ಗುರುವಾರ, ಅಕ್ಟೋಬರ್ 7, 2010
ಜಾನಪದ ವಿ.ವಿ ದೊಡ್ಡ ಮ್ಯೂಜಿಯಂ ಆಗದಿರಲಿ.
*******
ಎಪ್ಪತ್ತರ ದಶಕದಿಂದಲೆ ಜೀಶಂಪ ಮೊದಲಾದವರಿಂದ ಹುಟ್ಟಿದ ಜಾನಪದ ವಿವಿ ಕನಸು ಸದ್ಯಕ್ಕೆ ನನಸಾಗಿದೆ. ಇದಕ್ಕಾಗಿ ಜಾನಪದ ಅಕಾಡೆಮಿಯ ಅದ್ಯಕ್ಷರಾದ ಗೊ.ರು.ಚ ಮೊದಲಾದ ಹಿರಿಯರು ಅವಿರತವಾಗಿ ಶ್ರಮಿಸಿದ್ದಾರೆ. ಈಗ ವಿಶೇಷ ಅಧಿಕಾರಿ0ುನ್ನು ನೇಮಕ ಮಾಡಿ ವಿವಿಗೆ ಚಾಲನೆ ನೀಡಲಾಗಿದೆ. ಈ ಹೊತ್ತಲ್ಲಿ ಹಿರಿ0ು ಜಾನಪದ ವಿದ್ವಾಂಸರು ವಿವಿ0ು ಸ್ವರೂಪದ ಬಗೆಗೆ ಹಲವು ವಿನ್ಯಾಸಗಳನ್ನು ಸೂಚಿಸುತ್ತಿದ್ದಾರೆ. ಇವುಗಳಲ್ಲಿ ಕೆಲವು ಮಹತ್ವದ ಒಳನೋಟಗಳೂ ಇವೆ. ಆದರೆ ಬಹುಪಾಲು ಅಭಿಪ್ರಾಯಗಳನ್ನು ನೋಡಿದರೆ ಜಾನಪದ ವಿವಿ0ುನ್ನು ದೊಡ್ಡದೊಂದು ಮ್ಯೂಜಿ0ುಂ ಮಾಡುವಂತೆ ಕಾಣುತ್ತಿದೆ. ಜಾನಪದ ಕ್ಷೇತ್ರಕ್ಕೆ ಹೊಸ ತಲೆಮಾರಿನ ಸಂಶೋಧಕರು ಹೆಚ್ಚಾಗಿ ಬರದಿರುವುದರಿಂದ ಹಿರಿಯ ಜಾನಪದ ವಿದ್ವಾಂಸರೆ ವಿವಿಯನ್ನು ಕಟ್ಟುವ ಬಗ್ಗೆ ಚಚರ್ೆ ಮಾಡುತ್ತಿರುವುದು ಅನಿವಾರ್ಯವೂ ಆಗಿದೆ. ಇದು ಜಾನಪದದ ಬಗ್ಗೆ ಹೊಸ ಆಲೋಚನೆಗಳನ್ನು ಇರಿಸಿಕೊಂಡ ಕೆಲವಾದರೂ ಹೊಸ ತಲೆಮಾರಿನ ಜಾನಪದ ವಿದ್ವಾಂಸರಿಗೆ ಆತಂಕದಂತೆ ಕಾಣುತ್ತಿದೆ.
ಕನರ್ಾಟಕದಲ್ಲಿ ಜಾನಪದದ ಬಗ್ಗೆ ಅಪಾರ ಕೆಲಸ ನಡೆದಿದೆ. ನಡೆ0ುಬೇಕಾದುದು ಇನ್ನೂ ಬಹಳಷ್ಟಿದೆ. ಅದು ನಿರಂತರವಾಗಿ ಆಗಬೇಕಾದುದು. ಆ ಕಾರಣಕ್ಕೆ ಜಾನಪದ ವಿವಿ0ೊಂದರ ಅಗತ್ಯವಿತ್ತು. ಮೂಲಗಳ ಪ್ರಕಾರ ಜಾನಪದಕ್ಕಾಗಿ ಪ್ರತ್ಯೇಕ ವಿವಿ0ುು ಬೇರೆಲ್ಲಿ0ುೂ ಇಲ್ಲ, ಅದು ಕನರ್ಾಟಕದಲ್ಲಿ ಆಗಿರುವುದು ಚಾರಿತ್ರಿಕವಾಗಿ ಮುಖ್ಯ ಘಟನೆ. ಹಾಗಾಗಿ ಅಂತಹ ಜಾನಪದ ವಿವಿ0ುನ್ನು ತುಂಬಾ ವೈಜ್ಞಾನಿಕವಾಗಿ, ಸೂಕ್ಷ್ಮವಾಗಿ ರೂಪಿಸಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಈ ವಿವಿ0ುನ್ನು ದೂರದೃಷ್ಠಿಯಿಲ್ಲದೆ ರೂಪಿಸಿದ್ದಾದರೆ ಕನರ್ಾಟಕದ ಇತರ ವಿವಿಗಳಂತೆ0ೆು ಇದು ಒಂದು ಕಾಲಕ್ಕೆ ಜಡಗೊಂಡು ಸ್ಥಾವರವಾಗುವಲ್ಲಿ 0ಾವುದೇ ಅನುಮಾನವಿಲ್ಲ.
ಕನರ್ಾಟಕದಲ್ಲಿ ನಡೆದ ಜಾನಪದ ಅಧ್ಯ0ುನಗಳು ಬಹುಪಾಲು ಸಂಗ್ರಹ ಮಾದರಿ0ುವು. ವಿಶ್ಲೇಷಣೆ0ು ದೃಷ್ಟಿಯಿಂದ ಅವು ಬಹುಪಾಲು ಅಸೂಕ್ಷ್ಮವಾದವುಗಳು. ಅವುಗಳು ಮಾಹಿತಿ ಸಂಗ್ರಹಣೆ0ುಲ್ಲೇ ಹೆಚ್ಚಿನ ಸಾಧನೆ ಮಾಡಿವೆ. ಅದು ಆರಂಭಿಕ ಕಾಲಘಟ್ಟದ ಅನಿವಾ0ರ್ುವೂ ಆಗಿತ್ತು. ಹಾಗಾಗಿ ಹಿರಿಯ ಜಾನಪದ ವಿದ್ವಾಂಸರನ್ನು ಗೌರವಿಸಬೇಕಿದೆ. ಬೆರಳೆಣಿಕೆ0ು ಕೆಲವು ವಿದ್ವಾಂಸರನ್ನು ಹೊರತುಪಡಿಸಿದರೆ ಬಹುಪಾಲು ಜಾನಪದ ವಿದ್ವಾಂಸರು ಜಾನಪದ ಎಂದರೆ ಮಾಹಿತಿ ಸಂಗ್ರಹ ಎನ್ನುವ ನಂಬಿಕೆಯಲ್ಲಿ ವಿಶ್ವಾಸವಿರಿಸಿದ್ದಾರೆ. ಹಾಗಾಗಿ ಇದೇ ಧೋರಣೆ ಜಾನಪದ ವಿವಿ ನಿಮರ್ಾಣದಲ್ಲೂ ಕೆಲಸ ಮಾಡುವ ಸಾದ್ಯತೆಯಿದೆ. ಹಾಗಾದಲ್ಲಿ ಕನರ್ಾಟಕದ ಜಾನಪದ ವಿದ್ವತ್ತಿನ ಮಿತಿ ಜಾನಪದ ವಿವಿ0ು ಮಿತಿ0ಾಗುತ್ತದೆ0ುಷ್ಟೆ. ನಮ್ಮ ಕಾಲಕ್ಕೆ ಹೊಂದಿಕೆ0ೆು ಆಗದ ಬಹುಪಾಲು ಜಾನಪದ ಕುರಿತ ವ್ಯಾಖ್ಯಾನಗಳು ಸಿದ್ಧಾಂತಗಳು ಈಗಲೂ ನಿ0ುಂತ್ರಿಸುತ್ತಿವೆ. ಅಷ್ಟಕ್ಕೂ ನಮ್ಮ ನಿತ್ಯದ ಬದುಕಿನ ಒಡಲೊಳಗಿಂದ ಹುಟ್ಟುವ ಜಾನಪದವನ್ನು ವಿವರಿಸಿಕೊಳ್ಳಲು ಪಾಶ್ಚ್ಯತ್ಯ ಜಾನಪದ ವ್ಯಾಖ್ಯಾನಗಳಿಗೆ ಮೊರೆ ಹೋಗುತ್ತಿರುವುದೊಂದು ವಿಪ0ರ್ಾಸ.
ಜಾನಪದ ಎನ್ನುವುದು ನಿತ್ಯದ ಬದುಕಿನ ಒಡಲೊಳಗಿಂದಲೇ ರೂಪಾಂತರವನ್ನು ಪಡೆ0ುುತ್ತದೆ. ಆದರೆ ಈ ರೂಪಾಂತರ ಜಾನಪದ ವ್ಯಾಖ್ಯಾನಗಳ ಚೌಕಟ್ಟಿಗೆ ಹೊಂದುವುದಿಲ್ಲ. ಅಥವಾ ಹೊಸತನ್ನು ಗುರುತಿಸಲು ಜಾನಪದದ ಹಳೆ ವ್ಯಾಖ್ಯಾನಗಳಿಗೆ ಧಾರಣ ಶಕ್ತಿ ಸಾಲದು. ಹಾಗಾಗಿ ನಮ್ಮ ಕಾಲದ ಜಾನಪದವನ್ನು ವಿವರಿಸಿಕೊಳ್ಳಲು ನಮ್ಮ ಕಾಲದ ಒಳಗಿಂದಲೇ ಹೊಸ ದೃಷ್ಠಿಕೋನಗಳು ಹೊಸ ಕಾಣ್ಕೆಗಳು ಸಿದ್ದಗೊಳ್ಳಬೇಕಿದೆ. ಅಂತಹ ಕಾಣ್ಕೆಗಳು ಕನ್ನಡ ಜಾನಪದ ವಿದ್ವತ್ತಿನಲ್ಲಿ ಹೆಚ್ಚಾಗಿ ಕಾಣುತ್ತಿಲ್ಲ ಎನ್ನುವುದನ್ನು ಮನಗಾಣಬೇಕು. ಜಾನಪದದ ನಿಜವಾದ ವಿದ್ವತ್ತು ಶೈಕ್ಷಣಿಕವಾಗಿ ಪಠ್ಯದ ವಿಷಯವಾಗಿ ಜಾನಪದವನ್ನು ಕಲಿತ ವಿದ್ವಾಂಸರಲ್ಲಿಲ್ಲದೆ, ಜಾನಪದ ಕಲಾವಿದರಲ್ಲಿದೆ. ಹಾಗಾಗಿ ಅಪಾರ ದೇಸಿ ಜ್ಞಾನವಿರುವ ಕಲಾವಿದರನ್ನು ವಿದ್ವಾಂಸರನ್ನಾಗಿ ಗೌರವಿಸುವ ಹೊಸ ಮೌಲ್ಯ ಜಾನಪದ ವಿವಿಯಲ್ಲಿ ಮೊಳೆಯಬೇಕಿದೆ. ಈ ಮೇಲಿನ ಎಲ್ಲಾ ಎಚ್ಚರಗಳನ್ನು ಗಮನದಲ್ಲಿರಿಸಿಕೊಂಡೇ ಜಾನಪದ ವಿವಿ0ುನ್ನು ರೂಪಿಸಬೇಕಾಗಿದೆ. ಇಂದು ಬಹು ಶಿಸ್ತೀ0ು ಸಾಂಸ್ಕೃತಿಕ ಅಧ್ಯ0ುನದ ಮಾದರಿಗಳು ಹೆಚ್ಚು ಪ್ರಸ್ತುತ ಅನ್ನಿಸುತ್ತಿವೆ. ಈ ಮಾದರಿ0ುನ್ನು ಗಮನಿಸಿಯೇ ಜಾನಪದ ವಿವಿ0ು ತಾತ್ವಿಕ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಬೇಕಿದೆ.
ಸದ್ಯಕ್ಕೆ ವಿಶ್ವವಿದ್ಯಾಲ0ುಗಳಲ್ಲಿರುವ ಜಾನಪದ ವಿಭಾಗಗಳು, ಜಾನಪದ ಅಕಾಡಮಿ, ರಾಮನಗರದ ಜಾನಪದ ಲೋಕ, ಉಡುಪಿ0ು ಆರ್. ಆರ್. ಸಿ ಮುಂತಾದವುಗಳು ಜಾನಪದ ವಿವಿಗೆ ಒಳ್ಳೆ0ು ಮಾದರಿಗಳಾಗಲಾರವು. ಕಾರಣ ಈ ಮೇಲೆ ಹೇಳಿದ ಮಿತಿಗಳೇ ಇವುಗಳಲ್ಲಿ ಢಾಳಾಗಿ ಕಾಣುತ್ತಿವೆ. ಕನರ್ಾಟಕ ವಿವಿ 0ುು ಪ್ರತಿ ವರ್ಷ ಆ0ೋಜಿಸುವ ಜಾನಪದ ಸಮ್ಮೇಳನಗಳು ಹೊಸ ವಾಗ್ವಾದಗಳನ್ನು ಹುಟ್ಟುಹಾಕಲಿಲ್ಲವಾದರೂ ಹೊಸ ಶಾಖೆಗಳ ಬಗ್ಗೆ ಗಮನಸೆಳೆದಿವೆ. ಇದೇ ಮಾತು ಹಂಪಿ ಕನ್ನಡ ವಿಶ್ವವಿದ್ಯಾಲ0ು ಆ0ೋಜಿಸುವ ದೇಶಿ ಸಮ್ಮೇಳನಕ್ಕೂ ಅನ್ವ0ುವಾಗುತ್ತದೆ. ಹಾಗಾಗಿ ಈಗಾಗಲೇ ಇತರೆ ವಿವಿಗಳ ಜಾನಪದ ವಿಭಾಗದ ಅಧ್ಯಾಪಕರನ್ನೆ ಜಾನಪದ ವಿವಿಗೆ ನೇಮಕ ಮಾಡದಿರುವುದು ಸೂಕ್ತ. ಜಾನಪದವನ್ನು ಮುಖ್ಯ ಶಿಸ್ತಾಗಿ ಸ್ನಾತಕೋತ್ತರ ಪದವಿ ಪಡೆದು ಜಾನಪದದಲ್ಲಿ ಸಂಶೋಧನೆ ಮಾಡಿದ ಕೆಲವಾದರೂ ಹೊಸ ತಲೆಮಾರಿನ ಯುವ ಜಾನಪದ ವಿದ್ವಾಂಸರಿಗೆ ವಿವಿ ಅವಕಾಶ ಕಲ್ಪಿಸಿದ್ದಾದರೆ, ಹೊಸತೇನನ್ನಾದರೂ ಕಟ್ಟಲು ಸಾಧ್ಯವಿದೆ.
ಹಿರಿ0ು ಜಾನಪದ ವಿದ್ವಾಂಸರು ಸೂಚಿಸಿದಂತೆ ಈಗ ಲಭ್ಯವಿರುವ ಎಲ್ಲಾ ಜನಪದ ಕಲೆಗಳನ್ನು ಆಡಿ0ೋ ವೀಡಿ0ೋ ವ್ಯವಸ್ಥಿತ ದಾಖಲೀಕರಣ ಆಗಬೇಕಿದೆ. ಸಂಗ್ರಹಿಸಲು ಸಾದ್ಯವಿರುವುದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕಿದೆ. ಜಾನಪದ ವಸ್ತು ಸಾಮಗ್ರಿ0ುನ್ನು ರಕ್ಷಿಸಿಡುವ ಕೆಲಸವೂ ಆಗಬೇಕಿದೆ. ಆದರೆ ಅದು ಜಾನಪದ ವಿವಿ0ು ಆಂಶಿಕ ಭಾಗವಾಗಬೇಕೆ ವಿನಃ ಅದೇ ಪ್ರಧಾನವಾಗಬಾರದು. ಕಾರಣ ಜಾನಪದದ ಹೊಸ ನಡಿಗೆ0ುನ್ನು ಗುರುತಿಸಬೇಕು. ಸದ್ಯಕ್ಕೆ ರೂಪುಗೊಳ್ಳುತ್ತಿರುವ ನವ ಮೌಖಿಕತೆಯನ್ನು ಗುರುತಿಸುವಂತಾಗಬೇಕು, ವೈದಿಕ ಆಲೋಚನ ವಿನ್ಯಾಸಗಳನ್ನು ಮುರಿದು ಅವೈದಿಕ ಆಲೋಚನ ವಿನ್ಯಾಸಗಳನ್ನು ಹೊಸತಾಗಿ ಕಟ್ಟಬೇಕಿದೆ. ಸದ್ಯದ ಕನರ್ಾಟಕದಲ್ಲಿ ಹಿಂದೂ ಮೂಲಭೂತವಾದಿ ಆಲೋಚನ ವಿನ್ಯಾಸಗಳು ಗಟ್ಟಿ0ಾಗುತ್ತಿವೆ. ಈ ಒಟ್ಟು ಆಲೋಚನೆ0ುನ್ನೇ ಆಮೂಲಾಗ್ರವಾಗಿ ಬದಲಾಯಿಸಿ ದೇಸಿ ಚಿಂತನೆ0ು ಬೇರುಗಳು ಬಲವಾಗುವಂತೆ ನೀರು ಗೊಬ್ಬರ ಹಾಕುವ ಮಹತ್ವದ ಜವಾಬ್ದಾರಿ ಜಾನಪದ ವಿವಿ0ು ಮೇಲಿದೆ. ದೇಸಿ ಚಿಂತನೆ0ುನ್ನು ಗಟ್ಟಿ0ಾದ ಕನ್ನಡದ ಆಲೋಚನ ಮಾದರಿ0ಾಗಿ ರೂಪಿಸುವಲ್ಲಿ ಜಾನಪದ ವಿವಿ0ುು ದೊಡ್ಡ ಸವಾಲನ್ನು ಮೈಮೇಲೆ ಎಳೆದುಕೊಳ್ಳಬೇಕಿದೆ. ಇದಕ್ಕೆ ಹಂಪಿ ವಿವಿ0ುಲ್ಲಿ ರೂಪುಗೊಂಡ ದೇಸಿ ಚಿಂತನೆಯನ್ನು ಮಾದರಿ0ಾಗಿಟ್ಟುಕೊಳ್ಳಬಹುದು.
ಆನ್ವಯಿಕ ಜಾನಪದದ ಆಲೋಚನೆ ಕನ್ನಡದಲ್ಲಿ ಗಟ್ಟಿ0ಾಗಿ ನೆಲೆಗೊಳ್ಳಬೇಕಾಗಿದೆ. ಈತನಕ ನಾವು ಜಾನಪದದಿಂದ ಜ್ಞಾನವನ್ನು ಪಡೆದದ್ದೇ ಆಗಿದೆ ಬದಲಾಗಿ ನಾವು ಸಾಹಿತ್ಯಿಕವಾಗಿ ಪಡೆದ 0ಾವುದೇ ಜ್ಞಾನ ಪರಂಪರೆ0ುನ್ನು ಜಾನಪದ ಲೋಕಕ್ಕೆ ಹಾಯಿಸಲಿಲ್ಲ. ಹಾಗಾಗಿ ಜನಪದರಲ್ಲಿ ಶೇಕ್ಸಪಿ0ುರ್, ಕುವೆಂಪುರಂತವರ ಒಂದು ನಾಟಕವೂ ಪುನರ್ಸೃಷ್ಠಿ0ಾಗಲಿಲ್ಲ. ಈ ಕುರಿತು ಹೊಸ ಆಲೋಚನೆ0ುನ್ನೇ ಹುಟ್ಟುಹಾಕುವ ಸಾದ್ಯತೆ ಇದೆ. ಇಂತಹ ಹೊಸ ಆಲೋಚನೆ0ು ತುಡಿತ ಇರುವ ಕೆಲವರನ್ನಾದರೂ ಜಾನಪದ ವಿವಿಗೆ ಆ0ೆ್ಕು0ಾದದ್ದಾದರೆ ಅಲ್ಲಿ ಹೊಸತೇನನ್ನಾದರೂ ಕಟ್ಟಲು ಸಾದ್ಯವಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
3 ಕಾಮೆಂಟ್‌ಗಳು:
Hi Arun,
Olleya prayatna. nimage olleyadagali, bareyutta iri.
-vikas negiloni
ಜನಪದ ವಿಶ್ವ ವಿದ್ಯಾನಿಲಯ ಕೇವಲ ಸೀಮಿತ ಪ್ರದೇಶ ಮತ್ತು ಅಲ್ಲಿನ ಕೆಲವೇ ಆಯ್ದ ಯುವ ಪರಿಣತರ ಆಯ್ಕೆ ಕೂಡ ಅದರ ಅಧ್ಯಯನವನ್ನು ಸೀಮಿತಗೊಳಿಸ ಬಹುದು. ಹಾಗಾಗಿ, ಹೊಸ ಜನಪದ ವಿಶ್ವವಿದ್ಯಾಲಯಕೆ ಹೊಸ ತಲೆಮಾರಿನ ಉತ್ಸಾಹಿ ಯುವ ಮನಸ್ಸುಗಳನ್ನು ಆಯ್ಕೆ ಮಾಡಿ ಕೊಳ್ಳುವಾಗ ಅಖಿಲ ಕರ್ನಾಟಕವನ್ನೂ ಪ್ರಥಿನಿಧಿಸುವನ್ಥಾಗಬೇಕಿರುವುದೂ ಕೂಡ ಇಂದಿನ ತುರ್ತು ಎಂಬುದೂ ಕೂಡ ಮುಖ್ಯವೇ ಅನ್ನಿಸುತ್ತದೆ..ಅನ್ಥಂದೊಂದು ಕಾರ್ಯಕ್ಕೆ ನಿನ್ನ ಪತ್ರ ದಾರಿ ಮಾಡಿಕೊಡಲಿ...ಹೊಸ ಬ್ಲಾಗ್ ಗೆ ಶುಭಾಶಯ...
ಜಾನಪದದ ಬಗೆಗಿನ ನಿನ್ನ ಹೊಸ ಪ್ರಯತ್ನದ ಬ್ಲಾಗ್ ಬರಹ ಉತ್ತಮವಾದುದು..
ಇನ್ನು ನೀನು ಬರಹದಲಿ ಎತ್ತಿರುವ ವಿಷಯ ಸಹ ಅಷ್ಟೆ ಗಂಭಿರವಾದುದು..ನಮ್ಮದೇ ಜಾನಪದ ಕಲೆಯನು ನಮ್ಮ ಮುಂದಿನವರಿಗೆ ಉಳಿಸುವ ಪ್ರಾಮಾಣಿಕ ಪ್ರಯತ್ನ ಆಗಬೇಕು ನಿಷ್ಟೆಯುತವಾಗಿ..
ಕಾಮೆಂಟ್ ಪೋಸ್ಟ್ ಮಾಡಿ