ಗುರುವಾರ, ಜುಲೈ 21, 2016

ಆದಿವಾಸಿ, ಬುಡಕಟ್ಟು-ಅಭಿವೃದ್ಧಿ: ಒಂದು ಚರ್ಚೆ



6381798633_4fa49d54cd_b

ಸೌಜನ್ಯ: https://talastara.wordpress.com/author/talastara

ಡಾ.ಕಿರಣ್ ಗಾಜನೂರು: ಒಡಿಶಾದ ಕಂದಮಾಲ್’ನಲ್ಲಿ ಮತ್ತೆ 6 ಆದಿವಾಸಿಗಳ ಹತ್ಯೆಯಾಗಿದೆ. ಮಾವೋ ನಕ್ಸಲರೆಂದು ಮುಗ್ಧ ಶ್ರಮಿಕರನ್ನು ವಿಶೇಷ ರಕ್ಷಣಾಪಡೆ ಗುಂಡಿಟ್ಟು ಕೊಂದಿದೆ. ಅದಕ್ಕೆ ಬಲಿಯಾದವರಲ್ಲಿ 2 ವರ್ಷದ ಹಸುಳೆಯೂ ಸೇರಿದೆ….
ಡಾ. ಎ ಎಸ್ ಪ್ರಭಾಕರ್: ಈ ‘ಆಪರೇಷನ್ ಗ್ರೀನ್ ಹಂಟ್’ ಎನ್ನುವ ಕೊಲೆಗಡುಕ ಕಾರ್ಯತಂತ್ರವನ್ನು ರೂಪಿಸಿದವನು ಪಿ. ಚಿದಂಬರಮ್ ಎಂಬ ಬಹುರಾಷ್ಟ್ರೀಯ ಕಂಪನಿಗಳ ಏಜಂಟು. ಅವನು ರಕ್ಷಣಾ ಸಚಿವನಾಗಿದ್ದಾಗ ಗ್ರೀನ್ ಹಂಟ್ ಎಂಬ ಆದಿವಾಸಿಗಳನ್ನು ಉದ್ದೇಶಪೂರ್ವಕಾವಾಗಿ ಕೊಲ್ಲುವ ಪ್ಲಾನನ್ನು ಪೋಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಿದ. ಓಡಿಶಾ ಮತ್ತು ಅಸ್ಸಾಂಗಳ ಕಾಡುಗಳಲ್ಲಿಯ ಖನಿಜಗಳನ್ನು ಕೊಳ್ಳೆ ಹೊಡೆಯಲು ಬಂದ ಸಾಮ್ರಾಜ್ಯ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ಆದಿವಾಸಿಗಳನ್ನು ಅವರ ಮೂಲ ಸ್ಥಳಗಳಿಂದ ಒಕ್ಕಲೆಬ್ಬಿಸಲು ಆತ ಮುಂದಾದ. ಸಹಜವಾಗಿಯೇ ನಕ್ಸಲ್ ಹೋರಾಟಗಾರರು ಆದಿವಾಸಿಗಳ ಪರ ನಿಂತರು. ಪೋಸ್ಕೋ, ವೇದಾಂತ ಮುಂತಾದ ಬಹುರಾಷ್ಟ್ರೀಯ ಕಂಪನಿಗಳು ಈ ಕಾಡಿನ ಸಂಪತ್ತನ್ನು ದೋಚಲೆಂದು ಸಾವಿರಾರು ಕೋಟಿಗಳ ಬಂಡವಾಳ ಹೂಡಲು ಯೋಜನೆ ಹಾಕಿದ್ದವು. ಆಗ ಶುರುವಾದಈ ಅನ್ಯಾಯದ ಕೊಲೆಗಳು ಇನ್ನೂ ನಿಂತಿಲ್ಲ. ಚಿದಂಬರಂ ಮುಂದೆ ಹಣಕಾಸು ಸಚಿವನಾದ. ಅವನು ಸಾರ್ವಭೌಮ ಭಾರತದ ವಿತ್ತ ಮಂತ್ರಿಯಾಗದೆ, ಸಾಮ್ರಾಜ್ಯಶಾಹಿ ಮಾರುಕಟ್ಟೆಯ ಏಜಂಟ್ ಆದ. ಅವನ ಹೆಂಡತಿ ಸುಪ್ರಿಂ ಕೋರ್ಟಲ್ಲಿ ಪೋಸ್ಕೋ, ವೇದಾಂತ ಕಂಪನಿಗಳ ಪರ ವಕಾಲತ್ತು ಮಾಡಿದಳು. ಈಗಲೂ ಮಾಡುತ್ತಿದ್ದಾಳೆ. ಒಂದೆಡೆ ಗಂಡ ವಿತ್ತ ಮಂತ್ರಿ ಜಾಗತಿಕ ಆರ್ಥಿಕ ಯಜಮಾನರ ಪರವಾದ ನೀತಿಗಳನ್ನು ರೂಪಿಸುತ್ತಿದ್ದರೆ, ಆದಿವಾಸಿಗಳನ್ನು ಕೊಂದ ಕಿರಾತಕರ ಪರ ಅವನ ಹೆಂಡತಿ ವಕಾಲತ್ತು ವಹಿಸಿದಳು. ಈ ದೇಶದ ಮುಗ್ಧ ಆದಿವಾಸಿಗಳ ಮಾರಣ ಹೋಮ ನಡೆಯುತ್ತಲೇ ಇದೆ. ಈ ಕೊಲೆಗಳು ನಮ್ಮ ಭಾರತ ಮಾತೆಯ ಒಡಲು ಸೇರುತ್ತಲೇ ಇವೆ.
ಕಿರಣ್ ಗಾಜನೂರು: So sad…. Sir
ಡಾ. ಎ ಎಸ್ ಪ್ರಭಾಕರ್: ಆ ಮುದ್ದು ಕಂದ ಮಾಡಿದ ತಪ್ಪಾದರೂ ಏನು. ಯಾವನಿಗೆ ಬಂದಿದೆ ಅಚ್ಚೇ ದಿನ್???
ಡಾ. ಕಿರಣ್ ಗಾಜನೂರು: ಅದೇ ಅರ್ಥವಾಗುತ್ತಿಲ್ಲ ಸಾರ್ …..
ಡಾ. ಎ ಎಸ್ ಪ್ರಭಾಕರ್: ರಣವೀರ್ ಸೇನೆಯ ಮುಖ್ಯಸ್ಥನ್ನು ಒಮ್ಮೆ ಟೈಮ್ಸ್ ಪತ್ರಿಕೆಯ ವರದಿಗಾರ್ತಿ ಸಂದರ್ಶನ ಮಾಡಿದಳು. (ರಣವೀರ್ ಸೇನೆ ಬಿಹಾರದ ಭೂಮಾಲಿಕರು ತಮ್ಮ ‘ರಕ್ಷಣೆಗಾಗಿ’ ನೇಮಿಸಿಕೊಂಡ ಕೊಲೆಗಡುಕರ ಪಡೆ)
ವರದಿಗಾರ್ತಿ;
‘ನೀವು ಏಕೆ ಆದಿವಾಸಿಗಳ, ಕೆಳಜಾತಿಗೆ ಸೇರಿದ ದುಡಿವ ಜನರ ಪುಟ್ಟ ಮಕ್ಕಳನ್ನು ಕೊಲ್ಲುತ್ತೀರಿ?’
ರಣವೀರ್ ಸೇನೆಯ ಮುಖ್ಯಸ್ಥ:

‘ಆದಿವಾಸಿಗಳ, ಕೆಳಜಾತಿಗೆ ಸೇರಿದ ದುಡಿವ ಜನರಿಗೆ ಹುಟ್ಟುವ ಮಕ್ಕಳು ಬೆಳೆದು ದೊಡ್ಡವರಾಗಿ ನಮ್ಮ ಭೂಮಿಗಳನ್ನು ಕಿತ್ತುಕೊಳ್ಳುತ್ತಾರೆ. ಹಾಗಾಗಿ ಅವರು ಚಿಕ್ಕವರಿದ್ದಾಗಲೇ ಕೊಲ್ಲುತ್ತೇವೆ.’
ವರದಿಗಾರ್ತಿ;
‘ನೀವು ಏಕೆ ಆದಿವಾಸಿಗಳ, ಕೆಳಜಾತಿಗೆ ಸೇರಿದ ದುಡಿವ ವರ್ಗಕ್ಕೆ ಸೇರಿದ ಗರ್ಭಿಣ ಸ್ತ್ರೀಯರನ್ನು ಕೊಲ್ಲುತ್ತೀರಿ’?
ರಣವೀರ್ ಸೇನೆಯ ಮುಖ್ಯಸ್ಥ:
ಆದಿವಾಸಿಗಳ, ಕೆಳಜಾತಿಗಳಿಗೆ ಸೇರಿದ ಗರ್ಭಿಣ ಸ್ತ್ರೀಯರ ಹೊಟ್ಟೆಯಲ್ಲಿ ಹುಟ್ಟುವ ಮಗು ಮುಂದೆ ನಕ್ಸಲಾನಾಗುತ್ತಾನೆ. ನಮ್ಮ ಸಂಪತ್ತನ್ನು ದೋಚಲು ಬರುತ್ತಾನೆ. ಆದಕ್ಕಾಗಿ ನಾವು ಆದಿವಾಸಿಗಳ, ಕೆಳಜಾತಿಗೆ ಸೇರಿದ ಗರ್ಭಿಣಯರನ್ನು ಮತ್ತು ಮಕ್ಕಳನ್ನು   ಕೊಲ್ಲುತ್ತೇವೆ’
ಎಂದು ಉತ್ತರಿಸಿದ್ದಾನೆ.
ಹರ್ಷ: ಚರ್ಚೆಗೆ: ಆದಿವಾಸಿಗಳು ಹಿಂದುಳಿದಿದ್ದಾರೆ. ಆಧುನಿಕತೆಯ ಎಲ್ಲಾ ಲಾಭಗಳನ್ನು ಪಡೆಯುತ್ತಿರುವ ನಾವು ಅವರು ಹಾಗೇ ಇರಲಿ ಎಂದು ಬಯಸುವುದು ಒಂದು ಬಗೆಯ ಕ್ರೌರ್ಯ.
ಹೀಗಾಗಿ ಆದಿವಾಸಿಗಳು ಆಧುನಿಕರಾಗಲು ಬಿಡಬೇಕು. ರಾಷ್ಟ್ರೀಯ ಉದ್ಯಾನವನ, ಇಕೊ ಟೂರಿಸಂ ಗಳು ಇದಕ್ಕೆ ಸಹಾಯ ಮಾಡಿದರೆ ಮಾಡಲಿ. -ಇದು ಒಂದು ವಾದ. ಪೂರ್ಣಚಂದ್ರ ತೇಜಸ್ವಿ ಅವರಂತವರು ಸಹ ಇದೇ ಬಗೆಯ ಅಭಿಪ್ರಾಯ ಹೊಂದಿದ್ದರು. ಹೀಗಾಗಿಯೇ ಅವರು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವನ್ನು, ಆದಿವಾಸಿಗಳ ಒಕ್ಕಲೆಬ್ಹಿಸುವ ಪ್ರಸ್ತಾಪಕ್ಕೆ ಬೆಂಬಲವಾಗಿದ್ದರು.
ಈ ಕುರಿತು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.
ಪ್ರಭಾಕರ್ ಎ ಎಸ್:  ಹೌದು, ಇದು ಇಂದಿನ ಚರ್ಚೆ ವಿಷಯ.. ದಯವಿಟ್ಟು ಗಮನಿಸಿ…
ಸುಮಾ  @ ಹರ್ಷಾ..ಸಮಸ್ಯೆ ಇರೋದು ಇಲ್ಲೇ.. ಜೇನು ತೆಗೆಯುವ ಅವರ ಸಹಜ ಜೀವನಕ್ರಮವನ್ನು ನೀವು ಸಮಸ್ಯಾತ್ಮಕ ವಾಗಿ ಯಾಕೆ ನೋಡ್ತೀರಿ..? ನಾವು ಕಾನ್ವೆಂಟ್ ಗೆ ನಲ್ಲಿ ಕಲಿತರೆ ಅವರು ಜೇನು ತೆಗೆಯುವ ಕೌಶಲ್ಯ ವನ್ನು ಪರಂಪರಾಗತವಾಗಿ ಕಲಿತಿರ್ತಾರೆ..
ಡಾಕ್ಟರು, ಇಂಜಿನಿಯರ್ ಆದರೆ ಮಾತ್ರ ಬದುಕಾ..? ಎರಡು ಭಿನ್ ಜೀವನ ಕ್ರಮಗಳನ್ನು ತಕ್ಕಡಿಗೆ ಹಾಕಿ ತೂಕ ಮಾಡೋದು ಯಾಕೆ..? ಊರೊಳಗೆ ಇದ್ದುಕೊಂಡು ಬದುಕೋ ನಮ್ಮ ಹಕ್ಕಿನಷ್ಟೇ ಕಾಡೊಳಗೆ ಬದುಕೋ ಅವರ ಆಯ್ಕೆ, ಹಕ್ಕುಗಳೂ ಮುಖ್ಯವೇ ಅಲ್ವೇ..?ಅದನ್ನು ಪ್ರಶ್ನಿಸೋಕೆ, ನಿರ್ಧರಿಸೋಕೆ ನಾವು ಯಾರು..?
ಹರ್ಷ: ಹಾಗಾದರೆ ಆದಿವಾಸಿ ಮಕ್ಕಳು ನಮ್ಮ ರೀತಿ ಕಾನ್ವೆಂಟ್ ಶಿಕ್ಷಣ ಪಡೆಯೋದಾಗಲೀ, ಉತ್ತಮ ಉದ್ಯೋಗ ಪಡೆಯೋದಾಗಲೀ ಅವರ ಹಕ್ಕಲ್ಲ ಅಂತಾಯ್ತು. ಅಲ್ವ. ಅವರು ಪರಂಪರಯಲ್ಲೆ ಇರಲಿ ನಾವು ಅಧುನಿಕರಾಗ್ತಾನೇ ಹೋಗೋಣ…ಎಲ್ಲಾ ಆಧುನಿಕ ಟೆಕ್ಬಾಲಜಿಗಳ ನಮಗೆ ಮಾತ್ರ?
ಸುಮಾ:  ಕಾನ್ವೆಂಟ್ ನಲ್ಲಿ ಓದ್ತಿರೋ ನಮ್ಮ ಮಕ್ಕಳಿಗೆ ಜೇನು ತೆಗೆಯೋ ಶಿಕ್ಷಣ ಸಿಗ್ತಾ ಇಲ್ಲ
ಸುಮಾ: ಪರಂಪರೆ-ಆಧುನಿಕತೆ…ಅಂದರೇನು ಅನ್ನೋದೇ ಒಂದು ದೊಡ್ಡ ಡಿಬೇಟ್
ವಿಕಾಸ ಮೌರ್ಯ:  ನಾವು ತೀರ ಬ್ಲಾಕ್ ಅಂಡ್ ವೈಟ್ ತರ ಯೋಚನೆ ಮಾಡಬಾರದು ಅನ್ಸತ್ತೆ. ಆದಿವಾಸಿಗಳು ಕಾಡಿನಲ್ಲೇ‌ ಜೀವನ ನಡೆಸಬೇಕಾ? ಖಂಡಿತ ಇಲ್ಲ. ಹಾಗಂತ ಅವರನ್ನ ನಮ್ಮಂತೆ ಆಗಿಬನ್ನಿ ಎಂದು ನಗರಗಳಿಗೆ ಅಥವಾ ಹಳ್ಳಿಗಳಿಗೆ ಎಳೆದು ತರುವುದಾ? ಖಂಡಿತ ಅಲ್ಲ. ಅವರವರ ಆಯ್ಕೆಗಳನ್ನು ಅವರಿಗೇ ಬಿಡಬೇಕು. ಆದರೆ ನಾವು ಅನುಭವಿಸುತ್ತಿರುವ ಸವಲತ್ತುಗಳನ್ನು ಅವರೂ ಉಣ್ಣುವಂತೆ ಮಾಡಬೇಕು. ನಾವು ಅನುಭವಿಸುತ್ತಿರುವವು ಅವರೂ ಅನುಭವಿಸಬೇಕು. ಅವರಾಗಿಯೇ ಅದನ್ನು ಬಯಸುವ ವಾತಾವರಣ ಸೃಷ್ಟಿಯಾಗಬೇಕು. ಆ ವಾತಾವರಣ ಉಂಟಾಗಲು ನಾವು ಅವರಿಗೆ ಅದನ್ನೆಲ್ಲ ಪರಿಚಯಿಸುವ ಕೆಲಸ ಮಾಡಬೇಕು.
ಸುಮಾ: ಹಾಗೆ ಹೇಳೋವಾಗ ನಮ್ಮ ಬದುಕು ಅವರದ್ದಕ್ಕಿಂತ ಬೆಟರ್ ಅಂತ position ತಗೊಂಡ ಹಾಗೆ ಆಗಲಿಲ್ವಾ.?
ಹರ್ಷ: ಖಂಡಿತಾ ನಾವು ಆದಿವಾಸಿಗಳಿಗಿಂತ ಉತ್ತಮ ಸ್ಥಿತಿಗಳಲ್ಲಿ ಇದ್ದೇವೆ.
ಸುಮಾ: ಪೇಟೆಗೆ ಬಂದು ನಮ್ಮ ಬದುಕನ್ನು ಅವರು ನೋಡಿದ್ರೆ ಅವರಿಗೂ ನಿಮ್ಮ ಹಾಗೇ ಅನಿಸಬಹುದೇನೋ..
ಹರ್ಷ: ಸುರಕ್ಷಿತವಾಗಿದ್ದೇವೆ, ಸುಶಿಕ್ಷಿತರಾಗಿದೇವೆ. ಒಬ್ಬ ಆದಿವಾಸಿ ಬಾಲಕ/ ಬಾಲಕಿ ಕಾನ್ವೆಂಟ್/ CBSC syllabus ಶಿಕ್ಷಣ ಪಡೆದು ದೊಡ್ಡ ವಿಜ್ಞಾನಿ/ ವೈದ್ಯ/ ಎಂಜಿನಿಯರ್ ಆಗಬೇಕು ಅಂತ ನಾ ಬಯಸ್ತೀನಿ.‌ಅವನು ಕಾಡಿನಲ್ಲಿ ಕಠಿಣ ಬದುಕಿನಲ್ಲಿ ಜೇನು ತೆಗೀತಾ ಇರಬೇಕು ಅಂತ ನಾ ಬಯಸಲ್ಲ. ಅದು ಬಹಳ cruel ಅನ್ಸತ್ತೆ
ಸುಮಾ: “ಕಠಿಣ” ಅನ್ನೋದು ಸಾಪೇಕ್ಷ
ಸುಮಾ: ನೀವು ಯಾವ ಮಾನದಂಡಗಳ ಮೂಲಕ ಈ ಅಭಿಪ್ರಾಯವನ್ನು ಸಮರ್ಥಿಸುತ್ತೀರಿ..?
ಡಾ. ಎ ಎಸ್ ಪ್ರಭಾಕರ್::  ಎರಡು ಮುಖ್ಯವಾದ ವಿಷಯಗಳ ಕುರಿತು ಚರ್ಚೆ ಗಂಭೀರವಾಗಿ ನಡೆದಿದೆ.
1.ಆದಿವಾಸಿಗಳು ‘ಆಧುನಿಕ’ರಾಗಬೇಕು. ಆಧುನಿಕ ಶಿಕ್ಷಣ, ಸವಲತ್ತುಗಳನ್ನು ಪಡೆಯಬೇಕು. ಆದಿವಾಸಿಗಳು ‘ಮುಖ್ಯವಾಹಿನಿಗೆ’ ಬರಬೇಕು.
  1. ಆದಿವಾಸಿಗಳ ಸಂಸ್ಕೃತಿ ‘ಉಳಿಯಬೇಕು’. ಅವರ ಪರಂಪರೆಯನ್ನು ‘ರಕ್ಷಿಸಬೇಕು’. ಈ ಕಾರಣದಿಂದ ಅವರ ಮೂಲ ನೆಲೆಗಳಿಂದ ಅವರನ್ನು ಒಕ್ಕಲೆಬ್ಬಿಸಬಾರದು.
  1. ಆದಿವಾಸಿಗಳು ಆಧುನಿಕರಾಗಬೇಕು. ಶಿಕ್ಷಣ ಪಡೆಯಬೇಕು. ಆದರೆ ಅವರ ಪರಂಪರೆ ಸಂಸ್ಕೃತಿಗಳು ಅನನ್ಯವಾಗಿರುವುದರಿಂದ ಅವು ಉಳಿಯಬೇಕು.
  1. ‘ಯಾವ ಬದುಕು ಬೇಕು’ ಎಂಬ ಆಯ್ಕೆಯನ್ನು ಆದಿವಾಸಿಗಳಿಗೇ ಬಿಡಬೇಕು. ನಾವು ಅವರ ಬದುಕಲ್ಲಿ ಮಧ್ಯ ಪ್ರವೇಶಿಸುವುದು ಉಚಿತವಲ್ಲ. ಅವರನ್ನು ಅವರಷ್ಟಕ್ಕೆ ಬಿಡುವುದು ಒಳಿತು.
  1. ಮುಖ್ಯವಾಹಿನಿಯಲ್ಲಿರುವ ‘ನಾವು’ ‘ಅವರಿಗಿಂತ’ ಉತ್ತಮ ಸ್ಥಿತಿಯಲ್ಲಿದ್ದೇವೆ. ಅವರು ನಮ್ಮ ಹಾಗೆಯೇ ಮುಖ್ಯವಾಹಿನಿಗೆ ಬಂದು ಅಭಿವೃದ್ಧಿ ಹೊಂದುವಂತಾಗಬೇಕು
ಹೀಗೆ ಆದಿವಾಸಿಗಳ ಅಭಿವೃದ್ಧಿಯ ಕುರಿತ ಚರ್ಚೆ ನಡೆಯುತ್ತಲೇ ಬಂದಿದೆ. ಈ ಪರ ವಿರೋಧದ ಮತ್ತು ವಿರೋಧಾಭಾಸಗಳ ಚರ್ಚೆಗೆ ದೊಡ್ಡ ಇತಿಹಾಸವೇ ಇದೆ.
ಇದಕ್ಕೆ ಕೆಲವು ಪ್ರಶ್ನೆಗಳೂ ಹುಟ್ಟಿಕೊಂಡಿವೆ.
@ ಮೊದಲು, ಆದಿವಾಸಿಗಳು ಅಭಿವೃದ್ಧಿಯಾಗಬೇಕು ಎಂದುಕೊಂಡರೆ, ಯಾವ ಬಗೆಯ ಉಪಕ್ರಮಗಳಿಂದ ಅವರನ್ನು ಅಭಿವೃದ್ಧಿಯ ಕಡೆಗೆ ಕರೆದುಕೊಂಡು ಹೋಗಬಹುದು? ಯಾವ ಬಗೆಯ ‘ಅಭಿವೃದ್ಧಿ’? ಇವರ ಅಭಿವೃದ್ಧಿಯನ್ನು ಸಾಧಿಸಲು ಪರಿಕಲ್ಪಿಸಿಕೊಳ್ಳಬಹುದಾದ ಪ್ಯಾರಾಮೀಟರ್ ಗಳಾವವು?
@ ಅವರು ಅಭಿವೃದ್ಧಿ ಹೊಂದುವುದು ಕಾಡಿನಿಂದ ಹೊರಬಂದಾಗ ಮಾತ್ರವೇ? ಅಥವಾ ಅವರನ್ನು ಅಲ್ಲಿಯೇ ಬಿಟ್ಟರೆ ಹೇಗೆ ಅಭಿವೃದ್ಧಿಪಡಿಸಬಹುದು?
@ ಆದಿವಾಸಿಗಳ ಸಂಸ್ಕೃತಿ ಉಳಿಯಬೇಕಾ? ಅಭಿವೃದ್ಧಿ ಹೊಂದಿದರೆ ಅವರ ಪರಂಪರೆಗಳು ನಾಶವಾಗುತ್ತವಾ? ಹಾಗಾದರೆ ಅವರನ್ನು ಅಭಿವೃದ್ಧಿಪಡಿಸಿಯೂ ಸಂಸ್ಕೃತಿ ಪರಂಪರೆಗಳನ್ನು ಉಳಿಸಬಹುದಾ?
@ ಅವರನ್ನು ಅವರಷ್ಟಕ್ಕೆ ಬಿಡುವುದರ ಮೂಲಕ ಆದಿವಾಸಿಗಳನ್ನು ಅಭಿವೃದ್ಧಿಪಡಿಸಬಹುದೇ? ಆದಿವಾಸಿಗಳನ್ನು ಹಾಗೇ ಬಿಟ್ಟರೆ ಅವರು ತಮ್ಮ ಅಭಿವೃದ್ಧಿಯ ಉಪಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಬಲ್ಲರೆ?
@ ಮುಖ್ಯವಾಹಿನಿಯಲ್ಲಿರುವ ‘ನಾವು’ ‘ಅವರಿಗಿಂತ’ ಹೇಗೆ ಉತ್ತಮ ಸ್ಥಿತಿಯಲ್ಲಿದ್ದೇವೆ?  ಅವರು ನಮ್ಮ ಹಾಗೆಯೇ ಮುಖ್ಯವಾಹಿನಿಗೆ ಬಂದು ಅಭಿವೃದ್ಧಿ ಹೊಂದುವಂತಾಗಬೇಕೆಂದರೆ ‘ನಾವು’ ಏನು ಮಾಡಬೇಕು? ಮುಖ್ಯವಾಹಿನಿ ಎಂದರೇನು?
