ಬುಧವಾರ, ಫೆಬ್ರವರಿ 26, 2014

ಬೆಳಗಲ್ಲು ವೀರಣ್ಣ, ಪಿಚ್ಚಳ್ಳಿ ಶ್ರೀನಿವಾಸ್ ಅವರಿಗೆ ಅಭಿನಂದನೆ.

-ಅರುಣ್

 ಈ ಬಾರಿಯ ಜಾನಪದ ಅಕಾಡೆಮಿಗೆ ಪಿಚ್ಚಳ್ಳಿ ಶ್ರೀನಿವಾಸ್, ಯಕ್ಷಗಾನ ಬಯಲಾಟ ಅಕಾಡೆಮಿಗೆ ಬೆಳಗಲ್ಲು ವೀರಣ್ಣ  ಆಯ್ಕೆಯಾಗಿದ್ದಾರೆ. ಮೊದಲನೆಯದಾಗಿ ಅವರಿಬ್ಬರಿಗೂ ಕನ್ನಡ ಜಾನಪದ ಬ್ಲಾಗ್ ಅಭಿನಂದಿಸುತ್ತದೆ.

  ಯಕ್ಷಗಾನವೇ ಯಾಜಮಾನ್ಯ ವಹಿಸುತ್ತಿದ್ದ ಅಕಾಡೆಮಿಗೆ ತೊಗಲು ಗೊಂಬೆಯ ಪ್ರಯೋಗಶೀಲ ಕಲಾವಿದ ಬೆಳಗಲ್ಲು ವೀರಣ್ಣ  ಆಯ್ಕೆಯಾದದ್ದು ಹೆಚ್ಚು ಅರ್ಥಪೂರ್ಣ. ಅಂತೆಯೇ ಹಾಡು ಕಲಾವಿದ ಮೌಖಿಕ ಪರಂಪರೆಯನ್ನು ಮುಂದುವರಿಸುತ್ತಿರುವ ಪಿಚ್ಚಳ್ಳಿ ಶ್ರೀನಿವಾಸ್ ಅವರ ಆಯ್ಕೆ ಕೂಡ ಹೊಸ ತಲೆಮಾರು ಅಕಾಡೆಮಿಗೆ ಬಂದಂದ್ದು ಖುಷಿ ತಂದಿದೆ. ಈ ಇಬ್ಬರು ಕಲಾವಿದರು ಈ ಎರಡು ಅಕಾಡೆಮಿಗಳನ್ನು ಅರ್ಥಪೂರ್ಣವಾಗಿ ಮುನ್ನಡೆಸುವ ಜವಬ್ದಾರಿ ಹೊತ್ತಿದ್ದಾರೆ. ಅದನ್ನು ಮುಂದಿನ ಅವರ ಕೆಲಸಗಳಲ್ಲಿ ಕಾಣಬೇಕಾಗಿದೆ. ಈ ಕುರಿತು ಬ್ಲಾಗಿನಲ್ಲಿ ಚರ್ಚಿಸಲಾಗುವುದು.ಬೆಳಗಲ್ ವೀರಣ್ಣ


ಪಿಚ್ಚಳ್ಳಿ ಶ್ರೀನಿವಾಸ್

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಈ ಪದವಿಗಳು ಬೆಳಗಲು ವೀರಣ್ಣ ಮತ್ತು ಪಿಚ್ಚಳ್ಳಿ ಶ್ರೀನಿವಾಸರಿಗೆ ಸಂದಿರುವುದು ಜನಪದ ಹಾಗು ಜನಪರ ಕಲೆಗೆ ಸಂದ ಗೌರವ ಎಂದೇ ಪರಿಗಣಿಸಿದರೆ ತಪ್ಪಲ್ಲ