ಮಂಗಳವಾರ, ಜನವರಿ 2, 2018

ವಸ್ತುಸ್ಥಿತಿಯ ಉದ್ದೇಶಪೂರ್ವಕ ನಿರಾಕರಣೆ


  ಅನುಶಿವಸುಂದರ್ 
Image result for gdp of india

ಜಿಡಿಪಿ (ಒಟ್ಟಾರೆ ಅಂತರಿಕ ಅಭಿವೃದ್ಧಿ) ಬೆಳವಣಿಗೆಯ ದರ ಶೇ..೩ಕ್ಕೆ ಕುಸಿದಿದೆ. ಇದು ೨೦೧೨-೧೩ರ ನಂತರ ಎರಡನೇ ತ್ರೈಮಾಸಿಕವೊಂದು ಕಂಡಿರುವ ಅತ್ಯಂತ ಕನಿಷ್ಟ ಅಭಿವೃದ್ಧಿದರವಾಗಿದೆ.

ಕೇಂದ್ರೀಯ ಅಂಕಿಅಂಶ ಇಲಾಖೆಯು ದೇಶದ ರಾಷ್ಟ್ರೀಯ ಆದಾಯದ ಬಗ್ಗೆ ಇತ್ತೀಚೆಗೆ ಬಿಡುಗಡೆ ಮಾಡಿರುವ ದತ್ತಾಂಶಗಳು ಭಾರತದ ಆರ್ಥಿಕತೆಯು ರೋಗಗ್ರಸ್ಥವಾಗಿದೆಯೆಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದೆ. ೨೦೧೭-೧೮ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು ೨೦೧೬-೧೭ರ ಎರಡನೇ ತ್ರೈಮಾಸಿಕಕ್ಕಿಂತ ಶೇ..೩ರಷ್ಟು ಅಭಿವೃದ್ಧಿಯನ್ನು ದಾಖಲಿಸಿದೆ. ಸರ್ಕಾರದ ಪ್ರಕಾರ ಅಂಕಿಅಂಶವು ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತದೆ. ಸರ್ಕಾರವು ಹೇಳುತ್ತಿರುವುದು ಮತ್ತು ಬಿಸಿನೆಸ್ ಪತ್ರಿಕೆಗಳು ಗಿಣಿಪಾಠ ಒಪ್ಪಿಸುತ್ತಿರುವುದೇನೆಂದರೆ೨೦೧೬ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ದರವು ಶೇ..೧ರಷ್ಟು ಬೆಳವಣಿಗೆಯಾಗಿತ್ತು. ಆದರೆ ನಂತರದಲ್ಲಿ ಪ್ರತಿ ತ್ರೈಮಾಸಿಕದ ಬೆಳವಣಿಗೆ ದರ ಅದರ ಹಿಂದಿನ ವರ್ಷದ ತ್ರೈಮಾಸಿಕದ ದರಕ್ಕೆ ಹೋಲಿಸಿದಲ್ಲಿ ಕಡಿಮೆಯಾಗುತ್ತಲೇ ಬರುತ್ತಿತ್ತು. ಆದರೆ ೨೦೧೭ರ ಜುಲೈ-ಸೆಪ್ಟೆಂಬರ್ ಬೆಳವಣಿಗೆ ದರವು ಹಿಂದಿನ ವರ್ಷದ ದರಕ್ಕಿಂತ ಹೆಚ್ಚಿದೆ. ಅವರ ಪ್ರಕಾರ ಇದು ಆರ್ಥಿಕ ಕುಸಿತವು ತಡೆಯಲ್ಪಟ್ಟಿದ್ದರ ಸಂಕೇತವಾಗಿದೆ. ದುರದೃಷ್ಟವಶಾತ್ ಇದು ಸರಿಯಾದ ತಿಳವಳಿಕೆಯಲ್ಲ. ಒಂದು ತ್ರೈಮಾಸಿಕದ ಅಭಿವೃದ್ಧಿ ದರವನ್ನು ಹಿಂದಿನ ವರ್ಷಗಳ ಅದೇ ತ್ರೈಮಾಸಿಕಕ್ಕೆ ಹೋಲಿಸುವುದು ಸರಿಯಾದ ಪದ್ಧತಿ. ಏಕೆಂದರೆ ಆರ್ಥಿಕ ಬೆಳವಣಿಗೆಯು ಒಂದು ನಿರ್ದಿಷ್ಟ ವರ್ತುಲವನ್ನು ಪಾಲಿಸುತ್ತದೆ ರೀತಿ ನೋಡಿದಾಗ ೨೦೧೧-೧೨ರಿಂದ ಆರಂಭಗೊಂಡಿರುವ ರಾಷ್ಟ್ರೀಯ ಲೆಕ್ಕಾಚಾರಗಳ ಅಂಕಿಅಂಶದ ಹೊಸ ಸರಣಿಯಂತೆ ೨೦೧೨-೧೩ರ ನಂತರದ ವರ್ಷಗಳ ತ್ರೈಮಾಸಿಕದ ಬೆಳವಣಿಗೆ ದರಗಳಿಗೆ ಹೋಲಿಸಿದಲ್ಲಿ ೨೦೧೭-೧೮ರ ಎರಡನೇ ತ್ರೈಮಾಸಿಕದ ಅಭಿವೃದ್ಧಿ ದರ ಅತ್ಯಂತ ಕನಿಷ್ಟವಾಗಿದೆ. ಭಾರತದ ಆರ್ಥಿಕ ವ್ಯವಸ್ಥೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಆದರೂ ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆ ಎಂಬ ಸರ್ಕಾರದ ಪೊಳ್ಳು ಕಥನವು ಸರ್ಕಾರವು ವಸ್ಥುಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಿದೆ ಎಂಬುದನ್ನಷ್ಟೇ ಸೂಚಿಸುತ್ತದೆ.

ಹೊಸ ಲೆಕ್ಕಾಚಾರಗಳ ಸರಣಿಯ ಪ್ರಕಾರ ರಾಷ್ಟ್ರೀಯ ಅಭಿವೃದ್ಧಿ ದರವು ಎರಡನೇ ತ್ರೈಮಾಸಿಕದಲ್ಲಿ ಹಿಂದಿನ ವರ್ಷಕ್ಕಿಂತೆ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುತ್ತದೆ. ಉಳಿದ ತ್ರೈಮಾಸಿಕಗಳಿಗೆ ಹೋಲಿಸಿದಲ್ಲಿ ಸಾಮಾನ್ಯವಾಗಿ ಎರಡನೇ ತ್ರೈಮಾಸಿಕವು ಶೇ.೧ರಷ್ಟು ಹೆಚ್ಚಿನ ಅಭಿವೃದ್ಧಿಯನ್ನು ದಾಖಲಿಸುತ್ತದೆ. ೨೦೧೫-೧೬ರ ಕೊನೆಯ ತ್ರೈಮಾಸಿಕ ಹಾಗೂ ೨೦೧೬-೧೭ರ ಮೊದಲ ತ್ರೈಮಾಸಿಕಗಳಲ್ಲಿ ಉಳಿದ ತ್ರೈಮಾಸಿಕಗಳ ಅಭಿವೃದ್ಧಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ದಾಖಲಿಸಿತ್ತು. ಆದರೆ ಅದೊಂದು ಅಪವಾದ. ಸಾರ್ವತ್ರಿಕ ಧೋರಣೆಯನ್ನು ಗಮನಿಸಿದಲ್ಲಿ ವರ್ಷದ ವಾರ್ಷಿಕ ಅಭಿವೃದ್ಧಿ ದರವು ಶೇ. .೩ಕ್ಕಿಂತ ಹೆಚ್ಚಾಗುವ ಸಂಭವವಿಲ್ಲ. ಹೊಸ ಅಂದಾಜುಗಳ ಪ್ರಕಾರ ವಾರ್ಷಿಕ ಜಿಡಿಪಿ ದರದ ಅಭಿವೃದ್ಧಿಯು ೨೦೧೬-೧೭ರಲ್ಲಿ ಶೇ..೧ರಷ್ಟಿತ್ತು. ಮತ್ತು ೨೦೧೫-೧೬ರಲ್ಲಿ ಶೇ.೮ರಷ್ಟಿತ್ತು.

ಹಾಗೆಯೇ, ಹೊಸ ಸರಣಿಯ ಲೆಕ್ಕಾಚಾರದಲ್ಲಿ ಅರ್ಧ ವಾರ್ಷಿಕ ಅಭಿವೃದ್ಧಿ ದರಗಳನ್ನು ಹೋಲಿಸಿನೋಡಿದಲ್ಲಿ, ೨೦೧೫-೧೬ನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ವರ್ಷಗಳಲ್ಲಿ ಮೊದಲ ವರ್ಷಾರ್ಧದಲ್ಲೇ ಶೇ. ರಷ್ಟು ಹೆಚ್ಚಿನ ಅಭಿವೃದ್ಧಿ ದರ ದಾಖಲಾಗುತ್ತಾ ಬಂದಿದೆ. ಲೆಕ್ಕದಲ್ಲೂ ಸಾಲಿನ ಅರ್ಧ ವಾರ್ಷಿಕದಲ್ಲೆ ಶೇ.೬ರಷ್ಟು ಅಭಿವೃದ್ಧಿ ದರ ದಾಖಲಾಗಿದ್ದು ಇದು ೨೦೧೨-೧೩ರ ನಂತರದ ಯಾವುದೇ ಅರ್ಧ ವಾರ್ಷಿಕ ಅಭಿವೃದ್ದಿದರಗಳಿಗಿಂತ ತೀರಾ ಕಡಿಮೆಯಾಗಿದೆ. ಪ್ರವೃತ್ತಿಯನ್ನು ಗಮನಿಸಿದಲ್ಲಿ ಸಾಲಿನ ಅಭಿವೃದ್ಧಿ ದರವು ಶೇ. ಅಥವಾ ಅದಕ್ಕಿಂತ ಕಡಿಮೆಯೇ ಇರಲಿದೆ. ಇದು ಕಳೆದ ಎಲ್ಲಾ ವರ್ಷಗಳಿಗಿಂತ ಅತ್ಯಂತ ಕಡಿಮೆ ಅಭಿವೃದ್ಧಿ ದರವಾಗಿದೆ.

ಮೂಲದರದಲ್ಲಿ ಲೆಕ್ಕ ಮಾಡುವ ಗ್ರಾಸ್ ವ್ಯಾಲ್ಯೂ ಆಡೆಡ್-ಜಿವಿಎ(ತೆರಿಗೆಗಳನ್ನು ಹೊರತುಪಡಿಸಿ ಲೆಕ್ಕ ಹಾಕುವ ಒಟ್ಟಾರೆ ಅಭಿವೃದ್ಧಿಯ ಮೌಲ್ಯ) ವಿಷಯದಲ್ಲೂ ಸರ್ಕಾರ ಇದೇ ಬಗೆಯ ವಾದಗಳನ್ನು ಮುಂದಿಟ್ಟಿತ್ತು. ಸರ್ಕಾರದ ಪ್ರಕಾರ ಉತ್ಪಾದನಾ ಕ್ಷೇತ್ರದ ಅಭಿವೃದ್ಧಿ ೨೦೧೭-೧೮ರ ಮೊದಲ ತ್ರೈಮಾಸಿಕದಲ್ಲಿ ಕೇವಲ ಶೇ..೨ರಷ್ಟು ಮಾತ್ರ ಆಗಿದ್ದರೂ ಎರಡನೇ ತ್ರೈಮಾಸಿಕದಲ್ಲಿ ದಾಖಲೆ ಮಟ್ಟದಲ್ಲಿ ಚೇತರಿಸಿಕೊಂಡು .೨ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ವಾಸ್ತವವೇನೆಂದರೆ ಕಳೆದ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ  ಇದೇ ವಲಯದಲ್ಲಿ ಶೇ..೭ರಷ್ಟು ಅಭಿವೃದ್ಧಿ ದಾಖಲೆಯಾಗಿತ್ತು.

ಕೈಗಾರಿಕಾ ಉತ್ಪನ್ನಗಳ ಸೂಚ್ಯಂಕವೂ ಕೂಡಾ ತೋರಿಸಿಕೊಡುವಂತೆ ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಉತ್ಪಾದನಾ ರಂಗವು  ಶೇ..೫ರಷ್ಟು ಅಭಿವೃದ್ಧಿಯಾಗಿದ್ದರೆ ವರ್ಷ ಕೇವಲ ಶೇ..೨ರಷ್ಟು ಅಭಿವೃದ್ಧಿಯನ್ನು ಮಾತ್ರ ದಾಖಲಿಸಿದೆ. ಇಲ್ಲೂ ಕೂಡಾ ಉತ್ಪಾದಕ ವಲಯದಲ್ಲಿ ಸರ್ಕಾರವು ಹೇಳಿಕೊಳ್ಳುವಂಥ ಚೇತರಿಕೆ ಕಂಡುಬರದೆ ಇಳಿಕೆಯೇ ದಾಖಲಾಗಿದೆ.

ಹಾಗೆಯೇ, ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳ ಜಿವಿಎ ನಲ್ಲಿ ಶೇ..೭ರಷ್ಟು ಮತ್ತು ಕೃಷಿ ಕ್ಷೇತ್ರದಲ್ಲಿ ಶೇ..೭ರಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದು ಸರ್ಕಾರವು ಹೇಳಿಕೊಳ್ಳುತ್ತಿದೆ. ಆದರೆ ಹೊಸ ಸರಣಿಯ ಅಂಕಿಅಂಶಗಳ ಪ್ರಕಾರ ಎಲ್ಲಾ ಅಂಕಿಅಂಶಗಳು ಕಳೆದ ವರ್ಷಗಳ ಎರಡೆನೇ ತ್ರೈಮಾಸಿಕದ ಬೆಳವಣಿಗೆಗಳಿಗೆ ಹೋಲಿಸಿದಲ್ಲಿ ಕನಿಷ್ಟ ಬೆಳವಣಿಗೆಯೇ ಆಗಿದೆ. ಎಲ್ಲಾ ವಲಯಗಳು ಒಟ್ಟುಸೇರಿದರೆ ದೇಶದ ಜಿವಿಎದ ಶೇ.೫೫ರಷ್ಟಾಗುತ್ತದೆ. ಉಳಿದ ವರ್ಷಗಳ ಎರಡನೇ ತ್ರೈಮಾಸಿಕಗಳಿಗೆ ಹೋಲಿಸಿದಲ್ಲಿ ವರ್ಷದ ತ್ರೈಮಾಸಿಕದಲ್ಲಿ ಗಣಿಗಾರಿಕೆ, ವಿದ್ಯುತ್, ವಾಣಿಜ್ಯ, ಹೋಟೆಲ್ ಮತ್ತು ಸಂಪರ್ಕಕ್ಷೇತ್ರಗಳಿಂದ ಸಂಚಯವಾಗುವ ಜಿವಿಎ ಹೆಚ್ಚಾಗಿದೆ. ಆದರೆ ನಿರ್ಮಾಣ ಮಾತ್ತು ಸಾರ್ವಜನಿಕ ಆಡಳಿತ ಕ್ಷೇತ್ರಗಳಲ್ಲಿ ಕುಸಿತ ಕಂಡಿದೆ. ಹೀಗಾಗಿ ಆರ್ಥಿಕತೆಯಲ್ಲಿ ವಿಸ್ತೃತವಾದ ಚೇತರಿಕೆ ಉಂಟಾಗಿರುವ ಯಾವ ಸೂಚನೆಗಳನ್ನು ಅಂಕಿಅಂಶಗಳು ನೀಡುತ್ತಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಆರ್ಥಿಕತೆಯು ದುರ್ಬಲವಾಗುತ್ತಿರುವುದಕ್ಕೆ ವಿಪುಲವಾದ ಪುರಾವೆಗಳು ಲಭ್ಯವಿವೆ.

ಹೂಡಿಕೆಯ ವಾತಾವರಣದಲ್ಲೂ ಯಾವುದೇ ಸುಧಾರಣೆಯಾಗಿಲ್ಲ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಹೂಡಿಕೆಯ (ಗ್ರಾಸ್ ಫಿಕ್ಸೆಡ್ ಕ್ಯಪಿಟಲ್ ಫಾರ್ಮೇಷನ್- ಒಟ್ಟಾರೆ ಮೀಸಲು ಬಂಡವಾಳ ಶೇಖರಣೆ) ದರ ಅಭಿವೃದ್ಧಿಯು ಶೇ.೩ರಷ್ಟಿದ್ದರೆ ವರ್ಷ .೭ರಷ್ಟಾಗಿದೆ. ಆದರೆ ೨೦೧೧-೧೨ರಲ್ಲಿ ಹೂಡಿಕೆ ಬಂಡವಾಳದ ಪ್ರಮಾಣ ಜಿಡಿಪಿಯ ಶೇ.೩೫.೬ರಷ್ಟಿತ್ತು. ಅದು ನಿರಂತರವಾಗಿ ಕುಸಿಯುತ್ತಲೇ ಬಂದು ೨೦೧೭-೧೮ರ ಎರಡನೇ ತ್ರೈಮಾಸಿಕದಲ್ಲಿ ಶೇ.೨೮.೮ಕ್ಕೆ ಬಂದು ತಲುಪಿದೆ. ಹಿನ್ನೆಲೆಯಲ್ಲಿ ನೋಡಿದರೆ  ವರ್ಷದಲ್ಲಿ ಹೂಡಿಕೆಯ ಶೇಖರಣೆ ಹೆಚ್ಚಾಗಿರುವುದಕ್ಕೆ ಹೆಚ್ಚಿನ ಅರ್ಥವೇನು ಇರುವುದಿಲ್ಲ.

೨೦೧೬-೧೭ರ ಎರಡನೇ ತ್ರೈಮಾಸಿಕದಲ್ಲೇ ಭಾರತದ ಆರ್ಥಿಕತೆಯು ಕುಸಿತದ ಸೂಚನೆಗಳನ್ನು ಕೊಟ್ಟಿತ್ತು. ಅದು ೨೦೧೬-೧೭ರ ಮೂರನೇ ತ್ರೈಮಾಸಿಕದಲ್ಲಿ ಘೋಷಿಸಲಾದ ನೋಟು ನಿಷೇಧ ಕ್ರಮದಿಂದ ಮತ್ತು ೨೦೧೭ರ ಜುಲೈ ೧ರಿಂದ ಜಾರಿಗೆ ತರಲಾದ ಜಿಎಸ್ಟಿ ಪದ್ಧತಿಯಿಂದಾಗಿ ಇನ್ನಷ್ಟು ತೀವ್ರವಾಗಿ ಹದಗೆಟ್ಟಿತು. ಎರಡು ಆರ್ಥಿಕ ಕ್ರಮಗಳು ಆರ್ಥಿಕ ಚಟುವಟಿಕೆಗಳನ್ನು ಅದರಲ್ಲೂ ಹೆಚ್ಚಾಗಿ ಅನೌಪಚಾರಿಕ ಕ್ಷೇತ್ರದ ಆರ್ಥಿಕತೆಯನ್ನು ತೀವ್ರವಾಗಿ ಪ್ರಭಾವಿಸಿದೆಯೆಂಬುದನ್ನು ಅಭಿವೃದ್ಧಿಗೆ ಸಂಬಂಧಪಟ್ಟ ಅಂಕಿಅಂಶಗಳು ಮತ್ತೊಮ್ಮೆ ರುಜುವಾತುಪಡಿಸುತ್ತಿವೆ. ಹೀಗಾಗಿ ಆರ್ಥಿಕತೆಯು ರೋಗಗ್ರಸ್ಥವಾಗಿದೆಯೆಂಬುದು ಸ್ಪಷ್ಟವಾಗಿದೆ. ಈಗಲಾದರೂ ಸರ್ಕಾರವು ತನ್ನ ಅವಿವೇಕದ ಆರ್ಥಿಕ ಕ್ರಮಗಳು ಮತ್ತು ಅದು ಉಂಟುಮಾಡಿರುವ ಅಪಾಂiiಕಾರಿ ಪರಿಣಾಮಗಳ ಬಗ್ಗೆ ಕೊಂಚವಾದರು ಹಿಂತಿರುಗಿ ನೋಡಿಕೊಳ್ಳಬೇಕಿದೆ. ವಸ್ತುಸ್ಥಿಯನ್ನು ನಿರಾಕರಿಸುವ ಮೂಲಕ ಮತ್ತು ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡುವ ಮೂಲಕ ಆರ್ಥಿಕ ಕುಸಿತವನ್ನು ತಡೆಗಟ್ಟಲಾಗುವುದಿಲ್ಲ. ವಸ್ತುಸ್ಥಿತಿಯನ್ನು ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದು ಅದನ್ನು ಸುಧಾರಿಸುವ ಕಡೆಗೆ ಹಾಕುವ ಮೊದಲ ಹೆಜ್ಜೆಯಾಗಿರುತ್ತದೆ
 ಕೃಪೆ: Economic and Political Weekly Dec 9,  2017. Vol. 52. No. 49
                                                                                                              
     (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )










ಕಾಮೆಂಟ್‌ಗಳಿಲ್ಲ: