ಶುಕ್ರವಾರ, ಅಕ್ಟೋಬರ್ 5, 2012

ಪುಟ್ಟ ಮಕ್ಕಳ ದಿಟ್ಟ ಡೊಳ್ಳು ಕುಣಿತ



-CgÀÄuï eÉÆüÀzÀPÀÆrèV 
avÀæUÀ¼ÀÄ: DgÁzÀå PÀÆrèV
 

 ಜನಪದ ಕಲಾಪ್ರಕಾರಗಳಿಗೆ ಶಾಲಾ ಮಕ್ಕಳ ಪ್ರವೇಶ ಹಿಂದಿನಿಂದಲೂ ನಡೆದಿದೆ. ಆದರೆ ಈ ನೆಲೆಯಲ್ಲಿ ಜನಪದ ಕಲೆಗಳನ್ನು ಅಭ್ಯಾಸ ಮಾಡಿದ್ದು ಕಡಿಮೆ. ಈಚೆಗೆ ಹೊಸಪೇಟೆಯ ಸಾಯಿಮಣಿ ಪ್ರಕಾಶನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ, ವೆಂಕಟಗಿರಿ ದಳವಾಯಿ ಅವರ ಅಪಮಾನಗಳಿಗಿಲ್ಲ ವಿರಾಮಕವನ ಸಂಕಲನ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಆಕರ್ಷಿಸಿದ್ದು ವಡ್ಡರಹಳ್ಳಿ ಗ್ರಾಮದ ಸರಕಾರಿ ಶಾಲಾ ಮಕ್ಕಳ ಡೊಳ್ಳುಕುಣಿತ.

 ಈ ಮಕ್ಕಳೆಲ್ಲಾ ಆರು ಏಳನೆ ತರಗತಿ ಓದುತ್ತಿರುವವರು.  ಅವರ ಗಾತ್ರವನ್ನು ಮೀರಿಸುವಂತಿದ್ದ ಡೊಳ್ಳುಗಳನ್ನು ಹಿಡಿದು ಬಾರಿಸುವ ಪರಿ ಎಂತವರನ್ನು ಅಚ್ಚರಿ ಹುಟ್ಟಿಸುವಂತಿತ್ತು. ಸಾಮಾನ್ಯವಾಗಿ ಶಾಲಾಮಕ್ಕಳಿಗೆ ಅದರಲ್ಲೂ ಖಾಸಗಿ ಶಾಲೆಗಳಲ್ಲಿ ಟೇಪ್ ರೆಕಾರ್ಡರ್ ಹಾಕಿ ಸಿನೆಮಾ ಹಾಡುಗಳಿಗೆ ಡಾನ್ಸ್ ಮಾಡಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು ತೋರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಹೊತ್ತಲ್ಲಿ ಹಳ್ಳಿ ಮಕ್ಕಳಿಗೆ ಅದೇ ಹಳ್ಳಿಯ ಜನಪದ ಕಲೆಯೊಂದನ್ನು ಕಲಿಸಿ ಆ ಕಲೆಯನ್ನು ಅದ್ಭತವಾಗಿ ಪ್ರದರ್ಶನ ಮಾಡಿಸುವ ಮೂಲಕ ಮಕ್ಕಳ ಪ್ರತಿಭೆ ಗುರುತಿಸುವ ಮಾದರಿ ಮೆಚ್ಚುವಂತಹದ್ದು. ಕಾರಣ ಸರಕಾರಿ ಶಾಲೆಗಳು ಕ್ರಿಯಾಶೀಲವಾಗಿಲ್ಲ ಎನ್ನುವ ಸಾರ್ವತ್ರಿಕ ಹೇಳಿಕೆಗಳನ್ನು ಸುಳ್ಳು ಮಾಡುವ ಹಾಗಿರುವ ಕೆಲ ಸರಕಾರಿ ಶಾಲೆಗಳ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯನ್ನು ಗುರುತಿಸುವ ಕೆಲಸವೂ ಆಗಬೇಕಿದೆ.
 

  ಹೊಸಪೇಟೆಯಿಂದ ಬಳ್ಳಾರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಈ ವಡ್ಡರಹಳ್ಳಿ ಇದೆ. ಆ ಹಳ್ಳಿಯಲ್ಲಿ ೧ ರಿಂದ ಎಂಟನೆ ತರಗತಿವರೆಗಿನ ಸರಕಾರಿ ಶಾಲೆಯಿದೆ. ಇಲ್ಲಿ ೧೮೫ ವಿದ್ಯಾರ್ಥಿಗಳಿದ್ದಾರೆ, ಏಳು ಜನ ಶಿಕ್ಷಕ ಶಿಕ್ಷಕಿಯರಿದ್ದಾರೆ. ಆ ಶಾಲೆಯ ಮಕ್ಕಳಾದ ಆಂಜನೇಯ, ವೀರೇಂದ್ರ, ಶ್ರೀಧರ್, ಹುಲುಗಪ್ಪ, ಮಂಜುನಾಥ,  ಮಲ್ಲಿಕಾರ್ಜುನ, ಸುರೇಶ್ ಅವರನ್ನು ಒಳಗೊಂಡ ಈ ಡೊಳ್ಳು ತಂಡ ದೊಡ್ಡವರನ್ನು ಮೀರಿಸುವ ಹಾಗಿದೆ. ತಮ್ಮದೇ ಹಳ್ಳಿಯ ಕಲೆ ಆಗಿರುವುದರಿಂದ ಈ ಮಕ್ಕಳು ಸಹಜವಾಗಿ ಡೊಳ್ಳು ಕುಣಿತವನ್ನು ಕರಗತ ಮಾಡಿಕೊಂಡಿದ್ದಾರೆ. ಅವರ ಆಂಗಿಕ ಚಲನೆ ಕೂಡ ಇದನ್ನು ತೋರಿಸುತ್ತದೆ.
 

  ಈ ಮಕ್ಕಳಿಗೆ ಡೊಳ್ಳುಬಾರಿಸುವುದನ್ನು ಕಲಿಸಿದ ಶಿಕ್ಷಕ ಇಮ್ರಾನ್ ಹೇಳುವುದು ಹೀಗೆ ನಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಊರ ದೊಡ್ಡವರ ಜತೆ ಡೊಳ್ಳು ಬಾರಿಸಲು ಹೋಗುತ್ತಿದ್ದರು,  ಹಾಗೆ ಬಾರಿಸುವುದನ್ನು ನೋಡಿದ ನಾವು, ಈ ಹುಡುಗರನ್ನು ಒಳಗೊಂಡ ಡೊಳ್ಳುಬಾರಿಸುವವರ ತಂಡ ಕಟ್ಟಿದರೆ ಹೇಗೆ ಎಂಬ ಯೋಚನೆ ಹೊಳೆದು ತಯಾರಿ ಮಾಡಿಸೆದೆವು, ಇದಕ್ಕೆ ಶಾಲಾ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು. ಹೀಗಾಗಿ ಒಂದು ಒಂದು ಡೊಳ್ಳು ತಂಡ ಸಿದ್ದವಾಗಿದೆಎನ್ನುತ್ತಾರೆ. ಈ ಹಿಂದೆ ಕಮಲಾಪುರದ ಬಳಿ ಇರುವ ಕಸ್ತೂರಿ ಬಾ ಶಾಲೆಯ ಹುಡಿಗಿಯರು ಡೊಳ್ಳು ಬಾರಿಸುತ್ತಿದ್ದರಂತೆ. ಇದೂ ಕೂಡ ಪರೋಕ್ಷ ಪ್ರೇರಣೆಯಾಗಿರಬೇಕು. 

 ಹೀಗೆ ಸರಕಾರಿ ಶಾಲೆಗಳು ಆಯಾ ಹಳ್ಳಿಯ ಜನಪದ ಕಲೆಗಳನ್ನು ಬಳಸಿಕೊಂಡೂ ಕಲಿಕೆಯನ್ನು ಕ್ರಿಯಾಶೀಲಗೊಳಿಸಬಹುದು ಎನ್ನುವುದಕ್ಕೆ ವಡ್ಡರಹಳ್ಳಿ ಶಾಲೆಯ ಮಕ್ಕಳು ಮತ್ತು ಶಿಕ್ಷಕ ವರ್ಗ ಸಾಕ್ಷಿಯಾಗಿದೆ. ಹಾಗಾಗಿ ಇಮ್ರಾನ್ ಒಳಗೊಂಡ ಶಿಕ್ಷಕ ವರ್ಗಕ್ಕೆ ಮತ್ತು ಮಕ್ಕಳಿಗೆ ಕನ್ನಡ ಜಾನಪದ ಬ್ಲಾಗ್ ಅಭಿನಂದಿಸುತ್ತದೆ. 

1 ಕಾಮೆಂಟ್‌:

nirusha ಹೇಳಿದರು...

geleya arun, namma vaddarahalli Shaley makkala dollu kunithada bagge ninna bloginalli baredaddakke khushi aytu. usha