(ಪ್ರೊ.
ಅಂಬಳಿಕೆ ಹಿರಿಯಣ್ಣ ಅವರು ‘ಜಾನಪದ ವಿಶ್ವವಿದ್ಯಾಲಯ ಹಿಂದಿನ
ಕನಸು ನಾಳಿನ ನನಸು’
ಎನ್ನುವ
ಪುಸ್ತಕವನ್ನು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಕನ್ನಡದ ಚಿಂತಕರು ಜಾನಪದ ವಿವಿಯನ್ನು ರೂಪಿಸುವ
ಕುರಿತು ಮಾತನಾಡಿದ್ದಾರೆ. ಈ ಕೃತಿಯಲ್ಲಿನ ದೇವನೂರು ಮಹಾದೇವ ಅವರ ಬರಹವನ್ನು ಬ್ಲಾಗ್ ಓದಿಗೆ
ಪ್ರಕಟಿಸಲಾಗುತ್ತಿದೆ.- ಅರುಣ್)
-ದೇವನೂರು
ಮಹಾದೇವ
ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯವೇ ಜಾನಪದದ
ನಾಡಿಮಿಡಿತ. ಅದಕ್ಕನುಗುಣವಾಗಿ ಜಾನಪದ ಅಧ್ಯಯನ ವಿಷಯಗಳನ್ನು ರೂಪಿಸಬೇಕು. ಮಾನಸಿಕ, ಕೌಟುಂಬಿಕ, ಭಿನ್ನ
ಭಿನ್ನ ಗುಂಪುಗಳ ಸಮಾಜದ ಸಂಬಂಧದ ಸ್ವಸ್ಥತೆಗೆ-ಶಾಪ, ಬೈಗುಳ, ಗಾದೆ
ಮಾತುಗಳ ರೂಪದ ಅಭಿವ್ಯಕ್ತಿ catharsis element
ನ್ನು
ಕೇಂದ್ರವಾಗಿಟ್ಟುಕೊಂಡು ವಿಷಯಗಳ ವಿಂಗಡಣೆ ಮಾಡುತ್ತಾ ಹೋಗಬೇಕು. We need badly ಇದನ್ನೇ.
ಇದು ಇವತ್ತಿನ ಸಮಾಜದ ಅಗತ್ಯವಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿಯೆ, ಜಾನಪದ
ಅಧ್ಯಯನ ಆಗಲೇಬೇಕು.
ಜಾನಪದವನ್ನು ಸರಕಾಗಿಯೇ ನೋಡುತ್ತಿದ್ದೇವೆ. ಇದರಿಂದ ಹೊರ
ಬರಬೇಕಾಗಿದೆ. ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕನ್ನಡ ಪದವೀಧರರಿಗೆ ಕೀಳಿರಿಮೆ Inferiority ಇದ್ದರೆ
ಇಂಗ್ಲೀಷ್ ಪದವೀಧರರಿಗೆ ಒಣ ಪ್ರತಿಷ್ಠೆ ಇರುವುದು ಕಂಡುಬರುತ್ತದೆ.
ಆದಿಮ ಮನಸ್ಸು ಆದಿಮ ಬದುಕಿಗೆ ಜಾಗತಿಕ ಆಯಾಮ ಇರುವುದರಿಂದ
ಜಾನಪದವನ್ನು ಉನ್ನತ ಶಿಕ್ಷಣದಲ್ಲೇ ಉಳಿಸಬೇಕು. ಜಾನಪದವನ್ನು ಉಳಿಸಬೇಕು ಎನ್ನುವುದಕ್ಕಿಂತ ಅದರ
ಚಲನಶೀಲತೆಗೆ ಒತ್ತು ಕೊಡುವುದು ಲೇಸು.
ಸಂಘಟನೆ-ವಿಘಟನೆ; ಐಕ್ಯತೆ-ಛಿದ್ರತೆ
ಈ ಪ್ರಕ್ರಿಯೆಗಳು ಈ ಪರಂಪರಾ ಜ್ಞಾನದಲ್ಲಿ ಅಂತರ್ಗತವಾಗಿ ಬಂದಿದೆ ಎಂಬುದನ್ನು ಗಮನಿಸಬೇಕು.
ದೇಹ-ಮನಸ್ಸು- ಸಮಾಜ- ಜಗತ್ತು ಈ ನೆಲೆಯಲ್ಲಿ ಸಂಘಟನೆ-ವಿಘಟನೆ ಪ್ರಕ್ರಿಯೆಗಳ ಬಗೆಗೆ ವಿಚಾರ
ಮಾಡುವುದು ಸೂಕ್ತ.
