ಬುಧವಾರ, ಸೆಪ್ಟೆಂಬರ್ 4, 2013

ಅಮೃತ್ ಕಾವಲ್ ಉಳಿವಿಗಾಗಿ ರೈತರ ಹೋರಾಟ



 3.9.2013 ರಂದು ಚಳ್ಳಕೆರೆಯಲ್ಲಿ ಅಮೃತ್ ಮಹಲ್ ಮತ್ತು ವರವು ಕಾವಲ್ ನ ಭೂಮಿಯನ್ನು ದೇಶದ ಪ್ರತಿಷ್ಠಿತ ಕಂಪನಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿರುವುದನ್ನು ವಿರೋಧಿಸಿ ಉಳ್ಳಾರ್ತಿ ಗ್ರಾಮದಿಂದ ಚಳ್ಳಕೆರೆಯ ತಾಲೂಕು ಕಛೇರಿಯ ತನಕ ಸಾವಿರಾರು ರೈತರು ಕಾಲುನಡಿಗೆ ಜಾಥಾ ನಡೆಸಿದರು.

   ಬುಡಕಟ್ಟು ಸಮುದಾಯಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ರೈತರು ಈ ಭೂಮಿಯ ಜತೆ ಸಾವಯವ ಸಂಬಂಧವನ್ನು ಹೊಂದಿದ್ದಾರೆ. ಪಶುಪಾಲನೆಯೆ ಮುಖ್ಯ ಉದ್ಯೋಗವಾದ್ದರಿಂದ ಈ ಭೂಮಿ ಇಲ್ಲವಾದರೆ ಈ ಜನ ತಮ್ಮ ನೆಲದಲ್ಲಿಯೇ ದಿಕ್ಕಿಲ್ಲದಂತಾಗುತ್ತಾರೆ. ಹಾಗಾಗಿ ಅಮೃತ ಮಹಲ್ ಕಾವಲು ಜಿಲ್ಲಾ ಹೋರಾಟ ಸಮಿತಿ ಈ ಭೂಮಿ ಉಳಿವಿಗಾಗಿ ಹೋರಾಟ ಆರಂಭಿಸಿದೆ. ಈ ಹೋರಾಟಕ್ಕೆ ಸಾಹಿತಿಗಳು, ಪ್ರಗತಿಪರರು, ನಾಡಿನ ಬುದ್ಧಿಜೀವಿಗಳು ಬೆಂಬಲ ಸೂಚಿಸುವ ಅಗತ್ಯವಿದೆ. ಹಲವು ಪರಿಸರವಾದಿಗಳು ಈ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ. ಪ್ರಾದೇಶಿಕವಾಗಿ ಜಿ.ಹನುಮಂತರಾಯ, ದೊಡ್ಡ ಉಳ್ಳಾರ್ತಿ ಕರಿಯಣ್ಣ ಮುಂತಾದವರು ಈ ಭಾಗದ ಜನರನ್ನು ಭೂಕಬಳಿಕೆ ವಿರುದ್ಧ ಧ್ವನಿ ಎತ್ತಲು ಸಜ್ಜುಗೊಂಡಿದ್ದಾರೆ.

   ನಾನು ವಯಕ್ತಿಕವಾಗಿ ನೇರ್ಲಗುಂಟೆ, ಎನ್.ದೇವರಹಳ್ಳಿ ಮುಂತಾದ ಕಡೆ ಈಚೆಗೆ ಕ್ಷೇತ್ರ ಕಾರ್ಯ ಮಾಡಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿದಾಗ ಬಹುಪಾಲು ಜನರು ಈ ಯೋಜನೆಯ ವಿರುದ್ಧವಿರುವುದು ತಿಳಿಯಿತು. ಮುಖ್ಯವಾಗಿ ಈ ಭಾಗದ ಜನರು ಈ ಯೋಜನೆಗಳ ಅಪಾಯಗಳ ಬಗ್ಗೆ ಭಯ ಆತಂಕದಿಂದ ಕಾಲ ತಳ್ಳುತ್ತಿದ್ದಾರೆ. ಹಾಗಾಗಿ ಸಹಜವಾಗಿ ಈ ಭಾಗದ ಜನರು  ಈ ಭೂಮಿ ಉಳಿಸಿಕೊಳ್ಳಲು ದೊಡ್ಡಶಕ್ತಿಯಾಗುವ ಸಾಧ್ಯತೆಗಳಿವೆ. ಹಾಗಾಗಿ ಈ ಹೋರಾಟಕ್ಕೆ ಜಯ ಸಿಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.























ಕಾಮೆಂಟ್‌ಗಳಿಲ್ಲ: