ಬುಧವಾರ, ಜುಲೈ 23, 2014

ಕೊರಗ ಸಮುದಾಯದ ಚಿತ್ರಗಳು ಭಾಗ-4

'ಕೊರಗ ತನಿಯ'ನೆಂಬ ಯುವಕ 'ಕೊರಗಜ್ಜ'ನಾದ!

ಕೋಲು ಹಿಡಿದವರೆಲ್ಲಾ ಅಜ್ಜರಲ್ಲ! ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ... ಕೊರಗ ಜನಾಂಗದ ಕುಲ ಪುರುಷ - ತನಿಯನ ಕಾಲ ನಂತರ (ಬ್ರಾಹ್ಮಣರಿಂದ ನಡೆದ ವ್ಯವಸ್ಥಾ ಬದ್ಧವಾದ ಕೊಲೆ), ಆತನನ್ನು ಕೊರಗ ಸಮುದಾಯದ ಹಿರಿಯರು- ದೈವತ್ವಕ್ಕೇರಿಸಿ ಕುಲಪುರುಷನೆಂದು ಆರಾಧಿಸಲಾರಂಭಿಸಿದರು. ಮರದಡಿಯಲ್ಲಿ ಕಲ್ಲನಿಟ್ಟು ಪೂಜಿಸಲಾರಂಭಿಸಿದರು. ಕಲ್ಲಿನ ಮೇಲೆ ತನಿಯನಿಗೆ ಪ್ರಿಯವಾದ ಶೇಂಧಿಯನ್ನು ಇಡಲಾರಂಭಿಸಿದರು. ಅಲ್ಲೊಂದು ಕೋಲು ಇಟ್ಟರು. ಯಾಕೆಂದರೆ, ಕೊರಗ ಸಮುದಾಯದ ತನಿಯನಿಗೆ ‘ಆಮೆ - ಬೇಟೆ’ಯಾಡುವ ಹವ್ಯಾಸವಿತ್ತು. ಆತ ಹೋದಲೆಲ್ಲಾ ಕೋಲು ಹಿಡಿದುಕೊಂಡು ಹೋಗುತ್ತಿದ್ದ. ಆಮೆ ಹುಡುಕಬೇಕಾದರೆ ‘ಕೋಲು’ ಬೇಕೇ ಬೇಕು. ಕೋಲು ಇಲ್ಲದಿದ್ದರೆ ಆಮೆ ಬೇಟೆಯಾಡಲು ಸಾಧ್ಯವಿಲ್ಲ. ಹಾಗಾಗಿ, ತನಿಯನನ್ನು ಪ್ರತಿಸ್ಟಾಪಿಸಿದಲೆಲ್ಲಾ ಕೋಲು ಇಡುತ್ತಿದ್ದರು - ಕೊರಗ ಸಮುದಾಯದ ಬಾಂಧವರು. ಆದರೆ, ಯಾವಾಗ ಇತರ ಸಮುದಾಯದವರು ಕೊರಗರ ‘ತನಿಯ’ನನ್ನು ಪೂಜಿಸಲು ಆರಂಭಿಸಿದರೋ, ಅವರಿಗೆ ಕೋಲಿನ ಮಹತ್ವ ತಿಳಿಯಲಿಲ್ಲ. ಯಾಕೆಂದರೆ, ಕರಾವಳಿಯಲ್ಲಿ ಕೊರಗರನ್ನು ಬಿಟ್ಟರೆ ಬೇರೆ ಯಾರೂ - ಆಮೆ ಬೇಟೆಯಾಡಿದವರಲ್ಲ. ಅವರೂ ತನಿಯನ ಕಲ್ಲಿನಲ್ಲಿ ಕೋಲನ್ನು ಇಟ್ಟು ‘ತನಿಯಜ್ಜ’ ಎಂದು ಬಿಟ್ಟರು, ಇತರರೂ ‘ಕೊರಗಜ್ಜ’ ಎಂದರು! ಆದರೆ ತನಿಯ ಕಾಲವಾದದ್ದು ತನ್ನ ಬರಿಯ ಹದಿನೆಂಟನೆ ವಯಸ್ಸಿನಲ್ಲಿ! ಆತನಿಗೆ ಕೋಲು ಬೇಕಾದದ್ದು ಆಮೆ ಬೇಟೆಯಾಡಲೇ ಹೊರತು ಆಧಾರಕ್ಕಲ್ಲ! ಆತ ಅಜ್ಜನಾಗಲೇ ಇಲ್ಲ. ಆದರೆ, ಇತರರು ಆತನನ್ನು ‘ಅಜ್ಜ’ನನ್ನಾಗಿ ಮಾಡಿಬಿಟ್ಟರು!

- ಹೃದಯ





ಕೊರಗ ಭಾಷೆ ಮತ್ತು ವೈಶಿಷ್ಟ್ಯ

ಮಾನವ ಭಾವನೆಗಳನ್ನು ವ್ಯಕ್ತಪಡಿಸಲು, ಪರಸ್ಪರ ಸಂವಹನ ನಡೆಸಲು ಇರುವಂತಹ ಮಾಧ್ಯಮವೇ ಭಾಷೆ. ಭಾಷೆ ಬಾರದ, ಇರದ ಮಾನವ ಪ್ರಾಣಿ ಬಹುಃಶ ಈ ಜಗತ್ತಿನಲ್ಲಿಯೇ ಇರಲಾರದೇನೋ!!

ಪ್ರಾಚೀನ ಆದಿಮಾನವನು ಹಲವಾರು ತರಹದ ಕೈಸನ್ನೆ, ಬಾಯಿ ಸನ್ನೆಗಳ ಮೂಲಕ ಭಾವನೆಗಳನ್ನು ವ್ತಕ್ತಪಡಿಸುತ್ತಿದ್ದರು. ಅದು ಅಭಿವೃದ್ಧಿ ಹೊಂದುತ್ತಾ ನಿರ್ದಿಷ್ಟ ಪದಗಳ ಬಳಕೆ ಆರಂಭವಾಯಿತು. ಹಾಗೆ ಭಾಷೆ ಹುಟ್ಟುತ್ತಾ ಬೆಳೆಯುತ್ತಾ ಬಂತು.

ಭಾಷೆಯು ದೇಶ, ರಾಜ್ಯ, ಪ್ರಾಂತ್ಯ, ಜಾತಿ, ಧರ್ಮಗಳಿಗೆ ಸಂಬಂಧಿಸಿದಂತೆ, ಪ್ರಾದೇಶಿಕ ಭಿನ್ನತೆಯನ್ನು ಮಹತ್ವವನ್ನು ಪಡೆದಿರುತ್ತದೆ. ಭಾಷೆ ಒಂದು ಜನ ಸಮೂಹದ ಅನನ್ಯತೆಯ, ಅಸ್ತಿತ್ವದ ಪ್ರತೀಕವೂ ಹೌದು. ಒಂದು ಭಾಷೆಯೊಳಗೆ ಹಲವಾರು ಉಪ ಭಾಷೆಗಳು ಇರಬಹುದು.

ಆದಿವಾಸಿ ಬುಡಕಟ್ಟು ಪಂಗಡಗಳು ಕೂಡಾ ಇದೇ ರೀತಿಯ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ. ಭಾರತದ ಆದಿವಾಸಿ ಬುಡಕಟ್ಟು ಪಂಗಡಗಳಲ್ಲಿ ಒಂದಾಗಿರುವ ಈ ಕೊರಗ ಜನಾಂಗವು ಕೂಡ ತನ್ನದೇ ಆದ ಇತಿಹಾಸ, ಆಚಾರ ವಿಚಾರ , ಸಂಸ್ಕೃತಿ, ಉಡುಗೆ ತೊಡುಗೆ, ಮನರಂಜನೆ ಮತ್ತು ಭಾಷೆಯನ್ನು ಹೊಂದಿದೆ. ಆದರೆ, ಶೋಷಣೆ ಅನುಕರಣೆ ಮತ್ತು ಆಧುನೀಕರಣಗಳ ಬಿರುಗಾಳಿಗೆ ಸಿಲುಕಿ ಇಂದು ಸಮುದಾಯವೇ ಅವನತಿಯ ಅಂಚಿನಲ್ಲಿದೆ. ಅಳಿದುಳಿದ ಪಳೆಯುವಿಕೆಗಳು ಕೂಡಾ ರೂಪಾಂತರಗೊಂಡಿದೆ.

ಸಮುದಾಯದ ಅನನ್ಯತೆಯ ದೃಷ್ಟಿಯಿಂದಾಗಿ ಭಾಷೆ, ಸಂಸ್ಕೃತಿಗಳ ರಕ್ಷಣೆ ಮತ್ತು ಧನಾತ್ಮಕ ಬೆಳವಣಿಗೆ ಮುಖ್ಯವಾತ್ತದೆ. ಸರಿಯಾದ ಬಳಕೆಯಿಂದ ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕೊರಗ ಭಾಷೆಯು ಯಾವುದೇ ಭಾಷೆಯ ಉಪ ಭಾಷೆಯಾಗಿರದೆ, ಸ್ವತಂತ್ರ ಭಾಷೆಯೇ ಆಗಿರಬಹುದು. ಯಾಕೆಂದರೆ, ಕೊರಗ ಸಮುದಾಯವು ಆದಿ ಮೂಲದ ಜನಾಂಗವಾಗಿರುವುದರಿಂದ ಇತರ ಭಾಷೆಗಳನ್ನು ಅನುಕರಣೆ ಮಾಡಿರಲು ಸಾಧ್ಯವಿಲ್ಲ. ಅಲ್ಲದೆ ತುಳು, ಕನ್ನಡ ಭಾಷೆಯಲ್ಲಿ ಸಿಗದಂತಹ ಪದಗಳು ಕೊರಗ ಭಾಷೆಯಲ್ಲಿ ಸಿಗುತ್ತದೆ. ಕಾಲಕ್ರಮೇಣ ತುಳು ಭಾಷೆಯ ಪ್ರಭಾವಕ್ಕೆ ಒಳಗಾಗಿರುವುದು ಅಧ್ಯಯನದಿಂದ ತಿಳಿದು ಬರುತ್ತದೆ. ಪ್ರಸ್ತುತ ಕೊರಗ ಭಾಷೆಯಲ್ಲಿ ಐದು ಪ್ರಾದೇಶಿಕ ಬಿನ್ನತೆಗಳನ್ನು ಗುರುತಿಸಲು ಸಾಧ್ಯವಿದೆ.

ಉಡುಪಿ ಜಿಲ್ಲೆಯ - ಉಡುಪಿ ನಗರ, ಕೋಟಾ, ಬ್ರಹ್ಮಾವರ, ಬಾರ್ಕೂರು ಸುತ್ತಮುತ್ತ ಒಂದು ಬಗೆಯ ಕೊರಗ ಭಾಷೆ ಚಾಲ್ತಿಯಲ್ಲಿದ್ದರೆ, ಕಾಪು, ಬೆಳ್ಮಣ್ಣು, ಕಿನ್ನಿಗೋಳಿ, ಕಾರ್ಕಳ ಪರಿಸರದಲ್ಲಿ ಇನ್ನೊಂದು ಬಗೆಯ ಭಿನ್ನತೆಯೊಂದಿಗೆ ಬಳಕೆಯಲ್ಲಿದೆ. ಕೊಕ್ಕರ್ಣೆ, ಹೆಬ್ರಿ, ಬಜಗೋಳಿ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಅರಗ ಸುತ್ತಮುತ್ತ ಮತ್ತೊಂದು ರೀತಿಯಲ್ಲಿ ಭಾಷೆಯ ಬಳಕೆಯಿದೆ. ಅದೇ ರೀತಿ ಕುಂದಾಪುರ, ಶಂಕರನಾರಾಯಣ, ಕೊಲ್ಲೂರು, ಬೈಂದೂರು, ಉತ್ತರ ಕನ್ನಡ ಜಿಲ್ಲೆಯ ಶಿರ್ಸಿ ಮೊದಲಾದ ಕಡೆ ತುಸು ಭಿನ್ನ ರೀತಿಯಲ್ಲಿ ಕೊರಗ ಭಾಷೆ ಚಾಲ್ತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ ಹಾಗೂ ಕೇರಳದ ಕಾಸರಗೋಡು ಸುತ್ತಮುತ್ತ ಇನ್ನೂ ಒಂದು ಶೈಲಿಯ ಕೊರಗ ಭಾಷೆ ಬಳಕೆಯಲ್ಲಿತ್ತು ಆದರೆ, ಅದೀಗ ಬಳಕೆಯ ಕೊರತೆಯಿಂದಾಗಿ ಕೆಲವೇ ಕೆಲವೊಂದು ಅವಶೇಷಗಳು ಮಾತ್ರ ಕಾಣಲು ಸಿಗುತ್ತದೆ.


