ಶುಕ್ರವಾರ, ಜೂನ್ 17, 2016

ತುಂಬುಗನಹಟ್ಟಿಯ ಕರಿಯಮ್ಮನ ಜಾತ್ರೆಯ ಚಿತ್ರಗಳು-ಮೋಹನ್ ಕುಮಾರ್.
ಕರಿಯಮ್ಮುಟ್ಯಾಳೆ ಬಟ್ಟಂಚಿನ ಸೀರೆಯ
ಗೊಲುಗೊಂದೀನ ಸೆರಗೀನ | ಸೀರೆನುಟ್ಟು
ಉತ್ತಾಕೆ ತೆನೆಯ ಎರದಾಳೊ...
ಮಂಗ್ಳಾರದಾಳೆ ಸಾದಾ..ಬಟ್ಟೀನಾಳೆ
ಸಾಲಾಬೇವಿನ ಮರದಾಳೆ | ಕರಿಯಮ್ಮ
ಅಂಗೈಲಿ ಪದುವಾ ತಿರುವಾಳೆ..
ಸುಕ್ರಾರದಾಳೆ ಸುಕ್ಕೇ..ಬಟ್ಟೀನಾಳೆ
ಸುತ್ತಾಬೇವಿನ ಮರದಾಳೆ | ಕರಿಯಮ್ಮ
ಅಂಗೈಲಿ ಪದುವ ತಿರುವಾಳೆ..

  ತುಮಕೂರು ತಾಲೂಕಿನ ತುಂಬುಗನ  ಹಟ್ಟಿಯನ್ನೊಳಗೊಂಡಂತೆ ಸುತ್ತೊಕ್ಕಲಿಗೂ ಗ್ರಾಮದೇವತೆಯಾಗಿರುವ ಕರಿಯಮ್ಮನ ಕುರಿತ ಪದಗಳನ್ನು ನಮ್ಮ ಜನಪದರು ರಾತ್ರಿ ಇಡೀ ಹಾಡುತ್ತಾರೆ. ಮೊನ್ನೆ ನಡೆದ ಕರಿಯಮ್ಮನ ಜಾತ್ರೆಯು ಗ್ರಾಮೀಣ ಸೊಗಡಿನಲ್ಲಿ ತುಂಬಿತ್ತು. ಆ ಸಂದರ್ಭದಲ್ಲಿನ ಕೆಲವು ಚಿತ್ರಗಳು.


ಕಾಮೆಂಟ್‌ಗಳಿಲ್ಲ: