ಮಂಗಳವಾರ, ಫೆಬ್ರವರಿ 28, 2017

ಖಾಸಗಿ ಕ್ರೂಢೀಕರಣ ಮತ್ತು ಪುನಶ್ಚೇತನ ಏಜೆನ್ಸಿಗಳು

ಅನು:ಶಿವಸುಂದರ್

“ಉಲ್ಬಣಗೊಳ್ಳುತ್ತಿರುವ ಜೋಡಿ ಬ್ಯಾಲೆನ್ ಶೀಟ್ ಸಮಸ್ಯೆಗೆ” (Twin Balance Sheet Problem (TBS) ಆರ್ಥಿಕ ಸರ್ವೇಕ್ಷಣೆ ಸೂಚಿಸಿರುವ ಪರಿಹಾರವು ಕೇವಲ ಒಂದು ಬ್ಯಾಂಡೇಜು ಒದಗಿಸಬಲ್ಲದಷ್ಟೆ.
Twin Balance Sheet Problem (TBS)- ಜೋಡಿ ಬ್ಯಾಲೆನ್ ಶೀಟ್ ಸಮಸ್ಯೆ- ಎಂದರೆ ಬ್ಯಾಂಕುಗಳಿಂದ ದೊಡ್ಡ ಮೊತ್ತದ ಸಾಲಗಳನ್ನು ಪಡೆದುಕೊಂಡ ದೊಡ್ಡ ಕಂಪನಿಗಳು ಸಾಲ ಮರುಪಾವತಿ ಮಾಡದೇ ಇದ್ದಾಗ ಬ್ಯಾಂಕುಗಳ ಮತ್ತು ಆ ಕಂಪನಿಗಳ ಬ್ಯಾಲೆನ್ಸ್ ಶೀಟ್-ಅಯವ್ಯಯ ಪಟ್ಟಿ-ಗಳಲ್ಲಿ ತಲೆದೋರುವ  ಸಮಸ್ಯೆ. ಸಾಮಾನ್ಯವಾಗಿ ಸಾಲ ಪಡೆದುಕೊಳ್ಳುವವರ ಮರುಪಾವತಿ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೇ ಬ್ಯಾಂಕುಗಳು ದೊಡ್ಡ ಮೊತ್ತದ ಸಾಲಗಳನ್ನು ನೀಡಿದಾಗ ಈ ಸಮಸ್ಯೆ ಉದ್ಭವಿಸುತ್ತದೆ- ಅನುವಾದಕನ ಟಿಪ್ಪಣಿ )

ಉಲ್ಬಣಗೊಳ್ಳುತ್ತಿರುವ ಜೋಡಿ ಬ್ಯಾಲೆನ್ ಶೀಟ್ ಸಮಸ್ಯೆಯು ಸಾರಾಂಶದಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಾಲ ತೆಗೆದುಕೊಂಡ ಕಂಪನಿಗಳ  ಮತ್ತು ಇಂಥಾ ಕೆಟ್ಟ ಸಾಲಗಳನ್ನು ಕೊಟ್ಟು ಅನುಭವಿಸುತ್ತಿರುವ ಬ್ಯಾಂಕುಗಳ, ಹದಗೆಡುತ್ತಿರುವ “ಹಣಕಾಸು ಒತ್ತಡ”ದ ಸಮಸ್ಯೆಯೇ ಆಗಿದೆ. ಇದರಿಂದಾಗಿ ಒಂದೆಡೆ ಸಾರ್ವಜನಿಕ ಬ್ಯಾಂಕುಗಳು ದೊಡ್ಡ ಕಂಪನಿಗಳಲ್ಲಿ ಸಿಕ್ಕಿಬಿದ್ದಿರುವ ತಮ್ಮ ದೊಡ್ಡ ಮೊತ್ತಗಳ “ಕೆಟ್ಟ ಸಾಲ”ಗಳನ್ನು  (ಬ್ಯಾಂಕ್ ಪರಿಭಾಷೆಯಲ್ಲಿ-ಬ್ಯಾಡ್ ಲೋನ್- ಕೆಟ್ಟ ಸಾಲ- ಎಂದರೆ ಸಾಲದ ಶರತ್ತುಗಳಿಗೆ ತಕ್ಕಂತೆ ಮರುಪಾವತಿ ಆಗದ ಮತ್ತು ಮುಂದೆಯೂ ಮರುಪಾವತಿ ಆಗಲಾರದೆಂದು ಪರಿಗಣಿಸಲ್ಪಟ್ಟ ಸಾಲಗಳು- ಅನುವಾದಕನ ಟಿಪ್ಪಣಿ )ಸಮರ್ಥವಾಗಿ ಪುನರ್‍ರಚಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಮತ್ತೊಂದೆಡೆ ಅವುಗಳ ನಿಷ್ಕ್ರಿಯ ಸಂಪತ್ತುಗಳ (ನಾನ್ ಫರ್ಫಾಮಿಂಗ್ ಅಸೆಟ್-NPA-  ನಿಷ್ಕ್ರಿಯ ಸಂಪತ್ತು-ಎಂದರೆ ಪಡೆದುಕೊಂಡ ಸಾಲದ ಕಂತನ್ನಾಗಲೀ ಅಥವಾ ಅದರ ಮೇಲಿನ ಬಡ್ಡಿಯನ್ನಾಗಲೀ ಸತತವಾಗಿ ಮರುಪಾವತಿ ಮಾಡಲು ವಿಫಲವಾದ ಸಾಲಗಳು- ಅನುವಾದಕನ ಟಿಪ್ಪಣಿ) ಪ್ರಮಾಣವೂ ಹೆಚ್ಚುತ್ತಾ ವಾಣಿಜ್ಯ ಕ್ಷೇತ್ರಕ್ಕೂ ಮತ್ತು ಇತರ ಖಾಸಗಿ ಹೂಡಿಕೆಗೂ ಸಾಲವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. 2015-16ರ ಆರ್ಥಿಕ ಸರ್ವೇಕ್ಷಣ ವರದಿಯನ್ನು ರೂಪಿಸಿದವರು ಈ ಸಮಸ್ಯೆಯನ್ನು ಬಗೆಹರಿಸಲು ಒಂದು ಪ್ರಮುಖ ಶಿಫಾರಸ್ಸು ಮಾಡಿದ್ದಾರೆ. ಅದೇನೆಂದರೆ ಒಂದು ಕೇಂದ್ರೀಕೃತ -ಪಬ್ಲಿಕ ಸೆಕ್ಟರ್ ಅಸೆಟ್ ರೆಹಾಬಿಲಿಟೇಷನ್ ಏಜೆನ್ಸಿ- Pಂಖಂ--ಪಾರಾ- ವನ್ನು ಸ್ಥಾಪಿಸುವುದು. ಅದು ಕೆಲವು ದೊಡ್ಡ ಮತ್ತು ಕಠಿಣವಾದ ಪ್ರಕರಣಗಳನ್ನು ಕೈಗೆತ್ತಿಕೊಂಡು “ರಾಜಕಿಯವಾಗಿ ಕಠಿಣವಾದ ನಿರ್ಧಾರಗಳನ್ನು” ತೆಗೆದುಕೊಳ್ಳುವ ಮೂಲಕ ಸಾಲದ ಹೊರೆಯನ್ನು ಕಡಿಮೆ ಮಾಡುತ್ತದೆಂದು ನಿರೀಕ್ಷಿಸಲಾಗಿದೆ. 

ಸಾರ್ವಜನಿಕ ಬ್ಯಾಂಕುಗಳು ಕೊಟ್ಟಿರುವ ಸಾಲಗಳಲ್ಲಿ ಆರನೇ ಒಂದು ಭಾಗ “ಒತ್ತಡ”ಕ್ಕೆ ಸಿಲುಕಿವೆ- ಒಂದೋ ಅವು ನಿಷ್ಕ್ರಿಯವಾಗಿವೆ ಅಥವಾ ಮನ್ನಾ ಆಗಲ್ಪಟ್ಟಿವೆ. ಬಹುಪಾಲು “ಒತ್ತಡಕ್ಕೆ ಸಿಲುಕಿರುವ” ಸಾಲಗಳನ್ನು “ನಿಷ್ಕ್ರಿಯ ಸಂಪತ್ತು” ಎಂದು ವರ್ಗೀಕರಿಸಲಾಗಿದೆ. ಆರ್ಥಿಕ ಸರ್ವೇಕ್ಷಣೆಯು ಪ್ರಧಾನವಾಗಿ ವಿದ್ಯುತ್ ಉತ್ಪಾದನೆ, ಉಕ್ಕು, ಮತ್ತು ದೂರಸಂಪರ್ಕದಂಥಾ ಮೂಲಸೌಕರ್ಯ ಕ್ಷೇತ್ರಗಳಲ್ಲಿ (ಇದರಲ್ಲಿ ಹೆದ್ದಾರಿ, ಬಂದರು ಮತ್ತು ನಾಗರಿಕ ವಿಮಾನ ಸೇವೆಗಳನ್ನು ಸೇರಿಸಿಕೊಳ್ಳಬೇಕು) ಲಕ್ಷಾಂತರ ಕೋಟಿ ರೂಪಾಯಿಗಳನ್ನು ಹೂಡಿರುವ ಕಂಪನಿಗಳ ಮೇಲೆ ಮಾತ್ರ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಇವುಗಳ ಬಡ್ಡಿ ವ್ಯಾಪ್ತಿ ಅನುಪಾತವು ಒಂದಕ್ಕಿಂತ ಕಡಿಮೆ! ಅಂದರೆ ಈ ಬೃಹತ್ ಕಂಪನಿಗಳು ಬ್ಯಾಂಕುಗಳಿಂದ ಮತ್ತು ವಿದೇಶಗಳಿಂದ ಪಡೆದುಕೊಂಡಿರುವ ವಾಣಿಜ್ಯ ಸಾಲಗ¼ ಕಂತುಗಳನ್ನಿರಲಿ ಅದರ ಮೇಲಿನ  ಬಡ್ಡಿಯನ್ನು ಮರುಪಾವತಿ ಮಾಡುವಷ್ಟು ವರಮಾನವನ್ನೂ ಕೂಡಾ ಸಂಪಾದಿಸುತ್ತಿಲ್ಲವೆಂದರ್ಥ. ವಿದೇಶಿ ವಾಣಿಜ್ಯ ಸಾಲದ ಬಾಬತ್ತಿನಲಂತೂ ರುಪಾಯಿ ವಿನಿಮಯ ದರ ಕುಸಿತದಿಂದಾಗಿ ಈ ಕಂಪನಿಗಳು ಅಪಾರವಾದ ಹೊಡೆತವನ್ನು ಅನುಭವಿಸಿವೆ. ಅವುಗಳ ರೂಪಾಯಿ ರೂಪದ ಆಸ್ತಿ ಅಡಮಾನÀ ಮತ್ತು ಬಡ್ಡಿ ದರಗಳಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿ ಬಿಟ್ಟಿದೆ. ಇದರ ಜೊತೆಗೆ ರಿಸರ್ವ್ ಬ್ಯಾಂಕು “ಹಣದುಬ್ಬರ ನಿಯಂತ್ರಣ”ವನ್ನು ಗಮನದಲ್ಲಿಟ್ಟುಕೊಂಡು ಅನುಸರಿಸುತ್ತಿರುವ ಹಣಕಾಸು ನೀತಿಯೂ ಸಹ ಅವುಗಳ ಒಟ್ಟಾರೆ ಬಡ್ಡಿ ಹೊರೆಯನ್ನು ಹೆಚ್ಚಿಸಿವೆ. 

ಹಾಗೆ ನೋಡಿದಲ್ಲಿ ರಿಸರ್ವ್ ಬ್ಯಾಂಕು,  ಸಾಲ ನೀಡಿದ ಬ್ಯಾಂಕುಗಳ ಹಿತಾಸಕ್ತಿಗಿಂತ ಹೆಚ್ಚಾಗಿ ಸಾಲ ಪಡೆದುಕೊಂಡ ದೊಡ್ಡ ಕಾಪೆರ್Çರೇಟ್ ಕಂಪನಿಗಳ ಆಸಕ್ತಿಯನ್ನೇ ಗಮನದಲ್ಲಿಟ್ಟುಕೊಂಡಿದೆ. ಮತ್ತು ಆ ನಿಟ್ಟಿನಲ್ಲಿ ಹಲವಾರು  ಬಗೆಯ “ಕಾಪೆರ್Çರೇಟ್ ಸಾಲ ಪುನರರಚನಾ ಯೋಜನೆಗಳನ್ನು”  ಜಾರಿಗೆ ತಂದಿದೆ. ಸಾಲ ಮರುಪಾವತಿಯ ಅವಧಿಯನ್ನು ಹಿಗ್ಗಿಸುವುದು, ಬಡ್ಡಿದರವನ್ನು ಕಡಿಮೆ ಮಾಡುವುದು, ಸಾಲಗಾರ ಕಂಪನಿಯ ಶೇರುಗಳನ್ನು ತಾನೇ ಖರೀದಿಸಿ ಬಂಡವಾಳದ ಒಂದಷ್ಟು ಸಾಲದ ಭಾಗವನ್ನು ಶೇರು ಬಂಡವಾಳವನ್ನಾಗಿ ಪರಿವರ್ತಿಸುವುದು ಹಾಗೂ ಇವುಗಳÀ ಜೊತೆಗೆ ಇನ್ನಷ್ಟು ಸಾಲವನ್ನು ಕೊಡªಂಥಾ ಹಲವಾರು ಯೋಜನೆಗಳನ್ನು ಒದಗಿಸಿದರೂ ಕೂಡಾ ಈ ಕಂಪನಿಗಳು ಚೇತರಿಸಿಕೊಳ್ಳುತ್ತಿಲ್ಲ. ಹೀಗಾಗಿ ಕಾಪೆರ್Çರೇಟ್ ಸಾಲಗಳನ್ನು ಪುನರ್‍ರಚನೆ ಮಾಡುವ ಉದ್ದೇಶವು ಈಡೇರುತ್ತಲೇ ಇಲ್ಲ. ಇಂಥಾ ಪ್ರಸಂಗಗಳಲ್ಲ್ಲಿ ನೈತಿಕ ಮಾನದಂಡಗಳಿಗಿಂತ ಆರ್ಥಿಕ ಆಸಕ್ತಿಗಳನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆಯೆಂದು ಹೇಳಲಾಗುತ್ತಿದ್ದರೂ, ಈ “ಪುನರ್‍ರಚನೆಗಳು” ಸಾರ್ವಜನಿಕ ಬ್ಯಾಂಕುಗಳಿಗೆ ನಷ್ಟವನ್ನುಂಟು ಮಾಡಿ ಖಾಸಗಿ ಹೂಡಿಕೆದಾರರನ್ನು ಬಚಾವು ಮಾಡಿರುವ ಹಲವಾರು ಉದಾಹರಣೆಗಳಿವೆ. 

ಹಾಗೆ ನೋಡಿದರೆ ಉದಾರೀಕರಣದ ಪ್ರಮುಖ ಕಾರ್ಯಸೂಚಿಯೇ  ಮೇಲೆ ಉಲ್ಲೇಖಿಸಲಾದ ಮೂಲಭೂತ ಸೌಕರ್ಯಗಳ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಖಾಸಗಿ ಬಂಡವಾಳ ಹೂಡಿಕೆಯನ್ನು ತರುವುದಾಗಿತ್ತು. ಆದರೆ ಯಾವಾಗ ಕಾಪೆರ್Çರೇಟ್ ಬಾಂಡ್ ಮಾರುಕಟ್ಟೆ (ಕಾಪೆರ್Çರೇಟ್ ಬಾಂಡ್ ಮಾರುಕಟ್ಟೆಯೆಂದರೆ ಕಾಪೆರ್Çರೇಟ್ ಕಂಪನಿಗಳು ತಮ್ಮ ಕಂಪನಿಯ ವಿಶ್ವಾಸಾರ್ಹತೆಯನ್ನು ಪಣವಾಗಿಟ್ಟು ಮಾರುಕಟ್ಟೆಯಲ್ಲಿ ಕ್ರೂಢೀಕರಿಸುವ ಸಾಲ. ಈ ಪ್ರಕ್ರಿಯೆಯಲ್ಲಿ ಕಂಪನಿಗಳು ನಿರ್ದಿಷ್ಟ ಮೊತ್ತದ ಬಾಂಡಗಳನ್ನು ಬಿಕರಿಗಿಡುತ್ತವೆ. ಅದನ್ನು ಕೊಳ್ಳುವವರಿಗೆ ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಖಾತರಿ ಪಡಿಸುತ್ತವೆ. ಬಾಂಡ್‍ಗಳ ವಿಶ್ವಾಸಾರ್ಹತೆಗಾಗಿ ಕಂಪನಿಗಳು ತಮ್ಮ ಆಸ್ತಿಪಾಸ್ತಿ ಹಾಗೂ ಇನ್ನಿತರ ಸಂಪತ್ತಿನ ಭರವಸೆಯನ್ನು ಬಾಂಡ್‍ಗಳ ಬೆನ್ನಿಗಿಡುತ್ತವೆ. ಅಂದರೆ ಒಟ್ಟಿನಲ್ಲಿ ತಮಗೆ ಬೇಕಾದ ಬಂಡವಾಳವನ್ನು ತಾವೇ ಕ್ರೂಢೀಕರಿಸಿಕೊಳ್ಳುತ್ತವೆ- ಅನುವಾದಕನ ಟಿಪ್ಪಣಿ) ಯಾಗಲೀ ಅಥವಾ ಕೊಟ್ಯಾಧಿಪತಿ ಹಣಹೂಡಿಕೆದಾರರಾಗಲೀ ಈ ಯೋಜನೆಗೆ ಬೇಕಾದ ತಮ್ಮ ಪಾಲಿನ ಹಣವನ್ನೂ ಹೂಡಲು ವಿಫಲರಾದರೋ ಆಗ ಸರ್ಕಾರವು ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‍ಶಿಪ್- PPP) ಯೋಜನೆಗಳನ್ನು ರೂಪಿಸಿತು.  ಮತ್ತು ಈ ಬೃಹತ್ ಯೋಜನೆಗಳಿಗೆ ಬೇಕಾದ ಬೃಹತ್ ಬಂಡವಾಳದ ಬಹುದೊಡ್ಡ ಪಾಲನ್ನು ಕಾಪೆರ್Çರೇಟ್ ಕಂಪನಿಗಳಿಗೆ ದೀರ್ಘಾವಧಿ ಸಾಲಗಳನ್ನಾಗಿ ನೀಡಲು ಸಾರ್ವಜನಿಕ ಬ್ಯಾಂಕುಗಳ ಮೇಲೆ ಒತ್ತಡ ಹೇರಿತು. ಈ ಬಗೆಯ ಸಾಲಗಳಿಗೆ ಸಾಕಷ್ಟು “ಮರುಪಾವತಿ ರಹಿತ” ಅವಧಿಯನ್ನೂ, ನಂತರದಲ್ಲಿ “ಸುದೀರ್ಘವಾದ ಮರುಪಾವತಿಯ ಅವಧಿ”ಯನ್ನೂ ಒದಗಿಸಲಾಯಿತು. ಆದರೆ ಖಾಸಗಿ ಬ್ಯಾಂಕುಗಳು ಮಾತ್ರ ಇಂಥಾ ಯೋಜನೆಗಳಿಗೆ ಹಣಕಾಸನ್ನು ಒದಗಿಸಲು ಯಾವುದೇ ಬಗೆಯ ಆಸಕ್ತಿಯನ್ನು ತೋರಲಿಲ್ಲ. 

ಹೀಗೆ ಹಿಂದಿನ ಹಲವಾರು ಕೇಂದ್ರ ಸರ್ಕಾರಗಳು ಈ ಜೋಡಿ ಬ್ಯಾಲೆನ್ಸ್ ಶೀಟ್ ಸಮಸ್ಯೆಯನ್ನು ಪೆÇೀಷಿಸಿಕೊಂಡು ಬಂದಿದ್ದು ಮಾತ್ರವಲ್ಲದೆ ಅದು “ಉಲ್ಬಣ”ಗೊಳ್ಳಲೂ ಅವಕಾಶ ನೀಡಿದ್ದರಿಂದ ಹಾಲಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಇದಕ್ಕೆ ಒಂದು ಪರಿಹಾರೋಪಾಯವನ್ನು ಕಂಡುಹಿಡಿಯಲೇಬೇಕಾಯಿತು. 

ಆದರೆ ಇದಕ್ಕೆ -ಪಬ್ಲಿಕ ಸೆಕ್ಟರ್ ಅಸೆಟ್ ರೆಹಾಬಿಲಿಟೇಷನ್ ಏಜೆನ್ಸಿ- Pಂಖಂ- ಪಾರಾ- ಒಂದು ಯೋಗ್ಯ ಪರಿಹಾರವೇ? ಮೂಲಭೂತವಾಗಿ ಈ  ಪಾರಾ ಮಾಡುವುದೇನು? ಅದು ಬ್ಯಾಂಕುಗಳಲ್ಲಿರುವ ದೊಡ್ಡ ಮೊತ್ತಗಳÀ “ಕೆಟ್ಟ ಸಾಲ”ವನ್ನು ಕೊಂಡುಕೊಂಡು ಶೇರು ಈಕ್ವಿಟಿಯಾಗಿ ಪರಿವರ್ತಿಸಿ ಮಾರುಕಟ್ಟೆಯಲ್ಲಿ ಹರಾಜು ಮಾಡುತ್ತದೆ ಅಥವಾ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತದೆ. ಈ ಎರಡೂ ಕ್ರಮಗಳು ಆಯಾ ಕಾಪೆರ್Çರೇಟ್ ಕಂಪನಿಗಳ ವಿತ್ತೀಯ ವಿಶ್ವಾಸಾರ್ಹತೆಯನ್ನು ಪುನರ್‍ಸ್ಥಾಪನೆ ಮಾಡುವ ಕ್ರಮಗಳೇ ಆಗಿವೆ. ಈ ಕ್ರಮದಿಂದಾಗಿ ಸಾರ್ವಜನಿಕ ಬ್ಯಾಂಕುಗಳ ಲೆಕ್ಕದ ಖಾತೆಯಿಂದ “ಕೆಟ್ಟ ಸಾಲ” ಗಳು ಇಲ್ಲವಾಗುವುದರಿಂದ ಸರ್ಕಾರ ಆ ಬ್ಯಾಂಕುಗಳಿಗೆ ಮತ್ತಷ್ಟು ಬಂಡವಾಳಪೂರಣ ಮಾಡಿ ಅವುಗಳ ಹಣಕಾಸು ಆರೋಗ್ಯವನ್ನು ಮರಳಿ ಹಾದಿಗೆ ತರುತ್ತದೆ. ಪಾರಾ ಗೆ ಬೇಕಿರುವ ನಿಧಿಯನ್ನು ಈ ಮೂರು ಮೂಲಗಳಿಂದ ಶೇಖರಿಸಲಾಗುತ್ತದೆ- ಸರ್ಕಾರಿ ಬಾಂಡ್‍ಗಳನ್ನು ವಿತರಿಸುವ ಮೂಲಕ, ಖಾಸಗಿ ಉದ್ಯಮಿಗಳು ಪಾರಾದ ಈಕ್ವಿಟಿ ಶೇರುಗಳನ್ನು ಕೊಂಡುಕೊಳಲು ಉತ್ತೇಜಿಸುವುದರ ಮೂಲಕ ಮತ್ತು ರಿಸರ್ವ್ ಬ್ಯಾಂಕಿನ ಮೂಲಕ. 

1990ರ ದಶಕದಲ್ಲಿ ಸಂಭವಿಸಿದ ಪೂರ್ವ ಏಷಿಯಾ ಹಣಕಾಸಿನ ಬಿಕ್ಕಟ್ಟಿನ ನಂತರದಲ್ಲಿನ ಅನುಭವಗಳನ್ನು ಆಧರಿಸಿ ಪಾರಾ ವನ್ನು“ಸಾರ್ವಜನಿಕ ಸಂಪತ್ತಿನ ಪುನಶ್ಚೇತನಾ” ವಾಹಕವೆಂದು ಬಿತ್ತರಿಸಲಾಗುತ್ತಿದೆ. ಅದರ ಒಳಹೊಕ್ಕು ನೋಡಿದರೆ ಪಾರಾ ದ ಕಾರ್ಯವಿಧಾನ ವಿಷ್ಟೇ- ಬಿಕ್ಕಟ್ಟಿನಲ್ಲಿರುವಾಗ ದಕ್ಕುವ ಅಗ್ಗದ ಬೆಲೆಯಲ್ಲಿ ಈ ಕೆಟ್ಟ ಸಂಪತ್ತನ್ನು ಕೊಂಡುಕೊಳ್ಳುವುದು, ಅವುಗಳ ಹಣಕಾಸು ಸ್ವರೂಪಗ¼ನ್ನು ಮರುರಚನೆ ಮಾಡುವುದು, ಮತ್ತು ನಂತರದಲ್ಲಿ ತನ್ನ ಹಿಡಿತದಲ್ಲಿರುವ ಪಾಲನ್ನು ಅತಿ ಹೆಚ್ಚು ಬೆಲೆ ಕೊಟ್ಟು ಕೊಡುಕೊಳ್ಳುವವರಿಗೆ ಮಾರುವುದು. ಆ ರೀತಿ “ಕೆಟ್ಟ ಸಾಲ”ವನ್ನು ಕೊಳ್ಳುವವರು ಯಾರು? ಅವುಗಳು ಹೆಚ್ಚಿನ ಪಾಲು ಖಾಸಗಿ ಈಕ್ವಿಟಿ ನಿಧಿ ಸಂಸ್ಥೆಗಳೇ ಆಗಿರುತ್ತವೆ. (“ಖಾಸಗಿ ಈಕ್ವಿಟಿ ನಿಧಿ” ಎಂದರೆ ಖಾಸಗಿ ಹೂಡಿಕೆದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರು ರಚಿಸಿಕೊಂಡಿರುವ ಒಟ್ಟು ಬಂಡವಾಳ ನಿಧಿ. ಅವನ್ನು ಆ ಸಂಸ್ಥೆಗಳು ಅತಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ತಮ್ಮದೇ ಆದ ವ್ಯವಹಾರ ತಂತ್ರಕ್ಕನುಸಾರವಾಗಿ ನಿರ್ದಿಷ್ಟ ಖಾಸಗಿ ಅಥವಾ ಸಾರ್ವಜನಿಕ ಕಂಪನಿಗಳಲ್ಲಿ ನೇರವಾಗಿ ಹೂಡುತ್ತಾರೆ- ಅನುವಾದಕನ ಟಿಪ್ಪಣಿ ). ಈ ಯೋಜನೆಗಳು ಸಾರ್ವಜನಿಕ ಮೂಲಭೂತ ಸೌಕರ್ಯ ಯೋಜನೆಗಳಾದ್ದರಿಂದ ಒಂದು ವೇಳೆ ತಾವೂ ವಿಫಲವಾದರೂ ತಮ್ಮನ್ನೂ ಪಾರು ಮಾಡಲಾಗುವುದೆಂದು ಅವರು ಸ್ಪಷ್ಟವಾಗಿ ಅರಿತಿರುತ್ತಾರೆ. ಆದ್ದರಿಂದಲೇ ಅವರು ಈ ಯೋಜನೆಯ ನಿಭಾವಣೆಯಲ್ಲಿ ಅತಿ ಕಡಿಮೆ ಜಾಗರೂಕತೆಯನ್ನು ತೋರಬಹುದು ಮತ್ತು ಅತ್ಯಂತ ಅಪಾಯಕಾರಿ ಕ್ರಮಗಳಿಗೆ ಕೈಹಾಕಬಹುದು. ಆ ಮೂಲಕ ಈಗಾಗಲೇ ಹಾನಿಗೊಳಗಾಗಿರುವ ಯೋಜನೆಗಳಿಗೆ ಮತ್ತಷ್ಟು ಹಾನಿಯನ್ನುಂಟುಮಾಡಿ ಅವುಗಳ ದುರಸ್ಥಿ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಬಹುದು. 

ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ಇಂಥಾ ಯೋಜನೆಗಳ ಮೂಲ ಪ್ರವರ್ತಕರ ಅಥವಾ ವಿಜೇತ ಬಿಡ್ಡುದಾರರ ಬಂಡವಾಳವು ಹಿಂದೆ  “ಹೂಡಿP”Éಯಾದದ್ದು ಅಥವಾ ಮುಂದೆ ಆಗುವುದು ಅವುಗಳ ಖಾಸಗಿ ಲಾಭಕ್ಕಾಗಿಯೇ ಹೊರತು ಬೇರೇನಕ್ಕೂ ಅಲ್ಲ. ಅಲ್ಲದೆ ಈಗಾಗಲೇ ಬ್ಯಾಂಕುಗಳು ಅಪಾರ ಪ್ರಮಾಣದ ವಿದೇಶಿ ವಿನಿಮಯವನ್ನು ಸಂಗ್ರಹಿಸಿವೆ. ಅದರಲ್ಲಿ ಒಂದು ಪಾಲನ್ನು ಮಾತ್ರ ರಿಸರ್ವ ಬ್ಯಾಂಕ್ ತನ್ನ ಸಂಗ್ರಹಕ್ಕೆ ಇಟ್ಟುಕೊಂಡಿರುವುದರಿಂದ ಬ್ಯಾಂಕುಗಳ ಬಳಿ ಅಪಾರ ಪ್ರಮಾಣದ ಚಾಲ್ತಿ ನಗದು ಸಂಪತ್ತಿದೆ. ಆದ್ದರಿಂದ ಹಣಕಾಸು ಸರಬರಾಜು ಸರಾಗವಾಗಿ ಆಗಲಿದೆ. ಇತ್ತೀಚೆಗಂತೂ ಹಲವಾರು ಹಣಕಾಸೇತರ ಕಾರ್ಪೋರೇಷನ್ಗಳು(ನಾನ್ ಫೈನಾನ್ಷಿಯಲ್ ಕಾರ್ಪೋರೇಷನ್-ಹಣಕಾಸೇತರ ಕಾರ್ಪೋರೇಷನ್ ಎಂದರೆ ಸರಕು ಮತ್ತು ಸೇವೆಗಳ ಉತ್ಪಾದನೆಗಳಲ್ಲಿ ಮಾತ್ರ ತೊಡಗಿರುವ ಮತ್ತು ಹಣಕಾಸು ವಹಿವಾಟುಗಳಲ್ಲಿ ತೊಡಗಿರದ ಸಂಸ್ಥೆಗಳು- ಅನುವಾದಕನ ಟಿಪ್ಪಣಿ) ತಮ್ಮ ಹೂಡಿಕೆಗೆ ಬೇಕಿರುವ ಬಂಡವಾಳವನ್ನು ತಮ್ಮ ಅಂತರಿಕ ನಿಧಿಗಳಿಂದಲೇ ರೂಢಿಸಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದರೂ ಸº ಹಣಕಾಸು ಲಾಭಗಳನ್ನು ಗಳಿಸಲು ವಿವಿಧ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡು ಹಣಕಾಸು ಸಂಸ್ಥೆಗಳಂತೆಯೇ ವರ್ತಿಸುತ್ತಿವೆ. ಅವುUಳ ಲಾಭಗಳಿಕೆಯ ತಂತ್ರಗಳಲ್ಲಿ ಹೆಚ್ಚೆಚ್ಚು  ಹಣಕಾಸು ಲಾಭವನ್ನು ತಂದುಕೊಡುವ ಅವಕಾಶಗಳನ್ನು ಅರಸುವುದೇ ಪ್ರಧಾನವಾಗುತ್ತಿದೆ ಮತ್ತು ಮೂಲಭೂತ ಸೌಕರ್ಯಗಳ ಸೃಷ್ಟಿಯಲ್ಲಿ ಹೂಡಿಕೆ ಮಾಡುವ ದೂರಗಾಮಿ ಆರ್ಥಿಕ ಉದ್ದೇಶಗಳು ಹಿನ್ನೆಲೆಗೆ ಸರಿಯುತ್ತಿದೆ.  ಆದ್ದರಿಂದಲೇ ಈ “ಜೋಡಿ ಬ್ಯಾಲೆನ್ಸ್‍ಶೀಟ್ ಸಮಸ್ಯೆ”ಯ ಬೇರುಗಳು ಬಂಡವಾಳಶಾಹಿ ಕ್ರೂಢೀಕರಣ (ಕ್ಯಾಪಿಟಲಿಸ್ಟ್ ಅಕ್ಯುಮುಲೇಷನ್- ಬಂಡವಾಳಶಾಹಿ ಕ್ರೂಢೀಕರಣ- ಎಂದರೆ ಬಂಡವಾಳಶಾಹಿಗಳು ತಮ್ಮ ಬಂಡವಾಳದ ಅಡಿಪಾಯವನ್ನು ವಿಸ್ತರಿಸಿಕೊಳ್ಳಲು, ಎಂದರೆ ಇನ್ನಷ್ಟು ಬಂಡವಾಳ ಸರಕುಗಳನ್ನು, ಆಸ್ತಿಗಳನ್ನು ಪಡೆದುಕೊಳ್ಳಲು ತಮ್ಮ ಲಾಭದ ಪಾಲೊಂದನ್ನು ಹೂಡಿಕೆ ಮಾಡುವುದು-ಅನುವಾದಕನ ಟಿಪ್ಪಣಿ)ದಲ್ಲಿ ಹಣಕಾಸು ವಹಿವಾಟಿನ ಮೂಲಕ ಪಡೆಯುವ ಲಾಭದ  ತೂಕ ಹೆಚ್ಚಾಗುತ್ತಿರುವುದರಲ್ಲಿದೆ ಎಂಬುದರಲ್ಲಿ ಸಂಶಯವಿಲ್ಲ. ಹೀಗಾಗಿ ಸಮಸ್ಯೆಗೆ  ಪಾರಾ (PARA ಯಾವುದೇ ದೂರಗಾಮಿ ಪರಿಹಾರವನ್ನು ನೀಡುವುದಿಲ್ಲ. ಬದಲಿಗೆ ಅದು ಹೆಚ್ಚೆಂದರೆ ಒಂದು ರೀತಿಯ ಬ್ಯಾಂಡೇಜನ್ನು ಒದಗಿಸಬಹುದಷ್ಟೆ. 

Economic and Political Weekly
February 25, 2017. Vol 52, No. 8

ಗಾಳಿಯಲ್ಲಿರುವ ವಿಷಗಳು

ಅನು: ಶಿವಸುಂದರ್

ಭಾರತದಲ್ಲಿ ವಾಯುಮಾಲಿನ್ಯವು ಲಕ್ಷಾಂತರ ಜನರನ್ನು ಅದರಲ್ಲೂ ಬಡಜನತೆಯನ್ನು ಕೊಲ್ಲುತ್ತಿದೆ ಎಂಬ ಸತ್ಯವನ್ನು ನಿರಾಕರಿಸುವುದೇಕೆ?
air pollution ಗೆ ಚಿತ್ರದ ಫಲಿತಾಂಶ

ಕೇಂದ್ರದ ಪರಿಸರ ಮಂತ್ರಿ ಅನಿಲ ಮಾಧವ್ ದವೆಯವರು ಎಲ್ಲವನ್ನೂ ನಿರಾಕರಿಸುವ ಉಮೇದಿನಲ್ಲಿದ್ದಾರೆ. ಭಾರತದಲ್ಲಿ ವಾಯು ಮಾಲಿನ್ಯವು ಬಹಳ ಗಂಭೀರವಾದ ಸಮಸ್ಯೆಯಾಗಿ ಪರಿಣಮಿಸುತ್ತಿದೆಯೆಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೂ ಆ  ಸತ್ಯವನ್ನು ಹೊರದೇಶವದರು ಹೇಳುವುದನ್ನು ಅವರು ಸಹಿಸುವುದುದಿಲ್ಲ. ಅಮೆರಿಕದ ಬೋಸ್ಟನ್ ನಲ್ಲಿರುವ ಹೆಲ್ತ್ ಎಫೆಕ್ಟ್ಸ್ ಇನ್ಸ್ಟಿಟ್ಯೂಟ್ ಮತ್ತು ಸಿಯಾಟಲ್‍ನಲ್ಲಿರುವ ಇನ್ಸ್ಟಿಟ್ಯೂಷನ್ ಫಾರ್ ಹೆಲ್ಟ್ ಮೆಟ್ರಿಕ್ಸ್ ಮತ್ತು ಎವಾಲ್ಯೂಏಷನ್ ಸಂಸ್ಥೆಗಳು ಜಂಟಿಯಾಗಿ “ಜಾಗತಿಕ ವಾಯು ಸ್ಥಿತಿ-2017” (ಸ್ಟೇಟ್ ಆಫ್ ಗ್ಲೋಬಲ್ ಏರ್-2017) ಎಂಬ ವರದಿಯನ್ನು ಬಿಡುಗಡೆ ಮಾಡಿವೆ. ಅದರ ಪ್ರಕಾರ ಭಾರತದಲ್ಲಿ ವಾಯು ಮಾಲಿನ್ಯದಿಂದ ಸಾಯುತ್ತಿರುವವರ ಸಂಖ್ಯೆ ಚೀನಾಗಿಂತ ತುಂಬಾ ಕಡಿಮೆಯೇನಲ್ಲ. ಈ ವರದಿಗೆ ಮಂತ್ರಿ ದವೆಯವರು ಪ್ರತಿಕ್ರಿಯಿಸುತ್ತಾ,  “ನಾವು ಭಾರತೀಯರು ಭಾರತದ ಹೊರಗಿನ ಸಂಗತಿಗಳಿಂದಲೇ ಹೆಚ್ಚು ಪ್ರಭಾವಕ್ಕೊಳಗಾಗುತ್ತೇವೆ” ಎಂದು ದೂರಿದ್ದಾರೆ. 

ಬದಲಿಗೆ ಇಂಥಾ ವಿಷಯಗಳಲ್ಲಿ ನಾವು ನಮ್ಮದೇ ದೇಶದ ಪರಿಣಿತರ ಮಾತುಗಳನ್ನು ನಂಬಬೇಕೆಂದು ಸಲಹೆ ಮಾಡಿದ್ದಾರೆ. ಅಲ್ಲದೆ ಸ್ವದೇಶಿ ಪರಿಣಿತರ ಮೇಲೆ ತನಗೆ “ಈ ದೇಶದ ಸೈನ್ಯದ ಮೇಲೆ ಇರುವಷ್ಟೇ ನಂಬಿಕೆ ಇದೆ”ಯೆಂದು ಹೇಳಿದ್ದಾರೆ. ಜಾಗತಿಕ ವಾಯುಸ್ಥಿತಿ ವರದಿಗೆ ಮಂತ್ರಿಗಳ ಈ ಅಚ್ಚರಿಗೊಳಿಸುವ ಸ್ವರಕ್ಷಣಾತ್ಮಕ ಪ್ರತಿಕ್ರಿಯೆಗಳನ್ನು ಪಕ್ಕಕ್ಕಿಟ್ಟರೂ ವಿಜ್ನಾನ ಪರಿಣಿತರನ್ನು ಸೈನ್ಯಕ್ಕೆ ಹೋಲಿಸುವ ಅವರ ವಿಚಿತ್ರ ಹೇಳಿಕೆಯಂತೂ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ವಾಯುಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳ ಲೆಕ್ಕಾಚಾರಕ್ಕೆ ಆ ವರದಿಯು ಅನುಸರಿಸಿರುವ ಕ್ರಮಗಳ ಬಗ್ಗೆ ಅಲ್ಪಸ್ವಲ್ಪ ತಕರಾರಿರಲು ಸಾಧ್ಯ. ಆದರೆ ಭಾರತದಲ್ಲಿ ವಾಯು ಮಾಲಿನ್ಯವು ಒಂದು ಗಂಭೀರ ಪರಿಸರ ಸಮಸ್ಯೆ ಎಂಬುದರ ಬಗ್ಗೆಯಾಗಲೀ, ಹೆಚ್ಚುತ್ತಿರುವ ಅನಾರೋಗ್ಯ ಮತ್ತು ಸಾವುಗಳಲ್ಲಿ ವಾಯುಮಾಲಿನ್ಯದ ದೊಡ್ಡ ಪಾಲಿದೆ ಎಂಬ ಸತ್ಯದ ಬಗ್ಗೆಯಾಗಲೇ ಯಾವುದೇ ತಕರಾರು ಯಾರಿಗೂ ಇರಲು ಸಾಧ್ಯವಿಲ್ಲ. 
air pollution ಗೆ ಚಿತ್ರದ ಫಲಿತಾಂಶ

ವಾಯು ಮಾಲಿನ್ಯದ ಬಗ್ಗೆ ಅಧಿಕೃತವಾದ ಅಂಕಿಅಂಶಗಳನ್ನು ಆಧರಿಸಿ ಮತ್ತು ಅತ್ಯಂತ ಸಮಗ್ರವಾದ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (ಗ್ಲೋಬಲ್ ಬರ್ಡನ್ ಆಫ್ ಡಿಸೀಸ್-ಜಿಬಿಡಿ- ಜಾಗತಿಕ ಖಾಯಿಲೆಗಳ ಹೊರೆ-ಎಂಬುದು ವಿಶ್ವ ಆರೋಗ್ಯ ಸಂಸ್ಥೆ ಸಿದ್ದಪಡಿಸಿರುವ ಆರೋಗ್ಯ ಮಾಪಕ. ಇದು ಅನಾರೋಗ್ಯದಿಂದ ಮತ್ತು ಅಕಾಲಿಕ ಸಾವುಗಳಿಂದ ಕಳೆದು ಹೋಗುವ ಆಯಸ್ಸಿನ ಪ್ರಮಾಣವನ್ನು ಅಂದಾಜು ಮಾಡುತ್ತದೆ- ಅನುವಾದಕನ ಟಿಪ್ಪಣಿ) ವರದಿಯನ್ನು ಆಧರಿಸಿರುವ ಈ ಜಾಗತಿಕ ವಾಯು ಸ್ಥಿತಿ ವರದಿಯು ವಾಯುಮಾಲಿನ್ಯದಿಂದಾಗಿ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಅಂದಾಜು ಮಾಡಿದೆ. ಇದು ಜಗತ್ತಿನ 195 ದೇಶಗಳ ಆರೋಗ್ಯ ಸಂಬಂಧೀ ದತ್ತಾಂಶಗಳನ್ನೂ ಮತ್ತು ವಿಶ್ಲೇಷಣೆಗಳನ್ನು ಆಧರಿಸಿರುವ ಪ್ರಭಾವಶಾಲೀ ವಾರ್ಷಿಕ ವರದಿಯಾಗಿದೆ. ಇದನ್ನು 1990ರಿಂದ ಪ್ರಾರಂಭಿಸಲಾಗಿದ್ದು ಕಳೆದ 25 ವರ್ಷಗಳಿಂದ ಸತತವಾಗಿ ಹೊರತರಲಾಗುತ್ತಿದೆ. 

ಇದರಿಂದಾಗಿ ನಿರ್ದಿಷ್ಟ ಕಾಲಾವಧಿಯಲ್ಲಿ ವಿವಿಧ ಜನವರ್ಗಗಳ, ವಯೋಮಾನದವರ, ಆರೋಗ್ಯ ಸಂಬಂಧೀ ದತ್ತಾಂಶಗಳನ್ನು ಹೋಲಿಕೆಯ ಅಧ್ಯಯನ ಮಾಡಬಹುದಾಗಿದೆ. ಈ ಬಗೆಯ ಮಾಹಿತಿಗಳು ಮತ್ತು ಅದರ ಜೊತೆಗೆ ದೊರೆಯುವ ವಾಯು ಮಾಲಿನ್ಯದ ಮಟ್ಟದ ಬಗೆಗಿನ ಮಾಹಿತಿಗಳು- ಅದರಲ್ಲೂ  PM2.5   ಎಂದು ಗುರುತಿಸಲಾಗುವ ಘನವಸ್ತು ತ್ಯಾಜ್ಯಕಣಗಳ ಮತ್ತು ಒಜೋನ್ ಗಳ ಕುರಿತು ದತ್ತಾಂಶಗಳು- ವಾಯುಮಾಲಿನ್ಯದ ಹೆಚ್ಚಳದಿಂದ ಸಂಭವಿಸುತ್ತಿರುವ ಸಾವುಗಳ ಲೆಕ್ಕಾಚಾರವನ್ನು ಮಾಡಲು ಮತ್ತು “ವೈಕಲ್ಯ ಪರಿಗಣಿತ ಆಯುಷ್ಯ”ದ (ಡಿಸ್‍ಎಬಿಲಿಟಿ ಅಜ್ದ್ಜೆಸ್ಟೆಡ್ ಲೈಫ್ ಇಯರ್ಸ್- ಡಿ.ಎ.ಎಲ್.ವೈ-“ವೈಕಲ್ಯ ಪರಿಗಣಿತ ಆಯುಷ್ಯ” ಎಂದರೆ ಅನಾರೋಗ್ಯ ಮತ್ತು ಅಕಾಲಿಕ ಸಾವುಗಳಿಂದ ಕಳೆದುಕೊಂಡ ವರ್ಷಗಳನ್ನು ಲೆಕ್ಕಮಾಡುವ ಮಾಪಕ- ಅನುವಾದಕನ ಟಿಪ್ಪಣಿ ) ಸಂಖ್ಯೆಯನ್ನು ಲೆಕ್ಕಾಹಾಕಲೂ ಸಹಕಾರಿಯಾಗಿದೆ. ಇಂಥಾ ಮಾಲಿನ್ಯಗಳಿಗೆ ಅದರಲ್ಲೂ ನಿರ್ದಿಷ್ಟವಾಗಿ PM2.5  ನಂಥಾ ಮಾಲಿನ್ಯಗಳಿಗೆ ಸುದೀರ್ಘಕಾಲ ತುತ್ತಾಗುವುದರಿಂದ ಹೃದಯ ಮತ್ತು ಉಸಿರಾಟ ಸಂಬಂಧೀ ಸಮಸ್ಯೆಗಳು ಉಲ್ಬಣಗೊಳ್ಳುತ್ತದಲ್ಲದೆ ಚಿಕ್ಕಮಕ್ಕಳ ಮತ್ತು ವಯಸ್ಸಾದವರ ಆಯಸ್ಸನ್ನು ಗಣನೀಯವಾಗಿ ಕಡಿತಗೊಳಿಸುತ್ತದೆ. ಒಜೋನ್ ಮಾಲಿನ್ಯಕ್ಕೆ ತುತ್ತಾಗುವುದರಿಂದ ದೀರ್ಘಕಾಲದ ಶ್ವಾಸ ನಿರೋಧೀ ಖಾಯಿಲೆಗಳು ಬರುತ್ತವೆಂಬುದು ಈಗಾಗಲೇ ಸಾಬೀತಾಗಿದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ 2015ರಲ್ಲಿ ವಾಯು ಮಾಲಿನ್ಯದಿಂದ ಸಂಭವಿಸಿದೆ ಎಂದು ಪರಿಭಾವಿಸಬಹುದಾದ ಒಟ್ಟಾರೆ 42 ಲಕ್ಷ ಸಾವುಗಳಲ್ಲಿ ಶೇ.52ರಷ್ಟು ಭಾರತ ಮತ್ತು ಚೀನಾಗಳಲ್ಲಿ ಸಂಭವಿಸಿದೆ ಎಂಬ ತೀರ್ಮಾನಕ್ಕೆ “ಜಾಗತಿಕ ವಾಯು ಸ್ಥಿತಿ ವರದಿ” ಯು ಬಂದಿದೆ. ಅದೇನೇ ಇದ್ದರೂ ಚೀನಾ ದೇಶವು ವಾಯು ಮಾಲಿನ್ಯದಿಂದ ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ಹೆಚ್ಚಾಗದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಭಾರತದಲ್ಲಿ ಮಾತ್ರ ಪ್ರತಿವರ್ಷ ಈ ಸಂಖ್ಯೆ ಏರುತ್ತಲೇ ಇದೆ.  

ಇದಕ್ಕೆ ಕಾರಣ ನಿಗೂಢವಾಗಿಯೇನೂ ಉಳಿದಿಲ್ಲ. ವಾಯುಮಂಡಲವನ್ನು ಕಲುಷಿತಗೊಳಿಸುತ್ತಿರುವ ಮಾಲಿನ್ಯಗಳನ್ನು ನಿಯಂತ್ರಿಸಲು ಬೇಕಾದ ಗಂಭೀರ ಕ್ರಮಗಳನ್ನು ಯಾವ ಸರ್ಕಾರಗಳು ಕೈಗೊಂಡಿಲ್ಲ. ಮೇಲಾಗಿ ನಮ್ಮೆಲ್ಲಾ ಗಮನವು ದೆಹಲಿಯ ಮೇಲೆ ಕೇಂದ್ರೀಕ್ರುತವಾಗಿದ್ದು ಸಣ್ಣಪುಟ್ಟ ನಗರ ಪಟ್ಟಣಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಕಡೆಗಣಿಸಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯು 2016ರಲ್ಲಿ ಜಗತ್ತಿನ 20 ಅತಿ ಹೆಚ್ಚು ಮಾಲಿನ್ಯಪೂರಿತ ನಗರಗಳನ್ನು ಪಟ್ಟಿಮಾಡಿತ್ತು. ಅದರಲ್ಲಿ 10 ನಗರಗಳು ಭಾರತದಲ್ಲಿತ್ತು. ಅವುಗಳಲ್ಲಿ ಅಲಹಾಬಾದ್, ಕಾನ್ಪುರ್, ಫಿರೋಜಾಬಾದ್ ಮತ್ತು ಲಕ್ನೌ ನ ಪರಿಸ್ಥಿತಿಗಳು ಎಲ್ಲಕ್ಕಿಂತ ಹೀನಾಯವಾಗಿತ್ತು. “ನಮ್ಮದೇ” ಆದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು 2015ರಲ್ಲಿ ನೀಡಿದ ವರದಿಯ ಪ್ರಕಾರ ವಾರಣಾಸಿಯು ಭಾರತದ ಮೂರು ಅತ್ಯಂತ ಮಾಲಿನ್ಯ ನಗರಿಗಳಲ್ಲಿ ಒಂದಾಗಿದೆ. ಈ ವರದಿಯನ್ನು “ನಮ್ಮ ವಿಜ್ನಾನಿಗಳೇ” ನೀಡಿರುವುದರಿಂದ ಮಂತ್ರಿ ದವೆ ಯವರು ಇದನ್ನು ತಿರಸ್ಕರಿಸಲಾಗುವುದಿಲ್ಲ. 

ದೆಹಲಿಯಂಥ ನಗರಗಳ ಮಾಲಿನ್ಯದ ಮಟ್ಟದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಏಕೆ ಲಭ್ಯವಾಗುತ್ತದೆಂದರೆ ಅದನ್ನು ಲೆಕ್ಕ ಹಾಕಲು ಬೇಕಾದ ಸೌಕರ್ಯಗಳು ಅಲ್ಲಿವೆ. ವಾರಣಾಸಿಯಲ್ಲಿ ಕೇವಲ ಮೂರು ಮಾಲಿನ್ಯ ಮಾಪಕಗಳಿದ್ದು ಅದರಲ್ಲಿ ಒಂದು ಮಾತ್ರ  PM2.5   ಮಾಲಿನ್ಯವನ್ನು ಲೆಕ್ಕಹಾಕುತ್ತದೆ ಹಾಗೂ ಅಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಏರ್ ಕ್ವಾಲಿಟಿ ಇಂಡೆಕ್ಸ್- ಎಕ್ಯೂಐ)ವನ್ನು ನೀಡಬಲ್ಲ ಒಂದೂ ಮಾಪಕಗಳಿಲ್ಲ. ಆದರೆ ದೆಹಲಿಯಲ್ಲಿ PM2.5   ಮತ್ತು    PM10    ಗಳೆರಡನ್ನೂ ಲೆಕ್ಕಹಾಕಬಲ್ಲ 13 ಮಾಪಕಗಳಿವೆ ಮತ್ತು ದೈನಂದಿನ ವಾಯು ಗುಣಮಟ್ಟ ಸೂಚ್ಯಂಕವೂ ಲಭ್ಯವಾಗುತ್ತದೆ. ನಮ್ಮ ನಗರ ಪಟ್ಟಣಗಳಲ್ಲಿನ ವಾಯುಮಾಲಿನ್ಯದ ಪ್ರಮಾಣವನ್ನು ಸಹ ಲೆಕ್ಕವಿಡಲೂ ನಮಗೆ ಸಾಧ್ಯವಿಲ್ಲದಿರುವಾಗ ಆಯಾ ನಗರವಾಸಿಗಳ ಆರೋಗ್ಯದ ಮೇಲೆ ವಾಯುಮಾಲಿನ್ಯದ ಪರಿಣಾಮವನ್ನು ಹೇಗೆತಾನೆ ಅಂದಾಜು ಮಾಡುತ್ತೇವೆ? ವಾಯುಮಾಲಿನ್ಯದ ಪ್ರಮಾಣವನ್ನು ಅಂದಾಜು ಮಾಡಲು ಬೇಕಾದ ಮೂಲಭೂತ ಸೌಕರ್ಯಗಳ ಕೊರತೆ ಕಣ್ಣಿಗೆ ರಾಚುತ್ತಿರುವಾಗ ಜಾಗತಿಕ ವಾಯುಸ್ಥಿತಿ ವರದಿಯಂಥ ಅಧ್ಯಯನಗಳನ್ನು ಆಧರಿಸದೇ ಬೇರೆ ಮಾರ್ಗವೇನಿದೆ? ಅಥವಾ, ಮಂತ್ರಿಗಳು ಹೇಳುವಂತೆ, ವಾಯುಮಾಲಿನ್ಯಕ್ಕೂ ಮತ್ತು ಜನತೆಯ ಅನಾರೋಗ್ಯ ಹಾಗೂ ಸಾವುಗಳ ಪ್ರಮಾಣಕ್ಕೂ ಇರುವ ಸಂಬಂಧಗಳನ್ನು ಭಾರತೀಯ ಪರಿಣಿತರು ತಮ್ಮದೇ ಅಧ್ಯಯನಗಳಿಂದ ಖುದ್ದು ಕಂಡುಹಿಡಿಯುವವರೆಗೂ ನಾವು ಕಾಯಬೇಕೆ? ಅದೇನೇ ಇರಲಿ ನಮ್ಮ ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ ವಿಶ್ವಾಸಾರ್ಹ ಮಾಹಿತಿಗಳನ್ನು ನಾವು ಪಡೆಯುವ ವೇಳೆಗೆ ವಾಸ್ತವ ಚಿತ್ರಣವು ಈ “ವಿದೇಶಿ” ವರದಿಯಲ್ಲಿ ಬಯಲಾಗಿರುವುದಕ್ಕಿಂತ ಭೀಕರವಾಗಿರುತ್ತದೆ. 

ನಾವು ಸುಲಭವಾಗಿ ಮರೆತುಬಿಡುವ ಮತ್ತೊಂದು ಸತ್ಯವೇನೆಂದರೆ ಗಾಳಿಯ ಗುಣಮಟ್ಟ ಹದಗೆಡುವುದರಿಂದ ಅತ್ಯಂತ ಹೆಚ್ಚು ಬಾಧೆಗೊಳಗಾಗುವವರು ಬಡಜನರು. ಶ್ರೀಮಂತರು ದುಬಾರಿ ಗಾಳಿ ಶುದ್ಧಿಕಾರಕಗಳನ್ನು ಕೊಂಡುಕೊಳ್ಳುವ ಮೂಲಕ ಮತ್ತು ಹವಾ ನಿಯಂತ್ರಿತ ಕಾರುಗಳಲ್ಲಿ ಓಡಾಡುವ ಮೂಲಕ ಮಾಲಿನ್ಯದಿಂದ ಬಚಾವಾಗುತ್ತಾರೆ. ಆದರೆ ಬಡಜನರು ನಡೆದಾಡುವಾಗ ಅಥವಾ ಸೈಕಲ್ ಮೇಲೆ ಪ್ರಯಾಣಿಸುವಾಗ ಅಥವಾ ಸಾರ್ವಜನಿಕ ಸಾರಿಗೆಗಳನ್ನು ಬಳಸುವಾಗ ಕೆಟ್ಟ ಗಾಳಿಯನ್ನು ಕುಡಿಯದೇ ವಿಧಿಯಿಲ್ಲ. ಈ ರೀತಿ ಪ್ರತಿನಿತ್ಯ ಅವರು ಸೇವಿಸುವ ದೈನಂದಿನ ವಿಷದ ಕೋಟಾದ ಜೊತೆಜೊತೆಗೆ ಸರಿಯಾದ ವಾತಾನುಕೂಲ ವ್ಯವಸ್ಥೆಯಿಲ್ಲದ ಅವರ ಮನೆಗಳಲ್ಲಿ ಉರುವಲಾಗಿ ಸೀಮೆಎಣ್ಣೆ ಮತ್ತು ಸಗಣಿಯ ಬೆರಣಿಗಳನ್ನು ಬಳಸುವುದರಿಂದ ಉಂಟಾಗುವ ಮಾಲಿನ್ಯಕ್ಕೂ ಗುರಿಯಾಗುತ್ತಾರೆ. ಮಾಹಿತಿಯ ಮೂಲ ಯಾವುದೇ ಆಗಿದ್ದರೂ, ಸಮಸ್ಯೆಯ ಗಂಭೀರತೆಯನ್ನು ಎದುರಿಸಲು ನಿರಾಕರಿಸುವ ಮೂಲಕ ಸರ್ಕಾರವು ಈಗಾಗಲೇ ಅನಾರೋಗ್ಯ ಮತ್ತು ಅಪೌಷ್ಟಿಕತೆಗಳಿಂದ ದುರ್ಬಲವಾಗಿರುವ ಬಡಜನತೆಯನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿದೆ. 

Economic and Political Weekly
February 25, 2017. Vol. 52, No. 8

ಯುದ್ಧಭೂಮಿಯಾಗಿರುವ ವಿಶ್ವವಿದ್ಯಾಲಯಗಳು


ಅನು: ಶಿವಸುಂದರ್

ಭಾರತೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವವೆಂದರೆ ಭಿನ್ನಮತವೆಂಬುದನ್ನು ನಮಗೆ ನೆನಪಿಸುತ್ತಿದ್ದಾರೆ.
jnu ಗೆ ಚಿತ್ರದ ಫಲಿತಾಂಶ

   ಪ್ರಜಾತಂತ್ರದ ಮುಂಚೂಣಿ ನಾಯಕರು ನಮ್ಮ ವಿಶ್ವವಿದ್ಯಾಲಯಗಳ ಯುದ್ಧಭೂಮಿಯಲ್ಲಿದ್ದಾರೆ. ವಿಶ್ವವಿದ್ಯಾಲಯಗಳೆಂದರೆ ಯುವ ಮತ್ತು ಕುತೂಹಲದಿಂದ ಕೂಡಿದ ಮನಸ್ಸುಗಳು ವಿವಿಧ ಮತ್ತು ವಿಭಿನ್ನ ವಿಷಯಗಳನ್ನು ಅನ್ವೇಷಿಸುವ, ಅಭಿವ್ಯಕ್ತಿಸುವ ಮತ್ತು ವಾಗ್ವಾದ ಮಾಡುವ ವೈಚಾರಿಕ ಸಂಘರ್ಷದ ತಾಣವೆಂದು ಪರಿಭಾವಿಸುವಂಥವರು, ಆಡಳಿತರೂಢರ ಅಧಿಕೃತ ಸಿದ್ಧಾಂತಗಳಿಗೆ ಪೂರಕವಾಗಿರದ ಎಲ್ಲಾ ಬಗೆಯ ಅಭಿವ್ಯಕಿಗಳನ್ನು “ದೇಶದ್ರೋಹ”ವೆಂದು ಪರಿಗಣಿಸಿ ಅದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಸೆಣೆಸಾಡುತ್ತಿದ್ದಾರೆ. ಅಂಥಾ ಒಂದು ಸಂಘರ್ಷ ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದ ರಾಮ್‍ಜಾಸ್ ಕಾಲೇಜಿನಲ್ಲಿ ನಡೆಯಿತು. ಅಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ದಿಂದ ಬೆಂಬಲಿತವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು “ಪ್ರತಿರೋಧದ ಸಂಸ್ಕೃತಿ” ಎಂಬ ವಿಷಯದ ಕುರಿತು ನಡೆಯಬೇಕಿದ್ದ ಒಂದು ವಿಚಾರ ಸಂಕಿರಣವನ್ನು ಬಹಿರಂಗವಾಗಿ ಬೆದರಿಕೆಯನ್ನು ಒಡ್ಡಿ ಮತ್ತು ಗಲಭೆ ಮಾಡಿ ತಡೆಗಟ್ಟಿದರು. ಈ ವಿಚಾರ ಸಂಕಿರಣದಲ್ಲಿ ಜೆಎನ್‍ಯು ವಿಶ್ವವಿದ್ಯಾಲಯದಲ್ಲಿ ಡಾಕ್ಟೋರಲ್ ವಿದ್ಯಾರ್ಥಿಯಾಗಿರುವ ಉಮರ್ ಖಲೀದ್ ಅವರನ್ನು ಭಾಷಣಕಾರರನ್ನಾಗಿ ಆಹ್ವಾನಿಸಲಾಗಿತ್ತು. ಮರುದಿನ ಎಬಿವಿಪಿ ಎಬ್ಬಿಸಿದ ಈ ಗಲಭೆಯ ವಿರುದ್ಧ ಪ್ರತಿಭಟನೆ ಮಾಡಲು ನೆರೆದಿದ್ದ ವಿದ್ಯಾರ್ಥಿ ಮತ್ತು ಅಧ್ಯಾಪಕರ ಮೇಲೆ ಎಬಿವಿಪಿ ಗೂಂಡಾಗಳು ಕಲ್ಲು ಮತ್ತು ಬಾಟಲ್‍ಗಳಿಂದ ಹಲ್ಲೆ ಮಾಡಿದರು. ಘಟನೆಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತರೂ ದಾಳಿಗೊಳಗಾದರು. ಆದರೆ ಭಾರಿ ಸಂಖ್ಯೆಯಲ್ಲಿ ಹಾಜರಿದ್ದ ದೆಹಲಿ ಲೀಸರು ಮಾತ್ರ ಇದನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳದೆ ಮೌನವಾಗಿ ನಿಂತಿದ್ದರು. ಅಷ್ಟು ಮಾತ್ರವಲ್ಲ, ಎಬಿವಿಪಿ ಸದಸ್ಯರ ಮೇಲೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಅಲ್ಲದೆ ದೂರು ದಾಖಲಿಸಿಕೊಳ್ಳಬೇಕೆಂದು  ಮಾರಿಸ್ ನಗರ್ ಪೋಲೀಸ್ ಠಾಣೆಯೆದುರು ಆಗ್ರಹಿಸುತ್ತಿದ್ದ ಗುಂಪಿನ ಮೇಲೆ ಲಾಠಿ ಚಾರ್ಜ್ ಕೂಡಾ ನಡೆಸಿದರು. 

ಈ ಘಟನೆಯು ಬಿಡಿಯಾಗಿ ನಡೆದದ್ದೇನಲ್ಲ. ಅದು ತನ್ನ ಸೈದ್ಧಾಂತಿಕ ಅಜೆಂಡಾಗಳನ್ನು ಒಪ್ಪಿಕೊಳ್ಳದ ಎಲ್ಲಾ ಧ್ವನಿಗಳನ್ನು ಸುಮ್ಮನಾಗಿಸಲು ಆಳುವ ಸರ್ಕಾರವು ಅನುಸರಿಸುತ್ತಿರುವ ಸ್ಪಷ್ಟ ಮಾದರಿಯ ಭಾಗವೇ ಆಗಿದೆ. ಅಲ್ಲದೆ, ವಾಗ್ವಾದ, ಚರ್ಚೆ ಅಥವಾ ತರ್ಕಗಳ ಬದಲಿಗೆ ಬೆದರಿಕೆ, ಕಿರುಕುಳ ಮತ್ತು ಹಿಂಸೆ ಹಾಗೂ ಪ್ರಭುತ್ವದ ಯಂತ್ರಾಂಗಗಳ ಸಹಕಾರದ ಮೂಲಕ ಉನ್ನತ ವಿದ್ಯಾ ಸಂಸ್ಥೆಗಳನ್ನು ವಶಕ್ಕೆ ಪಡೆಯುವ ಮತ್ತು ಬೌದ್ಧಿಕ ಸ್ಥಳಾವಕಾಶಗಳನ್ನು ಬುಡಮೇಲು ಮಾಡುವ ಸಂಘಪರಿವಾರದ ದೀರ್ಘಕಾಲೀನ ವ್ಯೂಹತಂತ್ರದ ಭಾಗವೂ ಆಗಿದೆ. ಈ ವರ್ಷದ ಮೊದಲಲ್ಲಿ ಜೆಎನ್‍ಯು ವಿಶ್ವವಿದ್ಯಾಲಯದ “ಕಾಂಪಾರೇಟೀವ್ ಗವರ್ನೆನ್ಸ್ ಮತ್ತು ಪೊಲಿಟಿಕಲ್ ಥಿಯರಿ” ವಿಭಾಗದ ಪ್ರೊಫೆಸರ್ ಆಗಿರುವ ನಿವೇದಿತಾ ಮೆನನ್ ಅವರು ಕ್ಯಾಂಪಸ್ಸಿನಲ್ಲಿ ಮಾಡಿದ ಭಾಷಣವೊಂದರಲ್ಲಿ ಕಾಶ್ಮೀರದ ಬಗ್ಗೆ ಮಾಡಲೆನ್ನಲಾದ ಟಿಪ್ಪಣಿಯ ವಿರುದ್ಧ ಜೋಧಪುರದ ಜೈ ನಾರಾಯಣ ವ್ಯಾಸ್ ವಿಶ್ವವಿದ್ಯಾಲಯ (ಜೆಎನ್‍ವಿಎಸ್)ದ ರಿಜಿಸ್ಟ್ರಾರ್ ಅವರು ಪೋಲೀಸ್ ದೂರೊಂದನ್ನು ದಾಖಲಿಸಿದಾಗಲೂ ಇದೇ ಬಗೆಯ ಪರಿಸ್ಥಿತಿ ಉದ್ಭವವಾಗಿತ್ತು. ಎಂದಿನಂತೆ ಮೆನನ್ ಅವರ ಭಾಷಣವು “ದೇಶದ್ರೋಹ”ವೆಂದು ಎಬಿವಿಪಿ ಸದಸ್ಯರು ಗಲಭೆ ಎಬ್ಬಿಸಿದರು. ಇದು ಅಂತಿಮವಾಗಿ ಆ ಕಾರ್ಯಕ್ರಮದ ಪ್ರಮುಖ ಸಂಘಟಕರಾಗಿದ್ದ ಜೆಎನ್‍ವಿಎಸ್ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆದ ರಾಜಶ್ರೀ ರನಾವತ್ ಅವರ ಅಮಾನತ್ತಿಗೂ ಕಾರಣವಾಯಿತು. 2016ರ ಸೆಪ್ಟೆಂಬರನಲ್ಲಿ ಮಹಾಶ್ವೇತಾ ದೇವಿಯವರ ದೋಪ್ದಿ ಕಥೆಯ ರಂಗ ರೂಪಾಂತರವನ್ನು ಪ್ರದರ್ಶಿಸಿದ್ದಕ್ಕಾಗಿ ಹರಿಯಾಣದ ಕೇಂದ್ರ ವಿಶ್ವವಿದ್ಯಾಲಯದ ಅಧ್ಯಾಪಕರಾದ ಸ್ನೇಹ್‍ಸತ ಮನಯ್ ಮತ್ತು ಮನೋಜ್ ಕುಮಾರ್ ಅವರನ್ನು ಅಮಾನತ್ತುಗೊಳಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬ ಹುಯಿಲನ್ನು ಎಬ್ಬಿಸಲಾಗಿತ್ತು. ಈ ಕೃತಿಯನ್ನು ಬರೆದ ಮಹಾಶ್ವೇತ ದೇವಿಯವರು ಇತ್ತೀಚಿಗೆ  ನಿಧನರಾದ ಬಳಿಕ ಅವರ ಜೀವಮಾನ ಸಾಧನೆಗೆ ದೇಶಾದ್ಯಂತ ಗೌರವ ಸಮರ್ಪಣೆಗಳು ನಡೆಯುತ್ತಿದೆ. ಆದರೆ ಎಬಿವಿಪಿಯು ಮಾತ್ರ ದೋಪ್ದಿಯು ಸೈನ್ಯವನ್ನು ಕೀಳಾಗಿ ತೋರಿಸುತ್ತದಾದ್ದರಿಂದ ಅದು “ದೇಶದ್ರೋಹೀ ನಾಟಕ”ವೆಂದು ಘೋಷಿಸಿದೆ. 
jnu ಗೆ ಚಿತ್ರದ ಫಲಿತಾಂಶ

ಕಳೆದೊಂದು ವರ್ಷದಿಂದ ರಣರಂಗವಾಗಿ ಪರಿವರ್ತನೆಗೊಂಡಿರುವ ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಜೆಎನ್‍ಯು ಗಳ ಸಾಲಿಗೆ ಈ ಎಲ್ಲಾ ವಿಶ್ವವಿದ್ಯಾಲಯಗಳು ಸೇರಿಕೊಂಡಿವೆ. ಜೆಎನ್‍ಯು ನಲ್ಲಿ 2016ರ ಫೆಬ್ರವರಿ 9ರಂದು ವಿದ್ಯಾರ್ಥಿಗಳ ತಂಡವೊಂದು ಅಫ್ಜಲ್‍ಗುರುವನ್ನು ನೇಣಿಗೇರಿಸಿದ ಸಂದರ್ಭದ ನೆನಪಿನಲ್ಲಿ ಆಚರಿಸಿದ ವಾರ್ಷಿಕ ಸ್ಮರಣಾಚರಣೆಯು ದೇಶಾದ್ಯಂತ  “ದೇಶಭಕ್ತ” ಮತ್ತು “ದೇಶದ್ರೋಹಿ” ಗಳೆಂಬ ಪರಸ್ಪರ ವಿರೋಧಿ ಗುಂಪುಗಳನ್ನು ಹುಟ್ಟುಹಾಕಿತು. ಆದರೆ ಅದಕ್ಕೆ ಮೊದಲೇ, 2015ರಲ್ಲಿ, ದೆಹಲಿ ವಿಶ್ವವಿದ್ಯಾಲಯದ ಕಿಶೋರಿ ಮಲ್ ಕಾಲೇಜಿನಲ್ಲಿ ಆಯೋಜಿಸಿದ್ದ “ಮುಜಫ್ಫರ್‍ನಗರ್ ಬಾಕಿ ಹೈ” ಎಂಬ ಚಿತ್ರ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಎಬಿವಿಪಿ ಗುಂಡಾಗಳು ಗಲಭೆ ಎಬ್ಬಿಸಿದ್ದಲ್ಲದೆ ಚಿತ್ರವು ಪ್ರದರ್ಶನವಾಗದಂತೆ ತಡೆದಿದ್ದರು. ಇಂದಿನಂತೆ ಆಗಲೂ ಸಹ ಅವರು ಚಿತ್ರವನ್ನು “ಧರ್ಮ ವಿರೋಧಿ” ಎಂದು ಕರೆದಿದ್ದಲ್ಲದೆ ಚಿತ್ರದ ಆಶಯಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದರು. 

ಈ ಎಲ್ಲಾ ಘಟನೆಗಳು ಬಿಡಿಬಿಡಿಯಾಗಿಯೂ ಮತ್ತು ಇಡಿಯಾಗಿಯೂ ಒಂದನ್ನಂತೂ ಹೇಳುತ್ತಿದೆ. ನರೇಂದ್ರ ಮೋದಿ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ಮರುಗಳಿಗೆಯಿಂದ ಉನ್ನತ ವಿದ್ಯಾ ಸಂಸ್ಥೆಗಳನ್ನು ಒಂದೇ ವಿಚಾರಧಾರೆಯ ಪ್ರಭಾವದಡಿಗೆ ತರಲು ಏನನ್ನು ಬೇಕಾದರೂ ಮಾಡುತ್ತಿದೆ. ಈ ಗುರಿಯನ್ನು ಸಾಧಿಸಲು ಭಿನ್ನ ಭಿನ್ನ ಮಾರ್ಗಗಳನ್ನು ಅನುಸರಿಸಲಾಗಿದೆ. ಅದು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ನವ ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಗಳಂಥ ಸಂಸ್ಥೆಗಳಿಗೆ ಆರೆಸ್ಸೆಸ್ ಗೆ ಆಪ್ತರಾಗಿರುವವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವುದಿರಬಹುದು. ಅಥವಾ ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಜೆಎನ್‍ಯು ವಿಶ್ವವಿದ್ಯಾಲಯಗಳಿಗೆ ಎಬಿವಿಪಿ ಮತ್ತು ಕೇಂದ್ರ ಸರ್ಕಾರಗಳ ಕಣ್ಸನ್ನೆಗೆ ತಕ್ಕಂತೆ ಕುಣಿಯುವ ಉಪಕುಲಪತಿಗಳನ್ನು ನೇಮಕ ಮಾಡುವುದಿರಬಹುದು. ಮಾರ್ಗವೇನೇ ಇದ್ದರೂ ಒಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಭಿನ್ನಮತ ಅಥವಾ ಪ್ರಶ್ನೆ ಮಾಡುವ ಧ್ವನಿಗಳಿಗೆ ವಿರುದ್ಧವಾಗಿರುವ ಪರಿಸರವನ್ನು ನಿರ್ಮಿಸಲೆಂದೇ ವಿಶ್ವವಿದ್ಯಾಲಯಗಳ ಮತ್ತು ಉನ್ನತ ವಿದ್ಯಾ ಸಂಸ್ಥೆಗಳ ಬೌದ್ಧಿಕ ಸ್ಥಾನಮಾನಗಳೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. 

ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಂದೋ ಅಧಿಕಾರಸ್ಥರೊಂದಿಗೆ  ಸಹಕರಿಸಬೇಕು  ಇಲ್ಲವೇ ಅಮಾನತ್ತನ್ನು ಎದುರಿಸಬೇಕು ಎಂಬಂಥ ವಾತಾರಣವನ್ನು ಅನುದಿನವೂ ಸೃಷ್ಟಿಸಲಾಗುತ್ತಿದೆ. ಸರ್ಕಾರ ಮತ್ತು ಅದರ ಮಂತ್ರಿಗಳು ನಿರಂತರವಾಗಿ “ದೇಶದ್ರೋಹ”ದ ಮಾತುಗಳನ್ನು ಪದೇಪದೇ ಹೇಳುವ ಮೂಲಕ ಅವರ ವಿದ್ಯಾರ್ಥಿ ಘಟಕವು ವಿಶ್ವವಿದ್ಯಾಲಯಗಳಲ್ಲಿ ಮಾಡುವ ರಂಪಾಟಕ್ಕೆ ಮತ್ತು ತೋಳುಬಲದ ಬಳಕೆಗೆ ಮಾನ್ಯತೆಯನ್ನು ಒದಗಿಸಿದೆ. ಅವರು ನೀಡುತ್ತಿರುವ ಸಂದೇಶ ಸ್ಪಷ್ಟವಾಗಿದೆ: ಆಳುವ ಸರ್ಕಾರಕ್ಕೆ ವಿರುದ್ಧವಾಗಿರುವುದು “ದೇಶಕ್ಕೆ” ವಿರುದ್ಧವಾಗಿರುವುದಕ್ಕೆ ಸಮ. ಈ ಹಿಂಸೆಯ ಮತ್ತು ಬೆದರಿಕೆಯ ಸಂಸ್ಕೃತಿಯು ಸ್ವತಂತ್ರ ಚಿಂತನೆಗೂ ಮತ್ತು ಆಳುವ ಸರ್ಕಾರದ ಬಹುಸಂಖ್ಯಾತಪರ ಸಿದ್ಧಾಂತಕ್ಕೆ ವಿರುದ್ಧವಿರುವರಲ್ಲೂ ಭೀತಿ ಹುಟ್ಟಿಸುತ್ತಿದೆ. 

ಈ ಬೆದರಿಕೆಯ ತಂತದಲ್ಲಿ  ಆರೆಸೆಸ್-ಬಿಜೆಪಿಗಳು ಪರಿಣಿತರೇ ಆಗಿದ್ದರೂ ಈ ತಂತ್ರ ಕೇವಲ ಅವರ ಸ್ವತ್ತಾಗಿಯೇನೂ ಉಳಿದಿಲ್ಲ. ಉದಾಹರಣೆಗೆ ಅವರ ವಿದ್ಯಾರ್ಥಿ ಘಟಕಗಳು ದೆಹಲಿ, ರಾಜಸ್ಥಾನ, ಹರ್ಯಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಕಿಡಿಗೇಡಿತನ ಮಾಡಿದರೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯು ಇತ್ತೀಚೆಗೆ ತನ್ನ ಕ್ಯಾಂಪಸ್ಸಿನಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿ ಕಾರ್ಯಕರ್ತರ ಸಭೆಯೊಂದನ್ನು ರದ್ದುಗೊಳಿಸಿದೆ. ಮಾತ್ರವಲ್ಲ ಫೇಸ್‍ಬುಕ್‍ನ ಪೋಸ್ಟ್ ಒಂದರಲ್ಲಿ ಜೆಎನ್‍ಯು ವಿನ ವಿದ್ಯಾರ್ಥಿನಿ ಕಾರ್ಯಕರ್ತೆಯಾದ ಶೈಲಾ ರಷೀದ್ ಅವರು ಪ್ರವಾದಿ ಮೊಹಮದರನ್ನು ಅವಹೇಳನೆ ಮಾಡಿದ್ದಾರೆಂದು ಪೋಲೀಸ್ ದೂರನ್ನು ಸಹ ನೀಡಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಹೆಚ್ಚುತ್ತಿರುವ ಈ ಬಗೆಯ ಘರ್ಷಣೆಗಳು ಮತ್ತು ಕುಗ್ಗುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯಗಳು ಯಾವ ಸಂಕುಚಿತ ಮನೋಧರ್ಮಕ್ಕೆ ವ್ಯತಿರಿಕ್ತವಾದ ಆಶಯಗಳನ್ನು ವಿಶ್ವವಿದ್ಯಾಲಯಗಳು ಪ್ರತಿನಿಧಿಸುತ್ತವೋ ಅಂಥಾ ಸಂಕುಚಿತ ಮನೋಧರ್ಮವೇ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಾಗುತ್ತಿರುವ ವಿಷಾದ ಗಾಥೆಯನ್ನು ಹೇಳುತ್ತಿವೆ. ವಿಶ್ವವಿದ್ಯಾಲಯಗಳು ವಿಭಿನ್ನ ಚಿಂತನಗೆಳನ್ನು ಚರ್ಚಿಸುವ, ಹೊಸ ಚಿಂತನೆಗಳನ್ನು ರೂಪಿಸಿಕೊಳ್ಳುವ ಮತ್ತು ಈಗಾಗಲೇ ಸಮ್ಮತವಾಗಲ್ಪಟ್ಟ ತಿಳವಳಿಕೆಗಳ ಕ್ಷಿತಿಜಗಳಿಗೆ ಸವಾಲೆಸೆಯುವ ತಾಣಗಳಾಗಿವೆ. ಪ್ರಭುತ್ವದ ಸಂಸ್ಥೆಗಳು ಅಥವಾ ಅವರ ಕೃಪಾಪೋಷಿತ ದೊಂಬಿ ಗುಂಪುಗಳು ಅಂಥಾ ತಾಣಗಳನ್ನು ಧ್ವಂಸಗೊಳಿಸಲು ಯತ್ನಿಸುತ್ತಿರುವಾಗ ನಮ್ಮ ಪ್ರಜಾಪ್ರಭುತ್ವದ ಮೂಲತತ್ವವಾದ ಪ್ರಜಾತಾಂತ್ರಿಕ ಭಿನ್ನಮತದ ಅಳಿವನ್ನು ತಡೆಗಟ್ಟಲು ಶ್ರಮಿಸುತ್ತಿರುವವರ ಜೊತೆಗೆ ನಾವು ನಿಲ್ಲಬೇಕಿದೆ. 

Economic and Political Weekly
February 25, 2017. Vol 52, No. 8

ಸೋಮವಾರ, ಫೆಬ್ರವರಿ 27, 2017

ನಮ್ಮ ರಾಷ್ಟ್ರೀಯತೆ ಭಾರತೀಯ ಅಥವಾ ಹಿಂದೂ?


-ರಾಮ್ ಪುನಿಯಾನಿ


ram puniyani anti hindu ಗೆ ಚಿತ್ರದ ಫಲಿತಾಂಶ



ಭಾರತವನ್ನು ಐತಿಹಾಸಿಕವಾಗಿ ಹಿಂದೂಸ್ಥಾನ ಎಂದು ಗುರುತಿಸಿರುವುದು ಒಂದು ಧರ್ಮದ ಸುತ್ತ ಅಲ್ಲ; ಬದಲಾಗಿ ಹಿಂದ್- ಹಿಂದೂ ಎಂಬ ಒಂದು ಭೌಗೋಳಿಕ ಪ್ರದೇಶದ ಸುತ್ತ. ಇಲ್ಲಿ ಗೊಂದಲಕ್ಕೆ ಮುಖ್ಯ ಕಾರಣವೆಂದರೆ, ಈ ಪದವನ್ನು ಮೊದಲು ಒಂದು ಪ್ರದೇಶಕ್ಕೆ ಸೀಮಿತವಾಗಿ ಬಳಸಿದರೆ, ಕಾಲಕ್ರಮದಲ್ಲಿ ಇದನ್ನು ಧಾರ್ಮಿಕ ಸಂಪ್ರದಾಯವಾಗಿ ಗುರುತಿಸಲಾಯಿತು. ಟಭಾರತದ ಸಂವಿಧಾನದಂತೆ ಅಥವಾ ಜಾಗತಿಕ ಮನ್ನಣೆಯಂತೆ ಇಂದು ಭಾರತ ಹಿಂದೂಸ್ಥಾನವಾಗಿ ಉಳಿದಿಲ್ಲ. ನಿಖರವಾಗಿ ಹೇಳಬೇಕೆಂದರೆ ಇಂಡಿಯಾ ಎಂದರೆ ಭಾರತ!

ಹಿಂದೂ, ಹಿಂದೂ ಸಿದ್ಧಾಂತ ಹಾಗೂ ಹಿಂದುತ್ವ ಸುತ್ತಲಿನ ಚರ್ಚೆ ಹೊಸದಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಇತ್ತೀಚೆಗೆ, ಭಾರತದಲ್ಲಿ ನೆಲೆಸಿರುವ ಎಲ್ಲರೂ ಹಿಂದೂಗಳು ಎಂದು ವಿಶ್ಲೇಷಿಸಿದ್ದಾರೆ. ಮುಸ್ಲಿಮರು ಧರ್ಮದಿಂದ ಮುಸಲ್ಮಾನರಾಗಿರಬಹುದು. ಆದರೆ ರಾಷ್ಟ್ರೀಯತೆಯಿಂದ ಹಿಂದೂಗಳು ಎಂದು ಬಣ್ಣಿಸಿದ್ದಾರೆ. ಇದು ಹಿಂದೂ ಶಬ್ದದ ಬಗೆಗಿನ ಹೊಸ ವಿಶ್ಲೇಷಣೆ. ಇದು ಹಿಂದೂಸ್ಥಾನ. ಇಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು ಎನ್ನುವುದು ಅವರ ಅಭಿಪ್ರಾಯ. ಹಿಂದೂ ಪದವನ್ನು ರಾಷ್ಟ್ರೀಯತೆಯ ಅರ್ಥದಲ್ಲಿ ಬಳಸುವುದು ಹಾಗೂ ಹಿಂದೂಸ್ಥಾನ ಎನ್ನುವ ಎರಡೂ ಪದಗಳನ್ನು ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಸಂವಿಧಾನದ ದೃಷ್ಟಿಕೋನದಿಂದ ಪರಿಶೀಲಿಸಬೇಕಾಗುತ್ತದೆ.

ಭಾಗವತ್ ಅಭಿಪ್ರಾಯದಂತೆ ಮುಸಲ್ಮಾನರ ಆರಾಧನಾ ವಿಧಾನ ಹಾಗೂ ನಂಬಿಕೆ ಬದಲಾಗಿರಬಹುದು. ಆದರೆ ಅವರ ರಾಷ್ಟ್ರೀಯತೆ ಹಿಂದೂ! ಸುಮಾರು ಎರಡು ದಶಕದಷ್ಟು ಹಿಂದೆ ಮುರಳಿ ಮನೋಹರ ಜೋಶಿ ಬಿಜೆಪಿ ಅಧ್ಯಕ್ಷರಾಗಿದ್ದಾಗ, ನಾವೆಲ್ಲರೂ ಹಿಂದೂಗಳು. ಮುಸ್ಲಿಮರು ಮುಹಮ್ಮದೀಯ ಹಿಂದೂಗಳು ಹಾಗೂ ಕ್ರಿಶ್ಚಿಯನ್ನರು ಕ್ರಿಸ್ಟಿ ಹಿಂದೂಗಳು ಎಂಬ ವ್ಯಾಖ್ಯಾನ ನೀಡಿದ್ದರು. ಈ ಹೇಳಿಕೆಗಳು ಇದೀಗ ಹೊಸ ಸ್ವರೂಪ ಪಡೆದಿದ್ದು, ಭಾರತವನ್ನು ಹಿಂದೂ ದೇಶ ಎಂದು ಪರಿಗಣಿಸುವ ಆರೆಸ್ಸೆಸ್ ಸಿದ್ಧಾಂತಕ್ಕೆ ಅನುಗುಣವಾಗಿದೆ. ಅವರ ಹಿಂದಿನ ಸಿದ್ಧಾಂತಗಳು ಈ ವಿಷಯದ ಬಗ್ಗೆ ಭಿನ್ನ ನಿಲುವು ಹೊಂದಿದ್ದವು.

ಅವರ ಹೊಸ ವರ್ಣನೆ ಹಿಂದೂಸ್ಥಾನ ಎಂಬ ಶಬ್ದದ ಬಗೆಗಿನ ಗೊಂದಲವನ್ನು ಆಧರಿಸಿದೆ. ಸರಳವಾಗಿ ಹೇಳಬೇಕೆಂದರೆ ಆರೆಸ್ಸೆಸ್ ಸಿದ್ಧಾಂತಿಗಳು ಭಾರತವನ್ನು ಹಿಂದೂಸ್ಥಾನ ಎಂದೂ, ಇಲ್ಲಿ ವಾಸಿಸುವ ಎಲ್ಲರನ್ನೂ ಹಿಂದೂಗಳು ಎಂದೂ ಪರಿಗಣಿಸುತ್ತಾರೆ. ಇದು ಸುತ್ತುಬಳಸುವ ವಾದ. ಹಲವು ಶಬ್ದಗಳ ಬಳಕೆ ಐತಿಹಾಸಿಕವಾಗಿ ಬದಲಾಗುತ್ತಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಹಿಂದೂಸ್ಥಾನ ಎಂಬ ಪದವನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ. ಹಿಂದೂ ಎಂಬ ಪದ ಯಾವುದೇ ಪವಿತ್ರ ಹಿಂದೂ ಪುರಾಣಗಳಲ್ಲಿಲ್ಲ ಎನ್ನುವುದು ಸುಸ್ಪಷ್ಟ. ಪಶ್ಚಿಮ ಏಷ್ಯಾದಿಂದ ಬಂದವರು ರೂಪಿಸಿದ ಪದವೂ ಇದಲ್ಲ. ಈ ಭೂಭಾಗವನ್ನು ಅವರು ಸಿಂಧೂ ನದಿಯ ಹೆಸರಿನಲ್ಲಿ ಗುರುತಿಸಿದ್ದರು. ಅವರು ಸಾಮಾನ್ಯವಾಗಿ ಎಸ್ ಅಕ್ಷರದ ಬದಲು ಎಚ್ ಅಕ್ಷರವನ್ನು ಹೆಚ್ಚಾಗಿ ಬಳಸುತ್ತಾರೆ. ಆದ್ದರಿಂದ ಸಿಂಧೂ ಎನ್ನುವುದು ಹಿಂದೂ ಎಂದಾಗಿದೆ. ಆದ್ದರಿಂದ ಹಿಂದೂ ಎಂಬ ಪದ ಭೌಗೋಳಿಕ ವರ್ಗದಲ್ಲಿ ಬಳಕೆಯಾಗಿದೆ. ಇದರ ಸುತ್ತವೇ ನಿರ್ಮಿಸಲಾಗಿದೆ. ಹಿಂದೂಸ್ಥಾನ ಎಂಬ ಶಬ್ದ ಬಳಕೆಗೆ ಬಂದದ್ದು, ಸಿಂಧೂ ನದಿಯ ಪೂರ್ವದ ಭಾಗ ಎಂಬ ಅರ್ಥದಲ್ಲಿ.

ಈ ಭೂಭಾಗದಲ್ಲಿ ಹಲವು ಹಾಗೂ ವೈವಿಧ್ಯಮಯ ಧಾರ್ಮಿಕ ಆಚರಣೆಗಳು ರೂಢಿಯಲ್ಲಿದ್ದವು. ಇಸ್ಲಾಂ ಅಥವಾ ಕ್ರೈಸ್ತ ಧರ್ಮದಂತೆ ಹಿಂದೂಗಳಲ್ಲಿ ಪ್ರವಾದಿಗಳಿಲ್ಲ. ವಿಭಿನ್ನ ಸಂಪ್ರದಾಯಗಳು ಸ್ಥಳೀಯವಾಗಿಯೇ ಹುಟ್ಟಿಕೊಂಡಿವೆ. ಕಾಲಾಂತರದಲ್ಲಿ ಹಿಂದೂ ಎಂಬ ಪದವನ್ನು ಇಲ್ಲಿ ಬಳಕೆಯಲ್ಲಿದ್ದ ವೈವಿಧ್ಯಮಯ ಧಾರ್ಮಿಕ ಆಚರಣೆಗೆ ತದ್ರೂಪವಾಗಿ ಬಳಸಲು ಆರಂಭಿಸಲಾಯಿತು. ಈ ಸಂಪ್ರದಾಯಗಳನ್ನು ಒಟ್ಟಾಗಿ ಹಿಂದೂ ಸಿದ್ಧಾಂತ ಎಂದು ಪರಿಗಣಿಸಲಾಯಿತು. ಹಿಂದೂಸ್ಥಾನದ ಒಳಗೆಯೇ ಎರಡು ಪ್ರಮುಖ ಸಂಪ್ರದಾಯಗಳು ರೂಢಿಯಲ್ಲಿದ್ದವು. ಒಂದು ಪ್ರಬಲವಾದ ಬ್ರಾಹ್ಮಣ್ಯ ಸಂಪ್ರದಾಯ ಹಾಗೂ ಇನ್ನೊಂದು ನಾಥ, ತಂತ್ರ, ಭಕ್ತಿ, ಶೈವ ಹಾಗೂ ಸಿದ್ಧಾಂತ ಎಂಬ ವರ್ಗ. ಸಾಮ್ರಾಜ್ಯಶಾಹಿ ಆಡಳಿತದ ವೇಳೆ ಹಿಂದೂ ಸಿದ್ದಾಂತವನ್ನು ಬ್ರಾಹ್ಮಣ್ಯದ ಸಂಪ್ರದಾಯದ ಆಧಾರದಲ್ಲಿ ಗುರುತಿಸಲಾಯಿತು.

ಈ ಪ್ರದೇಶವನ್ನು ಐತಿಹಾಸಿಕವಾಗಿ ಹಿಂದೂಸ್ಥಾನ ಎಂದು ಗುರುತಿಸಿರುವುದು ಒಂದು ಧರ್ಮದ ಸುತ್ತ ಅಲ್ಲ; ಬದಲಾಗಿ ಹಿಂದ್- ಹಿಂದೂ ಎಂಬ ಒಂದು ಭೌಗೋಳಿಕ ಪ್ರದೇಶದ ಸುತ್ತ. ಇಲ್ಲಿ ಗೊಂದಲಕ್ಕೆ ಮುಖ್ಯ ಕಾರಣವೆಂದರೆ, ಈ ಪದವನ್ನು ಮೊದಲು ಒಂದು ಪ್ರದೇಶಕ್ಕೆ ಸೀಮಿತವಾಗಿ ಬಳಸಿದರೆ, ಕಾಲಕ್ರಮದಲ್ಲಿ ಇದನ್ನು ಧಾರ್ಮಿಕ ಸಂಪ್ರದಾಯವಾಗಿ ಗುರುತಿಸಲಾಯಿತು. ಆದರೆ ಇಂದು ಹಿಂದೂಸ್ಥಾನ ಎನ್ನುವುದು ಸಮರ್ಪಕವಾದ ಪದವಲ್ಲ. ಭಾರತದ ಸಂವಿಧಾನದಂತೆ ಅಥವಾ ಜಾಗತಿಕ ಮನ್ನಣೆಯಂತೆ ಇಂದು ಭಾರತ ಹಿಂದೂಸ್ಥಾನವಾಗಿ ಉಳಿದಿಲ್ಲ. ನಿಖರವಾಗಿ ಹೇಳಬೇಕೆಂದರೆ ಇಂಡಿಯಾ ಎಂದರೆ ಭಾರತ! ಇದನ್ನು ನಮ್ಮ ಸಂವಿಧಾನ ಕೂಡಾ ಸ್ಪಷ್ಟಪಡಿಸುತ್ತದೆ. ಆದ್ದರಿಂದ ನಮ್ಮ ರಾಷ್ಟ್ರೀಯತೆ ಭಾರತೀಯ ಎಂದಾಗುತ್ತದೆಯೇ ಅಥವಾ ಹಿಂದೂ ಎಂದಾಗುತ್ತದೆಯೇ? ಭಾರತವನ್ನು ರೂಪುಗೊಳಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆರೆಸ್ಸೆಸ್ ನಿರಾಕರಿಸಿತ್ತು. ಅದು ಸ್ವಾತಂತ್ರ್ಯ ಚಳವಳಿಯಲ್ಲೂ ಪಾಲ್ಗೊಳ್ಳಲಿಲ್ಲ. ಆರೆಸ್ಸೆಸ್ ರಾಜಕೀಯ ಪ್ರವರ್ಧಮಾನಕ್ಕೆ ಬಂದದ್ದೇ ಭಾರತ ಎಂಬ ಪರಿಕಲ್ಪನೆಗೆ ವಿರುದ್ಧವಾಗಿ. ಭಾರತ ಎಂಬ ಪರಿಕಲ್ಪನೆಯನ್ನು ಪ್ರಚುರಪಡಿಸಿದವರು ಆಧುನಿಕ ಸಮಾಜದ ಮುಂಚೂಣಿಯಲ್ಲಿದ್ದವರು ಕೈಗಾರಿಕೋದ್ಯಮಿಗಳು, ಕಾರ್ಮಿಕರು ಹಾಗೂ ಆಧುನಿಕ ಭಾರತದ ಸುಶಿಕ್ಷಿತ ವರ್ಗದವರು. ಈ ಪರಿಕಲ್ಪನೆಯು ಮಹಿಳೆಯರು ಹಾಗೂ ದಲಿತರ ಆಶೋತ್ತರಗಳಿಗೆ ಪರ್ಯಾಯವಾಗಿತ್ತು ಹಾಗೂ ಅವುಗಳನ್ನು ಒಳಗೊಂಡಿತ್ತು. ಇಲ್ಲಿ ಮಹತ್ವದ ಅಂಶವೆಂದರೆ ಭಾರತ ಎಂದರೆ ವಿಮೋಚನೆ, ಸಮಾನತೆ ಹಾಗೂ ಭ್ರಾತೃತ್ವದ ಸಂಕೇತ. ಹಿಂದೂ ದೇಶ ಎನ್ನುವುದು ಆಧುನಿಕಪೂರ್ವ ಮೌಲ್ಯಗಳ ಸಂಕೇತ. ಭಾರತಕ್ಕೆ ತನ್ನದೇ ಆದ ಸಂವಿಧಾನವಿದ್ದು, ಅದು ಬಹುತ್ವ ಹಾಗೂ ವೈವಿಧ್ಯತೆಯನ್ನು ಗೌರವಿಸುತ್ತದೆ. ಆದರೆ ಹಿಂದೂ ದೇಶದ ಪರಿಕಲ್ಪನೆಯು ಕಾಲ್ಪನಿಕ ಗತವೈಭವದ ಸಂಕೇತವಾಗಿದ್ದು, ಪೂರ್ವಜನ್ಮದ ಕರ್ಮದ ಫಲವಾಗಿ ಜಾತಿ ಹಾಗೂ ಲಿಂಗದ ಶ್ರೇಣಿ ನಿರ್ಧಾರವಾಗುತ್ತದೆ ಎಂಬ ತತ್ವದ ಬಗ್ಗೆ ನಂಬಿಕೆ ಇಟ್ಟುಕೊಂಡಿದೆ. ಇಲ್ಲಿನ ಸಾಮಾಜಿಕ ಕಾನೂನುಗಳ ತಿರುಳು ಇಂಥ ಜಾತಿ ಹಾಗೂ ಲಿಂಗ ಭೇದ. ಈ ಕಾರಣಕ್ಕಾಗಿಯೇ ಆರೆಸ್ಸೆಸ್ ಸಿದ್ಧಾಂತಿಗಳಿಗೆ ಭಾರತದ ಸಂವಿಧಾನದ ಬಗ್ಗೆ ಅಸಮಾಧಾನ. ಆದ್ದರಿಂದಲೇ ಇಂದಿನ ಆಧುನಿಕ ಯುಗದಲ್ಲೂ ಮನುಸ್ಮತಿಯಂಥ ಪವಿತ್ರ ಗ್ರಂಥಗಳೇ ಮಾದರಿ ಸಂಹಿತೆ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಕಥೆ ಏನು? ಹಿಂದುತ್ವ ಸಿದ್ದಾಂತ ಹುಟ್ಟುಹಾಕಿದ ವಿನಾಯಕ ದಾಮೋದರ ಸಾವರ್ಕರ್ ಅವರ ಪ್ರಕಾರ, ಸಿಂಧೂ ನದಿಯಿಂದ ಸಮುದ್ರದವರೆಗಿನ ಭೂಭಾಗದಲ್ಲಿ ವಾಸವಿರುವ ಈ ಭಾಗವನ್ನು ಪವಿತ್ರ ಭೂಮಿ ಎಂದು ನಂಬುವ ಜನಾಂಗ. ಹಿಂದೂ ಎಂಬ ಪದದ ಬಗೆಗಿನ ವ್ಯಾಖ್ಯೆಯಲ್ಲಿ, ಮುಸ್ಲಿಮರು ಹಾಗೂ ಕ್ರೈಸ್ತರನ್ನು ಹಿಂದೂಗಳೆಂದು ಕರೆದಿಲ್ಲ. ಅವರ ಪ್ರಕಾರ ಈ ಎರಡು ಜನಾಂಗ ವಿಭಿನ್ನ ರಾಷ್ಟ್ರೀಯತೆಯನ್ನು ಹೊಂದಿದೆ. ಎರಡನೆ ಪ್ರಮುಖ ಹಿಂದುತ್ವ ಪ್ರತಿಪಾದಕ ಗೋಳ್ವಾಲ್ಕರ್ ಕೂಡಾ ಇದನ್ನೇ ಪ್ರತಿಪಾದಿಸಿದ್ದಾರೆ. ತಮ್ಮ ಬಂಚ್ ಆಫ್ ಥಾಟ್ಸ್ ಎಂಬ ಕೃತಿಯಲ್ಲಿ ಅವರು, ಮುಸ್ಲಿಂ ಹಾಗೂ ಕ್ರೈಸ್ತರನ್ನು ಹಿಂದೂ ದೇಶಕ್ಕೆ ಅಪಾಯ ಎಂದು ಬಣ್ಣಿಸಿದ್ದಾರೆ. ಆ ಬಳಿಕ ಆರೆಸ್ಸೆಸ್ ರಾಜಕೀಯ ಬಲ ಪಡೆದುಕೊಂಡು, ಧಾರ್ಮಿಕ ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಹಾಗೂ ಹಿಂದೂ ಸಂಪ್ರದಾಯಗಳನ್ನು ಅಲ್ಪಸಂಖ್ಯಾತ ಸಮುದಾಯದ ಮೇಲೆ ಹೇರಲು ಯತ್ನಿಸುತ್ತಿದೆ. ಈ ಕಾರಣದಿಂದ ಅವರ ರಾಷ್ಟ್ರೀಯತೆ ಹಿಂದೂ ಎಂದು ಸಾಬೀತುಪಡಿಸಲು ಹೊರಟಿದೆ. ಭಾರತದ ಸಂವಿಧಾನದ ಪ್ರಕಾರ ನಮ್ಮ ರಾಷ್ಟ್ರೀಯತೆ ಭಾರತೀಯ ಎನ್ನುವುದು. ಆದ್ದರಿಂದ ಆರೆಸ್ಸೆಸ್ ಸಿದ್ಧಾಂತ ಹಾಗೂ ಗಾಂಧಿ, ನೆಹರೂ, ಅಂಬೇಡ್ಕರ್ ಅವರ ಸಿದ್ಧಾಂತ ಭಿನ್ನ. ಇವರೆಲ್ಲರೂ ಭಾರತೀಯ ಎಂಬ ರಾಷ್ಟ್ರೀಯತೆಯ ಪರವಾಗಿ ನಿಂತವರು. ಭಾರತೀಯ ಸಂವಿಧಾನವು ವಿಮೋಚನೆಯ ಸಂಕೇತವಾದ ನ್ಯಾಯ ಹಾಗೂ ಸಮಾನತೆಯನ್ನು ಹೊಂದಿದ್ದು, ಇದು ಹಿಂದೂಗಳ ಪವಿತ್ರ ಗ್ರಂಥ ಎನಿಸಿಕೊಂಡಿರುವ ಮನುಸ್ಮತಿಯಲ್ಲಿ ಅಂತರ್ಗತವಾಗಿರುವ ಅಸಮಾನತೆಯ ತತ್ವಕ್ಕೆ ವಿರುದ್ಧವಾದದ್ದು.

ಆದ್ದರಿಂದ ಮುಸ್ಲಿಮರು ಕೇವಲ ತಮ್ಮ ಆರಾಧನಾ ವಿಧಾನವನ್ನಷ್ಟೇ ಬದಲಿಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ, ಅವರನ್ನು ಹಿಂದುತ್ವದ ತೆಕ್ಕೆಗೆ ಸೇರಿಸಿಕೊಳ್ಳುವ ಉದ್ದೇಶಪೂರ್ವಕ ಹುನ್ನಾರ ಇದಾಗಿದೆ. ಇಸ್ಲಾಂ ಧರ್ಮವನ್ನು ಸ್ವೀಕರಿಸುವುದು ಎಂದರೆ ಕೇವಲ ಪೂಜಾ ವಿಧಾನದ ಬದಲಾವಣೆಯಷ್ಟೇ ಅಲ್ಲ; ಇದು ವಿಭಿನ್ನ ಧರ್ಮದಲ್ಲಿ ಇರಿಸುವ ನಂಬಿಕೆ. ಇದು ಕ್ರೈಸ್ತಧರ್ಮಕ್ಕೂ ಅನ್ವಯವಾಗುತ್ತದೆ. ಆದ್ದರಿಂದ ಮುಸ್ಲಿಮರಿಗೆ ಇಸ್ಲಾಂ ಇದೆ; ಕ್ರಿಶ್ಚಿಯನ್ನರಿಗೆ ಕ್ರೈಸ್ತಧರ್ಮವಿದೆ. ಹಿಂದೂಗಳಿಗೆ ಹಿಂದೂ ಧರ್ಮ ಇದೆ. ಇವರೆಲ್ಲರ ರಾಷ್ಟ್ರೀಯತೆ ಭಾರತೀಯ ಎಂದಾಗುತ್ತದೆಯೇ ವಿನಃ ಹಿಂದೂ ಎಂದಲ್ಲ. ಮುಸ್ಲಿಮರು ಕೂಡಾ ಮಂತ್ರ ಹೇಳುತ್ತಾ ಭಾರತ ಮಾತಾ ಕೀ ಜೈ ಎಂದು ಘೋಷಿಸಬೇಕು ಎಂದು ನಿರೀಕ್ಷಿಸುವುದು ಸಂವಿಧಾನ ಬದ್ಧ ಕ್ರಮವಲ್ಲ. ಆರತಿ ಮಾಡುವುದು ಹಿಂದೂ ಸಂಪ್ರದಾಯ. ಇತರ ಧರ್ಮದವರು ಮತ್ತೊಂದು ಧರ್ಮದ ಪವಿತ್ರ ಆಚರಣೆಯನ್ನು ಅಳವಡಿಸಿಕೊಳ್ಳುವುದು ಅವರ ಆಯ್ಕೆಯ ವಿಚಾರ. ಅದು ಆರತಿ ಬೆಳಗುವುದು ಇರಬಹುದು; ಮಸೀದಿಯಲ್ಲಿ ನಮಾಝ್ ಮಾಡುವುದು ಇಲ್ಲವೇ ಚರ್ಚ್ನಲ್ಲಿ ಪ್ರಾರ್ಥನೆ ಮಾಡುವುದು ಇರಬಹುದು. ಆದರೆ ಅದನ್ನು ಇತರರು ಮಾಡಲೇಬೇಕು ಎಂದು ನಿರೀಕ್ಷಿಸುವುದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಭಾರತೀಯ ಸಂವಿಧಾನದ ರೂಢಿಗಳಿಗೆ ವಿರುದ್ಧವಾದದ್ದು. ಬಹಳಷ್ಟು ಮಂದಿ ಮುಸ್ಲಿಮರು ಅಲ್ಲಾಹನಿಗಲ್ಲದೇ ಯಾರಿಗೂ ತಲೆಬಾಗುವುದಿಲ್ಲ ಎಂಬ ನಂಬಿಕೆ ಹೊಂದಿದ್ದಾರೆ. ಆದ್ದರಿಂದ ಬಹಳಷ್ಟು ಮಂದಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗೆ ವಿರೋಧಿಸಬಹುದು. ಅವರು ಹಾಗೇ ಇರಲಿ. ಅದು ಭಾರತೀಯ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿಯೇ ಇದೆ.

ಸೌಜನ್ಯ : ವಾಭಾ ೨೭.೨.೨೦೧೭


ಕರಾವಳಿ ಸೌಹಾರ್ದ ರ‌್ಯಾಲಿ: ಪಿಣರಾಯಿ ವಿಜಯನ್ ಭಾಷಣದ ಕನ್ನಡಾನುವಾದ



ಅನುವಾದ: ಮುನೀರ್ ಕಾಟಿಪಳ್ಳ
Image may contain: 1 person, smiling, glasses, close-up and outdoor

ದೇಶದುದ್ದಗಲ ಮತ ಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಸೌಹಾರ್ದ ರ‌್ಯಾಲಿಯಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತಸ ತಂದಿದೆ.

ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಜನರ ಐಕ್ಯವನ್ನು ನಾಶ ಮಾಡುವ ಪ್ರಕರಣಗಳು ನಡೆಯುತ್ತಿವೆ. ಐಕ್ಯವನ್ನು ಒಡೆಯುವ ಶಕ್ತಿಗಳೇ ಇಂದು ಕೇಂದ್ರದಲ್ಲಿ ಅಧಿಕಾರ ಚಲಾಯಿಸಲು ನಿರ್ದೇಶನ ನೀಡುತ್ತಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಯಾವತ್ತೂ ಸಮಾಜದಲ್ಲಿ ಸಾಮರಸ್ಯವನ್ನು ಬಯಸುವವರಲ್ಲ. ಬದಲಾಗಿ ಜನಗಳ ಮಧ್ಯೆ ಬಿರುಕು ಸೃಷ್ಟಿಸಿ ಸಮಾಜವನ್ನು ಒಡೆದು ತಮ್ಮ ವರ್ಗೀಯ ದ್ವೇಷವನ್ನು ಸಾಧಿಸಲು ಇರುವ ಸಂಘಟನೆಯಿದು. ಈ ಆರೆಸ್ಸೆಸ್ ಸಂಘಟನೆಯ ಆದೇಶವನ್ನು ಕೇಂದ್ರ ಸರಕಾರ ಚಾಚೂ ತಪ್ಪದೆ ಪಾಲಿಪಾಲಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

೧೯೨೫ರಲ್ಲಿ ಆರೆಸ್ಸೆಸ್ ಹುಟ್ಟಿಕೊಂಡಿತು. ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಆರೆಸ್ಸೆಸ್ ಕೆಲಸ ಮಾಡುತ್ತಿತ್ತು. ಅಂದಿನಿಂದ ಮುಂದೆ ೨೨ ವರ್ಷಗಳ ಕಾಲ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡ ಕಾಲದಲ್ಲಿ ಕೂಡ ಆರೆಸ್ಸೆಸ್ ಅದರಲ್ಲಿ ಯಾವುದೇ ಪಾತ್ರ ವಹಿಸಲಿಲ್ಲ. ೧೯೫೨ರಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಕೂಗು ಎದ್ದಾಗಲೂ ಆರೆಸ್ಸೆಸ್ ಅದಕ್ಕೆ ದನಿಗೂಡಿಸಲಿಲ್ಲ. ಈ ಚಳವಳಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಎಲ್ಲ ಸಂಘಟನೆಗಳೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಾಲ್ಗೊಂಡಿದ್ದವು.

ಆದರೆ, ಆರೆಸ್ಸೆಸ್ ವಿರೋಧಕ್ಕೆ ಬದಲಾಗಿ ಬ್ರಿಟಿಷರೊಡನೆ ಹೊಂದಾಣಿಕೆಯ ಮಾತುಗಳನ್ನಾಡಿತು. ಆರೆಸ್ಸೆಸ್ ಮುಖಂಡರಲ್ಲೊಬ್ಬರಾದ ಸಾವರ್ಕರ್ ಬ್ರಿಟಿಷ್ ವೈಸರಾಯ್ ಅವರನ್ನು ಭೇಟಿ ಮಾಡಿ ನಮ್ಮ ನಿಮ್ಮ ಚಿಂತನೆಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಬ್ರಿಟಿಷರ ಆಳ್ವಿಕೆಗೆ ನಮ್ಮ ವಿರೋಧವಿಲ್ಲ ಎಂದು ಆರೆಸ್ಸೆಸ್ ನಿಲುವನ್ನು ಪ್ರಕಟಿಸಿದ್ದರು. ಈ ಮೂಲಕ ದೇಶಕ್ಕೆ ಮೋಸ ಮಾಡಿದ ಸಂಘಟನೆ ಆರೆಸ್ಸೆಸ್.

ದೇಶದ ಜನರೆಲ್ಲರನ್ನೂ ಒಂದೇ ಎಂದು ನೋಡಲು ಆರೆಸ್ಸೆಸ್ ತಯಾರಿರಲಿಲ್ಲ. ದೇಶವಾಸಿಗಳನ್ನು ಜಾತಿ ಧರ್ಮಗಳ ಹೆಸರಲ್ಲಿ ವಿಭಜಿಸುವುದು ಅದರ ಕಾರ್ಯತಂತ್ರವಾಗಿತ್ತು. ಅದರ ಭಾಗವಾಗಿ ದೇಶದ ವಿವಿಧೆಡೆ ಜರುಗಿದ ಎಲ್ಲ ಜಾತೀಯ ಗಲಭೆಗಳ ನೇತೃತ್ವವನ್ನು ಆರೆಸ್ಸೆಸ್ ವಹಿಸಿತು. ಆರೆಸ್ಸೆಸ್ ಜನರ ಏಕತೆಯನ್ನು ಯಾವತ್ತೂ ಬಯಸಿದ್ದಿಲ್ಲ.

ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಏಕೆ ಕೊಂದರು ಅನ್ನುವ ಪ್ರಶ್ನೆ ನಮ್ಮ ಮುಂದಿದೆ. ಗಾಂಧೀಜಿ ಯಾರಿಗೂ ಅನ್ಯಾಯ ಮಾಡಿದವರಲ್ಲ. ಅವರನ್ನು ಕೊಲ್ಲಲು ಆರೆಸ್ಸೆಸ್ ಬಹಳ ಕಾಲ ತಯಾರಿ ನಡೆಸಿದ್ದರು. ಗೋಡ್ಸೆ ಗಾಂಧೀಜಿಯನ್ನು ಕೊಲ್ಲಲು ಪಿಸ್ತೂಲನ್ನು ಆಯುಧವನ್ನಾಗಿ ಬಳಸಿದರೆ, ಆರೆಸ್ಸೆಸ್ ಗೋಡ್ಸೆಯನ್ನು ಗಾಂಧೀಜಿಯವರ ಕೊಲೆಗೆ ಆಯುಧವಾಗಿ ಬಳಸಿದ್ದರು.

ಗಾಂಧೀಜಿ ಹತ್ಯೆಯ ಸುದ್ದಿ ಹರಡುತ್ತಿದ್ದಂತೆಯೇ ಆರೆಸ್ಸೆಸ್ ಘಟಕಗಳಲ್ಲಿ ಸಿಹಿ ಹಂಚಲಾಗಿತ್ತು. ಗಾಂಧೀಜಿ ಕೊಲೆಯಿಂದಾಗಿ ಜನರಲ್ಲಿ ರೋಷ ಕೆರಳಿತು. ಆರೆಸ್ಸೆಸ್ ಅನ್ನು ನಿಷೇಧಿಸಬೇಕೆಂಬ ಕೂಗು ಹೊರಟಿತು. ಜನರ ಆಕ್ರೋಶಕ್ಕೆ ಮಣಿದು ಆರೆಸ್ಸೆಸ್ ಅನ್ನು ನಿಷೇಧಿಸಲಾಯಿತಾದರೂ ಕೆಲವೇ ಸಮಯದ ಅನಂತರ ಅದನ್ನು ತೆರವುಗೊಳಿಸಲಾಯ್ತು. ಅಂದಿನ ಸರಕಾರ ತನ್ನ ಮೇಲೆ ಉಂಟಾದ ಒತ್ತಡ ಹಾಗೂ ಬೆದರಿಕೆಗಳಿಗೆ ಅಧೀನವಾಗಿ ನಿಷೇಧ ರದ್ದುಗೊಳಿಸಿತು. ಅನಂತರದಲ್ಲಿಯೂ ಆರೆಸ್ಸೆಸಿನ ಬಣ್ಣ ಬದಲಾಗಲಿಲ್ಲ. ಅದರ ತಂತ್ರಗಾರಿಕೆ ಬದಲಾಗಲಿಲ್ಲ.

ಆರೆಸ್ಸೆಸಿನ ರಾಜಕೀಯ ತತ್ತ್ವಶಾಸ್ತ್ರವೇನು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಈ ಸಂಘಟನೆ ಹುಟ್ಟಿದ ೫ ವರ್ಷಗಳ ಅನಂತರ ಅದರ ಮುಖಂಡರಲ್ಲೊಬ್ಬರಾದ ಮೂಂಜಿಯವರು ವಿಶ್ವದ ಹಲವು ಭಾಗಗಳಿಗೆ ಭೇಟಿಕೊಟ್ಟರು. ಅದರಲ್ಲಿ ಅವರು ಮುಖ್ಯವಾಗಿ ಭೇಟಿ ಮಾಡಿದ್ದು ಇಟಲಿಯ ಮುಸ್ಸೋಲಿನಿಯನ್ನು. ಅಲ್ಲಿಯ ಫ್ಯಾಸಿಸ್ಟ್ ಸಂಘಟನೆಯ ಪರಿಶೀಲನಾ ಕೇಂದ್ರಗಳನ್ನು ಸಂದರ್ಶಿಸಿದರು. ಮುಸ್ಸೋಲಿನಿಯ ಜೊತೆ ಆ ರೀತಿಯ ಪರಿಶೀಲನಾ ತಂತ್ರಗಳನ್ನು ಭಾರತದಲ್ಲಿ ಅಳವಡಿಸುವ ಬಗ್ಗೆ ಚರ್ಚೆ ನಡೆಸಿದರು. ಹಿಂದಿರುಗಿದ ಅನಂತರ ಫ್ಯಾಸಿಸ್ಟ್ ಚಿಂತನೆಗಳನ್ನು ಪ್ರಯೋಗಿಸಲು ಶುರು ಮಾಡಿದರು.

ಆರೆಸ್ಸೆಸಿಙನ ರಾಜಕೀಯ ತತ್ತ್ವಗಳಿಗೆ ಜರ್ಮನಿಯ ಹಿಟ್ಲರನ ‘ನಾಜಿಸಂ’ ಪ್ರೇರಣೆಯಾಗಿದೆ. ಹಿಟ್ಲರ್ ಜರ್ಮನಿಯಲ್ಲಿ ಯಹೂದ್ಯರ ಸರ್ವನಾಶಕ್ಕೆ ಪಣತೊಟ್ಟು ಅದಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಿಕೊಂಡಿದ್ದ. ಇದನ್ನು ಜಗತ್ತಿನ ಎಲ್ಲ ಸಂಘಟನೆಗಳೂ ವಿರೋಧಿಸಿದ್ದವು. ಈ ಸಂದರ್ಭದಲ್ಲಿ ಹಿಟ್ಲರನಿಗೆ ಬೆಂಬಲ ಸೂಚಿಸಿದ್ದು ಆರೆಸ್ಸೆಸ್ ಮಾತ್ರ.

ಅಷ್ಟೇ ಅಲ್ಲ, ರಾಷ್ಟ್ರನಿರ್ಮಾಣಕ್ಕೆ ಹಿಟ್ಲರನ ತತ್ವಗಳು ಮಾದರಿ ಎಂದು ಕೊಂಡಾಡಿತು. ಜರ್ಮನಿಯಲ್ಲಿ ಯಹೂದಿಗಳು ಅಲ್ಪಸಂಖ್ಯಾತರಾಗಿದ್ದರು. ಅವರನ್ನು ನಿರ್ನಾಮಗೊಳಿಸುವುದು ಹಿಟ್ಲರನ ಗುರಿಯಾಗಿತ್ತು. ಆರೆಸ್ಸೆಸ್ ಭಾರತದಲ್ಲಿಯೂ ಅದೇ ತತ್ವವನ್ನು ಪ್ರಯೋಗಿಸಿ ಇಲ್ಲಿರುವ ಅಲ್ಪಸಂಖ್ಯಾತರ ನಾಶವನ್ನು ಗುರಿಯಾಗಿಸಿಕೊಂಡಿತು. ಈ ದಿನದವರೆಗೂ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಯ ಹಿನ್ನೆಲೆ ಇದೇ ಆಗಿದೆ.

ಜರ್ಮನಿಯಲ್ಲಿ ಅಲ್ಪಸಂಖ್ಯಾತ ಯಹೂದ್ಯರು ಹಾಗೂ ಪ್ರಜ್ಞಾವಂತ ಕಮ್ಯುನಿಸ್ಟರನ್ನು ಹಿಟ್ಲರ್ ಗುರಿಯಾಗಿಸಿಕೊಂಡಿದ್ದ. ಅವರನ್ನು ದೇಶದ ಶತ್ರುಗಳೆಂದು ಕರೆದ. ಅದನ್ನು ಅನುಸರಿಸಿ ಭಾರತದಲ್ಲಿ ಆರೆಸ್ಸೆಸಿನ ಗೋಳವಲ್ಕರ್ ಇಲ್ಲಿಯ ಅಲ್ಪಸಂಖ್ಯಾತರಾದ ಮುಸ್ಲಿಮ್, ಕ್ರಿಶ್ಚಿಯನ್ ಹಾಗೂ ಕಮ್ಯುನಿಸ್ಟರನ್ನು ದೇಶದ (ಹಿಂದೂಗಳ) ಶತ್ರುಗಳೆಂದು ಕರೆದು ಅವರ ಮೇಲೆ ದಾಳಿ ನಡೆಸುವುದನ್ನು ಪ್ರಚೋದಿಸಿದರು. ಇದು ಇಂದಿಗೂ ಮುಂದುವರೆದಿದೆ.

ತನ್ನ ಮೂಲಭೂತ ಧ್ಯೇಯೋದ್ದೇಶ ಸಾಧನೆಗಾಗಿ ಆರೆಸ್ಸೆಸ್ ದೇಶದ ವಿವಿಧ ಭಾಗಗಳಲ್ಲಿ ಯುವಕರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ. ಘರ್ಷಣೆ ನಡೆಸಲು ಪೂರಕವಾಗಿ ಯುವಜನರ ಮನಸ್ಸಿನಲ್ಲಿ ದ್ವೇಷವನ್ನು ಬಿತ್ತುತ್ತಾ ಸಂಘರ್ಷಗಳನ್ನು ಹುಟ್ಟುಹಾಕುತ್ತಿದೆ. ಘರ್ಷಣೆಗಳಿಗೆ ಬಣ್ಣ ಕಟ್ಟಿ ಅಲ್ಪಸಂಖ್ಯಾತರ ಹಾಗೂ ಕಮ್ಯುನಿಸ್ಟರ ವಿರುದ್ಧ ಅಪಪ್ರಚಾರ ಮಾಡುವ ಬಗೆಯನ್ನೂ ಅದು ಕಲಿಸಿಕೊಡುತ್ತದೆ. ಆದ್ದರಿಂದಲೇ ದೇಶದ ಯಾವುದೇ ಭಾಗದಲ್ಲಿ ನಡೆಯುವ ಕೋಮುಗಲಭೆಯ ಹಿಂದೆ ಆರೆಸ್ಸೆಸ್ ಕಾಣಸಿಗುತ್ತದೆ.

೧೯೪೭ರ ಜುಲೈ ೧೭ರಂದು ಆರೆಸ್ಸೆಸ್ ಮುಖವಾಣಿಯಾದ Organiser ಪತ್ರಿಕೆಯಲ್ಲಿ ದೇಶದ ಹೆಸರು ‘India’ ಎಂದಿರುವುದಕ್ಕೂ ಆರೆಸ್ಸೆಸ್ ವಿರೋಧ ವ್ಯಕ್ತಪಡಿಸಿ ದೇಶದ ಹೆಸರನ್ನು ‘ಹಿಂದೂಸ್ತಾನ್’ ಎಂದು ಬದಲಾಯಿಸಲು ಪ್ರಯತ್ನಿಸಿತು.

ಇದೀಗ ಅಧಿಕಾರದಲ್ಲಿರುವ ಆರೆಸ್ಸೆಸ್ ನಿಯಂತ್ರಣದ ಕೇಂದ್ರ ಸರಕಾರ ಸಂವಿಧಾನದಲ್ಲಿ secularism ಎಂಬ ಪದ ಇರುವುದೇ ಒಂದು ದೊಡ್ಡ ಸವಾಲಾಗಿದೆ ಎಂದು ಹೇಳಿದೆ. ಅಂದರೆ, ಜಾತ್ಯತೀತ ರಾಷ್ಟ್ರ ಆಗಿರುವುದು ಆರೆಸ್ಸೆಸ್ನವರಿಗೆ ಬೇಕಾಗಿಲ್ಲ. ಅದರ ಅಸಹಿಷ್ಣುತೆ ಬಗ್ಗೆ ಮಾತಾಡಲು ಹಲವು ಗಂಟೆಗಳೇ ಬೇಕಾಗಬಹುದು.

ಕರ್ನಾಟಕದ ಎಂ.ಎಂ.ಕಲಬುರ್ಗಿಯವರ ಕೊಲೆ ಇರಬಹುದು, ಮಹಾರಾಷ್ಟ್ರದ ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್ ಕೊಲೆಗಳಿರಬಹುದು ಇವೆಲ್ಲವೂ ಸಂಘ ಪರಿವಾರದ ಕೃತ್ಯಗಳೇ ಆಗಿವೆ. ಅವರು ಸತ್ಯವನ್ನಾಡಿದರು ಅನ್ನುವುದೇ ಅವರ ಅಸಹಿಷ್ಣುತೆಗೆ ಕಾರಣ. ಸಂಘ ಪರಿವಾರಕ್ಕೆ ಇತರರ ಮಾತುಗಳನ್ನು ಕೇಳಿಸಿಕೋಳ್ಳುವ ತಾಳ್ಮೆಯೇ ಇಲ್ಲ. ಮಾತ್ರವಲ್ಲ, ತನ್ನ ಮಾತುಗಳನ್ನು ಅನುಸರಿಸದವರನ್ನೂ ಅದು ಸಹಿಸುವುದಿಲ್ಲ. ಅಂಥವರನ್ನು ನಾಶಮಾಡುವುದು ಅದರ ಜಾಯಮಾನ.

ಅನೇಕ ಸಾಹಿತಿಗಳೂ ಬರಹಗಾರರೂ ಆರೆಸ್ಸೆಸ್ನ ಈ ಅಸಹಿಷ್ಣುತೆಗೆ ಗುರಿಯಾಗಿದ್ದಾರೆ. ಅನಂತಮೂರ್ತಿ, ಪೆರುಮಾಳ್ ಮುರುಗನ್ ಥರದ ಸಾಹಿತಿಗಳು, ಅಮೀರ್ ಖಾನ್, ಶಾರುಖ್ ಖಾನ್, ಕಮಲ್ ಮೊದಲಾದ ಸಿನೆಮಾ ಕ್ಷೇತ್ರದವರೆಲ್ಲ ಇವರ ವಾಗ್ದಾಳಿಗೆ ಒಳಗಾಗಿದ್ದಾರೆ. ಇವರನ್ನೆಲ್ಲ ಪಾಕಿಸ್ತಾನಕ್ಕೆ ಅಟ್ಟಬೇಕು ಅನ್ನುವುದು ಸಂಘಪರಿವಾರದ ಫರ್ಮಾನು. ಇತ್ತೀಚೆಗೆ ಜ್ಞಾನಪೀಠ ಪುರಸ್ಕೃತ ಮಲಯಾಳಿ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಅನಾಣ್ಯೀಕರಣದಿಂದಾದ ಸಮಸ್ಯೆಗಳ ಬಗ್ಗೆ ಮಾತಾಡಿದ್ದಕ್ಕಾಗಿ ಇಂಥದೇ ವಾಗ್ದಾಳಿಯನ್ನು ಎದುರಿಸಬೇಕಾಯ್ತು. ಅದು ಈಗಲೂ ಮುಂದುವರೆದಿದೆ.

ಏಕಿದು? ಜನರೆಲ್ಲ ಆರೆಸ್ಸೆಸ್ ಹೇಳಿದಂತೆಯೇ ಕೇಳಬೇಕಾ? ಅದರಂತೆಯೇ ನಡೆಯಬೇಕಾ? ಇಲ್ಲದಿದ್ದರೆ ಭಾರತದಲ್ಲಿ ವಾಸ ಮಾಡುವಂತಿಲ್ಲವಾ? ನಾನು ಆರೆಸ್ಸೆಸ್ನವರಿಗೆ ಒಂದು ಮಾತು ಹೇಳಬಯಸುತ್ತೇನೆ.

ಭಾರತ ಆರೆಸ್ಸೆಸ್ನವರ ದೇಶವಲ್ಲ. ಇದು ಜಾತ್ಯತೀತ ಜನರ ದೇಶ. ಇದು ಎಲ್ಲರ ದೇಶ. ಇಲ್ಲಿ ಪ್ರತಿಯೊಬ್ಬರಿಗೂ ಮಾನವರಾಗಿ ಜೀವಿಸಲು, ಸ್ವತಂತ್ರವಾದ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶವಿದೆ. ಇದನ್ನು ವಿರೋಧಿಸುವ ಆರೆಸ್ಸೆಸ್ನ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಜಾತ್ಯತೀತ ಶಕ್ತಿಗಳು ಐಕ್ಯದಿಂದ ಪ್ರತಿಭಟಿಸಬೇಕಾಗಿದೆ. ಜನ ಯಾವ ಆಹಾರ ಸೇವಿಸಬೇಕು, ಯಾವ ಕೆಲಸ ಮಾಡಬೇಕು, ಏನು ಬಟ್ಟೆ ಹಾಕಬೇಕು ಎಂದು ಆರೆಸ್ಸೆಸ್ ಆದೇಶ ಕೊಡುವುದನ್ನು ನಾವು ನೋಡುತ್ತಿದ್ದೇವೆ.

ಮಧ್ಯಪ್ರದೇಶದ ದಾದ್ರಿಯಲ್ಲಿ ಮುಸ್ಲಿಮನೊಬ್ಬನನ್ನು ದನದ ಮಾಂಸ ತಿಂದನೆಂದು ಕೊಂದುಹಾಕಿದರು. ಅನಂತರ ಅವರ ಮನೆಯ ಫ್ರಿಜ್ ನಲ್ಲಿದ್ದ ಮಾಂಸವನ್ನು ಪರೀಕ್ಷಿಸಿದಾಗ ಅದು ದನದ ಮಾಂಸವಾಗಿರಲಿಲ್ಲವೆಂದೂ ಆಡಿನ ಮಾಂಸವೆಂದೂ ಸಾಬೀತಾಯ್ತು. ಗುಜರಾತ್’ನಲ್ಲಿ ೪ ಮಂದಿ ದಲಿತರನ್ನು ನಗ್ನವಾಗಿಸಿ ಕಾರಿಗೆ ಕಟ್ಟಿ ಕ್ರೂರವಾಗಿ ಹೊಡೆದು ಹಿಂಸಿಸಿದರು. ಅವರು ಸತ್ತ ದನದ ಚರ್ಮ ಸುಲಿಯುತ್ತಿದ್ದರು, ಪಾಯಿಖಾನೆಗಳನ್ನು ತೊಳೆಯಲಿಲ್ಲ ಎನ್ನುವುದು ಅದಕ್ಕೆ ಕಾರಣವಾಗಿತ್ತು. ಚತುರ್ವರ್ಣ ವ್ಯವಸ್ಥೆಯಲ್ಲಿ ನಿರ್ದಿಷ್ಟ ಜಾತಿಗೆ ನಿರ್ದಿಷ್ಟ ಕೆಲಸ ಸೂಚಿಸಲಾಗಿದೆ. ಅದನ್ನು ಅವರು ಮಾಡಲೇಬೇಕು ಅನ್ನೋದು ಆರೆಸ್ಸೆಸ್ ಧೋರಣೆ.

ಇದೇ ರೀತಿ ಹರಿಯಾಣಾದಲ್ಲಿ ವೃದ್ಧ ರೈತ ಮತ್ತು ಅವನ ಹೆಂಡತಿಯನ್ನು ಕೊಲೆ ಮಾಡಿ, ಭಯದಿಂದ ಓಡಿಹೋದ ಅವರ ಹರೆಯದ ಹೆಣ್ಣುಮಕ್ಕಳನ್ನು ಚಿಕ್ಕ ಮಕ್ಕಳ ಕುತ್ತಿಗೆಗೆ ಚಾಕುವಿಟ್ಟು ಬೆದರಿಸಿ ಕರೆಸಿಕೊಂಡು ಸರಣಿ ಅತ್ಯಾಚಾರ ನಡೆಸಲಾಯ್ತು. ಇಂಥ ಕೃತ್ಯಗಳು ಪಂಜಾಬ್, ಜಾರ್ಖಂಡ್, ಜಮ್ಮು – ಕಾಶ್ಮೀರಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದವರು ತಮ್ಮದೇ ಸದಸ್ಯರ ಕೊಲೆ ಮಾಡಿರುವುದನ್ನೂ ನಾವು ನೋಡಿದ್ದೇವೆ. ಇದೇ ಫೆಬ್ರವರಿ ೧೯ರಂದು ಪ್ರತಾಪ ಪೂಜಾರಿ ಎಂಬ ಹಿಂದೂ ಜಾಗರಣ ವೇದಿಕೆಯ ಸದಸ್ಯನನ್ನು ಅದೇ ಸಂಘಟನೆಯ ಸದಸ್ಯರು ಕೊಲೆ ಮಾಡಿದರು. ಕಟೀಲಿನಲ್ಲಿ ಯಕ್ಷಗಾನ ಮೇಳದವರ ಹಣ ಕದ್ದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಕ್ಕಾಗಿ ನಡೆಸಿದ ಸೇಡಿನ ಕೊಲೆ ಅದಾಗಿತ್ತು.

ಬಿಜೆಪಿಯ ಕಾರ್ಯಕರ್ತರೂ ಮಹಾ ಆಸ್ತಿಕರೂ ಆಗಿದ್ದ ವಿನಾಯಕ ಬಾಳಿಗರ ಕೊಲೆಯಲ್ಲಿ ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಮುಖ್ಯ ಆರೋಪಿಯಾಗಿದ್ದಾನೆ. ಈತ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲರಿಗೆ ಸಹಾಯ ಮಾಡಿದವ. ಈ ಪ್ರಕರಣದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧವೂ ಆರೋಪಗಳು ಕೇಳಿಬಂದಿವೆ.

ಉಡುಪಿಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯ ಮೇಲೆ ಗೋಸಾಗಾಟದ ಆರೋಪ ಹೊರಿಸಿದ ಹಿಂದುತ್ವವಾದಿಗಳು ಹಿಂಸಿಸಿ ಕೊಲೆ ಮಾಡಿದ್ದರು. ಇಂಥ ಪ್ರಕರಣಗಳು ಅನೇಕ.

ಕೇರಳದಲ್ಲಿ ಶ್ರೀ ನಾರಾಯಣ ಗುರುಗಳಿಂದಾಗಿ ಒಂದು ನವೋತ್ಥಾನ ಯುಗ ಪ್ರಾರಂಭವಾಯ್ತು. ಅಲ್ಲಿಯ ಜಾತ್ಯತೀತ ಶಕ್ತಿಗಳು ಒಂದಾದವು. ಹಿಂದುಳಿದ ವರ್ಗದ ಜನ ಒಂದಾದರು. ಈ ಶಕ್ತಿಯನ್ನು ಒಡೆದು ಹಾಕಲು ಆರೆಸ್ಸೆಸ್ ತಂತ್ರ ಪ್ರಾರಂಭಿಸಿತು. ಕಮ್ಯುನಿಸ್ಟರ ಮೇಲೆ ಆಕ್ರಮಣಗಳಾದವು. CPIM ಪಕ್ಷದ ೬೦೦ಕ್ಕೂ ಹೆಚ್ಚು ಮಂದಿ ಯುವಕರು ಇದಕ್ಕೆ ಬಲಿಯಾದರು. ಅದರಲ್ಲಿ ೨೦೫ ಮಂದಿ ಯುವ ಕಣ್ಮಣಿಗಳನ್ನು ನೇರವಾಗಿ ಸಂಘಪರಿವಾರದವರೇ ಕೊಲೆ ಮಾಡಿದ್ದಾರೆ.

ಮಂಗಳೂರಿನ ಸೌಹಾರ್ದ ರ್ಯಾಲಿಗೆ ಆಗಮಿಸಬೇಕೆಂದು ಸುಮಾರು ೪ ತಿಂಗಳ ಹಿಂದೆಯೇ ಕಾಂ.ಶ್ರೀರಾಮ ರೆಡ್ಡಿ ದೂರವಾಣಿ ಮೂಲಕ ಮಾತಾಡಿದ್ದರು. ಇದೀಗ ಕಾಲ ಕೂಡಿಬಂದು ನಾನು ಒಪ್ಪಿಕೊಂಡಿದ್ದೆ. ಯಾವಾಗ ಪಿಣರಾಯಿ ವಿಜಯನ್ ಮಂಗಳೂರಿಗೆ ಬರಲಿದ್ದಾರೆಂದು ತಿಳಿಯಿತೋ ಅಂದಿನಿಂದ ಆರೆಸ್ಸೆಸ್ನವರ ಅಸಹಿಷ್ಣುತೆ ತಾರಕಕ್ಕೇರಿತು.

ಆರೆಸ್ಸೆಸ್ನವರು, ಬಿಜೆಪಿ ಹಾಗೂ ಸಂಘ ಪರಿವಾರದವರು ನನ್ನನ್ನು ಮಂಗಳೂರಿಗೆ ಕಾಲಿಡಲು ಬಿಡುವುದಿಲ್ಲ ಎಂದು ವೀರಾವೇಶದಿಂದ ಹೇಳಿಕೆ ಕೊಟ್ಟು ಬಂದ್ ಘೋಷಿಸಿದ್ದಾರೆ. ಪಕ್ಷದ ಬ್ಯಾನರ್, ಫ್ಲೆಕ್ಸ್ ಗಳನ್ನು ಹರಿದು ಹಾಕಿದ್ದಾರೆ. ಕೇರಳದ ಒಬ್ಬ ಮುಖ್ಯಮಂತ್ರಿಯಾಗಿ ಬರುವಾಗ ಆಡಳಿತ ಯಂತ್ರದ ಸಂಪ್ರದಾಯದಂತೆ ನನಗೆ ಸುತ್ತಲೂ ಭದ್ರತೆಯನ್ನು ಕೊಟ್ಟು ಕರ್ನಾಟಕದ ಸರ್ಕಾರ ಎಲ್ಲ ಸಹಕಾರವನ್ನೂ ನೀಡಿರುವುದಕ್ಕಾಗಿ ನಾನು ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.


ನನ್ನ ವಿರುದ್ಧ ವೀರಾವೇಶದ ಮಾತಾಡಿದ ಸಂಘಪರಿವಾರಕ್ಕೆ ನಾನೊಂದು ಮಾತು ಹೇಳಬಯಸುತ್ತೇನೆ. ಪಿಣರಾಯಿ ವಿಜಯನ್ ಎನ್ನುವ ಮನುಷ್ಯ ಆಕಾಶದಿಂದ ಉದುರಿ ಮುಖ್ಯಮಂತ್ರಿ ಗಾದಿ ಮೇಲೆ ಬಿದ್ದವನಲ್ಲ. ತಲಶ್ಶೇರಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನಾನು ಕಾರ್ಯಕರ್ತನಾಗಿ ಆರೆಸ್ಸೆಸ್ ನವರ ಕತ್ತಿ – ಚೂರಿಗಳ ನಡುವಲ್ಲೇ ಓಡಾಡಿದವನು. ಆಗಲೇ ನನಗೆ ಏನನ್ನೂ ಮಾಡಲಾಗದವರು ಈಗ ತಾನೆ ಏನು ಮಾಡಬಲ್ಲಿರಿ?

ನನಗೆ ಮಧ್ಯಪ್ರದೇಶದ ಭೋಪಾಲ್ ಗೆ ಹೋಗಲು ಸಾಧ್ಯವಾಗಲಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಭೇಟಿಕೊಡುವಾಗ ಆ ರಾಜ್ಯದ ನಿರ್ದೇಶನಗಳಿಗೆ ಬೆಲೆ ಕೊಡುವುದು ನನ್ನ ಕರ್ತವ್ಯವಾಗಿತ್ತು. ನಾನು ಮುಖ್ಯಮಂತ್ರಿಯಲ್ಲದೆ ಕೇವಲ ಪಿಣರಾಯಿ ವಿಜಯನ್ ಆಗಿರುತ್ತಿದ್ದರೆ ನನ್ನನ್ನು ತಡೆಯಲು ಸೂರ್ಯ-ಚ೦ದ್ರರಿಂದಲೂ ಸಾಧ್ಯವಾಗುತ್ತಿರಲಿಲ್ಲ.

ನೀವು ಮಂಗಳೂರಿನ ಜನ ನನ್ನನ್ನು ಕರೆಸಿಕೊಂಡಿದ್ದೀರಿ. ಈ ಸೌಹಾರ್ದ ರ‌್ಯಾಲಿಯನ್ನು ಆಯೋಜಿಸಿದ, ಇದಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಮತ್ತೊಮ್ಮೆ ವಂದಿಸುತ್ತೇನೆ.

- ಪಿಣರಾಯಿ ವಿಯಯನ್, ಕೇರಳ ಮುಖ್ಯಮಂತ್ರಿ
ಅನುವಾದ: ಮುನೀರ್ ಕಾಟಿಪಳ್ಳ
ಸೌಜನ್ಯ : ವಾಭಾ ೨೭.೨.೨೦೧೭

ಮಾಡು ಇಲ್ಲವೇ ಮಡಿ


ಅನು: ಶಿವಸುಂದರ್
ಉತ್ತರಪ್ರದೇಶದ ಚುನಾವಣಾ ಫಲಿತಾಂಶವು ಭಾರತದ ರಾಜಕೀಯದ ರೂಪುರೇಷೆಯನ್ನು ನಿರ್ಧರಿಸಲಿದೆ.

ಉತ್ತರಪ್ರದೇಶದ ಶಾಸನಾ ಸಭಾ ಚುನಾವಣೆಗಳ ಫಲಿತಾಂಶವು ಭಾರತದ ರಾಜಕಾರಣದ ಸದ್ಯಭವಿಷ್ಯದ ಮೇಲೆ ನಿರ್ಣಾಯಕ ಪ್ರಭಾವನ್ನು ಬೀರಲಿದೆ ಎಂಬುದು ಎಲ್ಲರೂ ಬಲ್ಲ ಸಂಗತಿಯೇ ಆಗಿಬಿಟ್ಟಿದೆ. ಪ್ರತಿ ಆರು ಭಾರತೀಯರಲ್ಲಿ ಒಬ್ಬರು ಉತ್ತರ ಪ್ರದೇಶದಲ್ಲಿ ವಾಸಿಸುತ್ತಾರೆ ಎಂಬುದೂ ಮತ್ತು ಅದು ಪ್ರತ್ಯೇಕ ರಾಷ್ಟ್ರವಾಗಿದ್ದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಐದನೇ ರಾಷ್ಟ್ರವಾಗಿರುತ್ತಿತ್ತೆಂಬುದೇ ಅದರ ಮಹತ್ವವನ್ನು ಹೇಳುತ್ತದೆ. ಆದರೆ ಇತಿಹಾಸದಲ್ಲಿ ಒಮ್ಮೊಮ್ಮೆ ಉತ್ತರ ಪ್ರದೇಶದ ಚುನಾವಣೆಗಳಿಗೆ ಅದರ ಬೃಹತ್ ಗಾತ್ರಕ್ಕೂ ಮಿಗಿಲಾದ ಮಹತ್ವವಿರುವ ಗಳಿಗೆಯು ಬರುತ್ತದೆ. ಈ ಚುನಾವಣೆಯ ನಡೆಯುತ್ತಿರುವ ಸಂದರ್ಭ ಮತ್ತು ಸಮಯದ ಕಾರಣದಿಂದ ಅಂಥಾ ಗಳಿಗೆ ಎದುರಾಗಿದೆ.
Narendra_Modi
ಮೊದಲಿಗೆ, ಇವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2016ರ ನವಂಬರ್ 8ರಂದು ಅಧಿಕ ಮೌಲ್ಯದ ನೋಟುಗಳನ್ನು ರದ್ದುಗೊಳಿಸುವ ಮೂಲಕ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ.86ರಷ್ಟು ನಗದನ್ನು ಹಿಂಪಡೆದು ಇಡೀ ದೇಶಕ್ಕೆ ಶಾಕ್ ನೀಡಿದ ನಂತರದಲ್ಲಿ ನಡೆಯುತ್ತಿರುವ ಮೊದಲ ಶಾಸನಾಸಭಾ ಚುನಾವಣೆಗಳಾಗಿವೆ.. ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಉತ್ತರ ಪ್ರದೇಶವು ಅತ್ಯಂತ ದೊಡ್ಡ ರಾಜ್ಯವಾಗಿರುವುದರಿಂದ ಇಲ್ಲಿನ ಫಲಿತಾಂಶವನ್ನು ಪೂರ್ಣವಾಗಿಯಲ್ಲದಿದ್ದರೂ ಪಾಕ್ಷಿಕವಾಗಿ ನೋಟು ನಿಷೇಧದ ಬಗೆಗಿನ ಜನಾಭಿಪ್ರಾಯವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಈ ಚುನಾವಣೆಯಲ್ಲಿ ಗೆದ್ದರೆ ಅಥವಾ ಅತಿ ದೊಡ್ಡ ಪಕ್ಷವಾಗಿ ಚುನಾಯಿತವಾದರೂ ಅದನ್ನು ಮೋದಿಯ ಪರವಾದ ಜನಾಭಿಪ್ರಾಯವೆಂದೇ ನೋಡಲಾಗುತ್ತದೆ.
ಹೀಗಾದಲ್ಲಿ ಅದು ನರೇಂದ್ರಮೋದಿಯವರು ಭಾರತೀಯ ಜನತಾ ಪಕ್ಷದಲ್ಲಿರುವ ಅತ್ಯಂತ ವರ್ಚಸ್ವೀ ರಾಜಕಾರಣಿಯೆಂದು ಮಾತ್ರವಲ್ಲದೆ ಭಾರತದ ರಾಜಕೀಯದ ನಾಡಿಮಿಡಿತವನ್ನು ಬಲ್ಲ ಅತ್ಯಂತ ಚಾಣಾಕ್ಷ ರಾಜಕಾರಣಿಯೆಂಬುದಕ್ಕೆ ಮತ್ತೊಂದು ಪುರಾವೆಯೆಂದು ಭಾವಿಸಲ್ಪಡುತ್ತದೆ. ಪಕ್ಷದ ಅಧ್ಯಕ್ಷ ಮತ್ತು ಮೋದಿಯ ಆಪ್ತ ಅಮಿತ್ ಶಾಗೆ ಕೂಡ ಇದರಿಂದ ಮೋದಿಯಷ್ಟಲ್ಲವಾದರೂ ಲಾಭವಂತೂ ಆಗಿಯೇ ಆಗುತ್ತದೆ. ಜನರಿಂದ ದಕ್ಕುವ ಅಂಥಾ ಅನುಮೋದನೆಯು ವಿರೋಧಿಗಳ ಬಗ್ಗೆ ಮೋದಿ ಮತ್ತಷ್ಟು ಕಠಿಣವಾದ ಮತ್ತು ಸಂಘರ್ಷಾತ್ಮಕ ನಿಲುವನ್ನು ತಾಳುವಂತೆ ಮಾಡಬಹುದು. ಅದು ಈಗಾಗಲೇ ಅಸಹಾಯಕರಾಗಿರುವ ವಿರೋಧ ಪಕ್ಷಗಳನ್ನು ಮತ್ತಷ್ಟು ಅಸಹಾಯಕಗೊಳಿಸಬಹುದು.
amit-shah
ಒಂದು ವೇಳೆ ಬಿಜೆಪಿಯು ಎರಡನೇ ಅಥವಾ ಮೂರನೇ ಸ್ಥಾನಕ್ಕಿಳಿದಲ್ಲಿ ಮೋದಿ ಮತ್ತು ಶಾ ಇಬ್ಬರ ವರ್ಚಸ್ಸಿಗೂ ದೊಡ್ಡ ಪೆಟ್ಟು ಬೀಳುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿ 403 ಅಸೆಂಬ್ಲಿ ಕ್ಷೇತ್ರಗಳಲ್ಲಿ 328 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಹೀಗಾಗಿ ಅದಕ್ಕೆ ಹೋಲಿಸಿದಲ್ಲಿ ಎರಡನೇ ಅಥವಾ ಮೂರನೇ ಸ್ಥಾನಕ್ಕಿಳಿಯುವಂಥಾ ಫಲಿತಾಂಶವನ್ನು ಪಕ್ಷಕ್ಕಾದ ಹಿನ್ನೆಡೆಯೆಂದೇ ಭಾವಿಸಲಾಗುವುದು. ಪ್ರಾಯಶಃ, ಅಂಥಾ ಸಂದರ್ಭದಲ್ಲಿ ಪಕ್ಷದೊಳಗೆ ಮೂಲೆಗುಂಪಾಗಿರುವ ಮೋದಿ ವಿರೋಧಿಗಳು ತಮ್ಮ ಹತಾಶೆಯ ಸ್ಥಿತಿಯಿಂದ ಹೊರಬಂದು, ನೋಟು ನಿಷೇಧದಂಥ ದುಡುಕಿನ ರಾಜಕೀಯ ಜೂಜಾಟಗಳಲ್ಲಿ ತೊಡಗಿರುವ ವ್ಯಕ್ತಿಯ ಕೈಯಲ್ಲಿ ಬಿಜೆಪಿಯ ಭವಿಷ್ಯ ಎಷ್ಟರಮಟ್ಟಿಗೆ ಸುರಕ್ಷಿತವಾಗಿರುತ್ತದೆಂಬ ಪ್ರಶ್ನೆಗಳನ್ನೆತ್ತಬಹುದು. ಅಂಥದೇ ಪ್ರಶ್ನೆಗಳು ಮೋದಿಯ ಅವಳಿಯಾಗಿರುವ ಶಾ ಅವರ ಮೇಲೂ ತೂರಿಬರಬಹುದು.
ಆದರೆ ಉತ್ತರಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ಪರಾಜಯವು ಆ ಪಕ್ಷದಾಚೆಗೂ ಪರಿಣಾಮ ಬೀರುತ್ತದೆ. ಮೊದಲನೆಯದಾಗಿ, ಬಿಜೆಪಿಯ ವಿರೋಧಿ ಬಣಗಳಾದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಕೂಟ ಅಥವಾ ಬಿಎಸ್‍ಪಿ ಇವುಗಳಲ್ಲಿ ಯಾವುದು ಉತ್ತರ ಪ್ರದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡರೂ ಅವುಗಳಿಗೆ ಉತ್ತರಪ್ರದೇಶದ ರಾಜಕಾರಣದಲ್ಲಿ ಹೆಚ್ಚಿನ ಕಸುವು ದೊರೆಯುವುದು ಮಾತ್ರವಲ್ಲದೆ, ಅವುಗಳ ರಾಷ್ಟ್ರೀಯ ಆಶೋತ್ತರಗಳಿಗೂ ಈ ಫಲಿತಾಂಶವು ಚಿಮ್ಮುಹಲಗೆಯಾಗಲಿದೆ. 2015ರ ಅಕ್ಟೋಬರ್‍ನ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಗೆಲುವನ್ನು ಸಾಧಿಸಿದ ನಂತರದಲ್ಲಿ, ಅವರು 2019ರಲ್ಲಿ ಮೋದಿಯನ್ನು ಸೋಲಿಸಲು ವಿರೋಧ ಪಕ್ಷಗಳ ಸರ್ವಸಮ್ಮತಿಯಾದ ಅಭ್ಯರ್ಥಿಯಾಗಬಹುದೆಂಬ ಮಾತುಗಳು ಹರಿದಾಡುತ್ತಿದ್ದವು. ಇವತ್ತಿನ ಸಂದರ್ಭದಲ್ಲಿ ಬಿಜೆಪಿಯನ್ನು ಉತ್ತರಪ್ರದೇಶದಲ್ಲಿ ಸೋಲಿಸುವುದು ಅಂಥಾ ಒಂದು ಪಾತ್ರಕ್ಕೆ ಅಖಿಲೇಶ್ ಅಥವಾ ಮಾಯಾವತಿಯವರನ್ನು ಹುರಿಯಾಳುಗಳನ್ನಾಗಿಸುತ್ತದೆ.
ಅಂಥಾ ಚಿತ್ರಣವು ಬಿಹಾರ ರೀತಿಯ ಮಹಾನ್ ಒಕ್ಕೂಟಗಳು ಮಾತ್ರ ಬಿಜೆಪಿಯನ್ನು ಸೋಲಿಸಬಲ್ಲ ಪರ್ಯಾಯವನ್ನು ಒದಗಿಸಬಲ್ಲದೆಂಬ ತಿಳವಳಿಕೆಯನ್ನೂ ಪ್ರಶ್ನಿಸುವಂತೆ ಮಾಡುತ್ತದೆ. ಒಂದು ವೇಳೆ ಸಮಾಜವಾದಿ ಪಕ್ಷವು ಗೆದ್ದರೆ ಅಥವಾ ಮೊದಲನೇ ಸ್ಥಾನಕ್ಕೆ ಬಂದುನಿಂತರೂ ಅದು ಯಾವುದೇ ಮಹಾನ್ ಒಕ್ಕೂಟದ ಬೆಂಬಲವಿಲ್ಲದೆ, ಉತ್ತರಪ್ರದೇಶದಲ್ಲಿ ರಾಜಕಾರಣದ ರಂಗಮಂಚದಲ್ಲಿ ಪೆÇೀಷಕ ಪಾತ್ರವನ್ನು ಬಿಟ್ಟರೆ ಬೇರೇನನ್ನು ಮಾಡಲಾಗದ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್‍ನೊಂದಿಗೆ ಸೀಮಿತ ಕೂಟವನ್ನು ಮಾಡಿಕೊಂಡೇ ಆ ಗೆಲುವನ್ನು ಸಾಧಿಸಿರುತ್ತದೆ.
ಹಾಗಾದಲ್ಲಿ ಅಖಿಲೇಶ್ ತಾನು ಕುಟುಂಬ ರಾಜಕಾರಣದ ಸಿಕ್ಕುಸುಳಿಗಳ ನಡುವೆಯೂ ದೊಡ್ಡ ಸಂಖ್ಯೆಯ ಮತದಾರರನ್ನು ತನ್ನೊಡನೆ ಕರೆದೊಯ್ಯಬಲ್ಲ ಸಾಮರ್ಥ್ಯವಿರುವ ರಾಜಕಾರಣಿಯೆಂದು ಸಾಬೀತುಪಡಿಸಿರುತ್ತಾರೆ. ಇನ್ನೂ ಚಿಕ್ಕ ವಯಸ್ಸಿನ ನಾಯಕನಾಗಿರುವುದರಿಂದ ದೀರ್ಘ ಕಾಲದವರೆಗೂ ಆಟದಲ್ಲಿರುವ ದೀರ್ಘ ಪಂದ್ಯದ ಕುದುರೆಯೆಂದೂ ಪರಿಗಣಿಸಲ್ಪಡುತ್ತಾರೆ. ಒಂದು ಹಂತದಲ್ಲಿ ಪಕ್ಷವನ್ನು ಅಳಿವಿನಂಚಿಗೆ ತಂದಿದ್ದ ಕ್ಷುಲ್ಲಕ ದಾಯಾದಿ ಕಲಹಗಳಿಂದ ಮೇಲೆದ್ದು ನಿಂತ ಅಖಿಲೇಶ್ ಈಗಂತೂ ನಾಯಕನಾಗಿದ್ದಾರೆ. 2014ರ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಗಳು ಭಾರತದ ಬಹುಪಕ್ಷೀಯ ಪ್ರಜಾತಂತ್ರದಲ್ಲಿ ತಾನು ಪ್ರತಿನಿಧಿಸುವ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯವಾಗುವ ರಾಜಕೀಯದ “ವ್ಯಕ್ತೀಕರಣ”ದ ಹಂತವನ್ನು ಕಂಡಿತೆಂದು ಹೇಳಬಹುದು. ಹೆಚ್ಚೂ ಕಡಿಮೆ ಅಮೆರಿಕದ ಶೈಲಿಯ ಅಧ್ಯಕ್ಷೀಯ ಚುನಾವಣೆಯ ಮಾದರಿಯಲ್ಲಿ ಮೋದಿ ಮತ್ತು ರಾಹುಲ್ ಗಾಂಧಿಯ ನಡುವಿನ ಸ್ಪರ್ಧೆಯಂತೆ ನಡೆದ ಚುನಾವಣೆಯಲ್ಲಿ ಮೋದಿ ಗೆದ್ದರು. ಆದರೆ ಕತ್ತಿಗೆ ಎರಡು ಅಲುಗಿರುತ್ತದೆ. ಮತ್ತು ಅದು ಎರಡೂ ಕಡೆಯಲ್ಲೂ ಕತ್ತರಿಸುತ್ತದೆ. 2015ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಕಿರಣ್ ಬೇಡಿಯವರ ನಡುವೆ ಪೈಪೆÇೀಟಿ ನಡೆದಾಗ ಆಮ್ ಆದ್ಮಿ ಪಕ್ಷ ಗೆಲುವನ್ನು ಸೂರೆಮಾಡಿತು.
ಹಾಗೆಯೇ 2015ರ ಅಕ್ಟೋಬರ್‍ನಲ್ಲಿ ನಡೆದ ಬಿಹಾರ ಚುನಾವಣೆಗಳಲ್ಲಿ ನಿತೀಶ್‍ಕುಮಾರ್ ಗೆದ್ದರು. ಆದರೆ ಇದೀಗ ಉತ್ತರಪ್ರದೇಶದಲ್ಲಿ ಅಖಿಲೇಶ್ ಮತ್ತು ಮಾಯಾವತಿಯವರ ಎದಿರು ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಪರ್ಧಾಳುವಿಲ್ಲವೆಂಬುದು ಗಮನಾರ್ಹ ಸಂಗತಿಯಾಗಿದೆ. ಒಂದು ವೇಳೆ ಚುನಾವಣೆಯಲ್ಲಿ ಬಿಎಸ್‍ಪಿ ಗೌರವಯುತವಾದ ಸಾಧನೆ ಮಾಡಿದರೆ ಅದು ಮಾಯಾವತಿಯವರ ಸ್ವಂತ ಶಕ್ತಿಯಿಂದ ಮಾಡಿದ ಸಾಧನೆಯಾಗಿರುತ್ತದೆ; ಒಂದು ವೇಳೆ, ಐದು ವರ್ಷ ಮುಖ್ಯಮಂತ್ರಿಯಾದ ನಂತರವೂ ಆಡಳಿತ ಪಕ್ಷ ವಿರೋಧಿ ಭಾವನೆಗಳನ್ನು ಹಿಮ್ಮೆಟ್ಟಿಸಿ ಚುನಾವಣೆಯನ್ನು ಗೆದ್ದಲ್ಲಿ ಅಖಿಲೇಶ್‍ಗೂ ಇದೇ ಅನ್ವಯಿಸುತ್ತದೆ. ಇದರ ಜೊತೆಜೊತೆಗೆ ಉತ್ತರಪ್ರದೇಶದ ಚುನಾವಣಾ ಫಲಿತಾಂಶಗಳು “ವೋಟ್ ಬ್ಯಾಂಕ್” ರಾಜಕಾರಣ ಮತ್ತು “ಅಸ್ಮಿತೆ”ಯಾಧರಿಸಿದ ರಾಜಕಾರಣದ ಪ್ರಭಾವಗಳು ಹಿಂದಿನಷ್ಟೇ ಗಟ್ಟಿಯಾಗಿವೆಯೇ ಎಂಬುದನ್ನೂ, ಮತ್ತು ಮುಸ್ಲಿಮರು. ದಲಿತರು ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು ನಿರೀಕ್ಷಿತ ರೀತಿಯಲ್ಲೇ ಮತದಾನ ಮಾಡುತ್ತಾರೆಯೇ ಎಂಬುದನ್ನು ಬಯಲುಮಾಡಲಿವೆ.
2019ರ ಲೋಕಸಭಾ ಚುನಾವಣೆಗಳಿಗೆ ಇನ್ನೆರಡು ವರ್ಷಗಳು ಮಾತ್ರ ಉಳಿದಿರುವಾಗ ಬಿಜೆಪಿಗೆ ಆಗಬಹುದಾದ ಸೋಲು ಮೋದಿ ಮತ್ತು ಶಾ ಅವರ ಕಾರ್ಯಶೈಲಿಯಲ್ಲಿ ಯಾವ ಬದಲಾವಣೆಯನ್ನು ತರಬಹುದು? ಮೋದಿಯವರು ಈಗಾಗಲೇ ಅನಿರೀಕ್ಷಿತ ಅಚ್ಚರಿಗಳನ್ನು ನೀಡಲು ಸಮರ್ಥರೆಂಬುದನ್ನು ಸಾಬೀತುಪಡಿಸಿರುವುದರಿಂದ ಅವರ ವರ್ತನೆಗಳು ನಿರ್ದಿಷ್ಟ ರೀತಿಯಲ್ಲೇ ಬದಲಾಗಬಲ್ಲದೆಂದು ಊಹಿಸುವುದು ಅಪಾಯಕಾರಿ. ಅವರು ಪಕ್ಷದೊಳಗಿನ ಮತ್ತು ಹೊರಗಿನ ವಿರೋಧಿಗಳ ಜೊತೆಗೆ ಒಂದಷ್ಟು ಸಂಧಾನ ಮಾದರಿ ಶೈಲಿಯನ್ನು ಅನುಸರಿಸುವರೇ? ಅಥವಾ ಮೊದಲಿಂದ ಇರುವ ರೀತಿಯಲ್ಲೇ ಆಕ್ರಮಣಕಾರಿ ಮನೋಧರ್ಮವನ್ನು ಮುಂದುವರೆಸುತ್ತಾ ಮತ್ತಷ್ಟು ಧೃವೀಕರಣಗೊಳಿಸುವ ರಾಜಕಾರಣವನ್ನು ಅಳವಡಿಸಿಕೊಳ್ಳುವರೇ? ಅದೇ ಹೇಗೇ ಆದರೂ ಈ ಮಾರ್ಚ್ 11 ಭಾರತದ ರಾಜಕಾರಣದ ಗತಿಯನ್ನು ಬದಲಿಸಲಿದೆ.

ಕೃಪೆ: Economic and Political Weekly;
      February 18, 2017. Vol. 52. No.7

ಭ್ರಷ್ಟ್ರರ ಬೇಟೆ:ಭ್ರಷ್ಟಾಚಾರ ವಿರೋಧಿ ಕಾನೂನುಗಳು

ಅನು: ಶಿವಸುಂದರ್
ಅಕ್ರಮ ಆಸ್ತಿ ಪ್ರಕರಣದದ ಬಗೆಗಿನ ನ್ಯಾಯಾದೇಶವು ಭ್ರಷ್ಟ ರಾಜಕಾರಣಿಗಳಿಗೆ ಕಡಿವಾಣ ಹಾಕುತ್ತದೆಯೇ?

ಆಕೆ ಇನ್ನೇನು ತಮಿಳುನಾಡಿನ ಮುಖ್ಯಮಂತ್ರಿಯೇ ಆಗಿಬಿಡುತ್ತಿದ್ದರು; ಈಗ ಆಕೆ ಸೆರೆಮನೆಯಲ್ಲಿ ಸರಳುಗಳ ಹಿಂದಿದ್ದಾರೆ. ಆಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ (ಎಐಎಡಿಎಂಕೆ) ಅಧಿನಾಯಕಿ ಜೆ. ಜಯಲಲಿತಾ ಅವರು 2016ರ ಡಿಸೆಂಬರ್ 5 ರಂದು ಚೆನ್ನೈನಲ್ಲಿ ನಿಧನರಾದ ನಂತರದಲ್ಲಿ ಅವರ ಕೃಪಾಶ್ರಯದಲ್ಲೇ ಬೆಳೆದ ವಿ.ಕೆ.ಶಶಿಕಲಾ ಭವಿಷ್ಯವೇನಾಗುತ್ತದೆಂಬ ಪ್ರಶ್ನೆ ತಮಿಳುನಾಡಿನ ಜನತೆ ಮತ್ತು ಮಾಧ್ಯಮಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಆದರೆ ಇದರ ಬಗೆಗಿನ ಎಲ್ಲಾ ಊಹಾಪೆಹಗಳಿಗೂ ಸುಪ್ರಿಂ ಕೋರ್ಟಿನ ಬ್ರವರಿ 14ರ ಆದೇಶದ ಮೂಲಕ ನಾಟಕೀಯವಾದ ತೆರೆ ಬಿದ್ದಿದೆ. ವಿವರಿಸಲಸಾಧ್ಯವಾದಷ್ಟು ವಿಳಂಬದ ನಂತರ ದೇಶದ ವರಿಷ್ಠ ನ್ಯಾಯಾಲಯವು ಎರಡು ದಶಕಗಳಷ್ಟು ಹಳೆಯದಾದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ, ಶಶಿಕಲ ಮತ್ತವರ ಇಬ್ಬರು ಸಬಂಧಿಕರಾದ ವಿ.ಎನ್. ಸುಧಾಕರನ್ ಮತ್ತು ಜೆ. ಇಳವರಸಿಯವರುಗಳು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ರಡಿಯಲ್ಲಿ ಅಪರಾಧವೆಸಗಿದ್ದಾರೆ ಎಂದು ತೀರ್ಪನ್ನಿತ್ತಿದೆ. ಆದರೆ ಮಾಧ್ಯಮಗಳು ತಮಿಳುನಾಡಿನ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ತನಗೆ ನಿಷ್ಠರಾಗಿದ್ದ ಶಾಸಕರೊಂದಿಗೆ ಶಶಿಕಲಾ ಅವರು ವಿಶ್ರಾಂತಿ ಧಾಮದಲ್ಲಿ ರಚಿಸುತ್ತಿದ್ದ ರಾಜಕೀಯ ತಂತ್ರಗಳ ರೋಚಕ ರಾಜಕೀಯ ನಾಟಕಗಳನ್ನು ವರದಿ ಮಾಡುವದರಲ್ಲಿ ಸಂಪೂರ್ಣವಾಗಿ ತೊಡಗಿದ್ದರಿಂದ, ಅಕ್ರಮ ಆಸ್ತಿ ಗಳಿಕೆಯ ನಿಯಂತ್ರಣದ ಮೇಲೆ ಈ ತೀರ್ಪಿನ ಮಹತ್ವದ ಪರಿಣಾಮಗಳೇನೆಂಬುದು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳಲಿಲ್ಲ. ವರಿಷ್ಠ ನ್ಯಾಯಾಲಯವು ಈ ತೀರ್ಪನ್ನು ಘೋಷಿಸಿದ ಸಮಯ- ಸಂದರ್ಭದ ಕುರಿತು ಪ್ರಶ್ನೆಗಳು ಕೇಳಿಬರುತ್ತಿರುವುದು ನಿಜವೇ ಆದರೂ ಈ ಆದೇಶಕ್ಕೆ ತನ್ನದೇ ಆದ ಮಹತ್ವವಿದೆ.

 2014ರ ಸೆಪ್ಟೆಂಬರ್‍ನಲ್ಲಿ ಕರ್ನಾಟಕ ರಾಜ್ಯದ ವಿಶೇಷ ಸೆಷನ್ ಕೋರ್ಟು ಜಯಲಲಿತಾ ಅವರು ತಮ್ಮ ಘೊಷಿತ ಆದಾಯ ಮೂಲಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ಅಪರಾಧವನ್ನು ಎಸಗಿದ್ದಾರೆಂದು ತೀರ್ಪು ನೀಡಿತು. ಜೊತೆಗೆ ಈ ಅಕ್ರಮ ಆಸ್ತಿಯನ್ನು ಗಳಿಸಲು ಮತ್ತು ಬಚ್ಚಿಡಲು ಜಯಲಲಿತಾರೊಂದಿಗೆ ಶಶಿಕಲಾ ಮತ್ತು ಅವರ ಇಬ್ಬರು ಸಂಬಂಧಿಕರು ಸಹಕರಿಸುವ ಅಪರಾಧವನ್ನೆಸಗಿದ್ದಾರೆಂದೂ ಘೋಷಿಸಿತು. ಈ ಆದೇಶವನ್ನು ಕರ್ನಾಟಕ ಹೈಕೋರ್ಟು 2015ರ ಮೇ 15ರಂದು ರದ್ದುಗೊಳಿಸಿತು. ಹೈಕೋರ್ಟಿನ ಈ ಆದೇಶದ ವಿರುದ್ದ ಸಲ್ಲಿಸಿದ ಮೇಲ್ಮನವಿಯನು ವರಿಷ್ಠ ನ್ಯಾಯಾಲಯವು ತನ್ನ ಫೆಬ್ರವರಿ 14ರ ಆದೇಶದಲ್ಲಿ ಪುರಸ್ಕರಿಸಿದೆ. ಮತ್ತು ಜಯಲಲಿತಾ ಮತ್ತವರ ಸಂಗಡಿಗರನ್ನು ದೋಷಿಗಳೆಂದು ಘೋಷಿಸಿದÀ ಸೆಷನ್ ಕೋರ್ಟು ನೀಡಿದ ಆದೇಶವನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ. ಈ ಪ್ರಕರಣದಲ್ಲಿ ಮೊದಲ ಆರೋಪಿ ಜಯಲಲಿತಾ ನಿಧನರಾಗಿದ್ದರೂ ಶಶಿಕಲಾ ಅವರನ್ನು ಒಳಗೊಂಡಂತೆ ಉಳಿದ ಮೂವರು ಅಪರಾಧಿಗಳು ಸೆಷನ್ ನ್ಯಾಯಾಲಯವು ವಿಧಿಸಿದಂತೆ ತಲಾ 10 ಕೋಟಿ ದಂಡವನ್ನು ತೆರಬೇಕು ಮತ್ತು ನಾಲ್ಕು ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸಬೇಕೆಂದು ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೋಷ್ ಮತ್ತು ಅಮಿತಾವ್ ರಾಯ್ ರವರ ಪೀಠವು ನೀಡಿರುವ ಈ ಬೃಹತ್ 570 ಪುಟಗಳ ಆದೇಶವು ಅಕ್ರಮ ಆಸ್ತಿಯ ಗಳಿಕೆಯನ್ನು ಹೇಗೆ ಬಚ್ಚಿಡಬೇಕೆಂಬ ಬಗ್ಗೆ ಒಂದು ಮೂಲಪಾಠದಂತಿದೆ. ಮತ್ತು ಸೆಷನ್ ಕೋರ್ಟಿನ ನ್ಯಾಯಾಧೀಶ ಜಾನ್ ಮೈಕೆಲ್ ಡಿ’ಕುನ್ಹಾ ಅವರ ಮುಂದಿದ್ದ ಸಾಕ್ಷ್ಯಗಳು ಹೇಗೆ ತಮ್ಮ ಅಕ್ರಮ ಆಸ್ತಿಯನ್ನು ಬಚ್ಚಿಟ್ಟುಕೊಳ್ಳಲು ಜಯಲಲಿತಾ ಅವರು ಶಶಿಕಲಾ ಮತ್ತವರ ಸಂಬಂಧಿಗಳ ಸಹಾಯವನ್ನು ಪಡೆದುಕೊಂಡಿದ್ದರೆಂಬ ಬಗ್ಗೆ ಖಚಿತ ತೀರ್ಮಾನಕ್ಕೆ ಬರುವಂತೆ ಮಾಡಿತೆಂಬುದನ್ನು ವಿವರಿಸುತ್ತದೆ. ಅಕ್ರಮ ಆಸ್ತಿಯನ್ನು ಬಚ್ಚಿಡಲು ಬಳಸಿದ ವಿಧಾನಗಳು ಹೊಸತೂ ಅಲ್ಲ. ಸ್ವಂತದ್ದೂ ಅಲ್ಲ; ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಅಕ್ರಮ ಆಸ್ತಿಯನ್ನು ಮುಚ್ಚಿಟ್ಟುಕೊಳ್ಳಲು ಹೆಚ್ಚೂಕಡಿಮೆ ಎಲ್ಲರೂ ಇದೇ ವಿಧಾನಗಳನ್ನು ಬಳಸುತ್ತಾರೆ.
js

ಈ ಪ್ರಕರಣದಲ್ಲಿ ಒಂದೇ ವಿಳಾಸವನ್ನು ಹೊಂದಿರುವ 34 ಶೆಲ್ (ನಕಲಿ) ಕಂಪನಿಗಳನ್ನು ನೊಂದಾಯಿಸಲಾಗಿತ್ತು; ಅದರಲ್ಲಿ 10 ಕಂಪನಿಗಳನ್ನು ಒಂದೇ ದಿನ ಮತ್ತು ಆರು ಕಂಪನಿಗಳು ಮತ್ತೊಂದು ದಿನ ಏಕಕಾಲದಲ್ಲಿ ನೊಂದಾವಣೆಗೊಂಡಿದ್ದವು. ಈ ಕಂಪನಿಗಳ ವ್ಯವಹಾರಕ್ಕೆಂದೇ 50 ಬ್ಯಾಂಕು ಖಾತೆಗಳನ್ನು ತೆರೆಯಲಾಗಿತ್ತು. ಅವುಗಳಲ್ಲಿ 47 ಖಾತೆಗಳಿದ್ದದ್ದು ಒಂದೇ ಬ್ಯಾಂಕಿನಲ್ಲಿ. ಇವುಗಳಲ್ಲಿ ಬಹುಪಾಲು ಕಂಪನಿಗಳು ಮಾಡುತ್ತಿದ್ದ ಏಕೈಕ ವ್ಯವಹಾರವೆಂದರೆ ಉದ್ದೇಶಪೂರ್ವಕವಾಗಿ ಅಪಮೌಲ್ಯೀಕರಿಸಿದ ಆಸ್ತಿಪಾಸ್ತಿಗಳನ್ನು ಕೊಳ್ಳುವುದು. ಇವುಗಳಿಗಾಗಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ಹರಿದಾಡುತ್ತಿತ್ತು. ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಳ್ಳುವುದು. ಮತ್ತು ಸಾಲದ ಮೊತ್ತ ಸಂಪೂರ್ಣವಾಗಿ ಬಿಡುಗಡೆಯಾಗದಿದ್ದರೂ ಅಷ್ಟೂ ಮೊತ್ತವನ್ನು ಕಂಪನಿಯು ತೀರಿಸಬೇಕಿರುವ “ಹೊಣೆಗಾರಿ” (Liability)ಯೆಂದು ತೋರಿಸುವುದು. ಈ ಕೆಲವು ವ್ಯವಹಾರಗಳಲ್ಲಿರುವ ಲಜ್ಜೆಗೇಡಿತನವು ಇದರಲ್ಲಿ ತೊಡಗಿದವರಿಗೆ ತಮ್ಮ ಕಪಟ ಎಂದಿಗೂ ಪತ್ತೆಯಾಗಲಾರದೆಂಬ ಬಗ್ಗೆ ಇದ್ದ ವಿಶ್ವಾಸವನಷ್ಟೇ ಸೂಚಿಸುತ್ತದೆ.

ಸ್ವೇಚ್ಚಾ ಪ್ರವೃತ್ತಿಯ ರಾಜಕಾರಣಿಯಾದ ಸುಬ್ರಮಣಿಯನ್ ಸ್ವಾಮಿಯವರು 1996ರ ಜೂನ್ ನಷ್ಟು ಹಿಂದೆ ಹೂಡಿದ ಈ ದಾವೆಯ ಅಂತಿಮ ತೀರ್ಮಾನ ಹೊರಬರಲು ಸಾಕಷ್ಟು ವಿಳಂಬವಾಗಿದೆ. ಆದರೂ ವಿಚಾರಣಾ ನ್ಯಾಯಾಲಯ ಮತ್ತು ವರಿಷ್ಠ ನ್ಯಾಯಾಲಯಗಳೆರಡೂ ಆರೋಪಿಗಳ ಈ ಅಕ್ರಮಗಳನ್ನು ಅಪರಾಧವೆಂದು ತೀರ್ಪಿತ್ತಿರುವುದು ಮಹತ್ವದ ಪೂರ್ವನಿದರ್ಶನವನ್ನು ಹಾಕಿಕೊಟ್ಟಿದೆ. ಜಯಲಲಿತಾ ಅವರನ್ನು ದೋಷಮುಕ್ತಗೊಳಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಸ್ವಾಮಿಯವರ ಆದೇಶವನ್ನು ವರಿಷ್ಠ ನ್ಯಾಯಾಲಯವು ತಿರಸ್ಕರಿಸಿದೆ. ಮತ್ತು ಆ ಆದೇಶವು “ ದಾಖಲಾಗಿದ್ದ ಸಾಕ್ಷ್ಯಗಳ ತಪ್ಪು ಗ್ರಹಿಕೆ” ಮತ್ತು ಆರೋಪಿಗಳ ಆದಾಯ, ಆಸ್ತಿ ಪಾಸ್ತಿ ಮತ್ತು ಹೊಣೆಗಾರಿಕೆಗಳ ಲೆಕ್ಕಾಚಾರದ “ಕೂಡುಕಳೆಯುವಿಕೆಗಳನ್ನು ತಪ್ಪಾಗಿ ಮಾಡಿದೆಯೆಂದು” ಟೀಕಿಸಿದೆ. ಸಾಮಾನ್ಯವಾಗಿ ವರಿಷ್ಠ ನ್ಯಾಯಾಲಯಗಳು ಕೆಳಹಂತದ ಕೋರ್ಟುಗಳ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯುವುದು ಅಪರೂಪ.

1991ರ ಜುಲೈ 1 ಮತ್ತು 1996ರ ಏಪ್ರಿಲ್ 30 ರ ನಡುವಿನ ಅವಧಿಯಲ್ಲಿ ಜಯಲಲಿತಾ ಸಂಪಾದಿಸಿದ ಆಸ್ತಿಪಾಸ್ತಿಗಳು ಮತ್ತು ಅವರ ಆದಾಯ ಮೂಲಗಳ ಬಗ್ಗೆ ವಿಶೇಷ ವಿಚಾರಣಾ ನ್ಯಾಯಾಲಯವು ಅತ್ಯಂತ ಸಣ್ಣಪುಟ್ಟ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿತ್ತು. ಆಕೆಯ ಆಸ್ತಿ 1991ರಲ್ಲಿ 2.01 ಕೋಟಿಯಿದ್ದದ್ದು 1996ರಲ್ಲಿ 64.44 ಕೋಟಿಯಷ್ಟಾದದ್ದು ಅಕ್ರಮ ವ್ಯವಹಾರಗಳ ಮೂಲಕವೇ ಎಂದು ಅದು ಸ್ಪಷ್ಟವಾಗಿ ನಿರೂಪಿಸಿತು. ವರಿಷ್ಟ ನ್ಯಾಯಾಲಯವು ವ್ಯಾಖ್ಯಾನಿಸಿದಂತೆ ವಿಚಾರಣಾ ನ್ಯಾಯಾಲಯದ ಈ “ಕರಾರುವಕ್ಕಾದ, ಸೂಕ್ಷ್ಮತೆಯಿಂದ ಕೂಡಿತ, ವಿವೇಚನಾ ಪೂರ್ಣ” ತೀರ್ಪು ಅಪರೂಪವೂ ಮತ್ತು ಸ್ವಾಗತಾರ್ಹವೂ ಆಗಿದೆ. “ಸಾರ್ವಜನಿಕ ಸೇವಕ”ರೆಂದು ಕರೆಸಿಕೊಳ್ಳಲ್ಪಡುವ ಪ್ರಬಲರು ಮಾಡುವ ಕಾನೂನು ಉಲ್ಲಂಘನೆಯನ್ನು ಬಯಲುಮಾಡಲು ನ್ಯಾಯಾಂಗ ಏನು ಮಾಡಬಹುದೆನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಈ ಏಕಸದಸ್ಯ ನ್ಯಾಯಾಧೀಶರು ತಾವು ವಿಚಾರಣೆ ನಡೆಸುತ್ತಿದ್ದ ಪ್ರಬಲ ರಾಜಕಾರಣಿಯಿಂದ ಯಾವುದೇ ರೀತಿ ಪ್ರಭಾವಕ್ಕೊಳಗಾಗದಿದ್ದದ್ದು ಮತ್ತು ಪ್ರತಿಯೊಂದು ಆರೋಪಗಳನ್ನು ಮತ್ತದರ ಸಮರ್ಥನೆಗಳನ್ನು ಪ್ರಬಲವಾಗಿ ಮಂಡಿಸಿರುವುದು ಅಧ್ಯಯನಕ್ಕೆ ಯೋಗ್ಯವಾದ ವಿಷಯವಾಗಿದೆ.

ಪ್ರಕರಣವನ್ನು ತಮಿಳುನಾಡಿನಿಂದ ಕರ್ನಾಟಕ್ಕೆ ವರ್ಗಾಯಿಸಿದ್ದೂ ಕೂಡಾ ಸಹಾಯಕ್ಕೆ ಬಂದಿರುವುದು ಸ್ಪಷ್ಟವಾಗಿದೆ. ಜಯಲಲಿತಾ ಅವರು ತನ್ನ ಆದಾಯದ ಕೆಲವನ್ನು ತನಗೆ ನೀಡಲಾದ “ಉಡುಗೊರೆ” ಯೆಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಈ ತೀರ್ಪು, ಸಾರ್ವಜನಿಕ ಸೇವಕರು ಪಡೆಯುವ “ಉಡುಗೊರೆ”ಯು ಪರೋಕ್ಷ ರೂಪದ ಲಂಚವೇ ಆಗುತ್ತದಾದ್ದರಿಂದ ಅವುಗಳನ್ನು ಕಾನೂನು ಬದ್ಧ ಆದಾಯ ಮೂಲವೆಂದು ಪರಿಗಣನೆ ಮಾಡಲಾಗದೆಂದು ಸ್ಪಷ್ಟೀಕರಿಸುತ್ತದೆ. ಇದು ಮತ್ತೊಂದು ಮಹತ್ವದ ಸಂಗತಿಯಾಗಿದೆ. ನಗದು ಅಥವಾ ವಸ್ತುಗಳ ರೂಪದಲ್ಲಿ ಪಡೆದ ಅಂಥ ಉಡುಗೊರೆಗಳನ್ನು ಕೇವಲ ಘೋಷಿಸಿಕೊಂಡ ಮಾತ್ರಕ್ಕೆ ಅವುಗಳು “ಕಾನೂನುಬದ್ಧ ಆದಾಯದ ಹಂತಕ್ಕೆ ಏರುವುದಿಲ್ಲವೆಂದು” ಕೂಡಾ ಈ ತೀರ್ಪು ಸೂಚಿಸುತ್ತದೆ.

ತಾವು ಪಡೆದುಕೊಳ್ಳುವ “ಉಡುಗೊರೆ”ಗೆ ಪ್ರತಿಯಾಗಿ ಅವರ ಪರವಾಗಿ ಕೆಲಸಗಳನ್ನು ಮಾಡಿಕೊಡುವುದು ಈ ದೇಶದ ಸಹಸ್ರಾರು “ಸಾರ್ವಜನಿಕ ಸೇವಕರ” ಅಘೋಷಿತ ಪದ್ದತಿಯಾಗಿರುವಾಗ ಮತ್ತು ತೆರಿಗೆ ಅಧಿಕಾರಿಗಳ ಗಮನದಿಂದ ತಮ್ಮ ಅಕ್ರಮ ಆಸ್ತಿಪಾಸ್ತಿಗಳನ್ನು ಬಚ್ಚಿಟ್ಟುಕೊಳ್ಳುವಲ್ಲಿ ಅಂಥವರು ಈಗಾಗಲೇ ಹಲವಾರು ಸೃಜನಶೀಲ ಮಾರ್ಗಗಳನ್ನು ಕಂಡುಕೊಂಡಿರುವಾಗ, ಈ ತೀರ್ಪು ಅವರ ಭ್ರಷ್ಟಾಚಾರಕ್ಕೆ ನಿಜಕ್ಕೂ ಕಡಿವಾಣ ಹಾಕಬಹುದೇ ಎಂಬುದನ್ನು ಕಾದು ನೋಡಬೇಕು. ಆದರೆ ಅದು ಒಂದನ್ನಂತೂ ಸಾಬೀತುಪಡಿಸುತ್ತದೆ. ಭ್ರಷ್ಟಾಚಾರ ನಿಗ್ರಹ ಕಾಯಿದೆ ಮತ್ತು ಅದರಂಥ ಇತರ ಕಾಯಿದೆಗಳಲ್ಲಿರುವ ಕಠಿಣ ಕ್ರಮಗಳನ್ನು ಭ್ರಷ್ಟ ವ್ಯಕ್ತಿಗಳ ವಿರುದ್ಧ ಬಳಸಲು ನಾಗರಿಕರು ಎಷ್ಟು ಸಮರ್ಥರಿರುತ್ತಾರೋ, ಕಾಯಿದೆಯೂ ಅಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರುತ್ತದೆ. ದುರದೃಷ್ಟವಶಾತ್, ಕಾನೂನು ವ್ಯವಸ್ಥೆಯ ಸುದೀರ್ಘ ಪ್ರಕ್ರಿಯೆ ಮತ್ತು ಅಂತಿಮ ತೀರ್ಪು ನೀಡಲು ಅದು ತೆಗೆದುಕೊಳ್ಳುವ ದೀರ್ಘ ಕಾಲಾವಧಿಗಳು ಭ್ರಷ್ಟಾಚಾರ ವಿರೋಧಿ ಕಾನೂನುಗಳು ಅನುಷ್ಠಾನಕ್ಕೆ ಬರಬೇಕೆಂದು ಬಯಸುವವರ ಬದ್ಧತೆಗೆ ತಣ್ಣೀರೆರಚುತ್ತದೆ.

ಕೃಪೆ: Economic and Political Weekly,  
      February 18, 2017. Vol 52. No. 7

ಆಜಾದಿ- ಭಾರತೀಯ ದಮನದಿಂದ ಸ್ವಾತಂತ್ರ್ಯ

ಅನು: ಶಿವಸುಂದರ್

ಕಾಶ್ಮೀರಿ ಮುಸ್ಲಿಮರು ಕಳೆದ 27 ವರ್ಷಗಳಿಂದ ಮಿಲಿಟರಿ ಅಡಳಿತವನ್ನು ಮತ್ತು ಭಾರತೀಯ ಸೈನಿಕ ಪಡೆಗಳಿಂದ ಎಲ್ಲಾ ಬಗೆಯ ದೌರ್ಜನ್ಯಗಳನ್ನೂ ಅನುಭವಿಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿನ ಭೀಕರ ಚಳಿ ಮೂಳೆಗಳನ್ನು ಕೊರೆಯುವಷ್ಟಿದ್ದರೂ ಅಲ್ಲಿನ ಜನರ ಇಚ್ಚಾಶಕ್ತಿಯನ್ನೇನೂ ತಣ್ಣಗಾಗಿಸಿಲ್ಲ. ಅಲ್ಲಿನ ಯಾವುದೋ ಜಾಗದ ಯಾವುದೋ ಮನೆಯಲ್ಲಿ ಬೆರಳೆಣಿಕೆಯಷ್ಟು ಮಿಲಿಟೆಂಟ್‍ಗಳು ಅಡಗಿಕೊಂಡಿದ್ದಾರೆಂದೂ ಭಾರತದ ಭದ್ರತಾ ಪಡೆಗಳ ನೂರಾರು ಸೈನಿಕರು ನುಗ್ಗಿದಾUಲೆಲ್ಲಾ ಸ್ಥಳೀಯ ಜನ ಕೊರೆವ ಚಳಿಯನ್ನೂ ಲೆಕ್ಕಿಸದೆ ಮಿಲೆಟೆಂಟ್‍ಗಳ ಬೆಂಬಲಕ್ಕೆ ಧಾವಿಸುತ್ತಾರೆ. ಮಾತ್ರವಲ್ಲದೆ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆ ಮಾಡದಂತೆ ತಡೆಯೊಡ್ಡುತ್ತಾ ಹಲವು ಬಾರಿ ಮಿಲಿಟೆಂಟ್‍ಗಳು ತಪ್ಪಿಸಿಕೊಳ್ಳಲೂ ಸಹಕರಿಸಿದ್ದಾರೆ. ಭಾರತದ ಭದ್ರತಾ ಪಡೆಗಳ ದೃಷ್ಟಿಯಲ್ಲಿ ಮಿಲಿಟೆಂಟ್‍ಗಳಿಗೆ ಬೆಂಬಲ ನೀಡುವ ಸ್ಥಳೀಯರು ನಿಶ್ಚಿತವಾಗಿ, “ದೇಶದ್ರೋಹಿಗಳೇ”. ಹೀಗಾಗಿ ಅವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಯಾವ ಹಿಂಜರಿಕೆಯೂ ಭದ್ರತಾ ಪಡೆಗಳಿಗೆ ಇರುವುದಿಲ್ಲ.

ವಸ್ತುಸ್ಥಿತಿಯೇನೆಂದರೆ ಬಹಳಷ್ಟು ಸ್ಥಳೀಯರು ಮಿಲಿಟೆಂಟ್‍ಗಳನ್ನು ರಕ್ಷಿಸಲು ತಮ್ಮ ಪ್ರಾಣಗಳನ್ನೂ ಪಣಕ್ಕಿಡಲು ಸಿದ್ದವಿರುತ್ತಾರೆ. ಹತ್ಯೆಗೀಡಾಗುವ ಪ್ರತಿಯೊಬ್ಬ ಮಿಲಿಟೆಂಟ್ ಕೂಡಾ ಕಾಶ್ಮೀರಿಯೇ ಆಗಿರುತ್ತಾನೆ. ಪಾಕಿಸ್ತಾನದ ಆಡಳಿತಕೊಳ್ಳಪಟ್ಟಿರುವ ಪಶ್ಚಿಮ ಕಾಶ್ಮೀರದ ದೃಷ್ಟಿಯಿಂದ ಹೇಳುವುದಾದರೆ ಬಹಳಷ್ಟು ಮಿಲಿಟೆಂಟ್‍ಗಳು ಭಾರತದ ಆಡಳಿತಕ್ಕೊಳಪಟ್ಟಿರುವ ಪೂರ್ವ ಕಾಶ್ಮೀರಿಗಳೇ ಆಗಿರುತ್ತಾರೆ. ಇದು ಕಾಶ್ಮೀರಿಗಳಲ್ಲಿ ತೀವ್ರವಾದ ಆಕ್ರೋಶವನ್ನುಂಟುಮಾಡಿದೆ. ಈ ಮಿಲಿಟೆಂಟ್ ಅಥವಾ ಹಲವು ಮಿಲಿಟೆಂಟ್‍ಗಳ “ಎನ್‍ಕೌಂಟರ್ ಹತ್ಯೆಗಳು, ಮತ್ತು ಆ ಹೆಸರಿನಲ್ಲಿ ವಿಶೇಷವಾಗಿ ಸಾಮಾನ್ಯ ನಾಗರಿಕರು ಹತ್ಯೆಗೊಳಗಾಗುವಂಥ ವಿದ್ಯಮಾನಗಳೇ ಕೊರೆಯುವ ಚಳಿಯನ್ನೂ ಲೆಕ್ಕಿಸದಂಥಾ ದಿಡೀರ್ ಸಾರ್ವಜನಿಕ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಅಂಥಾ ಪ್ರತಿರೋಧಗಳು ಹೆಚ್ಚೆಚ್ಚು ಕಸುವು ಪಡೆದುಕೊಳ್ಳುತ್ತಿದ್ದಂತೆ ಅವನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಪ್ರತಿಭಟಿನಾ ನಿರತ ಜನರ ಗುಂಪುಗಳ ಮೇಲೆ ಗುಂಡು ಹಾರಿಸುತ್ತಾರೆ. ಇದು ಮತ್ತಷ್ಟು ಪ್ರತಿಭಟನೆಗಳ ಸರಣಿಗೆ ಕಾರಣವಾಗುತ್ತದೆ.
military
ಕಾಶ್ಮೀರಿ ಪ್ರಜೆಗಳು 27 ವರ್ಷಗಳ ಕಾಲ ಮಿಲಿಟರಿ ಆಡಳಿತಕ್ಕೆ ಸದೃಶವಾದ ಆಡಳಿತಕ್ಕೆ ಗುರಿಯಾಗಿದ್ದಾರೆ; ಹೆಚ್ಚೂಕಡಿಮೆ ಇಡೀ ಪ್ರದೇಶವನ್ನೇ “ಗಲಭೆಗ್ರಸ್ಠ”ವೆಂದು ಪರಿಗಣಿಸಲಾಗಿದೆ. ಹೀಗಾಗಿ ನಾಗರಿಕರ ಮೇಲೆ ಭದ್ರತಾಪಡೆಗಳು ಎಸಗುವ ಬಲಾತ್ಕಾರ, ಚಿತ್ರಹಿಂಸೆ, ಅಪಹರಣ, ಅಥವಾ ಕೊಲೆಗಳಂತ ಅಪರಾಧಗಳ ವಿರುದ್ಧ ಯಾವ ಶಿಕ್ಷೆಗೂ ಗುರಿಯಾಗದ ರೀತಿ ಅವು ಕಾನೂನು ರಕ್ಷಣೆಯನ್ನು ಪಡೆದುಕೊಂಡಿವೆ. ಕಾಶ್ಮೀರದ ಅಸೋಸಿಯೇಷನ್ ಆಫ್ ಪೇರೆಂಟ್ಸ್ ಆಫ್ ಡಿಸ್‍ಅಪಿಯರ್ಡ್ ಪರ್ಸನ್ (ಕಾಣೆಯಾದ ವ್ಯಕ್ತಿಗಳ ಪೆÇೀಷಕರ ಸಂಘ-APDP) ಸಂಸ್ಥೆಯ 2017ರ ಜನವರಿ 10 ರ ಹೇಳಿಕೆಯ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ಕಳೆದ ಜುಲೈ 8ರಿಂದ ಪ್ರಾರಂಭಗೊಂಡು ಸಾಗುತ್ತಲೇ ಇರುವ ಜನ ಬಂಡಾಯದಲ್ಲಿ ಒಂದು ನೂರಕ್ಕೂ ಹೆಚ್ಚು ಜನಸಾಮಾನ್ಯರನ್ನು ಕೊಲ್ಲಲಾಗಿದೆ.

ಭದ್ರತಾಪಡೆಗಳು ಪ್ರತಿಭಟನಾನಿರತರ ಮೇಲೆ ಸಿಡಿಸಿದ ಪೆಲೆಟ್‍ಗುಂಡುಗಳಿಂದಾಗಿ ಒಂದು ಸಾವಿರಕ್ಕೂ ಹೆಚ್ಚು ಜನರ ಕಣ್ಣುಗಳಿಗೆ ಗಂಭೀರವಾದ ಹಾನಿಯಾಗಿದೆ ಅಥವಾ ಕಣ್ಣುಗಳನ್ನೇ ಕಳೆದುಕೊಂಡು ಕುರುಡರಾಗಿದ್ದಾರೆ. ಕರಾಳವಾದ ಸಾರ್ವಜನಿಕ ಸುರಕ್ಷಾ ಕಾಯಿದೆ-1978 (ಪಬ್ಲಿಕ್ ಸೇಫ್ಟಿ ಆಕ್ಟ್) ಯಡಿ ಅಪಾರ ಸಂಖ್ಯೆಯ ಜನರನ್ನು ಬಂಧಿಸಲಾಗಿದೆ. ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರವೇ ವಿವಿಧ ಅಪರಾಧಗಳಡಿ 8000ದಷ್ಟು ಜನರನ್ನು ಬಂಧಿಸಲಾಗಿದೆ. ಸುದೀರ್ಘ ಕರ್ಫ್ಯೂಗಳು, ಮಾಧ್ಯಮ ಮತ್ತು ಇಂಟರ್‍ನೆಟ್ ಮೇಲಿನ ಪ್ರತಿಬಂಧಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಗಳಂಥಾ ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧಗಳು ಕಾಶ್ಮೀರದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿವೆ.

ಕಾಣೆಯಾದ ವ್ಯಕ್ತಿಗಳ ತಂದೆತಾಯಿಗಳ ಮತ್ತು ಪ್ರೀತಿಪಾತ್ರರ ವೇದನೆಗಳು ಯಾರಿಗಾದರೂ ಅರ್ಥವಾಗುತ್ತದೆ. ಂPಆP ಸಂಸ್ಥೆಯ ಅಧ್ಯಯನದ ಪ್ರಕಾರ 1989ರಿಂದಾಚೆಗೆ 8000-10000 ಕಾಶ್ಮೀರಿಗಳು ಬ¯ವಂತಕ್ಕೆ ಗುರಿಯಾಗಿ ಕಾಣೆಯಾಗಿದ್ದಾರೆ ಮತ್ತು ನಂತರದಲ್ಲಿ ಸುಳ್ಳು ಎನ್‍ಕೌಂಟರಿನಲ್ಲಿ ಹತರಾಗಿದ್ದಾರೆ. ಈ ಹಿಂದಿನ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವೇ ಖುದ್ದು 3744 ಜನರು ಈ ರೀತಿ ಹತರಾಗಿರುವುದನ್ನು ಜಮ್ಮು-ಕಾಶ್ಮೀರ ವಿಧಾನ ಸಭೆಯಲ್ಲಿ ಒಪ್ಪಿಕೊಂಡಿತ್ತು. ಆದರೆ ಭಾರತ ಸರ್ಕಾರವು ಈ ಬಲಾತ್ಕಾರದ ಕಣ್ಮರೆ ಮತ್ತು ಹತ್ಯೆಗಳ ವಿದ್ಯಮಾನವನ್ನೇ ನಿರಾಕರಿಸುತ್ತಾ ಬಂದಿದೆ. ಅಷ್ಟು ಮಾತ್ರವಲ್ಲ, ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಈ ರೀತಿ ಹತ್ಯೆಗೆ ಗುರಿಯಾದವರೇ ಕಾರಣರೆಂದು ದೂರುತ್ತಾ, ಬಲಿಪಶುಗಳನ್ನೇ ಬೇಟೆಗಾರರೆಂದು ಆರೋಪಿಸುತ್ತಿದೆ.

ಜಮ್ಮು ಕಾಶ್ಮೀರದಲ್ಲಿ ಜಾರಿಯಲ್ಲಿರುವ ಈ ಬಲಾತ್ಕಾರದ ಕಣ್ಮರೆಯ ವಿರುದ್ಧ APDP ಸಂಸ್ಥೆಯು ಪ್ರತಿ ತಿಂಗಳ 10 ರಂದು ಮೌನ ಪ್ರತಿಭmನೆಯನ್ನು ಮಾಡುತ್ತದೆ ಮತ್ತು ಅದರ ಸ್ಮರಣೆಯಲ್ಲಿ ಒಂದು ಕ್ಯಾಲೆಂಡರನ್ನು ಪ್ರಕಟಿಸುತ್ತಿದೆ. ಅದು “ಬಲಾತ್ಕಾರವಾಗಿ ಕಣ್ಮರೆಯಾದವರ ಕುಟುಂಬಗಳ ವೇದನೆಗಳ ನೆನಪುಗಳು ಅಳಿದುಹೋಗದಂತೆ ಕಾಪಿಡುವ” ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ತದನಂತರದ ರಾಜ್ಯ ಸರ್ಕಾರಗಳು ಈ “ಬಲಾತ್ಕಾರದ ಕಣ್ಮರೆಯ” ವಿರುದ್ಧ ಈವರೆಗೆ ಶಾಸನ ಸಭೆಯಲ್ಲಿ ಯಾವುದೇ ಕಾನೂನುನನ್ನು ಅಂಗೀಕರಿಸದೆ ತಮ್ಮ ನಿರ್ದಯ ಕ್ರೌರ್ಯವನ್ನು ಮುಂದುವರೆಸಿವೆ. ತದನಂತರದ ಕೇಂದ್ರ ಸರ್ಕಾರಗಳು ಸಹ ಈ ರೀತಿಯ ಬಲಾತ್ಕಾರದ ಕಣ್ಮರೆಯಿಂದ ಜನರನ್ನು ರಕ್ಷಿಸುವ ಅಂತತರಾಷ್ಟ್ರೀಯ ಒಪ್ಪಂದಗಳನ್ನು ಅನುಮೋದಿಸದೆ ತಮ್ಮ ಸಂವೇದನಾ ಶೂನ್ಯತೆಯನ್ನು ಸಾಬೀತುಪಡಿಸಿವೆ.

militaryಮೂಲಭೂತವಾದ ವಿಷಯವೆಂದರೆ ಭಾರತದಲ್ಲಿರಲು ಇಚ್ಚಿಸದ ಬಹಳಷ್ಟು ಜನರಿರುವ ಕಾಶ್ಮೀರ ಕಣಿವೆಯ ಮೇಲೆ 27 ವರ್ಷಗಳಿಂದ ಭಾರತವು ಸೈನಿಕ ಬಲವನ್ನು ಪ್ರಯೋಗಿಸುತ್ತಿದೆ. ದೆಲ್ಲಿ ಸರ್ಕಾರವು ಈ ಎಲ್ಲವನ್ನೂ “ಭೌಗೋಳಿಕ ಸಮಗ್ರತೆ” ಮತ್ತು “ಧರ್ಮನಿರಪೇಕ್ಷತೆ”ಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತದೆ. ಕಾಶ್ಮೀರ ಕಣಿವೆಯಲ್ಲಿ ಸಂಭವಿಸುತ್ತಿರುವ ಎಲ್ಲದಕ್ಕೂ ಅದು ಪಾಕಿಸ್ತಾನವನ್ನು ದೂಷಿಸುತ್ತದೆ. ಅಲ್ಲಿ ನಡೆಯುತ್ತಿರುವ ಜನ ಬಂಡಾಯ ಮತ್ತು ಮಿಲಿಟೆಂಟ್ ದಾಳಿಗಳೆಲ್ಲವೂ ಪಾಕಿಸ್ತಾನ ಪ್ರಾಯೋಜಿತ ಎಂದು ಅದು ಭಾವಿಸುತ್ತದೆ. ಹಾಗೆ ನೋಡಿದಲ್ಲಿ ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯತೆಯು ಅಖಿಲ ಭಾರತ ರಾಷ್ಟ್ರೀಯತೆಯೇನೂ ಅಲ್ಲ; ಅದು ಭಾರತದ ಜನಸಂಖ್ಯೆಯ ಒಂದು ವಿಭಾಗವನ್ನು ಪ್ರತಿನಿಧಿಸುವ ಕೋಮುವಾದಿ ಹಿಂದೂತ್ವವಾದಿ ರಾಷ್ಟ್ರೀಯತೆಯಷ್ಟೇ ಆಗಿದೆ.

ಈಗ ಅಧಿಕಾರದಲ್ಲಿರುವ ಹಿಂದೂತ್ವವಾದಿ ರಾಷ್ಟ್ರೀಯವಾದಿಗಳು ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ತಮ್ಮ ಆಳ್ವಿಕೆಯನ್ನು ಕಾಶ್ಮೀರದ ಮೇಲೆ ಹೇರಲು ಯಾವ ಅಳುಕು-ಅಂಜಿಕೆಯನ್ನೂ ತೋರುತ್ತಿಲ್ಲ. ಕಾಂಗ್ರೆಸ್ ಪ್ರಣೀತ ರಾಷ್ಟ್ರೀಯವಾದವೂ ಸಹ ಇದಕ್ಕಿಂತ ಹೆಚ್ಚೇನೂ ಭಿನ್ನವಿರಲಿಲ್ಲ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಹಾಗೆ ನೋಡಿದಲ್ಲಿ ಪಾಕಿಸ್ತಾನೀ ರಾಷ್ಟ್ರೀಯವಾದವೂ ಇದಕ್ಕಿಂತ ಉತ್ತಮವೇನಲ್ಲ. ಇದೀಗ, ಹಿಂದೂತ್ವವಾದಿ ರಾಷ್ಟ್ರೀಯವಾದಿಗಳು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಲೋಚಿ ರಾಷ್ಟ್ರೀಯ ವಿಮೋಚನಾ ಹೋರಾಟವನ್ನು ಬೆಂಬಲಿಸುತ್ತೇವೆಂದು ಹೇಳುತ್ತಿರುವುದು ಅವರ ಬಗೆಗಿನ ಯಾವುದೇ ಪ್ರೀತಿ ಅಥವಾ ಸೌಹಾರ್ದತೆಯ ಕಾರಣಗಳಿಗಲ್ಲ ಎಂಬುದು ಸ್ಪಷ್ಟ.

ಮತ್ತೊಂದೆಡೆ ಪಾಕಿಸ್ತಾನ ರಾಷ್ಟ್ರೀಯವಾದಿಗಳು ಕಾಶ್ಮೀರವು ಭಾರತದಿಂದ ಆಜಾದಿಯನ್ನು ಪಡೆಯುವುದನ್ನು ಬೆಂಬಲಿಸುತ್ತೇವೆಂದು ಹೇಳುತ್ತಿರುವಾಗಲೇ ತಮ್ಮ ಭಾಗದಲ್ಲಿರುವ “ಆಜಾದ್ ಕಾಶ್ಮೀರವನ್ನು” ಹೆಚ್ಚೂ ಕಡಿಮೆ ಅಂತರಿಕ ವಸಾಹತುವನ್ನಾಗಿಸಿಕೊಂಡಿದ್ದಾರೆ. ಆದರೆ ದೆಲ್ಲಿ ಸರ್ಕಾರಗಳು ಕಳೆದ 27 ವರ್ಷಗಳಿಂದ ಕಾಶ್ಮೀರ ಕಣಿವೆಯ ಮೇಲೆ ನಿರಂತರ ಸೈನಿಕ ದುರಾಳ್ವಿಕೆಯನ್ನು ಹೇರಿರುವುದರಿಂದ, ಕಾಶ್ಮೀರಿ ಆಜಾದಿಯೆಂಬುದು, ಪ್ರಮುಖವಾಗಿ, ಭಾರತದ ದಮನದಿಂದ ಸ್ವತಂತ್ರವಾಗಬೇಕೆಂಬ ಕಾಶ್ಮೀರಿ ಜನತೆಯ ಹೃದಯಾಂತರಾಳದ ಕೂಗೇ ಆಗಿಬಿಟ್ಟಿದೆ.

February 18,2017. Vol 52, No. 7
Economic and Political Weekly

ಪರಿಸರದ ಮೇಲೆ ಟ್ರಂಪ್ ಧಾಳಿ

ಅನು: ಶಿವಸುಂದರ್
ಪರಿಸರ ಕಾಲುಷ್ಯದಿಂದ ಉಂಟಾಗುತ್ತಿರುವ ಹವಾಮಾನ ಬದಲಾವಣೆಯನ್ನು ವೈಟ್ ಹೌಸ್ ನಿರಾಕರಿಸುತ್ತಿರುವುದು ವಿಶ್ವಕ್ಕೊಂದು ಕೆಟ್ಟ ಸುದ್ದಿ.

ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇರಾಕ್, ಇರಾನ್, ಲಿಬ್ಯ, ಸೋಮಾಲಿಯ, ಸೂಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ನಾಗರಿಕರು 90/120 ದಿನಗಳ ಕಾಲ ಅಮೆರಿಕವನ್ನು ಪ್ರವೇಶಿಸದಂತೆ ಹೊರಡಿಸಿದ ಜನವರಿ 27 ರ “ಮುಸ್ಲಿಂ ಪ್ರತಿಬಂಧ” ಆಡಳಿತಾತ್ಮಕ ಆದೇಶದ ಮೇಲೆಯೇ ಜಗತ್ತಿನ ಗಮನ ಕೇಂದ್ರೀಕರಣವಾಗಿದ್ದರಿಂದ, ಪರಿಸರ ನಿಯಂತ್ರಣ ಸಂಬಂಧೀ ವಿಷಯಗಳ ಮೇಲೆ ಗಾಢವಾದ ಪ್ರಭಾವ ಮಾಡುವ ಅವರ ಇತರ ಆಡಳಿತಾತ್ಮಕ ಆದೇಶಗಳು ಜನರ ಗಮನವನ್ನು ತಪ್ಪಿಸಿಕೊಂಡುಬಿಟ್ಟವು. ಯಾವರೀತಿ ವೀಸಾ ಬ್ಯಾನ್ ಎಂಬುದು ಪ್ರಪಂಚಾದ್ಯಂತ ತನ್ನ ಪರಿಣಾಮವನ್ನು ತೋರಬಲ್ಲದೋ, ಅದೇರೀತಿ ಪರಿಸರಕ್ಕೆ ಸಂಬಂಧಪಟ್ಟಂತೆ ಅವರ ಕೆಲವು ಕ್ರಮಗಳು ಜಾಗತಿಕ ಪರಿಣಾಮವನ್ನುಂಟು ಮಾಡಲಿವೆ. ಅದರಲ್ಲೂ ಹಸಿರು ಮನೆ ಅನಿಲ (Green House Gas- GHG) ಸೂಸಿಕೆಗೆ ಸಂಬಂಧಪಟ್ಟಂತೆ ಅವರು ಸದ್ಯ ತೆಗೆದುಕೊಳ್ಳುತ್ತಿರುವ ಮತ್ತು ಊಹಿಸಬಲ್ಲಂತೆ ಭವಿಷ್ಯದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು ವಿಶೇಷವಾಗಿ ಕಳವಳಕಾರಿಯಾಗಿವೆ. ಅಮೆರಿಕವು ಈ ಸದ್ಯಕ್ಕೆ ಉಗುಳುತ್ತಿರುವ GHG ಯ ಪ್ರಮಾಣವನ್ನು ನೋಡುತ್ತಿದ್ದರೆ ಅದರಲ್ಲಿ ಯಾವುದೇ ಹೆಚ್ಚಳವಿರಲಿ ಈಗಿರುವ ಮಟ್ಟದಲ್ಲೇ ಉಳಿದುಕೊಂಡರೂ ಅದು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಹೆಚ್ಚಳವನ್ನು ನಿಯಂತ್ರಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ.

ಪರಿಸರವಾದಿಗಳ ಬಗ್ಗೆ ಟ್ರಂಪ್‍ಗೆ ಇದ್ದಂಥ ತಿರಸ್ಕಾರ ಮನೋಭಾವ ಅವರ ಚುನಾವಣಾ ಪ್ರಚಾರದ ಸಂದರ್ಭದಿಂದಲೂ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ಯಾರನ್ನು ಅವರು ತಮ್ಮ ಸಲಹೆಗಾರರನ್ನಾಗಿ ನಿಯುಕ್ತಗೊಳಿಸಿಕೊಳ್ಳುತ್ತಿದ್ದಾರೆ ಎಂಬುದು ಅಂಥಾ ಆಶ್ಚರ್ಯವನ್ನೇನೂ ತರುತ್ತಿಲ್ಲ. ಉದಾಹರಣೆಗೆ ಸ್ಕಾಟ್ ಪ್ರುಯಿಟ್ ಅವರು ಪರಿಸರ ರಕ್ಷಣಾ ಏಜೆನ್ಸಿಯ(Environment Protection Agency-EPA) ಕಾರ್ಯಭಾರವನ್ನು ವಹಿಸಿಕೊಳ್ಳುವವರೆಗೆ ಮಾತ್ರ ಅದರ ಹಂಗಾಮಿ ಮುಖ್ಯಸ್ಥರಾಗಿರುವ ಮೈರಾನ್ ಎಬೆಲ್ ಅವರನ್ನು ಟ್ರಂಪ್ ತಮ್ಮ ಸಲಹೆಗಾರರನ್ನಾಗಿ ಮಾಡಿಕೊಂಡಿದ್ದಾರೆ. ಎಬೆಲ್ ಅವರು ಎಂಥಾ ಮಹಾಶಯರೆಂದರೆ ಅಮೆರಿಕದ ಅತ್ಯಂತ ಪ್ರತಿಗಾಮಿ ಕಾಂಪಿಟೇಟೀವ್ ಎಂಟರ್ಪ್ರೈಸ್ ಇನ್ಸ್ಟಿಟ್ಯೂಟ್ ನ ನಿರ್ದೇಶಕರಲ್ಲೊಬ್ಬರಾಗಿದ್ದು ಪರಿಸರ ಚಳವಳಿಯನ್ನು “ಆಧುನಿಕ ಜಗತ್ತಿನಲ್ಲಿ ಸ್ವಾತಂತ್ರ್ಯ ಮತ್ತು ಸಮೃದ್ಧಿಗೆ ಅತ್ಯಂತ ದೊಡ್ಡ ಅಪಾಯ”ವೆಂದು ಬಣ್ಣಿಸಿರುವುದು ದಾಖಲಾಗಿದೆ. ಮತ್ತೊಬ್ಬರಾದ ಪ್ರುಯಿಟ್ ಅವರು ಹವಾಮಾನ ಬದಲಾವಣೆಯನ್ನು ನಿರಾಕರಿಸುತ್ತಾರಲ್ಲದೆ ಒಕ್ಲಾಹಾಮ ರಾಜ್ಯದ ಅಟಾರ್ನಿ ಜನರಲ್ ಆಗಿದ್ದ ಕಾಲದಲ್ಲಿ ತೈಲ ಕಂಪನಿಗಳ ಪರವಾಗಿ ಪರಿಸರ ರಕ್ಷಣಾ ಏಜೆನ್ಸಿಯ ವಿರುದ್ಧವೇ 14 ದಾವೆಗಳನ್ನು ಹೂಡಿದ್ದರು. ಇಂಥಾ ಜನಗಳೇ ಪರಿಸರವನ್ನು ಕಾಪಾಡಲು ನಿಯುಕ್ತರಾಗಿದ್ದಾರೆಂಬುದು ಭವಿಷ್ಯದಲ್ಲಿ ಏನು ಕಾದಿದೆ ಎಂಬುದಕ್ಕೆ ಸೂಚನೆಗಳಾಗಿವೆ.

donald-trumpಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ ತರುಣದಲ್ಲೇ ಟ್ರಂಪ್ ತೆಗೆದುಕೊಂಡ ಕ್ರಮಗಳೆಂದರೆ -EPA ಗೆ ಅನುದಾನ ತಡೆಹಿಡಿದಿದ್ದು (ವಾಸ್ತವವಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಈ ಸಂಸ್ಥೆಯನ್ನೇ ರದ್ದು ಮಾಡಬೇಕೆಂದು ಘೋಷಿಸಿದ್ದರು) ಮತ್ತು 15000 ಇಂಜನಿಯರ್ ಮತ್ತು ವಿಜ್ನಾನಿಗಳಿರುವ ಆ ಸಂಸ್ಥೆಯ ಸಿಬ್ಬಂದಿ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸಲು ಸೂಚಿಸಿರುವುದು. ಅಲ್ಲದೆ -EPA ಸಿಬ್ಬಂದಿಗಳು ತಮ್ಮ ಸಂಶೋಧನೆಯ ಬಗ್ಗೆ ಮತ್ತದರ ಫಲಿತಾಂಶಗಳ ಕುರಿತು ಮಾಧ್ಯಮವನ್ನೂ ಒಳಗೊಂಡಂತೆ ಯಾರಜೊತೆಗೂ ಮಾತಾಡಬಾರದೆಂದು ಸಿಬ್ಬಂದಿಗಳ ಬಾಯಿಗೆ ಬೀಗ ಹಾಕುವ ಮತ್ತೊಂದು ಕಟ್ಟಪ್ಪಣೆಯನ್ನೂ ಹೊರಡಿಸಿದ್ದಾರೆ. ಇದರ ಅರ್ಥವೇನೆಂದರೆ, ಉದಾಹರಣೆಗೆ, GHGಯ ಹೊರಸೂಸುವಿಕೆಯ ಇತ್ತೀಚಿನ ಪ್ರಮಾಣವೆಷ್ಟು ಎಂಬುದು ಸಾರ್ವಜನಿಕರಿಗೆ ಎಂದಿಗೂ ತಿಳಿಯುವುದೇ ಇಲ್ಲ. ಹಾಗೆಯೇ ವೈಟ್ ಹೌಸಿನ ಹವಾಮಾನ ಬದಲಾವಣೆಯ ಕುರಿತಾದ ಅಂತರ್ಜಾಲ ಪುಟದ ತಲೆಬರಹವನ್ನು “An  America  First  Energy  Plan ” (ಮೊದಲು ಅಮೆರಿಕ- ಶಕ್ತಿ ಇಂಧನ ಯೋಜನೆ) ಎಂದು ಬದಲಾಯಿಸಲಾಗಿದೆಯಲ್ಲದೆ ಅದರಲ್ಲಿ ಹವಾಮಾನ ಬದಲಾವಣೆಯ ಪ್ರಸ್ತಾಪವೇ ಇಲ್ಲ. ಟ್ರಂಪ್ ಪ್ರಕಾರ ಈ ಶಕ್ತಿ ಇಂಧನ ಯೋಜನೆಯು, ಈವರೆಗೆ ನೆನೆಗುದಿಗೆ ಬಿದ್ದಿದ್ದ “ ಅಮೆರಿಕ ಒಕ್ಕೂಟದ ಭೂಭಾಗದಲ್ಲಿರುವ ಸುಮಾರು 50 ಟ್ರಿಲಿಯನ್ ಡಾಲರ್ ಮೌಲ್ಯದ ಜೇಡಿಪದರಗಲ್ಲು, ತೈಲ ಮತ್ತು ನೈಸರ್ಗಿಕ ಸಂಪನ್ಮೂಲ ಬಳಕೆಗೆ ಚಾಲ್ತಿ ನೀಡುತ್ತದೆ. ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಈ ಹಿಂದಿನ ಆಡಳಿತವು ಹವಾಮಾನ ಕ್ರಿಯಾ ಯೋಜನೆ ಮತ್ತು ಪರಿಶುದ್ಧ ಶಕ್ತಿಇಂಧನ ಯೋಜನೆಯಡಿ ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತ್ತೋ ಅವೆಲ್ಲವನ್ನು ಟ್ರಂಪ್ ಆಡಳಿತ ಅತ್ಯಂತ ತ್ವರಿತವಾಗಿ ಕಿತ್ತುಹಾಕುತ್ತಿದೆ ಮತ್ತು ಅಮೆರಿಕನ್ನರಿಗೆ ಹೆಚ್ಚೆಚ್ಚು ಉದ್ಯೋಗ ಮತ್ತು ಅತ್ಯಧಿಕ ಲಾಭಗಳನ್ನು ದಕ್ಕಿಸಿಕೊಳ್ಳಬಹುದೆಂಬ ನೆಪವೊಡ್ಡಿ ಭೂಗರ್ಭದ ಇಂಧನ ಉದ್ಯಮದ ಲಾಬಿಯು ಹೆಚ್ಚಿನ ನಿರ್ಬಂಧಗಳಿಲ್ಲದೆ ವ್ಯವಹಾರ ನಡೆಸಿಕೊಳ್ಳಲು ದಾರಿ ಮಾಡಿಕೊಡುತ್ತಿದೆ.
donald-trump

ಇದು ಕೇವಲ ಅಮೆರಿಕದ ಮೇಲೆ ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಲಿದೆ. ಹಸಿರುಮನೆ ಅನಿಲಗಳುಈ ಪ್ರಮಾಣದಲ್ಲಿ ಸಂಗ್ರಹವಾಗಲು ಔದ್ಯೋಗಿಕ ದೇಶಗಳೆ ಕಾರಣವೆಂದು ಗುರುತಿಸಿ ಆ ದೇಶಗಳ ಉಊಉ ಹೊರಸೂಸುವಿಕೆಯ ಪ್ರಮಾಣದ ಮೇಲೆ ನಿರ್ಬಂಧ ಹೇರುತ್ತಿದ್ದ ಮತ್ತು ಕಾನೂನಾತ್ಮಕವಾಗಿ ಎಲ್ಲರೂ ಬದ್ಧರಿರಬೇಕಿದ್ದ ಕ್ಯೋಟೋ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಲೇ ಇಲ್ಲ. ಆದರೆ 2015ರಲ್ಲಿ, ಒಬಾಮಾ ಆಡಳಿತಾವಧಿಯಲ್ಲಿ ಹಸಿರುಮನೆ ಅನಿಲ ಸೂಸಿಕೆಯನ್ನು ಕಡಿತಗೊಳಿಸುವಲ್ಲಿ ಪ್ರತಿ ದೇಶವು ತನಗೆ ತಾನೇ ನಿಗದಿ ಪಡಿಸಿಕೊಳ್ಳುವ “ಉದ್ದೇಶಿತ ರಾಷ್ಟ್ರೀಯವಾಗಿ ನಿಗದಿತಗೊಂಡ ಬದ್ಧತೆ” (Intended Nationally Determined Commitments- INDC) ಒಪ್ಪಂದವನ್ನು ಮುಂದಿಟ್ಟ ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕವು ಒಳಪಟ್ಟಿತು. ಅದರ ಪ್ರಕಾರ ಅಮೆರಿಕವು 2030ರ ವೇಳೆಗೆ 2005ರ ತನ್ನ ಕಾರ್ಬನ್ ಡಯಾಕ್ಸೈಡ್ ಸೂಸಿಕೆಯ ಶೇ.30ರಷ್ಟನ್ನು ಕಡಿತಗೊಳಿಸುವುದಾಗಿ ವಚನವಿತ್ತಿದ್ದಲ್ಲದೆ ವರದಿಗಳ ಪ್ರಕಾರ ಈಗಾಗಲೇ ಈ ಗುರಿಯ ಶೇ.27ರಷ್ಟನ್ನು ಸಾಧಿಸಿದೆ.

ಆದರೆ ಶೇ.26ರಷ್ಟು GHG ಯನ್ನು ಹೊರಸೂಸುವ ಸಾರಿಗೆ ವ್ಯವಸ್ಥೆಯ ಮತ್ತು ಶೇ.9 ರಷ್ಟು ಸೂಸಿಕೆಗೆ ಕಾರಣವಾಗುವ ಕೃಷಿ ಪದ್ಧತಿಯ ವಿಷಯದಲ್ಲಾಗಲೀ ಈವರೆಗೆ ಯಾವುದೇ ಗಣನೀಯ ಸುಧಾರಣೆಯಾಗಿಲ್ಲ.

ಟ್ರಂಪ್ ತನ್ನ ಚುನಾವಣಾ ಪ್ರಚಾರದಲ್ಲಿ ಬೆದರಿಸಿದಂತೆ ಅಮೆರಿಕ ಪ್ಯಾರಿಸ್ ಒಪ್ಪಂದದಿಂದ ಹೊರಬರದಿದ್ದರೂ, ಅದು ತನ್ನ ಬದ್ಧತೆಗಳಿಂದ ಹಿಂದೆ ಸರಿಯುವ ಎಲ್ಲಾ ಸಾಧ್ಯತೆಗಳಿವೆ. ವಿಶ್ವ ಸಂಪನ್ಮೂಲ ಸಂಸ್ಥೆ (World Resource Institute- WRI) ಪ್ರಕಾರ ಪ್ರಪಂಚದ ಎಲ್ಲಾ ದೇಶಗಳು ತಮ್ಮ ತಮ್ಮ ದೇಶಗಳ GHG  ಸೂಸಿಕೆಯ ಪ್ರಮಾಣ ನಿಯಂತ್ರಣದ ಬಗ್ಗೆ ನೀಡಿದ ವಚನದಂತೆ ನಡೆದುಕೊಂಡರೂ ಜಗತ್ತಿನ ತಾಪಮಾನವೂ 2 ಡಿಗ್ರಿ ಸೆಲ್ಷಿಯಸ್ನಷ್ಟು ಏರದಂತೆ ತಡೆಹಿಡಿಯುವುದು ಕಷ್ಟವಿದೆ. ಹೀಗಿರುವಾಗ ವಿಶ್ವದ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶವು ತನ್ನ ಬದ್ಧತೆಗಳ ಬಗ್ಗೆ ನಿಷ್ಕಾಳಜಿ ತೋರಲು ನಿರ್ಧರಿಸುವುದು ಅತ್ಯಂತ ಅಪಾಯಕಾರಿ ಪರಿಣಾಮವನ್ನುಂಟು ಮಾಡಲಿದೆ.

ಹವಾಮಾನ ಬದಲಾವಣೆಯನ್ನು ತಡೆಯುವದರ ಬಗೆಗೆ ಟ್ರಂಪ್ ತೋರುತ್ತಿರುವ ನಿಷ್ಕಾಳಜಿಯಷ್ಟೇ ಅಪಾಯಕಾರಿಯಾದದ್ದು ಈ ಸಂಬಂಧೀ ನಿಧಿಗೆ ತನ್ನ ಕೊಡುಗೆಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಪ್ಯಾರಿಸ್ ಒಪ್ಪಂದದ ವೇಳೆ ಬಡ ದೇಶಗಳು ಹವಾಮಾನ ಬದಲಾವಣೆಗಳಿಗೆ ಹೊಂದಿಕೊಂಡು ಪರಿಶುದ್ಧ ಇಂಧನಗಳನ್ನು ಅಳವಡಿಸಿಕೊಳ್ಳಲು ಸಮರ್ಥರನ್ನಾಗಿಸುವ ಉದ್ದೇಶದಿಂದ ಸ್ಥಾಪಿಸಲಾಗುತ್ತಿರುವ 100 ಬಿಲಿಯನ್ ಡಾಲರ್‍ಗಳ “ವಿಶ್ವಸಂಸ್ಥೆಯ ಹಸಿರು ಹವಾಮಾನ ನಿಧಿ”ಗೆ 2020ರ ವೇಳೆಗೆ 3 ಬಿಲಿಯನ್ ಡಾಲರ್ ಕೊಡುಗೆ ನೀಡಲು ಅಮೆರಿಕ ಒಪ್ಪಿಕೊಂಡಿತ್ತು. ಈವರೆಗೆ ಅದು ಕೇವಲ 500 ಮಿಲಿಯನ್ ಡಾಲರ್‍ಗಳನ್ನು ಮಾತ್ರ ಪಾವತಿಸಿದೆ. ಇದಕ್ಕೆ ಒಂದು ಕಾರಣ ರಿಪಬ್ಲಿಕನ್ನರೇ ಹೆಚ್ಚಿರುವ ಅಮೆರಿಕದ ಕಾಂಗ್ರೆಸ್ ಇದಕ್ಕೆ ತೋರುತ್ತಿರುವ ವಿರೋಧ. ಹವಾಮಾನ ಬದಲಾವಣೆಯ ವಿದ್ಯಮಾನದ ಕುರಿತು ಟ್ರಂಪ್ ಆಡಳಿತದ ಧೋರಣೆಯನ್ನು ನೋಡಿದರೆ ನಿಧಿಯ ಕೊಡುಗೆಯ ವಿಷಯದಲ್ಲಿ ಅಮೆರಿಕವು ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಂತೆ ತೋರುವುದಿಲ್ಲ.

ಹವಾಮಾನ ಬದಲಾವಣೆಯ ವಿದ್ಯಮಾನವನ್ನೇ ನಿರಾಕರಿಸುವ ವ್ಯಕ್ತಿ ವೈಟ್ ಹೌಸಿನಲ್ಲಿ ಕೂತಿರುವುದು ಜಗತ್ತಿಗೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಕೆಟ್ಟ ಸುದ್ದಿಯೆಂಬುದು ಹಲವು ರೀತಿಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ. ಮೊದಲಿಗೆ ಟ್ರಂಪ್ ಆಡಳಿತವು ಭೂಗರ್ಭ ಇಂಧನಗಳ ಬಳಕೆಯ ಹೆಚ್ಚಳವನ್ನು ಪೆÇ್ರೀತ್ಸಾಹಿಸುತ್ತದೆ. ಮತ್ತು ಆ ಮೂಲಕ ಎಲ್ಲಾ ಪರಿಸರ ಸಂಬಂಧೀ ನಿಯಂತ್ರಣಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡುವುದಿಲ್ಲ. ಹೀಗಾಗಿ ಪ್ಯಾರಿಸ್ ಒಪ್ಪಂದದಲ್ಲಿ ಅಮೆರಿಕವು ಉಊಉ ಸೂಸಿಕೆಯ ನಿರ್ಬಂಧ ಪ್ರಮಾಣದ ಕುರಿತು ತನಗೇ ತಾನೇ ನಿಗದಿಪಡಿಸಿಕೊಂಡ ಮಟ್ಟವನ್ನು ಮುಟ್ಟುವುದಿಲ್ಲ. ಎರಡನೆಯದಾಗಿ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರಾರಂಭಗೊಂದು ಈಗಾಗಲೇ ಮನೆಬಾಗಿಲನ್ನು ತಟ್ಟುತ್ತಿರುವ ಮಹಾನ್ ಪರಿಸರ ವಿಪತ್ತನ್ನು ತಡೆಯಲು ಜಾರಿಯಲ್ಲಿದ್ದ ಜಾಗತಿಕ ಪ್ರಯತ್ನಗಳಿಗೆ ಇದು ದೊಡ್ಡ ಹಿನ್ನೆಡೆಯನ್ನುಂತೂ ಮಾಡುತ್ತದೆ.

ಆಂಶಿಕವಾಗಿ ತಾನೂ ಕಾರಣವಾಗಿರುವ ಯುದ್ಧಗಳಿಂದ ಜರ್ಝರಿತವಾದ ದೇಶಗಳನ್ನು ತೊರೆದು ಆಶ್ರಯ ಕೋರಿ ಬರುತ್ತಿರುವ ಜನರಿಗೆ ಬಾಗಿಲು ಮುಚ್ಚಿ ವಾಪಸ್ ಅಟ್ಟುತ್ತಿರುವ ದೇಶವೇ, ಬಡದೇಶಗಳ ಕೋಟ್ಯಾಂತರ ಜನತೆಯನ್ನು ಪರಿಸರ ನಿರಾಶ್ರಿತರನ್ನಾಗಿಯೂ ಮಾಡುತ್ತಿರುವುದು ಎಂಥಾ ವಿಪರ್ಯಾಸ..

ಕೃಪೆ: Economic and Political Weekly
February 11, 2017, Vol 52, No. 6