ಗುರುವಾರ, ಜುಲೈ 30, 2015

ರೈತರ ಆತ್ಮಹತ್ಯೆ ಮತ್ತು ಜನಪದ

-ಸುರೇಂದ್ರ ಕೌಲಗಿ
ಸೌಜನ್ಯ: ಪ್ರಜಾವಾಣಿ
ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಯಲ್ಲಿನ ಲೋಪದೋಷಗಳು ಕಾರಣವೆಂದು ಹೇಳಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಹಾಗೂ ಖಾಸಗಿ ಲೇವಾದೇವಿಗಾರರು ನೀಡುವ ಸಾಲ, ಬೆಳೆಗಳಿಗೆ ಮತ್ತು ತರಕಾರಿಗೆ ವೈಜ್ಞಾನಿಕ ಬೆಲೆ ಸಿಗದಿರುವುದು, ವಿದ್ಯುತ್‌ ಪೂರೈಕೆಯಲ್ಲಿಯ ವ್ಯತ್ಯಯ, ಕಳಪೆ ಬೀಜ ಪೂರೈಕೆ, ರೈತರು ಉಪಯೋಗಿಸುವ ವಿವಿಧ ಪ್ರಕಾರದ ಯಂತ್ರೋಪಕರಣಗಳು ಆಗಾಗ್ಗೆ ಕೆಟ್ಟು ಅವುಗಳನ್ನು ಸುಸ್ಥಿತಿಗೆ ತರುವುದಕ್ಕೆ ಆಗುವ ಖರ್ಚು, ಸಮಯ ನಷ್ಟ ಕೂಡ ಬಹುಮಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಇಂತಹ ವಿವಿಧ ಕಾರಣಗಳನ್ನು ಗಮನಿಸಿದಾಗ ರೈತರ ಆತ್ಮಹತ್ಯೆಗೆ ಸಾಂಘಿಕ ಸಂಸ್ಥೆಗಳೇ ಹೆಚ್ಚಾಗಿ ಕಾರಣವಾಗಿರುವುದು  ತಿಳಿದುಬರುತ್ತದೆ.
ಗ್ರಾಮಗಳು ವ್ಯವಸಾಯದ ಕೇಂದ್ರ ಬಿಂದು ಮತ್ತು ರೈತರೇ ಪ್ರಧಾನ ಪಾತ್ರಧಾರಿಗಳು. ವ್ಯವಸಾಯ, ರೈತರು ಹಾಗೂ ಅವರ ಜೀವನದೊಂದಿಗೆ ಬೆಳೆದುಕೊಂಡು ಬಂದಿರುವ ದೀರ್ಘ ಕಾಲದ ಸಂಸ್ಕೃತಿ ಎಲ್ಲವೂ ಸೇರಿ ಜನಪದವಾಗುತ್ತದೆ. ಕೂಡಿ ಇರುವಿಕೆ, ಸಹಕಾರ ಮತ್ತು ಪರಸ್ಪರರ ಸುಖ ದುಃಖಗಳಲ್ಲಿ ಪಾಲ್ಗೊಳ್ಳುವಿಕೆ ಜನಪದದ ಮುಖ್ಯ ಲಕ್ಷಣ. ಜೀವನಾವಶ್ಯಕವಾದ ಎಲ್ಲ ವಸ್ತುಗಳಲ್ಲಿ ಸ್ವಾವಲಂಬನೆ ಹೊಂದುವುದು ಜನಪದದ ಬೆನ್ನೆಲುಬು. ತನ್ನ ಮಕ್ಕಳಿಗೆ ತನ್ನ ಜೀವನಶೈಲಿಗೆ ಅನುರೂಪವಾದ ಶಿಕ್ಷಣ ಕೊಡುವುದು ಜೀವಂತ ಜನಪದದ ಲಕ್ಷಣ.
ಜಾಗತೀಕರಣ ಮತ್ತು ಕೈಗಾರಿಕೀಕರಣವು ಜೀವನದ ಎಲ್ಲ ಚಟುವಟಿಕೆಗಳನ್ನೂ ವಾಣಿಜ್ಯೀಕರಣಗೊಳಿಸಿದೆ. ಇದರಲ್ಲಿ ಅನ್ನ ಮತ್ತು ಶಿಕ್ಷಣ ಮುಖ್ಯವಾಗಿವೆ. ಆದ್ದರಿಂದ ಮಣ್ಣಿನ ಮಕ್ಕಳ ಗ್ರಾಮಗಳು ಒಟ್ಟು ಒಂದು ಜನಪದವಾಗದೆ ಪರಸ್ಪರ ವಿರೋಧಾಸಕ್ತಿ ಹೊಂದಿರುವ ಮತ್ತು ವಾಣಿಜ್ಯ ವ್ಯವಹಾರದ ಮುಖ್ಯ ಧಾತುವಾದ ಹಣದ ಮೋಹಕ್ಕೆ ಸಿಕ್ಕ ಜನ ವಾಸಿಸುವ ಸಮೂಹಗಳಾಗಿವೆ. ಪರಿಣಾಮವಾಗಿ ಗ್ರಾಮಗಳಲ್ಲಿರುವ ಜನರಲ್ಲಿ ಪರಸ್ಪರ ಸಹಕಾರ, ಸುಖ ದುಃಖ ಹಂಚಿಕೊಳ್ಳುವ ಮನೋಭಾವ ಕಡಿಮೆಯಾಗಿದೆ.
ಎಲ್ಲರನ್ನೂ ಕೂಡಿಡುವ ಸಾಂಸ್ಕೃತಿಕ ಬೇರುಗಳು ಒಣಗುತ್ತಿವೆ. ಸಂಸ್ಕೃತಿಯ ಸ್ಥಾನವನ್ನು ಮೂಢನಂಬಿಕೆಗಳು ಆವರಿಸಿಕೊಳ್ಳುತ್ತಿವೆ. ಕೃಷಿಗೆ ಪೂರಕವಾಗಿದ್ದ ಗೋವುಗಳ ತಾಣದಲ್ಲಿ ಟಿ.ವಿ. ಮತ್ತು ಡೈನಿಂಗ್ ಟೇಬಲ್‌ಗಳು ಬಂದಿವೆ. ಮಳೆ ನೀರು ಸಂಗ್ರಹಕ್ಕೆ ಸಹಕಾರಿಯಾಗಿದ್ದ ತೊಟ್ಟಿ ಮನೆಗಳು ಸಿಮೆಂಟ್, ಕಬ್ಬಿಣದ ಕಟ್ಟಡಗಳಾಗಿ ಪರಿವರ್ತಿತಗೊಂಡಿವೆ. ದೇಸಿ ಭಾಷೆ ಮತ್ತು ವ್ಯವಹಾರ ಕಲಿಸುತ್ತಿದ್ದ ಜಗುಲಿ ಶಾಲೆಗಳು ವಿದೇಶಿ ಭಾಷೆ ಕಲಿಸುವ, ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಚಿಂತನೆ ಬಿತ್ತರಿಸುವ ಕಾನ್ವೆಂಟ್ ಶಾಲೆಗಳಾಗಿ ಅವತಾರತಾಳಿವೆ.
ಸಮೂಹ ಭಾವನೆ ಅಥವಾ ಕೌಟುಂಬಿಕ ಭಾವನೆ ಇಲ್ಲದ ಸ್ಥಳಗಳು ಆತ್ಮಹತ್ಯೆಗೆ ಕಾರಣವಾಗುತ್ತವೆ. ವ್ಯಕ್ತಿಯ ಕಷ್ಟ ಸುಖ  ಕೇಳಿಕೊಳ್ಳಲು, ಆಪ್ತ ಸಲಹೆ, ಧೈರ್ಯ ತುಂಬಲು ಯಾರೂ ಇಲ್ಲದಾದಾಗ ಕಷ್ಟಕ್ಕೆ ಸಿಲುಕಿದ ವ್ಯಕ್ತಿ ಹತಾಶನಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾನೆ.
ಭಾರತದ ಕೃಷಿಯು ಮಳೆಯೊಂದಿಗಿನ ಜೂಜಾಟ ಎಂಬುದು ಎಲ್ಲರಿಗೂ ಗೊತ್ತಿದೆ. ಜೂಜಾಟದಲ್ಲಿ ಸಾಲವಾಗುತ್ತದೆ, ಮಾನ-ಮರ್ಯಾದೆ ಹರಾಜಾಗುತ್ತದೆ. ಕುಟುಂಬ ಜೀವನವೇ ಅಸ್ತವ್ಯಸ್ತಗೊಳ್ಳುತ್ತದೆ. ಜೂಜಾಟದಂತಿರುವ ಕೃಷಿಯನ್ನೇ ನಂಬಿರುವ ರೈತರಲ್ಲೇ ಆತ್ಮಹತ್ಯೆಗಳು ಹೆಚ್ಚಾಗಿ ಆಗುತ್ತಿರುವುದು. ಸಾಲ ಮಾಡಿ ಕೃಷಿ ಮಾಡಿದ ರೈತನ ಸಾಲದ ತೀರುವಳಿಗಾಗಿ ಅವನ ಕುಟುಂಬ ಪೂರ್ಣ ಪ್ರಮಾಣದಲ್ಲಿ ಸಹಕರಿಸಿದರೆ ಅವನು ಆತ್ಮಹತ್ಯೆ ನಿರ್ಧಾರ ಮಾಡುವುದಿಲ್ಲ. ಒಂದು ವೇಳೆ ಆತ ಕೃಷಿಯೇತರ ಕಾರಣಗಳಿಗಾಗಿ ಸಾಲ ಮಾಡಿದ್ದರೆ ಅವನ ಕುಟುಂಬ ಅವನನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತದೆ.
ಇದೇ ಸೂತ್ರ ಜನಪದಕ್ಕೂ ಅನ್ವಯಿಸುತ್ತದೆ. ಜನಪದದಲ್ಲಿರುವ ಪ್ರತಿ ರೈತನ ಕಷ್ಟ ಸುಖಗಳನ್ನು ಎಲ್ಲರೂ ಆಲಿಸುತ್ತಾರೆ. ಅವರೆಲ್ಲರೂ ಮೂಲತಃ ವ್ಯವಸಾಯಗಾರರೇ ಆಗಿರುವುದರಿಂದ ವ್ಯವಸಾಯಕ್ಕಾಗುವ ಖರ್ಚು ವೆಚ್ಚ, ಆದಾಯ-ನಷ್ಟಗಳನ್ನು ಚೆನ್ನಾಗಿ ಬಲ್ಲವರಾಗಿರುತ್ತಾರೆ. ಆಗಾಗ್ಗೆ ನಡೆಯುವ ಜನಪದದ ಸಮೂಹ ಸಭೆಯಲ್ಲಿ ರೈತರ ಸಾಲ ಮತ್ತು ಇತರ ಕಷ್ಟ ಕಾರ್ಪಣ್ಯಗಳು ಮುನ್ನೆಲೆಗೆ ಬರುತ್ತವೆ. ಖಾಸಗಿಯಾಗಿ ಯಾವ ಮಹತ್ವದ ವಿಷಯವೂ ಗೋಪ್ಯವಾಗಿ ಉಳಿಯುವುದಿಲ್ಲ. ಆಗ ಎಲ್ಲರೂ ಸೇರಿ ರೈತರ ಸಾಲ ಇಡೀ ಸಮುದಾಯದ ಸಾಲವೆಂದೂ, ಅವನ ಕಷ್ಟಕಾರ್ಪಣ್ಯಗಳು ಸಮುದಾಯದ ಕಷ್ಟಕಾರ್ಪಣ್ಯಗಳೆಂದೂ ಅಂಗೀಕರಿಸುತ್ತಾರೆ.  ಸಾಲಗಾರರನ್ನು ಸಭೆಗೆ ಕರೆಸಿ ಪ್ರತಿಯೊಬ್ಬ ರೈತನ ಸಾಲದ ತೀರುವಳಿಗೆ ಜನಪದ ಆಧಾರವಾಗಿ ನಿಲ್ಲುತ್ತದೆ.
ಸಕಲ ಉತ್ಪಾದನೆಗಳಿಗೆ ಮೂಲ ಸಾಧನವಾದ ಭೂಮಿ ತಮ್ಮ ಬಳಿ ಇರುವುದರಿಂದ ಅದರ ಮೇಲೆ ದುಡಿದು ಸಾಲವನ್ನು ತೀರಿಸುವುದು ಅಸಾಧ್ಯವಲ್ಲವೆಂಬ ಮಾತನ್ನು ಸಾಲಗಾರರಿಗೆ ಮನದಟ್ಟು ಮಾಡಿಕೊಟ್ಟು, ತಮ್ಮ ಗ್ರಾಮದ ಎಲ್ಲ ರೈತರನ್ನು ಎಲ್ಲ ಬಗೆಯ ಸಾಲದಿಂದ ಒಂದೇ ನಿಮಿಷದಲ್ಲಿ ಜನಪದ ಸಾಲಮುಕ್ತ ಮಾಡುತ್ತದೆ!
ಇಂಥ ಸಶಕ್ತ ಜನಪದವನ್ನು ಗ್ರಾಮಗಳಲ್ಲಿ ತುರ್ತಾಗಿ  ಸೃಷ್ಟಿಸಿ ರೈತರ ಆತ್ಮಹತ್ಯೆ ತಡೆಯುವ ಪ್ರಬುದ್ಧ ಉಪಕ್ರಮ ಕೈಗೊಳ್ಳಬೇಕಿದೆ. ಸರ್ಕಾರಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅವು ಇಲ್ಲಸಲ್ಲದ ಅಭಿವೃದ್ಧಿಯ ನೆಪದಿಂದ ಗ್ರಾಮಗಳನ್ನು ಕುರುಕ್ಷೇತ್ರವನ್ನಾಗಿಸಿವೆ. ಗ್ರಾಮ ಪಂಚಾಯಿತಿಗಳು ಗ್ರಾಮ ಸಮುದಾಯ ಒಡೆಯಲು ಕಾರಣವಾಗಿವೆ. ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯ ಕಟ್ಟಬೇಕೆಂದಿದ್ದ ಗಾಂಧೀಜಿ ಕನಸನ್ನು ನುಚ್ಚುನೂರಾಗಿಸಿವೆ. ರೈತ ಸಾಲದಿಂದ ಪಾರಾಗಲು ಸಮಗ್ರ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಇತ್ಯಾದಿ ಅಳವಡಿಸಿಕೊಳ್ಳಬೇಕೆಂದು ರೈತರಿಗೆ ಹೇಳಲಾಗುತ್ತಿದೆ.
ಆದರೆ ಕೃಷಿ ಆದಾಯದೊಂದಿಗೆ ಬಿಡುವಿನ ಕಾಲದಲ್ಲಿ ಆದಾಯ ತಂದುಕೊಡುವ ಗ್ರಾಮೋದ್ಯೋಗಗಳಲ್ಲಿ ತೊಡಗುವಂತೆ ಯಾವ ಮಾರ್ಗದರ್ಶನವನ್ನೂ ಕೊಡಲಾಗುತ್ತಿಲ್ಲ. ಕೃಷಿಕರ ಬಹಳಷ್ಟು ಸಮಯ ವ್ಯರ್ಥವಾಗಿ ಕಳೆದುಹೋಗುತ್ತದೆ. ದುಶ್ಚಟಗಳ ಅಭ್ಯಾಸಕ್ಕೆ ಕಾರಣವಾಗುತ್ತಿದೆ. ಗ್ರಾಮಸ್ಥರಿಗೆ ಬೇಕಾಗುವ ಅನೇಕ ಜೀವನಾವಶ್ಯಕ ವಸ್ತುಗಳನ್ನು ಗ್ರಾಮಗಳಲ್ಲೇ ವಿವಿಧ ಉದ್ಯೋಗಗಳ ಮೂಲಕ ತಯಾರಿಸಬಹುದಾಗಿದೆ. ತನ್ಮೂಲಕ ಗ್ರಾಮದ ಯುವಕರಿಗೆ ಉದ್ಯೋಗ ಕೊಡಬಹುದಾಗಿದೆ. ಜನಪದದಲ್ಲಿಯ ಇಡೀ ಮಾನವಶಕ್ತಿ, ಬುದ್ಧಿಶಕ್ತಿ ಉಪಯೋಗವಾಗುವಂತೆ ಮಾಡಬಹುದಾಗಿದೆ.
ಸೋಪು, ಎಣ್ಣೆ, ಪಾತ್ರೆ, ಕಂಬಳಿ, ಬಟ್ಟೆ, ಉಪ್ಪಿನಕಾಯಿ, ಹಪ್ಪಳ-ಸಂಡಿಗೆಯಂಥ ಅನೇಕ ಜೀವನಾವಶ್ಯಕ ಪದಾರ್ಥಗಳಿಗಾಗಿ ಗ್ರಾಮಗಳು ಪರಾವಲಂಬಿಯಾಗಿವೆ. ಗ್ರಾಮದ ಹಣ ಬಹುರಾಷ್ಟ್ರೀಯ ಕಂಪೆನಿಗಳನ್ನು ಸೇರುತ್ತಿದೆ. ಇಂತಹ ದುರ್ದೆಸೆ ಎಲ್ಲ ರಾಜಕಾರಣಿಗಳ, ಮಂತ್ರಿಗಳ ಊರುಗಳಲ್ಲಿಯೂ ಇದೆ. ಇತ್ತೀಚೆಗೆ ಮುಖ್ಯಮಂತ್ರಿಯವರ ಗ್ರಾಮವಾದ ಸಿದ್ಧರಾಮನ ಹುಂಡಿಗೆ ಹೋಗಿದ್ದೆ.
ಸುಮಾರು ಐದಾರು ಸಾವಿರ ಜನಸಂಖ್ಯೆಯುಳ್ಳ ಆ ಗ್ರಾಮದಲ್ಲಿ ಒಂದೇ ಒಂದು ಗ್ರಾಮೋದ್ಯೋಗ ಇಲ್ಲವೆಂದು ಗೊತ್ತಾಯಿತು. ಕುರಿ ಸಾಕಣೆ ಪ್ರದೇಶವಾಗಿದ್ದರೂ ಕಂಬಳಿ ತಯಾರಿಕೆಯ ಉದ್ಯೋಗವೂ ಇಲ್ಲ. ಈ ರೀತಿ ಎಲ್ಲ ರೀತಿಯಲ್ಲೂ ಶುಷ್ಕವಾದ ಗ್ರಾಮಗಳಲ್ಲಿಯ ರೈತರು ಆತ್ಮಹತ್ಯೆಗೆ ಶರಣಾಗುವುದಕ್ಕೆ ಕೇವಲ ಸರ್ಕಾರಗಳಷ್ಟೇ ಕಾರಣವಲ್ಲ, ಗ್ರಾಮಗಳಲ್ಲಿರುವ ಜನಸಮುದಾಯವೂ ಕಾರಣವಾಗಿದೆ.

ರೈತರ ಆತ್ಮಹತ್ಯೆ ಮತ್ತು ಕನ್ನಡ ರಂಗಭೂಮಿ


-ಶಶಿಕಾಂತ ಯಡಹಳ್ಳಿ



ಕನ್ನಡ ರಂಗಭೂಮಿ ಸಮಾಜದ ಎಲ್ಲಾ ಆಯಾಮಗಳಿಗೂ ಕಾಲಕಾಲಕ್ಕೆ ಸ್ಪಂದಿಸುತ್ತಲೇ ಬಂದಿದೆ.ಅದರೆ ಅದ್ಯಾಕೋ ಅನ್ನದಾತರಾದ ರೈತರ ಸಮಸ್ಯೆಗಳಿಗೆ ಹಾಗೂ ಯಾತನೆಗಳಿಗೆ ಒಂದಿಷ್ಟುವಿಮುಖವಾಗಿದೆಕೆಲವಾರು ನಾಟಕಗಳಲ್ಲಿ ಸಾಂದರ್ಭಿಕವಾಗಿ ರೈತರ ಬದುಕು ಬವಣೆಗಳ ಕುರಿತುಪ್ರಸ್ತಾಪಿಸಲಾಗಿದೆಯಾದರೂ ರೈತರ ಸೋಲಿಗೆ ಸಾವಿಗೆ ಕಾರಣ ಹಾಗೂ ಪರಿಣಾಮಗಳನ್ನುಪರಿಣಾಮಕಾರಿಯಾಗಿ ಹೇಳುವಂತಹ ನಾಟಕಗಳಂತೂ ಅಪರೂಪ.... ಬಹುಷಃ ರೈತರನೋವುಸಾವಿಗೆ ಮಿಡಿದು ಅದಕ್ಕೆ ಕಾರಣೀಕರ್ತವಾದ ಶೋಷಕ ವ್ಯವಸ್ಥೆಯನ್ನು ಬೆತ್ತಲುಗೊಳಿಸಿದಸಾರ್ವಕಾಲಿಕ ನಾಟಕ ಏನಾದರೂ ಇದ್ದರೆ ಅದು ಕುವೆಂಪುರವರ ಧನ್ವಂತರಿ ಚಿಕಿತ್ಸೆ ರಂಗಪ್ರಯೋಗ.ಇದೂ ಕೂಡಾ ನಾಟಕವಾಗಿಯೇ ರಚಿತವಾಗಿಲ್ಲಕುವೆಂಪುರವರು ಬರೆದ ಸಣ್ಣ ಕಥೆಯಾಗಿದ್ದು ಅದನ್ನು1976 ರಲ್ಲಿ ಡಾ.ವಿಜಯಾರವರು ರಂಗರೂಪವಾಗಿಸಿ ಕನ್ನಡ ರಂಗಭೂಮಿಗೆ ದೊಡ್ಡ ಕೊಡುಗೆನೀಡಿದರು.
                  
ಆಳುವ ವ್ಯವಸ್ಥೆಯ ಅವಿವೇಕದ ಪರಮಾವಧಿಯಿಂದಾಗಿ ರೈತರುಬದುಕುವ ದಾರಿಕಾಣದೇ ದಿಕ್ಕೆಟ್ಟು ಸಾಲದ ಸುಳಿಗೆ ಸಿಕ್ಕು ಸಾವಿನಮನೆಯತ್ತ ಸಾಲುಗಟ್ಟಿ ಹೋಗುತ್ತಿರುವ ಪ್ರಸ್ತುತ ಆಘಾತಕಾರಿಸನ್ನಿವೇಶದಲ್ಲಿ  ಧನ್ವಂತರಿ ಚಿಕಿತ್ಸೆ ನಾಟಕ ಆಗಿನಕಿಂತಲೂ ಈಗಅತ್ಯಂತ ಹೆಚ್ಚು ಪ್ರಸ್ತುತವಾಗಿದೆಅನ್ನದಾತರ ನಿಕೃಷ್ಟ ಸ್ಥಿತಿಯನ್ನುಹೇಳುತ್ತಲೇ ನಾಗರೀಕ ಸಮಾಜದ ನ್ಯೂನ್ಯತೆಗಳನ್ನು  ನಾಟಕತೆರೆದಿಡುತ್ತದೆಕುವೆಂಪುರವರು ಅಲೌಖಿಕ ಪ್ರತಿಮೆಯ ಮೂಲಕ ಲೌಕಿಕದುರಂತ ಘಟನೆಯೊಂದನ್ನು ಹೇಳುವ ಮೂಲಕ ರೈತರ ಸಮಸ್ಯೆಗೆಸಾರ್ವಕಾಲಿಕ ಸ್ಪಂದನೆಯನ್ನು ತೋರಿದ್ದಾರೆರೈತರ ಎದೆಯ ಮೇಲೆಇಡೀ ಶೋಷಕ ಸಮಾಜವೇ ಕುಳಿತು ಅದು ಹೇಗೆಅಟ್ಟಹಾಸಗೈಯುತ್ತಿದೆಪುರೋಹಿತಶಾಹಿಗಳು ರೈತಾಪಿ ಜನರನ್ನು ಬಳಸಿಕೊಂಡು ಅದು ಹೇಗೆ ಸುಲಿಗೆಸಾಮ್ರಾಜ್ಯ ಪ್ರತಿಷ್ಠಾಪಿಸಿಕೊಂಡಿದ್ದಾರೆ ಎನ್ನುವುದನ್ನು ಧನ್ವಂತರಿ ಚಿಕಿತ್ಸೆ ಚಿಕಿತ್ಸಕ ದೃಷ್ಟಿಕೋನದಲ್ಲಿಪ್ರಸ್ತುತಗೊಳಿಸಿದೆ.

ಹೃದಯ ಕಲಕುವ ಅರ್ತನಾದವೊಂದು ವಿಶ್ವಾಮಿತ್ರಪರಶುರಾಮರಂತಹ ಕಠಿನ ಮನಸ್ಸಿನವರನ್ನೂಕಲಕಿ ಗಡಗಡ ನಡುಗಿಸುತ್ತದೆಅರ್ತನಾದದ ಮೂಲ ಹುಡುಕಿಕೊಂಡು ಭೂಲೋಕಕ್ಕೆ ಬಂದದೇವರ್ಷಿಗಳು ಬ್ರಹತ್ ಸೌಧಗಳಲ್ಲಿಹೊಟೇಲು ಸಿನೆಮಾ ಮಂದಿರಗಳಲ್ಲಿ ಹುಡುಕಿದಷ್ಟೂ  ಭಯಂಕರನೋವಿನ ದ್ವನಿ ಹೆಚ್ಚಾಗುತ್ತಲೇ ಹೋಗುತ್ತದೆಸುಖ ಲೋಲುಪರಾದ ಶ್ರೀಮಂತರ ವೈಭವೋಪಿತಬದುಕು ಹಾಗೂ ಪುರೋಹಿತರ ಸುಲಿಗೆ ಸಾಮ್ರಾಜ್ಯದ ಅತಿರೇಕಗಳನ್ನು ಕಂಡು ಬೆರಗಾದದೇವರ್ಷಿಗಳು ಕೊನೆಗೂ ನರಳುವ ನೋವಿನ ದ್ವನಿಯನ್ನು ಜೋಪಡಿಯೊಂದರಲ್ಲಿ ಕಂಡುಹಿಡಿಯುತ್ತಾರೆ.ಅಲ್ಲಿ ನರಳುತ್ತಾ ಬಿದ್ದಿರುವ ರೈತನನ್ನು ಕಂಡು ತಲ್ಲಣಗೊಳ್ಳುತ್ತಾರೆಬ್ರಹತ್ ಸೌಧಗಳುನಗರೀಕರಣದವಿಕ್ಷಿಪ್ತತೆಗಳು,  ಶ್ರೀಮಂತ ವರ್ಗದ ಆಡಂಬರ ಜೀವನದ ಭಾರಗಳು...  ರೈತನ ಎದೆಯ ಮೇಲೆಹೇರಲ್ಪಟ್ಟಿವೆಹೀಗೆ ಆಧುನಿಕ ಅವ್ಯವಸ್ಥೆಯ ಹೊರಲಾರದ ಭಾರವನ್ನು ತನ್ನೆದೆಯಮೇಲೆ ಹೊತ್ತುಮೇಲೇಳಲಾರದೇ ನರಳುತ್ತಿರುವ ಅನ್ನದಾತನ ದುರಂತ ಪರಿಸ್ಥಿತಿಯನ್ನು ನೋಡಿ ದೇವರ್ಷಿಗಳೇತಳಮಳಗೊಳ್ಳುತ್ತಾರೆಕೊನೆಗೆ ದೇವರ್ಷಿ ವಿಶ್ವಾಮಿತ್ರರು ರೈತನ ರೋಗನಿವಾರಣೆಗೆ ದೇವಲೋಕದವೈದ್ಯ ಧನ್ವಂತರಿಯನ್ನೇ ಕರೆಸುತ್ತಾರಾದರೂ ಆತನಿಂದಲೂ ಚಿಕಿತ್ಸೆ ಸಾಧ್ಯವಾಗದೇಅಸಹಾಯಕನಾಗುತ್ತಾನೆ.

ಡಾ.ವಿಜಯಾರವರು
ಕುವೆಂಪುರವರ ಕಥೆಯಲ್ಲಿ ಇಡೀ ಶೋಷಕ ವ್ಯವಸ್ಥೆ ಬಗ್ಗೆಯೇಆಕ್ರೋಶ ವ್ಯಕ್ತವಾಗುತ್ತದೆವಿಶ್ವಾಮಿತ್ರ ಪ್ರಳಯವನ್ನು ಸೃಷ್ಟಿಸಿಮತ್ತೆ ರೈತಾಪಿ ದುಡಿಯುವ ಜನರ ಪರವಾಗಿ ಭೂಮಿಯನ್ನುಮರುಸೃಷ್ಟಿ ಮಾಡಲು ಬಯಸುತ್ತಾನೆಆದರೆ..ಡಾ.ವಿಜಯಾರವರು ಕುವೆಂಪುರವರ ಅನುಮತಿಯನ್ನು ಪಡೆದುನಾಟಕದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿದರುಕೊಟ್ಟಕೊನೆಗೆ ರೈತನೇ ಎದ್ದು ಪಂಜು ಹಿಡಿದು ಶೋಷಕ ವ್ಯವಸ್ಥೆಗೆಪ್ರತಿಭಟನೆಯನ್ನು ತೋರಿಸುತ್ತಾ ತನ್ನ ವಿಮೋಚನೆಯತ್ತಸಾಗುತ್ತಾನೆ.... ವಿಜಯಾರವರು ಕೊಟ್ಟ ಅಂತ್ಯ ವಾಸ್ತವಿಕವೂಹಾಗೂ ಸಮರ್ಥನೀಯವೂ ಆಗಿತ್ತುವಿಶ್ವಾಮಿತ್ರನಂತೆ ಇಡೀವ್ಯವಸ್ಥೆಯನ್ನು ಕೊನೆಗಾಣಿಸಿ ಮತ್ತೆ ಮರುಸೃಷ್ಟಿ ಮಾಡಲಂತೂ ಈಗ ಸಾಧ್ಯವಿಲ್ಲನಮ್ಮ ಸ್ವಾರ್ಥಿಯಾದದಲ್ಲಾಳಿ ಆಳುವ ವರ್ಗಗಳಿಂದ ರೈತಾಪಿ ಜನರ ಉದ್ಧರವನ್ನಂತೂ ನಿರೀಕ್ಷಿಸುವಂತಿಲ್ಲಯಾವಾಗರೈತಾಪಿ ದುಡಿಯುವ ಜನರೇ ನಮ್ಮ ಮೇಲಾಗುವ ಅನ್ಯಾಯವನ್ನು ಹಾಗೂ ಅಸಮಾನತೆಯನ್ನುವಿರೋಧಿಸಿ ಒಂದಾಗಿ ವಿರೋಚಿತ ಹೋರಾಟದ ಮೂಲಕ ಸುಸ್ಥಿರ ಬದುಕನ್ನು ರೂಪಿಸಿಕೊಳ್ಳುತ್ತಾರೋಅಲ್ಲಿವರೆಗೂ ರೈತರ ಸಮಸ್ಯೆಗಳಿಗೆ ಖಾಯಂ ಪರಿಹಾರ ಎನ್ನುವುದು ಇಲ್ಲವೇ ಇಲ್ಲ.

ಕುವೆಂಪುರವರ ಧನ್ವಂತರಿ  ಚಿಕಿತ್ಸೆ ಕೇವಲ ಕಾಲ್ಪನಿಕ ಕಥೆಯಾಗಿರಬಹುದುಆದರೆ ರೈತರ ದುರಂತಸ್ಥಿತಿಯನ್ನು ನೋಡಿದರೆ ವಾಸ್ತವದ ಅನಾವರಣವನ್ನೇ ಕಥೆ ರೂಪಕವಾಗಿ ಕಟ್ಟಿಕೊಟ್ಟಿದೆದಲ್ಲಾಳಿಗಳು,ವ್ಯಾಪಾರಸ್ತರುಬಂಡವಾಳಶಾಹಿಗಳುಬೀಜಗೊಬ್ಬರ ಕೀಟನಾಶಕ ಮಾರುವ ಕಾರ್ಪೋರೇಟ್ಕಂಪನಿಗಳು ರೈತರ ಬದುಕಿನ ಮೇಲೆ ತಮ್ಮೆಲ್ಲಾ ಲಾಭದ ಭಾರವನ್ನು ಹೇರಿ ಕುಳಿತಿವೆಇವರೆಲ್ಲರಲೂಟಿಕೋರತನಕ್ಕೆ ರೈತರೇ ಬಲಿಪಶುವಾಗಿದ್ದಾರೆಆಳುವ ಎಲ್ಲಾ ನಮೂನಿಯ ಸರಕಾರಗಳೂ ಸಹರೈತನ ಹೆಸರಿನಲ್ಲಿ ರೈತರನ್ನೇ ಶೋಷಿಸುತ್ತಾ ಬಂದಿವೆಯೇ ಹೊರತು ರೈತಾಪಿ ಜನಗಳಉದ್ಧಾರವನ್ನಲ್ಲಆದರೆ ರೈತರ ನೋವುಸಮಸ್ಯೆಅರ್ತನಾದವನ್ನು ಕೇಳಿ ಸೂಕ್ತ ಪರಿಹಾರಕ್ಕಾಗಿಈಗ ಯಾವುದೇ ವಿಶ್ವಾಮಿತ್ರ-ಪರುಶುರಾಮರು ಬರುವುದಿಲ್ಲರೈತಾಪಿ ಜನಗಳೇ ಸಂಘಟಿತರಾಗಿತಮ್ಮ ಶೋಷಣೆಗೆ ನಿಜವಾದ ಕಾರಣ ಹಾಗೂ ಕಾರಣೀಕರ್ತರನ್ನು ಗುರುತಿಸಿ ಶೋಷಣೆಯ ವಿರುದ್ಧಒಂದಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಮಾರ್ಗವೊಂದೇ ಅವರ ವಿಮೋಚನೆಗೆ ಇರುವ ದಾರಿಎಂಬುದನ್ನು ಡಾ.ವಿಜಯಾರವರ ರಂಗರೂಪದ ಧನ್ವಂತರಿ  ಚಿಕಿತ್ಸೆ ಅನಾವರಣಗೊಳಿಸುತ್ತದೆ.
 
ಬಿ.ಸುರೇಶರವರು 'ಪತ್ರಕರ್ತರ ಪರಿಷತ್ತಿನ ಪತ್ರಕರ್ತರಿಗೆ 'ಧನ್ವಂತರಿ ಚಿಕಿತ್ಸೆ'
ನಾಟಕವನ್ನು ನಿರ್ದೇಶಿಸಿದ್ದರು. ಈ  ನಾಟಕದ ಅಪರೂಪದ ಚಿತ್ರ ಇದು.
ಎಡಗಡೆಯಿಂದ ಪ್ರಕಾಶ ರೈ, ಎ.ಎಂ.ಪ್ರಕಾಶ್ ಹಾಗೂ ಸುಧೀಂದ್ರ ಕುಲಕರ್ಣಿ

1977 ರಲ್ಲಿ ಮೊದಲ ಬಾರಿಗೆ .ಎಸ್.ಮೂರ್ತಿಯವರ ನೇತೃತ್ವದ ಚಿತ್ರಾ ಕಲಾವಿದರು ತಂಡ ಡಾ.ಚಂದ್ರಶೇಖರ ಕಂಬಾರರ ನಿರ್ದೇಶನದಲ್ಲಿ ಧನ್ವಂತರಿ ಚಿಕಿತ್ಸೆ ನಾಟಕವನ್ನು ಪ್ರದರ್ಶಿಸಲಾಯಿತು.ಸ್ವತಃ .ಎಸ್.ಮೂರ್ತಿಯವರೇ ಇದರಲ್ಲಿ ನಟಿಸಿದ್ದರುಚಾಮರಾಜಪೇಟೆಯಲ್ಲಿರುವ ಬೆಂಗಳೂರುಹೈಸ್ಕೂಲ್ ಮೈದಾನದಲ್ಲಿ  ನಾಟಕದ ಮೊದಲ ಪ್ರಯೋಗ ಪ್ರದರ್ಶನಗೊಂಡಿತು ನಂತರ1983ರಲ್ಲಿ ಬರಗಾಲದಿಂದ ರೈತರು ಬಸವಳಿದಿದ್ದಾಗ ಬಿ.ಸುರೇಶರವರು ಬಿಹೆಚಇಎಲ್ ಕಾರ್ಖಾನೆಯಕಲಾವಿದರಿಗೆ  ನಾಟಕವನ್ನು ನಿರ್ದೇಶಿಸಿ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿಸಿದ್ದರುಮತ್ತೆ1985 ರಲ್ಲಿ  ಪತ್ರಕರ್ತರ ಪರಿಷತ್ತು ಧನ್ವಂತರಿ ಚಿಕಿತ್ಸೆ ನಾಟಕವನ್ನು ಬಿ.ಸುರೇಶರವರನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗಿಸಿತ್ತು ನಾಟಕ ನೋಡಲು ಇಡೀ ರಂಗಭೂಮಿಹಾಗೂ ಸಿನೆಮಾರಂಗದ ಪ್ರಖ್ಯಾತರ ದಂಡೇ ಕಲಾಕ್ಷೇತ್ರಕ್ಕೆ ಬಂದಿತ್ತು ನಾಟಕದ ವಿಶೇಷತೆಏನೆಂದರೆ ಪ್ರಕಾಶ್ರೈ ರವರನ್ನು ಹೊರತು ಪಡಿಸಿ  ನಾಟಕದಲ್ಲಿ ಅಭಿನಯಿಸಿದವರೆಲ್ಲಾ ಪತ್ರಕರ್ತರೇಆಗಿದ್ದರು ನಾಟಕ ಪ್ರದರ್ಶನದಲ್ಲಿ ಪ್ರಕಾಶ್ ರೈರವರ ಅಭಿನಯ ಪ್ರತಿಭೆಯನ್ನು ನೋಡಿ ಬೆರಗಾದರಾಜೇಂದ್ರಸಿಂಗ್ ಬಾಬುರವರು ತಮ್ಮ ಮುತ್ತಿನಹಾರ ಸಿನೆಮಾದಲ್ಲಿ ನಟಿಸುವ ಅವಕಾಶಕೊಟ್ಟಿದ್ದರಿಂದ ಮುಂದೆ ಸಿನೆಮಾ ರಂಗಕ್ಕೆ ಪ್ರಕಾಶ್ ರೈ ಬಹುದೊಡ್ಡ ಕೊಡುಗೆಯಾದರು.

ಬಿ.ಸುರೇಶ್ ರವರ ನಿರ್ದೇಶನದ 'ಧನ್ವಂತರಿ ಚಿಕಿತ್ಸೆ' ನಾಟಕದ ದೃಶ್ಯ
ಆಮೇಲೆ ಪ್ರಯೋಗರಂಗ ರಂಗತಂಡ ಧನ್ವಂತರಿ ಚಿಕಿತ್ಸೆಯನ್ನು 1979 ರಲ್ಲಿ ವೈ.ಎಸ್.ವಿ ದತ್ತಾರವರನಿರ್ದೇಶನದಲ್ಲಿ ರಂಗನಾಟಕವಾಗಿ ಪ್ರದರ್ಶಿಸಿತುತದನಂತರ ಪ್ರಯೋಗರಂಗದನಾಗರಾಜಮೂರ್ತಿಯವರು  ನಾಟಕವನ್ನು ತಮ್ಮ ತಂಡಕ್ಕೆ ಮರು ನಿರ್ದೇಶಿಸಿ ಕೆಲವಾರುಪ್ರಯೋಗಗಳನ್ನು ಮಾಡಿ ರೈತರ ನರಕಸದೃಶ ಬದುಕನ್ನು ರಂಗದಂಗಳದಲ್ಲಿಅನಾವರಣಗೊಳಿಸಿದರು. ಹಾಗೆಯೇ 2008 ರಲ್ಲಿ ಪ್ರಸಾದ್ ರಕ್ಷಿತಿರವರು 'ಧನ್ವಂತರಿ ಚಿಕಿತ್ಸೆ' ನಾಟಕವನ್ನು ಸಕಲೇಶಪುರ ತಾಲೂಕಿನ ಬೆಳ್ಳಿಕೆರೆ ಗ್ರಾಮದ 'ಜೈ ಕರ್ನಾಟಕ ಸಂಘ' ದ ಕಲಾವಿದರಿಗೆ ನಿರ್ದೇಶಿಸಿದ್ದರು.. ಇತ್ತೀಚೆಗೆ ಬಿ.ಸುರೇಶರವರು ರೈತನೊಬ್ಬನ ಸಾವಿನ ನಂತರ ಆತನ ಪತ್ನಿಪರಿಹಾರಕ್ಕಾಗಿ ಪರದಾಡಿದುಷ್ಟ ವ್ಯವಸ್ಥೆಯ ಸುಳಿಗೆ ಸಿಕ್ಕು ತನ್ನ ಬದುಕನ್ನೇ ಹೇಗೆಹಾಳುಮಾಡಿಕೊಂಡು ದುರಂತಕ್ಕೊಳಗಾಗಬೇಕಾಯಿತು ಎನ್ನುವುದನ್ನು ತಮ್ಮ ಗಿರಿಜಾ ಕಲ್ಯಾಣನಾಟಕದಲ್ಲಿ ಬರೆದು ತೋರಿಸಿದ್ದು ನಾಟಕವನ್ನು ಬಿ.ಜಯಶ್ರೀಮಾಲತೇಶ್ ಬಡಿಗೇರ್ಹಿಂದಿಯಲ್ಲಿಎಂ.ಎಸ್.ಸತ್ಯು ಮೊದಲಾದವರು ನಿರ್ದೇಶಿಸಿದ್ದಾರೆಹಾಗೆಯೇ ಹಾಸನದ ಪತ್ರಕರ್ತರಾದಕೃ.ನಾ.ಮೂರ್ತಿಯವರು ’ಬಿದ್ದಿದೆ ಬೆಂಕಿ’ ಎನ್ನುವ ಹೆಸರಲ್ಲಿ ರೈತರ ಸಮಸ್ಯೆ ಕುರಿತು ನಾಟಕವನ್ನುರಚಿಸಿದ್ದರು..ಸುಬ್ಬರಾಯರೂ ಸಹ ’ನೇಗಿಲಯೋಗಿ’ ಎನ್ನುವ ನಾಟಕವನ್ನು ಬರೆದಿದ್ದರು.ಕೆ.ವಿ.ಅಕ್ಷರರವರೂ ಸಹ ರೈತರ ಕುರಿತು ಒಂದು ನಾಟಕ ರಚಿಸಿದ್ದಾರೆ ವೃತ್ತಿ ನಾಟಕ ಕಂಪನಿಗಳೂಸಹ ಕೆಲವೊಮ್ಮೆ ತಮ್ಮ ನಾಟಕಗಳಲ್ಲಿ ರೈತರ ಬಡತನ ಹಾಗೂ ಶ್ರೀಮಂತರ ಅಟ್ಟಹಾಸಗಳ ನಡುವಿನಸಂಘರ್ಷ ಕುರಿತು ತಮ್ಮ ಕೆಲವು ನಾಟಕಗಳಲ್ಲಿ ತೋರಿಸಿವೆಯಾದರೂ ಅವು ಸೀಮಿತವಾಗಿವೆ.

ಪ್ರಸಾದ್ ರಕ್ಷಿದಿರವರ ನಿರ್ದೇಶನದ 'ಧನ್ವಂತರಿ ಚಿಕಿತ್ಸೆ' ನಾಟಕದ ದೃಶ್ಯ

ರೈತರ ಸಮಸ್ಯೆಗಳಿಗೆ ರಂಗನಾಟಕಗಳಿಗಿಂತಲೂ ಹೆಚ್ಚು ಸ್ಪಂದಿಸಿದ್ದು ಬೀದಿನಾಟಕಗಳು... ಇಪ್ಟಾ,ಸಮುದಾಯ ಹಾಗೂ ಅವಿಷ್ಕಾರದಂತಹ ಸೈದ್ದಾಂತಿಕ ಹಿನ್ನಲೆಯುಳ್ಳ ಸಂಘಟನೆಗಳು ರೈತರ ಸಮಸ್ಯೆಮತ್ತು ಸಾವಿನ ಹಿನ್ನೆಲೆಯಲ್ಲಿ ಹಲವಾರು ಬೀದಿನಾಟಕಗಳನ್ನು ಊರು ಕೇರಿ ಬೀದಿಗಳಲ್ಲಿಪ್ರದರ್ಶಿಸಿದ್ದಾರೆಡಾ.ಸಿದ್ದನಗೌಡ ಪಾಟೀಲರ ಪರಿಹಾರ ಬೀದಿನಾಟಕ ರೈತರ ಆತ್ಮಹತ್ಯೆಗೆಕಾರಣಗಳನ್ನು ಹಾಗೂ ರೈತರಿಗೆ ಕೊಡುವ ಪರಿಹಾರವನ್ನು ಆಳುವ ವರ್ಗದ ದಲ್ಲಾಳಿಗಳೇಕಬಳಿಸುವುದನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆಇಪ್ಟಾ ಸಾಂಸ್ಕೃತಿಕ ಸಂಘಟನೆ ಬೀದಿನಾಟಕವನ್ನು ರಾಜ್ಯಾದ್ಯಂತ ಪ್ರದರ್ಶಿಸಿದೆಇದಲ್ಲದೇ ಕಾಲಕಾಲಕ್ಕೆ ರೈತರ ಬದುಕು ಹಾಗೂಬವಣೆಗೆ ಇಪ್ಟಾ ತನ್ನ ಬೀದಿ ನಾಟಕ ಹಾಗೂ ಹಾಡುಗಳ ಮೂಲಕ ಸ್ಪಂದಿಸುತ್ತಲೇ ಬಂದಿದೆಅದೇ ರೀತಿಸಮುದಾಯ ಸಂಘಟನೆ ಸಹ ಕುವೆಂಪುರವರ ಧನ್ವಂತರಿ ಚಿಕಿತ್ಸೆ ಕಥೆಯನ್ನಾಧರಿಸಿದಬೀದಿನಾಟಕವನ್ನು 2012 ರಲ್ಲಿ ಶಶಿಧರ್ ಭಾರೀಘಾಟರವರ ನಿರ್ದೇಶನದಲ್ಲಿ ಪ್ರದರ್ಶಿಸಿತುಹಾಗೆಯೇ"ಅವಿಷ್ಕಾರ’ ಸಾಂಸ್ಕೃತಿಕ ಸಂಘಟನೆಯು ಸಹ ರೈತರ ಆತ್ಮಹತ್ಯೆಗೆ ತೀವ್ರವಾಗಿ ಸ್ಪಂದಿಸಿತು2000ನೇ ಇಸ್ವಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಬಳ್ಳಾರಿಯ ಕುಡಿತನಿ ಗ್ರಾಮದಲ್ಲಿ ಸುಬ್ಬಣ್ಣ ಎನ್ನುವ ರೈತತೊಗರಿಬೆಳೆ ಬೆಳೆದು ನಷ್ಟಹೊಂದಿ ಆತ್ಮಹತ್ಯೆ ಮಾಡಿಕೊಂಡಾಗ iಣ್ಣಾದ ಮಣ್ಣಿನ ಮಕ್ಕಳು ಎನ್ನುವಬೀದಿ ನಾಟಕವನ್ನು ಗುಲಬರ್ಗಾ ಹಾಗೂ ಯಾದಗಿರಿ ಜಾತಾ ಮೂಲಕ ಎಪ್ಪತ್ತಕ್ಕೂ ಹಳ್ಳಿಗಳಲ್ಲಿಅವಿಷ್ಕಾರದ ಕಲಾವಿದರು ಪ್ರದರ್ಶಿಸಿ ಜನಜಾಗ್ರತಿಯನ್ನುಂಟುಮಾಡಿದರು ಬೀದಿನಾಟಕವನ್ನುಡಾ.ಬಿ.ಆರ್.ಮಂಜುನಾಥರವರು ರಚಿಸಿದ್ದು ಪ್ರಕಾಶ್ ಅರಸುರವರು ನಿರ್ದೇಶಿಸಿದ್ದರು ನಂತರವೂಸಹ iಣ್ಣಾದ ಮಣ್ಣಿನ ಮಕ್ಕಳು ನಾಟಕವನ್ನು ’ಅವಿಷ್ಕಾರ’ ಸಂಘಟನೆಯು ಸಾಂದರ್ಭಿಕವಾಗಿಪ್ರದರ್ಶಿಸುತ್ತಲೇ ಬಂದಿದೆ.   2010ರಲ್ಲಿ .ಎಸ್.ಮೂರ್ತಿಯವರು ಬರೆದ ಕಲಬೆರಕೆ ಎನ್ನುವಬೀದಿನಾಟಕವನ್ನು ಅಭಿನಯ ತರಂಗಕ್ಕೆ ಗೌರಿ ದತ್ತುರವರು ನಿರ್ದೇಶಿಸಿದ್ದರುನಕಲಿ ಬೀಜಗಳುಹಾಗೂ ಸಾಲದ ಭಾರದಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ದುರಂತಗಾತೆಯನ್ನು ಕಲಬೆರಕೆಯಲ್ಲಿತೋರಿಸಲಾಗಿದೆಬೆಂಗಳೂರಿನ ಸುತ್ತಮುತ್ತಲ ಹಲವಾರು ಹಳ್ಳಿಗಳಲ್ಲಿ  ಬೀದಿನಾಟಕವನ್ನುಪ್ರದರ್ಶಿಸಲಾಗಿತ್ತು.

ಅವಿಷ್ಕಾರ ಸಾಂಸ್ಕೃತಿಕ ಸಂಘಟನೆಯ ಬೀದಿನಾಟಕ 'ಮಣ್ಣಾದ ಮಣ್ಣಿನ ಮಕ್ಕಳು'

 ಆದರೂ... ಸಾಲದು..., ರೈತಾಪಿ ಜನರು ಎಲ್ಲರಿಂದಲೂ ನಿರ್ಲಕ್ಷಿತರಾಗುತ್ತಲೇ ಬಂದಿದ್ದಾರೆ.ಸಮಾಜದ ಬಹುತೇಕ ಸಮಸ್ಯೆಗಳಿಗೆ ಸ್ಪಂದಿಸುವ ರಂಗಭೂಮಿ ಸಹ ರೈತರ ದುರಂತ ಬದುಕಿನಕಥೆಗಳನ್ನು ರಂಗಮಾಧ್ಯಮದ ಮೂಲಕ ತೋರಿಸುತ್ತಾ ಇನ್ನೂ ಹೆಚ್ಚು ಹೆಚ್ಚು ನಾಟಕಗಳನ್ನುಮಾಡಬೇಕಿದೆಒಂದು ಕಡೆ ರೈತರನ್ನು ಎಚ್ಚರಿಸುವ ಹಾಗೂ ಇನ್ನೊಂದು ಕಡೆ ರೈತವಿರೋಧಿವ್ಯವಸ್ಥೆಯ ಹುನ್ನಾರಗಳನ್ನು ಬೆತ್ತಲೆಗೊಳಿಸುವ ಕೆಲಸವನ್ನು ರಂಗನಾಟಕಗಳು ಹಾಗೂಬೀದಿನಾಟಕಗಳು ಮಾಡಬೇಕಿವೆನೀನಾಸಂಶಿವಸಂಚಾರಜಮುರಾಜನುಮನದಾಟಆಟಮಾಟದಂತಹ ಹಲವಾರು ರಂಗರೆಪರ್ಟರಿಗಳು ಪ್ರತಿ ವರ್ಷ ಒಂದಾದರೂ ರೈತಪರ ನಾಟಕವನ್ನು ನಿರ್ಮಿಸಿಪ್ರದರ್ಶಿಸಿ ರಂಗಮಾಧ್ಯಮದ ಮೂಲಕ ರೈತಾಪಿ ಜನರಲ್ಲಿ ಧೈರ್ಯವನ್ನು ತುಂಬಬೇಕಾಗಿದೆ..ರೈತವಿರೋಧಿ ಶಕ್ತಿಗಳ ಕುತಂತ್ರವನ್ನು ಬಯಲುಗೊಳಿಸಿಬೇಕಿದೆ.  ಹಾಗೆಯೇ ಹಾದರ ಹಾಗೂಕಾಮವನ್ನು ವಿವಿಧ ಆಯಾಮಗಳಲ್ಲಿ ವ್ಯಾಖ್ಯಾನಿಸಿ ನಾಟಕ ಬರೆದು ಪ್ರಸಿದ್ದಿ ಪದವಿ ಪ್ರಶಸ್ತಿ ಪಡೆದಕೆಲವಾರು ಪ್ರಸಿದ್ಧ ನಾಟಕಕಾರರು ಅನ್ನದಾತನ ಅವಸಾನದ ಕಾರಣ ಪರಿಣಾಮಗಳ ಕುರಿತುಆಲೋಚಿಸಿ ನಾಟಕ ರಚಿಸಬೇಕಾಗಿದೆ.. ರೈತನ ಸಮಸ್ಯೆ ಹಾಗೂ ಸಾವುಗಳಿಗೆ ನಾಟಕಕಾರರು,ರಂಗನಿರ್ದೇಶಕರುರಂಗ ಸಂಘಟಕರು ಹಾಗೂ ರಂಗತಂಡಗಳು ನಾಟಕಗಳ ಮೂಲಕ ತೀವ್ರವಾಗಿಸ್ಪಂದಿಸಬೇಕಾಗಿದೆಹಾಗೂ ಅನ್ನದಾತ ಬೆಳೆದ ಅನ್ನವನ್ನು ತಿಂದುಂಡು ಬೆಳೆದ ಎಲ್ಲಾ ರಂಗಕರ್ಮಿಗಳುರೈತನ ಅನ್ನದ ಋಣವನ್ನು ರಂಗಮಾಧ್ಯಮದ ಮೂಲಕ ತೀರಿಸುವ ಪ್ರಯತ್ನವನ್ನು ಮಾಡಬೇಕಿದೆ.ಯಾಕೆಂದರೆ ಎಲ್ಲಾ ಮಾಧ್ಯಮಗಳಿಗಿಂತಲೂ ರಂಗಮಾಧ್ಯಮ ಎನ್ನುವುದು ನೋಡುಗರ ಮೇಲೆ ನೇರಹಾಗೂ ಗಾಢವಾದ ಪರಿಣಾಮವನ್ನು ಬೀರುವಂತಹುದಾಗಿದೆರಂಗಮಾಧ್ಯಮವು ರೈತರ ನೋವುದುರಂತಗಳಿಗೆ ಸ್ಪಂದಿಸದೇ ಹೋದರೆ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಂತಾಗುತ್ತದೆನಿಟ್ಟಿನಲ್ಲಿ ಎಲ್ಲಾ ರಂಗತಂಡಗಳುರಂಗ ರೆಪರ್ಟರಿಗಳುಸಾಂಸ್ಕೃತಿಕ ಸಂಘಟನೆಗಳು,ರಂಗಕರ್ಮಿಗಳು ಆಲೋಚಿಸಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಕೆಲಸವನ್ನುಮಾಡುವ ಮೂಲಕ ಋಣಮುಕ್ತರಾಗಬೇಕಿದೆಎಲ್ಲರಿಗೂ ಅನ್ನಕೊಡುವ ಅನ್ನದಾತನ ಬದುಕುನೆಮ್ಮದಿಯಾಗಿರುವಂತಹ ವ್ಯವಸ್ಥೆಯೊಂದರ ನಿರ್ಮಾಣಕ್ಕೆ ರಂಗಭೂಮಿಯೂ ಒಳಗೊಂಡಂತೆ ಎಲ್ಲರೂಅವರವರ ಮಾಧ್ಯಮಗಳ ಮೂಲಕ ಪ್ರಯತ್ನಿಸಬೇಕಿದೆ....

ರೈತರ ಆಕ್ರಂದನಕ್ಕೆ ಕಿವಿಯಾಗುವ ವಿಶ್ವಾಮಿತ್ರರುಚಿಕಿತ್ಸೆ ನೀಡುವ ಧನ್ವಂತರಿಗಳುಬೇಕಾಗಿದ್ದಾರೆ.... ರೈತರ ಸಹಾಯಕ್ಕೆ ಯಾರೂ ಬರದಿದ್ದರೆ ಧನ್ವಂತರಿ ಚಿಕಿತ್ಸೆ ನಾಟಕದಕ್ಲೈಮ್ಯಾಕ್ಸಿನಲ್ಲಾದಂತೆ ರೈತರೇ ನರಳುವುದನ್ನು ಬಿಟ್ಟು ಕೈಯಲ್ಲಿ ಉರಿವ ಪಂಜನ್ನು ಹಿಡಿದು ರೈತಾಪಿಜನಗಳ ವಿಮೋಚನೆಗೆ ಸಂಘಟಿತರಾಗಿ ಹೋರಾಡಲೇಬೇಕಿದೆರೈತನಿಗೆ ಚಿಕಿತ್ಸೆ ಕೊಡಲು ಬಂದಧನ್ವಂತರಿಯೇ ಅಸಹಾಯಕನಾದಾಗ ವಿಶ್ವಾಮಿತ್ರ ರೈತವಿರೋಧಿ ವ್ಯವಸ್ಥೆಯನ್ನೇ ವಿನಾಶಗೊಳಿಸಿಹೊಸ ವ್ಯವಸ್ಥೆ ರೂಪಿಸಲು ಪ್ರಯತ್ನಿಸುತ್ತಾನೆಈಗ ರೈತಾಪಿ ಜನರೇ ವಿಶ್ವಾಮಿತ್ರರಾಗಬೇಕಿದೆ.ಅಸಮಾನ ವ್ಯವಸ್ಥೆಯನ್ನು ತಮ್ಮ ಪ್ರತಿಭಟನಾಶಕ್ತಿಯಿಂದ ಬದಲಾಯಿಸಬೇಕಿದೆಇದು ಬಿಟ್ಟು ಬೇರೆದಾರಿಯಿಲ್ಲಅಲ್ಲಿವರೆಗೂ ಸಾವಲ್ಲಿ ಪರಿಹಾರ ಕಂಡುಕೊಳ್ಳುವ ಬದಲು ತನ್ನ  ಸ್ಥಿತಿಗೆಕಾರಣವಾದವರ ವಿರುದ್ಧ ಪ್ರತಿಭಟಿಸುವ ದಾರಿ ಕಂಡುಕೊಳ್ಳಬೇಕಿದೆಪ್ರಾಣಕ್ಕಿಂತ ಮಾನ ಮುಖ್ಯಎಂದು ಪ್ರಾಣಕಳೆದುಕೊಳ್ಳಬಯಸುವ ರೈತರು ಎಲ್ಲದಕ್ಕಿಂತಲೂ ಸ್ವಾಭಿಮಾನದ ಬದುಕು ಮುಖ್ಯಎಂದುಕೊಂಡು ಅದಕ್ಕಾಗಿ ಸಂಘಟಿತ ಹೋರಾಟಕ್ಕಿಳಿಯುವ ಮೂಲಕ ತನ್ನ ಹಕ್ಕನ್ನುಪಡೆದುಕೊಳ್ಳುವುದು ಆದ್ಯತೆಯಾಗಬೇಕಿದೆಇದಕ್ಕೆ ಪೂರಕವಾಗಿ ರಂಗಭೂಮಿ ನಾಟಕಗಳ ಮೂಲಕರೈತರಲ್ಲಿ ಜಾಗೃತಿ ಮೂಡಿಸಬೇಕಿದೆ......   

                              -ಶಶಿಕಾಂತ ಯಡಹಳ್ಳಿ  

ಬಿ.ಸುರೇಶ್ ರವರ ನಿರ್ದೇಶನದ 'ಧನ್ವಂತರಿ ಚಿಕಿತ್ಸೆ' ನಾಟಕದ ದೃಶ್ಯ


ಡಾ.ಚಂದ್ರಶೇಖರ ಕಂಬಾರರು ಚಿತ್ರಾ ಕಲಾವಿದರಿಗೆ ನಿರ್ದೇಶಿಸಿದ ಧನ್ವಂತರಿ ಚಿಕಿತ್ಸೆ' ನಾಟಕದ ದೃಶ್ಯ 

ಅವಿಷ್ಕಾರ' ಅಭಿನಯಿಸಿದ ಬೀದಿನಾಟಕ 'ಮಣ್ಣಾದ ಮಣ್ಣಿನ ಮಕ್ಕಳು' ನಾಟಕದ ದೃಶ್ಯ