ಭಾನುವಾರ, ಜೂನ್ 11, 2017

ನೋಟು ನಿಷೇಧದಿಂದ ಕುಸಿದ ಅಭಿವೃದ್ಧಿ

 ಅನುಶಿವಸುಂದರ್
note ban ಗೆ ಚಿತ್ರದ ಫಲಿತಾಂಶ

೨೦೧೬-೧೭ರ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ದಾಖಲಾಗಿರುವ ಅಭಿವೃದ್ಧಿಯ ದರದ ಕುಸಿತವು ನೋಟು ನಿಷೇಧದಿಂದ ಉಂಟಾಗಿರುವ ಹಾನಿಯನ್ನು ಸಾಬೀತು ಮಾಡುತ್ತದೆ.

೨೦೧೭ರ ಫೆಬ್ರವರಿಯಲ್ಲಿ ಕೇಂದ್ರ ಅಂಕಿಅಂಶ ಕಛೇರಿಯು (ಸೆಂಟ್ರಲ್ ಸ್ಟಾಟಿಸ್ಟಿಕ್ಸ್ ಆಫೀಸ್- ಸಿಎಸ್) ಭಾರತದ ಒಟ್ಟಾರೆ ಅಂತರಿಕ ಅಭಿವೃದ್ಧಿ-ಜಿಡಿಪಿ- ದರವು ೨೦೧೬-೧೭ರ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಶೇ. ರಷ್ಟು ಅಭಿವೃದ್ಧಿಯನ್ನು ದಾಖಲಿಸಿದೆಯೆಂದೂ ಹಾಗೂ ಇಡೀ ಹಣಕಾಸು ವರ್ಷದಲ್ಲಿ ಅಭಿವೃದ್ಧಿ ದರ ಶೇ..೧ರಷ್ಟಾಗಲಿದೆ ಎಂದೂ ಘೋಷಿಸಿತ್ತು. ಅಂಕಿಅಂಶವನ್ನು ಪ್ರಧಾನಿ ನರೇಂದ್ರಮೋದಿಯವರು ಎಲ್ಲಾ ಕಡೆ ನೋಟು ನಿಷೇಧದ ಕ್ರಮದ ಸಮರ್ಥನೆಗೆ ಬಳಸಿಕೊಂಡರುನೋಟು ನಿಷೇಧದಿಂದ ದೇಶದ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂದು ಅಂದಾಜು ಮಾಡಿದ ಹಾರ್ವಡ್ ನಂಥ ಉಚ್ಚ ವಿಶ್ವವಿದ್ಯಾಲಗಳ ಬುದ್ಧಿಜೀವಿಗಳನ್ನು ಸಹ ಕಂಡಕಂಡ ಕಡೆ ಲೇವಡಿ ಮಾಡಿದರು. ನೋಟು ನಿಷೇಧದಿಂದ ಭಾರತದ ಅಭಿವೃದ್ಧಿ ದರ ಶೇ.೨ರಷ್ಟು ಕುಸಿಯಬಹುದೆಂದು ಸಂಸತ್ತಿನಲ್ಲಿ ಎಚ್ಚರಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗರನ್ನೂ ಮತ್ತು ನೋಟು ನಿಷೇಧದಿಂದ ಅಸಂಘಟಿತ ವಲಯದ ಮೇಲೆ ಹಾನಿಕಾರಕ ಪರಿಣಾಮವಾಗುತ್ತದೆಂದು ಎಚ್ಚರಿಸಿದ್ದ ಅರ್ಥಶಾಸ್ತ್ರಜ್ನ ಅಮರ್ತ್ಯಸೇನರನ್ನು ಮೋದಿಯವರು ಮಾಡಿದ ಹಲವಾರು ಸಾರ್ವಜನಿಕ ಭಾಷಣಗಳಲ್ಲಿ ಪದೇಪದೇ ಹೆಸರಿಸುತ್ತಿದ್ದರು. ಅವರು ಹೇಳುತ್ತಿದ್ದದ್ದು ಸುಳ್ಳೆಂದು ಬಯಲಾಗಿದೆ ಎಂದು ಮೋದಿಯವರು ಘೋಷಿಸಿದ್ದರು.

ಆದರೆ ಮೂರನೇ ತ್ರೈಮಾಸಿಕದ ಅಂಕಿಅಂಶಗಳು ನೋಟು ನಿಷೇಧದ ಪರಿಣಾಮವನ್ನು ಗಣನೆಗೆ ತೆಗೆದುಕೊಂಡಿಲ್ಲವೆಂದು ಖುದ್ದು ಸರ್ಕಾರಿ ಅಂಕಿಅಂಶ ಪರಿಣಿತರೇ ಹೇಳುತ್ತಿದ್ದರೂ ಸರ್ಕಾರ ಲೆಕ್ಕಿಸಲಿಲ್ಲ್ಲ.

ಇದೇ ಮೇ ೩೧ ರಂದು ಸಿಎಸ್ ಪ್ರಕಟಿಸಿರುವ ಅಂಕಿಅಂಶಗಳು ೨೦೧೬-೧೭ರ ಮೂರನೇ ಮತ್ತು ನಾಲ್ಕನೇ ತ್ರೈ ಮಾಸಿಕಗಳಲ್ಲಿ ಭಾರತದ ಅಭಿವೃದ್ಧಿಯ ಗತಿಯು ಕುಸಿದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ನೋಟು ನಿಷೇಧವು ಭಾರತದ ಆರ್ಥಿಕತೆಯ ಮೇಲೆ ಮಾಡಿರುವ ನಕಾರಾತ್ಮಕ ಪರಿಣಾಮವನ್ನು ಮತ್ತು ಮೋದಿಯ ಸುಳ್ಳುಗಳನ್ನೂ ಎತ್ತಿ ತೋರಿಸುತ್ತಿದೆ

೨೦೧೫-೧೬ರ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಸಾಲಿನ ತ್ರೈ ಮಾಸಿಕದ ಅಭಿವೃದ್ಧಿ ಗತಿಯು ಶೇ. .೬ರಷ್ಟು ಕುಸಿದು ಶೇ..೭ಕ್ಕೆ ಇಳಿದಿದೆ. ಆದರೆ ನಾಲ್ಕನೇ ತ್ರೈ ಮಾಸಿಕದಲ್ಲಿ ಶೇ..೧ರಷ್ಟು ಕುಸಿತವಾಗಿದೆ. ೨೦೧೫-೧೬ರ ನಾಲ್ಕನೇ ತ್ರೈ ಮಾಸಿಕದಲ್ಲಿ ಅಭಿವೃದ್ಧಿಯ ಗತಿ ಶೇ..೭ರಷ್ಟು ದಾಖಲಾಗಿದ್ದರೆ ಸಾಲಿನ ನಾಲ್ಕನೇ ತ್ರೈ ಮಾಸಿಕದಲ್ಲಿ ಅದು ಶೇ..೬ಕ್ಕೆ ಕುಸಿದಿದೆ. ೨೦೧೩-೧೪ರ ನಾಲ್ಕನೇ ತ್ರೈ ಮಾಸಿಕದಲ್ಲಿ ಆರ್ಥಿಕತೆಯು ಶೇ..೩ರಷ್ಟು ಮಾತ್ರ ಅಭಿವೃದ್ಧಿಯನ್ನು ಕಂಡಿತ್ತು. ಅದನ್ನು ಬಿಟ್ಟರೆ ಇದು ನಂತರದಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮಟ್ಟದ ನಾಲ್ಕನೇ ತ್ರೈ ಮಾಸಿಕ ಅಭಿವೃದ್ಧಿ ದರವಾಗಿದೆ.

ಹಾಗೆನೋಡಿದರೆ, ಮೇಲೆ ನೀಡಲಾಗಿರುವ ಅಂಕಿಅಂಶವು ಪುನರ್ ವಿಮರ್ಶೆಯಾಗದ ಅಂಕಿಅಂಶವಾಗಿದೆ. ಆದರೆ ನಂತರ ಪ್ರಾಪ್ತವಾದ ಪುನರ್ ವಿಮರ್ಶೆಯಾದ ಕೈಗಾರಿಕಾ ಅಭಿವೃದ್ಧಿ ಸೂಚ್ಯಂಕ ಮತ್ತು ಸಗಟು ಬೆಲೆ ಸೂಚ್ಯಂಕಗಳನ್ನು ಅನ್ವಯಿಸಿದಾಗ ೨೦೧೩-೧೪ರ ನಾಲ್ಕನೇ ತ್ರೈಮಾಸಿಕದ ಗತಿ ಮೊದಲಿಗಿಂತ ಇನ್ನೂ ಹೆಚ್ಚಿತ್ತೆಂದು ಲೆಕ್ಕ ಹಾಕಲಾಗಿದೆ ಲೆಕ್ಕದಲ್ಲಿ ೨೦೧೧-೧೨ರಲ್ಲಿ ಪ್ರಾರಂಭವಾದ ಹೊಸ ಸರಣಿಯಲ್ಲಿ ಸಾಲಿನ ನಾಲ್ಕನೇ ತ್ರೈಮಾಸಿಕದ ಅಭಿವೃದ್ಧಿ ದರ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ.

ಹಣಕಾಸು ವರ್ಷಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ ೨೦೧೬-೧೭ರ ಸಾಲಿನಲ್ಲಿ ದಾಖಲಾದ ಶೇ. . ರಷ್ಟು ಗ್ರಾಸ್ ವ್ಯಾಲ್ಯೂ ಆಡೆಡ್ (ಜಿವಿಎ- ಒಟ್ಟಾರೆ ಮೌಲ್ಯ ವರ್ಧನೆ- ಲೆಕ್ಕಾಚಾರದಲ್ಲಿ ಸರ್ಕಾರ ಕೊಡುವ ರಿಯಾಯತಿಗಳು ಮತ್ತು ತೆರಿಗೆಗಳ ಲೆಕ್ಕಾಚಾರಗಳು ಸೇರಿರುವುದಿಲ್ಲ. ಕೇವಲ ಸರಕು ಮತ್ತು ಸೇವಾ ಮೌಲ್ಯಗಳ ವಾರ್ಷಿಕ ಮೌಲ್ಯವರ್ಧನೆಗಳು ಲೆಕ್ಕವಾಗುತ್ತವೆ-ಅನುವಾದಕನ ಟಿಪ್ಪಣಿ) ಅಭಿವೃದ್ಧಿಯು ಕಳೆದ ವರ್ಷಕ್ಕಿಂತ ಶೇ..೩ರಷ್ಟು ಇಳಿಕೆ ಕಂಡಿದ್ದು ಇದು ೨೦೧೨-೧೩ರ ನಂತರದಲ್ಲಿ ಅತ್ಯಂತ ಕಡಿಮೆ ಜಿವಿಎ ಅಭಿವೃದ್ಧಿ ಗತಿಯಾಗಿದೆ. ಸಾಲಿನ ಒಟ್ಟಾರೆ ಅಭಿವೃದ್ಧಿ ದರವನ್ನು ಶೇ.. ಎಂದು ಅಂದಾಜಿಸಲಾಗಿದೆ. ಆದರೆ ಇದು ಉತ್ಪ್ರೇಕ್ಷಿತ ಅಂದಾಜೇ ಆಗಿದೆ. ಏಕೆಂದರೆ ಪರೋಕ್ಷ ತೆರಿಗೆಯು ನೈಜ ದರಗಳಲ್ಲಿ ಶೇ.೧೨.೮ರಷ್ಟು ಅಭಿವೃದ್ಧಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದು ಹಳೆಯ ರಾಷ್ಟ್ರೀಯ ಆದಾಯದ ಸರಣಿಯ ರಾಷ್ಟ್ರೀಯ ಲೆಕ್ಕ ಪುಸ್ತಕಗಳ ಭಾಷೆಯಲ್ಲೇ ಹಿಂದೆಂದೂ ಸಂಭವಿಸಿಲ್ಲ.

ಒಟ್ಟಾರೆ ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಷನ್ (ಜಿಪಿಸಿಎಫ್-ದೇಶದ ಒಟ್ಟಾರೆ ಭೌತಿಕ ಆಸ್ತಿಪಾಸ್ತಿ ಎಂದರೆ ಒಟ್ಟಾರೆ ಹೂಡಿಕೆಯಲ್ಲಿ ಯಲ್ಲಿ ವಿಲೇವಾರಿಗಳನ್ನು ಕಳೆದರೆ ಉಳಿಯುವ ಮೊತ್ತ- ಅನುವಾದಕನ ಟಿಪ್ಪಣಿ) (ಒಟ್ಟಾರೆ ಸ್ಥಿರ ಬಂಡವಾಳ ಸಂಚಯ) ಮೂಲಕ ಅಂದಾಜು ಮಾಡುವ ಸ್ಥಿರ ಬಂಡವಾಳದ ಅಭಿವೃದ್ಧಿ ಗತಿಯೂ ಸಹ ಕುಂಠಿತವಾಗಿದೆಯೆಂದು ಸಿಎಸ್ಒದ ಇತ್ತೀಚಿನ ಅಂದಾಜುಗಳು ತಿಳಿಸುತ್ತವೆ. ೨೦೧೬-೧೭ರಲ್ಲಿ ಒಟ್ಟಾರೆ ದೇಶದ ಅಂತರಿಕ ಉತ್ಪನ್ನದ ಭಾಗಾಂಶವಾಗಿ ಜಿಪಿಸಿಎಫ್ ಅಭಿವೃದ್ಧಿ ಕಳೆದ ವರ್ಷದ ಶೇ.೩೦.೯ರಿಂದ ಶೇ.೨೯.೫ಕ್ಕೆ ಕುಸಿದಿದೆ. ಕಳೆದ ವರ್ಷದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಅದು ಶೇ.೨೮.೫ರಿಂದ ವರ್ಶ ಶೇ.೨೫.೫ಕ್ಕೆ ಕುಸಿದಿದೆ. ಜಿಪಿಸಿಎಫ್ ಕುಸಿಯುತ್ತಾ ಹೋಗುವುದು ಮಧ್ಯಮಾವಧಿಯಲ್ಲಿ ಉತ್ಪತ್ತಿ, ಉದ್ಯೋಗ ಮತ್ತು ಆದಾಯಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.
ಗಮನಾರ್ಹವಾದ ಅಂಶವೆಂದರೆ ಕೃಷಿ ಮತ್ತು ಸಾರ್ವಜನಿಕ ಆಡಳಿತವನ್ನು ಹೊರತುಪಡಿಸಿ ಉಳಿದೆಲ್ಲಾ ಕೈಗಾರಿಕಾ ವರ್ಗಗಳು ಸಾಲಿನ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ತೀವ್ರವಾದ ಅಭಿವೃದ್ಧಿ ಕುಸಿತವನ್ನು ಅನುಭವಿಸಿವೆ. ಇವೆರಡನ್ನು ಹೊರತುಪಡಿಸಿ ಉಳಿದ ಆರು ವಲಯಗಳಲ್ಲಿ ಸರಾಸರಿ ಅಭಿವೃದ್ಧಿಯು ಶೇ.೧೦.೭ರಿಂದ ಶೇ..೮ರಷ್ಟಕ್ಕಿಳಿದು ತೀವ್ರವಾದ ಕುಸಿತವನ್ನು ಅನುಭವಿಸಿದೆಹೀಗಾಗಿ ವರ್ಷಾವಧಿಯಲ್ಲಿ ಹೆಚ್ಚೂ ಕಡಿಮೆ ದಾಮಾಶದಷ್ಟು ನಷ್ಟ ಸಂಭವಿಸಿದೆ.

ಅದನ್ನೇ ರೂಪಾಯಿಗಳಲ್ಲಿ ಹೇಳುವುದಾದರೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ವರ್ಷ ಒಟ್ಟಾರೆ ಅಂತರಿಕ ಉತ್ಪನ್ನ (ಜಿಡಿಪಿ)ದಲ್ಲಿ ,೩೬,೦೦೦ ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದೆ. ಅತ್ಯಂತ ತೀವ್ರ ಕುಸಿತ ಕಂಡಿರುವುದು ನಿರ್ಮಾಣ ಕ್ಷೇತ್ರ: ೨೦೧೫-೧೬ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. ರಷ್ಟಿದ್ದ ಕ್ಷೇತ್ರದ ಅಭಿವೃದ್ಧಿ ಸಾಲಿನ ತ್ರೈ ಮಾಸಿಕದಲ್ಲಿ ಶೇ. .೭ಕ್ಕೆ ಕುಸಿದಿದೆ. ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಅಸಂಘಟಿತ ಕಾರ್ಮಿಕರು ಕೆಲಸ ಮಾಡುತ್ತಾರೆ. ಉತ್ಪಾದನಾ ಕ್ಷೇತ್ರ, ವ್ಯಾಪಾರ, ಹೋಟೆಲ್ ಮತ್ತು ಸಾರಿಗೆ, ಹಣಕಾಸು, ರಿಯಲ್ ಎಸ್ಟೇಟ್ ಮತ್ತು ಇತರ ವೃತ್ತಿಪರ ಸೇವಾ ಕ್ಷೇತ್ರಗಳಲ್ಲೂ ಇದೇ ಬಗೆಯ ತೀವ್ರ ಕುಸಿತವುಂಟಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅತ್ಯಧಿಕ ಸಂಖ್ಯೆಯ ಅಸಂಘಟಿತ ಉದ್ಯಮಗಳಿದ್ದು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದವು.

ಕಳೆದ ಎರಡು ತ್ರೈ ಮಾಸಿಕಗಳಲ್ಲಿ ಕಂಡುಬಂದಿರುವ ಕುಸಿತವು ನೋಟು ನಿಷೇಧದಿಂದ ಉಂಟಾಗಿರುವ ತಾತ್ಕಾಲಿಕ ಪರಿಣಾಮವಾಗಿದ್ದು ಇದು ಮಧ್ಯಮಾವಧಿಗೆ ವಿಸ್ತರಿಸುವುದಿಲ್ಲ ಎಂದು ಕೆಲವರು ವಾದಿಸಬಹುದು. ಭಾರತದ ಆರ್ಥಿಕತೆಯು ಅಂತರ್ಗತವಾಗಿಯೇ ಅಸಂಘಟಿತ ಸ್ವರೂಪವನ್ನು ಹೊಂದಿದ್ದು ಆರ್ಥಿಕತೆಯ ಮೇಲೆ ಅದರ ಪರಿಣಾಮವನ್ನು ಅಂದಾಜಿಸುವಲ್ಲಿ ಸಿಎಸ್ ಅನುಸರಿಸುತ್ತಿರುವ ಪದ್ಧತಿಯಲ್ಲಿ ಗಂಭೀರವಾದ ಸಮಸ್ಯೆಗಳಿವೆ. ಉದಾಹರಣೆಗೆ ದೇಶದ ಒಟ್ಟಾರೆ ಮೌಲ್ಯ ವರ್ಧನೆಗೆ  (ಗ್ರಾಸ್ ವ್ಯಾಲ್ಯೂ ಆಡೆಡ್-ಜಿವಿಎ)ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳ ಅಸಂಘಟಿತ ವಿಭಾಗಗಳ ಕೊಡುಗೆಯನ್ನು ಅಂದಾಜು ಮಾಡಲು ೨೦೧೧-೧೨ರ ಮೂಲ ವರ್ಷದಲ್ಲಿ  ಎಫೆಕ್ಟೀವ್ ಲೇಬರ್ ಇನ್ಪುಟ್ ಪದ್ಧತಿಯನ್ನು (ಅಂತಿಮವಾಗಿ ಬಳಕೆ ಮಾಡಿಕೊಂಡ ಶ್ರಮಶಕ್ತಿಯ ಅಂದಾಜು) ಬಳಸಲಾಗಿತ್ತು. ನಂತರದ ವರ್ಷಗಳಲ್ಲಿ ಜಿವಿಎ ಅಂದಾಜುಗಳನ್ನು ಮಾಡಲು ಇನ್ನಿತರ ಸೂಚ್ಯಂಕಗಳನ್ನು ಬಳಸಿಕೊಳ್ಳಲಾಯಿತು. ಎಫೆಕ್ಟೀವ್ ಲೇಬರ್ ಇನ್ಪುಟ್ ಮೂಲಕ ಅಂದಾಜು ಮಾಡಲು ಎಲ್ಲಾ ಉದ್ಯಮಗಳಲ್ಲೂ ಬಳಕೆಯಾಗಿರುವ  ಅಂದಾಜು ಶ್ರಮಶಕ್ತಿಯ ಬಗ್ಗೆ ಮತ್ತು ಪ್ರತಿ ಕಾರ್ಮಿಕರಿಂದ ಆಗಿರಬಹುದಾದ ತಲಾವಾರು ಮೌಲ್ಯವರ್ಧನೆಯ ಬಗ್ಗೆ ಕೈಗಾರಿಕಾವಾರು ದತ್ತಾಂಶಗಳು ಬೇಕಾಗುತ್ತವೆ. ಆದರೆ ಬಗೆಯ ದತ್ತಂಶಗಳು ಕೇವಲ ಮೂಲವರ್ಷಕ್ಕೆ ಮಾತ್ರ ಲಭ್ಯವಿದೆ. ನಂತರದ ವರ್ಷಗಳ ಬಗ್ಗೆ ವರ್ಗೀಕರಣದಲ್ಲಿ ಮಾಹಿತಿ ಸಿಗುವ ಅವಕಾಶವೇ ಇಲ್ಲ. ಹೀಗಾಗಿ ನೋಟು ನಿಷೇಧದಿಂದ ಅಸಂಘಟಿತ ಕ್ಷೇತ್ರದ ಉದ್ಯೋಗದ ಮೇಲಾಗಿರುವ ಪರಿಣಾಮವನ್ನು ಸರಿಯಾಗಿ ಗ್ರಹಿಸುವುದಕ್ಕೇ ಸಾಧ್ಯವಿಲ್ಲ. ಹಾಗೆಯೇ ವಲಯದ  ಉದ್ಯಮಗಳ ಮತ್ತು ಕಾರ್ಮಿಕರ ಗಳಿಕೆಗಳ ಬಗ್ಗೆ ಮ್ಯಾಕ್ರೋ ಮಟ್ಟದ ಚಿತ್ರಣವನ್ನು ಪಡೆಯುವುದು ಸಹ ಸಾಧ್ಯವಿಲ್ಲ.

ಹೀಗಾಗಿ ಒಟ್ಟಾರೆ ಮೌಲ್ಯ ವರ್ಧನೆ-ಜಿವಿಎ ಅನ್ನು ಅಂದಾಜು ಮಾಡುವಾಗ ಬಳಸುವ ಕೈಗಾರಿಕೋತ್ಪನ್ನ ಸೂಚ್ಯಂಕ ಮತ್ತು ಸಗಟು ದರ ಸೂಚ್ಯಂಕಗಳು ಅನೌಪಚಾರಿಕ ವಲಯದ ಕೊಡುಗೆಯನ್ನು ಹಿಡಿದುಕೊಡುವುದಿಲ್ಲ. ಅದೇನೇ ಇದ್ದರೂ, ತಳಮಟ್ಟದಿಂದ ಬರುತ್ತಿರುವ ವರದಿಗಳು ಮಾತ್ರ ಅನೌಪಚಾರಿಕ ಕ್ಷೇತ್ರವು ತೀವ್ರವಾದ ಮತ್ತು ಸಮಗ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ಅನುಮಾನಕ್ಕೆಡೆಯಿಲ್ಲದಂತೆ ಎತ್ತಿತೋರಿಸುತ್ತಿದೆ. ಕ್ಷೇತ್ರದಲ್ಲಿ ಉದ್ಯೋಗ ಮತ್ತು ಆದಾಯಗಳ ನಷ್ಟ, ಮತ್ತು ಸ್ವ ಉದ್ಯೋಗಿಗಳ ಮತ್ತು ಸಣ್ಣಹಾಗೂ ಮಧ್ಯಮ ಗಾತ್ರದ ಉದ್ಯಮಗಳ ಆದಾಯದಲ್ಲಿ ಕುಸಿತಗಳು ವ್ಯಾಪಕವಾಗಿ ಕಂಡುಬರುತ್ತಿದೆ.
೨೦೧೧-೧೨ರಲ್ಲಿ ಅಂದಾಜು ಮಾಡಿದಂತೆ ಒಟ್ಟಾರೆ ಉದ್ಯೋಗ ನಿರತ ೪೮. ಕೋಟಿ ಕಾರ್ಮಿಕರಲ್ಲಿ ಕೋಟಿ ಕಾರ್ಮಿಕರು ಮಾತ್ರ ಸಂಘಟಿತ ವಲಯದಲ್ಲಿದ್ದಾರೆ. ಉಳಿದ ಅಂದರೆ ಶೇ.೯೩ರಷ್ಟು ಕಾರ್ಮಿಕರು ಅಸಂಘಟಿತ ಕ್ಷೇತ್ರದಲ್ಲೇ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಹೀಗಾಗಿ ವಲಯದ ಉದ್ಯಮಗಳು ಹಾಗೂ ಕುಟುಂಬಗಳು ಮಾಡುತ್ತಿದ್ದ ಸರಕು ಮತ್ತು ಸೇವೆಗಳ ಬಳಕೆಯಲ್ಲಿ  ಮತ್ತು ಉಳಿತಾಯಗಳಲ್ಲಿ ಆಗುವ ಕಡಿತವು ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮೇಲೆ ಮಧ್ಯಮಾವಧಿಯಲ್ಲೂ ಪರಿಣಾಮವನ್ನುಂಟು ಮಾಡಿಯೇ ತೀರುತ್ತದೆ. ಹೀಗಾಗಿ ನೋಟು ನಿಷೇಧವು ಭಾರತದ ಆರ್ಥಿಕತೆಗೆ ಅದರಲ್ಲೂ ಅನೌಪಚಾರಿಕ ಉದ್ಯಮಗಳಿಗೆ ಮತ್ತು ಅದರ ಮೇಲೆ ಆಧಾರಪಟ್ಟಿರುವ ಜನರ ಜೀವನೋಪಾಯಗಳಿಗೆ ತೀವ್ರವಾದ ಹಾನಿಯನ್ನುಂಟುಮಾಡಿದೆ. ಅಭಿವೃದ್ಧಿಯ ಬಗೆಗಿನ ಹೊಸ ಅಂಕಿಅಂಶಗಳು ಮೋದಿ ಸರ್ಕಾರದ ತಪ್ಪುದಾರಿ ಹಿಡಿಸುವ ಘೋಷಣೆಗಳನ್ನು ಮತ್ತು ಟೊಳ್ಳು ಪದಪುಂಜಗಳನ್ನು ಸ್ಪಷ್ಟವಾಗಿ ಬಯಲುಮಾಡಿದೆ

    ಕೃಪೆ: Economic and Political Weekly
            June 3, 2017. Vol. 52. No. 22

                                                                                                    




ಕಾಮೆಂಟ್‌ಗಳಿಲ್ಲ: