ಶನಿವಾರ, ಮಾರ್ಚ್ 17, 2018

ಹಂಡಿಜೋಗಿ ಸಮುದಾಯದ ಯುವ ಕಲಾವಿದ ಮಂಜು



Image may contain: 1 person, close-up
ಹಂಡಿಜೋಗಿ ಸಮುದಾಯದ ಯುವಕ ಮಂಜು ತನ್ನ ಕುಲವೃತ್ತಿ ಕಥನಗಳನ್ನು ಕಂಚಿನ ಕಂಠದಲ್ಲಿ ಎತ್ತರದ ಧ್ವನಿಯಲ್ಲಿ ಹಾಡುತ್ತಾನೆ. ಈಗ ಬಿಕ್ಷೆಗೆ ಬರೋಕೆ ನಾಚಿಕೆಯಾಗುತ್ತದೆ ಎನ್ನುವ ಅಳುಕನ್ನು ಹೊಂದಿದ್ದಾನೆ. ಮಕ್ಕಳನ್ನು ಓದಿಸುತ್ತಿರುವೆ, ನಮ್ಮ‌ಮಕ್ಕಳು ಈ ಕಲೆ ಕಲಿಯುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ಇಂತಹ ಅದ್ಭುತ ಕಲಾವಿದ ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಮಾಡಿಲ್ಲ ಎನ್ನುವುದು ಅಚ್ಚರಿಯ ಸಂಗತಿ.

ಜನಪದ ಕಲೆಯೊಂದಕ್ಕೆ ನಾಗರಿಕ ಜಗತ್ತು ಗೌರವಿಸಿ, ಸ್ವತಃ ಈ ಕಲೆ ನಮ್ಮನ್ನು ಬದುಕಿಸುತ್ತದೆ, ಸಮಾಜ ಕಲಾವಿದರೆಂದು ಗೌರವಿಸುತ್ತಾರೆ ಎನ್ನುವ ಭಾವನೆ ಬರದೆ ಹೋದರೆ ಈ ಕಲಾವಿದರು ತಮ್ಮ ಕುಲವೃತ್ತಿಯಲ್ಲಿ ಮುಂದುವರಿಯುವುದೇ ಶಾಪ ಎಂದು ಭಾವಿಸುತ್ತಾರೆ. ಆ ಭಾವನೆ ಬಂದಿದೆ ಕೂಡ...


https://www.facebook.com/arun.joladkudligi/videos/2002222409792631/

ಕಾಮೆಂಟ್‌ಗಳಿಲ್ಲ: