ಸೋಮವಾರ, ಜೂನ್ 30, 2014
ಶುಕ್ರವಾರ, ಜೂನ್ 27, 2014
ಅರಸನಂತಿದ್ದ ಕೊರಗರ ಮುಖಂಡ
ಕಾಡನ್ನಾಳಿದ ಕೊರಗರ ಅರಸ 'ಕಾಡಿ ಕೂಜೆ'ನ (ಕೊರ್ರೆ ಭಾಷೆಯಲ್ಲಿ 'ಕಾಡಿನ ಮಗ' ಎಂದು ಅರ್ಥ) ಕುರಿತಾಗಿ ಕೊರಗ ಸಮುದಾಯದ ಹಿರಿಯರು ಪೂರ್ಣ ಮಾಹಿತಿಯನ್ನು ಯಾರಲ್ಲಿಯೂ ಯಾವತ್ತೂ ಬಿಟ್ಟುಕೊಡದಿದರಿಂದ ಆತನ ಕುರಿತು ಅಷ್ಟೇನು ಅಧ್ಯಯನ ನಡೆದಿಲ್ಲ. ಈಗಿನವರಿಗೆ ಅಷ್ಟೇನು ಮಾಹಿತಿಯೂ ಇಲ್ಲ. ಆದರೂ ಕೆಲವೊಂದು ಇತಿಹಾಸಕಾರರು ಪ್ರಯತ್ನಪಟ್ಟು ಒಂದಷ್ಟು ಮಾಹಿತಿಯನ್ನು ಕಲೆ ಹಾಕಿ ತಮ್ಮ ಅಧ್ಯಯನ ವರದಿ/ಗ್ರಂಥಗಳಲ್ಲಿ 'ಅಬಶಿಕ' ಅಥವ 'ಹುಭಾಶಿಕ' ಎಂಬ 'ಕೊರಗರ ಅರಸ'ನಿದ್ದ ಎಂದು ಆತನ ಕುರಿತು ಮಾಹಿತಿ ದಾಖಲಿಸಿದ್ದಾರೆ. ಆ ಎಲ್ಲಾ ಇತಿಹಾಸಕಾರರ ಮಾಹಿತಿಯನ್ನು ಬದಿಗಿರಿಸಿ ಮತ್ತು ನನ್ನ ಹಿರಿಯರ ಹೇಳಿಕೆಯ ಆಧರಿಸಿ ಸಂಕ್ಷಿಪ್ತವಾಗಿ ಹೇಳುವುದಾದರೆ...
ಹೌದು! ಕೊರಗರು ಕಾಡಿನ ಮಕ್ಕಳು. ಕಾಡಿನ ಆರಾಧಕರು. ಕಾಡೇ ಸರ್ವಸ್ವ ಎಂದು ನಂಬಿದವರು. ಆ ಕಾಡಿನ ಜನರಿಗೆ ಮುಖಂಡನೊಬ್ಬನಿದ್ದ. ಆ 'ಕಾಡಿನ ಮಗ'ನ ತಂದೆ ತಾಯಿ ಯಾರು ಎಂದೂ ಯಾವ ಕೊರಗ ಬಂಧುವಿಗೆ ಇದುವರೆಗೂ ತಿಳಿದಿಲ್ಲ. ಕಾರಣ ಆಗಿನ ಬದುಕು 'ಕಾಡಿನ ಸಂಸ್ಕೃತಿ'ಯಾದರಿಂದ ದಾಖಲೆಗೆ ಯಾವುದೂ ಸಿಗುತ್ತಿಲ್ಲ. ಆದರೂ ಎಲ್ಲಾ ಕೊರಗ ಬಂಧುಗಳ ಒಪ್ಪಿತ ವಿಚಾರವೇನೆಂದರೆ 'ಆ ಮುಖಂಡನೇ ನಮ್ಮ ಕಾಡಿನ ರಾಜನಾಗಿದ್ದ'
ಆ ರಾಜ ಎಲ್ಲರಂತೆ ಕಿರೀಟವಿಟ್ಟ ಅರಮನೆ ಕಟ್ಟಿದವನಲ್ಲ! ಯುದ್ಧಕ್ಕೆ ಹೊರಟು ರಾಜ್ಯ ಕಾರಭಾರ ಮಾಡಿದವನೂ ಅಲ್ಲ! ಸಾಮ್ರಾಜ್ಯ ಕಟ್ಟಿ ಮೆರೆಯಬೇಕೆಂಬ ಮಹತ್ವಾಕಾಂಕ್ಷೆಯ ಅರಿವೂ ಅವನಿಗಿರಲಿಲ್ಲ. ಯುದ್ಧವೆಂದರೇನು ಎಂದೇ ಗೊತ್ತಿರಲಿಲ್ಲ. ಕಾರಣ, ಆತನಿಗೆ ಕಾಡಿನ ಹೊರತಾದ ಬದುಕು ಏನೆಂದೇ ಗೊತ್ತಿಲ್ಲ. ಆದರೂ ಕಾಡೆಂಬ ಕೋಟೆಯಲ್ಲಿ ತನ್ನ ಕೊರ್ರೆ ಬಂಧುಗಳ ಒಡಗೂಡಿ, ಕಾಡಿನಲ್ಲಿ ಡೋಲು ಬಡಿಯುತ್ತಾ, ಕೊಳಲು ಊದುತ್ತಾ ಬೇಟೆಯಾಡಿ ಮೆರೆದ ಕೊರ್ರೆ (ಕೊರಗ) ಜನರ ಏಕೈಕ ಮುಖಂಡ. ಇಡೀ ಕಾಡು ಮತ್ತು ತನ್ನ ಕೊರ್ರೆ ಜನಗಳ ರಕ್ಷಣೆಯ ಹೊಣೆ ಅವನದೇ ಆಗಿತ್ತು. ಬಿಲ್ಲು ಬಾಣ, ಕತ್ತಿಯಾಕಾರದ ಚೂಪಾದ ಕಲ್ಲುಗಳೇ ಆತನ ಜನರ ಅಸ್ತ್ರಗಳು. ಹಸಿವಾದಾಗ ಬೇಟೆ, ಧಣಿವಾರಿಸಲು ಡೋಲು ಇಂತಿಷ್ಟೇ ಗೊತ್ತು.
ಹೀಗೆ, ಕಾಡಿನಲ್ಲಿನ ಡೋಲಿನ ಧ್ವನಿ ನಾಡಿನ ತುಂಡರಸರ ಕಿವಿಗಪ್ಪಳಿಸಿತು. ಸಾಮ್ರಾಜ್ಯ ವಿಸ್ತೀರ್ಣದ ಆಕಾಂಕ್ಷೆಯೋ ಅಥವ ಕಾಡು ತಮ್ಮ ಸುಪರ್ದಿಗೆ ಸೇರಬೇಕೆಂಬ ಮಹತ್ವಾಕಾಂಕ್ಷೆಯೋ ಏನೋ - ಆ ತುಂಡರಸರು ಕಾಡಿನ ಮೇಲೆ ಕಣ್ಣಿಟ್ಟರು. ಕಾಡಿನ ಆ ಕಟ್ಟಾಳು ಕೊರಗರನ್ನು ತಮ್ಮ ಸೇವೆಗೆ ನಿಯೋಜಿಸಿಕೊಳ್ಳಬೇಕೆಂಬ ಹಂಬಲದಿಂದಲೋ ಏನೋ - ಕಾಡಿನ 'ಕೊರ್ರೆ ಕಟ್ಟಾಳು'ಗಳಿಗೆ ತುಂಡರಸರ ಆಜ್ಙೆ ರವಾನೆಯಾಯಿತು. ಇತರರ ಅಡಿಯಾಳುಗಳಾಗ ಬಯಸದ ಕೊರ್ರೆ ಜನರು, ತಮ್ಮ ಬದುಕನ್ನು ತಮ್ಮ ಮುಖಂಡನೊಂದಿಗೆ ಕಾಡಿನಲ್ಲಿಯೇ ಮುಂದುವರಿಸಿದರು. ಆದರೆ, ಪಟ್ಟು ಬಿಡದ ನಾಡಿನ ತುಂಡರಸರು ಕಾಡಿನ ಕೋಟೆಗೆ ನುಗ್ಗಿಯೇ ಬಿಟ್ಟರು. ಯುದ್ಧವೇನೆಂದೇ ಅರಿಯದ ಮತ್ತು ಸಂಖ್ಯಾಬಲದ ಕೊರತೆ ಹಾಗು ಕಾಡಿನಲ್ಲಿ ಚದುರಿ ಚದುರಿ ಹೋಗಿದ್ದ ಕೊರಗರು - ಗೆಲುವಿನ ಅರಿವೇ ಇಲ್ಲದೆ ಸೋಲೊಪ್ಪಬೇಕಾಯಿತು. ಕೈಗೆ ಸಿಕ್ಕ ಕೊರ್ರೆ ಜನರ ಜೊತೆಗೆ ಆ ಮುಖಂಡನನ್ನೂ ಹತ್ಯೆಗೈಯಲಾಯಿತು. ತಮ್ಮ ಮುಖಂಡನ ಸಾವು ಮತ್ತು ರಕ್ತದ ಭೀಮತ್ಸತೆಯನ್ನು ಕಂಡು ಭಯಭೀತಗೊಂಡ ಕೊರ್ರೆ ಬಂಧುಗಳು ದಟ್ಟಾರಣ್ಯದಲ್ಲಿ ಅವಿತುಕುಳಿತರು. ಇನ್ನುಳಿದವರನ್ನು ನಿಶ್ಯಕ್ತಿಕರಣಗೊಳಿಸಿ, ಜೀತಕ್ಕೆ ನೇಮಿಸಲಾಯಿತು. ಅಂದಿನಿಂದ ಕೊರಗರ ಡೋಲು, ಕೊರಗರ ಬದುಕು, ತುಳುನಾಡಿನ ಪಾಲೆಗಾರರ ಜೀತಕ್ಕೆ ಬಳಕೆಯಾಯಿತು. ಅದನ್ನು ಈಗಲೂ 'ಅಜಲು ಚಾಕರಿ' ಎನ್ನಲಾಗುತ್ತದೆ.
ಈ ದೈಹಿಕ ಮಾನಸಿಕ ಮತ್ತು ಸಾಮಾಜಿಕ ದಬ್ಬಾಳಿಕೆ ಮತ್ತು ತಮ್ಮ ಮುಖಂಡನ ಸಾವಿನಿಂದ ಅಳಿದುಳಿದ ಕೊರಗರು ಕಾಡಿನಲ್ಲಿಯೇ ಅನಾಥರಾದರು. ಅವರಿಗೆ ಈ ನಾಡಿನ ತುಂಡರಸರು ಹಲವಾರು ನಿರ್ಬಂಧಗಳನ್ನು, ನಿಷೇಧಗಳನ್ನು ಜಾರಿಗೊಳಿಸಿರು. ಕೊರಗ ಜನರು ನಾಡಿಗೆ ಬರುವಾಗ ಕೋಲು ಕುಟ್ಟುತ್ತಾ 'ನಾವು ಕೊರಗರು' ಎಂದು ಹೇಳುತ್ತಾ ಬರಬೇಕು. ನಾಡಿನಲ್ಲಿ ಉಗುಳಬಾರದು, ಬಟ್ಟೆ ತೊಡಲೇಬಾರದು, ಸಂಜೆಯಾಗುವ ಮೊದಲು ಕಾಡು ಸೇರಬೇಕು ಎಂಬ ನಿರ್ಬಂಧವಿತ್ತು. ಕತ್ತಲಾದರೆ ಕೊರ್ರು ಎಂದು ಹೇಳುವುದನ್ನೇ ನಿಷೇಧಿಸಲಾಗಿತ್ತು.ಹಾಗಾಗಿ, ಕೊರ್ರುಗಳು ನಾಡಿಗೆ ಬರುವಾಗ - ತಮ್ಮ ಸೊಂಟಕ್ಕೆ ಬಿದಿರಿನ ಬೊಂಬನ್ನು ಅಥವಾ ಕುತ್ತಿಗೆಗೆ ಚಿಪ್ಪನ್ನು ಕಟ್ಟಿಕೊಂಡು ಬರುತ್ತಿದ್ದರು. ಆ ಬೊಂಬಿಗೆ ತಮ್ಮ ಎಂಜಲನ್ನು ಉಗುಳುತ್ತಿದ್ದರು. ಯಾಕೆಂದರೆ ಕೊರಗರ ಎಂಜಲು ಈ ಭೂಮಿಗೆ ಬಿದ್ದರೆ ಅನಿಷ್ಟ ಎಂದು ನಂಬಿದ ಈ ನಾಡಿನ ಜನರನ್ನು ಮತ್ತೊಮ್ಮೆ ಎದುರಿಸಲಾಗದು ಎಂದು ಭಯಕ್ಕೆಬಿದ್ದಿದ್ದರು.
ಅಂದಿನಿಂದ ಕೊರಗರು ತಮ್ಮ ಕುರಿತು ಯಾರು ಏನೇ ಕೇಳಿದರು ಸ್ಪಷ್ಟ ಮಾಹಿತಿಯನ್ನು ನೀಡಲೇ ಇಲ್ಲ. ತಮ್ಮ ಮುಖಂಡನ ದಾರುಣ ಅಂತ್ಯವನ್ನು ಕಂಡು ತೀವ್ರ ಭಯಭೀತಗೊಂಡಿದ್ದರಿಂದ ಮತ್ತು ಆತನ ಹೆಸರೆತ್ತಿದರೆ ನಮ್ಮನ್ನೂ ಕೊಲ್ಲುತ್ತಾರೆಂದು ನಂಬಿದ ಕೊರಗ ಜನರು ಇವತ್ತಿಗೂ ಆ ಹೆಸರನ್ನೆತ್ತಲ್ಲ.
ಕೊರಗರನ್ನು ಸಂದರ್ಶಿಸಿದ ಇತಿಹಾಸಕಾರ ಕೇಳಿದ ಪ್ರಶ್ನೆ 'ನಿಮ್ಮ ರಾಜ ಯಾರು?' ಮೊದಲೇ ಆ ಹೆಸರೆತ್ತಿದರೆ ಕೊಂದು ಬಿಡುತ್ತಾರೆಂಬ ಅನಾದಿ ಕಾಲದ ಭಯ ಮತ್ತು ಅದನ್ನು ಹೇಳಲಾಗದು ಎಂಬ ವಂಶಪಾರಂಪರ್ಯದ ದೃಢ ನಿರ್ಧಾರ ಹಾಗು ತಮ್ಮ ಹಿರಿಯರ ಮಾತಿಗೆ ಕಟಿಬದ್ಧರಾಗಿದ್ದ ಕೊರಗರು ತುಂಬ ವಿಷಾದನೀಯದಿಂದ 'ಅಬ ಚೈಕ', ' ಒಬ ಬುಕ'ಎಂದು ಬಿಟ್ಟರು.. ಅದನ್ನು 'ಅಬಶಿಕ' ಅಥವಾ'ಹುಭಾಶಿಕ' ಎಂದು ಇತಿಹಾಸಕಾರರು ಬರೆದು ಬಿಟ್ಟರು.
ಹೀಗೆ ಹೇಳಲು ಕಾರಣವೇ - 'ಭಯ'. ಹಾಗಾಗಿಯೇ ಆ ಇತಿಹಾಸಕಾರನ ಎಲ್ಲ ಪ್ರಶ್ನೆಗಳಿಗೂ 'ಅದೆಲ್ಲಾ ಯಾಕೆ', 'ಅದನ್ನು ಹೇಳಲಾಗದು', 'ಅದು ನಮ್ಮ ಬದುಕಿನ ಪ್ರಶ್ನೆ' ಎಂದು ಕೊರ್ರೆ ಭಾಷೆಯಲ್ಲಿಯೇ ಉತ್ತರಿಸಿದ್ದಾರೆ. ತಮ್ಮ ಮುಖಂಡನಿದ್ದ 'ಕೊರ್ರೆ ಕೋಟೆ' ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ದಟ್ಟ ಕಾಡಿನಲ್ಲಿದೆಯೆಂಬ ಕನಿಷ್ಟ ಒಂದೇ ಒಂದು ಮಾಹಿತಿಯನ್ನೂ ನೀಡದೆ ಎಲ್ಲಾ ಸತ್ಯವನ್ನು ಬಚ್ಚಿಟ್ಟಿದ್ದಾರೆ. ಸುಳ್ಳನ್ನು ಹೇಳಿಲ್ಲ, ಸತ್ಯವನ್ನು ಬಿಚ್ಚಿಟ್ಟಿಲ್ಲ!
- ಹೃದಯ
(ಆ ಕೊರ್ರೆ ಮುಖಂಡನ ನಂತರ ಇಡೀ ಕೊರಗ ಸಮುದಾಯಕ್ಕೆ ಆತ್ಮಬಲವನ್ನು ತಂದುಕೊಟ್ಟಾತ 'ಕೊರಗ ತನಿಯ'. ಈತನನ್ನು ಹೆಚ್ಚಿನ ಎಲ್ಲಾ ಸಮುದಾಯದವರೂ 'ಕೊರಗಜ್ಜ ದೈವ' ಎಂದು ನಂಬಿಕೊಂಡು ಆರಾಧಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಜನಪದ ಸಾಹಿತ್ಯ ಎನಿಸಿಕೊಂಡಿರುವ ಪಾಡ್ದನದಲ್ಲಿ ಕೊರಗ ತನಿಯನ ಕುರಿತು ಸಾಕಷ್ಟು ಮಾಹಿತಿಯೂ ಲಭ್ಯವಿದೆ.)
ಕೊರಗರ ಬಳಿ ಇತ್ತು ಕಂಚಿನ ಡೋಲು
ಕೊರಗರ ಡೋಲಿನ (ಕೊರಗರು ಡೋಲಿಗೆ 'ಕಡ್ಡಾಯಿ' ಎನ್ನುತ್ತಾರೆ) ಕುರಿತು ಹಲವಾರು ಕಥೆಗಳು ಜನಪದರ ಬಾಯಿಯಲ್ಲಿ ಹರಿದಾಡುತ್ತಿತ್ತು. ಮನರಂಜನೆಗೋ ವಾಸ್ತವವೋ ಅಂತೂ ಬಾಯಿಯಲ್ಲಿ ಚಾಲ್ತಿಯಲ್ಲಿತ್ತು. ಒಂದು ಕಾಲದಲ್ಲಿ ಕೊರಗ ಜನಾಂಗವು ಲೋಹದ ಕಡ್ಡಾಯಿ ಬಳಸುತ್ತಿದ್ದರು ಎಂಬ ಇತಿಹಾಸಕ್ಕೆ ಪೂರಕವಾದ ಮೌಖಿಕ ಕಥೆಯೊಂದು ನಿಮಗಾಗಿ..
ಉಡುಪಿ ಜಿಲ್ಲೆಯ ಹಿರಿಯಡ್ಕ ಗ್ರಾಮದ, ಪಡ್ಡಂಬೂಡು ಜೈನ ಮನೆತನದ ವ್ಯಾಪ್ತಿಯಲ್ಲಿ ಅಜಲು ಚಾಕರಿ ಮಾಡುತ್ತಿದ್ದ ಕೊರಗರು 'ಕಂಚಿನ ಕಡ್ಡಾಯಿ' ಹೊಂದಿದ್ದರು. ಕ್ರಿ ಶ 1783 - 84 ರಲ್ಲಿ ಟಿಪ್ಪು ಸುಲ್ತಾನನ ಕಡೆಯವರು ಕರಾವಳಿ ಕರ್ನಾಟಕದತ್ತ ದಾಳಿ ನಡೆಸಿದರು. ಒಮ್ಮೆ ಸುಲ್ತಾನನ ದಂಡು ಹಿರಿಯಡ್ಕಕ್ಕೆ ಭಾಗದತ್ತ ಆಗಮಿಸಿ, ಲೋಹದ ಮೂರ್ತಿ, ಲೋಹದ ಸರಂಜಾಮುಗಳನ್ನು - ಮದ್ದು ಗುಂಡು ತಯಾರಿಸಲು ಬೆಳ್ತಂಗಡಿ ಸಮೀಪದ ಜಮಾಲಗಡ ಕೋಟೆಗೆ ಕೊಂಡೊಯ್ದಿದ್ದರು. ಇದನ್ನರಿತ ಜೈನ ಆಳ್ವಿಕೆಯ ಬೀಡಿನವರು ಕಂಚಿನ ಕಡ್ಡಾಯಿ ಸುಲ್ತಾನರ ಪಾಲಾಗಬಾರದೆಂಬ ಮುಂಜಾಗ್ರತೆಯಿಂದಾಗಿ - ಕೊರಗರಿಗೆ ಕಡ್ಡಾಯಿಯನ್ನು ಬೀಡಿನ ಬಾವಿಗೆ ಹಾಕುವಂತೆ ಹೇಳಿದರು. ಹೀಗೆ ಕೊರಗರ ಕಂಚಿನ ಕಡ್ಡಾಯಿ ನೀರು ಪಾಲಾಯ್ತು. ಕಳೆದುಕೊಂಡ ಕಂಚಿನ ಕಡ್ಡಾಯಿ ಮತ್ತೆಂದೂ ದಕ್ಕಿಸಿಕೊಳ್ಳಲಾಗಿಲ್ಲ. ಇದನ್ನು ಬಾಯ್ದೆರೆಯ ಕಥೆಯಾಗಿ ಕೊರಗ ಜನಾಂಗದವರು ಈಗಲೂ ನೆನಪಿಸಿಕೊಳ್ಳುತ್ತಾರೆ.
ಕಂಚಿನ ಕಡ್ಡಾಯಿ ಮಾತ್ರವಲ್ಲ, ಕಂಚಿನ ಪಾತ್ರೆಗಳೂ ಕೊರಗರಲ್ಲಿ ವ್ಯಾಪಕ ಬಳಕೆಯಲ್ಲಿತ್ತು. ಮಂಗಳೂರು ತಾಲೂಕಿನ ಕಡಂದಲೆ ಗ್ರಾಮದ ಸಚ್ಚೇರಿಪೇಟೆ ಕೊರಗರ ಕಾಲೋನಿಯ ಪ್ರತಿ ಕೊಟ್ಟ (ಮನೆ) ಕೊಟ್ಟದಲ್ಲೂ ಕಂಚಿನ ಬಟ್ಟಲು ಉಪಯೋಗಿಸುತ್ತಿದುದನ್ನು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ.
- ಹೃದಯ
- ಹೃದಯ
ಶುಕ್ರವಾರ, ಜೂನ್ 20, 2014
ಕೊರಗರು ದೇವರಿಗೆ ಹತ್ತಿರ! ಮಡಿವಂತರಿಗೆ ದೂರ!
ಕೊರಗರು ದೇವರಿಗೆ ಹತ್ತಿರ! ಆದರೆ, ಮಡಿವಂತರೆನಿಸಿಕೊಳ್ಳುವವರಿಗೆ ದೂರ!
'ಪರಶುರಾಮ ಸೃಷ್ಠಿ'ಯೆಂದು ಕರೆಸಲ್ಪಡುವ ಈ ತುಳುನಾಡಿನಲ್ಲಿ ದೈವಸ್ಥಾನ ದೇವಸ್ಥಾನಗಳಿಗೇನು ಕೊರತೆಯಿಲ್ಲ. ಕಾಲಿಟ್ಟ ಊರು ಕೇರಿಗಳಲ್ಲಿಯೂ ಒಂದೊಂದು ದೇವಸ್ಥಾನವಿದೆ. ಮನೆ ಮನೆಗಳಲ್ಲೂ ದೈವಸ್ಥಾನವಿದೆ. ಹಾಡಿ ಹಾಡಿಗಳಲ್ಲೂ ನಾಗಬನಗಳಿವೆ. ಪವಿತ್ರ ಮರದಡಿಗಳಲ್ಲೂ ತಾವು ನಂಬುಕೊಂಡು ಬಂದ ಭೂತಗಳಿಗೊಂದು 'ಕಲ್ಲು' ಇದೆ . ಆ ಅರ್ಥದಲ್ಲಿ ಇಡೀ ತುಳುನಾಡೇ ಒಂದು ಪವಿತ್ರ ಕ್ಷೇತ್ರ.
ಈ ಪವಿತ್ರ ತುಳುನಾಡಿನ ಮೂಲನಿವಾಸಿಗಳೇ ಕೊರಗ ಆದಿವಾಸಿಗಳು. ತುಂಬಾ ಮುಗ್ಧರು. ತಮ್ಮದೆ 'ಕೊರ್ರೆ' ಭಾಷೆ, ವೇಷ ಭೂಷಣ, ಆಚಾರ ವಿಚಾರ, ಸಂಸ್ಕೃತಿ, ವೃತ್ತಿ, ಮನೋರಂಜನೆ ಎಲ್ಲವೂ ತುಳುಜನರಿಗಿಂತ ಭಿನ್ನ. ಕಾಡೇ ಬದುಕು. ಕಾಡೇ ಸಾಮ್ರಾಜ್ಯ. ಕಾಡೇ ತಮ್ಮ ಪಾಲಿನ ಪವಿತ್ರ ದೇವರು.
ಈ ಕಾಡನ್ನೇ ದೇವರೆಂದು ಪೂಜಿಸಿಕೊಂಡು ಬರುತ್ತಿದ್ದ ಕೊರಗರಿಗೆ - ತುಳುನಾಡಿನ ಅನೇಕ ದೇವರುಗಳು ತುಂಬಾ ಹತ್ತಿರ! ಹಾಗಂತ, ಈ ತುಳುನಾಡಿನ ಪವಿತ್ರ ಕ್ಷೇತ್ರ ಪುರಾಣಗಳು, ಜನಪದ ಪಾಡ್ದಾನಗಳು ಸಾರಿ ಸಾರಿ ಹೇಳುತ್ತಿದೆ. ಶ್ರೀ ಕ್ಷೇತ್ರ ಅದ್ಯಪಾಡಿ - ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಕುಡುಪು - ಸುಭ್ರಮಣ್ಯ ದೇವಸ್ಥಾನ, ಶ್ರೀ ಕ್ಷೇತ್ರ ಕಾಂತಾವರ - ಕಾಂತೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಎಲ್ಲೂರು ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಹೀಗೆ ಹತ್ತು ಹಲವು ಪುಣ್ಯ ಕ್ಷೇತ್ರಗಳ ಉದ್ಭವ ಕತೆಗಳು ಕೊರಗ ಜನಾಂಗದ ಉಪಸ್ಥಿತಿಯೊಂದಿಗೆ ಬೆಸೆದುಕೊಂಡಿದೆ. ಈ ಎಲ್ಲಾ ದೇವರುಗಳು ಕೊರಗರಿಗೆ ಒಲಿದಿದ್ದಾರೆ ಎಂದು ಪೌರಾಣಿಕ ಇತಿಹಾಸ ದಾಖಲಿಸಿದೆ. ಕೊರಗರೆಷ್ಟು ಪುಣ್ಯವಂತರು?
ಇಷ್ಟೆಲ್ಲಾ ಪುಣ್ಯವಂತರು ಎಂದೆನಿಸಿಕೊಂಡರೂ ಕೊರಗರು ಮಾತ್ರ ಆ ಎಲ್ಲಾ ದೇವಸ್ಥಾನಗಳಿಗೂ 'ಅಸ್ಪ್ರಶ್ಯರು'! ಆ ದೇವರ ಅಂಗಣದ ಧೂಳಿಗೂ ನಿಕೃಷ್ಟರು. ಕೊರಗರಿಗೆ ದೇವಸ್ಥಾನ ಪ್ರವೇಶವೆಂಬುದು ಕನಸಿನ ಮಾತೇ ಆಗಿತ್ತು. ತೀರಾ ಇತ್ತೀಚಿನವರೆಗೂ ಅಂದರೆ 'ಅಜಲು ನಿಷೇಧ ಕಾಯಿದೆ' ಜಾರಿಯಾಗುವವರೆಗೂ ಕೊರಗರು ದೇವಸ್ಥಾನದ ಗದ್ದೆಯ ಮೂಲೆಯಲ್ಲೆಲ್ಲೋ ನಿಂತು ಡೋಲು ಬಡಿಯಬೇಕಿತ್ತು. ಕಡ್ಡಾಯವಾಗಿ ಅಜಲು ಚಾಕರಿ ಮಾಡಲೇಬೇಕಿತ್ತು. ತುಳುನಾಡಿನ ಎಲ್ಲಾ ದೇವಸ್ಥಾನಗಳಲ್ಲೂ ಈ ನಿಬಂಧನೆ ಜಾರಿಯಲ್ಲಿತ್ತು. ಕೊರಗರು ತುಳುಜನರ ಪ್ರಕಾರ ಆ ಕಾಣದ ದೇವರಿಗೆ ಮಾತ್ರ ಹತ್ತಿರ! ದೇವಸ್ಥಾನಗಳಿಗಂತೂ ಭಾರೀ ದೂರ!!
ಇನ್ನು ಈ ಪವಿತ್ರ ತುಳುನಾಡಿನಲ್ಲಿ ಎಣು ಮುಗಿಸಲಾರದಷ್ಟೂ ಜಾತಿ ಉಪಜಾತಿಗಳನ್ನು ವಿಂಗಡಿಸಿ - ಅವುಗಳು ಮೇಲಿಂದ ಕೆಳಕ್ಕೆ ಒಬ್ಬರಿಗಿಂತ ಒಬ್ಬರು ಕೀಳೆನ್ನುತ್ತ, ಕೆಳಗಿನಿಂದ ಮೇಲಕ್ಕೆ ಒಬ್ಬರಿಗಿಂತ ಒಬ್ಬರು ಶ್ರೇಷ್ಠರೆನ್ನುತ್ತ, ಒಬ್ಬರಿಗಿಂತ ಒಬ್ಬರು ಮೈಲಿಗೆಯೆಂದು ಮಡಿಯೆಂದು ವಿಂಗಡಿಸಿ, ಜಾತಿ ಆಧಾರದಲ್ಲಿ ತುಳಿಯುತ್ತಾ ಬಲಿಷ್ಟರಾಗತ್ತಾ ಬೆಳೆದು ತುಳುನಾಡಿನಲ್ಲಿ ದೌರ್ಜನ್ಯದ ಪಾಳೇಗಾರಿಕೆಯನ್ನು ಹುಟ್ಟುಹಾಕಿದರು. ಆ ಮಡಿವಂತರ ಕೆಳಗೆ ಕಾಲಕಸದಂತೆ ಇನ್ನಿತರರು ಬದುಕು ಸವೆಸಿದರು. ವರ್ಣಾಶ್ರಮದ ಅರಿವೇ ಇಲ್ಲದೆ, ಕಾಡಿನಲ್ಲಿಯೇ ಬದುಕುತ್ತಿದ್ದ ಕೊರಗರು ನಾಡಿನ ಬಲಿಷ್ಠರ ಬಿಟ್ಟಿ ಚಾಕರಿ/ಬುಟ್ಟಿ ಚಾಕರಿ (ಅದನ್ನು ಅಜಲು ಚಾಕರಿ ಎನ್ನಲಾಗುತ್ತದೆ) ಮಾಡಿಕೊಂಡು ತಮಗರಿವಿಲ್ಲದಂತೆ ವರ್ಣಾಶ್ರಮಕ್ಕೆ ಬಲಿಯಾಗಬೇಕಾಯಿತು. ಕೊರಗರು ಜಾತಿ ವ್ಯವಸ್ಥೆಯ ಕಟ್ಟ ಕಡೆಗೆ ತುಳಿಯಲ್ಪಟ್ಟರು. ಮೇಲ್ವರ್ಗದ ಎಲ್ಲಾ ಬಿಟ್ಟಿ ಚಾಕರಿಗಳಿಗೆ ಈ ಜನಾಂಗವೇ ಜೀವತೆಯ್ದಿದೆ. ಇವತ್ತಿಗೂ ಕೊರಗರಿಗೆ ಹಲವಾರು ರೀತಿಯ ದಿಗ್ಭಂದನೆಗಳು ಈ ತುಳುನಾಡಿನಲ್ಲಿ ಜಾರಿಯಲ್ಲಿದೆ.
ಬದಲಾಗಬಹುದೇ ಈ ಸಮಾಜ? ಇತರರಂತೆಯೇ ಬದುಕುವ ಸ್ವಾತಂತ್ರ್ಯ ಮತ್ತು ನಿರ್ಬಂಧ ಮುಕ್ತ ಜೀವನ ಕೊರಗರದ್ದಾಗುವುದೇ? ಕೊರಗರು ದೇವರಿಗೆ ಹತ್ತಿರ ಎನ್ನುವ ತುಳುಜನರು, ಕೊರಗರನ್ನು ಯಾಕೆ ಸಮಾಜದಿಂದ ದೂರವಿರಿಸಿದ್ದಾರೆ?! ತುಳುಜನರ ಬಿಟ್ಟಿ ಚಾಕರಿ/ಬುಟ್ಟಿ ಚಾಕಿರಿಗೆ ಮಾತ್ರ ಕೊರಗರೇ?!
- ಹೃದಯ
- ಹೃದಯ
Stop Calling the Iraq War a 'Mistake'
By Dennis Kucinich, Reader Supported News
17 June 14
As Iraq descends into chaos again, more than a decade after "Mission Accomplished," media commentators and politicians have mostly agreed upon calling the war a "mistake." But the "mistake" rhetoric is the language of denial, not contrition: it minimizes the Iraq War's disastrous consequences, removes blame, and deprives Americans of any chance to learn from our generation's foreign policy disaster. The Iraq War was not a "mistake" -- it resulted from calculated deception. The painful, unvarnished fact is that we were lied to. Now is the time to have the willingness to say that.
In fact, the truth about Iraq was widely available, but it was ignored. There were no WMD. Saddam Hussein had nothing to do with 9/11. The war wasn't about liberating the Iraqi people. I said this in Congress in 2002. Millions of people who marched in America in protest of the war knew the truth, but were maligned by members of both parties for opposing the president in a time of war -- and even leveled with the spurious charge of "not supporting the troops."
I've written and spoken widely about this topic, so today I offer two ways we can begin to address our role:
1) President Obama must tell us the truth about Iraq and the false scenario that caused us to go to war.
When Obama took office in 2008, he announced that his administration would not investigate or prosecute the architects of the Iraq War. Essentially, he suspended public debate about the war. That may have felt good in the short term for those who wanted to move on, but when you're talking about a war initiated through lies, bygones can't be bygones.
When Obama took office in 2008, he announced that his administration would not investigate or prosecute the architects of the Iraq War. Essentially, he suspended public debate about the war. That may have felt good in the short term for those who wanted to move on, but when you're talking about a war initiated through lies, bygones can't be bygones.
The unwillingness to confront the truth about the Iraq War has induced a form of amnesia which is hazardous to our nation's health. Willful forgetting doesn't heal, it opens the door to more lying. As today's debate ensues about new potential military "solutions" to stem violence in Iraq, let's remember how and why we intervened in Iraq in 2003.
2) Journalists and media commentators should stop giving inordinate air and print time to people who were either utterly wrong in their support of the war or willful in their calculations to make war.
By and large, our Fourth Estate accepted uncritically the imperative for war described by top administration officials and congressional leaders. The media fanned the flames of war by not giving adequate coverage to the arguments against military intervention.
By and large, our Fourth Estate accepted uncritically the imperative for war described by top administration officials and congressional leaders. The media fanned the flames of war by not giving adequate coverage to the arguments against military intervention.
President Obama didn't start the Iraq War, but he has the opportunity now to tell the truth. That we were wrong to go in. That the cause of war was unjust. That more problems were created by military intervention than solved. That the present violence and chaos in Iraq derives from the decision which took America to war in 2003. More than a decade later, it should not take courage to point out the Iraq war was based on lies.
ಈಗ ನಾವೇನು ಮಾಡಬೇಕು?
ಕೆ.ವಿ.ನಾರಾಯಣ
ಭಾಷಾ ತಜ್ಞ ಮತ್ತು ಕನ್ನಡ ಭಾಷಾ ಭಾರತಿ ಅಧ್ಯಕ್ಷ
1. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕೆಂಬುದಕ್ಕೆ ಈಗ ಯಾವ ಅಡ್ಡಿಯೂ ಇದ್ದಂತಿಲ್ಲ. 1989ರ ಕರ್ನಾಟಕ ಸರಕಾರದ ಆದೇಶ ಸಿಂಧುಗೊಂಡಿದೆ.
2. ಸುಪ್ರೀಂ ಕೋರ್ಟ್ ಎತ್ತಿಕೊಂಡ ಪ್ರಶ್ನೆಗಳಲ್ಲಿ 1994ರ ಕರ್ನಾಟಕ ಸರಕಾರದ ಆದೇಶದ 'ಮನ್ನಣೆ ಪಡೆದ ಶಾಲೆಗಳು ' ಎಂಬ ಮಾತಿನ ವ್ಯಾಪ್ತಿಯೊಳಗೆ ಅನುದಾನ ಪಡೆಯದ ಶಾಲೆಗಳೂ ಸೇರುತ್ತವೆಯೋ ಎಂಬುದೂ ಒಂದಾಗಿತ್ತು. ಈಗಿನ ದಾವೇದಾರರು ಅನುದಾನ ಪಡೆಯದ, ಆದರೆ ಸರಕಾರದ ಮನ್ನಣೆ ಪಡೆದ ಶಾಲೆಗಳ ಆಡಳಿತ ಮಂಡಲಿಯವರೇ ಇದ್ದಾರೆ. ಕರ್ನಾಟಕದ ಹೈಕೋರ್ಟ್ ಕೂಡ ಸರಕಾರ ಅನುದಾನ ನೀಡದಿದ್ದ ಮೇಲೆ ಆ ಶಾಲೆಗಳಲ್ಲಿ ಕಲಿಕೆ ಯಾವ ನುಡಿಯ ಮೂಲಕ ಆಗಬೇಕು ಎಂಬುದನ್ನು ಒತ್ತಾಯ ಮಾಡುವಂತಿಲ್ಲ ಎಂದೇ ಹೇಳಿತ್ತು. ಅಂದರೆ ಅನುದಾನ ಪಡೆಯದ ಶಾಲೆಗಳು ಎಂಬ ಒಂದು ಗುಂಪನ್ನು ಹುಟ್ಟು ಹಾಕಿದ್ದರಲ್ಲೇ ತಪ್ಪು ನಡೆದಿದೆ. ಇದನ್ನೀಗ ಸರಿಪಡಿಸಬೇಕು. ಮನ್ನಣೆ ಪಡೆಯ ಬೇಕೆಂದರೆ ಅನುದಾನ ಪಡೆಯಲೇಬೇಕೆಂದು ಷರತ್ತು ಹಾಕಬೇಕು. ಎಲ್ಲ ಶಾಲೆಗಳೂ ಸರಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿವೆಯಾದ್ದರಿಂದ ತನ್ನ ಕೆಲಸವನ್ನು ಮಾಡುತ್ತಿರುವ ಎಲ್ಲ ಶಾಲೆಗಳಿಗೂ ತನ್ನ ಷರತ್ತಿನ ಮೇಲೆಯೇ ಅನುದಾನ ಪಡೆಯಲೇಬೇಕೆಂದು ಸರಕಾರ ಹೇಳಬೇಕಾಗಿದೆ. ಅಲ್ಲದೆ ಮನ್ನಣೆ ಪಡೆದ ಎಂಬ ಮಾತಿನೊಳಗೆ ಅನುದಾನ ಪಡೆಯದ ಶಾಲೆಗಳು ಬರುತ್ತವೆ ಎಂದೂ ಸುಪ್ರೀಂಕೋರ್ಟ್ ಇಂದಿನ ತೀರ್ಪಿನಲ್ಲಿ ಹೇಳಿದೆ.
3. ಈಗ ಏನು ಮಾಡಬೇಕು? ಒಂದು ಭಾಷೆಯನ್ನು ಹತ್ತು ವರ್ಷಗಳ ಕಾಲ ಕಲಿಸುತ್ತಲೇ ಹೋಗುವ ಇಂದಿನ ಕಲಿಕೆಯ ಬಗೆಯನ್ನು ಮೊದಲು ಕೈ ಬಿಡಬೇಕು. ಯಾವುದೇ ಭಾಷೆಯನ್ನು ಮಾತಾಡುವ, ಆಲಿಸುವ, ಓದುವ ಮತ್ತು ಬರೆಯುವ ಕೌಶಲಗಳನ್ನು ಬೇರೆ ಬೇರೆ ಹಂತಗಳಲ್ಲಿ ಕಲಿಸುವ ಬಗೆಯನ್ನು ಜಾರಿಗೆ ತರಬೇಕು. ಕನ್ನಡ ಮನೆ ಮಾತು ಅಲ್ಲದ ಮಕ್ಕಳಿಗೆ ಕನ್ನಡ ಮಾತಾಡುವುದನ್ನು ಮೊದಲು, ಬಳಿಕ ಓದುವುದನ್ನು ಕಲಿಸುವ ಮಾದರಿಯನ್ನು ಜಾರಿಗೆ ತರಬೇಕು. ಕನ್ನಡ ಮನೆ ಮಾತಾಗಿರುವ ಮಕ್ಕಳಿಗೆ ಕನ್ನಡ ಓದುವ ಮತ್ತು ಬರೆಯುವ ಕೌಶಲಗಳನ್ನು ಕಲಿಸುತ್ತಿರುವ ಇಂದಿನ ಮಾದರಿಯಲ್ಲಿ ಹಲವು ಬದಲಾವಣೆಗಳನ್ನು ತರಬೇಕಾಗಿದೆ.
4. ಕನ್ನಡ ಮನೆ ಮಾತು ಅಲ್ಲದ ಮಕ್ಕಳ ಹಕ್ಕುಗಳನ್ನು ಕುರಿತು ಸುಪ್ರೀಂಕೋರ್ಟ್ ಹೆಚ್ಚಿನ ಒತ್ತನ್ನು ನೀಡಿದೆ. ಸರಿಯೇ. ಯಾವ ಮಗುವೇ ಆಗಲಿ ಅದು ಮನೆ ಮಾತನ್ನು ಇಲ್ಲವೇ ಕನ್ನಡವನ್ನು ಕಲಿಯಬೇಕು ಎಂಬ ಸರಕಾರದ ನಿಲುವನ್ನು ಕೋರ್ಟ್‌ಗಳು ಒಪ್ಪಿಕೊಂಡಿವೆ. ಈಗ ಅದು ಯಾವ ಅಡ್ಡಿಯೂ ಇಲ್ಲದಂತೆ ಜಾರಿಗೊಳ್ಳಬೇಕಾದರೆ ತಕ್ಕ ಕಲಿಕೆ ಏರ್ಪಾಡುಗಳನ್ನು ಮಾಡಬೇಕಾಗುತ್ತದೆ. ಈಗಿನ ಬಗೆ ಕಲಿಕೆಗೆ ನೆರವಾಗುವಂತಿಲ್ಲ. ಹಾಗಾಗಿಯೇ ವಿರೋಧಿಗಳನ್ನು ಹುಟ್ಟಿಹಾಕುತ್ತಿದೆ.
6. ಕರ್ನಾಟಕ ಸರಕಾರ 1964ರ ತ್ರಿಭಾಷಾ ನೀತಿಯನ್ನು ಮರುಪರಿಶಿಲನೆ ಮಾಡಲು ಮುಂದಾಗಬೇಕು. ಕಲಿಕೆಯಲ್ಲಿ ಕನ್ನಡಕ್ಕೆ ಜಾಗವನ್ನು ಒದಗಿಸಲು ಅನುಕೂಲವಾಗುವ ರೀತಿಯಲ್ಲಿ ತನ್ನ ಭಾಷಾ ನೀತಿಯನ್ನು ರೂಪಿಸಬೇಕು. ಕನ್ನಡವನ್ನು ಹತ್ತು ವರ್ಷಗಳ ಶಾಲಾ ಕಲಿಕೆಯ ಯಾವ ಹಂತದಲ್ಲಿ ಮತ್ತು ಎಷ್ಟು ವರ್ಷಗಳ ಕಾಲ ಕಲಿಸಬೇಕು ಎಂಬುದನ್ನು ನಿಗದಿ ಮಾಡಬೇಕು. ಎಲ್ಲರೂ ಒಪ್ಪಿಕೊಳ್ಳುವ ಬಗೆಯಲ್ಲಿ ಈ ನೀತಿಯನ್ನು ಜಾರಿಗೆ ತರಬೇಕಾದರೆ ಅದಕ್ಕೆ ಕಲಿಕೆಯ ಮಾದರಿಗಳನ್ನು ರೂಪಿಸಬೇಕು.
7. ಕಲಿಕೆ ಯಾವ ಭಾಷೆಯ ಮೂಲಕ ನಡೆದರೆ ಸರಿ ಎಂಬ ಪ್ರಶ್ನೆಯನ್ನು ಕೋರ್ಟ್ ಎತ್ತಿಕೊಂಡಂತೆ ತೋರುವುದಿಲ್ಲ. ಇಂಥದೇ ಭಾಷೆಯ ಮೂಲಕ ಕಲಿಯಬೇಕು ಎಂಬ ಒತ್ತಾಯವನ್ನು ಹೇರುವುದು ಸರಿಯೇ ಎಂಬ ಪ್ರಶ್ನೆಯನ್ನು ಮಾತ್ರ ಎತ್ತಿಕೊಂಡು ಉತ್ತರಿಸಿದೆ. ಈಗ ತಾಯ್ನುಡಿಯ ಮೂಲಕವೇ ಕಲಿಕೆ ನಡೆದರೆ ಸರಿ ಮತ್ತು ಬೇರೆ ನುಡಿಯ ಮೂಲಕ ನಡೆಯುವ ಕಲಿಕೆ ಊನಗೊಳ್ಳುತ್ತದೆ ಎಂಬುದನ್ನು ಎತ್ತಿ ತೋರುವ ಅಧ್ಯಯನಗಳನ್ನು ಮಾಡಬೇಕಾಗಿದೆ. ಈಗ ಇವೆಲ್ಲವೂ ಕೇವಲ ಭಾವುಕ ನೆಲೆಯಲ್ಲಿ ಮತ್ತು ಹೇಳಿಕೆಗಳ ನೆಲೆಯಲ್ಲಿ ಮಾತ್ರ ನಿಂತು ಬಿಟ್ಟಿವೆ.
ಭಾಷಾ ತಜ್ಞ ಮತ್ತು ಕನ್ನಡ ಭಾಷಾ ಭಾರತಿ ಅಧ್ಯಕ್ಷ
1. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕೆಂಬುದಕ್ಕೆ ಈಗ ಯಾವ ಅಡ್ಡಿಯೂ ಇದ್ದಂತಿಲ್ಲ. 1989ರ ಕರ್ನಾಟಕ ಸರಕಾರದ ಆದೇಶ ಸಿಂಧುಗೊಂಡಿದೆ.
2. ಸುಪ್ರೀಂ ಕೋರ್ಟ್ ಎತ್ತಿಕೊಂಡ ಪ್ರಶ್ನೆಗಳಲ್ಲಿ 1994ರ ಕರ್ನಾಟಕ ಸರಕಾರದ ಆದೇಶದ 'ಮನ್ನಣೆ ಪಡೆದ ಶಾಲೆಗಳು ' ಎಂಬ ಮಾತಿನ ವ್ಯಾಪ್ತಿಯೊಳಗೆ ಅನುದಾನ ಪಡೆಯದ ಶಾಲೆಗಳೂ ಸೇರುತ್ತವೆಯೋ ಎಂಬುದೂ ಒಂದಾಗಿತ್ತು. ಈಗಿನ ದಾವೇದಾರರು ಅನುದಾನ ಪಡೆಯದ, ಆದರೆ ಸರಕಾರದ ಮನ್ನಣೆ ಪಡೆದ ಶಾಲೆಗಳ ಆಡಳಿತ ಮಂಡಲಿಯವರೇ ಇದ್ದಾರೆ. ಕರ್ನಾಟಕದ ಹೈಕೋರ್ಟ್ ಕೂಡ ಸರಕಾರ ಅನುದಾನ ನೀಡದಿದ್ದ ಮೇಲೆ ಆ ಶಾಲೆಗಳಲ್ಲಿ ಕಲಿಕೆ ಯಾವ ನುಡಿಯ ಮೂಲಕ ಆಗಬೇಕು ಎಂಬುದನ್ನು ಒತ್ತಾಯ ಮಾಡುವಂತಿಲ್ಲ ಎಂದೇ ಹೇಳಿತ್ತು. ಅಂದರೆ ಅನುದಾನ ಪಡೆಯದ ಶಾಲೆಗಳು ಎಂಬ ಒಂದು ಗುಂಪನ್ನು ಹುಟ್ಟು ಹಾಕಿದ್ದರಲ್ಲೇ ತಪ್ಪು ನಡೆದಿದೆ. ಇದನ್ನೀಗ ಸರಿಪಡಿಸಬೇಕು. ಮನ್ನಣೆ ಪಡೆಯ ಬೇಕೆಂದರೆ ಅನುದಾನ ಪಡೆಯಲೇಬೇಕೆಂದು ಷರತ್ತು ಹಾಕಬೇಕು. ಎಲ್ಲ ಶಾಲೆಗಳೂ ಸರಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿವೆಯಾದ್ದರಿಂದ ತನ್ನ ಕೆಲಸವನ್ನು ಮಾಡುತ್ತಿರುವ ಎಲ್ಲ ಶಾಲೆಗಳಿಗೂ ತನ್ನ ಷರತ್ತಿನ ಮೇಲೆಯೇ ಅನುದಾನ ಪಡೆಯಲೇಬೇಕೆಂದು ಸರಕಾರ ಹೇಳಬೇಕಾಗಿದೆ. ಅಲ್ಲದೆ ಮನ್ನಣೆ ಪಡೆದ ಎಂಬ ಮಾತಿನೊಳಗೆ ಅನುದಾನ ಪಡೆಯದ ಶಾಲೆಗಳು ಬರುತ್ತವೆ ಎಂದೂ ಸುಪ್ರೀಂಕೋರ್ಟ್ ಇಂದಿನ ತೀರ್ಪಿನಲ್ಲಿ ಹೇಳಿದೆ.
3. ಈಗ ಏನು ಮಾಡಬೇಕು? ಒಂದು ಭಾಷೆಯನ್ನು ಹತ್ತು ವರ್ಷಗಳ ಕಾಲ ಕಲಿಸುತ್ತಲೇ ಹೋಗುವ ಇಂದಿನ ಕಲಿಕೆಯ ಬಗೆಯನ್ನು ಮೊದಲು ಕೈ ಬಿಡಬೇಕು. ಯಾವುದೇ ಭಾಷೆಯನ್ನು ಮಾತಾಡುವ, ಆಲಿಸುವ, ಓದುವ ಮತ್ತು ಬರೆಯುವ ಕೌಶಲಗಳನ್ನು ಬೇರೆ ಬೇರೆ ಹಂತಗಳಲ್ಲಿ ಕಲಿಸುವ ಬಗೆಯನ್ನು ಜಾರಿಗೆ ತರಬೇಕು. ಕನ್ನಡ ಮನೆ ಮಾತು ಅಲ್ಲದ ಮಕ್ಕಳಿಗೆ ಕನ್ನಡ ಮಾತಾಡುವುದನ್ನು ಮೊದಲು, ಬಳಿಕ ಓದುವುದನ್ನು ಕಲಿಸುವ ಮಾದರಿಯನ್ನು ಜಾರಿಗೆ ತರಬೇಕು. ಕನ್ನಡ ಮನೆ ಮಾತಾಗಿರುವ ಮಕ್ಕಳಿಗೆ ಕನ್ನಡ ಓದುವ ಮತ್ತು ಬರೆಯುವ ಕೌಶಲಗಳನ್ನು ಕಲಿಸುತ್ತಿರುವ ಇಂದಿನ ಮಾದರಿಯಲ್ಲಿ ಹಲವು ಬದಲಾವಣೆಗಳನ್ನು ತರಬೇಕಾಗಿದೆ.
4. ಕನ್ನಡ ಮನೆ ಮಾತು ಅಲ್ಲದ ಮಕ್ಕಳ ಹಕ್ಕುಗಳನ್ನು ಕುರಿತು ಸುಪ್ರೀಂಕೋರ್ಟ್ ಹೆಚ್ಚಿನ ಒತ್ತನ್ನು ನೀಡಿದೆ. ಸರಿಯೇ. ಯಾವ ಮಗುವೇ ಆಗಲಿ ಅದು ಮನೆ ಮಾತನ್ನು ಇಲ್ಲವೇ ಕನ್ನಡವನ್ನು ಕಲಿಯಬೇಕು ಎಂಬ ಸರಕಾರದ ನಿಲುವನ್ನು ಕೋರ್ಟ್‌ಗಳು ಒಪ್ಪಿಕೊಂಡಿವೆ. ಈಗ ಅದು ಯಾವ ಅಡ್ಡಿಯೂ ಇಲ್ಲದಂತೆ ಜಾರಿಗೊಳ್ಳಬೇಕಾದರೆ ತಕ್ಕ ಕಲಿಕೆ ಏರ್ಪಾಡುಗಳನ್ನು ಮಾಡಬೇಕಾಗುತ್ತದೆ. ಈಗಿನ ಬಗೆ ಕಲಿಕೆಗೆ ನೆರವಾಗುವಂತಿಲ್ಲ. ಹಾಗಾಗಿಯೇ ವಿರೋಧಿಗಳನ್ನು ಹುಟ್ಟಿಹಾಕುತ್ತಿದೆ.
6. ಕರ್ನಾಟಕ ಸರಕಾರ 1964ರ ತ್ರಿಭಾಷಾ ನೀತಿಯನ್ನು ಮರುಪರಿಶಿಲನೆ ಮಾಡಲು ಮುಂದಾಗಬೇಕು. ಕಲಿಕೆಯಲ್ಲಿ ಕನ್ನಡಕ್ಕೆ ಜಾಗವನ್ನು ಒದಗಿಸಲು ಅನುಕೂಲವಾಗುವ ರೀತಿಯಲ್ಲಿ ತನ್ನ ಭಾಷಾ ನೀತಿಯನ್ನು ರೂಪಿಸಬೇಕು. ಕನ್ನಡವನ್ನು ಹತ್ತು ವರ್ಷಗಳ ಶಾಲಾ ಕಲಿಕೆಯ ಯಾವ ಹಂತದಲ್ಲಿ ಮತ್ತು ಎಷ್ಟು ವರ್ಷಗಳ ಕಾಲ ಕಲಿಸಬೇಕು ಎಂಬುದನ್ನು ನಿಗದಿ ಮಾಡಬೇಕು. ಎಲ್ಲರೂ ಒಪ್ಪಿಕೊಳ್ಳುವ ಬಗೆಯಲ್ಲಿ ಈ ನೀತಿಯನ್ನು ಜಾರಿಗೆ ತರಬೇಕಾದರೆ ಅದಕ್ಕೆ ಕಲಿಕೆಯ ಮಾದರಿಗಳನ್ನು ರೂಪಿಸಬೇಕು.
7. ಕಲಿಕೆ ಯಾವ ಭಾಷೆಯ ಮೂಲಕ ನಡೆದರೆ ಸರಿ ಎಂಬ ಪ್ರಶ್ನೆಯನ್ನು ಕೋರ್ಟ್ ಎತ್ತಿಕೊಂಡಂತೆ ತೋರುವುದಿಲ್ಲ. ಇಂಥದೇ ಭಾಷೆಯ ಮೂಲಕ ಕಲಿಯಬೇಕು ಎಂಬ ಒತ್ತಾಯವನ್ನು ಹೇರುವುದು ಸರಿಯೇ ಎಂಬ ಪ್ರಶ್ನೆಯನ್ನು ಮಾತ್ರ ಎತ್ತಿಕೊಂಡು ಉತ್ತರಿಸಿದೆ. ಈಗ ತಾಯ್ನುಡಿಯ ಮೂಲಕವೇ ಕಲಿಕೆ ನಡೆದರೆ ಸರಿ ಮತ್ತು ಬೇರೆ ನುಡಿಯ ಮೂಲಕ ನಡೆಯುವ ಕಲಿಕೆ ಊನಗೊಳ್ಳುತ್ತದೆ ಎಂಬುದನ್ನು ಎತ್ತಿ ತೋರುವ ಅಧ್ಯಯನಗಳನ್ನು ಮಾಡಬೇಕಾಗಿದೆ. ಈಗ ಇವೆಲ್ಲವೂ ಕೇವಲ ಭಾವುಕ ನೆಲೆಯಲ್ಲಿ ಮತ್ತು ಹೇಳಿಕೆಗಳ ನೆಲೆಯಲ್ಲಿ ಮಾತ್ರ ನಿಂತು ಬಿಟ್ಟಿವೆ.
ಶನಿವಾರ, ಜೂನ್ 14, 2014
ಪ್ರತಿರೋಧದ ಗುಣ ಕಳೆದುಕೊಂಡರೆ ದಾವಣಗೆರೆ ಜನ?
ಸೌಜನ್ಯ:ವಿಜಯ ಕರ್ನಾಟಕ
ಮೂರು ದಶಕಗಳ ಹಿಂದೆ ದಾವಣಗೆರೆ ರಾಜ್ಯದ ಕಮ್ಯೂನಿಸ್ಟ್ ಮತ್ತು ದಲಿತ ಚಳವಳಿಯ ಪ್ರಮುಖ ಕೇಂದ್ರವಾಗಿತ್ತು. ರಾಜ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದ್ದ ದಲಿತ ಚಳವಳಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪನವರ ತವರೂರು ಹನಗವಾಡಿ ಇರುವುದು ದಾವಣಗೆರೆಯಲ್ಲೇ. ಗೋಕಾಕ್ ಚಳವಳಿಯಲ್ಲೂ ದಾವಣಗೆರೆ ಜನ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಪ್ರತಿರೋಧದ ಗುಣ ದಾವಣಗೆರೆಯ ಜನರಲ್ಲಿ ರಕ್ತದಲ್ಲಿ ಹಾಸುಹೊಕ್ಕಾಗಿತ್ತು. ಆದರೂ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಜನ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಸಂವೇದನೆ ಕಳೆದುಕೊಂಡಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತೆ. ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ, ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳು ಮತ್ತೆ ಮತ್ತೆ ಇಂತಹ ಪ್ರಶ್ನೆ ಕೇಳುವಂತೆ ಮಾಡಿದೆ.
ಎರಡು ತಿಂಗಳ ಹಿಂದೆ ದಾವಣಗೆರೆ ತಾಲೂಕಿನ ಕಾಟಿಹಳ್ಳಿಯಲ್ಲಿ ಮಾರಿಕಾಂಬ ಜಾತ್ರೆ ನಡೆಯಿತು. ಆ ಸಂದರ್ಭದಲ್ಲಿ ಮಾರಿಯಮ್ಮ ಎಂಬ ದಲಿತ ಮಹಿಳೆಯನ್ನು ಸಿಡಿ ಏರಿಸಲಾಯಿತು. ಈ ಅನಾಗರಿಕ ಆಚರಣೆ ಸಂದರ್ಭದಲ್ಲಿ ಆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು, ಪಿಎಸ್‌ಎಸ್ ಎಲ್ಲರೂ ಇದ್ದರು. ಸಾವಿರಾರು ಮಂದಿ ಭಕ್ತಾದಿಗಳು ನೆರೆದಿದ್ದರು. ಆದರೂ ಇಡೀ ಸಮಾಜ ತಲೆ ತಗ್ಗಿಸುವಂತಹ ಅಹಿತಕರ ಘಟನೆ ನಡೆದೇ ಹೋಯಿತು. ಇದನ್ನು ತಡೆಯಲು ಹೋದ ದೇವದಾಸಿ ವಿಮೋಚನಾ ಸಂಘದ ಸದಸ್ಯರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪೊಲೀಸರು ಮತ್ತು ಜಿಪಂ ಸದಸ್ಯರೇ ದಿಕ್ಕುತಪ್ಪಿಸಿದ್ದರು.
ಮಾಯಕೊಂಡ ಸಮೀಪದ ಹುಚ್ಚವನಹಳ್ಳಿಯಲ್ಲಿ ದೇವದಾಸಿ ಮಹಿಳೆಯೊಬ್ಬರನ್ನು ಸಿಡಿ ಏರಿಸಲು ಊರಿನ ಹಿರಿಯರು ಸಿದ್ಧತೆ ನಡೆಸಿದ್ದರು. ಆದರೆ ಕೆಲವು ಸಂಘಟನೆಗಳು ಮತ್ತು ಅಧಿಕಾರಿಗಳ ಮಧ್ಯಪ್ರವೇಶದಿಂದ ಘಟನೆ ನಡೆಯಲಿಲ್ಲ. ಇದಾದ ಕೆಲವು ದಿನಗಳ ನಂತರ ಊರಿನ ಹಿರಿಯರೊಬ್ಬರು ಸಿಡಿ ಏರಿಸಲು ಆಯ್ಕೆ ಮಾಡಿದ್ದ ದೇವದಾಸಿ ಮಹಿಳೆಯನ್ನು ನಿಂದಿಸಿ, ಹಲ್ಲೆ ನಡೆಸಿದ್ದರು. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೇ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಲಿಲ್ಲ. ಬದಲಿಗೆ ಪ್ರಕರಣವನ್ನೇ ತಿರುಚಲಾಯಿತು.
ನಾಗರಿಕ ಸಮಾಜದ ಅಂತಃಕರಣ ಕಲುಕುವಂತಹ ಮತ್ತೊಂದು ಪ್ರಕರಣ ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದಲ್ಲಿ ಘಟಿಸಿತು. ಗ್ರಾಮದ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯನ್ನು ದೇವದಾಸಿ ಪದ್ಧತಿಗೆ ಬಿಡಲಾಯಿತು. ಈ ಕುರಿತು ಜಿಲ್ಲಾಡಳಿತಕ್ಕೆ ಮೊದಲೇ ಮಾಹಿತಿ ಇತ್ತು. ಆದರೂ ಕೃತ್ಯ ತಡೆಯಲಿಲ್ಲ. ಕೆಲವು ಮಹಿಳಾ ಸಂಘಟನೆಗಳು ಇದರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಹಲವಾಗಲು ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣವನ್ನು ಪಿಎಸ್‌ಐ ಗಂಭೀರವಾಗಿ ಪರಿಗಣಿಸದೆ ಸಮಾಜ ಕಲ್ಯಾಣ ಇಲಾಖೆಗೆ ರೆಫರ್ ಮಾಡಿ ಬರಬೇಕಾದ ಸೌಲಭ್ಯ ಕೊಡಿಸುತ್ತೇನೆಂದು ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದರು. ಇದೊಂದು ನಿಷೇಧಿತ ಪದ್ಧತಿ, ಅದಕ್ಕೆ ಕಾರಣರಾದವರನ್ನು ಬಂಧಿಸಿ ವಿಚಾರಣೆಗೊಳಿಪಡಿಸುವ ಬದಲು ಪ್ರಕರಣವನ್ನೇ ತಿರುಚಿದರು. ಗ್ರಾಮಕ್ಕೆ ಭೇಟಿ ನೀಡಿದ್ದ ಮಾದಾರ ಚನ್ನಯ್ಯ ಸ್ವಾಮಿಗಳೊಂದಿಗೆ ಅಸಭ್ಯತೆಯಿಂದ ವರ್ತಿಸಿದ್ದರು. ನಂತರ ಸಮಾಜ ಕಲ್ಯಾಣ ಸಚಿವರು ಭೇಟಿ ನೀಡಿ ತನಿಖೆ ನಡೆಸುವುದಾಗಿ ಹೇಳಿದ್ದಷ್ಟೆ ನಡೆಯಿತು.
ಜಿಲ್ಲೆಯ ಸಚಿವರಾಗಲಿ, ಯಾವೊಬ್ಬ ಶಾಸಕರಾಗಲಿ ಈ ಕುರಿತು ಚಕಾರ ಎತ್ತಲಿಲ್ಲ. ಜಿಲ್ಲಾಧಿಕಾರಿಗಳು ಅದೇ ಸಮುದಾಯಕ್ಕೆ ಸೇರಿದವರಾದರೂ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂಬ ಕನಿಷ್ಟ ಚಿಂತನೆಯೂ ಅವರಲ್ಲಿ ಕಾಣಲಿಲ್ಲ.ದಿನೆ ದಿನೇ ಬೆಳೆಯುತ್ತಿರುವ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ಇಲ್ಲಿನ ಜನ, ರಾಜಕಾರಣಿಗಳು ಜಡ್ಡುಗಟ್ಟಿದ್ದಾರೆಯೇ ಎಂಬ ಭಾವನೆ ಮೂಡುತ್ತದೆ.
ವಿದ್ಯಾನಗರಿ ಎಂದೆಲ್ಲಾ ಕರೆಸಿಕೊಳ್ಳುವ ಈ ನಗರ ಆಸ್ತಮಾ ರೋಗದ ಕೇಂದ್ರ ಸ್ಥಾನವಾಗಿದೆ. ನಗರದಲ್ಲಿನ ಪಿಬಿ ರಸ್ತೆ ಮಧ್ಯ ಕರ್ನಾಟಕದ ಕಪ್ಪುಚುಕ್ಕೆಯಾಗಿದೆ. ಈ ರಸ್ತೆಯಲ್ಲಿನ ದೂಳಿನಲ್ಲಿರುವ ಕಣಗಳು ಸಾಮಾನ್ಯವಾಗಿ ಇರುವುದಕ್ಕಿಂತಲೂ ಹಲವು ಪಟ್ಟು ಹೆಚ್ಚಾಗಿದೆ. ಇದಿಷ್ಟೇ ಅಲ್ಲ ರಸ್ತೆ ವಿಸ್ತರಣೆ ಕುರಿತಂತೆ ಸುಪ್ರೀಂ ಕೋರ್ಟ್ ನಿರ್ದೇಶನ ಇದ್ದರೂ ವಿಸ್ತರಿಸುವ ಧೈರ್ಯ ಯಾರೂ ತೋರಿಲ್ಲ. ಇದಕ್ಕೆ ಕಾರಣವೇನೆಂದು ಇಡೀ ಜಿಲ್ಲೆಯ ಜನತೆಗೆ ಗೊತ್ತು. ಆದರೆ ಪ್ರತಿರೋಧಿಸುವ ಸಂದರ್ಭ ಎದುರಾದರೆ ಯಾರೂ ಕಾಣುವುದಿಲ್ಲ.
ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಹೆಗ್ಗಳಿಕೆಯನ್ನು ಮತ್ತೆ ಗಳಿಸಿಕೊಡುವ ಉದ್ದೇಶದಿಂದ ದಾವಣಗೆರೆಗೆ ಜವಳಿ ಪಾರ್ಕ್ ಮಂಜೂರಾಗಿತ್ತು. ಇದಕ್ಕಾಗಿ ರೈತರು ಮತ್ತು ಬಡವರಿಂದ 142 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಯಿತು. ಭೂಮಿ ಕಳೆದುಕೊಂಡ ರೈತರು, ನಿವೇಶನ ಕಳೆದುಕೊಂಡ ಬಡವರಿಗೆ ಇನ್ನೂ ನ್ಯಾಯಬದ್ಧ ಪರಿಹಾರ ಸಿಗದೆ ಹಪಹಪಿಸುತ್ತಿದ್ದಾರೆ. ಆದರೆ ಜವಳಿ ಪಾರ್ಕ್ ರಾತ್ರೋರಾತ್ರಿ ಶಿವಮೊಗ್ಗಕ್ಕೆ ಶಿಫ್ಟ್ ಆಯಿತು. ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ ಶಿಕ್ಷಣ ಸಂಸ್ಥೆ ತಲೆ ಎತ್ತಿದೆ. ನೂರಾರು ಬಡವರ ಗೋರಿಗಳ ಮೇಲೆ ನಿಂತಿರುವ ಈ ಕಟ್ಟಡ ಅಟ್ಟಹಾಸದ ನಗೆ ಬೀರುತ್ತಿದೆ.
ರಾಜ್ಯದಲ್ಲೇ ಅತಿಹೆಚ್ಚು ಮೆಕ್ಕೆಜೋಳ ಉತ್ಪಾದನೆಯಾಗುವುದು ಇಲ್ಲೆ. ಇಲ್ಲಿ ಸಂಸ್ಕರಣ ಘಟಕ ಸ್ಥಾಪನೆಗೆ ಅಗತ್ಯವಾದ ಎಲ್ಲ ಕಚ್ಚಾ ಸಂಪನ್ಮೂಲಗಳು ಹೇರಳವಾಗಿ ಸಿಗುತ್ತದೆ. ಉದ್ಯೋಗ ಅವಕಾಶಗಳು ಸೃಷ್ಟಿಯಾಗುವು ದರೊಂದಿಗೆ ರೈತರಿಗೂ ಉತ್ತಮ ದರ ಸಿಗಲಿದೆ. ಮಾಯಕೊಂಡದ ರೈಲ್ವೆ ನಿಲ್ದಾಣದ ಸನಿಹದಲ್ಲೇ ಸಂಸ್ಕರಣ ಘಟಕ ಸ್ಥಾಪಿಸಬಹುದಾಗಿತ್ತು. ಆದರೆ ಈ ಘಟಕ ಹಾವೇರಿ ಜಿಲ್ಲೆಯ ಪಾಲಾಯಿತು. ಜಿಲ್ಲೆ ಇಷ್ಟೆಲ್ಲ ಕಳೆದುಕೊಂಡರೂ ಜನಪ್ರತಿನಿಧಿಗಳು ಮತ್ತು ಮುಖಂಡರು, ಸಂಘಟನೆಗಳ ನಾಯಕರು ನಿರ್ಲಿಪ್ತರಾಗಿದ್ದಾರೆ. ಈ ಅನ್ಯಾಯದ ವಿರುದ್ಧ ಗಂಭೀರ ಹೋರಾಟಗಳಾಗಲಿ, ಪ್ರತಿರೋಧಗಳಾಗಲಿ ನಡೆಯಲೇ ಇಲ್ಲ.
ಈ ಕುರಿತು ಕೆಲವು ಪ್ರಜ್ಞಾವಂತರನ್ನು ಕೇಳಿದರೆ ಯಥಾ ರಾಜ ತಥಾ ಪ್ರಜೆ ಎಂದು ಹತಾಶೆಯ ಉತ್ತರ ನೀಡುತ್ತಾರೆ. ಜಿಲ್ಲೆಯ ಜನರಲ್ಲಿ ಸ್ವತಂತ್ರ ಚಿಂತನೆಗಳು ಕಾಣದಾಗಿವೆ. ಜಿಲ್ಲೆಯಲ್ಲಿನ ಆಗುಹೋಗುಗಳು ರಾಜಕೀಯವನ್ನೇ ಉದ್ಯಮ ಮಾಡಿಕೊಂಡಿರುವ ಎರಡುಕುಟುಂಬಗಳ ನಡುವೆ ಗಿರಕಿ ಹೊಡೆಯುತ್ತಿದೆ. ಅದರಾಚೆಗೆ ಚಿಂತಿಸುವ ಧೈರ್ಯ, ಸಾಮರ್ಥ್ಯ ಯಾರಲ್ಲೂ ಕಾಣದಂತಾಗಿದೆ.
ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರು ರಾಷ್ಟ್ರೀಯ ಪಕ್ಷವೊಂದಕ್ಕೆ ಶಾಶ್ವತ ಖಜಾಂಚಿ. ಈ ಹಿಂದಿನ ಸರಕಾರದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಕ್ಯಾಬಿನೆಟ್ ದರ್ಜೆಯ ಹುದ್ದೆಗಳಲ್ಲಿ ಇದ್ದರು. ಕೃಷಿ ಸಚಿವ, ಕಂದಾಯ ಸಚಿವ, ಅಬಕಾರಿ ಸಚಿವ, ರಸ್ತೆ ಅಭಿವೃದ್ಧಿ ನಿಮದ ಅಧ್ಯಕ್ಷರು, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರು, ವಿಧಾನ ಪರಿಷತ್‌ನ ಮುಖ್ಯ ಸಚೇತಕರು.
ಆದರೆ ನ್ಯಾಯಬದ್ಧವಾಗಿ ಜಿಲ್ಲೆಗೆ ದಕ್ಕಿದ್ದು ಮಾತ್ರ ಶೂನ್ಯ. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯಿಂದ ವಿಮುಖರಾದಾಗ ಸಂಘಟನೆಗಳು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ತಮ್ಮ ಸಂವೇದನೆಗಳನ್ನು ಚುರುಕುಗೊಳಿಸಿ ಜಿಲ್ಲೆಯ ಅಭಿವೃದ್ಧಿಯತ್ತ ಚಿಂತನೆ ನಡೆಸುವ ಅಗತ್ಯವಿದೆ. ಹಾಗೆಯೇ ಕಳೆದುಕೊಂಡಿರುವ ಮ್ಯಾಂಚೆಸ್ಟರ್ ಮತ್ತು ಹೋರಾಟಗಳ ಕೇಂದ್ರ ಎಂಬ ಖ್ಯಾತಿಯನ್ನು ಮರಳಿ ಪಡೆಯಬೇಕಾಗಿದೆ.
ಬುಧವಾರ, ಜೂನ್ 4, 2014
Dance of Demonocracy
Anand Teltumbde
EPW Vol. 49, Issue No.23, june 7, 2014
India has never been the democracy as it is made out to be. It has been a pure plutocracy. But for dalits, it is worse; it has been a veritable rule of demons - a demonocracy.
Anand Teltumbde (tanandraj@gmail.com) is a writer and civil rights activist with the Committee for the Protection of Democratic Rights, Mumbai.
As the much flaunted “Dance of Democracy” had reached its high pitch in the media, 201 million dalits in the country were experiencing another low of their existence, encountering a veritable dance of demonocracy. Democracy anyway has been a far cry for them; in this alien tamasha, they wondered whether they should continue calling this country their own.
“Every hour two dalits are assaulted; every day three dalit women are raped, two dalits are murdered, and two dalit homes are torched” has become a catchphrase ever since Hillary Mayell coined it while writing in National Geographic11 years ago. Well, today these figures have to be revised upwards; as for instance, the rape rate of dalit women has shot up from Hillary’s 3 to well over 4.3, a whopping 43% rise. What annoys one is the duplicity even of the country’s saner population – it had admirably raised a storm over the brutal rape of a Noida girl two years ago – in keeping silent over the horrific rapes of four minor dalit girls in the Jatland of Haryana or a honour killing of a dalit schoolboy in Phule-Ambedkar’s Maharashtra. There could not be any possible explanation for it but for that vile word – caste. If this is the state of the minuscule population in the country that could be called sensible, what should dalits expect from the sea of insanity deeply poisoned with caste and communal venom?
Real Nirbhayas of Bhagana
On 23 March this year, Bhagana, a village just 13 km from Hisar in Haryana and barely a three-hour drive from the national capital, was added to a long list of infamous places associated with ghastly atrocities on dalits. That evening, four dalit schoolgirls – one aged 13, two 17 and one 18 years – while urinating in a field near their homes, were set upon by five men belonging to the dominant Jat caste. They drugged and gang-raped them in the fields and carried them off in a car. They were perhaps raped the entire night and were left in the bushes outside Bhatinda’s railway station across the border in Punjab. When their families approached the village sarpanch Rakesh Kumar Pangal, who is also related to the criminals, he could tell them that the girls were at Bhatinda and would be brought back the next day. Heavily sedated and in deep pain, the girls had woken up in the bushes the next morning and walked up to the station for help but had to wait without any until 2.30 pm, when Rakesh and his uncle Virender had reached them along with their families. While the families were asked to leave by train, they were put into a car and driven to Bhagana. En route Rakesh abused them, beat them and tried to threaten them to stay silent.
As they reached, dalit boys surrounded the car and rescued the girls from the clutches of the sarpanch. The next day, the girls were taken to Hisar general hospital for medical examination, which inexplicably dragged on from the morning till 1.30 am. The doctors, as per the girls, had carried out the humiliating and much criticised two-finger test for virginity which stands banned by the government in dealing with rape victims. Only with pressure from more than 200 dalit activists and confirmation of rape in the medical report did the police at Sadar Hisar police station file a first information report (FIR) under the Scheduled Castes and Scheduled Tribes (Prevention of Atrocities) Act, excluding Rakesh and Virender’s names, despite the girls naming them in their testimonies.
Even such a shocking crime failed to move the police. Reminiscent of Khairlanji, it is only when public protest exploded with over 120 dalits agitating at Hisar’s Mini Secretariat and the 90 dalit families from Bhagana, including girls, beginning their sit-in at Delhi’s Jantar Mantar since 16 April, did the Haryana police wake up and arrest the five rapists – Lalit, Sumit, Sandeep, Parimal and Dharamvir – on 29 April. Apart from demanding justice, the dalits of Bhagana simply could not go back for the fear of being killed by the Jats. Rather than heeding to these dalit demands and fast-tracking the judicial process, the Hisar district court is already engaged with the matter of releasing the criminals. Although these brave girls, the real nirbhayas, themselves have been narrating what befell them to the public, interestingly media has not cared to observe the code of not revealing the identities of the rape victims they so meticulously did in the case of non-dalit nirbhayas. The media, busy making mountains out of molehills of silly statements of politicians, did not find it worth their while to carry the simple news of this ongoing agitation, leave apart anchoring a campaign as they did in most rape cases where the victim was a non-dalit. One hates to speak this language, but the media’s own behaviour demands it.
An earlier fact-finding report of the Peoples Union for Democratic Rights and the Association for Democratic Rights –This Village Is Mine Too: Dalit Assertion, Land Rights and Social Boycott in Bhagana (September 2012) – suggests that the Bhagana rapes are not mere bestial sex-crimes. Rather, they were committed in order to teach a lesson to dalits who have been protesting against the takeover of their land, water and even burial grounds by Jats in the village and oppressing them.
Another Shame on Maharashtra
The Jats in Haryana with their obnoxious khap panchayats have been infamous for honour killings but in a distant Maharashtra that nauseatingly claims the legacy of Phule-Shahu-Ambedkar, the beacons of social reforms in the country, a 17-year-old schoolboy of a poor dalit family was brutally done to death in broad daylight on 28 April, in the thick of general elections, just for speaking with a Maratha girl. The gory incident happened in village Kharda in Ahmednagar district, barely 200 km away from Pune where Phule had lit the fire of revolt against brahmanism. A fact-finding report of the Dalit Atyachar Virodhi Kruti Samiti revealed the brutal manner in which Nitin Aage, son of Raju and Rekha Aage, a landless dalit couple who earned their living by crushing stones for a small mill and lived at the edge of the village in a tin shed, was lynched by Sachin Golekar (21) and his friend and relative Sheshrao Yeole (42), both from a rich and politically connected Maratha family of the village. Nitin was caught in the school, beaten mercilessly in its premises, dragged to a brick kiln owned by the Golekar family, tortured by putting embers in his lap and pants, killed and then strangulated so as to camouflage it as a case of suicide. The Golekar girl, who was in love with Nitin, reportedly tried to commit suicide, and it is feared that she may meet the fate of Nitin at the altar of caste.
Under pressure of local dalit activists, the police have registered an FIR after the medical examination of Nitin’s body the next day, charging the accused of murder, causing disappearance of evidence, unlawful assembly and rioting under the Indian Penal Code and under the Section 3(2)(5) of the Prevention of Atrocities Act and also the Section 7(1)(d) of the Protection of Civil Rights Act. The police have arrested 13 persons including the two main culprits and a minor boy. But dalits do know by now that no wealthy upper-caste person ever gets convicted in the country for a crime against dalits. The Golekars with their riches and connections with one of the most unscrupulous political outfits, the Nationalist Congress Party (NCP), may not stay any longer in jail. After all, what happened in the scores of equally gory caste atrocities that took place in recent years in this single district dominated by NCP bigwigs? What happened to the murderers of three dalit young men, Sandip Raju Dhanwar, Sachin Somlal Dharu and Rahul Raju Kandare of Sonai village in Nevasa taluka, which also was a case of “honour killing”? What happened to the killers of Janabai Borge of Dhawalgaon who brunt her alive in 2010? What happened to those who raped Suman Kale and then killed her in 2010 or to those who killed Walekar and cut him into pieces or to the killers of Baban Misal in 2008? This long list does tell us that in each of these atrocities the real culprit was some rich and powerful person, but far from being convicted, he was not even named.
A Wake-up Call
The colossal human tragedy of Raju and Rekha Aage who lost their only son in so cruel a manner will just be a digit added to the “murder” count. The tearing traumas and permanent scars on the lives of those innocent Bhagana girls will be reduced to a one-plus “rape” count in the National Crime Records Bureau statistics. The enormous activist input that transformed these human tragedies into statistics, without which they would simply be forgotten, is just lost. The atrocity statistics produced by such social processes still hover well above the 33,000 mark every year. Using these official statistics, one can modestly see that more than 80,000 dalits have been murdered, more than one lakh dalit women have been raped and over 20 lakh dalits have suffered one or the other crime during the six decades of our constitutional regime. Not even wars can rival these numbers. While dalits are conditioned to see the proverbialbrahman behind their woes, the reality is that the very secular intrigues of this regime have created the demons that lynch and rape dalits with impunity.
It is this regime that has intrigued to preserve castes under the alibi of social justice; it resorted to land reforms with a redistribution alibi but actually carved a class of rich farmers out of the populous shudra castes; they brought the green revolution with feed-all alibi but actually opened up a vast rural market for capitalists. It is this very regime that brought in reforms with the trickle-down alibi but actually imposed a social-Darwinist paradigm. These six decades are fraught with such intrigues and treacheries against the masses in which dalits have been the main sacrificial lambs. India has never been the democracy it is made out to be. It has been a pure plutocracy. But for dalits it is worse; it has been a veritable rule of demons, a demonocracy.
When will dalits wake up to these realities? When will dalits rise and say enough is enough!
ತೊಗಲು ಗೊಂಬೆಗಳ ಹೊಸಪರ್ವ
-ದಯಾನಂದ
ಸೌಜನ್ಯ: ಪ್ರಜಾವಾಣಿ
ಸೌಜನ್ಯ: ಪ್ರಜಾವಾಣಿ
ಎಲ್ಲವನ್ನೂ ಏಕರೂಪಗೊಳಿಸುವ ಆಧುನಿಕ ಅಭಿವೃದ್ಧಿಯ ವ್ಯಾಖ್ಯೆಯಲ್ಲಿ ಬಹುತ್ವವೇ ಅಭಿವೃದ್ಧಿಗೆ ತೊಡಕು! ಉತ್ಪಾದನೆ ಕೇಂದ್ರಿತ ಆಧುನಿಕ ಅರ್ಥವ್ಯವಸ್ಥೆ ಮನುಷ್ಯನನ್ನು ಕೇವಲ ಉತ್ಪಾದಕ ಮತ್ತು ಉಪಭೋಗಿಯಾಗಿ ಮಾತ್ರ ನೋಡುತ್ತದೆ. ಆಧುನಿಕತೆಯ ಈ ಪ್ರಕ್ರಿಯೆಯಲ್ಲಿ ಹೆಚ್ಚು ಬಳಲಿದ್ದು ಜನಪದ ಕಲೆಗಳು ಹಾಗೂ ಜನಪದ ಕಲಾವಿದರು.
ಸಂಸ್ಕೃತಿ ಮತ್ತು ಮನರಂಜನೆಗಳು ಒಟ್ಟೊಟ್ಟಿಗೆ ಬೆಸೆದುಕೊಂಡಿರುವ ಜನಪದ ಕಲೆಗಳು ಅನ್ಯ ಸಂಸ್ಕೃತಿಯ ಅನುಕರಣೆ ಹಾಗೂ ಮನರಂಜನೆಯ ಆಧುನಿಕ ಮಾಧ್ಯಮಗಳ ಅಬ್ಬರದ ಇಂದಿನ ದಿನಗಳಲ್ಲಿ ಮಂಕಾಗಿವೆ. ಹೀಗೆ ಹಿನ್ನೆಲೆಗೆ ಸರಿದಿರುವ ಜನಪದ ಕಲೆಗಳಲ್ಲಿ ತೊಗಲುಗೊಂಬೆ ಆಟವೂ ಒಂದು. ಪ್ರೋತ್ಸಾಹವಿಲ್ಲದೆ ಸೊರಗುತ್ತಿರುವ ತೊಗಲುಗೊಂಬೆಯಾಟವನ್ನು ಮುನ್ನೆಲೆಗೆ ತರುವ ಪ್ರಯತ್ನ ಇತ್ತೀಚೆಗೆ ಆಗುತ್ತಿದೆ. ಬಿದಿರಿನ ಬುಟ್ಟಿಗಳಲ್ಲಿ ಮಲಗಿದ್ದ ತೊಗಲುಗೊಂಬೆಗಳಿಗೆ ಮತ್ತೆ ಬೆಳಕು ನೀಡುವ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ.
ಜನಪದ ರಂಗಕಲೆಯಾದ ತೊಗಲುಗೊಂಬೆಯಾಟಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರಾಣಿಗಳ ಚರ್ಮದ ಮೇಲೆ ಚಿತ್ರ ಬಿಡಿಸುವ ಪೂರ್ವಜರ ಪ್ರಯತ್ನದಲ್ಲೇ ತೊಗಲುಗೊಂಬೆಯಾಟಕ್ಕೆ ಬೀಜರೂಪ ದೊರಕಿರಬೇಕು. ಕ್ರಮೇಣ ಅದು ಸ್ಥಳೀಯ ಜನಪದ ರಂಗಕಲೆಗಳ ಪ್ರಭಾವದಿಂದ ‘ಆಟ’ದ ಸ್ವರೂಪ ಪಡೆದುಕೊಂಡಿರಬಹುದು. ರಂಗದ ಮುಂದೆ ಬಿಳಿಯ ಪರದೆ ಮಾತ್ರ ಉಳಿದು ಕ್ರಿಯೆ ಎಲ್ಲಾ ಮುಚ್ಚಿದ ಹಿಂಬದಿಯ ವೇದಿಕೆಯೊಳಗೆ ನಡೆಯುವ ನೆರಳಿನಾಟ ಇದು.
ಗೊಂಬೆರಾಮರು ಅಥವಾ ಕಿಳ್ಳೇಕ್ಯಾತರ ಕುಟುಂಬದ ಸದಸ್ಯರೇ ಮೇಳವಾಗಿ, ಕುಸುರಿ ಕೆಲಸ ಹಾಗೂ ಬಣ್ಣಗಳಿಂದ ಸಿಂಗಾರಗೊಂಡ ಚರ್ಮದ ಗೊಂಬೆಗಳನ್ನು ಕುಣಿಸುವ ಕಲಾವಿದರಾಗಿ ಪ್ರದರ್ಶನ ನಡೆಸುತ್ತಾರೆ. ಪುರಾಣ, ರಾಮಾಯಣ, ಮಹಾಭಾರತದ ಪ್ರಸಂಗಗಳೇ ತೊಗಲುಗೊಂಬೆಯಾಟಕ್ಕೆ ಮುಖ್ಯ ಕಥಾವಸ್ತುಗಳು. ಒಳಗಿನ ವೇದಿಕೆಯಲ್ಲಿ ಉರಿಯುವ ಪ್ರಕಾಶಮಾನ ದೀಪ ಹಾಗೂ ಮುಂದಿನ ಪಾರದರ್ಶಕ ಪರದೆಯ ನಡುವೆ ಗೊಂಬೆಗಳನ್ನು ಕುಣಿಸಿ, ಗೊಂಬೆಯ ಬಣ್ಣದ ನೆರಳು ಪರದೆಯ ಮೇಲೆ ಬೀಳುವಂತೆ ಮಾಡುವ ಈ ಆಟಕ್ಕೆ ನೆರಳುಗೊಂಬೆಯಾಟ ಎಂಬ ಹೆಸರೂ ಇದೆ.
ಹೊಳೆನೀರಿಗೆ ಗೊಂಬೆಗಳು
ದಶಕದ ಹಿಂದಿನವರೆಗೂ ನಮ್ಮ ಹಳ್ಳಿಗಳಲ್ಲಿ ಮನರಂಜನೆಯ ಮುಖ್ಯ ಮಾಧ್ಯಮಗಳಲ್ಲಿ ಒಂದಾಗಿದ್ದ ತೊಗಲುಗೊಂಬೆಯಾಟ ದಿನಕಳೆದಂತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಾದಂಥ ಸ್ಥಿತಿ ನಿರ್ಮಾಣವಾಯಿತು. ತೊಗಲುಗೊಂಬೆಯಾಡಿಸುವ ಗೊಂಬೆರಾಮರು ಈ ಆಟದಿಂದ ಇನ್ನು ಹೊಟ್ಟೆ ಹೊರೆಯುವುದು ಕಷ್ಟ ಎನಿಸಿ ಬಹುಪಾಲು ತೊಗಲುಗೊಂಬೆಗಳನ್ನು ಹೊಳೆ ನೀರಿಗೆ ಬಿಟ್ಟು, ಇತರೆ ಕಸುಬುಗಳ ಕಡೆಗೆ ಮುಖ ಮಾಡಿದ್ದನ್ನು ನೋಡಿದರೆ ಈ ಜನಪದ ಕಲೆಗೆ ಒದಗಿದ್ದ ಹೀನಾಯ ಸ್ಥಿತಿ ಎಂಥದ್ದು ಎಂಬುದು ಗೊತ್ತಾಗುತ್ತದೆ.
ದಶಕದ ಹಿಂದಿನವರೆಗೂ ನಮ್ಮ ಹಳ್ಳಿಗಳಲ್ಲಿ ಮನರಂಜನೆಯ ಮುಖ್ಯ ಮಾಧ್ಯಮಗಳಲ್ಲಿ ಒಂದಾಗಿದ್ದ ತೊಗಲುಗೊಂಬೆಯಾಟ ದಿನಕಳೆದಂತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಾದಂಥ ಸ್ಥಿತಿ ನಿರ್ಮಾಣವಾಯಿತು. ತೊಗಲುಗೊಂಬೆಯಾಡಿಸುವ ಗೊಂಬೆರಾಮರು ಈ ಆಟದಿಂದ ಇನ್ನು ಹೊಟ್ಟೆ ಹೊರೆಯುವುದು ಕಷ್ಟ ಎನಿಸಿ ಬಹುಪಾಲು ತೊಗಲುಗೊಂಬೆಗಳನ್ನು ಹೊಳೆ ನೀರಿಗೆ ಬಿಟ್ಟು, ಇತರೆ ಕಸುಬುಗಳ ಕಡೆಗೆ ಮುಖ ಮಾಡಿದ್ದನ್ನು ನೋಡಿದರೆ ಈ ಜನಪದ ಕಲೆಗೆ ಒದಗಿದ್ದ ಹೀನಾಯ ಸ್ಥಿತಿ ಎಂಥದ್ದು ಎಂಬುದು ಗೊತ್ತಾಗುತ್ತದೆ.
ಸಾಮಾಜಿಕ ಸ್ಥಿತ್ಯಂತರದ ಕಾರಣದಿಂದಲೂ ತೊಗಲುಗೊಂಬೆಯಾಟ ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಗೊಂಬೆರಾಮರಿಗೆ ದೇವಾಲಯ ಪ್ರವೇಶವಿದ್ದ ಮಾತ್ರಕ್ಕೆ ಅವರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನವಿತ್ತು ಎಂದು ನಂಬುವಂತಿಲ್ಲ. ರಾತ್ರಿ ಆಟಗಳನ್ನು ಪ್ರದರ್ಶಿಸುತ್ತಿದ್ದ ಈ ಕಲಾವಿದರು ಹಗಲು ಪದಗಳನ್ನು ಹಾಡುತ್ತಾ ಹಳ್ಳಿಯ ಬೀದಿಗಳಲ್ಲಿ ಭಿಕ್ಷೆ ಪಡೆಯುತ್ತಿದ್ದರು. ಚರಿಗೆ ಮುಗಿದ ಮೇಲೆ ಬೇಟೆಯಾಡುವ ಅಭ್ಯಾಸವೂ ಗೊಂಬೆರಾಮರಿಗಿತ್ತು. ಗೊಂಬೆರಾಮರ ಹೆಣ್ಣುಮಕ್ಕಳ ಮೇಲೆ ಊರ ಪ್ರಮುಖರು ‘ಕಣ್ಣು ಹಾಕುವುದು’ ಹಿಂದೆ ಸಾಮಾನ್ಯವಾಗಿತ್ತು. ವರ್ಷಗಳು ಕಳೆದಂತೆ ಈ ರೀತಿಯ ಬದುಕು ಎಷ್ಟು ಸರಿ ಎಂದು ಆ ಸಮುದಾಯದ ಜನರಿಗೇ ಅನಿಸಿರಬೇಕು.
ನಗರೀಕರಣದ ಕಾರಣದಿಂದ ಪಟ್ಟಣಗಳೂ ನಗರಗಳಾಗಿ ಬೆಳೆದ ಮೇಲೆ ಕೂಲಿನಾಲಿ ಮಾಡಿ ಬದುಕು ಕಟ್ಟಿಕೊಳ್ಳಲು ಈ ಜನ ಮುಂದಾದರು. ಕ್ರಮೇಣ ತಮ್ಮ ಸಮುದಾಯದ ಗುರುತನ್ನೇ ಮುಚ್ಚಿಡುವ ಮನೋಭಾವ ಗೊಂಬೆರಾಮರಲ್ಲಿ ಬೆಳೆಯುತ್ತಾ ಬಂತು.
ಕೇವಲ ಗೊಂಬೆರಾಮರಷ್ಟೇ ಅಲ್ಲ ದೊಂಬಿದಾಸ, ಹೆಳವ, ಕಿನ್ನರಿಜೋಗಿ ಮುಂತಾದವರು ಇಂದು ವಿವಿಧ ಕ್ಷೇತ್ರಗಳ ವಿವಿಧ ಹುದ್ದೆಗಳಲ್ಲಿದ್ದರೂ ತಮ್ಮ ಮೂಲವನ್ನು ಬಹಿರಂಗ ಪಡಿಸಲು ಹಿಂಜರಿಯುತ್ತಾರೆ. ತಮ್ಮ ಗುರುತನ್ನು ಹೇಳಿಕೊಂಡರೆ ಎಲ್ಲಿ ಸಮಾಜ ತಮ್ಮನ್ನು ಕೀಳಾಗಿ ನೋಡುತ್ತದೆಯೋ ಎಂಬ ಅಳಕು ಇದಕ್ಕೆ ಕಾರಣ.
ಕೇವಲ ಗೊಂಬೆರಾಮರಷ್ಟೇ ಅಲ್ಲ ದೊಂಬಿದಾಸ, ಹೆಳವ, ಕಿನ್ನರಿಜೋಗಿ ಮುಂತಾದವರು ಇಂದು ವಿವಿಧ ಕ್ಷೇತ್ರಗಳ ವಿವಿಧ ಹುದ್ದೆಗಳಲ್ಲಿದ್ದರೂ ತಮ್ಮ ಮೂಲವನ್ನು ಬಹಿರಂಗ ಪಡಿಸಲು ಹಿಂಜರಿಯುತ್ತಾರೆ. ತಮ್ಮ ಗುರುತನ್ನು ಹೇಳಿಕೊಂಡರೆ ಎಲ್ಲಿ ಸಮಾಜ ತಮ್ಮನ್ನು ಕೀಳಾಗಿ ನೋಡುತ್ತದೆಯೋ ಎಂಬ ಅಳಕು ಇದಕ್ಕೆ ಕಾರಣ.
ಬಹುಪಾಲು ಜನಪದ ಕಲೆಗಳು ಜಾತಿ ಆಧಾರಿತವಾದ್ದರಿಂದ ತಮ್ಮ ಜಾತಿಯನ್ನು ಗುರುತಿಸಿಕೊಳ್ಳಲು ಬಯಸದ ಆ ಸಮುದಾಯದ ಮುಂದಿನ ಪೀಳಿಗೆಯವರಿಗೆ ರಕ್ತಗತವಾಗಿ ಬಂದ ಕಲೆಯೂ ಬೇಡವಾಯಿತು. ಆಧುನಿಕ ಶಿಕ್ಷಣ ಹಾಗೂ ಮೀಸಲಾತಿ ಸೌಲಭ್ಯದಿಂದ ಬೆಳವಣಿಗೆ ಕಾಣುತ್ತಿರುವ ಈ ಅಲೆಮಾರಿ ಸಮುದಾಯಗಳ ಜನ ಸಾಮಾನ್ಯವಾಗಿಯೇ ತಮ್ಮ ಪಾರಂಪರಿಕ ಕಲೆ ಹಾಗೂ ಕಸುಬನ್ನು ಮರೆಯಲು ಮುಂದಾಗಿದ್ದಾರೆ. ಹೀಗಾಗಿ ಜಾತಿ ಕೇಂದ್ರಿತವಾದ ಕಲೆಯನ್ನು ಕಲಾಕೇಂದ್ರಿತಗೊಳಿಸುವ ಅಗತ್ಯವಿದೆ.
ಹೊಸಬೆಳಕಿನಲ್ಲಿ ಆಟ
ಈಗಲೂ ಆಟ ನಡೆಸುವ ಅಳಿದುಳಿದ ಕಲಾವಿದರು ಹಾಗೂ ಕಲಾತಂಡಗಳನ್ನು ಗುರುತಿಸಿ ಅವರಿಗೆ ಗೌರವ ಹಾಗೂ ಗೌರವ ಸಂಭಾವನೆ ನೀಡಿ ತೊಗಲುಗೊಂಬೆಯಾಟವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ಇತ್ತೀಚೆಗೆ ಸ್ವಲ್ಪಮಟ್ಟಿಗೆ ಆರಂಭವಾಗಿದೆ. ‘ಇಷ್ಟೂ ದಿನ ಜಾತಿ ಕೇಂದ್ರಿತವಾಗಿದ್ದ ಜನಪದ ಕಲೆಗಳು ಹವ್ಯಾಸದ ಕಾರಣದಿಂದಾದರೂ ಮೊದಲುಗೊಂಡು ಮುಂದೆ ಕಲಾಕೇಂದ್ರಿತ ವಾಗಬೇಕು. ಸಮಾಜ ಈ ಕಲೆಗಳ ಕಾರಣಕ್ಕಾಗಿ ಕಲಾವಿದರನ್ನು ಸಾಮಾಜಿಕವಾಗಿ ಕೀಳಾಗಿ ನೋಡುವ ಮನೋಭಾವ ಆಗಲಾದರೂ ಬದಲಾಗಬಹುದು. ಈ ಸಾಮಾಜಿಕ ತೊಡಕು ನಿವಾರಣೆಯಾಗದ ಹೊರತು ಜನಪದ ಕಲೆಗಳ ಮೇಲೆ ಕರಿನೆರಳು ಇದ್ದಿದ್ದೇ’ ಎಂಬುದು ತೊಗಲುಗೊಂಬೆಯಾಟದ ಕಲಾವಿದರೂ ಆಗಿರುವ ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಬೆಳಗಲ್ ವೀರಣ್ಣ ಅವರ ಆತಂಕ.
ಈಗಲೂ ಆಟ ನಡೆಸುವ ಅಳಿದುಳಿದ ಕಲಾವಿದರು ಹಾಗೂ ಕಲಾತಂಡಗಳನ್ನು ಗುರುತಿಸಿ ಅವರಿಗೆ ಗೌರವ ಹಾಗೂ ಗೌರವ ಸಂಭಾವನೆ ನೀಡಿ ತೊಗಲುಗೊಂಬೆಯಾಟವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ಇತ್ತೀಚೆಗೆ ಸ್ವಲ್ಪಮಟ್ಟಿಗೆ ಆರಂಭವಾಗಿದೆ. ‘ಇಷ್ಟೂ ದಿನ ಜಾತಿ ಕೇಂದ್ರಿತವಾಗಿದ್ದ ಜನಪದ ಕಲೆಗಳು ಹವ್ಯಾಸದ ಕಾರಣದಿಂದಾದರೂ ಮೊದಲುಗೊಂಡು ಮುಂದೆ ಕಲಾಕೇಂದ್ರಿತ ವಾಗಬೇಕು. ಸಮಾಜ ಈ ಕಲೆಗಳ ಕಾರಣಕ್ಕಾಗಿ ಕಲಾವಿದರನ್ನು ಸಾಮಾಜಿಕವಾಗಿ ಕೀಳಾಗಿ ನೋಡುವ ಮನೋಭಾವ ಆಗಲಾದರೂ ಬದಲಾಗಬಹುದು. ಈ ಸಾಮಾಜಿಕ ತೊಡಕು ನಿವಾರಣೆಯಾಗದ ಹೊರತು ಜನಪದ ಕಲೆಗಳ ಮೇಲೆ ಕರಿನೆರಳು ಇದ್ದಿದ್ದೇ’ ಎಂಬುದು ತೊಗಲುಗೊಂಬೆಯಾಟದ ಕಲಾವಿದರೂ ಆಗಿರುವ ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಬೆಳಗಲ್ ವೀರಣ್ಣ ಅವರ ಆತಂಕ.
‘ತೊಗಲುಗೊಂಬೆಯಾಟದ ಇತಿಹಾಸ, ಈ ವಿಶಿಷ್ಟ ಕಲೆಯ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸಿ ಮೊದಲಿಗೆ ಅವರಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕು. ಎಲ್ಲ ಜಾತಿಗಳ ಯುವಕರೂ ಸೇರಿ ತೊಗಲುಗೊಂಬೆ ತಯಾರಿಕೆ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಳ್ಳಬೇಕು. ಹಾಗಾದಾಗ ಮಾತ್ರ ಈ ಕಲೆಗಂಟಿರುವ ಜಾತಿಯ ಕೊಳೆ ತೊಳೆಯಲು ಸಾಧ್ಯ’ ಎಂಬುದು ಅವರ ಅಭಿಪ್ರಾಯ.
ಜನಪದ ಉತ್ಸವ ಕಲೆಗಳು ಮತ್ತು ಆಚರಣೆ ಕಲೆಗಳಿರುವ ಪ್ರೋತ್ಸಾಹ ತೊಗಲುಗೊಂಬೆಯಾಟಕ್ಕೆ ಸಿಕ್ಕಿಲ್ಲ. ಡೊಳ್ಳು ಕುಣಿತ, ಪಟದ ಕುಣಿತ, ನಂದಿಕೋಲು ಕುಣಿತ, ಗೊರವರ ಕುಣಿತದ ಕಲಾತಂಡಗಳಿಗೆ ಮೆರವಣಿಗೆ ಹಾಗೂ ಸಮಾರಂಭಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಗುತ್ತದೆ. ಇನ್ನು ಆಚರಣೆ ಕಲೆಗಳಾದ ನಾಗನೃತ್ಯ, ಭೂತದ ಕೋಲ, ಕರಗ, ಕಲಶದ ಕುಣಿತ, ವೀರಗಾಸೆ ಕಲೆಗಳು ಕಲೆಯ ಎಲ್ಲೆ ಮೀರಿ ‘ದೈವಿಕ ಸ್ವರೂಪ’ ಪಡೆದುಕೊಂಡು ಮತ್ತೊಂದು ರೀತಿಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಆದರೆ, ಈ ರೀತಿಯ ಆಧಾರ ತೊಗಲುಗೊಂಬೆಯಾಟಕ್ಕಿಲ್ಲ.
ಜನಪದ ಉತ್ಸವ ಕಲೆಗಳು ಮತ್ತು ಆಚರಣೆ ಕಲೆಗಳಿರುವ ಪ್ರೋತ್ಸಾಹ ತೊಗಲುಗೊಂಬೆಯಾಟಕ್ಕೆ ಸಿಕ್ಕಿಲ್ಲ. ಡೊಳ್ಳು ಕುಣಿತ, ಪಟದ ಕುಣಿತ, ನಂದಿಕೋಲು ಕುಣಿತ, ಗೊರವರ ಕುಣಿತದ ಕಲಾತಂಡಗಳಿಗೆ ಮೆರವಣಿಗೆ ಹಾಗೂ ಸಮಾರಂಭಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಗುತ್ತದೆ. ಇನ್ನು ಆಚರಣೆ ಕಲೆಗಳಾದ ನಾಗನೃತ್ಯ, ಭೂತದ ಕೋಲ, ಕರಗ, ಕಲಶದ ಕುಣಿತ, ವೀರಗಾಸೆ ಕಲೆಗಳು ಕಲೆಯ ಎಲ್ಲೆ ಮೀರಿ ‘ದೈವಿಕ ಸ್ವರೂಪ’ ಪಡೆದುಕೊಂಡು ಮತ್ತೊಂದು ರೀತಿಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಆದರೆ, ಈ ರೀತಿಯ ಆಧಾರ ತೊಗಲುಗೊಂಬೆಯಾಟಕ್ಕಿಲ್ಲ.
ಹಳ್ಳಿಗಳನ್ನು ಕೇಂದ್ರೀಕರಿಸಿ ತೊಗಲುಗೊಂಬೆಯಾಟವನ್ನು ಪುನರುಜ್ಜೀವಗೊಳಿಸುವುದು ಸದ್ಯಕ್ಕೆ ಸಾಧ್ಯವಿಲ್ಲವೆಂದು ತೋರುತ್ತದೆ. ಹೀಗಾಗಿ ನಗರಗಳಲ್ಲಿ ತೊಗಲುಗೊಂಬೆಯಾಟವನ್ನು ಬೆಳೆಸುವ ಪ್ರಯೋಗಗಳಿಗೆ ಅಕಾಡೆಮಿ ಹಾಗೂ ಸರ್ಕಾರ ಮುಂದಾಗಬೇಕು. ಮನರಂಜನೆಗಾಗಿ ಹಪಹಪಿಸುವ ನಗರದ ಜನ ತೊಗಲುಗೊಂಬೆಯಾಟವನ್ನು ಬೇಗನೆ ಒಪ್ಪಿಕೊಂಡಾರು. ನಗರಗಳ ಕಲಾಕ್ಷೇತ್ರ, ರಂಗಮಂದಿರಗಳಲ್ಲಿ ತೊಗಲುಗೊಂಬೆಯಾಟಕ್ಕೆ ಹೆಚ್ಚು ಹೆಚ್ಚು ವೇದಿಕೆ ಸಿಕ್ಕರೆ ಈ ಕಲೆಯನ್ನು ಜೀವಂತವಾಗಿರಿಸಿಕೊಳ್ಳಬಹುದು ಎಂದು ತೋರುತ್ತದೆ.
‘ವಿದ್ಯಾರ್ಥಿಗಳು ಹಾಗೂ ಯುವಕರಿಗೆ ತೊಗಲುಗೊಂಬೆಯಾಟದ ಬಗ್ಗೆ ತರಬೇತಿ ನೀಡಬೇಕು. ಕಲಾತಂಡಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರಿಂದ ಸಾಧ್ಯವಾದಷ್ಟೂ ಹೆಚ್ಚಿನ ಯುವಕರಿಗೆ ತೊಗಲುಗೊಂಬೆಯಾಟದ ತರಬೇತಿ ಕೊಡಿಸಿದರೆ ಈ ಕಲೆ ಉಳಿಯುತ್ತದೆ’ ಎಂಬ ಆಶಾವಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಅವರದ್ದು.
‘ಚೀನಾದಲ್ಲಿ ತೊಗಲುಗೊಂಬೆಯಾಟಕ್ಕೆ ಹೆಚ್ಚಿನ ಪ್ರೋತ್ಸಾಹವಿದೆ. ಅಲ್ಲಿ ತೊಗಲುಗೊಂಬೆಯಾಟಕ್ಕೆ ಪಂಡಿತ ಹಾಗೂ ಪಾಮರರ ಬೆಂಬಲವಿದೆ. ಅದೇ ರೀತಿ ನಮ್ಮಲ್ಲೂ ತೊಗಲುಗೊಂಬೆಯಾಟಕ್ಕೆ ಬೆಂಬಲ, ಪ್ರೋತ್ಸಾಹ ಸಿಗಬೇಕು. ಆ ನಿಟ್ಟಿನಲ್ಲಿ ಅಕಾಡೆಮಿ, ವಿಶ್ವವಿದ್ಯಾಲಯಗಳು ಸಮನ್ವಯದಲ್ಲಿ ಕೆಲಸ ಮಾಡಬೇಕು’ ಎಂಬುದು ಅವರ ಅಭಿಮತ.
‘ಚೀನಾದಲ್ಲಿ ತೊಗಲುಗೊಂಬೆಯಾಟಕ್ಕೆ ಹೆಚ್ಚಿನ ಪ್ರೋತ್ಸಾಹವಿದೆ. ಅಲ್ಲಿ ತೊಗಲುಗೊಂಬೆಯಾಟಕ್ಕೆ ಪಂಡಿತ ಹಾಗೂ ಪಾಮರರ ಬೆಂಬಲವಿದೆ. ಅದೇ ರೀತಿ ನಮ್ಮಲ್ಲೂ ತೊಗಲುಗೊಂಬೆಯಾಟಕ್ಕೆ ಬೆಂಬಲ, ಪ್ರೋತ್ಸಾಹ ಸಿಗಬೇಕು. ಆ ನಿಟ್ಟಿನಲ್ಲಿ ಅಕಾಡೆಮಿ, ವಿಶ್ವವಿದ್ಯಾಲಯಗಳು ಸಮನ್ವಯದಲ್ಲಿ ಕೆಲಸ ಮಾಡಬೇಕು’ ಎಂಬುದು ಅವರ ಅಭಿಮತ.
ಉಸಿರು ತುಂಬುವ ಕೆಲಸ
ತೊಗಲುಗೊಂಬೆಯಾಟದ ಬಗ್ಗೆ ಸ್ವತಃ ಕಲಾವಿದರೆ ಅನಾಸಕ್ತಿ ತೋರುತ್ತಿದ್ದುದನ್ನು ನಾಲ್ಕು ದಶಕಗಳ ಹಿಂದೆಯೇ ಗುರುತಿಸಿದ್ದ ಜನಪದ ತಜ್ಞ ಎಂ.ಎಸ್.ನಂಜುಂಡರಾವ್ ಅವರು ರಾಜ್ಯ ಹಾಗೂ ಆಂಧ್ರಪ್ರದೇಶದ ಹಲವು ಗ್ರಾಮಗಳನ್ನು ಸುತ್ತಿ ಸಾವಿರಾರು ತೊಗಲುಗೊಂಬೆಗಳನ್ನು ಸಂಗ್ರಹಿಸಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿರುವ ಈ ತೊಗಲುಗೊಂಬೆಗಳು ರಾಜ್ಯದ ಜನಪದ ಕಲೆಯ ಅಮೂಲ್ಯ ಆಸ್ತಿ. ಈ ಗೊಂಬೆಗಳನ್ನು ಬಳಸಿಕೊಂಡು ಈ ಕಲೆಯನ್ನು ಪ್ರಚಾರ ಪಡಿಸುವ ಕಾರ್ಯ ಹೆಚ್ಚಾಗಬೇಕು.
ತೊಗಲುಗೊಂಬೆಯಾಟದ ಬಗ್ಗೆ ಸ್ವತಃ ಕಲಾವಿದರೆ ಅನಾಸಕ್ತಿ ತೋರುತ್ತಿದ್ದುದನ್ನು ನಾಲ್ಕು ದಶಕಗಳ ಹಿಂದೆಯೇ ಗುರುತಿಸಿದ್ದ ಜನಪದ ತಜ್ಞ ಎಂ.ಎಸ್.ನಂಜುಂಡರಾವ್ ಅವರು ರಾಜ್ಯ ಹಾಗೂ ಆಂಧ್ರಪ್ರದೇಶದ ಹಲವು ಗ್ರಾಮಗಳನ್ನು ಸುತ್ತಿ ಸಾವಿರಾರು ತೊಗಲುಗೊಂಬೆಗಳನ್ನು ಸಂಗ್ರಹಿಸಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿರುವ ಈ ತೊಗಲುಗೊಂಬೆಗಳು ರಾಜ್ಯದ ಜನಪದ ಕಲೆಯ ಅಮೂಲ್ಯ ಆಸ್ತಿ. ಈ ಗೊಂಬೆಗಳನ್ನು ಬಳಸಿಕೊಂಡು ಈ ಕಲೆಯನ್ನು ಪ್ರಚಾರ ಪಡಿಸುವ ಕಾರ್ಯ ಹೆಚ್ಚಾಗಬೇಕು.
‘ತೊಗಲುಗೊಂಬೆ ಹಬ್ಬದ ನೆವದಲ್ಲಿ ತೊಗಲುಗೊಂಬೆಯಾದ ಬಗ್ಗೆ ಅನನ್ಯವಾದ ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗಿದೆ. ಕೇಂದ್ರ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ದೇಶದ ವಿವಿಧ ಮಹಾನಗರಗಳಲ್ಲಿ ತೊಗಲುಗೊಂಬೆಗಳ ಪ್ರದರ್ಶನ ಹಾಗೂ ಆಟ ನಡೆಸುವ ಉದ್ದೇಶ ಚಿತ್ರಕಲಾ ಪರಿಷತ್ತಿಗಿದೆ. ದೇಶದ ವಿವಿಧ ಭಾಗಗಳಲ್ಲಿ ನಮ್ಮ ತೊಗಲುಗೊಂಬೆಯಾಟಕ್ಕೆ ಪ್ರಚಾರ ಸಿಕ್ಕರೆ ಸಹಜವಾಗಿಯೇ ಈ ಕಲೆಗೆ ಪ್ರೋತ್ಸಾಹ ಹೆಚ್ಚಾಗಲಿದೆ’ ಎನ್ನುತ್ತಾರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್.
ತೊಗಲುಗೊಂಬೆಯಾಟ ಉಳಿಸಲು ಬೀಜರೂಪದಲ್ಲಿರುವ ಈ ಎಲ್ಲ ಪ್ರಯತ್ನಗಳು ಯಶಸ್ವಿಯಾದರೆ ಈ ವಿಶಿಷ್ಟ ಕಲೆಗೆ ಉತ್ತಮ ಭವಿಷ್ಯ ಸಿಗಬಹುದೆಂಬ ಆಶಾವಾದವನ್ನು ಮಾತ್ರ ಸದ್ಯಕ್ಕೆ ಉಳಿಸಿಕೊಳ್ಳಬಹುದು.
ಗೊಂಬೆಗಳಿಗೆ ಶೈಕ್ಷಣಿಕ ಚೌಕಟ್ಟು
ತೊಗಲುಗೊಂಬೆಯಾಟದ ಅಧ್ಯಯನಕ್ಕಾಗಿ ಜಾನಪದ ವಿಶ್ವವಿದ್ಯಾಲಯದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲು ಸಿದ್ಧತೆ ನಡೆದಿದೆ. ತೊಗಲುಗೊಂಬೆಗಳ ಸಂಗ್ರಹ ಹಾಗೂ ಕಲಾವಿದರಿಂದ ಪ್ರದರ್ಶನಗಳನ್ನು ಆಯೋಜಿಸುವ ಕೆಲಸ ವಿಶ್ವವಿದ್ಯಾಲಯದಿಂದ ನಡೆಯುತ್ತಿದೆ. ಕಲಾವಿದರು ಹಾಗೂ ಸಂಶೋಧಕರು ಒಟ್ಟುಗೂಡಿ ಈ ಕಲೆಯನ್ನು ಮುನ್ನೆಲೆಗೆ ತರುವ ಪ್ರಯತ್ನವೂ ವಿಶ್ವವಿದ್ಯಾಲಯದಿಂದ ಆಗುತ್ತಿದೆ.
–ಪ್ರೊ.ಅಂಬಳಿಕೆ ಹಿರಿಯಣ್ಣ, ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ತೊಗಲುಗೊಂಬೆಯಾಟದ ಅಧ್ಯಯನಕ್ಕಾಗಿ ಜಾನಪದ ವಿಶ್ವವಿದ್ಯಾಲಯದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲು ಸಿದ್ಧತೆ ನಡೆದಿದೆ. ತೊಗಲುಗೊಂಬೆಗಳ ಸಂಗ್ರಹ ಹಾಗೂ ಕಲಾವಿದರಿಂದ ಪ್ರದರ್ಶನಗಳನ್ನು ಆಯೋಜಿಸುವ ಕೆಲಸ ವಿಶ್ವವಿದ್ಯಾಲಯದಿಂದ ನಡೆಯುತ್ತಿದೆ. ಕಲಾವಿದರು ಹಾಗೂ ಸಂಶೋಧಕರು ಒಟ್ಟುಗೂಡಿ ಈ ಕಲೆಯನ್ನು ಮುನ್ನೆಲೆಗೆ ತರುವ ಪ್ರಯತ್ನವೂ ವಿಶ್ವವಿದ್ಯಾಲಯದಿಂದ ಆಗುತ್ತಿದೆ.
–ಪ್ರೊ.ಅಂಬಳಿಕೆ ಹಿರಿಯಣ್ಣ, ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಸಮುದಾಯದ ಸಹಭಾಗಿತ್ವ
ತೊಗಲುಗೊಂಬೆಯಾಟದ ಉಳಿವು ಹಾಗೂ ಪ್ರೋತ್ಸಾಹದ ಬಗ್ಗೆ ಕೇವಲ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರುವುದು ಜವಾಬ್ದಾರಿಯಿಂದ ನುಣುಚಿಕೊಂಡಂತೆ. ಗ್ರಾಮ ಹಾಗೂ ನಗರ ಪ್ರದೇಶದ ಎಲ್ಲರೂ ತೊಗಲುಗೊಂಬೆಯಾಟದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಆಟಕ್ಕೆ ಪ್ರೋತ್ಸಾಹ ನೀಡಬೇಕು. ಅಪರೂಪದ ಜನಪದ ರಂಗಕಲೆಯಾದ ತೊಗಲುಗೊಂಬೆಯಾಟವನ್ನು ಉಳಿಸಿಕೊಳ್ಳಲು ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯ.
–ಬೆಳಗಲ್ ವೀರಣ್ಣ, ತೊಗಲುಗೊಂಬೆಯಾಟದ ಹಿರಿಯ ಕಲಾವಿದರು
ತೊಗಲುಗೊಂಬೆಯಾಟದ ಉಳಿವು ಹಾಗೂ ಪ್ರೋತ್ಸಾಹದ ಬಗ್ಗೆ ಕೇವಲ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರುವುದು ಜವಾಬ್ದಾರಿಯಿಂದ ನುಣುಚಿಕೊಂಡಂತೆ. ಗ್ರಾಮ ಹಾಗೂ ನಗರ ಪ್ರದೇಶದ ಎಲ್ಲರೂ ತೊಗಲುಗೊಂಬೆಯಾಟದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಆಟಕ್ಕೆ ಪ್ರೋತ್ಸಾಹ ನೀಡಬೇಕು. ಅಪರೂಪದ ಜನಪದ ರಂಗಕಲೆಯಾದ ತೊಗಲುಗೊಂಬೆಯಾಟವನ್ನು ಉಳಿಸಿಕೊಳ್ಳಲು ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯ.
–ಬೆಳಗಲ್ ವೀರಣ್ಣ, ತೊಗಲುಗೊಂಬೆಯಾಟದ ಹಿರಿಯ ಕಲಾವಿದರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...