ಪೋಷಿಣಿ: ಇವತ್ತು ಆದಿವಾಸಿಗಳು ಇರುವ ಸ್ಥಿತಿಯಲ್ಲಿ ಆಧುನಿಕ ಶಿಕ್ಷಣದ ಅವಶ್ಯಕತೆ ಖಂಡಿತಾ ಇದೆ. ಅವರಿಗೆ ಬೇಡದ ಸಾರಾಯಿ, ಅಭಿವೃದ್ಧಿ ಹೆಸರಿನ ಅಭದ್ರತೆ, ಮುಖ್ಯವಾಹಿನಿ ಎಲ್ಲ ದರಿದ್ರಗಳನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸಿದ್ದೇವೆ. ಅದರಿಂದ ಬಿಡುಗಡೆ ಗೊಂಡು ಅವರನ್ನವರು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಇವತ್ತು ಅವರ ಮುಂದಿದೆ.
ಹರ್ಷ: ಪ್ರಭಾಕರ್ ಸರ್ ಹೇಳಿರುವ ಪ್ರತಿ ಅಂಶದ ಕುರಿತೂ ಸ್ಪಷ್ಟತೆ ನಮಗೆ ಬೇಕಿದೆ. ಎಲ್ಲರೂ ಪ್ರತಿಕ್ರಿಯಿಸಿ
ರವಿ: ಆದಿವಾಸಿಗಳು ನಮ್ಮಂತೆ ಆಧುನಿಕರಾಗಬೇಕು ನಿಜ. ಈ ನಿಟ್ಟಿನಲ್ಲಿ ಮಧುಸೂಧನ್ ಎನ್ನುವವರು ಇವರಿಗಾಗಿಯೇ ಶಾಲೆ ನಡೆಸುತ್ತಿದ್ದಾರೆ. ಅದು ಎಲ್ಲಿದೆ ನನಗೂ ಗೊತ್ತಿಲ್ಲ. ಈ ಸಮಯದಲ್ಲಿ ಅವರನ್ನು ನೆನೆಸಿಕೊಳ್ಳಬೇಕು.
ವಿಕಾಸ್ ಮೌರ್ಯ: ಪ್ರಭಾಕರ್ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದರೆ ಎರಡರಲ್ಲೂ ನ್ಯೂನ್ಯತೆ ಕಾಡಿನಲ್ಲಿ ವಾಸಿಸುವವರನ್ನು ಕಾಡಿಗೆ ಸೀಮಿತಗೊಳಿಸಬೇಕೆನ್ನುವುದರಲ್ಲಿದೆ.
ಸುಮಾ: ಸರ್..ಈ “ಅಭಿವೃದ್ಧಿ ” ಅಂದರೆ ಏನು  ಅನ್ನೋದನ್ನ ಮೊದಲು ನಾವು ನಿರ್ವಚಿಸಿಕೊಳ್ಳಬೇಕಿದೆ ಅಂತ ನಂಗನಿಸುತ್ತೆ… ಯಾವುದು ಬದುಕಿನ ಭಾಗವಾಗಿದೆಯೋ ಅದನ್ನು ಬೇರ್ಪಡಿಸಿ ನೋಡುವ ಈ “ಆಧುನೀಕತೆ ” ಎಂಬ ಹತಾರದ ಮೂಲಕ ಆದಿವಾಸಿಗಳ ಬದುಕನ್ನು ನೋಡಿ ತೂಗೋದು ಎಷ್ಟು ಸರಿ  ಅನ್ನೋದು ನನ್ನ ಪ್ರಶ್ನೆ….. ನಾವು ಶಿಕ್ಷಣ,ಕೌಶಲ್ಯ, ಉದ್ಯೋಗ ಅಂತೆಲ್ಲ ಗುರುತಿಸೋ ಜೇನು ತೆಗೆಯೋದು ಆದಿವಾಸಿಗಳ ನಿತ್ಯ ಬದುಕಿನ ಭಾಗ…
ಶಿಕ್ಷಿತ-ಅಶಿಕ್ಷಿತ, ಹಳೆಕಾಲ- ಹೊಸಕಾಲ, ನಗರ-ಕಾಡು ಹೀಗೆ ದ್ವಿಮಾನ ವೈರುಧ್ಯಗಳಲ್ಲಿ ಜೀವನಕ್ರಮವೊಂದನ್ನು ನೋಡೋ ಬಗೆ ಸಮಸ್ಯಾತ್ಮಕವಲ್ಲವೇ?
ವಿಕಾಸ್ ಮೌರ್ಯ:  ಸುಮಾ ಅವರೇ ಅಭಿವೃದ್ದಿ ಅನ್ನೋದು ಗ್ಲೋಬಲ್ ಪ್ರಶ್ನೆ. ನೀವೇನಾದರೂ ಅಂಬೇಡ್ಕರ್ ಅವರ states and minorities ಮತ್ತು ಜಾತಿ ವಿನಾಶ ಕೃತಿ ಓದಿದ್ಸರೆ ಅದೇ ನನ್ನ ಪ್ರಕಾರ ಅಬಿವೃದ್ದಿ
ಮನ್ ದೀಪ್: ನಾವು ಟ್ರೈಬಲ್ ಸಮುದಾಯಗಳನ್ನೆಲ್ಲ ಒಂದೇ ಹೋಮೋಜಿನಸ್ ಗ್ರೂಪ್ ನಲ್ಲಿ ನೋಡೋಕೆ ಆಗಲ್ಲ. ಜಗತ್ತಿನಾದ್ಯಂತ ಮತ್ತು ಭಾರತದಲ್ಲಿ ಕೂಡಾ ಇರುವಂತಹ ಆದಿವಾಸಿಗಳು ಒಬ್ಬರಿಗಿಂತ ಇನ್ನೊಬ್ಬರು ಭಿನ್ನ. Not only in the sense of their identity but also with regarding to the problems they face. ಹಾಗೆಯೇ ಭಾರತದಲ್ಲಿ ಯಾವ ಸಮುದಾಯ ಆದಿವಾಸಿ ಮತ್ತು ಯಾವ ಸಮುದಾಯ ಅಲ್ಲ ಅನ್ನುವ ವಿಚಾರ ಕೂಡ ಅಷ್ಟು ಸರಳೀತವಾಗಿಲ್ಲ. So  modernisations impact on tribal communitiea also varies, even with in a region (balitha tribal community maththu oddhaduthiruva tribal communities with in a taluk) By keeping this in mind, I think we can look into modernisation impact. ಯಾವುದೇ ಕಮ್ಯುನಿಟಿಯು (including tribal communities) ಬದಲಾಗ್ತಾ ಹೋಗುತ್ತೆ. ತನ್ನ ಪರಿಸರ, ಆದ್ಯತೆ ಮತ್ತು ಬಾಹ್ಯ ಕಾರಣಕ್ಕೋಸ್ಕರ. ಅದು ಚಲನೆಯಲ್ಲೇ ಇರುತ್ತೆ. ಮತ್ತು ಅಂತಹ ಚಲನೆಯಿಂದ ಸಮುದಾಯ ಸಾಕಷ್ಟು ವಿಷಯಗಳನ್ನು ತನ್ನದಾಗಿಸಿಕೊಳ್ಳುತ್ತೆ.
ಈ ಚಲನೆ ನಾನಾ ರೂಪದ್ದಾಗಿರುತ್ತದೆ. ಉದಾಹರಣೆಗೆ ಕಾಡಿನಲ್ಲಿದ್ದ ಆದಿವಾಸಿ ಸಮುದಾಯವು ನಾಡಿನ ಕಡೆ ಬಂದು, ನಂತರ ನಾನಾ ಕಾರಣಾಂತರದಿಂದ ಪುನಃ ಕಾಡಿಗೆ ಹೋಗಬಹುದು. ಮತ್ತು ಪ್ರತಿಯೊಂದು ಟ್ರಾನ್ಸಿಶನ್ ನಲ್ಲು ಕೂಡಾ ಅದು ತನ್ನ ಪರಿಸರಕ್ಕೆ ಪೂರಕವಾದ ಗುಣಲಕ್ಷಣಗಳನ್ನು ರೂಢಿಸಿಕೊಳ್ಳಬಹುದು ಅಥವಾ ಅದರ ಮೇಲೆ ಅಂತಹ ಗುಣಲಕ್ಷಣಗಳನ್ನು ಹೇರಿರಬಹುದು
So what, im trying to put forward is change (atleast in some form) is inevitable. But the structure of change, that is yaaru bhadalavane tharthidare?, yaake tharthidare? hege tharthidare? yembudu bhadalavane ya madhari maththu uddesha vannu thilisuthade. Samudaya galalli bhadalavanegalu “natural” yenno reethi yalli haguthiruvaga, yava bahya shakthi galu adannu ommele “unnatural” annu reethi yalli impact maduthide annodannu guruthisi kondu, naavu modernisation na kedaku galannu nod beku. Tribal samudaya galanthe bere samudaya galigu modernisation impact madtha ide. But bere samudaya galu modernisation, globalisation karana dinda already balaluthide. Maththu aa samudaya galu ondu reethi yali homogeneous samudaya galagi parivarthane golluthide. Language, food, dress, education, aspirations etc.
Adare tribal samudaya galu yellavu poorthi yagi innu badalagilla. And modernisation does provide us the opportunity. Australian aborginals modernisation impact ninda poorthi yagi haaladru, ade south americana tribal communities galalli kelavu hosa bage ya social structure, political status maththu cultural identity pad kondru.
When an external power is trying to interfere and impact a community, an alternative agent can intervene by people’s movement and alternative politics. I think we should be ready to seize the opportunity.
ಸುಮ: ಕಾಡಿಗೇ ಸೀಮಿತಗೊಳಿಸಬೇಕು ಅನ್ನೋದು ನನ್ನ ವಾದವಲ್ಲ..ಬದಲಿಗೆ ಅವರ ಸ್ಥಿತಿಗತಿಗಳನ್ಮು ನಿರ್ಧರಿಸೋ ನಮ್ಮ ಅಳತೆಗೋಲುಗಳ ಬಗ್ಗೆ ಕೂಡಾ ಪುನರ್ಪರಿಶೀಲನೆ ಆಗಬೇಕು ಅಂತ..
ಕಿರಣ್ ಗಾಜನೂರು: ಪ್ರಕೃತಿಯನ್ನು ಆಧರಿಸಿ ಬದುಕುತ್ತಿರುವ ಆದಿವಾಸಿಗಳ ಬದಲಾವಣೆ ಎಂದರೆ ನಾವು ಅವರ ಮಾದರಿಯ ಪ್ರಕೃತಿ ಕೆಂದ್ರಿತ ಸ್ಥಿತಿಗೆ ಮರಳುವುದು ಅಂತಾಗುತ್ತದೆ ಇದರ ಅರ್ಥ ನಾವು ಕಾಡಿಗೆ ಮರಳುವುದಲ್ಲ ಬದಲಾಗಿ ಅವರ ಬದುಕಿನ ಸಕಾರಾತ್ಮ ಅಂಶಗಳನ್ನು ಹೆಕ್ಕಿ ಅದನ್ನು ನಾಗರೀಕ ಪ್ರಪಂಚಕ್ಕೆ ಅಳವಡಿಸುವುದು. ಹಾಗೆ ಆಧುನಿಕ ನಾಗರೀಕತೆಯ ಸಕಾರಾತ್ಮಕ ಅಂಶಗಳನ್ನು ಅವರಿಗೆ ತಲುಪಿಸುವುದು ಗಾಂಧಿ ಬದುಕು ಮತ್ತು ಅವರ ಕೆಲವು ಚಿಂತನೆಗಳು ಇದಕ್ಕೆ ನೆರವಾಗಬಹುದು …….
ಡಾ.ಎಂ.ಬಿ.ರಾಮಮೂರ್ತಿ: ನಾನು – ನೀವು ಯಾರು?  ಆದಿವಾಸಿಗಳ ಬದುಕು ನಿಕೃಷ್ಟ ; ಆಧುನಿಕರೆನ್ನಿಸಿಕೊಂಡ ನಮ್ಮ ಬದುಕೇ ಮುಖ್ಯವಾಹಿಯಲ್ಲಿದೆ,ಅವರು ಅಮುಖ್ಯವಾಹಿನಿಯಲ್ಲಿದ್ದಾರೆ; ಕಡುಕಷ್ಟಗಳಲ್ಲಿದ್ದಾರೆಂದು ತೀರ್ಮಾನಿಸಲು ನಾವು ಯಾರು? ಅವರೇ ಹೆಚ್ಚು ನಾಗರಿಕರು,ಸಹಜ ಬಾಳ್ವೆ ನಡೆಸುತ್ತ ಸುಖ-ದುಃಖ:,ದುಗುಡ-ದುಮ್ಮಾನಗಳನ್ನು, ಬದುಕು ಬಂದ ಹಾಗೆ ಸ್ವೀಕರಿಸುವ ಎದೆಗಾರಿಕೆ ಉಳ್ಳವರು.. ಆದಿವಾಸಿಯೊಬ್ಬನಿಗೆ ಡಾಕ್ಟರ್ ಆಗುವ ತುರ್ತೇ ಇಲ್ಲ! !
ಹರ್ಷ: ಆದಿವಾಸಿ ವೈದ್ಯನಾಗಬೇಕಾದ, ದಲಿತ ವಿಜ್ಞಾನಿಯಾಗಬೇಕಾದ ತುರ್ತು ಇಂಡಿಯಾಕ್ಕಿದೆ…
2730_4964
ಅರುಣ್ ಜೋಳದಕೂಡ್ಲಿಗಿ: ಆದಿವಾಸಿಗಳ ಕುರಿತು ನಾವು ಇನ್ನೂ ಬೇರೆ ನೆಲೆಯಲ್ಲಿ ಯೋಚಿಸಬೇಕು ಅನ್ಸುತ್ತೆ. ಟಿಪಿಕಲ್ ಅಭಿವೃದ್ಧಿ ಮಾನದಂಡದಲ್ಲಿಯೇ ನೋಡ್ತಿದಿವಾ ಅನ್ನಿಸ್ತಿದೆ. ನಮ್ಮ ಜೀವನ ಕ್ರಮವೇ ಅಭಿವೃದ್ಧಿ ಅಂತ ಭಾವಿಸಿ ಅವರೂ ನಮ್ಮ ತರ ಆಗಬೇಕು ಅಂತಿದಿವಾ…
ಡಾ. ಎ ಎಸ್ ಪ್ರಭಾಕರ್: ನಿಜಕ್ಕೂ ಅದ್ಭುತ ಚರ್ಚೆ. ನನ್ನ ಬಹುಕಾಲದ ಪ್ರಶ್ನೆಗಳನ್ನ ಹಾಗೆಯೇ ನಿಮ್ಮ ಮುಂದಿಡುತ್ತಿದ್ದೇನೆ. ಇವು ಸಿನಿಕಲ್ ಎಂದು ದಯವಿಟ್ಟು ಭಾವಿಸಬೇಡಿ.
  1. ಆಧುನಿಕತೆ, ಆಧುನಿಕ ಶಿಕ್ಷಣ, ಮುಖ್ಯವಾಹಿನಿ, ಇವು ನಾವು ಕೇಳಿ ಪಡೆದ ಸವಲತ್ತುಗಳಲ್ಲ. ಇವು ಬಂಡಾವಾಳಶಾಹಿ ಉತ್ಪಾದನೆಯ ಭಾಗವಾಗಿ ನಮಗೆ ದೊರಕಿದ ಉಪ ಉತ್ಪನ್ನಗಳು ಮಾತ್ರ.
  2. ಮಾರುಕಟ್ಟೆ ಆಧಾರಿತ ಮಿಶ್ರ ಆರ್ಥಿಕತೆಯ ಭಾಗವಾಗಿ ನಮ್ಮ ದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜನಕಲ್ಯಾಣದ ನೈಜ ಆಶಯಗಳು ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿಲ್ಲ. ನಮ್ಮಲ್ಲಿ ಸ್ಪಷ್ಟ ‘ಅಭಿವೃದ್ಧಿ ನೀತಿ’ ಇನ್ನೂ ರೂಪಗೊಳ್ಳಬೇಕಿದೆ.
  3. ಜೊತೆಗೆ ‘ಅಭಿವೃದ್ಧಿ’ ಎಂಬುದನ್ನು ‘ನಮ್ಮ’ ಆಡಳಿತ ಅಖಂಡವಾಗಿ ಪರಿಭಾವಿಸುತ್ತದೆ. ಆದರೆ ನಮ್ಮ ಸಮಾಜ ಅಖಂಡವಾಗಿಲ್ಲ. ಬಹುರೂಪಿಯಾಗಿದೆ. ಶೋಷಿತ ಸಮುದಾಯಗಳ ವಸ್ತುನಿಷ್ಟ ಕಲ್ಯಾಣಕ್ಕೆ ಇಂದಿಗೂ ಇಂಡಿಯಾದಲ್ಲಿ ‘ಅಭಿವೃದ್ಧಿ ನೀತಿ’ ರೂಪುಗೊಂಡಿಲ್ಲ.
  4. ಇನ್ನು ಸಂಸ್ಕೃತಿ ಪರಂಪರೆಗಳು ಉಳಿಯಬೇಕು. ಸ್ಥಳೀಯ ಕೌಶಲಗಳು ಆಯಾ ಸಮುದಾಯಗಳ ಲೌಕಿಕದ ಬದುಕನ್ನ ಹಸನು ಮಾಡಬೇಕು ಎಂಬ ಆಶಯಗಳು ಮಧುರವಾಗಿ ಕೇಳುತ್ತವೆ. ಸಂಸ್ಕೃತಿ ಮತ್ತು ಪರಂಪರೆಗಳು ಆಯಾ ಸಮುದಾಯಗಳ ತಲಾಂತರದ ದುಡಿಮೆಯ ಫಲವಾಗಿ ಅಸ್ತಿತ್ವದಲ್ಲಿರುತ್ತವೆ. ಒಂದು ಅರ್ಥದಲ್ಲಿ, ಸಂಸ್ಕೃತಿ ಮತ್ತು ಪರಂಪರೆಗಳು ಸಮುದಾಯಗಳ ಬದುಕಿನ ಮೇಲ್ಪದರಗಳು ಮಾತ್ರ. ಕೆನೆಯನ್ನೇ ಹಾಲೆಂದು ಭ್ರಮಿಸಿದಂತೆ, ಮೇಲ್ಪದರನ್ನೇ ಕೇಂದ್ರವೆಂದು ಭಾವಿಸಿಕೊಂಡು ಬರಲಾಗಿದೆ. ಕೇಂದ್ರ ಬದಲಾದಂತೆ ಮೇಲ್ಪದರು ಬದಲಾಗುತ್ತದೆ. ಸಂಸ್ಕೃತಿ ಮತ್ತು ಪರಂಪರೆಗಳು ಆಯಾ ಸಮುದಾಯಗಳ ಲೌಕಿಕದ ಬದುಕು ಬದಲಾದಂತೆ ಬದಲಾಗುತ್ತಲೇ ಇರುತ್ತವೆ. ಸಂಸ್ಕೃತಿ ಮತ್ತು ಪರಂಪರೆಗಳನ್ನು ‘ಉಳಿಸಬೇಕೆಂದರೆ’ ಕೇಂದ್ರವನ್ನು ಅದರ ಮೂಲ ರೂಪದಲ್ಲಿಯೇ ಉಳಿಸಬೇಕಾಗುತ್ತದೆ.
  5. ಆದಿವಾಸಿಗಳು ಮೂಲ ನೆಲೆಗಳಲ್ಲಿ ಉಳಿಯಬೇಕೋ ಅಥವಾ ಕಾಡಿಂದ ಹೊರಬರಬೇಕೋ ಎಂದು ತೀರ್ಮಾನಿಸುವ ಅಧಿಕಾರ ‘ಸ್ವತಂತ್ರ, ಸಾರ್ವಭೌಮ’ ಭಾರತದ ಸರಕಾರಗಳ ಕೈಯಲ್ಲಿಲ್ಲ. ಪೋಸ್ಕೋ, ವೇದಾಂತ್ ದಂತಹ ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿದೆ.
  6. ಆದಿವಾಸಿಗಳು ಶಿಕ್ಷಣ ಪಡೆದು ಆಧುನಿಕರಾಗಬೇಕು. ವರ್ತಮಾನದ ವಿರಾಟ್ ಅವಕಾಶಗಳಲ್ಲಿ ಪಾಲು ಪಡೆಯಬೇಕು ಎಂಬುದು ಆಶಯದ ಮಟ್ಟದಲ್ಲಿ ಸರಿಯಾಗಿದೆ. ಆದರೆ ಆಚರಣೆಯಲ್ಲಿ ಇದು ಸಾಧ್ಯವಾ? ಯೋಚಿಸಬೇಕು. ಯಾವ ಡಿಗ್ರಿ? ಯಾವ ಬಗೆಯ ಶಿಕ್ಷಣ? ನಿರ್ಧಾರವಾಗಬೇಕು.
  7. ತಮ್ಮ ಬದುಕಿನ ಸ್ವರೂಪವನ್ನು ನಿರ್ಧರಿಸಿಕೊಳ್ಳುವ ಹಕ್ಕನ್ನು ಆದಿವಾಸಿಗಳಿಗೆ ಬಿಡಬೇಕು. ದೇಶ, ದೇಶದ ಜನ, ಕಾಡು, ನದಿ, ಹಳ್ಳ ಕಾಡಿನ ಉತ್ಪನ್ನಗಳೆಲ್ಲ ‘ಸ್ವತಂತ್ರ ಸಾರ್ವಭೌಮ’ ಭಾರತದ ಕೈಯಲ್ಲಿಯೇ ಇವೆ ಎಂದು ನಾವು ಭಾವಿಸಿದರೆ, ಆದಿವಾಸಿಗಳು ಅವರ ಬದುಕನ್ನು ಅವರು ರೂಪಿಸಿಕೊಳ್ಳುತ್ತಾರೆ ಎಂದು ನಂಬಬಹುದು.
  8. ‘ನಾವು’ ಉತ್ತಮ ಸ್ಥಿತಿಯಲ್ಲಿದ್ದೇವೆ. ನಮ್ಮ ಮುಖ್ಯವಾಹಿನಿಯಲ್ಲಿ ಆದಿವಾಸಿಗಳು ಬಂದು ಸೇರಬೇಕು. ಆಗ ಅವರ ಸಬಲೀಕರಣ ಸಾಧ್ಯ. ‘ನಾವು’ ಯಾವ ಬಗೆಯ ಉತ್ತಮ ಸ್ಥಿತಿಯಲ್ಲಿದ್ದೇವೆ? ತಿಂಗಳಿಗೆ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ಮೀಸಲಾತಿಯ ಅವಕಾಶಗಳೇ ಸಂಕುಚಿತಗೊಂಡು ಶೋಷಿತರ ಬದುಕು ನಿತ್ಯ ನರಕವಾಗುತ್ತಿರುವಾಗ ‘ನಾವು’ ಯಾವ ಬಗೆಯ ಉತ್ತಮ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ?
  9. ಮುಖ್ಯವಾಹಿನಿ ಎಂದರೆ ಏನು? ಆಧುನಿಕತೆ ಎಂದರೇನು? ಯಾವ ಮುಖ್ಯವಾಹಿನಿಯಲ್ಲಿ ರಾಜೇಶನಂತಹ ಆದಿವಾಸಿಗೆ ಬದುಕಲು ಅವಕಾಶಗಳಿವೆ? ಮುಖ್ಯವಾಹಿನಿಯಲ್ಲಿರುವ ‘ನಾವು’ ಕೇವಲ ಮನುಷ್ಯ ಮಾತ್ರದವರಾಗಿ ಬದುಕುತ್ತಿದ್ದೇವಾ? ಅಥವಾ ಸಾಮ್ರಾಜ್ಯಶಾಹಿ ಮಾರುಕಟ್ಟೆಯ ‘ಗ್ರಾಹಕರಾಗಿ’ ರೂಪಾಂತರವಾಗಿದ್ದೇವಾ? ಮುಖ್ಯವಾಹಿನಿ ಎಂದರೆ ಏನು?
ಡಾ.ಅರುಣ್ ಜೋಳದಕೂಡ್ಲಿಗಿ: ಈ ಪ್ರಶ್ನೆಗಳ ನೆಲೆಯಲ್ಲಿ ಆದಿವಾಸಿಗಳ ಅಸ್ತಿತ್ವದ ನೆಲೆಯ ಬಗ್ಗೆ ಚರ್ಚೆ ಸಂವಾದ ಮಾಡಿದರೆ ಹೆಚ್ಚು ಸೂಕ್ತ ಅನ್ನಿಸುತ್ತದೆ.
ಡಾ.ಎಂಬಿಆರ್: ಖಂಡಿತಾ…ಸಾಮ್ರಾಜ್ಯಶಾಹಿಗಳ ಮಾರುಕಟ್ಟೆಯ ಗ್ರಾಹಕರಾಗೇ ರೂಪಾಂತರಗೊಳ್ಳುತ್ತಿರುವುದನ್ನೇ ಅಭಿವೃದ್ಧಿ, ಮುಖ್ಯವಾಹಿನಿ ಅಂತ ಭ್ರಮಿಸಿದ್ದೇವೆ…
ಮಲ್ಲಿಕಾರ್ಜುನ್: ಡಾಂಬರು ಬಂದುದು ಕತೆಯ ಕೊನೆ ನೆನಪಾಗುತ್ತಿದೆ.
ಮಹೇಂದ್ರ ಕುಮಾರ್: ನಾನು 2 ದಶಕಗಳಿಂದ ಬುಡಕಟ್ಟುಗಳೊಟ್ಟಿಗೆ actvist ಆಗಿ ಕೆಲಸ ಮಾಡ್ತಿದ್ದೀನಿ. ಪ್ರಭಾಕರ ಮಾರ್ಗದರ್ಶನದಲ್ಲಿ ಅವರ ಬಗ್ಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ.  ಈ ಅನುಭವಗಳ ಆಧಾರಗಳಲ್ಲಿ ಮುಂಜಾನೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಚ್ಚಿಸುತ್ತೇನೆ.
ರವಿ:  ಆದಿವಾಸಿಗಳನ್ನು ಮತಾಂತರ ಮಾಡಲಾಗ್ತಿದೆ ಅಂತ ಕೆಳಿನಿ ಇದು ನಿಜಾನ ಸಾರ್? ಇದರ ಬಗ್ಗೆಯು ಚರ್ಚೆಯಗಲಿ.
ಮಹೇಂದ್ರ ಕುಮಾರ್:  ಮತಗಳಿಗೆ ಅಂತರವೆಲ್ಲಿ?
ಡಾ. ಎ ಎಸ್ ಪ್ರಭಾಕರ್: ಮತಾಂತರ ಮಾಡ್ತಿದ್ದಾರೆ. ಆದಿವಾಸಿಗಳು ‘ಹಿಂದೂ’ ಎಂದು ಕರೆಯಲಾಗುವ ಸಮಾಜದಿಂದ  ಹೊರತಾದವರು. ಮಾನವೀಯ ಆಧ್ಯಾತ್ಮ ಆದಿವಾಸಿಗಳ ನೈಜ ವೈಚಾರಿಕ ಧಾರೆ. ಅದೇ ಅವರ ಜೀವನ ವಿಧಾನವೂ ಹೌದು.
ಮಹೇಂದ್ರ ಕುಮಾರ್:  ಆದಿವಾಸಿಗಳು ಮೂಲ ಸಂಸ್ಕ್ರತಿಯೊಂದಿಗೆ ಹಾಗೇ ಕಾಡಿನಲ್ಲಿ ಪರದಾಡಿಕೊಂಡೇ ಬದುಕ ಬೇಕೆ ? ಜಾಗತೀಕರಣದ ಸಂದರ್ಭದಲ್ಲಿ ,ಸಂಸ್ಕ್ರತಿ ಮತ್ತು ಕಾಡಿಗಿಂತ ಬದುಕೇ ದೊಡ್ಡದೆಂದು ನಮ್ಮ ಮೂಲನೆಲೆಯಿಂದ ಹೊರನಡೆದುಬಿಡಬೇಕೆ ? ಇದು ಆದಿವಾಸಿಗಳ ಉತ್ತರವೇ ಸಿಗದ ಪ್ರಶ್ನೆಗೆ ಬಹಳಷ್ಟು ಮಂದಿ ತಮ್ಮಗಳ ಮೂಗಿನನೇರಕ್ಕೆ ದಾರಿ,ಉತ್ತರ,ಸಿದ್ದಾಂತ,ಮಾರ್ಗೋಪಾಯಗಳನ್ನು ಹುಡುಕಲು ಶುರುವಿಟ್ಟುಕೊಂಡು ಬಹಳ ವರ್ಷಗಳೇ ಕಳೆದಿವೆ.ಆದರೆ ಎಲ್ಲವೂ ಗೋಜಲು ಗೋಜಲುಗಳೇ ಸರ್ಕಾರ,ಸರ್ಕಾರೇತರ ಸಂಸ್ಥೆಗಳು, activist ಗಳು,ಬುಡಕಟ್ಟು ಅದ್ಯಯನಕಾರರು, ವಿಧ್ವಾಂಸರುಗಳು, ಸಂಶೋಧನಾಕಾರರುಗಳು, ಮೂಲಭೂತವಾದಿಗಳು, ಕೋಮುವಾದಿಗಳು,……ಹೀಗೆ ಎಲ್ಲರೂ ತಮ್ಮ ತಮ್ಮ ಹಿನ್ನೆಲೆ,ಅಜೆಂಡಾಗಳಿಗೆ,ಸಿದ್ದಾಂತಗಳಿಗೆ  ಅನುಗುಣವಾಗಿ ಮಾರ್ಗೋಪಾಯಗಳ ವಾದ ಮಂಡಿಸಲಾಗುತ್ತಿದೆ.ಇದರ ಪ್ರಕಾರ
1) ಬುಡಕಟ್ಟುಗಳ ಸಂಸ್ಕ್ರತಿ ಅತ್ಯಂತ ಸರಳವೂ,ನೆಮ್ಮದಿಯಿಂದ ಕೂಡಿದ   Socio – cultural – spirutual life. ಆದ ಕಾರಣ,ಆಧುನಿಕತೆ,ಅಭಿವ್ರದ್ದಿಗಳ ಭರಾಟೆಯಲ್ಲಿ ಬದುಕಿನ ಅರ್ಥಕಳೆದುಕೊಳ್ಳುತ್ತಿರುವ ಸಮಾಜಕ್ಕೆ ಬುಡಕಟ್ಟುಜನರ ಬದುಕು ಮಾದರಿಯಾಗಿದೆ.ಅಂತಹ ಸಂಸ್ಕ್ರತಿಯ ಅನನ್ಯ ಮಾದರಿ ನಶಿಸಬಾರದು.ಏನಾದಾಗಲಿ ಈ ಭೂಮಿಯಿಂದ ಇಂತಹ ಆದಿವಾಸಿ ಸಂಸ್ಕ್ರತಿ ಇಲ್ಲಿ ನೆಲೆಗೊಳ್ಳಲೇಬೇಕೆಂದರೆ ಅವರೆಲ್ಲಾ ಕಾಡಿನೊಳಗೇ ಉಳಿದು ಸಂಸ್ಕ್ರತಿ ಸಂರಕ್ಷಿಸಿ,ಆದಿವಾಸಿ ಬದುಕು ಕಾಪಾಡಿಕೊಂಡು ಬರಲಿ.ಇದು ಒಂದಷ್ಟು ಜನರವಾದ.                    2) ಅವರ ಬದುಕು,ಸಂಸ್ಕ್ರತಿ,ಮಾದರಿ ಸಮಾಜ,ಶ್ರೇಷ್ಟತೆಯ ಅನನ್ಯತೆ….ಈಗ ಇತಿಹಾಸ ಪ್ರಸ್ಥುತದ ಅವರ ವಾಸ್ತವಿಕ ಬದುಕು ಅತ್ಯಂತ ದುಸ್ಥರವಾಗಿದೆ.ಬಂಡವಾಳಶಾಹಿ ಸಮಾಜದ ಸ್ವಾರ್ಥ ಕಾನೂನುಗಳು,ಅರಣ್ಯಗಳ ಸ್ಂಪನ್ಮೂಲಗಳ ಮೇಲಿನ ಸಾಮ್ಯತ್ವಕ್ಕಾಗಿ ಆದಿವಾಸಿಗಳ ಮೇಲೆ ಹೇರಲಾದ ಅರಣ್ಯ ಕಾಯ್ದೆ,ಕಾನೂನು,ಆದೇಶಗಳು ಅವರ ಸಂಸ್ಕ್ರತಿಯಲ್ಲಿನ ಎಲ್ಲಾ ನೆಮ್ಮದಿ ಹಾಗೂ ಕಾಡಿನ ಎಲ್ಲಾತರಹದ ಹಕ್ಕನ್ನು ಎಂದೋ ಕಸಿದುಕೊಂಡಾಗಿದೆ.ಈಗವರ ಬದುಕಿನಲ್ಲಿ ಕಾಡು….ಕೇವಲ ” ಹಸಿರ ಬಂದಿಖಾನೆ ” ಜಾಗತೀಕರಣದ ಪೈಪೋಟಿಯ ದಿ ನ ಗಳಲ್ಲಿ ಆದಿವಾಸಿ ಜನ ಮುಂದುವರೆದ ನಾಗರೀಕರೊಂದಿಗೆ ದಾಪುಕಾಲುಗಳಿಗೆ ಅಡಿಇಡದೇಇದ್ದರೆ,ಆದಿವಾಸಿಗಳೇ ನಾಶವಾಗಿಹೋಗುತ್ತಾರೆ.ಕಾಡಿನಿಂದ ಹೊರಬಂದು. (Mainsteaming)ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲಿ.ಎಂಬುದು ಇನ್ನೊಂದು ವಾದ.
3) ಮೂರನೇ ವಾದದವರು ಆದಿವಾಸಿಗಳೊಟ್ಟಿಗೆ ಹತ್ತಿರದಿಂದ ನೋಡಿದವರು,ಅವರಿಗಾಗಿ ಹೋರಾಟಮಾಡಿದವರು…ನನ್ನ ಅನುಭವ,ಪ್ರಾಯೋಗಿಕ ದ್ರಷ್ಟಿಕೋನಗಳಬಗ್ಗೆ ನಂತರ ನಿವೇದಿಸಿಕೊಳ್ಳುತ್ತೇನೆ. ಈ ಬಗ್ಗೆ ಧೀರ್ಘವಾಗಿ ಚರ್ಚೆಯಾಗಲಿ,ನಮ್ಮ ಗಂಭೀರವಾದ ಚರ್ಚೆಗಳು ಆದಿವಾಸಿಗಳ ಉತ್ತರವೇ ಇಲ್ಲದ ಪ್ರಶ್ನೆಗಳಿಗೆ.ಉತ್ತರ ಹುಡುಕುವಂತಾಗಲಿ.                         ಮಹೇಂದ್ರ ಕುಮಾರ.ಗ್ರೀನ್ ಇಂಡಿಯ ಟ್ರಸ್ಟ್.
* ಮೂರುತರಹದ ವಾದ ಸರಣೆಗಳಿವೆ.(ಆದಿವಾಸಿ ಸ್ಥಳಾಂತರ,ಸಾಂಸ್ಕ್ರತಿಕ ಅಸ್ಥಿತ್ವ ಮತ್ತು ಅಭಿವ್ರದ್ದಿ)ಈ ಬಗ್ಗೆ ತಮ್ಮೆಲ್ಲರ ಅಭಿಪ್ರಾಯದ ಬಗ್ಗೆ ಕೇಳಿದ್ದೆ.
ನವೀನ್ ಮಂಡಗದ್ದೆ: 1991 ನಂತರ ಭಾರತದಲ್ಲಿ ಅಭಿವೃದ್ಧಿ ಎನ್ನುವುದರ ವ್ಯಾಖ್ಯಾನವೆ ಬದಲಾಗಿದೆ ಎಂದೆನಿಸುತ್ತದೆ.ಏಕೆಂದರೆ ಅಭಿವೃದ್ಧಿಯ ವಿಷಯ ಬಂದಾಗ ಅದರಿಂದ ಏನು ಒಳ್ಳೆಯದಾಗುತ್ತದೆ ಎನ್ನುವುದಕ್ಕಿಂತ ಅದರಿಂದ ಆಗುವ ಹಾನಿಗಳೆ ಮೊದಲ ನೆನಪಾಗುವ ಮಟ್ಟಿಗೆ ಅಭಿವೃದ್ಧಿ ಜೀವ ವಿರೋಧಿ ನಿಲುವನ್ನು ತಾಳಿದೆ ಎನ್ನಬಹುದು
ಮಹೇಂದ್ರ ಕುಮಾರ್: ಮೂರನೇ ವ್ಯವಸ್ಥೆ ಏನು ಮಾಡಬಹುದೆಂಬ ಅನಿಸಿಕೆಗೂ ಮುನ್ನ ,ನನ್ನ  ಅವರೊಟ್ಟಿಗಿನ ಒಡನಾಟದದಲ್ಲಿ ಪ್ರಸ್ಥುತವಾಗಿ ನಮ್ಮ ಬುಡಕಟ್ಟುಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನನ್ನ ಸೀಮಿತ ಅನುಭವದ ಆಧಾರದ ಹಿನ್ನೆಲೆಯಲ್ಲಿ ಹಂಚಿಕೊಳ್ಳುತ್ತೇನೆ.                              ಸಂಮ್ರದ್ದ ಆದಿವಾಸಿ ಸಂಸ್ಕ್ರತಿ,ಕಾಡಿನ ಸಕಲ ಜೀವರಾಶಿಗಳೊಟ್ಟಿಗಿನ  Socio cultural spirutual life,ನಿರೀಕ್ಷಣೆಗಳಿಲ್ಲದ ನೆಮ್ಮದಿಯ ಜೀವನ,……ಮುಂತಾದ ಹೆಗ್ಗಳಿಕೆಗಳಿರಬಹುದು.ಆದರೆ ವಿಕಾಸವೆನ್ನುವ ನಾಗರೀಕತೆಯ ಕ್ರರ್ತಿಮ ಓಟದಲ್ಲಿ ಜೊತೆಜೊತೆಗೆ ಹೆಜ್ಜೆಯನಿಡದೆ ಆಧೀಮ ಸ್ಥಿತಿಯಲ್ಲೇ ಉಳಿದ ಆದಿವಾಸಿಗಳು,ನೋಡಲು ಹೊರಮೈಲಕ್ಷಣಗಳು ನಮ್ಮಂತೆಯೇ ಇರಬಹುದು.ಆದರೆ ಆಧುನಿಕರಿಗೂ,ಆದಿವಾಸಿಗಳಿಗೂ ಬದುಕುವರೀತಿ,ಆಲೋಚಿಸುವ ಕ್ರಮಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ.ಈ ಅಂತರವೇ ಜಾಗತೀಕರಣ,ಅಭಿವ್ರದ್ದಿ,ವ್ಯಾಪಾರಿಕರಣಗಳ ಅರ್ಥೈಸುವಲ್ಲಿ ಸೋತ ಆದಿವಾಸಿಗಳು ಕಾಡಿನಲ್ಲೂ ಇರಲಾಗದೆ,ಹೊರಗೂಬರಲಾಗದೆ ಹೇಳಲಾರದ ಸಂಕಷ್ಟದಲ್ಲಿ ಸಿಲುಕಿ ದ್ದಾರೆ.ಹಲವುತೆರನಾದ ಸ್ಥಿತ್ಯಂತರಗಳಿಗೆ ಒಳಗಾಗಿ ಅವರು ಅಪೇಕ್ಷಿಸದ ದಾರಿ ಹಿಡಿದು ಛಿದ್ರಗೊಂಡ ಸಂಸ್ಕ್ರತಿಯ ಮಡುವಿನಲ್ಲಿ ನಲಗುತ್ತಿದ್ದಾರೆ.ಇಂತಹಸ್ಥಿತಿಯಲ್ಲಿ ಆಧುನಿಕರಾದ ನಾವುಗಳು ನಮ್ಮ ಮೂಗಿನ ನೇರಕ್ಕೆ ಉತ್ತರ ಹುಡುಕುವ ಬದಲು,ಅವರ ಒಳಹೊಕ್ಕು ಅವರದೇ ಅಲೋಚನೆ ಮೂಲಕ ಪರ್ಯಾಯ ಮಾರ್ಗವನ್ನೇಕೆ ಹುಡುಕಬಾದದೆಂದು ನನಗನಿಸಿತು.ಇದರಲ್ಲಿ ಬಹಳಷ್ಟು ತಪ್ಪುಗಳನ್ನು ಮಾಡಿದ್ದೇನೆ ಕೂಡ.ಆದರೆ ಉತ್ತರ ಹುಡುಕುವ ಪ್ರಯತ್ನ ಬಿಟ್ಟಿಲ್ಲ. ನನ್ನ ಚರ್ಚೆ ಹೆಚ್ಚು ಸಮಯ ತೆಗೆದುಕ್ಕೊಳ್ಳಬಹುದು,ನನ್ನ ಹೋರಾಟಗಳು,ಪ್ರಯತ್ನಗಳು.ಸೋಲುಗಳು,ಗೆಲವುಗಳನ್ನು ಹಂಚಿಕೊಳ್ಳುವುದೊಳಿತು ಅನ್ನಿಸುತ್ತಿದೆ.ಎಷ್ಟರ ಮಟ್ಟಿಗೆ ಇದು ವಿಸ್ತರಿಸಬೇಕು?ಸಂಕ್ಷಿಪ್ತಗೊಳಿಸಬೇಕೆ?ನಿಮ್ಮ ಅಭಿಪ್ರಾಯ ತಿಳಿಸಿ.ಸರಿಇದ್ದರೆ ಮುಂದುವರೆಸುತ್ತೇನೆ.
ಹರ್ಷ: ಇವತ್ತು ಆದಿವಾಸಿ ಸಮುದಾಯಗಳು ಅನುಸರಿಸ್ತಾ ಇರೋದು primitive methods of subsistence ಅಂತ ಒಪ್ಪೋದಾದರೆ ಅವರ ಅಭಿವೃದ್ಧಿ ಗೆ ಸಮಾಜ ಏನು ಮಾಡಬೇಕಾಗಿದೆ ಎಂದು ಯೋಚಿಸಬಹುದು. ಆದಿವಾಸಿ ಬದುಕಿನ ಹೆಚ್ಚುಗಾರಿಕೆ ಅಂದರೆ ಸಮಷ್ಟಿ ಬದುಕು. ಇದನ್ನು ಕಳೆದುಕೊಂಡಾಗ so called ನಾಗರಿಕರಾಗ್ತೇವೆ..ಇದಾಗದ ಹಾಗೆ ಅವರು ಆಧುನಿಕರಾಗಲು ಅಹಕರಿಸಬೇಕಿದೆ. ಅವರು ನಮ್ಮ ತರ broken individualsಆಗದಂತೆ ನೋಡಬೇಕು. ಒಂದು ವ್ಯವಸ್ಥೆಯಾಗಿ ರಾಜೇಶನನ್ನು ಅವನ ಕುಟುಂಬವನ್ನು ಛಿದ್ರಗೊಳಿಸಿದ್ವಿ.
ಡಾ. ಪ್ರಭಾಕರ್ ಎ ಎಸ್:  ಬಂಡವಾಳಶಾಹಿ  ಜಗತ್ತಿನೆಲ್ಲೆಡೆಯ ಊಳಿಗಮಾನ್ಯ ವ್ಯವಸ್ಥೆಯನ್ನು ಪಲ್ಲಟಗೊಳಿಸಿ ಅಸ್ತಿತ್ವಕ್ಕೆ ಬಂತು. ಇದು ಕೇವಲ ಉತ್ಪಾದನಾ ವ್ಯವಸ್ಥೆಯಲ್ಲಾದ ಬದಲಾವಣೆ ಮಾತ್ರ. ಹೆಚ್ಚು ಉತ್ಪಾದಿಸುವುದು, ಯಂತ್ರಗಳ ಮೂಲಕ ಉತ್ಪಾದಿಸುವುದು ಕ್ರಾಂತಿಕಾರಿ ಬದಲಾವಣೆಯಂತೆ ಕಂಡಿತು. ಇದರಿಂದ ಸಮಾಜದಲ್ಲಾದ ಬದಲಾವಣೆಗಳು ಕ್ರಾಂತಿಕಾರಕವಾದವುಗಳಲ್ಲ. ಈ ಬದಲಾವಣೆಗಳು ಬಂಡವಾಳಶಾಹಿ ಉತ್ಪಾದನೆಯ ಉಪಉತ್ಪನ್ನಗಳು ಮಾತ್ರ.
ಮಹೇಂದ್ರಕುಮಾರ್:  ನಾಗರೀಕರಾಗದೇ ಆಧುನಿಕರಾಗುವುದು ಹೇಗೆ?ಎನ್ನುವುದರ ಹಿಂದೆ,ಆದಿವಾಸಿಗಳ ಬದುಕಿನ ಭವಿಷ್ಯದ ದಾರಿ ಹುಡುಕ ಬಹುದಲ್ವಾ?
ಹರ್ಷ:  ನಿಜ ಸರ್, ಭಾರತಕ್ಕೆ ಬಂದಾಗ ಇನ್ನೂ ವಿಕೃತ ಬೆಳವಣಿಗೆಯೇ ಆಗಿದ್ದು. ನಾಗರೀಕರಾಗುವುದು ಅಂದರೆ ಬದುಕು ಚಿಂತನೆಯ ಶೈಲಿ. ಆದಿವಾಸಿತನ ಮತ್ತು ದಲಿತತ್ವದಲ್ಲಿ ಆ ನಾಗರೀಕತೆ ಇದೆ. ಅದನ್ನು ಸಾರ್ವತ್ರಿಕವಾಗಿಸಬೇಕು. ಆಧುನಿಕತೆ ಭೌತಿಕವಾದದ್ದು..ಮೇಲೆ ಹೇಳಿದ ನಿಜ ನಾಗರಿಕತೆ ಜತೆ ಬೆಸುಗೆ ಸಾಧ್ಯವಾಗಬೇಕು
ಡಾ.ಪ್ರಭಾಕರ್ ಎ ಎಸ್: ಪರಂಪರೆ-ಆಧುನಿಕತೆ. ನಾಗರಿಕ-ಅನಾಗರಿಕ ಎಂಬವು binary opposition ಗಳಲ್ಲ.
ಡಾ.ಪ್ರಭಾಕರ್ ಎ ಎಸ್:: @ ಮಹೇಂದ್ರಕುಮಾರ್ ಮುಂದುವರೆಸಿ…
ಡಾ.ಪ್ರಭಾಕರ್ ಎ ಎಸ್: ನಾಗರೀಕತೆ, ಆಧುನಿಕತೆಗಳು ಕಾಲ ಮತ್ತು ಸ್ಥಳಬದ್ಧವಾದ ಸಂಗತಿಗಳು. ನಮ್ಮ ಅನುಕೂಲಕ್ಕೆ ಬೇಕಾದ ಅರ್ಥಗಳನ್ನ ಇವಕ್ಕೆ ಆರೋಪಿಸಿಕೊಂಡು ಚರ್ಚೆಗೆ ಬಳಸುತ್ತಿದ್ದೇವೆ.
ಡಾ.ಶಶಿಕಿರಣ್: It’s not always right to think that tribes life is miserable n barbaric. Prof Sahlin in his affluent society, tells that, there are two ways to be affluent n rich. One is our civilized way of producing or or earning more than what  our wants are. The other, tribal way of reducing our wants, so that what we have is more than enough. Another point is, we are so much absorbed in earning that, we. Don’t have Quality time to spend with our families. But tribes with their hunting and gathering lifestyle, had enough time to sing,dance n paint in caves n the variety of flesh, fish,fruits n vegetables have kept them healthy n happy.
ಮಹೇಂದ್ರಕುಮಾರ್:  ಬುಡಕಟ್ಟುಗಳು ಕಾಡಿನಲ್ಲೇ ಉಳಿದು,ತಮ್ಮ ಆದಿವಾಸಿ ಸಂಸ್ಕ್ರತಿಯನ್ನೂ ಆಚರಣೆಯಲ್ಲಿಟ್ಟುಕೊಂಡೇ ಆರ್ಥಿಕವಾಗಿ ಸದ್ರುಡರಾಗುವುದು ಹೇಗೆ?ಎಂಬುದರ ಬಗ್ಗೆ ನಾನು ಕೆಲಸ ಮಾಡುತ್ತಿದ್ದ ಸಿದ್ದಿ,ಕುಣಬಿ ಮತ್ತು ಗೌಳಿಗಳಲ್ಲಿ ಚರ್ಚಿಸಿದೆ.ತೀರ್ಮಾನಕ್ಕೆ ಬಂದ ಆದಿವಾಸಿ ಮುಖಂಡರುಗಳ ಜೊತೆಗೂಡಿ ಹಲವಾರು ರೀತಿಯ ಪ್ರಾಯೋಗಿಕ ಪ್ರಯತ್ನಗಳು ಹಾಗೂ ಸಾಹಸಗಳನ್ನ ಕೈಗೊಂಡೆವು.ಕೆಲವುಗಳಲ್ಲಿ ಸಫಲತೆಯನ್ನು,ಹಲವುಗಳಲ್ಲಿ ಯಡವಟ್ಟುಗಳನ್ನು,ಇನ್ನೂ ಹಲವಾರುಗಳಲ್ಲಿ ಕನಸುಗಳನ್ನುಹೊತ್ತು ನಿರಂತರ ಪ್ರಯತ್ನದ ಅನುಭವ ಹಂಚಿಕೊಳ್ಳಲು ಬಹಳಷ್ಟಿದೆ.ಒಂದೊಂದಾಗಿ ಬಿಚ್ಚಿಕೊಳ್ಳಲೇ?
ಮಹೇಂದ್ರ ಕುಮಾರ್: ಕಾಡಿನಿಂದ ಹೊರಬಂದು ನಾಗರೀಕ ಜಗತ್ತಿನಜೊತೆ ವಿಲೀನರಾಗುವುದರ ಮೂಲಕ (mainstream ) ಅಸ್ಥಿತ್ವವೇ ಇಲ್ಲದೆ ನಾಶವಾಗುತ್ತರುವ ಆದಿವಾಸಿಗಳು ತಮ್ಮ ಬದುಕನ್ನು ಸಂರಕ್ಷಿಸಿಕೊಳ್ಳಬೇಕೆಂಬ ಬಲವಾದ ವಾದಕ್ಕೆ ನನ್ನ ವಿರೋಧವಿದೆ.ನನ್ನ ಪ್ರಾಯೋಗಿಕ ಪ್ರಯತ್ನಗಳೆಲ್ಲವೂ ಅದಕ್ಕೆ ವಿರೋದವಾಗೇ ಆಗಿವೆ.
ಡಾ.ಪ್ರಭಾಕರ್ ಎ ಎಸ್: ಮೇನ್ ಸ್ಟ್ರೀಮ್ ಗೆ ಬರುವುದು ಬೇಡ ಅಂದರೆ, ಅವರ ಅಭಿವೃದ್ಧಿಯನ್ನು ಅವರ ಮೂಲನೆಲೆಗಳಲ್ಲಿಯೇ ಮಾಡಬಹುದೇ?
ಮಹೇಂದ್ರ ಕುಮಾರ್: ಸಾರ್,ಅನುಮತಿ ಅಂತಲ್ಲ.ಹಲವಾರು ವಿದ್ವಾಂಸರಿರುವ ಈ ಗುಂಪಿನಲ್ಲಿ ನನ್ನ  ವಿಶ್ಲೇಷಣೆ ತಪ್ಪಾಗುತ್ತಿದೆಯೆ?ಅತಿಯಾಗುತ್ತಿದೆಯೆ?ಅನ್ನುವ ಅಳಕೊಂದುಕಡೆ.ಸುಮ್ಮನೆ ಹೇಳುತ್ತಾ ಹೋಗುವಬದಲು ಚರ್ಚಿಸಿಕೊಂಡೆ ಸಾಗುವುದೊಳಿತೆಂಬ ನನ್ನ ಅನಿಸಿಕೆ ಇನ್ನೊಂದು ಕಡೆ.?
ಡಾ.ಪ್ರಭಾಕರ್ ಎ ಎಸ್:.  ನೀವೂ ಸಹ ವಿದ್ವಾಂಸರೆ. ಯಾಕೆ ಆಚೆಗೆ ನಿಲ್ಲುತ್ತೀರಿ. ಯಾವ ಅಳಕೂ ಬೇಡ. ನಾವೆಲ್ಲ ಆದಿವಾಸಿಗಳಿಂದ ದೂರವಿದ್ದು, ಅಭಿಪ್ರಾಯಗಳನ್ನು ಹುಟ್ಟು ಹಾಕುವವರು. ನೀವು ಅವರೊಡನೆ ಕೆಲಸ ಮಾಡುತ್ತಿರುವವರು. ನಿಮ್ಮ ವಾದ ಘನವಾದದ್ದು.
ಡಾ. ಎ ಎಸ್ ಪ್ರಭಾಕರ್: ಆದಿವಾಸಿಗಳ ಅಭಿವೃದ್ಧಿಯನ್ನು ಅವರ ಮೂಲನೆಲೆಗಳಲ್ಲಿಯೇ ಮಾಡಬಹುದು ಎನ್ನುವುದಾದರೆ, ಅದು ಹೇಗೆ?
ಮಹೇಂದ್ರ ಕುಮಾರ್: ನಿಮಗೆ ತಿಳಿದ ಹಾಗೆ ಸಿದ್ದಿಗಳಲ್ಲಿ ಲ್ಯಾಂಪ್ಸ್ ಸೊಸೈಟಿಗಾಗಿ ಹೋರಾಟನಡೆಸಿ ರಾಜಕೀಯ,ಕೋಮುವಾದಿ  N G O    ಗಳೊಟ್ಟಿಗೆ ಸೆಣಸಿ ದಶಕಗಳಹಿಂದೆ ನಾವು ತಂದ ಸಂಘಟನೆ ಇವತ್ತು ಕೊಟ್ಯಾಂತರ ವಹಿವಾಟನ್ನು ನಡೆಸುತ್ತಿದೆ.ಕಾಡಿನ ಕಿರುಉತ್ಪನ್ನಗಳನ್ನಾದರಿಸಿದ ಆರ್ಥಿಕ ಸದ್ರುಡತೆಯ ನಮ್ಮ ಪ್ರಯತ್ನಕ್ಕೆ ಸೋಲಾಗಿಲ್ಲ.ನಮ್ಮ ಒಟ್ಟು 200 ಸಂಘಗಳ ಉಳಿತಾಯದ ಹಣ ಬೇರೆ ಬ್ಯಾಂಕ್ ಗಳಿಗೆ ಕಟ್ಟುವಬದಲು ಅಷ್ಟನ್ನೂ ನಮ್ಮ ಲ್ಯಾಂಪ್ಸ್ ನಲ್ಲೇ ಇಡುತ್ತಿದ್ದೇವೆ.ತಮ್ಮ ಮೂಲಕಸಬನ್ನಾಧರಿಸಿದ ವ್ರತ್ತಿಗೆ ಧಕ್ಕೆಬರದ,ಕಾಡನ್ನಾಶ್ರಯಿಸಿಕೊಂಡೇ ಆರ್ಥಿಕವಾಗಿ ಸದ್ರುಢರಾಗುತ್ತಿರುವ ಉದಾ:ನಮ್ಮಲ್ಲೇ ಇದೆ. ಒಮ್ಮೆ ಆಸಕ್ತ ಬಳಗದವರುಬಂದುನೋಡಬಹುದು.ಇಲ್ಲಿ ಗ್ರೀನ್ ಇಂಡಿಯ ಹಸ್ತಕ್ಷೇಪ ಮಾಡುತ್ತಲ್ಲ.ನಮ್ಮ ಸಲಹೆಯೊಂದನ್ನು ಹೊರತು ಪಡಿಸಿ.ಸಂಪೂರ್ಣ ಅಕ್ಷರತಿಳಿಯದ ಆದಿವಾಸಿ ಜ್ಞಾನಿಗಳೇ ನಡೆಸುತ್ತಿದ್ದಾರೆ.ಅದರ ಅದ್ಯಕ್ಷ ಡಿಯಾಗೊ ಒಂದನೆ ತರಗತಿಯನ್ನೂ ಓದಿಲ್ಲ.ಆತ ಬ್ಯಾಂಕ್ ನಡೆಸುತ್ತಿದ್ದಾನೆ. ಇದು ನಮ್ಮ empowerment proces ನ ಒಂದು achivement. ಇಂತಹ ಹಲವಾರು ಪ್ರಯತ್ನಗಳು ನಡೆದಿವೆ.ಹಂಚಿಕೊಳ್ಳುತ್ತೇನೆ.
ಡಾ.ಪ್ರಭಾಕರ್ ಎ ಎಸ್: ‌‌@ ಮಹೇಂದ್ರಕುಮಾರ್, ನಿಮ್ಮ ಪ್ರಕಾರ, ಆದಿವಾಸಿಗಳ ಸ್ಥಳೀಯ ಕೌಶಲ್ಯ  ಮಾರುಕಟ್ಟೆ ಆರ್ಥಿಕತೆಯ ಜೊತೆ ಅನುಸಂಧಾನ ಮಾಡಬೇಕು ಎಂಬುದಾಗಿದೆ.
ಡಾ. ಟಿ ಎನ್. ಚಂದ್ರಕಾಂತ್:   *ಕಾಡುವ ಪ್ರಶ್ನೆಗಳು*
ನನ್ನ ಜನಾಂಗದವರು ಒಂದು ಕಾಲದಲ್ಲಿ ಹಾದಿ ಬೀದಿಗಳಲ್ಲಿ ಸರ್ಕಸ್ ಮಾಡಿಕೊಂಡದ್ದು ಸಂಪೂರ್ಣ ಅಲೆಮಾರಿಗಳಾಗಿದ್ದರು. ನಂತರ ಕೆಲವರು ನಟ ನಟಿಯರಾದರು. ಆಶ್ಚರ್ಯಕರವಾಗಿ ಕೆಲವರು ಮರದ ಬಾಚಣಿಗೆ ಕಲಿತು ಅದನ್ನು ಅತ್ಯುನ್ನತ ಕಲೆಯನ್ನಾಗಿಸಿ ಸಾಮಾನ್ಯರಿಗೆ ಸಾಮಾನ್ಯವಾದ ಮರಗಳಿಂದಲೂ ಅನುಕೂಲಸ್ಥರಿಗೆ ಗಂಧ ಮತ್ತು ದಂತದಿಂದಲೂ ಮಾಡಿಕೊಟ್ಟು ಜೀವನವನ್ನು ಕಷ್ಟಪಟ್ಟು ಸಾಗಿಸುತ್ತಿದ್ದರು. ನಾನು ಹೈಸ್ಕೂಲು ಮುಗಿಸುವವರೆಗೂ ಈ ಮನೆ ಉದ್ಯೋಗ ನಡೆಯುತ್ತಿತ್ತು. ನಮ್ಮಜ್ಜಿ, ನನ್ನಪ್ಪ, ನನ್ನಮ್ಮ ಬೆಳಗಿನಿಂದ ಸಂಜೆವರೆಗೆ ಮೈಮುರಿಯುವಂತೆ ಕೆಲಸ ಮಾಡುತ್ತಿದ್ದರು. ನಾನು ಶಾಲೆಯ ಹೊರತಾದ ಸಮಯದಲ್ಲಿ ಸಹಾಯ ಮಾಡುತ್ತಿದ್ದೆ. ಆಗ ಬರುತ್ತಿದ್ದ ವರಮಾನ ವಾರಕ್ಕೆ 100 ರಿಂದ 150 ರೂಪಾಯಿ. ಊಟಕ್ಕೆ ಸಾದಾರಣ ಬಟ್ಟೆಗೆ ಸಾಕಾಗುತ್ತಿತ್ತು. ಹಬ್ಬ ಹರಿದಿನಗಳು ಬಂದರೆ ಅಪ್ಪ ಅಮ್ಮ ತತ್ತರಿಸಿಹೋಗುತ್ತಿದ್ದರು.
ಕೆಲವು ಕಡೆ ಬಳಪದ ಕಲ್ಲಿನಿಂದ ವಿಗ್ರಹಗಳನ್ನು ಮಾಡಿ ಜೀವನ ನಡೆಸಿದ್ದರು.
ನಮ್ಮ ಜನಾಂಗದ ಎಲ್ಲರೂ ಸೇರಿ ವರ್ಷಕ್ಕೊಮ್ಮೆ ಊರ ಹೊರಗಿನ ಮಾವಿನ ತೋಪಿನಲ್ಲಿ ಕಾಳ್ವಾಳಮ್ಮ ಎಂಬ ಕುಲದೇವತೆಯ ಪೂಜೆಯನ್ನು ಕೋಳಿ ಕುರಿ ಮೇಕೆಯ ಬಲಿಯೊಂದಿಗೆ ಸೇಂದಿ ಸಾರಾಯಿಯ ಸಮಾರಾಧನೆಯೊಂದಿಗೆ ಬಹಳ ಶ್ರಧ್ದೆ ಭಯ ಭಕ್ತಿಗಳಿಂದ ಆಚರಿಸುತ್ತಿದ್ದೆವು. ಆಯುಧ ಪೂಜೆಯಂತೂ ಇದೇರೀತಿಯ ಸಂಭ್ರಮ. ಕುಲದಲ್ಲಿ ತುಂಬಾ ಒಗ್ಗಟ್ಟಿರುತ್ತಿತ್ತು. ಕುಲದ ಯಜಮಾನರ ಮಾತೇ ಅಂತಿಮ.
ಪ್ಲಾಸ್ಟಿಕ್ ಬಂದ ಮೇಲೆ ಬಾಚಣಿಗೆ ಉದ್ಯೋಗ ಹಂತ ಹಂತವಾಗಿ ಸತ್ತು ಹೋಯಿತು. ನನ್ನ ಜನಾಂಗದ ಹಳೆ ತಲೆಮಾರಿನವರಲ್ಲಿ ಅನೇಕರು ಸೇಂದಿ ವ್ಯಾಪಾರಿಗಳಾಗಿದ್ದರು. ಈಗಿನ ಪೀಳಿಗೆ ಮೀಸಲಾತಿಯ ಸವಲತ್ತಿನಡಿ ಸಾಕಷ್ಟು ಮಟ್ಟದ ವಿದ್ಯಾರ್ಹತೆಯನ್ನು ಸಾಧಿಸಿ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಒಳ್ಳೆಯ ಉದ್ಯೋಗಗಳಲ್ಲಿದ್ದಾರೆ.
ನಾನು ಕಂಡಂತೆ ಮರದ ಬಾಚಣಿಗೆಯ ಸಾವು ನನ್ನ ಜನಕ್ಕೆ ಒಳ್ಳೆಯದೇ ಆಯಿತು. ಆರ್ಥಿಕ ಮಟ್ಟ ಸಾಕಷ್ಟು ಸುಧಾರಿಸಿ ಸಾಮಾಜಿಕವಾಗಿಯೂ ಒಳ್ಳೆಯ ಸ್ಥಾನವನ್ನು ಪಡೆದಿದ್ದಾರೆ. ರಾಜಕೀಯವಾಗಿಯೂ ಕೆಲವರು ಒಂದಿಷ್ಟು ಸ್ಥಾನ ಗಳಿಸಿಕೊಂಡಿದ್ದಾರೆ.
ಆಧುನಿಕತೆ ಈ ಜನಾಂಗಕ್ಕೆ ಹೊಸವಾತಾವರಣಕ್ಕೆ ಹೊಂದಿಕೊಳ್ಳಲೇಬೇಕಾದ ಪರಿಸ್ಥಿತಿಯನ್ನು ಉಂಟುಮಾಡಿದ್ದರಿಂದಲೇ ಈ ಜನಾಂಗ ತನ್ನ ವಂಶಪಾರಂಪರ್ಯದ ಬಡತನವನ್ನು ಕಳೆದುಕೊಳ್ಳುವಂತಾಗಿದ್ದು ಕಣ್ಣಿಗೆ ರಾಚುವ ಸತ್ಯ.
ಈಗ ಯೋಚಿಸಿ ಈ ಜನಾಂಗದ ಸಾಂಸ್ಕ್ರುತಿಕ ಅನನ್ಯತೆಯನ್ನು ಉಳಿಸಲು ಯಾವುದಾದರೂ ಹೊರಗಿನ ಶಕ್ತಿ ಇವರನ್ನು ಸರ್ಕಸ್ಸು, ನಾಟಕ, ಮರದ ಬಾಚಣಿಗೆ, ಬಳಪದ ಕಲ್ಲಿನ ವಿಗ್ರಹ ಮುಂತಾದವುಗಳಿಗೆ ಕಟ್ಟಿಹಾಕಿದ್ದರೆ ಈ ಜನಾಂಗ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಎಲ್ಲಿರುತ್ತಿತ್ತು?
ಯಾರದೇ ಬದುಕಿನ ಅನನ್ಯತೆಯನ್ನು ಹೊರಗಿನ ಶಕ್ತಿಗಳು ಕಾಪಾಡುವ ಪ್ರಯತ್ನಗಳು ಮೂಲಭೂತವಾದಕ್ಕಿಂತ ಹೇಗೆ ಭಿನ್ನ?
ಆಧುನಿಕತೆಯೇ ಸರ್ವ ದುಖಃಗಳಿಗೂ ಕಾರಣ ಎಂದು ಎಷ್ಟುದಿನ ಹಪಹಪಿಸುತ್ತಿರೋಣ?
ಆಧುನಿಕತೆಯನ್ನು ಆವಾಹಿಸಿಕೊಂಡು ತಮ್ಮ ಜಾತಿಗಳ ಸಕಲೋಧ್ದಾರಗಳನ್ನೂ ಮಾಡಿಕೊಂಡು ಸಂಖ್ಯೆಯಲ್ಲಿ ತೀರ ಕಡಿಮೆ ಇದ್ದರೂ ಎಲ್ಲಾ ಮಾನವ ಚಟುವಟಿಕೆಗಳಲ್ಲಿ ಪ್ರಭಾವಶಾಲಿ ಸ್ಥಾನಗಳನ್ನು ಗಿಟ್ಟಿಸಿಕೊಂಡಿರುವವರಿಂದ ನಾವುಗಳು ಕಲಿಯುವುದೇನೂ ಇಲ್ಲವೇ?
ಯಾರಿಗೂ ಬೇಕಿಲ್ಲದ ಮರದ ಬಾಚಣಿಗೆಯನ್ನು (ಉಪಮೆ) ಕರುಣಾಜನಕವಾಗಿ ಕಾಪಾಡ ಬೇಕೆ?
ಇವು ನನ್ನ ಪ್ರಾಮಾಣಿಕ ಪ್ರಶ್ನೆಗಳು.
ಉತ್ತರಗಳಿಗಾಗಿ ಕಾಯುವೆ. ನನಗೆ emotional ಚರ್ಚೆಗಿಂತ objective ಚರ್ಚೆ ಮುಖ್ಯ
ಮಹೇಂದ್ರಕುಮಾರ್: ಹೌದು ಸಾರ್, ಎಲ್ಲಾ ರಂಗದಲ್ಲೂ ಅದು ಸಾದ್ಯವಾಗದಿರಬಹುದು. ಕಷ್ಟಸಾದ್ಯ.ಉದಾ:ನಾವು ಬೆತ್ತದ ಕರಕುಶಲಕ್ಕೆ ಕೈ ಹಚ್ಚಿದೆವು. ಕಾಡಿನಲ್ಲಿ ಬೆತ್ತವನ್ನು ನೇರವಾಗಿ ಸಂಗ್ರಹಿಸುವಂತಿಲ್ಲ.ಆದರೆ ಅರಣ್ಯ ಇಲಾಖೆಯಲ್ಲಿ ಎಲ್ಲರೊಟ್ಟಿಗೆ ಸ್ಪರ್ದಿಸಿ ಹರಾಜಿನಲ್ಲಿ ಕೊಂಡು ಪರಿಕರ ತಯಾರಿಸಿ ಮಾರಾಟ ಮಡಬೇಕು.ಇಲ್ಲಿ ನಾವು ಸೋತೆವು.ಕಾರಣ ಆದಿವಾಸಿಗಳಿಗೆ ಮೋಸ ಗೊತ್ತಿಲ್ಲ.ಮೇಲ್ವರ್ಗದವರು ಕೊಂಚ ಕೊಂಡು ಉಳಿದ ಬೆತ್ತ ಕಾಡಿನಲ್ಲಿ ಕದೆಯುತ್ತಾರೆ. ಇದಕ್ಕೆ ಇಲಾಖೆ ಶಾಮೀಲಾಗಿದೆ.ಹೀಗೆ ಕದ್ದ ಮಾಲನ್ನು ಕೊಂಡಮಾಲಿನಜೊತೆ ಸೇರಿಸಿ ಕಡಿಮೆ ಬೆಲೆಗೆ ಮಾರುತ್ತಾರೆ.ಆದರೆ ನಮ್ಮವರಿಗೆ ಅದೇ  ಮೌಲ್ಯಕ್ಕೆ ಮಾರಲು ಹೋದರೆ ಬಂಡವಾಳವೂ ಹುಟ್ಟುವುದಿಲ್ಲ.ಹೀಗಾಗಿ ಇಲ್ಲಿ ಸೋತೆವು. ಆದರೆ ಜೇನು,ಸೀಗೆ,ಅಂಟುವಾಳ,ನೆಲ್ಲಿ,ಉಪ್ಪಾಗೆ,ಪುನ್ರರ್ಪುಳಿ….ಇತ್ಯಾದಿಗಳನ್ನು ನೇರವಾಗಿ ಕಾಡಿನಲ್ಲಿ ಸಂಗ್ರಹಿಸಲು ಬುಡಕಟ್ಟುಗಳಿಗೆ ಆದಿವಾಸಿ ಅಧಿನಿಯಮ 2005 ಪ್ರಕಾರ ಅವಕಾಶ ಸಿಕ್ಕಿದೆ.ಅದೂ 2005 ರಿಂದ 2014-15 ರವರೆವಿಗೂ ನಿರಂತರ ಹೋರಾಟದ ನಂತರ ಇಲಾಖೆಯಿಂದ ಸಿಕ್ಕ ಅನುಮತಿ.ಅದೇ ರೀತಿ ಬೆತ್ತಕ್ಕೂ ಅನುಮತಿಗಾಗಿ ಹೋರಾಡುತ್ತದ್ದೇವೆ.ಕಂಡಿತ ಸಫಲರಾಗುತ್ತೇವೆ.
ಮಹೇಂದ್ರ ಕುಮಾರ್:  ನಿರಂತರ ಹೋರಾಟಕ್ಕೆ ಫಲವಿದ್ದೇ ಇರುತ್ತದೆ.ಎನ್ನುವುದಕ್ಕೆ ನಮ್ಮಲ್ಲಿ ಜ್ವಲಂತ ಉದಾ:ಗಳಿವೆ.ಬಾರತದ ಯಾವ ಮೂಲೆಯಲ್ಲೂ ಅರಣ್ಯ ಇಲಾಖೆ ವಿರುದ್ದ ಸಾಧಿಸಲಾಗಲಿಲ್ಲವೆಂಬ ನ್ಯಾಷನಲ್ ಪಾರ್ಕ Issues,ಇಡೀ ಬಾರತದಲ್ಲೇ ಇಲಾಖೆ ಕಿತ್ತುಕೊಂಡಿರುವ ಕುಂಬರೀ ಬೇಸಾಯದ ಪ್ರಕರಣಗಳಲ್ಲಿ ಒಗ್ಗಟ್ಟು ಮತ್ತು ಸಂಘಟನಾತ್ಮಕ ಹೋರಾಟಗಳಿಂದ ಫಲ ಸಿಕ್ಕಿದೆ.2003ರಲ್ಲಿ ನಾವು ನಡೆಸಿದ ಹೋರಾಟದಿಂದ ಅಣಸಿ ರಾಷ್ರೀಯ ಉದ್ಯಾನವನದಿಂದ  ಆದಿವಾಸಿಗಳನ್ನು ಹೊರದಬ್ಬಬಾರದೆಂಬ ಆದೇಶ ಕೋರ್ಟನಿಂದ notification ಆಗಿದೆ.ಇದನ್ನೆಲ್ಲಾ ಹೆಗ್ಗಳಿಕೆಗಾಗಿ ಹಂಚಿಕೊಳ್ತಾಇಲ್ಲ,ಚಂದ್ರಕಾಂತರವರಿಗೆ ಸತತ ಪ್ರಯತ್ನಗಳಿಗೆ ಫಲವಿದೆ ಎನ್ನುವುದಕ್ಕಾಗಿ ತಿಳಿಸುತ್ತಿದ್ದೇನೆ.ಇದಕ್ಕೆಲ್ಲಾ ಸಾಕ್ಷಿಭೂತರಾಗಿ ಡಾ. ಪ್ರಭಾಕರ್ ರಿದ್ದಾರೆ.
ಡಾ. ಟಿ ಎನ್ ಚಂದ್ರಕಾಂತ್: ಇವರಿಬ್ಬರೂ ಬಾಚಣಿಗೆ ಕೆಲಸ ಮಾಡುತ್ತಿಲ್ಲ ನೆನಪಿರಲಿ.
ಆದಿವಾಸಿಗಳನ್ನು ಹೊರದಬ್ಬದಂತೆ ತಡೆಯುವುದಕ್ಕಿಂತ ಅವರು  ಹೊರಬರುವುದಕ್ಕೆ ಅನುವುಮಾಡಿಕೊಡುವುದು ಮತ್ತು ಬದುಕಲು ಹೊಸದಾರಿಗಳನ್ನು ಪರಿಚಯಿಸಿ ಅನುವುಮಾಡಿಕೊಡುವುದು ನಿಜವಾದ ಸಹಾಯವಲ್ಲವೇ
ಮಹೇಂದ್ರ ಕುಮಾರ್:  ಚಂದ್ರಕಾಂತರವರೆ, ಹೊರದಬ್ಬಲ್ಪಟ್ಟವರ ಪಾಡುಗಳನ್ನು ಕಣ್ಣಾರೆ ಕ್ಷೇತ್ರಕಾರ್ಯದಲ್ಲಿ ಕೂಲಂಕುಷವಾಗಿ ಪ್ರಭಾಕರರೊಟ್ಟಿಗೇ ಖುದ್ದಾಗಿ ನೋಡಿಬಂದಿದ್ದೇವೆ.ಕಾಡಿನಿಂದ ಹೊರಬನ್ನಿ ಎಂದವರ್ಯಾರೂ (NGO) ಹೊಣೆಗೇಡಿಗಳಾಗಿ ಎತ್ತಲೋ ಕಾಣದಾಗಿದ್ದಾರೆ.ಇದು ಬರೀ ಚರ್ಚಿಸುವುದರಿಂದ ಮನವರಿಕೆಮಾಡಲು ಕಷ್.ಒಮ್ಮೆ ಖಂಡಿತ ನಮ್ಮೊಟ್ಟಿಗೆ ಬನ್ನಿ.70-80 ರ ದಶಕದಲ್ಲಿ ಜೇನು ಕುರುಬರು ಹೊಟ್ಟೆಗಿಲ್ಲದೆ ಹಸಿದು ಸತ್ತರು.ಜೇಡಿಮಣ್ಣನ್ನು ಸುಟ್ಟುತಿಂದು ಹಸಿವ ನೀಗಿಸಲು ಪ್ರಯತ್ನಿಸಿ ಸತ್ತರು.ಕಾರಣಗೊತ್ತಾ?ಕಾಡಿನಿಂದ ಹೊರಕ್ಕೆ ದಬ್ಬಿದ್ದು.
ಡಾ.ಎಂ ಬಿ ಆರ್: ಆದವರ ಆರೋಗ್ಯ ಸಮಸ್ಯೆಗಳನ್ನು ಅಭ್ಯಸಿಸಲು ಹೋದ ತಂಡದಲ್ಲಿ ನಾನೂ ಒಬ್ಬ ( ೨೨ ವರ್ಷಗಳ ಹಿಂದೆ) … ಅವರ ಗೋಳುಗಳನ್ನು ಹೇಳತೀರದು ಕಣ್ರೀ .. ಮುಖ್ಯವಾಹಿನಿಗೆ ಆದಿವಾಸಿಗಳು ಬರಬೇಕು ಅಂತ ಅಪೇಕ್ಷೆ ಇರುವವರು ದಯವಿಟ್ಟು ಗಮನಿಸಬೇಕು …
ಡಾ.ಪ್ರಭಾಕರ್ ಎ ಎಸ್: ಚಂದ್ರಕಾಂತ್ ಸಾರ್, ಮರದ ಬಾಚಣಿಕೆಯ ಉಪಮೆಯ ಮೂಲಕ ಅದ್ಭುತ ವಾದವನ್ನು ಮುಂದಿಟ್ಟಿದ್ದಾರೆ.
  1. ಸಂಸ್ಕೃತಿ ‘ರಕ್ಷಕರು’ ಪರಂಪರೆಯ ಆರಾಧಕರು ಆದಿವಾಸಿಗಳನ್ನು ಸೌಂದರ್ಯದ ನೆಲೆಯಲ್ಲಿ ಅರ್ಥೈಸಿದ್ದಾರೆ. ಸಂಸ್ಕೃತಿ ಎಂಬುದು ಲೌಕಿಕದ ಬದುಕಿನ ಉಪಉತ್ಪನ್ನವೇ ಹೊರತು ಅದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. ಹಾಗಾಗಿ ಅದನ್ನು ಉಳಿಸಲು ಸಾಧ್ಯವಿಲ್ಲ.
  2. ಮನುಷ್ಯನ ಬದುಕು ಬದಲಾದಂತೆ ಅವನ ಶ್ರಮದ ಭಾಗವಾಗಿ ಸೃಷ್ಟಿಯಾದ ಎಲ್ಲವೂ ಬದಲಾಗುತ್ತವೆ. ಸಂಸ್ಕೃತಿ ಬದಲಾಗದೆ ಉಳಿಯಬೇಕೆಂದರೆ ಈ ದೇಶದ ವಿಕೃತ ಶ್ರೇಣೀಕರಣವನ್ನು ಹಾಗೆಯೇ ಉಳಿಸಕೊಳ್ಳಬೇಕಾಗುತ್ತದೆ. ಆಗ ಚಮ್ಮಾರನ ಮಗ ಚಪ್ಪಲಿ ಮಾಡುತ್ತ ತನ್ನ ಸಂಸ್ಕೃತಿಯನ್ನು ಉಳಿಸಲು ಬೀದಿ ಬದಿಯಲ್ಲಿಯೇ ಇರಬೇಕಾಗುತ್ತದೆ.
  3. ಇಂಡಿಯಾದ ವಿಷಮ ಸಮಾಜದಲ್ಲಿ ಜಾತಿಯ ಗಾಯಗಳೇ ಕುರುಹುಗಳಾಗಿ ಸಂಸ್ಕೃತಿ ಎಂಬ ಹೆಸರಲ್ಲಿ ಪ್ರಸಿದ್ಧಿಗೆ ಬಂದಿವೆ. ಈ ದೇಶದ ಶೋಷಿತರಿಗೆ ಅವರ ಸಂಸ್ಕೃತಿ ಮತ್ತು ಚಹರೆಗಳೆಂದರೆ ಅವರ ಗಾಯಗಳೆ. ಈ ಗಾಯಗಳು ಯಾಕೆ ಉಳಿಯಬೇಕು?
  4. ಆಧುನಿಕತೆ ಮತ್ತು ಅದರ ಫಲವಾಗಿ ಬಂದ ಶಿಕ್ಷಣ ಶೋಷಿತರ ವಿಮೋಚನೆಗೆ ಹಲವು ದಾರಿಗಳನ್ನು ತೆರೆದು ಉಪಕಾರ ಮಾಡಿದ್ದು ಹೌದು. ಆದರೆ ಶೋಷಿತರ ಸಮಗ್ರ ವಿಮೋಚನೆ ಇದರಿಂದ ಸಾಧ್ಯವಾಗಿಲ್ಲ. ಸಾಮಾಜಿಕಾರ್ಥಿಕ ವೈರುಧ್ಯಗಳು ತೀವ್ರವಾಗುತ್ತಲೇ ಇವೆ.
  5. ಶೋಷಿತರ ವಿಮೋಚನೆಗಾಗಿ ಪ್ರತಿತಂತ್ರಗಳು ಅಗತ್ಯ’ ಹಿಂದೆಂದಿಗಿಂತಲೂ ವರ್ತಮಾನದಲ್ಲಿ ಹಿಂಸೆ ಮತ್ತು ಕೇಡುಗಳು ರರಾಜಿಸುತ್ತಿವೆ. ಯಾವ ಮಾರುಕಟ್ಟೆ ಆರ್ಥಿಕತೆಯು ಸೌಲಭ್ಯಗಳ ಹೆಸರಲ್ಲಿ ಅವಕಾಶಗಳನ್ನು ಮುಕ್ತವಾಗಿಟ್ಟಿದೆಯೋ ಅಲ್ಲಿ ಒಳದಾರಿಗಳನ್ನು (inroads) ಸೃಷ್ಟಿಸಬೇಕು. ಒಳದಾರಿಗಳು ನಮ್ಮ ಶತ್ರುಗಳನ್ನು ಸುತ್ತುವರೆಯುವಂತಾಗಬೇಕು.
  6. ಸಾಂಘಿಕ ವಿರೋಧ ಮತ್ತು ಪ್ರತಿತಂತ್ರಗಳ ಸೃಷ್ಟಯಿಂದ ಮಾತ್ರ ನಮ್ಮ ವಿಮೋಚನೆ ಸಾಧ್ಯ. ಆದು ಆಧುನಿಕ ಶಿಕ್ಷಣವೋ, ನಾಗರೀಕತೆಯೋ ಯಾವುದಾದರೂ ಆಗಿರಲಿ. ಸಂಸ್ಕೃತಿ ಉಳಿಯಲಿ ಬಿಡಲಿ. ಜಗತ್ತಿನ ಯಾವುದೇ ಭಾಗದ ಜನ ಆತ್ಮ ಪ್ರತ್ಯಯದಿಂದ ತಲೆ ನಡೆಯುವಂತಾಗಬೇಕು.
ಮಹೇಂದ್ರ ಕುಮಾರ್:  ಸಂಸ್ಕ್ರತಿಗೆ ನೇತು ಹಾಕಿಕೊಂಡೇ ಬದುಕು ಸವೆಸಬೇಕೆಂದಾಗಲೀ,ಕಾಡಿನಿಂದ ಹೊರಬಂದ್ಬಿಟ್ರೆ ಎಲ್ಲಾಸರಿಯಾಗುತ್ತೆ.ಎನ್ನುವ ವಾದಗಳಿಗಂಟಿಕೊಳ್ಳದೇ,ವಾಸ್ಥವ ಮತ್ತು ಪ್ರಾಯೋಗಿಕ ಹಿನ್ನೆಲೆಯಲ್ಲಿ ಅವರ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.ಅವರುಬದಲಾಗಲೇಬಾರದೆಂಬ ವಾದ ನನ್ನದಲ್ಲ.ಹೊರ ಬಂದಾಗ ಆಧುನಿಕರ ಜೊತೆ ಪೈಪೋಟಿ ನಡೆಸಿ ಸೋತು ಬೀದಿಗೆ ಬಿದ್ದವರ ದ್ರಷ್ಟಾಂತಗಳು ನಮ್ಮಲ್ಲಿ ಹಲವಾರಿವೆ.
ಹರ್ಷ: ಆದಿವಾಸಿಗಳನ್ನು ಹೊರಗೆ ತಂದ ಸಂದರ್ಭಗಳಲ್ಲಿ ಅವರನ್ನು ಆಧುನಿಕರಾಗಿಸಬೇಕು ಅನ್ನುವ ಯಾವ ಇರಾದೆಯೂ ಆಳುವವರಿಗಿರಲಿಲ್ಲ. ಅಲ್ಲೆಲ್ಲಾ ಇದ್ದದ್ದು ಆದಿವಾಸಿಗಳು ಪರಿಸರ ವಿರೋಧಿಗಳು ಅನ್ನುವ ಧೋರಣೆ ಮತ್ತು ಇವರ ಸೊ ಕಾಲ್ಡ್ ಅಭಿವೃದ್ಧಿಗೆ ( ಗಣಿಗಾರಿಕೆಯಂತ, ಡ್ಯಾಮ್ ಗಳು) ಅವರು ತೊಡಕಾಗುತ್ತಾರೆ ಎಂಬ ಗ್ರಹಿಕೆ ಮಾತ್ತ
ಮಹೇಂದ್ರ ಕುಮಾರ್: ಖಂಡಿತಾ ಹೌದು. ಆದರೆ ಅದುಒಳ ಹುನ್ನಾರ.ಹೇಳಿದ್ದುಮಾತ್ರ,ನೀವು ಅಭಿವ್ರದ್ದಿಯಾಗ್ತೀರಿ.ಅಂತ.
ಡಾ.ಪ್ರಭಾಕರ್ ಎ ಎಸ್: ಅಂದರೆ, ಸ್ಥಳೀಯ ಮಾನವ ಸಂಪನ್ಮೂಲದ ಕ್ರೋಢೀಕರಣ. ವೈವಿಧ್ಯಮಯ ಕೌಶಲ್ಯಗಳ ಸಬಲೀಕರಣಗಳು ಶ್ರಮಿಕ ಸಮುದಾಯಗಳನ್ನು ಒಗ್ಗೂಡಿಸುತ್ತವೆ.
ಹರ್ಷ: ನಿಜಕ್ಕೂ ಮಹೇಂದ್ರ ಸರ್ ಮತ್ತು ಚಂದ್ರಕಾಂತ್ ಸರ್ ಹಂಚಿಕೊಂಡ ವಿಷಯಗಳಯ ಅಮೂಲ್ಯವಾದವು. ಪ್ರಭಾಕರ್ ಸರ್ points ಕೂಡಾ nice sum up ಅನ್ನಿಸ್ತಿದೆ
ನಟರಾಜು ವಿ : ಆದಿವಾಸಿಗಳ ಕುರಿತಾದ ಚರ್ಚೆ ಸಾಕಷ್ಟು ಉತ್ತಮವಾಗಿ ನಡೆಯುತ್ತಿದೆ. ನಿನ್ನೆಯಿಂದ ಪಾಲ್ಗೊಳ್ಳಬೇಕೆಂಬ ಮನಸ್ಸಿದ್ದರೂ ಸಾಧ್ಯವಾಗಿರಲಿಲ್ಲ. ಚರ್ಚೆಯ ಆರಂಭದಲ್ಲಿ ಪ್ರಭಾಕರ ಸರ್ ಸಂಗ್ರಾಹ್ಯವಾಗಿ ಎತ್ತಿರುವ ಪ್ರಶ್ನೆಗಳೇನಿವೆ ಅವುಗಳಿಗೆ ಈವರೆಗೆ ಯಾವುದೇ ಸ್ಪಷ್ಟ ಉತ್ತರಗಳನ್ನು ಜಗತ್ತಿನ ಯಾವ ಮೂಲೆಯಲ್ಲೂ ಕಂಡುಕೊಳ್ಳಲು ಆಗಿಲ್ಲ. ಎಲ್ಲ ಪ್ರಜ್ಞಾವಂತರನ್ನೂ ಕಾಡುತ್ತಿರುವ ಗೊಂದಲಗಳು ಇವೇ ಆಗಿವೆ.
ಆದಿವಾಸಿಗಳ ಬದುಕಿನೊಡನೆ ಆಧುನಿಕ ಸಮಾಜದ ಬೆಸುಗೆ ಹೇಗಿರಬೇಕು, ಆಧುನಿಕ ನಾಗರಿಕತೆಯ ಚಹರೆಗಳಾದ ಬಂಡವಾಳಶಾಹಿ ವ್ಯವಸ್ಥೆ, ತಂತ್ರಜ್ಞಾನ ಆಧರಿತ ಬದುಕು, ಆಧುನಿಕ ಜೀವನಶೈಲಿಯನ್ನೇ ಕೇಂದ್ರದಲ್ಲಿಟ್ಟುಕೊಂಡು ಕಟ್ಟಿಕೊಡಲಾಗುತ್ತಿರುವ ಶಿಕ್ಷಣ ಇವುಗಳು ಆದಿವಾಸಿಗಳ ಬದುಕಿನೊಡಗೆ ಎಷ್ಟರಮಟ್ಟಿಗೆ ಬೆರೆಸಿದರೆ ಅದನ್ನು ಸ್ವಸ್ಥ ಅನುಸಂಧಾನ ಎನ್ನಬಹುದು, ಎಷ್ಟು ಹೆಚ್ಚಾದರೆ ನಾಗರಿಕತೆಯ ಹೆಸರಿನಲ್ಲಿ ನಡೆಯುವ ಆಕ್ರಮಣವೆನ್ನಬಹುದು ಎನ್ನುವುದಕ್ಕೆ ಯಾವುದೇ ನಿರ್ದಿಷ್ಟ ಮಾನದಂಡಗಳನ್ನು ನಾವುಗಳು ರೂಪಿಸಿಕೊಳ್ಳಲು ಆಗಿಲ್ಲ. ಆಫ್ರಿಕಾದ ಬುಡಕಟ್ಟುಗಳ ಮೇಲೆ ನಡೆದ ಐರೋಪ್ಯ ನಾಗರಿಕತೆಯ ಸವಾರಿ ಏನೆಲ್ಲ ಪಲ್ಲಟಗಳಿಗೆ ಕಾರಣವಾಯಿತು ಎನ್ನುವ ಉದಾಹರಣೆ ಕಣ್ಣಮುಂದಿದೆ. ಅಂತಿಮವಾಗಿ ಆ ಸಮುದಾಯಗಳು ನಾಗರಿಕತೆಯ ಹೆಸರಿನಲ್ಲಿ ಯಾವ ಸಮಾಜದೊಳಗೆ ಕಾಲಿರಿಸಿದವು, ಇಂದು ಅವುಗಳ ಮುಂದಿರುವ ಸವಾಲುಗಳೇನು, ಈ ಸವಾಲುಗಳು ಇತರೆ ಸಮುದಾಯಗಳಿಗಿಂತ ಹೇಗೆ ಭಿನ್ನ ಎನ್ನುವುದನ್ನು ಅರಿಯಬೇಕಾಗುತ್ತದೆ. ಇದನ್ನು ನಮ್ಮಲ್ಲಿ ಕಳೆದ ಏಳೆಂಟು ದಶಕಗಳಲ್ಲಿ ‘ಮುಖ್ಯವಾಹಿನಿ’ಗೆ (ಹಾಗೆಂದು ಚರ್ಚೆಯ ಮಟ್ಟಿಗೆ ಕರೆದುಕೊಳ್ಳೋಣ) ತರಲಾದ ಆದಿವಾಸಿ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳೊಂದಿಗೆ ಹೋಲಿಸಿ ನೋಡುವ ಪ್ರಯತ್ನವಾಗಬೇಕು. ಇಂಥ ಅಕೆಡೆಮಿಕಲ್ ಪ್ರಯತ್ನಗಳು ನಡೆದಿರುತ್ತವೆಯಾದರೂ ಅದನ್ನು ಸಮಗ್ರವಾಗಿ ಒಂದು ನೋಟಕ್ರಮದ ಮಾದರಿಯಲ್ಲಿ ವಿವರಿಸಿಕೊಳ್ಳಲು ಬೇಕಾಗುವ ವಿಸ್ತಾರ ದಕ್ಕಿರುವ ಸಾಧ್ಯತೆ ಕಡಿಮೆ.
ಆಧುನಿಕತೆ ದಿನಂಪ್ರತಿ ಒಡ್ಡುವ ಸ್ಪರ್ಧಾತ್ಮಕ ಜೀವನಶೈಲಿ, ಈ ಜೀವನಶೈಲಿಯ ಹಿಂದಿನ ಚಾಲಕಶಕ್ತಿಯಾದ ಬಂಡವಾಳಶಾಹಿ ವ್ಯವಸ್ಥೆ, ಎಲ್ಲರನ್ನೂ ಸಭ್ಯ ನಾಗರಿಕರನ್ನಾಗಿಸುವ, ಕುಟುಂಬದ ಹೊಣೆಯರಿತ ಜವಾಬ್ದಾರಿಯುತ ವ್ಯಕ್ತಿಯನ್ನಾಗಿಸುವ ನೆಪದಲ್ಲಿ ನಮ್ಮನ್ನು ಆಧುನಿಕ ವಿತ್ತೀಯ ವ್ಯವಸ್ಥೆ ಗ್ರಾಹಕರೆಂಬ ಕೂಲಿಯಾಳುಗಳನ್ನಾಗಿಸಿಕೊಂಡಿರುವ ಪರಿ ಇದೆಲ್ಲವೂ ನಾಗರಿಕತೆಯೊಂದಿಗೆ ಸುರುಳಿಯಂತೆ ಬಿಚ್ಚಿಕೊಳ್ಳುವ ಬಳುವಳಿ ತಾನೆ. ಈ ಚಕ್ರದೊಳಗೆ ಇತ್ತೀಚಿನ ದಶಕಗಳಲ್ಲಿ ಸೇರಿರುವ ಆದಿವಾಸಿ ಸಮುದಾಯಗಳು ಹೇಗೆ ಹೈರಾಣಾಗಿವೆ/ಜೀವನ್ಮುಖಿಯಾಗಿವೆ ಎನ್ನುವುದನ್ನು ಕಾಣುವ ಪ್ರಯತ್ನವಾಗಬೇಕು. ಯಾವುದೇ ಸಮುದಾಯ ಅದು ಆದಿವಾಸಿ ಸಮುದಾಯವೇ ಆಗಿರಲಿ, ಶೋಷಿತ ಸಮುದಾಯಗಳೇ ಆಗಲಿ ಒಮ್ಮೆ ಈ ವರ್ತುಲಕ್ಕೆ ಬಂದ ಮೇಲೆ ಇಲ್ಲಿನ ಮಾನದಂಡಗಳಿಗೆ ಅನುಗುಣವಾಗಿಯೇ ತಮ್ಮ ‘ಸುಖ-ಸಂತೋಷ’ಗಳನ್ನು ಕಂಡುಕೊಳ್ಳಲು ಸೆಣಸುತ್ತವೆ. ಆದರೆ, ಈ ವ್ಯವಸ್ಥೆಯಲ್ಲಿ ಉತ್ತಮ ಜೀವನಶೈಲಿಯು ಹೆಚ್ಚು ಹಣದೊಂದಿಗೂ, ಹೆಚ್ಚು ಹಣವು ಅಂತಸ್ತು, ವ್ಯಕ್ತಿಯ ಹಿನ್ನೆಲೆಗಳೊಂದಿಗೂ ಸಾಮಾನ್ಯವಾಗಿ ತಳಕು ಹಾಕಿಕೊಂಡಿರುತ್ತದೆ. ಮತ್ತೊಂದೆಡೆ, ಉತ್ತಮ ಶಿಕ್ಷಣದೊಂದಿಗೆ ಉತ್ತಮ ಜೀವನಶೈಲಿ ಒದಗಿಬರುತ್ತದೆ ಎಂದು ಶಿಕ್ಷಣ ಸಂಸ್ಥೆಗಳು ಚೀರುತ್ತವೆ. ಆದರೆ ಉತ್ತಮ ಶಿಕ್ಷಣವೆನ್ನುವುದು ಹಣದೊಂದಿಗೆ ಸಂವಾದಿಯಾಗಿರುತ್ತದೆ. ನಾಗರಿಕ ಬದುಕು ಅಥವಾ ಮುಖ್ಯವಾಹಿನಿಯ ಬದುಕು ಎನ್ನುವುದು ಸದಾಕಾಲ ಅರ್ಥ ಕೇಂದ್ರಿತವಾಗಿ, ಅಧಿಕಾರ ಕೇಂದ್ರಿತವಾಗಿ ತನ್ನನ್ನು ವಿವರಿಸಿಕೊಳ್ಳುತ್ತಲಿರುತ್ತದೆ. ಈ ‘ನಾಗರಿಕ’ ಸಮಾಜದಲ್ಲಿದ್ದುಕೊಂಡು ಸೆಣಸುತ್ತಿರುವ ದಮನಿತ ಸಮುದಾಯಗಳಿಗೇ ಈವರೆಗೆ  ಘನತೆಯ ಬಾಳಿಗೆ ಬೇಕಾದ ಸೂಕ್ತ ಪರಿಹಾರ/ಅವಕಾಶಗಳು ಲಭ್ಯವಾಗುತ್ತಿಲ್ಲ. ಹೀಗಿರುವಾಗ ಪ್ಯಾರಾಶೂಟ್ ಡ್ರಾಪಿಂಗ್ ರೀತಿಯಲ್ಲಿ ಆದಿವಾಸಿ ಸಮುದಾಯಗಳನ್ನು ‘ನಾಗರಿಕ’ ಸಮಾಜದೊಳಗೆ ಇಳಿಸಿದರೆ ಅವರ ಬದುಕು, ಸೆಣಸಾಟ ಹೇಗಿರಬೇಢ.
ಹಾಗಾದರೆ ಅವರನ್ನು ಅವರಿರುವಂತೆಯೇ ಬಿಡುವುದೇ?  ಈ ಪ್ರಶ್ನೆಗೆ ಉತ್ತರವನ್ನು ತಾತ್ವಿಕವಾಗಿ ಮಾತ್ರವೇ ನೀಡಲು ಸಾಧ್ಯ. ಪ್ರಜಾಪ್ರಭುತ್ವದ ಪುಸ್ತಕದಲ್ಲಿ ಸರ್ಕಾರಗಳು ಇರುವುದೇ ದಮನಿತರು, ಶೋಷಿತರು, ಬಡವರ ಬದುಕನ್ನು ಹಸನಾಗಿಸಲು, ಗೌರವಯುತವಾಗಿ ಬಾಳುವಂತೆ ಮಾಡಲು ಎಂದಿದೆ ಅಲ್ಲವೇ? ನಮ್ಮ ಸರ್ಕಾರಗಳು ನೀಡುತ್ತಿರುವ ಆರೋಗ್ಯ, ಶಿಕ್ಷಣ, ವಸತಿ ಮುಂತಾದ ಸೌಕರ್ಯಗಳು ಈ ಎಲ್ಲರಿಗೂ ಘನತೆಯ ಬಾಳನ್ನು ಕಲ್ಪಿಸಲು ಅರ್ಹವಾಗಿರಬೇಕಿತ್ತು ಅಲ್ಲವೇ? ಆದರೆ, ಅದೇಕೆ ನಮ್ಮ ಸರ್ಕಾರಿ ಶಾಲೆಗಳು ಬಡವರು, ಶೋಷಿತರು, ದಮನಿತ ವರ್ಗಗಳ ಮಕ್ಕಳೇ ಹೆಚ್ಚಾಗಿ ಓದುವ ಶಾಲೆಗಳಾಗಿವೆ? ನಮ್ಮ ಸರ್ಕಾರಿ ಆಸ್ಪತ್ರೆಗಳೇಕೆ ಕೈಯಲ್ಲಿ ಹಣವಿಲ್ಲದವರ ಆಯ್ಕೆಗಳು ಮಾತ್ರವೇ ಆಗಿವೆ? ನಾನು ಹೇಳುತ್ತಿರುವ ಅಂಶವಿಷ್ಟೆ, ಪ್ರಜಾಪ್ರಭುತ್ವದ ಉನ್ನತ ಧ್ಯೇಯಗಳು, ಸಂವಿಧಾನದ ಉನ್ನತ ಆಶಯಗಳನ್ನು ಇರಿಸಿಕೊಂಡೂ, ಅದನ್ನು ಸಾಧ್ಯವಾಗಿಸಿಕೊಳ್ಳಲು ಬೇಕಾದ ವ್ಯವಸ್ಥೆಗಳನ್ನು ನಿರ್ಮಿಸಿಕೊಂಡೂ ಸಹ ನಮ್ಮ ಸಮಾಜಕ್ಕೆ, ಸರ್ಕಾರಗಳಿಗೆ ಇಲ್ಲಿನ ತಳವರ್ಗಗಳು, ದಮನಿತ ಸಮುದಾಯಗಳಿಗೆ ಹಸನಾದ ಬದುಕು ಕಟ್ಟಿಕೊಡಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಹಣವಂದಿಗರು, ಅಧಿಕಾರಸ್ಥರ ಕೈಯಲ್ಲಿರುವ ‘ಮುಖ್ಯವಾಹಿನಿ’ ವ್ಯವಸ್ಥೆಯಲ್ಲಿ ಹೆಚ್ಚು ಕಡಿಮೆ ಅನ್ಯರಾಗಿಯೇ ಪ್ರವೇಶಿಸುವ, ಅನ್ಯರಾಗಿದ್ದುಕೊಂಡೇ ಸೆಣಸಬೇಕಾದ ಆದಿವಾಸಿ ಸಮುದಾಯಗಳ ಪಾಡೇನು?
ಮುಖ್ಯವಾಹಿನಿಯ ಜಾತಿಸಂಕೋಲೆಯಲ್ಲಿ ಸಾವಿರಾರು ವರ್ಷಗಳಿಂದ ನರಳಿರುವ ಮಂದಿಯೇ ತಮ್ಮ ಪರವಾದ ಪರ್ಯಾಯ ವ್ಯವಸ್ಥೆಯನ್ನು, ವಿಭಿನ್ನ ಮಾದರಿಗಳನ್ನು ಕಟ್ಟಿಕೊಳ್ಳಲು ಇಂದಿಗೂ ಸಾಧ್ಯವಾಗದೆ ಒದ್ದಾಡುತ್ತಿರುವಾಗ ನಾವುಗಳು ಯಾವ ಧೈರ್ಯದಲ್ಲಿ, ಯಾವ ಭರವಸೆಯಲ್ಲಿ, ಯಾವ ಹೆಮ್ಮೆಯಲ್ಲಿ ಈ ಆದಿವಾಸಿ ಸಮುದಾಯಗಳನ್ನು ಮುಖ್ಯವಾಹಿನಿಗೆ ಕರೆತರುವ ಬಗ್ಗೆ ಮಾತನಾಡುವುದು? ನಾಗರಿಕತೆ ಎನ್ನುವುದು ಬಡವರು, ಶೋಷಿತರು, ದಮನಿತರ ಪರವಿದೆ, ಅವರ ಜೀವನವನ್ನು ಹಸನಾಗಿಸುತ್ತಿದೆ ಎಂದಾಗ ಮಾತ್ರ ಇಂಥ ಸವಾಲುಗಳನ್ನು ಸ್ವೀಕರಿಸಲು ಒಂದು ಸಮಾಜ ಅದನ್ನಾಳುವ ಸರ್ಕಾರಗಳು ಸಿದ್ಧವಾಗಿವೆ ಎಂದರ್ಥ. ಬಂಡವಾಳಶಾಹಿಗಳು ಸಜ್ಜುಗೊಳಿಸಿದ ಪಲ್ಲಂಗದಲ್ಲಿ ಬಿದ್ದು ಮೈಮರೆತಿರುವ ಸರ್ಕಾರಗಳಿಂದ ಇದನ್ನೆಲ್ಲ ನಿರೀಕ್ಷಿಸಲು ಸಾಧ್ಯವೇ?
ಹಾಗಾದರೆ ಆದಿವಾಸಿ ಸಮುದಾಯಗಳು ಕಾಡಿನಲ್ಲಿಯೇ ಉಳಿಯಬೇಕೆ?
ನಿಜಕ್ಕೂ ಮೇಲಿನ ಪ್ರಶ್ನೆ ಅಪೂರ್ಣ, ಅದು ಪೂರ್ಣವಾಗಬೇಕಾದರೆ ಹೀಗೆ ಬರೆಯಬೇಕಾಗುತ್ತದೆ: ಹಾಗಾದರೆ, ಆದಿವಾಸಿ ಸಮುದಾಯಗಳು ಕಾಡಿನಲ್ಲಿಯೇ ಉಳಿಯಬೇಕೆ ಅಥವಾ ಪಕ್ಷಪಾತಿ ವ್ಯವಸ್ಥೆ ಹೊಂದಿರುವ ಮುಖ್ಯವಾಹಿನಿಗೆ ಬರಬೇಕೆ? ಒಂದಂತೂ ಸತ್ಯ, ನೈಜ ರಾಜಕಾರಣವಿಲ್ಲದ, ಜನಪರ ಅಧಿಕಾರವಿರದ ಸಮಾಜದಲ್ಲಿ  ತಳವರ್ಗಗಳ ಬದುಕು ಕೇವಲ ಮೂರಾಬಟ್ಟೆಯಾಗುತ್ತದೆ. ಸಕಾರಾತ್ಮಕವಾಗಿ, ಸಂರಚನಾತ್ಮಕವಾಗಿ ಕೆಲಸ ಮಾಡುವ ಸರ್ಕಾರಗಳು ಹಾಗೂ ಕೊಳ್ಳುಬಾಕ ಸಂಸ್ಕೃತಿಯಾಚೆಗೂ ಯೋಚಿಸಬಲ್ಲ ಪ್ರಬುದ್ಧ ಸಮಾಜ ಇಂಥ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲದು. ಏಕೆಂದರೆ ಇದು ಸಾಮೂಹಿಕ ಜವಾಬ್ದಾರಿಯ ವಿಷಯ. ಸಮೂಹ ಪ್ರಜ್ಞೆಯ ವಿಚಾರ…
ಡಾ.ಶಶಿಕಿರಣ್: The examples of wooden comb n other tragedies are real n heartening. But my humble request is nothing can be done by glorifying the grievances n sympathy.  ” Stop thinking in terms of Limitations and Start thinking in terms of Possibilities ” Unlike Dinosaurs, we have options against  extinction n space for survival, only if we can understand and exploit market economy. Instead of Cursing the jackals teach rabbits the tricks of Jackals.
ಡಾ. ಎ ಎಸ್ ಪ್ರಭಾಕರ್: ಆದಿವಾಸಿಗಳನ್ನೂ ಒಳಗೊಂಡಂತೆ ಎಲ್ಲ ಶೋಷಿತ ಸಮುದಾಗಳಿಗೆ ಈ ಮಾರುಕಟ್ಟೆ ಆರ್ಥಿಕತೆ ದೊಡ್ಡ ಸವಾಲು. ಈ ಆರ್ಥಿಕತೆಯಿಂದಾಗಿ, ಬಂಡವಾಳಶಾಹಿ ಮತ್ತು ಊಳಿಗಮಾನ್ಯ ಸಮಾಜಗಳಲ್ಲಿ ವೈರುಧ್ಯಗಳು ಅಗಾಧವಾಗುತ್ತಲೇ ಇವೆ.
ಈ ಸಾಮ್ರಾಜ್ಯಶಾಹಿ ಆರ್ಥಿಕತೆಯಲ್ಲಿ ನಮ್ಮ ಸಮುದಾಯಗಳಿಗೆ ಅವಕಾಶಗಳಿವೆಯೇ? ಈ ವಿರಾಟ್ ಆರ್ಥಿಕ ಸನ್ನಿವೇಶದ ಜೊತೆ ಅನುಸಂಧಾನ ಹೇಗೆ? ಅನುಸಂಧಾನ ಸಾಧ್ಯವಾ?
ಡಾ.ಎಂಬಿಆರ್: ಆದಿವಾಸಿಗಳು ನಮ್ಮಂಥ hypocritesಗಳ ಮೇಲೆ ಅವಲಂಬಿತರಾಗಿಲ್ಲ!! They r self sufficient n contented in their own way …
ಡಾ.ಪ್ರಭಾಕರ್ ಎ ಎಸ್: ಅಲೆಮಾರಿ ಮತ್ತು ಆದಿವಾಸಿಗಳನ್ನೂ ಬಿಡೋ ಹಾಗಿಲ್ಲ ಡಾಕ್ಟರ್ ಸಾಬ್. ಇವರು ನಮ್ಮ ಜನಸಂಖ್ಯೆಯ ಶೇ 14 ರಷ್ಟಿದ್ದಾರೆ. ನಾವು ತಿಳಿದಂತೆ ಅವರು ಖಂಡಿತ ಸ್ವಾವಲಂಬಿಗಳಾಗಿಲ್ಲ. ನಿನ್ನೆ ನೀವೇ ಹೇಳಿದಂತೆ ಬೀದಿಗೆ ಬಿದ್ದಿದ್ದಾರೆ. ಸಾರಿ, ಬೀದಿಯಲ್ಲಿದ್ದಾರೆ.
ಡಾ.ಎಂಬಿಆರ್: ಅವರಿಗಿಂತ ಕೀಳು ರೈತರ ಪರಿಸ್ಥಿತಿ, ಪ್ರಭಾಕರ್. ಬಿಡುವ ಪ್ರಶ್ನೆಯಲ್ಲ..
ಡಾ. ಎ ಎಸ್ ಪ್ರಭಾಕರ್: ಹೌದು, ಈ ಎರಡೂ ಸಮುದಾಯಗಳು ಸಮಾನ ಶೋಷಿತ ಗುಂಪಿಗೆ ಸೇರಿವೆ.
ಡಾ.ಎಂಬಿಆರ್: ಅಲೆಮಾರಿಗಳಲ್ಲಿ, ಆದಿವಾಸಿಗಳಲ್ಲಿ ಕಳೆದ ಎರಡು ದಶಕದಲ್ಲಿ ಆದ ಆತ್ಮಹತ್ಯೆಗಳ ಸಂಖ್ಯೆಯನ್ನು ಗಮನಿಸಬೇಕು.
ಡಾ. ಎ ಎಸ್ ಪ್ರಭಾಕರ್: ಸಾರ್, ಹಸಿವಿನಿಂದ ಸತ್ತವರು, ಭೂಮಾಲಿಕರ ಖಾಸಗಿ ಸೈನ್ಯದಿಂದ ಕೊಲ್ಲಲ್ಪಟ್ಟವರು, ಬಿಎಸ್ ಎಫ್ ಯೋಧರಿಂದ ಹತರಾದವರು, ಪೋಲೀಸರ ನಕಲಿ ಎನ್ ಕೌಂಟರ್ ಗಳಿಗೆ ಎದೆ ಕೊಟ್ಟವರು, ಬಂಡವಾಳಶಾಹಿಗಳ ಗೂಂಡಾಗಳ ಕೈಲಿ ಹತರಾದವರು, ಗಂಜಿ ಕೇಂದ್ರಗಳಲ್ಲಿ ನೀರಿಲ್ಲದೆ ಪ್ರಾಣಬಿಟ್ಟವರು, ಕಾಡುಗಳಲ್ಲಿ ಪ್ರಾಣಿಗಳಿಗೆ ಬಲಿಯಾದವರು,
ಸರ್ದಾರ್ ಸರೋವರದ ನಡುಗಡ್ಡೆಗಳಲ್ಲಿ ಮುಳುಗಿ ಸತ್ತವರು, ಸರಿಯಾದ ಚಿಕಿತ್ಸೆ ಇಲ್ಲದೆ ಯಾವ ತಕರಾರು ಇಲ್ಲದೆ ಉಸಿರು ಚೆಲ್ಲಿದವರು…. ಆದಿವಾಸಿಗಳು
ಜೀನ್ ಡ್ರೀಜ್ ಹೇಳ್ತಾರೆ
‘ಸುಂದರ್ ಬನದಲ್ಲಿ ಒಂದು ಹುಲಿ ಸತ್ತರೆ ಅದು ಅಂತರ ರಾಷ್ಟ್ರೀಯ ಸುದ್ದಿಯಾಗುತ್ತದೆ. ಅದೇ ಹುಲಿಯಿಂದ ಸತ್ತ ಆದಿವಾಸಿಯ ಸಾವು ಕಾಡಿನಾಚೆಗೆ ಸುದ್ದಿಯೇ ಆಗುವುದಿಲ್ಲ. ಇಲ್ಲಿ ಮನುಷ್ಯರ ಜೀವಕ್ಕಿಂತ ಪ್ರಾಣಿಗಳ ಜೀವವೇ ಅಮೂಲ್ಯ ವಾದದ್ದು’
ಮಹೇಂದ್ರ ಕುಮಾರ್: ಆದಿವಾಸಿಗಳು ಎಲ್ಲಿಯವರೆಗೂ ಕಾಡಿನಲ್ಲೇ ನಲುಗುತ್ತಿರಬೇಕು?ಸಂಸ್ಕ್ರತಿ,ಆಚರಣೆ,ಹೆಗ್ಗಳಿಕೆಗಳು ಪ್ರಸ್ಥುತದ ಪ್ರಪಂಚದಲ್ಲಿ ಅನ್ನಕೊಡುವುದಿಲ್ಲ.ಬದುಕ ಕಟ್ಟಿಕೊಡುವುದಿಲ್ಲ.ಬಂಡವಾಳಶಾಹಿ ಸರ್ಕಾರಗಳ ಕಬಳಿಕೆಯ ಹುನ್ನಾರದ ಕಾಯ್ದೆ,ಕಾನೂನು,ಆದೇಶಗಳ ಮದ್ಯೆ ಹೂತುಹೋಗುವ ಬದಲು ಕಾಡ ಬಿಟ್ಟು ಮುಖ್ಯವಾಹಿನಿಗೆ ಬಂದು ಬದುಕು ಕಟ್ಟಿಕೊಲ್ಳಬಾರದೇಕೆ?…ಇದು ಬುಡಕಟ್ಟುಗಳ ಬಗ್ಗೆ ಕಾಳಜಿನ್ನಿಟ್ಟುಕೊಂಡ ಎಂತಹವರದ್ದೂ ಸರಳವಾದ ತಕ್ಷಣದ ವೈಚಾರಿಕ ಉತ್ತರ.ಬದುಕು ನಿಂತನೀರಾಗದೆ,ಲೋಕದ ಬದಲಾವಣೆಗೆ ಜೊತೆ ಜೊತೆಗೆ ಆದಿವಾಸಿಗಳೂ ಹೆಜ್ಜೆ ಹಾಕದಿದ್ದಲ್ಲಿ,ಕಾಯ್ದೆ,ಕಾನೂನು,ಆದೇಶಗಳ ಬೇಲಿಯಲ್ಲಿ ಬಂದಿಯಾಗಿ ಆದಿವಾಸಿಗಳ ಬದುಕು ನಾಶವಾಗುತ್ತದೆ.ಅನ್ನುವ ಹಲವರ ಕಾಳಜಿಯನ್ನು ನಾನು ಖಂಡಿತ ಗೌರವಿಸುತ್ತೇನೆ…..ಆದರೆ ಹಾಗೆ ಇಲ್ಲಿವರೆವಿಗೂ ಕಾಡುತೊರೆದು ಮುಖ್ಯವಾಹಿನಿಗಾಗಿ ಹಾತೊರೆದು ಬಂದವರ ಪಾಡೇನಾಯಿತು?ಒಮ್ಮೆ ಸರ್ವೆ ಮಾಡಿದರೆ,ಅವರು ಪಡಬಾರದ ಪರಿಪಾಟಲಿನ ಲೋಕದಾನಾವರಣ ವಾಗುತ್ತದೆ.
ಅರುಣ್ ಜೋಳದಕೂಡ್ಲಿಗಿ: ಸಿದ್ದ ಜಾಡಿನಲ್ಲೇ ಯೋಚಿಸ್ತಿದಿರಿ ನೀವು. ಇಷ್ಟು ಬ್ಲಾಕ್ ಅಂಡ್ ವೈಟ್ ತರಹ ಆದಿವಾಸಿಗಳ ಅಭಿವೃದ್ಧಿಯ ಆಲೋಚನೆಗಿಂತ ಬೇರೆಯದೇ ನೆಲೆ ಇದೆ ಅನ್ಸುತ್ತೆ. ಸದ್ಯಕ್ಕೆ ನನಗೂ ಖಚಿತವಾಗಿ ಹೇಳೋಕೆ ಆಗ್ತಿಲ್ಲ.
ಮಹೇಂದ್ರ ಕುಮಾರ್: ಇದಕ್ಕೆ ಪ್ರಮುಖ ಕಾರಣ ಆದೀಮ ಸ್ಥಿತಿಯಲ್ಲೇ ಇರುವ ಆದಿವಾಸಿಗಳ ಮನಸ್ಥಿತಿ.ಮೋಸ,ವಂಚನೆ,ಸುಳ್ಳು,ಕ್ರತ್ರಿಮತೆಗಳ ಅರಿವಿಲ್ಲ.ಇವೆಲ್ಲವುಗಳ ಇನ್ನೊಂದು ಮುಖವಾದ ನಾಗರೀಕ ಜಗತ್ತು ಇವರಿಗೆ ವ್ಯತಿರಿಕ್ತವಾದದ್ದು.ತಕ್ಷಣ ಆ ಲೋಕಕ್ಕೆ ಕಾಲಿಟ್ಟರೆ?ಕಾಲಿಡುವ ಮೊದಲು ಪೂರ್ವತಯಾರಿ ಮಾಡಿಕೊಂಡೇ…ಅಂದರೆ ಮೇಲೆ ತಿಳಿಸಿದಂತೆ ಮೊದಲು ನಾಗರೀಕನಾಗಿ ಕಾಡಿನಿಂದ ಹೊರಕ್ಕೆ ಕಾಲಿಟ್ಟರೆ ಮಾತ್ರ ಹೊರ ಜಗತ್ತಿನ ಬಂಡವಾಲಶಾಹಿ,ಜಾಗತೀಕರಣದ ಪೈಪೋಟಿ ಜನರೊಟ್ಟಿಗೆ ಬದುಕ ಬಹುದೇನೊ.
ಅರುಣ್ ಜೋಳದಕೂಡ್ಲಿಗಿ: ಆದಿವಾಸಿಗಳ ಬಿಕ್ಕಟ್ಟು ಚಾರಿತ್ರಿಕವಾಗಿ ಆರಂಭವಾದದ್ದು ಕಾಡನ್ನು “ಸಂಪತ್ತು” ಎಂದು ಪರಿಭಾವಿ, ಈ ಸಂಪತ್ತನ್ನು ಕೊಳ್ಳೆ ಹೊಡೆಯಲು ನಾಗರಿಕ ಜಗತ್ತು ಸ್ಪರ್ಧೆಗೆ ಇಳಿದಂದಿನಿಂದ. ಇದೀಗ ಮತ್ತೆ ಕಾಡಿನ ಜತೆ ಲಗತ್ತಾದ “ಸಂಪತ್ತು” ಎನ್ನುವ ನೆಲೆಯನ್ನು ಬದಲಾಯಿಸದೆ, ಈ ಸಂಪತ್ತನ್ನು  ಅದೊಂದು ಸಹಜ ನಿಸರ್ಗ ಎಂದು ನಾಗರಿಕ ಜಗತ್ತಿನ ಮಧ್ಯಪ್ರವೇಶಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸದ ಹೊರತು ಆದಿವಾಸಿಗಳ ಅಭಿವೃದ್ಧಿಯ ಚರ್ಚೆಗಳು ಅಲ್ಪತೃಪ್ತಿಯವೇನೋ ಅನ್ನಿಸುತ್ತಿದೆ.
ಹರ್ಷ: ಈ ಸಂಪತ್ತು ವ್ಯಾಖ್ಯಾನ ಶುರುವಾಗಿದ್ದು ಬಂಡವಾಳಶಾಹಿ ಮಾರುಕಟ್ಟೆ ದೃದೃಷ್ಟಿಕೋನದಿಂದಲೆ ಮಹೇಂದ್ರ ಕುಮಾರ್:  ಥ್ಯಾಂಕ್ಯು ಹರ್ಷರವರೆ. ಮೊದಲನೆಯದಾಗಿ ಈಗಾಗಲೇ ಮೂಲಕಸಬು,ಕಾಡಿನಿಂದ ಹೊರಬಂದ ಅಲೆಮಾರಿ (ಬ್ರಿಟೀಶರಿಂದ criminal Tribes) ಎನಿಸಿಕೊಂಡವರಿಗೂ ಮತ್ತು ಇನ್ನೂ ಮೂಲಕಸುಬಿಗೆ ಒಂದಿಷ್ಟು ಜೋತುಬಿದ್ದು,ಕಾಡಿನಲ್ಲೇ ಉಳಿದವರಿಗೂ ಅಜಗಜಾಂತರ ವ್ಯತ್ಯಾಸಗಳಿವೆ.ಕಿಳ್ಳೇಕ್ಯಾತ,ಗ್ರೇಷಿಯಾ,ದೊಂಬರು,ಪರ್ದಿಗಳು,ಹಕ್ಕಿಪಿಕ್ಕಿಗಳು,….ಮುಂತಾದ ಅಲೆಮಾರಿ ಸಮುದಾಯಗಳನ್ನು ಬಹಳ ಹಿಂದೆಯೇ ಉಳ್ಳವರು,ರಾಜರುಗಳಿಂದ ಹಿಡಿದು ಬ್ರಿಟೀಸರವರೆವಿಗೂ ಎಲ್ಲರೂ ತಮ್ಮ ವಿವಿದ ಅನುಕೂಲದ ಸ್ವಾರ್ಥಸಾಧನೆಗಳಿಗಾಗಿ ಕಾಡಿನಿಂದ ಹೊರತಂದು ಅವರ ಬದುಕನ್ನು ಛಿದ್ರಗೊಳಿಸಿದ್ದಾರೆ.ಬಹಳಷ್ಟು ಶೊಷಣೆ,ಬವಣೆಗಳನ್ನಲ್ಲದೆ,ಆಧುನಿಕರ ಜೊತೆ ಏಗುತ್ತಾ ಏಗುತ್ತಾ ಹಲವಾರು ತಲೆಮಾರಿನ ನಂತರ ಶಿಕ್ಷಿತರಾಗಿ ಮುಖ್ಯವಾಹಿನಿಗೆ ಬರುತ್ತಿದ್ದಾರೆ.ಉದಾ:ಪ್ರಭಾಕರ್ ಸಮುದಾಯದಲ್ಲಿ ತಂದೆ ಶಿಕ್ಷಿತರಾದರು.ಆದರೆ ಅವರ ತಂದೆ ತಾತಂದಿರುಗಳು ರಾಜರುಗಳ ವಕ್ರದ್ರಷ್ಟಿ,ಬ್ರಿಟೀಶರುಗಳ ಕ್ರೂರದ್ರಷ್ಟಿಗಳಿಂದ ಎಷ್ಟು ನರಳಿದರೋ? ಆದರೀಗವರೂ ಅವರ ಕುಟುಂಬ ಶಿಕ್ಷಣದಿಂದಾಗಿ ಸಮಾಜದ ಮುಖ್ಯವಾಹಿನಿಗೆ ಬಂದಿದೆ.ಅಂದರೆ ಮುಖ್ಯವಾಹಿನಿಯ ಪ್ರವೇಷಕ್ಕೆ ಶಿಕ್ಷಣ ಅತ್ಯಂತ ಪ್ರಮುಖ ಮೈಲಿಗಲ್ಲೆನ್ನುವುದು ನನ್ನ ಅಭಿಪ್ರಾಯ.
ಮಹೇಂದ್ರಕುಮಾರ್: ಆದರೆ ನಾನು ಹೇಳುತ್ತಿರುವುದೆಲ್ಲಾ ಕಾಡಿನಲ್ಲಿ ನೆಲೆನಿಂತು ಇರಲಾಗದೆ,ಹೊರಬರಲಾಗದೇ ಇಬ್ಬಗೆಯ ದ್ವಂದ್ವಗಳಲ್ಲಿ ನರಳುತ್ತಿರುವವರ ಕುರಿತು.ಕಾಡಿನಿಂದ ಹೊರಬಂದವರು ಬದುಕು ಕಟ್ಟಿಕೊಳ್ಳಲಾಗವುದಿಲ್ಲವೆಂದಲ್ಲ,ಆದರೆ ತಕ್ಷಣ ಹೊರಬಂದವರು ನಾಗರೀಕತೆಯ ಗಾಳಿ ಗೊತ್ತಲ್ಲದ ಕಾರಣ ಎರಡು ಮೂರು ತಲೆಮಾರು ವ್ರಥಾ ಬಲಿಪಶುಗಳಾಗಿ ನರಳುತ್ತಾರೆ.
ಮಹೇಂದ್ರಕುಮಾರ್: ನಾನಾಗಲೇ ಹೇಳಿದಂತೆ ಶಿಕ್ಷಣ ಮಾತ್ರ ಆದಿವಾಸಿಗಳ ಬದುಕನ್ನು ಬದಲಾಯಿಸುತ್ತದೆ.ಮುಖ್ಯವಾಹಿನಿಗೆ ಅವರು ಬರೋದಾದರೆ,ಶಿಕ್ಷಣ ಒಂದು ಮಹಾದ್ವಾರ.ಆದರೆ ಆರ್ಥಿಕ ಬಲವಿಲ್ಲದೆ,ಗಾಳಿಯಲ್ಲಿ ಒಣ ಉಪದೇಶ ಮಾಡುತ್ತಾ ಓದಿ ಮುಂದೆ ಬನ್ನಿ.ಎಂದರೆ ಹೇಗೆ? ಈ ಎಲ್ಲಾ ಮಾಹಿತಿ , ಸಮಸ್ಯೆಯ ಅರಿವು,ಪೀಠಿಕೆಗಳ ಹಿನ್ನೆಲೆಯ ಆದಾರಗಳನ್ನಿಟ್ಟುಕೊಂಡು ಕಾಡನ್ನೂ,ಮೂಲ ಸಂಸ್ಕ್ರತಿಯನ್ನೂ ಕೊಂಚ ಅಲ್ಲಿ ಇಲ್ಲಿ ಬದಲಾವಣೆಗಳ ಜೊತೆಗೆ ಆರ್ಥಿಕವಾಗಿ ಹೇಗೆ ಅವರನ್ನು ಸದ್ರಡಗೊಳಿಸಿ ಅವರ ನೆಲೆಯಲ್ಲೇ ಯಾಕೆ ಮುಖ್ಯವಾಹಿನಿಗೆ ತರಬಾರದು?ಎಂಬ ನಮ್ಮ ಸೀಮಿತ ಪ್ರಾಯೋಗಿಕ ಪ್ರಯತ್ನ ಗಳನ್ನ ತೆರೆದಿಡುತ್ತಿದ್ದೇನೆ. ಈ ಪ್ರಯತ್ನಗಳು ಅಂತಿಮ ಉತ್ತರಗಳೆಂತಾಗಲೀ, ultimate solution.ಅಂತ ಅಲ್ಲ.ತಪ್ಪಾಗಿದ್ದರೆ ತಿದ್ದಿ. ಈಗಾಗಲೇ ನಾವು ಹಲವು ಪ್ರಯತ್ನಗಳನ್ನ ಮಾಡಿದ್ದೇವ ಅದರಲ್ಲಿ ಒಂದಾದ ಲ್ಯಾಂಪ್ಸ ಸೊಸೈಟಿಯ ಬಗ್ಗೆ ತಿಳಿಸಿದ್ದೇನೆ.
ಮಹೇಂದ್ರಕುಮಾರ್: ಎರಡು ದಶಕಗಳ ಹಿಂದೆ ನಾನು ಆರು ತಿಂಗಳು ಸರ್ವೆ ಮಾಡಿದ ಮೇಲೆ ಅವರೊಟ್ಟಗೆ ಕೆಲಸ ಮಾಡಲು ಪೂರ್ವಯೋಜನೆ (strategy) ಮಾಡಿಕೊಂಡ (ಅವಶ್ಯವೆನಿಸದರೆ ನಂತರದಲ್ಲಿ ನನ್ನ strategy ಏನಾಗಿತ್ತೆಂದು,ಬೇಕಾದರೆ ತಿಳಿಸುತ್ತೇನೆ.) ಅದರ ಪ್ರಕಾರ               1) Political empowerment ಸಲುವಾಗಿ ಆದಿವಾಸಿಗಳನ್ನು ರಾಜಕೀಯ ಅಸ್ಥಿತ್ವಕ್ಕಾಗಿ ಗ್ರಾ.ಪ ,ತಾ.ಪ ,ಜಿ.ಪ ಚುನಾವಣೆಗಳಿಗೆ ಇಳಿಸಿಬಿಟ್ಟೆ.
ಮಹೇಂದ್ರ ಕುಮಾರ್: ಮೊದಲು  strategy ಬಗ್ಗೆ ತಿಳ್ಸ್ ಬಿಡ್ತೀನಿ.
1)ಶಿಕ್ಷಣ ಮತ್ತು ಅರಿವು..,ಅಂದರೆ ಆದಿವಾಸಿಗಳ ಇತಿಹಾಸ,ರಾಜರು,ಬ್ರಿಟೀಶರು,ಮೇಲ್ವರ್ಗದವರು,ನಾಗರೀಕರುಗಳ ಪಿತೂರಿ ಹಾಗೂ ಪ್ರಸ್ಥುತ ಸ್ಥಿತಿಗತಿಗಳ ಬಗ್ಗೆ ಮನವರಿಕೆಯ ಬಗ್ಗೆ ಅರಿವನ್ನುಂಟು ಮಾಡುವುದು.  ಸರ್ಕಾರ,ಮೂಲಸೌಕರ್ಯ,ಮೂಲಕಾನೂನುಗಳ ಬಗ್ಗೆ ಪ್ರಾಥಮಿಕ ಮಾಹಿತಿಗಳನ್ನು ತಿಳಿಸುವುದು.
2)ಸಂಘಟನೆಗಾಗಿ ಸಂಘಗಳರಚನೆ.
3)ನಾಯಕತ್ವ ಹೊಂದಿರುವವರ ಆಯ್ಕೆ.ನಾಯಕರ ಜವಾಬ್ದಾರಿ ಹೋರಾಟಗಳ ರೂಪರೇಷೆಯ ಬಗ್ಗೆ ತರಬೇತಿ.
4)ಅವಲಂಬನೆಯಿಂದ ಹೊರಬರಲು ಉಳಿತಾ ಅದರಿಂದ ಸ್ವಾವಲಂಬನೆ(savings & credit management.)
5)ಕೋಮುವಾದಿ,ಬಂಡವಾಳಶಾಹಿ ಮತ್ತು ಜಮೀನ್ದಾರಿಗಳಿಂದ ಮುಕ್ತಿ – ಸ್ವಾವಲಂಬನೆ.
6)ಆಧಿವಾಸಿಗಳ ಹಕ್ಕು ಮತ್ತು ಮೂಲಸೌಕರ್ಯಗಳ ಬಗ್ಗೆ ಶಿಕ್ಷಣ ಮತ್ತು ಅರಿವು.
7)ಜೀತ,ಸಾಲಗಳಿಂದ ಮುಕ್ತಿ – ಸ್ವಾವಲಂಬನೆ.
8)5 -6 ಹಳ್ಳಿ ಸಂಘಗಳು ಕೂಡಿ ಹೋರಾಟ ಸಮಿತಿ ರಚನೆ,ಹಾಗೆಯೇ ತಾಲೂಕು ಮತ್ತು ಜಿಲ್ಲಾ ಮಟ್ಟದ ಹೋರಾಟ ಸಮಿತಿಗಳ ರಚನೆ.
9)ಸ್ಥಳೀಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದ ಹೋರಾಟ ಸಮಿತಿಗಳಿಂದ ಮೂಲ ಸಮಸ್ಯೆ,ಬ್ರಹತ್ ಸಮಸ್ಯೆ (main issues )ಗಳನ್ನು  ಗುರ್ತಿಸಿ,ಅವುಗಳನ್ನು ಸಂಬಂದ ಪಟ್ಟ ಇಲಾಖೆ,ಸರ್ಕಾರಗಳಿಗೆ ಮನವಿ,ಅಫೀಲು ಆಗದಿದ್ದಲ್ಲಿ ಹೋರಾಟ.
10)Re -connection of trible traditional knwoledge,culture & subsistance sustainable traditional method of agricultural practices.               11)Identification of main issues with d help of Advocacy & lobbying conduct agitations & movements.
12)Goal is to reconnect Socio cultural spirutual life.:
–  ಇದರಲ್ಲಿ ಕಲವು ಬಿಟ್ಟಿರಬಹುದು. ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಅಸ್ಥಿತ್ವ ವನ್ನು ಸೇರಿಸಿಕೊಳ್ಳಬೇಕು.ಇದಿ ಸಂಕ್ಷಿಪ್ತವಾದ ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರುವ ಪೂರ್ವತಯಾರಿಯ Strategy.
-2004ರಲ್ಲಿ ರಚನೆಯಾದ ಜಿಲ್ಲಾ ಬುಡಕಟ್ಟು ಹೋರಾಟ ಸಮಿತಿ “ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ “ಯ ಉದ್ಘಾಟನಾ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಹಿ.ಚಿ.ಬೋರಲಿಂಗಯ್ಯ,ಡಾ.ಪ್ರಭಾಕರ್,ಹಾಗೂ ರಾಜ್ಯದ ಅನೇಕ ಜಾನಪದ ವಿದ್ವಾಂಸರು ಆಗಮಿಸಿದ್ದಿದ್ದನ್ನ ಈ ವೇಳೆ ಜ್ಞಾಪಿಸಿಕೊಳ್ಳುತ್ತಿದ್ದೇನೆ.
ಡಾ.ಪ್ರಭಾಕರ್ ಎ ಎಸ್: ಮಹೇಂದ್ರಕುಮಾರ್, ಈ ಅಂಶಗಳ ಕುರಿತು ನನಗಂತೂ ತಕರಾರಿಲ್ಲ.
  1. ಮುಖ್ಯವಾಹಿನಿಗೆ ಬಂದು ಶಿಕ್ಷಣ ಪಡೆಯುವುದು, ರಾಜಕೀಯ ಪಾಲ್ಗೊಳ್ಳುವಿಕೆ ಎಲ್ಲಾ ಸರಿ. ಆದರೆ ಮಾರುಕಟ್ಟೆ ಆರ್ಥಿಕತೆಯ ವಿರಾಟ್ ಚಲನೆಗಳನ್ನು ಮುಖಾಮುಖಿ ಮಾಡುವುದು ಹೇಗೆ
  2. ನಮ್ಮ ಸೇವಾ ವಲಯಗಳೆಲ್ಲ ಕಾರ್ಪೊರೇಟೀಕರಣಗೊಂಡಿವೆ. ನಮ್ಮ ದೇಶ welfare state ನ ಎಲ್ಲಾ ಲಕ್ಷಣಗಳನ್ನು ಕಳೆದುಕೊಂಡು ಸರಕಾರ ಲಿಮಿಟೆಡ್ ಕಂಪನಿಯ ಹಂತಕ್ಕೆ ಬಂದು ತಲುಪಿದೆ. ಸಬ್ಸಿಡಿಗಳು ಮುಂತಾದ ಸೌಲಭ್ಯಗಳನ್ನು ಕಿತ್ತು ಹಾಕಲಾಗಿದೆ.
  3. ಇಂತಹ ಸಂದರ್ಭದಲ್ಲಿ ಆದಿವಾಸಿಗಳನ್ನು ಒಳಗೊಂಡಂತೆ ಶೋಷಿತ ಸಮುದಾಯಗಳು ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಹೇಗೆ ಹೋರಾಟ ರೂಪಿಸಬೇಕು? ಏಕೆಂದರೆ ನೀವು ಮೇಲೆ ಪಟ್ಟಿ ಮಾಡಿರುವ ಆದಿವಾಸಿಗಳ ‘ಸಬಲೀಕರಣದ’ ಯೋಜನೆಗಳು ಸುಲಭಕ್ಕೆ ಜಾರಿಯಾಗುವಂತವುಗಳಲ್ಲ. ಜನಹೋರಾಟಗಳಿಂದ ಮಾತ್ರ ಸಾಧ್ಯ.
  4. ಮುಖ್ಯವಾಹಿನಿಗೆ ಬಂದು ಅಭಿವೃದ್ಧಿ ಹೊಂದಿದ ಮೇಲೆ ಆದಿವಾಸಿಗಳನ್ನು ಅವರ ‘ಮೂಲ ಸಂಸ್ಕೃತಿ ಮತ್ತು ಅನುಭಾವಿಕ ಜಗತ್ತಿನ’ ಜೊತೆ ಹೇಗೆ ಮರುಜೋಡಿಸುವುದು?
    (ನೀವೇ ಹೇಳಿದ ಹೇಳಿಕೆಗೆ ನನ್ನ ಪ್ರಶ್ನೆ)
    ಮಹೇಂದ್ರಕುಮಾರ್: ಆದಿವಾಸಿಗಳ ಆದ್ಯಾತ್ಮಿಕತಯೇ ನಮ್ಮ ಸಂಘಟನೆಗಳ ಮೂಲಪ್ರೇರಣೆ.ನಿಮಗೆ ತಿಳಿದಂತೆ ಸಿದ್ದಿಗಳಲ್ಲಿ ಹಿಂದೂ,ಮುಸ್ಲಿಂ,ಕ್ರೈಸ್ಥ ಮೂರು ಪಂಗಡಗಳನ್ನು ಆಯಾ ಮಠ,ಮಸೀದಿ ಚರ್ಚಗಳು ನಿಯಂತ್ರಿಸುತ್ತಿದ್ದವು.ಹಿಂದುತ್ವ ಪ್ರೇರಿತ ವನವಾಸಿ ಕಲ್ಯಾಣ ಕೇಂದ್ರ,ಚರ್ಚ ಆದಾರಿತ ಕೆ.ಡಿ.ಡಿ.ಸಿ.,ಮಸೀದಿಯಾದಾರಿತ ಮದರಸ NGO ಗಳು ಆದಿವಾಸಿಗಳ ಮೂಲ ಸಮಸ್ಯೆ,ಹಕ್ಕುಗಳ ಬಗ್ಗೆ ಕೆಲಸ ಮಾಡದೆ ದಿಕ್ಕು ತಪ್ಪಿಸುತ್ತದ್ದ ಸಂದರ್ಭದಲ್ಲಿ,ಅವರು ಕಳೆದುಕೊಳ್ಳುತ್ತಿದ್ದ ದಮಾಮಿ ಸಂಸ್ಕ್ರತಿ ಹಾಗೂ ಆಫ್ರಿಕಾ ಮೂಲದ ಸಿದ್ದಿ ನ್ಯಾಸ ಮರು ಜೋಡಿಸ ದಿದ್ದಿದ್ದರೆ..,.2003 ರಲ್ಲಿ ಕೇಂದ್ರ ಸರ್ಕಾರದ ಜೊತೆ ಸೆಣಸಾಡಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುತ್ತಿತ್ತೆ?ಸಿದ್ದಿಗಳನ್ನು ಒಗ್ಗೂಡಿಸಲಾಗುತಿತ್ತೆ?ಆ ಸಂಘಟನೆಯ,ಹೋರಾಟದ ದ್ಯೋತವಾಗಿ ಇಂದು ಪ್ರತಿ ಸಿದ್ದಿಗಳಿಗೂ ಮನೆಗಳಾಗಿವೆ,65%ಸಿದ್ದಿಗಳಿಗೆ ಜಮೀನು ದೊರಕಿ ಪಟ್ಟ ಸಿಕ್ಕಿದೆ.ಕಾಡಿನ ಕಿರು ಉತ್ಪನ್ನಗಳಮೇಲೆ ಸಾಮ್ಯತ್ವ ಸಿಕ್ಕು ಲ್ಯಾಂಪ್‌ ಮೂಲಕ ಕಾಡಿನ ಹಕ್ಕಿನ ಜೊತೆ ಆರ್ಥಿಕವಾಗಿ ಸದ್ರಢರಾಗುತ್ತಿದ್ದಾರೆ. ಜೊತೆಗೆ ಹಲವಾರು ಸಣ್ಣ ಉದ್ಯಮಗಳನ್ನು ನಡೆಸುತ್ತಿದ್ದಾರೆ.ಜಮೀನ್ದಾರರಿಂದ ಮುಕ್ತಿಪಡೆದು ಸ್ವಾವಲಂಬಿಗಳಾಗುತ್ತಿದ್ದಾರೆ.ನಮ್ಮ advocacy lobbying ನೀಂದಾಗಿಯೇ ತಂಗಳುಗಳಹಿಂದೆ 53 ಕೋಟಿ ಬಿಡುಗಡೆಯಾದ ಹಣ ಬೇರೆ ಬೇರೆ ಸಂಘಗಳಿಂದ ಬೇರೆ ಬೇರೆ ವ್ಯಾಪಾರ ಆರ್ಥಿಕ ಚಟುವಟಿಕೆಗಳನ್ನ ನಡೆಸುತ್ತವೆ.ಇವೆಲ್ಲಾ ನಾವು ಹಮ್ಮಿಕೊಳ್ಳಲಾಗಿದ್ದ ಪೂರ್ವ ಯೋಜನೆಗಳ ಕ್ರಮವಾದ ಆಚರಣೆ,ಅನುಸರಣೆ ಹಾಗೂ  follow up ಗಳಿಂದ.ಇವು ತಮಗೆ ತಿಳಿದಿವೆ ಅಲ್ವಾ ಸಾರ್.
    ಮಹೇಂದ್ರಕುಮಾರ್:  ಮೇಲೆ ತಿಳಿಸಿದಂತೆ ನಾವು ರಾಜಕೀಯ ಅಸ್ಥಿತ್ವ ಹಾಗೂ ಪಾಲ್ಗೊಳುವಿಕೆಯ ಬಾಗವಾಗಿ 1998ರಲ್ಲಿ ಪ್ರತಿ ಗ್ರಾ.ಪ,ತಾ.ಪ,ಹಾಗೂ ಜಿ.ಪಗಳಿಗೆ ಸಂಘಟನೆ ಮೂಲಕ ಚುನಾವಣೆಗೆ ಸ್ಪರ್ದಿಸಲು ಅಖಾಡಕ್ಕಿಳಿಸಿದ್ವೊ.ಪ್ರಥಮಬಾರಿಗೇ  12 ಕುಣಬಿಗಳು ಆಯ್ಕೆಗೊಂಡರು.ಅದರಲ್ಲಿ ಜಿ.ಪ.ಗೆ ದಿವ್ಯಾನಿಗಾವಡಾ,ತಾ.ಪ.ಗೆ ದೀಪಾ ಗಾವಡ ಆಯ್ಕೆ ಆದರು.ಆಗ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಮಹೇಂದ್ರನ ಕಾಲು ಮುರಿಯಿರಿ ಎಂದಿದ್ದರು.ಅನೇಕ ಸವಾಲುಗಳನ್ನು ಎದುರಿಸ ಬೇಕಾಯ್ತು.ಇದಕ್ಕೆ ಮುಂಚೆ ಇಲ್ಲಿ ಅಲ್ಪಸಂಖ್ಯಾತರಾಗಿದ್ದ ಹವ್ಯಕ ಬ್ರಾಹ್ಮಣರು ರಾಜಕೀಯ ಸ್ಥಾನಮಾನಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟು ಕೊಂಡಿದ್ದರು.ಅದರ ನಂತರದ 2003ಚಯನಾವಣೆಯಲ್ಲಿ ಒಟ್ಟು 26 ಜನ ನಂತರದಲ್ಲಿ 43 ಜನ ಕುಣಬಿಗಳು ಜನಪ್ರತಿನಿದಿಯಾಗಿ ಆರಿಸಿ ಬಂದರು. ಆದರೆ ಕೊನೆ ಚುನಾವಣೆ ಹಂತದಲ್ಲಿ ನಮ್ಮ political empowerment proces ನಮ್ಮ ಕೈತಪ್ಪಿ,ರಾಜಕೀಯ ಹಿತಾಸಕ್ತಿಗಳ ಹಿಡಿತ ಸಾಧಿಸಿತ್ತು.ನಾನು ರಾಜಕೀಯ ಕೆಂಗಣ್ಣಿಗೆ ಗುರಿಯಾಗಿ ಬಹಳಷ್ಟು ತೊಂದರೆಗಳನ್ನು ಅನುಭವಿಸ ಬೇಕಾಯ್ತು.ಆಗ ನಮ್ಮಿಂದಲೇ ಬೆಳೆದ ನಾಯಕರು ರಾಜಕೀಯದ ಹೈಕಮಾಂಡ್ ಗಳ ಗುಲಾಮರಾಗಿ ,ಕಾಂಟ್ರಾಕ್ಟಕೆಲಸಗಳಲ್ಲಿ ಹಣ ಮಾಡಿ ರಾಜಕೀಯ ಹಿತಾಸಕ್ತಿಗಳಾಗಿ ಹೊರಹೊಮ್ಮಿದ್ದರು.ಆಗ ಸಿದ್ದಿಗಳ ಜೊತೆ ಕೆಲಸ ಶುರು ಮಾಡಿರಲಿಲ್ಲ. ಇಲ್ಲಿ ಇಟ್ಟ ತಪ್ಪು ಹೆಜ್ಜೆಗಳನ್ನು ನಂತರದ ಸಿದ್ದಿ ಸಮುದಾಯದಲ್ಲಿ ಎಚ್ಚರಿಕೆವಹಿಸಿ ಇಡಲಿಲ್ಲ.
    ಡಾ.ಪ್ರಭಾಕರ್ ಎ ಎಸ್: ಮಹೇಂದ್ರಕುಮಾರ್, ನಾನು ಅದನ್ನು ಗಮನಿಸಿದ್ದೇನೆ. ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯೂ ಆಗಿದ್ದೇನೆ.
    1. ನಮ್ಮ ಪ್ರಯತ್ನ ಮತ್ತು ಹೋರಾಗಳಿಂದ ಆದ ಫಲಿತಗಳು ಹಲವು ಸಲ ನಮ್ಮಲ್ಲಿ complacency ತಂದು ಬಿಡುತ್ತವೆ. ಬದಲಾವಣೆ ಒಂದು ಹೋರಾಟದಿಂದ, ಒಂದು ದಿನ ಸಂಭವಿಸಿ ಮುಗಿದು ಹೋಗುವಂತದ್ದಲ್ಲ.
  5. ಬದಲಾವಣೆ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆ ಜ್ವಲಂತವಾಗಿರಬೇಕೆಂದರೆ ನಿರಂತರ ಸಂಘರ್ಷ ಅನಿವಾರ್ಯ. ಫಲಿತಾಂಶಗಳು ಕೊಡುವ ಖುಷಿಯ ಜೊತೆಗೆ, ಪರಿಣಾಮಗಳ ಕಠೋರತೆಯನ್ನು ನಾವು ಇಗ್ನೋರ್ ಮಾಡುವ ಹಾಗಿಲ್ಲ.
  6. ನನ್ನ ಪ್ರಶ್ನೆ. ಆರ್ಥಿಕ ಸಬಲೀಕರಣದ ನಂತರ, ಅಭಿವೃದ್ಧಿಯನ್ನು ಸಾಧಿಸಲು ತೀವ್ರವಾಗಿ ತೊಡಗಿಕೊಂಡ ನಂತರ ಅವರ ‘ಆದಿಮ’ ಆಧ್ಯಾತ್ಮದ ಜೊತೆ ಆದಿವಾಸಿಗಳನ್ನು ಬೆಸೆದುಕೊಂಡು ಇರುವಂತೆ ಮಾಡುವುದು ಹೇಗೆ?
ಮಹೇಂದ್ರಕುಮಾರ್:  cultural & spirutual reconnect ಸಾದ್ಯವೇ?ಎಂಬ ಪ್ರಶ್ನೆಗೆ ಉತ್ತರಿಸುವಾಗ,ಅದರಿಂದಾದ ಫಲಿತಗಳನ್ನು(result) ನಾವು ಪ್ರಾಯೋಗಿಕವಾಗಿ ಕೈಗೊಂಡ ಯೋಜನೆಗಳಿಂದ ರೂಪುಗೊಂಡವೆನ್ನುವುದಕ್ಕೆ ಉದಾಹರಣೆ ನೀಡಿದ್ದೇನೆಂದುಕೊಂಡಿದ್ದೇನೆ.ಆ…ಅರ್ಥ ಬರುವ ರೀತಿ ನನ್ನ ವಿಶ್ಲೇಷಣೆ ಇದ್ದಲ್ಲಿ ಸರಿಪಡಿಸಿಕೊಳ್ಳುತ್ತೇನೆ.ಖಂಡಿತ ಹೋರಾಟದಿಂದ ಒಂದೇ ದಿನದಲ್ಲಿ ಬದಲಾವಣೆಗಳಾಗಿಬಿಡುತ್ತವೆಂಬ ತೀರ್ಮಾನಕ್ಕೆ ನಾನು ಬರಲಾರದಂತ ಪೆಟ್ಟುಗಳನ್ನು ಅನುಭವದ ಪಾಠಗಳು ಹೇಳಿ ಕೊಟ್ಟಿವೆ.
2)ಹೌದುಸಾರ್,ಬದಲಾವಣೆಯ ಪ್ರಕ್ರಿಯೆ ಜ್ವಲಂತವಾಗಿಡಲು ಮೈಮರೆಯದೇ ಕಾದಾಡುತ್ತಿರಬೇಕಾಗುತ್ತದೆ.ಹಾಗೆ ಮೈಮರೆತದಕ್ಕೆ ಹಲವಾರು ಬಾರಿ ದಂಡ ತೆತ್ತದ್ದೂ ಇದೆ.ಪರಿಸ್ಥಿತಿಗಳು ಪಾಠಕಲಿಸಿವೆ.ಇಗ್ನೋರ್ ಆಗದೇ ಇರುವಂತಿರಲು ಪ್ರಯತ್ನಿಸುತ್ತೇನೆ.     3)ಅದೀಮ ಆದ್ಯಾತ್ಮಗಳಿಲ್ಲದಿದ್ದಲ್ಲಿ,ನೀವು ಹಿಂದೆ ಚರ್ಚಿಸಿದ ಹಾಗೆ ಅದು ಛಿದ್ರಗೊಂಡ ಸಂಸ್ಕ್ರತಿಯಾಗುತ್ತದೆ. ಅವರು ಹೇಳಿಕೆಗೆ,ಹೊರಮೈಲಕ್ಷಣಗಳಲ್ಲಿ ಮಾತ್ರ ಆದಿವಾಸಿಗಳಾಗಿರುತ್ತಾರಷ್ಟೆ.ಅಲ್ಲಿ ನಾವು ಯಾವುದೇರೀತಿ ಮರುಜೋಡಣೆ ಯ ಸಾದ್ಯತೆಗಳಿರುವುದಿಲ್ಲ.ಆದರೆ ಬಹಳಷ್ಟು ಆದಿವಾಸಿಗಳಲ್ಲಿ ಅದೀಮ ಅದ್ಯಾತ್ಮ ಅಂತರಂಗದಲ್ಲಿ ಸುಪ್ತಾವಸ್ತೆಯಲ್ಲಿ ಹುದುಗೇ ಇರುತ್ತದೆಂಬುದು ನನ್ನ ನಂಬಿಕೆ.ಅಲ್ಲಿ ಮರುಜೋಡಣೆ ಹಾಗೂ ಸಬಲೀಕರಣ,ಅಭಿವ್ರದ್ದಿಗಳ ಜೊತೆ ಜೊತೆಗೇ ಸಂಸ್ಕ್ರತಿ,ಆದ್ಯಾತ್ಮಗಳನ್ನುಬೆಸೆದುಕೊಂಡೇ ಬದಲಾವಣೆಗಳಲ್ಲಿ ತೊಡಗಿಸಿಕ್ಕೊಳ್ಳಬಹುದೆಂಬುದು ನನ್ನ ನಂಬಿಕೆ.
ಪೋಷಿಣಿ: ನಿಮ್ಮೆಲ್ಲರ ಚರ್ಚೆಗಳು ಸಮಯೋಚಿತ. ನನಗೆ ನಿಮ್ಮೊಂದಿಗೆ ಸೇರಿಕೊಳ್ಳಲಾಗಲಿಲ್ಲ. ಕ್ಷಮೆಯಿರಲಿ. ಮಹೇಂದ್ರ ಸರ್ ಅವರಭಿಪ್ರಾಯಗಳಿಗೆ ನನ್ನ ಸಹಮತವಿದೆ. ನನ್ನ ಸೀಮಿತ ಅನುಭವದ ಚೌಕಟ್ಟಿನಲ್ಲಿ ಹೇಳುವುದಾದದಲ್ಲಿ ಶಿಕ್ಷಣವೇ ಆದಿವಾಸಿಗಳ ಅಭಿವೃದ್ಧಿಯ ಮೊದಲ ಹೆಜ್ಜೆ ಎಂಬುದು ನನ್ನ ನಂಬಿಕೆ. ಅದರ ಮೂಲಕ ಸ್ವಾವಲಂಬನೆ ಸಾಧಿತವಾಗಬೇಕು.  ಆದರೆ ಯಾವ ರೀತಿಯ ಶಿಕ್ಷಣ ಎಂಬುದು ಅವರೊಟ್ಟಿಗೆ 15 ವರ್ಷಗಳು ಕಳೆದ ನಂತರವೂ ಪ್ರಶ್ನೆಯಾಗಿಯೇ ಉಳಿದಿದೆ.
ಪ್ರಾಥಮಿಕ ಶಿಕ್ಷಣದ ಹಂತದಲ್ಲಿಲ್ಲಿಯೇ ಬದಲಾವಣೆಯ ಅಗತ್ಯವಿದೆ.
ಒಮ್ಮೆ ಶಾಲೆಯಲ್ಲಿ ಆದಿವಾಸಿ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಚರ್ಚಿಸುವಾಗ “ನಿಮ್ಮ ಶಾಲೆಯನ್ನು ಒಂದು ಬಸ್ಸು ಎಂದುಕೊಳ್ಳಿ, ನಾವೆಲ್ಲರೂ ಇದರೊಂದಿಗೆ ಬೇಗೂರಿಗೆ ಹೋಗಬೇಕು, ಏನು ಮಾಡೋಣ” ಎಂದದ್ದಕ್ಕೆ ಮಕ್ಕಳೆಲ್ಲರ ಒಕ್ಕೊರಲಿನ ಉತ್ತರ
“ತಳ್ಳಿಕೊಂಡು ಹೋಗೋಣ” ಎಂಬುದು. ಶಾಲೆ ಹಾಗೂ ಶಾಲೆಯೊಳಗಿನ ಕಲಿಕೆ ನನ್ನದೆನ್ನುವ ಮಾಲಿಕತ್ವವನ್ನು ಕೊಡುವಲ್ಲಿ ಸೋತ ಮೊದಲ ಅನುಭವ. ಇದು ಸಂಪೂರ್ಣವಾಗಿ ಮಗು ಕೇಂದ್ರಿತ ಕಲಿಕಾ ಶಾಲೆಯೊಂದರಲ್ಲಿ ನನಗಾದ ಅನುಭವ. ಇದು ಒಂದು ಉದಾಹರಣೆಯಷ್ಟೆ. ಮಕ್ಕಳಲ್ಲಿ ನಮ್ಮದೇ ಶಾಲೆಯನ್ನು ನಾವು ಅದನ್ನು ಡ್ರೈವ್ ಮಾಡ ಬಹುದು ಎಂಬು ಆತ್ಮವಿಶ್ವಾಸವನ್ನು ಅವರ ಮನಸ್ಸಿನಲ್ಲಿ ಕೊಡಲಾಗದ ಶಾಲೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಆದಿವಾಸಿ ಮಕ್ಕಳ ಕಲಿಕೆ ನಡೆಯುತ್ತಿದೆ ಈ ಕುರಿತು ಎಲ್ಲರೂ ಯೋಚಿಸಬೇಕಿದೆ. ಆನೆ ಜೊತೆ ಐಲಾಟ ಆಡುವವರಿಗೆ ಎಂದೂ ನೋಡಿರದ ಟ್ರಾಫಿಕ್ ಸಿಗ್ನಲ್ ಕುರಿತು ಬೋಧಿಸಿ, ಉತ್ತರ ಬರೆಯಲಾಗದ ಅವನಿಗೆ “ ದಡ್ಡ” “ಡ್ರಾಪ್ ಔಟ್” “ಇರ್ರೆಗುಲರ್” ಎಂದು ಬ್ರ್ಯಾಂಡ್ ಮಾಡ್ತಿದ್ದೇವೆ. , ಹಾಗಂತ ನಾನು so-called  ಶಿಕ್ಷಣ ತಜ್ಞರಂತೆ, ಅವರದೇ ಭಾಷೆಯಲ್ಲಿ ಅವರದೇ ಹಾಡಿಯಲ್ಲಿ ಶಿಕ್ಷಣವಾಗಬೇಕು ಎಂದು ಭಾವನಾತ್ಮಕವಾಗಿ ಹೇಳುತ್ತಿಲ್ಲ. ಆದರೆ ಆದಿವಾಸಿಗಳ ಹಿನ್ನೆಲೆ, ಕಲಿಕಾ ವಿಧಾನ, ಪಠ್ಯಕ್ರಮ, ತತ್ಞ ಶಿಕ್ಷಕರು, ಆದಿವಾಸಿಗಳ ಸ್ವಾಭಿಮಾನ ಆತ್ಮವಿಶ್ವಾಸ ಕಾಪಾಡಿಕೊಳ್ಳುವ ಹಾಗೂ ಬದುಕು ಕಟ್ಟಿಕೊಡುವ ಸಾಧ್ಯತೆಗಳು ಸೃಷ್ಟಿಸುವ ಶಿಕ್ಷಣಕ್ಕೆ ಆದ್ಯತೆ ನಿಡಬೇಕಿದೆ.
ವಿಶೇಷವಾಗಿ ಶಿಕ್ಷಕರ ಕುರಿತಂತೆ ಹೇಳುವುದಾದಲ್ಲಿ, ನಾನು ಸರ್ಕಾರಿ ಆಶ್ರಮ ಶಾಲೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ದಿನಗಳಲ್ಲಿ, ಪಿ.ಯು.ಸಿ ಓದಿದ ಗಿರಿಜನೇತರ ಶಿಕ್ಷಕರೊಬ್ಬರಿಗೆ “ ನೀವೇಕೆ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿರಿ”  ಎಂದದ್ದಕ್ಕೆ, ಅನಾಗರಿಕರಾದ ಇವರನ್ನು ನಾಗರೀಕರನ್ನಾಗಿ ಮಾಡಲು ಒಂದು ಅವಕಾಶವಿದು, ಅದಕ್ಕೆ ಇಲ್ಲಿದ್ದೆನೆ” ಎಂಬುದು ನನಗೆ ದೊರೆತ ಉತ್ತರ. ಇವರಿಂದ ಮಗುವಿಗೆ ಏನು ಕಲಿಕೆ ಸಾಧ್ಯ? ಇಂದು ಆಶ್ರಮ ಶಾಲೆಗಳು ಸ್ಥಳೀಯ ರಾಜಕಾರಣದ ಸುಳಿಯಲ್ಲಿ ಸಿಕ್ಕಿಕೊಂಡಿವೆ. ಮೊಟ್ಟೆ ಬಟ್ಟೆ, ತಟ್ಟೆಗೆ ಇಲಾಖೆಯವರೂ ಶಾಲೆಗಳನ್ನು ಸೀಮಿತಗೊಳಿಸಿದ್ದಾರೆ.
ತಳ ಭದ್ರವಾಗಿಲ್ಲದಿದ್ದಲ್ಲಿ ಯಾವ ಕಟ್ಟಡವೂ ಉಳಿಯಲಾರದು. ಈಗಾಗಲೇ ಇದೇ ವ್ಯವಸ್ಥೆಯಿಂದ ಬಂದು ಪದವಿ ಶಿಕ್ಷಕ, ನರ್ಸಿಂಗ್ ತರಬೇತಿ, ಎಮ್,ಎಸ್,ಡಬ್ಲ್ಯೂ, (ಮೈಸೂರು ಜಿಲ್ಲೆಗೆ ಸೀಮಿತಗೊಳಿಸಿ ಹೇಳುತ್ತಿದ್ದೇನೆ) ಓದಿದವರೂ ಇದ್ದಾರೆ, ಇವರಲ್ಲಿ ಬಹುತೇಕರು (ಅದರಲ್ಲೂ ಜೇನುಕುರುಬರು) ಮರಳಿ ಹಾಡಿಗಳಲ್ಲೇ ದಿನದೂಡುತ್ತಿದ್ದಾರೆ. ಪಠ್ಯದೊಂದಿಗೆ ವೃತ್ತಿ ಶಿಕ್ಷಣವೂ ದೊರೆತರೆ ಸ್ವಾವಲಂಬನೆಗೆ ದಾರಿಯಾಗಬಹುದು.
ಮಹೇಂದ್ರಕುಮಾರ್ ಅವರು ಹೇಳಿದಂತೆ, ಸ್ಥಳೀಯವಾಗಿ ಅವರ ವೃತ್ತಿಗೆ ಹತ್ತಿರವಾದ ಕೌಶಲ್ಯಗಳು ಅವರಿಗೆ ನೆರವಾಗಬಹುದು. ಇತ್ತೀಚಿನ ದಿನಗಳಲ್ಲಿ ಬಿದಿರಿನ ಕಣ್ಮರೆ ಬೆಟ್ಟ ಕುರುಬರ ಬದುಕನ್ನೇ ಕಿತ್ತುಕೊಂಡಿವೆ. ನಾವು ಇದಕ್ಕೆ ಪಂರ್ಯಾಯವಾಗಿ ಲಂಟಾನದಿಂದ ವಸ್ತುಗಳನ್ನು ತಯಾರು ಮಾಡುವ ದಾರಿಯಲ್ಲಿ ಸಾಗುತ್ತಿದ್ದೇವೆ. ಹಾಗೆಯೇ ಅಲ್ಲಿಯ ಮಹಿಳೆಯರು ಅವರ  ಆಹಾರವಾದ ರಾಗಿಯನ್ನು ಮೂಲವಾಗಿಟ್ಟುಕೊಂಡು ಮಾಲ್ಟ್ ಪೌಡರ್, ಹುರಿಹಿಟ್ಟು, ರಾಗಿ ಚಕ್ಕುಲಿ, ನಿಪ್ಪಟ್ಟುಗಳನ್ನು ತಯಾರಿಸಿ ತಮ್ಮದೇ ಒಂದು ಅಂಗಡಿಯನ್ನು ತೆರೆದ್ನು ಮಾರುತ್ತಿದ್ದಾರೆ, ಹಾಡಿಗಳಲ್ಲಿ ಇನ್ಯಾರದ್ದೋ ಅಂಗಡಿಗಳಲ್ಲಿ ಸಾಮಾನು ತರುತ್ತಿದ್ದವರು ತಮ್ಮದೇ ಪೆಟ್ಟಿ ಅಂಗಡಿಗಳನ್ನು ನಡೆಸುತ್ತಿದ್ದಾರೆ.
ಹೇಳೋಕೆ ತುಂಬಾ ಇದೆ. ಬರೆಯೋದಿಕ್ಕೆ ಬರ್ತಿಲ್ಲ.
ಡಾ.ಪ್ರಭಾಕರ್ ಎ ಎಸ್:  1. ನಮ್ಮ ಪ್ರಯತ್ನ ಮತ್ತು ಹೋರಾಗಳಿಂದ ಆದ ಫಲಿತಗಳು ಹಲವು ಸಲ ನಮ್ಮಲ್ಲಿ complacency ತಂದು ಬಿಡುತ್ತವೆ. ಬದಲಾವಣೆ ಒಂದು ಹೋರಾಟದಿಂದ, ಒಂದು ದಿನ ಸಂಭವಿಸಿ ಮುಗಿದು ಹೋಗುವಂತದ್ದಲ್ಲ.
ನೀವು ಸ್ವಯಂ ವಿಜೃಂಭಣೆ ಮಾಡಿಕೊಂಡಿಲ್ಲ. ಯಾಕೆ ಹಾಗೆ ಭಾವಿಸ್ತೀರಿ.? ನಿಮ್ಮ ಅನುಭವ ಮತ್ತು ಪ್ರಯೋಗಗಳ ಬಗ್ಗೆ ಗೌರವವಿದೆ.
ಡಾ.ಪ್ರಭಾಕರ್ ಎ ಎಸ್: ಶಶಿ.. ರೆಡ್ ಇಂಡಿಯನ್ಸ್ ಗೆ ಅಮೆರಿಕಾದಲ್ಲಿ ಕೊಟ್ಟಿರುವ ಸವಲತ್ತುಗಳು ಮತ್ತು ಅವಕಾಶಗಳು ಮೇಲ್ನೋಟಕ್ಕೆ ಕ್ರಾಂತಿಕಾರಕವಾಗಿವೆ. ಆದರೆ ಆಚರಣೆಯಲ್ಲಿ ಅವು ಸಂಪೂರ್ಣ ವಿಫಲವಾಗಿವೆ. ಅಲ್ಲಿನ ಆದಿವಾಸಿಗಳ ಜೊತೆ ಕೆಲಸ ಮಾಡಿ ಬಂದ ವೈದ್ಯರೊಬ್ಬರ (ನಟ (ಆ.. ದಿನಗಳು..) ಚೇತನ್ ಅವರ ತಂದೆ) ಜೊತೆ ನಾನು ಈ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇನೆ. ಇದಲ್ಲದೆ, ಚೋಮಸ್ಕಿಯ ಶಿಷ್ಯನೊಬ್ಬ ಈಗ್ಗೆ 15 ವರ್ಷಗಳ ಹಿಂದೆ ಕರ್ನಾಟಕದ ಆದಿವಾಸಿಗಳನ್ನು ಅಧ್ಯಯನ ಮಾಡಲು ಬಂದಾಗ ಆದಿವಾಸಿಗಳಿಗೆ ಯುಎಸ್ ಎ ನಲ್ಲಿ ಕಲ್ಪಿಸಲಾಗಿರುವ ‘ಮೀಸಲಾತಿ’ಯ ಬಗ್ಗೆ ಕೇಳಿದ್ದೆ. ಆತ ಕೊಟ್ಟ ವಿವರಗಳು ಭಯಾನಕವಾಗಿದ್ದವು. ನೀವು ರೆಫರ್ ಮಾಡಿದ ಸೋರ್ಸ್ ನ್ನು ಷೇರ್ ಮಾಡಿ. ನನಗೆ ತಿಳಿದು ಬಂದಂತೆ ರೆಡ್ ಇಂಡಿಯನ್ ರಿಗೆ ಕೊಡಮಾಡಿರುವ ಸವಲತ್ತುಗಳು ಗೌರವಾನ್ವಿತವಾಗಿಲ್ಲ.
ಡಾ. ಎ ಎಸ್ ಪ್ರಭಾಕರ್: It may be true sir. But when we see some legal battles where tribals successfully stalled a game sanctuary n  skeeing projects with the help of existing laws, i felt we can look, not necessarily adopt, into such autonomous authority for tribes sir.
ಮಹೇಂದ್ರಕುಮಾರ್: Sir: study tour  ಗೆ ಹೋಗಿದ್ದೆ.ಇದು ನನ್ನ ಮಟ್ಟಿಗೆ ಬಹಳ ಮುಖ್ಯವಾದ ಗಮನಿಸಬೇಕಾದ ಅಂಶಗಳನ್ನು ಹೊಂದಿದ ಅನುಭವ.ಅಲ್ಲಿನ ಅರಣ್ಯಾಧಿಕಾರಿಗಳು ಅತ್ಯಂತ ಉತ್ತಮ ಆರ್ಥಿಕ ಸಬಲೀಕರಣ ಕೆಲಸವನ್ನು ಬುಡಕಟ್ಟುಗಳೊಟ್ಟಿಗೆ ಮಾಡಿದ್ದಾರೆ.ಎಲ್ಲರಿಗೂ ತಿಳಿದಿರುವಂತೆ ತೇಕಡಿ ಬಭಾರತದಲ್ಲೇ ಹೆಚ್ಚು ಪ್ರಗತಿಯಲ್ಲಿ ಸಾಗುತ್ತಿರುವ ಪ್ರವಾಸೋದ್ಯಮಗಳಲೊಂದು.ಅದಕ್ಕೆ ಕಾರಣ ಅವರು ಬುಡಕಟ್ಟು ಗಳನ್ನು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.ಪ್ರವಾಸೋದ್ಯಮಗಳಿಂದ ಬರುವ 80% ಆದಾಯವನ್ನು ಬುಡಕಟ್ಟುಗಳಿಗೆ ಮೀಸಲಿಟ್ಟಿದ್ದಾರೆ.
  • ಆ ಪ್ರವಾಸೋದ್ಯಮದಲ್ಲಿ ಅಷ್ಟೂ ಗೈಡ್, ನ್ಯಾಚುರಲಿಸ್ಟ್ಸ್ ,ಗಾರ್ಡ್ಸ್ , ಸೆಕ್ಯುರಿಟಿಗಳು ,ಇತರೆ ಹಲವಾರು ಹುದ್ದೆಗಳನ್ನು ನೀಡಿ ಪ್ರತಿ ಯೊಬ್ಬರಿಗೂ 10 ರಿಂದ15 ಸಾವಿರ ದಷ್ಟು ಸಂಬಳ ನೀಡಲಾಗುತ್ತಿದೆ.ಅಲ್ಲದೆ ಬರುವ ಟಿಪ್ಸ್ ಗಳುಸೇರಿ ತಿಂಗಳಿಗೆ ಇಪ್ಪತ್ತುಸಾವಿರ ಆದಾಯವಿದೆ.
2)ಕಾಡಿನ ಅಷ್ಟೂ ಕಿರು ಉತ್ಪನ್ನಗಳ ಸಾಮ್ಯತ್ವ ಅವರಿಗೇ ಬಿಟ್ಟಿದ್ದಾರೆ.
3)ಬುಡಕಟ್ಟು ಹಾಡಿ ಗಳಲ್ಲಿ ಕಾಫಿ,ಏಲಕ್ಕಿ,ಕೋಕಂ…ಮುಂತಾದ ಬೆಳೆಗಳನ್ನು ಬೆಳೆಸಿ  ವಿದೇಶಗಳಿಗೂ ರಫ್ತು ಮಾಡುವ ಮೂಲಕ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಲಾಗಿದೆ.
4)ಕೆಲವು ಹಾಡಿಗಳಲ್ಲಿ ಬುಡಕಟ್ಟುಗಳ ಸಂಸ್ಕ್ರತಿ ಬಿಂಬಿಸುವ ಅವರದೇ ಆದ ಕರಕುಶಲವಸ್ತುಗಳು,ಬಳಕೆಯ ಸಾಮಾಗ್ರಿಗಳು….ಇತರ ವಸ್ತುಗಳನ್ನಿಟ್ಟು ಮ್ಯೂಸಿಯಂ ಮಾಡಿದ್ದಾರೆ.ಅದಕ್ಕೆ ಟಿಕೆಟ್ ಇಡಲಾಗಿದೆ.ಅದರ ಗೇಟ್ಕೀಪರ್, ಗೈಡ್,ಟಿಕೆಟ್ ಕಲೆಕ್ಟರ್ ಎಲ್ಲರೂಬುಡಕಟ್ಟುಗಳೇ.ಅದರ ಆದಾಯವೂ ಸಮುದಾಯಕ್ಕೇ.
5) ಹಾಡಿಯ ಮನೆಗಳಲ್ಲಿ ಪ್ರವಾಸಿಗರು ಉಳಿಯುತ್ತಾರೆ.( home stay ತರಹ) ಬಂದವರಿಗೆ ಬುಡಕಟ್ಟುಗಳದೇ ಊಟ ಉಪಚಾರ ಸಂಜೆ ಅವರ ಜಾನಪದ ನ್ರತ್ಯ,ಹಾಡುಗಳು.ಅದರ ಆದಾಯವೂ ಅವರದೆ.ಒಂದುಕಡೆ ಅವರ ಸಂಸ್ಕ್ರತಿಯ ಪ್ರಚಾರವೂ (ಪ್ರಭಾಕರ್ ಹೇಳಿದ ಹಾಗೆ  cultural spirutual reconnection  ಕೂಡ) ಅದರಿಂದ ಬರುವ ಆದಾಯವೂ ಅದೇ ಸಮುದಾಯಕ್ಕೆ.
6)  ಅಲ್ಲಿ ಸಂಗ್ರಹಿಸಲಾದ ಕಿರು ಉತ್ಪನ್ನಗಳು ಪ್ಯಾಕ್ ಆಗಿ  export  ಆಗುತ್ತಿವೆ.ಉದಾ: ಜೇನು.ಅ್ರ ಮಾರುಕಟ್ಟೆಯನ್ನು ಇಲಾಖೆ ವಹಿಸಿ ಕೊಟ್ಟಿದೆ.
7)ಬ್ಯಾಂಬು ರಾಫ್ಟಿಂಗ್,ಟ್ರೆಕ್ಕಿಂಗ್,ಟ್ರೀಕ್ರಾಸಿಂಗ್, ಚಕ್ಕಡಿಟ್ರೆಕ್ಕಿಂಗ್, ಬರ್ಡ ವಾಚಿಂಗ್,…ಮುಂತಾದ ಕಾರ್ಯಚಟುವಟಿಕೆಗಳನ್ನು ಬುಡಕಟ್ಟುಗಳೇ ನಡೆಸುತ್ತಾರೆ.ಅದರ ಆದಾಯವೂ ಅವರದೆ.20% ಮಾತ್ರ ಇಲಾಖೆಗೆ ಹೋಗುತ್ತದೆ..
2007 ರಲ್ಲಿ ನಾನು ಇದನ್ನೆಲ್ಲಾ ರೆಕಾರ್ಡ ಮಾಡಿಬ  ಪಿಪಿಟಿ ತಯಾರಿಸಿ ಸರ್ಕಾರಕ್ಕೆ proposal ಮಾಡಿ ಇಲ್ಲಿಯೂ ಅಳವಡಿಸುವಂತೆ ಕೋರಿಕೊಳ್ಳಲಾಗಿತ್ತು. ನಂತರ 2008 ರಲ್ಲಿ ಮದ್ಯಪ್ರದೇಶದ ಖಾನಾ,ಬಾಂದವಘಡ್ ಟೈಗರ್ ರಿಸರ್ವ ಗಳು ಹಾಗೂ ಸಿಮ್ ಕಾರ್ಬೆಡ್ ಗಳಿಗೆ  ಬೇಟಿ ಕೊಟ್ಟಿದ್ದೆ.ಅಲ್ಲಿ ಅಲ್ಲಿನ ಇಲಾಖೆ ಬುಡಕಟ್ಟು ಗಳೊಟ್ಟಿಗೆ ಪ್ರವಾಸೋದ್ಯಮಗಳಲ್ಲಿ ಪರಸ್ಪರ ತೊಡಗಿಸಿಕೊಂಡ ವಿವರಗಳನ್ನು ನಾಳೆ ಹಂಚಿಕೊಳ್ತೇನೆ.
ಮಹೇಂದ್ರಕುಮಾರ್:  2007-8ರಲ್ಲಿ ನಾನು ಅಧ್ಯಯನದಪ್ರವಾಸ ಕೈಗೊಂಡು ,ಅದರ ಆದಾರದ ಮೇಲೆ ಇಲ್ಲಿನ ಬುಡಕಟ್ಟುಗಳೊಟ್ಟಿಗೆ ಹೇಗೆ ಕಾರ್ಯಚಟ್ಉವಟಿಕೆ ಹಮ್ಮಿಕೊಲ್ಳ ಬಹುದೆಂದು ಪ್ರೊಪೋಸಲ್ ನ್ನು ಅರಣ್ಯ ಇಲಾಖೆ ಮೂಲಕ ಉಸ್ತುಬಾರಿ ಸಚಿವರು,ಸಂಸದರು ಮತ್ತು ಪ್ರವಾಸೋದ್ಯಮ ಸಚಿವರುಗಳಿಗೆ ಸಲ್ಲಿಸಲಾಗಿತ್ತು.ಆಗ ತಕ್ಷಣ 2 ಕೋಟಿ ಬಿಡುಗಡೆ ಮಾಡಿದ ಸಚಿವರು, ಬುಡಕಟ್ಟು ಬದಲು ಬೇರೆ ಇತರೆ ಪ್ರವಾಸೋದ್ಯಮದ ಯೋಜನೆಗಳಿಗೆ ಬಳಸಿ ಕೊಂಡರು.ಆದರೆ ಕೇರಳದಲ್ಲಿ ಅನುಷ್ಟಾನ ಗೊಂಡಿದ್ದನ್ನು ಇಲ್ಲಿಯೂ ಇನ್ನೂ ಊರ್ಜಿತಗೊಳಿಸಿ ಅಳವಡಿಸಿಕೊಳ್ಳಕೊಳ್ಳಬಹುದಾಗಿದೆ. ನಂತರ ಬ್ಯಾಂಬು ಉಪಯೋಗಿಸಿ ಮರದ ಹಲಿಗೆಗಳಿಗಿಂತ 100 ಪಟ್ಟು ಬಲಿಷ್ಟವಾದ ಹಲಗೆಯನ್ನು ಲ್ಯಾಮಿನೇಟ್ ಮಾಡಿ ಮಾರಾಟ ಮಾಡಲು 6 ಕೋಟಿ ಬಡ್ ಜೆಟ್ ಮಾಡಿ ,ಅಸ್ಸಾಮಿನಲ್ಲಿ ಜಾಲ್ತಿಯಲ್ಲಿರುವ ಕಾರ್ಖಾನೆಯ ವಿಡಿಯೋ ರೆಕಾರ್ಡ್ ಮಾಡಿ ಲ್ಯಾಂಪ್ಸ ಸೊಸೈಟ್ಟಿಗಾಗಿ ಅರಣ್ಯಿಲಾಖೆಯ ಮೂಲಕ ಕಳಿಸಿದ್ದು 2007 -8 ರಲ್ಲಿ ಅಪ್ರೂವಲ್ ಆಗಿತ್ತು.ಆದರೆ ಬ್ಯಾಂಬುಗಳು ಹೂ ಬಿಟ್ಟು ಎಲ್ಲಾ ಒಣಗಿ ಬಿಟ್ಟವು. ನಮ್ಮ ಬ್ಯಾಡ್ ಲಕ್ .ಇಂತಹ ಹಲವಾರು ಯೋಜನೆಗಳನ್ನು ಕಾಡಿನ ಒಳಗೇ ರೂಪಿಸ ಬಹುದು.ಅದಕ್ಕೆ ನೀವೇಳಿದ ಹಾಗೆ ನಿರಂತರ ಹೋರಾಟ advocacy lobby ಯನ್ನು ಸರ್ಕಾರದಜೊತೆ ನಡೆಸಬೇಕಾಗುತ್ತದೆ.ಅದಕ್ಕೆ ನಮಗೂ,ಪ್ರಭುತ್ವನಡೆಸುತ್ತಿರುವವರಿಗೂ,ಅಧಿಕಾರಿಗಳಿಗೂ ಇಚ್ಛಾಶಕ್ತಿ ಬಲವಾಗಿರಬೇಕಷ್ಟೆ. ಖಂಡಿತವಾಗಿ ಕಾಡಿನಲ್ಲಿದ್ದುಕೊಂಡೇ
–  ಬುಡಕಟ್ಟುಗಳು ತಮ್ಮ ಆರ್ಥಿಕ ಸಬಲೀಕರಣ ಹಾಗೂ ಸಾಂಸ್ಕ್ರತಿಕ,ಆದ್ಯಾತ್ಮಿಕ ನೆಮ್ಮದಿಯ ಬದುಕನ್ನು ಶ್ರಮ ವಹಿಸಿದಲ್ಲಿ ಉತ್ತಮ ಬದುಕು ರೂಪಿಸಿ ಕ್ಕೊಲ್ಳಬಹುದಾಗಿದೆ.
– ತುಂಬ ಸಂಕ್ಷಿಪ್ತಗೊಳಿಸಿ,ಉದಾ:ಗಳನ್ನೇಲ್ಲಾ ಮೊಟಕುಗೊಳಿಸಿದ್ದೇನೆ.

– ಸೊಂಗಪೂರ್ ಮಾದರಿ  zoological & botonical park ಮಾದರಿಯ ಸಿಡಿಯನ್ನು ದಿನೇಶರಿಂದಲೂ,ಅಸ್ಸಾಂ ನಿಂದ ಬ್ಯಾಂಬು ಲ್ಯಾಮಿನೇಷನ್ ಕಾರ್ಖಾನೆ ಮಾದರಿ ಸಿಡಿ ಯನ್ನು ಸಂದೇಶ್ ಬ್ಯಾನರ್ಜಿ ( ಸ್ಯಾಂಡಿ ಬೋಡ)ರಿಂದ ತರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೆ.
–  ಕಾಡಿನ ಜೊತೆ ಇರುವ ಅವಿನಾಭಾವ ಸಂಬಂದ ಕುರಿತು ಆಧಿವಾಸಿ ಆಖ್ಯಾನ ಪುಸ್ತಕದಲ್ಲಿ ನನ್ನ ಲೇಖನ ” ಬುಡಕಟ್ಟುಗಳಲ್ಲಿ ಸೀಮೆಯ ಪರಿಕಲ್ಪನೆ “ಯಲ್ಲಿ ಇದೆ.ಹೆಚ್ಚಿನ ಮಾಹಿತಿಗಾಗಿ ರೆಫರ್ ಮಾಡಬಹುದು.

ಕಾಮೆಂಟ್‌ಗಳಿಲ್ಲ: