ಶನಿವಾರ, ಫೆಬ್ರವರಿ 1, 2014

ಕಪಟ ಸಾಧುವಿನ ಮಾತಿಗೆ ಸಿಂಧನೂರಿನ ಯುವತಿ ಬಲಿ

Basavaraja Halli

ರಾಯಚೂರು ಸುದ್ದಿಬಿಂಬವಾರ್ತೆ

ಸಿಂಧನೂರು, ಜನೆವರಿ 31

ನಗರದ ಮಹೆಬೂಬಿಯಾ ಕಾಲೋನಿ ನಿವಾಸಿ ಹನುಮಂತಪ್ಪ ಕಾರ್ಲಕುಂಟಿ ಅವರ ಮಗಳು ಶ್ರೀದೇವಿ (17) ಮಹಾರಾಷ್ಟ್ರದ ಸಾಂಗ್ಲಿ ಬಳಿ ಹೊಲವೊಂದರಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾಳೆ. ಜನವರಿ 26ರಂದು ಪಾಲಕರೊಂದಿಗೆ ಪಂಡರಾಪುರ ದೇವಸ್ಥಾನಕ್ಕೆ ತೆರಳಿದ್ದ ಸಮಯದಲ್ಲಿ ಆಕೆ ಕಾಣೆಯಾಗಿದ್ದಳು. ಈ ಕುರಿತು ಪಂಡರಾಪುರ ಶಹರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. 

ಪೊಲೀಸರ ತನಿಖೆಯಲ್ಲಿ ಯುವತಿ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಕೊಲೆಯಾಗಿದ್ದು ತಿಳಿದುಬಂದಿದೆ. ಸಾಂಗ್ಲಿ ಜಿಲ್ಲೆಯ ಹೊಲವೊಂದರಲ್ಲಿ ಶವ ಪತ್ತೆಯಾಗಿದೆ.
ಶುಕ್ರವಾರ ಯುವತಿಯ ಮೃತದೇಹವನ್ನು ಕ್ರೂಷರ್ ವಾಹನದಲ್ಲಿ ಆಕೆಯ ಮನೆಗೆ ತರುತ್ತಿದ್ದಂತೆ ಕಾಲೋನಿಯ ನಿವಾಸಿಗಳು ಮುಗಿಬಿದ್ದು ಅತ್ತರು. ಬಹುತೇಕ ಕೂಲಿಕಾಮರ್ಿಕ ಕುಟುಂಬಗಳೇ ನೆಲಸಿರುವ ವಾಡರ್್ನಲ್ಲಿ ಅತ್ಯಾಚಾರ ಮತ್ತು ಕೊಲೆ ಘಟನೆ ತೀವ್ರ ಆತಂಕ ಮೂಡಿಸಿದೆ. 

ಎಲ್ಲರ ಕಣ್ಣಲ್ಲೂ ನೀರು : ಬರಸಿಡಿಲಿನಂತೆ ಎರಗಿದ ಮಗಳ ಸಾವಿನ ಸುದ್ದಿಯಿಂದಾಗಿ ತಾಯಿ ರೇಣುಕಮ್ಮ ರೋದಿಸುತ್ತಿರುವುದನ್ನು ಕಂಡ ಸುತ್ತಮುತ್ತಲಿನ ಮನೆಯ ಹೆಣ್ಣುಮಕ್ಕಳು ತೀವ್ರ ದುಃಖಿತರಾದರು. ಕಳೇಬರ ನೋಡಲು ಕಾಲೋನಿಯ ನೂರಾರು ಮಹಿಳೆಯರು ಜಾತ್ರೆಯಂತೆ ನೆರದಿದ್ದು ಕಂಡುಬಂತು. ಕೆಲವರು ಮಹಡಿ ಮೇಲೆ ನಿಂತು ಕಣ್ಣೀರಾದರು. 

ಹಿನ್ನೆಲೆ : ಜನವರಿ 26ರಂದು ಪಂಡರಾಪುರದ ದೇವಸ್ಥಾನಕ್ಕೆ ಶ್ರೀದೇವಿ ಪಾಲಕರೊಂದಿಗೆ ತೆರಳಿದ್ದಾಳೆ. ಜ.27ರಂದು ಕಾಣೆಯಾಗಿದ್ದಾಳೆ. ತಂದೆ ತಾಯಿ ಇಡೀ ದಿನ ಮಗಳಿಗಾಗಿ ಅಲೆದಾಡಿದ್ದಾರೆ. ಕೊನೆಗೂ ಸಿಗದೇ ಇದ್ದಾಗ ಸಮೀಪದ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಕುರಿತು ದೂರು ಸಲ್ಲಿಸಿದ್ದಾರೆ. ನಂತರ ಮರಳಿ ಊರಿಗೆ ಬಂದಿದ್ದಾರೆ. ಕೊನೆಗೆ ಜ.30ರಂದು ಮಧ್ಯಾಹ್ನ ಪೊಲೀಸ್ ಠಾಣೆಯಿಂದ ಶ್ರೀದೇವಿಯ ಶವ ಸಾಂಗ್ಲಿಯ ಹೊಲವೊಂದರಲ್ಲಿ ಪತ್ತೆಯಾಗಿರುವ ಬಗ್ಗೆ ಕುಟುಂಬಕ್ಕೆ ಮಾಹಿತಿ ಬಂದಿದೆ. ಶುಕ್ರವಾರ ಮಧ್ಯಾಹ್ನ 4ಗಂಟೆ ಸುಮಾರು ಯುವತಿಯ ಶವಸಂಸ್ಕಾರ ನೆರವೇರಿಸಲಾಯಿತು. 

{ಪೂರ್ಣ ವಿವರ}
ಕಪಟ ಸ್ವಾಮಿಯ ಖಾವಿ, ದೇವಸ್ಥಾನ ನಂಬಿಕೆಟ್ಟೆ

ನಾನು ನಮ್ಮ ಸಂಬಂಧಿಕರ ಊರಾದ ಮಾನ್ವಿ ಕಡೆ ಇರುವ ಹಣಗಿಗೆ ಮೋಟಾರ್ ಬೈಕ್ ತೆಗೆದುಕೊಂಡು ಈಗ್ಗೆ ಹದಿನೈದು ದಿನಗಳ ಹಿಂದೆ ಹೊರಟಿದ್ದೆ. ಪಿಡಬ್ಲ್ಯೂಡಿಕ್ಯಾಂಪ್ ಬಳಿ ಖಾವಿ ಧರಿಸಿದ್ದ ಸಾಧುವೊಬ್ಬ ಕೈ ಮಾಡಿ ಡ್ರಾಪ್ ಕೇಳಿದ. ಸಾಧುವೊಬ್ಬರು ಡ್ರಾಪ್ ಕೇಳಿದ್ದರಿಂದ ಗಾಡಿ ನಿಲ್ಲಿಸದಿರಲು ಮನಸ್ಸಾಗದೇ ಮತ್ತು ಆತನ ಬಟ್ಟೆಗೆ ಬೆಲೆಕೊಟ್ಟು ಹಿಂದೆ ಹತ್ತಿಸಿಕೊಂಡು ಹೊರಟೆ. ಹಂಪಿಯಿಂದ ಬರುತ್ತಿರುವುದಾಗಿ ಮಂತ್ರಾಲಯಕ್ಕೆ ಯಾತ್ರೆ ಹೊರಟಿರುವುದಾಗಿ ಹೇಳಿದ. ಆ ಸಾಧು ಮೋಟಾರ್ ಬೈಕ್ ಹತ್ತಿ ಕುಳಿತ ಸಮಯದಿಂದಲೇ ಅನೇಕ ಜ್ಯೋತಿಷ್ಯದ ವಿಷಯಗಳನ್ನು ಹೇಳುತ್ತ ನನ್ನನ್ನು ನಂಬಿಸಿದ. ಆತನ ಮಾತಿಗೆ ಮನಸೋತೆ. ಏನೇನೋ ಕಥೆ ಕಟ್ಟಿ, ಮನೆಗೆ ಕಂಟಕ ಇದೆ, ದೋಷ ಇದೆ ಅಂತ ಹೇಳಿ ನನ್ನ ಕುಟುಂಬವನ್ನು ವಾರದೊಳಗೆ ಪಂಡರಾಪುರಕ್ಕೆ ಬರುವಂತೆ ಮನಸ್ಸೆಳೆದು, ಅಲ್ಲಿ ನನಗೆ ಮೋಸ ಮಾಡಿದ. ಕಪಟ ಸ್ವಾಮಿಯ ಖಾವಿ, ಬಣ್ಣದ ಮಾತುಗಳಿಗೆ ಮರುಳಾಗಿದ್ದು ಮಗಳನ್ನೇ ಬಲಿ ತೆಗೆದುಕೊಂಡಿತು ಎಂದು ಕಣ್ಣೀರು ಹಾಕುತ್ತಾ ಹೇಳಿದರು ಮೃತಳ ತಂದೆ ಹನುಮಂತಪ್ಪ. 

ಹೀಗೆ ನಂಬಿಸಿದ್ದ ವಂಚಕ ಸಾಧು 

ಹನುಮಂತಪ್ಪನ ಮನಸ್ಥಿತಿ ಅರಿತ ಕಪಟಿಗ ನಿನಗೆ ಇಬ್ಬರು ಮಕ್ಕಳಲ್ವ ಅಂತ ಬುರಡೆ ಬಿಟ್ಟಿದ್ದಾನೆ. ಕಾಗೆ ಕುಂದ್ರವಲ್ಲಿಗೂ ಕೊಲ್ಲೆ ಮುರಿವಲ್ಲಿಗೂ ಒಂದೆ ಆಗಿದೆ. ಹೌದು ಸ್ವಾಮಿ ಅಂತ ಹೇಳಿದೊಡನೆ, ನಿನ್ನ ಮಗಳು ಏನ್ಮಾಡ್ತಾಳೆ ಅಂತ ಪ್ರಶ್ನಿಸಿದ್ದಾನೆ. ಪಿಯುಸಿ ಓದ್ತಾಳೆ ಎನ್ನುವ ಉತ್ತರ ಬಂದಿದ್ದೆ ತಡ ಪಟಕ್ಕನೆ, ಆಕೆಯ ಜನ್ಮಕುಂಡಲಿ ಸರಿಯಿಲ್ಲ ಎಂದು ಪೂಸಿಬಿಟ್ಟಿದ್ದಾನೆ. ಇದರಿಂದ ವಿಚಲಿತನಾದ ಹನುಮಂತಪ್ಪನಿಗೆ ಇನ್ನಿಲ್ಲದ ಹುಳ ಬಿಟ್ಟು ಮನಸ್ಸನ್ನು ಆತಂಕ್ಕೀಡುಮಾಡಿ ತನ್ನ ಕೆಲಸ ಸಲೀಸು ಮಾಡಿಕೊಂಡಿದ್ದಾನೆ. ಒಂದು ವೇಳೆ ಈಗ ನೀನು ಸುಮ್ಮನಿದ್ದರೆ, ನಾಳೆ ಮಗಳು ಮದುವೆಯಾದ ನಂತರ ಆಕೆಗೆ ತೊಂದರೆ ಶುರುವಾಗುತ್ತೆ. ಮನೆಗೆ ಬಂದು ಗಲಾಟೆ ಮಾಡ್ತಾ ಕುಂದ್ರತಾಳೆ ಎಂದು ಮನಸ್ಸು ಅದುರಗೊಳಿಸಿದ್ದಾನೆ. 

ಇದರಿಂದ ಕಂಗಾಲಾದ ಹನುಮಂತಪ್ಪ ಹಾಗಾದರೆ ಏನು ಮಾಡ್ಬೇಕು ಸ್ವಾಮೀಜಿ ಎಂದು ಕೇಳಿದ್ದಾನೆ. ಇದಕ್ಕೆ ಆತ ಪರಿಹಾರ ಸೂಚಿಸಿದ್ದು:-

ಸೊಲ್ಲಾಪುರ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಮಗಳನ್ನು ಕರ್ಕೊಂಡೋಗಿ ಅಲ್ಲಿ ಸ್ನಾನಮಾಡಿ ದರ್ಶನ ಪಡೆಯಬೇಕು. ಅಲ್ಲಿಂದ ಒಂದು ಬಾಟಲ್ ನೀರ್ ತೆಕ್ಕೊಂಡು ಬಂದು ಚಿಮ್ಮಿಸಿದ್ರೆ ಎಲ್ಲಾ ಪರಿಹಾರ ಆಗಿಬಿಡುತ್ತೆ. ಮನೆಯಲ್ಲಿ ಶಾಂತಿ ಇರುತ್ತೆ ಅಂತಾ ಕತೆ ಕಟ್ಟಿದ್ದಾನೆ. ಅಷ್ಟೊಂದು ದೂರ ಮತ್ತು ಖಚರ್ಿನಿಂದ ಕೂಡಿದ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ ಎಂದು ಹನುಮಂತಪ್ಪ ಹೇಳಿದಾಗ ಈ ಸ್ವಾಮಿ ತನ್ನ ಪಾಕೆಟ್ನಲ್ಲಿದ್ದ ಸಾವಿರರ ಮೂರು ನೋಟು ಕಿತ್ತಿ ಕೊಡಲು ಹೋಗಿದ್ದಾನೆ. ಸ್ವಾಮೀಜಿ ಹತ್ರ ದುಡ್ಡೇಕೆ ಇಸ್ಕೋಳ್ಳೋದು ಎಂದು ನಿರಾಕರಿಸಿದ್ದಾನೆ ಈತ. ತಾನೇ ದುಡ್ಡು ರೆಡಿಮಾಡಿಕೊಂಡು ಸೊಲ್ಲಾಪುರಕ್ಕೆ ಭೇಟಿ ನೀಡುವುದಾಗಿ ಹನುಮಂತಪ್ಪ ಹೇಳಿ, ಆ ಸ್ವಾಮಿಯನ್ನು ಕೊಟ್ನೇಕಲ್ಗೆ ಇಳಿಸಿ ಹಣಗಿಗೆ ಹೋಗಿದ್ದಾರೆ. 


ನಂಬರ್ ಒನ್ ಕ್ರಿಮಿನಲ್ ಈತ 

ಹನುಮಂತಪ್ಪನ ನಂಬರ್ ಪಡೆದಿದ್ದ ಕ್ರಿಮಿನಲ್ ವ್ಯಕ್ತಿತ್ವದ ನಕಲಿ ಖಾವಿಧಾರಿ ಸ್ವಾಮಿ ಭೇಟಿಯಾದ ಸಾಯಂಕಾಲವೇ ಕಾಯಿನ್ ಬಾಕ್ಸ್ವೊಂದರ ಮೂಲಕ ಸಂಪಕರ್ಿಸಿದ್ದಾನೆ. ಪುನಃ ಮರುದಿನ
ವೂ ಸಂಪಕರ್ಿಸಿ ಅದು ಇದು ಪೀಠಿಕೆ ಶುರುವಿಟ್ಟುಕೊಂಡಿದ್ದಾನೆ. ಹಾಗೆ ಹೀಗೆ ವಾರ ಕಳೆದಿದೆ. ಕಪಟಿಗನ ಮಾತು ನಂಬಿದ ಹನುಮಂತಪ್ಪ ಸಾಧು ನಮ್ಮ ಒಳ್ಳೆಯದಕ್ಕೆ ಇಷ್ಟೆಲ್ಲಾ ಪ್ರಯತ್ನ ಮಾಡ್ತಾ ಇದ್ದಾರೆ. ಏನಾದ್ರು ಆಗಲಿ ಒಮ್ಮೆ ಹೋಗಿಬಂದ್ರಾತು. ಅಂತ ತೀಮರ್ಾನಿಸಿದ್ದಾರೆ. ಕ್ರಿಮಿನಲ್ ಸಾಧು ಪುನಃ ಜನವರಿ 26ರಂದು ಫೋನ್ ಮಾಡಿ ಪುಸಲಾಯಿಸಿದ್ದಾನೆ. ಅಷ್ಟೊತ್ತಿಗಾಗಲೆ ಸಂಪೂರ್ಣ ಸಾಧುವಿನ ಮಾತು ನಂಬಿದ್ದ ಹನುಮಂತಪ್ಪ ತಾನು, ತನ್ನ ಹೆಂಡತಿ ಹಾಗೂ ಮಗಳೊಂದಿಗೆ ಬಸ್ ಹತ್ತಿ ತಾವರೆಗೆರೆ ತಲುಪಿದ್ದರು. ಇದನ್ನು ಫೋನ್ನಲ್ಲಿ ಬರುತ್ತಿರುವುದಾಗಿ ತಿಳಿಸಿದ್ದಾನೆ. ಅಂತೂ ಬರುವುದು ಪಕ್ಕಾ ಆದಮೇಲೆ ಸಾಧು ನಂತರ ಫೋನ್ ಮಾಡಿಲ್ಲ. 

ಖಾವಿ ಹೋಗಿ ಖಾದಿ ಬಂತು :-

ಕನರ್ಾಟಕದಲ್ಲಿ ಖಾವಿ ಹಾಕಿಕೊಂಡು ಸಾಧುವಿನಂತೆ ತಿರುಗಾಡುತ್ತಿದ್ದ ಈತ, ಸೊಲ್ಲಾಪುರ ಬಸ್ಟ್ಯಾಂಡ್ನಲ್ಲಿ ಬಿಳಿ ಖಾದಿ ಅಂಗಿ ಮತ್ತು ಪ್ಯಾಂಟು ನೋಡಿ ಹನುಮಂತಪ್ಪ ಪರೇಶಾನ್ ಆಗಿದ್ದಾರೆ. ಆತ ಹೇಳಿದ್ದು ಆಗ ಇಲ್ಲ.. ಇಲ್ಲಿ ಖಾವಿ ಹಾಕಂಗಿಲ್ಲ. ಇಲ್ಲಿ ವೈಟ್ ಬಟ್ಟೆ ಹಾಕ್ತಾರೆ. ಅದ್ಕೆ ನಾನು ಹಾಕಿದೀನಿ. ಸುಮ್ನೆ ಸಾರ್ವಜನಿಕರನ್ನು ಕೇಳಿದರೂ ಹನುಮಂತಪ್ಪನಿಗೆ ಅದೇ ಬಂದಿದೆ. ಇದರಿಂದ ಆತ ಸುಮ್ಮನಾಗಿದ್ದಾನೆ. ಅಲ್ಲಿಂದಲೇ ಅವನ ಒಂದೊಂದೆ ಆಟ ಶುರುವಾಗಿವೆ. 


ವಿಚಿತ್ರ ಪ್ಲಾನು (ಡಬಲ್ ಗೇಮ್):-

ಸೀದಾ ಮೂವರು ಸೊಲ್ಲಾಪುರ ಬಸ್ಟ್ಯಾಂಡ್ಗೆ ಬೆಳಿಗ್ಗೆ ಇಳಿದೊಡನೆ. ಅಲ್ಲಿಗೆ ಬಂದ ಕಪಟಿಗ ಮೂವರು ಬಂದದ್ದನ್ನು ನೋಡಿ ಹನುಮಂತಪ್ಪ ಅವರಿಗೆ ನಾನು ತಂದೆ, ಮಗಳಷ್ಟೆ ಬನ್ನಿ ಅಂದಿದ್ದೆ, ಮತ್ತೇಕೆ ನಿಮ್ಮ ಹೆಂಡ್ತೀನಿ ಕರ್ಕಂಡು ಬಂದ್ರಿ ಅಂದಿದ್ದಾನೆ. ಇಲ್ಲ ಸ್ವಾಮೀಜಿ ನನ್ನ ಹೆಂಡ್ತಿನೂ ಬರ್ತೀನಿ ಅಂದ್ಲು ಅದ್ಕೆ ಕರ್ಕಕಂಡು ಬಂದೆ ಅಂದೊಡನೆ, ಪರವಾಗಿಲ್ಲ ಬನ್ನಿ ಎಂದು ಸುಮ್ಮನಾಗಿದ್ದಾನೆ. ಸೊಲ್ಲಾಪುರ ಸಿದ್ರಾಮೇಶ್ವರ ದೇವಸ್ಥಾನ ತೋರಿಸಿ ಹಾಗೆ-ಹೀಗೆ ಪುಸಲಾಯಿಸಿ ಅಲ್ಲಿಂದ ಪಂಡರಾಪುರಕ್ಕೆ ಕರೆತಂದಿದ್ದಾನೆ. ಅಲ್ಲಿನ ಕೈಕಾಡಿ ದೇವಸ್ಥಾನ ತೋರಿಸಿದ್ದಾನೆ. ಸಮೀಪದಲ್ಲೇ ಇರುವ ವಿಠಲ ದೇವಸ್ಥಾನಕ್ಕೆ ಹೋಗುತ್ತಿರುವಾಗ ಹನುಮಂತಪ್ಪನಿಗೆ ಆ ದೇವಸ್ಥಾನಕ್ಕೆ ಮೂರು ಜನ ಹೋಗಬಾರದು ಇಬ್ಬರಷ್ಟೇ ಹೋಗಬೇಕು ಎಂದು ಹೇಳಿದ್ದಾನೆ. ಇದನ್ನು ಅವರು ನಂಬಿದ್ದಾರೆ. ಮಗಳು ಎಂದಾಗ ಇಲ್ಲ ಬನ್ನಿ ಎಂದು ಶ್ರೀದೇವಿಯನ್ನು ಪಕ್ಕದಲ್ಲೇ ಇರುವ ಗಜಾನನ ದೇವಸ್ಥಾನ ಪಾರ್ಕವೊಂದರಲ್ಲಿ ಕೂಡಿಸುವಂತೆ ಐಡಿಯಾ ಕೊಟ್ಟಿದ್ದಾನೆ. ಅಲ್ಲಾ ಸ್ವಾಮೀಜಿ ಅಂತ ಹನುಮಂತಪ್ಪ ಅಂದ್ರು ಇಲ್ಲಾ ಬನ್ನಿ. ಆ ಹುಡುಗಿ ಅಲ್ಲೆ ಕುಂದ್ರಿರ್ಲಿ. ನಾವು ಹೋಗಿ ಬರೋಣ ಎಂದು ಹೇಳಿ ಮೂವರು ವಿಠಲ ಮಹಾರಾಜ ದೇವಸ್ಥಾನಕ್ಕೆ ಬಂದಿದ್ದಾರೆ. ವಿಠಲ ದೇವಸ್ಥಾನದ ಒಳಕ್ಕೆ ಕಾಲಿಡುತ್ತಿದ್ದಂತೆ ಹುಷಾರಿನಿಂದ ಒಳಗಡೆ ಮೊಬೈಲ್ ಅಲಾವ್ ಇಲ್ಲ ತನ್ನಿ ಎಂದು ಹನುಮಂತಪ್ಪನಿಂದ ಮೊಬೈಲ್ ಇಸ್ಕಂಡಿದ್ದಾನೆ. ನಾನು ಹತ್ತಾರುಬಾರಿ ನೋಡಿದ್ದೀನಿ ದೇವಸ್ಥಾನ ನೀವು ಹೋಗಿಬನ್ನಿ ಅಂತಾ ಹನುಮಂತಪ್ಪ ದಂಪತಿಯನ್ನು ಒಳಗಡೆ ಕಳುಹಿಸಿ, ಕಪಟ ಸ್ವಾಮಿ ಹೊರಗಡೆ ಕಾಲ್ಕಿತ್ತಿ ಅಲ್ಲಿಂದ ಆ ಹುಡುಗಿ ಇದ್ದ ಕಡೆ ಬಂದು ನಿಮ್ಮ ಅಪ್ಪಅಮ್ಮನ ಹತ್ತಿರ ಹೋಗುವಾ ಬಾ ಎಂದು ಯಾವುದೋ ವಾಹನದಲ್ಲಿ ಸಾಗಿಸಿದ್ದಾನೆ. ಮಗಳನ್ನು ದೂರು ಬಿಟ್ಟು ತರಾತುರಿಯಲ್ಲಿ ದೇವಸ್ಥಾನದಲ್ಲಿ ದರ್ಶನ ಪಡೆದ ದಂಪತಿಗಳು ಹೊರ ಬಂದು ನೋಡಿದಾಗ ಸ್ವಾಮೀಜಿ ಇಲ್ಲ. ಅಲ್ಲಿಂದ ಆತಂಕದಿಂದ ಪಾಕರ್್ನ ಕಡೆ ಬಂದಾಗ ಅಲ್ಲಿಯೂ ಹುಡುಗಿ ಕಂಡಿಲ್ಲ. ಆಗಲೇ ಹನುಮಂತಪ್ಪನಿಗೆ ತಾನು ಮೋಸಹೋಗಿರುವುದರ ಅರಿವಾಗಿದೆ.

ಪೊಲೀಸ್ ಸ್ಟೇಷನ್ :-
ಪಂಡರಾಪುರದಲ್ಲಿ ಮಗಳನ್ನು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿಲ್ಲ. ಕೊನೆಗೆ ಆಕೆಯ ಬಳಿಯಿದ್ದ ಫೋನ್ಗೆ ಸಾರ್ವಜನಿಕರೊಬ್ಬರ ಮೊಬೈಲ್ನಿಂದ ಕರೆ ಮಾಡಿದಾಗ ಸ್ವಿಚ್ ಆಫ್ ಆದ ಶಬ್ದ ಬಂದಿದೆ. ಕೂಡಲೇ ಆತಂಕದಿಂದ ಸಮೀಪದ ಪಂಡರಾಪುರ ಶಹರ ಪೊಲೀಸ್ ಸ್ಟೇಶನ್ಗೆ ಧಾವಿಸಿ ನಡೆದ ಘಟನೆ ವಿವರಿಸಿದಾಗ ಅಲ್ಲಿನ ಕೆಲ ಸಿಬ್ಬಂದಿ ಹನುಮಂತಪ್ಪನ ಮೇಲೆಯೇ ಸಂಶಯಪಟ್ಟಿದ್ದಾರೆ. ವೋಟಿಂಗ್ ಕಾಡರ್್, ಡ್ರೈವಿಂಗ್ ಲೈಸನ್ಸ್ ಇನ್ನಿತರೆ ದಾಖಲಾತಿಗಳನ್ನು ತೋರಿಸಿ ಗಂಟೆಗೂ ಹೆಚ್ಚು ಕಾಲ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದಾಗ ಕೇಸ್ ದಾಖಲಿಸಲು ಮುಂದೆ ಬಂದಿದ್ದಾರೆ. ಕೂಡಲೇ ತನ್ನ ಜೇಬಿನಲ್ಲಿದ್ದ ಮಗಳ ಫೋಟೋಗಳನ್ನು ಹತ್ತಿರ ಸ್ಟುಡಿಯೋವೊಂದರಲ್ಲಿ ದೊಡ್ಡ ಸೈಜಿನಲ್ಲಿ ಪ್ರಿಂಟಾಕಿಸಿಕೊಂಡು ಬಂದಿದ್ದೇ ತಡ ಅಲ್ಲಿನ ಸಿಪಿಐ ಮತ್ತು ಪಿಎಸ್ಐ ಎಲ್ಲಾ ಕಡೆ ಮಾಹಿತಿ ಹರಡಿದ್ದಾರೆ.

ಕನರ್ಾಟಕದಲ್ಲಿ ಭಕ್ತಿ ಹೆಚ್ಚು :-
ಹನುಮಂತಪ್ಪನಿಗೆ ಆತ ಯಾವಾಗಲು ಹೇಳುತ್ತಿದ್ದನಂತೆ ಕನರ್ಾಟಕದಲ್ಲಿ ಭಕ್ತಿ ಹೆಚ್ಚು. ಖಾವಿಗೆ ಹೆಚ್ಚು ಮಯರ್ಾದೆ ಕೊಡ್ತಾರೆ. ಆಂಧ್ರದಲ್ಲಿ, ಮಹಾರಾಷ್ಟ್ರದಲ್ಲಿ ಸರಿಗಿಲ್ಲ ಜನ ಅಂತ. ಈತ ಕನರ್ಾಟಕದ ಬಹುತೇಕ ಯಾತ್ರಾ ಸ್ಥಳಗಳ ಹೆಸರನ್ನು ಪಟ ಪಟ ಹರಳು ಉರಿದಂತೆ ಹೇಳುತ್ತಿದ್ದನಂತೆ. ಈತ ಈಚೆಗೆ ಅಂಬಾಮಠದ ಜಾತ್ರೆಯಲ್ಲಿ ಇದ್ದನೆಂಬ ಶಂಕೆಯೂ ಕೂಡ ಇದೆ.

ಸಿ.ಸಿ.ಟಿ.ವಿಯಲ್ಲಿ ಕಂಡ ಆರೋಪಿ :-
ಯುವತಿ ಶ್ರೀದೇವಿಯನ್ನು ಅಪಹರಿಸಿದ ಆರೋಪಿ ಸೊಲ್ಲಾಪುರದ ಸಿದ್ದರಾಮೇಶ್ವರ ದೇವಸ್ಥಾನದ ಮುಂಬಾಗಿಲಿನಿಂದ ಹಾದುಹೋಗುವಾಗ ಸಿ.ಸಿ.ಟಿ.ವಿಯಲ್ಲಿ ಕಂಡಿದ್ದಾನೆ. ಕಾರ್ಯಪ್ರವೃತ್ತರಾಗಿರುವ ಅಲ್ಲಿನ ಸಿಬ್ಬಂದಿ ಆರೋಪಿಯ ಜಾಡು ಹಿಡಿದು ವ್ಯಾಪಕ ಬಲೆ ಬೀಸಿದೆ. ಈತ ಈಗಾಗಲೇ ಎರಡು ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆಸಿದ್ದು, ಇದುವರೆಗೂ ಇವನ ಬಗ್ಗೆ ಯಾವುದೇ ಗುರುತರ ಸಾಕ್ಷ್ಯಗಳು ಸಿಕ್ಕಿಲ್ಲವೆಂದು ಮತ್ತು ಈತ ಪಂಡರಾಪುರದ ಹತ್ತಿರದ ಹಳ್ಳಿಯೊಂದರ ವ್ಯಕ್ತಿಯೆಂದು ಹೇಳಲಾಗುತ್ತಿದೆ. ಐವತ್ತು ವರ್ಷ ವಯಸ್ಸಿನ ಈತನಿಗೆ ಹೆಂಡತಿಯಿದ್ದು, ಆಕೆಯನ್ನು ಈತ ಬಿಟ್ಟಿದ್ದಾನಂತೆ. ಜೊತೆ ರಾಜ್ಯ ರಾಜ್ಯ ಅಲೆಯುವುದು ಮತ್ತು ಅಪಾರಾಧ ಕೃತ್ಯಗಳಲ್ಲಿ ಭಾಗಿಯಾದ ಬಗ್ಗೆ ಅಲ್ಲಿನ ಪೊಲೀಸ್ ಇಲಾಖೆಗೆ ಮಾಹಿತಿ ದೊರೆತಿದೆ.

ಪಂಡರಾಪುರದಲ್ಲಿ ದೊಡ್ಡ ದಂಧೆ; ಹೆಚ್ಚು ಬಲಿ ಕನ್ನಡ ಹೆಣ್ಣುಮಕ್ಕಳದ್ದೇ :-
ಕಾಣೆಯಾದ ತನ್ನ ಮಗಳು ಸಿಗದೇ ಇರುವಾಗ ಅಲ್ಲಿನ ಸಾರ್ವಜನಿಕರನ್ನು ಹನುಮಂತಪ್ಪ ಸಾಕಷ್ಟು ಬಾರಿ ವಿಚಾರಿಸಿದ್ದಾರೆ. ದೇವಸ್ಥಾನಕ್ಕೆ ಬರುವವರಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣೆಯಾಗುತ್ತಾರೆ. ಅದರಲ್ಲಿ ಕನ್ನಡಿಗರೇ ಜಾಸ್ತಿ. ಇಲ್ಲಿ ಹೆಣ್ಣುಮಕ್ಕಳನ್ನು ಕಳ್ಳತನದಿಂದ ಸಾಗಿಸುವ ದೊಡ್ಡ ದಂಧೆಯೇ ಇದೆ ಎನ್ನುವ ಮಾತುಗಳು ಅವರಿಗೆ ತಿಳಿದುಬಂದಾಗ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ.

ಪಂಡರಾಪುರ ಸಿಂಘಂ :-
ಪಂಡರಾಪುರ ಪೊಲೀಸ್ ಠಾಣೆಯ ಯಂಗ್ ಎಂಡ್ ಡೈನಾಮಿಕ್ ಪಿಎಸ್ಐ ವಾಬ್ಲೆ ಎನ್ನುವವರು ಹನುಮಂತಪ್ಪನಿಗೆ ಧೈರ್ಯ ತುಂಬಿದ್ದಾರೆ. ಕೊನೆ ಆರೋಪಿಯನ್ನು ಹಿಡಿಯುವುದಾಗಿ ಭರವಸೆಯನ್ನು ಕೊಟ್ಟಿದ್ದಾರೆ. ಕೊನೆಗೆ ಹಣವಿಲ್ಲದೆ ಕುಂತಾಗ ಬಸ್ಚಾಜರ್್ ವ್ಯವಸ್ಥೆ ಮಾಡಿ ಸಿಂಧನೂರಿಗೆ ಕಳುಹಿಸಿದ್ದಾರೆ. ಆದರೆ ಮಗಳು ಹೆಣವಾಗಿ ಬಂದಿರುವುದು ಹನುಮಂತಪ್ಪರಿಗೆ ನುಂಗಲಾರದ ನೋವಾಗಿದೆ.

ಕಾಮೆಂಟ್‌ಗಳಿಲ್ಲ: