ಕಲಿತವರು ನಗರ ಪ್ರದೇಶಗಳಲ್ಲಿ ಈ ಬೇಸಾಯದ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇಂತಹ ಕೃತಕ ಅಣಬೆಗೆ ದೊಡ್ಡ ಬೇಡಿಕೆಯೂ ಇದೆ. ಇನ್ನು ಸಸ್ಯಹಾರಿಗಳು ಮಾಂಸಹಾರದ ರುಚಿಯನ್ನು ಈ ಮಶ್ರೂಮ್ ಮಸಾಲಾ, ಮಶ್ರೂಮ್ ಮಂಚುರಿ, ಮಶ್ರೂಮ್ ಬಿರಿಯಾನಿ ತಿನ್ನುವುದರ ಮೂಲಕ ತೀರಿಸಿಕೊಳ್ಳುತ್ತಾರೆ ಎನ್ನುವುದು ಮಾಂಸಹಾರಿಗಳ ಲೇವಡಿ.

ಅಣಬೆ ನೆನಪು
ನನ್ನ ಹೈಸ್ಕೂಲ್ ದಿನಗಳಲ್ಲಿ ಸ್ಕೂಲ್ಗೆ ರಜೆ ಸಿಕ್ಕಾಗಲೆಲ್ಲಾ ಮತ್ತು ಶನಿವಾರ, ಭಾನುವಾರ ನಮ್ಮ ಎಂಟತ್ತು ಆಡುಗಳನ್ನು ಕಾಯಲೆಂದು ಅಡವಿ ಹೊಲ ಗದ್ದೆಗಳಿಗೆ ಹೋಗುತ್ತಿದ್ದೆ. ಆಗೆಲ್ಲಾ ಅಣಬೆ ಸಿಕ್ಕಾಗ ಅದನ್ನು ತೊಳೆದುಕೊಂಡು ಹಸಿ ಹಣಬೆಯನ್ನು ತಿನ್ನುತ್ತಿದ್ದೆವು. ಹೀಗೆ ಹಣಬೆ ಸಿಕ್ಕಾಗ ಆಡು ಕಾಯುವ ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದೆವು. ಹಂಚಿಕೆಯಲ್ಲಿ ಮೋಸವಾದಾಗ ಜಗಳವಾಗುವುದೂ ಇತ್ತು. ಆಗ ಅಣಬೆ ಹೆಚ್ಚೆಚ್ಚು ಸಿಕ್ಕರೆ ಟವಲ್ಲಿನಲ್ಲಿ ಕಟ್ಟಿಕೊಂಡು ಮನೆಗೆ ತರುತ್ತಿದ್ದೆವು.

ಬಾಲ್ಯದಲ್ಲಿ ಅತಿಹೆಚ್ಚು ಅಣಬೆ ತಿನ್ನಲು ನನಗೆ ಸಾದ್ಯವಾಯಿತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅವ್ವ ಅಂಗನವಾಡಿ ಟೀಚರ್ ಆಗಿದ್ದರಿಂದ ಊರಿನ ಮೇಲು ಜಾತಿಯ ಯಾರಿಗೇ ಅಣಬೆ ಸಿಕ್ಕರೂ ನಮ್ಮ ಮನೆಗೆ ತಂದು ಕೊಡುತ್ತಿದ್ದರು. ಅದಕ್ಕೆ ಪಯರ್ಾಯವಾಗಿ ಅವ್ವ ಸೋಯಾಬೀನ್ ಹಿಟ್ಟು, ಒಂದಷ್ಟು ಬೆಲ್ಲ, ಚೂರು ಎಣ್ಣೆ, ಕಡಲೆ ಕಾಳು ಇಂತಹವುಗಳನ್ನು ಅಣಬೆ ಕೊಟ್ಟವರಿಗೆ ಕೊಡುತ್ತಿತ್ತು. ಈ ಕಾರಣ ಯಾರೇ ಅಣಬೆ ಸಿಕ್ಕರೂ ನಮ್ಮ ಮನೆಗೆ ತಂದು ಕೊಡುತ್ತಿದ್ದರು. ಹಾಗಾಗಿ ಅಣಬೆ ಸುಗ್ಗಿ ಮುಗಿವ ಹೊತ್ತಿಗೆ ಕನಿಷ್ಟ ಇಪ್ಪತ್ತು ಬಾರಿಯಾದರೂ ಅಣಬೆ ಸಾರು ಉಣ್ಣುವ ಭಾಗ್ಯ ಸಿಗುತ್ತಿತ್ತು. ಹಾಗಾಗಿ ಹಣಬೆ ಜತೆಗಿನ ನಂಟು ಒಂದಷ್ಟು ಗಟ್ಟಿಯಾದ್ದೂ ಕೂಡ ಆ ಸಮಯದಲ್ಲೆ.

ಈಗಲೂ ಬೆಳಗಿನ ವಾಕ್ ಹೋಗುವಾಗ ಅಣಬೆಗಾಗಿ ಕಣ್ಣುಗಳು ಹುಡುಕಾಡುತ್ತವೆ, ಆದರೆ ಮಲ್ಲಿಗೆ ಹೂ ಚೆಲ್ಲಿದಂತಹ ಗುಂಪು ಅಣಬೆ ಸದ್ಯಕ್ಕಂತೂ ಸಿಕ್ಕಿಲ್ಲ. ಇದು ಅಣಬೆ ಏಳುವ ಸಮಯ, ನೀವೂ ಅಣಬೆಗಾಗಿ ಹುಡುಕಾಡಿ, ಅಣಬೆ ಸಾಂಬರ್ ರುಚಿ ಹೇಳಿ.

ಮಂಗಳವಾರ, ಆಗಸ್ಟ್ 13, 2013

ರಹಮತ್ ತರೀಕೆರೆ ಅವರ ಬಯಲಾಟದ ಅನುಭವ


ರಹಮತ್ ತರೀಕೆರೆ
ಸೌಜನ್ಯ: ಕೆಂಡಸಂಪಿಗೆ
(ಗಿರಿಜಾ ಕಲ್ಯಾಣದ ಒಂದು ದೃಶ್ಯ)
ನಾನು ಬಳ್ಳಾರಿ ಜಿಲ್ಲೆಗೆ ಹೊಸ ಬದುಕನ್ನರಸಿ ಬಂದು ನೆಲೆಸಿದೆ. ತರುವಾಯ ಈ ಭಾಗದ ಕಲಾಪ್ರಕಾರಗಳನ್ನು ಆಸಕ್ತಿಯಿಂದ ಗಮನಿಸತೊಡಗಿದೆ. ಹಳೇಮೈಸೂರು ಸೀಮೆಯವನಾದ ನನ್ನನ್ನು ಇಲ್ಲಿನ ಬುರ್ರಕಥಾ, ತೊಗಲುಗೊಂಬೆ, ಚೌಡಿಕೆ ಪದ, ಸವಾಲ್-ಜವಾಬ್ ಪದಗಳು, ಬಯಲಾಟಗಳು ಸೆಳೆದುಕೊಂಡವು.

ನಾನು ವಾಸವಾಗಿರುವ ಹೊಸಪೇಟೆ ಪಟ್ಟಣದ ಆಸುಪಾಸು ಅನಂತಶಯನಗುಡಿ, ನಾಗೇನಹಳ್ಳಿ, ಕೊಂಡನಾಯಕನಹಳ್ಳಿ, ಸಂಕಲಾಪುರ, ಇಂಗಳಗಿ, ಮಲಪನಗುಡಿ, ಗಾಳೆಮ್ಮನಗುಡಿ, ಕಾರಿಗನೂರು ಮುಂತಾದ ಹಳ್ಳಿಗಳಿವೆ. ಹೆಚ್ಚಿನವು ಶಾಸನೋಕ್ತ ಪ್ರಾಚೀನ ಹಳ್ಳಿಗಳು. ಕುರುಬರು ಬೇಡರು ಮುಸ್ಲಿಮರು ದಲಿತರು ಲಿಂಗಾಯತರು ವಾಸಿಸುವ ಇಲ್ಲಿನ ಜನ ಹೆಚ್ಚಾನ್ಹೆಚ್ಚು ರೈತರು ಮತ್ತು ಕೂಲಿಕಾರ್ಮಿಕರು. ನಸುಕಿಗೇ ಎದ್ದು ಮಾಗಾಣಿ ಕೆಲಸಕ್ಕೆ ಹೋಗಿ ಸಂಜೆ ನಾಲ್ಕೈದಕ್ಕೆ ಮರಳುವವರು. ಉಳಿದ ಸಮಯವನ್ನು ಕೊರಳುಬಿಟ್ಟು ನಿಂತಿರುವ ಬಂಡಿಯ ಮೂಕಿಯ ಮೇಲೊ, ರಸ್ತೆಬದಿಯ ಕಟ್ಟೆಯ ಮೇಲೊ ಕುಳಿತು ಬೀಡಿಕುಡಿಯುತ್ತ, ಮಂಡಾಳು ಮಿರ್ಚಿ ತಿನ್ನುತ್ತ, ಊರವಿಷಯಗಳ ಮೇಲೆ ಹರಟೆ ಕೊಚ್ಚುತ್ತ ಕೂರುವವರು. ಬ್ಯಾಸರಾದರೆ ಹೊಸಪೇಟೆಗೆ ಬಸ್ಸೇರಿ ಹೋಗಿ ಮಸಾಲೆದೋಸೆ ತಿಂದು ತೆಲುಗು ಸಿನಿಮಾ ನೋಡುವರು; ಕಬ್ಬಿನರೊಕ್ಕ ಕೈಗೆ ಹತ್ತಿದಾಗ ತುಸು ಎಣ್ಣೆ ಹಾಕುವರು. ವರ್ಷಕ್ಕೊಮ್ಮೆ ಬಯಲಾಟ ಆಡುವರು. ಇಲ್ಲಿನ ಜನರ ದುಡಿಮೆ, ವಿಶ್ರಾಂತಿ, ಕಲಾಸಕ್ತಿ, ಚಟಗಳ ಲಯದ ಪರಿಯೇ ಬೇರೆ.

ಈ ಹಳ್ಳಿಗಳಲ್ಲಿ ಹಬ್ಬಕ್ಕೊ ಜಾತ್ರೆಗೊ ತಪ್ಪದೆ ನಾಟಕ ಅಥವಾ ಬಯಲಾಟ ಏರ್ಪಡುತ್ತದೆ. ‘ಕೀಚಕವಧೆ ‘ರತಿಕಲ್ಯಾಣ ‘ದ್ರೌಪದಿ ವಸ್ತ್ರಾಪಹರಣ ‘ಲಂಕಾದಹನ ಮುಂತಾದ ಆಟಗಳನ್ನು, ಕಂದಗಲ್ ಹನುಮಂತರಾಯರ ಪ್ರಸಿದ್ಧ ನಾಟಕ ‘ರಕ್ತರಾತ್ರಿ'ಯನ್ನ ನಾನು ಇಲ್ಲೇ ನೋಡಿದ್ದು. ಬಯಲಾಟಗಳಲ್ಲಿ ಹೆಚ್ಚಿನವು ಮಹಾಭಾರತದ ಪ್ರಸಂಗವನ್ನು ಆಧರಿಸಿದವು. ಇವು ವಧೆ, ದಹನ, ಅಪಹರಣ ಮತ್ತು ಕಲ್ಯಾಣ ಎಂಬ ವಿಶೇಷಣಗಳಿಂದ ಕೂಡಿರುವುದೊಂದು ವಿಶೇಷ. ವಿಜಯನಗರ ಸಾಮ್ರಾಜ್ಯದ ಇಲ್ಲಿ ಮಾಜಿ ಪ್ರಜೆಗಳಿಗೆ ಈ ಥೀಮುಗಳು ಇಷ್ಟವೆಂದು ಕಾಣುತ್ತದೆ. ಈ ಭಾಗದ ಕವಿ ಹರಿಹರನ ‘ಗಿರಿಜಾಕಲ್ಯಾಣ'ದಲ್ಲೂ ಇವೇ ಅಂಶಗಳು ಪ್ರಧಾನವಾಗಿವೆಯಷ್ಟೆ. ಅದರಲ್ಲಿ ಕಾಮನದಹನ ಅಥವಾ ವಧೆಯಾದ ಬಳಿಕ ಗಿರಿಜೆಯ ಕಲ್ಯಾಣವಾಗುತ್ತದೆ.
ಬಯಲಾಟಗಳಲ್ಲಿ ಜನರಿಗಿರುವ ತನ್ಮಯತೆ ಸಂಭ್ರಮ ನೋಡುವಾಗ ಖುಶಿಯಾಗುತ್ತದೆ. ಆದರೆ ಈ ಆಟಗಳನ್ನು ಆಡುವ ಅವಸ್ಥೆಯನ್ನು ನೋಡುವಾಗ, ಹಿಂದೊಂದು ಕಾಲಕ್ಕೆ ಸಂಪನ್ನವಾಗಿ ಬಾಳಿದ ಮನೆತನವೊಂದು, ಬದಲಾದ ಕಾಲಕ್ಕೆ ತನ್ನ ಬದುಕಿನ ಚಾಲನ್ನು ಬದಲಿಸಿಕೊಳ್ಳದೆ ಬಡತನಕ್ಕಿಳಿದಂತೆ ವಿಷಾದ ಕವಿಯುತ್ತದೆ.

ಕೆಲವು ವರ್ಷಗಳ ಹಿಂದೆ, ಒಂದು ಬಯಲಾಟ ನೋಡಲು ಹೋದೆ. ಊರಮಧ್ಯದಲ್ಲಿ ಚಪ್ಪರ ಕಟ್ಟಿ ಬಾಳೆತರಗು ಮಾವಿನಸೊಪ್ಪು ಹರಡಿ ಮಾಡಿದ ವೇದಿಕೆ ನಿರ್ಮಿಸಿದ್ದರು. ರಂಗಸ್ಥಳಕ್ಕೆ ಹಿನ್ನೆಲೆಯಾಗಿ ತಿರುಪತಿ ತಿಮ್ಮಪ್ಪನ ಚಿತ್ರವಿರುವ ದೊಡ್ಡ ಅಂಕಪರದೆ. ಕೆಳಗೆ ದಪ್ಪಹಲಗೆಯಿಂದ ಮಾಡಿದ ರಂಗಮಂಚ. ಅದರ ನಾಲ್ಕೂ ಕಡೆ ಬೆಳಕಿನ ಫ್ರೇಮು ಹಾಕಿದಂತೆ ಟೂಬ್‌ಲೈಟುಗಳನ್ನು ಕಟ್ಟಲಾಗಿತ್ತು. ಜನ ಉಂಡು, ಗೋಣಿಚೀಲ ಪ್ಲಾಸ್ಟಿಕ್ ಹಾಳೆ, ಈಚಲು ಚಾಪೆ, ತಲೆದಿಂಬು ಹೊದಿಕೆ ಸಮೇತ ತಂದು, ನಡುಬೀದಿಯಲ್ಲೆ ಸೀಟುಹಿಡಿದು, ಎಲೆ ಅಡಿಕೆ ಜಗಿಯುತ್ತ ಗುಜುಗುಜು ಎಬ್ಬಿಸಿದ್ದರು. ಮಂಡಾಳು ಮಿರ್ಚಿ ವಗ್ಗಾಣಿ ಚಹದ ಅಂಗಡಿಗಳು ಸುತ್ತಮುತ್ತು ಬೀಡುಬಿಟ್ಟು ಆಟಕ್ಕಿಂತಲೂ ಹೆಚ್ಚಿನ ಕಲೆಕ್ಷನ್ನು ಮಾಡತೊಡಗಿದ್ದವು. ಪಾತ್ರಧಾರಿಗಳ ನಂಟರು ದೂರದ ಊರುಗಳಿಂದ ಬಂದು ಸೇರಿದ್ದರಿಂದ, ಊರಿನ ವಾಸ್ತವಿಕ ಜನಸಂಖ್ಯೆ ದಿಢೀರನೆ ಏರಿದಂತಿತ್ತು. ಅತೀವವಾದ ಸಂತೋಷದಲ್ಲೊ ಅರ್ಥವಾಗದ ದುಗುಡದಲ್ಲೊ ಕೆಲವರು ಟೈಟಾಗಿದ್ದು, ನಾಟಕ ಶುರುವಾಗುವ ಮೊದಲೇ ಸ್ವಯಂಘೋಷಿತ ಮಧ್ಯಂತರ ವಿರಾಮ ತೆಗೆದುಕೊಂಡು ಜಗಲಿಗಳಲ್ಲಿ ಶಯನಿಸಿದ್ದರು. ವೇದಿಕೆಗೆ ಸಮೀಪ, ಕೆಲವು ಗಣ್ಯರನ್ನು ಕುರ್ಚಿ ಹಾಕಿ ಕೂರಿಸಲಾಗಿತ್ತು. ಗಲಭೆಪೀಡಿತವಾಗಿದ್ದ ಸದರಿ ಸಭೆಯಲ್ಲಿ ಸ್ಥಳೀಯ ಶಾಸಕರು ಆಗಮಿಸಿದ್ದರು. ಶಾಸಕರು ಬಹುಶಃ ನಾಟಕದ ಖರ್ಚನ್ನು ವಹಿಸಿಕೊಂಡಿದ್ದರೆಂದು ಕಾಣುತ್ತದೆ, ಅವರ ದಾನಗುಣದ ಬಗ್ಗೆ ಅಭಿಮಾನಿಗಳಿಂದ ಕೊಂಡಾಟ ನಡೆಯಿತು. ಅವರಿಗೆ ಹಾರಹಾಕಿ ತುರಾಯಿ ಕೊಟ್ಟು ಗೌರವಿಸಲಾಯಿತು. ಶಾಸಕರಾದರೂ ನಾಳೆ ಉಪಯೋಗಕ್ಕೆ ಬರುವ ಸರ್ವಜನಾಂಗದ ಯಜಮಾನರನ್ನು ಒಬ್ಬೊಬ್ಬರಾಗಿ ವೇದಿಕೆ ಮೇಲೆ ಕರೆದು ಹಾರಹಾಕಿದರು. ಈ ಕಾರ್ಯಕ್ರಮ ಎರಡು ತಾಸು ಎಳೆಯಿತು. ಇದು ಬಯಲಾಟ ನೋಡಲು ಬಂದ ನನಗಿದು ಕಿರಿಕಿರಿ. ಆದರೆ ಜನರ ಮುಖದಲ್ಲಿ ಯಾವ ಚಡಪಡಿಕೆ ಇದ್ದಂತಿರಲಿಲ್ಲ. ಅವರು ಇದನ್ನೆಲ್ಲ ಬಯಲಾಟದ ಮೊದಲ ಅಂಕಗಳ ಹಾಗೆ ಭಾವಿಸಿ ನಿರಾಳವಾಗಿ ನೋಡುತ್ತಿದ್ದರು.

ಬಯಲಾಟ ರಾತ್ರಿ ೧೧ಕ್ಕೆ ಶುರುವಾಯಿತು. ರಂಗಮಂಚಕ್ಕೆ ಹಿಂದೆ ಪಾತ್ರಧಾರಿಗಳು ಸಿದ್ಧವಾಗುವ ಗ್ರೀನ್‌ರೂಂ ಇರಲಿಲ್ಲ. ನೂರು ಮೀಟರ್ ದೂರದಲ್ಲಿದ್ದ ಗುಡಿಯ ಪಡಸಾಲೆಯಲ್ಲಿ ಅವರಿಗೆ ಬಣ್ಣಬಳಿಯುವ ವೇಷತೊಡಿಸುವ ಕೆಲಸ ನಡೆಯುತ್ತಿತ್ತು. ಈ ದೂರದ ಸದುಪಯೋಗವೂ ಆಗುತ್ತಿತ್ತು. ಅಲಂಕಾರ ಮುಗಿದ ಬಳಿಕ ಪಾತ್ರಧಾರಿಗಳು ರಂಗಸ್ಥಳದವರೆಗೆ ಹಲಗೆ ಬಾರಿಸಿಕೊಂಡು ಮೆರವಣಿಗೆಯಲ್ಲಿ ಬರುತ್ತಿದ್ದರು. ಕೆಲವರು ನೇರ ವೇದಿಕಗೆ ಬರದೆ ಪ್ರೇಕ್ಷಕ ಸಾಗರವನ್ನು ಸೀಳಿಕೊಂಡು ಪ್ರವೇಶಿಸುತ್ತಿದ್ದರು. ಅವರು ರಂಗಪ್ರವೇಶ ಮಾಡುವ ಹೊತ್ತಿಗೆ ‘ಪಟಾಕ್ಷಿ ಹಾರಿಸಲಾಗುತ್ತಿತ್ತು. ತಮ್ಮಟೆ ಸದ್ದಿಗೆ ಮೊದಲೇ ಥೋಡೆ ಗಾಬರಿಯಾಗಿದ್ದ ಊರನಾಯಿಗಳು, ಲಕ್ಷ್ಮಿಪಟಾಕಿ ಸದ್ದಿಗೆ ಕಿತ್ತುಹರಿದುಕೊಂಡು ದಿಕ್ಕಾಪಾಲಾದವು.

ಪಾತ್ರಧಾರಿಗಳು ವೇದಿಕೆ ಏರಿದರು. ಏರಿದೊಡನೆ ಅವರಿಗೆ ಆಹೇರಿ ಶುರುವಾಯಿತು. ಪಾತ್ರಧಾರಿಯ ಬಂಧುಗಳು (ಬಹುಶಃ ಹೆಂಡತಿ ಕಡೆಯವರೇ ಇರಬೇಕು,) ವಾಚು ಉಂಗುರ ಮುಯ್ಯಿ ಮಾಡಲಾರಂಭಿಸಿದರು. ಗೆಳೆಯರು ಹೂವಿನ ಹಾರ ಹಾಕಿದರು. ಒಂದು ಹಾರವಂತೂ ಆನೆಸೊಂಡಿಲಿನಷ್ಟು ದಪ್ಪವಾಗಿತ್ತು. (ಅದರ ವ್ಯವಸ್ಥೆಯನ್ನು ಪಾತ್ರಧಾರಿಯೇ ಮಾಡಿದ್ದನೆಂದು ಪುಕಾರಿತ್ತು.) ಮೊದಲೇ ಭುಜಕೀರ್ತಿ ಕಿರೀಟದ ವಜನದಿಂದ ಜಾತ್ರೆಯ ಗೊಂಬೆಅಂಗಡಿಯಂತೆ ಕಾಣುತ್ತಿದ್ದ ದೇಹವು, ಈ ಹಾರದ ಭಾರಕ್ಕೆ ಮತ್ತಷ್ಟು ಕುಸಿದು, ಕುತ್ತಿಗೆಗೆ ಉರುಳುಹಾಕಿದಂತಾಯಿತು. ಈ ಹಾರಕ್ಕೂ, ಬಳಿಸಿಕೊಂಡ ಬಣ್ಣಕ್ಕೂ, ಪ್ರಖರ ಲೈಟಿನ ಬೆಳಕಿಗೂ ರೇಷ್ಮೆಸೀರೆಯನ್ನು ಕಚ್ಚೆಹಾಕಿ ಉಟ್ಟುಕೊಂಡಿದ್ದಕ್ಕೂ, ನೆರೆದ ಸಂದಣಿಗೂ, ಪಾತ್ರಧಾರಿಗಳ ದೇಹದಿಂದ ಬೆವರು ಕೆರೆಕೆಳಗಿನ ಗದ್ದೆಯಲ್ಲಿ ಬಸಿನೀರು ಉಕ್ಕುವಂತೆ ಉಕ್ಕುತ್ತಿತ್ತು. ಆಹೇರಿ ಹಾರತುರಾಯಿ ಕಾರ್ಯಕ್ರಮ ಕೊನೆಗೊಳ್ಳುವ ಸೂಚನೆ ಕಾಣಲಿಲ್ಲ. ಭಾಗವತನು ಕಂದಪದ್ಯ ಹಾಡಲು ಶುರುಮಾಡಿದನು. ಆಗ ನಟರು ಬೇರೆದಾರಿಯಿಲ್ಲದೆ ಕುಣಿಯತೊಡಗಿದರು. ಕುಣಿಯುವುದಕ್ಕೆ ಹಾರಗಳು ತೊಡಕಾಗುತ್ತಿದ್ದವು. ಆನೆಕಿವಿಗಳಂತಿದ್ದ ಭುಜಕೀರ್ತಿ, ಗುಡಿಯ ಕಳಸವನ್ನೇ ತಂದಿಟ್ಟಂತಹ ಕಿರೀಟ ಬೇರೆಯಿದ್ದವು. ಈ ಶೃಂಗಾರ ಪರಿಕರಗಳನ್ನೆಲ್ಲ ಕುಣಿವಾಗ ಬೀಳದಂತೆ ದೇಹದ ಬೇರೆಬೇರೆ ಭಾಗಕ್ಕೆ ಸೆಣಬಿನ ಸುತ್ತಲಿಗಳಲ್ಲಿ ಕಟ್ಟಲಾಗಿತ್ತು. ಕರಾವಳಿಯ ಯಕ್ಷಗಾನದಲ್ಲೂ ಕೇರಳದ ಕಥಕ್ಕಳಿಯಲ್ಲೂ ಭೂತದ ಕೋಲಗಳಲ್ಲೂ ಬಣ್ಣದ ವೇಷಗಾರಿಕೆ ಉಂಟು. ಆದರೆ ಕುಣಿತಕ್ಕೆ ಅವು ತೊಂದರೆಯಾಗದಂತೆ ಹಗುರವಾಗಿವೆ. ಇಲ್ಲಿ ಕುಣಿತವಿರಲಿ ನಡೆದಾಡುವುದಕ್ಕೂ ಕಷ್ಟವಾಗುತ್ತಿತ್ತು. ಯಾವ ವೇಷ ಪಾತ್ರಕ್ಕೆ ಜೀವ ತುಂಬಬೇಕಿತ್ತೊ, ಅದೇ ಪಾತ್ರಗಳ ಚಲನಶೀಲತೆಯನ್ನು ನಿಯಂತ್ರಿಸುತ್ತಿತ್ತು.

ನಟರು ಕುಣಿವಾಗ, ಅವರ ಬಂಧುಗಳೆಲ್ಲ ಆದಷ್ಟೂ ವೇದಿಕೆಯಲ್ಲೆ ಜಾಗಮಾಡಿಕೊಂಡು ನಿಂತಿದ್ದರು. ಅವರೆಲ್ಲ ತಮ್ಮ ಕಡೆಯವರು ಕುಣಿದು ಸುಸ್ತಾಗಿ ಫೈಬರ್ ಚೇರಿನಲ್ಲಿ ಕುಳಿತೊಡನೆ, ವಿಂಬಲ್ಡನ್ನಿನಲ್ಲಿ ಟೆನಿಸ್ ಆಟಗಾರರಿಗೆ ಸೇವೆ ಮಾಡುವ ಮೈದಾನದ ಹುಡುಗರಂತೆ, ಮಾಂಜಾ ಸಿಟ್ರಾ ಕುಡಿಸುವುದು, ಗಾಳಿ ಹಾಕುವುದು, ನಿಂಬೆಹಣ್ಣು ಮೂಗಿಗೆ ಹಿಡಿಯುವುದು, ಎದೆಗೆ ಪಿನ್ನಿನ ನೆರವಿನಿಂದ ಲಗತ್ತಿಸಿದ ನೋಟುಗಳನ್ನು ಸರಿಮಾಡುವುದು ಮುಂತಾದ ಶೈತ್ಯೋಪಚಾರ ಮಾಡುತ್ತಿದ್ದರು. ಈ ಶೈತ್ಯೋಪಚಾರಿಗಳ ಸಂಖ್ಯೆ ಪಾತ್ರಧಾರಿಗಳಿಗೆ ಕುಣಿಯಲು ಜಾಗಬಿಡದಷ್ಟು ನಿಬಿಡವಾಗಿತ್ತು. ಕೀಚಕ-ಭೀಮರಿಗೆ ಯುದ್ಧ ಮಾಡಲು ತೊಂದರೆಯಾದಾಗ, ಯಾರೊ ಒಬ್ಬ ರಸಿಕ-ಮಾಜಿ ಪೈಲವಾನರಂತೆ- ಕೆರಳಿ, ರಂಗಮಂಚದ ಮೇಲೆ ಜಮಾಯಿಸಿದ್ದ ಸದರಿ ಅಭಿಮಾನಿಗಳನ್ನೆಲ್ಲ ಕೆಳೆಗೆಳೆದು ಹಾಕಿದರು. ಈಗ ಕೊಂಚ ಯುದ್ಧಕಣಕ್ಕೆ ತುಸು ಎಡೆಯಾಯಿತು.
ನಾಟಕದ ಹಸ್ತಪ್ರತಿ ಹಿಡಿದುಕೊಂಡಿದ್ದ ಕಾಲೇಜು ತರುಣನೊಬ್ಬ, ಪಾತ್ರಧಾರಿಗಳ ಹಿಂದಿದೆಯೇ ಸುಳಿಯುತ್ತ, ಡೈಲಾಗಿನ ಮೊದಲ ಪದ ನೆನಪಿಸಿಕೊಡುತ್ತಿದ್ದನು. ಹಾಡಿನ ಅಥವಾ ಸಂಭಾಷಣೆಯ ಸಾಹಿತ್ಯವು ಪ್ರೇಕ್ಷಕರಿಗೆ ತಿಲಮಾತ್ರವೂ ಕೇಳಿಸದಂತೆ ಮಾಡುವ ವ್ಯವಸ್ಥೆ ಅಲ್ಲಿತ್ತು. ನಾಟಕದ ಕಥೆಯ ಬಗ್ಗೆ ಪ್ರೇಕ್ಷಕರಲ್ಲಿ ಯಾರಿಗೂ ಆಸಕ್ತಿ ಇದ್ದಂತೆ ತೋರಲಿಲ್ಲ. ನಟನೆಯ ಗುಣಮಟ್ಟದ ಬಗ್ಗೆ ನಟರಿಗೂ ಕಾಳಜಿಯಿರಲಿಲ್ಲ. ಮೊಳಕಾಲನ್ನು ಗಲ್ಲದವರೆಗೆ ಎತ್ತಿತಂದು, ರಂಗದ ಹಲಗೆಗೆ ಕಾಲನ್ನು ಜೋರಾಗಿ ಅಪ್ಪಳಿಸುತ್ತ ಎಲೆಲೆಲೆಲೆಲೆಲೆಲೆಲೆಲೆ ಭೀಮಾ, ಎಲೆಲೆಲೆಲೆಲೆ ದುಶ್ಯಾಸನಾ ಕುರುಕುಲ ಅಪಮಾನಾ.. ಎಂಬುದನ್ನು ಮಾತ್ರ ಚೆನ್ನಾಗಿ ಹೇಳುತ್ತಿದ್ದರು.

 ಕೆಲವೊಮ್ಮೆ ಪ್ರೇಕ್ಷಕರೂ ನಿರ್ದೇಶನದ ಕೆಲಸ ಮಾಡುತ್ತಿದ್ದರು. ಭಾಗವತನು ಸರಿಯಾಗಿ ಪಾತ್ರಧಾರಿಗಳಿಗೆ ನಾಟಕ ಕಲಿಸಿಲ್ಲವೆಂದೂ ಮೂರು ತಿಂಗಳ ಖರ್ಚು ಕೊಟ್ಟಿದ್ದು ವ್ಯರ್ಥವಾಯಿತೆಂದೂ ಒಬ್ಬ ಪ್ರೇಕ್ಷಕ ಎದ್ದುನಿಂತು ಸಾರ್ವಜನಿಕವಾಗಿ ಆಪಾದಿಸಿದನು. ಇದೊಂದು ಸಲ ಸುಧಾರಿಸಿಕೊಳ್ಳಬೇಕೆಂದೂ, ಶಾಂತರೀತಿಯಿಂದ ವರ್ತಿಸಬೇಕೆಂದೂ ಭಾಗವತನು ಪರಿಪರಿಯಾಗಿ ವಿನಂತಿಸಿದನು. ಟಿವಿ ಸೀರಿಯಲ್ಲುಗಳಲ್ಲಿ ಕಥೆ ಕಮ್ಮಿ ಜಾಹಿರಾತು ಜಾಸ್ತಿ ಇರುವಂತೆ, ಆಟಕ್ಕಿಂತ ಅದರ ಆಜುಬಾಜು ಜರುಗುತ್ತಿದ್ದ ಘಟನೆಗಳೇ ಮುಖ್ಯವಾಗಿದ್ದವು.

ಈ ಬಯಲಾಟಗಳು ಸೂಕ್ತ ಆಹಾರವಿಲ್ಲದೆ ಬೆಳವಣಿಗೆ ಸ್ಥಗಿತಗೊಂಡಿರುವ ವ್ಯಕ್ತಿಯಂತೆ ನಿಂತುಬಿಟ್ಟಿವೆ ಅನಿಸಿತು. ಮಾತ್ರವಲ್ಲ, ಕರಾವಳಿಯ ಯಕ್ಷಗಾನಗಳಿಗೆ ಹೋಲಿಸಿದರೆ ಒಂದು ಶತಮಾನದಷ್ಟು ಹಿಂದುಳಿದಿವೆ ಅನಿಸಿತು. ಯಾವುದೇ ಪರಂಪರೆಯ ಜತೆ ಹೊಸಕಾಲದ ಪ್ರತಿಭೆಗಳು ಅನುಸಂಧಾನ ಮಾಡಿ ಅದನ್ನು ಸಮಕಾಲೀನಗೊಳಿಸದಿದ್ದರೆ, ಚೈತನ್ಯವೆಲ್ಲ ಸೋರಿಹೋಗಿ, ಬಡಕಲು ದೇಹಕಂಕಾಲ ಮಾತ್ರ ಉಳಿಯುತ್ತದೆ. ಯಕ್ಷಗಾನಗಳು ಹೊಸ ಪ್ರಯೋಗಗಳನ್ನು ಮಾಡುತ್ತ, ದೇಶವಿದೇಶ ತಿರುಗುತ್ತ ವೃತ್ತಿಪರತೆ ಮೈಗೂಡಿಸಿಕೊಂಡಿವೆ. ಅಲ್ಲಿ ಕೆಲವು ಮೇಳಗಳಿಗೆ ಈಗ ಬುಕಿಂಗ್ ಮಾಡಿದರೆ, ೧೫ ವರ್ಷದ ತನಕ ಕಾಯಬೇಕೆಂದು ಕೇಳಿರುವೆ. ವ್ಯವಹಾರ ಪ್ರಜ್ಞೆ ಜಾಗೃತವಾಗಿರುವ ಕರಾವಳಿಯಲ್ಲಿ, ಯಕ್ಷಗಾನ ಒಂದು ‘ಕಲೋದ್ಯಮವೂ ಆಗಿದೆ. ಈ ಬಗೆಯ ಶಿಸ್ತನ್ನು ರೈತಾಪಿಗಳೂ ಕೂಲಿಕಾರರೂ ಆದ ಜನ, ನಾಟಕದ ಮೇಷ್ಟರನ್ನು ನೇಮಿಸಿಕೊಂಡು, ದುಡಿತದ ನಡುವಿನ ಬಿಡುವಿನಲ್ಲಿ ತಾಲೀಮುಮಾಡಿ ಹವ್ಯಾಸಿ ನಟರಾಗಿ ಆಡುವ ಈ ಬಯಲಾಟಗಳಲ್ಲಿ ಕಾಣುವುದು ಕಷ್ಟ. ಆದರೆ ಒಂದು ಕಾಲಕ್ಕೆ ಸಿರಿವಂತವಾಗಿದ್ದ ಈ ಬಯಲಾಟ ಪರಂಪರೆ ಅಳವಿನಂಚಿಗೆ ನಿಂತಂತೆ, ರೈತಾಪಿತನ ವಾಣಿಜ್ಯಯುಗದ ಭರಾಟೆಯಲ್ಲಿ ಹಿಂದುಳಿದು ಸ್ವಹತ್ಯೆಯ ಹಾದಿ ಹಿಡಿದಿರುವಂತೆ, ಕಾಣುವುದು. ಅಥವಾ ದುಡಿಮೆಗಾರರ ಬಾಳಿನಲ್ಲಿ ಕಲೆಗಳ ಪಾತ್ರ ಕುರಿತಂತೆ, ನಮ್ಮ ದೃಷ್ಟಿಕೋನದಲ್ಲಿಯೇ ದೋಷವಿರುವುದರಿಂದ ಅಳಿವು, ಅವನತಿ ಎಂದೆಲ್ಲ ಅನಿಸುತ್ತಿದೆಯೊ? ಕರ್ಣನ ತೊಡೆಯನ್ನು ಕೊರೆದು ಅವನ ಶಾಪಕ್ಕೂ ಕಾರಣವಾದ ಗುಂಗೆಹುಳದಂತೆ ಪ್ರಶ್ನೆಗಳು ಕೊರೆಯತೊಡಗಿದವು.

(ಬೆಳಗಲ್ ವೀರಣ್ಣ)ಬಳ್ಳಾರಿ ಜಿಲ್ಲೆಯ ವೃತ್ತಿರಂಗಭೂಮಿಯು ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡ, ಡಿ.ದುರ್ಗಾದಾಸ್, ಸುಭದ್ರಮ್ಮ ಮನ್ಸೂರ, ಸಿಡಗಿನಮೆಳೆ ಚಂದ್ರಶೇಖರಯ್ಯ, ಬೆಳಗಲ್ ವೀರಣ್ಣ ಮುಂತಾದ ಪ್ರತಿಭಾವಂತ ಕಲಾವಿದರ ಕಾರಣದಿಂದ, ಹೆಸರು ಪಡೆದಿದೆ. ಆದರೆ ಬಯಲಾಟಗಳಿಗೂ ಈ ವೃತ್ತಿರಂಗಭೂಮಿಗೂ ಅರ್ಥಪೂರ್ಣ ಕೊಡುಕೊಳೆ ನಡೆದಂತಿಲ್ಲ. ದುಡಿಮೆಯ ಏಕತಾನತೆ ಮುರಿಯಲೆಂದು ನಾಟಕಕಲೆಯನ್ನು ಯಾಂತ್ರಿಕವಾಗಿ ಮುಂದುವರೆಸುತ್ತಿರುವ ಹಳ್ಳಿ ಜನರಿಂದ ವೃತ್ತಿರಂಗಭೂಮಿಯ ಅಥವಾ ರಂಗಾಯಣ ನೀನಾಸಂಗಳ ಕಲಾತ್ಮಕ ಶಿಸ್ತನ್ನು ನಿರೀಕ್ಷಿಸಲಾಗದು, ನಿಜ. ಆದರೆ ಶಿವರಾಮ ಕಾರಂತರಂತಹ ಆಧುನಿಕ ಪ್ರಜ್ಞೆಯ ಪ್ರಯೋಗಶೀಲ ಕಲಾವಿದನ ಸಹವಾಸ ಸಿಕ್ಕರೆ, ಇವುಗಳ ದೇಹದಲ್ಲೂ ಹೊಸ ಜೀವ ಆಡಬಹುದು. ಯಾಕೆಂದರೆ, ವೃತ್ತಿರಂಗಭೂಮಿಯ ತಮ್ಮ ಜ್ಞಾನ ಮತ್ತು ಅನುಭವವನ್ನು ಧಾರೆಹೊಯ್ದು, ನಷ್ಟಾವಸ್ಥೆಯಲ್ಲಿದ್ದ ತೊಗಲುಬೊಂಬೆ ಆಟವನ್ನು ಜಗತ್ತಿನಾದ್ಯಂತ ಒಯ್ದು ತೋರಿಸುವಂತೆ ಬೆಳೆಸಿದ ಬೆಳಗಲ್ ವೀರಣ್ಣನವರ ನಿದರ್ಶನ, ಕಣ್ಮುಂದೆಯೇ ಇದೆ.

ಸೋಮವಾರ, ಆಗಸ್ಟ್ 12, 2013

ಸಮುದಾಯ ಕಾಲೇಜುಗಳಲ್ಲಿ ಗ್ರಾಮೀಣ ಕಸಬುಗಳಿಗೆ ಜೀವ ಬರಲಿ



- ಅರುಣ್ ಜೋಳದಕೂಡ್ಲಿಗಿ
 
ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ವಿದಾಯ ಹೇಳಿ ಪರ್ಯಾಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ (ಎಂ.ಎಚ್.ಆರ್.ಡಿ) ಮುಂದಾಗಿರುವುದು ಸ್ವಾಗತಾರ್ಹ. ಇನ್ನು ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಹೇರ್‌ಕಟಿಂಗ್ ಮುಂತಾದ ಕೋರ್ಸುಗಳು ಶುರುವಾಗುವುದಾಗಿಯೂ ವರದಿಯಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಅಳವಡಿಸುವ ಬಗ್ಗೆ ಪೂರ್ವಭಾವಿಯಾಗಿ ಕೆಲವು ಚರ್ಚೆಗಳು ನಡೆಯಬೇಕಾಗಿದೆ. ಇದನ್ನು ರಾಜ್ಯದ ಆಯಾ ಪ್ರಾದೇಶಿಕ ನೆಲೆಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ.
naaru-udyama 

ಸಮುದಾಯ ಕಾಲೇಜುಗಳಲ್ಲಿ ಜನಪದ ಕಸಬುಗಳಿಗೆ ಮರುಜೀವ ನೀಡುವಂತಾಗಬೇಕು. ಹಾಗೆಯೇ ಒಂದು ಕಸಬು ಪಾರಂಪರಿಕವಾಗಿ ಮುಂದುವರೆಸಿಕೊಂಡು ಬಂದ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದಿರುವಲ್ಲಿಯೂ ಎಚ್ಚರ ವಹಿಸಬೇಕಿದೆ. ಇಲ್ಲವೆಂದರೆ ಆಯಾ ಕಸುಬುಗಳ ನೆಲೆಯಲ್ಲಿ ಜಾತಿ ಪ್ರಜ್ಞೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗುತ್ತದೆ. ಇದು ಸರಕಾರವೇ ಜಾತಿ ತರತಮವನ್ನು ಬಲಪಡಿಸಲು ಮುಂದಾದಂತಾಗುತ್ತದೆ. ಅಥವಾ ಆಯಾ ಸಮುದಾಯವನ್ನು ಒಂದೇ ಕಸುಬಿಗೆ ಕಟ್ಟಿಹಾಕಿದಂತೆಯೂ ಆಗುತ್ತದೆ. ಹಾಗಾಗಿ ಸಮುದಾಯ ಕಾಲೇಜುಗಳನ್ನು ರಾಜ್ಯ ಸರಕಾರ ತುಂಬಾ ಎಚ್ಚರದಿಂದ ಕರ್ನಾಟಕದ ಸಂದರ್ಭಕ್ಕೆ ಅಗತ್ಯ ಬದಲಾವಣೆಯೊಂದಿಗೆ ಮರು ರೂಪಿಸಬೇಕಾಗಿದೆ.

ಮುಖ್ಯವಾಗಿ ಸಮುದಾಯ ಕಾಲೇಜುಗಳನ್ನು ಪ್ರಾದೇಶಿಕ ವೈಶಿಷ್ಟ್ಯ ಮತ್ತು ಅಗತ್ಯಗಳನ್ನು ಆಧರಿಸಿ ಅಭಿವೃದ್ಧಿಪಡಿಸಬೇಕಿದೆ. ಕಾರಣ ಪ್ರಾದೇಶಿಕವಾಗಿ ಆಯಾ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಫುಲ ಅವಕಾಶಗಳಿವೆ. ಕಿನ್ನಾಳ ಮತ್ತು ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಯಾಗಿದೆ, ಹಾಗಾಗಿ ಕೊಪ್ಪಳ ಮತ್ತು ಚನ್ನಪಟ್ಟಣಗಳಲ್ಲಿ ಈ ಕಲೆಯನ್ನು 
ಆಧರಿಸಿಯೇ ಸಮುದಾಯ ಕಾಲೇಜನ್ನು ಸ್ಥಾಪಿಸಬಹುದು.

 channapatna-toys 

   ಚಳ್ಳಕೆರೆ, ಬಳ್ಳಾರಿ, ಹಿರಿಯೂರು ಮುಂತಾದ ಕಡೆ ಕಂಬಳಿ ನೇಯುವಿಕೆ ಇದೆ. ಉತ್ತರ ಭಾರತದಿಂದ ಕಂಬಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಚಳ್ಳಕೆರೆಯಲ್ಲಿ ನಡೆಯುವ ಕಂಬಳಿ ಸಂತೆಯಲ್ಲಿ ಪ್ರತಿವಾರವೂ ಲಕ್ಷಾಂತರ ರೂಗಳ ವಹಿವಾಟು ಇದೆ. ಹೀಗಾಗಿ ಈ ಭಾಗದಲ್ಲಿ ಕಂಬಳಿ ನೇಯ್ಗೆಯ ತರಬೇತಿಯನ್ನು ಕೊಡುವ ಸಮುದಾಯ ಕಾಲೇಜುಗಳನ್ನು ನಿರ್ಮಿಸಬಹುದಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕತ್ತಾಳೆಯನ್ನು ಬಳಸಿ ನಾರು ಮಾಡುವಲ್ಲಿ ಲಂಬಾಣಿ ತಾಂಡಗಳು ಕ್ರಿಯಾಶೀಲವಾಗಿದೆ. ಈ ಉದ್ದಿಮೆಯನ್ನು ಆಧರಿಸಿ ಈ ಭಾಗದ ಹೊಲದ ಬದುವುಗಳಲ್ಲಿ ದೊಡ್ಡಮಟ್ಟದಲ್ಲಿ ಕತ್ತಾಳೆ ಬೆಳೆಯುತ್ತಾರೆ. ಇಂತಹ ಕಡೆ ಕತ್ತಾಳೆ ನಾರನ್ನು ಮಾಡುವ ಕಲೆಯನ್ನು ಆಧರಿಸಿ ಕೋರ್ಸುಗಳನ್ನು ತೆರೆಯುವ ಅಗತ್ಯವಿದೆ. ಅಂತೆಯೇ ತುಮಕೂರು, ತಿಪಟೂರು ಮುಂತಾದ ಕಡೆ ತೆಂಗು ಬೆಳೆ ಹೆಚ್ಚಾಗಿದೆ. ಇಂತಹ ಕಡೆಗಳಲ್ಲಿ ತೆಂಗನ್ನು ಆಧರಿಸಿದ ಉಪ ಉತ್ಪನ್ನಗಳನ್ನು ತಯಾರಿಸುವ ತರಬೇತಿ ಕೋರ್ಸನ್ನು ಈ ಭಾಗದ ಸಮುದಾಯ ಕಾಲೇಜುಗಳಲ್ಲಿ ಅಭಿವೃದ್ಧಿ ಪಡಿಸಬಹುದಾಗಿದೆ. ಹೀಗೆ ಕರ್ನಾಟಕದ ಆಯಾ ಪ್ರಾದೇಶಿಕ ಉತ್ಪನ್ನಗಳನ್ನು ಆಧರಿಸಿ ಕೋರ್ಸಗಳನ್ನು ಆರಂಭಿಸುವುದು ಸೂಕ್ತವಾಗಿದೆ.

ಇನ್ನು ಸಿವಿಲ್ ಎಂಜಿನೀಯರಿಂಗ್ ಪದವೀಧರರನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಲಕ್ಷಾಂತರ ಜನ ಮನೆಕಟ್ಟುವ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಅನಕ್ಷರಸ್ತರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಆಧರಿಸಿ ಕಟ್ಟಡ ನಿರ್ಮಾಣದ ಕೋರ್ಸನ್ನು ತೆರೆಯುವ ಅಗತ್ಯವಿದೆ. ಅಂತೆಯೇ ಪ್ರಾದೇಶಿಕವಾಗಿ ಕೃಷಿಯ ಭಿನ್ನ ಪ್ರಯೋಗಗಳು ಆಯಾ ಭಾಗದಲ್ಲಿವೆ. ಈ ವೈಶಿಷ್ಟಗಳೂ ಕೂಡ ಕೋರ್ಸಗಳನ್ನು ರೂಪಿಸುವಂತಾಗಬೇಕು. ಇಂದು ಸಾಂಪ್ರಾದಾಯಿಕ ಕೃಷಿಯ ಜತೆ ಆಧುನಿಕ ಕೃಷಿಯ ಪ್ರಯೋಗಗಳು ನಡೆಯುತ್ತಿವೆ. ಹಾಗಾಗಿ ಇಂತಹ ಆಧುನಿಕ ಕೃಷಿಗೆ ಸಂಬಂಧಿಸಿದಂತೆ ಗ್ರಾಮೀಣ ಯುವಕರಿಗೆ ಅನುಕೂಲವಾಗುವ ಕೋರ್ಸುಗಳನ್ನು ಆರಂಭಿಸಬೇಕಿದೆ. ಅದರಲ್ಲಿ ಮುಖ್ಯವಾಗಿ ಕೋಳಿ, ಕುರಿ, ಹಂದಿ, ಜಾನುವಾರು ಸಾಕಣೆಯನ್ನು ಆಧರಿಸಿದ ತರಬೇತಿಗಳನ್ನು ಆರಂಭಿಸಬಹುದು.

ಕೃಷಿಯ ಬೆಳೆಗಳನ್ನು ಬಳಸಿಕೊಂಡು ಉಪ ಉತ್ಪನ್ನಗಳನ್ನು ಮಾಡುವ ನೆಲೆಯಲ್ಲಿ ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ತರಬೇತಿ ನೀಡುವಂತಹ ಕೋರ್ಸಗಳನ್ನು ಮಾಡಬಹುದಾಗಿದೆ. ಉದಾ: ಉತ್ತರ ಕರ್ನಾಟಕ ಮತ್ತು ಹೈದರಬಾದ್ ಕರ್ನಾಟಕದಲ್ಲಿ ಮುಸುಕಿನ ಜೋಳದ ಬೆಳೆ ಪ್ರಮಾಣ ಹೆಚ್ಚಾಗಿದೆ. ಈ ಮುಸುಕಿನ ಜೋಳವನ್ನು ಬಳಸಿಕೊಂಡಿ ಹಳ್ಳಿಗಳಲ್ಲಿಯೇ ಉಪ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಆರಂಭಿಸುವ ಅಗತ್ಯವಿದೆ. ಹತ್ತಿ, ಸೂರ್ಯಕಾಂತಿ, ಶೇಂಗ ಮುಂತಾದ ಬೆಳೆಗಳ ಉಪ ಉತ್ಪನ್ನಗಳನ್ನು ತಯಾರಿಸುವ ಕೋರ್ಸುಗಳನ್ನು ಆರಂಭಿಸಬಹುದು. ಇದರಿಂದಾಗಿ ಗ್ರಾಮೀಣ ಯುವ ಜನತೆಗೆ ದೊಡ್ಡಮಟ್ಟದಲ್ಲಿ ಉದ್ಯೋಗ ನಿರ್ಮಿಸಿದಂತಾಗುತ್ತದೆ.
 construction-workers 

ಹಳ್ಳಿಗಳು ಇಂದು ವೃದ್ಧರ ತಾಣಗಳಾಗಿವೆ. ಅದೇ ಹೊತ್ತಿಗೆ ನಗರಗಳು ಯುವಕ ಯುವತಿಯರ ಆಕರ್ಷಕ ಕೇಂದ್ರಗಳಾಗಿವೆ. ಇದಕ್ಕೆ ಕಾರಣ ಯುವ ಜನಾಂಗ ಹಳ್ಳಿಗಳಲ್ಲಿ ತಮ್ಮನ್ನು ತಾವು ತೆರೆದುಕೊಳ್ಳಲು ಬೇಕಾದ ಉದ್ಯೋಗಗಳ ಕೊರತೆ ಇರುವುದು. ಸಮುದಾಯ ಕಾಲೇಜುಗಳ ಮೂಲಕ ಹಳ್ಳಿಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸಾದ್ಯವಾದರೆ ಗ್ರಾಮೀಣ ಭಾಗದಲ್ಲಿ ಯುವ ಸಮುದಾಯವನ್ನು ಉಳಿಸಿಕೊಳ್ಳುವ ಆಕರ್ಷಣೆಯನ್ನು ಹೆಚ್ಚಿಸಬಹುದಾಗಿದೆ. ಈ ಕೋರ್ಸುಗಳಿಗೆ ವಿದ್ಯಾರ್ಹತೆಯ ವಿಷಯದಲ್ಲಿ ಕೆಲವು ವಿನಾಯಿತಿಗಳು ಬೇಕಾಗುತ್ತದೆ. ಅರೆ ವಿದ್ಯಾವ0ತ ಮತ್ತು ಅನಕ್ಷರಸ್ತ ಯುವ ಸಮುದಾಯವನ್ನು ಒಳಗೊಳ್ಳುವ ಹಾಗೆ ವಿದ್ಯಾರ್ಹತೆಗಳಲ್ಲಿ ಸಡಿಲ ನಿಲುವಿರಬೇಕು. ಕೌಶಲ್ಯವನ್ನು ಆಧರಿಸಿಯೂ ವಿದ್ಯಾರ್ಹತೆಯನ್ನು ನಿಗದಿಪಡಿಸುವಂತಾಗಬೇಕು. ಇನ್ನು ಇಂತಹ ಎಲ್ಲಾ ಕೋರ್ಸುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಬೇಕು. ಅಂತೆಯೇ ಲೈಂಗಿಕ ಅಲ್ಪಸಂಖ್ಯಾತರನ್ನೂ, ದೇವದಾಸಿಯರನ್ನೂ ಒಳಗೊಂಡಂತೆ ಧ್ವನಿ ಇಲ್ಲದ ಅಂಚಿನ ಸಮುದಾಯಗಳಿಗೆ ಆಧ್ಯತೆ ಕೊಡಬೇಕಿದೆ.

ಮುಖ್ಯವಾಗಿ ಈ ಕೋರ್ಸಗಳನ್ನು ಮುಗಿಸಿಕೊಂಡು ಹೊರ ಹೋದಾಗ ಸ್ವತಃ ಉದ್ಯೋಗ ಸೃಷ್ಟಿಸಿಕೊಳ್ಳಲು ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕಿದೆ. ಇಂತಹ ಸಮರ್ಪಕ ಯೋಜನೆಗಳಿರದೆ ಈ ಕೋರ್ಸುಗಳಿಗೆ ಯುವ ಸಮುದಾಯವನ್ನು ಸೆಳೆಯುವುದು ಸರಿಯಾಗಲಾರದು. ಕಾರಣ ಹೊಸ ನಿರುದ್ಯೋಗಿಗಳನ್ನು ಸೃಷ್ಟಿಸಿದಂತಾಗುತ್ತದೆ. ಈ ನೆಲೆಯಲ್ಲಿ ಸಮುದಾಯ ಕಾಲೇಜುಗಳಲ್ಲಿ ಆರಂಭಿಸುವ ಯಾವುದೇ ಕೋರ್ಸುಗಳಲ್ಲಿ ತರಬೇತಿ ಪಡೆದವರು ಮುಂದೆ ಜೀವನ ನಿರ್ವಹಣೆಗೆ ಇದು ಹೇಗೆ ನೆರವಾಗಬಹುದು ಎನ್ನುವ ಬಗ್ಗೆ ಖಚಿತತೆ ಮತ್ತು ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಿದೆ.

ಸೋಮವಾರ, ಆಗಸ್ಟ್ 5, 2013

ಸಾಂಸ್ಕೃತಿಕ ಯಜಮಾನಿಕೆಗೆ ತಡೆ ಹೇಗೆ ?






ಸೌಜನ್ಯ: ಪ್ರಜಾವಾಣಿ

    ಕೆಲವು ವರ್ಷಗಳ ಹಿಂದೆ ಇತಿಹಾಸ ವಿಭಾಗದ ಪ್ರವೇಶ ಪರೀಕ್ಷೆಯಲ್ಲಿ ಸರಳವಾದ ಪ್ರಶ್ನೆಯೊಂದನ್ನು ಕೇಳಲಾಗಿತ್ತು. `ಭಾರತೀಯ ಸಂಸ್ಕೃತಿಗೆ ಮುಸಲ್ಮಾನರ ಕೊಡುಗೆಯೇನು?' ಐದು ಸಾಲುಗಳಲ್ಲಿ ಉತ್ತರವನ್ನು ಬರೆಯಲು ಸೂಚಿಸಲಾಗಿತ್ತು. ಸುಮಾರು ಮುನ್ನೂರು ವಿದ್ಯಾರ್ಥಿಗಳು ಉತ್ತರಿಸಿದ್ದರು. ಮೊದಲ ಸಾಲಿನಲ್ಲಿ ಎಲ್ಲರೂ ಒಂದೇ ಉತ್ತರವನ್ನು ನೀಡಿದ್ದರು. ಮುಸ್ಲಿಂ ಆಕ್ರಮಣಕಾರರು ದೇವಾಲಯಗಳನ್ನು ನಾಶಮಾಡಿದರು. ಎರಡು ಮೂರನೆಯ ಸಾಲಿನ ಉತ್ತರಗಳು ಬಹುತೇಕ ಒಂದೇ ಆಗಿದ್ದವು.

ಭಾರತದಲ್ಲಿ ಸತಿ ಸಹಗಮನ ಪದ್ಧತಿ ಮತ್ತು ಬುರ್ಖಾ ಪದ್ಧತಿಗಳು ಆರಂಭವಾದವು. ಉಳಿದೆರಡು ಉತ್ತರಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳಿದ್ದವಷ್ಟೆ. ಮುಸ್ಲಿಂ ಕೊಡುಗೆಯಾಗಿ ಒಳ್ಳೆಯದೇನನ್ನೂ ಬರೆದಿರಲಿಲ್ಲ. ಹದಿನೇಳು ವರ್ಷಗಳ ಚರಿತ್ರೆಯ ಓದಿನ ನಂತರ ಭಾರತದಲ್ಲಿ ವಿದ್ಯಾರ್ಥಿಯೊಬ್ಬ ಇಂತಹ ಉತ್ತರವನ್ನು ಬರೆಯಬಲ್ಲನಾದರೆ ನಮ್ಮ ಶಿಕ್ಷಣ ನೀತಿ ಹಾಗೂ ಆ ಮೂಲಕ ನಾವು ಕಲಿಸಲು ಹೊರಟ ಸಂಸ್ಕೃತಿಯ ಬಗ್ಗೆ ಪ್ರಶ್ನಿಸಿಕೊಳ್ಳಬೇಕೆನಿಸಿತು.

ಮುಸಲ್ಮಾನರ ಆಳ್ವಿಕೆಯಿಂದಾಗಿ ಭಾರತದಲ್ಲಿ ವಾಸ್ತುಶಿಲ್ಪದ ಕ್ರಾಂತಿಯೇ ಸಂಭವಿಸಿತ್ತು. ಭಾರತದಲ್ಲಿ ಆರಂಭವಾದ ಸಿತಾರ್ ವಾದನವನ್ನಾಗಲೀ, ಸೂಫೀ ಸಾಹಿತ್ಯವನ್ನಾಗಲೀ, ಕಡೆಗೆ ಬಿರ್ಯಾನಿಯಂತಹ ಅಡುಗೆಯನ್ನಾಗಲೀ ಮೆಚ್ಚುವುದನ್ನು ಕಲಿಸಿಲ್ಲ. ಇದನ್ನೆಲ್ಲಾ ಗಮನಿಸುವಾಗ ಕರ್ನಾಟಕ ಸರ್ಕಾರ `ಸಾಂಸ್ಕೃತಿಕ ನೀತಿ'ಯೊಂದನ್ನು ನಿರೂಪಿಸಿಲು ಹೊರಟ ವಿಚಾರ ಗಾಬರಿಯನ್ನು ಹುಟ್ಟಿಸಿತು. ಕಳೆದೆರಡು ಶತಮಾನಗಳಲ್ಲಿ `ಸಂಸ್ಕೃತಿ'ಯ ಕಲ್ಪನೆಯೇ ಅರಿವಳಿಕೆಯಾಗಿ ಕೆಲಸಮಾಡಿದೆ.

ಹೊರನೋಟಕ್ಕೆ `ಸಾಂಸ್ಕೃತಿಕ ನೀತಿ'ಯ ಹರಹು ಅಕಾಡೆಮಿಗಳಿಗೆ ಹಣ ಮಂಜೂರು ಮಾಡುವುದು, ಸಮರ್ಥರಾದವರಿಗೆ ಜವಾಬ್ದಾರಿಯನ್ನು ನೀಡುವುದು ಅದರಲ್ಲೂ ಎಲ್ಲಾ ಸಮುದಾಯಗಳಿಗೆ ಅವಕಾಶವಿರುವಂತೆ ನೋಡಿಕೊಳ್ಳುವುದು. ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಶಿಲ್ಪ ಇವುಗಳ ಪ್ರೋತ್ಸಾಹಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುವುದು, ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸುವುದು- ಇವು ಸಂಸ್ಕೃತಿ ನೀತಿಯ ರೂಪುರೇಷೆಗಳಾಗಿ ಕಾಣಿಸುತ್ತವೆ.

ಇದು `ಸಂಸ್ಕೃತಿ ನೀತಿ'ಯ ಒಂದು ಭಾಗ ಮಾತ್ರ. ಇದರಲ್ಲೂ ಗುರುತರವಾದ ಜವಾಬ್ದಾರಿಗಳಿವೆ. ಯಾವ ಸಾಹಿತ್ಯಕ್ಕೆ ಮನ್ನಣೆ ಸಿಗುತ್ತದೆಂಬುದಾಗಲೀ, ಜನಪದ ಹಾಡುಗಾರರನ್ನು ಗುರುತಿಸಿ ಮನ್ನಿಸುವುದಾಗಲೀ ಸರ್ಕಾರದ ನಿಲುವುಗಳಾಗಬಲ್ಲವು. ಭಾಷಾ ನೀತಿಗಳು ಕನ್ನಡವಲ್ಲದೆ ಉರ್ದು, ತುಳು, ಕೊಡವ ಭಾಷೆಗಳಿಗೆ ಅಕಾಡೆಮಿಗಳನ್ನು ತೆರೆದು ತನ್ನ ಉದಾರನೀತಿಯನ್ನು ಈವರೆಗೆ ತೋರಿಸುತ್ತಾ ಬಂದಿವೆ. ಸಂಸ್ಕೃತಿ ನೀತಿಯ ಆಳ ಅಗಲವನ್ನು ಸ್ವಲ್ಪಮಟ್ಟಿಗಾದರೂ ಪರಿಶೀಲಿಸುವುದು ಇಲ್ಲಿ ನನ್ನ ಪ್ರಯತ್ನ.
  ಭಾರತದ ರಾಷ್ಟ್ರೀಯ ಹೋರಾಟದ ಹೊತ್ತಿನಲ್ಲಿ `ಸಾಂಸ್ಕೃತಿಕ ಏಕತೆ'ಯ ಹೆಸರಿನಲ್ಲಿ ಕಂಡ ಕಲ್ಪನೆ ಮತ್ತು ಅದಕ್ಕಾಗಿ ತೆತ್ತ ಬೆಲೆ ಬಹಳ ದೊಡ್ಡದು.  ಸಂಸ್ಕೃತಿ ವಿಚಾರವನ್ನು ಮುಟ್ಟುವುದು ಎರಡು  ಅಲಗಿನ ಕತ್ತಿಯನ್ನು ಹಿಡಿದಂತೆ. ಭಾರತವನ್ನಾಳಿದ ಬ್ರಿಟಿಷರಿಗೂ ಇದರ ಅನುಭವವಾಗಿತ್ತು.

ಅವರು ಭಾರತದಲ್ಲಿ ಜಾರಿಗೆ ತಂದ ಸತಿ ವಿರೋಧಿ ಕಾಯಿದೆ, ವಿವಾಹ ಕಾಯಿದೆ, ಮತಾಂತರಕ್ಕೆ ಪರವಾದ ಕಾಯಿದೆಗಳು 1857ರ ದಂಗೆಗೆ ಕಾರಣವಾಯಿತೆಂದು ಅವರು ಗ್ರಹಿಸಿದ್ದರು. ಹಾಗಾಗಿ 1858ರಲ್ಲಿ ಭಾರತೀಯ ರಾಜರನ್ನು ಸೋಲಿಸಿದ ಬ್ರಿಟಿಷರು ಭಾರತವನ್ನು ಬ್ರಿಟಿಷ್ ಸಾಮ್ರೋಜ್ಯದ ಭಾಗವೆಂದರು.

ಇನ್ನು ಮುಂದೆ ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳಲ್ಲಿ ಬ್ರಿಟಿಷರು ತಲೆ ಹಾಕುವುದಿಲ್ಲವೆಂದು ರಾಣಿಯ ಘೋಷಣೆಯಲ್ಲಿ ತಿಳಿಸಿದರು. ಭಾಷೆಗಳನ್ನು ಆಳವಾಗಿ ಅಧ್ಯಯನ ಮಾಡಿದರು, ಜಾತಿ ಉಪಜಾತಿಗಳ ಪಟ್ಟಿ ಮಾಡಿದರು. ವಾಸ್ತವದಲ್ಲಿ ಭಾರತದ ಧರ್ಮ, ಸಂಸ್ಕೃತಿಯ ವಿಚಾರಗಳನ್ನು ಸೊಗಸಾಗಿ ಆಡಳಿತದ ಅನುಕೂಲಕ್ಕೆ ಬಳಸಿಕೊಂಡರು. ಒಡೆದು ಆಳುವ ನೀತಿಗೆ ಅಡಿಪಾಯ ಮಾಡಿಕೊಂಡರು.

ಇಂದು `ಸಂಸ್ಕೃತಿ' ಎಂಬ ಪದ ವಿಪರೀತ ಅರ್ಥವನ್ನು ಪಡೆದುಕೊಂಡಿದೆ. ಸೀರೆ ಉಡುವುದು ಭಾರತೀಯ ಸಂಸ್ಕೃತಿ, ಪಾಪ್ ಸಂಗೀತ ಪಾಶ್ಚಿಮಾತ್ಯ ಸಂಸ್ಕೃತಿ, ಭಾರತೀಯ ಸಂಸ್ಕೃತಿಯಲ್ಲಿ ಗಂಡ ಸತ್ತಾಗ ಹೆಂಡತಿಯನ್ನು ಚಿತೆಗೇರಿಸುತ್ತಿದ್ದರು, ಇಸ್ಲಾಂ ಸಂಸ್ಕೃತಿ ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ. ಹೀಗೆ ರೂಢಿ, ಆಚರಣೆ, ಕಲೆ, ಸಾಹಿತ್ಯ, ಸಂಗೀತ ಒಟ್ಟಾರೆ ಬದುಕನ್ನೇ ಸಂಸ್ಕೃತಿ ಪದದಲ್ಲಿ ಹಿಡಿದಿಡಲಾಗುತ್ತಿದೆ.

ವಿಶ್ವವಿದ್ಯಾಲಯದ ಸಂಶೋಧನೆಗಳು ಸಂಸ್ಕೃತಿ ಪದದ ಸುತ್ತ ಗಿರಕಿ ಹೊಡೆಯುತ್ತಿವೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಶಾಸನ ಸಂಸ್ಕೃತಿ, ಮಳೆ ಸಂಸ್ಕೃತಿ, ಕೃಷಿ ಸಂಸ್ಕೃತಿ, ಬೇಟೆ ಸಂಸ್ಕೃತಿ, ಜಲ ಸಂಸ್ಕೃತಿ, ಮಾಲ್ ಸಂಸ್ಕೃತಿ... ಪಟ್ಟಿ ಬೆಳೆಯುತ್ತದೆ. ರಾಜಕಾರಣಿಗಳು ಭಾಷಣ ಮಾಡುವಾಗ ಪದಗಳ ಕೊರತೆಯಾದರೆ `ಸಂಸ್ಕೃತಿ' ಪದವನ್ನು ಧಾರಾಳವಾಗಿ ಬಳಸುತ್ತಿರುತ್ತಾರೆ.

  `ಸಂಸ್ಕೃತಿ' ಪದವನ್ನು ಇಂಗ್ಲಿಷ್‌ನ `ಕಲ್ಚರ್' ಪದಕ್ಕೆ ಸಂವಾದಿಯಾಗಿ ಬಳಸುತ್ತಿದ್ದೇವೆ. ಕಲ್ಚರ್ ಪದವೂ ಹದಿನೆಂಟನೇ ಶತಮಾನದಷ್ಟು ಈಚಿನದೇ; ಅಗ್ರಿಕಲ್ಚರ್ ಪದದ ಭಾಗವಾಗಿದ್ದು ಆ ನಂತರ ಸ್ವತಂತ್ರವಾಗಿ ಬಳಕೆಯಾಗತೊಡಗಿತು. ಒಂದು ಬಾರಿ ಚಲಾವಣೆಗೆ ಬಂದ ನಂತರ ಇಂಗ್ಲಿಷ್‌ನ್ಲ್ಲಲೂ ಅರ್ಥ ಹಿಗ್ಗುತ್ತಲೇ ಹೋಯಿತು. ಮಹಾಯುದ್ಧಗಳ ಕಾಲದಲ್ಲಿ ಬಂದ ಹೊಸ ಸರ್ಕಾರಗಳು ಜನರ ಆಲೋಚನಾ ಕ್ರಮವನ್ನೇ ಬದಲಿಸಹೊರಟವು.

ಹಿಂದೆಂದಿಗಿಂತ ಭಿನ್ನವಾಗಿ ಬದುಕಬೇಕೆಂಬುದು ಅವರ ಉದ್ದೇಶವಾಗಿದ್ದರಿಂದ ಮೂಲಭೂತ ನಂಬಿಕೆಗಳನ್ನೇ ಬದಲಿಸುವ ನಿಟ್ಟಿನಲ್ಲಿ ಅಡಿಯಿಟ್ಟರು. ಬಹಿರಂಗವಾಗಿ ಸಾಂಸ್ಕೃತಿಕ ನೀತಿಯೆಂದು ಕರೆದುಕೊಳ್ಳದಿದ್ದರೂ ಕಾನೂನುಗಳ ಮೂಲಕ ತಾವು ಬಯಸಿದ ವಿಚಾರಗಳನ್ನು ಆಚರಣೆಗೆ ತರಲು ಹಿಂದೆ ಬೀಳಲಿಲ್ಲ. ಆವರೆಗೆ ಕಲ್ಪನೆಯಲ್ಲೇ ಇಲ್ಲದ ಹೊಸ ರಾಷ್ಟ್ರೀಯ ಸಂಕೇತಗಳನ್ನು ರಾಷ್ಟ್ರಧ್ವಜ, ರಾಷ್ಟ್ರಗೀತೆ ಇತ್ಯಾದಿಗಳನ್ನು ಅಳವಡಿಸಿದರು.

ಇದು ಮಾರಕಾಸ್ತ್ರವಾಗಿ ಬಳಕೆಯಾಗಿದ್ದು ಜರ್ಮನಿಯಲ್ಲಿ, ಅದು ಹಿಟ್ಲರ್‌ನ ಕಾಲಕ್ಕೆ. ಜರ್ಮನಿ, ಇಟಲಿ, ಕಡೆಗೆ ಜಪಾನ್ ಕೂಡ ತನ್ನ ಸರ್ವಾಧಿಕಾರಿ ನೀತಿಗೆ ತಕ್ಕ ಪಠ್ಯಕ್ರಮವನ್ನೇ ರೂಪಿಸಿಕೊಂಡಿದ್ದವು. ಯುದ್ಧಾ ನಂತರದಲ್ಲಿ ಯುದ್ಧ ವಿರೋಧಿ ನೀತಿಯನ್ನು ತನ್ನ ಸಂಸ್ಕೃತಿಯಾಗಿ ರೂಪಿಸಿಕೊಳ್ಳಲು ಪಠ್ಯ ಕ್ರಮವನ್ನು ಬದಲಾಯಿಸಿಕೊಂಡ ಮೊದಲ ದೇಶ ಜಪಾನ್.

ಭಾರತ ಮಾತ್ರವಲ್ಲದೆ ಜಗತ್ತಿನ ಯಾವುದೇ ದೇಶದಲ್ಲಿ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ತಾವು ನಂಬಿದ ಸಿದ್ಧಾಂತಕ್ಕೆ ತಕ್ಕ ನೀತಿಗಳನ್ನೇ ಜಾರಿಗೆ ತರುತ್ತವೆ. ಆರ್ಥಿಕ ನಿರ್ಣಯಗಳಾಗಲೀ ಶೈಕ್ಷಣಿಕ ನೀತಿಗಳಾಗಲೀ ಎಲ್ಲವೂ ಅಂತಿಮವಾಗಿ ಬದುಕನ್ನು ರೂಪಿಸುವುದೇ ಆಗಿರುವುದರಿಂದ `ಸಾಂಸ್ಕತಿಕ ನೀತಿ' ಆ ಎಲ್ಲದರಲ್ಲೂ ಅಂತರ್ಗತವಾಗಿರುತ್ತದೆ.

ಹಾಗಾಗಿಯೇ ಸರ್ಕಾರಗಳು ಬದಲಾದ ಕೂಡಲೇ ಪಠ್ಯಕ್ರಮಗಳು ಬದಲಾಗುತ್ತವೆ. ಅದರಲ್ಲೂ ಚರಿತ್ರೆ ಪಾಠಗಳ ಮೇಲೆ ಯಾವಾಗಲೂ ಕಣ್ಣು ಬೀಳುತ್ತದೆ. ಹತ್ತು ವರ್ಷಗಳ ಹಿಂದೆ ಭಾರತ ಸರ್ಕಾರ ಎನ್.ಸಿ.ಇ.ಆರ್.ಟಿ ಪಠ್ಯಗಳನ್ನು ಬದಲಾಯಿಸಿದ್ದಕ್ಕೆ ಜನರ ತೀವ್ರ ವಿರೋಧ ಎದುರಾಗಿದ್ದನ್ನು ನಾವಿಲ್ಲಿ ನೆನೆಯಬಹುದು.

ಯಾವುದೇ ರಾಜಕೀಯ ಪಕ್ಷದ ಪ್ರಣಾಳಿಕೆಯನ್ನು ಮೀರಿ ಭಾರತದ ಸಂಸ್ಕೃತಿ ನೀತಿಯನ್ನು ರೂಪಿಸುವುದು ಸಂವಿಧಾನ. ನೇರವಾಗಿ ಯಾವುದನ್ನೂ `ಸಂಸ್ಕೃತಿ ನೀತಿ' ಎಂದು ಸಂಬೋಧಿಸದಿದ್ದರೂ ಸಂವಿಧಾನದ ಮೊದಲ ಮಾತುಗಳಲ್ಲಿ ಹೇಳಿರುವ ಆದರ್ಶಗಳೇ ಅಡಿಪಾಯಗಳಾಗುತ್ತವೆ. ಪ್ರಜಾಪ್ರಭುತ್ವ, ಸಮಾಜವಾದಿ, ಜಾತ್ಯತೀತ ಈ ನೆಲೆಗಟ್ಟಿನ ಮೇಲೆ ನೀತಿಯನ್ನು ನಿರೂಪಿಸಿದಲ್ಲಿ ಯಾರೂ ಹೆದರಬೇಕಾದ ಅಗತ್ಯವಿರುವುದಿಲ್ಲ. ರಾಜ್ಯ ನಿರ್ದೇಶಕ ತತ್ವಗಳು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ.

ಇಷ್ಟೆಲ್ಲಾ ಇದ್ದೂ ಎಲ್ಲವನ್ನೂ ತಮ್ಮ ಹಿತಕ್ಕೆ ಬಳಸಿಕೊಳ್ಳಬಲ್ಲ ಶಕ್ತಿಗಳು ನಮ್ಮ ನಡುವೆ ಕೆಲಸ ಮಾಡುತ್ತಿರುವುದರಿಂದ ಗುಮಾನಿಯಿಂದ ನೋಡುವಂತಾಗಿದೆ. ಧಾರ್ಮಿಕ ಸಂಸ್ಥೆಗಳು, ರಾಜಕೀಯ ಶಕ್ತಿಗಳು, ಮಾರುಕಟ್ಟೆ ಒಡೆಯರು, ಬಹುರಾಷ್ಟ್ರೀಯ ಕಂಪೆನಿಗಳು, ಬಲಿಷ್ಠ ದೇಶಗಳು ತಮ್ಮ ಸ್ವಾರ್ಥಕ್ಕಾಗಿ ಜನರ ಬದುಕುಗಳನ್ನು ಅಲುಗಾಡಿಸಬಲ್ಲವರಾಗಿರುತ್ತಾರೆ. ಯಾವಾಗ ಬೇಕಾದರೂ ಜನರನ್ನು ಮೂಢರನ್ನಾಗಿಸುತ್ತಾರೆ, ಮೂಢನಂಬಿಕೆಗಳನ್ನು ಹುಟ್ಟುಹಾಕುತ್ತಾರೆ. `ಸಂಸ್ಕೃತಿ'ಯನ್ನು ರಾಮರಸವಾಗಿ ಕುಡಿಸುತ್ತಾ ಬಂದಿದ್ದಾರೆ.

ಧರ್ಮಗಳು ಆಚರಣೆ, ನಂಬಿಕೆಗಳನ್ನು ರೂಪಿಸುತ್ತಾ ಅಥವಾ ನಿರ್ಬಂಧಿಸುತ್ತಾ ಬಂದಿವೆ. ಮಾನವನ ಬದುಕಿನಲ್ಲಿ ಹಿರಿದಾದ ಪಾತ್ರವನ್ನು ಹೊಂದಿವೆ. ಅದರ ಸುತ್ತಾ ಕಲೆ ವಾಸ್ತುಶಿಲ್ಪಗಳು ಬೆಳೆದಿವೆ. ಭಾರತದಂತಹ ಬಹು ಸಂಸ್ಕೃತಿಗಳನ್ನು ಹೊಂದಿರುವ ನಾಡಿನಲ್ಲಿ ಯಾವುದೇ ಒಂದು ಧರ್ಮಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲು ಸಾಧ್ಯವಿಲ್ಲ. ಶಿಷ್ಟ ಧರ್ಮಗಳ ಮುಂದೆ ಜನಪದ ಧರ್ಮಗಳು ಸಂಕೋಚದಲ್ಲಿ ಮುದುಡಿಕೊಳ್ಳುತ್ತವೆ. ಸಣ್ಣ ಪುಟ್ಟ ನಿರ್ಣಯಗಳಲ್ಲೂ ಧರ್ಮದ ಧ್ವನಿಗಳು ಬುಸುಗುಟ್ಟುತ್ತವೆ.

ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಯೋಜನೆಯನ್ನು ರೂಪಿಸುವಾಗ ಕೋಳಿಮೊಟ್ಟೆ ಕೊಡುವುದನ್ನು ವಿರೋಧಿಸಲು ಮಠಗಳು ಬೀದಿಗಿಳಿದವು. ಮೊಟ್ಟೆ ಬಯಸುವ ಬಹುಸಂಖ್ಯಾತ ಮಕ್ಕಳ ಬಾಯಿ ಮುಚ್ಚಿತು. ಮಕ್ಕಳ ಆಯ್ಕೆಯನ್ನೂ ಕೇಳಲಿಲ್ಲ. ಇಂತಹ ಕಡೆ ಪ್ರಜಾಪ್ರಭುತ್ವಕ್ಕಿಂತ ಸಾಂಸ್ಕೃತಿಕ ಯಜಮಾನಿಕೆ ವಹಿಸುವವರು, ನೀತಿ ನಿರೂಪಕರು ಧರ್ಮಾಧಿಕಾರಿಗಳಾಗುತ್ತಾರೆ.

ಸಂಸ್ಕೃತಿ ಹೆಸರಿನಲ್ಲಿ ದಿಗ್ಬಂಧನಗಳಿದ್ದರೆ ಅದರ ಹೇರಿಕೆ ಹೆಣ್ಣುಮಕ್ಕಳ ಮೇಲೆ ಹೆಚ್ಚಾಗಿರುತ್ತದೆ. ಅವರ ಉಡುಗೆ ತೊಡುಗೆ, ನಡೆನುಡಿ ಎಲ್ಲದರ ಮೇಲೆ ನಿಗಾ ಇಡಲಾಗುತ್ತದೆ. ಇದು ಮನೆಯ ಹಂತದಿಂದಲೇ ಆರಂಭವಾಗುತ್ತದೆ. ಅದರಲ್ಲೂ ಮಧ್ಯಮವರ್ಗದಲ್ಲಿ ಹೆಚ್ಚಾಗಿರುತ್ತದೆ. ಸೀರೆ ಉಟ್ಟು, ಹಣೆಗೆ ಕುಂಕುಮ ಹಚ್ಚಿ, ಉದ್ದವಾಗಿ ಜಡೆ ಹಾಕಿ...ಇಂತಹ ಮಾತುಗಳು ನಿರಂತರವಾಗಿ ನಮ್ಮ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ.

ಸಾಂಪ್ರದಾಯಿಕ ಉಡುಗೆಗಳು ನೋಡಲು ಹಿತವಾಗಿದ್ದರೂ ಕೆಲಸಕ್ಕೆ ತೊಡಕಾಗುತ್ತದೆ. ಅದರಲ್ಲೂ ಹೊಸ ಬದುಕಿನ ಕ್ರಮಕ್ಕೆ ಹೊಸ ಸವಾಲುಗಳಿಗೆ ಎದುರಾಗುತ್ತಿರುವ ಹೆಣ್ಣುಮಕ್ಕಳು ಅದಕ್ಕೆ ತಕ್ಕ ಉಡುಗೆಯನ್ನು ಬಯಸುತ್ತಾರೆ. ಜಗತ್ತಿನಾದ್ಯಂತ ಈ ಬದಲಾವಣೆ ಸಹಜವಾಗಿ ನಡೆದಿದೆ. ಪಾಶ್ಚಿಮಾತ್ಯರೂ ಇದರಿಂದ ಹೊರಗಿಲ್ಲ.

ಅವರ ಸಾಂಪ್ರದಾಯಿಕ ಉಡುಗೆಗಳಾದ ಉದ್ದನೆಯ ಗೌನ್‌ಗಳನ್ನು ಬಿಟ್ಟು ಹಗುರವಾದ ಬಟ್ಟೆಗಳನ್ನು ತೊಟ್ಟರು. ಹೊರ ಪ್ರಪಂಚದ ಬದಲಾವಣೆಯ ಜೊತೆಯೇ ಬದುಕುವ ಗಂಡಸರಲ್ಲಿ ಈ ಬದಲಾವಣೆ ಬೇಗನೆ ಸಾಧ್ಯವಾಗುತ್ತದೆ. ಅಂತಹ ತಿರುವುಗಳು ಹೆಣ್ಣಿನಲ್ಲಿ ಕಾಣಬೇಕಾದರೆ ಒಂದೆರಡು ಶತಮಾನವೇ ಬೇಕಾಗುತ್ತದೆ.

  ಎರಡು ವರ್ಷಗಳಿಂದ ಹೆಣ್ಣುಮಕ್ಕಳ `ವಸ್ತ್ರ ಸಂಹಿತೆ'ಯ ಚರ್ಚೆ ಆರಂಭವಾದುದರಿಂದ, ಕೆಲವು ಕಾಲೇಜುಗಳಲ್ಲಿ ದುಪ್ಪಟ ಹೊದ್ದುಬರುವುದನ್ನು ಕಡ್ಡಾಯಗೊಳಿಸಿರುವ ಈ ಹೊತ್ತಿನಲ್ಲಿ ಅನುಮಾನಗಳು ಕಾಡುತ್ತವೆ. ಟಿಸಿಎಚ್ ಹಾಗೂ ಬಿಎಡ್ ಓದುವ ಹೆಣ್ಣುಮಕ್ಕಳು ಸೀರೆಯನ್ನು ತೊಡುವುದು ಕಡ್ಡಾಯವಾಗುವುದು ಅಗತ್ಯವಾಗಿತ್ತೆ? ಪ್ರಶ್ನೆಗಳು ಎದ್ದಾಗ ಬರುವ ಉತ್ತರ ಮಾತ್ರ `ಅದು ನಮ್ಮ ಸಂಸ್ಕೃತಿ'. ಗಂಡು ಮಕ್ಕಳು ಪ್ಯಾಂಟ್‌ಷರ್ಟ್ ತೊಡುವುದನ್ನು ಭಾರತೀಯ ಸಂಸ್ಕೃತಿ ಎಂದು ಒಪ್ಪಿಕೊಂಡಿದ್ದೇವೆ.
ಮುಸ್ಲಿಂ ಹೆಣ್ಣುಮಕ್ಕಳು ಕಳೆದ ದಶಕಗಳಿಗಿಂತ ಈ ದಶಕದಲ್ಲಿ ಹೆಚ್ಚಾಗಿ ಬುರ್ಖಾ ತೊಡುತ್ತಿದ್ದಾರೆ. ಹೊರ ನೋಟಕ್ಕೆ ಧಾರ್ಮಿಕ ಮೂಲಭೂತವಾದ ಬಿಗಿಯಾದಂತೆ ಕಂಡುಬಂದರೂ ವಾಸ್ತವದಲ್ಲಿ ಅಂತಹ ಪರಿಸ್ಥಿತಿಯನ್ನು ಹುಟ್ಟುಹಾಕಿದವರು ಯಾರು ಎಂದೂ ಕೇಳಿಕೊಳ್ಳಬೇಕಾಗಿದೆ. ಇದರ ಹಿಂದೆ ನಿಂತ ಭಾರತದ `ಸಾಂಸ್ಕೃತಿಕ ನೀತಿ' ಜವಾಬು ನೀಡಬಲ್ಲದೆ? ರಸ್ತೆಗಳನ್ನು ವಿಸ್ತರಿಸುವಾಗ ಮೂವತ್ತು ನಲವತ್ತು ವರ್ಷಗಳ ಕಾಲ ಬೆಳೆದು ನಿಂತ ದೊಡ್ಡ ಮರಗಳನ್ನು ಮುಲಾಜಿಲ್ಲದೆ ಕಡಿದುಹಾಕುತ್ತೇವೆ.

ವರ್ಷ ಒಂದರಲ್ಲಿ ಕಟ್ಟಬಹುದಾದ ದೇಗುಲಗಳನ್ನು ಜೋಪಾನವಾಗಿ ಕಾಪಾಡುತ್ತೇವೆ. ಚಿಲಿಪಿಲಿಗುಟ್ಟುವ ಹಕ್ಕಿಗಳಿಗೆ ನೆಲೆಯಾಗಿ, ದಾರಿ ಹೋಕರಿಗೆ ನೆರಳು ನೀಡಿ ಕಾಪಾಡಿದ ಮರ ದೇವರಲ್ಲ ಅದನ್ನು ಉಳಿಸುವುದು ಇಂದು ನಮ್ಮ ಸಂಸ್ಕೃತಿಯಲ್ಲ. ಮರಗಳು ಕಾಡಿನಲ್ಲಿ ಇರಬೇಕಾದವು, ಕೆರೆಗಳು ಹಳ್ಳಿಯಲ್ಲಿ ಇರುವಂತಹವು, ಅಗಲವಾದ ರಸ್ತೆಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು ಇವು ನಗರ ಸಂಸ್ಕೃತಿ ಎಂದು ಅರ್ಥಮಾಡಿಕೊಳ್ಳುವಂತಾಗಿದೆ.

ಸೌಂದರ್ಯ ವರ್ಧಕಗಳನ್ನು ತಯಾರಿಸುವ ಕಂಪೆನಿಗಳು ನಮ್ಮ ಕಪ್ಪು ಚರ್ಮದ ದುರ್ಬಳಕೆ ಮಾಡಿಕೊಂಡು ಲಾಭ ಮಾಡುತ್ತವೆ. ಕಪ್ಪು ಚರ್ಮವನ್ನು ಹೀಗಳೆದು ಸದಾ ಕಾಲಕ್ಕೂ ಕೀಳು ಭಾವನೆಯಲ್ಲಿ ನರಳುವಂತೆ ಮಾಡಿವೆ. ಸೋಪ್, ಮುಖಕ್ಕೆ ಹಚ್ಚುವ ಕ್ರೀಮ್, ಪೇಸ್ಟ್, ತುಟಿಗೆ, ಕಣ್ಣಿಗೆ, ಕೆನ್ನೆಗೆ ಹಚ್ಚುವ ಬಣ್ಣಗಳು, ಬ್ರಷ್ ಇವೆಲ್ಲವನ್ನೂ ನಮ್ಮ ಬದುಕಿನ ಭಾಗವಾಗಿಸಲು ಹರಸಾಹಸ ಮಾಡಿ ಯಶಸ್ವಿಯಾಗಿವೆ.

ಇನ್ನು ಗಿಫ್ಟ್ ವಸ್ತುಗಳ ಮಾರಾಟಗಾರರು `ಫ್ರೆಂಡ್‌ಶಿಪ್ ಡೇ', `ಲವರ್ಸ್‌ ಡೇ', `ಮದರ್ಸ್‌ ಡೇ' ಹೀಗೆ ಹಲವು ಆಚರಣೆಗಳನ್ನು ಹುಟ್ಟು ಹಾಕುತ್ತವೆ. ದಿನಕ್ಕೊಂದು `ಡೇ' ಆಚರಿಸಿ ಮಾರುಕಟ್ಟೆಗಳು ಬೆಳೆಯಲು ಸಹಕರಿಸುತ್ತಿದ್ದೇವೆ. ಮಾಲ್ ಸಂಸ್ಕೃತಿಯಂತೂ ಮಾಲ್ ಎಂಬ ಸಂತೆಯನ್ನೇ ಬದುಕಾಗಿಸಿಕೊಳ್ಳುವಂತೆ ಯೋಜನೆಯನ್ನು ರೂಪಿಸುತ್ತಿದೆ. ಈ ಎಲ್ಲದಕ್ಕೆ ಪೂರಕವಾಗಿ ಕೆಲಸ ಮಾಡುವ ಪ್ರಬಲ ಮಾಧ್ಯಮ ಟಿ.ವಿ. ಜನರ ಮುಗ್ಧತೆಯನ್ನೇ ಬಂಡವಾಳವಾಗಿಸಿಕೊಂಡಿದೆ.

ಈ ಎಲ್ಲದರ ನಡುವೆ ಪ್ರಗತಿಪರವಾಗಿ ಆಲೋಚಿಸುವ ಬೌದ್ಧಿಕವರ್ಗ, ಜನರ ಭಾವನೆಗಳಿಗೆ ದನಿಯಾಗುವ ಚಳವಳಿಗಳು, ಅಸಹಾಯಕ ಸ್ಥಿತಿಯಲ್ಲಿ ಎದ್ದ ಜನರ ಪ್ರತಿಭಟನಾ ಧ್ವನಿಗಳು ಸಮಾಜದ ಏರುಪೇರುಗಳನ್ನು ಅಲ್ಲಲ್ಲಿ ನೇರ್ಪಡಿಸಲು ಯತ್ನಿಸುತ್ತವೆ.

ಗಮನಿಸದೇ ಉಳಿದ ಬುಡಕಟ್ಟು ಸಮುದಾಯಗಳು, ಮುಟ್ಟದೆ ಹೋದ ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವ ಅರಿವೇ ಇನ್ನೂ ಮೂಡಿಲ್ಲ. ಜೀವಂತ ಸಮುದಾಯಗಳೇ ಹೀಗಿರುವಾಗ, ಗತದ ಕುರುಹುಗಳಾದ ಶಿಲಾಯುಗದ ಸಮಾಧಿಗಳು, ಬೌದ್ಧ ಸ್ತೂಪಗಳು ಇವುಗಳಿಗೆ ಮತ್ತೆ ಜೀವ ಬರಬಹುದೆ? ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಸಂಸ್ಕೃತಿ ನೀತಿಯನ್ನು ರೂಪಿಸಲು ಸಾಧ್ಯವಾದೀತೆ? ಕಾದು ನೋಡೋಣ.

ಕೋಳಿ ಕಟ್ಟ : ಕೋಳಿ ಪ್ರದರ್ಶನ ಕುಕ್ಕುಟ ಪಂಚಾಂಗ

 
 
 
ಡಾ.ವಾಮನ ನಂದಾವರ
 
 

 
 
‘PÉÆÃjzÀ PÀlÖ GAqÀÄUÉ ªÀÄÄlÖ | PɪÉÄäöÊgÀUï E¤ wy §f PÉÆlÖ’

(PÉÆÃ½ CAPÀ EzÉAiÀÄAvÉ ºÀwÛgÀ | PɪÉÄäöÊgÀ¤UÉ EAzÀÄ ¢£À §®Ä PÉqÀÄPÀÄ)


vÀļÀÄ£Ár£À°è PÀA§¼ÀzÀ ºÁUÉ PÉÆÃ½PÀlÖ CvÀåAvÀ d£À¦æAiÀÄ. PÉÆÃ½UÀ¼ÉgÀqÀÄ ªÀÄÄnÖPÉÆ¼ÀÄîªÀÅzÀÄ, PÁzÁl £ÀqɸÀĪÀÅzÀÄ ªÀÄ£ÀĵÀå¤UÉ MAzÀÄ ¸ÀÄAzÀgÀªÁzÀ, gÉÆÃZÀPÀªÁzÀ ¸À¤ßªÉñÀªÁV vÉÆÃj ªÀÄÄAzÉ PÉÆÃ½ PÁ¼ÀUÀzÀAvÀºÀ «£ÉÆÃzÀ ¥Àæ¸ÀAUÀ ¸ÀAAiÉÆÃf¹ gÀÆrüUÉ vÀA¢gÀ¨ÉÃPÀÄ.


PÉÆÃ½UÀ¼À PÁ®ÄUÀ½UÉ ¨Á¼ÀÄ J£ÀÄߪÀ ªÉÆtZÁzÀ GQÌ£À PÀwÛAiÀÄ£ÀÄß PÀnÖ CªÀÅUÀ¼À£ÀÄß PÀtzÀ°è PÁzÁqÀ®Ä ©qÀĪÀÅzÀÄAlÄ. CzÉà‘PÉÆÃzÀð PÀlÖ’ CxÀªÁ ‘PÉÆÃjPÀlÖ’.

zÉʪÀ¸ÁÜ£ÀUÀ¼À°è £ÀqÉAiÀÄĪÀ ªÁ¶ðPÀ eÁvÉæVAvÀ ªÉÆzÀ®Ä PÉÆÃ½UÀÆl (PÉÆÃjPÀÄAl) ºÁPÀĪÀ ¸ÀA¥ÀæzÁAiÀÄ«zÉ. ¨sÀÆvÁgÁzsÀ£ÉAiÀÄ ¥ÁægÀA¨sÀzÀ°è PÉÆÃ½PÁ¼ÀUÀPÁÌV PÀt ¤ªÀiÁðt ªÀiÁqÀÄvÁÛgÉ. ºÁ®Ä¸ÀƸÀĪÀ ªÀÄgÀzÀ ºÀ¢£ÁgÀÄ UÀÆlUÀ¼À£ÀÄß ªÀÈvÁÛPÁgÀªÁV £ÉqÀĪÀ DZÀgÀuɬÄzÀÄ.
EzÀQÌAvÀ ªÉÆzÀ®Ä CAPÀzÀ PÉÆÃ½, PÉÆÃ½ UÀÆl, ªÀÄAUÀ¼À ªÁzÀå ªÉÆzÀ¯ÁzÀĪÀÅUÀ¼ÉÆA¢UÉ J®ègÀÆ zÉʪÀ¸ÁÜ£ÀzÀ ªÀÄÄA¢gÀĪÀ UÀzÉÝUÉ vÉgÀ¼ÀÄvÁÛgÉ. ªÉÆPÉÛñÀégÀgÀÄ, UÀÄjPÁgÀgÀÄ, zÉʪÀzÀ ¥ÀÇeÁjUÀ¼ÀÄ, ºÀvÀÄÛ ¸ÀªÀĸÀÛgÀÄ F DZÀgÀuÉAiÀÄ°è ¥Á®ÄUÉÆ¼ÀÄîªÀgÀÄ.
C°è «¢ü DZÀgÀuÉ £Àqɹ ‘PÉÆÃ½UÀÆl’ ºÁQzÀ §½PÀ ¥ÀæwAiÉÆAzÀgÀ PÁ°UÀÆ ºÀUÀΩVzÀÄ PÉÆÃ½UÀ¼À£ÀÄß F UÀÆlUÀ½UÉ PÀlÄÖªÀgÀÄ. C£ÀAvÀgÀ PÉÆÃ½UÀ¼À ºÀUÀÎ ©aÑ CªÀ£ÀÄß PÉÆÃ½PÁ¼ÀUÀ ±Á¸ÀÛçzÀ°è vÉÆqÀV¹PÉÆ¼ÀÄîªÀgÀÄ. F ‘ªÀÄĺÀÆvÀð’zÀ §½PÀ C°è ‘PÉÆÃ½PÀlÖ’ eÁvÉæAiÀÄ PÉÆ£ÉAiÀĪÀgÉUÀÆ £ÀqÉAiÀÄÄwÛgÀÄvÀÛzÉ.
‘PÉÆÃ½UÀÆlzÀ DZÀgÀuÉ’AiÀÄ §½PÀ DgÁzsÀ£É ªÀÄÄVAiÀÄĪÀªÀgÉUÉ D HgÀ°è ¸ÁªÀiÁfPÀ PÁAiÀÄðUÀ¼ÀÆ ±ÀĨsÀ PÉ®¸ÀUÀ¼ÀÆ £ÀqÉAiÀÄĪÀAw®è. ¥ÁætÂUÀ¼À£ÀÄß PÉÆAiÀÄÄÝ ¥ÀzÁxÀð ªÀiÁqÀĪÀÅzÀÄ PÀÆqÀ ¤¶zÀÞ.
ªÀÄ£ÉUÉ £ÉAlgÀÄ §AzÁUÀ¯ÉÆÃ CxÀªÁ E¤ßvÀgÀ ¸ÀAzÀ¨sÀðUÀ¼À°è £ÀqɸÀĪÀ QgÀÄPÉÆÃ½PÀlÖ¢AzÀ »rzÀÄ ¸Á«gÁgÀÄ d£À¸ÉÃgÀĪÀ gÁwæºÀUÀ®Ä £ÀqÉAiÀÄĪÀ PÉÆÃ½CAPÀUÀ¼ÀÄ dgÀUÀĪÀÅ¢zÉ.

PÉÆÃ½CAPÀPÁÌV ºÀÄAdUÀ¼À£ÀÄß DAiÉÄ̪ÀiÁqÀĪÀÅzÀÄ CªÀÅUÀ¼À£ÀÄß ¦æÃw¬ÄAzÀ ¯Á®£É¥Á®£É ªÀiÁqÀĪÀÅzÀÄ MAzÀÄ ºÀªÁå¸À.
UÀÄvÀÄÛ, ¨Á½PÉ, vÀgÀªÁqÀÄ ªÀÄ£ÉUÀ¼À CAUÀ¼À vÀÄA§ EAvÀºÀ ºÀÄAdUÀ¼À£ÀÄß PÀnÖºÁQ ¥ÀæzÀ±Àð£À £ÀqɸÀĪÀÅzÉà MAzÀÄ ¸ÀA¨sÀæªÀÄ ºÁUÀÄ ¥ÀæwµÉÖ. CªÀÅUÀ¼À DgÉÊPÉUÁVAiÉÄà D¼ÀÄUÀ¼À£ÀÄß £ÉëĹPÉÆ¼ÀÄîwÛzÀÝ ¥ÀgÀA¥ÀgÉAiÉÆA¢vÀÄÛ.
EAvÀºÀ PÉÆÃ½UÀ¼À°è ºÀ®ªÀÅ «zsÀzÀ vÀ½UÀ½ªÉ. CªÀÅ ¨ÉÃgɨÉÃgÉ UÁvÀæ ¸ÀégÀÆ¥À, §tÚUÀ¼À°è PÀAUÉÆ½¸ÀĪÀ jÃwAiÀİè PÉÆÃ½UÀ¼À ¥ÀæzÀ±Àð£À, ªÉÄüÀ K¥Àðr¸ÀĪÀÅzÀÄ DzsÀĤPÀ ¸ÀAzÀ¨sÀðUÀ¼À°è ºÉƸÀ «£Áå¸À ¥ÀqÉzÀÄPÉÆArgÀĪÀÅzÀÄAlÄ.
EAvÀºÀ PÉÆÃ½UÀ¼À vÀ½UÀ¼À£ÀÄß C©üªÀÈ¢Þ¥Àr¹ £ÀÆvÀ£À ªÀiÁgÀÄPÀmÉÖ MzÀV¸ÀĪÀ £É¯ÉAiÀİè EAvÀºÀ ¥ÀæzÀ±Àð£ÀUÀ½UÉ vÀÄA§ ªÀĺÀvÀé«zÉ. ¸ÁªÀðd¤PÀ GvÀìªÀ ªÉÄüÀUÀ¼À°è K¥Àðr¸ÀĪÀ ««zsÀ ¥ÀæzÀ±Àð£ÀUÀ¼À°è PÀÆqÀ PÀÄPÀÄÌl ¥ÀæzÀ±Àð£À ºÉZÀÄÑ ºÉZÀÄÑ d£À¦æAiÀĪÁUÀÄwÛgÀĪÀ PÁ®ªÀÇ EA¢£ÀzÁVzÉ.


PÀA§¼ÀzÀ PÉÆÃtUÀ¼À DgÉÊPÉAiÀÄAvÉ PÉÆÃ½UÀ¼À DºÁgÀ DgÉÊPÉUÀ½UÉ §ºÀ¼À ªÀÄÄvÀĪÀfðªÀ»¸À¯ÁUÀÄvÀÛzÉ. vÀ£Àß ºÀÄAdPÉÌ PÁzÁlzÀ §UÉÎ AiÀÄdªÀiÁ£À vÀgÀ¨ÉÃw ¤ÃqÀĪÀÅzÀÄAlÄ.
CzÀPÉÌ ªÀiÁ°Ã¸ÀÄ ªÀiÁqÀĪÀÅzÀÄ, ªÉÄÃ¯É PɼÀUÉ £ÉUÉzÁr¹ DaÃZÉ MqÁr¸ÀĪÀÅzÀÄ, FeÁr¸ÀĪÀÅzÀÄ, EvÀgÀ ºÀÄAdUÀ¼À eÉÆvÉ PÁzÁr¸ÀĪÀÅzÀÄ, PÁ®Ä §®UÉÆ½¸À®Ä ©¹¤ÃgÀ°è vÉÆ¼ÉAiÀÄĪÀÅzÀÄ, zÉúÀ¥ÀŶÖUÁV §vÀÛ, ¨É®è, ¨ÉuÉÚ, PÉÆ§âj, «ÄãÀÄ, ªÀiÁA¸À ªÉÆzÀ¯ÁzÀ DºÁgÀ w¤¹ ªÀÄPÀ̼ÀAvÉ CPÀÌgɬÄAzÀ ¸ÁPÀĪÀÅzÀÄ PÀÄvÀƺÀ®zÀ ºÀªÁå¸ÀªÁVzÉ.


PÉÆÃ½ PÁ¼ÀUÀzÀ dAiÀiÁ¥ÀdAiÀÄ ªÉÆzÀ¯ÁzÀ D£ÀAzÁ¢ AiÉÆÃUÀUÀ¼À£ÀÄß ¤tð¬Ä¸ÀĪÀ PÉÆÃ±ÀªÉ¤¹gÀĪÀ ‘PÀÄPÀÄÌl ¥ÀAZÁAUÀ’ªÉà EzÉ. F ¥ÀAZÁAUÀ w½¸ÀĪÀ ºÁUÉ PÉÆÃ½UÀ¼À°è C£ÉÃPÀ eÁwUÀ½ªÉ. CªÀÅUÀ¼À §tÚ UÁvÀæ £ÉÆrzÁPÀët AiÀiÁªÀ UÀÄA¦UÉ ¸ÉÃjzÀĪÀÅUÀ¼ÉAzÀÄ UÀÄgÀÄvÀÄ »rAiÀÄĪÀ P˱À® PÉÆÃ½PÀlÖzÀ ¥ÉæÃ«ÄUÀ½UÉ EzÉ.
¨ÉƼÉî, PÀqÉè, PÀ¨ÉÆð¼Éî, PɪÉÄäöÊgÉ, GjAiÉÄ, PÀÄ¥ÀůÉ, VrAiÉÄ, ¥ÉgÀrAUÉ, ªÉÄ洃 JAzÉ®è CªÀÅUÀ¼À eÁw, ªÀUÀðUÀ¼À£ÀÄß ¥ÀvÉÛ ºÀZÀÄÑvÁÛgÉ.
ºÁUÉAiÉÄà J¯ÉdÄlÄÖ, PÀ®ÄèdÄlÄÖ, ºÁUÀ®PÁ¬ÄdÄlÄÖ ªÉÆzÀ¯ÁV ««zsÀ jÃwAiÀÄ PÉÆÃ½UÀ¼À PÉÆlÄÖ CxÀªÁ dÄlÄÖUÀ¼À£ÀÄß ºÉ¸Àj¸ÀÄvÁÛgÉ.


 PÉÆÃ½UÀ¼À£ÀÄß PÁzÁlzÀ PÀtPÉÌ ©qÀĪÁUÀ MAzÉà UÁvÀæzÀ MAzÉà ªÀAiÀĹì£À ºÀÄAdUÀ¼À£Éßà DAiÉÄÌUÉÆ½¸ÀÄvÁÛgÉ. PÉÆÃ½PÀlÖPÉÌ §AzÁUÀ vÀ£Àß PÉÆÃ½UÉ AiÀiÁªÀ eÉÆÃr ¸ÀjºÉÆÃUÀĪÀÅzÀÄ JA§ÄzÁV dvÉ ºÀÄqÀÄPÀĪÀÅzÀÄ ªÉÆzÀ® PÉ®¸À.
EzÀ£ÀÄß ¥Àw ªÀiÁqÀĪÀÅzÀÄ J£ÀÄßvÁÛgÉ. PÉÆÃ½PÁ¼ÀUÀPÉÌ ¥ÀwAiÀiÁzÀ dvÉ PÉÆÃ½UÀ½UÉ DAiÀiÁ vÀAqÀzÀªÀgÀÄ ¨Á¼ÀÄUÀ¼À£ÀÄß PÀnÖ E¢gÀħ¢gÀÄ ¤°è¹ CªÀÅ ¥ÀgÀ¸ÀàgÀ ªÀÄÄnÖPÉÆAqÀÄ PÁzÁl £ÀqɸÀĪÀAvÉ ¥ÉæÃgÉæ¸ÀÄvÁÛgÉ.

PÉÆÃ½UÀ¼À£ÀÄß PÀnÖºÁPÀ®Ä §¼À¸ÀĪÀ ºÀUÀÎ vÀÄA§ £ÁdÆPÁV PÀĸÀÄj PÉ®¸À¢AzÀ PÀÆrgÀÄvÀÛzÉ. PÉÆÃ½UÉ ¨Á¼ÀÄPÀlÄÖªÀÅzÀÄ, PÁ¼ÀUÀPÉÌ ©qÀĪÀÅzÀÄ, CªÀÅUÀ½UÉ §vÀÛzÀ PÁ¼ÀÄ ¤ÃgÀÄt¸ÀĪÀÅzÀÄ, UÁ½ ºÁPÀĪÀÅzÀÄ, CªÀÅUÀ¼À zÉúÀzÀ°è UÁAiÀĪÁzÀ ¨sÁUÀUÀ¼À£ÀÄß vÉÆ¼ÉzÀÄ ¸ÀéZÀÒUÉÆ½¹ zÁgÀ¢AzÀ ºÉưzÀÄ DgÉÊPÉ ªÀiÁqÀĪÀÅzÀÄ ªÉÆzÀ¯ÁzÀ ¥ÀæwAiÉÆAzÀÄ «¨sÁUÀzÀ®Æè £ÀÄjvÀªÀgÀÄ EgÀÄvÁÛgÉ. »ÃUÉ PÉÆÃ½CAPÀzÀ°è EªÀgÉ®è ¥Á®ÄUÉÆ¼ÀÄîvÁÛgÉ ªÀÄvÀÄÛ vÀªÀÄä vÀªÀÄä ¸ÉêÁP˱À® ªÉÄgÉAiÀÄÄvÁÛgÉ.

PÉÆÃ½PÀlÖ DVgÀ§ºÀÄzÀÄ, PÀA§¼À«gÀ§ºÀÄzÀÄ E¯Éè®è PÀȶPÀgÀ PÀȶPÀªÀÄðzÀ PÉÊZÀ¼ÀPÀzÀ PÀĸÀÄjPÀ¯ÉAiÀÄ PÀ¯ÁvÀäPÀ C©üªÀåQÛAiÀÄÆ ¥ÀæPÀlªÁUÀĪÀÅzÀ£ÀÄß £ÁªÀÅ UÀªÀĤ¸À§ºÀÄzÀÄ.
PÉÆÃ½CAPÀ, PÀA§¼À ªÉÆzÀ¯ÁzÀ UÁæ«ÄÃt QæÃqÉUÀ¼ÀÄ E®èªÉà «£ÉÆÃzÀUÀ¼ÀÄ JµÉÖà d£À¦æAiÀĪɤ¹PÉÆAqÀgÀÆ C¯Éè®è ªÀÄÆPÀ¥ÁætÂUÀ½UÁUÀÄwÛgÀĪÀ »A¸É ºÁUÀÄ CªÀÅUÀ¼À ªÉÄÃ¯É ªÀģɯÃgÀAd£ÉAiÀÄ ºÉ¸ÀgÀ°è £ÀqÉAiÀÄÄwÛgÀĪÀ PËæAiÀÄð ªÀÄvÀÄÛ zËdð£ÀåUÀ¼À£ÀÄß M¦àPÉÆ¼ÀÄîªÀÅzÀPÁÌUÀĪÀÅ¢®è.E°è ¸ÀÄzsÁgÀuÉ ªÀÄvÀÄÛ §zÀ¯ÁªÀuÉUÀ¼ÀÄ CUÀvÀåªÁV DUÀ¨ÉÃPÀÄ.
ºÁUÉAzÀÄ MAzÁ£ÉÆAzÀÄ PÁ®zÀ°è £ÀqÉAiÀÄÄwÛzÀÄÝzÀQÌAvÀ EAzÀÄ ¸ÀÄzsÁgÀuÉUÀ¼ÀÄ DV®èªÉAzÀ®è. ºÁUÉ PÉÆÃ½UÀ¼À PÁ®ÄUÀ½UÉ ¨Á¼ÀÄ PÀlÖzÉ CªÀÅUÀ¼À PÁ¼ÀUÀ £ÀqɹzÀgÁUÀzÉÃ?
F §UÉUÉ aAvÀ£É DUÀ¨ÉÃPÁVzÉ. CzÉà jÃw ««zsÀ vÀ½AiÀÄ eÁwAiÀÄ PÉÆÃ½UÀ¼À ¥ÀæzÀgÀê£ÀUÀ¼À£ÀÄß ªÀåªÀ¹ÜvÀ ªÀÄvÀÄÛ CZÀÄÑPÀmÁÖV zÉÆqÀØ ªÀÄlÖzÀ ªÉÄüÀUÀ¼À°è £ÀqɸÀĪÀÅzÀÄ C¥ÉÃPÀëtÂÃAiÀĪɤ¸ÀÄvÀÛzÉ.

bÁAiÀiÁavÀæ £ÉgÀªÀÅ : ªÉÆÃºÀ£ï r. PÉÊgÀAUÀ¼À

ಶನಿವಾರ, ಆಗಸ್ಟ್ 3, 2013

ಮೌಖಿಕ ನಿರೂಪಣೆಗಳಿಗೆ ಬೇಕು ಮನ್ನಣೆ

-ಪುರುಷೋತ್ತಮ ಬಿಳಿಮಲೆ

 

 ಸೌಜನ್ಯ: ವಿಜಯ ಕರ್ನಾಟಕ


ಪುರುಷೋತ್ತಮ ಬಿಳಿಮಲೆ: ಮೌಖಿಕ ನಿರೂಪಣೆಗಳಿಗೆ ಬೇಕು ಮನ್ನಣೆ
 
 
 
 
 
 
 
 
 
 
 
 
 
 
    ಜಗತ್ತಿನ ಎಲ್ಲ ದೇಶಗಳಲ್ಲೂ ಜನಪ್ರಿಯವಾದ ಮೌಖಿಕ ನಿರೂಪಣೆಗಳಿವೆ. ಅತ್ಯಾಧುನಿಕ ನಗರವಾದ ಟೋಕಿಯೊದಿಂದ 600 ಕಿ.ಮೀ ದೂರದ ತಾಕೆ ಎಂಬ ಬೆಟ್ಟದ ಬುಡದಲ್ಲಿ ತರುಣನೊಬ್ಬ ಇಡೀ ರಾತ್ರಿ ಕತೆ ಹೇಳಿದ್ದನ್ನು ನಾನು ಕೇಳಿದ್ದೇನೆ. ಆಕರ್ಷಕವಾದ ಹವಾಯಿ ದ್ವೀಪದ ಹದಯಭಾಗದ ಹೊನುಲುಲುವಿನಲ್ಲಿ ಕುಣಿಯತ್ತಾ ಸುದೀರ್ಘವಾದ ಕಥನಗಳನ್ನು ನಿರೂಪಿಸುವವರನ್ನೂ ನಾನು ಕಂಡಿದ್ದೇನೆ. ಆದರೆ, ಯಾವ ದೇಶದಲ್ಲಿಯೂ ಇವು ಲಿಖಿತ ನಿರೂಪಣೆಗಳ ಜತೆಗೆ ಸಮಸ್ಥಾನದಲ್ಲಿ ನಿಂತಿಲ್ಲ. ಆಳುವ ವರ್ಗ ತನ್ನ ಆಳ್ವಿಕೆ ಮತ್ತು ರಾಜಕೀಯ ಧೋರಣೆಗಳಿಗೆ ಅನುಗುಣವಾದ ಲಿಖಿತ ನಿರೂಪಣೆಗಳನ್ನು ತನ್ನದೆಂದು ಹೇಳುತ್ತಾ, ಅವುಗಳನ್ನು ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಚುರಪಡಿಸುತ್ತಾ ಕಾನೂನುಬದ್ಧಗೊಳಿಸುತ್ತವೆ. ಆಳುವ ವರ್ಗದ ಬೆಂಬಲ ಪಡೆದ ನಿರೂಪಣೆಗಳೇ ರಾಷ್ಟ್ರೀಯ ಮನ್ನಣೆ ಪಡೆಯುತ್ತವೆ. ಈ ಕಾಲದಲ್ಲಿ ಅಂಥವುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯೂ ಲಭಿಸುತ್ತದೆ. ಇಂಥ ಸಂದರ್ಭದಲ್ಲಿ ಮೌಖಿಕ ನಿರೂಪಣೆಗಳು ಮೂಲೆಗೆ ತಳ್ಳಲ್ಪಡುತ್ತವೆ. ಅಕ್ಷರ ರಾಜಕೀಯವೂ ಮೌಖಿಕ ಸಾಮಗ್ರಿಗಳನ್ನು ಅಷ್ಟಾಗಿ ಮನ್ನಿಸುವುದಿಲ್ಲ. ಹೀಗಾಗಿ, ಮೌಖಿಕವಾಗಿ ನಿರೂಪಿತವಾಗುವ ಅಭಿಪ್ರಾಯಗಳು, ಪುರಾಣಗಳು, ಐತಿಹ್ಯಗಳು, ಚರಿತ್ರೆಗಳು ಮತ್ತು ಕಲೆಗಳು ಮತ್ತೆ ಮತ್ತೆ ನಿರಾಕರಣೆಗೆ ಒಳಗಾಗುತ್ತಲೇ ಬಂದಿವೆ.

   ಜಗತ್ತಿನ ಎಲ್ಲ ದೇಶಗಳ ಆಳುವ ವರ್ಗಕ್ಕೆ ವರ್ತಮಾನ, ಚರಿತ್ರೆ ಮತ್ತು ಪುರಾಣಗಳ ಬಗ್ಗೆ ತನ್ನದೇ ಆದ ಖಚಿತ ನಿಲುವುಗಳಿರುತ್ತದೆ. ಆ ನಿಲುವುಗಳನ್ನು ಒಮ್ಮೊಮ್ಮೆ ನೇರವಾಗಿ, ಮತ್ತೆ ಕೆಲವು ಬಾರಿ ಪರೋಕ್ಷವಾಗಿ ಇತರರ ಮೇಲೆ ಹೇರಲಾಗುತ್ತದೆ. ಇಂಥ ಹೇರಿಕೆಯ ವಿರುದ್ಧ ಮೌಖಿಕ ನಿರೂಪಣೆಗಳು ಒಂದು ಬಗೆಯ ಜಾಗತ ಸ್ಥಿತಿಯನ್ನು ಸದಾ ಕಾದಿಟ್ಟುಕೊಂಡಿರುತ್ತವೆ. ಆಳುವ ವರ್ಗ ಯಾವುದನ್ನು ಅಕ್ಷರ ಮಾಧ್ಯಮದ ಮೂಲಕ ಮಾನ್ಯ ಮಾಡಲೆತ್ನಿಸುವುದೋ, ಅದನ್ನು ಮೌಖಿಕ ಮಾಧ್ಯಮದ ಮೂಲಕ ಜನರು ವಿಮರ್ಶೆಗೆ ಒಳಪಡಿಸುತ್ತಾರೆ. ಎಷ್ಟೋ ಬಾರಿ ಈ ಎರಡೂ ಪ್ರವತ್ತಿಗಳು ಪರಸ್ಪರ ವಿರೋಧಿ ನೆಲೆಗಳಲ್ಲಿರುತ್ತವೆ. ಒಂದು ಅಕ್ಷರ ರೂಪದಲ್ಲಿರುವುದನ್ನು 'ಶಾಶ್ವತ' ಎಂದೂ, ಇನ್ನೊಂದು ಅನಕ್ಷರ ರೂಪದಲ್ಲಿರುವುದನ್ನು 'ಅಶಾಶ್ವತ' ಎಂದೂ ನಂಬುತ್ತದೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ, ಇದು ಅಕ್ಷರದ ಪರವಾಗಿರುವಂಥವರ ತರ್ಕ. ಆದರೆ, ಸೂಕ್ಷ್ಮವಾಗಿ ನೋಡಿದರೆ, ಮೌಖಿಕ ರೂಪದಲ್ಲಿರುವಂಥದ್ದು ಅಶಾಶ್ವತ ಏನೂ ಅಲ್ಲ. ಅದು ಕಂಠಸ್ಥ ಪರಂಪರೆಯಲ್ಲಿ ನವೀನಗೊಳ್ಳುತ್ತಾ ಉಳಿಯುತ್ತಿರುತ್ತದೆ. ಜಗತ್ತಿನ ಜಾನಪದ ಉಳಿದದ್ದೇ ಹೀಗೆ. ಅಕ್ಷರದ ಬಂಧನ ಇಲ್ಲದ್ದರಿಂದ ಅದು ಹೆಚ್ಚು ಲವಲವಿಕೆಯಿಂದ ಬೆಳೆಯುತ್ತದೆ. ಬದಲಾಗುತ್ತಿರುವ ಸಮಾಜದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಾ, ಸಮಕಾಲೀನವಾಗುತ್ತಾ ಕ್ರಿಯಾಶೀಲವಾಗುತ್ತಿರುತ್ತದೆ.

    ಆದರೆ, ಯಾಕೋ ನಮ್ಮ ಮಾನವಿಕಗಳಲ್ಲಿ ಮೌಖಿಕ ನಿರೂಪಣೆಗಳಿಗೆ ಅಂಥ ಮನ್ನಣೆ ದೊರಕಿಲ್ಲ. ಕಾರಣ, ಮೌಖಿಕ ನಿರೂಪಣೆಗಳು ಸಾಮಾನ್ಯ ಜನರ ಜ್ಞಾನವಾಗಿದ್ದು ಅದಕ್ಕೆ ಅಂಥ ಮನ್ನಣೆ ನೀಡಬೇಕಾಗಿಲ್ಲ ಎಂಬ ಪಾರಂಪರಿಕ ನಿಲುವು. ಇದು ಬಹಳ ಅಪಾಯಕಾರಿಯಾದ ಧೋರಣೆ. ಎಸ್ ಎಲ್ ಭೈರಪ್ಪನವರ 'ಪರ್ವ' ಕಾದಂಬರಿಯನ್ನು ನಾನು 80ರ ದಶಕದಲ್ಲಿ ಸರ್ವ ಶ್ರೇಷ್ಠ ಯಕ್ಷಗಾನ ಕಲಾವಿದರಾದ ಶೇಣಿ ಗೋಪಾಲಕಷ್ಣ ಭಟ್ಟರಿಗೆ ಓದಲು ಕೊಟ್ಟಿದ್ದೆ. ಆರೇಳು ದಿನಗಳಲ್ಲಿ ಅದನ್ನು ಧ್ಯಾನಿಸಿ ಓದಿದ ಅವರು ಪುಸ್ತಕವನ್ನು ಹಿಂದಿರುಗಿಸುವಾಗ ಅವರದೇ ಶೈಲಿಯಲ್ಲಿ ನಗುತ್ತಾ, ''ಅಂಥ ವಿಶೇಷ ಏನೂ ಇಲ್ಲ, ಇದರಲ್ಲಿ ಇರುವುದೆಲ್ಲ ನಾವು 60ರ ದಶಕದಲ್ಲಿ ಹೇಳಿದ ತಾಳಮದ್ದಳೆಯ ಅರ್ಥವೇ ಅಲ್ಲವೇ,'' ಎಂದರು. ಆದರೆ, ನಾವು ಎಸ್ ಎಲ್ ಭೈರಪ್ಪ ಅವರಿಗೆ ನೀಡಿದ ಮನ್ನಣೆ ಏನು ಮತ್ತು ಶೇಣಿಯವರಿಗೆ ನೀಡಿದ ಗೌರವವೇನು ಎಂದು ನಾನು ವಿವರಿಸಬೇಕಾಗಿಲ್ಲ. ಅಂದರೆ, ಮೌಖಿಕ ನಿರೂಪಕರು ಎಷ್ಟೋ ಬಾರಿ ಲಿಖಿತ ಪರಂಪರೆಗಿಂತ ಸಾಕಷ್ಟು ಮುಂದೆ ಇದ್ದರೂ ಅವರಿಗೆ ಸಿಗಬೇಕಾದಂಥ ಮನ್ನಣೆ ಸಿಗುತ್ತಿಲ್ಲ. 
 
   20ನೇ ಶತಮಾನದ ಪ್ರಮುಖ ಚಿಂತನೆಗಳೆಲ್ಲ ತಾಳಮದ್ದಳೆ ಕಲಾವಿದರ ಅರ್ಥಗಾರಿಕೆಯಲ್ಲಿ ಹುದುಗಿದ್ದನ್ನು ನಾನು ಕೇಳಿದ್ದೇನೆ. ಆದರೆ, ಪುಸ್ತಕ ಬರೆದವರಿಗೆ ಸಿಕ್ಕ ಮನ್ನಣೆ ಈ ಕಲಾವಿದರಿಗಿಲ್ಲ. ಹೀಗಾಗಿ, ನಾವು ನಮ್ಮ ಪೂರ್ವಾಗ್ರಹಗಳನ್ನು ಬಿಟ್ಟು ಮೌಖಿಕ ಪರಂಪರೆಯ ನಿರೂಪಣೆಗಳಿಗೆ ಇನ್ನಾದರೂ ಗಂಭೀರವಾಗಿ ಕಿವಿಕೊಡಬೇಕಾಗಿದೆ. ಭಾರತದ ನೈಜ ಸತ್ವ ಅದರ ಕಂಠಸ್ಥ ಪರಂಪರೆಯಲ್ಲಿದೆ. ಇಲ್ಲಿ ಇಂದಿಗೂ ಅಕ್ಷರ ಬಲ್ಲವರು ಅಲ್ಪ ಸಂಖ್ಯಾತರು. ಆದರೆ, ಅಕ್ಷರಕ್ಕೆ ರಾಜಕೀಯ ಶಕ್ತಿಯೂ ಇರುವುದರಿಂದ ಬಹುಸಂಖ್ಯಾಕರ ನಿರೂಪಣೆಗಳು ಹಿಂದೆ ಉಳಿಯಬೇಕಾಯಿತು. ಅವರ ಸಾಂಸ್ಕೃತಿಕ ಮೌಲ್ಯಗಳು ಮತ್ತು ಮೌಖಿಕ ಸಾಮಗ್ರಿಗಳು ಈ ದೇಶದ ಚರಿತ್ರೆಯಲ್ಲಾಗಲೀ, ಸಂಸ್ಕೃತಿಯ ಭಾಷ್ಯದಲ್ಲಾಗಲೀ ಮುಖ್ಯ ಸ್ಥಾನ ಪಡೆಯಲೇ ಇಲ್ಲ.

ಮೌಖಿಕ ನಿರೂಪಣೆಗಳು ಒಂದು ನಿರ್ದಿಷ್ಟ ಸಮುದಾಯದ ಜನರಿಗೆ ತಿಳಿವಳಿಕೆ ನೀಡುತ್ತಾ, ಸಾಂಪ್ರದಾಯಿಕ ಶಿಕ್ಷಣದ ಭಾಗವಾಗಿ ಕಾರ್ಯನಿರ್ವಹಿಸುತ್ತವೆ. ಸಂಸ್ಕೃತಿಯ ಕೇಂದ್ರ ಉದ್ದೇಶಕ್ಕೆ ಅನುಗುಣವಾಗಿ ಜನರನ್ನು ಅವು ತಯಾರು ಮಾಡುತ್ತವೆ. ಉದಾಹರಣೆಗೆ, ಕೋಟಿ-ಚೆನ್ನಯರ ನಿರೂಪಣೆಯು ಸೂಕ್ಷ್ಮವಾಗಿ ಬಿಲ್ಲವ ಸಮುದಾಯದಲ್ಲಿ, ಸ್ಥೂಲವಾಗಿ ಹಿಂದುಳಿದ ವರ್ಗದ ಜನರಲ್ಲಿ ಸ್ವಾಭಿಮಾನ ಮೂಡಿಸುತ್ತದೆ. ಕಾಣದ-ಕಾಟದರು ಮೇರ ಸಮುದಾಯದ ಸ್ವಾಭಿಮಾನಿ ವೀರರು. ಈ ಅರ್ಥದಲ್ಲಿ ಇಂಥ ನಿರೂಪಣೆಗಳು ಸಂಸ್ಕೃತಿ ಪ್ರಸಾರದ ಪ್ರಬಲ ಸಾಧನಗಳೂ ಹೌದು. ಅವು ಜನರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವುದು ಔಚಿತ್ಯ ಪೂರ್ಣವಾದದ್ದು, ಯಾವುದು ಅನೌಚಿತ್ಯದ್ದು ಎಂಬ ಬಗೆಗೆ ಅರಿವು ಮೂಡಿಸುತ್ತವೆ. ಈ ಅರಿವಿನ ಮೂಲಕ ಪರೋಕ್ಷವಾಗಿ ಅವು ಸಮುದಾಯಗಳ ಒಳಗಿನ ಸಂಘರ್ಷಗಳನ್ನು ನಿವಾರಿಸಲು ಪ್ರಯತ್ನಿಸುತ್ತವೆ.

ಕರಾವಳಿಯಲ್ಲಿ ಜನಪ್ರಿಯವಾಗಿರುವ ಸಿರಿ ಜಾತ್ರೆಯನ್ನು ಗಮನಿಸಬೇಕು. ಅಲ್ಲಿ ಹೆಂಗಸರೆಲ್ಲ ಸಿರಿಯ ಪಾಡ್ದನವನ್ನು ನಿರೂಪಿಸುತ್ತಲೇ ನಿಧಾನವಾಗಿ ಆವೇಶಕ್ಕೊಳಗಾಗುತ್ತಾರೆ. ನಿರೂಪಣೆ ಸಾಗುತ್ತಿದ್ದಂತೆ, ಅವರ ವೈಯಕ್ತಿಕ ಭಿನ್ನತೆಗಳೆಲ್ಲ ಕರಗಿ ಎಲ್ಲ ಒಂದಾಗುತ್ತಾರೆ. ಎಲ್ಲರೂ ಪರಸ್ಪರ ಬಂಧುಗಳೆಂಬಂತೆ ಸಂಬೋಧಿಸಿಕೊಳ್ಳುತ್ತಾರೆ. ಆ ಮೂಲಕ ಒಂದು ಬಗೆಯ ಅನುಭಾವಿಕ ರಕ್ತ ಬಾಂಧವ್ಯವನ್ನು ಸಜಿಸಿಕೊಳ್ಳುತ್ತಾರೆ. ಜತೆಗೆ, ಆವೇಶಕ್ಕೊಳಗಾದ ಹೆಂಗಸರ ಕೌಟುಂಬಿಕ ಯಾತನೆಗಳಿಗೆ ನಿರೂಪಣೆಯ ಭಾಗ ಸಮಸ್ಪಂದಿಯಾದಾಗ, ಹೆಂಗಸರು ತೀವ್ರತರವಾದ ಭಾವಾವೇಶಕ್ಕೆ ಒಳಗಾಗುತ್ತಾರೆ. ನಾನು ಅಂಥ ನಾಲ್ಕು ಜನ ಹೆಂಗಸರನ್ನು ಖಾಸಗಿಯಾಗಿ ಭೇಟಿಯಾಗಿ ಅವರ ಬದುಕಿನ ವಿವರಗಳನ್ನು ಸಂಗ್ರಹಿಸಿದ್ದೆ. ಆ ನಾಲ್ಕು ಜನರಲ್ಲಿ ಒಬ್ಬಳನ್ನು ಅವಳ ಗಂಡ ತ್ಯಜಿಸಿದ್ದಾನೆ, ಇನ್ನೊಬ್ಬಳಿಗೆ ಗಂಡನ ಮನೆಯಲ್ಲಿ ಅತೀವ ಕಾಟ, ಮೂರನೆಯವಳ ಆರೂ ಮಕ್ಕಳು ಹುಟ್ಟುತ್ತಲೇ ಸತ್ತಿದ್ದಾರೆ. ನಾಲ್ಕನೆಯವಳಿಗೆ 34 ವರ್ಷ ತುಂಬಿದರೂ ಮದುವೆಯಾಗಿರಲಿಲ್ಲ. ಇವರುಗಳು ಸಿರಿ ಜಾತ್ರೆಯ ಭಾಗಿಗಳೂ ಹೌದು, ಸಿರಿ ಪಾಡ್ದನದ ಪಾತ್ರಗಳೂ ಹೌದು. 
 
   ಕಾರಣ, ಅವರ ವಾಸ್ತವದ ಬಿಕ್ಕಟ್ಟುಗಳು ಜಾತ್ರೆಯಲ್ಲಿ ತಾತ್ಕಾಲಿಕವಾಗಿ ಪರಿಹಾರ ಹೊಂದುತ್ತದೆ. ಅಸ್ಪೃಶ್ಯನೊಬ್ಬ ಸವರ್ಣೀಯನ ಮೇಲೆ ಸೇಡು ತೀರಿಸಿಕೊಳ್ಳುವ ಘಟನೆ, ಬ್ರಾಹ್ಮಣ ಕನ್ಯೆಯನ್ನು ದಲಿತ ಮದುವೆ ಆಗುವ ಸಂದರ್ಭ, ಜಾತಿಯ ಶ್ರೇಣೀಕರಣದ ಪಾರಂಪರಿಕ ಮೌಲ್ಯಗಳು ತಲೆಕೆಳಗಾಗುವುದು, ಇವೆಲ್ಲ ನಮ್ಮ ಮೌಖಿಕ ನಿರೂಪಣೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಗತಿಗಳು. ಇವುಗಳನ್ನು ನಾವು ಹೊಸದಾಗಿ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ಈ ನಿರೂಪಣೆಗಳು ಕೇವಲ 'ನಿಶ್ಚಲ ಗತ'ವನ್ನು ಹೇಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲು, ಭೂತ-ವರ್ತಮಾನಗಳ ಚಲನಶೀಲ ಸಂಬಂಧವನ್ನು ಪ್ರತಿನಿಧಿಸುತ್ತವೆ. ಹಾಗಾಗಿ ಕನಿಷ್ಠ ಪಕ್ಷ ನಮ್ಮ ಮಾನವಿಕಗಳಲ್ಲಿ ಮೌಖಿಕ ನಿರೂಪಣೆಗಳಿಗೆ ಸಾಕಷ್ಟು ಅವಕಾಶಗಳಿರಬೇಕು, ಪಠ್ಯಪುಸ್ತಕಗಳಲ್ಲಿ ಇವು ಸೇರ್ಪಡೆಯಾಗಬೇಕು, ಆಗ ಹೊಸ ಲೋಕವೊಂದು ತೆರೆದುಕೊಳ್ಳುತ್ತದೆ.

 

ಜನಪದ ಕಲೆಗಳ ರೂಪಾಂತರಗಳು


-ಅರುಣ್ ಜೋಳದಕೂಡ್ಲಿಗಿ
 
   ಸಾಮಾನ್ಯವಾಗಿ ಜನಪದ ಎಂದರೆ ಏನು? ಎನ್ನುವ ಸರಳ ಪ್ರಶ್ನೆಯನ್ನು ಈಗಿನ ಶಾಲಾ ಮಕ್ಕಳಿಗೆ ಕೇಳಿದರೆ, ಕೆಲವರಾದರೂ ಜನಪದ ಪ್ರದರ್ಶನ ಕಲೆಗಳ ಹೆಸರನ್ನು ಹೇಳಬಹದು. ಕಾರಣ ಜಾನಪದ ಎಂದರೆ ಈಗ ಎದ್ದು ಕಾಣುವುದು ಪ್ರದರ್ಶನ ಕಲೆಗಳು ಮಾತ್ರ. ಯಾವುದೇ ಸರಕಾರಿ ಉತ್ಸವಗಳಲ್ಲಿಯೂ, ರಾಜಕಾರಿಣಿಗಳು ಹೋದೆಡೆ ಬಂದೆಡೆಗಳಲ್ಲಿಯೂ, ಸಂಭ್ರಮದ ಆಚರಣೆಗಳಲ್ಲಿಯೂ ಜನಪದ ಕಲೆಗಳು ಕಾಣುತ್ತವೆ. ಇನ್ನು ಸಿನೆಮಾ ಮುಂತಾದ ಮಾದ್ಯಮಗಳಲ್ಲಿಯೂ ಪ್ರದರ್ಶನಾತ್ಮಕ ಕಲೆಗಳನ್ನು ಬಳಸಿಕೊಳ್ಳುತ್ತಾರೆ. ಟಿ.ವಿಗಳಲ್ಲಿಯೂ ಇವುಗಳು ಕಾಣಿಸಿಕೊಂಡು ರಂಗು ತರುತ್ತವೆ.

    ಹೀಗಿರುವಾಗ ಜಾನಪದ ವಿದ್ವಾಂಸರು ಆಧುನಿಕತೆಯಿಂದ ಜನಪದ ಕಲೆಗಳು ನಾಶವಾಗುತ್ತಿವೆ ಎಂದು ಆತಂಕ ಪಡುತ್ತಾರೆ. ಹೀಗೆ ನಾಶವಾಗುವ ಕಲೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಉಪಾಯಗಳನ್ನು ಹುಡುಕುತ್ತಾರೆ. ಈ ಆತಂಕ ಸುಳ್ಳಲ್ಲವಾದರೂ, ಪೂರ್ಣ ನಿಜವಲ್ಲ. ಇದನ್ನು ಮೂರು ನೆಲೆಯಿಂದ ನೋಡಬಹುದು. ಒಂದು: ಜನಪದ ಕಲೆಗಳು ಕಡಿಮೆಯಾಗುವುದಕ್ಕೆ ಕಾರಣಗಳನ್ನು ಶೋಧಿಸುವುದು. ಎರಡು: ಆಧುನಿಕ ಬದಲಾವಣೆ ಜತೆ ಜನಪದ ಕಲೆಗಳು ಮಾಡಿಕೊಂಡ ಹೊಂದಾಣಿಕೆಯನ್ನು ಗುರುತಿಸುವುದು. ಮೂರು: ಜನಪದ ಕಲೆಯ ಹೊಸ ಸಾದ್ಯತೆಗಳನ್ನು ಊಹಿಸುವುದು.

    ಮುಖ್ಯವಾಗಿ ಹಳ್ಳಿಗಳು ಇಂದು ಕೇವಲ ಹಳ್ಳಿಗಳಾಗಿ ಉಳಿದಿಲ್ಲ. ಸಹಜವಾಗಿ ನಗರದ ಕೆಲವು ಲಕ್ಷಣಗಳು ಹಳ್ಳಿಗಳನ್ನೂ ಪ್ರವೇಶಿಸಿವೆ. ಹಾಗಾಗಿ ಹಳ್ಳಿಗಳ ಯುವ ಪಡೆ ನಗರ ವಲಸೆಗೆ ಉತ್ಸುಕವಾಗಿರುತ್ತದೆ. ಇನ್ನು ಶಿಕ್ಷಣ ಪಡೆಯುವುದು ಹಳ್ಳಿಗಳಿಂದ ದೂರವಾಗಲು ಎನ್ನುವಂತಾಗಿದೆ. ಇದಕ್ಕೆ ಶಿಕ್ಷಣ ಪದ್ದತಿಯೂ ಕಾರಣವಾಗಿದೆ. ಜನಪದ ಕಲೆ ಎನ್ನುವುದು ಕಲಿಯದ ಅನಕ್ಷರಸ್ತರ ಸಂಕೇತ ಎಂಬಂತಾಗಿದೆ. ಹಾಗಾಗಿ ಕಲಿತ ಗ್ರಾಮೀಣ ಯುವಕರು ಸಹಜವಾಗಿ ಜನಪದ ಕಲೆಗಳ ಕಡೆ ಹೆಚ್ಚು ಒಲವು ತೋರುವುದು ಕಡಿಮೆ.

    ಮುಖ್ಯವಾಗಿ ಜನಪದ ಕಲೆಗಳು ಕೃಷಿ ಪರಂಪರೆಯ ಜತೆ ಸಾವಯವ ಸಂಬಂಧವನ್ನು ಹೊಂದಿರುವಂಥದ್ದು. ಆದರೆ ಇಂದು ಕೃಷಿ ಕೆಲಸ ಮಾಡುವುದು ಲಾಭದಾಯಕವಾದ ಕಸುಬಲ್ಲ, ಹಾಗಾಗಿ ಕೃಷಿಯೇತರ ಚಟುವಟಿಕೆಗಳಲ್ಲಿ ಹಳ್ಳಿಗರು ಆಸಕ್ತಿ ತೋರುತ್ತಿದ್ದಾರೆ. ಈ ಕಾರಣಕ್ಕೆ ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಹಳ್ಳಿಯ ಕೃಷಿ, ಆಚರಣ ಲೋಕ ದಿನದಿಂದ ದಿನಕ್ಕೆ ನಂಬಿಕೆ ಕಳೆದುಕೊಂಡ ಕೃತಕ ಆಚರಣಾ ಲೋಕವಾಗಿ ಪರಿವರ್ತನೆ ಆಗುತ್ತಿದೆ. ಈ ಬಗೆಯ ಕೃಷಿ ಮತ್ತು ಗ್ರಾಮೀಣ ಆಚರಣಾ ಲೋಕದ ಜತೆ ಸಂಬಂಧವಿಟ್ಟುಕೊಂಡ ಜನಪದ ಕಲೆಗಳು ಸಹಜವಾಗಿ ಮಂಕಾಗುತ್ತಿವೆ.

     ಇಂದು ಜನಪದ ಕಲೆಗಳ ವೃತ್ತಿನಿರತ ತಂಡಗಳು ರೂಪುಗೊಳ್ಳುತ್ತಿವೆ. ಉದಾಹರಣೆಗೆ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಕೆಲವು ಡೊಳ್ಳು ತಂಡಗಳು. ಕೆಲವು ವೀರಗಾಸೆ ತಂಡಗಳು, ಕೆಲವು ಪೂಜಾ ಕುಣಿತದ ತಂಡಗಳಿವೆ. ಈ ತಂಡಗಳು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನ ಕೊಡುತ್ತಿವೆ. ಹೀಗಾಗಿ ಪ್ರತಿ ಹಳ್ಳಿಗಳಲ್ಲಿ ಇರುವ ಡೊಳ್ಳಿನ ಕುಣಿತದ ವೈವಿದ್ಯತೆ ನಾಶವಾಗಿ ಒಂದು ಮಾದರಿ ಪ್ರಚಾರಕ್ಕೆ ಬರುತ್ತಿದೆ. ಜಾಗತೀಕರಣದ ಮಾರುಕಟ್ಟೆ ಮನಸ್ಸು ಹೇಗೆ ವೈವಿದ್ಯತೆಗಳನ್ನು ನಾಶ ಮಾಡುತ್ತದೆಯೋ ಹಾಗೆ ಜನಪದ ಕಲಾಪ್ರಕಾರಗಳ ನಾಶವೂ ಆಗುತ್ತಿದೆ. ಇನ್ನು ಇಂತಹ ವೃತ್ತಿನಿರತ ತಂಡದ ಕಲಾವಿದರು ನಿಜವಾದ ಕಲೆಯ ಹಿನ್ನೆಲೆಯಿಂದ ಬಂದ ಕಲಾವಿದರಾಗಿರುವುದೂ ಕಡಿಮೆ. ಅನೇಕರು ಫೇಕ್ ಕಲಾವಿದರಾಗಿರುತ್ತಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿ ಸರಕಾರದ ಎಲ್ಲಾ ಕಾರ್ಯಕ್ರಮಗಳಲ್ಲೂ ಅವಕಾಶ ಪಡೆಯುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ನಿಜವಾಗ ಕಲಾವಿದರು ಅಂಚಿಗೆ ಸರಿಯುತ್ತಾರೆ.

 

   ಕರ್ನಾಟಕದಲ್ಲಿ ಜನಪದ ಪ್ರದರ್ಶನಾತ್ಮಕ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಹೀಗಾಗಿ ಅದು ನಾವು ಜನಪದ ಕಲೆಗಳನ್ನು ಪುರುಷರ ನೆಲೆಯಲ್ಲಿ ಕಟ್ಟಿಕೊಂಡ ವ್ಯಾಖ್ಯಾನಗಳನ್ನೆಲ್ಲಾ ಬದಲಿಸುತ್ತಿದೆ. ಇದೊಂದು ದೊಡ್ಡ ಚಲನೆ. ಈಗ ಹತ್ತಾರು ಮಹಿಳಾ ಡೊಳ್ಳಿನ ತಂಡಗಳಿವೆ. ಚಿತ್ರದುರ್ಗದ ಬಳಿ ಹಳ್ಳಿಯೊಂದರಲ್ಲಿ ಹಲಗೆಯನ್ನು ಬಾರಿಸುವ ಮಹಿಳಾ ತಂಡವಿದೆ. ಕೂಡ್ಲಿಗಿ ಮತ್ತು ಕೂಡ್ಲಿಗಿ ಸಮೀಪದ ವಿರುಪಾಪುರ ಎಂಬ ಹಳ್ಳಿಯಲ್ಲಿ ಮಹಿಳೆಯರು ದೊಡ್ಡಾಟ, ಸಣ್ಣಾಟಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಗಂಡಸರಿಗೆ ಮಾತ್ರ ಸೀಮಿತವಾದ ಬಯಲಾಟ ಪರಂಪರೆಯಲ್ಲಿ ಮಹಿಳೆಯ ಪ್ರವೇಶವಾಗಿದೆ. ಕರ್ನಾಟಕದ ಹಳ್ಳಿಗಳಲ್ಲಿ ಮಹಿಳಾ ಉಳಿತಾಯ ಸಂಘಟನೆಗಳು ಸ್ಥಾಪನೆಯಾಗಿವೆ. ಹೀಗೆ ಸಂಘಟಿತ ಮಹಿಳೆಯರು ಜನಪದ ಕಲಾತಂಡಗಳನ್ನು ರಚಿಸಿಕೊಳ್ಳುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇದು ಜಾಗತೀಕರಣದ ಸಕಾರಾತ್ಮಕ ಪರಿಣಾಮ.

   ಮುಖ್ಯವಾಗಿ ಶಾಲಾ ಮಕ್ಕಳಲ್ಲಿ ಜನಪದ ಪ್ರದರ್ಶನಾತ್ಮಕ ಕಲೆಗಳ ಕಲಿಸುವಿಕೆಯ ಪ್ರಯೋಗವೂ ವಿರಳವಾಗಿದೆ. ಈ ಪ್ರಯೋಗ ಹೆಚ್ಚಾಗಿ ಸರಕಾರಿ ಶಾಲೆಗಳಿಗಿಂತ ಧಾಮರ್ಿಕ ಸಂಸ್ಥೆಗಳು (ಮಠಗಳು) ನಡೆಸುವ ಶಾಲೆಗಳಲ್ಲಿ ಹೆಚ್ಚಾಗಿರುವುದನ್ನು ನೋಡಬಹುದು. ಇಲ್ಲಿ ಮಠಗಳು ಜನಪದ ಕಲೆಗಳನ್ನು ಧಾಮರ್ಿಕ ಸಂವಹನದ ಮಾದ್ಯಮಗಳನ್ನಾಗಿ ಬಳಸಿಕೊಳ್ಳುತ್ತಿರುವುದು ಕಾಣುತ್ತದೆ.


    ಉದಾಹರಣೆಗೆ: ಆದಿ ಚುಂಚನಗಿರಿ, ಸುತ್ತೂರು, ಸಿರಿಗೆರೆ ಮುಂತಾದ ಮಠಗಳಲ್ಲಿ ನಡೆಸುವ ಶಾಲೆಗಳಲ್ಲಿ ಮುಖ್ಯವಾಗಿ ವೀರಗಾಸೆ, ಸಮಾಳ, ಭಜನೆ, ಕೋಲಾಟ ಮುಂತಾದ ಪ್ರದರ್ಶನ ಕಲೆಗಳನ್ನು ಕಲಿಸಲಾಗುತ್ತದೆ. ಇಲ್ಲಿ ಮೇಲು ಜಾತಿಯ ಕಲೆಗಳನ್ನು ಮಾತ್ರ ಕಲಿಸಲಾಗುತ್ತದೆ. ಈ ಕಲೆಗಳಿಗೆ ಮಠ ಪರಂಪರೆಯ ಧಾಮರ್ಿಕ ಸ್ವರೂಪವನ್ನು ಕೊಡುತ್ತಿವೆ. ಈ ಮೂಲಕ ಮಠಗಳು ಜನಸಾಮಾನ್ಯರ ಕಲೆಗಳನ್ನು ಉಳಿಸುತ್ತಿವೆ ಎನ್ನುವ ಭಾವನೆಯನ್ನು ಉದ್ದೀಪಿಸುವುದೂ ಇದೆ. ಇಂತಹ ಮಠಗಳು ದಲಿತರ ಕಲೆಯನ್ನು ಕಲಿಸಲು ಉತ್ಸುಕವಾಗಿಲ್ಲದಿರುವುದನ್ನು ನೋಡಿದರೆ ಇವುಗಳ ಜಾನಪದ ಪ್ರೀತಿಯ ಹಿಂದಿನ ಧೋರಣೆಗಳನ್ನು ಅರ್ಥಮಾಡಿಕೊಳ್ಳಬಹುದು.

 ಕರ್ನಾಟದ ಕೆಲವು ಪ್ರದರ್ಶನಾತ್ಮಕ ಕಲೆಗಳ ಜತೆ ಜನಪದ ಕಾವ್ಯವೋ, ಜನಪದ ಕಥನ ಕಾವ್ಯವೋ, ಮಹಾಕಾವ್ಯವೋ ಇರುತ್ತದೆ. ಈ ಕಲೆಗಳಿಗೂ ಆಯಾ ಪ್ರದರ್ಶನಾತ್ಮಕ ಕಲೆಗೂ ಸಾವಯವ ಸಂಬಂಧವಿರುತ್ತದೆ. ಕೆಲವೊಮ್ಮೆ ಆಯಾ ಕಾವ್ಯದ ಏರಿಳಿತಕ್ಕೆ ತಕ್ಕ ಹಾಗೆ ಜನಪದ ಪ್ರದರ್ಶನಾತ್ಮಕ ಕಲೆಗಳ ಲಯವೂ ಬದಲಾಗುತ್ತದೆ. ಇಲ್ಲಿನ ಜನಪದ ಕಾವ್ಯದಲ್ಲಿ ಜನರ ಚರಿತ್ರೆಯೋ, ಜನರ ಪ್ರತಿರೋಧವೋ ದಾಖಲಾಗುತ್ತದೆ. ಇದು ಮೌಖಿಕ ಚರಿತ್ರೆಯನ್ನು ದಾಖಲಿಸುತ್ತಾ ಹೋಗುತ್ತದೆ. ಹಾಗೆಯೇ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಪ್ರಸಾರವಾಗುತ್ತಿರುತ್ತದೆ.

 ಆದರೆ ಇಂದು ಹೀಗೆ ಹಾಡುಪರಂಪರೆಯ ಭಾಗವಾಗಿದ್ದ ಪ್ರದರ್ಶನಾತ್ಮಕ ಕಲೆಗಳು ಆಯಾ ಹಾಡು ಗೀತೆ, ಸಾಹಿತ್ಯವನ್ನು ಕಳಚಿಕೊಂಡು ಕೇವಲ ಪ್ರದರ್ಶನ ನೀಡಬಲ್ಲ ಕಲೆಗಳಾಗಿವೆ. ಹೀಗೆ ಈ ಬಗೆಯ ಸಾಹಿತ್ಯದ ಗೈರು ಹಾಜರಿಯಿಂದ ಆಯಾ ಜನಪದ ಕಲಾವಿದ ಈ ಕಲೆಯ ಮೂಲಕ ಏನನ್ನು ಹೇಳಲು ಬಯಸುತ್ತಾನೆ ಎನ್ನುವುದು ತಿಳಿಯುವುದಿಲ್ಲ. ಅಥವಾ ಈ ಮೂಲಕ ಜನಪದ ಕಲಾವಿದನೊಬ್ಬನು ಈ ಸಮಾಜದ ಬಗ್ಗೆ ತಾನು ಹೇಳಬೇಕಾದ್ದನ್ನು ಹೇಳದೆ ಮೌನವಾಗುತ್ತಾನೆ. ಹೀಗೆ ದೃಶ್ಯ ಮುಂದೆ ಬಂದು ಮಾತು ಮೌನವಾಗುತ್ತಿರುವ ಚಲನೆಯು ಕಾಣುತ್ತಿದೆ.

    ಜನಪದ ಕಲಾವಿದರಿಗೆ ತಮ್ಮ ಕಲೆಯನ್ನು ಮಾರುಕಟ್ಟೆಯ ಸರಕಿನ ಹಾಗೆ ಆಕರ್ಷಕವಾಗಿ ಕಾಣಿಸುವಲ್ಲಿ ಹೆಚ್ಚು ಉತ್ಸುಕರಾಗಿದ್ದಾರೆ. ಮುಖ್ಯವಾಗಿ ಜನಪದ ಪ್ರದರ್ಶನಾತ್ಮಕ ಕಲೆಗಳ ವೇಷಭೂಷಣಗಳಲ್ಲಿ ತುಂಬಾ ಬದಲಾವಣೆಗಳು ಆಗಿವೆ. ಈ ವೇಷಭೂಷಣಗಳು ಸಂಸ್ಕೃತಿಯ ಯಾವುದೋ ಸಾಂಕೇತಿಕೆ ಆಗಿರದೆ, ಅದು ಕೇವಲ ನೋಡುಗರನ್ನು ಆಕಷರ್ಿಸುವ ಉದ್ದೇಶವನ್ನು ಮಾತ್ರ ಹೊಂದಿರುತ್ತವೆ. ಇನ್ನು ಈಚೆಗೆ ಜನಪದ ಕಲೆಗಳಲ್ಲಿ ಸಾಹಸದ ಪ್ರದರ್ಶನ ಮಾಡಲಾಗುತ್ತಿದೆ. ಹೀಗೆ ಸಾಹಸದ ಪ್ರದರ್ಶನ ಆಯಾ ಕಲೆಯ ಭಾಗವಾಗಿ ಬಂದದ್ದಲ್ಲ. ಬದಲಾಗಿ ಜನರನ್ನು ಅಚ್ಚರಿಗೊಳಿಸುವ, ಜನರನ್ನು ಮೈನೆವರೇಳಿಸುವ, ಅಥವಾ ಅದೇ ಕಲೆಯ ಬೇರೊಂದು ತಂಡಕ್ಕಿಂತ ಭಿನ್ನವಾಗಿ ಕಾಣುವ ಒಡಗಳು ಇದ್ದಂತಿದೆ.

   ಪ್ರದರ್ಶನ ಕೊಡುವ ಸಂದರ್ಭದಲ್ಲಿ ರಾಜಕಾರಣಿಗಳಿಗೆ, ಸರಕಾರದ ಪ್ರಭಾವಿಗಳ ಎದುರು ತಮ್ಮನ್ನು ತಾವು ಜಾಹೀರಾತು ಮಾಡಿಕೊಳ್ಳುವ ಗುಣ ಬೆಳೆಯುತ್ತಿದೆ. ಕಾರಣ ಮುಂದಿನ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸುವ ಹಾಗೆ ಪ್ರಭಾವಿಸುವ ಮನಸ್ಥಿತಿ ಇದರ ಹಿಂದೆ ಇದ್ದಂತಿದೆ. ಇನ್ನು ತಮ್ಮ ಪ್ರದರ್ಶನಾತ್ಮಕ ಕಲೆಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಮಾಡುವ ಹಪಾಹಪಿ ಹೆಚ್ಚುತ್ತಿದೆ. ಈ ಕಾರಣಕ್ಕೆ ಮಾಧ್ಯಮದವರ ಮುಂದೆ ಹಲ್ಲು ಗಿಂಜುವ ಕೀಳು ಪ್ರವೃತ್ತಿಯೂ ಬೆಳೆಯುತ್ತಿದೆ. ಬಹುಶಃ ಈ ಬೆಳವಣಿಗೆ ನೇರವಾಗಿ ಜಾಗತೀಕರಣದ ಪ್ರಭಾವವನ್ನು ತೋರಿಸುತ್ತಿದೆ.

 


   ಹೀಗೆ ಜನಪದ ಕಲೆಗಳು ಆಧುನಿಕತೆಯಿಂದಾಗಿ ನೇರ ಪ್ರಭಾವಕ್ಕೆ ಒಳಗಾಗಿವೆ. ಇದರ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಹೇಳಲು ಸಾದ್ಯವಾಗಿದೆ. ಇದನ್ನು ಇನ್ನಷ್ಟು ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಜನಪದ ಕಲೆಗಳು ನಾಶವಾಗಿವೆ ಎನ್ನುವುದಕ್ಕಿಂತ ಅವುಗಳ ಹೊಸ ಚಲನೆ ಏನಾಗಿದೆ ಎಂದು ನೋಡುವುದು ಸರಿ. ಈ ಬಗೆಯ ಹೊಸ ಚಲನೆಗಳು ಕಾಲದ ಜತೆ ಸಾವಯವ ಸಂಬಂಧವನ್ನು ರೂಪಿಸಿಕೊಳ್ಳುವ ಕಲೆಯೊಂದರ ಜಿಗುಟುತನವನ್ನು ಕಾಣಿಸುತ್ತದೆ.
ಚಿತ್ರ ಕೃಪೆ : ಜಾನಪದ ಲೋಕ