ಜಾನಪದವನ್ನು ಈ ನೆಲದ ಪಳೆಯುಳಿಕೆಗಳಾಗಿ ನೋಡದೆ ಅದಕ್ಕೆ
ಭೌತಿಕವಾದ, ಸಾಮಾಜಿಕವಾದ
ಬೆಲೆ ಪ್ರತಿಷ್ಠೆ,ಗೌರವ
ತಂದುಕೊಡಬೇಕು.
ಯಕ್ಷಗಾನ Form ಮತ್ತು
ಕಲಾವಿದರು-ಶಿಷ್ಟರು::ಯೋಗಿಗಳು
ಜನಪದ Form ಮತ್ತು
ಕಲಾವಿದರು-ಪರಿಶಿಷ್ಟರು::ಜೋಗಿಗಳು
ಯಕ್ಷಗಾನದಂತ ವಿಜೃಂಬಿಸುವ ಕಲೆಗಳನ್ನು ತಡವಾಗಿ
ವಿಶ್ವವಿದ್ಯಾಲಯ ಆವರಣಕ್ಕೆ ಬರಮಾಡಿಕೊಳ್ಳುವುದು ಸಮಂಜಸವಾಗಿ ಕಾಣುತ್ತದೆ.
ಜೋಗಿಹಾಡು- ಸಂವಹನದ ದೃಷ್ಟಿಯಿಂದ- ಹೆಣ್ಣು
ಪ್ರಧಾನವಾಗಿ, ಗಂಡು
ಪ್ರಧಾನ (Attitude) ವಾಗಿ
ಹಾಡುವ ಪರಿಕ್ರಮ ಬೆರಗುಗೊಳಿಸುವಂಥದು. ಚಕ್ಕಳದ ಗೊಂಬೆ ಪೇಂಟಿಂಗ್- ಅದ್ಭುತ, ಮೆಚ್ಚುಗೆಗೆ
ಅರ್ಹವಾದುದು. ಇವುಗಳ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಬೇಕು.
ಈ ಕಾಲಮಾನಕ್ಕೆ ಯಾವುದು ಲಾಭದಾಯಕ? ಎಂಬುದನ್ನು
ಲಕ್ಷ್ಯದಲ್ಲಿಟ್ಟುಕೊಂಡು,
Attitude ಬೆಳೆಸಿಕೊಂಡು ಕೆಲಸ ಮಾಡಬೇಕು. ಆಗ ಆ
Stigma ಹೋಗುವುದು
ಸಾದ್ಯ. ಜಾನಪದದಲ್ಲಿ ಒಳ್ಳೆಯದೂಇದೆ, ಕೆಟ್ಟದ್ದೂ ಇದೆ. ಅನಿಷ್ಟಗಳನ್ನು ಕಡಿಮೆ ಮಾಡಿ, ಇಲ್ಲವೆ
ದೂರ (eradicate) ಮಾಡಿ ಸಮಾಜದ ಸ್ವಾಸ್ಥ್ಯ ಮತ್ತು
ಸಾಮರಸ್ಯವನ್ನು ಸಾಧಿಸಬೇಕು.
ಮೈಲಾರಲಿಂಗನ ಆರಾಧನೆಯ ಸಂಪ್ರದಾಯದಲ್ಲಿ ಮಾನಸಿಕ
ಸಮಾಧಾನಕ್ಕಾಗಿ ಭಕ್ತಾದಿಗಳು ತಮ್ಮನ್ನು ತಾವು ಹಿಂಸೆಗೆ ಗುರಿಪಡಿಸಿಕೊಳ್ಳುತ್ತಾರೆ. ಯಾವ ಬಗೆಯ
ಹಿಂಸೆ ಅವರಿಗೆ ಸಮಾಧಾನ ನೀಡುವುದೋ ಅದನ್ನು ಅವರು ಸಂಪ್ರದಾಯದ ಹೆಸರಲ್ಲಿ ಉಳಿಸಿಕೊಂಡು
ಬಂದಿದ್ದಾರೆ. ದೇವರು ಮೈದುಂಬುವುದು, ಮೈಮೇಲೆ ದೇವರನ್ನು ಬರಿಸಿಕೊಳ್ಳುವ ಕ್ರಮ ಅದನ್ನು
ದೃಢೀಕರಿಸುತ್ತದೆ.
ದಿ:೦೬.೧೧.೨೦೧೦
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