ಭಾನುವಾರ, ಸೆಪ್ಟೆಂಬರ್ 15, 2013

ಪ್ರೊ.ಲೌರಿ ಹಾಂಕೊ ನೆನಪಿನ ಜಾನಪದ ಸಮ್ಮೇಳನದಲ್ಲಿ ಪ್ರೊ.ಬಿ.ಎ.ವಿವೇಕ ರೈ





ಪ್ರೊ.ಬಿ.ಎ.ವಿವೇಕ ರೈ ಅವರು ಫಿನ್ ಲೆಂಡ್ ನ ತುರ್ಕು ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಆಗಸ್ಟ್ ೨೧ - ೨೩ ರಂದು ನಡೆದ ಪ್ರೊ . ಲೌರಿ ಹಾಂಕೊ ನೆನಪಿನ ಜಾನಪದ ಸಮ್ಮೇಳನದಲ್ಲಿ ಉಪನ್ಯಾಸ ನೀಡುತ್ತಿರುವ ಚಿತ್ರವಿದು. 'ಭಾರತೀಯ ಮೌಖಿಕ ಮಹಾಕಾವ್ಯಗಳ ಪಾಠ ,ಸಂದರ್ಭ ಮತ್ತು ಪ್ರದರ್ಶನಗಳ ನಡುವಿನ ಸಂದರ್ಭದ ಸಂಕೀರ್ಣತೆ '. ಕುರಿತು ಮಾತನಾಡುತ್ತಾ ಕನ್ನಡ ಮತ್ತು ತುಳು ಜನಪದ ಮಹಾಕಾವ್ಯಗಳ ನಿದರ್ಶನಗಳನ್ನು ಚರ್ಚಿಸಿದ್ದಾಗಿ ರೈ ಸಾರ್ ಹೇಳಿಕೊಂಡಿದ್ದಾರೆ. ಕನ್ನಡ ಕರ್ನಾಟಕದ ಸಾಂಸ್ಕೃತಿಕ ಚಹರೆಗಳನ್ನು ಜಾಗತಿಕ ನೆಲೆಯಲ್ಲಿ ವಿಶ್ಲೇಷಿಸುವುದು, ಕನ್ನಡದ ಸಾಂಸ್ಕೃತಿಕ ಸಂಗತಿಗಳ ಒಳಗಿಂದ ಹುಟ್ಟಬಹುದಾದ ಸೈದ್ಧಾಂತಿಕ ತಿಳುವಳಿಕೆಯ ಮೂಲಕ ಜಾಗತಿಕ ಜಾನಪದವನ್ನು ವಿವರಿಸಲು ಪ್ರಯತ್ನಿಸುವುದು ನಿಜಕ್ಕೂ ಮಹತ್ವದ ಕೆಲಸವೆ ಸರಿ. ಇಂತಹ ಕೆಲಸಕ್ಕಾಗಿ ಕನ್ನಡ ಜಾನಪದ ಬ್ಲಾಗ್ ಪರವಾಗಿ ರೈ ಸಾರ್ ಗೆ ಅಭಿನಂದನೆಗಳು.

ಕಾಮೆಂಟ್‌ಗಳಿಲ್ಲ: