ಎಚ್.ಗಂಗಾಧರಯ್ಯ ಕುರಿಹಳ್ಳಿ ಬೆಂಗಳೂರು
ನಗರದಲ್ಲಿ ಮೊಳಗಿದ್ದ ಸಾವಿರ ಜಾನಪದ ಕಲಾವಿದರ ಝೇಂಕಾರ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ. ದೇಶದ ಯಾವುದೇ ಭಾಷೆಯ ಜಾನಪದ ಸಂಗೀತ ಪ್ರಕಾರದಲ್ಲೂ ಇಂತಹ ಸಾಧನೆಯಾಗಿಲ್ಲ. ಇದೊಂದು ರಾಷ್ಟ್ರೀಯ ದಾಖಲೆಯಾಗಿದ್ದು, ದೇಶಿ ಭಾಷೆಗಳ ಪೈಕಿ ಹೊಸ ಮೈಲುಗಲ್ಲು.
ಸಹಸ್ರ ದೇಸಿ ಹಕ್ಕಿಗಳ ಕಲರವಕ್ಕೆ ವಿದ್ಯಾರ್ಥಿಗಳು, ಹಿಂದು, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದ 8 ರಿಂದ 80 ವರ್ಷ ವಯೋಮಾನದವರು, ಸ್ತ್ರೀ ಶಕ್ತಿ ಸಂಘಟನೆಗಳು ಹಾಗೂ ಜಾನಪದ ಕಲಾಸಕ್ತರು ದನಿಗೂಡಿಸಿದರು. ಜಾನಪದ ಗಾಯಕ ಬಂಡ್ಲಹಳ್ಳಿ ವಿಜಯಕುಮಾರ್ ಪ್ರಯತ್ನ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ.
ಶಾಲೆ-ಕಾಲೇಜುಗಳ 25 ರಿಂದ 50 ವಿದ್ಯಾರ್ಥಿಗಳು, 5 ರಿಂದ 10 ಗಾಯಕರು ಜಾನಪದ ಹಾಡು ಹಾಡಿರುವುದನ್ನು ಹೊರತುಪಡಿಸಿದರೆ, ಒಂದು ಸಾವಿರ ಗಾಯಕರಿಂದ ಜಾನಪದ ಹಾಡು ಹಾಡಿಸಿರುವುದು ದೇಶದಲ್ಲೇ ಇದೇ ಮೊದಲು. ರಂಗ ಸಂಸ್ಥಾನ ಸಂಸ್ಥೆ ಐತಿಹಾಸಿಕ ದಾಖಲೆ ನಿರ್ಮಿಸಿದೆ.
2012ರ ಫೆ.7ರಂದು ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ಮಂದಿರದಲ್ಲಿ ರಂಗ ಸಂಸ್ಥಾನ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಇಂಥದ್ದೊಂದು ಅಭೂತಪೂರ್ವ ಕಾರ‌್ಯಕ್ರಮ ನಡೆದಿತ್ತು. 2012ರ ಆಗಸ್ಟ್‌ನಲ್ಲಿ ಲಿಮ್ಕಾ ದಾಖಲೆಗಾಗಿ ವಿವರ ಕಳಿಸಲಾಯಿತು. 4 ತಿಂಗಳು ವಿಚಾರ ವಿನಿಮಯ ಮತ್ತು ಪತ್ರ ವ್ಯವಹಾರದ ಬಳಿಕ 2013ರ ಫೆಬ್ರವರಿಯಲ್ಲಿ ಸಂಸ್ಥೆಗೆ ಲಿಮ್ಕಾ ದಾಖಲೆ ಪ್ರಮಾಣಪತ್ರ ರವಾನಿಸಿದೆ.
ಕೃಪೆ: ವಿಜಯ ಕರ್ನಾಟಕ,
4.5.2013

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