ಅನು: ಶಿವಸುಂದರ್
ಅಮೆರಿಕವು ಬೆಂಬಲಕ್ಕೆ ಬರುವ ಯಾವ ಭರವಸೆಗಳು ಇಲ್ಲದಿರುವಾಗ ಮೋದಿಯವರು ಸದ್ದಿಲ್ಲದೆ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವರೇ?
ದೋಕ್ಲಾಮ್
ಅಥವಾ ದೋಂಗ್ಲಾಮ್ ಪ್ರಸ್ಥಭೂಮಿ ಎಂದು ಕರೆಯಲಾಗುವ ಭಾರತ-ಚೀನಾ ಗಡಿಭಾಗದಲ್ಲಿ ಚೀನಾವು
ತನ್ನ ಭಾಗದಲ್ಲಿ ಕೈಗೊಂಡಿರುವ ರಸ್ತೆ ನಿರ್ಮಾಣವನ್ನು ತಡೆಗಟ್ಟಲು,
ಕಳೆದ ಜೂನ್ ೨೬ರಂದು, ಭಾರತದ ಸೇನಾತುಕಡಿಗಳು ಸಿಕ್ಕಿಂ
ವಿಭಾಗದಲ್ಲಿರುವ ಚೀನಾ ಗಡಿಯನ್ನು ದಾಟಿ
ಮುನ್ನುಗ್ಗುತ್ತಿದ್ದ ಸಮಯದಲ್ಲೇ, ಭಾರತದ ಪ್ರಧಾನಿ ಮೋದಿಯವರು
ಅಮೆರಿಕದ ವಾಷಿಂಗ್ಟನ್-ಡಿಸಿಯಲ್ಲಿ ಡೋನಾಲ್ಡ್ ಟ್ರಂಪ್ ಆಡಳಿತದ ಅಮೆರಿಕ
ಫರ್ಸ್ಟ್ (ಅಮೆರಿಕವೇ ಮೊದಲು) ನೀತಿಯ ಬಗ್ಗೆ
ಭಾರತಕ್ಕಿರುವ ಭಿನ್ನಾಭಿಪ್ರಾಯಗಳನ್ನು ಮರೆಮಾಚಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಮೋದಿ
ಮತ್ತವರ ಭದ್ರತಾ ಸಲಹೆಗಾರ ಅಜಿತ್
ಡೋವಲ್ ಮಾತ್ರವಲ್ಲದೆ ಭಾರತದ ದೊಡ್ಡ ದೊಡ್ಡ
ಮಾಧ್ಯಮ ಸಂಸ್ಥೆಗಳೂ ಸಹ ಭಾರತ ಮತ್ತು
ಅಮೆರಿಕದ ವ್ಯೂಹಾತ್ಮಕ ಮೈತ್ರಿಯ ರೇಟಿಂಗ್ ಕೆಳಗಿಳಿಯಬಹುದಾದ
ಸಾಧ್ಯತೆಯ ಬಗ್ಗೆ ಆತಂಕಗೊಂಡಿದ್ದವು. ಏಕೆಂದರೆ
ಮಹಾನ್ ಶಕ್ತ ರಾಷ್ಟ್ರ (ಗ್ರೇಟ್
ಪವರ್) ವಾಗಬೇಕೆಂಬ ತನ್ನ ಮಹತ್ವಾಕಾಂಕ್ಷೆಗೆ ಅಮೆರಿಕದ
ಜೊತೆ ಒಂದು ಜಾಗತಿಕ ವ್ಯೂಹಾತ್ಮಕ
ಸಹಭಾಗಿತ್ವ ಅತ್ಯಗತ್ಯವೆಂದು ಭಾರತದ ಆಳುವವರ್ಗಗಳು ಭಾವಿಸುತ್ತಾರೆ.
ಪ್ರಾಯಶಃ ಅಮೆರಿಕ ಸಾಮ್ರಾಜ್ಯಶಾಹಿಯ ಜೊತೆ
ಒಂದು ಚೀನಾ ವಿರೋಧಿ ಮೈತ್ರಿಯನ್ನು
ರೂಪಿಸಿಕೊಳ್ಳುವ ಸಲುವಾಗಿಯೇ ಪ್ರಧಾನಿಯವರ ಹಿಂದೂತ್ವವಾದಿ ಬಲಗೈ ಭಂಟರು ಚೀನಾದ
ಜೊತೆ ಮೂರನೇ ಗಡಿವಿಭಾಗದಲ್ಲೂ ಸಂಘರ್ಷವೊಂದನ್ನು
ಯೋಜಿಸಿದಂತೆ ಕಾಣುತ್ತಿದೆ. ಹಿಂದಿನಿಂದಲೂ ಭಾರತಕ್ಕೆ ಚೀನಾದ ಜೊತೆ ಈಶಾನ್ಯ
ಗಡಿ ಪ್ರದೇಶದಲ್ಲಿ ಮ್ಯಾಕ್ಮೋಹನ್
ಗಡಿ ರೇಖೆಗೆ ಸಂಬಂಧಪಟ್ಟಂತೆಯೂ ಮತ್ತು
ವಾಯುವ್ಯ ಗಡಿಯಲ್ಲಿ ಅಕ್ಸಾಯ್ ಚಿನ್ ಪ್ರದೇಶದ
ಮೇಲೆ ಹಕ್ಕಿನ ಬಗ್ಗೆಯೂ ಗಡಿ
ವಿವಾದ ಉಳಿದುಕೊಂಡು ಬಂದಿದೆ. ಆದರೆ
ಈ ತಂತ್ರಗಾರಿಕೆಯು ಫಲ
ನೀಡುವುದೇ?
೨೦೧೪ರಲ್ಲಿ
ಮೋದಿ ಸರ್ಕಾರ ಅಧಿಕಾರವನ್ನು ಪಡೆದುಕೊಂಡಾಗಿನಿಂದಲೂ
ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ
ಒಲವುಗಳ ಸಂಪೂರ್ಣ ಬಳಕೆ ಮಾಡಿಕೊಂಡ
ಅಮೆರಿಕದ ಬರಾಕ್ ಒಬಾಮಾ ಆಡಳಿತವು
ತನ್ನ ಚೀನಾ ವಿರೋಧಿ ನೀತಿಯಲ್ಲಿ
ಭಾರತವು ಮುಂಚೂಣಿ ಪಾತ್ರ ನಿರ್ವಹಿಸುವಂತೆ
ಸಿದ್ಧಗೊಳಿಸುತ್ತಿದೆ.ಅದರಲ್ಲೂ ನಿರ್ದಿಷ್ಟವಾಗಿ ಅಮೆರಿಕವು
ಭಾರತವನ್ನು ಒಂದು ಪ್ರಮುಖ ಸೇನಾ
ಸಹಭಾಗಿ ಎಂದು ಪರಿಗಣಿಸಿದೆ. ಭಾರತವು
ಅಮೆರಿಕದ ಜೊತೆ ಸೇನಾ ಸರಂಜಾಮು
ವಿನಿಮಯ ಒಪ್ಪಂದವನ್ನು ಮಾಡಿಕೊಂಡಿದ್ದು ಅದರಡಿಯಲ್ಲಿ ಅಮೆರಿಕವು ತನ್ನ ಸೇನಾ ತುಕಡಿಗಳನ್ನು
ಭಾರತೀಯ ಸೇನಾ ನೆಲೆಗಳಲ್ಲಿ ನಿಯೋಜಿಸಬಹುದು.
ಇದಕ್ಕೆ ಪ್ರತಿಯಾಗಿ ಅಮೆರಿಕದಿಂದ ಅಮೆರಿಕದ ಅತ್ಯಂತ ಆಪ್ತ
ಸಹಭಾಗಿಗಳು ಮತ್ತು ಮಿತ್ರರ ಜೊತೆ
ಮಾತ್ರ ಹಂಚಿಕೊಳ್ಳುವ ಮಟ್ಟದ ಸೇನಾ ತಂತ್ರಜ್ನಾನದ
ಸಹಕಾರವನ್ನು ಪಡೆದುಕೊಳ್ಳಲು ಭಾರತ ಅರ್ಹತೆಯನ್ನು ಪಡೆದುಕೊಂಡಿದೆ.
ಇವೆಲ್ಲದರ ಮೂಲಕ ಅಮೆರಿಕ
ಭಾರತವನ್ನು ತನ್ನ ಜಾಗತಿಕ ವ್ಯೂಹದೊಳಗೆ
ಸೆಳೆದುಕೊಂಡಿದೆ.
ಕಳೆದ ೪೫ ವರ್ಷಗಳಿಂದ ಅಮೆರಿಕ
ಮತ್ತು ಚೀನಾ ನಡುವಿನ ರಾಜತಾಂತ್ರಿಕ
ಸಂಬಂಧವು ನೆಲೆ ನಿಂತಿರುವುದು ಅಮೆರಿಕವು
ಬೀಜಿಂಗ್ ಆಡಳಿತವನ್ನು ಮಾತ್ರ ಮಾನ್ಯ ಮಾಡಿರುವುದರಿಂದ.
(ಚೀನಾದ ದಕ್ಷಿಣ ತುದಿಯಲ್ಲಿ ಟೈವಾನ್
ಎಂಬ ಸಣ್ಣ ಪ್ರಾಂತ್ಯವಿದ್ದು ಅದೂ
ಕೂಡಾ ಚೀನಾದ ಭಾಗವೇ ಆಗಿತ್ತು.
ಆದರೆ ೧೯೪೯ರಲ್ಲಿ ಚೀನಾದಲ್ಲಿ ಕ್ರಾಂತಿಯಾದಾಗ ಅಮೆರಿಕ ಬೆಂಬಲಿತ ಸರ್ವಾಧಿಕಾರಿ
ಚಿಯಾಂಗ್-ಕೈ-ಶೇಕ್ ಟೈವಾನ್ಗೆ
ಪಲಾಯನ ಮಾಡಿದ. ಹಾಗೂ ಅಲ್ಲಿ
ಆಡಳಿತ ನಡೆಸುತ್ತಾ ಇಡೀ ಚೀನಾದ ನಿಜವಾದ
ಸಾರ್ವಭೌಮತೆ ತನ್ನ ಆಡಳಿತಕ್ಕೆ ಸೇರಿದ್ದೆಂದು
ಪ್ರತಿಪಾದಿಸಿದ. ಅಮೆರಿಕವು ೪೫ ವರ್ಷದ ಹಿಂದಿನವರೆಗೂ
ಟೈವಾನ್ ಆಡಳಿತವನ್ನು ಮಾನ್ಯ ಮಾಡಿತ್ತೇ ವಿನಃ
ಬೀಜಿಂಗ್ ಆಡಳಿತವನ್ನಲ್ಲ- ಅನುವಾದಕನ ಟಿಪ್ಪಣಿ ) ಅಂದರೆ
ಬೀಜಿಂಗ್ ಆಡಳಿತಕ್ಕೆ ಮಾತ್ರ ಇಡೀ ಚೀನಾದ
ಸಮಗ್ರ ಸಾರ್ವsಮೀ ಪರಮಾಧಿಕಾರವಿರುವ
ಒಂದು ಚೀನಾ ಎಂಬ ತತ್ವವನ್ನು
ಮೆರಿಕ ಮಾನ್ಯ ಮಾಡಿದೆ.
ಆದರೆ ೨೦೧೬ರ ಡಿಸೆಂಬರ್ ನಲ್ಲಿ
ಆಗಿನ್ನೂ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಡೊನಾಲ್ಡ್
ಟ್ರಂಪ್ ಅವರು ತನ್ನ ಆಡಳಿvವು ಈ ಹಿಂದಿನ
ರೀತಿ ಒಂದು ಚೀನಾ ತತ್ವಕ್ಕೆ
ಬದ್ಧವಾಗಿರುತ್ತದೆಂದು ಯಾರೂ ನಿರೀಕ್ಷಿಸಬೇಕಿಲ್ಲವೆಂದೂ, ಚೀನಾದ ಬಗ್ಗೆ
ತನ್ನ ಆಡಳಿತದ ನಿಲುವು ಉಳಿದೆಲ್ಲಾ
ದ್ವಿಪಕ್ಷೀಯ ವಿಷಯಗಳ ಬಗ್ಗೆ ಚೀನಾದ
ನಿಲುವು ಹೇಗಿರುತ್ತದೆ ಎಂಬುದನ್ನೇ ಆಧರಿಸಿರುತ್ತದೆಂದೂ ಹೇಳಿಕೆ ನೀಡಿದ್ದರು. ಈ ಕಾರಣಗಳಿಂದ ಚೀನಾದೊಂದಿಗೆ
ಭಾರತಕ್ಕಿರುವ ಭೌಗೋಳಿಕ ತಗಾದೆಗಳೆಲ್ಲದರಲ್ಲೂ ಅಮೆರಿಕ
ತಮ್ಮನ್ನೇ ಬೆಂಬಲಿಸುತ್ತದೆಂದು ಮೋದಿಯ ಭದ್ರತಾ ಸಲಹೆಗಾರರು
ಭಾವಿಸಿಕೊಂಡಂತೆ ಕಾಣುತ್ತದೆ.
ಭಾರತವು
ಚೀನಾದೊಂದಿಗಿನ ಎರಡು ಗಡಿ ವಿವಾದಗಳ
ಬಗ್ಗೆ ಮಾತುಕತೆಯನ್ನು
ಮುಂದುವರೆಸಿರುವುದು ನಿಜ. ಆದರೆ ಭಾರತವು ಅಕ್ಸಾಯ್
ಚಿನ್ ಗಡಿ ವಿವಾದದಲ್ಲಿ ಇಡೀ
ಅಕ್ಸಾಯ್-ಚಿನ್ ಪ್ರದೇಶವೇ ತನ್ನದೆಂದು
ಪ್ರತಿಪಾದಿಸುತ್ತದೆ. ಎರಡನೆಯದಾಗಿ ಈಶಾನ್ಯ ಗಡಿಯಲ್ಲಿ ಮ್ಯಾಕ್ಮೋಹನ್ ಗಡಿ
ರೇಖೆಯ ಸಿಂಧುತ್ವದ ಬಗ್ಗೆಯೇ ತಗಾದೆಯಿದ್ದರೂ ಅದೇ
ಅಂತಿಮವೆಂದು ಹಠ ಹಿಡಿದಿದೆ. ಇವೆರಡೂ
ವಿಷಯಗಳಲ್ಲಿ ಭಾರತವೂ ಕಿಂಚಿತ್ತೂ ಕೆಳಗಿಳಿಯಲು
ಸಿದ್ಧವಿಲ್ಲವೆಂದು ಸ್ಪಷ್ಟಪಡಿಸಿದೆ. ಆದರೆ ಭೂತಾನ್ ಒಂದನ್ನು
ಬಿಟ್ಟರೆ (ಏಕೆಂದರೆ ಅದು ಭಾರತ
ರಕ್ಷಿತ ಪ್ರದೇಶ) ಚೀನಾದೊಂದಿಗೆ ಗಡಿಯನ್ನು
ಹಂಚಿಕೊಳ್ಳುವ ಉಳಿದೆಲ್ಲಾ ದೇಶಗಳು ಚೀನಾದೊಂದಿಗೆ ತಮ್ಮ
ಗಡಿವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿವೆ. ವಾಸ್ತವವಾಗಿ ಇತಿಹಾಸವು ಅಂತಿಮವಾಗಿ ಗಡಿರೇಖೆಯನ್ನು ಎಲ್ಲಿಯತನಕ ತಂದು ನಿಲ್ಲಿಸಿದೆಯೋ ಅದನ್ನೇ
ಮಾನ್ಯ್ ಮಾಡಲು ಚೀನಾ ಹೆಚ್ಚೂ
ಕಡಿಮೆ ಸಿದ್ಧವಾಗಿದೆ. ತಮ್ಮ ಬಹಳಷ್ಟು ಭೂ
ಪ್ರದೇಶಗಳನ್ನು ಬ್ರಿಟಿಷ ವಸಾಹತುಶಾಹಿಗಳು ತಮ್ಮ
ಸಾಮ್ರಾಜ್ಯ ವಿಸ್ತರಣೆಯ ಕೊನೆಯ ಹಂತದಲ್ಲಿ ವಶಪಡಿಸಿಕೊಂಡಿರುವುದೆಂದು
ಚೀನಾಗೆ ಗೊತ್ತಿದ್ದರೂ, ಮುಕ್ತ
ಮಾತುಕತೆಯೊಂದಿಗೆ ನಡೆಯುವ ಯಾವುದೇ ಒಪ್ಪಂದಗಳಲ್ಲಿ
ಭಾರತಕ್ಕೆ ಮ್ಯಾಕ್ ಮೋಹನ್ ರೇಖೆಯವರೆಗಿನ
ಭೂ ಪ್ರದೇಶವು ದಕ್ಕುತ್ತದೆ.
ಹಾಗಿದ್ದರೂ
ಭಾರತವೇಕೆ ಚೀನಾದೊಡನೆ ಅನಗತ್ಯ ಘರ್ಷಣೆಗಿಳಿಯುತ್ತಾ ತನ್ನನ್ನು
ತಾನು ಚೀನಾದ ಶತ್ರುವನ್ನಾಗಿಸಿಕೊಳ್ಳುತ್ತಿದೆ?
ಭಾರತವು ಪಾಕಿಸ್ತಾನ,
ಚೀನಾ ಮತ್ತು ಅವರಿಂದ ಪೋಷಿತರಾದ
ದಂಗೆಕೋರರೊಂದಿಕೆ ಏಕಕಾಲದಲ್ಲಿ ಎರಡೂವರೆ ಯುದ್ಧವನ್ನು ನಡೆಸಲು
ಭಾರತವು ಸಿದ್ಧವಿದೆಯೆಂದು ಭಾರತದ ಸೇನಾ ದಂಡನಾಯಕರಾದ
ಬಿಪಿನ್ ರಾವತ್ ಅವರು ಅತ್ಯಂತ
ಬೇಜವಾಬ್ದಾರಿಯಿಂದ ಕೊಚ್ಚಿಕೊಂಡಿದ್ದಾರೆ. ಚೀನಾ-ಭಾರತ-ಭೂತಾನ್
ಗಡಿರೇಖೆಯನ್ನು ಮತ್ತಷ್ಟು ದಕ್ಷಿಣಕ್ಕೆ ತಳ್ಳುವ ಉದ್ದೇಶವನ್ನು ಚೀನಾವು
ಹೊಂದಿದೆಯೆಂದೂ, ಒಂದು ವೇಳೆ ಯುದ್ಧವೇ
ಸಂಭವಿಸಿದಲ್ಲಿ ಪಶ್ಚಿಮ ಬಂಗಾಳ ಮತ್ತು
ಏಳು ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ
ಭೌಗೋಳಿಕವಾಗಿ ಜೋಡಿಸುವ , ಕೋಳಿ ಕತ್ತು (ಚಿಕನ್
ನೆಕ್) ಎಂದೇ ಬಣ್ಣಿಸಲ್ಪಡುವ
ಸಿಲಿಗುರಿ ರಹದಾರಿಯನ್ನು ವಶಪಡಿಸಿಕೊಂಡು ಅವಕ್ಕೆ ಭಾರತದೊಂದಿಗೆ ಭೂ
ಸಂಪರ್ಕವನ್ನು ಇಲ್ಲದಂತೆ ಮಾಡುವ ಯುದ್ಧತಂತ್ರವಿದೆಂದೂ ಭಾರತ
ಸರ್ಕಾರ, ಭಾರತದ ದೊಡ್ಡ ಮಾಧ್ಯಮ
ಸಂಸ್ಥೆಗಳು ಮತ್ತು ಕೆಲವು ಸ್ವಘೋಷಿತ
ಸೇನಾ ಪರಿಣಿತರು ಅಭಿಪ್ರಾಯ ಪಡುತ್ತಿದ್ದಾರೆ. ಇಂಥಾ ಒಂದು ಅಸಂಭವವಾದ
ಊಹಾಪೋಹವೇ ಭಾರತವನ್ನು ಚೀನಾದ ನಿಯಂತ್ರಣದಲ್ಲಿರುವ ಮತ್ತು
ಚೀನಾ ತನ್ನದೆಂದು ಪ್ರತಿಪಾದಿಸುವ ಭೂಭಾಗದ ಮೇಲೆ ದಾಳಿಗೆ
ಸಮರ್ಥನೆ ಒದಗಿಸುತ್ತಿದೆ. ಇದು ಕಳೆದ ಮೂರು
ವರ್ಷಗಳಲ್ಲಿ ಚೀನಾದೊಡಗಿನ ವೈಷಮ್ಯ ಯಾವ ಪ್ರಮಾಣಕ್ಕೆ
ಬೆಳೆದಿದಿದೆಯೆಂಬುದನು ಸೂಚಿಸುತ್ತದೆ. ಹಾಗೆಯೇ ಅಮೆರಿಕದೊಂದಿಗೆ ಅದು
ಮಾಡಿಕೊಂಡಿರುವ ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವದಲ್ಲಿ
ಎಷ್ಟರಮಟ್ಟಿಗೆ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಬಿಟ್ಟುಕೊಟ್ಟಿದೆಯೆಂಬುದನ್ನೂ ಸೂಚಿಸುತ್ತದೆ.
ಆದರೆ ಮೋದಿಯವರ ಸಲಹೆಗಾರರ
ಎಣಿಕೆಗೆ ವಿರುದ್ಧವಾಗಿ ಟ್ರಂಪ್ ಆಡಳಿತ ಚೀನಾದ
ಜೊತೆಗೆ ಈಗ ಸಂಘರ್ಷದ ಬದಲಿಗೆ
ಇನ್ನೂ ಹೆಚ್ಚಿನ ಒಳಗೊಳ್ಳುವ ನೀತಿಯನ್ನು
ಅನುಸರಿಸುತ್ತಿದೆ. ಏಕೆಂದರೆ ಚೀನಾವು ಅಮೆರಿಕದೊಂದಿಗೆ
ಹೊಂದಿರುವ ವಾಣಿಜ್ಯದಲ್ಲಿ ಅತ್ಯಧಿಕ ಹೆಚ್ಚುವರಿಯನ್ನು ಹೊಂದಿರುವುದು
(ಅಮೆರಿಕವು ಚೀನಾಗೆ ಮಾಡುವ ರಫ್ತಿಗಿಂತ
ಚೀನಾದಿಂದ ಮಾಡಿಕೊಳ್ಳುವ ಆಮದು ಹೆಚ್ಚಿದೆ. ಹೀಗಾಗಿ
ವಾಣಿಜ್ಯದಲ್ಲಿ ಚೀನಾದ ಪರವಾಗಿ ಹೆಚ್ಚುವರಿ
ಇದೆ- ಅನುವಾದಕನ ಟಿಪ್ಪಣಿ) ಅಮೆರಿPದ ಆರ್ಥಿಕತೆಗೆ
ಸಂಕಷ್ಟವನ್ನು ತಂದೊಡ್ಡಿದೆ. ಹೀಗಾಗಿ ಅದನ್ನು ಇಳಿಸುವಂತೆ
ಒಲಿಸುವುದೂ ಹಾಗೂ ಉತ್ತರ ಕೊರಿಯಾವು
ಅಣ್ವಸ್ತ್ರ ಮತ್ತು ಕ್ಷಿಪಣಿಗಳ ವಿಷಯದಲ್ಲಿ
ಅಮೆರಿಕದ ಶರತ್ತುಗಳನ್ನು ಒಪ್ಪಿಕೊಳ್ಳುವಂತೆ ಮಾಡಲು ಚೀನಾ ಒತ್ತಡ
ಹೇರುವಂತೆ ಮಾಡುವುದರಲ್ಲೇ ಸದ್ಯಕ್ಕೆ ಅಮೆರಿಕದ ಹಿತಾಸಕ್ತಿಯಡಗಿದೆ. ಗಮನಾರ್ಹವಾದ
ವಿಷಯವೆಂದರೆ ಭಾರತವು ಚೀನಾದೊಂದಿಗೆ ತೆಗೆದಿರುವ
ಈ ಮೂರನೇ ಗಡಿ
ತಗಾದೆಯ ಬಗ್ಗೆ ಅಮೆರಿಕವಾಗಲೀ, ಜಪಾನ್
ಆಗಲೀ ಈವರೆಗೆ ಯಾವ ಹೇಳಿಕೆಯನ್ನೂ
ನೀಡಿಲ್ಲ.
ಅಮೆರಿಕವು
ಬೆಂಬಲಕ್ಕೆ ಬರಬಹುದೆಂಬ ಸಾಧ್ಯತೆ ಇಲ್ಲವಾಗುತ್ತಿರುವುದರಿಂದ ಚೀನಾ ನಿಯಂತ್ರಣದಲ್ಲಿರುವ
ದೋಕ್ಲಾಮ್ ಪ್ರದೇಶದಿಂದ ಭಾರತದ ಸೇನಾ ತುಕಡಿಗಳನ್ನು
ಮೋದಿಯವರು ಸದ್ದಿಲ್ಲದೆ ಹಿಂದಕ್ಕೆ ಕರೆಸಿಕೊಳ್ಳುತ್ತಾರೆಯೇ?
ಕೃಪೆ: Economic and political weekly
July 8, 2017. Vol. 52. No. 27
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