ಸೋಮವಾರ, ಮೇ 27, 2013

ಕೆ-ಸೆಟ್ (ಸ್ಲೆಟ್) ಪರೀಕ್ಷೆಯಲ್ಲಿ ಜಾನಪದ ಸಾಹಿತ್ಯ ಪರಿಗಣನೆ

-ಅರುಣ್

ಕಳೆದ ಬಾರಿ ಮೈಸೂರು ವಿಶ್ವವಿದ್ಯಾಲಯದಿಂದ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆ (ಸ್ಲೆಟ್, ಕೆ-ಸೆಟ್) ಯಲ್ಲಿ ಜಾನಪದ ಸಾಹಿತ್ಯವನ್ನು ಪರಿಗಣಿಸಿರಲಿಲ್ಲ. ಆಗ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಒಟ್ಟಾಗಿ ಮಾದ್ಯಮಗಳಲ್ಲಿ ಗಮನ ಸೆಳೆದಿದ್ದೆವು. ಆಗಿನ ಮೈಸೂರು ವಿವಿಯ ಕುಲಪತಿಗಳಾದ ಪ್ರೊ.ತಳವಾರ್ ಅವರು  ಈ ಬಾರಿ ನೋಟಿಫಿಕೇಷನ್ ಆಗಿರುವುದರಿಂದ ನಂತರ ನಡೆಸಲಾಗುವ ಕೆ-ಸೆಟ್ ಪರೀಕ್ಷೆಗೆ ಜಾನಪದವನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದರು. 

    2013-14 ನೇ ಸಾಲಿನ ಕೆ-ಸೆಟ್ ಪರೀಕ್ಷೆಯ ಬಗ್ಗೆ ಮೈಸೂರು ವಿವಿ ಕುಲಪತಿಗಳಾದ ರಂಗಪ್ಪ ಅವರು ನೀಡಿರುವ ಮಾದ್ಯಮ ವರದಿಯಲ್ಲಿ `ಜಾನಪದ ಸಾಹಿತ್ಯ' ವನ್ನು ಪರಿಗಣಿಸಿರುವುದು ವಿಶೇಷವಾಗಿ ಜಾನಪದ ಎಂ.ಎ ಮಾಡಿರುವ ವಿದ್ಯಾರ್ಥಿಗಳಿಗೆ ಸಂತಸದ ವಿಷಯವಾಗಿದೆ. ಆ ಕಾರಣಕ್ಕೆ ಜಾನಪದ ಎಂ.ಎ ಮಾಡಿ ನೆಟ್ ಪರೀಕ್ಷೆಯಲ್ಲಿ ಪಾಸಾಗದೆ ಪದವಿ ಕಾಲೇಜಿಗೆ ಅರ್ಹತೆಯನ್ನೇ ಪಡೆಯದೆ ಇರುವ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಲಿದೆ.

   ಕೆ-ಸೆಟ್ ನಲ್ಲಿ ಜಾನಪದವನ್ನು ಪರಿಗಣಿಸಿ ಎಂದು ಎತ್ತಿದ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಜಾನಪದ ವಿಷಯ ಓದಿದವರ ಪಾಲಿಗೆ ಇದೊಂದು ಆಶಾದಾಯಕ ಬೆಳವಣಿಗೆ. ಹಾಗಾಗಿ ಜಾನಪದ ಬ್ಲಾಗ್ ಮೈಸೂರು ವಿವಿ ಗೆ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಕಾಮೆಂಟ್‌ಗಳಿಲ್ಲ: