ಸೋಮವಾರ, ಮೇ 29, 2017

ಉತ್ತರಪ್ರದೇಶದಲ್ಲಿ ಸ್ವಾಭಿಮಾನೀ ದಲಿತರು ಹಾಕಿರುವ ಮತ್ತೊಂದು ಸವಾಲು



ಸಹರಾನ್ಪುರದಲ್ಲಿ ಉದಯಿಸಿರುವ ಭೀಮ್ ಆರ್ಮಿ (ಭೀಮ ಸೇನೆ)ಯು ಉತ್ತರ ಪ್ರದೇಶದ ದಲಿತರಲ್ಲಿ ಹರಳುಗಟ್ಟುತ್ತಿರುವ ಆಕ್ರಮಣಶೀಲತೆಯನ್ನು ಸೂಚಿಸುತ್ತದೆ

bhim army ಗೆ ಚಿತ್ರದ ಫಲಿತಾಂಶ
 ಅನುಶಿವಸುಂದರ್        

ಇತ್ತೀಚೆಗೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಠಾಕೂರರಿಗೂ ಮತ್ತು ದಲಿತರಿಗೂ ಮಧ್ಯೆ ನಡೆದಿರುವ ಘರ್ಷಣೆಗಳು, ಅಧಿಕಾರದಲ್ಲಿ ಬದಲಾವಣೆಯಾಗುತ್ತಿದ್ದಂತೆ ಅಲ್ಲಿ ವಿಷಮಗೊಳ್ಳುತ್ತಿರುವ ಸಾಮಾಜಿಕ ಸಂಬಂಧಗಳನ್ನೂ ಮತ್ತು ಸಾಂಸ್ಕೃತಿಕ ಹಕ್ಕುದಾರಿಕೆಗಳ (ಅಸರ್ಷನ್) ನಡುವಿನ ಸಂಘರ್ಷವನ್ನೂ ಸೂಚಿಸುತ್ತದೆ. ಕಳೆದ ೧೫ ವರ್ಷಗಳಲ್ಲಿ ಮಾಯಾವತಿಯವರ ಬಹುಜನ್ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ (ಎಸ್ಪಿ)ಗಳು ದಲಿತರ ಮತ್ತು ಹಿಂದುಳಿದ ಜಾತಿಗಳ ಸಾಮಾಜಿಕ ಗೌರವ ಮತ್ತು ಘನತೆಗಳನ್ನು ಎತ್ತಿಹಿಡಿಯುತ್ತಾ ಉತ್ತರ ಪ್ರದೇಶದ ಸಾಮಾಜಿಕ ಮತ್ತು ರಾಜಕೀಯ ವಲಯವನ್ನು ಒಂದಷ್ಟು ಪ್ರಜಾತಾಂತ್ರಿಕಗೊಳಿಸಿದ್ದವು. (ಅದೇ ಸಮಯದಲ್ಲಿ ಅವೆರಡರ ನಡುವೆ ಅಂತರ್ವೈರುಧ್ಯಗಳಿರುವುದೂ ವಾಸ್ತವವೇ.) ಇತ್ತೀಚೆಗೆ ಅಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಚುನಾವಣಾ ವಿಜಯವನ್ನು ಸಾಧಿಸಿ ಠಾಕೂರ್ ಜಾತಿಯ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದರಿಂದ ಅಲ್ಲಿ ಮತ್ತೆ ರಾಜಕೀಯ ಅಧಿಕಾರವು ಮೇಲ್ಜಾತಿಗಳ ಕೈಗೆ ಮರಳಿದಂತಾಗಿದೆ. ಇದರಿಂದ ಉತ್ತೇಜಿತರಾಗಿರುವ ಠಾಕೂರ್ ಹಾಗೂ ಮತ್ತಿತರ ಮೇಲ್ಜಾತಿಗಳು ತಮ್ಮ ಮೇಲಾಳ್ತನವನ್ನು ಪುನರ್ ಸ್ಥಾಪಿಸಲು ರಾಜಕೀಯ ಸಂದರ್ಭವನ್ನು ಬಳಸಿಕೊಳ್ಳುತ್ತಿವೆ.
bhim army ಗೆ ಚಿತ್ರದ ಫಲಿತಾಂಶ

ಸಹರಾನ್ಪುರ್ ಜಿಲ್ಲೆಯ ಶಬ್ಬೀರ್ಪುರದ ಜಾತವ-ದಲಿತರು ೨೦೧೭ರ ಏಪ್ರಿಲ್ ೨೦ ರಂದು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಅಂಬೇಡ್ಕರ್ ಪ್ರತಿಮೆಯೊಂದನ್ನು ಸ್ಥಾಪಿಸಲು ಮುಂದಾದಾಗ ಮೊಟ್ಟ ಮೊದಲ ಘರ್ಷಣೆ ಸಂಭವಿಸಿತು. ಅಂಬೇಡ್ಕರ್ ಜಯಂತಿಗೆ ಮತ್ತು ಪ್ರತಿಮೆ ಸ್ಥಾಪನೆಗೆ ಬೇಕಾದ ಆಡಳಿತಾತ್ಮಕ ಅನುಮತಿಯನ್ನು ತೆಗೆದುಕೊಂಡಿಲ್ಲವೆಂಬುದು ಮಾತ್ರವಲ್ಲದೆ ಅಂಬೇಡ್ಕರ್ ಪ್ರತಿಮೆಯ ತೋರುಬೆರಳು ಮೇಲ್ಜಾತಿಗಳ ಕೇರಿಗಳ ಕಡೆಗೆ ಬೊಟ್ಟುಮಾಡಿದ್ದೂ ಸಹ ಠಾಕೂರರ ಪ್ರತಿರೋಧಕ್ಕೆ ಕಾರಣವಾಯಿತು. ಎರಡನೆ ಘರ್ಷಣೆಯು ಮೇಲ್ಜಾತಿ ಠಾಕೂರರು ಮಧ್ಯಯುಗೀನ ದೊರೆ ಮಹಾರಾಣಾ ಪ್ರತಾಪನ ನೆನಪಿನಲ್ಲಿ ೨೦೧೭ರ ಮೇ ರಂದು ಮೆರವಣಿಗೆ ಹೊರಟಾಗ ಸಂಭವಿಸಿತು. ಮೆರವಣಿಗೆಯು ದಲಿತರ ಕಾಲೋನಿಯನ್ನು ಪ್ರವೇಶಿಸಿದಾಗ ದಲಿತರೂ ಸಹ ಮೆರವಣಿಗೆಗೆ ಆಡಳಿತಾತ್ಮಕ ಅನುಮತಿ ತೆಗೆದುಕೊಂಡಿಲ್ಲವೆಂಬ ಕಾರಣವನ್ನು ಮುಂದೊಡ್ಡಿ ಮೆರವಣಿಗೆಯನ್ನು ತಡೆದರು. ಬಾರಿ ನಡೆದ ಘರ್ಷಣೆಯಲ್ಲಿ ಎರಡು ಕಡೆಯವರು ಕಲ್ಲು ತೂರಾಟ ನಡೆಸಿದರು. ಆದರೆ ಠಾಕೂರರು ಪುಂಡಾಟವನ್ನು ಮುಂದುವರೆಸಿ ಹಲವಾರು ದಲಿತರ ಮನೆಗಳಿಗೆ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು ಮಾತ್ರವಲ್ಲದೆ ಹಲವಾರು ದಲಿತ ನಾಯಕರ ಪ್ರತಿಮೆಗಳನ್ನು, ಪೂಜಾಸ್ಥಳಗಳನ್ನು ವಿರೂಪಗೊಳಿಸಿದರು. ಹಿಂಸಾಚಾರದಲ್ಲಿ ಒಬ್ಬ ಠಾಕೂರ್ ಯುವಕ ಮೃತನಾದದ್ದಲ್ಲದೆ, ಎರಡೂ ಸಮುದಾಯಗಳಿಗೆ ಸೇರಿದ ಹಲವಾರು ಯುವಕರು ಗಂಭೀರವಾಗಿ ಗಾಯಗೊಂಡರು ಮತ್ತು ಹಿಂಸಾಚಾರಗಳು ಮತ್ತಷ್ಟು ಹೆಚ್ಚುವ ಭಯದಲ್ಲಿ ದಲಿತರು ಸಾಮೂಹಿಕವಾಗಿ ಹಳ್ಳಿಯನ್ನು ತೊರೆದು ಓಡಿಹೋದರು.
bhim army ಗೆ ಚಿತ್ರದ ಫಲಿತಾಂಶ

ಸಹರಾನ್ಪುರ್ ಜಿಲ್ಲೆಯು ಸಾಮಾಜಿಕವಾಗಿ ಉದ್ರಿಕ್ತ ಸ್ಥಿತಿಯಲ್ಲಿರುವ ಜಿಲ್ಲೆಯೆಂದೇ ಪರಿಗಣಿಸಲ್ಪಟ್ಟಿದ್ದು ಠಾಕೂರ್ ಮತ್ತು ದಲಿತರ ನಡುವೆ ಮಾತ್ರವಲ್ಲದೆ ಹಿಂದೂ ಮತ್ತು ಮುಸ್ಲಿಮರ ನಡುವೆಯೂ ಘರ್ಷಣೆಗಳು ಸಂಭವಿಸುತ್ತಿರುತ್ತವೆ. ಉದ್ವಿಘ್ನ ಪರಿಸ್ಥಿತಿಯು ರಾಜಕೀಯ ರಂಗದಲ್ಲೂ ಪ್ರತಿಫಲಿತಗೊಂಡಿದ್ದು, ಕ್ಷೇತ್ರದ ಸಂಸತ್ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದ್ದರೆ, ಶಾಸನಸಭಾ ಸ್ಥಾನವನ್ನು ಕಾಂಗ್ರೆಸ್- ಎಸ್ಪಿ ಮೈತ್ರಿಕೂಟ ಗೆದ್ದುಕೊಂಡಿದೆ. ಮುನಿಸಿಪಲ್ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ. ಸಹರಾನ್ಪುರ್ ಜನಸಂಖ್ಯೆಯಲ್ಲಿ ಕೆಳಜಾತಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಲಿತರು ಶೇ.೨೬ರಷ್ಟಿದ್ದರೆ ಠಾಕೂರರು ಶೇ.೧೦ರಷ್ಟು ಮಾತ್ರವಿದ್ದಾರೆ. ಆದರೆ ಶಬ್ಬೀರ್ಪುರ್ ಗ್ರಾಮದಲ್ಲಿ ಶೇ.೬೦ರಷ್ಟು ಠಾಕೂರರಿದ್ದರೆ ಶೇ.೧೫ರಷ್ಟು ಮಾತ್ರ ದಲಿತರಿದ್ದಾರೆ. ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳ ಬೆಳವಣಿಗೆಯು ದಮನಿತ ಜಾತಿಗಳ ಮತಗಳ ತಳಹದಿಯನ್ನು ಗಟ್ಟಿಗೊಳಿಸಿದ್ದು ಮಾತ್ರವಲ್ಲದೆ ಸಾಮಾಜಿಕ ಮೇಲ್ಚಲನೆಯ ಸಾಧ್ಯತೆಗಳನ್ನೂ ವಿಸ್ತರಿಸಿತ್ತು. ಆದರೆ ಕ್ರಮೇಣ ಪಕ್ಷಗಳ ಭವಿಷ್ಯಕ್ಕೆ ಮಂಕು ಕವಿಯುತ್ತಿದೆ. ಆದರೂ ಪಕ್ಷಗಳು ಮಾಡಿದ ನಿರಂತರ ರಾಜಕೀಯ ಒಟ್ಟೋಣವು ದಮನಿತ ಸಮುದಾಯಗಳಲ್ಲಿ ಒಂದು ಸ್ವತಂತ್ರವಾದ ಮತ್ತು ಸಿದ್ಧಾಂತಗಳಿಂದ ಪ್ರೇರಿತವಾದ ಸ್ವಪ್ರತಿಪಾದನೆಯನ್ನು ಹುಟ್ಟುಹಾಕಿದಂತೆ ಕಾಣುತ್ತದೆ. ಜಾತವರು ಸಾಂಪ್ರದಾಯಿಕವಾಗಿ ದಲಿತ ಭಕ್ತಿ ಪಂಥೀಯ ಸಂತನಾದ ಸಂತ ರವಿದಾಸರ ಅನುಯಾಯಿಗಳಾಗಿದ್ದು ಬಲವಾದ ಅಂಬೇಡ್ಕರ್ವಾದಿಗಳಾಗಿ ಬದಲಾಗಿದ್ದಾರೆ. ಸಾಲು ಸಾಲು ಅಂಬೇಡ್ಕರ್ ಜಯಂತಿಗಳು, ಅಂಬೇಡ್ಕರ್ ಪ್ರತಿಮೆ ಮತ್ತು ಪೋಸ್ಟರ್ಗಳು ಎಲ್ಲೆಡೆ ಹರಡುತ್ತಿರುವುದರಲ್ಲಿ ಮತ್ತು ಹಿಂದೂಧರ್ಮದಿಂದ ಮತಾಂತರಗೊಳ್ಳುತ್ತಿರುವುದರಲ್ಲಿ ಇದು ಸ್ಪಷ್ಟವಾಗಿ ಎದ್ದುಕಾಣುತ್ತದೆ.

ಇವುಗಳಲ್ಲಿ ಎಲ್ಲಕ್ಕಿಂತ ಎದ್ದುಕಾಣುವುದು ಭೀಮ್ ಆರ್ಮಿ (ಭೀಮ ಸೇನೆ) ಉದಯ. ಸಂಘಟನೆಯು ಜಾತಿ ಆಧಾರಿತ ಹಿಂಸಾಚಾರಗಳ ವಿರುದ್ಧ ಅದರಲ್ಲೂ ಶಬ್ಬೀರ್ಪುರ ಘರ್ಷಣೆಯ ವಿರುದ್ಧ ದಲಿತರ ಪ್ರತಿರೋಧಕ್ಕೆ ನಾಯಕತ್ವ ನೀಡುತ್ತಿರುವುದಲ್ಲದೆ ಪ್ರಭುತ್ವದ ನಿಷ್ಕ್ರಿಯತೆ ಮತ್ತು ಮಾಧ್ಯಮಗಳ ಸಂವೇದನಾಶೂನ್ಯತೆಯ ವಿರುದ್ಧವೂ ಹೋರಾಡುತ್ತಿದೆ. ಇದನ್ನು ಸಹರಾನ್ಪುರದ ಚಂದ್ರಶೇಖರ್ ಆಜ಼ಾದ್ ರಾವಣ್ ಎಂಬ ಯುವ ವಕೀಲ ಸ್ಥಾಪಿಸಿದ್ದು, ವಲಯದಲ್ಲಿ ದಲಿತರ ಮೇಲೆ ಎಲ್ಲೇ ಹಿಂಸಾಚಾರಗಳು ನಡೆದರೂ ಕೂಡಲೇ ಮಧ್ಯಪ್ರವೇಶಿಸುವ ಮೂಲಕ ಮತ್ತು ಹಿಂಸಾಚಾರಕ್ಕೆ ಕಾರಣರಾದ ಶಕ್ತಿಗಳ ಮತ್ತು ಪೊಲೀಸರ ವಿರುದ್ಧ ವೀರೋಚಿತಚಾಗಿ ಸಂಘರ್ಷ ಮಾಡುವ ಮೂಲಕ ಭೀಮ್ ಆರ್ಮಿ ದಲಿತ ಯುವಕರಲ್ಲಿ ಅತ್ಯಂತ ಜನಪ್ರಿಯವಾಗುತ್ತಿದೆ. ರಾಜಕೀಯವಾಗಿ ಚುರುಕಾಗಿರುವ, ಸಂವಹನದಲ್ಲಿ ಚತುರರಾಗಿರುವ, ಮಾಧ್ಯಮ ನಿರ್ವಹಣೆಯಲ್ಲಿ ಜಾಣರಾಗಿರುವ ಮತ್ತು ಜಾತಿ ತಾರತಮ್ಯಗಳನ್ನು ಕಿಂಚಿತ್ತೂ ಸಹಿಸದ ಭೀಮ್ ಆರ್ಮಿ ೧೯೭೦ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಹುಟ್ಟುಕೊಂಡಿದ್ದ ದಲಿತ್ ಪ್ಯಾಂಥರ್ಸ್ ಅನ್ನು ನೆನಪಿಗೆ ತರುತ್ತದೆ. ಬಿಎಸ್ಪಿ ಪಕ್ಷದ ಪರಂಪರೆಯನ್ನು ಒಪ್ಪಿಕೊಳ್ಳುವ ಮತ್ತು ಅದರ ಶಕ್ತಿ ಮತ್ತು ಮಿತಿಗಳೆರಡನ್ನೂ ಅರಿತುಕೊಂಡಿರುವ ಭೀಮ್ ಆರ್ಮಿ ಪಕ್ಷವನ್ನು ಹೊರದೂಡುವುದರ ಬದಲಿಗೆ ಅದರ ಜೊತೆಜೊತೆಗೇ ತನ್ನ ಅಸ್ಥಿತ್ವವನ್ನು ಕಾಣಬಯಸುತ್ತದೆ. ಉತ್ತರ ಪ್ರದೇಶದ ಪೊಲೀಸರು ಭೀಮ್ ಆರ್ಮಿಯನ್ನು ಸಮಾಜ ವಿರೋಧಿ ಮಾತ್ರವಲ್ಲ ಪ್ರಭುತ್ವ ವಿರೋಧಿ ಸಂಘಟನೆಯೆಂದು ಪಟ್ಟಿ ಕಟ್ಟಲು ಪ್ರಯತ್ನಿಸುತ್ತಿದೆ. ಆದರೆ ಭೀಮ್ ಆರ್ಮಿಯ ಹುಟ್ಟನ್ನು ಉತ್ತರ ಪ್ರದೇಶದ ಎರಡು ಸಾಮಾಜಿಕ ವಾಸ್ತವಗಳ ಹಿನ್ನೆಲೆಯಲ್ಲೇ ಅರ್ಥಮಾಡಿಕೊಳ್ಳಬೇಕಿದೆ. ಅದು ಉತ್ತರ ಪ್ರದೇಶದ ದಲಿತರು ದಿನನಿತ್ಯ ಎದುರಿಸುವ ಹಿಂಸಾಚಾರ ಮತ್ತು ಬಹಿಷ್ಕಾರಗಳು ಹಾಗೂ ರಾಜ್ಯದ ಸಾರ್ವಜನಿಕ ವಲಯದ ಹೆಚ್ಚುತ್ತಿರುವ ಅಪರಾಧೀಕರಣ. ಇವೆರಡು ಸಾಧ್ಯವಾಗುತ್ತಿರುವುದು ಪ್ರದೇಶದಲ್ಲಿ ಜಾತಿ-ವರ್ಗ- ಪ್ರಭುತ್ವಗಳ ಮೈತ್ರಿಕೂಟಗಳ ಕೃಪಾಶೀರ್ವಾದದಿಂದ.

ಮೇಲ್ಜಾತಿಗಳಿಗಂತೂ ಅವರು ನಿರೀಕ್ಷಿಸುತ್ತಿದ್ದ ರಾಜಕೀಯ ಸುಸಂದರ್ಭ ಒದಗಿ ಬಂದಿದೆ.

ಒಬ್ಬ ದುಸ್ಸಾಹಸಿ ದುರಭಿಮಾನಿಯೊಬ್ಬನ ಕೈಯಲ್ಲಿ ಅಧಿಕಾರದ ಚುಕ್ಕಾಣಿಯಿರುವುದರಿಂದ ಠಾಕೂರರಂಥ ಮೇಲ್ಜಾತಿಗಳು ಅಂತಿಮವಾಗಿ  ತಮ್ಮ ಕಳೆದುಹೋದ ತಮ್ಮ ಧಾರ್ಮಿಕ ಮತ್ತು ಭೌತಿಕ ಮೇಲಧಿಕಾರವನ್ನು ಪುನರ್ಸ್ಥಾಪಿಸಿಕೊಳ್ಳಲು ಬೇಕಾದ ರಾಜಕೀಯ ಬೆಂಬಲವನ್ನು ಕಂಡುಕೊಂಡಿದ್ದಾರೆ. ಠಾಕೂರ್ ಸಮುದಾಯವನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ತಂತ್ರದ ಭಾಗವಾಗಿಯೇ ಬಿಜೆಪಿಯು ಮಹಾರಾಣಾ ಪ್ರತಾಪನನ್ನು ಒಬ್ಬ ಸ್ಥಳೀಯ ಮತ್ತು ಸಾಂಸ್ಕೃತಿಕ ನಾಯಕನನ್ನಾಗಿ ಸಂಭ್ರಮಾಚರಣೆಗಳನ್ನು ಮಾಡುವುದನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಇದು ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟಿನಿಂದ ಮತ್ತು ಕೆಳಜಾತಿಗಳ ಮುನ್ನೆಡೆಯಿಂದ ಅಸಮಾಧಾನಗೊಂಡಿರುವ ಮೇಲ್ಜಾತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ದೇಶಾದ್ಯಂತ ಅನುಸರಿಸುತ್ತಿರುವ ಕಾರ್ಯತಂತ್ರದ ಭಾಗವೇ ಆಗಿದೆ. ಶಬ್ಬೀರ್ಪುರದ ಘಟನೆಗಳು ಇದಕ್ಕೆ ಪುರಾವೆಯನ್ನೊದಗಿಸುತ್ತವೆ. ಅಲ್ಲಿ ಠಾಕೂರರು ದಾಳಿ ಮಾಡಿದ್ದು ಜಾತವ ದಲಿತರ ಅನನ್ಯತೆ ಮತ್ತು ಮೇಲ್ಚಲನೆಯ ಪ್ರತೀಕಗಳಾಗಿದ್ದ ಭೌತಿಕ ಆಸ್ತಿಪಾಸ್ತಿ ಮತ್ತು ಸಾಂಸ್ಕೃತಿಕ ಪ್ರತಿಮೆಗಳ ಮೇಲೆ. ಇದು ದಲಿತರನ್ನು ಎಲ್ಲಿಡಬೇಕೋ ಅಲ್ಲಿಡಬೇಕು ಅನ್ನುವ ಉದ್ದೇಶದಿಂದ ದಲಿತರ ಮೇಲೆ ಸಾಮಾನ್ಯವಾಗಿ ನಡೆಸುವ ಮತ್ತೊಂದು ಹಿಂಸಾಚಾರದಂತೆ ಆಗದಿರಲು ಪ್ರಧಾನ ಕಾರಣ ಭೀಮ್ ಆರ್ಮಿಯ ಮಧ್ಯ ಪ್ರವೇಶ ಮತ್ತು ನ್ಯಾಯ ಸಿಗುವ ತನಕ ಹಳ್ಳಿಗೆ ಹಿಂತಿರುಗುವುದಿಲ್ಲವೆಂದು ಹಠ ತೊಟ್ಟಿರುವ ಶಬ್ಬೀರ್ಪುರ ದಲಿತರ ನಿರ್ಧಾರ.

ಆದಿತ್ಯನಾಥರ ಮುಸ್ಲಿಮ್ ವಿರೋಧಿ ಹಿನ್ನೆಲೆ ಬಲ್ಲವರಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಗೆದ್ದ ನಂತರ ಕೋಮು ಉದ್ವಿಘ್ನ ಪರಿಸ್ಥಿತಿಯು ನಿರ್ಮಾಣಗೊಳ್ಳುವುದರ ಬಗ್ಗೆ ಸಂಶಯವೇನೂ ಇರಲಿಲ್ಲ. ಆದರೆ ಅವರ ಅಧಿಕಾರಾವಧಿಯ ಪ್ರಾರಂಭದ ದಿಸೆಯಲ್ಲೇ ಜಾತಿ ಧೃವೀಕರಣಗಳು ಇಷ್ಟು ಬೇಗ ಸಂಭವಿಸುತ್ತಿರುವುದು ಉತ್ತರ ಪ್ರದೇಶದ ಜನರಿಗೆ ಮಾತ್ರವಲ್ಲದೆ ಬಿಜೆಪಿಗೂ ಸಹ ತಲೆ ಬಿಸಿ ಮಾಡುವ ಅಪಾಯದ ಗಂಟೆಯಾಗಿದೆ. ಬೆಳವಣಿಗೆಗಳ ದೀರ್ಘ ಕಾಲೀನ ರಾಜಕೀಯ ಪರಿಣಾಮಗಳ ಬಗ್ಗೆ ಈಗಲೇ ಸ್ಪಷ್ಟ ಚಿತ್ರಣವು ಸಿಗುತ್ತಿಲ್ಲ್ಲ. ಆದರೆ ಚುನಾವಣೆ ಸಮಯದಲಿ ನಾವು ಹಿಂದೂಗಳು; ನಂತರ ನಾವು ದಲಿತರು ಎಂಬ ಚಂದ್ರಶೇಖರ್ ಅವರ ಹೇಳಿಕೆಯಲ್ಲಿ ವ್ಯಕ್ತವಾಗಿರುವ ದಲಿತ ಅಸಮಾಧಾನದ ಆಕ್ರಮಶೀಲ ಪ್ರತಿಕ್ರಿಯೆಗಳು ಬಿಜೆಪಿಯ ವಿರುದ್ಧ ಒಂದು ಪ್ರತಿರೋಧದ ಅಲೆಯನ್ನು ಹುಟ್ಟಿಸಬಲ್ಲ ಸಾಧ್ಯತೆಯ ಸೂಚನೆಯನ್ನಂತೂ ನೀಡುತ್ತಿದೆ.

         ಕೃಪೆ: Economic and Political Weekly
              May 20, 2017. Vol 52. No. 20

                                                                                                                               










ನಕ್ಸಲ್ಬರಿ- ಒಂದು ಮುಗಿಯದ ಇತಿಹಾಸ


ಭಾರತೀಯ ಬಂಡವಾಳದ ಅತಾರ್ಕಿಕತೆ, ಬರ್ಬರತೆ ಮತ್ತು ಅಮಾನವೀಯತೆಗಳ ಮೇಲೆ ವಿಶ್ವಾಸ, ಪ್ರೀತಿ ಮತು ಭರವಸೆಗಳು ವಿಜಯ ಸಾಧಿಸಬಲ್ಲದೇ?

  ಅನುಶಿವಸುಂದರ್
ನಕ್ಸಲ್ ಗೆ ಚಿತ್ರದ ಫಲಿತಾಂಶ

ಬರ್ನಾಡ್  ಡಿಮೆಲ್ಲೋ ಬರೆಯುತ್ತಾರೆ:

೧೯೪೭ರಲ್ಲಿ ಭಾರತದ ಆಳುವ ವರ್ಗಗಳಿಗೆ ಅಧಿಕಾರ ವರ್ಗಾವಣೆಯಾಯಿತು. ಆದರೆ ನಂತರಅತಿ ಸ್ವಲ್ಪ ಸಮಯದಲ್ಲೇ ಭಾರತದ ಹೊಸ ಆಳುವ ವರ್ಗ ೧೯೪೮ರಲ್ಲಿ ತೆಲಂಗಾಣಕ್ಕೆ ಸೈನ್ಯವನ್ನು ಕಳಿಸಿ ತನ್ನ ನಿಜಬಣ್ಣವನ್ನು ಬಯಲುಮಾಡಿಕೊಂಡಿತು. ಹೊಸ ಸರ್ಕಾರದ  ಸೈನಿಕ ಕಾರ್ಯಾಚರಣೆಗೆ ಇತರ ಉದ್ದೇಶಗಳಿದ್ದವಾದರೂ, ಅದರ ಪ್ರಮುಖವಾದ ಉದ್ದೇಶ ತೆಲಂಗಾಣದಲ್ಲಿ ಅಸ್ಥಿತ್ವದಲ್ಲಿದ್ದ ಅರೆ ಊಳಿಗಮಾನ್ಯತೆಯ ವಿರುದ್ಧದ ಪ್ರಜಾತಾಂತ್ರಿಕ ಕ್ರಾಂತಿಯನ್ನು ಪೂರ್ಣಗೊಳಿಸಬೇಕೆಂದು ಪಣತೊಟ್ಟಿದ್ದ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ರೈತ ಬಂಡಾಯಗಾರರನ್ನು ಮಟ್ಟ ಹಾಕುವುದೇ ಆಗಿತ್ತು. ವಾಸ್ತವವಾಗಿ ಭಾರತೀಯ ಸೈನ್ಯವು ತೆಲಂಗಾಣದ ಗ್ರಾಮೀಣ ಪ್ರದೇಶದಲ್ಲಿ ಅರೆ ಊಳಿಗಮಾನ್ಯತೆಯು ಮತ್ತೆ ನೆಲೆಗೊಳ್ಳಲು ಬೇಕಾದ ಸಕ್ರಿಯ ಸಹಕಾರವನ್ನೆಲ್ಲಾ ನೀಡಿತು. ಅಂದಿನಿಂದಲೂ ಭಾರತದ ಕೋಟ್ಯಾಂತರ ಜನತೆ ಭಾರತೀಯ ಬಂಡವಾಳದ ಅತಾರ್ಕಿಕತೆ, ಬರ್ಬರತೆ ಮತ್ತು ಅಮಾನವೀಯತೆಗಳಿಗೆ ಬಲಿಯಾಗುತ್ತಲೇ ಬಂದಿದ್ದಾರೆ. ಹೀಗಾಗಿ ಕಳೆದ ೫೦ ವರ್ಷU ನಕ್ಸಲೈಟರ ಅರ್ಥಾತ್ ಭಾರತೀಯ ಮಾವೋವಾದಿಗಳ ನಡೆಸುತ್ತಿರುವ ನಿರಂತರ ಸಮರ ಭಾರತದ ದಮನಕಾರಿ ಮತ್ತು ಶೋಷಕ ಸಾಮಾಜಿಕ ವ್ಯವಸ್ಥೆಯನ್ನು ಕ್ರಾಂತಿಕಾರಿಯಾಗಿ ಬದಲಾಯಿಸುವುzಕ್ಕೇ ಆಗಿದೆ. ಹಾಗೂ ಇದರಲ್ಲಿ ಆಶ್ಚರ್ಯವೇನೂ ಇಲ್ಲ.

ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ)ವು ೧೯೬೪ರಲ್ಲಿ ಎರಡಾಗಿ ವಿಭಜನೆಗೊಂಡಿತ್ತು. ಅದರಿಂದ ಹೊರಬಂದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಎಂ- ಒಳಗಿದ್ದ ಮಾವೋವಾದಿ ಬಣವು ಐವತ್ತು ವರ್ಷಗಳ ಕೆಳಗೆ ಉತ್ತರ ಬಂಗಾಳದ ದುರ್ಗಮ ಪ್ರದೇಶವಾದ ನಕ್ಸಲ್ಬರಿಯಲ್ಲಿ ಒಂದು ಸಶಸ್ತ್ರ ರೈತ ಹೋರಾಟವನ್ನು ಸಂಘಟಿಸಿತು. ಕಾರಣಕ್ಕೆ ಭಾರತೀಯ ಮಾವೋವಾದಿಗಳಿಗೆ ನಕ್ಸಲೈಟರೆಂಬ ಹೆಸರೂ ಬಂದಿತು. ಅದು ೧೯೬೭ರ ಮಾರ್ಚನಲ್ಲಿ ಪ್ರಾರಂಭವಾದರೂ ಅದೇ ವರ್ಷದ ಜುಲೈ ವೇಳೆಗೆ ಕ್ರೂರವಾಗಿ ದಮನಿಸಲ್ಪಟ್ಟಿತು. ಸಮಯದಲ್ಲಿ ಹೋರಾಟಕ್ಕೆ ನಾಯಕತ್ವ ನೀಡಿದ್ದ ಮತ್ತು ನಂತರದಲ್ಲಿ ಇಡೀ ದೇಶದ ನಕ್ಸಲೈಟ್ ಚಳವಳಿಗೆ ಮುನ್ನಡೆಸಿದ ಸಿಪಿಐ (ಮಾರ್ಕ್ಸ್ವಾದಿ-ಲೆನಿನ್ವಾದಿ) ಪಕ್ಷದ ಕಾರ್ಯದರ್ಶಿಯೂ ಆದ ಚಾರು ಮಜುಂದಾರ್ ಹೀಗೆ ಹೇಳಿದ್ದರು: ...ಭಾರತದಲ್ಲಿ ನೂರಾರು ನಕ್ಸಲ್ಬರಿಗಳು ಸಿಡಿದೇಳಲು ಸಿದ್ಧವಾಗಿವೆ...ನಕ್ಸಲ್ಬರಿ ಸತ್ತಿಲ್ಲ..ಸಾಯುವುದೂ ಇಲ್ಲ. ನಂತರದಲ್ಲಿ ನಡೆದ ಬೆಳವಣಿಗೆಗಳು ಚಾರು ಮಜುಂದಾರ್ ಅವರು ಹಗಲು ಕನಸನ್ನೇನೂ ಕಾಣುತ್ತಿರಲಿಲ್ಲವೆಂಬುದನ್ನು ಸಾಬೀತುಪಡಿಸಿತು. ಏಕೆಂದರೆ ವಸಾಹತು ಕಾಲಘಟ್ಟದಲ್ಲಿ ನಡೆದ ಸಶಸ್ತ್ರ ರೈತ ಬಂಡಾಯಗಳ ನೆನಪುಗಳೂ ಮತ್ತು ಅವು ಹುಟ್ಟುಹಾಕಿದ ಕನಸುಗಳೂ ಚಳವಳಿಗೆ ಹೊಸ ಕಸುವನ್ನೇ ನೀಡಿದವು. ೧೯೬೮-೧೯೭೨ರ ನಡುವೆ  ದೇಶದ ಹತ್ತಾರು ಭಾಗಗಳಲ್ಲಿ ಹಲವಾರು ನಕ್ಸಲ್ಬರಿಗಳು ಸಿಡಿದವು. ಅದರಲ್ಲಿ ಪ್ರಮುಖವಾದವು ಆಂಧ್ರಪ್ರದೇಶದ ಶ್ರೀಕಾಕುಳಂ ಮತ್ತು ಬಿಹಾರದ ಭೋಜ್ಪುರ್ಗಳಲ್ಲಿ ಸಿಡಿದೆದ್ದ ಹೋರಾಟಗಳು. ಆದರೆ ಅವುಗಳನ್ನೂ ಪ್ರಭುತ್ವವು ಅತ್ಯಂತ ಕ್ರೂರವಾಗಿ ದಮನಮಾಡಿತು.

ಆದರೆ ಒಂದು ಕ್ರಾಂತಿಗೆ ಅತ್ಯಗತ್ಯವಾದ ಭಾವನಾತ್ಮಕ ಸತ್ವಾಂಶಗಳಾದ ವಿಶ್ವಾಸ, ಪ್ರೀತಿ ಮತ್ತು ಭರವಸೆಗಳನ್ನು ತಮ್ಮ ಒಡಲ ತುಂಬಾ ತುಂಬಿಕೊಂಡಿದ್ದ ಕ್ರಾಂತಿಕಾರಿಗಳು ಹೋರಾಟವನ್ನು ಮುಂದುವರೆಸುತ್ತಾ ತಮ್ಮ ಜೀವಗಳನ್ನೇ ಅಪಾಯಕ್ಕೆ ಒಡ್ಡಿಕೊಂಡರು. ದೇಶದ ಬಡಜನತೆ ಹತ್ತಾರು ಅನ್ಯಾಯ ಮತ್ತು ಅಪಮಾನಗಳನ್ನು ಅನುಭವಿಸುವಂತೆ ಮಾಡಿರುವ ಶೋಷಕ ವ್ಯವಸ್ಥೆಯ ಎದಿರು ಮೌನವಾಗುಳಿಯಲು ಅವರು ಒಪ್ಪಲಿಲ್ಲ. ಅವರು ತಮ್ಮ ತಮ್ಮ ಒಳಿತಿನ ಬಗ್ಗೆ ಮಾತ್ರ ಕಾಳಜಿ ಮಾಡುವ ಸ್ವಾರ್ಥದ ಸಂಕೋಲೆಗಳನ್ನು ಕಿತ್ತೊಗೆದರು. ಪ್ರಭುತ್ವವು ೧೯೬೦ರ ಮತ್ತು ೧೯೭೦ರ ಕ್ರಾಂತಿಕಾರಿಗಳನ್ನು ಸೋಲಿಸಿದರೂ, ಇಂಥಾ ಕ್ರಾಂತಿಕಾರಿ ಹೋರಾಟವನ್ನು ಹುಟ್ಟುಹಾಕಿದ ಶೋಷಕ ಪರಿಸ್ಥಿತಿಗಳು ಹಾಗೆಯೇ ಮುಂದುವರೆದಿದ್ದರಿಂದ ಶೋಷಿತ ಮತ್ತು ದಮನಿತ ಸಮುದಾಯಗಳ ಹೊಸ ಪೀಳಿಗೆಯು ಕ್ರಾಂತಿಯನ್ನು ಮತ್ತೆ ದೇಶದ ಮುನ್ನೆಲೆಗೆ ತಂದರು. ಹಾಗೆಯೇ ಮೌನದ್ರೋಹ ಮಾಡಲೊಪ್ಪದ ಬುದ್ಧಿಜೀವಿಗಳು ಸಹ ಅವರ ಬೆಂಬಲಕ್ಕೆ ನಿಂತು ನಿಧನರಾದ ಅಥವಾ ನಿವೃತ್ತರಾದವರ ಜಾಗಗಳನ್ನು ಭರ್ತಿಮಾಡಿದರು

ನಕ್ಸಲೈಟ್ ಚಳವಳಿಯ ಎರಡನೇ ಅವಧಿಯು (೧೯೭೭-೨೦೦೩) ಪ್ರಧಾನವಾಗಿ ಸಮೂಹ ಹೋರಾಟಗಳು ಮತ್ತು ಸಮೂಹ ಸಂಘಟನೆಗಳಿಂದ ಕೂಡಿದ್ದವು. ಇವು ವಿಶೇಷವಾಗಿ ಅಂದಿನ ಅವಿಭಜಿತ ಆಂಧ್ರಪ್ರದೇಶದ ಉತ್ತರ ತೆಲಂಗಾಣ ಮತ್ತು ಇತರ ಪ್ರದೇಶಗಳಲ್ಲಿ, ಅಂದಿನ ಮಧ್ಯ ಬಿಹಾರ ಮತ್ತು ಇಂದು ಜಾರ್ಖಂಡ್ ಎಂದು ಕರೆಸಿಕೊಳ್ಳಲ್ಪಡುವ ದಕ್ಷಿಣ ಬಿಹಾರಗಳಲ್ಲಿ ಹಾಗೂ ದಂಡಕಾರಣ್ಯ ಎಂದು ಕರೆಸಿಕೊಳ್ಳಲ್ಪಡುವ ಆಂಧ್ರಪ್ರದೇಶ, ಒಡಿಶಾ, ಚತ್ತೀಸ್ಘಡ್ ಮತ್ತು ಮಹಾರಾಷ್ಟ್ರಗಳ ಆದಿವಾಸಿ ಗಡಿಜಿಲ್ಲೆಗಳಲ್ಲಿ ವ್ಯಾಪಕವಾಗಿತ್ತು. ದಕ್ಷಿಣ ಚತ್ತೀಸ್ಘಡ್ ಬಸ್ತರ್ ಪ್ರದೇಶವು ನಿಧಾನವಾಗಿ ಚಳವಳಿಯ ಗಟ್ಟಿನೆಲೆಯಾಗತೊಡಗಿತು. ಆತ್ಮ ರಕ್ಷಣೆಗಾಗಿ ಸಶಸ್ತ್ರ ದಳಗಳನ್ನೂ ಮತ್ತು ಗ್ರಾಮ ಮಟ್ಟದ ಮಿಲಿಷಿಯಾಗಳನ್ನು ಸಂಘಟಿಸಲಾಯಿತು. ಉಳುವವನಿಗೆ ಭೂಮಿ ಮತ್ತು ಅರಣ್ಯವಾಸಿಗಳಿಗೆ ಸಂಪೂರ್ಣ ಹಕ್ಕುಗಳು ಎಂಬವು ಪ್ರಮುಖವಾದ ಹಕ್ಕುಪ್ರತಿಪಾದನೆಗಳಾಗಿದ್ದವು.
ಚಳವಳಿಯು ವಿಸ್ತೃತಗೊಳ್ಳುತ್ತಿದ್ದಂತೆ ಭಾರತ ಸರ್ಕಾರವೂ ಸಹ ಅದರ ಮೇಲೆ ಪೂರ್ಣಪ್ರಮಾಣದ ಪ್ರತಿಯುದ್ಧವನ್ನೇ ಸಾರಿತು. ಪಕ್ಷವು ಹಲವಾರು ನಷ್ಟಗಳನ್ನು ಅನುಭವಿಸತೊಡಗಿತಲ್ಲದೆ ತನ್ನ ಅತ್ಯುತ್ತಮ ನಾಯಕರನ್ನು. ಅದರಲ್ಲೂ ವಿಶೇಷವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ, ಕಳೆದುಕೊಂಡಿತು. ಅದೇನೇ ಇದ್ದರೂ, ಹೊಸ ಶತಮಾನದ ಪ್ರಾರಂಭದೊಂದಿಗೆ ಚಳವಳಿಯನ್ನು ದಮನ ಮಾಡುವುದು ಕಷ್ಟಕರವೇ ಆಗತೊಡಗಿತು. ಜನತಾ ಗೆರಿಲ್ಲಾ ಸೇನೆ (ಪೀಪಲ್ಸ್ ಗೆರಿಲ್ಲಾ ಆರ್ಮಿ)ಯನ್ನು ಕಟ್ಟುವುದರೊಂದಿಗೆ ಎಂಥಾ ಅಸಾಧ್ಯವಾದ ಸಂದರ್ಭಗಳನ್ನೂ ಸಹ ಎದುರಿಸುತ್ತಾ ಮುಂದೆ ನುಗ್ಗಲು ಚಳವಳಿಯು ಸಿದ್ಧವಾಯಿತು. ೧೯೯೮ ಮತ್ತು ೨೦೦೪ರಲ್ಲಿ ಸುದೀರ್ಘ ಪ್ರಜಾ ಯುದ್ಧಕೆ ಬದ್ಧರಾಗಿದ್ದ ಮಾವೋವಾದಿ ಶಕ್ತಿಗಳು ವಿಲೀನವಾಗುವುದರೊಂದಿಗೆ ಚಳವಳಿಯು ಗುರಿತಿಸಲೇ ಬೇಕಾದಂಥ ಗಮನಾರ್ಹ ಶಕ್ತಿಯನ್ನು ಸಂಚಯಿಸಿಕೊಂಡಿತು.

೨೦೦೪ರ ನಂತರದ ಮೂರನೇ ಅವಧಿಯಲ್ಲಿ ಬಸ್ತರ್ ಪ್ರದೇಶವು ಪುಟಿದೇಳುವ ಮಾವೊವಾದಿ ಪ್ರತಿರೋಧದ ಗಟ್ಟಿನೆಲೆಯಾಗಿ ಪರಿವರ್ತನೆಯಾಗಿದೆ. ಅಲ್ಲಿ ಎರಡು ಗಮನಾರ್ಹವಾದ ಸಮೂಹ ಸಂಘmಣೆಗಳು ಅಸ್ಥಿತ್ವದಲ್ಲಿವೆ. ಒಂದು ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆ. ಇದು ಆದಿವಾಸಿ ರೈತರ ಮತ್ತು ಕೃಷಿ ಕಾರ್ಮಿಕರ ಸಂಘಟನೆಯಾಗಿದೆ. ಮತ್ತೊಂದು ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘ. ಇದು ಆದಿವಾಸಿ ಮಹಿಳಾ ಸಂಘಟನೆಯಾಗಿದೆ. ಇದಲ್ಲದೆ ಭೂಮ್ಕಾಲ್ ಮಿಲಿಷಿಯಾ (ಭೂಮ್ಕಾಲ್ ಎಂಬುದು ೧೯೧೦ರಲ್ಲಿ ವಲಯದಲ್ಲಿ ನಡೆದ ಆದಿವಾಸಿ ದಂಗೆಯ ಹೆಸರು) ಕೂಡಾ ಅಸ್ಥಿತ್ವದಲ್ಲಿದ್ದು ಪ್ರಜಾ ವಿಮೋಚನಾ ಗೆರಿಲ್ಲಾ ಸೇನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

ಸತತ ಐದು ದಶಕಗಳ ಕಾಲ ಎಡಬಿಡದೆ ಮುನ್ನಡೆಯುತ್ತಲೇ ಬಂದಿರುವ ಕ್ರಾಂತಿಕಾರಿ ಚಳವಳಿಯನ್ನು ಹೇಗೆ ವಿವರಿಸಿಕೊಳ್ಳಬೇಕು?

 ಅಲ್ಪಾ ಶಾ ಎಂಬ ಮಾನವಶಾಸ್ತ್ರಜ್ನರು ಜಾರ್ಖಂಡಿನಲ್ಲಿರುವ ಮಾವೋವಾದಿ ಗೆರಿಲ್ಲಾ ವಲಯದಲ್ಲಿ ಸುದೀರ್ಘ ಕಾಲದಿಂದ ಜನಾಂಗೀಯ ಅಧ್ಯಯನವನ್ನು ಮಾಡುತ್ತಾ ಬಂದಿದ್ದಾರೆ. ಅವರ ಪ್ರಕಾರ ಕ್ರಾಂತಿಕಾರಿ ಚಳವಳಿಯು ಇಷ್ಟು ಸುದೀರ್ಘ ಕಾಲ ಬಾಳುತ್ತಾ ಬೆಳೆಯುತ್ತಾ ಬಂದಿರಲು ಪ್ರಧಾನವಾದ ಕಾರಣ ಅಲ್ಲಿ ಕೆಲಸ ಮಾಡುತ್ತಿರುವ ಮಾವೋವಾದಿ ಸಂಘಟನೆಗೂ ಮತ್ತು ಅಲ್ಲಿನ ಜನರಿಗೂ ನಡುವೆ ಏರ್ಪಟ್ಟಿರುವ ಆಪ್ತ ಸಂಬಂಧಗಳು. ಮಾವೊವಾದಿಗಳು ಸಾಮಾನ್ಯ ಜನರನ್ನು ಅದರಲ್ಲೂ ನಿರ್ದಿಷ್ತವಾಗಿ ದಮನಿತ ಜಾತಿಗಳ ಜನರನ್ನು ಮತ್ತು ಆದಿವಾಸಿಗಳನ್ನು ಗೌರವ, ಘನತೆ ಮತ್ತು ಸಮಾನತೆಯಿಂದ ಕಾಣುತ್ತಾರೆ

ಭಾರತದ ಮಾವೊವಾದಿ ಚಳವಳಿ ಎತ್ತ ಸಾಗುತ್ತಿದೆ?

ಭಾರತ ಪ್ರಭುತ್ವವು ಮಾವೋವಾದಿಗಳಿಗೂ ಮತ್ತು ದಮನಿತ ಜನರಿಗೂ ನಡುವೆ ಏರ್ಪಟ್ಟಿರುವ   ಆಪ್ತ ಸಂಬಂಧಗಳನ್ನು ಕಡಿದುಹಾಕಲು ಬಯಸುತ್ತಿದೆ. ಮತ್ತು ಮಾವೋವಾದಿ ಚಳವಳಿಯನ್ನು ನಾಶಮಾಡಲು ಎಲ್ಲಾ ಬಗೆಯ ನ್ಯಾಯ ಹಾಗೂ ಅನ್ಯಾಯಯುತ ಕ್ರಮಗಳನ್ನು ಆಕ್ರಮಣಕಾರಿಯಾಗಿ ಬಳಸುತ್ತಿದೆ. ಪ್ರಕ್ರಿಯೆಯಲ್ಲಿ ಅದು ರಾಷ್ಟ್ರವೊಂದರ ಗಡಿಯೊಳಗೆ ನಡೆಯುವ ಸಶಸ್ತ್ರ ಸಂಘರ್ಷದ ಸಂದರ್ಭದಲ್ಲಿ ಅನುಸರಿಸಬೇಕಿರುವ ಜೆನೀವಾ ಒಪ್ಪಂದz ಎರಡನೇ ಪ್ರೊಟೋಕಾಲಿನ ಸಾಮಾನ್ಯ ನಿಬಂಧನೆಗಳನ್ನೂ ಉಲ್ಲಂಘಿಸುತ್ತಿದೆ. ಮತ್ತೊಂದ ಕಡೆ ಮಾವೋವಾದಿ ಚಳವಳಿಯು ಸುದೀರ್ಘ ಪ್ರಜಾ ಯುದ್ದ ಮತ್ತು ಸಮೂಹ ಹೋರಾಟಗಳ ಸಮ್ಮಿಶ್ರಣದಿಂದ ಮತ್ತು ದಮನಿತ ರಾಷ್ಟ್ರೀಯತೆಗಳೊಂದಿಗೆ ವ್ಯೂಹಾತ್ಮಕವಾದ ಮೈತ್ರಿಗಳನ್ನು ಮಾಡಿಕೊಳ್ಳುವ ಮೂಲಕ ಭಾರತ ಪ್ರಭುತ್ವವನ್ನು ಕಿತ್ತೊಗೆಯಲು ಪಣತೊಟ್ಟು ನಿಂತಿದೆ.

ಆದರೆ ವಾಸ್ತವವೆಂದರೆ ಭಾರತ ಪ್ರಭುತ್ವದ ಪ್ರಯತ್ನವಾಗಲೀ, ಮಾವೋವಾದಿಗಳ ಬಯಕೆಗಳಾಗಲಿ ಕಾಲಘಟ್ಟದಲ್ಲಿ ಈಡೇರುವಂತಾ ಸಾಧ್ಯತೆಗಳಿಲ್ಲ.

ಜಗತ್ತಿನ ಅಭಿವೃದ್ಧಿಶೀಲ ದೇಶಗಳಲ್ಲೇ ಅತ್ಯಂತ ಪ್ರಬಲವಾಗಿರುವ ಭಾರತ ಪ್ರಭುತ್ವ ಮತ್ತು ಆಳುವವರ್ಗಗಳ ಶಕ್ತಿ ಸಾಮರ್ಥ್ಯಗಳಿಗೆ ಸಡ್ಡುಹೊಡೆಯುವ ಪ್ರಕ್ರಿಯೆಯಲ್ಲಿ ಮಾವೋವಾದಿ ಚಳವಳಿಯು ಹೆಚ್ಚೆಚ್ಚು ಸೈನ್ಯೀಕರಣಗೊಳ್ಳುತ್ತಾ ಸಾಗಿದೆ. ಭಾರತ ಪ್ರಭುತ್ವವೂ ಸಹ ಚಳವಳಿಯನ್ನು ಸಂಪೂರ್ಣವಾಗಿ ಸಶಸ್ತ್ರ ಸಂಘರ್ಷಕ್ಕೇ ಸೀಮಿತಗೊಳಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ಪರಿಣಾಮವಾಗಿ ಚಳವಳಿಯು ಮುನ್ನಡೆಯನ್ನು ಸಾಧ್ಸಿಸುವುದು ಕಷ್ಟವಾಗುತ್ತಿದೆ. ಅಲ್ಲದೆ ಮಾವೋವಾದಿಗಳ ನಿಯಂತ್ರಣದಲ್ಲಿ ಯಾವುದೇ ಸ್ಥಾವರ ಪ್ರದೇಶಗಳು (ಬೇಸ್ ಏರಿಯಾ- ವ್ಯವಸ್ಥೆಯ ಆಡಳಿತವನ್ನು ಮತ್ತದರ ಸಂಸ್ಥೆಗಳನ್ನು ಕಿತ್ತೊಗೆದು ಅದಕ್ಕೆ ಪರ್ಯಾಯವಾದ ಮಾವೋವಾದಿ ಸರ್ಕಾರ, ಸೇನೆ ಮತ್ತು ಸಂಸ್ಥೆಗಳು ಅಧಿಕಾರ ಚಲಾಯಿಸುವ ಭೌಗೋಳಿP ಪ್ರದೇಶ- ಅನುವಾದಕನ ಟಿಪ್ಪಣಿ ) ಇಲ್ಲದಿರುವುದು ಸಹ ಚಳವಳಿಗೆ ಹಲವಾರು ಸ್ವರೂಪದ ತೊಡರುಗಳನ್ನು ಉಂಟುಮಾಡುತ್ತಿದೆ: ಪ್ರಧಾನವಾಗಿ, ತನ್ನದೆ ಆದ ಒಂದು ಸ್ಥಾವರ ಪ್ರದೇಶವಿಲ್ಲದಿದ್ದರೆ ಪಕ್ಷದ ಪ್ರಜಾತಾಂತ್ರಿಕ ಸಮೂಹ ನೀತಿಯನ್ನು ಆಚರಣೆಗೆ ತರುವ ಸಾಧ್ಯತೆ ಇರುವುದಿಲ್ಲ. ಇದರಿಂದಾಗಿ ಮಾವೋವಾದಿಗಳು ತಮ್ಮ ಪ್ರಜಾತಂತ್ರವು ವ್ಯವಸ್ಥೆಯ ಕೊಳೆತ ಉದಾರವಾದಿ-ರಾಜಕೀಯ ಪ್ರಜಾತಂತ್ರಕ್ಕಿಂತ ಶ್ರೇಷ್ಠವಾದದ್ದೆಂದು ಜನಮೆಚ್ಚುವ ರೀತಿಯಲ್ಲಿ ನಿರೂಪಿಸುವುದೂ ಕಷ್ಟವಾಗುತ್ತದೆ.

ಇದರ ನಡುವೆಯೂ ಒಂದು ಸಾಧ್ಯತೆಯು ಎದ್ದುಕಾಣುತ್ತಿದೆ. ವಿವಿಧ ಪ್ರದೇಶಗಳ ಸಮಾಜ ರಚನೆಗಳೊಳಗಿಂದ ಏಕಕಾಲದಲ್ಲಿ ಪ್ರತಿರೋಧಗಳು ಭುಗಿಲೆದ್ದು ಉಂಟಾಗುವ ದೊಡ್ಡ ಕೋಲಾಹಲದೊಳಗಿಂದ ಕ್ರಾಂತಿಕಾರಿ ಜನದಂಗೆಗಳು ಸ್ಪೋಟಗೊಳ್ಳಬಹುದು. ಮತ್ತು ಅದು ಕ್ರಾಂತಿಕಾರಿ ಚಳವಳಿಯ ಕೀಲಕ ಮುನ್ನೆಡೆಗೆ ನಾಂದಿ ಹಾಡಬಹುದು.

 ಕೃಪೆ: Economic and Political Weekly                             
May 27, 2017. Vol. 52. No. 21