ಈ ಎಲ್ಲಾ ಪ್ರಕಾರಗಳು - ತುಳು, ಕನ್ನಡ, ಮಲಯಾಳಿ ಭಾಷೆಗಳ ಪ್ರಭಾವಕ್ಕೊಳಗಾಗಿ ಹಲವಾರು ಭಿನ್ನತೆಗಳೊಂದಿಗೆ ಚಾಲ್ತಿಯಲ್ಲಿದ್ದರೂ, ಕೆಲವೊಂದು ಮೂಲ ಸಾಮ್ಯತೆಗಳನ್ನು ಉಳಿಸಿಕೊಂಡು ಬಂದಿದೆ. ಮಕ್ಕಳು ಎಂಬ ಪದವನ್ನು ಉಡುಪಿ ಮತ್ತು ಬಾರ್ಕೂರು ಪರಿಸರದ ಭಾಷೆಯಲ್ಲಿ 'ಜೇರ್ಲು' ಎಂದು ಕರೆದರೆ, ಕಾಪು ಮತ್ತು ಬೆಳ್ಮಣ್ಣು ಸುತ್ತಲಿನ ಭಾಷೆಯಲ್ಲಿ 'ಕುಜೇರ್ಲು' ಎನ್ನಲಾಗುತ್ತದೆ. ಇದೇ ಪದವನ್ನು ಕುಂದಾಪುರ, ಬೈಂದೂರು ಕಡೆ 'ಕಿಜ್ಜೆರ್' ಎಂದು ಬಳಸಲ್ಪಟ್ಟರೆ, ಕೊಕ್ಕರ್ಣೆ, ಹೆಬ್ರಿ, ತೀರ್ಥಹಳ್ಳಿ ಕೊರಗರ ಭಾಷೆಯಲ್ಲಿ 'ಕಿದ್ದೆರ್' ಎಂದು ಬಳಸುತ್ತಾರೆ. ಮಾಂಸ ಎಂಬ ಪದವು ಕ್ರಮವಾಗಿ ಚಮ್ಮಾಯಿ, ಸಮಾಯಿ, ಚಮ್ಮಿ ಎಂದು ಉಪಯೋಗವಾಗುತ್ತದೆ. ಇಲ್ಲಿ ಪರಸ್ಪರ ಸಾಮ್ಯತೆಗಳಿರುವುದನ್ನು ಗುರುತಿಸಲು ಸಾಧ್ಯವಿದೆ. ಮಡಾರ್ ಎಂಬ ಪದವು ಸಾಮಾನ್ಯವಾಗಿ ಎಲ್ಲಾ ಪ್ರಾದೇಶಿಕ ಭಿನ್ನತೆಯಲ್ಲೂ ಒಂದೇ ರೀತಿಯಲ್ಲಿ ಬಳಕೆಯಲ್ಲಿದೆ (ಮಡರ್ = ಎಂಜಲನ್ನ; ಮಡೆ = ಎಂಜಲು; ಔರು = ಅನ್ನ) ಅದೇ ರೀತಿ ಮದುವೆ ಎಂಬರ್ಥದ ಪದವು ಕ್ರಮವಾಗಿ ಬಿರ್ದು, ಮಂಗಿಲ ಎಂದು ಉಪಯೋಗವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಉಡುಪಿ, ಬಾರ್ಕೂರು ಸುತ್ತಲಿನ ಭಾಷೆಯು ಕಾಪು, ಬೆಳ್ಮಣ್ಣಿನ ಭಾಷೆಗೆ ಹೆಚ್ಚು ನಿಕಟವಾಗಿದೆ. ಇನ್ನು ಕೊರಗ ಭಾಷೆಯಲ್ಲಿ ಕೆಲವು ತುಳು ಹಾಗು ಹಳೆಗನ್ನಡದ ಪದಗಳೂ ಯಥಾರ್ಥದಲ್ಲಿ ಕಾಣಸಿಗುತ್ತದೆ. ಹಳೆಗನ್ನಡದ 'ಸೊಲ್ಲು' ಎಂಬ ಪದ ಕೊರಗ ಭಾಷೆಯಲ್ಲಿ ಕ್ರಿಯಾ ಪದವಾಗಿ (ಸೊಲ್ಲು = ಹೇಳು) ಬಳಲ್ಪಡುತ್ತದೆ. ಇಲ್ಲಿ ವ್ಯತ್ಯಾಸ ಭಿನ್ನತೆಗಳೇನಿದ್ದರೂ ಕೊರಗ ಸಮುದಾಯಕ್ಕೊಂದು ಸ್ವತಂತ್ರ ಭಾಷೆ ಇರುವುದು ಹೆಮ್ಮೆಯ ವಿಷಯ. ಈ ಬಗ್ಗೆ ಮುಂದೆ ವಿಸ್ತೃತವಾಗಿ ಚರ್ಚಿಸೋಣ. ಸುಂದರ ಸಂಸ್ಕೃತಿ ನಿರ್ಮಿಸೋಣ!

- ಬಾಬು ಕೊರಗ, ಪಾಂಗಾಲ


ಸಿಹಿ ಜೇನ ಸವಿದು ಜೇನಿನಂತಾದವರು...


ಕೊರಗ ಸಮುದಾಯದ ಕುಲಕಸುಬು ಬುಟ್ಟಿ ನೇಯುವುದು, ಹಗ್ಗ ಮಾಡುವುದು ಮತ್ತು ಜೇನು ತೆಗೆಯುವುದು. ತಮ್ಮದೇ ಆದ ಕೌಶಲ್ಯಭರಿತ ಪ್ರತಿಭೆಗಳಿಂದ ಈ ಕೆಲಸವನ್ನು ನಾಜೂಕಾಗಿ ಮಾಡಬಲ್ಲರು.

ಜೇನು ತೆಗೆಯುವ ಕೊರಗರ ಬುದ್ಧಿವಂತಿಕೆ ಎಲ್ಲೂ ದಾಖಲಾಗಿಲ್ಲ. ಯಾರೂ ತಿಳಿಯಲಿಲ್ಲ. ಪ್ರಾಣಿ ಪಕ್ಷಿ, ಕ್ರಿಮಿ ಕೀಟ, ಗಿಡ ಬಳ್ಳಿಗಳೊಂದಿಗೆ ಅನ್ಯೋನ್ಯತೆಯಿಂದ ಬದುಕುವುದು ಕೊರಗರ ಸಂಸ್ಕೃತಿ. ಸಾಮಾನ್ಯವಾಗಿ ಡಿಸೆಂಬರ್ ನಿಂದ ಮೇ ತಿಂಗಳವರೆಗೆ ಜೇನು ತೆಗೆಯುವ ಕೆಲಸದಲ್ಲಿ ಕೊರಗರು ತೊಡಗುತ್ತಾರೆ.

ಕಾಡಿನಲ್ಲಿ ಜೇನುನೊಣಗಳನ್ನು ಅರಸುತ್ತ ಅಲೆದಾಡುತ್ತಾರೆ. ಜೇನುನೊಣದ ಸ್ವರವನ್ನು ಹಿಂಬಾಲಿಸುವುದರಲ್ಲಿ ಮೂರು ವಿಧಗಳಿವೆ. ಮೊದಲನೆಯದಾಗಿ ಜೇನುನೊಣಗಳು ಮಕರಂದಕ್ಕಾಗಿ ಹೂವನ್ನು ಹುಡುಕುವ ಸ್ವರ, ನೊಣಗಳ ಆಟದ ಸ್ವರ ಮತ್ತು ಮಕರಂದವನ್ನು ಹೀರಿ ತನ್ನ ವಾಸಸ್ಥಾನಕ್ಕೆ (ಗೂಡಿಗೆ) ಸೇರುವ ಸ್ವರ. ಗೂಡಿಗೆ ನೊಣಗಳು ಹಾರುವ ಸ್ವರವನ್ನು ಅನುಸರಿಸಿ ಜೇನು ತೆಗೆಯುವ ಬುದ್ಧಿವಂತಿಕೆ ಕೊರಗರಲ್ಲಿ ಇದೆ. ಕೊರಗರು ಯಾವತ್ತೂ ಜೇನುಗೂಡನ್ನು ಸುಡುವುದಿಲ್ಲ, ಅಗಿದು ಧ್ವಂಸ ಮಾಡುವುದಿಲ್ಲ. ಅವುಗಳ ಮರಿಗಳು ದೊಡ್ಡದಾಗಿ ಜೇನು ಸಂಗ್ರಹವಾದ ಮೇಲೆ ತೆಗೆಯುವರು. ಆ ಗೂಡು ಮುಂದಿನ ತಲೆಮಾರಿಗೂ ಇರಲಿ ಅಥವಾ ಅದು ತನಗಲ್ಲದಿದ್ದರೂ ಇನ್ನು ಯಾರಿಗಾದರೂ ಸಿಗಲಿ ಎನ್ನುವ ಮನೋಭಾವ ಕೊರಗರದು. ಈ ರೀತಿಯ ಬುದ್ಧಿವಂತಿಕೆ ಇಡೀ ಸಮುದಾಯಕ್ಕೆ ಸ್ವಾಭಿಮಾನದ ಸಂಕೇತ. ಒಟ್ಟು ಸಮಾಜಕ್ಕೆ ಮಾದರಿಯ ಸಂದೇಶ.
- ಮತ್ತಡಿ ಕೊರಗ
ಕಾಯರ್ ಪಳಿಕೆ, ಬಂಟ್ವಾಳ




ಪೋಲಿಯೋ ಎಂಬ ಮಹಾಮಾರಿಗೆ ಸವಾಲಾದವರು; ಈಗ ಉಪನ್ಯಾಸಕರು!

ಇವರ ಹೆಸರು ದಿನಕರ ಕೆಂಜೂರು. ಉಡುಪಿ ಜಿಲ್ಲೆಯ ಕೆಂಜೂರಿನ ಕಲ್ಲುಗುಡ್ಡೆಯ ಸುಕ್ರ ಕೊರಗ ಮತ್ತು ಶಾಂತ ದಂಪತಿಯ ಮಕ್ಕಳಲ್ಲಿ ಒಬ್ಬರಾದ ದಿನಕರ ಕೊರಗ ಹುಟ್ಟುತ್ತಲೇ ಪೋಲಿಯೋ ಎಂಬ ಮಹಾಮಾರಿಗೆ ಒಳಗಾದರು. ಹುಟ್ಟು ಬಡತನ, ಕೌಟುಂಬಿಕ ಅನಕ್ಷರತೆ ಮತ್ತು ತನಗೆ ಸವಾಲೆನಿಸಿದ ಪೋಲಿಯೋ ಪೀಡಿತ ಭಿನ್ನ ದೇಹಾಕೃತಿಯನ್ನು ಮೆಟ್ಟಿ ನಿಲ್ಲುತ್ತಲೇ, ಸಾಧನೆಯ ಹಾದಿಯಲ್ಲಿ ಛಲದಂಕಮಲ್ಲನೆನೆಸಿಕೊಂಡವರು.
Photo: ಪೋಲಿಯೋ ಎಂಬ ಮಹಾಮಾರಿಗೆ ಸವಾಲಾದವರು; ಈಗ ಉಪನ್ಯಾಸಕರು!

ಇವರ ಹೆಸರು ದಿನಕರ ಕೆಂಜೂರು. ಉಡುಪಿ ಜಿಲ್ಲೆಯ ಕೆಂಜೂರಿನ ಕಲ್ಲುಗುಡ್ಡೆಯ ಸುಕ್ರ ಕೊರಗ ಮತ್ತು ಶಾಂತ ದಂಪತಿಯ ಮಕ್ಕಳಲ್ಲಿ ಒಬ್ಬರಾದ ದಿನಕರ ಕೊರಗ ಹುಟ್ಟುತ್ತಲೇ ಪೋಲಿಯೋ ಎಂಬ ಮಹಾಮಾರಿಗೆ ಒಳಗಾದರು. ಹುಟ್ಟು ಬಡತನ, ಕೌಟುಂಬಿಕ ಅನಕ್ಷರತೆ ಮತ್ತು ತನಗೆ ಸವಾಲೆನಿಸಿದ ಪೋಲಿಯೋ ಪೀಡಿತ ಭಿನ್ನ ದೇಹಾಕೃತಿಯನ್ನು ಮೆಟ್ಟಿ ನಿಲ್ಲುತ್ತಲೇ, ಸಾಧನೆಯ ಹಾದಿಯಲ್ಲಿ  ಛಲದಂಕಮಲ್ಲನೆನೆಸಿಕೊಂಡವರು.
ಬಾಲ್ಯದಲ್ಲೆ ತಾಯಿಯನ್ನು ಕಳೆದುಕೊಂಡರೂ ತಮ್ಮ ತಂದೆ, ಇಬ್ಬರು ತಮ್ಮಂದಿರು ಮತ್ತು ಓರ್ವ ತಂಗಿ ಹಾಗೂ 'ಊರುಗೋಲೆಂಬ ಜೀವ ಮಿತ್ರ'ನ ಸಹಾಯದಿಂದಲೇ ಉಡುಪಿ ಜಿಲ್ಲೆಯ ಶ್ರೀ ವೀರೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಬ್ಯಾಸವನ್ನು ಆರಂಭಿಸಿದರು. ಪ್ರೌಡಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕೊಕ್ಕರ್ಣೆ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಇವರು ಶಿರ್ವದ ಸೈಂಟ್ ಮೇರೀಸ್ ಕಾಲೇಜಿನಲ್ಲಿ ಬಿ.ಕಾಂ ಪೂರ್ಣಗೊಳಿಸಿದರು. ನಂತರ ಉನ್ನತ ವ್ಯಾಸಾಂಗಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸೇರ್ಪಡೆಗೊಂಡ ಇವರು ಎಂ.ಕಾಂ ಸ್ನಾತ್ತಕೋತ್ತರ  ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡರು.

2009ರಲ್ಲಿ ಮಂಗಳೂರು ವಿವಿ ವಾಣಿಜ್ಯ ಅಧ್ಯಯನ ಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಶೈಕ್ಷಣಿಕ ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದರು. ಸಾಧಿಸುವ ಛಲದ ಮುಂದೆ ಮಹಾಮಾರಿಯೊಂದು ಅಸಹಾಯಕ ಸ್ಥಿತಿಗೆ ತಲುಪಿದ  ಸ್ವಾರಸ್ಯವಿದು!!

ದಿನಕರ ಕೆಂಜೂರು - 'ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ' ಕರ್ನಾಟಕ ಮತ್ತು ಕೇರಳ (ರಿ) ಇದರ ಸಕ್ರೀಯ ಸದಸ್ಯರಾಗಿದ್ದಾರೆ.
- ಹೃದಯ
ಬಾಲ್ಯದಲ್ಲೆ ತಾಯಿಯನ್ನು ಕಳೆದುಕೊಂಡರೂ ತಮ್ಮ ತಂದೆ, ಇಬ್ಬರು ತಮ್ಮಂದಿರು ಮತ್ತು ಓರ್ವ ತಂಗಿ ಹಾಗೂ 'ಊರುಗೋಲೆಂಬ ಜೀವ ಮಿತ್ರ'ನ ಸಹಾಯದಿಂದಲೇ ಉಡುಪಿ ಜಿಲ್ಲೆಯ ಶ್ರೀ ವೀರೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಬ್ಯಾಸವನ್ನು ಆರಂಭಿಸಿದರು. ಪ್ರೌಡಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕೊಕ್ಕರ್ಣೆ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಇವರು ಶಿರ್ವದ ಸೈಂಟ್ ಮೇರೀಸ್ ಕಾಲೇಜಿನಲ್ಲಿ ಬಿ.ಕಾಂ ಪೂರ್ಣಗೊಳಿಸಿದರು. ನಂತರ ಉನ್ನತ ವ್ಯಾಸಾಂಗಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸೇರ್ಪಡೆಗೊಂಡ ಇವರು ಎಂ.ಕಾಂ ಸ್ನಾತ್ತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡರು.

2009ರಲ್ಲಿ ಮಂಗಳೂರು ವಿವಿ ವಾಣಿಜ್ಯ ಅಧ್ಯಯನ ಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಶೈಕ್ಷಣಿಕ ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದರು. ಸಾಧಿಸುವ ಛಲದ ಮುಂದೆ ಮಹಾಮಾರಿಯೊಂದು ಅಸಹಾಯಕ ಸ್ಥಿತಿಗೆ ತಲುಪಿದ ಸ್ವಾರಸ್ಯವಿದು!!

ದಿನಕರ ಕೆಂಜೂರು - 'ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ' ಕರ್ನಾಟಕ ಮತ್ತು ಕೇರಳ (ರಿ) ಇದರ ಸಕ್ರೀಯ ಸದಸ್ಯರಾಗಿದ್ದಾರೆ.
- ಹೃದಯ
 —

ಬುಟ್ಟಿ ಹೆಣೆಯುವ ಕೈಗಳು ಶಿಕ್ಷಣಕ್ಕೆ ಪ್ರೋತ್ಸಾಹವಿತ್ತಾಗ...


ಇದು ಮತ್ತೊಂದು ಸಂತೋಷದ ವಿಷಯ! ದೈಹಿಕವಾಗಿ ಮತ್ತು ಮಾನಸಿಕವಾಗಿ 'ಅಜಲು' ಎಂಬ ಅನಿಷ್ಠ ಮತ್ತು ನಿಷೇದಿತ 'ಬಿಟ್ಟಿ ಚಾಕರಿ' (ಉಚಿತ ಸೇವೆ)ಗೆ ಒಳಪಟ್ಟ ಕೊರಗ ಆದಿವಾಸಿ ಸಮುದಾಯ, ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ - ತಾವೂ ಕೂಡ ಏನನ್ನಾದರೂ ಸಾಧಿಸಬಲ್ಲೆವು ಮತ್ತು ತಾವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ!

ಬುಟ್ಟಿ ಹೆಣೆಯುತ್ತಾ, ಡೋಲು ಬಡಿಯುತ್ತಾ, ಸಮಾಜದಲ್ಲಿ ತೀರಾ ಕೆಳಮಟ್ಟಕ್ಕೆ ದೂಡಲ್ಪಟ್ಟ ಕೊರಗ ಸಮುದಾಯದ ಹಿರಿಯ ಜೀವಿಗಳು - ತಮ್ಮ ಮಕ್ಕಳು ಯಾವತ್ತೂ ಈ ತಮ್ಮಂತೆ ಪರರ ಬಿಟ್ಟಿ ಚಾಕರಿಗಾಗಿ ಬದುಕಬಾರದೆಂದು ಆಶಿಸಿದವರೇ.
ಅಂತಹುದೇ ಆಸೆ - ಆಕಾಂಕ್ಷೆಗಳನ್ನು ಹೊತ್ತ ಹಿರಿ ಜೀವವೇ ಸುಕ್ರ ಕೊರಗ. ಉಡುಪಿ ಜಿಲ್ಲೆಯ ಕೆಂಜೂರಿನ ಸುಕ್ರ ಕೊರಗ ಎಂಬವರ ಹಿರಿಯ ಮಗ ದೈಹಿಕ ಅನಾನುಕೂಲತೆಗೆ ಒಳಗಾದರೂ ಅವನನ್ನು ಶೇಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಏರಿಸಿದವರು. ಈಗ ಅವರ ಎರಡನೇ ಪುತ್ರನ ಸರದಿ! ಅಣ್ಣ ದಿನಕರ ಕೆಂಜೂರಿನಂತೆ ತಮ್ಮ ದಿನೇಶ್ ಕೂಡ ಶೈಕ್ಷಣಿಕ ರಂಗದಲ್ಲಿ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಕೋಲೇಜ್ನಲ್ಲಿ ಬಿಎಸ್ಡಬ್ಲ್ಯು ಮಾಡಿದ ದಿನೇಶ್, ಮಂಗಳೂರು ವಿವಿಯಲ್ಲಿ ಎಂಎಸ್ಡಬ್ಲ್ಯು ಮುಗಿಸಿ ಯುಜಿಸಿ - ನೆಟ್ ಲೆಕ್ಚರರ್ ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಕೊರಗ ಸಮುದಾಯದಿಂದ ಯುಜಿಸಿ ಪಾಸಾದ ಎರಡನೇ ಪ್ರತಿಭೆ ಎಂದು ಗುರುತಿಸಿಕೊಂಡಿದ್ದಾರೆ.

ಅಪ್ಪನಿಗೆ ಅಕ್ಷರದ ಅರಿವಿಲ್ಲದಿದ್ದರೂ, ತಮ್ಮಿಬ್ಬರು ಮಕ್ಕಳು 'ಅಕ್ಷರದ ಬೆಳಕಾಗುವ' ಮಟ್ಟಕ್ಕೆ ಬೆಳೆಸಿದ್ದಾರೆ. ತಂದೆ ಮಕ್ಕಳಿಗೆ ನಮ್ಮನಿಮ್ಮೆಲ್ಲರ ಪರವಾಗಿ ಪ್ರೀತಿಯ ವಂದನೆ... ಅಭಿನಂದನೆಗಳು...
- ಹೃದಯ


ಯುಜಿಸಿ ಪಾಸಾದ ಕೊರಗ ಸಮುದಾಯದ ಪ್ರಥಮ ಪ್ರತಿಭೆ..

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು ನಿದಾನವಾಗಿಯಾದರೂ ಶೈಕ್ಷಣಿಕ ರಂಗದಲ್ಲಿ ಅತ್ಯುತ್ತಮ ಎನ್ನಬಹುದಾದ ಸಾಧನೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಬಿತಾ ಗುಂಡ್ಮಿ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಗುಂಡ್ಮಿ ಎಂಬಲ್ಲಿ ಜನಿಸಿದ ಸಬಿತಾ, ಬಾಲ್ಯದಲ್ಲಿಯೇ ತನ್ನ ಹೆತ್ತವರನ್ನು ಕಳೆದುಕೊಂಡ ತಬ್ಬಲಿ. ಆದರೆ, ತನ್ನ ದೊಡ್ಡಮ್ಮ ಮತ್ತು ದೊಡ್ಡಪ್ಪನ ಆಸರೆಯಲ್ಲಿ - ಪ್ರೀತಿಯ ಹಾರೈಕೆಯಲ್ಲಿ ಬೆಳೆದ ಸಬಿತಾ, ಬ್ರಹ್ಮಾವರದಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದರು.
ಉಡುಪಿ ಜಿಲ್ಲೆಯ ಮಂಚಕಲ್ ಪೆರ್ನಾಲಿನ ಸಮಗ್ರ ಗ್ರಾಮೀಣ ಆಶ್ರಮ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಜೊತೆಗೆ ಕೆಲಸ ಮಾಡಿಕೊಂಡ ಸಬಿತಾ ತಾನೂ ಕಲಿಯಬೇಕೆಂಬ ಕನಸು ಕಂಡವರು. ಅವರ ಆಕಾಂಕ್ಷೆಗೆ ಸಮಗ್ರ ಗ್ರಾಮೀಣ ಆಶ್ರಮ ಬೆಂಬಲವಾಗಿ ನಿಂತಿತು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದ ಸಬಿತಾ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಸ್ಲೆಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗುವ ಮೂಲಕ ಕೊರಗ ಸಮುದಾಯದ ಪ್ರಪ್ರಥಮ ಯುಜಿಸಿ ತೇರ್ಗಡೆಗೊಂಡ ಸಾಧಕಿಯೆಂಬ ಕೀರ್ತಿಗೆ ಪಾತ್ರರಾದರು. ಆ ಮೂಲಕ ಒಟ್ಟು ಸಮಾಜ - ಕೊರಗ ಬುಡಕಟ್ಟು ಪಂಗಡವನ್ನು ಶೈಕ್ಷಣಿಕ ರಂಗದಲ್ಲಿಯೂ ಗುರುತಿಸುವಂತಾಯಿತು ಅಭಿನಂದನೆಗಳು ಸಬಿತಾ..
- ಹೃದಯ


ಕಾಸರಗೋಡಿನಲ್ಲಿ 'ಕನ್ನಡ'ದ ಸಾಧಕಿ!


ಮಲಯಾಳ ಭಾಷೆಯ ಪ್ರಭಾವಕ್ಕೆ ಭಾಗಶಃ ಒಳಗಾಗಿರುವ, ಕರ್ನಾಟಕದ ಗಡಿನಾಡು ಕಾಸರಗೋಡುನಲ್ಲಿ ಕೊರಗ ಸಮುದಾಯದ ಯುವತಿಯೊಬ್ಬಳು ಕನ್ನಡದಲ್ಲಿಯೇ ಸ್ನಾತ್ತಕೋತ್ತರ ಪದವಿ ಪೂರೈಸಿ ಸಮುದಾಯಕ್ಕೆ ಕೀರ್ತಿ ತಂದಿದ್ದಾಳೆ.

ವರ್ಕಾಡಿ ಗ್ರಾಮ ಪಂಚಾಯತಿನ ಬೊಡ್ಡೋಡಿಯ ಕೂಲಿಕಾರ್ಮಿಕ ವೃತ್ತಿಯ ಶೇಖರ ಕೊರಗ ಮತ್ತು ತುಕ್ರು ಎಂಬವರ ಮಗಳಾಗಿರುವ ಮೀನಾಕ್ಷಿ ಕೊರಗ ಎಂಬವಳೇ ಈ ಸಾಧನೆಗೈದವಳು.

ಬೊಡ್ಡೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಈಕೆ ಹತ್ತಿರದ ಕೊಡ್ಲುಮೊಗರು ವಾಣಿವಿಜಯ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿದರು. ಕನ್ಯಾನ ಕಾಲೇಜಿನಲ್ಲಿ ಪಿಯುಸಿ ಪಾಸಾದ ಮೀನಾಕ್ಷಿ, ಮಂಜೇಶ್ವರ ಗೋವಿಂದ ಪೈ ಸರಕಾರಿ ಸ್ಮಾರಕ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ. 2012ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡದಲ್ಲಿ ಎಂ.ಎ ಪೂರೈಸುವ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಆದಿವಾಸ ಕೊರಗ ಸಮುದಾಯದ ಸ್ನಾತ್ತಕೋತ್ತರ ಪದವಿ ಪೂರೈಸಿದ ಪ್ರಪ್ರಥಮ ಸಾಧಕಿಯಾಗಿ ಮೂಡಿ ಬಂದಿದ್ದಾರೆ.

ಇದೀಗ ಮೀಯಪದವಿನ ರತ್ನಾಕರ ಕೊರಗ ಎಂಬವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಅಭಿನಂದನೆಗಳು ಮೀನಾಕ್ಷಿ ಬೊಡ್ಡೋಡಿಯವರಿಗೆ...
- ಹೃದಯ

ಕಾಮೆಂಟ್‌ಗಳಿಲ್ಲ: