ಬುಧವಾರ, ಡಿಸೆಂಬರ್ 10, 2014

ಈ ಮಣ್ಣಿನ ಒಳಸುಳಿಯಲ್ಲಿ ಬೆರೆತುಹೋದ ಸಿದ್ದಿಗಳು

-Koragerna Alipu Oripu
ದಕ್ಷಿಣ ಆಪ್ರಿಕಾದಿಂದ ಮಾನವ ಮಾರಾಟದ ದಾರುಣ ಸ್ಥಿತಿಗೆ ಸಿಲುಕಿ, ಭಾರತಕ್ಕೆ ವಸಹಾತುಶಾಹಿಗಳ ಗುಲಾಮರಾಗಿ ಸಾಗಿಸಲ್ಪಟ್ಟ ಸಂತತಿಯೇ ಸಿದ್ದಿ ಜನಾಂಗ. ಆಪ್ರಿಕಾದಲ್ಲಿ ಬಿಳಿಚರ್ಮದವರ ದರ್ಪಕ್ಕೆ ಸಿಲುಕಿ, ಅವರ ಗುಲಾಮರಾಗಿ ಬದುಕುತ್ತಿದ್ದ - ನೀಗ್ರೊ ಬಂಧುಗಳನ್ನು ಮಾರುಕಟ್ಟೆಯಲ್ಲಿ ಸರಕಿನಂತೆ ಮಾರಾಟಮಾಡಲಾಗುತ್ತಿತ್ತು. ಕ್ರಿ ಶ 16ರಿಂದ 19ನೇ ಶತಮಾನದ ಅವಧಿಯಲ್ಲಿ ಡಚ್ಚರು ಮತ್ತು ಪೋರ್ಚುಗೀಸರು, ಗುಲಾಮಿತನಕ್ಕಾಗಿ ಖರೀದಿಸಿದ ನೀಗ್ರೊ ಬಂಧುಗಳು ಹಡಗಿನ ಮೂಲಕ ಭಾರತ ಸೇರಿಕೊಂಡು ಈ ಮಣ್ಣಿನ ಒಳಸುಳಿಯಲ್ಲಿ ಒಂದಾಗಿಬಿಟ್ಟರು.
ಕರ್ನಾಟಕ, ಗೋವಾ, ಗುಜರಾತ್ ರಾಜ್ಯದ ಪ್ರಮುಖ ಬಂದರುಗಳ ಸಮೀಪದ ಕಾಡುಗಳಲ್ಲಿಯೇ ಶತಮಾನಗಳಿಂದ ವಾಸ್ತವ್ಯ ಹೂಡಿರುವ ಸಿದ್ದಿಗಳು, ಒಟ್ಟು 50000 ಜನಸಂಖ್ಯೆಯನ್ನು ಮೀರುವುದಿಲ್ಲ. ಕರ್ನಾಟಕದಲ್ಲಿ 17000 ಜನಸಂಖ್ಯೆ ಹೊಂದಿರುವ ಇವರು, ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಾಣಸಿಗುತ್ತಾರೆ. ಮಿಂಚುವ ಕಪ್ಪು ಮೈಬಣ್ಣ, ಬಲಾಢ್ಯ ಮೈಕಟ್ಟು, ಕುರುಚಲು ಕೂದಲುನಿಂದ ಕಂಗೊಳಿಸುತ್ತಾರೆ.
ಪುಟ್ಬಾಲ್ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ... "ನಮಗೆ ಗೊತ್ತಿರುವುದು ಹಾಡು ಮತ್ತು ಕುಣಿತ ಮಾತ್ರ..." ಎಂದ ನೆಲ್ಸನ್ ಮಂಡೇಲರ ಮಾತಿನಂತೆಯೇ - ಈ ಮಣ್ಣಿನ ಸಿದ್ಧಿಗಳಿಗೆ ಗೊತ್ತಿರುವುದು ಕೂಡಾ ಅದೇ! ಬಹುಶಃ ಅದು ಗುಲಾಮಿತನದ ನೋವನ್ನು ಮರೆಸುವ ದಿವ್ಯಶಕ್ತಿಯೇ ಹೌದು. ಕಾಡಿನೊಂದಿಗೆ ಅನನ್ಯ ಸಂಭಂದವನ್ನು ಇರಿಸಿಕೊಂಡಿರುವ ಸಿದ್ದಿ ಜನರು, ಹಾಡು ಮತ್ತು ಆದಿವಾಸಿ ಶೈಲಿಯ ವಿಶಿಷ್ಟ ಕುಣಿತಗಳಿಂದ ಬೆರಗು ಹುಟ್ಟಿಸಬಲ್ಲರು. ಸಿದ್ದಿ ಮಹಿಳೆಯರು ಪ್ರಸ್ತುತ ಪಡಿಸುವ 'ಪುಗುಡಿ ನೃತ್ಯ' ಜಾನಪದ ನೃತ್ಯ ಪ್ರಕಾರಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಇತರ ಆದಿವಾಸಿಗಳಿಗಿಂತ ಭಿನ್ನ ಆಚಾರ ವಿಚಾರ ಮೈಗೂಡಿಸಿಕೊಂಡಿರುವ ಸಿದ್ದಿ ಬಂಧುಗಳು, ಸಂಘಟನೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ
- ಹೃದಯ

ಕಾಮೆಂಟ್‌ಗಳಿಲ್ಲ: