ಭಾನುವಾರ, ಜೂನ್ 30, 2013

ವಿಜ್ಞಾನ ನಗರಿಯ ವಿರೂಪಗಳು

   ಗೆಳೆಯ ಎಸ್.ಎಂ.ಮುತ್ತಯ್ಯ `ಕಿಲಾರಿ' ಎನ್ನುವ ಬ್ಲಾಗ್ ಆರಂಭಿಸಿದ್ದಾರೆ. ಅವರ ಮೊದಲ ಬರಹವನ್ನು ಕನ್ನಡ ಜಾನಪದ ಬ್ಲಾಗ್ ನಲ್ಲೂ ಪ್ರಕಟಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಸಾಂಸ್ಕೃತಿಕ ವೈವಿದ್ಯದಿಂದ ಕೂಡಿದ್ದು. ಅದರ ಸೂಕ್ಷ್ಮಗಳನ್ನು ಕಿಲಾರಿಯಲ್ಲಿ ಮುತ್ತಯ್ಯ ಪ್ರಕಟಿಸುತ್ತಾ ಹೋಗಲಿ ಎನ್ನುವುದು ನಮ್ಮ ಆಶಯ.

-ಅರುಣ್ ಜೋಳದಕೂಡ್ಲಿಗಿ

ಲಿಂಕ್:http://kilarisamskruthi.blogspot.in/2013/06/blog-post_30.html



- ಡಾ.ಎಸ್.ಎಂ. ಮುತ್ತಯ್ಯ

 
          ಚಳ್ಳಕೆರೆ ತಾಲ್ಲುಕಿನ ನೇರ್‍ಲಗುಂಟೆ ಹಾಗೂ ವರವು ಕಾವಲುಗಳಲ್ಲಿ ಅಭಿವೃಧ್ಧಿಯ ಹೆಸರಿನಲ್ಲಿ ಸುಮಾರು ೯೭೨೩ ಎಕರೆ ಜಿಲ್ಲಾ ಸಂರಕ್ಷಿತ ಅರಣ್ಯವನ್ನು ವಶಪಡಿಸಿಕೊಂಡು ವಿವಿಧ ರೀತಿಯ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ. ಈ ಬಗ್ಗೆ ಪ್ರ.ವಾ.ಯ ಏ. ೧೧ ರ ಸಂಚಿಕೆಯಲ್ಲಿ ನಾಗೇಶ್ ಹೆಗಡೆಯವರ ವಿಚಾರಗಳಿಗೆ ಏ. ೧೮ ರ ಸಂಚಿಕೆಯಲ್ಲಿ ಎಸ್. ಶಿವಣ್ಣ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅದೇ ಭೂ ಭಾಗದಲ್ಲಿ ಬೆಳೆದ ನನ್ನ ಅನುಭವಗಳ ಹಿನ್ನೆಲೆಯಲ್ಲಿ ಕೆಲವು ಅಭಿಪ್ರಾಯಗಳನ್ನು ಹೇಳಲೇ ಬೇಕಾಗಿದೆ. 
 
ಎಸ್ ಶಿವಣ್ಣ ಅವರು ’ಖುದಾಪುರ ಪಾರಂ ಗೆ ಎಲ್ಲಾ ಬರಲಿ , ಬೆಲ್ಲವೇ ಇರಲಿ’ ಎಂದು ಬಯಸಿದ್ದಾರೆ. ಹಾಗೆಯೇ ’ಕೆಲಸಕ್ಕೆ ಬಾರದ ಹಾಳು ಕೊಂಪೆಯಂತಿದ್ದ ಈ ಕಾಡು ಹಲವು ಯೋಜನೆಗಳ ಬೀಡಾಗುತ್ತಿರುವುದು ಇಡೀ ಈ ಪ್ರದೇಶದ ಜನರಿಗೆ ಸಂತೋಷವಾಗಿದೆ’ ಎಂದು ಭಾವಿಸಿದ್ದಾರೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ವಿವಿಧ ರೀತಿಯ ಕಾಮಗಾರಿಗಳು ಹಾಗೂ ಅದರಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಗಮನಿಸಿದರೆ ಇವರ ಈ ಎರಡೂ ಬಯಕೆಗಳು ಖಂಡಿತಾ ತಮಾಷೆಯಾಗಿವೆ. ಶಾಲೆಯಿಂದ ಹೋಗಿಬರುವ ಹೊರಸಂಚಾರದ ನೆಪದಲ್ಲಿ ನೋಡುವ ಖುದಾಪುರದ ಕುರಿ ಸಂವರ್ಧನಾ ಕೇಂದ್ರ ಹಾಗೂ ಅಲ್ಲಿನ ಸ್ವಲ್ಪ ಪ್ರದೇಶಕ್ಕೆ ಶಿವಣ್ಣ ಅವರ ಮಾತುಗಳು ಸೀಮಿತವಾಗಿವೆ. ಕುರಿ ಸಂವರ್ಧನಾ ಕೇಂದ್ರದ ನಿವರ್ಹಣೆ ಸರಿಯಾಗದೇ ಸರ್ಕಾರಕ್ಕೆ ಹೊರೆಯಾಗಿತ್ತು, ಅದರ ಬದಲಿಗೆ ಈ ಸಂಶೋಧನಾ ಕೇಂದ್ರಗಳು ಬಂದಿದ್ದು ಸೂಕ್ತವಾಗಿದೆ ಎಂಬ ಭಾವ ಇಲ್ಲಿ ಮುಖ್ಯವಾದಂತಿದೆ.  
 
  ಆದರೆ ಇಲ್ಲಿ ನಿಜವಾದ ಸಮಸ್ಯೆ ಇರುವುದು ೯೭೨೩ ಎಕರೆ ಪ್ರದೇಶದ ಕಾವಲುಗಳನ್ನು ಅವಲಂಭಿಸಿ ಬದುಕುತಿದ್ದ ಹಳ್ಳಿಗಳ ಪಶುಪಾಲಕ ಹಾಗೂ ಕೂಲಿಮಾಡುವ ಜನರಲ್ಲಿ. ಹಾಗಾಗಿ  ಸುತ್ತ ಮುತ್ತಲಿನ ಸುಮಾರು ನೂರಾರು ಗ್ರಾಮಗಳಲ್ಲಿ ಈ ಕಾವಲುಗಳನ್ನು ಅವಲಂಭಿಸಿ ಬದುಕುತಿದ್ದ ಜನ ಇಂದು ತಲುಪಿರುವ ಸ್ಥಿತಿಯನ್ನು ಅಗತ್ಯವಾಗಿ ಗಮನಿಸಬೇಕಾಗಿದೆ. ಆಗ ಇಲ್ಲಿಗೆ ಬರುವುದೆಲ್ಲವೂ ಬೆಲ್ಲವೇ ಆಗುವುದಿಲ್ಲ ಎಂಬುದು ಮನವರಿಕೆಯಾಗುತ್ತದೆ.
 
ಈ ಭಾಗದಲ್ಲಿ ಬದುಕುತ್ತಿರುವ ಜನರಲ್ಲಿ ಬಹುಪಾಲು ಜನ ಪಶುಪಾಲನೆಯನ್ನು ಪ್ರಧಾನ ವೃತ್ತಿಯನ್ನಾಗಿಸಿಕೊಂಡವರು. ಈ ಗುಂಪಿನಲ್ಲಿ ಕುರಿ-ಮೇಕೆ ಸಾಕುವವರ ಸಂಖ್ಯೆ ದೊಡ್ಡದು. ಕೆಲವೇ ವರ್ಷಗಳ ಹಿಂದೆ ಇಲ್ಲಿನ ಹಲವಾರು ಕುಟುಂಭಗಳಲ್ಲಿ ಸಾವಿರಾರು ಸಂಖ್ಯೆಯ ಕುರಿ ಮೇಕೆಗಳಿದ್ದು ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿದ್ದರು. ಕಳೆದ ಕೆಲವಾರು ವರ್ಷಗಳಲ್ಲಿ ಕಾವಲುಗಳ ಒತ್ತುವರಿ ಪ್ರದೇಶದಲ್ಲಿ ಸ್ಥಿತಿವಂತರೇ ಜಮೀನಿಗಾಗಿ ಕಾಡನ್ನು ನಾಶಪಡಿಸಿದರು. ಇಷ್ಟರಿಂದಲೇ ಘಾಸಿಗೊಂಡಿದ್ದ ಈ ಜನ ವಿಜ್ಞಾನ ನಗರಿ ಮಾಡಲು ಬಂದು ಬಹುಪಾಲು ಕಾವಲನ್ನು ವಶ ಪಡಿಸಿಕೊಂಡಿರುವುದರಿಂದ ಮುಂದೇನು ಮಾಡಬೇಕೆಂದು ತೋಚದವರಾಗಿದ್ದಾರೆ. ತಮ್ಮ ಕುರಿ ಹಾಗೂ ಮೇಕೆ ಸಾಕಾಣಿಕೆಗೆ ಕಾವಲುಗಳು ಸಿಗುವುದಿಲ್ಲವೆಂದು ತಿಳಿದಾಗ ತಮ್ಮ ಕುರಿ ಮೇಕೆಗಳನ್ನು ಮಾರಿದ್ದಾರೆ.  ಇದಿಷ್ಟೇ ಅಲ್ಲದೇ ಈ ಕಾವಲುಗಳಲ್ಲಿ ದೊರೆಯುತ್ತಿದ್ದ ಕಾರೆ ಹಾಗೂ ಕೌಳೆ ಹಣ್ಣುಗಳನ್ನು ಕಿತ್ತು ತಂದು ಮಾರಿ ಜೀವನ ನಡೆಸುತ್ತಿದ್ದರು. ಹಾಗೆಯೇ ಈ ಕಾವಲಿನ ಒಳಗೆ ಹುತ್ತಗಳಲ್ಲಿ ಸಿಗುತ್ತಿದ್ದ ಹುತ್ತದ ಹುಳಗಳನ್ನು ಹಿಡಿದು ಪೇಟೆಯಲ್ಲಿ ಮಾರಿ ಜೀವಿಸುತ್ತಿದ್ದ ಅದೆಷ್ಟೋ ಕುಟುಂಭಗಳಿದ್ದವು. ಇಲ್ಲಿ ದೊರೆಯುತ್ತಿದ್ದ ಈಚಲು ಹಾಗೂ ಹೂಲಿ ಗಿಡಗಳ ಕಡ್ಡಿಗಳಿಂದ ಪೊರಕೆ, ಬುಟ್ಟಿ ಮಾಡಿ ಜೀವಿಸುತ್ತಿದ್ದ  ನೂರಾರು ಸಂಸಾರಗಳಿದ್ದವು. ಒಟ್ಟಾರೆ ಹತ್ತಾರು ರೀತಿಯ ಬುಕಿನ ಮಾರ್ಗಗಳು ಅಲ್ಲಿದ್ದವು. ಜೊತೆಗೆ ಇಲ್ಲಿನ ಮ್ಯಾಸಬೇಡ ಬುಡಕಟ್ಟಿನ ಹಲವು ಪೂಜಾ ನೆಲೆಗಳು ಸದರಿ ಕಾವಲುಗಳಲ್ಲಿದ್ದವು. ಕಾಡಿನಲ್ಲಿ ವಿಶೇಷವಾದ ಜಿಂಕೆಗಳ ದೊಡ್ಡ ಸಮೂಹವೇ ಇತ್ತು ;  ಈಗ ಈ ಕಾವಲು ಪ್ರದೇಶದ ಬಹು ಭಾಗಕ್ಕೆ ಎರಡು ಆಳೆತ್ತರದ ಗೋಡೆಯನ್ನು ನಿರ್ಮಿಸಿದ್ದರ ಪರಿಣಾಮ  ಜನ ಹಾಗೂ ಪ್ರಾಣಿ- ಪಕ್ಷಿಗಳು ಬೀದಿಗೆ ಬಿದ್ದಿದ್ದಾರೆ.
 
    ಎಲ್ಲ್ಲರು ಹೇಳುವಂತೆ  ಈ ಕೇಂದ್ರಗಳು ದೇಶದ ಅಭಿವೃದ್ದಿಯಲ್ಲಿ ಬಹಳ ಮುಖ್ಯ. ಇಂತಹ ಮಹತ್ವದ ಕೇಂದ್ರಗಳನ್ನು ಹೊಂದಿದ ಕೀರ್ತಿ ನಮ್ಮ ಭಾಗದ್ದು. ಇವುಗಳಿಗೆ ಸ್ಥಾನ ಕೊಡುವುದರ ಮೂಲಕ ನಮ್ಮ ಊರನ್ನು ಜಗತ್ತಿನ ಭೂಪಟದಲ್ಲಿ ಮೂಡಿಸುತ್ತೇವೆ ಎಂಬ ಎಂಬ ಹೆಮ್ಮೆಯನ್ನು ಇಲ್ಲಿನ ಬಹುಪಾಲು ಜನ  ಹೊಂದಿದ್ದರು.  ಇದರ ಪರಿಣಾಮ ಸ್ವಲ್ಪ ಅಸಮಾಧಾನದಿಂದಲೆ ತಮ್ಮ ಕುರಿ-ಮೇಕೆಗಳನ್ನು, ಕೇಂದ್ರಗಳು ನಿರ್ಮಾಣವಾಗಲಿರುವ ಪ್ರದೇಶಗಳ ಸುತ್ತಾ ಮುತ್ತಲಿನ ತಮ್ಮ ಖಾತೆಯಿರುವ ಜಮೀನುಗಳನ್ನು ಉಧ್ಯಮಿಗಳಿಗೆ ಮಾರಿದರು. ಆದರೆ ಈ ಭಾವನೆ ಬಹಳ ಕಾಲ ಉಳಿಯಲಿಲ್ಲ . ಚಾಲಕ ರಹಿತ ಯುದ್ಧವಿಮಾನ ಪರೀಕ್ಷಾ ಕೇಂದ್ರದ ವಿಮಾನಗಳು ಕರ್ಣಪಟಲ ಹರಿದು ಹೋಗುವಷ್ಟು ಶಬ್ಧಮಾಡುತ್ತಾ ಹಾರಾಡಿದಾಗ; ಕಾವಲಿಗೆ ರಕ್ಷಣೆಯ ನೆಪದಲ್ಲಿ ಎತ್ತರದ ಗೋಡೆ ನಿರ್ಮಿಸಿದಾಗ; ಈ ಕೇಂದ್ರಗಳಲ್ಲಿ ನಮ್ಮ  ಓದಿದ ಮಕ್ಕಳಿಗೆ ನೌಕರಿ ಸಿಗುತ್ತೆ ಎಂದು ಕೊಂಡವರಿಗೆ  ’ಡಿ’ ಗ್ರೂಪ್ ನೌಕರಿಗೂ ಇಂಗ್ಲೀಷ್ ಹಾಗೂ ಹಿಂದಿ ಕಡ್ಡಾಯ ಎಂಬುದಾಗಿ ಜಾಹಿರಾತು ಬಂದಾಗ; ಉನ್ನತ ಮಟ್ಟದ ಬಹಳಷ್ಟು ಜನ ಇಲ್ಲಿಗೆ ಬರುವುದರಿಂದ ಅವರಿಗೆ ಬೇಕಾದ ವಸ್ತುಗಳ ವ್ಯಾಪಾರ ಮಾಡಬಹುದು ಎಂದುಕೊಂಡವರಿಗೆ ’ಇದು ಮಿಲಿಟರಿ ನೆಲೆಯಾದ್ದರಿಂದ ಆಹಾರವೂ ಸೇರಿದಂತೆ ಎಲ್ಲವೂ ನೇರವಾಗಿ ಅಲ್ಲಿಗೆ ಪೂರೈಕೆಯಾಗುತ್ತದೆ. ಸಣ್ಣ ಬೆಂಕಿಪೊಟ್ಟಣವನ್ನು ಸಹಾ ಯಾರೂ ಕೊಳ್ಳುವುದಿಲ್ಲ.’ ಎಂದು ತಿಳಿದಾಗ ಸಮಸ್ಯೆಯ ಅರಿವಾಗಿದೆ. ಆದರೆ  ಕಾಲ ಮಿಂಚಿಹೋಗಿದೆ. ಈಗ ಈ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವಂತೆಯೂ ಇಲ್ಲ. ಅವುಗಳೊಟ್ಟಿಗೆ ಬದುಕುವಂತೆಯೂ ಇಲ್ಲ. ಬಾಯಲ್ಲಿ ಬಿಸಿ ತುಪ್ಪ ಹಾಕಿಕೊಂಡ ಸ್ಥಿತಿ ಈ ಭಾಗದ ಜನರದಾಗಿದೆ. 
 
 
   ನಾಗೇಶ್ ಹೆಗಡೆಯವರು ತಮ್ಮ ಲೇಖನದಲ್ಲಿ ವಿವರಿಸಿರುವಂತೆ ಯಾವುದೇ ಯೋಜನೆಯ ಜಾರಿಯಿಂದಾಗುವ ಪರಿಣಾಮಗಳ ಯೋಚಿಸಿದೇ ಇರುವ ಆಡಳಿತದ ಅಸ್ಸೀಮ ನಿರ್ಲಕ್ಷೆಯಿಂದಲೇ ಇಂಥ ಅವಘಡಗಳು ಪದೆ ಪದೆ ಜರಗುತ್ತವೆ.  ಅಧಿಕಾರ ವ್ಯವಸ್ಥೆಗಳು ಯಾವಾಗಲೂ ಮಾಡಿರುವುದು ಇದೇ ಬಗೆಯ ತಂತ್ರಗಳನ್ನೇ. ಇಂಥ ಅಧಿಕಾರ ತಂತ್ರಗಳ ನಡುವೆ ನಾಶವಾಗುವವರು ಸಾಮಾನ್ಯ ಜನ ಮಾತ್ರ. ಭೂಮಿ ಸರ್ಕಾರದ್ದು ಎಂದಾಕ್ಷಣ ಏನನ್ನಾದರೂ ಮಾಡಬಹುದೆಂಬ ಮನೋಭಾವನೆಗಳು ಹೆಚ್ಚಾಗಿವೆ. ಹಾಗಾಗಿಯೇ ಇಂಥ ಯೋಜನೆಗಳನ್ನು ಆರಂಭಿಸುವಾಗ ಜನರ ಅಭಿಪ್ರಾಯಗಳಿಲ್ಲದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಾರೆ. ಕಳೆದ ಎರಡು ದಿನಗಳ ಹಿಂದೆ ( ಏ.೧೯)  ಅರಣ್ಯವಾಸಿಗಳ ಭೂಮಿ ಹಕ್ಕಿನ ಬಗ್ಗೆ ಸುಪ್ರಿಂ ಕೋರ್ಟ್  ನೀಡಿರುವ ಒಂದು ತೀರ್ಪು ಇಲ್ಲಿ ಗಮನಾರ್ಹ. ಆ ತೀರ್ಪಿನಲ್ಲಿ ಹೇಳಿರುವಂತೆ ’ ಸ್ಥಳೀಯ ಜನರ ಸಾಮಾಜಿಕ ,ರಾಜಕೀಯ  ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸುವುದು ಬಹಳ ಮುಖ್ಯ. ಆದ್ದರಿಂದ ಯಾವುದೇ ಕೈಗಾರಿಕೆಯನ್ನು ಸ್ಥಾಪಿಸುವ ಮೊದಲು ಆಯಾ ಸ್ಥಳಗಳ ಗ್ರಾಮ ಸಭೆಗಳ ಅನುಮತಿ ಕಡ್ಡಾಯವಾಗಬೇಕು’ ಎಂದು ಅಭಿಪ್ರಾಯ ಪಟ್ಟಿದೆ. ಹಾಗೆಯೇ ಮುಂದುವರೆದು ’ಪರಿಶಿಷ್ಟ ಪಂಗಡ ಹಾಗೂ ಅರಣ್ಯ ವಾಸಿಗಳು  ತಮ್ಮ ನೆಲದ ಜೊತೆ ಭಾವನಾತ್ಮಕ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ಎಲ್ಲಾ ಹಕ್ಕನ್ನು ಪಡೆದಿದ್ದಾರೆ. ಕೃಷಿಯ ಜೊತೆಗೆ ಕಿರು ಅರಣ್ಯ ಉತ್ಪನಗಳನ್ನು ಸಂಗ್ರಹಿಸಿ ಮಾರಾಟಮಾಡಿಕೊಂಡು ಜೀವನ ನಿರ್ವಹಣೆ ಮಾಡುವ ಹಕ್ಕನ್ನೂ ಹೊಂದಿದ್ದಾರೆ.’ ಎಂಬುದನ್ನು ಒತ್ತಿ ಹೇಳಿದೆ. ಈ ನಡುವೆ ಬಹಳಷ್ಟು  ಮುಗ್ದ ಜನ  ಈ ಬಗ್ಗೆ  ಕೇಳುತ್ತಿರುವ ಪ್ರಶ್ನೆಗಳೆಂದರೆ : ಮುಖ್ಯವಾಗಿ ಈ ಕೇಂದ್ರಗಳ ಸ್ಥಾಪನೆ ಬಗ್ಗೆ  ನಮಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ ಏಕೆ? ಇವುಗಳ ನಿರ್ಮಾಣಕ್ಕೆ ನಿಜವಾಗಿಯೂ  ಇಷ್ಟೊಂದು ಜಮೀನು ಬೇಕಿತ್ತಾ ? ನಾವು ದೇಶಕ್ಕೆ ವಿಶೇಷವಾದ ನೆರವು ನೀಡಿದೆವು ಎಂದ ಮೇಲೆ ದೇಶ ನಮಗೆ ಕೊಟ್ಟ ವಿಶೇಷ ಕೊಡುಗೆ ಏನು? ಬದುಕಿಗೆ ಆಧಾರವಾಗಿದ್ದ ಕಾವಲನ್ನು ಕಳೆದುಕೊಂಡ ನಮಗೆ ಮುಂದಿನ ದಾರಿಯಾವುದು? ಈ ಪ್ರಶ್ನೆಗಳಿಗೆ ಉತ್ತರ ಹೇಳುವವರು ಯಾರು ?

ಮಂಗಳವಾರ, ಜೂನ್ 25, 2013

ಟಂ ಟಂ ಗಾಡಿಗಳ ಕರ್ನಾಟಕ

-ಅರುಣ್ ಜೋಳದಕೂಡ್ಲಿಗಿ


Photo: ಕರ್ನಾಟಕದ ತುಂಬಾ ಇಂಥಹ ಪುಟ್ಟ ಪುಟ್ಟ ಟೆಂಪೋ..ಆಟೋಗಳು ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸಲು ತುಂಬಾ ಸಹಕಾರಿಯಾಗಿದೆ. ಇವುಗಳನ್ನು ನಿಮ್ಮ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯಬಹುದು. ಹಾಗೆ ಭಿನ್ನ ಹೆಸರುಗಳಿದ್ದರೆ ತಿಳಿಸಿ. ಉದಾ: ಹಾವೇರಿ ಜಿಲ್ಲೆಯಲ್ಲಿ `ಖಾಟುಮಾ’ ಎಂದು ಕರೆಯುತ್ತಾರೆ.









ಬೆಟ್ಟಗುಡ್ಡ, ಕಾಡಿನ ದಾರಿಯಲ್ಲಿ ಒಂದು ಟೆಂಪೋ. ಅದರಲ್ಲಿ ಒಂದಿಬ್ಬರು ಕುಳಿತು ಎಂಟ್ಹತ್ತು ಜನ ನಿಂತಿದ್ದಾರೆ, ಜತೆಗೆ ಒಂದೆರಡು ನಾಯಿಗಳನ್ನು ಹಿಡಿದಿದ್ದಾರೆ. ಅವರ ಜೊತೆ ಇರುವ ಈಟಿ, ಕತ್ತಿ, ಬಲೆಗಳನ್ನು ನೋಡಿದರೆ, ಅದು ಬೇಟೆಗೆ ಹೊರಟ ತಂಡದಂತೆ ಕಾಣುತ್ತದೆ. ಈ ಗಾಡಿಯನ್ನು ಚಿಕ್ಕ ಹುಡುಗಿಯರು ಕುತೂಹಲದಿಂದ ನೋಡುತ್ತಿದ್ದಾರೆ...
ಮೇಲಿನದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ `ಮಾಯಾಲೋಕ' ಕಾದಂಬರಿಯ ಮುಖಪುಟ. ಅದರೊಳಗಿನಿಂದ ಜೀವ ತಳೆದ ಟಂ ಟಂ ಗಾಡಿಗಳು ನಾಡಿನುದ್ದಕ್ಕೂ ಗ್ರಾಮೀಣ ಪ್ರದೇಶಗಳಲ್ಲಿ ಇದೀಗ ಸಂಚರಿಸುತ್ತಿವೆ ಅನ್ನಿಸುತ್ತದೆ. `ಮಾಯಾಲೋಕ'ದ ದಿನಗಳಲ್ಲೇ ಮುಂದೊಂದು ದಿನ ಗ್ರಾಮೀಣ ಭಾಗಗಳಲ್ಲಿ ಇಂಥ ಟಂ ಟಂ ಗಾಡಿಗಳೇ ತುಂಬಿರುತ್ತವೆ ಎಂದು ತೇಜಸ್ವಿ ಊಹಿಸಿದ್ದರೆ ಅನ್ನಿಸುತ್ತದೆ.
ಇಂದು ಕರ್ನಾಟಕದ ಯಾವುದೇ ಮೂಲೆಯ ಒಂದು ಸಣ್ಣ ಹಳ್ಳಿಯನ್ನೂ ನಾವು ಹೆಚ್ಚು ತ್ರಾಸಿಲ್ಲದೆ ತಲುಪಬಹುದು. ಹಾಗೆ ತಲುಪಿಸಲು ಹಳ್ಳಿ ಸಮೀಪದ ನಗರದಿಂದಲೋ, ಸಣ್ಣ ಪಟ್ಟಣದಿಂದಲೋ ಮಿನಿ ಟೆಂಪೋ, ಟ್ರಕ್ಕು, ಟಂ ಟಂ ಗಾಡಿಗಳು ಕಾದಿರುತ್ತವೆ. ಹತ್ತು ವರ್ಷದಷ್ಟು ಹಿಂದೆ ಸರಿದರೆ, ಈ ಸುಲಭ ಸಂಪರ್ಕ ಸಾಧ್ಯವಿರಲಿಲ್ಲ. ಬೆಳಗಿನ ಒಂದೋ ಎರಡೋ ಬಸ್ಸುಗಳು ತಪ್ಪಿದರೆ ಆ ದಿನ ಮುಗಿದುಹೋದಂತೆಯೇ!
ಇರುವ ಒಂದೆರಡು ಬಸ್ಸುಗಳಲ್ಲೋ ಜೇನುಗೂಡಿನಂತೆ ಮುಕರಿಕೊಂಡ ಜನ. ಉಸಿರುಗಟ್ಟಿಸುವ ಪಯಣ. ಮುಖ್ಯರಸ್ತೆಗೆ ಹೊಂದಿಕೊಂಡ ಐದಾರು ಮೈಲಿ ದೂರದ ಊರುಗಳನ್ನು ಕಾಲುನಡಿಗೆಯಲ್ಲಿ ತಲುಪಬೇಕಾಗಿತ್ತು. ಈ ಸಂಚಾರದ ಚಿತ್ರಗಳು ಹತ್ತು ವರ್ಷದ ಅಂತರದಲ್ಲಿ ಸಾಕಷ್ಟು ಬದಲಾಗಿವೆ. ಕಡಿಮೆ ಬಂಡವಾಳದಲ್ಲಿ ಸಣ್ಣ ವಾಹನಗಳನ್ನು ಕೊಳ್ಳಲು ಸಾಧ್ಯವಾದ ಮೇಲೆ, ರಾಜ್ಯದಾದ್ಯಂತ ಗ್ರಾಮೀಣ ಸಾರಿಗೆಯಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದೆ.
ಗ್ರಾಮೀಣ ಸಮಾಜದಲ್ಲಿ ಟಂ ಟಂ ಗಾಡಿ ಉಂಟು ಮಾಡಿರುವ ಕೆಲವು ಚಿತ್ರಗಳನ್ನು ಗಮನಿಸಿ: ಮಧ್ಯರಾತ್ರಿಯಲ್ಲಿ ದಿನ ತುಂಬಿದ ಗರ್ಭಿಣಿಗೆ ಹೆರಿಗೆ ನೋವು. ತಕ್ಷಣ ನೆನಪಾಗುವುದು ಟಂ ಟಂ ಗಾಡಿಯ ಬಸಣ್ಣ. ಆತ ಕಣ್ಣುಜ್ಜಿಕೊಳ್ಳುತ್ತ ತನ್ನ ಗಾಡಿಯನ್ನು ಸ್ಟಾರ್ಟ್ ಮಾಡುತ್ತಾನೆ. ಇರುಳಿನಲ್ಲೇ ಪಟ್ಟಣದ ಆಸ್ಪತ್ರೆಗೆ ಟಂ ಟಂ ಗಾಡಿಯ ಮೂಲಕ ಜೀವಯಾನ. ಹೆರಿಗೆ ಸುಸೂತ್ರ. ಮತ್ತದೇ ಟಂ ಟಂ ಗಾಡಿ, ಮರುದಿನ ಸಂಜೆ ತಾಯಿ ಮಗುವನ್ನು ಮನೆ ಸೇರಿಸುತ್ತದೆ. ಮನೆಯವರು ಬಸಣ್ಣನಿಗೆ `ನಿಂಗೆ ಒಳ್ಳೇದಾಗ್ಲಪ್ಪಾ, ಒಳ್ಳೆ ಟೈಮಿಗೆ ದೇವ್ರ ಬಂದಂಗೆ ಬಂದೆ' ಎನ್ನುತ್ತಾರೆ.
ದುರುಗಪ್ಪ ಎಂಟು ಚೀಲ ಮೆಕ್ಕೆಜೋಳ ಬೆಳೆದಿದ್ದಾನೆ. ಟೆಂಪೋ ಸಿದ್ದಣ್ಣನಿಗೆ ಮೊಬೈಲು ಹಚ್ಚುವ ಆತ, ಗಾಡಿಯನ್ನು ಹೊಲಕ್ಕೆ ತರಲು ಹೇಳುತ್ತಾನೆ. ಬೆಳಗ್ಗೆಯೇ ಮಾರ್ಕೆಟ್ಟಿಗೆ ಹೋದ ಕಾರಣ ಒಳ್ಳೆಯ ರೇಟೂ ಸಿಕ್ಕು ಸಿದ್ದಣ್ಣ ಖುಷಿಯಾಗುತ್ತಾನೆ.
ಎತ್ತುಗಳನ್ನು ಎರಡು ಮೂರು ದಿನ ನಡೆಸಿಕೊಂಡು ಸಂತೆಗೆ ಹೋಗುತ್ತಿದ್ದ ದನದ ವ್ಯಾಪಾರಿ ಮೂಗಜ್ಜನಿಗೆ ಟಂ ಟಂ ಗಾಡಿ ವರದಾನವಾಗಿದೆ. ಈಗ ಟೆಂಪೋ ಗಾಡಿಗಳಲ್ಲಿ ಎತ್ತುಗಳನ್ನು ನಿಲ್ಲಿಸಿಕೊಂಡು ದಣಿವಿಲ್ಲದೆ ಸಂತೆ ತಲುಪುತ್ತಾನೆ. ಹತ್ತಾರು ಜನ ಕೂಲಿಗಳು ಟೆಂಪೋ ಹತ್ತಿ ದೂರದ ಹೊಲ ತಲುಪಿ ಕಬ್ಬು ಕಟಾವಿಗೆ ಸಜ್ಜಾಗುತ್ತಾರೆ.
ಟಂ ಟಂ ಗಾಡಿಗಳೊಂದಿಗೆ ಬೆಸೆದುಕೊಂಡ ಚಿತ್ರಗಳು ಒಂದೇ ಎರಡೇ... ಈ ಗಾಡಿಗಳು ನಾಡಿನ ದೈನಿಕದ ಒಂದು ಭಾಗವೇ ಆಗಿವೆ.
ಗ್ರಾಮೀಣರ ಪುಷ್ಪಕ
ಪಟ್ಟಣ ನಗರಗಳಿಂದ ಹಳ್ಳಿಗಳಿಗೆ ತಲುಪುವ ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲು ಟೀಚರಮ್ಮಂದಿರು, ಮೇಷ್ಟ್ರುಗಳು, ಅಂಗನವಾಡಿ ಕಾರ್ಯಕರ್ತೆ, ದಾದಿ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಮಿನಿ ಗಾಡಿಗಳೇ ಪುಷ್ಪಕಗಳು. ಗ್ರಾಮೀಣ ಭಾಗದಿಂದ ನಗರಕ್ಕೆ ಓದಲು ಹೋಗುವ ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚಳಕ್ಕೂ ಮಿನಿಗಾಡಿಗಳ ಸಾರಿಗೆ ಸಂಪರ್ಕಕ್ಕೂ ಸಂಬಂಧವಿದೆ.
ಕಾಡು ಬೆಟ್ಟಗುಡ್ಡಗಳ ದುರ್ಗಮ ಪ್ರದೇಶಗಳಲ್ಲಿರುವ ಹಳ್ಳಿ ಹುಡುಗಿಯರು ಹೈಸ್ಕೂಲು ಕಾಲೇಜಿಗೆ ಹೋಗುವಲ್ಲಿ ಈ ಟೆಂಪೋಗಳ ಪಾಲು ದೊಡ್ಡದಿದೆ. `ಮಗಳು ತಮ್ಮ ಹಳ್ಳಿಯಿಂದ ನೇರ ನಗರಕ್ಕೆ ಟೆಂಪೋದಲ್ಲಿ ಹೋಗಿ ಬರುತ್ತಾಳೆ, ಟೆಂಪೋ ನಮ್ಮೂರಿನವರದೆ' ಎನ್ನುವ ನಂಬಿಕೆ ಇವರನ್ನು ಶಾಲೆಗೆ ಕಳಿಸಲು ಪ್ರೇರೇಪಿಸಿದಂತಿದೆ.
ಹಳ್ಳಿಗಳಿಂದ ನಗರಕ್ಕೆ ಹೋಗುವ ಮಿನಿಗಾಡಿಗಳಲ್ಲಿ ರಸ್ತೆಪಕ್ಕ ಹೊಲವಿರುವ ರೈತರು ಹತ್ತುತ್ತಾರೆ. ಸಂಜೆ ವೇಳೆ ನಗರದಿಂದ ಮರಳುವ ಮಿನಿಗಾಡಿಗಳು ಆಯಾ ಹೊಲದ ರೈತರನ್ನೂ ಹತ್ತಿಸಿಕೊಂಡು ಬರುತ್ತದೆ. ಆಗ ಸಣ್ಣ ಹುಲ್ಲಿನ ಕಟ್ಟೋ, ಕಟ್ಟಿಗೆ ಹೊರೆಯೋ, ಖಾಲಿಕೊಡ, ಬುತ್ತಿಗಂಟುಗಳೋ ಗಾಡಿಯ ಬೆನ್ನೇರುತ್ತವೆ. ರೈತರೊಟ್ಟಿಗಿನ ಸಣ್ಣ ಆಡೋ, ಕುರಿಯೋ ಟೆಂಪೋ ಏರುತ್ತದೆ. ಆಗೆಲ್ಲಾ ಎತ್ತಿನ ಗಾಡಿಯೇ ಟೆಂಪೋ ಅವತಾರದಲ್ಲಿ ಬರುತ್ತದೆಯೇನೋ ಎನ್ನುವಂತೆ ಭಾಸವಾಗುತ್ತದೆ.
ಕಿರುದಾರಿಗಳಿದ್ದು ಡಾಂಬರಿಲ್ಲದ ಮಣ್ಣು ದಾರಿಗಳಿರುವಲ್ಲಿ ದೊಡ್ಡ ವಾಹನಗಳ ಓಡಾಟವು ಕಷ್ಟ. ಕಾಡಿನ ನಡುವಣ ಕಿರುದಾರಿಗಳು, ಬೆಟ್ಟವನ್ನು ಹತ್ತಬಲ್ಲ ದಾರಿಗಳಲ್ಲಿ ಮಿನಿಗಾಡಿಗಳೇ ಅನಿವಾರ್ಯ. ಕರ್ನಾಟಕದ ಕೊಡಚಾದ್ರಿ, ಆಗುಂಬೆ, ಕೋಲಾರದ ಗಂಗೆಬೆಟ್ಟ, ಮಲೆನಾಡು ಮುಂತಾದ ಕಡೆ ಜೀಪುಗಳಿರುವುದನ್ನು ನೋಡಬಹುದು. ಮಣ್ಣದಾರಿ, ಬೆಟ್ಟದಂತಹ ಕಿರುದಾರಿಗಳಲ್ಲಿ ಈ ಮಿನಿವಾಹನಗಳು ಸಾಹಸದ ರೀತಿಯಲ್ಲಿ ಜನರನ್ನು ಹೊತ್ತು ಸಾಗುತ್ತವೆ.
ಚಲನಶೀಲ ಬದುಕು!
ಗ್ರಾಮೀಣ ಭಾಗದ ಯುವ ಜನತೆಯ ನಿರುದ್ಯೋಗ ಸಮಸ್ಯೆಗೂ ಈ ಮಿನಿಗಾಡಿಗಳು ಮದ್ದಾಗಿವೆ. ಓದನ್ನು ಅರ್ಧಕ್ಕೆ ನಿಲ್ಲಿಸಿದ ಅನೇಕ ಯುವಕರನ್ನು ಈ ಗಾಡಿಗಳು ಕೈ ಹಿಡಿದು ಕೆಲಸಕೊಟ್ಟಿವೆ. ಮುಂದೆ ಓದಲಾಗದ್ದಕ್ಕೂ ಟೆಂಪೋ ಓಡಿಸುವ ನೆಪ ಕಾರಣವಾಗಿದೆ.
ಗ್ರಾಮೀಣ ಯುವಕ ಯುವತಿಯರು ನಗರ ಕೇಂದ್ರಿತ ದಿನಗೂಲಿ ಕೆಲಸಕ್ಕೆ ದೊಡ್ಡ ಪ್ರಮಾಣದಲ್ಲಿ ಹೋಗುವುದಕ್ಕೂ ಈ ಮಿನಿಗಾಡಿಗಳ ಹೆಚ್ಚಳಕ್ಕೂ ಸಂಬಂಧವಿದ್ದಂತಿದೆ. ಇದರಿಂದಾಗಿ ಹಳ್ಳಿಯ ಹೊಲಗಳಲ್ಲಿ ಕೆಲಸ ಮಾಡುವ ಅನೇಕ ಕೂಲಿಗಳು ನಗರಕೇಂದ್ರಿತ ಕೂಲಿಗಳಾಗಿ ಬದಲಾಗಿದ್ದಾರೆ. ಬಟ್ಟೆ ಅಂಗಡಿ, ಗಾರ್ಮೆಂಟ್, ಮುಂತಾದ ಕಡೆಗಳಲ್ಲಿ ಹಳ್ಳಿಯ ಹೆಣ್ಣುಮಕ್ಕಳು ಕೆಲಸ ಹುಡುಕಿಕೊಂಡು ನಗರಕ್ಕೆ ಬರಲು ಧೈರ್ಯ ತುಂಬಿದ ಹಲವು ಸಂಗತಿಗಳಲ್ಲಿ ಈ ಮಿನಿಗಾಡಿಗಳ ಪಾಲೂ ಇದೆ.
ರಾಜ್ಯದ ಗಡಿ ಭಾಗಗಳಲ್ಲಿ ಪರ್ಮಿಟ್ಟಿನ ಮಿತಿಯ ಕಾರಣಕ್ಕೆ ಹೆಚ್ಚು ಬಸ್ಸುಗಳ ಸೌಲಭ್ಯ ಇರುವುದಿಲ್ಲ.
ಇಂತಹ ಕಡೆಗಳಲ್ಲಿ ಮಿನಿಗಾಡಿಗಳು ಆಯಾ ಭಾಗದ ಜನರ ಸಂಚಾರಕ್ಕೆ ಹೆಚ್ಚು ಉಪಯುಕ್ತ. `ಆಟೋ ಟೆಂಪೋಗಳಿಂದ ಕರ್ನಾಟಕಾಂಧ್ರದ ಗಡಿಭಾಗವಾದ ಸಿರುಗುಪ್ಪದ ಜನರಿಗೆ ಹೆಚ್ಚು ಅನುಕೂಲವಾಗಿದೆ' ಎನ್ನುವುದು ಉಪನ್ಯಾಸಕರಾದ ಡಿ. ಯರ್ರಪ್ಪನವರ ಅನಿಸಿಕೆ.
ಅಪರೂಪಕ್ಕೆ ಈ ಗಾಡಿಗಳು ಹಳ್ಳಿಗಳ ಕೋಮು ಸಂಘರ್ಷಗಳಿಗೂ ಸಾಕ್ಷಿಯಾಗಿವೆ. ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದಾಗ, ದಲಿತರನ್ನು ಗಾಡಿಗಳಲ್ಲಿ ಹತ್ತಿಸಿಕೊಂಡವರಿಗೆ ದಂಡ ವಿಧಿಸುವ ಠರಾವು ಇತ್ತು. ದಕ್ಷಿಣ ಕನ್ನಡದ ಒಂದು ಹಳ್ಳಿಯಲ್ಲಿ ಸಾಬರ ಮಿನಿಗಾಡಿಗಳಿಗೆ ಹಿಂದೂಗಳು ಹತ್ತಬಾರದು ಎಂಬ ನಿಷೇಧಾಜ್ಞೆ ಹೊರಡಿಸಿದ್ದು ವರದಿಯಾಗಿತ್ತು.
ಹಳ್ಳಿಗಳನ್ನು ಆಧರಿಸಿ ಅಧ್ಯಯನ ಮಾಡುವ ಸಂಶೋಧಕರಿಗೆ, ವಿವಿಧ ಸರಕಾರಿ ಕಚೇರಿ ಸಹಾಯಕರುಗಳಿಗೆ ಕ್ಷೇತ್ರಕಾರ್ಯಕ್ಕೆ ಈ ಗಾಡಿಗಳು ಹೆಚ್ಚು ಉಪಯುಕ್ತ. ನಗರದ ಫುಟ್‌ಪಾತ್‌ಗಳಲ್ಲೋ, ರಸ್ತೆ ಪಕ್ಕದ ಖಾಲಿ ಜಾಗದಲ್ಲೋ ಈ ಟೆಂಪೋಗಳು ನಿಂತು ಜನರನ್ನು ಹತ್ತಿಸಿಕೊಂಡು ಚಲಿಸುತ್ತವೆ. ಯಾವುದೇ ಜಾತ್ರೆ, ಉರುಸು, ಹಬ್ಬ, ಮದುವೆಗೆ ಹೋದರೂ ಹಿಂದೆ ಎತ್ತಿನ ಬಂಡಿಗಳು ನಿರ್ವಹಿಸುತ್ತಿದ್ದ ಕೆಲಸವನ್ನು ಈ ಟೆಂಪೋಗಳೇ ನಿರ್ವಹಿಸುತ್ತಿರುವುದು ಕಾಣುತ್ತದೆ. ಹೀಗೆ ಈ ಮಿನಿಗಾಡಿಗಳು ಸಾಂಸ್ಕೃತಿಕವಾಗಿಯೂ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿವೆ.
ದೂರವಿಲ್ಲ ಊರದಾರಿ ಇದೇರಿ ನಮ್ಮ ಮಜಬೂತು ಕುದುರಿ!
ದೇಸಿ, ಜಾನಪದ ಮತ್ತು ಅಭಿರುಚಿ
ಆಯಾ ಭಾಗದ ಗಾಡಿಗಳಿಗೆ ಜನರು ಪ್ರಾದೇಶಿಕತೆಯ ನಂಟನ್ನು ಅಂಟಿಸಿಬಿಡುತ್ತಾರೆ. ಹೂವಿನ ಹಡಗಲಿ ಭಾಗದ ಗಾಡಿಗಳ ಮೇಲೆ `ಮೈಲಾರ', `ಏಳುಕೋಟಿ' ಎಂದಿದ್ದರೆ, ಮೈಸೂರು, ಚಾಮರಾಜನಗರ ಭಾಗದಲ್ಲಿ `ಚಾಮುಂಡಿ', `ಮಾದೇಶ್ವರ', `ಮಂಟೇದಲಿಂಗ' ಎಂದಿರುತ್ತದೆ. ಹೀಗೆ ಅವರವರ ಇಷ್ಟದೈವಗಳ ಹೆಸರನ್ನು ಗಾಡಿಗಳಿಟ್ಟು ತಮ್ಮ ಭಕ್ತಿಯನ್ನೋ ಅಭಿಮಾನವನ್ನೋ ಮೆರೆಯುತ್ತಾ ತಮ್ಮದೇ ಆದ ಸ್ಥಳೀಯ ಗುರುತುಗಳನ್ನು ತೋರುತ್ತಾರೆ.
ಕೆಲವೊಮ್ಮೆ ಗಾಡಿ ಹೊಂದಿದವರ ಜಾತಿ ಸೂಚಕವಾಗಿಯೂ ಹೆಸರುಗಳು ಬಳಕೆಯಾಗುತ್ತವೆ. `ನಾಯಕ', `ವೀರಮದಕರಿ', `ವಾಲ್ಮೀಕಿ', `ಬೀರಪ್ಪ', `ಕನಕ', `ಗೌಡ್ರು', `ಜೈ ಭೀಮ್', `ಜಗಜ್ಯೋತಿ ಬಸವೇಶ್ವರ'- ಈ ಬರಹಗಳ ಹಿಂದಿನ ಜಾತಿ ಗುರುತುಗಳು ವಾಹನಗಳ ಮೂಲಕ ಬಿಂಬಿತಗೊಳ್ಳುತ್ತವೆ.
ಇಷ್ಟದ ಸಿನಿಮಾ ನಟನಟಿಯರ ಹೆಸರುಗಳೂ ಚಿತ್ರಗಳೂ ಗಾಡಿಗಳ ಮೇಲೆ ಪ್ರಕಾಶಿಸುತ್ತವೆ. ಶಂಕರ್‌ನಾಗ್, ದರ್ಶನ್, ಸುದೀಪ್, ವಿಜಯ್, ಪುನೀತ್, ಮುಂತಾದವರೆಲ್ಲ ಗಾಡಿಗಳ ಮೇಲೆ ವಿರಾಜಮಾನರು! ನಟಿಯರಲ್ಲಿ ಅಮೂಲ್ಯ ಚಿತ್ರ ಹೆಚ್ಚು ಕಾಣುತ್ತದೆ. ಬಳ್ಳಾರಿ - ಹೊಸಪೇಟೆ ಭಾಗದಲ್ಲಿ ತೆಲುಗು ನಟನಟಿಯರ ಚಿತ್ರಗಳೂ ಹೆಚ್ಚಿವೆ. ಕೆಲವರು ಗಾಡಿಗಳಲ್ಲಿ ತಮ್ಮ ಮಕ್ಕಳ ಅಥವಾ ತಂದೆ ತಾಯಿಯರ ಹೆಸರನ್ನು ಬರೆಸಿಕೊಂಡಿರುವುದೂ ಇದೆ. ಕಲಾತ್ಮಕ ಚಿತ್ರಗಳೂ ಗಾಡಿಗಳ ಮೇಲೆ ಕಾಣುತ್ತವೆ.
ಈ ಮಿನಿ ಗಾಡಿಗಳು ಒಂದು ಬಗೆಯ ಜಾನಪದವನ್ನೂ ಹುಟ್ಟಿಸುತ್ತಿವೆ. `ತುತ್ತು ಕೊಡೋಳು ಬಂದಾಗ, ಮುತ್ತು ಕೊಟ್ಟೋಳ ಮರಿಬೇಡ', `ಮಾತೃದೇವೋ ಭವ', `ತಂದೆ ತಾಯಿ ಆಶೀರ್ವಾದ'- ಹೀಗೆ ನುಡಿಗಟ್ಟಿಗಳು ಟಾಂ ಟಾಂ ಆಗುತ್ತವೆ. `ಛೀ ಕಳ್ಳಿ', `ಛೀ ತುಂಟಿ' ಎಂದು ಗಾಡಿ ಓಡಿಸುವವ ಯಾರಿಗೋ ಕಚಗುಳಿಯಿಡುವ ಪ್ರಯತ್ನ ನಡೆಸುವುದೂ ಇದೆ. `ರೈತನ ನಗು ದೇಶಕ್ಕೆ ಸೊಬಗು', `ರೈತರೇ ದೇಶದ ಬೆನ್ನೆಲುಬು' ರೀತಿಯ ರೈತಪ್ರೀತಿಯ ವಾಕ್ಯಗಳೂ ಕಾಣುತ್ತವೆ. ತನ್ನ ಗಾಡಿಗೆ ಒಬ್ಬ `ನಗದು ಪ್ರೇಮ ಸಂಗ, ಉದ್ರಿ ಮಾನಭಂಗ' ಎಂದು ಬರೆಸಿದ್ದ.
ಯಾಕೆಂದು ಕೇಳಿದರೆ- `ಗಾಡಿ ಚಾರ್ಜು ಕೊಡದೆ ಉದ್ರಿ ಹೇಳೋ ಜನ ಜಾಸ್ತಿ ಸಾರ್, ಅದಕ್ಕೆ ಹಂಗೆ ಬರೆಸೀನಿ' ಎನ್ನುವ ದೇಶಾವರಿ ನಗೆ. ಅನೇಕ ಮಿನಿ ಗಾಡಿಗಳಲ್ಲಿ ಹನುಮಂತ ದೇವರ ಚಿತ್ರವಿದೆ. ಹನುಮಂತನ ಚಿತ್ರವಿದ್ದರೆ ಗಾಡಿ ಬೀಳುವುದಿಲ್ಲ ಎನ್ನುವ ನಂಬಿಕೆ ಅವರದು.
ಗ್ರಾಮೀಣ ಭಾಗದ ಜನರು ಅದರಲ್ಲೂ ಹೆಚ್ಚಾಗಿ ಯುವಕರು ಮಿನಿಗಾಡಿಗಳನ್ನು ಪ್ರವಾಸದ ವಾಹನಗಳನ್ನಾಗಿಯೂ ಬಳಸುವುದಿದೆ. ಕೆಲವೊಮ್ಮೆ ನಗರದ ಹತ್ತಿರದ ಹಳ್ಳಿಗಳಿಂದ ರಿಲೀಜ್ ಸಿನೆಮಾ ನೋಡಲು ಹುಡುಗರು ಗುಂಪಾಗಿ ಟೆಂಪೋ ಹತ್ತಿ ಹೋಗುವುದೂ ಇದೆ.
ಓಟದ ಹಿಂದೆ...
ಮಿನಿಗಾಡಿಗಳ ಸಂಚಾರದಲ್ಲಿ ವಿಷಾದದ ಕಥೆಗಳೂ ಸಾಕಷ್ಟಿವೆ. ದೊಡ್ಡಗಾಡಿಗಳ ಹೊಡೆತಕ್ಕೆ ಸಿಕ್ಕರೆ ಸಣ್ಣ ವಾಹನ ಅಪ್ಪಚ್ಚಿ, ಜೀವಹಾನಿ. ಮೂರುಗಾಲಿ ವಾಹನಗಳು ಅತಿ ವೇಗಕ್ಕೆ, ಏರಿಳಿತದ ಕಚ್ಚಾ ರಸ್ತೆಗಳಿಗೆ ಮಗುಚಿಬೀಳುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಅಪಘಾತ ವಿಮೆಯೂ ಈ ವಾಹನಗಳಿಗಿರುವುದಿಲ್ಲ.
ಈ ಗಾಡಿಗಳಿಗೆ ಆಯಾ ಗ್ರಾಮ, ಪಟ್ಟಣ ಪಂಚಾಯತಿ, ಓಬಳಿ ಮಟ್ಟದಲ್ಲಿ ಹತ್ತು ಕಿ.ಮೀ ವ್ಯಾಪ್ತಿಯೊಳಗೆ ಸಾರಿಗೆ ಪರ್ಮಿಟ್ಟು ಇರುತ್ತದೆ. ಸಾಮಾನ್ಯವಾಗಿ ಮಿನಿಗಾಡಿಗಳಿಗೆ ನಾಲ್ಕು ಜನರ ಪರ್ಮಿಟ್ಟಿರುತ್ತದೆ. ಆದರೆ ಹದಿನೈದರಿಂದ ಇಪ್ಪತ್ತು ಜನರನ್ನು ತುಂಬುತ್ತಾರೆ. ಇನ್‌ಶೂರೆನ್ಸ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ನಿಯಮಗಳನ್ನು ಸರಿಯಾಗಿ ಪಾಲಿಸದಿರುವವರೇ ಹೆಚ್ಚು. ಗೂಡ್ಸ್ ಪರ್ಮಿಟ್ ಇರೋ ಗಾಡಿಗಳಲ್ಲೂ ಪ್ಯಾಸೆಂಜರ್ ಹಾಕುತ್ತಾರೆ ಎಂದು ಆರ್.ಟಿ.ಓ ಕಚೇರಿಯ ಸೂಪರಿಡೆಂಟ್ ಒಬ್ಬರು ಬೇಸರದಿಂದ ಮಾತನಾಡಿದರು.
ಕರ್ನಾಟಕದ ಗ್ರಾಮೀಣ ಸಾರಿಗೆಯಲ್ಲಿ ಟಂ ಟಂ ಗಾಡಿಗಳು ತಂದಿರುವ ಬದಲಾವಣೆ ಬಹುವೆಚ್ಚದ ಬಸ್ಸಿನ ಸಾರಿಗೆ ವ್ಯವಸ್ಥೆಗೆ ಪರ್ಯಾಯದಂತಿದೆ. ಖಾಸಗಿ ಬಸ್ಸುಗಳನ್ನು ಹಳ್ಳಿಗರು `ಸಾಹುಕಾರ ಬಸ್ಸು' ಎನ್ನುವುದು ರೂಢಿ. ಆದರೆ ಮಿನಿ ಗಾಡಿಗಳಿಗೆ ಈ ನಾಮಕರಣ ಒಗ್ಗುವುದಿಲ್ಲ. ಈ ಗಾಡಿಗಳನ್ನು ಸಾಮಾನ್ಯ ವರ್ಗದವರು, ಕೆಳ ಜಾತಿಗಳು ಹೊಂದಿದ್ದಾರೆ.
ಕರ್ನಾಟಕದ ಗ್ರಾಮೀಣ ಸಾರಿಗೆಯ ಈ ವಿದ್ಯಮಾನ  ನಗರ-ಹಳ್ಳಿಗಳ ಸಂಬಂಧವನ್ನು ಬಹುವಾಗಿ ಬದಲಾಯಿಸಿದೆ. ಕೃಷಿವಲಯವನ್ನೂ ಪ್ರಭಾವಿಸಿದೆ. ಇದರ ಬಹುನೆಲೆಗಳ ಕುರಿತು ಶಾಸ್ತ್ರೀಯ ಸಂಶೋಧನೆಗಳು ನಡೆಯಬೇಕಿದೆ. ಈ ಗಾಡಿಗಳ ಅನುಭವಲೋಕವೊಂದು ಸಾಹಿತ್ಯಕ್ಕೂ ಬರಬೇಕಿದೆ.
ಜಾಗತೀಕರಣದಿಂದ ಜಗತ್ತು ಒಂದು ಹಳ್ಳಿಯಂತಾಗಿದೆ ಎನ್ನುವ ಮಾತಿದೆ. ಸಂಪರ್ಕ ಮತ್ತು ಸಂವಹನದ ಅಪಾರ ಸಾಧ್ಯತೆಯನ್ನು ಹೇಳುವ ಈ ಪರಿಕಲ್ಪನೆ ಗ್ರಾಮೀಣರ ಪಾಲಿಗೆ ಸಾಕಾರಗೊಂಡಿರುವುದು ಟಂ ಟಂ ಗಾಡಿಗಳಿಂದಾಗಿ!
ಬದಲಾಯಿತು ಕರ್ನಾಟಕ!
ಜನರನ್ನು ಮತ್ತು ವಸ್ತುಗಳನ್ನು ಸಾಗಿಸುವ ಸಣ್ಣ ಸಣ್ಣ ವಾಹನಗಳು ಹಳ್ಳಿಗಳನ್ನು ಪ್ರವೇಶಿಸಿದ ಮೇಲೆ ಗ್ರಾಮೀಣ ಸಾರಿಗೆಯ ಕಲ್ಪನೆಯೇ ಬದಲಾಗಿದೆ. ಮುಖ್ಯವಾಗಿ ಈ ಗಾಡಿಗಳಿಗೆ ಒಂದು ನಿರ್ದಿಷ್ಟ ವೇಳಾಪಟ್ಟಿ ಇರುವುದಿಲ್ಲ. ಬಾಗಿಲಿನಿಂದ ಬಾಗಿಲಿಗೆ ನಿಲುಗಡೆ ಇರುತ್ತದೆ. ಹತ್ತು ಹನ್ನೆರಡು ಜನ ಸೇರಿದರೆ ಗಾಡಿ ಒಂದೆಡೆಯಿಂದ ಇನ್ನೊಂದೆಡೆಗೆ ಹೊರಡುತ್ತದೆ. ಗೆರೆ ಕೊಯ್ದಂತೆ ಪ್ರಯಾಣದ ದರವೂ ಇರುವುದಿಲ್ಲ.
ದಿನದ ಆರಂಭಕ್ಕೆ ನಗರ ಪಟ್ಟಣಗಳನ್ನು ಜೀವಂತಗೊಳಿಸುವ ಹಲವು ಸಂಗತಿಗಳಲ್ಲಿ ಮಿನಿ ಟೆಂಪೋ ಆಟೋಗಳದ್ದು ದೊಡ್ಡಪಾಲಿದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಬೆಳಗಿನ ಜಾವ ಹೂಗಳ ರಾಶಿ ಬೀಳುವುದೇ ಈ ಗಾಡಿಗಳು ಬಂದಮೇಲೆ. ಪ್ರತಿ ಪಟ್ಟಣದಲ್ಲಿ ಮುಂಜಾವಿನ ರೈತರ ತಾಜಾ ತರಕಾರಿಯ ಪುಟ್ಟ ಮಾರ್ಕೆಟೊಂದು ಜೀವ ತಳೆಯುವುದು ಕೂಡ ಇವುಗಳಿಂದಲೇ.
ಕೊಟ್ಟೂರಿನ ಸಂತೆಯಲ್ಲಿ ಒಣಮೀನು ಮಾರುವ ಗೌಸ್ ಸಾಹೇಬರು ಈಚೆಗೆ ತಮ್ಮ ಒಣ ಮೀನಿನ ವ್ಯಾಪಾರ ಕುದುರಿರುವುದಕ್ಕೂ ಟಂ ಟಂ ಗಾಡಿಗಳು ಹೆಚ್ಚಾಗುತ್ತಿರುವುದಕ್ಕೂ ತಾಳೆ ಹಾಕಿದರು. ಬಸ್ಸುಗಳಲ್ಲಿ ಒಣ ಮೀನು ಒಯ್ಯುವುದು ಕಷ್ಟವಾಗಿತ್ತು. ಕೆಲವೊಮ್ಮೆ ಒಣ ಮೀನಿನ ವಾಸನೆಗೆ ಬಸ್ಸು ನಿಲ್ಲಿಸಿ ಟಾಪ್ ಮೇಲೆ ಹತ್ತಿಸಿದ ಅಥವಾ ಕೆಳಗಿಳಿಸಿದ ಪ್ರಸಂಗಗಳು ನಡೆಯುತ್ತಿದ್ದವು. ಆಗ ಬಸ್ಸಿನ ಎಲ್ಲರೂ ಇವರನ್ನೇ ದುರುಗುಟ್ಟಿ ನೋಡಿ ಅವಮಾನವಾಗುತ್ತಿತ್ತು.
ಈಗ ಹಳ್ಳಿ ಸಂಚಾರಕ್ಕೆ ಮಿನಿಗಾಡಿಗಳು ಬಂದಂದಿನಿಂದ, ನಿರಾಯಾಸವಾಗಿ ಒಣಮೀನು ವ್ಯಾಪಾರ ಸಾಧ್ಯವಾಗಿದೆ. ಕರಾವಳಿ ಭಾಗದಲ್ಲಂತೂ ಬಸ್ಸಿನವರು ಮೀನನ್ನು ಹಾಕುವುದಿಲ್ಲ, ಹಾಗಾಗಿ ಮೀನು ಮಾರುವ ಹೆಣ್ಣುಮಕ್ಕಳು ಮಿನಿಗಾಡಿಗಳನ್ನೇ ಆಶ್ರಯಿಸುತ್ತಾರೆ ಎಂದು ಕುಂದಾಪುರದ ಉದಯ ಗಾಂವಕರ್ ಹೇಳುತ್ತಾರೆ.

ಭಾನುವಾರ, ಜೂನ್ 16, 2013

ಸುಡುಗಾಡು ಸಿದ್ದರು: ಕಥೆ ಮತ್ತು ಸಿನೆಮಾ


-ಅರುಣ್ ಜೋಳದಕೂಡ್ಲಿಗಿ





  ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ಹಲವು ಕಾರಣಗಳಿಗೆ ಮುಖ್ಯವೆನಿಸುವ  ಸಿನಿಮಾ. ಇದು ಕನ್ನಡದ ಸತ್ವಯುತ ಕಥೆಗಾರ ಅಮರೇಶ ನುಗಡೋಣಿ ಅವರ ಸವಾರಿ ಕಥೆಯನ್ನಾಧರಿಸಿದ ಸಿನಿಮಾ. ಇಲ್ಲಿ ಸಾಮಾಜಿಕ ಸಂಗತಿಯೊಂದು ಕಥೆ ಮತ್ತು ಸಿನಿಮಾ ಮಾದ್ಯಮದಲ್ಲಿ ತೆರೆದುಕೊಳ್ಳುವ ಭಿನ್ನ ಆಯಾಮಗಳನ್ನು ನೋಡಬಹುದು.
 ಬ್ಯಾಗಾರ ಕುಲದ ಈರ‍್ಯನದು ಹೆಣ ಊಣಲು ಕುಣಿ ತೋಡುವ ಕಾಯಕ. ಈತ ಸಾವಿನ ಕನಸು ಕಾಣುವಾತ. ಕನಸು ಕಂಡೊಡನೆ ಕುಣಿ ತೋಡಲು ಹೊರಡುತ್ತಿದ್ದ. ಹೀಗೆ ಕನಸು ಕಂಡದ್ದು ಹುಸಿಯಾದದ್ದೆ ಇಲ್ಲ. ಈತನ ಹೆಂಡತಿ ರುದ್ರಿ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುವ ಗಟ್ಟಿಗಿತ್ತಿ. ಹೀಗೆ ಒಂದು ದಿನ ಊರ ಗೌಡ ಸತ್ತ ಕನಸು ಕಾಣುತ್ತಾನೆ. ಹೆಚ್ಚು ಕುಸಿ ಸಿಗುವ ಕಾರಣಕ್ಕೆ ಗೌಡರ ಸಾವಿನ ಕನಸು ಈರ‍್ಯನಲ್ಲಿ ಹೊಸ ಹುಮ್ಮಸ್ಸು ಮೂಡಿಸುತ್ತದೆ. ಆದರೆ ಮಠದಯ್ಯ ಗೌಡರ ಸಾವನ್ನು ಮುಚ್ಚಿಟ್ಟು ಈರ‍್ಯನ ಕನಸನ್ನು ಅಲ್ಲಗಳೆಯುತ್ತಾನೆ. ಈರ‍್ಯನ ಹೆಂಡತಿ ಸಿದ್ಧ ಬರುವುದಾಗಿ ಕನಸು ಕಾಣುತ್ತಾಳೆ, ಸಿದ್ಧನನ್ನು ಬಚ್ಚಿಟ್ಟು ಆ ಕನಸನ್ನು ಹುಸಿಗೊಳಿಸುವ ಒಳಸಂಚು ನಡೆಯುತ್ತದೆ.


  ಊರ ವಾಡೆಯ ಹಿರಿ ಗೌಡನ ಮಗ ಶಿವಣ್ಣ, ಹೊಲ ಮಾರಿ ಇಂಗ್ಲೀಷ್ ಶಾಲೆ ತೆರೆಯುವ ಕನಸಿನಾತ. ಈ ಶಿವಣ್ಣ ಊರವರ ಜಮೀನನ್ನು ಕೈಗಾರಿಕೆಗೆ ಮಾರಲು ರೈತರನ್ನು ಒಪ್ಪಿಸಿ ನಗರಕ್ಕೆ ಹೊರಡುವ ದಿನ ಹಿರೇಗೌಡ ಸಾವನ್ನಪ್ಪುತ್ತಾನೆ. ಹೀಗಾಗಿ ಅಪ್ಪನ ಅಂತ್ಯಸಂಸ್ಕಾರಕ್ಕಿಂತ ಜಮೀನಿನ ಮಾರಾಟವೇ ಮುಖ್ಯವೆಂದು ಬಾವಿಸಿದ ಆತ ಸಾವನ್ನು ಮುಚ್ಚಿಡಲು ಹೇಳುತ್ತಾನೆ. ಇನ್ನು ಸಿದ್ಧ ಊರಿಗೆ ಬಂದ ದಿನ ಯಾರು ಸಾವನ್ನಪ್ಪುತ್ತಾರೆಯೋ ಅವರದು ಪುಣ್ಯದ ಸಾವು, ಅವರು ನೇರ ಸ್ವರ್ಗಕ್ಕೆ ಹೋಗುತ್ತರೆ ಎನ್ನುವ ನಂಬಿಕೆಯಿದೆ. ಈ ಕಾರಣಕ್ಕೆ, ಒಂದು ದಿನ ಮುಂಚೆಯೇ ಬಂದ ಸಿದ್ಧನನ್ನು ಹಿಡಿದಿಟ್ಟು ಹಿರೇಗೌಡರು ಸಾವಿನ ಸುದ್ಧಿ ಬಯಲು ಮಾಡಿದ ದಿನವೇ ಸಿದ್ಧ ಬಂದ ಎಂದು ಹೇಳಿ ಗೌಡರ ಸಾವು ಪುಣ್ಯದ ಸಾವೆಂದು ಸಮೀಕರಿಸುವ ಪ್ರಯತ್ನ ನಡೆಯುತ್ತದೆ.




 ಇಲ್ಲಿ ಈರ‍್ಯನ ಕನಸಿನ ಬಗೆಗಿನ ನಂಬಿಕೆ ಏಕಕಾಲದಲ್ಲಿ ಬದುಕಿನ ಬಗೆಗಿನ ನಂಬಿಕೆಯೂ ಆಗಿದೆ. ಸವಾರಿ ಕಥೆಯಲ್ಲಿ ವಜ್ರಪ್ಪ ಗೌಡರ ಶವ ಮೆರವಣಿಗೆಯಲ್ಲಿಯೇ ಕಾಲ್ತುಳಿತಕ್ಕೆ ಸಿಕ್ಕು ಸಾವನ್ನಪ್ಪಿ ವ್ಯವಸ್ಥೆಯ ಕ್ರೂರ ಮುಖವನ್ನು ತೋರುತ್ತದೆ. ಆದರೆ ಇದೇ ವಜ್ರಪ್ಪ ಸಿನೆಮಾದಲ್ಲಿ, ಶವ ಊಣುವ ಕುಣಿಯಲ್ಲಿ ಸಸಿ ನೆಟ್ಟು ಒಂದು ಜೀವವನ್ನು ಪೊರೆಯುತ್ತಾ ಬದುಕಿನ ಹೊಸ ತಿರುವಿಗೆ ತೆರೆದುಕೊಳ್ಳುತ್ತಾನೆ. ಜನಸಮುದಾಯದ ನಂಬಿಕೆಯ ಲೋಕವನ್ನು ಸಿನಿಕವಾಗಿ ನೋಡದ, ಅದನ್ನೊಂದು ಚೈತನ್ಯವನ್ನಾಗಿ ಕಥೆ ಮತ್ತು ಸಿನೆಮಾದಲ್ಲಿ ನೋಡಲಾಗಿದೆ. ಶಿವಣ್ಣನ ಮಗಳು ಪಿಂಕಿಯ ನಿರಾಳವಾದ ಆಟದ ಮೈದಾನವಾದ ವಾಡೆ, ಶಿವಣ್ಣನ ಹೆಂಡತಿಯ ಪಾಲಿಗೆ ಹಾಳುಕೊಂಪೆಯಾಗುವುದೂ, ಅದೇ ವಾಡೆ ಊರವರ ಪಾಲಿಗೆ ಗೌಡರ ದೊಡ್ಡಮನೆಯಾಗುವುದು ಇಂತವ ವೈರುದ್ಯಗಳನ್ನು ಸಿನೆಮಾ ಪರಿಣಾಮಕಾರಿಯಾಗಿ ಚಿತ್ರಿಸಿದೆ.

 ಸಿನೆಮಾ ಕಟ್ಟಿಕೊಡುವ ಈರ‍್ಯ, ಕತೆ ಕಟ್ಟಿಕೊಡುವ ವಜ್ರಪ್ಪ ನಿಜಕ್ಕೂ ಕಾಡುವ ಗಟ್ಟಿ ಪಾತ್ರಗಳು. ಇಲ್ಲಿ ಹಳ್ಳಿಗಳು ಹೊಸ ರಾಜಕೀಯ ವ್ಯವಸ್ಥೆಗೆ ಹೊಂದಿಕೊಳ್ಳುವ, ಹೊಸ ಬಗೆಯ ಯಜಮಾನಿಕೆಯ ಗತ್ತುಗಳನ್ನು ರಾಜಕೀಯದ ಮೂಲಕ ಪಡೆದ ಬದಲಾವಣೆಯನ್ನು ಗೌಡರ ಮಗ ಶಿವಪ್ಪ ಗೌಡನ ತಾಕಲಾಟದಿಂದ ಚೆನ್ನಾಗಿ ಚಿತ್ರಿಸಿದ್ದಾನೆ. ಇಡೀ ಊರಿಗೇ ಉರೇ ಕೆಟ್ಟ ಶನಿ ಎಂದು ಗೌಡರನ್ನು ತೆಗುಳುವಾಗ, ಆತನ ಸಾವಿನಲ್ಲಾದರೂ ಒಳ್ಳೆಯತನವನ್ನು ಕಾಣಿಸುವುದು, ಆ ಒಳ್ಳೆತನದ ಭಾವನೆಯನ್ನು ರಾಜಕೀಯ ಓಟನ್ನಾಗಿ ರೂಪಿಸಿಕೊಳ್ಳುವುದು ಇವು ಗ್ರಾಮೀಣ ಬದುಕಿನ ಸ್ಥಿತ್ಯಂತರವನ್ನು ಸೂಕ್ಮವಾಗಿ ಕಾಣಿಸುತ್ತವೆ.



  ಒಂದು ಸಮುದಾಯದ ನಂಬಿಕೆಯ ಲೋಕದ ಮೂಲಕ ಗ್ರಾಮೀಣ ಸಮುದಾಯದ ಭಿನ್ನ ಮುಖಗಳನ್ನು, ಬದಲಾಗುತ್ತಿರುವ ಜೀವನ ಗ್ರಹಿಕೆಯನ್ನು ಸಿನೆಮಾ ತುಂಬಾ ಉತ್ತಮವಾಗಿ ಕಟ್ಟಿಕೊಟ್ಟಿದೆ. ಇಲ್ಲಿ ಮೂಲ ಕಥೆಗಾರ ಅಮೆರೇಶ ನುಗಡೋಣಿ ಅವರ ಗಟ್ಟಿ ಕಥೆಯೇ ಈ ಸಿನಿಮಾಕ್ಕೆ ಒಂದು ಭಿನ್ನ ಹರವನ್ನು ಕಲ್ಪಿಸಿದೆ. ಇದನ್ನು ಸಿನಿಮಾ ಆಗಿಸುವಲ್ಲಿಯೂ ಕಾಸರವಳ್ಳಿ ಅವರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಮುಖ್ಯವಾಗಿ ಒಂದೇ ಘಟನೆಯನ್ನು ಎರಡು ಭಿನ್ನ ಕೋನಗಳಲ್ಲಿ ತೋರಿಸುವ ಪ್ಲಾಶ್ ಬ್ಯಾಕ್ ತಂತ್ರ ತುಂಬಾ ಪರಿಣಾಮಕಾರಿಯಾಗಿ ಮೂಡಿದೆ. ಕೇರಿಯ ಜನರೊಂದಿಗೆ ಕೂಡು ಬಾಳುವೆ ನಡೆಸುವ ಬ್ಯಾಗ್ಯಾರ ಕುಲವನ್ನು ಬಟ್ಟಂಬಯಲಲ್ಲಿ ಒಂದೇ ಮನೆಯನ್ನು ತೋರಿಸುವುದು ಅಷ್ಟು ಪರಿಣಾಮಕಾರಿಯಾಗಿಲ್ಲ.

 ಇಲ್ಲಿ ಸುಡುಗಾಡು ಸಿದ್ಧರ ಸಮುದಾಯದ ನಂಬಿಕೆ, ಆಚರಣೆ, ಮತ್ತು ವರ್ತಮಾನವನ್ನು ಒಂದು ಕತೆ ಮತ್ತು ಸಿನೆಮಾ ಬೇರೆ ಬೇರೆ ಮಾದ್ಯಮಗಳ ಸಾದ್ಯತೆಯನ್ನು ತೆರೆದಿಟ್ಟಿವೆ. ಅಂತೆಯೇ ಇದೇ ಸಮುದಾಯದ ಜಾನಪದ ಅಧ್ಯಯನಗಳನ್ನು ಗಮನಿಸಿದರೆ, ಇಂತಹ ಸಂಕೀರ್ಣತೆಯನ್ನು ಗಮನಿಸಲು ಆಗಿರಲಿಲ್ಲವೇನೋ. ಸುಡುಗಾಡು ಸಿದ್ಧರ ಬದುಕಿನ ಕ್ರಮವನ್ನು ಒಂದು ಆಚರಣೆಯಾಗಿ ರಮ್ಯವಾಗಿ ಕಟ್ಟಿಕೊಡುವ ಮಾದರಿ ಜಾನಪದ ಅಧ್ಯಯನಗಳಲ್ಲಿ ಕಾಣುತ್ತದೆ. ಆದರೆ ಅದೇ ಸಮುದಾಯವನ್ನು ಒಬ್ಬ ಕಥೆಗಾರ ಸೂಕ್ಷ್ಮವಾಗಿ ನೋಡುವಾಗ ಕಾಣುವ ಮುಖವೊಂದರ ಅನಾವರಣ ನುಗಡೋಣಿ ಅವರ ಕತೆಯಲ್ಲಿ ಕಾಣುತ್ತದೆ. ಇದು ಇನ್ನೊಂದು ಭಿನ್ನ ಸಾದ್ಯತೆಯನ್ನು ಸಿನೆಮಾ ತೋರುತ್ತದೆ. ಇದನ್ನು ನೋಡಿದರೆ ಸಮುದಾಯಗಳ ಅಧ್ಯಯನಗಳಲ್ಲಿ  ಆಯಾ ಸಮುದಾಯದ ಬದುಕಿನ ಸಂಕೀರ್ಣತೆಯನ್ನು ಅದರೆಲ್ಲಾ ಸಾದ್ಯತೆಗಳ ನಡುವೆ ಹಿಡಿಯಲು ಜಾನಪದ ಅಧ್ಯಯನಗಳಲ್ಲಿ ಆಗುವುದಿಲ್ಲವೇನೋ ಅನ್ನಿಸುತ್ತದೆ.

 ಈರ‍್ಯನಾಗಿ ಬಿರಾದಾರ್ ಅವರ ಅಭಿನಯ ನಿಜಕ್ಕೂ ಅದ್ಭುತವಾದ್ದು. ಇದಕ್ಕೆ ಸಮಾನವಾಗಿ ರುದ್ರಿಯಾಗಿ ಉಮಾಶ್ರೀ ಅಭಿನಯವೂ ಪ್ರಬುದ್ಧವಾಗಿದೆ. ವಿ.ಮನೋಹರ್ ಅವರ ಸಂಗೀತ, ಹೆಚ್. ಎಂ.ರಾಮಚಂದ್ರ ಅವರ ಛಾಯಾಗ್ರಹಣ ಚಿತ್ರದ ಪರಿಣಾಮವನ್ನು ಹೆಚ್ಚಿಸಿದೆ. ಗೋಪಾಲಕೃಷ್ಣ ಅವರ ಚಿತ್ರಕಥೆ ಮೂಲಕಥೆಯನ್ನು ಮುಕ್ಕಾಗಿಸದಂತಿದೆ. ಒಟ್ಟಾರೆ ಸಿನೆಮಾ ಈ ನೆಲದ ಜೀವಗಳ ಮಿಡಿತವನ್ನು ಹಿಡಿಯುವಲ್ಲಿ ಶಕ್ತವಾಗಿದೆ. ಈ ಕಾರಣಕ್ಕೆ ನೆಲದ ಕಥೆಯಾಗಿ ಮನಮುಟ್ಟುತ್ತದೆ.

ಕನ್ನಡದಲ್ಲೊಂದು ಅಪೂರ್ವ ಆತ್ಮಕಥನ ಗೊಂದಲಿಗ್ಯಾ

-ಸಿದ್ಧರಾಮ ಹಿರೇಮಠ, ಕೂಡ್ಲಿಗಿ.

-
       ಮರಾಠಿ ದಲಿತ ಆತ್ಮಕಥನಗಳ ಧಾಟಿಯಲ್ಲಿಯೇ ಕನ್ನಡದಲ್ಲಿ ಕಳೆದ ವರ್ಷ ಮೂಡಿಬಂದ ಎ.ಎಂ.ಮದರಿಯವರ ಅಪೂರ್ವ ಆತ್ಮಕಥನ ಗೊಂದಲಿಗ್ಯಾ. ಹೆಸರೇ ಸೂಚಿಸುವಂತೆ ಗೊಂದಲಿಗರ ಜನಾಂಗದ ನೋವು, ಸಂಕಟ, ತಲ್ಲಣಗಳನ್ನು ಗರ್ಭೀಕರಿಸಿಕೊಂಡಿರುವ ಗೊಂದಲಿಗ್ಯಾ ಕನ್ನಡ ಸಾಹಿತ್ಯದ ದಲಿತ ಆತ್ಮಕಥನಗಳಲ್ಲಿ ಪ್ರಮುಖ ಸ್ಥಾನ ಪಡೆಯುವಂತಹದ್ದಾಗಿದೆ. 
 
ಗೊಂದಲಿಗರು ಎಂಬ ಹೆಸರಿನ ಬದಲಾಗಿ, ಬಯ್ಗುಳದಂತಿರುವ ಗೊಂದಲಿಗ್ಯಾ ಎಂಬ ಹೆಸರನೇ ಯಾಕೆ ಕೃತಿಗಿರಿಸಿದರು ಎಂದು ತಿಳಿಯಬೇಕಾದಲ್ಲಿ ಇಡೀ ಪುಸ್ತಕವನ್ನು ಓದಲೇಬೇಕು. ಗೊಂದಲಿಗ್ಯಾ ಇಲ್ಲಿ ಸಮಾಜ ತುಚ್ಛೀಕರಿಸಿ ಬಯ್ಯುತ್ತಿದ್ದ ಬೈಗುಳದ ಪದದ ರೂಪದಲ್ಲಿ ಬಂದಿದೆ. ಆ ಎಲ್ಲ ತಲ್ಲಣಗಳನ್ನು ತೋರಿಸಲೆಂದೇ ಮದರಿಯವರು ತಮ್ಮ ಕೃತಿಗೆ ಗೊಂದಲಿಗ್ಯಾ ಎಂದೆ ಹೆಸರಿಸಿದ್ದಾರೆ. 
 
ಅಲೆಮಾರಿಗಳಾಗಿರುವ ಗೊಂದಲಿಗರ ಬದುಕು, ಬವಣೆ, ಅವಮಾನ, ಕೀಳರಿಮೆ, ಹತಾಶೆ, ವ್ಯವಸ್ಥೆಯ ಬಗ್ಗೆ ಕಿಚ್ಚಿದ್ದರೂ ಅದನ್ನು ಎದುರಿಸಲಾಗದೆ ಅವಡುಗಚ್ಚಿ ಸಹಿಸುವ ತಾಳ್ಮೆ, ಎಲ್ಲವೂ ಆತ್ಮಕಥೆಯಲ್ಲಿ ಮುಪ್ಪುರಿಯಾಗಿ ಮೂಡಿಬಂದಿವೆ. 
 
ಮದರಿಯವರು ಮೂಲತ: ಮೃದು ಹಾಗೂ ಸಂಕೋಚ ಸ್ವಭಾವದವರಾಗಿದ್ದುದರಿಂದಲೋ ಅಥವಾ ಗೊಂದಲಿಗರ ಜನಾಂಗದ ಶೋಷಣೆಯ ವ್ಯವಸ್ಥೆಯಲ್ಲಿ ಸಿಲುಕಿಕೊಂಡಿದ್ದರಿಂದಲೋ ಆತ್ಮಕಥನದಲ್ಲಿ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಆಕ್ರೋಶದ ಗುಣ ಎಲ್ಲಿಯೂ ಕಂಡುಬರುವುದಿಲ್ಲ. ಅಲ್ಲಲ್ಲಿ ಮಾತಿನ ಚಾಟಿಯೇಟನ್ನು ಶೋಷಣೆ ಮಾಡುವವರ ವಿರುದ್ಧ ಬೀಸುವರಾದರೂ ಇಡೀ ಆತ್ಮಕಥೆಯಲ್ಲಿ ಅದು ಗೌಣವಾಗಿದೆ. ಮದರಿಯವರು ಬಾಲ್ಯದಿಂದಲೂ ಮೇಲ್ವರ್ಗದ, ಮೇಲ್ಜಾತಿಯ ಜನರ ತುಳಿತಕ್ಕೊಳಗಾಗುವುದೇ ಅಲ್ಲದೆ ಕ್ರೂರ ವ್ಯವಸ್ಥೆಯ ಕಬಂಧ ಬಾಹುಗಳಲ್ಲಿಯೂ ನಲುಗುವುದರಿಂದಲೂ ಆತ್ಮಕಥನದುದ್ದಕ್ಕೂ ಅಂತರ್ಮುಖಿಯಾಗಿಯೇ ತೋರುತ್ತಾರೆ. ಅಲ್ಲದೆ ಅವರ ಕುಟುಂಬದ ಸಮಸ್ಯೆಗಳೂ ಅವರನ್ನು ಹಣ್ಣು ಮಾಡಿದ್ದುದರಿಂದಲೂ ಮದರಿಯವರು ಆತ್ಮಕಥನದಲ್ಲಿ ಶೋಷಣೆಯ ಮತ್ತಷ್ಟು ನೋವನ್ನು ಸಹಿಸಿಕೊಳ್ಳುವವರಾಗಿ ಕಾಣುತ್ತಾರೆ.
 
ಮದರಿಯವರು ಕೃತಿಯಲ್ಲಿ ತಮ್ಮ ಜನಾಂಗ ಗುಡಿಗುಂಡಾರಗಳಲ್ಲಿ ಬೀಡು ಬಿಡುವ, ಊರೂರು ತಿರುಗುವ, ಅವಮಾನಗಳಿಗೆ ಗುರಿಯಾಗುವ ಘಟನೆಗಳನ್ನು ಕಣ್ಮುಂದೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹೀಗಾಗಿ ಇದು ಎ.ಎಂ.ಮದರಿ ಎಂಬ ಒಬ್ಬ ವ್ಯಕ್ತಿಯ ಆತ್ಮಕಥನವಾಗಿರದೇ ಅವರ ಹಿಂದಿರುವ ಇಡೀ ಗೊಂದಲಿಗರ ಜನಾಂಗದ ಆತ್ಮಕಥನವಾಗಿಯೇ ನಮಗೆ ಕಾಣಸಿಗುತ್ತದೆ. ಪ್ರತಿ ಊರುಗಳಿಗೆ ಹೋದಾಗ ನಡೆಯುವ ಘಟನೆಗಳು ಗೊಂದಲಿಗರ ಜೀವನ ಚಿತ್ರಣವನ್ನೇ ನೀಡುತ್ತವೆ. ಕತೆ, ತತ್ವಪದಗಳನ್ನು, ಗೀಗೀ ಪದಗಳನ್ನು ಹೇಳುತ್ತ ಅಥವಾ ಪಾತ್ರೆಗಳನ್ನು ಮಾರುತ್ತ ಅಲೆಯುವ ಗೊಂದಲಿಗರ ಬದುಕು ಸಾಮಾಜಿಕವಾಗಿ ಕೆಳಸ್ತರದಲ್ಲಿಯೇ ನಲುಗುತ್ತಿರುವವರ ಬದುಕಾಗಿದೆ. ಅದಕ್ಕೆಂದೇ ಮದರಿಯವರು ತಮ್ಮ ಜನಾಂಗವೂ ಎಂದೋ ಪರಿಶಿಷ್ಟ ಜಾತಿ, ಜನಾಂಗದಲ್ಲಿ ಗುರುತಿಸಬೇಕಾದುದು ಆದರೆ ಅಸಂಘಟನೆಯಿಂದಾಗಿ ಇನ್ನೂ ಜನಾಂಗದ ಬದುಕು ಕತ್ತಲಲ್ಲಿಯೇ ಉಳಿದಿದೆ ಎಂದು ವ್ಯಥೆಪಡುತ್ತಾರೆ. ಅಂತೆಯೇ ಮದರಿಯವರು ಹೇಳುವಂತೆ, ಗೊಂದಲಿಗರ ಜನಾಂಗದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದವರು ಇಡೀ ರಾಜ್ಯದಲ್ಲಿ ಸಿಗುವುದು ವಿರಳ. ಇದಕ್ಕೆ ಕಾರಣ ಜನಾಂಗದಲ್ಲಿ ಇಂದಿಗೂ ಮುಂದುವರೆದುಕೊಂಡು ಬಂದಿರುವ ಕಂದಾಚಾರ, ಮೂಢನಂಬಿಕೆಗಳು ಎನ್ನುತ್ತಾರೆ. ಕುಟುಂಬದ ಹೆಣ್ಣುಮಕ್ಕಳು ದುಡಿಯಬೇಕು, ಗಂಡಂದಿರು ಆ ದುಡಿಮೆಯಿಂದಲೇ ಬದುಕಬೇಕೆಂಬ ಅಸಹಜ ಆಚರಣೆಗಳು ಜನಾಂಗದಲ್ಲಿರುವುದರಿಂದ, ಹೆಣ್ಣುಮಕ್ಕಳು ಇಂದಿಗೂ ಎಲ್ಲ ನೋವುಗಳನ್ನೂ ಮೌನವಾಗಿಯೇ ಸಹಿಸಿಕೊಂಡು ಆ ವ್ಯವಸ್ಥೆಗೆ ಹೊಂದಿಕೊಂಡುಬಿಟ್ಟಿದ್ದಾರೆಂದು ಮದರಿ ವಿವರಿಸುತ್ತಾರೆ. ಅಸಂಘಟಿತರಾಗಿರುವ ಗೊಂದಲಿಗರ ಜನಾಂಗವನ್ನು ಒಂದೆಡೆ ಸೇರಿಸಿ, ಸಂಘಟಿತರನ್ನಾಗಿ ಮಾಡಿ ಸಾಮಾಜಿಕವಾಗಿ ಅವರನ್ನು ಮುಂಚೂಣಿಯಲ್ಲಿ ತರುವುದು ಕಷ್ಟಸಾಧ್ಯ ಎಂದು ಹೇಳುತ್ತಾರೆ. ತಾವೆಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ ಎಂಬ ನೋವೂ ಅವರಿಗಿದೆ. 
 
ನನ್ನ ಹೆಸರು ಅಪ್ಪಣ್ಣ, ಹಿರಿಯರು ಅಪ್ಪಣ್ಣ, ಅಪ್ಪಾಸಾಹೇಬ ಎಂದು ಕರೆದರೆ, ಗೆಳೆಯರು ಅಪ್ಪಯ್ಯ ಎಂದೂ ಕರೆಯುತ್ತಿದ್ದರು ಇಲ್ಲಿಂದ ಆರಂಭಗೊಳ್ಳುವ ಮದರಿಯವರ ಆತ್ಮಕಥನವು ಬಾಲ್ಯ, ಯೌವ್ವನ, ಅಲೆದಾಟ, ನೋವು, ಅವಮಾನ, ಹತಾಶೆ, ಸಹನೆ, ಛಲ ಎಲ್ಲವುಗಳ ಸುಳಿಯಲ್ಲಿ ಸಿಲುಕಿ ಕೊನೆಗೆ ನಿವೃತ್ತಿ ಅಂಚಿನಲ್ಲಿದ್ದಾಗ, ಬ್ಯಾಂಕಿನಲ್ಲಿ ಸಾಲ ಕೇಳಲು ಹೋದಾಗ, ಮೆನೇಜರ್ ಕೇಳುತ್ತಾರೆ ನಿಮ್ಮ ಊರು ಯಾವುದು?. ಈ ಪ್ರಶ್ನೆಗೆ ಉತ್ತರಿಸುವುದರ ಜೊತೆಯಲ್ಲಿಯೇ ಓದುಗರನ್ನು ಚಿಂತನೆಗೆ ಹಚ್ಚುವಲ್ಲಿ ಕಥನ ಪೂರ್ಣಗೊಳ್ಳುತ್ತದೆ. 
 
ಇಡೀ ಆತ್ಮಕಥನದ ಭಾಷೆ ಸುಲಲಿತವೂ, ಸರಳವೂ ಆಗಿರುವುದರಿಂದ ಎಲ್ಲಿಯೂ ಹಿಡಿತ ತಪ್ಪದಂತೆ ಓದಿಸಿಕೊಂಡು ಹೋಗುವಲ್ಲಿ ಕಥನ ಯಶಸ್ವಿಯಾಗಿದೆ. ಅಲ್ಲಲ್ಲಿ ಬರುವ ಆಡುಭಾಷೆ ಆತ್ಮಕಥನದ ಉದ್ದೇಶಕ್ಕೆ ಪೂರಕವಾಗಿಯೇ ಬಂದಿದೆ. ಗೊಂದಲಿಗರು ಊರನ್ನು ಪ್ರವೇಶಿಸಿದರೆ, ಊರಿನವರು ತಮಾಷೆಗೆ ಕುರಸಾಲ್ಯಾ ಸೂಳಿಮಕ್ಳು ಗೊಂದಲಿಗೇರ ಬಂದ್ರ ಇಡೀ ಊರ ಗದ್ದಲ ಹಿಡಿಸ್ತಾರು ಎನ್ನುವಲ್ಲಿ ಆಡುಭಾಷೆಯ ಗ್ರಾಮೀಣ ಸೊಗಡು ಕಾಣುತ್ತದೆ. ಮೇಲ್ವರ್ಗದವರ ದೌರ್ಜನ್ಯಕ್ಕೆ ಉದಾಹರಣೆಯಾಗಿ, ಬಾಲ್ಯದಲ್ಲಿ ಗೆಳೆಯರೊಂದಿಗೆ ನಡೆದ ತುಂಟಾಟದ ಸಂದರ್ಭದಲ್ಲಿ ವಿನಾಕಾರಣ (ಗೊಂದಲಿಗರು ಎಂಬ ಒಂದೇ ಕಾರಣಕ್ಕಾಗಿ) ಮದರಿಯವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಹೊಡೆಯಲಾಗುತ್ತದೆ. ಇದೆಲ್ಲ ದೋಸಗೇರ(ಗೊಂದಲಿಗರು) ಹುಡಗನದ ಹಲ್ಕಟಗಿರಿ. ತಿರಕೊಂಡ ತಿನ್ನ ಸೂಳೆಮಗ ಇವನ ಕಳುಮಾಡಾಕ ಹಚ್ಯಾನ, ಮದಲ ಅವನ ಕಂಬಕ್ಕಟ್ರಿ ಎಂದು ಕೂಡಿದ ಜನ ಬಯ್ಯುತ್ತಾರೆ, ಹೊಡೆಯುತ್ತಾರೆ. ಇಂಥ ಅನೇಕ ಅವಮಾನಕರ ಪ್ರಸಂಗಗಳನ್ನು ಮದರಿಯವರು ಬದುಕಿನುದ್ದಕ್ಕೂ ಅನುಭವಿಸುತ್ತ ಬಂದಿರುವುದನ್ನು ಓದುಗರೆದುರು ತೆರೆದಿಡುತ್ತಾರೆ. ಸರ್ಕಾರಿ ಉದ್ಯೋಗಿಯಾದ ಸಂದರ್ಭದಲ್ಲಿಯೂ ಸಹೋದ್ಯೋಗಿಗಳಲ್ಲಿ ಕಂಡುಬರುವ ತಿರಸ್ಕಾರ, ವ್ಯಂಗ್ಯ, ತುಚ್ಛೀಕರಿಸುವ ಸಂದರ್ಭಗಳನ್ನು ವಿವರಿಸಿದ್ದಾರೆ.
 
ತಮ್ಮ ಬದುಕಿನುದ್ದಕ್ಕೂ ಸಾಮಾಜಿಕವಾಗಿ, ಆರ್ಥಿಕವಾಗಿ ತಾವು ಅನುಭವಿಸಿದ ನೋವುಗಳು, ಕುಟುಂಬದ ಅವಿರತ ಕಷ್ಟಗಳನ್ನು ಮದರಿಯವರು ಚಾಚೂತಪ್ಪದೆ ವಿವರಿಸುತ್ತ ಹೋಗುತ್ತಾರೆ. ಓದುಗನಿಗೆ ಅಲ್ಲಲ್ಲಿ ಸಿಗುವ ಸಂತಸದ ಹೊಳಹುಗಳೆಂದರೆ, ಮದರಿಯವರು ಗೆಳೆಯರೊಂದಿಗೆ ಹಾಸ್ಯ ಮಾಡುವ ಪ್ರಸಂಗಗಳು, ಸಾಹಿತಿಗಳ ಗೆಳೆತನದಲ್ಲಿ ಅವರಿಗೆ ದೊರೆಯುವ ಅಲ್ಪ ನೆಮ್ಮದಿಗಳು ಮಾತ್ರ. ಆತ್ಮಕಥನದ ಕೊನೆಯವರೆಗೂ ಜನಾಂಗದ ನೋವುಗಳ ಪ್ರತಿನಿಧಿಯಾಗಿಯೇ ಮದರಿಯವರು ಕಾಣುತ್ತಾರೆ. ಹೀಗಾಗಿ ಗೊಂದಲಿಗ್ಯಾ ಮದರಿಯವರ ಆತ್ಮಕಥನದ ಜೊತೆಯಲ್ಲಿಯೇ ಗೊಂದಲಿಗರ ನೋವುಗಳ ಕಥನವೂ ಆಗಿದೆ. 
 
ಒಟ್ಟಾರೆ ಕನ್ನಡ ಸಾಹಿತ್ಯ ಲೋಕದಲ್ಲಿ ಇದೊಂದು ಅಪೂರ್ವವಾದ ಕೃತಿಯೆಂದೇ ನನ್ನ ಅನಿಸಿಕೆ.

ಕೃತಿ : ಗೊಂದಲಿಗ್ಯಾ
ಲೇಖಕರು: ಎ.ಎಂ.ಮದರಿ
ಪ್ರಕಾಶನ : ಲೋಹಿಯಾ ಪ್ರಕಾಶನ, ಬಳ್ಳಾರಿ.
ಬೆಲೆ : ೧೨೫

ಸೋಮವಾರ, ಜೂನ್ 10, 2013

Workplace Sexual Harassment The Way Things Are


 -Naina Kapur

Vol - XLVIII No. 24June 15, 2013, epw
http://www.epw.in/commentary/workplace-sexual-harassment.html

Sixteen years after the landmark Vishaka case judgment of the Supreme Court, the government introduced in the Lok Sabha in September 2012 a defective Sexual Harassment of Women at Workplace (Prevention, Prohibition and Redressal) Bill. The Act, as it stands, has failed to draw on the extensive research on sexual harassment that has been done in this country and elsewhere. Further, its inaccurate phrasing of workplace sexual harassment and mismatches between subheadings and content of the text eclipses the most common forms of workplace sexual harassment.

Naina Kapur (naina.kapur@gmail.com) is an advocate who pioneered the Vishaka directions on workplace sexual harassment.

Before 1997, “sexual harassment” had never settled into the Indian legal lexicon. We were instead saddled with an archaic Victorian template which criminalised “outraging or insulting” a “woman’s modesty”. It made us pretend that we had it all covered. But we never did. Unwelcome words, gestures, images, language, and all those subtle intangibles which sexually violate a woman, were comfortably woven into the pattern of life rather than the fabric of law. It all became a silent and acceptable part of “the way things are”.

Bhanwari Case
It was not until the 1990s that the sexual torment endured by a rural level change agent in Rajasthan and her subsequent determination to challenge what led to her violation gave rise to a long overdue common-sense approach to what needed to change. It was us. Sexual harassment hit the Indian legal map when Bhanwari, a saathin in Rajasthan, prevented the child marriage within an upper caste community. In doing so she was subjected to unwelcome sexual harassment through words and gestures from men of that community. When she reported the harassment, the local authority did nothing. That omission was at great cost to Bhanwari – she was subsequently gang-raped by those very men.

Surprisingly, nationwide calls for justice hovered around demands for a stringent criminal law response, i e, the filing of a first information report (FIR). With a history of failures by the criminal justice system to stem the pandemic of violence towards women, such demands appeared futile. At the risk of offending purists of criminal law, it has always struck me as somewhat offensive that a breach of criminal law is effectively treated as a crime against the state. Each FIR becomes the pursuit of a culprit by the police for a harm which the “State” has endured. At most the complainant woman is only ever a witness.

Bhanwari’s experience invited us to change that pattern. Rather than perceive sexual harassment in the home, on the street, at work or in accessing justice as individual personal injuries, we needed to experience it as a constitutional concern. The microcosmic commonality of Bhanwari’s experience of sexual harassment mirrored what scores of working Indian women faced in India – everyday, everywhere, all the time. In the absence of any existing legal response to “sexual harassment”, the opportunity was ripe for a comprehensive approach. In 1992, therefore, we approached the Supreme Court of India in a public interest litigation to do precisely that – rethink “the way things are”.


Sexual Harassment at Work
Sexual harassment was a form of discriminatory conduct at the workplace. It hampered women’s constitutional rights to equality and dignity. It sabotaged work performance, affected working environments, impaired women’s progress, resulted in absenteeism and cost both individuals and institutions in terms of qualitative health and growth. The statistics of the International Labour Organisation (ILO) reveal how 55% of women from the ages of 14 to 55 in Italy have been subjected to sexual harassment (2004); sexual harassment in the United States army has cost close to $250 million (1999 survey); 40 to 50% of women in the European Union have faced some form of sexual harassment; and a 2002 survey by Sakshi (a non-governmental organisation) of 2,000 persons across workplaces found 80% acknowledging that workplace sexual harassment existed in India.

Statistics apart, constitutional equality was never the lens through which we viewed women’s experience of sexual harm at work. It took that rare creative courage of a judge, the late Justice J S Verma (then chief justice of India) to rise to the occasion and in 1997 we were given Vishaka vs State of Rajasthan. Unlike anything before it, Vishaka was a visionary decision. Primarily, it filled a legal vacuum. Second, it viewed sexual harassment through an equality lens and thus prioritised prevention. Third, in the absence of legislation, it became legally binding on all workplaces. Unlike the criminal law, it was the State, the employer, and the institution that had to own up for the equality and dignity of women at work.

Finally, it gave us a map for creating accountability. Workplaces, organisations, institutions (including educational establishments) were compelled to raise awareness about sexual harassment, take steps to prevent it and to offer effective redress. We sought and were granted the presence of a third party expert on complaints committees for sexual harassment, a mechanism mandated by Vishaka for all workplaces.
It was an innovative moment in the history of women’s constitutional rights within all workplaces. That is what a visionary approach does for people’s rights. It expands and uplifts them through an inclusive process. Vishaka changed the map of how we could respond to other forms of violence against women. Unfortunately, the moment and momentum was frittered away by a state unable and unwilling to adhere to the bar Vishaka had set. Despite the Government of India’s own ratification of Committee on the Elimination of Discrimination against Women (CEDAW), the women’s convention which promised to uphold the equality rights of women in all aspects of life, its commitment rang hollow. Added to this was increased public immunity to the daily sexual exploitation of women who never took adequate notice of what Vishaka had to offer.


‘To Do Something’
Still, Vishaka made it impossible for us to slip back to the way things are. It gave us language. Women’s experience of unwelcome sexual conduct was no longer a patronising moral transgression of her ”modesty”, it was sexual harassment – a violation of her constitutional equality.
Sixteen years post the landmark judgment, the Government of India introduced a new bill. Such delay might have been justified had excellence and improving on Vishaka been the goal. In reality, the state simply awoke from its lengthy slumber to “do something”. Amidst the din of the coal block allocations scam in the Lok Sabha, a defective Sexual Harassment of Women at Workplace (Prevention, Prohibition and Redressal) Bill was allowed to pass into law without debate in September 2012. Before the Rajya Sabha, a feebler introduction was made by the minister whose “vision” suggested that it was a bill “to make them economically empowered so that they can do their work properly” – a condescending preface to constitutional equality which was the backbone of the Vishaka judgment. Adding insult to injury, nowhere does the debate find mention of constitutional equality.

Apart from the statement of objects, there is little in the language and content of the new Act which has continued to raise the bar, let alone retain the spirit of Vishaka. An itemised definition of what constitutes “workplace” might have been more easily stated as any place where a woman is present by virtue of her work – a suggestion supported by many at a consultation held in the presence of parliamentary standing committee members. Educational institutes have complained that the definition does not go far enough to include students who, while not workers, frequently suffer coercive sexual harassment on campus or otherwise linked to their educational growth, a concern endorsed by the Justice Verma Committee. Such institutes will need to adopt a creative approach to ensure students are covered. Extensive cross-country research carried out for the Vishaka hearings provided contemporary approaches to the definition and a road map for preventing workplace sexual harassment.

Use of such knowledge was scarcely evident in crafting the latest Act. Inaccurate phrasing (a trait which characterises much of the Act) of hostile workplace sexual harassment eclipses the relevance of the most common forms of workplace sexual harassment. Mismatches between subheadings and content compound that perception. A section titled “Prevention of Sexual Harassment”, for instance, fails to deliver on anything related to preventive measures. Instead, the section highlights “circumstances” which may amount to sexual harassment. Such glaring oversight betrays an abysmal lack of homework by the legislative draughtsperson and ignorance about the issue by parliamentary representatives across the political spectrum.

Diluted Version of Vishaka
As for the internal and local complaint committees now mandated under the Act in all workplaces, political understanding of what was intended to be an inclusive and informed redress mechanism simply is not there. Diluting third party presence on these committees to persons committed to “the cause of women” demeans the skill and specialisation required to meet the nuances of workplace sexual harassment. In a recent example, a lawyer committed to the “cause of women” was inducted into a government department complaints committee. Post the proceedings, my office was contacted by the department for a follow-up. Amazingly, the record revealed how the person accused of sexual harassment was allowed to openly question the complainant as part of the committee proceedings – a fundamental violation of the non-intimidation principle designed to protect complainants from just such practices. Third party persons (lawyers or not) must bring knowledge, skill and capacity to the table to ensure processes are professionally informed and unbiased. Vishaka envisaged an inclusive complaints committee to build ownership of the issue, ensure fair treatment and enhance knowledge and experience around workplace sexual harassment.
Of all sections, the most disturbing provision in the Act (Section 14) is one which punishes a “false or malicious complaint”. Such inventions are only ever peculiar to gender-specific legislations which relate to women and violence. In no other area of law do such penalty clauses exist as a matter of practice. Its presence in the new Act has no legal basis.

Investigations (and this is true of any law) are designed to determine whether a harm occurred or not. That is it. To premise an Act on the assumption that women are potential liars about their human rights abuses reeks of stereotyping women and for that reason would be constitutionally untenable. Flawed drafting further amplifies the lack of political seriousness towards socially relevant legislation for women. The “false” charges section provides that “mere” inability to substantiate a complaint or provide adequate proof “need not” attract action against the complainant, but does not enlighten us on what “need not” means. Does it imply that if a complaint does not succeed, it “ought not to but still might” attract action for false charges?
The absence of user-friendly, unambiguous and accessible language throughout the new Act renders it prone to typical gender stereotyping in such cases. In all consultations on the bill, this retrograde provision was rejected outright. To foist it into the legislation can only be perceived as an attempt to discourage women from making complaints of sexual harassment.

In the 16 years since Vishaka, progressive developments have taken place in international guidelines and practices on workplace sexual harassment. Prescribing “duties” under the new Act as a way to compel employers to prevent sexual harassment runs contrary to contemporary human rights emphasis on promoting “responsibilities”. It is the difference between what employers feel obliged to do (and hence resist and scuttle) from what they would responsibly own and do (and hence, be proud of).

Clearly, the absence of urgency and enhanced vision has given us a diluted version of Vishaka. Dilution is what traditionally allows sexually inappropriate conduct to fester, spread and eventually escalate into rape in the first place. That is how it all began in Bhanwari’s case. For that reason, a 16-year wait offers no excuse for not getting a law that mirrored global standards of excellence and understanding in systemically tackling workplace sexual harassment.

At the same time, legislation, flawed or otherwise, cannot excuse us from implementing change, one which calls upon our own willingness to connect the dots. At most, legislation has reignited attention towards the plague of workplace sexual harassment. Owning the constitutional subtext to make it work is our job. Unexpected but welcome initiatives have begun to dot the landscape even pre-legislation. A recent award by the industrial tribunal in West Bengal offers an unusually credible direction in the sexual harassment case of senior journalist Rina Mukherjee against The Statesman.

Rina Mukherjee vs The Statesman
Within six months of joining The Statesman, Rina Mukerhjee lost her job. While the company alleged that her work was “tardy” and “lacking in quality”, it suppressed Rina’s complaint of sexual harassment against the news coordinator, Ishan Joshi. Within her first month of work, Rina had taken her complaint directly to the managing director (MD), Ravinder Kumar. Understandably, she expected him to act professionally and intervene, but time passed and nothing happened. Exploiting her status as a probationer, Rina was fired by The Statesman.
Such patterns are common to organisations who fail to see the importance of promoting a workplace free from sexual harassment. Frequently, a woman on probation will find it impossible to make a complaint, let alone succeed with one. Hence, most women hesitate and tolerate the behaviour. Rina was an exception. Post her termination she filed a formal complaint with the MD, The Statesman’s owner, C R Irani and the West Bengal Women’s Commission with the firm belief that her termination was a result of her sexual harassment complaint.

The matter was eventually heard by the Industrial Tribunal (West Bengal). In a rare display of social context, insight and clarity amongst the judiciary, judge Kundan Kumar Kumai, rejected The Statesman’s claim that Rina only referred to “professional” harassment in her complaint to Ravindra Kumar. In Kumai’s view, Kumar’s failure to dig deeper was clearly suspect. In the judge’s words:
He [Ravindra Kumar] never started any enquiry however discreet it may have been. Fairplay demanded at least an explanation from the senior executives as to why there was an allegation of professional harassment against them. Rather he has gone hammer and tongs over the delay made in making the sexual harassment public, in writing. What else could she have done... she made a verbal complaint of sexual harassment and professional harassment and she was dismissed from her service even without completion of her probation period.
It should also not be forgotten that the lady workman was not only well-educated but had about ten years of journalism, with other well known publications, behind her and not a novice or a rookie journalist, at that relevant time.

Moreover...it becomes clear that there was no Committee on sexual harassment, as per the Honb’le Supreme Court’s direction in Vishaka vs State of Rajasthan, existing in The Statesman, at that relevant time...to expect-the lady workman to file a written complaint and not to believe the same, when it has been filed ‘at a later date’ is sheer bias.
The Statesman was ordered to reinstate Rina and grant her full back wages from the time of her termination to the date of the order. It took 11 years but Rina won an order that dispels assumptions about why women take time to complain about sexual harassment, how those in power try through sheer numbers and gagged employees to dismiss such claims, and how workplaces can no longer take legal compliance on sexual harassment lightly. Had The Statesman taken her complaint seriously at the outset and complied with Vishaka, the result could have been beneficial for all – for Rina, women workers, the workplace environment and inevitably the company’s reputation.

Conclusions
Repetition creates a life pattern. Enduring workplace conduct which sexually demeans, intimidates, offends, excludes and limits women is not only about the patterns of sexist behaviour, it is also about the repetitive nature of our own complacency. We have become immune to the pervasive harm of sexual harassment and its unconstitutional character.

People like judge Kumai, justice Verma, Bhanwari and Rina remind us that this need not be so. They inspire the rest of us who care, to use our carefully crafted skills, know-how and passion to innovate and transform the most ill-crafted provisions in law to work for us rather than limit us.

Sexual harassment need not be “the way things are”. It is up to us as political leaders, judges, responsible workplaces and individuals to change that pattern of thought. Having found its way onto our constitutional map for all to follow the direction and visibility of workplace sexual harassment will be determined by the men and women who understand the professional and human worth of speaking up. As frightening as that can be, it will enable us to own our constitutional equality not has some elusive right we should continue to aspire for, but as something we can live, experience and embrace everyday. That is not the way things are, that is the way things should be.

ಶುಕ್ರವಾರ, ಜೂನ್ 7, 2013

ಮಕ್ಕಳ ಹಸಿವು ನೀಗಿಸುವ ಬಿಸಿಯೂಟ



ಶಿಕ್ಷಣದಿಂದ ವಿಮುಖರಾದ ಮಕ್ಕಳನ್ನು ಮತ್ತೆ ಶಾಲೆಯತ್ತ ಸೆಳೆಯಲು, ದಾಖಲಾದ ಮಾಕ್ಕಳ ಹಾಜರಾತಿ ಕಾಯ್ದಿಟ್ಟುಕೊಳ್ಳಲು, ಮಕ್ಕಳ ಮಾನಸಿಕ ಹಾಗೂ ದೈಹಿಕ ಶಿಕ್ಷಣಕ್ಕೆ ಅನುಕೂಲವಾಗುವಂತೆ ಪೌಷ್ಟಿಕ ಆಹಾರ ನೀಡಲು, ಮುಖ್ಯವಾಗಿ ಸಾಮಾಜಿಕ ಸಮಾನತೆಯನ್ನು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಆರಂಭಗೊಂಡ ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿ ನಿತ್ಯ ರಾಜ್ಯದ ಆರು ಲಕ್ಷಕ್ಕೂ ಅಧಿಕ ಮಕ್ಕಳ ಹಸಿವು ನೀಗಿಸುವ ಪ್ರಯತ್ನ ನಡೆಯುತ್ತಿದೆ.
ಹಸಿದ ಮಗುವಿಗೆ ಆಹಾರ ಒದಗಿಸಬೇಕೆಂಬ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದ ಮೇರೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ಆರಂಭಗೊಂಡ ಬಿಸಿಯೂಟದ ಯೋಜನೆಗೀಗ ಹತ್ತರ ಸಂಭ್ರಮ.
ರಾಜ್ಯದ ತೀರಾ ಹಿಂದುಳಿದ ಈಶಾನ್ಯ ಜಿಲ್ಲೆಗಳಿಂದ ಆರಂಭಗೊಂಡ ಬಿಸಿಯೂಟ ಯೋಜನೆಯನ್ನು 2003ರಲ್ಲಿ ರಾಜ್ಯದ 20 ಜಿಲ್ಲೆಗಳಿಗೆ  ವಿಸ್ತರಿಸಲಾಯಿತು. 2007ರಲ್ಲಿ ಕೇವಲ ಸರ್ಕಾರಿ ಶಾಲೆಗಳು ಮಾತ್ರವಲ್ಲದೆ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳಿಗೂ ಬಿಸಿಯೂಟ ವಿಸ್ತರಿಸಲಾಗಿದೆ. ಅದರಂತೆ ಬೆಂಗಳೂರಿನಲ್ಲಿ ಪ್ರತಿನಿತ್ಯ 1ರಿಂದ 5ನೇ ತರಗತಿಯ 1.67 ಲಕ್ಷ, 6ರಿಂದ 8ನೇ ತರಗತಿಯ 1.13ಲಕ್ಷ ಹಾಗೂ 9ಮತ್ತು 10ನೇ ತರಗತಿಯ 72 ಸಾವಿರ ವಿದ್ಯಾರ್ಥಿಗಳು ನಿತ್ಯ ಬಿಸಿಯೂಟದ ಸವಿಯುತ್ತಿದ್ದಾರೆ.

ನಗರದಲ್ಲಿರುವ ಒಟ್ಟು 2,323 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಹುತೇಕ ಶಾಲೆಗಳಿಗೆ ಅಡುಗೆ ಕೋಣೆಗಳು ನಿರ್ಮಾಣಕ್ಕೆ ಸ್ಥಳಾವಕಾಶ ಇಲ್ಲ. ಕೆಲವೆಡೆ ಅಡುಗೆಯವರು ಸಿಗುತ್ತಿಲ್ಲ. ಈ ಕಾರಣಗಳಿಂದ ಸರ್ಕಾರೇತರ ಸಂಸ್ಥೆಗಳು ಊಟ ನೀಡುವ ಜವಾಬ್ದಾರಿ ವಹಿಸಿಕೊಂಡಿವೆ. ಅದರಂತೆ 1,943 ಶಾಲೆಗಳ ಮೂರು ಲಕ್ಷ ಮಕ್ಕಳಿಗೆ ಇಸ್ಕಾನ್, ಅದಮ್ಯ ಚೇತನ, ಸಮರ್ಥನಂ, ಸಾಯಿ ಮಂಡಳಿ, ಮೋಹಿಷಿನ್ ಷರೀಫ್ ಎಜುಕೇಷನಲ್ ಟ್ರಸ್ಟ್ ಇತ್ಯಾದಿಗಳು ಸೇರಿದಂತೆ ಒಟ್ಟು 18 ಖಾಸಗಿ ಸಂಘ ಸಂಸ್ಥೆಗಳು ಬಿಸಿಯೂಟದಲ್ಲಿ ತೊಡಗಿಸಿಕೊಂಡಿವೆ. ಉಳಿದಂತೆ 380 ಶಾಲೆಗಳು ಸ್ವಂತ ಅಡುಗೆ ಕೋಣೆಗಳನ್ನು ಹೊಂದಿವೆ.

ಬಿಸಿಯೂಟದಲ್ಲಿ ಪ್ರತಿಯೊಂದು ಮಗುವಿಗೂ ಉತ್ತಮ ಕ್ಯಾಲೊರಿ ಸಿಗುವ ಆಹಾರ ಪದಾರ್ಥಗಳನ್ನು ನೀಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ 75:25ರ ಅನುಪಾತದಲ್ಲಿ ಅನುದಾನ ನೀಡುತ್ತಿದೆ. ಅದರಂತೆ ಪ್ರಾಥಮಿಕ ಶಾಲೆಯ ಪ್ರತಿಯೊಂದು ಮಗುವಿಗೂ ಊಟಕ್ಕೆ  ರೂ3.11, ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತಲಾ ರೂ4.65 ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಲಾ ರೂ6.16ರಂತೆ ಅನುದಾನ ನೀಡಲಾಗುತ್ತಿದೆ. ಅಕ್ಕಿ, ಬೇಳೆ, ತರಕಾರಿ ಇತ್ಯಾದಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಅಡುಗೆ ತಯಾರಿಕಾ ವೆಚ್ಚವನ್ನು ಶೇ 7.5ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುವುದರಿಂದ ಪರಿಷ್ಕೃತ ಪಟ್ಟಿ ಸಿದ್ಧಗೊಂಡಿದೆ. ಹೀಗಿದ್ದರೂ ಬಿಸಿಯೂಟಕ್ಕೆ ಸಂಬಂಧಿಸಿದಂತೆ ರಾಜ್ಯದ ಇತರ ಭಾಗಗಳಿಗೆ ಹೋಲಿಸಿದಲ್ಲಿ ನಗರ ಭಿನ್ನವಾಗಿದೆ. ಇಲ್ಲಿ ಅನುದಾನಿತ ಶಾಲೆಗಳಲ್ಲಿ ಕಡು ಬಡವರಿಂದ ಹಿಡಿದು, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರೂ ವ್ಯಾಸಂಗ ಮಾಡುತ್ತಿರುವುದರಿಂದ ಬಿಸಿಯೂಟವನ್ನು ಕೆಲವು ಮಕ್ಕಳೇ ನಿರಾಕರಿಸುತ್ತಿರುವುದೂ ಕೇಳಿಬರುತ್ತಿದೆ. ಜತೆಗೆ ಅಡುಗೆಯವರ ಕೊರತೆ, ಪಾಠ, ಊಟದ ಜತೆ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಇನ್ನೂ ಅನೇಕ ಜವಾಬ್ದಾರಿಗಳು ಇರುವುದರಿಂದ ಬಿಸಿಯೂಟ ನಿರ್ವಹಣೆ ಕಷ್ಟವಾಗುತ್ತಿದ್ದುದರಿಂದ ಯೋಜನೆಯ ಭಾಗವಾಗಿ ಖಾಸಗಿಯವರ ಮೊರೆಹೋಗಿರುವುದರಿಂದ ಇಲಾಖೆಯ ಅಧಿಕಾರಿಗಳು ಕೊಂಚ ನಿರಾಳರಾಗಿದ್ದಾರೆ.

ನೂಪಾ ವರದಿ
ಶೈಕ್ಷಣಿಕ ಯೋಜನೆ ಹಾಗೂ ಆಡಳಿತ ರಾಷ್ಟ್ರೀಯ ವಿಶ್ವವಿದ್ಯಾಲಯಕ್ಕಾಗಿ (ನೂಪಾ) ಡಾ. ಕೆ. ಶ್ರೀನಿವಾಸ ಅವರು ಸಮೀಕ್ಷೆಯೊಂದನ್ನು ನಡೆಸಿದರು. ಅದರ ಅನ್ವಯ `ಕರ್ನಾಟಕದಲ್ಲಿ ಯೋಜನೆ ಯಶಸ್ವಿಯಾಗುವಲ್ಲಿ ಶಾಲೆ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿಯ ಪಾತ್ರ ದೊಡ್ಡದು'. ಇತರ ರಾಜ್ಯಗಳಂತೆ ಇಲ್ಲಿ ಬಿಸಿಯೂಟ ನೀಡುವುದರ ಜತೆಗೆ ಮಳೆ ನೀರು ಕೊಯ್ಲು, ಬಿಸಿಯೂಟಕ್ಕೆ ಬೇಕಾದ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುವುದು, ನೀರಿನ ಉಳಿತಾಯ ಇತ್ಯಾದಿ ಪರಿಸರ ಸಂಬಂಧಿ ಕಾರ್ಯಗಳನ್ನು ಕೈಗೊಂಡಿರುವುದು ಹೊಸ ಬೆಳವಣಿಗೆ ಎಂದು ಅದು ಹೇಳಿದೆ. ಇದು ಇತರ ರಾಜ್ಯಗಳಿಗೆ ಮಾದರಿ ಎಂದೂ ಅದು ತಿಳಿಸಿದೆ.

ಎಸ್‌ಡಿಎಂಸಿ ಸದಸ್ಯರು, ತಾಯಂದಿರ ಸಮಿತಿಯ ಸಕ್ರಿಯ ಪಾಲುದಾರಿಕೆಯಿಂದ ಯೋಜನೆಗೆ ಬಲ ಬಂದಂತಾಗಿದೆ ಎಂದಿರುವ ಸಮೀಕ್ಷೆಯಲ್ಲಿ ಯೋಜನೆಯ ಅನುಷ್ಠಾನದಲ್ಲಿ ಎನ್‌ಜಿಒಗಳ ಸಕ್ರಿಯ ಪಾತ್ರವನ್ನೂ ಉಲ್ಲೇಖಿಸಲಾಗಿದೆ. ಜತೆಗೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ಹಾಗೂ ಸಾರ್ವಜನಿಕರಿಗೆ ಅಡುಗೆ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ಕಲ್ಪಿಸಿರುವುದರಿಂದ, ಅಡುಗೆಗೆ ಬಳಸುವ ಪದಾರ್ಥಗಳ ಗುಣಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗಿದೆ. `ನೂಪಾ' ನಡೆಸಿರುವ ಸಮೀಕ್ಷೆಯಲ್ಲಿ ಬಿಸಿಯೂಟ ಯೋಜನೆಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಿರುವ ಶಾಲೆಗಳಲ್ಲಿ ತೀರಾ ಹಿಂದುಳಿದ ಎಚ್.ಡಿ. ಕೋಟೆ ತಾಲ್ಲೂಕಿನ ನಂಜನಾಯಕನಹಳ್ಳಿಯಂಥ ಶಾಲೆ ಇದೆ. ಆದರೆ ಇಷ್ಟೆಲ್ಲಾ ಮುಂದುವರಿದಿರುವ ಬೆಂಗಳೂರು ನಗರ ಜಿಲ್ಲೆಯ ಯಾವ ಶಾಲೆಯೂ ಇದರಲ್ಲಿ ಪ್ರಗತಿ ಸಾಧಿಸಿಲ್ಲ.

ಅಡುಗೆ ಮಾಡುವವರ ಕೊರತೆ
`ಬೆಂಗಳೂರಿನಂಥ ದುಬಾರಿ ನಗರದಲ್ಲಿ ತಿಂಗಳಿಗೆ ಒಂದು ಸಾವಿರ ಸಂಭಾವನೆಗೆ ಅಡುಗೆಯವರು ಸಿಗುವುದೇ ದೊಡ್ಡ ಸಮಸ್ಯೆಯಾಗಿದೆ. ಕಟ್ಟಡ ನಿರ್ಮಾಣ ಕಾರ್ಯದಲ್ಲೇ ದಿನಕ್ಕೆ  ರೂ 500 ಸಂಭಾವನೆ ಸಿಗುವುದರಿಂದ ಸರ್ಕಾರ ನಿಗದಿಪಡಿಸಿರುವ ಸಂಬಳಕ್ಕೆ ಯಾರೂ ಬಾರದಿರುವುದೂ ಖಾಸಗಿಯವರತ್ತ ಮುಖ ಮಾಡಲು ಒಂದು ಕಾರಣವಾಗಿದೆ. ಅಡುಗೆಯವರು ಮಾತ್ರವಲ್ಲದೆ ಅಡುಗೆ ಬಡಿಸುವ, ತಟ್ಟೆ ತೊಳೆಯುವ ಸಹಾಯಕರಿಗೂ ಬೆಂಗಳೂರಿನಲ್ಲಿ ಕೊರತೆ ಉಂಟಾಗಿದೆ. ಇದೀಗ ಅಡುಗೆ ಸಹಾಯಕರನ್ನು ನೇಮಿಸಿಕೊಳ್ಳುವ ಹೊಸ ಪ್ರಸ್ತಾವನೆಗೆ ಚಾಲನೆ ದೊರೆತಿದೆ. ಅದರಂತೆ ಬಿಸಿಯೂಟ ನೀಡುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ 13 ಸಂಸ್ಥೆಗಳಿಗೆ ಅಗತ್ಯವಿರುವ 1657 ಸಹಾಯಕರು ಹಾಗೂ ಅಡುಗೆ ಕೇಂದ್ರಗಳಿರುವ 380 ಶಾಲೆಗಳಿಗೆ ಸಹಾಯಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇಸ್ಕಾನ್ ಒಂದಕ್ಕೇ 2,572 ಸಹಾಯಕರು ಬೇಕಾಗಿದ್ದಾರೆ.
ಆದರೆ ಕಾರ್ಮಿಕ ಇಲಾಖೆಯ ನಿಯಮಗಳ ಅನ್ವಯ ನೌಕರರಿಗೆ ಭವಿಷ್ಯನಿಧಿ, ಇಎಸ್‌ಐ ಇತ್ಯಾದಿ ನೀಡುವುದು ಅತಿ ಅವಶ್ಯಕ. ಹೀಗಾಗಿ ಸರ್ಕಾರ ನೀಡುವ ಹಣಕ್ಕಿಂತ ಹೆಚ್ಚಿನ ಆರ್ಥಿಕ ಹೊರೆಯನ್ನು ಖಾಸಗಿ ಸಂಸ್ಥೆಗಳೇ ಹೇಗೋ ಭರಿಸಿಕೊಳ್ಳುತ್ತಿವೆ. ಸಹಾಯಕರ ಭತ್ಯೆಯನ್ನು  ರೂ 1500ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಕೂಡ ಸರ್ಕಾರದ ಮುಂದಿದೆ. ಈ ಹಣವನ್ನು ನೇರವಾಗಿ ಸಹಾಯಕರ ಬ್ಯಾಂಕ್ ಖಾತೆಗೆ ಹಾಗೂ ಖಾಸಗಿ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವವರಿಗಾಗಿ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಆದರೆ ಖಾಸಗಿ ಸಂಸ್ಥೆಗೆ ಬಿಡುಗಡೆ ಮಾಡಿದ ಹಣವನ್ನು ಆರ್‌ಟಿಜಿಎಸ್ (ರಿಯಲ್ ಟೈಂ ಗ್ರಾಸ್ ಸೆಟಲ್‌ಮೆಂಟ್) ಮೂಲಕವೇ ಸಹಾಯಕರಿಗೆ ನೀಡಬೇಕೆಂಬ ಷರತ್ತನ್ನು ಇದು ಒಳಗೊಂಡಿದೆ' ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಬಿಸಿಯೂಟ ಬೇಡ ಎಂದ ಮಕ್ಕಳು
ಬೆಂಗಳೂರಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಹಾಗೂ ಅನುದಾನಿತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಅದರಂತೆಯೇ ಕೆಲವು ಅನುದಾನಿತ ಶಾಲೆಗಳಲ್ಲಿ ಮೇಲ್ಮಧ್ಯಮ ವರ್ಗದ ಮಕ್ಕಳು ಓದುತ್ತಿದ್ದು, ಅವರೆಲ್ಲರೂ ಬಿಸಿಯೂಟವನ್ನು ತಿರಸ್ಕರಿಸಿದ ಘಟನೆಗಳೂ ನಡೆದಿವೆ. ಹೀಗಾಗಿ ಖಾಸಗಿ ಸಂಘ ಸಂಸ್ಥೆ ಹಾಗೂ ಶಾಲಾ ಕ್ಯಾಂಟೀನ್ ಅವರೊಂದಿಗೆ ಒಪ್ಪಂದ ನಡೆಸಿ ಅಲ್ಲಿ ಊಟದ ವ್ಯವಸ್ಥೆ ಮಾಡಿರುವ ಉದಾಹರಣೆಗಳಿವೆ. ಒಟ್ಟಿನಲ್ಲಿ 2012-13ನೇ ಸಾಲಿನಲ್ಲಿ ಬಿಸಿಯೂಟಕ್ಕಾಗಿ ಬೆಂಗಳೂರು ನಗರದ ಶಾಲೆಗಳಿಗೆ ಸರ್ಕಾರ ಒಟ್ಟು  ರೂ 35.5 ಕೋಟಿ ಹಣ ಬಿಡುಗಡೆ ಮಾಡ್ದ್ದಿದು, ಅದರಲ್ಲಿ ಸುಮಾರು  ರೂ32 ಕೋಟಿಯಷ್ಟು ಖರ್ಚಾಗಿದೆ ಎಂದೆನ್ನುತ್ತವೆ ಇಲಾಖೆಯ ದಾಖಲೆಗಳು.

ಬಿಸಿಯೂಟದಲ್ಲಿ ತಾಯಂದಿರು
ವಾರದ ದಿನಗಳಲ್ಲಿ ಬೇಳೆ, ತರಕಾರಿ ಬಳಸಿಕೊಂಡು ಅನ್ನ- ಸಾಂಬಾರ್, ಶುಕ್ರವಾರ ಬಿಸಿಬೇಳೆ ಭಾತ್ ಹಾಗೂ ಶನಿವಾರ ತರಕಾರಿ ಉಪ್ಪಿಟ್ಟು ಅಥವಾ ಸಿಹಿ ಪೊಂಗಲ್ ನೀಡಲಾಗುತ್ತಿದೆ. ಶಾಲೆಗಳಲ್ಲಿ ತಯಾರಾಗುವ ಬಿಸಿಯೂಟದ ಗುಣಮಟ್ಟದ ಮೇಲ್ವಿಚಾರಣೆಯನ್ನು ಶಾಲಾ ಹಂತದಲ್ಲಿ ಮುಖ್ಯ ಅಡುಗೆಯವರು ಹಾಗೂ ಶಾಲೆಗಳ ಅಭಿವೃದ್ಧಿ ನಿರ್ವಹಣಾ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರು ವಹಿಸಿಕೊಳ್ಳುತ್ತಾರೆ. ಕೇವಲ ಅವರು ಮಾತ್ರವಲ್ಲದೆ ಶಾಲಾ ಮಕ್ಕಳ ತಾಯಂದಿರೂ ಅಡುಗೆಯ ಮೇಲ್ವಿಚಾರಣೆ, ಊಟದ ರುಚಿ ನೋಡುವುದರ ಜತೆಗೆ ಬಡಿಸುವುದರಲ್ಲೂ ಪಾಲ್ಗೊಳ್ಳುವ ಮೂಲಕ ಮಕ್ಕಳಿಗೆ ಮನೆ ವಾತಾವರಣ ನೀಡುವ ಅವಕಾಶವೂ ಯೋಜನೆಯಲ್ಲಿ ಕಲ್ಪಿಸಲಾಗಿದೆ.

ನಿರ್ಗತಿಕ ಮಹಿಳೆಯರ ಅವಕಾಶ ಎನ್‌ಜಿಒ ಪಾಲು
ಶೈಕ್ಷಣಿಕ ಪ್ರಗತಿಯಲ್ಲಿ ಮಗುವಿನ ಗ್ರಹಿಕಾ ಶಕ್ತಿ ವೃದ್ಧಿಸುವ ಸಲುವಾಗಿ ಪೌಷ್ಟಿಕ ಆಹಾರ ನೀಡುವ ಸರ್ಕಾರದ ಯೋಜನೆ ನಿಜಕ್ಕೂ ಶ್ಲಾಘನೀಯ. ಆದರೆ ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟದ ಜವಾಬ್ದಾರಿ ವಹಿಸಿರುವುದರಿಂದ ಹಿಂದುಳಿದ, ನಿರ್ಗತಿಕ ಮಹಿಳೆಯರಿಗೆ ಕೆಲಸ ನೀಡುವ ಯೋಜನೆಯ ಆಶಯಕ್ಕೆ ಧಕ್ಕೆಯಾಗಿದೆ. ಪ್ರಗತಿ ಸಾಧಿಸಬೇಕೆಂಬ ಏಕೈಕ ಉದ್ದೇಶದಿಂದ ಎನ್‌ಜಿಒಗಳನ್ನು ಯೋಜನೆಯಲ್ಲಿ ಸೇರಿಸಿಕೊಂಡಿರುವುದರಿಂದ ಯೋಜನೆಯ ಧ್ಯೇಯೋದ್ದೇಶ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಹೊಣೆ.

ಬೆಂಗಳೂರಿನಲ್ಲಿ ಲಕ್ಷಕ್ಕೂ ಅಧಿಕ ಮಕ್ಕಳಿಗೆ ಖಾಸಗಿ ಸಂಘ ಸಂಸ್ಥೆಗಳು ಸಿದ್ಧಪಡಿಸಿದ ಆಹಾರ ಪೂರೈಕೆಯಾಗುತ್ತಿದೆ. ಆದರೆ ಇವೆಲ್ಲವೂ ಕೇಂದ್ರೀಕೃತ ಅಡುಗೆ ಕೋಣೆಯಲ್ಲಿ ಸಿದ್ಧವಾಗುತ್ತಿವೆ. ಮಧ್ಯಾಹ್ನ ಊಟ ನೀಡಬೇಕೆಂದರೆ ದೂರದ ಶಾಲೆಗಳಿಗೆ ಕನಿಷ್ಠ ಬೆಳಿಗ್ಗೆ 9 ಗಂಟೆಯೊಳಗೆ ಅಡುಗೆ ಮನೆಯಿಂದ ಆಹಾರ ಹೊರಡಬೇಕು. ಅಂದರೆ ಅವು ಮಧ್ಯರಾತ್ರಿಯಿಂದಲೇ ಸಿದ್ಧವಾಗುತ್ತವೆ ಎಂದಾಯಿತಲ್ಲ. ದೂರದ ಶಾಲೆಗಳಿಗೆ ಹೋಗುವುದರೊಳಗೆ ಕೆಲವೆಡೆ ಅನ್ನವು ನೀರು ಬಿಟ್ಟುಕೊಂಡಿರುತ್ತದೆ ಅಥವಾ ಹಳಸಿ ಹೋಗಿರುತ್ತದೆ. ಅಂಥ ಘಟನೆಗಳು ನಮ್ಮ ಗಮನಕ್ಕೆ ಬಂದಿವೆ.

ಎನ್‌ಜಿಒಗಳು ಮೇಲ್ನೋಟಕ್ಕೆ ಸಮಾಜ ಸೇವೆ ಮಾಡುತ್ತಿರುವ ಕುರಿತು ಮಾತನಾಡುತ್ತವೆ. ಆದರೆ, ಇದೇ ಮಕ್ಕಳ ಚಿತ್ರಗಳನ್ನು ತೋರಿಸಿ ಹೊರಗಿನಿಂದ ಅವು ಹಣ ವಸೂಲು ಮಾಡುತ್ತಿರುವುದೂ ಗೊತ್ತಿದೆ. ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಇವು ಸಮಾಜ ಸೇವೆಯ ಮುಖವಾಡ ಹಾಕಿಕೊಂಡಿವೆ. ಇಸ್ಕಾನ್ ಮತ್ತಿತರ ಸಂಸ್ಥೆಗಳು ಊಟ ನೀಡುತ್ತಿರುವ ಕೆಲವು ಶಾಲೆಗಳಿಗೆ ಸರಿಯಾದ ರಸ್ತೆ ಇಲ್ಲ. ಹೀಗಾಗಿ ಶಾಲಾ ಮಕ್ಕಳೇ ಊಟವನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವ ಪರಿಸ್ಥಿತಿಯೂ ಇದೆ. ಇದರ ಬದಲಾಗಿ ಅಲ್ಲೇ ಅಡುಗೆ ಕೋಣೆ ನಿರ್ಮಿಸಲು ಸರ್ಕಾರ ಮುಂದಾದಲ್ಲಿ ಮಕ್ಕಳಿಗೆ ಬಿಸಿಯೂಟ ಸಿಗುವುದರ ಜತೆಗೆ ನಿರ್ಗತಿಕ ಹಾಗೂ ಹಿಂದುಳಿದ ಮಹಿಳೆಯರ ದುಡಿಮೆಗೆ ಒಂದು ದಾರಿಯೂ ಆದಂತಾಗುತ್ತದೆ. ಒಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿ ಖಾಸಗಿ ಸಂಸ್ಥೆಗಳನ್ನು ಸೇರಿಸಿಕೊಂಡಿರುವುದರಿಂದ ರಾಜ್ಯದಲ್ಲಿ ಒಟ್ಟು 20 ಸಾವಿರ ಮಹಿಳೆಯರಿಗೆ ಸಿಗಬೇಕಾದ ಕೆಲಸ ತಪ್ಪಿಹೋಗಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ.

-ಎಸ್. ವರಲಕ್ಷ್ಮಿ, ಮಧ್ಯಾಹ್ನದ ಬಿಸಿಯೂಟ ಯೋಜನೆ ನೌಕರರ ಸಂಘದ ರಾಜ್ಯಾಧ್ಯಕ್ಷೆ

ಗುರುವಾರ, ಜೂನ್ 6, 2013

ಗೋಕ್ಷೀರ, ಕುರಿಹಾಲು ಮತ್ತು ಮೃತಪೀಠಗಳು


ಇತ್ತೀಚೆಗೆ ಮಠಾಧೀಶರೊಬ್ಬರು `ಕುರಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಬೇಕು' ಎಂಬ ಒತ್ತಾಯಿಸಿದ್ದನ್ನು ಹಲವು ದೃಶ್ಯ ಮಾಧ್ಯಮಗಳು ವ್ಯಂಗ್ಯವಾಗಿ ಬಿತ್ತರಿಸಿವೆ. ಪ್ರಸ್ತುತ ವಿಚಾರ ಕುರಿತಂತೆ ಒಂದು ಪ್ರತಿಕ್ರಿಯೆ. ಗೋಕ್ಷೀರವೇ ಶ್ರೇಷ್ಠ ಮತ್ತು ಕುರಿಹಾಲು ಕನಿಷ್ಠ ಎಂಬ ಅಭಿಪ್ರಾಯವನ್ನು ಜನಮಾನಸದಲ್ಲಿ ತೂರಿಸಿದ ಪುರೋಹಿತಶಾಹಿಗಳ ಹುನ್ನಾರಕ್ಕೆ ಶತಶತಮಾನಗಳ ಇತಿಹಾಸವಿದೆ. ಆದರೆ ಗೋವಿನಷ್ಟೇ ಕುರಿಯೂ ಪವಿತ್ರವೆಂದು ನಂಬಿ ಅವೆರಡೂ ನಮ್ಮ ಬದುಕಿನ ಎರಡು ಕಣ್ಣು(ಗೋವು ಕಾಮಧೇನು ಮತ್ತು ಕುರಿ ಪವಿತ್ರ ಲಕ್ಷ್ಮಿ)ಗಳೆಂದು ಭಾವಿಸಿ, ಪಾಲಿಸಿ, ಪೋಷಿಸುತ್ತ ಬಂದ ಪಶುಪಾಲಕರಿಗೆ ಐವತ್ಮೂರು ಸಾವಿರ ವರ್ಷಗಳ ದೀರ್ಘ ಚರಿತ್ರೆಯಿದೆ ಎಂಬುದನ್ನು ಇಂತಹವರು ಅರಿಯುವ ಅವಶ್ಯಕತೆಯಿದೆ. ಇಂದಿಗೂ ಪಶುಪಾಲಕರು (ಹಾಲುಮತ) ಕುರಿಹಿಂಡನ್ನು `ನನ್ನ ಬದುಕು' ಎಂದೇ ಸಂಬೋಧಿಸುತ್ತಾರೆ.

ಬೌದ್ಧ ಮತಾನುಯಾಯಿ, ಕ್ರಿಸ್ತ ಪೂರ್ವದಲ್ಲಿ ಭಾರತ ಸೇರಿದಂತೆ ಇಂದಿನ ಪಾಕಿಸ್ತಾನ, ಆಫ್ಘಾನಿಸ್ತಾನಗಳನ್ನು ಆಳಿದ ಕುರುಬ ಸಮುದಾಯ ((Romavanshi-baghela shephard king)ದ ಸಾಮ್ರೋಟ ಕನಿಷ್ಕನು ತನ್ನ ನಾಣ್ಯದಲ್ಲಿ ಕುರಿ (ಮೇಕೆ)ಯ ಚಿತ್ರವನ್ನು ಕೊರೆಸಿ ಚಲಾವಣೆಗೆ ಬಿಟ್ಟಿದ್ದುದು ಶಾಸನಗಳಿಂದ ತಿಳಿದುಬರುತ್ತದೆ. ‘kaniska’s coin have 4 armed shiva, standing facing the head holding in upper right hand vajra (thunderbolt) and goat (sheep) on its bind legs in right field’ (catalogue of  coins by V.A. Smith, 1906, vol.1, P.70).ಇದೇ ರೀತಿ ಹುವಿಷ್ಕ ((Huvishaka)ಎಂಬ ದೊರೆಯು ಸಹ ಕುರಿ/ಮೇಕೆಗಳಿಗೆ ರಾಷ್ಟ್ರೀಯ ಮನ್ನಣೆಯನ್ನು ಕೊಟ್ಟಿದ್ದುದು ತಿಳಿದುಬರುತ್ತದೆ. ‘Huvishaka’ s coins have shiva four armed with one face turned wearing indian waiste coat, holding in upper right hand vajra, in lower right hand goat (sheep), in left upper hand trident and lower left hand resting on the horns/ heads of the goat/ sheep. ಇದಲ್ಲದೇ `ಭಾರತದ ರಾಜಪುರಾಣದ ವಲ್ಲಭಪುರ, ಕೋಟಾಬರೂದಿ, ಚಿತ್ತೂರು, ಉದಯಪುರ, ಬಿಕಾನೇರ್, ಮೇವಾಡಗಳನ್ನು ಕುರುಬ ರಾಜರು ಆಳಿದ್ದು, ಕರೋಲಿ ಸಂಸ್ಥಾನದ ದೊರೆಗಳು ತಮ್ಮ ರಾಜಮುದ್ರೆ (ಲಾಂಛನ)ಯಲ್ಲಿ  ಎದುರುಬದುರಾಗಿ ನಿಂತ ಕುರಿ ಮತ್ತು ಹುಲಿಗಳು, ಮಧ್ಯದಲ್ಲಿ ಹಸು (ನಂದಿ) ಮತ್ತು ಮೇಲ್ಗಡೆ ಮೇಕೆಯ ತಲೆಯನ್ನು ಹೊಂದಿದ ಚಿತ್ರವಿದೆ ((Tod’s Rajasthan,  Pandit Lalit Mohan Audhiya, vol.1, 1894.) ಎಂದು ಇತಿಹಾಸಕಾರರು ದಾಖಲಿಸಿರುವುದನ್ನು ಗಮನಿಸಿದರೆ ಕುರಿ (ಮೇಕೆ)ಗಳಿಗೆ ರಾಜಮನ್ನಣೆ ಪ್ರಾಚೀನ ಕಾಲದಿಂದಲೂ ಇತ್ತು ಎಂಬುದು ಅರ್ಥವಾಗುತ್ತದೆ. ಆದರೆ ಇಂದೇಕೆ ಈ ಅವಗಣನೆ, ಹೀಯಾಳಿಕೆ?

ಕುರಿಯನ್ನು ಮಬ್ಬು, ದಡ್ಡಪ್ರಾಣಿ ಎನ್ನುವುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಮುಗ್ದ, ಮೃದು ಸ್ವಭಾವದ ಇದು ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಜೀವಿಯೂ ಹೌದು. ಮಾಂಸಕ್ಕಾಗಿ ಸಾಕುವ ಮತ್ತು ಹಾಲುಕೊಡುವ ಇತರ ಪ್ರಾಣಿಗಳಾದ ಹಸು, ಎಮ್ಮೆ, ಹಂದಿ ಇತ್ಯಾದಿಗಳು ತಮ್ಮ ಇತರ ಆಹಾರಗಳ ಜೊತೆಗೆ ಮನುಷ್ಯನ ಮಲವನ್ನೂ ತಿಂದು ಬದುಕಿದರೆ, ಕುರಿಯು ಆ ವಾಸನೆ ಇರುವ ಜಾಗದಲ್ಲಿ ನಿಲ್ಲುವುದೇ ಇಲ್ಲ. ತನ್ನ ಒಡೆಯ ಒಂದು ಸಲ ಸೂಚಿಸಿದ ಸಂಜ್ಞೆಗಳನ್ನು ಅದು ಬದುಕಿರುವವರೆಗೂ ಪಾಲಿಸುತ್ತದೆ. ತನ್ನ ದೇಹದ ಮಾಂಸ, ಹಾಲು, ಉಣ್ಣೆ, ಹಿಕ್ಕೆಯನ್ನು ಮಾನವನಿಗೆ ದಾನ ಮಾಡುವ ಕುರಿಯ ಪವಿತ್ರತೆ ಈ ಜೀವ ಜಗತ್ತಿನಲ್ಲಿ ಇನ್ನೊಂದು ಪ್ರಾಣಿಗಿಲ್ಲ. ಸಸ್ಯಶಾಸ್ತ್ರ ಸೂಚಿಸುವಂತೆ ಅತ್ಯಂತ ವಿಷಕಾರಿಯಾದ ಎಕ್ಕೆ, ಹುಸಲಂಗಿ ಗಿಡಗಳನ್ನು ತಿಂದು, ಅರಗಿಸಿ ಅಮೃತದಂತಹ ಹಾಲು ನೀಡುವ ನಿಷ್ಪಾಪಿ ಬದುಕನ್ನು ಅರಿಯದ ಮಾನವನೇ ಮೂರ್ಖನಲ್ಲವೆ? ದೇಶದ ಬಹುಸಂಖ್ಯಾತರಿಗೆ ಇದರ ಮಾಂಸದ ಅವಶ್ಯಕತೆಯಿರುವ ಕಾರಣಕ್ಕಾಗಿ ಅದರ ಮೌಲ್ಯವನ್ನು ಕುಂಠಿತಗೊಳಿಸುವುದು ಯಾವ ನ್ಯಾಯ?

ಇನ್ನು ಕುರಿ ಉದ್ಯಮ ದೇಶದ ಆರ್ಥಿಕತೆಯ ಮೇಲೆ  ಬಹು ಮುಖ್ಯ ಪರಿಣಾಮ ಬೀರಿದೆ. ಕಾಬೂಲ್, ನೇಪಾಳ, ಟಿಬೆಟ್‌ಗಳು ಸೇರಿದಂತೆ ಕಾಶ್ಮೀರದಿಂದ ಭಾರತದಾದ್ಯಂತ ಕನ್ಯಾಕುಮಾರಿಯವರೆಗೆ ಕುರಿ ಸಾಕಾಣಿಕೆಯಲ್ಲಿ ದೇಶದ ಶ್ರಮ-ಜೀವನಾಡಿಯಾದ ದಲಿತ ಹಿಂದುಳಿದ ಸಮುದಾಯಗಳು ತೊಡಗಿಸಿಕೊಂಡಿವೆ.

ಕುರಿ ಸಾಕಾಣಿಕೆ, ಕಂಬಳಿನೇಕಾರಿಕೆ, ಮಾಂಸ, ಚರ್ಮಗಳ ಆಮದು-ರಪ್ತು ವ್ಯಾಪಾರ ಇತ್ಯಾದಿ., ಇಂದು ರಾಷ್ಟ್ರದ ಮೊದಲ ಸಾಲಿನ ಉದ್ಯಮವಾಗಿದ್ದು, ನೂರಾರು ಕೋಟಿ ರೂಪಾಯಿಗಳ ವಹಿವಾಟು ಹೊಂದಿದೆ. ಕುರಿಯ ಮೂತ್ರಕ್ಕೆ ಔಷಧಿಯ ಗುಣಗಳಿವೆ ಹಾಗೂ ಕುರಿ ಹಿಂಡಿನಲ್ಲಿ ಮಲಗಿದರೆ ಕ್ಷಯರೋಗವಾಸಿಯಾಗುತ್ತದೆಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಕುರಿ ಎಂಬ ಸಾಧು ಪ್ರಾಣಿ ದೇಶಕ್ಕೆ ಆದಾಯ ತಂದರೆ, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಸಾಕಾಣಿಕಾ ಕಾರಣಗಳಿಂದ ಹಲವು ಕೋಟಿ ರೂಪಾಯಿಗಳ ನಷ್ಟವಿದೆ. ಇದರರ್ಥ ಇದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಎಂದಲ್ಲ (ಈ ಕುರಿತು ತೀರ್ಮಾನಿಸುವುದು ಭಾರತದ ಒಕ್ಕೂಟ ಸರ್ಕಾರ), ಆದರೆ ಹಾಗೆ ಅಭಿಪ್ರಾಯಪಡುವುದು ಕೀಳರಿಮೆಯಾಗುವುದಿಲ್ಲ.
ಕೊನೆಯ ಮಾತು : `ಮೇಷ  ಎಂಬ ಪದವು ವೈದಿಕ ಸಾಹಿತ್ಯ, ಖಗೋಳಶಾಸ್ತ್ರ, ಪುರಾಣಗಳಲ್ಲಿ ಪ್ರಾಮುಖ್ಯತೆ ಪಡೆದಿದ್ದು, ಹನ್ನೆರಡು ರಾಶಿಗಳಲ್ಲಿ ಮೇಷ ಮೊದಲನೆಯದಾಗಿದೆ. `ಓ ದೇವರೆ! ಕುರಿ ಮತ್ತು ದನಗಳಲ್ಲಿ ನಾವು ಸಮೃದ್ಧಿ ಹೊಂದೋಣ. ನಾವು ಯಾರನ್ನೂ ಕೊಲ್ಲುವುದಿಲ್ಲ ಹಾಗೂ ಕಾಡುಗಳಲ್ಲಿ ವಿರಾಮ ಜೀವನ ನಡೆಸುತ್ತಾ, ಮಂತ್ರಗಳನ್ನು ಜಪಿಸುತ್ತಾ ಪಶುಗಳನ್ನು ಮೇಯಿಸುತ್ತೇವೆ (ಯಜುರ್ವೇದ, 19- 80) ಎಂದು ವೇದಗಳು ಘೋಷಿಸುತ್ತ, ಋಷಿ-ಮುನಿಗಳು ಕುರಿ, ಹಸುಗಳನ್ನು ಸಾಕಿ, ತಾವೇ ನೇಯ್ದ ಉಣ್ಣೆ ಬಟ್ಟೆ ಧರಿಸುತ್ತಿದ್ದುದನ್ನು ದಾಖಲಿಸಿವೆ.

ವಿಷಯ ಅದಲ್ಲ, ಇಂತಹ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳದೇ ತಾವೇ ಭಾರತೀಯ ಸಂಸ್ಕೃತಿಯ ರಕ್ಷಕ-ವಕ್ತಾರರಂತೆ ಬಿಂಬಿಸಿಕೊಳ್ಳುವ ಇಂದಿನ ಮೇಲ್ವರ್ಗದ ಮಠಾಧೀಶರು ಸತ್ತ ಪೀಠ (ಹುಲಿ, ಜಿಂಕೆಗಳು ಸತ್ತ (ಸಾಯಿಸಿ) ನಂತರ ಚರ್ಮ ತೆಗೆದು) ಏರಿ ಕುಳಿತು ಮೃತ ಪೀಠಾಧಿಪತಿಗಳಾಗಿದ್ದಾರೆ? ಇವರು ಕುರಿ, ಮೇಕೆ, ಹಸುಗಳನ್ನು ಪ್ರೀತಿಸಿ ಸಾಕಿ ಅವುಗಳ ಉಣ್ಣೆಯಿಂದ ಮಾಡಿದ ಜೀವಂತ ಪೀಠದಲ್ಲಿ ಕುಳಿತು ವಾಸ್ತವವನ್ನು ಅರಿಯಲಿ.

ಮಂಗಳವಾರ, ಜೂನ್ 4, 2013

`ಕಣ' ಅನ್ನೋದು ದೊಡ್ಡದು ಕನಾ!

ಸುಗ್ಗಿ ಸಂಭ್ರಮ ಸವಿಯುವ ಹೊತ್ತು. ಬಿತ್ತಿದ ಕಾಳೊಂದು ಸಾವಿರವಾಗಿ ಇಡೀ ವರ್ಷದ ತುತ್ತಾಗುವ ಹೊತ್ತು. ಬಳೆಯ ನಾದದಲಿ ಸರಸರನೆ ಕುಯ್ದ ಹುಲ್ಲು ಜಾನುವಾರಿಗೆ, ಮನುಷ್ಯರಿಗೆ ದವಸ ಬೇರ್ಪಡುವ ಕಾರ್ಯ ಶುರುವಾಗುವುದು ಇಲ್ಲಿಂದಲೇ. ಹೀಗೆ ಫಸಲು ತೂರಿ, ಬಿಡಿ ಕಾಳಾಗಿ ಪರಿವರ್ತಿಸುವ ಜಾಗಕ್ಕೆ ಕಣ ಎನ್ನುತ್ತಾರೆ. ಹತ್ತಾರು ಕುಟುಂಬಗಳು ಕುಯ್ದ ಫಸಲನ್ನೆಲ್ಲ ಒಟ್ಟಾರೆ ತಂದು ತಮ್ಮ ತಮ್ಮ ಮೆದೆ ಅಥವಾ ಬಣವೆಗಳನ್ನು ಒಂದು ನಿಗದಿತ ಸ್ಥಳದಲ್ಲಿ ಹಾಕುತ್ತಾರೆ.

ಕಣ ಮಾಡುವುದು
ಕೆಲ ದಿನಗಳ ನಂತರ ಕಣ ನಿರ್ಮಾಣದ ತಯಾರಿ. ವೃತ್ತಾಕಾರದ ಕಣದ ಮಧ್ಯದಲ್ಲಿ ನೆಡುವ ಒಂದಾಳುದ್ದದ ಬಿದಿರು. ಆಲ, ಸುರಗಿ ಅಥವಾ ಬನ್ನಿ ಮರದ ಕಂಬ ಮೊದಲು ನೆಡುತ್ತಾರೆ. ಜನಪದರಲ್ಲಿ ಇದಕ್ಕೆ ಲಕ್ಷ್ಮೀ ಎಂಬ ಭಾವನೆ ಇದೆ. ಶುಭದಿನ ಕುಣಿ ತೆಗೆದು ನೆಡುವರು. ಸಗಣಿ ಉಂಡೆಯ ಬೆನಕನ ನೆತ್ತಿ ಮೇಲೆ ಹಸಿ ಗರಿಕೆ ಸಿಕ್ಕಿಸಿ, ಮೇಟಿ ಮೇಲೆ ಇಟ್ಟು ಕಡಲೆಪುರಿ ಪ್ರಸಾದ ಹಂಚುವರು. ವಿಘ್ನ ಬಾರದಿರಲು ಈ ಪೂಜೆ ಕಡ್ಡಾಯ. ಇದಕ್ಕೆ ಮೇಟಿ ಎನ್ನುವರು. ಮೇಟಿ ಕಣದ ಕೇಂದ್ರ ಬಿಂದು. ಇಲ್ಲಿ ಪೈರಿನ ಹುಲ್ಲು, ಗರಿಕೆ, ಕಲ್ಲು ಮುಂತಾದ ಕಸವನ್ನು ಕೋಲು ಗುದ್ದಲಿಯಿಂದ ತೆಗೆದು ನೀರು ಚಿಮುಕಿಸಿ, ತಗ್ಗು ದಿಣ್ಣೆ ಸಮ ಮಾಡಿ, ದನಗಳಿಂದ ತುಳಿಸಿ, ಗಾರೆಯಿಂದ ನೆಲವನ್ನು ನಯಗೊಳಿಸುತ್ತಾರೆ.

ಆಮೇಲೆ ತೆಂಗು ಅಥವಾ ಅಡಿಕೆ ಗರಿಯಿಂದ ಮೇಟಿಯ ಸುತ್ತಲೂ ಸಗಣಿ ಬಗ್ಗಡ ಹಾಕಿ ಸುತ್ತುತ್ತಾ ಬಿರುಕು ಮುಚ್ಚುವಂತೆ ಸಾರಿಸುವರು. ಮೆದೆ ಹಾಕಿದವರೆಲ್ಲರೂ ಒಗ್ಗೂಡಿ ಕೆಲಸ ಮಾಡುವುದು ಕಡ್ಡಾಯ. ಒಟ್ಟಾರೆ ತಮ್ಮ ಸ್ಥಿತಿಗತಿಗೆ ಅನುಗುಣವಾಗಿ ನಾಲ್ಕೆತ್ತಿನ ಕಣ, ಎಂಟೆತ್ತಿನ ಕಣ ಮಾಡುವುದು ರೂಢಿ. ಹಿಂದೆ ಕಣದ ವಿಸ್ತಾರ ಆಧರಿಸಿ ಶ್ರೀಮಂತಿಕೆ ಅಳೆಯುವುದು ರೂಢಿಯಲ್ಲಿತ್ತು.

ಮೆದೆ ಹರಡುವುದು
ಒಂದು ದಿನ ಕಳೆದ ಮೇಲೆ ಮೆದೆ ಕಿತ್ತು ಕಣದಲ್ಲಿ ಹರಡಿ ಗುಂಡು, ರೋಣಗಲ್ಲು ಅಥವಾ ಕಲ್ಲಿನ ರೋಲರ್ ಕಟ್ಟುತ್ತಾರೆ. ಕೆಲ ಕಡೆ ಕಣದ ವಿಸ್ತೀರ್ಣದ ಆಧಾರದ ಮೇಲೆ ನಾಲ್ಕು ಅಥವಾ ಎಂಟು ಎತ್ತುಗಳಿಂದ ಸುತ್ತಿಸುತ್ತಾರೆ. ಗುಂಡು ಹೊಡೆದ ಹಾಗೆ ಮೆರೆಗೋಲಿನ ಸಹಾಯದಿಂದ ತಿರುವಿ ತೆನೆ ಒದರುತ್ತಾರೆ. ಹೀಗೆ ಬೇರ್ಪಟ್ಟ ಧಾನ್ಯವನ್ನು ಮಿದಿ ಮಾಡುತ್ತಾರೆ. ಮೆದೆ ಕಂಕಿಗಳನ್ನು ವಿಂಗಡಿಸುವುದು, ತೂರಿ ರಾಶಿ ಮಾಡುತ್ತಾರೆ. ರಾಶಿ ವೇಳೆ ಮೇಟಿಯ ರಾಶಿ, ಬುದ್ದಿವಂತನ ರಾಶಿ, ಕರಿಬಂಟನರಾಶಿ, ಬಿಳಿಬಂಟನ ರಾಶಿ ಮಾಡುತ್ತಾರೆ. ಹೀಗೆ ಹಸನು ಮಾಡಿದ ಧಾನ್ಯದ ರಾಶಿ, ರಾಗಿಯಾದರೆ ಜರಡಿ ಮಾಡುತ್ತಾರೆ. ನಂತರ ಎತ್ತರದ ಅಟ್ಟಣಿಗೆ ಹತ್ತಿ ಗಾಳಿಯಲ್ಲಿ ತೂರಿ ರಾಗಿ ಬೇರ್ಪಡಿಸುತ್ತಾರೆ. ಹೀಗೆ ರಾಗಿ ತೂರುವಾಗ ಗಾಳಿ ಬೀಸದಿದ್ದರೆ ಕೂಗಾಕುತ್ತಿದ್ದರು. ಕಣ ಮಾಡುವಾಗ ಹಾಡುಗಳ ಸುಗ್ಗಿ ನಡೆದರೆ ರಾತ್ರಿ ಕಣ ಕಾಯುವಾಗ ನಿದ್ರೆ ದೂರವಿರಿಸಲು ಹೂಂಗುಡುವ ಕಥೆ ಹೇಳಲಾಗುತ್ತಿತ್ತು.

ನಿಯಮ
ತಲೆ ಮೇಲೆ ಎಲ್ಲರೂ ಬಟ್ಟೆ ಸುತ್ತಿಕೊಂಡಿರಬೇಕು. ಕಣದಲ್ಲಿರುವವರು ಹೊರಗಿನವರನ್ನು ಕೂಗಿ ಕರೆಯಬಾರದು. ಕೈ ಕಟ್ಟಿ ನಿಲ್ಲಬಾರದು. ಬೀಡಿ ಹಾಗೂ ಅಡಿಕೆ ಎಲೆ ಹಾಕುವ ಹಾಗಿಲ್ಲ. ಚಪ್ಪಲಿ ಧರಿಸುವಂತಿಲ್ಲ.

ರಾಶಿ ಪೂಜೆ:
ರಾಶಿ ತುಂಬುವ ಮುಂಚೆ ಹೂ ಪೂಜೆ ನಡೆಯುತ್ತದೆ. ರಾಶಿಯನ್ನು ಎರಡು ಅಥವಾ ಮೂರು ಗುಡ್ಡೆ ಮಾಡುತ್ತಾರೆ. ರಾಶಿಯ ಪಕ್ಕದಲ್ಲಿ ಮೂರು ಮೊರ, ಎರಡು ಬರಲು ಇಡುತ್ತಾರೆ. ಸೆಗಣಿಯಲ್ಲಿ ಬೆನಕನನ್ನು ಮಾಡಿ, ಹೂ ಸಿಕ್ಕಿಸುತ್ತಾರೆ. ರಾಶಿಗೆ ಮಾವಿನ ಎಲೆ ಸಿಕ್ಕಿಸಿ, ಕಾಯಿ ಒಡೆದು, ನೀರು ಚಿಮುಕಿಸಿ, ನಂತರ ಪ್ರಸಾದ ಹಂಚುತ್ತಾರೆ. ಇದಕ್ಕೆ ರಾಶಿ ಪಲ್ಲಾರ ಎನ್ನುತ್ತಾರೆ.

ಕಡೆ ಕಣ
ಈಚೆಗೆ ಕಡೆಕಣ ಎನ್ನುವುದು ಕಣ್ಮರೆಯಾಗುತ್ತಿದೆ. ಕಾಳು ರಾಶಿ, ಕಣ ಕಟ್ಟಲು ಸಹಾಯ ಮಾಡಿದವರಿಗೆ ಊಟ ಹಾಕುವ ಸಂಪ್ರದಾಯವಿತ್ತು. ಆ ನಂತರ ದಾನ ಕಡ್ಡಾಯವಾಗಿತ್ತು.

*******

ಮೇಟಿ ಎದ್ದಾಡಿದ ಕಣವೇ ಓಲಗ..
--ತುರುವೇಕೆರೆ ಪ್ರಸಾದ್

ಸುಗ್ಗಿ ಬರೆ, ಹಿಗ್ಗಿ ತಿರೆ, ಸಗ್ಗ ಸುಖವ ತರುತಿದೆ... ಎಂಬುದೊಂದು ಕವಿವಾಣಿ. ಸುಗ್ಗಿ ಬರಲು, ಭೂಮಿ ಹಿಗ್ಗಿ ಹೋಗಿ ಇಲ್ಲಿಯೇ ಸ್ವರ್ಗದ ಆನಂದ ಕಾಣುವಂತಾಗಿದೆ ಎನ್ನುವ ಭಾವನೆಯಿತ್ತು. ಆದರೆ ಇದೀಗ ಸುಗ್ಗಿ ಬರೆ, ತಲೆ ಬಾಗಿ ತಿರಿ (ಸುಗ್ಗಿ ಬಂದರೂ ಬೇಡುವ ಪರಿಸ್ಥಿತಿ ಹೋಗಿಲ್ಲ).

ಸುಗ್ಗಿ ಕಾಲ ಬಂತೆಂದರೆ ಕೃಷಿಕರು ಹುದ್ದಿಗೆ ಎದ್ದಾಡಿದ ಕಣವೇ ಓಲಗ... . ಸ್ವಾರಕ್ಕಿ ಸುಳಿದಾಡಿದ ಕಣವೇ ಓಲಗ... ಎಂದು ಸಂಭ್ರಮದಿಂದ ಹಾಡುತ್ತಿದ್ದರು. ಆಳೆತ್ತರಕ್ಕೆ ಜೋಡಿಸಿದ ಮೆದೆಗಳ ನಡುವೆ ಮುದಗೊಂಡ ಜೀವಗಳು ಕಣದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಾಂದಿ ಹಾಡುತ್ತಿದ್ದರು. ಭಕ್ತಿ ಭಾವಗಳಿಂದ ಕೃತಜ್ಞತೆಯೇ ಮೂರ್ತಿವೆತ್ತಂತೆ ರೋಣಗಲ್ಲು ಪೂಜೆ, ರಾಶಿಪೂಜೆ ಮಾಡುತ್ತಿದ್ದರು.

ಈಗ ನೀರು ಚಿಮುಕಿಸಿ, ಧಮಸ್ ಮಾಡಿ, ಮೇಟಿ ಕಲ್ಲುನೆಟ್ಟು, ಬಗ್ಗಡ ಕದರಿ ಕಣ ಮಾಡುವ ಕಣ ಸಂಸ್ಕೃತಿಯೇ ಮರೆಯಾಗಿದೆ. ಮೊರಗೋಲು, ವಂದರಿ, ಮುಳ್ಳುಕಡ್ಡಿ, ಉದ್ದಗೆ, ಗಟಾಡೆ ಮೊದಲಾದ ಶಬ್ಧಗಳನ್ನು ಈ ಕಾಲದ ಜನ ಕೇಳಿರಲೇ ಸಾಧ್ಯವಿಲ್ಲ. ರಥ ಓಗಾಯ್ತು, ಕುದುರೆ ಸವಾರಿ ಮುಗೀತು... ಎತ್ಲಾಗೋದ ನಮ್ ಬುದ್ವಂಥ ? ಅಂತ ಒಬ್ಬರು ಕೇಳುದ್ರೇ, ಅಗೋ ನೋಡಲ್ಲಿ ಕೊಂಗನ ಜತೆ ಕುಂತವ್ನೇ... ಅಂತ ಇನ್ನೊಬ್ಬರು ಚಟಾಕಿ ಹಾರುಸ್ತಿದ್ರು... (ರೋಣಗಲ್ ಓಡಿಸಿ ಉದ್ದುಗೆಲಿ ತೂರಿದ್ದಾಯ್ತು. ಪೊರಕೆ ಎಲ್ಲಿ ಅಂದ್ರೆ ಕೊಂಗ (ಮೊರದ)ನ ಜತೆ ಕೂತಿದಾನೆ. ಕಣದಲ್ಲಿ ಮೂಲ ಹೆಸರಿಡಿದು ಏನನ್ನೂ ಕರೆಯದ ಕೃಷಿಕರು ರಾಗಿಗೆ `ಕೃಷ್ಣಸ್ವಾಮಿ' ಎನ್ನುವುದು ವಾಡಿಕೆ.

ತಾಲ್ಲೂಕಿನಲ್ಲಿ ಈ ಬಾರಿ ಎಲ್ಲ ಸಂಭ್ರಮ ಸಡಗರ ಮರೆಯಾಗಿವೆ. 19 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿದೆ. ಹೆಕ್ಟೇರ್‌ಗೆ ಕನಿಷ್ಠ 20 ಕ್ವಿಂಟಲ್ ಬರುತ್ತಿದ್ದ ಇಳುವರಿ ಈ ಬಾರಿ ಕೇವಲ 825 ಕೆಜಿಗೆ ಕುಸಿದಿದೆ. ಕೃಷಿಕರ ಮುಖ ಕಳೆಗುಂದಿದೆ. ಎಷ್ಟೋ ಜನ ರಾಗಿ ಕುಯಿಲು ಮಾಡದೆ ಹೊಲದಲ್ಲೇ ದನ ಕಟ್ಟಿ ಮೇಯಿಸಿಬಿಟ್ಟಿದ್ದಾರೆ. ಕೊಟ್ಟೂರನಕೊಟ್ಟಿಗೆಯ ಗೋವಿಂದಯ್ಯನವರ ಹೊಲದಲ್ಲಿ ಮುಕ್ಕಾಲು ಎಕರೆಗೆ 20 ಸೇರು ರಾಗಿ ಆಗಿದೆ.

ದೊಡ್ಡ ರಾಶಿ, ದೇವರ ರಾಶಿ, ಬುದ್ದಿವಂತ ರಾಶಿ, ಗೌರಮ್ಮನ ಗುಡ್ಡೆ, ಕಡ್ಡಿರಾಶಿ ಎಂದೆಲ್ಲ ಬಗೆಬಗೆ ರಾಶಿ ಮಾಡುತ್ತಿದ್ದುದನ್ನು ನೆನಪಿಸಿಕೊಳ್ಳುವ ಗೋವಿಂದಯ್ಯ ಕಣದಲ್ಲಿ ಕೊಳಗಗಟ್ಟಲೆ ದಾನ ಮಾಡುತ್ತಿದ್ದೆವು. ಈಗ ಎಂಜಲ ಕೈಲಿ ಕಾಗೆ ಓಡಿಸೋ ಪರಿಸ್ಥಿತಿ ಬಂದಿದೆ ಎಂದು ಹನಿಗಣ್ಣಾದರು.

ಮತ್ತೊಬ್ಬ ಕೃಷಿಕ ಮಹೇಶ್ ಕಣದಲ್ಲಾದ 30 ಸೇರನ್ನೂ ಬಡವರಿಗೆ ಹಂಚಿ ಕೈ ಮುಗಿದು ಬಂದು ಬಿಟ್ಟರು. ವೆಂಕಟೇಶ್, ನಂಜಯ್ಯ ಮೊದಲಾದ ಎಲ್ಲರ ಹೊಲದಲ್ಲೂ ಇದೇ ಕತೆ...ಇದೇ ವ್ಯಥೆ. ಎಕರೆಗೆ ಒಂದೂವರೆ ಚೀಲ ಬೆಳೆದವರೇ ಪುಣ್ಯವಂತರು! ಇಡೀ ವರ್ಷ ಗಂಜಿಗೇನು ಗತಿ ಎಂಬ ಚಿಂತೆ. ಗಾಯದ ಮೇಲೆ ಬರೆ ಹಾಕಿದಂತೆ ರಾಗಿ ಬೆಲೆ ದಿನದಿಂದ ದಿನಕ್ಕೆ ಆಗಸಕ್ಕೇರುತ್ತಿದೆ.

ಅಕ್ಕಿ ಬೆಲೆ ಕೆಜಿಗೆ 45 ರೂಪಾಯಿ ಆಗಿದೆ. ಹೊಲವಿದ್ದೂ ಮನೆಯಲ್ಲಿ ಕಾಳು ರಾಗಿಯಿಲ್ಲ. ರಾಗಿ ಕೊಂಡು ತಿನ್ನದಷ್ಟು ದುಬಾರಿಯಾಗಿದೆ. ಪಡಿತರದಲ್ಲಿ ಕೊಡುವ 4 ಕೆಜಿ ಅಕ್ಕಿಯಲ್ಲಿ ತಿಂಗಳು ಪೂರಾ ಜೀವನ ಮಾಡಲು ಹೇಗೆ ಸಾಧ್ಯ? ಭೂಮಿ ಬೀಳು ಬಿದ್ದಿದೆ. ಕಂತೆ ಹುಲ್ಲಿಗೆ 200 ರೂಪಾಯಿ ಆಗಿದೆ...ನಮ್ಮ ಗತಿ ಏನು? ಎಂದು ರೈತರು ಆಕಾಶ ನೋಡುವಾಗ ಮುಂದಿನ ವರ್ಷವಾದರೂ ವರ್ಷಧಾರೆಯಾಗಿ ರಾಗಳ್ಳಿ ಬೆಟ್ಟ ಬೆಳ್ದಂಗೆ ಬೆಳೆಯೋ ಓಲಗ... ಎಂದು ಮನಸ್ಸು ಚೀರುತ್ತದೆ.