ಶುಕ್ರವಾರ, ಮೇ 23, 2014

Anger, Aspiration, Apprehension


Economic & Political Weekly EPW may 24, 2014 vol xlix no 21
Narendra Modi has won a massive victory but his ascendance does not portend positive change.
In the months leading up to Elections 2014, the media, in its anxiety to project Narendra Modi as the next prime minister, frequently described the 16th Lok Sabha elections as the most important ever. Prone to its usual exaggeration the media forgot that in terms of outcomes there have been bigger landmarks in the past – 1967 when the two-decade-old Congress monopoly was first weakened, 1977 when Indira Gandhi was voted out after the Emergency and 1998 when the first ever Bharatiya Janata Party (BJP)-led coalition came to power. Elections 2014 have indeed turned out to be a landmark, but not because Narendra Modi has led the BJP and the National Democratic Alliance (NDA) to a huge win that has led to a single party enjoying majority in Parliament for the first time in 30 years.
This was an election that the ultimate victor had set out planning for years ago. It was an election for which, beginning in 2012, international public relation agencies were hired to build a persona for Narendra Modi, with a positive spin (“development”, “the Gujarat model”, “governance”, “decisive”, etc) covering up the negatives (centralisation of power, authoritarian tendencies, and being the chief minister of a state when some of the country’s worst communal riots took place). It was an election, which, because of the spin and the promise of a business-friendly government, most of the corporates in the country ended up endorsing one candidate. It was an election that consequently saw an unprecedented amount of funds flow to one party, which, according to one independent estimate, ended up spending more than Rs 5,000 crore on just advertising, only a little less than the $986 million that United States President Barack Obama spent on his 2012 presidential campaign in a country where the per capita income is more than 30 times that in India. It was an election where the media months ago bought into the message of the well-funded party and had no compunction about either refusing to interrogate the claims of past achievements and future promises of its prime minister aspirant, or about promoting a collective amnesia about Gujarat 2002. It was an election where the vast resources that were collected were used to mobilise, motivate and monitor the victor’s campaign down to the last detail, with no small help from the organiser par excellence – the Rashtriya Swayamsevak Sangh (RSS). It was an election that can, with some justifiable exaggeration, be called the biggest corporate heist in history. When Indian capital embraced its natural ally, a right-wing party that promised to be pro-business.
This is not to gloss over the sins of commission and omission of the United Progressive Alliance (UPA) government – in particular of the Congress Party – that have helped the BJP march to victory. A party that headed a venal government and now more than ever before has been converted into family property stood little chance against the BJP’s military-like campaign. The UPA government’s dismal record on inflation control and employment generation more than overshadowed its limited achievements by way of some rights, some improvement in human development and some social security legislation, which in any case were all drowned by the promises of the Narendra Modi machine.
The Modi campaign was organised around the message of “development”, all gloss and empty of content, and aimed at taking full advantage of voter fatigue with the UPA government and anger against its corruption. Yet, it was not always possible to keep the mask in place. It was not the vitriol that the prime minister aspirant (now prime minister elect) used during the campaign that should worry us but the messages he occasionally sent to the Hindu vote bloc. Talk about sending back migrants from Bangladesh, about who benefits from “pink” (that is beef) exports and half-hearted criticism of statements such as those opposed to Modi should go to Pakistan were clear signals that the prime minister aspirant had not “moderated”. It is also instructive that not once in his campaign did Modi reach out to the minorities to assuage any misgivings they may have had about him as a prime minister. There is therefore good reason to worry about the future of a pluralistic India under a Modi government that will enjoy a commanding majority in Parliament but without a single Muslim member of Parliament in its ranks.
If a prime minister, who as chief minister of Gujarat oversaw no more than a middling improvement in human development indicators, disappoints his voter base on “development”, the danger of Hindutva raising its ugly head is ever present. Modi is an RSS pracharak but he has not always done his organisation’s bidding. However, there is a renewed closeness between the two and even before the results were announced, senior officials of the RSS were already speaking about the Ram temple and the Uniform Civil Code.
As the Modi campaign gathered momentum there were signs that the BJP’s prime ministerial candidate was becoming “acceptable” to a number of important political agents as well as intellectuals. Those who should know better claimed that New Delhi will “tame” the Narendra Modi of Gandhinagar. The argument is that as prime minister of a vast country, Modi will be unable, even if he tried, to undermine democracy because institutions such as the Supreme Court, the Election Commission and the Comptroller and Auditor General have demonstrated their independence from the Executive. There is little to defend in this head-in-the-sand view which is worrying not so muchfor the resignation it conveys as for its unwillingness to fight a dangerous force in Indian democracy.
If one thing is apparent in the Republic, it is that 60 years after it was formed, the institutions of democracy at many levels remain fragile and open to capture. We see how from panchayati raj, the lower judiciary and the Executive at the district upwards, right up to New Delhi, institutions can be subverted and are vulnerable to capture by forces like the RSS that work with a vision and mission. We also see how even autonomous institutions of democracy can be quick to abandon their independence when they come up against a powerful and organised force. Why, our apparently independent media showed this very trait once it smelt that Modi was on the ascendance. The higher judiciary is not very different. While its independence and power in recent years ran alongside a weak Executive, a strong Executive (as during the Indira Gandhi regime of 1971-76) has shown that it can make even the Supreme Court bend to its will.
Perhaps of greatest concern is that we now have the Sangh Parivar being presented with a clear opportunity to reshape the Indian polity in line with its decades-old Hindutva project. The majority the BJP will enjoy on its own in Parliament and the decimation of the opposition must therefore be viewed with apprehension, rather than as a positive development. In the NDA government of Atal Bihari Vajpayee, the BJP was, in comparison, hobbled by allies and a small majority in Parliament and could go only so far and no further with Hindutva.
Other than in states where the regional parties showed their strength (Tamil Nadu, West Bengal, Odisha and Andhra Pradesh), the election was about Narendra Modi (his promises versus his divisive personality) who, in turn, easily turned it into a referendum on the incompetence of Congress Vice-President Rahul Gandhi. The future of India did revolve around the suitability of a divisive and polarising personality to head the Government of India but it should have also revolved around the concrete agenda that political parties were offering the electorate. And here conspicuous with their absence, perhaps more than in the past, were discussions and debates about what the main political parties could place before the people of India. What we witnessed instead was a campaign that mobilised an electorate thirsting for change and that was run in an aggressive fashion without much concern and respect for all communities and classes.
If there is a message from Elections 2014 it is that India has been changing. It is becoming a society where those with a voice are becoming less tolerant, less compassionate and more aggressive towards those without a voice. This is just the atmosphere for an aggressive mix of religion and nationalism to find expression. It will therefore be a huge challenge for individuals, groups and parties concerned about democratic and human rights – who have been marginalised in Elections 2014 – to monitor and keep a check on the BJP/NDA government so that a pluralistic India can look forward to a peaceful future in which the well-being of all is at the centre. The “new era” that the BJP has declared is not something to be viewed with optimism, it should perhaps be viewed with scepticism and apprehension.

ಶುಕ್ರವಾರ, ಮೇ 16, 2014

ಜಾನಪದ ಅಕಾಡೆಮಿಯಿಂದ ಅರ್ಜಿ ಆಹ್ವಾನ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ವಾಲಗ, ತಮಟೆ, ಚೌಡಿಕೆ, ಲಂಬಾಣಿ ವಾಜ್ಜ, ನಗಾರಿ, ಚಿಟ್ಟೆ ಮೇಳ, ಗಣೇವಾದ್ಯ, ತತ್ವಪದ, ಜಗ್ಗಲಿಗೆ, ನೀಲಗಾರರ ಪದ, ಶಹನಾಯಿ ತರಬೇತಿ ನೀಡಲು ಆಸಕ್ತಿಯಿರುವ ಗುರುಗಳಿಂದ ಕರ್ನಾಟಕ ಜಾನಪದ ಅಕಾಡೆಮಿ ಅರ್ಜಿ ಆಹ್ವಾನಿಸಿದೆ.
ಅಕಾಡೆಮಿಯ ಬೆಂಗಳೂರು ಕಚೇರಿಯಿಂದ, ಆಯಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಂದ ಅರ್ಜಿ ಪ್ರತಿ ಪಡೆದುಕೊಳ್ಳಬಹುದು. ₨ 10 ಬೆಲೆಯ ಅಂಚೆ ಚೀಟಿ ಅಂಟಿಸಿದ, ಸ್ವವಿಳಾಸ ಇರುವ ಲಕೋಟೆಯನ್ನು ಜಾನಪದ ಅಕಾಡೆಮಿ ಕಚೇರಿಗೆ ಕಳುಹಿಸಿ, ಅಂಚೆ ಮೂಲಕ ಅರ್ಜಿ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಯನ್ನು ಇದೇ 31ರೊಳಗೆ ‘ರಿಜಿಸ್ಟ್ರಾರ್‌, ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು – 560 002’ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 080–2221 5509 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಮಂಗಳವಾರ, ಮೇ 13, 2014

ದಲಿತರ ಕೀಳು ವೃತ್ತಿಗಳ ಕುರಿತು...

-ರಘೋತ್ತಮ ಹೊ.ಬ


ಸಾರ್ವಜನಿಕ ಶೌಚಾಲಯಗಳ ಉಸ್ತುವಾರಿ ನೋಡಿಕೊಳ್ಳುವುದು, ಹಳೆ ಚಪ್ಪಲಿ ಹೊಲಿಯುವುದು, ಕಕ್ಕಸು ಗುಂಡಿಗಳ ಶುಚಿಗೊಳಿಸುವುದು ಇಂತಹ ಹೊಲಸು ಕೆಲಸಗಳ ಬಹುತೇಕ ಜವಾಬ್ದಾರಿ ದಲಿತರದ್ದು ಎಂದರೆ ಯಾರೂ ನಿರಾಕರಿಸಲಿಕ್ಕಿಲ್ಲ. ಇವಿಷ್ಟೆ ಅಲ್ಲ ಊರಲ್ಲಿ ಯಾವುದಾದರೂ ದನ, ಎಮ್ಮೆ, ಕರು, ಕುರಿ, ನಾಯಿ ಸತ್ತರೆ ಅದನ್ನು ತೆಗೆಯುವವರು ಕೂಡ ದಲಿತರೆ. ಕೆಲವೊಮ್ಮೆ ದಲಿತರು ಅಂತಹ ಸತ್ತ ಪ್ರಾಣಿಗಳ ಚರ್ಮಕ್ಕಾಗಿ, ಮಾಂಸಕ್ಕಾಗಿ ಹಾಗೆ ‘ಶವ’ ಹೊರತೆಗೆದರೆ, ಇನ್ನು ಕೆಲ ಸಂದರ್ಭಗಳಲ್ಲಿ ಅಂತಹ ‘ಶ್ರೇಷ್ಠ’ ಕೆಲಸಗಳಿಗಾಗಿ ದೊರೆಯುವ ಹಣಕ್ಕಾಗಿ ಅಂತಹ ಕೆಲಸ ಮಾಡುತ್ತಾರೆ. ಫ್ರಶ್ನೆ ಏನೆಂದರೆ ಇದರ ಅಗತ್ಯವಿದೆಯಾ? ದಲಿತರು ಈಗಲೂ ಇಂತಹ ‘ಹೊಲಸು’ ಕೆಲಸಗಳನ್ನು ಮಾಡುವ ಅಗತ್ಯವಿದೆಯಾ? ಎಂಬುದು. ಪಟ್ಟಿಮಾಡುತ್ತಾ ಹೋದರೆ ದಲಿತರು ಮಾಡುವ ಅಥವಾ ಅವರ ಕೈಯಲ್ಲಿ ಮಾಡಿಸಲ್ಪಡುವ ಇಂಥ ನೂರು ‘ಕೀಳು ವೃತ್ತಿ’ಗಳನ್ನು ಉಲ್ಲೇಖಿಸಬಹುದು. ಉದಾಹರಣೆಗೆ ಊರಲ್ಲಿ ಯಾರಾದರೂ ಸತ್ತರೆ ತಮಟೆ ಬಡಿದು ಸಾರುವುದು, ನ್ಯಾಯ ಪಂಚಾಯ್ತಿ ಇದೆ ಎಂದು ಕೂಗಿ ಹೇಳುವ ‘ಕುಳವಾಡಿಕೆ’ ಕೆಲಸ, ಹಾಗೆಯೇ ಜೀತ ಇತ್ಯಾದಿ, ಇತ್ಯಾದಿ. ಪ್ರಶ್ನೆ ಏನೆಂದರೆ ಜಾಗತೀಕರಣದ ಈ ಯುಗದಲ್ಲಿ ಇಂತಹ ‘ಹೊಲಸು’ ಕೆಲಸಗಳನ್ನು ದಲಿತರು ಈಗಲೂ ಮಾಡುವುದು ಎಷ್ಟು ಸರಿ? ಎಂಬುದು.

ಅಂದಹಾಗೆ ದಲಿತರ ಇಂತಹ ಕೀಳು ವೃತ್ತಿಗಳ ಬಗ್ಗೆ ಅಂಬೇಡ್ಕರರು ಏನು ಹೇಳುತ್ತಾರೆ? ಅಥವಾ ಅವರು ಇಂತಹದ್ದನ್ನು ಬಯಸಿದ್ದರೆ? ಎಂದು ಹುಡುಕ ಹೊರಟರೆ ಉತ್ತರ ಕಣ್ಣಿಗೆ ರಾಚುತ್ತದೆ. 1956 ಅಕ್ಟೋಬರ್ 15 ರಂದು ವಿಶ್ವದ ಅತಿ ದೊಡ್ಡ ಮತಾಂತರ ಸಮಾರಂಭದ ನಂತರ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿರುವ ಅವರು ಆ ಸಂದರ್ಭದಲ್ಲಿ ದಲಿತರ ಇಂತಹ ಕೀಳು ವೃತ್ತಿಯ ಬಗ್ಗೆ ಪ್ರಸ್ತಾಪಿಸುತ್ತಾರೆ(Babasaheb Ambedkar writings and speeches. vol,17. Part III. P,534,535. ಅಂಬೇಡ್ಕರರ ಮಾತುಗಳಲ್ಲೇ ಹೇಳುವುದಾದರೆ “ಕೆಲ ದಿನಗಳ ಹಿಂದೆ ‘ನಾವು ಮಾಂಸಾಹಾರ ತಿನ್ನುವುದು ಬೇಡ’ ಎಂದು ಚಳುವಳಿ ನಡೆಸಿದ್ದೆವು ಮತ್ತು ನಮ್ಮ ಈ ಚಳುವಳಿಯ ಸುದ್ದಿ ಕೇಳಿ ಸ್ಪøಶ್ಯರಿಗೆ ಬರಸಿಡಿಲು ಬಡಿದಂತಾಗಿತ್ತು. ವಿಚಿತ್ರ ಅಭ್ಯಾಸವೆಂದರೆ ಜೀವಂತ ಎಮ್ಮೆಯ ಹಾಲನ್ನು ಅವರು(ಸ್ಪøಶ್ಯರು) ಕುಡಿಯಬೇಕಂತೆ. ಆದರೆ ನಾವು ಅದರ ಸತ್ತ ಶವವನ್ನು ಹೆಗಲ ಮೇಲೆ ಹೊರಬೇಕಂತೆ! ನಾವು ಕೇಳುವುದೇನೆಂದರೆ ಅವರೇಕೆ ತಮ್ಮ ಸತ್ತ ತಾಯಿಯ ಶವವನ್ನೂ ಹೊರಲು ನಮಗೆ ಅವಕಾಶ ಕೊಡಬಾರದು? ಎಂಬುದು. ಹೇಗೆ ಅವರು ನಮಗೆ ಅವರ ಸತ್ತ ಎಮ್ಮೆ ಹೊರುವ ಅವಕಾಶ ಕೊಡುತ್ತಾರೋ ಹಾಗೇ ತಮ್ಮ ಸತ್ತ ತಾಯಿಯ ಶವ ಹೊರುವ ಅವಕಾಶವನ್ನೂ ಕೊಡಲಿ”.

“ಕೆಲದಿನಗಳ ಹಿಂದೆ ‘ಕೇಸರಿ’ಪತ್ರಿಕೆಗೆ (ಬಾಲಗಂಗಾಧರ ತಿಲಕ್ ಸಂಪಾದಕತ್ವದ) ಓದುಗರ ವಿಭಾಗಕ್ಕೆ ಓರ್ವ ಒಂದು ಪತ್ರ ಬರೆದ. ಏನು ಬರೆದಿದ್ದನೆಂದರೆ ‘ಒಂದು ಊರಿನಲ್ಲಿ ವರ್ಷಕ್ಕೆ 50 ದನಗಳು ಸಾಯುತ್ತವಂತೆ. ಸತ್ತ ದನಗಳ ಆ ಮಾಂಸದ ಹೊರತಾಗಿ ಆ 50 ದನಗಳ ಚರ್ಮ, ಕೊಂಬು, ಗೊರಸು, ಮೂಳೆ, ಬಾಲ ಇತ್ಯಾದಿಗಳಿಂದ ದಲಿತ ಕುಟುಂಬವೊಂದು ವರ್ಷಕ್ಕೆ ಏನಿಲ್ಲವೆಂದರೂ 500ರೂ ಸಂಪಾದಿಸುತ್ತದಂತೆ. ಹೀಗಿರುವಾಗ ದಲಿತರಿಗೆ ಸತ್ತ ದನಗಳನ್ನು ತೆಗೆಯಬೇಡಿ ಎಂದರೆ ಅಷ್ಟು ಆದಾಯದಿಂದ ಅವರನ್ನು ವಂಚಿಸಿದ ಹಾಗಲ್ಲವೆ?’ ಎಂಬುದು ‘ಕೇಸರಿ’ ಪತ್ರಿಕೆಯ ಆ ಪತ್ರದ ನಿಲುವಾಗಿತ್ತು. ಸತ್ಯ ಹೇಳಬೇಕೆಂದರೆ ಅಂತಹ ‘ನಿಲುವು’ಗಳಿಗೆ ಉತ್ತರಿಸುವ ಅಗತ್ಯವಾದರೂ ಏನಿದೆ ಎಂದು ನಾನು ಸುಮ್ಮನಾಗಿದ್ದೆ. ಆದರೆ ನನ್ನ ಜನ ನಮ್ಮ ಸಾಹೇಬರು(ಅಂಬೇಡ್ಕರ್) ಏನು ಮಾಡುತ್ತಿದ್ದಾರೆ? ಯಾಕೆ ಅವರು ‘ಕೇಸರಿ’ ಪತ್ರಿಕೆಯ ಇಂತಹ ನಿಲುವಿಗೆ ಏನನ್ನೂ ಉತ್ತರಿಸುತ್ತಿಲ್ಲ ಎನ್ನತೊಡಗಿದರು.”

“ಕೆಲ ದಿನಗಳ ನಂತರ ನಾನು ಸಂಗಮ್ನೇರ್‍ಗೆ ಸಮ್ಮೇಳನವೊಂದಕ್ಕೆ ಹೋಗಿದ್ದೆ. ಸಮ್ಮೇಳನದ ನಂತರ ಅಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು. ಅದೇ ಸಮಯಕ್ಕೆ ‘ಕೇಸರಿ’ ಪತ್ರಿಕೆಯ ಓರ್ವ ವರದಿಗಾರ ನನಗೆ ಚೀಟಿಯೊಂದನ್ನು ಕಳುಹಿಸಿ ‘ನೀವು ನಿಮ್ಮ ಜನರಿಗೆ ಸತ್ತ ದನವನ್ನು ತೆಗೆಯ ಬೇಡಿ ಎಂದು ಹೇಳುತ್ತಿದ್ದೀರಿ. ಅವರೆಷ್ಟು ಬಡವರು! ಅವರ ಬಳಿ ತಿನ್ನಲು ಅನ್ನವಿಲ್ಲ, ಉಳಲು ಹೊಲವಿಲ್ಲ. ಅವರ ಹೆಂಗಸರಿಗೆ ಉಡಲು ಸೀರೆ, ರವಿಕೆ ಇವ್ಯಾವುವೂ ಇಲ್ಲ. ಪರಿಸ್ಥಿತಿ ಇಷ್ಟೊಂದು ಚಿಂತಾಜನಕವಾಗಿರಬೇಕಾದರೆ ನೀವು ಅವರಿಗೆ ಸತ್ತ ದನಗಳ ಚರ್ಮ, ಕೊಂಬು, ಮಾಂಸ ಇತ್ಯಾದಿಗಳಿಂದ ಬರುವ 500 ರೂಪಾಯಿ ಆದಾಯವನ್ನು ಬಿಟ್ಟು ಬಿಡಿ ಎಂದು ಹೇಳುತ್ತಿರುವಿರಿ. ಇದು ನಿಮ್ಮ ಜನರಿಗಾಗುವ ನಷ್ಟವಲ್ಲವೆ?’ ಎಂದು ಕೇಳಿದ. ನಾನು ಕೇಳಿದೆ ‘ಇದಕ್ಕೆ ನಾನು ನಿನಗೆ ಉತ್ತರ ಎಲ್ಲಿ ಕೊಡಲಿ? ಇಲ್ಲೇ ಕಾರಿಡಾರ್‍ನಲ್ಲಿ ಕೊಡಲೇ ಅಥವಾ ಸಭೆಯಲ್ಲಿ ಕೊಡಲೆ? ಜನರ ಎದುರು ಉತ್ತರ ಕೊಡುವುದೇ ಉತ್ತಮ. ಇದೆಷ್ಟೆಯಾ? ಅಥವಾ ಇನ್ನು ಏನಾದರೂ ಇದೆಯಾ?’ ಎಂದೆ. ಆದಕ್ಕೆ ಆತ ‘ಇದಿಷ್ಟೆ. ಅದಷ್ಟಕ್ಕೆ ಮಾತ್ರ ಉತ್ತರ ಕೊಡಿ ಸಾಕು’ ಎಂದ. ಮುಂದುವರಿದು ನಾನು ಆ ವ್ಯಕ್ತಿಯನ್ನು ‘ನಿನಗೆ ಮಕ್ಕಳೆಷ್ಟು ಮತ್ತು ನಿಮ್ಮ ಮನೆಯಲ್ಲಿ ಎಷ್ಟು ಜನರಿದ್ದೀರಿ?’ ಎಂದೆ. ಅದಕ್ಕೆ ಆತ ‘ನನಗೆ ಐವರು ಮಕ್ಕಳು. ಹಾಗೆಯೇ ನನ್ನ ಅಣ್ಣನಿಗೆ 7ಜನ ಮಕ್ಕಳು’ ಎಂದ. ಅದಕ್ಕೆ ನಾನು ಹೇಳಿದೆ ‘ಅಂದರೆ ನಿಮ್ಮ ಕುಟುಂಬ ತುಂಬಾ ದೊಡ್ಡದು. ಹಾಗಿದ್ದರೆ ಒಂದು ಕೆಲಸ ಮಾಡು. ನೀನು ಮತ್ತು ನಿನ್ನ ಸಂಬಂಧಿಕರು ಎಲ್ಲರೂ ಹಳ್ಳ್ಳಿಯ ಎಲ್ಲಾ ಸತ್ತ ದನಗಳನ್ನು ಸಾಗಿಸಿ ಮತ್ತು ಅದರಿಂದ ಬರುವ 500 ರೂಪಾಯಿಯನ್ನು ನೀವೆ ಸಂಪಾದಿಸಿ. ನನ್ನ ಪ್ರಕಾರ ಅಂಥ ಅನುಕೂಲವನ್ನು ನೀನು(ಹೇಗಿದ್ದರೂ ದೊಡ್ಡ ಕುಟುಂಬ) ಒಪ್ಪಿಕೊಳ್ಳಲೇ ಬೇಕು. ಹ್ಞಾಂ, ಇದಿಷ್ಟೆ ಅಲ್ಲ! ಬೇಕಾದರೆ ಇದರ ಜೊತೆಗೆ ವರ್ಷಕ್ಕೆ ನಿನಗೆ ನಾನು ನನ್ನ ಕೈಯಾರೆ extra 500 ರೂಪಾಯಿ ಸಿಗುವ ವ್ಯವಸ್ಥೆ ಕೂಡ ಮಾಡ್ತೀನಿ. ನನ್ನ ಜನರಿಗೆ ಅನ್ನ, ಬಟ್ಟೆ ಸಿಗದಿದ್ದರೇನಂತೆ? ಅದರ ಬಗ್ಗೆ ನಾನು ನೋಡ್ಕೊತೀನಿ. ಮತ್ತೆ ನೀನೇಕೆ ಇಂಥ ಅನುಕೂಲ ಬಿಟ್ಟುಕೊಡ್ತೀಯಾ? ನಾನು ಹೇಳಿದ್ದೇನಲ್ಲ, ಅವನ್ನೆಲ್ಲ(ಸತ್ತದನಗಳನ್ನು ತೆಗೆಯುವುದು) ನೀನೆ ಯಾಕೆ ಮಾಡಬಾರದು? (ಸರಿ ಬಿಡು,) ನನ್ನ ಜನಗಳು ಮಾಡಿದರೆ ಅದು ಅವರಿಗೆ ಅನುಕೂಲ! ಅದೇ ನೀನೆ ಮಾಡಿದ್ರೆ? ಅದು ನಿನಗೂ ಅನುಕೂಲ ತಾನೆ? ಹೋಗು ಸತ್ತ ದನಗಳ ಹೊರು”.

ಅಂಬೇಡ್ಕರರ ಈ ಮಾತಿಗೆ ಆತ ಮಾತಾಡಿದ್ದರೆ ಕೇಳಿ. ಹಾಗೆಯೇ ಆತನಾದರೂ ಏನು ಮಾಡಿರುತ್ತಾನೆ? ಸುಮ್ಮನೆ ಹೋಗಿರುತ್ತಾನಷ್ಟೆ. ಅಲ್ಲದೆ ಇನ್ನೆಂದಿಗೂ ಆತ ಇನ್ಯಾರನ್ನು ಹಾಗೇ ಕೇಳಿರಲಿಕ್ಕೆ ಖಂಡಿತ ಸಾಧ್ಯವಿಲ್ಲ. ಅಂದಹಾಗೆ ಅಂಬೇಡ್ಕರರು ಆತನಿಗೆ ನೀಡಿರುವ ಈ ವ್ಯಂಗ್ಯ ಭರಿತ ಉತ್ತರ ಸೂಚಿಸುವುದೇನನ್ನು? ದಲಿತರು ಇನ್ನೆಂದು ಇಂತಹ ಕೀಳು ವೃತ್ತಿಗಳಲ್ಲಿ ತೊಡಗಬಾರದು ಎಂದು ತಾನೆ?

ಖಂಡಿತ, ಕಕ್ಕಸ್ಸು ತೊಳೆಯುವುದರಿಂದ, ಕಿತ್ತುಹೋದ ಚಪ್ಪಲಿ ಹೊಲಿಯುವುದರಿಂದ, ಸಾರ್ವಜನಿಕ ಶೌಚಾಲಯ ತೊಳೆಯುವುದರಿಂದ ನಾಲ್ಕು ಕಾಸು ಬರಬಹುದು. ಆದರೆ ಅವು ಕೊಡುವ ಅನಾರೋಗ್ಯ? ತೆಗೆಯುವ ಮರ್ಯಾದೆ? ಯಾರಿಗೆ ಬೇಕು ಅದು? ಅಕಸ್ಮಾತ್ ಅದರಿಂದ ಲಾಭ ಬರುತ್ತದೆ ಎನ್ನುವುದಾದರೆ ಅಂಬೇಡ್ಕರರು ಹೇಳುವ ಹಾಗೆ ಸಮಾಜದ ಎಲ್ಲಾ ಜನರೂ ಅದನ್ನು ಮಾಡಲಿ ಬಿಡಿ. ಹಾಗೆಯೇ ಅಂತಹ ‘ಲಾಭ’ ಪಡೆಯಲಿ ಬಿಡಿ. ಅದು ಬಿಟ್ಟು ದಲಿತರೇ ಯಾಕೆ ಅದಕ್ಕೆ ಜೋತು ಬೀಳಬೇಕು? 

ಹಾಗೆಯೇ’ದಲಿತ’ರಾಗಿಯೇ(ತುಳಿತಕ್ಕೊಳಗಾದವರಾಗಿಯೇ) ಯಾಕೆ ಉಳಿಯಬೇಕು? ಬಲಿತರಾಗುವುದು ಬೇಡವೆ? ಅವಮಾನ ಸಂಕಷ್ಟಗಳಿಂದ ಹೊರಬರುವುದು ಬೇಡವೆ? ಸ್ವಾಭಿಮಾನದಿಂದ ತಲೆ ಎತ್ತಿ ಇತರರ ಹಾಗೆ ಬದುಕುವುದು ಬೇಡವೆ? ಈ ನಿಟ್ಟಿನಲಿ ದಲಿತರು ತಮ್ಮ ಕೀಳು ವೃತ್ತಿಗಳಿಂದ ಹೊರಬರಲಿ. ಸಮಾಜದಲ್ಲಿ ಗೌರವ ಸಂಪಾದಿಸಲಿ.

ಜಾತಿಯ ಪೊರೆ ಕಳಚಿ ಶಾಂತಿಯ ಸಸಿ ನೆಟ್ಟೆವು…

ಟಿ ಎಸ್ ಗೊರವ
krupe:avadhi
ಎಂದಿಗಿಂತ ನಿತ್ಯವೂ ಜಾತಿಯ ಗಾಳಿ ರಭಸಗೊಳ್ಳುತ್ತಿರುವುದರ ಬಗ್ಗೆ ನಾವು ಗೆಳೆಯರೆಲ್ಲ ಬಹಳ ಸಲ ಮಾತಾಡಿಕೊಳ್ಳುತ್ತಿದ್ದೆವು. ತಳಮಳಗೊಂಡು ನೊಂದುಕೊಳ್ಳುತ್ತಿದ್ದೆವು. ಕ್ರೋಧಗೊಂಡು ಹಿಡಿಶಾಪ ಹಾಕುತ್ತಿದ್ದೆವು. ಜಾತಿ ತಣ್ಣಗೆ ಕೊರೆಯುವ ಅಲಗು ಎಂದು ಬೆಚ್ಚಿ ಬೀಳುತ್ತಿದ್ದೆವು. ನನ್ನ ಬಾಲ್ಯಕಾಲದಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನಮ್ಮೂರು ರಾಜೂರ ಜಾತ್ರೆ ಎಂದರೆ ಎಷ್ಟೊಂದು ಸಂಭ್ರಮಗೊಳ್ಳುತ್ತಿದ್ದೆವು. ಅಲ್ಲಿ ಟೆಂಟು ಹಾಕುತ್ತಿದ್ದ ಜೋಗ್ಯಾರ ಅಂಗಡಿಯಲ್ಲಿ ಬಣ್ಣದ ಬಲೂನು, ಪೀಪಿ, ಪ್ಲಾಸ್ಟೀಕಿನ ಲಾರಿ ಖರೀದಿ ಮಾಡಿ ಆಟವಾಡಲು ತವಕಗೊಳ್ಳುತ್ತಿದ್ದೆವು. ನಾನು ಓದಲು, ನೌಕರಿ ಮಾಡಲು ಊರು ಬಿಟ್ಟು ಹತ್ತಿರ ಹತ್ತಿರವೆಂದರೂ ಹತ್ತು ವರ್ಷವಾಯಿತು. ಈಗ ಊರು ಜಾತಿಯ ಗಲೀಜಿನಲ್ಲಿ ತನ್ನ ಮೈ ಹೊರಳಾಡಿಸಿ ಗಬ್ಬೆದ್ದು ಹೋಗಿದೆ. ಊರ ಮಂದಿ ಎಲ್ಲಾ ಒಂದಾಗಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದ ಶರಣಬಸಪ್ಪನ ಜಾತ್ರೆಗೆ ಈಗ ಲಿಂಗಾಯತರು ವಾರಸುದಾರರು. ಇದಕ್ಕೆ ಬಂಡೆದ್ದು ಕುರುಬರು ಬೀರಬಲ್ಲನ ಪುರಾಣ ಹಚ್ಚಿ ಅವರೂ ಪ್ರತ್ಯೇಕ ಬೀರಬಲ್ಲನ ಜಾತ್ರೆ ಮಾಡುತ್ತಿದ್ದಾರೆ. ಸಕಲಜಾತಿಯ ಜನ ಒಂದಾಗಿ ಆಚರಿಸುತ್ತಿದ್ದ ಮೋಹರಂ ಈಗ ಮುಸ್ಲೀಂರಿಗಷ್ಟೇ ಸೀಮಿತ. ಇದನ್ನೆಲ್ಲ ಕಂಡು ಮನಸ್ಸು ಕಲ್ಲವಿಲಗೊಂಡಿದೆ.
ನನಗೆ ಊರ ತುಂಬಾ ಗೆಳೆಯರು. ಗೆಳೆತನಕ್ಕೆ ಜಾತಿಯ ಹಂಗಿರಲಿಲ್ಲ. ಲಿಂಗಾಯತರು, ಮುಸ್ಲೀಂರು, ಕುರುಬರು, ತಳವಾರ, ಸುಣಗಾರ, ಗೌಡರು, ಶೆಟ್ಟರು ಎಲ್ಲ ಜಾತಿಯೊಳಗೂ ಮಾಮ, ಕಾಕಾ, ದೊಡ್ಡಪ್ಪ, ಅಣ್ಣ ಎಲ್ಲರೆಲ್ಲರೂ ಇದ್ದರು. ಸರ್ವಜನಾಂಗದ ಶಾಂತಿಯ ತೋಟದಂತಿತ್ತು ನಮ್ಮೂರು. ಬೇರೆ ಊರಿನವರು ಯಾರಾದರೂ ನಮ್ಮನ್ನು ನೋಡಿದರೆ ಎಲ್ಲ ಒಂದೇ ಮನೆಯವರು ಎಂದು ಭಾವಿಸಬೇಕು. ಹಾಗಿತ್ತು ನಮ್ಮೂರು. ಇಂತಹ ನೆಮ್ಮದಿಯ ಊರಿಗೆ ಏನಾಗಿದೆ ಈಗ ? ಮೊಸರೊಳಗೆ ಕಲ್ಲೆಸೆದು ಮೋಜು ನೋಡುತಿರುವವರು ಯಾರು? ಎಂದೆಲ್ಲ ನಾವು ಕೆಲವರು ಗೆಳೆಯರು ಸೇರಿದಾಗ ಕಳವಳಗೊಳ್ಳುವುದು ನಡದೇ ಇತ್ತು. ಇದಕ್ಕೆಲ್ಲ ಅಯಾ ಜಾತಿಯೊಳಗಿನ ಕೆಲವರು ತಮ್ಮ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಆಯಾ ಸಮುದಾಯದ ಮುಗ್ಧ ಮಂದಿಯ ತಲೆಯೊಳಗೆ ಜಾತಿಯ ಕೀಟ ಬಿಟ್ಟಿದ್ದು, ರಾಜಕೀಯ ಪುಂಡರ ಮೇಲಾಟ ಹೀಗೆ ಒಂದಕ್ಕೊಂದು ಸೇರಿ ಕಲಸುಮೇಲಾಗಿ ಊರ ನೆಮ್ಮದಿಗೆ ಕೊಳ್ಳಿ ಇಟ್ಟದ್ದು ಆಕಾಶದಷ್ಟೇ ಸತ್ಯ.
ಹೀಗೆ ಊರು ದಿನದಿಂದ ದಿನಕ್ಕೆ ಜಾತಿಯ ತೇಪೆ ಅಂಗಿ ತೊಟ್ಟು ಅಂದಗೆಡುತ್ತಿರುವುದು ನನ್ನಂತವರೊಳಗೆ ಅಸಮಾಧಾನದ ಅಸಂಖ್ಯಾತ ಮೊಟ್ಟೆ ಇಡತೊಡಗಿತ್ತು. ನನ್ನಂತವರು ಅದ್ಯಾವ ಜಾತಿಗೂ ಸೇರದೆ ಅಂತರ್ಪಿಶಾಚಿ ತರಹ ಆಗಿದ್ದೆವು. ಆದರೆ, ಮೊನ್ನೆ ಊರಿಗೆ ಹೋದಾಗ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಹಿರಿಯ ಗೆಳೆಯ ಕಾಲಕಾಲೇಶ್ವರ ಹಾದಿಮನಿ ಹಾದಿಯಲಿ ಎದುರು ಸಿಕ್ಕು ತಮ್ಮ ಮನೆಯಲ್ಲಿ ಬಸವ, ಬುದ್ಧ, ಅಂಬೇಡ್ಕರ್ ಜಯಂತಿ ಆಚರಿಸಿ ದಲಿತರನ್ನು ಮನೆಗೆ ಹೋಗಿಸಿಕೊಳ್ಳುವುದಾಗಿ ಹೇಳಿ ಬೆಚ್ಚಿಸಿದರು. ಅಪ್ಪಟ ಸಾಂಪ್ರದಾಯಿಕ ಹಳ್ಳಿಯೊಳಗೆ, ಅದೂ ಸಂಪ್ರದಾಯಸ್ಥ ಲಿಂಗಾಯತರ ಮನೆಯಲ್ಲಿ ಮಾದಿಗರನ್ನು ಸೇರಿಸಿಕೊಳ್ಳುವುದೆಂದರೆ ಆಗದ ಹೋಗದ ಮಾತು. ಬಹಳ ಮಂದಿ ಪ್ರಗತಿಪರರು ಅನಿಸಿಕೊಂಡವರಿಗೆ ಇವೆಲ್ಲಾ ಮಾತಾಡಲು, ಜಾತ್ಯತೀತೆಯ ಬಗ್ಗೆ ಮೇಜು ಕುಟ್ಟಿ ಭಾಷಣ ಮಾಡಲಷ್ಟೇ ಸೊಗಸು. ತಮ್ಮ ಮನೆಯ ಹೊಸಿಲಾಚೆ ಪ್ರಗತಿಪರರು. ಒಳಗೆ ಮಾತ್ರ ಅದೇ ಸನಾತನ ತುಪ್ಪದ ದಿವಿಗೆ ಉರಿಯುತ್ತದೆ.
ನನಗೆ ಹಿಗ್ಗೆನಿಸಿತು. ನನ್ನ ಊರಿನ ಮಟ್ಟಿಗೆ ಇದೊಂದು ದೊಡ್ಡ ಕ್ರಾಂತಿಯೇ ಸರಿ. ಗುಡಿಯಾಚೆ, ಮನೆ ಹೊಸಿಲಾಚೆ ನಿಲ್ಲುವವರನ್ನು, ಚಹಾದಂಗಡಿಯಲ್ಲಿ ಅವರಿಗೆಂದೇ ಮೀಸಲಿಟ್ಟ ಲೋಟದಲ್ಲಿ ಚಹಾ ಕುಡಿಯುವವರನ್ನು, ಎದುರಿಗೆ ಸಿಕ್ಕಾಗ ಅಷ್ಟು ದೂರ ನಿಂತು ಆರಾಮ ಸಾವಕಾರ ಎನ್ನುವವರನ್ನು ಮನೆಯೊಳಗೆ ಹೋಗಿಸಿಕೊಂಡು ನಮ್ಮವರೇ ಆಗಿಸಿಕೊಳ್ಳುವುದೆಂದರೆ ನಿಜಕ್ಕೂ ಕ್ರಾಂತಿ.
ಕಾಲಕಾಲೇಶ್ವರ ಅವರ ಮನೆಯೊಳಗೆ ಎಲ್ಲರಿಗೂ ಹೇಳಿ ಅವರ ಅಪ್ಪನ ಸಣ್ಣ ವಿರೋಧವನ್ನೂ ಲೆಕ್ಕಿಸದೆ ದಲಿತ ಗೆಳೆಯರನ್ನು ಮನೆಯೊಳಗೆ ಹೋಗಿಸಿಕೊಳ್ಳುವ ಸಕಲ ಸಿದ್ಧತೆ ಮಾಡಿದರು. ಇಳಿಸಂಜೆ ಹೊತ್ತು. ಅವರ ಮನೆ ಎದುರಿಗಿನ ಹನಮಂತ ದೇವರ ಗುಡಿಯ ಹತ್ತ್ತಿರದ ತೆಂಗಿನ ಮರದಲ್ಲಿ ಹಕ್ಕಿಗಳ ಸಂತಸದ ಕಲರವ ಕೇಳೆತೊಡಗಿತ್ತು. ಗಜೇಂದ್ರಗಡದಿಂದ ಗಣಿತ ಶಿಕ್ಷಕರು, ವಿಚಾರವಾದಿಗಳು ಅದ ಬಿ.ಎ.ಕೆಂಚರೆಡ್ಡಿ ಸರ್, ಗೆಳೆಯ ಎಫ್.ಡಿ.ಕಟ್ಟಿಮನಿ, ಕಾಲಕಾಲೇಶ್ವರ ಅವರ ಅಣ್ಣಂದಿರ ಮಕ್ಕಳು, ಅತ್ತಿಗೆಯರು ಹೀಗೆ ಹತ್ತಾರು ಜನ ಜಮೆಯಾದೆವು.
ನಿಜಕ್ಕೂ ಅಲ್ಲಿ ಮೇಲ್ನೋಟಕ್ಕೆ ಸಂಭ್ರಮ ಎದ್ದು ಕಾಣುತಿದ್ದರೂ ಎಲ್ಲರ ಆಳದೊಳಗೆ ಏನಾಗುವುದೋ ಎಂಬ ಕಳವಳ ಸುಳಿದಿರುಗತೊಡಗಿತ್ತು. ಕಾಲಕಾಲೇಶ್ವರರಂತೂ ಹುಂಬು ಧೈರ್ಯ ತಳೆದು ಆದದ್ದಾಗಲಿ ಎಂದು ಕ್ರಾಂತಿಗೆ ಮುನ್ನುಡಿ ಬರೆದು ಬಿಟ್ಟಿದ್ದರು. ನಾವೆಲ್ಲ ಗೆಳೆಯರು, ಅವರ ಮನೆಯ ಹೆಣ್ಣುಮಕ್ಕಳು ಜಮೆಯಾಗಿ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯಾಚರಣೆಗೆ ಸಿದ್ಧತೆಗೊಳ್ಳುತ್ತಿರುವಾಗಲೇ ಆ ಮನೆಯ ಹಿರಿಯ, ಕಾಲಕಾಲೇಶ್ವರ ಅವರ ಅಪ್ಪ ಅಂದಾನಪ್ಪನವರು ಒಳಬಂದರು. ಕಾಲಕಾಲೇಶ್ವರರ ಮಾತಿಗೆ ಬೇಡವೂ ಅನ್ನದೆ ಒಪ್ಪಿಕೊಳ್ಳಲೂ ಆಗದೆ ಅರೆಮನಸ್ಸಿನಿಂದ ತಲೆಯಾಡಿಸಿದ್ದರು. ಹೀಗೆ ತಲೆಯಾಡಿಸಿದ್ದು ಒಪ್ಪಿಗೆಯೋ ಬೇಡವೆಂಬ ವಿರೋಧವೋ ಒಂದೂ ತಿಳಿಯದೆ ಅವರ ಹಾಜರಿ ಅದೇನೇನಾಗಬಹುದು ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗದೇ ಮನಸ್ಸುಗಳು ಹಗ್ಗಜಗ್ಗಾಟದಲ್ಲಿ ತೊಡಗಿದವು. ಅವರು ನಮ್ಮನ್ನೆಲ್ಲ ಕಂಡು ಏನೂ ಅನ್ನಲಾಗದೆ ನಗು ಮೊಗದಿಂದಲೇ ನನಗೆ ಏನು ಪತ್ರಕರ್ತರು ಯಾವಾಗ ಬಂದ್ರೀ. ಆರಾಮ..’ ಎಂದು ಕುಶಲೋಪರಿ ವಿಚಾರಿಸಿದಾಗ ಮನಸ್ಸು ಹೂ ಹಗುರವಾಗಿತ್ತು.
ಹೀಗಿರುವಾಗಲೇ ಹತ್ತಾರು ಜನ ದಲಿತರು ಬಂದರು. ಅದರಲ್ಲಿ ಒಂದಿಬ್ಬರು ದಲಿತ ಹುಡುಗಿಯರು ಇದ್ದರು. ಅವರು ಒಳಗೆ ಬರಬೇಕೋ ಬೇಡವೋ ಎಂದು ಗೊಂದಲದಲ್ಲಿ ಇರುವಾಗಲೇ ನಾವೆಲ್ಲ ಅಕ್ಕರೆಯಿಂದ ಅವರನ್ನು ಬರಮಾಡಿಕೊಂಡೆವು. ಅಲ್ಲಿದ್ದ ಹೆಣ್ಣುಮಕ್ಕಳಂತೂ ತಮ್ಮದೆ ಅಣ್ಣ ತಮ್ಮಂದಿರಂತೆ ಅವರ ಮೇಲೆ ಪ್ರೀತಿ ತೋರಿದ್ದು ನನ್ನನ್ನು ಭಾವುಕಗೊಳಿಸಿತು. ಕಣ್ಣೊಳಗೆ ಸಂತಸದ ನೀರು ತೆಳ್ಳಗಾಡಿತು. ನಡುಮನೆಯಲ್ಲಿ ಇಟ್ಟಿದ್ದ ಬಸವ, ಅಂಬೇಡ್ಕರ್, ಬುದ್ಧನ ಫೋಟೊಗಳಿಗೆ ಎಲ್ಲರೂ ಹೂ ಹಾಕಿದೆವು. ಕಾಲಕಾಲೇಶ್ವರ, ಬಿ.ಎ.ಕೆಂಚರೆಡ್ಡಿ ಸರ್, ನಾನು, ಎಫ್.ಡಿ.ಕಟ್ಟಿಮನಿ ಹೀಗೆ ಒಬ್ಬೊಬ್ಬರಾಗಿ ಬುದ್ಧ, ಬಸವ, ಅಂಬೇಡ್ಕರ್ರಂತಹ ದಾರ್ಶನಿಕರ ಸಂಗತಿಗಳ ಜೊತೆಗೆ ತಳಕು ಹಾಕಿದ ವಿಚಾರಗಳನ್ನು ಹೇಳುತ್ತಲೇ ನಮ್ಮೆಲ್ಲರ ಮನೆಯೊಳಗೆ ನಮ್ಮದೇ ಒಡಹುಟ್ಟಿದವರಂತಿರುವ ದಲಿತರನ್ನು ನಮ್ಮ ನಮ್ಮ ಮನೆಯೊಳಗೆ ಸೇರಿಸಿಕೊಂಡು ಅಂತಃಕರಣ ಮೆರೆಯುವ ಮಾತಾಡಿದೆವು.
ಕಾಲಕಾಲೇಶ್ವರರ ಅಣ್ಣಂದಿರ ಮಕ್ಕಳಾದ, ಇನ್ನೂ ಎಸ್ಸೆಸ್ಸೆಲ್ಸಿ, ಪಿಯುಸಿ ಓದುತ್ತಿರುವ ಜ್ಯೋತಿ, ಅಶ್ವಿನಿ, ಕವಿತಾ ಹಾಗೂ ವೀಣಾ ಹಳ್ಳದ, ಅನಿತಾ ಹಾದಿಮನಿ ಇವರ್ಯಾರೂ ಕಾರ್ಲಮಾರ್ಕ್ಸ್, ಲೆನಿನ್, ಚೆಗೆವಾರ ಅವರನ್ನು ಓದಿಕೊಂಡವರಲ್ಲ. ಆದರೆ, ಅವರು ಜಾತಿಯ ಪೊರೆ ಕಳಚಿಕೊಂಡು ರವಿ ಹಲಗಿ, ಲೋಹಿತ, ಈರಪ್ಪ ಮಾದರ ಹೀಗೆ ಮೊದಲಾದ ದಲಿತ ಗೆಳೆಯರನ್ನು ಉದ್ದೇಶಿಸಿ ನೀವು ನಮ್ಮ ಅಣ್ಣಂದಿರು ಎಂದು ಅಕ್ಕರೆಯ ಮಾತುಗಳ ಮಳೆ ಸುರಿಸಿದರು. ಮನೆಯ ಹಿರಿಯ ಅಂದಾನಪ್ಪನವರು ಮಕ್ಕಳ, ಮೊಮ್ಮಕ್ಕಳ, ಸೊಸೆಯಂದಿರ ಹಾಗೂ ನಮ್ಮೆಲ್ಲ ಮಾತುಗಳನ್ನು ಕೇಳಿ ದಲಿತ ಗೆಳೆಯರಿಗೆ ಪ್ರೀತಿಯ ಮಾತಾಡಿದರು. ದಲಿತ ಗೆಳೆಯರಂತೂ ನಂಬಲಸಾಧ್ಯವಾದ ಕನಸು ಕಂಡವರಂತೆ ಭಾವುಕಗೊಂಡಿದ್ದರು. ನಾವೆಲ್ಲ ಒಂದೇ ಮನೆಯಲ್ಲಿ ಹುಟ್ಟಿ ಬೆಳೆದವರಂತೆ ಅವಲಕ್ಕಿ ತಿಂದು, ಚಾ ಕುಡಿದು ಮುಂದಿನ ದಿನಗಳಲ್ಲಿ ಎಲ್ಲರ ಮನೆಯೊಳಗೂ ದಲಿತರನ್ನು ಸೇರಿಸುವ ಕನಸಿನೊಂದಿಗೆ ಒಬ್ಬರಿಗೊಬ್ಬರು ಪ್ರೀತಿಯಿಂದ ಬೀಳ್ಕೊಟ್ಟೆವು. ಬಸವ, ಅಂಬೇಡ್ಕರ್, ಬುದ್ಧ, ಗಾಂಧಿ, ಲಂಕೇಶ, ಕುವೆಂಪು… ಮೊದಲಾದವೆರೆಲ್ಲ ಇದ್ದಿದ್ದರೆ ಅದೆಷ್ಟು ಖುಷಿಯಾಗುತ್ತಿದ್ದರೋ. ಮನಸು ಒಡೆಯುವ ಮಂದಿಗೆ ಧಿಕ್ಕಾರವಿರಲಿ. ನಮ್ಮೂರಲ್ಲಂತೂ ಕ್ರಾಂತಿಯ ಗಿಡ ನೆಟ್ಟಿದ್ದೇವೆ. ಇನ್ನೇನಿದ್ದರೂ ಅದಕ್ಕೆ ನಿತ್ಯ ನೀರು ಹಾಕಿ ಬೆಳೆಸುವುದೊಂದೇ ಬಾಕಿ. ನೀವೂ ಗಿಡ ನೆಡಿ. ನಿತ್ಯ ನೀರು ಹಾಕಿ. ಈ ಜೀವ ಮುಗಿಯುವುದರೊಳಗೆ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕುಳಿತು ಬೆಳದಿಂಗಳ ಊಟ ಮಾಡೋಣ.

ಸೋಮವಾರ, ಮೇ 12, 2014

ಮೈ ಮನಗಳ ಸತ್ಯದ ಸುಳಿಯಲ್ಲಿ

 ಸೌಜನ್ಯ: ಪ್ರಜಾವಾಣಿ
ಗೋವಾ ಪ್ರದೇಶದಲ್ಲಿ ವೇಶ್ಯಾವಾಟಿಕೆಯೊಂದರಲ್ಲಿ ಸಿಕ್ಕ 16-17 ವಯಸ್ಸಿನ ಹುಡುಗಿಯೊಬ್ಬಳನ್ನು ಪತ್ರಕರ್ತೆಯೊಬ್ಬಳು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡುತ್ತಾ ಹೋದಳು. 12ರ ವಯಸ್ಸಿಗೇ ಅಲ್ಲಿಗೆ ಬಂದ ಹುಡುಗಿ ಅವಳು. ದೊಡ್ಡವಳಾದ ಮರುವಾರದಿಂದಲೇ ಅವಳ ಮಾರಾಟ ಆರಂಭವಾಯಿತು. ದಿನಕ್ಕೆ ಕೊನೇಪಕ್ಷ 10-12 ಜನ ಅವಳನ್ನು ಅನುಭವಿಸುತ್ತಾರೆ. ‘ಕಷ್ಟವಾಗೋಲ್ವೆ’ ಅಂದರೆ, ‘ಇಲ್ಲಿರುವ ಎಲ್ಲರದೂ ಅದೇ ಸ್ಥಿತಿ. ಏನು ಮಾಡೋದು’ ಅಂದಳು.

ಪ್ರತಿಯೊಬ್ಬರ ಭೇಟಿಯ ನಂತರವೂ ಮಾಲಕಿ ಅವಳನ್ನು ಪೂರ್ತಿ ಜಡ್ತಿ ಮಾಡಿ ನೋಡುತ್ತಾಳೆ. ಅವರೇನಾದರೂ ಇವಳಿಗೆ ಕೊಸರಿನ ಸಂಭಾವನೆ ಕೊಟ್ಟಿದ್ದಾರೋ ಅಂತ. ಅವರು ಕೊಟ್ಟಿರಬಹುದಾದ ಒಂದೋ ಮೂರೋ ರೂಪಾಯಿಗಳು ಮಾಲಕಿಯ ಸಂಚಿ ಸೇರುತ್ತವೆ. ‘ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಲಿಲ್ಲವೆ ನೀನು’ ಅಂತ ಕೇಳಿದ ಪ್ರಶ್ನೆಗೆ ಹುಡುಗಿ, ‘ಮೊದಮೊದಲು ತುಂಬಾ ಅನಿಸ್ತಿತ್ತು. ಆಮೇಲಾಮೇಲೆ ನಾನು ಇಂಥ ಕೆಲಸ ಮಾಡುವವಳು ಅಂತ ಗೊತ್ತಾದ ಮೇಲೆ ನನ್ನನ್ನು ಯಾರು ಒಪ್ಪಿಕೋತಾರೆ ಅನಿಸಿ ಸುಮ್ಮಗಾದೆ. ಪ್ರತಿ ತಿಂಗಳೂ ಮನೆಗೆ ಒಂದಷ್ಟು ದುಡ್ಡು ಕಳಿಸ್ತೀನಿ. ಏನು ಕೆಲಸ ಅಂದರೆ. ಇಲ್ಲೆಲ್ಲೋ ಮನೆ ಕೆಲಸ ಮಾಡ್ತಿದೀನಿ ಅಂತ ಹೇಳ್ತಾನೇ ಬಂದಿದೀನಿ’ ಅಂದಳು. ನವರಸಗಳಲ್ಲಿ ಒಂದಾದ ಕರುಣಾರಸವನ್ನು ಉದ್ದೀಪಿಸಲಿಕ್ಕೆ ಈ ಪ್ರಸಂಗವನ್ನು ಹೇಳುತ್ತಿರುವುದಲ್ಲ. ಹೆಣ್ಣನ್ನ ಬದಲಾದ ದೃಷ್ಟಿಯಿಂದ ನೋಡುವುದು ಎಂದರೆ ಏನು ಎನ್ನುವ ಪ್ರಶ್ನೆಯನ್ನು ಸ್ತ್ರೀವಾದಿಗಳೂ ಅದನ್ನು ವಿರೋಧಿಸುವವರೂ ಒಟ್ಟಿಗೇ ಎದುರಿಸುತ್ತೇವಲ್ಲ, ಅದಕ್ಕೆ ಇಲ್ಲಿ ಏನಾದರೂ ಸುಳಿವು ಸಿಗಬಹುದೋ ಎಂದು ಹುಡುಕುತ್ತಿದ್ದೇನೆ.

ತೀರಾ ಕ್ಷುದ್ರವಾಗಿ ಕಾಣಿಸುವ, ದಿನನಿತ್ಯದ ನೂರು ಪ್ರಸಂಗಗಳಲ್ಲಿಯೂ ಇದನ್ನು ನಾವು ಎದುರಿಸುತ್ತಲೇ ಇರುತ್ತೇವೆ. ಸುಮ್ಮನೆ ಒಮ್ಮೆ ನಮ್ಮ ಬೈಗುಳಗಳ ಪಟ್ಟಿ ಮಾಡಿ ನೋಡಿ. ನೂರಕ್ಕೆ ತೊಂಬತ್ತೊಂಬತ್ತರಷ್ಟು ಬೈಗುಳಗಳು ಸ್ತ್ರೀಮೂಲದವು. ಭೈರಪ್ಪನವರ ‘ಗೃಹಭಂಗ ’ ಓದಿ, ಇದೇನು ಬೈಗುಳಗಳ ರೆಫರೆನ್ಸ್ ಬುಕ್ ಥರ ಇದೆ ಅಂದುಕೊಂಡದ್ದು ನೆನಪಾಗುತ್ತಿದೆ. ಆಗ ನಾನಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನನ್ನ ಗೆಳತಿ ರಿಹಾನ ಹತ್ತಿರ ಇದನ್ನ ಹೇಳಿಕೊಂಡಾಗ ಅವಳು ‘ನಮ್ಮ ಕುರಾನ್‌ನಲ್ಲಿ ಹೇಳ್ತಾರೆ, ನಾವು ಬೇರೆ ಯಾರಿಗಾದರೂ ಬೈದರೆ ಅದು ಅವರನ್ನಲ್ಲ, ಬೈದೋರನ್ನೇ ತಟ್ಟೋದಂತೆ’ ಅಂತ. ಆಗ ಮುಗ್ಧ ಸೇಡಿನ ಸಂತೋಷವಾಗಿದ್ದು ಈಗ, ಪಿತೃ ಸಂಸ್ಕೃತಿಯನ್ನು ಎದುರಿಸುವ ಒಂದು ಕಾರ್ಯ ಮಾದರಿಯಾಗಿಯೇ ಕಾಣಿಸುತ್ತಿದೆ!!

ನಮ್ಮ ಆರಂಭದ ಕಾವ್ಯಗಳಲ್ಲಿ ಅಷ್ಟಾದಶ ವರ್ಣನೆಯ ಸಂಪ್ರದಾಯವೊಂದು ಇತ್ತಲ್ಲ. ಹದಿನೆಂಟು ವರ್ಣನೆಗಳಿದ್ದರೆ ಮಾತ್ರ ಆ ಕಾವ್ಯ ಸಂಪೂರ್ಣ ಎನ್ನುವ ಕಾವ್ಯಚೌಕಟ್ಟಿನಲ್ಲಿ ವೇಶ್ಯಾವಾಟಿಕೆಯ ವರ್ಣನೆಯೂ ಒಂದು. ಯಾಕಿದ್ದೀತು ಇದು? ಸಾಮಾಜಿಕ ವಾಸ್ತವವೊಂದನ್ನು ಕಾವ್ಯ ಸಾದರಪಡಿಸಲಿ ಎನ್ನುವುದೆ? ಹೆಣ್ಣಿನ ದೇಹಸಂಪತ್ತಿನ ಭರಪೂರ ವರ್ಣನೆಗೆ ಹೇಳಿಮಾಡಿಸಿದ ಅವಕಾಶ ಸಿಗುತ್ತದೆ ಎನ್ನುವುದೆ? ತರಗತಿಯಲ್ಲೊಮ್ಮೆ ಪುರುಷವಾಚಕಗಳು ಸ್ತ್ರೀವಾಚಕಗಳ ಬಗ್ಗೆ ಮಾತನಾಡುತ್ತಿದ್ದಾಗ ವಿದ್ಯಾರ್ಥಿನಿಯರಿಗೆ ಪುರುಷವಾಚಕಗಳಿಲ್ಲದ ಸ್ತ್ರೀವಾಚಕಗಳನ್ನು ಪಟ್ಟಿ ಮಾಡಲು ಹೇಳಿದೆ. ಬಹುತೇಕ ವಿದ್ಯಾರ್ಥಿನಿಯರಲ್ಲಿ ಸಾಮಾನ್ಯವಾಗಿ ಇದ್ದ ಎರಡು ಪದಗಳೆಂದರೆ ‘ವೇಶ್ಯೆ’ ಮತ್ತು ‘ಪತಿವ್ರತೆ’. ನಮ್ಮ ವಚನಕಾರ್ತಿ ಸೂಳೆ ಸಂಕವ್ವೆ ಅವಳ ಅಂಕಿತನಾಮವನ್ನು ನಿರ್ಲಜ್ಜೇಶ್ವರ ಅಂತ ಇಟ್ಟುಕೊಂಡಿರುವುದು ಒಂದು ರೂಪಕವಾಗಿಯೇ ಕಾಣಿಸುತ್ತದೆ. ಸಮುದಾಯ ತನ್ನ ಆಸೆ, ಅಧಿಕಾರ ಎಲ್ಲವನ್ನೂ ಬಳಸಿ ಅವಳೊಂದು ‘ಮಧು ಭಾಂಡ’ವೋ ಎನ್ನುವಂತೆ ತನ್ನ ವಸ್ತು ವಿಶೇಷಗಳಲ್ಲಿ ಒಂದಾಗಿಸಿಕೊಳ್ಳುವುದಕ್ಕೆ ವ್ಯವಸ್ಥೆಯೊಂದನ್ನು ಕಟ್ಟಿಕೊಂಡಿರುವುದರ ನಿರ್ಲಜ್ಜೆಯನ್ನು ಈ ಅಂಕಿತ ಅದ್ಭುತವಾಗಿ ಧ್ವನಿಸುತ್ತದೆ.
 (ಇದಕ್ಕೆ ಗಂಡು ಹೆಣ್ಣಿನ ಸಂಬಂಧಗಳ ನಿರ್ಲಜ್ಜೆಯೂ ಸೇರಿದಂತೆ ಇತರ ಅರ್ಥಗಳಿವೆ ಎನ್ನುವುದು ನಿಜವಾದರೂ ಅದರ ಆತ್ಯಂತಿಕ  ಧ್ವನಿಯಾಗಿ ಪಿತೃ ಸಂಸ್ಕೃತಿಯ ನಿರ್ಲಜ್ಜೆಯೇ ಕಾಣಿಸುತ್ತದೆ ಎನ್ನುವುದೂ ಅಷ್ಟೇ ನಿಜ).


ಜಗತ್ತನ್ನು ಎಷ್ಟುಬಾರಿ ಪ್ರದಕ್ಷಿಣೆ ಮಾಡಿದರೂ ಇದೇ ದೃಶ್ಯ, ಇದೇ ಪರಮ ವಾಸ್ತವ. ಈ ದುರ್ಭರ ವಾಸ್ತವದಲ್ಲಿ ಅಪರೂಪಕ್ಕೊಮ್ಮೆ , ಅಪವಾದಕ್ಕೊಮ್ಮೆ ಎನ್ನುವಂತೆ ಅವಳನ್ನು ದೇಹಸತ್ಯದಾಚೆಗಿನ ಭಾವಸತ್ಯದಲ್ಲಿ ಗುರುತಿಸುವ ಪ್ರಯತ್ನಗಳು ನಡೆದಿವೆ. ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’ ಅಂಥ ಅಪರೂಪದ ಪ್ರಯತ್ನ. ಶಿವರಾಮ ಕಾರಂತರ ಬಗೆಗೆ ನಾವು ಗಮನಿಸಲೇ ಬೇಕಾದ ಸಂಗತಿಯೊಂದಿದೆ. ಪ್ರಜ್ಞಾಪೂರ್ವಕವಾಗಿ ಹೆಣ್ಣನ್ನು ಪುರುಷ ಸತ್ಯಗಳ ಜೊತೆಯಿಟ್ಟು ನೋಡುವ, ಆ ಪುರುಷ ಸತ್ಯಗಳು ಹೆಣ್ಣಿನ ಮಟ್ಟಿಗೂ ನಿಜವಾಗಿರುವ ಪ್ರಾಕೃತಿಕ ಸತ್ಯವೊಂದನ್ನು ಕಾರಂತರು ತಮ್ಮ ಹಲವು ಕೃತಿಗಳಲ್ಲಿ ಕಾಣಿಸುತ್ತಾರೆ. ದೇಹವೆಂಬುದು ಪುರುಷನಿಗೆ ಸತ್ಯವಾಗುವ ನಿತ್ಯವಾಗುವ ಬಗೆಯು ಹೆಣ್ಣಿಗೂ ಅಷ್ಟೇ ನಿಜ ಎನ್ನುವುದನ್ನು ಜೈವಿಕ, ವೈಜ್ಞಾನಿಕ ಮತ್ತು ಬೌದ್ಧಿಕ ಎಂದು ಕರೆಯಬಹುದಾದ ಎಲ್ಲ ನೆಲೆಗಳಲ್ಲಿಯೂ ಕಾರಂತರು ನೋಡುವ ಪ್ರಯತ್ನ ಮಾಡುತ್ತಾರೆ.

ಈ ದೃಷ್ಟಿಯಿಂದ ಕಾರಂತರದ್ದು ಸೋದ್ದಿಶ್ಯ ಬರವಣಿಗೆ ಎನ್ನುವುದು  ನಿಜ. ಮೂಲತಃ ಕಾರಂತರು ಲೇಖಕನ ಉತ್ತರದಾಯಿತ್ವವನ್ನು ಒಪ್ಪಿದ ಲೇಖಕರು. ಸಮುದಾಯವನ್ನು ಕುರಿತಂತೆ ಲೇಖಕರಿಗೆ ಸಾಮಾಜಿಕ ಮತ್ತು ನೈತಿಕ ಉತ್ತರದಾಯಿತ್ವ ಇರಬೇಕಲ್ಲವೇ ಎನ್ನುವ ಪ್ರಶ್ನೆಯನ್ನು ಸದಾ ತಮ್ಮೆದುರಿಗೆ ಇರಿಸಿಕೊಂಡ ಲೇಖಕರು ಕಾರಂತರಾದ್ದರಿಂದ ಹೆಣ್ಣಿನ ಪ್ರಶ್ನೆಯನ್ನು ಅವರು ಶ್ರೇಣೀಕೃತ ಸಾಮಾಜಿಕ ವಾಸ್ತವದ ನೆಲೆಯಲ್ಲಿಯೂ ಇಟ್ಟು ನೋಡುವ ಪ್ರಯತ್ನ ಮಾಡುತ್ತಾರೆ. ಆದರೆ ಕೆಲವು ಕೃತಿಗಳಲ್ಲಿ ಈ ಸೋದ್ದಿಶ್ಯತೆಯನ್ನು ಮೀರಿದ ಮಾನವೀಯ ನೆಲೆಯೊಂದು ರೂಪುಗೊಂಡು ಕಾರಂತರು ಉದ್ದೇಶಿಸಿರುವುದಕ್ಕಿಂತಲೂ ವಿಸ್ತಾರವಾದ ನೆಲೆಯೊಂದು ನಿರ್ಮಿತವಾಗುತ್ತದೆ. ‘ಮರಳಿ ಮಣ್ಣಿಗೆ’ , ‘ಕೇವಲ ಮನುಷ್ಯರು’ ಮೊದಲಾದ ಕಾದಂಬರಿಗಳು ಇದಕ್ಕೆ ಅತ್ಯುತ್ತಮ ಉದಾಹರಣೆ. ಕಾರಂತರನ್ನು ಕನ್ನಡದ ಕೆಲವೇ ಸ್ತ್ರೀವಾದಿ ಲೇಖಕರಲ್ಲಿ ಒಬ್ಬರೆಂದು ನಾವು ಹೇಳಲು ಬೇಕಾದ ವಿವರಗಳು, ದೃಷ್ಟಿಕೋನಗಳು ಈ ಕೃತಿಗಳಲ್ಲಿ ನಮಗೆ ಸಿಗುತ್ತವೆ. ಲೈಂಗಿಕತೆಯನ್ನು ಕುರಿತ ಅವರ ಇತರ ಲೇಖನಗಳಲ್ಲಿಯೂ ಈ ಅಂಶವನ್ನು ನಾವು ಕಾಣಬಹುದು.

ಕಾರಂತರ ದೃಷ್ಟಿಕೋನದ ಗಾಂಭೀರ್ಯ ಮಹತ್ವಗಳು ನಮಗೆ ತಿಳಿಯಬೇಕಾದರೆ ಅವರನ್ನು ಪ್ರಗತಿಶೀಲರ ಜೊತೆಯಲ್ಲಿ, ಅ.ನ.ಕೃ ಅವರ ಬರವಣಿಗೆಗಳ ಜೊತೆಯಲ್ಲಿಟ್ಟು ನೋಡಬೇಕು. ವೇಶ್ಯೆಯರನ್ನು ಕುರಿತ ಒಟ್ಟಂದದಲ್ಲಿ ಮಹಿಳೆಯರನ್ನು ಕುರಿತ, ಪ್ರಗತಿಪರ ಎಂದು ಕರೆಯಬಹುದಾದ ದೃಷ್ಟಿಕೋನದಲ್ಲೇ ಅ.ನ.ಕೃ ಬರಹಗಳಿವೆ. ಆದರೆ ಅವುಗಳನ್ನು ಓದುತ್ತಿದ್ದರೆ ಹೆಣ್ಣಿನ ಬಗೆಗಿನ ದೃಷ್ಟಿಕೋನ ಬದಲಾಗುವುದಿರಲಿ, ಹೆಣ್ಣಿಗೇ ಹೆಣ್ಣಿನ ಬಗೆಗೆ ತೀವ್ರವಾದ ಜಿಗುಪ್ಸೆ ಹುಟ್ಟಿಬಿಡುತ್ತದೆ. ಹೆಣ್ಣಿನ ಆತ್ಮವಿಶ್ವಾಸವನ್ನು ಅವು ಅಷ್ಟರಮಟ್ಟಿಗೆ ನಾಶ ಮಾಡಿಬಿಡುತ್ತವೆ. ವಾಸ್ತವದ ವಿವರಗಳು ಎನ್ನುವುದಕ್ಕಿಂತ ಹೆಚ್ಚಾಗಿ ತಮ್ಮ ಉತ್ಪ್ರೇಕ್ಷಿತ  ಮತ್ತು ಅತಿ ನಾಟಕೀಯತೆಯ ಕಾರಣಕ್ಕಾಗಿ ವಿಕಾರಗಳಾಗಿ ಕಾಣಿಸುವ ಸಂದರ್ಭಗಳು ಅಲ್ಲಿ ಹೇರಳವಾಗಿ ಸಿಗುತ್ತವೆ.

ಈ ಅಂಕಣದಲ್ಲಿ ಆರಿಸಿಕೊಳ್ಳುತ್ತಿರುವ ಪಾತ್ರಗಳು ಪಾತ್ರಚಿತ್ರಣದಾಚೆಗೆ ನಮಗೆ ಮುಖ್ಯವಾಗುವುದು ಈ ಕಾರಣಕ್ಕಾಗಿ. ಅವು ವ್ಯಕ್ತಿಗತ ಪಾತ್ರಗಳಾಗುವುದರ ಜೊತೆಗೇ ತಮ್ಮ ಅಸ್ತಿತ್ವ, ವ್ಯಕ್ತಿತ್ವ, ವ್ಯಕ್ತಿಗತ ಬದುಕು ಮತ್ತು ಸಮುದಾಯದ ಬದುಕಿನಲ್ಲಿನ ತನ್ನ ಪಾತ್ರ, ಅದಕ್ಕಿರುವ, ಇರಬೇಕಾದ ಅಧಿಕೃತತೆ, ದಾಂಪತ್ಯವೂ ಸೇರಿದಂತೆ ಹಲವು ಪಾತ್ರಗಳಲ್ಲಿ ತಾನು ಕೊಡುವುದೇನು ಪಡೆಯುವುದೇನು, ಕೊಡುವ ಕರಾರು ಮತ್ತು ಪಡೆಯುವ ಔದಾರ್ಯಗಳಲ್ಲಿನ ವ್ಯತ್ಯಾಸ ಇವುಗಳನ್ನೆಲ್ಲ ಬಿಡಿಸಬರದ ಗೋಜಲುಗಳಲ್ಲಿ, ಕೆಲವೊಮ್ಮೆ ಸ್ಪಷ್ಟತೆಯಲ್ಲಿ, ಕೆಲವೊಮ್ಮೆ ಆತ್ಮಜ್ಞಾನದ ಅಮೂರ್ತತೆಯಲ್ಲಿ ಹೆಣ್ಣು ಪಾತ್ರಗಳು ಪಡೆಯುವುದನ್ನು ಗುರುತಿಸುವ ಪ್ರಯತ್ನ ಇದು. ಹಲವು ಬಾರಿ ಲೇಖಕರ ಆಯ್ಕೆ ಮತ್ತು ಚೌಕಟ್ಟನ್ನು ಮೀರಿ ಬೆಳೆಯುವ ಪಾತ್ರಗಳು ಹೊಸ ಓದನ್ನು ಹೊಸ ಗ್ರಹಿಕೆಯ ಕ್ರಮವನ್ನು ಅಪೇಕ್ಷಿಸುತ್ತವೆ. ಈ ತನಕ ನೋಡಲಾದ ರೂಢಿಗತ ಓದಿನ ಆಚೆಗೆ ಇವು ಬೆಳೆಯುವ, ಕೃತಿಯೊಳಗಿದ್ದೂ ಅದರಾಚೆಗಿನ ಸ್ವಾಯತ್ತ ಭಿತ್ತಿಯಲ್ಲಿ ನಿಲ್ಲುವ ಮೂಲಕವೇ ಸ್ತ್ರೀ ಸಂಕಥನವನ್ನು ಇವು ಗಟ್ಟಿಯಾಗಿಸುವ ನೇಯ್ಗೆಯೊಂದನ್ನು ಉದ್ದೇಶಿಸಿದ ಪ್ರಯತ್ನ ಇದು.

ಕಾರಂತರು ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯಲ್ಲಿ ಅವರ ಕೃತಿಗಳ ಮಟ್ಟಿಗೆ ಹೊಸದೆನಿಸುವ ಶೈಲಿಯೊಂದನ್ನು ಬಳಸುತ್ತಾರೆ. ಕಾದಂಬರಿಯ ನಾಯಕಿ ಮಂಜುಳೆ ನಮಗೆ ಅವಳೇ ಬರೆದಿಟ್ಟಿರುವ ಆತ್ಮಕಥಾನಕದ ಮೂಲಕ ಕಾಣಿಸಿಕೊಳ್ಳುತ್ತಾಳೆ. ಈ ಶೈಲಿ ಮತ್ತು ತಂತ್ರ ಮಂಜುಳೆಯ ಮಟ್ಟಿಗೆ ಅಗತ್ಯವೂ ಹೌದು. ‘ತಾನುಂಬ ಊಟವನು’ ಎನ್ನುವ ಅನಿವಾರ್ಯತೆಯಲ್ಲಿ ಮತ್ತು ಅಧಿಕೃತತೆಯಲ್ಲಿ ಮಂಜುಳೆ ಎನ್ನುವ ಬಸರೂರಿನ ವೇಶ್ಯೆ ತನ್ನ ಬದುಕನ್ನು ಒಂದು ಕಡೆಯಿಂದ ಬಿಚ್ಚುತ್ತಾ ಇನ್ನೊಂದು ಕಡೆಯಿಂದ ಕಟ್ಟುತ್ತಾ ಹೋಗುತ್ತಾಳೆ. ಭವಾನಿ ಎನ್ನುವ ತಾಯಿ ಮತ್ತು ಹೆಸರಿರಬೇಕಾದ ಅಗತ್ಯವಿಲ್ಲದೆ ‘ಪಾಳ’ನೆನ್ನುವ ಅನಾಮಿಕತೆಯಲ್ಲಿ ತನ್ನ ಅಸ್ಮಿತೆಯನ್ನು ಯಶಸ್ವಿಯಾಗಿ ಮುಚ್ಚಿಟ್ಟುಕೊಂಡು ತನ್ನ ಸಾಮಾಜಿಕ ಭದ್ರತೆಯನ್ನು ಕಾಪಾಡಿಕೊಳ್ಳಬಲ್ಲ ಸವಲತ್ತಿನ ತಂದೆಯ ಮಗಳು ಮಂಜುಳೆ. ‘ಭವಾನಿ ಯಾವ ಗರತಿಗೂ ಕಡಿಮೆಯಿಲ್ಲದವಳು’ ಎನ್ನುವ ನೆರೆಮನೆಯ ಕಾವೇರಿಯಮ್ಮನ ಮಾತು ಹೊಗಳಿಕೆಯೋ ಬೈಗುಳವೋ ತಿಳಿಯದ ಮುಗ್ಧತೆ ಮುಂದೆ ಇವಳಲ್ಲಿ ಕೊನೆಯಿರದ ದ್ವಂದ್ವವಾಗಿ ಕಾಡುತ್ತದೆ. ‘ಮೈಯನ್ನು ಮಾರಬೇಕು , ಮನಸ್ಸನ್ನಲ್ಲ’ ಎನ್ನುವ ವೃತ್ತಿಧರ್ಮ ಒಂದು ಕಡೆ; ಮೈಯೆ ಬೇರೆ ಮನಸೆ ಬೇರೆ ಎನ್ನುವುದು ಎಲ್ಲ ಹೊತ್ತಿಗೂ ನಿಜವೆ? ಮೈಯನ್ನು ಮೀರಿದ ಮನಸ್ಸು, ಮನಸ್ಸಿನ, ಆತ್ಮದ ಸಂಬಂಧಗಳು, ಮೈ-ಮನಸ್ಸು ಎರಡೂ ಅದ್ವೈತವಾಗುವ ಸಂಬಂಧಗಳು...\

ಗಂಡು ಹೆಣ್ಣಿನ ಸಂಬಂಧದ ಎಲ್ಲಾ ಸಾಧ್ಯತೆಗಳನ್ನೂ ಮಂಜುಳೆ ಶೋಧಿಸುತ್ತಾ ಹೋಗುತ್ತಾಳೆ. ಆತ್ಮಸಾಕ್ಷಿಯ ನೈತಿಕತೆಯನ್ನು ತನ್ನ ಬದುಕಿನ ಮಾನದಂಡವಾಗಿಸಿಕೊಳ್ಳಲು ಮಂಜುಳೆ ನಡೆಸುವ ಪ್ರಯತ್ನಗಳು ಅಸಾಧಾರಣವೆಂದೇ ನಮಗನಿಸುವುದಕ್ಕೆ ಅನೇಕ ಕಾರಣಗಳಿವೆ. ಆತ್ಮವಂಚನೆ ಎನ್ನುವ ಸಂಗತಿಯೇ ಈ ಕ್ಷೇತ್ರದಲ್ಲಿ ಅಸಂಬದ್ಧ ಮತ್ತು ಅನಗತ್ಯ ಎನ್ನುವ ಸ್ಥಾಪಿತ ವಾತಾವರಣ ಮತ್ತು ನಂಬಿಕೆಯ ಲೋಕದಲ್ಲಿ ಮಂಜುಳೆ ಅದಕ್ಕೆ ವಿರುದ್ಧವಾದ ದಿಕ್ಕಿನಿಂದ ತನ್ನ ಬದುಕನ್ನು ‘ರಚಿಸಿಕೊಳ್ಳುವ’ ಪ್ರಯತ್ನ ಮಾಡುತ್ತಾಳೆ. ಇಂಥ ತನ್ನ ಬದುಕನ್ನು ತೆರೆದಿಡುವ ಮೂಲಕ ವೇಶ್ಯೆಯರು ಹಾಯುವ ಬದುಕಿನ ಕೊಂಡಗಳನ್ನು, ಅವರ ಮನೋವ್ಯಾಪಾರಗಳನ್ನು ಮಾತ್ರವಲ್ಲದೆ ಕೊನೆಗೂ ಹೆಣ್ಣಿನ ಹುಡುಕಾಟ ಮತ್ತು ಸತತ ಪ್ರಯತ್ನಗಳು ಯಾವ ದಿಕ್ಕಿನಲ್ಲಿರುತ್ತವೆ ಎನ್ನುವುದನ್ನೂ ಪ್ರಾತಿನಿಧಿಕವಾಗಿ ಧ್ವನಿಸುತ್ತಾಳೆ.

ಮಂಜುಳೆಯ ಬದುಕಿನ ಪ್ರಯಾಣದಲ್ಲಿ ಒಂದು ಪ್ರಕ್ರಿಯೆಯನ್ನೂ ನಾವು ಗಮನಿಸಬಹುದು. ಮಂಜುಳೆ ಮೊದಲು ಒಲಿಯುವುದು ಕಂಡಲೂರ ಪೈಗಳಿಗೆ. ಅದೆಷ್ಟೋ ದಿನಗಳ ಹುಡುಕಾಟ ಮತ್ತು ಕಾಯುವಿಕೆಯಲ್ಲಿ ಇವಳು ಒಪ್ಪಿಕೊಳ್ಳುವ ಪೈಗಳಿಗೆ ದೇಹಸಂಭ್ರಮವೇ ಮುಖ್ಯ. ಇವಳನ್ನು, ಇವಳ ಹಾಡುವಿಕೆಯನ್ನು ಮೆಚ್ಚಿಯೂ ಅವರ ಮೊದಲ ಆದ್ಯತೆ ದೇಹಕ್ಕೆ. ಮಂಜುಳೆಗೆ ಅದು ಕಿತ್ತು ತಿನ್ನುವ ಪರಿಯಂತೆಯೇ ಕಾಣಿಸುತ್ತದೆ. ಅದು ಯಾಕೆ ಈ ಮನುಷ್ಯ ನನ್ನನ್ನು ಹೀಗೆ ಹರಿದು ತಿನ್ನುತ್ತಾರೆ ಎನ್ನುವ ದಿಗಿಲೂ ಅವಳಲ್ಲಿ ಹುಟ್ಟುತ್ತದೆ. ಈ ದಿಗಿಲೇ ಅವಳಲ್ಲಿ ಸಂಬಂಧಗಳನ್ನು ಕುರಿತಂತೆ ಇತರ ಪ್ರಶ್ನೆಗಳ ಕಡೆಗೆ ಚಲಿಸುವಂತೆ ಮಾಡುತ್ತದೆ. ಮಂಜುಳೆಯ ಮನೆಯಲ್ಲಿ ಹಾಕಲು ಅವರು ತಂದುಕೊಡುವ ಚಿತ್ರಗಳಾದರೂ ಅದೇ ಶೃಂಗಾರ ಮೂಲದವು. ಇವರದು ಏಕೋನಿಷ್ಠೆಯಲ್ಲ ಎನ್ನುವ ಅರಿವಿನಲ್ಲಿ, ತನ್ನ ಸ್ವಾರ್ಥಕ್ಕಾಗಿ ಇವಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೂ ಈತ ಸಿದ್ಧ ಎನ್ನುವ ಆಘಾತದಲ್ಲಿ ಈ ಸಂಬಂಧ ಕೊನೆಯಾಗುತ್ತದೆ.

ನಂತರ ಅವಳ ಬದುಕಿನಲ್ಲಿ ಪ್ರವೇಶಿಸುವವರು ಸುಬ್ರಾಯ ಉಳ್ಳೂರರು. ಬದುಕು, ವ್ಯಕ್ತಿತ್ವ, ಸಂಬಂಧ ಎಲ್ಲದಕ್ಕೂ ಇರಬಹುದಾದ ಮತ್ತು ಪ್ರಯತ್ನದ ಮೂಲಕ ಸಾಧಿಸಿಕೊಳ್ಳಬಹುದಾದ ಎತ್ತರದ ಕಲ್ಪನೆ ಮಂಜುಳೆಗೆ ಬರುವುದು ಇವರಿಂದ. ಇದನ್ನು ತಾಂತ್ರಿಕವಾಗಿ ಮತ್ತು ತಾತ್ವಿಕವಾಗಿ ಪರಿಪೂರ್ಣಗೊಳಿಸಲೆಂದೋ ಏನೋ ಕಾರಂತರು ಇವರಿಬ್ಬರ ನಡುವ ದೈಹಿಕ ಸಂಬಂಧವೇ ಘಟಿಸದ ವಿನ್ಯಾಸವೊಂದನ್ನು ತಂದಿದ್ದಾರೆ. ಶೃಂಗಾರದ ಆಚೆಗೆ ಗಂಡು ಹೆಣ್ಣಿನ, ವೇಶ್ಯೆ ಮತ್ತು ಗಂಡಿನ ಸಂಬಂಧವೊಂದು ಅರಳಬಹುದಾದ ಸಾಧ್ಯತೆಯನ್ನು ಕಾರಂತರು ಇಲ್ಲಿ ಕಟ್ಟಿಕೊಡುತ್ತಾರೆ. ಈ ಇಡೀ ಪ್ರಕರಣದಲ್ಲಿ ಕಾರಂತರ ಆದರ್ಶಗಳು ಕೆಲಸ ಮಾಡಿವೆ. ಉಳ್ಳೂರರ ಪತ್ನಿ ಮಂಜುಳೆಯನ್ನು ಒಡಹುಟ್ಟಿದವಳೋ ಎಂಬಂತೆ ಒಪ್ಪಿಕೊಳ್ಳುವ ಚಿತ್ರಗಳು ತುಸು ಅಸಹಜವೆನಿಸಿದರೂ ಉಳ್ಳೂರರ ಸಹಜ ಮಾನವ ಪ್ರೀತಿ ಮತ್ತು ಮಾನವ ಘನತೆಯಲ್ಲಿ ಅವರಿಗಿರುವ ನಂಬಿಕೆ ಮತ್ಯಾರನ್ನಲ್ಲದಿದ್ದರೂ ಮನೆಯ ಸದಸ್ಯರ ಮೇಲೆ ದಟ್ಟ ಪ್ರಭಾವ ಬೀರಿರಬಹುದು ಎನ್ನುವ ಸಮಾಧಾನ ಪಟ್ಟುಕೊಳ್ಳಲು ಅವಕಾಶವಿದೆ. ದೇಹದ ನಿತ್ಯ ಬಯಕೆಗಳ ದುರ್ದಮ್ಯತೆಯಲ್ಲಿ ಮಂಜುಳೆ ಅವರಿವರನ್ನು ಕೂಡುತ್ತಾಳೆ. ಅದನ್ನು ಉಳ್ಳೂರರಲ್ಲಿ ಹೇಳಿಕೊಂಡು ನಿರಾಳವೂ ಆಗುತ್ತಾಳೆ.

ಈ ಎಲ್ಲ ಸುದೀರ್ಘ ಪ್ರಯಾಣದಲ್ಲಿ ಮಂಜುಳೆ ತನ್ನನ್ನು ತಾನೇ ಮುಖಾಮುಖಿಯಾಗುತ್ತಾಳೆ. ಸಮಾಜ ತನಗೆ ಕೊಟ್ಟ ಬದುಕಿನ ಕ್ರಮ, ತಾನು ಕಟ್ಟಿಕೊಳ್ಳಲು ನಡೆಸಿದ ಬದುಕಿನ ವಿನ್ಯಾಸ ಇವುಗಳ ಘರ್ಷಣೆಯಲ್ಲಿ ತಾನು, ತನ್ನ ಅಸ್ಮಿತೆ ನಾಶವಾಯಿತೆ ಅಥವಾ ತಾನು ಮಾಡಿಕೊಂಡ ಆಯ್ಕೆಗಳು, ಅವುಗಳ ಸರಿ ತಪ್ಪಿನ ಚರ್ಚೆಯಲ್ಲಿ, ಉಳ್ಳೂರರ ಜೊತೆಗಿನ ಸಖ್ಯದಲ್ಲಿ ತನ್ನ ಬದುಕು ಸಾರ್ಥಕವಾಯಿತೆ ಎನ್ನುವ ಜಿಜ್ಞಾಸೆ ಮಂಜುಳೆಯಲ್ಲಿದೆ. ನಿರ್ದೇಶಿತ ಬದುಕಿನ ಎದುರಿಗೆ ಆಯ್ಕೆಯ ಬದುಕನ್ನು ಕುರಿತು ಚಿಂತಿಸುವ, ಆ ಮೂಲಕವೇ ಬದುಕು ಮತ್ತು ಹೆಣ್ಣು ಎರಡರ ಮಹತ್ವವನ್ನೂ ಮುಕ್ಕಾಗದ ಘನತೆಯಲ್ಲಿ ಮಂಜುಳೆ ಪ್ರತಿನಿಧಿಸುತ್ತಾಳೆ. ಕರುಣೆಯೇ ಸ್ಥಾಯಿಭಾವವಾಗುವ, ಶೃಂಗಾರವೇ ಬದುಕಿನ ದಾರಿಯಾದಲ್ಲಿ ಮಂಜುಳೆ ಹುಟ್ಟಿಸುವ ಆತ್ಮಗೌರವ ಬಲು ದೊಡ್ಡದು.

ಡಿ.ಹೆಚ್. ಲಾರೆನ್ಸ್‌ನ ಕಾದಂಬರಿಯೊಂದನ್ನು (‘ಸನ್ಸ್ ಅಂಡ್ ಲವರ್ಸ್’ ಕಾದಂಬರಿಯೋ ‘ಲೇಡಿ ಚಾಟರ್ಲೀಸ್ ಲವರ್’ ಕಾದಂಬರಿಯೋ ನೆನಪಾಗುತ್ತಿಲ್ಲ) ನಿಷೇಧಿಸಬೇಕು ಎನ್ನುವ ಗಲಾಟೆ ಜೋರಾಗಿ ನಡೆಯುತ್ತಿತ್ತು. ಕಾದಂಬರಿಯನ್ನು ಓದಿದ ಪಾದ್ರಿಯೊಬ್ಬ ‘ಇದೊಂದು ಪವಿತ್ರವಾದ ಕೃತಿ, ಇದನ್ನು ಎಲ್ಲರೂ ಓದಲೇಬೇಕು’ ಅಂದ. ಅದಕ್ಕೆ ಅವನು ಕೊಟ್ಟ ವಿವರಣೆ, ‘ಈ ಕಾದಂಬರಿ ಓದುವ ತನಕ ಗಂಡು ಹೆಣ್ಣಿನ ಸಂಬಂಧ ಇಷ್ಟೊಂದು ಪವಿತ್ರವಾದದ್ದು  ಮುಖ್ಯವಾದದ್ದು ಅಂತ ನನಗೆ ಗೊತ್ತೇ ಇರಲಿಲ್ಲ’ ಎಂದು. ‘ಅದಕ್ಕೊಂದು ದೈವಿಕ ಸ್ವರೂಪವೂ ಇರಬಹುದು ಅನ್ನುವುದು ನನಗೆ ಈಗ ಗೊತ್ತಾಯಿತು’ ಎನ್ನುವ ಮಾತು ಹೆಣ್ಣನ್ನು ಹೊಸ ದೃಷ್ಟಿಕೋನದಿಂದ ನೋಡುವ, ಅರ್ಥ ಮಾಡಿಕೊಳ್ಳುವ ನಿಲುವಿನ ಹುಟ್ಟಿದೆ. ಮಂಜುಳೆಯ ಬಗ್ಗೆ ಬರೆಯಬೇಕು ಅನ್ನುವಾಗ ಯಾಕೋ ಇದು ಥಟ್ಟನೆ ನೆನಪಾಯಿತು.
 

ಗುರುವಾರ, ಮೇ 8, 2014

ಮೋದಿ ಕಾಲದಲ್ಲಿ ಅಂಬೇಡ್ಕರರನ್ನು ಓದುತ್ತಾ..


ರಾಮಚಂದ್ರ ಗುಹಾ

ಸೌಜನ್ಯ: ಪ್ರಜಾವಾಣಿ
ಈ ಬಾರಿಯ ಚುನಾವಣಾ ಋತುವಿನಲ್ಲಿ ಬಿ.ಆರ್. ಅಂಬೇಡ್ಕರ್ ಅವರನ್ನು ನಾನು ಸ್ಮರಿಸಿಕೊಳ್ಳುತ್ತಲೇ ಇದ್ದೇನೆ. ದಲಿತ ವಿಮೋ­ಚಕರಾಗಿಯಲ್ಲ ಪ್ರಜಾಪ್ರಭುತ್ವದ ಸಿದ್ಧಾಂತ ರೂಪಿಸಿದ ವ್ಯಕ್ತಿಯಾಗಿ ಅವರನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ೧೯೪೯ರ  ನವೆಂಬರ್ 25ರಂದು ಭಾರತದ ಸಾಂವಿಧಾನಿಕ ಸಭೆಯನ್ನುದ್ದೇಶಿಸಿ ಅವರು ಮಾಡಿದ ಮಹತ್ವದ ಭಾಷಣವನ್ನು ನಾನು ಮತ್ತೆ ಮತ್ತೆ ನೆನಪಿಸಿ­ಕೊಳ್ಳು­ತ್ತಿದ್ದೇನೆ, ಓದುತ್ತಿದ್ದೇನೆ. ಆಗ ಅವರು ಮೂರು ಎಚ್ಚರಿಕೆಗಳನ್ನು ನೀಡಿದ್ದರು. ಒಂದು, ಅನಿಯಂತ್ರಿತ ಪ್ರತಿಭಟನೆಗಳಿಗಾಗಿ ಸಾಂವಿಧಾನಿಕ ಮಾದರಿಗಳನ್ನು ಬಿಟ್ಟುಬಿಡುವುದರಲ್ಲಿ ಇರುವ ಅಪಾಯ. ಅದನ್ನು ಅವರು ‘ಅರಾಜಕತೆಯ ವ್ಯಾಕರಣ’ ಎಂದು ಬಣ್ಣಿಸಿದ್ದರು.
ಇನ್ನೊಂದು,  ರಾಜಕೀಯ ಪ್ರಜಾಪ್ರಭುತ್ವ ಹಾಗೂ ಸಾಮಾ­ಜಿಕ ಪ್ರಜಾಪ್ರಭುತ್ವದ ನಡುವೆ ಇರುವ ವ್ಯತ್ಯಾಸ­ವನ್ನು ತಿಳಿಹೇಳಿತ್ತು. ಪ್ರತಿ ನಾಗರಿಕನಿಗೂ ಮತ ಹಾಕುವ ಅವಕಾಶವನ್ನು ಸಂವಿಧಾನ ನೀಡಿದ್ದು, ಅದು ರಾಜಕೀಯ ಸಮಾನತೆಯನ್ನು ಖಾತರಿ­ಪಡಿ­ಸುತ್ತದೆ. ಹಾಗಿದ್ದೂ ಅಂಬೇಡ್ಕರ್ ಈ ಎಚ್ಚ­ರಿಕೆ ನೀಡಿದ್ದರು: ‘ಸಾಮಾಜಿಕ ನೆಲೆಯಲ್ಲಿ  ಭಾರತ­ದಲ್ಲಿರುವುದು ಶ್ರೇಣೀಕೃತ ಅಸಮಾನ ವ್ಯವಸ್ಥೆ. ಅಂದರೆ ಕೆಲವರಿಗೆ ಉತ್ಕೃಷ್ಟ ಸ್ಥಾನ­ಮಾನ­ವಾದರೆ ಉಳಿದವರಿಗೆ ಕನಿಷ್ಠ ಸ್ಥಾನ­ಮಾನ. ಆರ್ಥಿಕ ನೆಲೆಯಲ್ಲೂ, ಕೆಲವರು ಅತಿ ಶ್ರೀಮಂತರಾದರೆ ಉಳಿದ ಅನೇಕರು ಕಡು ಬಡತನದಲ್ಲೇ ಬದುಕುತ್ತಾರೆ.’ ರಾಜಕೀಯ ಹಕ್ಕು­ಗಳು ಹಾಗೂ ಸಾಮಾಜಿಕ ಅಸೌಕರ್ಯ­ಗಳ ನಡುವಿನ ಕಂದಕ ಹೀಗೆಯೇ ಮುಂದು­ವರಿದರೆ ಮುಂದೆ ಏನಾಗಬಹುದು ಎಂದು ಅಂಬೇಡ್ಕರ್ ಎಚ್ಚರಿಸಿದ್ದುದು ಹೀಗೆ: ‘ಬಹು­ಶ್ರಮ­ದಿಂದ ರೂಪಿಸಿದ ರಾಜಕೀಯ ಪ್ರಜಾ­ಪ್ರಭು­ತ್ವದ ಸಂರಚನೆಯನ್ನೇ ಅಸಮಾನತೆ­ಯಿಂದ ಬಳಲುವವರು ಉಡಾಯಿಸಿ­ಬಿಡುತ್ತಾರೆ’.
ಅಂಬೇಡ್ಕರ್ ಕೊಟ್ಟ ಈ ಎರಡು ಎಚ್ಚರಿಕೆ­ಗಳು ಎಂದಿಗೂ ಸಮಂಜಸವಾದುವು. ಆದರೆ ಈಗಿನ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಕೊಟ್ಟ ಮೂರನೇ ಎಚ್ಚರಿಕೆ ಅತಿ ಮುಖ್ಯ­ವಾದದ್ದು. ಅದನ್ನು ನಾವು ತುರ್ತಾಗಿ ಮನ­ದಟ್ಟು ಮಾಡಿಕೊಳ್ಳಬೇಕಿದೆ. ಯಾವುದೋ ನಿರ್ದಿಷ್ಟ ನಾಯಕನನ್ನು ಟೀಕಾತೀತ ಎಂದು ಭಾವಿಸಿ, ಕುರುಡಾಗಿ ಅವನನ್ನು ಅನುಕರಿ­ಸುವುದು ಸರಿಯಲ್ಲ ಎಂದು ಅವರು ಭಾರತೀ­ಯರಿಗೆ ಆಗಲೇ ಕೊಟ್ಟಿದ್ದ ಎಚ್ಚರಿಕೆ ಅದು.
‘­ಶ್ರೇಷ್ಠ ಎಂದು ಭಾವಿಸಿದ ಒಬ್ಬ ವ್ಯಕ್ತಿಯ ಪಾದಗಳ ಮೇಲೆ ತಮ್ಮ ಸ್ವತಂತ್ರ ಹಕ್ಕುಗಳನ್ನು ಪ್ರಜಾಪ್ರಭುತ್ವದಲ್ಲಿನ ನಾಗರಿಕರು ಎಂದೂ ಹಾಕಿಬಿಡಬಾರದು. ಅವನನ್ನು ನಂಬಿ ಹಾಗೆ ಮಾಡುವುದರಿಂದ ಸಾಮಾಜಿಕ ಹಿತವನ್ನೇ ಬುಡಮೇಲು ಮಾಡುವ ಅಧಿಕಾರವನ್ನು ಆ ಶ್ರೇಷ್ಠ ವ್ಯಕ್ತಿಗೆ ನೀಡಿದಂತಾಗುತ್ತದೆ’ ಎಂದು  ಉದಾರವಾದಿ ಚಿಂತಕ ಜಾನ್ ಸ್ಟುವರ್ಟ್ ಮಿಲ್ ನೀಡಿದ್ದ ಎಚ್ಚರಿಕೆಯನ್ನು ಅಂಬೇಡ್ಕರ್ ಆಗ ಉಲ್ಲೇಖಿಸಿದ್ದರು.
ದೇಶ ಸೇವೆಗಾಗಿ ಇಡೀ ಬದುಕನ್ನೇ ಮುಡಿ­ಪಾಗಿಟ್ಟ ಮಹನೀಯರಿಗೆ ಕೃತಜ್ಞತೆ ಸಲ್ಲಿಸು­ವುದು ತಪ್ಪೇನೂ ಅಲ್ಲ ಎಂದು ಭಾವಿಸಿದ್ದ ಅಂಬೇಡ್ಕರ್, ಆ ಕೃತಜ್ಞತೆ ಸಲ್ಲಿಸುವ ರೀತಿಗೆ ಮಿತಿ ಇರಬೇಕು ಎಂದು ಪ್ರತಿಪಾದಿಸಿದ್ದರು. ಐರ್ಲೆಂಡ್‌ನ ದೇಶಭಕ್ತ ಡೇನಿಯೆಲ್ ಒ’ಕಾನೆಲ್ ಹೇಳಿರುವಂತೆ, ‘ಯಾವ ಪುರು­ಷನೂ ತನ್ನ ಗೌರವ ಬಲಿ ಕೊಟ್ಟು ಕೃತಜ್ಞತೆ ತೋರಿಸಬೇಕಿಲ್ಲ.ಯಾವ ಮಹಿಳೆಯೂ ತನ್ನ ಶೀಲ ಬಲಿಕೊಟ್ಟು ಕೃತಜ್ಞತೆ ತೋರಬೇಕಿಲ್ಲ. ಹಾಗೆಯೇ ತನ್ನ ಸ್ವಾತಂತ್ರ್ಯವನ್ನು ಬಲಿಕೊಟ್ಟು ಯಾವ ರಾಷ್ಟ್ರವೂ ಕೃತಜ್ಞತೆ ತೋರಬೇಕಿಲ್ಲ’.
ನಂತರ ಮುಂದುವರಿದು ಅವರು ಹೀಗೆ ಹೇಳಿದ್ದರು: ‘ಈ ಎಚ್ಚರಿಕೆಯು ಬೇರೆ ದೇಶಗಳಿಗಿಂತ  ಭಾರತಕ್ಕೆ ಹೆಚ್ಚು ಅಗತ್ಯ. ಭಾರತ­ದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ರಾಜಕೀಯದಲ್ಲಿ ಅವ್ಯಾಹತವಾಗಿ ನಡೆದಿದೆ. ಬೇರೆ ದೇಶದ ರಾಜಕೀಯಕ್ಕೆ ಹೋಲಿಸಿದರೆ ಭಾರತದಲ್ಲಿ ಇದು ಹೆಚ್ಚು. ಧರ್ಮದ ದೃಷ್ಟಿಯಲ್ಲಿ ಭಕ್ತಿಯು ಆತ್ಮದ ಮುಕ್ತಿ ಮಾರ್ಗ ಆಗಿರಬಹುದು. ಆದರೆ ರಾಜಕೀಯದಲ್ಲಿ ಭಕ್ತಿ ಅಥವಾ ನಾಯಕ ಪೂಜೆ  ಅವನತಿಯ ಹಾದಿ  ಹಾಗೂ ಕಡೆಗದು ಸರ್ವಾ­ಧಿ­ಕಾರಕ್ಕೆ ಖಚಿತ ಮಾರ್ಗವಾಗುತ್ತದೆ’.
ಆಗ ಅಂಬೇಡ್ಕರ್, ಸಾಮಾನ್ಯವಾದೊಂದು ಎಚ್ಚರಿಕೆಯಾಗಿ ಈ ಮಾತುಗಳನ್ನು ಹೇಳಿದ್ದರು.  ಆದರೆ ಆಗ ಅವರ ಮನಸ್ಸಿನಲ್ಲೂ ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ನಿರ್ದಿಷ್ಟ ವ್ಯಕ್ತಿಗಳೇನಾದರೂ ಇದ್ದಿದ್ದಿರಬಹುದೆ?     ಮಹಾತ್ಮ ಗಾಂಧಿಯ ಕುರಿತಂತೆ  ದೇಶದ ಜನರ ವಿಪರೀತ ಆರಾಧನಾ ಮನೋಭಾವವನ್ನು  ಅಂಬೇಡ್ಕರ್  ಅವರು ವಿಮರ್ಶಾ ದೃಷ್ಟಿಕೋನ­ದಿಂದಲೇ  ಕಂಡಿದ್ದರು. ಸ್ವಾತಂತ್ರ್ಯದ ನಂತರ ಜವಾಹರಲಾಲ್ ನೆಹರು ಹಾಗೂ ವಲ್ಲಭ­ಭಾಯ್ ಪಟೇಲ್ ತರಹದವರು ಅಪಾರ ಪ್ರತಿಷ್ಠೆ ಗಳಿಸಿದ್ದನ್ನೂ ಅವರು ಗಮನಿಸಿದ್ದರು. ನೆಹರು, ಪಟೇಲ್ ಹಾಗೂ ಅವರ ಕಾಂಗ್ರೆಸ್ ಪಕ್ಷ  ಸುದೀರ್ಘವಾದ ಸ್ವಾತಂತ್ರ್ಯ ಹೋರಾಟ­ದಲ್ಲಿ ಸಕ್ರಿಯವಾಗಿ ತೊಡಗಿಕೊಂಡದ್ದಕ್ಕೂ ಅಂಬೇಡ್ಕರ್ ಸಾಕ್ಷಿಯಾಗಿದ್ದರು. ಸ್ವಾತಂತ್ರ್ಯಕ್ಕಾಗಿ  ಅವರುಗಳು ಅನುಭವಿಸಿದ ಜೈಲುವಾಸ ಅವರಿಗೆ ಸಹಜವಾಗಿಯೇ  ಅಪಾರ ಜನಮನ್ನಣೆ ಹಾಗೂ ಗೌರವವನ್ನು ತಂದುಕೊಟ್ಟಿತ್ತು. ಇದನ್ನೆಲ್ಲಾ ಅಂಬೇಡ್ಕರ್ ಕಾಣಬಲ್ಲವರಾಗಿದ್ದರೂ ಇದರ ಪರಿಣಾಮಗಳ ಬಗ್ಗೆ ಅವರಿಗೆ ಆತಂಕವಿತ್ತು. ‘ರಾಷ್ಟ್ರಕ್ಕೆ ಸುದೀರ್ಘ ಸೇವೆಯನ್ನು’ ಗಾಂಧಿ, ನೆಹರು ಸಲ್ಲಿಸಿದ್ದಾರೆ ಎಂದ ಮಾತ್ರಕ್ಕೆ ಗಾಂಧಿ, ನೆಹರು ಸಿದ್ಧಾಂತಗಳು ಹಾಗೂ ಕ್ರಿಯೆಗಳು ಟೀಕಾತೀತ ಎಂದು ಅರ್ಥವೇ? ಪ್ರಶ್ನಾತೀತರೆಂದು ಅವರನ್ನು ಭಾವಿಸಿ, ಅವರ ಅನುಯಾಯಿ­ಗಳಾಗಲು ದೇಶಭಕ್ತಿಯ ಅವರ ದಾಖಲೆ­ಯೊಂದೇ ಸಾಕೆ? ಎಂಬ ಪ್ರಶ್ನೆಗಳೂ ಅವರಲ್ಲಿ ಇದ್ದವು.
ಅಂಧ ಆರಾಧನೆಯ ಅಪಾಯಗಳ ಬಗ್ಗೆ  ಜವಾಹರಲಾಲ್ ನೆಹರು ಅವರಿಗೆ ಅರಿವಿರಲಿಲ್ಲ ಎಂದೇನಲ್ಲ. ೧೯೩೭ರ ನವೆಂಬರ್‌ನಲ್ಲಿ ‘ಮಾಡರ್ನ್ ರಿವ್ಯೂ ಆಫ್ ಕಲ್ಕತ್ತ’ ನೆಹರು ಅವರ ವ್ಯಕ್ತಿಚಿತ್ರವೊಂದನ್ನು ಪ್ರಕಟಿಸಿತು. ಅದರಲ್ಲಿ, ಇತರರನ್ನು ಕುರಿತಾದ ನೆಹರೂ ಅಸಹನೆ ಹಾಗೂ ದುರ್ಬಲ ಹಾಗೂ ಅದಕ್ಷರ ಕುರಿತಾಗಿ  ಅವರಿಗಿರುವ ತಿರಸ್ಕಾರದ ಬಗೆಗೆ  ಮಾತುಗಳಿದ್ದವು. ಅತಿ ಗರ್ವಿಯಾಗುತ್ತಿರುವ ನೆಹರು ಮುಂದೆ ಸೀಸರ್ ತರಹ ಆಗಬಹುದು ಎನ್ನುವ ಅನುಮಾನವೂ ಬರಹದಲ್ಲಿ ವ್ಯಕ್ತ­ವಾಗಿತ್ತು. ಆದರೆ, ಆ ಬರಹವನ್ನು ತಾವೇ ‘ಚಾಣಕ್ಯ’ ಎಂಬ ಹೆಸರಿನಲ್ಲಿ ಬರೆದಿದ್ದುದಾಗಿ ಆಮೇಲೆ ನೆಹರು ಸ್ಪಷ್ಟಪಡಿಸಿದ್ದರು.
ತಮ್ಮೊಳಗೆ ಒಬ್ಬ ಸೀಸರ್ ಹುಟ್ಟಬಹುದು ಎಂಬ ಆತಂಕ ತೋಡಿಕೊಂಡು, ನೆಹರು ಆತ್ಮಾವಲೋಕನ ಮಾಡಿಕೊಂಡಿದ್ದರು. ಅವರ ಕಾಲ­ದಲ್ಲಿ ಇದ್ದ ರಾಜಕೀಯ ಧುರೀಣರೂ ಗಮನಾರ್ಹ ವ್ಯಕ್ತಿತ್ವದವರು. ಕಾಂಗ್ರೆಸ್‌­ನಲ್ಲಿಯೇ ಪಟೇಲ್, ರಾಜಾಜಿ, ಬಿ.ಸಿ. ರಾಯ್ ಮತ್ತಿತರರಿಗೆ ನೆಹರು ಮೇಲೆ ಕಕ್ಕುಲತೆ ಇತ್ತೇ ವಿನಾ ಅವರ ಕುರಿತಂತೆ ಗೌರವದ ಭಾವವೇನೂ ಇರಲಿಲ್ಲ. ಹಾಗೆಯೇ, ರಾಮಮನೋಹರ ಲೋಹಿಯಾ, ಎಸ್.ಪಿ. ಮುಖರ್ಜಿ, ಜೆ.ಬಿ. ಕೃಪಲಾನಿ, ಹಾಗೂ ಎ.ಕೆ. ಗೋಪಾಲನ್ ಅಂತಹ ಆತ್ಮಗೌರವ ಹಾಗೂ ಸಾಮರ್ಥ್ಯ ಇದ್ದ ನಾಯಕರು ವಿರೋಧ ಪಕ್ಷದಲ್ಲಿದ್ದರು.
ನೆಹರು ರೀತಿ ಆತ್ಮಾವಲೋಕನ ಮಾಡಿ­ಕೊಳ್ಳುವ ವ್ಯಕ್ತಿತ್ವ ಇಂದಿರಾಗಾಂಧಿ ಅವರದ್ದಾ­ಗಿರಲಿಲ್ಲ. ತಮ್ಮನ್ನ ಜನ ಆರಾಧಿಸಬೇಕೆಂಬ ವಿಚಾರದಲ್ಲಿ ಅವರಿಗೆ ಯಾವ ದ್ವಂದ್ವವೂ ಇರಲಿಲ್ಲ. ೧೯೬೯ರಿಂದ ೧೯೭೪ರ ಅವಧಿಯಲ್ಲಿ ದೇಶದ ಚೈತನ್ಯವೇ ತಾವು ಎಂಬಂತೆ ಅವರು ಬಿಂಬಿಸಿಕೊಂಡರು. ರಾಜ ಪ್ರಭುತ್ವವನ್ನು ರದ್ದು ಮಾಡಿದ್ದಕ್ಕಾಗಿ, ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ­ಗೊಳಿಸಿದ್ದಕ್ಕಾಗಿ, ಪಾಕಿಸ್ತಾನದ ವಿರುದ್ಧ ಮಿಲಿ­ಟರಿ ವಿಜಯದ ಸಂದರ್ಭದಲ್ಲಿ ರಾಷ್ಟ್ರವನ್ನು ಮುನ್ನಡೆಸಿದ್ದಕ್ಕಾಗಿ ಪ್ರಜೆಗಳು ತಮ್ಮನ್ನು ಆರಾಧಿ­ಸಬೇಕೆಂಬುದು ಅವರ ಆಗ್ರಹವಾಗಿತ್ತು. ಅನೇ­ಕರು ಅವರನ್ನು ಆರಾಧಿಸಿದ್ದೂ ನಿಜ. ಆ ಕಾಲದಲ್ಲಿ ಇಂದಿರಾ ಭಕ್ತಿ ಎಷ್ಟಿತ್ತೆಂದರೆ, ಎಂ.ಎಫ್.ಹುಸೇನ್ ತರಹದ ಕಲಾವಿದರು ಅವರನ್ನು ದುರ್ಗಿಯಂತೆ ಚಿತ್ರಿಸಿದರು. ಅಸ್ಸಾಮಿನ ಸಾಕಷ್ಟು ಹೆಸರು ಮಾಡಿದ್ದ ಕವಿ ದೇವಕಾಂತ ಬರುವಾ ಅವರಂತೂ ‘ಇಂಡಿಯಾ ಎಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ’ ಎಂಬ ಸಾಲುಗಳನ್ನು ಬರೆದರು. ಅಷ್ಟೊಂದೇನೂ ಜನರ ಗಮನಕ್ಕೆ ಬಂದಿರದ ಈ ಪದ್ಯವನ್ನೂ ಅವರು ರಚಿಸಿದ್ದರು: 
‘ಇಂದಿರಾ ತೇರಿ ಸುಬಹ್ ಕಿ ಜೈ,
ತೇರೆ ಶಾಮ್ ಕಿ ಜೈ
ತೇರೆ ಕಾಮ್ ಹಿ ಜೈ,
ತೇರೆ ನಾಮ್ ಕಿ ಜೈ’ .
ಇಂದಿರಾಗಾಂಧಿ ಹಾಗೂ ಅವರ ಭಟ್ಟಂಗಿಗಳ ನಡಾವಳಿಗಳು ರಾಜಕೀಯದಲ್ಲಿನ ಭಕ್ತಿ ಮಾರ್ಗ­ದ ಅಪಾಯಗಳಿಗೆ ಮಾದರಿ. ಅಂಬೇಡ್ಕರ್ ಎಚ್ಚರಿಸಿದಂತೆಯೇ ಅದು ‘ವಿನಾಶ ಹಾಗೂ ಕ್ರಮೇಣ ಸರ್ವಾಧಿಕಾರಕ್ಕೆ’ ಕಾರಣ­ವಾಯಿತು. ತಮ್ಮ ವಿರೋಧಿಗಳನ್ನು ಜೈಲಿಗೆ ಕಳುಹಿಸಿದ ಇಂದಿರಾಗಾಂಧಿ ನಂತರ ದೇಶದಲ್ಲಿ ತುರ್ತು­ಪರಿಸ್ಥಿತಿ ಹೇರುವ ಮೂಲಕ ಅಂಬೇಡ್ಕರ್ ವ್ಯಕ್ತಪಡಿಸಿದ್ದ ಅನುಮಾನ ನಿಜವಾಗಿಸಿದರು.
ಸ್ವತಂತ್ರ ಭಾರತದಲ್ಲಿ ವ್ಯಕ್ತಿ ಪೂಜೆಯ ಆರಾ­ಧನೆ­ಯಲ್ಲಿ ವಿಜೃಂಭಿಸಿದ ಮೊದಲ ರಾಜಕಾರಣಿ ಇಂದಿರಾಗಾಂಧಿ. ವಿಷಾದನೀಯ ಸಂಗತಿ ಎಂದರೆ ಅವರೇ ಕಡೆಯವರೂ ಆಗಲಿಲ್ಲ. ಅಲ್ಲಿಂದಾಚೆ­ಗಿನ ದಶಕಗಳಲ್ಲಿ ಅನೇಕ ರಾಜ­ಕಾರಣಿ­­ಗಳನ್ನು ಭಟ್ಟಂಗಿ­ಗಳು ಪೂರ್ಣ ಆರಾಧಿ­ಸು­ವುದು ಮುಂದುವರಿದೇ ಇದೆ. ಬಾಳ್ ಠಾಕ್ರೆ, ಎಂ.ಜಿ. ರಾಮಚಂದ್ರನ್, ಎನ್.ಟಿ. ರಾಮ­ರಾವ್ ಇವರೆಲ್ಲರೂ ಬೇರೆ ಬೇರೆ ಕಾಲಘಟ್ಟ­ಗಳಲ್ಲಿ ಅತಿಮಾನವರಂತೆ ಮೆರೆದವರೇ.
ಮೃತ ನಾಯಕರ ಕುರಿತಂತೆ ವ್ಯಕ್ತಿಪೂಜೆಯ ಪರಾಕಾಷ್ಠೆಯನ್ನೂ ನಮ್ಮ ದೇಶದಲ್ಲಿ ಕಂಡಿ­ದ್ದೇವೆ. ಮಹಾರಾಷ್ಟ್ರದ ಜನರಿಗೆ ಶಿವಾಜಿ, ಬಂಗಾಳಿಗಳಿಗೆ ಸುಭಾಶ್ಚಂದ್ರ ಬೋಸ್ ಇಂತಹ ಕುರುಡು ಭಕ್ತಿಯ ಪ್ರತೀಕಗಳು. ಒಂದಾದ ಮೇಲೆ ಒಂದರಂತೆ ಇಂದಿರಾ ಹಾಗೂ ರಾಜೀವ್ ಹೆಸರಿನಲ್ಲಿ ಯೋಜನೆಗಳನ್ನು ರೂಪಿಸುತ್ತಾ ಇದೇ ವ್ಯಕ್ತಿಪೂಜೆಯನ್ನೇ ಸೋನಿಯಾ ಗಾಂಧಿ ಪ್ರೋತ್ಸಾ­ಹಿ­ಸಿದರು. ಅಷ್ಟೇ ಅಲ್ಲ, ಇಂದಿರಾ ಹಾಗೂ ರಾಜೀವ್ ಜನ್ಮದಿನ ಅಥವಾ ಪುಣ್ಯತಿಥಿ­ಗಳಂದು ಸಾರ್ವಜನಿಕರ ಹಣದಲ್ಲಿ ಜಾಹೀರಾತು ಫಲಕ­ಗಳನ್ನು ಹಾಕಲು ಮಂತ್ರಿ ಮಹೋದಯರನ್ನು ಅವರು ಬೆಂಬಲಿಸುತ್ತಾ ಬಂದರು. ಹಾಗೆಯೇ ಅಂಬೇಡ್ಕರ್ ಮರಣಾನಂತರ ಅವರನ್ನು ಪೂಜಿಸುವ ದೊಡ್ಡ ವರ್ಗ ಹುಟ್ಟಿಕೊಂಡಿದ್ದೂ ಒಂದು ವ್ಯಂಗ್ಯ.
ಈಗ ನರೇಂದ್ರ ಮೋದಿ, ಅಂತಹ ವ್ಯಕ್ತಿಪೂಜೆಯ ಆರಾಧನೆಗೆ ಒಳಗಾಗಿರುವುದನ್ನು ನೋಡುತ್ತಿದ್ದೇವೆ. ಇಂದಿರಾ ಹಾಗೂ ಅವರ ನಂತರದ ಕಾಂಗ್ರೆಸ್‌ ಮತ್ತು ಡಿಎಂಕೆ, ಎಸ್‌ಪಿ, ಶಿವಸೇನೆ ಅಥವಾ ಬಿಜೆಡಿ ರೀತಿಯಂತಹ  ಪ್ರಾದೇಶಿಕ ಪಕ್ಷಗಳು ಎಂದೂ ಏಕವ್ಯಕ್ತಿ ನಿಯಂ­ತ್ರಣದಲ್ಲಿ ಇರಲಿಲ್ಲ. ಸಾಮೂಹಿಕ ನಾಯಕತ್ವದ ಬಗ್ಗೆ ಬಿಜೆಪಿ ಯಾವಾಗಲೂ ಹೆಮ್ಮೆ ಪಟ್ಟು­ಕೊಳ್ಳು­ತ್ತಿತ್ತು. ಬಿಜೆಪಿ ಪ್ರಾಮುಖ್ಯ ಗಳಿಸಿಕೊಂಡಂ­ತಹ ೧೯೮೯ರಿಂದ ೧೯೯೯ರವರೆಗಿನ ಅವಧಿಯಲ್ಲಿ  ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಅಟಲ್ ಬಿಹಾರಿ ವಾಜಪೇಯಿ  ಈ ಮೂವರು ನಾಯಕರನ್ನೂ ನಿಯಮಿತವಾಗಿ ಬಿಂಬಿಸಲಾಗುತ್ತಿತ್ತು. ಪಕ್ಷದ ಪ್ರಚಾರದಲ್ಲಿ ಮೂವರಿಗೂ ಆ ಅವಧಿಯಲ್ಲಿ ಸಮಪಾಲಿತ್ತು. ಆಮೇಲೆ ಪ್ರಧಾನಿ ಆದ ನಂತರ ವಾಜಪೇಯಿ ಸ್ಥಾನ ತುಸು ಮೇಲೇರಿತು.ಆದರೆ ಅದು ಸ್ವಲ್ಪ ಮಾತ್ರ. ಮೂವರು ಸಮಾನರಲ್ಲಿ ಅವರು ಮೊದಲನೆಯವರು ಅಷ್ಟೆ.
ಇದೆಲ್ಲಾ ಈಗ ಬದಲಾಗಿದೆ. ಈ ಸಲದ, 2014ರ ಲೋಕಸಭಾ ಚುನಾವಣೆ ವೇಳೆ, ಒಬ್ಬ ವ್ಯಕ್ತಿಯ ಇಚ್ಛೆಗೆ ತನ್ನನ್ನೇ ಬಿಜೆಪಿ ಶರಣಾಗಿಸಿ­ಕೊಂಡಿತು. ಮೊದಲು ಅವರನ್ನು ಪಕ್ಷದ ರಕ್ಷಕ  ಹಾಗೂ ನಂತರ ರಾಷ್ಟ್ರದ ರಕ್ಷಕ ಎಂಬಂತೆ ಮೋದಿ ಪರ ಪ್ರಚಾರ ಅಲೆ ಸೃಷ್ಟಿಸಲಾಯಿತು. ಬಿಜೆಪಿಯ ಉಳಿದ ನಾಯಕರು ಕೂಡ ತಮ್ಮ  ಆಲೋಚನಾ ಸ್ವಾತಂತ್ರ್ಯ ಹಾಗೂ ವಿಮರ್ಶಾ ಕೌಶಲಗಳನ್ನು ಅವರ ಪಾದಚರಣಗಳ ಮೇಲೆ ಹಾಕಿಬಿಟ್ಟರು. ಪಕ್ಷದ ಕಾರ್ಯಕರ್ತರೂ ಅದನ್ನೇ ಅನುಸರಿಸಿದರು. ಈಗ ಉಳಿದ ನಾವೆಲ್ಲರೂ ಅದನ್ನೇ ಅನುಸರಿಸಬೇಕೆಂದು ಕೇಳುತ್ತಿದ್ದಾರೆ.
ಇತ್ತೀಚೆಗೆ ಒಬ್ಬರು ಪತ್ರಿಕಾ ಸಂಪಾದಕರು ಈ ಬೆಳವಣಿಗೆಯನ್ನು ‘ಬುದ್ಧಿಹೀನವಾದ, ಮೋದಿ ಏಕೇಶ್ವರವಾದ’ ಎಂದು ಬರೆದಿದ್ದರು. ದೇವ­ಕಾಂತ ಬರುವಾ ಹಿಂದೆ ಇಂದಿರಾಗಾಂಧಿ­ಯವರನ್ನು ಹೊಗಳಿದಂತೆ ಈಗ ಮೋದಿಯನ್ನು ಕೊಂಡಾಡುತ್ತಿರುವ ಬರಹಗಾರರು, ಪತ್ರ­ಕರ್ತರ ಸಂಖ್ಯೆಯೂ ದೊಡ್ಡದಿದೆ. ಅಂಥವರು ಸರ್ಕಾರವನ್ನು ಮೋದಿ ಶುಚಿಗೊಳಿಸುತ್ತಾರೆ ಎಂದು ವಾಗ್ದಾನ ಮಾಡುತ್ತಿದ್ದಾರೆ. ವಾರ್ಷಿಕ ಶೇ 10ರಷ್ಟು ಆರ್ಥಿಕ ಪ್ರಗತಿ, ಪಾಕಿಸ್ತಾನ ಹಾಗೂ ಚೀನಾಕ್ಕೆ ತಕ್ಕ ಪಾಠ, ಭಾರತವನ್ನು ಸೂಪರ್‌ಪವರ್‌ ಮಾಡುವುದು ಮೊದಲಾದ ಆಶ್ವಾಸನೆಗಳೂ ಆ ಬರಹಗಳಲ್ಲಿ ಸೇರಿವೆ. ಅಂತರ್ಜಾಲದಲ್ಲಿ ಮೋದಿ ಅವರನ್ನು ಬೆಂಬ­ಲಿಸು­ವವರಂತೂ ಸೈಬರ್‌ ಗೂಂಡಾಗಳಂತೆ ಮೋದಿ ವಿರೋಧಿಗಳನ್ನು ಟೀಕಿಸುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಕಂಡು ಅಂಬೇಡ್ಕರ್ ಅವರು ಆಘಾತಗೊಂಡಿರುತ್ತಿದ್ದರು. ಬಹುಶಃ ನಮ್ಮದೂ ಅದೇ ಸ್ಥಿತಿ.

ಬುಧವಾರ, ಮೇ 7, 2014

ವಾಲ್ಮೀಕಿ ಯಾರು? ಎಂಬ ಪುಸ್ತಕದ ಕಾಗಕ್ಕ ಗುಬ್ಬಕ್ಕನ ಕತೆ




ಪರುಶುರಾಮ ಕಲಾಲ


ಕೆ.ಎಸ್.ನಾರಾಯಣಾಚಾರ್ಯ ಅವರ ವಾಲ್ಮೀಕಿ ಯಾರು? ಪುಸ್ತಕವು ಆದಿಕವಿ ವಾಲ್ಮೀಕಿಯ ಕುಲಮೂಲವನ್ನು ಕೆದಕಿ ಆತ ಬ್ರಾಹ್ಮಣನಾಗಿದ್ದ ಬೇಡನಾಗಿರಲಿಲ್ಲ ಎಂದು ಪುರಾಣದ ಅನೇಕ ಕತೆಗಳನ್ನು ಹೆಕ್ಕಿ ಸಾದಾರ ಪಡೆಸುವ ಪ್ರಯತ್ನ ನಡೆಸಿದ್ದಾರೆ. 

ಇಡೀ ಪುಸ್ತಕವು ಬ್ರಾಹ್ಮಣ್ಯದ ಭಾರವನ್ನು ಹೊತ್ತುಕೊಂಡು ಬ್ರಾಹ್ಮಣರಲ್ಲದ ಹೀನ ಜಾತಿಯವರಿಗೆ ವೇದ, ವೈದಿಕ ಪರಂಪರೆ ಕರಗತವಾಗಲು ಸಾಧ್ಯವೇ ಎಂದು ಪ್ರಶ್ನಿಸುತ್ತಾ ಕೋಗಿಲೆ ಕಾಗೆಗಳೊಂದಿಗೆ ಬೆಳೆದರೆ ಅದು ಕಾಗೆಯಾಗುವುದಿಲ್ಲ ಕೋಗಿಲೆ ಯಾವತ್ತಿಗೂ ಕೋಗಿಲೆ ಎಂದು ಜಾತಿ ಶ್ರೇಷ್ಠತೆಯನ್ನು ಮೆರೆದಿದ್ದಾರೆ. 

ಕೆ.ಎಸ್.ನಾರಾಯಣಾಚಾರ್ಯ ಅವರು ವಾಲ್ಮೀಕಿ ಬ್ರಾಹ್ಮಣ ಎಂದು ಯಾಕೇ ಸಾಧಿಸಬೇಕು? 

ಇದರಿಂದ ಬ್ರಾಹ್ಮಣ ಸಮಾಜಕ್ಕೆ ಬರುವ ಕಿರೀಟ ಏನು?

ಬ್ರಾಹ್ಮಣ್ಯವೇ ಸರ್ವ ಶ್ರೇಷ್ಠ ಎಂದು ಸಾರಿಕೊಳ್ಳಲಿ ಆದರೆ ವಾಲ್ಮೀಕಿ ನಮ್ಮ ಕುಲದ ಗುರು ಎಂದು ಈಗಲೂ ವಾಲ್ಮೀಕಿಯನ್ನು ಸ್ಮರಿಸಿಕೊಳ್ಳುವ ನಾಯಕ, ಬೇಡ ಜನಾಂಗವು ತನ್ನ ಕುಲವನ್ನು ವಾಲ್ಮೀಕಿ ಕುಲ ಎಂದು ಕರೆದುಕೊಳ್ಳುತ್ತದೆ. ವಾಲ್ಮೀಕಿಯನ್ನು ತನ್ನ ಕುಲದ ಸಂಕೇತವನ್ನಾಗಿಸಿಕೊಂಡಿದೆ. ಇದಕ್ಕೆ ಸಂತೋಷ ಪಡುವುದನ್ನು ಬಿಟ್ಟು ನಾರಾಯಣಾಚಾರ್ಯ ಬೇಡ, ನಾಯಕ ಕುಲದ ಸಂಕೇತವಾದ ವಾಲ್ಮೀಕಿಯನ್ನು ಕಿತ್ತಿಕೊಳ್ಳುವುದು ಪ್ಯಾಸಿಸ್ಟ್ ಅಲ್ಲದೇ ಬೇರೇನೂ ಅಲ್ಲ. 

ಅವರು ಈ ಪುಸ್ತಕದಲ್ಲಿ ಬೇಡ ಜನಾಂಗವನ್ನು ಮಾತ್ರ ನಿಂದಿಸಿಲ್ಲ. ರಾಮಾಯಣ ಮಹಾಕಾವ್ಯ ಎನ್ನುವುದನ್ನು ಸಹ ಒಪ್ಪಿಲ್ಲ. ರಾಮಾಯಣ ಬೇರೆ ಬೇರೆ ಪಠ್ಯಗಳನ್ನು ಸಹ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಮಹಾತ್ಮ ಗಾಂಧೀಜಿಯೇ ರಾಮಾಯಣವನ್ನು ಓದಿಲ್ಲ ಎಂದಿದ್ದಾರೆ. ಗಾಂಧೀಜಿ ಗುಂಡೇಟಿನಿಂದ ಸಾಯುವಾಗ ಹೇ ರಾಮ್ ಅಂತಾ ಹೇಳಿದ್ದು ಕೂಡಾ ಸುಳ್ಳು ಎಂದು ಸಾಧಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ವಿಷ್ಣು ಕರ್ಕರೆ ಅನ್ನುವವರು ’ನಾನು ಗಾಂಧೀಜಿ ಸಾಯುವಾಗ ೪ ಅಡಿ ಸಮೀಪದಲ್ಲಿದ್ದೆ. ಅವರು ಪ್ರಾಣ ಬಿಡುವಾಗ ಆಂ ಅಂತಹ ಅಷ್ಟೇ ಹೇಳಿದರು ಎನ್ನುವುದನ್ನು ಉಲ್ಲೇಖಿಸಿ, ನಾನು ’ಇದಾವ ಗಾಂಧಿ?’ ಎನ್ನುವ ಪುಸ್ತಕ ಬರೆದಿದ್ದೀನಿ. ಇದು ಮುದ್ರಣದಲ್ಲಿದೆ. ಅದನ್ನು ಓದಿ ಎಂದು ಹೇಳುತ್ತಾರೆ.

ಬೇಡ ನಾಯಕ ಜನಾಂಗದವರು ಸಂಸ್ಕೃತ ಕಲಿತು ವಾಲ್ಮೀಕಿ ರಾಮಾಯಣದ ಕೆಲವು ಭಾಗವನ್ನಾದರೂ ಓದಲು, ಬಾಯಿಪಾಠ ಮಾಡಲು ಸಂಕಲ್ಪಿಸಬೇಕು. ರಾಷ್ಟ್ರ ಪುರ್ನನಿರ್ಮಾಣಕ್ಕೆ ಖಂಡಿತ ಇದು ಸಾಧಕ, ಪೂರಕ ಎಂದು ಹೇಳುತ್ತಾ ವಾಲ್ಮೀಕಿಯ ಧ್ಯೇಯಾದರ್ಶಗಳು ಇಂದಿಗೂ ಪ್ರಸ್ತುತ ಎಂಬುವವರು ಅದು ಏನೆಂದು ಅರಿಯಬೇಡವೇ? ಪೂರ್ಣವಾಗಿ ವಾಲ್ಮೀಕಿಯನ್ನು ಓದಿ ಮೆಚ್ಚಿ, ಒಪ್ಪಿ, ಅಲ್ಲಿನ ಎಲ್ಲಾ ಸೊಗಸುಗಳಿಗೂ ಮನಸೋತ ರಾಜಕಾರಣಿಗಳು, ಬೇಡ/ನಾಯಕ ಜನಾಂಗವೂ, ಪರಿಶಿಷ್ಟರೂ, ದಲಿತರೂ, ಇಲ್ಲಿ ಅಹಂಕಾರ, ಪ್ರತ್ಯೇಕತಾ ಭಾವ, ವಿಕೃತ ಮನ ಬುದ್ಧಿಗಳನ್ನು ತೊರೆಯುವಂತಾದರೆ ತುಂಬಾ ಚೆನ್ನು. ಎಂದು ಫರ್ಮಾನು ಹೊರಡಿಸಿದ್ದಾರೆ.

 ಇಡೀ ಪುಸ್ತಕ ಇಂತಹ ಅಸಂಗತ ಗೊಂಚಲುಗಳ ಮೂಲಕ ವಾಲ್ಮೀಕಿ ಒಬ್ಬ ಬ್ರಾಹ್ಮಣ ಎಂದು ಅದಕ್ಕೆ ಯಾವ ವೈಜ್ಞಾನಿಕ ಕಾರಣ ಕೊಡದೇ, ಕನಿಷ್ಟ ಪುರಾವೆ ಕೊಡದೆ ಕಾಗಕ್ಕ ಗೂಬಕ್ಕನ ಕತೆ ಹೇಳುವ ಮೂಲಕ ಬೇಡನೊಬ್ಬ ಗಾಯತ್ರಿ ಮಂತ್ರದಂತಹ ರಾಮಾಯಣವನ್ನು ಬರೆಯಲು ಸಾಧ್ಯವೇ ಎಂದು ಪ್ರಶ್ನಿಸುತ್ತಾ ಬ್ರಾಹ್ಮಣ್ಯ ಶ್ರೇಷ್ಠ ಎಂದು ಅದನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಾ ಇತರೆ ಎಲ್ಲಾ ಹಿಂದುಳಿದ ಜಾತಿಗಳನ್ನು ತೆಗಳುತ್ತಿದೆ. ಇದನ್ನು ವಿಕಾರ ಅನ್ನುವುದು ಬಿಟ್ಟು ಬೇರೇನೂ ಹೇಳಲು ಸಾಧ್ಯವಿಲ್ಲ. ಕೆ.ಎಸ್.ನಾರಾಯಣಾಚಾರ್ಯ ಹುತ್ತವ ಬಡಿಯುವ ಕೆಲಸ ಮಾಡುತ್ತಾ ಜಾತಿಯ ಹುತ್ತಕ್ಕೆ ಕೈ ಹಾಕಿದ್ದಾರೆ.

ಸೋಮವಾರ, ಮೇ 5, 2014

ತೊಗಲುಬೊಂಬೆಗೆ ಜೀವ



ಡಾ.ರಹಮತ್ ತರೀಕೆರೆ

                                                                             ೧
   ಬಹಳ ಹಿಂದೆ, ನಾಡೋಜರಾದ ಬೆಳಗಲ್ ವೀರಣ್ಣನವರ ತೊಗಲುಬೊಂಬೆ ಆಟದ ಪ್ರದರ್ಶನವನ್ನು ನೋಡಿದ್ದೆ. ಆದರೆ ಅವರನ್ನು ನೋಡಲು ಸಾಧ್ಯವಾಗಿರಲಿಲ್ಲ. ಸಾಮಾನ್ಯವಾಗಿ ಬೊಂಬೆಯಾಟದ ಕಲಾವಿದರು ಅದೃಶ್ಯರು. ಯಕ್ಷಗಾನ ಬಯಲಾಟ ಕಂಪನಿ ನಾಟಕಗಳಲ್ಲಿ ನಟರು ತೆರೆಯ ಮುಂದಿದ್ದರೆ, ಇಲ್ಲಿ ಬೆಂಬೆಗಳೇ ಮುಂದಿದ್ದು, ಅವನ್ನು ಆಡಿಸುವ ಕಲಾವಿದರು ಹಾಡುತ್ತ ಮಾತಾಡುತ್ತ ತೆರೆಮರೆಯಲ್ಲಿ ಅಡಗಿರುತ್ತಾರೆ. ಹೀಗೆ ಸದಾ ತೆರೆಮರೆಯಲ್ಲೇ ಇರುವ ವೀರಣ್ಣನವರ ಜತೆ ಈಚೆಗೆ ಅರ್ಧದಿನ ಕಳೆಯುವ ಅವಕಾಶ ಒದಗಿತು. ಅದೊಂದು ಅಪೂರ್ವ ಅನುಭವ. 

  ಉದ್ದನೆಯ ಬಿಳಿಯ ಜುಬ್ಬ ಮತ್ತು ಕಚ್ಚೆಪಂಚೆ ಧರಿಸಿದ್ದ ಆರಡಿ ಆಳು; ಎಂಬತ್ತಕ್ಕೆ ಅಡರುತ್ತಿರುವ ಮುಪ್ಪಿನಿಂದ ತುಸು ದಣಿದಂತೆ ಕಾಣುವ ಕಾಯ; ಗುಂಗುರು ಕೂದಲನ್ನು ಹಿಂದಕ್ಕೆ ಬಾಚಿದ ತಲೆ; ಅಗಲವಾದ ಹಣೆಯಲ್ಲಿ ಮಂಕಾಗಿರುವ ವಿಭೂತಿ; ಕೊಂಚ ಉಬ್ಬಿದ ಹಲ್ಲುಗಳ ನಗುಮುಖ; ಮಾತಾಡಿದರೆ ಮುಚ್ಚಿದ ಕೊಣೆಯಲ್ಲಿ ಶಂಖಊದಿದಂತೆ ಹೊರಡುವ ಗಂಭೀರ ಸ್ವರ; ಕುಳಿತಲ್ಲೇ ರಂಗಭೂಮಿ ನಿರ್ಮಿಸಿಬಿಡುವ ಕುಶಲತೆ; ಇರುವ ಸೌಲಭ್ಯಗಳಲ್ಲೇ ನೆಮ್ಮದಿಸುವ ಸರಳತೆ- ಮೊದಲ ಭೇಟಿಯಲ್ಲಿಯೇ ಒಡನಾಟಕ್ಕೆ ಸಿಲುಕಿದವರನ್ನು ಸೆಳೆದುಕೊಳ್ಳುವ ಚಹರೆ ವೀರಣ್ಣನವರದು.

   ಮರಾಠಿ ಮನೆಮಾತಿನ ‘ಬೊಂಬೆರಾಮ’ ‘ಕಿಳ್ಳೇಕ್ಯಾತ’ ಎಂದು ಕರೆಯಲಾಗುವ ಸಮುದಾಯಕ್ಕೆ ಸೇರಿದ ಶ್ರೀ ವೀರಣ್ಣನವರು, ಕುಲಕಸುಬಾಗಿ ಬಂದಿದ್ದ ತೊಗಲುಬೊಂಬೆ ಆಟವನ್ನು ತ್ಯಜಿಸಿ, ಕಂಪನಿ ರಂಗಭೂಮಿಗೆ ತಮ್ಮ ಪ್ರಾಯದ ದಿನಗಳಲ್ಲೇ ವಲಸೆ ಹೋಗಿದ್ದವರು. ಆದರೆ ಅವರು ಆಕಸ್ಮಿಕವಾಗಿ ಮತ್ತು ನಾಟಕೀಯವಾಗಿ ವೃತ್ತಿರಂಗಭೂಮಿಯಿಂದ ತೊಗಲುಬೊಂಬೆಗೆ ಮರಳಿ ಬರಬೇಕಾಯಿತು. ಇದು ಅವರ ಬಾಳಿನಲ್ಲಿ ಘಟಿಸಿದ ನಿರ್ಣಾಯಕ ತಿರುವಾಗಿತ್ತು. ಈ ತಿರುವಿಗೆ ಕಾರಣರಾದವರು, ಆಗಿನ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಜಯ ಸಾಸನೂರರು. ದಿ.ಸಾಸನೂರರ ಪ್ರೇರಣೆಯಿಂದ ವೀರಣ್ಣನವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ  ‘ಪಂಚವಟಿ ಪ್ರಸಂಗದ ಪ್ರಯೋಗ (೧೯೮೦) ಮಾಡಿದರು. ಇದು ತೊಗಲುಬೊಂಬೆ ಕಲೆಯಲ್ಲಿ ಹೊಸಹಾದಿಯನ್ನೇ ತೆರೆಯಿತು; ಅವರನ್ನೂ ತೊಗಲುಬೊಂಬೆಯನ್ನೂ ಶಾಪದಿಂದ ಬಿಡುಗಡೆ ಮಾಡಿತು. (ರಾಮಾಯಣ ಕಾಲದ ಗುಹನ ವಂಶಜರಾದ ಬೊಂಬೆರಾಮರು ರಾಮನ ಶಾಪದಿಂದ ಈ ಆಟವನ್ನು ಆಡಬೇಕಾಯಿತು ಎಂಬ ಮಿತ್ ಕೂಡ ಇದೆ.) ಮುಂದೆ ಅವರ ತೊಗಲುಬೊಂಬೆಗಳು ದೇಶ ವಿದೇಶಗಳ ಸುತ್ತಾಟವನ್ನು ಆರಂಭಿಸಿದವು. ಈ ಎಲ್ಲದರ ಯಶೋಕಳೆ ವೀರಣ್ಣನವರ ಮೊಗದಲ್ಲಿ ಢಾಳಾಗಿ ಬೆಳಗುತ್ತಲಿತ್ತು.

  ಆದರೆ ಈ ಯಶಸ್ಸು ವೀರಣ್ಣನವರಿಗೆ ಸುಲಭದಲ್ಲಿ ದಕ್ಕಲಿಲ್ಲ. ಇದಕ್ಕಾಗಿ ಅವರು ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ವೀರಣ್ಣನವರು ತಮ್ಮ ಪ್ರಾಯದಲ್ಲಿ ತೊಗಲುಬೊಂಬೆಗಳಿಂದ ತಪ್ಪಿಸಿಕೊಂಡು ವೃತ್ತಿರಂಗಭೂಮಿಗೆ ವಲಸೆಹೋಗಿದ್ದು, ಮರಳಿ ತೊಗಲುಬೊಂಬೆಗೆ ಆಗಮಿಸಿದ್ದು, ಸರ್ಕಾರಿ ಸಂಸ್ಥೆಯೊಂದರ ಪ್ರೇರಣೆಯಿಂದ ಗೊಂಬೆಯಾಟಕ್ಕೆ ಹೊಸ ರೂಪಾಂತರ ಕೊಟ್ಟಿದ್ದು ಮತ್ತು ದೇಶಾಂತರ ತಿರುಗಿದ್ದು- ಈ ನಾಲ್ಕು ವಿದ್ಯಮಾನಗಳು, ಸಾಂಪ್ರದಾಯಿಕ ಸಮಾಜ ಮತ್ತು ಕೆಳಜಾತಿಯ ಕಲಾವಿದರ, ಸಂಪ್ರದಾಯ ಮತ್ತು ಆಧುನಿಕತೆಗಳ, ಪರಂಪರೆ ಮತ್ತು ಹೊಸಪ್ರಯೋಗಗಳ ನಡುವಣ ಸಂಘರ್ಷ ಮತ್ತು ಹೊಂದಾಣಿಕೆಗಳ ಹಲವು ಗುಟ್ಟುಗಳನ್ನು ಒಳಗೊಂಡಂತಿವೆ. 

  ಮೊದಲಿಗೇ ಹುಟ್ಟುವ ಮೂಲಭೂತ ಪ್ರಶ್ನೆಗಳೆಂದರೆ, ಜನರಾಗಲಿ ಕಲಾವಿದರಾಗಲಿ ಕುಲಕಸುಬು ಇಲ್ಲವೇ ಕುಲಕಲೆಗಳಿಗೆ ಯಾಕೆ ಬೆಂಗೊಡುತ್ತಾರೆ? ಅವರನ್ನು ತಾಯಂತೆ ಕೈಹಿಡಿದ ಕಲೆ ಅಥವಾ ಕಸುಬು ಒಂದು ಹಂತದಲ್ಲಿ ಯಾಕೆ ಉಸಿರುಗಟ್ಟಿಸಿ ಕೊಲ್ಲುವ ರಕ್ಕಸಿಯಾಗುತ್ತದೆ? ಅವರ ಒಂದೊಮ್ಮೆ ತಮ್ಮ ಕುಲಕಸುಬಿಗೆ ಇಲ್ಲವೆ ಕುಲಕಲೆಗೆ ಮರಳಿ ಅದಕ್ಕೊಂದು ಹೊಸ ರೂಪಧಾರಣೆ ಮಾಡುವುದಾದರೆ, ಆಧುನಿಕತೆ ಹೇಗೆ ನೆರವಾಗುತ್ತದೆ? ಕಲೆಯನ್ನು ಅದರ ಚಾರಿತ್ರಿಕ ಮತ್ತು ಕಲಾತ್ಮಕ ಬಿಕ್ಕಟ್ಟುಗಳಿಂದ ಪಾರುಗಾಣಿಸುವ ತ್ರಾಣ ಆಧುನಿಕತೆಯೊಂದಕ್ಕೇ ಇದೆಯೊ ಅಥವಾ ಅದರಲ್ಲಿ ಮಧ್ಯಪ್ರವೇಶಿಸುವ ವ್ಯಕ್ತಿಪ್ರತಿಭೆಗಿದೆಯೊ? ಸಮುದಾಯದ ಕಲೆಯೊಂದು ನಾಗರಿಕ ಸಮಾಜದಲ್ಲಿ ಹೊಸಸ್ವೀಕಾರ ಪಡೆಯಲು ಕಾರಣ, ಪ್ರೇಕ್ಷಕರ ಮನೋಭಾವದಲ್ಲಿ ಉಂಟಾದ ಪಲ್ಲಟಗಳೊ ಅಥವಾ ಕಲೆಯಲ್ಲಿ ಸಂಭವಿಸಿದ ಹೊಸ ರೂಪಾಂತರವೊ? ಕಲೆಯೊಂದರ ನವರೂಪಾಂತರದಲ್ಲಿ ಪ್ರಭುತ್ವ ಮತ್ತು ಅದರ ಅಂಗಸಂಸ್ಥೆಗಳು ವಹಿಸುವ ಪಾತ್ರವೇನು? ವಿದೇಶಿಗರು ನಮ್ಮ ಸಾಂಪ್ರದಾಯಿಕ ಕಲೆಯನ್ನು ಮೆಚ್ಚಿದರೆಂದು ನಾವೂ ಮೆಚ್ಚುತ್ತಿದ್ದೇವೆಯೇ? ನಮ್ಮ ಪರಿಸರದಲ್ಲಿರುವ ಈ ಕಲೆಗಳ ಬಗ್ಗೆ ನಮ್ಮ ಕಣ್ಣನ್ನು ತೆರೆಸುವ ಸಂಗತಿ ಯಾವುದು? ಈ ಕೆಲವು ಪ್ರಶ್ನೆಗಳ ಮೂಲಕ ವೀರಣ್ಣನವರ ಕಲಾಯಾನದ ಚರಿತ್ರೆಯನ್ನು ಪರಿಶೀಲಿಸಬಹುದು. 

                                                                      ೨

ಯಾವುದೇ ಕೆಳಸ್ತರದ ಸಮುದಾಯಗಳು ತಮ್ಮನ್ನು ಪೋಷಿಸಿದ ವೃತ್ತಿ ಅಥವಾ ಕಲೆಗೆ ಬೆಂಗೆಟ್ಟು ಹೋಗಲು ಎರಡು ಮುಖ್ಯ ಕಾರಣಗಳಿರುತ್ತವೆ. 

ಮೊದಲನೆಯದಾಗಿ- ಕಲೆಯನ್ನು ತನ್ನ ಭಾಗವಾಗಿಸಿಕೊಂಡಿದ್ದ ಸಾಂಪ್ರದಾಯಿಕ ಸಮಾಜವು ಸ್ವತಃ ಶಿಥಿಲಗೊಂಡು ಆ ಕಲೆಯನ್ನು ತಬ್ಬಲಿಗೊಳಿಸುವುದು. ತೊಗಲುಬೊಂಬೆ ವಿಷಯದಲ್ಲಿ ಹೇಳುವುದಾದರೆ, ಅದು ಮೂಲತಃ ಬಿಸಿಲು ಪ್ರದೇಶದ ಕಲೆ. (ತೊಗಲು ತೇವಾಂಶದಿಂದ ಹಾಳಾಗುವುದರಿಂದಲೇ ಈ ಆಟ ಮಲೆನಾಡು ಕರಾವಳಿಗಳಲ್ಲಿಲ್ಲ. ಜನಪದ ಕಲೆಗಳಿಗೂ ಭೌಗೋಳಿಕ ಪರಿಸರಕ್ಕೂ ಕರುಳಬಳ್ಳಿಯ ಹೀಗೆ ನಂಟಿದೆ.) ತೊಗಲುಬೊಂಬೆ ಆಡಿಸಿದರೆ ಮಳೆಬರುತ್ತದೆ ಅಥವಾ ಸಮೃದ್ಧ ಫಸಲು ಬರುತ್ತದೆ ಎಂಬ ನಂಬಿಕೆಗೂ, ಕಡಿಮೆ ಮಳೆಬೀಳುವ ಕಡಪ ಅನಂತಪುರ ಬಳ್ಳಾರಿ ಚಿತ್ರದುರ್ಗ ನಾಗಮಂಗಲದಂತಹ ಪ್ರದೇಶಗಳಲ್ಲಿ ಈ ಕಲೆಯಿರುವುದಕ್ಕೂ ಸಂಬಂಧವಿದ್ದಂತಿದೆ. ಇಂತಹ ನಂಬಿಕೆ ಮತ್ತು ಸಂಬಂಧಗಳಿದ್ದ ಗ್ರಾಮೀಣ ರೈತಾಪಿ ವರ್ಗದ ಬದುಕು, ಬಹುಶಃ ೧೯೫೦ ಬಳಿಕ ಬದಲಾಗತೊಡಗಿತು. ಅದರಲ್ಲೂ ಬಳ್ಳಾರಿ ಸೀಮೆಯ  ಪ್ರದೇಶವು ತುಂಗಭದ್ರಾ ನೀರಾವರಿಗೆ ಒಳಪಟ್ಟ ಬಳಿಕ ರೈತರು ಹೊಸ ಬೆಳೆಪದ್ಧತಿಗಳಿಗೆ ಹೋದರು. ಬೇಸಾಯ ಪದ್ಧತಿಯಲ್ಲಿ ಉಂಟಾದ ಈ ಪಲ್ಲಟ ಮತ್ತು ಕೃಷಿಯ ಬಿಕ್ಕಟ್ಟುಗಳು ಇಂತಹ ಕಲೆಗಳ ಮೇಲೂ ಪ್ರಭಾವ ಬೀರಿದಂತೆ ಕಾಣುತ್ತದೆ. ಹೀಗಾಗಿ ತೊಗಲುಬೊಂಬೆ ಕಲಾವಿದರು ಹೊಸ ಆಶ್ರಯತಾಣವನ್ನು ಹುಡುಕಿಕೊಳ್ಳುವ ಇಲ್ಲವೇ ಕಸುಬನ್ನೇ ಕೈಬಿಡುವ ಒತ್ತಡಕ್ಕೆ ಒಳಗಾಗಿರಬಹುದು. ಕಲಾವಿದರು-ಕಲೆ-ಸಮಾಜಗಳ ನಡುವಣ ಪೋಷಕ-ಪೋಷಿತ ಸಂಬಂಧ ಶಿಥಿಲಗೊಂಡ ಇಂತಹ ಚಾರಿತ್ರಿಕ ಕಾಲಘಟ್ಟದಲ್ಲಿ, ವೀರಣ್ಣನವರು ತೊಗಲುಬೊಂಬೆ ಆಟವನ್ನು ತ್ಯಜಿಸಿ, ಜಾತಿ ಚಹರೆಗಳಿಲ್ಲದ ವೃತ್ತಿರಂಗಭೂಮಿಯ ಲೋಕಕ್ಕೆ ಪ್ರವೇಶಿಸಿದ್ದು ಸಹಜವಾಗಿದೆ.

ಎರಡನೆಯದಾಗಿ-ಕಲಾವಿದ ಸಮುದಾಯವು ತನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವ ಕಲೆಗಳನ್ನು ನಿಷ್ಠುರವಾಗಿ ತ್ಯಜಿಸುವುದು. ಸಾಮಾಜಿಕ ಮತ್ತು ಆರ್ಥಿಕವಾಗಿ ತಳಸ್ತರದಿಂದ ಬಂದ ಕಲಾವಿದರ ಪಾಲಿಗೆ, ಕಲೆಗಳ ಮೂಲಕ ಸಾಮಾಜಿಕವಾದ ಮನ್ನಣೆ ಮತ್ತು ಮುಜುಗರಗಳು ಒಟ್ಟಿಗೆ ಬರುತ್ತವೆ. ಕಲಾವಿದರು, ಊರಗೌಡನ ಅನುಮತಿ ಪಡೆದು ಆಟವಾಡಿಸಿ ದವಸ ಪಡೆಯುವ, ಮದುವೆ ಮನೆ ಅಥವಾ ಜಾತ್ರೆಗಳಲ್ಲಿ ಆಡಿಸಿ ಜನರನ್ನು ರಂಜಿಸುವ ಕಾಯಕದಲ್ಲಿ ತಿರುಗಾಟ ಮಾಡುತ್ತ ಬದುಕುವ  ವರ್ತುಲದಿಂದ ಹೊರಬರುವುದು ಎಂದರೆ, ಅಭದ್ರತೆಗೆ ಕಾಲಿಡುವುದು ಮತ್ತು ಬಿಡುಗಡೆಯ ಹೋರಾಟಕ್ಕೆ ಒಡ್ಡಿಕೊಳ್ಳುವುದು. ಕುಲಕಲೆಗಳಿಗೆ ಪರಂಪರೆಯಿಂದ ಬಂದ ಜ್ಞಾನ ಮತ್ತು ಕುಶಲತೆಗಳು ಒಳಕಸುವನ್ನೇನೊ ಕೊಡುತ್ತವೆ. ಆದರೆ ಈ ಒಳಕಸುವು ಆಯಾ ಸಮುದಾಯದ ವ್ಯಕ್ತಿಪ್ರತಿಭೆಗಳನ್ನು ಸಾಮಾಜಿಕ ಕೀಳರಿಮೆಯಲ್ಲಿ ಉಳಿಸಿಬಿಡುತ್ತದೆ. ಅರ್ಧಶತಮಾನದ ಹಿಂದೆ, ಆರ್ಥಿಕವಾಗಿ ಸಾಮಾಜಿಕವಾಗಿ ಮೇಲ್‌ಸ್ತರದಿಂದ ಬಂದವರಿಗೆ ರಂಗಭೂಮಿಯಂತಹ ‘ಕೆಳ’ಸ್ತರದ ಪ್ರವೇಶಿಸುವುದು ಕಲಾಸಾಹಸ ಎನಿಸಿರಬಹುದು. (ವೀರಣ್ಣನವರ ಗುರುಗಳಾದ ಸಿಡಗಿನಮೆಳೆ ಚಂದ್ರಯ್ಯ ಹಾಗೂ ಜೋಳದರಾಶಿಯವರ ಜೀವನವೇ ಇದಕ್ಕೆ ಸಾಕ್ಷಿ.) ಆದರೆ ಕಲಾವಂತ ಸಮುದಾಯದಲ್ಲಿ ಹುಟ್ಟಿ ಹೊಸಬದುಕಿಗೆ ಹಾತೊರೆಯುವ ತುರಿಸುಳ್ಳವರಿಗೆ ಅವರ ಕುಲಕಲೆಗಳು ಕೈಕೋಳವಾಗಿ ತೋರುವುವು. ಸಾಂಪ್ರದಾಯಿಕ ಸಮಾಜದಿಂದ ಕಲೆಯ ಮೂಲಕ ಸಿಗುತ್ತಿದ್ದ ಭದ್ರತೆಯೂ ಬಂಧನವೆನಿಸತೊಡಗುತ್ತದೆ. ಆಧುನಿಕ ಬದುಕಿಗೆ ತೆರೆದುಕೊಂಡ ಹೊಸತಲೆಮಾರು, ತಮ್ಮ ಚಲನೆಗೆ ಕುಲಕಲೆಗಳೇ ತೊಡಕಾಗಿವೆಯೆಂದು ಪರಿಭಾವಿಸಿ, ಅವುಗಳಿಂದ ದೂರವಾಗಲು ಯತ್ನಿಸುತ್ತದೆ. ಕಲೆಗೆ ಕರ್ಣಕವಚದಂತೆ ಅಂಟಿರುವ ಸಾಮಾಜಿಕ ಹೊರೆಯನ್ನು ಕಳಚಿ ಎಸೆಯಲು ವ್ಯಕ್ತಿವಿಶಿಷ್ಟತೆಯುಳ್ಳ ಜೀವ ತವಕಿಸುತ್ತದೆ. ಹೆಚ್ಚಿನ ಆದಾಯ ಕೊಡದಿದ್ದರೂ ಸ್ವಾಭಿಮಾನಕ್ಕೆ ಧಕ್ಕೆತಾರದ ಉದ್ಯೋಗಗಳತ್ತ ಚಲಿಸುತ್ತದೆ. ‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿ ಅಪ್ಪಣ್ಣನ ಮಗನ ಸನಾದಿ ದ್ವೇಷವನ್ನು ಅರ್ಥಮಾಡಿಕೊಳ್ಳಬೇಕಾದ್ದು ಹೀಗೆಯೇ. ಬಹುಶಃ ವೀರಣ್ಣನವರಿಗೆ ತೊಗಲುಬೊಂಬೆಯಿಂದ ದೂರವಾಗಲು ಮೇಲ್ಕಾಣಿಸಿದ ಕಾರಣದ ಜತೆಗೆ, ಅವರ ಕಾಲದಲ್ಲಿ ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡ, ಸಿಡಗಿನಮೆಳೆ ಚಂದ್ರಯ್ಯ ಮುಂತಾದ ತಾರಾಮೌಲ್ಯದ ರಂಗನಟರಿಂದಲೂ ಕವಿಗಳಿಂದಲೂ ಕೂಡಿದ್ದ ವೃತ್ತಿರಂಗಭೂಮಿ  ಆಕರ್ಷಣೆಯೂ ಕೆಲಸ ಮಾಡಿರಬಹುದು.

೨೦ನೇ ಶತಮಾನದ ಮೊದಲಾರ್ಧಲ್ಲಿ ವೃತ್ತಿ ರಂಗಭೂಮಿಗೂ ‘ಅದು ಸಭ್ಯರು ಪ್ರವೇಶಿಸುವ ಕಲೆಯಲ್ಲ’ ಎಂಬ ಅಘೋಚಿತ ಸಾಮಾಜಿಕ ಮನೋಭಾವವಿತ್ತು.  ಆದರೂ ಅದು ಎಲ್ಲ ಸಮುದಾಯಗಳು ತೊಡಗಿಕೊಳ್ಳುವ ಕಲೆಯಾಗಿ ಬದಲಾಯಿತು. ವೃತ್ತಿ ರಂಗಭೂಮಿಯು ಸಿನಿಮಾ ಉದ್ಯಮವಾಗಿ ರೂಪಾಂತರಗೊಳ್ಳತೊಡಗಿದ ಬಳಿಕ ಅದರ ಸಾಮಾಜಿಕ ಶಾಪವಿಮೋಚನೆಯ ಕಾರ್ಯವೂ ಆಯಿತು. ಆದರೆ ವೃತ್ತಿರಂಗಭೂಮಿಗೆ ಸಿಕ್ಕ ಈ ಚಲನೆ, ಅನೇಕ ಕುಲಕಲೆಗಳಿಗೆ ಅಥವಾ ಸಮುದಾಯ ರಂಗಭೂಮಿಗಳಿಗೆ ಸಿಗಲಿಲ್ಲ. ತೊಗಲುಬೊಂಬೆಯು ರಾಮಾಯಣ ಮಹಾಭಾರತದ ಪ್ರಸಂಗಗಳ ಕಾರಣದಿಂದ ಧಾರ್ಮಿಕವಾಗಿದ್ದರೂ, ಅದು ಪ್ರಾಣಿಚರ್ಮದ ಜತೆ ಸಂಬಂಧವಿದ್ದ ಕಾರಣದಿಂದಲೊ ಏನೊ, ಅಸ್ಪೃಶ್ಯತೆಯಿಂದ  ಮುಕ್ತವಾಗಲಿಲ್ಲ.  ಸಾಮಾಜಿಕವಾಗಿ ದ್ವೀಪವಾಗಿಯೇ ಮುಂದುವರೆಯುವ ಈ ಇಕ್ಕಟ್ಟನ್ನು ಗೊಂದಲಿಗರು, ಕಿನ್ನರಿಜೋಗಿಗಳು, ವೇಷಗಾರರರು, ಬುರ್ರಕಥೆಯವರು, ಜಾತಿಗಾರರು ಈಗಲೂ ಎದುರಿಸುತ್ತಿದ್ದಾರೆ. ಅಲ್ಲಿ ಹೊಸತಲೆಮಾರು ಕುಲಕಲೆಯನ್ನು ನಿಷ್ಠುರವಾಗಿ ಬಿಟ್ಟುಕೊಡುತ್ತಿದೆ. 
ಆದರೆ ಈ ಕುಲಕಲೆಗಳಿಗೆ ಅದೇ ಸಮುದಾಯದ ಪ್ರತಿಭಾವಂತರು, ಹೊಸ ವೈಚಾರಿಕತೆ, ಆಧುನಿಕ ಪ್ರಜ್ಞೆ ಮತ್ತು ಪ್ರಯೋಗಶೀಲ ತುಡಿತದೊಂದಿಗೆ ಮರುಪ್ರವೇಶ ಮಾಡಿದರೆ, ಅವಕ್ಕೆ ಮರುಹುಟ್ಟು ಸಂಭವಿಸಬಲ್ಲದು; ಆಗ ಅದು ಕಲಾವಿದರು ಸ್ವತಃ ಸೃಜನಶೀಲಗೊಳ್ಳುವ ಮತ್ತು ತಮ್ಮ ಕುಲಕಲೆಯನ್ನು ಸಾಮಾಜಿಕ ಒಂಟಿತನದಿಂದ ಬಿಡುಗಡೆಗೊಳಿಸುವ ಯತ್ನವಾಗಬಲ್ಲದು. ತೊಗಲುಬೊಂಬೆಗೆ ವೀರಣ್ಣನವರು ಮಾಡಿದ ಪ್ರಯೋಗಗಳಲ್ಲಿ ಇಂತಹ ಮರುಹುಟ್ಟು ಸಂಭವಿಸಿತು. ಇದಕ್ಕಾಗಿ ಅವರು ಮಾಡಿದ ಕಾಯಕಲ್ಪದಲ್ಲಿ ಕೆಲವು ಕ್ರಾಂತಿಕಾರಿ ಅಂಶಗಳಿದ್ದವು. ಅವೆಂದರೆ-

೧. ಅವರು ಹಳ್ಳಿಯ ಗುಡಿಕಟ್ಟೆಗಳಲ್ಲಿ, ಗೌಡರ ಮನೆಯಂಗಳದಲ್ಲಿ ಹಳ್ಳಿಯ ಜನರ ಮುಂದೆ ಆಡುತ್ತಿದ್ದ ಆಟವನ್ನು ಮಹಾನಗರದ ರಂಗಮಂದಿರವೊಂದಕ್ಕೆ ತೆಗೆದುಕೊಂಡು ಹೋಗಿದ್ದು ಹಾಗೂ ಅದನ್ನು ನಗರದ ಆಧುನಿಕ ಪ್ರೇಕ್ಷಕರಿಗೆ ತೋರಿಸಿದ್ದು. ವೀರಣ್ಣನವರು ನಗರ ಪ್ರೇಕ್ಷಕರಿಗಾಗಿ ಮಾಡಿದ ಈ ಪ್ರಯೋಗವು ರವೀಂದ್ರನಾಥ ಟಾಗೂರರ ಹೆಸರಲ್ಲಿರುವ ‘ರವೀಂದ್ರ ಕಲಾಕ್ಷೇತ್ರ’ದಲ್ಲಿ ಜರುಗಿದ್ದು ಅರ್ಥಪೂರ್ಣವಾಗಿದೆ. ಕಾರಣ, ಟಾಗೂರರು ಸ್ವತಃ ಬಂಗಾಳದ ಜನಪದ ಸಂಗೀತದಿಂದ ತಮ್ಮ ಆಧುನಿಕ ಕಾವ್ಯಕ್ಕೆ ರಾಗವನ್ನು, ಬಂಗಾಳದ ಬಾವುಲರಿಂದ ತಮ್ಮ ಚಿಂತನೆಗೆ ದರ್ಶನವನ್ನು ಪಡೆದು ಪ್ರಯೋಗ ಮಾಡಿದವರು. ಈಗಲೂ ಶಾಂತಿನಿಕೇತನದಲ್ಲಿ ಬಂಗಾಳದ ಜನಪದ ಕಲೆಗಳು ಆಧುನಿಕ ಪ್ರೇಕ್ಷಕರ ಮುಂದೆ ಪ್ರದರ್ಶನವಾಗುವ ಒಂದು ಉತ್ಸವ ನಡೆಯುತ್ತದೆ. 

೨. ಪರಂಪರಾಗತ ಕಲೆಯೊಂದರ ಮರುಹುಟ್ಟಿಗೆ ಕಲಾವಿದನಿಗೆ ಸರ್ಕಾರದ ಸಾಂಸ್ಕೃತಿಕ ಸಂಘಟನೆಗಳು ನೆರವಾಗುವುದು. ಸಾಸನೂರರಂತೆ ವೀರಣ್ಣನವರು ಮಾಡಿದ ಪ್ರಯೋಗಗಳಲ್ಲಿ ಸಾಂಸ್ಥಿಕ ನೆರವು ಬೆಂಬಲ ಕೊಟ್ಟವರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಹಾಗೂ ಕರ್ನಾಟಕದ ಜಾನಪದ ಅಕಾಡೆಮಿಯ ಎಚ್.ಎಲ್. ನಾಗೇಗೌಡರು. ಇದು ಗ್ರಾಮೀಣ ಸಮಾಜದ ಅವಲಂಬನೆಯಿಂದ ಕಲೆಯನ್ನು ಬಿಡಿಸಿ ಸರ್ಕಾರ ಮತ್ತು ಅದರ ಸಾಂಸ್ಕೃತಿಕ ಅಂಗಸಂಸ್ಥೆಗಳ ಪೋಷಣೆಯನ್ನು ಒದಗಿಸಿದ್ದನ್ನು ಸೂಚಿಸುತ್ತದೆ. ಇದು ಕಲೆಯನ್ನು ಸೀಮಿತ ನೆಲೆಯಿಂದ ವಿಶಾಲ ನೆಲೆಗೆ ಜಾಗಾಂತರ ಮಾಡುವ ಪ್ರಕ್ರಿಯೆಯೂ ಆಗಿತ್ತು. 

೩. ಇಡೀ ರಾತ್ರಿ ಜರುಗುತ್ತಿದ್ದ ಗೊಂಬೆಯಾಟವನ್ನು ಎರಡು ಗಂಟೆಗೆ ಇಳಿಸಿದ್ದು. ಇದು ನಗರದ ಮಧ್ಯಮವರ್ಗವು ತನ್ನನ್ನು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ಕಛೇರಿಯ ದಣಿವನ್ನು ಕಳೆದುಕೊಳ್ಳುವ ಸಮಯ ಎಂಬುದು ಗಮನಾರ್ಹ. 

೪.ಗಾತ್ರದಲ್ಲಿ ಚಿಕ್ಕದಾಗಿದ್ದ ಗೊಂಬೆಗಳು ಆಳೆತ್ತರಕ್ಕೆ ಬದಲಾಗಿದ್ದು. ಗೊಂಬೆಗಳ ನೆರಳಿಗೆ ಕಟ್ಟಲಾಗುತ್ತಿದ್ದ ಚಿಕ್ಕತೆರೆ ಹದಿನಾರು ಎಂಟು ಅಗಲಕ್ಕೆ ವಿಸ್ತರಣೆಗೊಂಡಿದ್ದು; ಇಬ್ಬರು ಮೂವರು ಇರುತ್ತಿದ್ದ ತಂಡ ಎಂಟಕ್ಕೆ ಹಿಗ್ಗಿದ್ದು.

೫. ರಾಮಾಯಣ- ಮಹಾಭಾರತಕ್ಕೆ ಸೀಮಿತವಾಗಿದ್ದ ಪ್ರಸಂಗಗಳು ವಸಾಹತುಶಾಹಿ ವಿರೋಧಿ ಹೋರಾಟಕ್ಕೆ, ಸಮಾಜಸುಧಾರಕ ಬಸವಣ್ಣನವರ ಬದುಕಿಗೆ ವಿಸ್ತರಿಸಿಕೊಂಡಿದ್ದು. ಈ ಪ್ರಕ್ರಿಯೆ ಇನ್ನೂ ಮುಂದೆ ಹೋಗಿ ಡೆಂಗಿಸೊಳ್ಳೆ, ಏಡ್ಸ್ ನಿವಾರಣೆಯಂತಹ ಪ್ರಸಂಗಗಳನ್ನು ಅಳವಡಿಸಿಕೊಳ್ಳಲು ಕಾರಣವಾಯಿತು.
  
ರಂಗಪ್ರದರ್ಶನದ ಸ್ಥಳ, ಕಾಲ, ಪೋಷಕತ್ವ, ಪ್ರಸಂಗಗಳ ವಸ್ತು ಮತ್ತು ಗೊಂಬೆಗಳ ಗಾತ್ರಗಳಲ್ಲಿ ಸಂಭವಿಸಿದ ಈ ಪಲ್ಲಟಗಳು ಕ್ರಾಂತಿಕಾರಕವಾಗಿದ್ದವು. ಇವು ತೊಗಲುಬೊಂಬೆಯಾಟಕ್ಕೆ ಹೊಸ ಜೀವದಾನ ಮಾಡಿದವಲ್ಲದೆ, ಅವುಗಳ ಚಲನೆಗೆ ಹೊಸ ರೋಡ್‌ಮ್ಯಾಪನ್ನೂ ಒದಗಿಸಿದವು. ಇದರಿಂದ ತೊಗಲುಬೊಂಬೆಗಳು ಜಗತ್ತಿನ ಬೇರೆಬೇರೆ ದೇಶಗಳಿಗೆ ತಿರುಗಾಟ ಮಾಡಲು ಸಾಧ್ಯವಾಯಿತು. ವೀರಣ್ಣನವರು ಜನಪದ ರಂಗಭೂಮಿಗಳಲ್ಲಿ ಮಾಡಿದ್ದ ವಲಸೆಯನ್ನು ಈಗ ಅವರ ತೊಗಲುಬೊಂಬೆಗಳು ಬೇರೊಂದು ಬಗೆಯಲ್ಲಿ ಮುಂದುವರೆಸಿದವು. ಕಂಪನಿ ರಂಗಭೂಮಿಯಲ್ಲಿ ತೆರೆಯಮುಂದೆ ಅಭಿನಯಿಸುವ ನಟರಾಗಿದ್ದ ವೀರಣ್ಣನವರು ಈಗ ಗೊಂಬೆಗಳನ್ನು ಮುಂದೆಬಿಟ್ಟು ತಾವು ತೆರೆಯ ಹಿಂದೆ ಸರಿದಿದ್ದರೇನೋ ಖರೆ. ಆದರೆ ಈ ಹಿಂಜರಿತವು ಅವರನ್ನೂ ಅವರ ಕಲೆಯನ್ನೂ ನಾಗರಿಕ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸಿತು. ವಿಶ್ವದ ತಿರುಗಾಟಕ್ಕೆ ಅಣಿಗೊಳಿಸಿತು. ರಾಯಲಸೀಮೆಯಲ್ಲಿ ಹುಟ್ಟಿದ ತೊಗಲುಬೊಂಬೆ ರಂಗಭೂಮಿಗೆ ಕ್ರಿಸ್ತಪೂರ್ವ ೩ನೇ ಶತಮಾನದಷ್ಟು ಪ್ರಾಚೀನತೆಯಿದೆಯೆಂದೂ, ಅದು ಶಾತವಾಹನ, ಪಲ್ಲವ, ಚಾಲುಕ್ಯ, ಕಾಕತೀಯ, ವಿಜಯನಗರ, ತಂಜಾವೂರು ರಾಜ್ಯಗಳಿಗೆ ಬರುತ್ತಿದ್ದ ವಿದೇಶಿ ವರ್ತಕರ ಜತೆ, ಸಮುದ್ರಯಾನದ ಮೂಲಕ ಹೊರಟು, ಆಗ್ನೇಯ ಏಶ್ಯಾ ದೇಶಗಳಿಗೂ, ಅಲ್ಲಿಂದ ಟರ್ಕಿ ಪರ್ಶಿಯಾಗಳಿಂದ, ಅಲ್ಲಿಂದ ಯಯೂರೋಪಿನ ದೇಶಗಳಿಗೂ ವಲಸೆ ಮಾಡಿತೆಂದೂ ಒಂದು ಅಭಿಪ್ರಾಯವಿದೆ. ಇದು ನಿಜವಿದ್ದರೆ, ಅದರ ಮಹಾವಲಸೆಯ ಎರಡನೆಯ ಘಟ್ಟವು ವೀರಣ್ಣನವರ ಮೂಲಕ ಸಂಪನ್ನಗೊಂಡಿತು ಎನ್ನಬಹುದು. 

                                                                                        ೩

ವೀರಣ್ಣನವರ ಕಲಾಪ್ರಯೋಗಗಳ ಯಶಸ್ಸಿನ ಅಥವಾ ತೊಗಲುಬೊಂಬೆಯ ರೂಪಾಂತರಗಳ ಹಿಂದೆ ಮೂರು ಸಂಗತಿಗಳಿವೆ. ೧. ವೀರಣ್ಣನವರ ವ್ಯಕ್ತಿಪ್ರತಿಭೆ. ೨. ಪರಂಪರೆಯ ಭದ್ರಬುನಾದಿ. ೩. ಬಹುಮೂಲದಿಂದ ಬಂದ ಕಸುವಿನ ಧಾರೆಗಳು ಏಕೀಭವಿಸಿದ್ದು. ಪರಂಪರೆಯ ಕಸುವೆಷ್ಟೇ ಇದ್ದರೂ ಸೃಜನಶೀಲವಾದ ವ್ಯಕ್ತಿಪ್ರತಿಭೆಯೊಂದರ ಮಧ್ಯಪ್ರವೇಶವಿಲ್ಲದೆ ಕಲಾಲೋಕದಲ್ಲಿ ದೊಡ್ಡ ಪಲ್ಲಟಗಳು ಸಂಭವಿಸುವುದಿಲ್ಲ; ಹಾಗೆಯೇ ಎಂತಹ ವ್ಯಕ್ತಿಪ್ರತಿಭೆಯಿದ್ದರೂ ಪರಂಪರೆಯಲ್ಲಿ ಆಳವಾಗಿ ಬೇರುಗಳಿಲ್ಲದೆ ಮಾಡುವ ಪ್ರಯೋಗಗಳು ದೊಡ್ಡ ಗೆಲುವನ್ನು ಗಳಿಸುವುದಿಲ್ಲ. ಸಂಪ್ರದಾಯದ ಕಾಂಡವು ಆಧುನಿಕತೆ ಸಹವಾಸದಿಂದಲೂ  ಚಾರಿತ್ರಿಕ ಒತ್ತಡದಿಂದಲೂ ಹೊಸ ಚಿಗುರನ್ನು ಕೊನರಿಸತೊಡಗುತ್ತದೆ. ತೊಗಲುಬೊಂಬೆ ವಿಷಯದಲ್ಲಿ ವೀರಣ್ಣನವರ ವ್ಯಕ್ತಿಪ್ರತಿಭೆ, ಪ್ರಯೋಗಶೀಲತೆ ಮತ್ತು ಪರಂಪರೆಯ ಕಸುವುಗಳು ಹೊಸಹದದಲ್ಲಿ ಸಮನ್ವಯಗೊಂಡವು. ಅವರಲ್ಲಿ ಬಹುಮೂಲದ ಧಾರೆಗಳಾದ ಭಜನೆ, ಗಮಕ, ಶಾಸ್ತ್ರೀಯ ಸಂಗೀತ, ಕನ್ನಡ ಸಾಹಿತ್ಯದ ಓದು, ವೃತ್ತಿರಂಗಭೂಮಿ ಹಾಗೂ ಜನಪದ ರಂಗಭೂಮಿಗಳು ಸಹ ಸಂಗಮಿಸಿದವು;  ಅವರ ಹಾಡಿಕೆಯಲ್ಲಿ ಜನಪದ ಮಟ್ಟುಗಳ ಜತೆಗೆ ಶಾಸ್ತ್ರೀಯ ಮಟ್ಟುಗಳ ಹದವಾಗಿ ಸಂಗಮಿಸುವುದನ್ನು ಸಹ ಗಮನಿಸಬೇಕು. ಇದಕ್ಕೆಲ್ಲ ಕಾರಣ, ವೃತ್ತಿರಂಗಭೂಮಿಯನ್ನೂ ಜನಪದ ಬಯಲಾಟಗಳನ್ನೂ ಹಾದು ಅವರು ತೊಗಲುಬೊಂಬೆಗೆ ಮರಳಿ ಬಂದಿದ್ದು. ವೀರಣ್ಣನವರಂತೆ ಈ ಮೂರು ರಂಗಭೂಮಿಗಳೊಳಗೆ ಹೊಕ್ಕಾಡಿ ಬಂದ ಇನ್ನೊಂದು ಪ್ರತಿಭೆ ಬಹುಶಃ ಕರ್ನಾಟಕದಲ್ಲಿ ಮತ್ತೊಂದು ಇಲ್ಲ. ಬಹುಮೂಲದಿಂದ ಶಕ್ತಿಸಂಚಯ ಮಾಡಿಕೊಳ್ಳುವ ಈ ಗುಣವು ಅವರ ಭಾಷಾಸಿದ್ಧಿಯಲ್ಲೂ ಕಾಣುತ್ತದೆ. ಅವರದು ಸಂಸ್ಕೃತ ಮತ್ತು ಬಳ್ಳಾರಿಯ ಆಡುನುಡಿಯ ಹದವಾದ ಮಿಶ್ರಣದಿಂದ ಕೂಡಿದ ಭಾಷೆ. ಅವರಿಗೆ ಈ ಶಿಷ್ಟಕನ್ನಡವು ಅವರು ಬಹುಕಾಲ ಕೆಲಸ ಮಾಡಿದ ವೃತ್ತಿರಂಗಭೂಮಿಯ ನಾಟಕಗಳಿಂದಲೊ, ನಡುಗನ್ನಡ ಶೈಲಿಯನ್ನು ಬಳಸುವ ಜನಪದ ಬಯಲಾಟಗಳಿಂದಲೊ, ಪ್ರಾಯದಲ್ಲಿ ಓದಿದ್ದ ಅನಕೃ ಕಾದಂಬರಿಗಳಿಂದಲೊ, ಸಿಡಗಿನಮೆಳೆ ಚಂದ್ರಯ್ಯ ಅಥವಾ ಜೋಳದರಾಶಿ ದೊಡ್ಡನಗೌಡರಂತಹ ನಟ-ಲೇಖಕರ ಸಹವಾಸದಲ್ಲಿದ್ದುದರಿಂದಲೊ ಬಂದಿರಬಹುದು. ಕಂದಗಲ್ ಹಣಮಂತರಾಯರ ‘ರಕ್ತರಾತ್ರಿ’ಯಂತಹ ನಾಟಕಗಳಲ್ಲಿ ಪಾತ್ರವಹಿಸಿದ ಯಾರಿಗೂ ಶಿಷ್ಟವಾದ ಕನ್ನಡ ಕರಗತವಾಗಿಬಿಡುತ್ತದೆ. ಬಹುಶಃ ರಂಗಭೂಮಿಯ ಈ ಬಹುಮುಖತೆಯೇ ಅದನ್ನು ಬೇರೆಲ್ಲಾ ಕಲೆಗಳಿಗಿಂತ ಜಾತ್ಯತೀತವಾಗಿಸಿತು ಎಂದು ಕಾಣುತ್ತದೆ. ಕರ್ನಾಟಕದ ವೃತ್ತಿರಂಗಭೂಮಿಯ ನಟನಟಿಯರ ಯಾದಿ ನೋಡಿದರೂ ಜಾತ್ಯತೀತತೆಯ ಈ ಅಂಶ ಮನದಟ್ಟಾಗುತ್ತದೆ. 
 
ವೀರಣ್ಣನವರು ಮಾತುಕತೆಯ ನಡುವೆ ಹೇಳಿದರು: ‘ಸಾರೂ, ಬಡತನ ಬಹಳ ಕೆಟ್ಟದ್ದು. ಅದರಿಂದ ಅನೇಕ ಸಲ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸಿರೋದುಂಟು. ಆದರೆ ಕಲಾಜಗತ್ತಿನಲ್ಲಿ ಸಿಕ್ಕ ಬೆಲೆಬಾಳುವ ಅನುಭವ ನನ್ನನ್ನು ಉಳಿಸಿತು. ಶಾರದಾತಾಯಿ ನನಗೆ ಕಲಾವಿದ್ಯೆ ಕೊಟ್ಟಿದಾಳೆ. ನನಗೆ ವ್ಯವಹಾರ ಗೊತ್ತಿಲ್ಲ. ಕಲೆ ಗೊತ್ತಿದೆ. ಕಲೆ ನನ್ನ ಕೈಹಿಡಿದಿದೆ.’ ವೀರಣ್ಣನವರ ಜತೆಯಿದ್ದಾಗ ಅವರ ವ್ಯಕ್ತಿತ್ವದಲ್ಲಿರುವ ಮಾಗುವಿಕೆ, ತಾಳ್ಮೆ ಪ್ರಸನ್ನತೆಯ ಗುಣಗಳು ಅನುಭವಕ್ಕೆ ಬರುತ್ತವೆ. ದೇಶ ವಿದೇಶಗಳನ್ನು ತಿರುಗಿ, ಕೀರ್ತಿಯನ್ನೂ ಜನಪ್ರೀತಿಯನ್ನೂ ಗಳಿಸಿದ್ದರೂ, ಅವರಲ್ಲಿ ಗ್ರಾಮೀಣವಾದ ಸರಳತೆ ಮತ್ತು ಮುಗ್ಧತೆ ಕಳೆದುಹೋಗಿಲ್ಲ. ವ್ಯವಹಾರ ಜ್ಞಾನವಿಲ್ಲದ ಕಾರಣದಿಂದಲೊ ತನ್ನ ಮಿತಿಯ ಅರಿವಿನಿಂದ ಒದಗಿರುವ ನಮ್ರತೆಯ ದೆಸೆಯಿಂದಲೊ ಅವರು ಮತ್ತಷ್ಟು ಎತ್ತರದವರಾಗಿ ಕಾಣುವರು. ಅವರಿಗೆ ತಮಗೂ ತಮ್ಮ ಕಲೆಗೂ ಜನ ಮತ್ತು ಸರ್ಕಾರ ಕೊಟ್ಟಿರುವ ನೈತಿಕ ಬೆಂಬಲದ ಬಗ್ಗೆ ಅಪಾರ ಕೃತಜ್ಞತೆಯಿದೆ. ಬಾಲ್ಯದಲ್ಲಿ ಪಟ್ಟಿರುವ ಕಷ್ಟ ಅನುಭವಿಸಿದ ಅಪಮಾನಗಳು ಅವರ ಮನಸ್ಸನ್ನು ಕಹಿ ಮಾಡಿದಂತಿಲ್ಲ. ಜಾತಿ ಮತ್ತು ಬಡತನದಿಂದ ಮುಖಾಮುಖಿ ಮಾಡಿದ ಅಪಮಾನವನ್ನು ಕಲಾತ್ಮಕ ಪ್ರಜ್ಞೆಯ ಮೂಲಕ ಗೆಲ್ಲುವುದರಿಂದ ಬರುವ ಆತ್ಮವಿಶ್ವಾಸವಿದು ಎಂದು ತೋರುತ್ತದೆ. ವೀರಣ್ಣನವರ ಬದುಕು ಕಲೆಯಿಂದ ಅಪಮಾನವನ್ನು ಗೆದ್ದ ಕಲಾವಿದನ ಕಥೆ ಮಾತ್ರವಲ್ಲ, ಅಳಿವಿನಂಚಿಗೆ ಸರಿಯುತ್ತಿದ್ದ ಕಲೆಯನ್ನು ತನ್ನ ಪ್ರತಿಭೆ ಶ್ರದ್ಧೆ ಶ್ರಮದಿಂದ ಬದುಕಿಸಿದ ಗಾಥೆ ಕೂಡ. ಆದರೆ ಆಧುನಿಕ ಸಮಾಜದ ಅಪೇಕ್ಷೆ ಮತ್ತು ಸರ್ಕಾರದ ನೆರವುಗಳು, ಕಲೆಯನ್ನು ಸರಕೀಕರಣ ಮಾಡಬಲ್ಲವು. ಇದಕ್ಕೆ ಸಾಕ್ಷಿ ವೀರಣ್ಣನವರ ತಂಡವು ಡೆಂಗಿಸೊಳ್ಳೆಗಳನ್ನು ಮತ್ತು ಏಡ್ಸನ್ನು ಕುರಿತ ಪ್ರಸಂಗಗಳ ಪ್ರದರ್ಶನ ಮಾಡುತ್ತಿರುವುದು. ಈಗ ಪೌರಾಣಿಕ ಧಾರ್ಮಿಕ ಪ್ರಸಂಗಗಳು ದೊರಕಿಸಿಕೊಡಲಾಗದ ಆದಾಯಗಳನ್ನು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ಪ್ರಸಂಗಗಳು ದೊರಕಿಸಿಕೊಡುತ್ತಿವೆ. ಕಲೆ ಮತ್ತು ಆಧುನಿಕತೆಯ ಸಂಬಂಧದ ಒಂದು ವೈರುಧ್ಯವಿದು.  
  
                                                                                       ೪

ಮಾತುಕತೆಯ ಕೊನೆಗೆ ವೀರಣ್ಣನವರಿಗೆ ಕೆಲವು ರಂಗಗೀತೆಗಳನ್ನು ಹಾಡಬೇಕೆಂದು ವಿನಂತಿಸಿದೆ. ಅವರು ಕುಮಾರವ್ಯಾಸ ಭಾರತದಿಂದ ಕೆಲವು ಷಟ್ಪದಿಗಳನ್ನು ಅಭಿನಯಪೂರ್ವಕವಾಗಿ ಉಚ್ಚಸ್ವರದಲ್ಲಿ ಹಾಡಿದರು. ನಮ್ಮ ಮನೆ ನಾದದಿಂದ ತುಂಬಿಹೋಯಿತು. ವೀರಣ್ಣನವರು ಆರಿಸಿಕೊಂಡ ಹೊಸ ಪ್ರಸಂಗಗಳ ನಾಯಕರಾದ ಬಸವಣ್ಣ ಮತ್ತು ಗಾಂಧಿ, ಸಮಾಜ ಮತ್ತು ದೇಶವನ್ನು ತಮ್ಮದೇ ಆದ ರೀತಿಯಲ್ಲಿ ಬಿಡುಗಡೆ ಮಾಡಲು ಯತ್ನಿಸಿದವರು ಎಂಬುದು ಮಾರ್ಮಿಕವಾಗಿದೆ. ವೀರಣ್ಣನವರಿಗೆ ಗಾಂಧಿಯನ್ನು ಕುರಿತ ಆಟದ ಹಾಡನ್ನು ಹಾಡಲು ವಿನಂತಿಸಿದೆ. ಅವರು -ತಮ್ಮ ಹೆಸರಲ್ಲೂ ಇರುವ- ‘ವೀರ’ರಸದ ದನಿಯಲ್ಲಿ ಒಂದು ಪದ್ಯವನ್ನು ಹಾಡಿದರು:

ಮಂಗಳಮಯ ಉತ್ತುಂಗ ಹಿಮಾಲಯ ನೋಡಿ ಹೇಳಿದಂಥ ಕಥೆಯಾ
ಭಾರತಮಾತೆಯು ಶತಶತಮಾನದಲ್ಲಿ ನರಳಿದ ವ್ಯಥೆಯಾ
ತಾಯಿ ಬಂಧನವ ಬಿಡಿಸಲು ಸಿಡಿಯಿತು ಕೋಟಿಕಂಠದಲ್ಲಿ ಜಯಕಾರಾ
ಕೇಳುತಮ್ಮ ಕೇಳುತಂಗಿ ನಮ್ಮ ಸ್ವಾತಂತ್ರ್ಯ ಸಮರದಾ ಶ್ರೀಕಾರಾ

ಕಂಪನಿ ರಂಗಭೂಮಿ ಹಾಗೂ ಜನಪದ ರಂಗಭೂಮಿಗಳಲ್ಲಿ ಪಳಗಿರುವ ವೀರಣ್ಣನವರ ಕಂಠದಲ್ಲಿ ಈ ರಂಗಗೀತೆ ಕಹಳೆಯಂತೆ ಮೊಳಗಿತು. ಈ ಗೀತೆಯಲ್ಲಿರುವ ಬಂಧನ-ವ್ಯಥೆ ಸಿಡಿಯುವುದು-ಸ್ವಾತಂತ್ರ್ಯ ಎಂಬ ಪದಗಳು ಪ್ರಸಂಗದ ಸನ್ನಿವೇಶಕ್ಕಾಗಿ ಹುಟ್ಟಿದ್ದರೂ, ವೈಯಕ್ತಿಕವಾಗಿ ವೀರಣ್ಣನವರ ಹಾಗೂ ಅವರ ಕುಲಕಲೆಯ ಜೀವನಚರಿತ್ರೆಗೂ ಸಂಬಂಧಿಸಿವೆ ಅನಿಸಿತು. ಈ ರಂಗಗೀತೆ ಲಾವಣಿ ಮಟ್ಟಿನಲ್ಲಿರುವುದು ಮಾರ್ಮಿಕವಾಗಿದೆ. ಯಾಕೆಂದರೆ ಲಾವಣಿಗಳಿಗೂ ವಸಾಹತುಶಾಹಿಗೆ ಜನಪದರಿಂದ ಬಂದ ಪ್ರತಿರೋಧಕ್ಕೆ ತಳುಕಿದೆ. ಬಹಳಷ್ಟು ಲಾವಣಿಕಾರರು ರಾಷ್ಟ್ರೀಯ ಹೋರಾಟಗಾರರೂ ಆಗಿದ್ದವರು. 

ವೀರಣ್ಣನವರು ಮಾತಾಡಲಿ ಹಾಡಲಿ ಅಲ್ಲಿ ನಾಟಕೀಯತೆ ತುಂಬಿರುತ್ತದೆ. “ಮಾತನಾಡಿದರೆ ಹಾಡಿದಂತಿರಬೇಕು. ಹಾಡಿದರೆ ಮಾತನಾಡಿದಂತಿರಬೇಕು. ಇದೇ ರಂಗಭೂಮಿಯ ಗುಟ್ಟು” ಎಂದು ಅವರು ಹಲವು ಸಲ ಹೇಳಿದರು. ಹಾಡುವಾಗ ಇಲ್ಲವೇ ಅಭಿನಯದ ತುಣುಕನ್ನು ತೋರಿಸುವಾಗ ಅವರ ಮುಖ ಅಪೂರ್ವ ಕಳೆಯಿಂದ ಪ್ರಜ್ವಲಿಸುತ್ತಿತ್ತು. ಮುಖದ ಈ ನಾಟಕೀಯ ಬದಲಾವಣೆಯನ್ನು ಲಾಡ್‌ಸಾಬ್ ಅಮೀನಗಡ, ಫ್ಲೋರಿನಾ, ಸುಭದ್ರಮ್ಮ ಮನ್ಸೂರ್ ಮುಂತಾದ ರಂಗಭೂಮಿ ಜನರ ಜತೆ ಮಾತುಕತೆ ಮಾಡುವಾಗಲೂ ನಾನು ಕಂಡಿರುವೆ. ರಂಗಭೂಮಿಯ ನೆನಪುಗಳು ದೈಹಿಕ ವಯಸ್ಸನ್ನು ಕಳೆದು ಕಲಾತ್ಮಕ ಯೌವನವನ್ನು ತುಂಬಿಕೊಡುತ್ತವೆ. ವೃದ್ಧ ಯಯಾತಿ ತನ್ನ ಮಗನ ಯೌವನವನ್ನು ಕಡವಾಗಿ ಪಡೆದುಕೊಂಡು ಹೊಸಬಾಳು ಬದುಕಿದ ಪುರಾಣದ ಕತೆಯಿದೆಯಷ್ಟೆ. ಆದರೆ ವೀರಣ್ಣನವರು ತಮ್ಮ ಅನುಭವ ಪ್ರತಿಭೆ ಪ್ರಯೋಗಶೀಲತೆಗಳ ತೇಜಸ್ಸನ್ನು ಅಕಾಲ ಮುಪ್ಪಿಗೆ ಸಂದಿದ್ದ ತೊಗಲುಬೊಂಬೆಗಳಿಗೆ ಧಾರೆಯೆರೆದು ಅವಕ್ಕೆ ಹೊಸಜೀವ ತುಂಬಿದವರು.  
 ತೊಗಲುಬೊಂಬೆಯ ಕಲಾಲೋಕಕ್ಕೆ ವೀರಣ್ಣನವರು ಮಾಡಿದ ಈ ನಿರ್ಗಮನ ಮತ್ತು ಪುನರಾಗಮನ, ತೊಗಲುಬೊಂಬೆಗೆ ಕೊಟ್ಟ ರೂಪಾಂತರ ಮತ್ತು ಬಿಡುಗಡೆಗಳು, ಶಿವರಾಮ ಕಾರಂತರು ಯಕ್ಷಗಾನಕ್ಕೆ ಕೊಟ್ಟ ಕಾಯಕಲ್ಪವನ್ನು ನೆನಪಿಸುತ್ತವೆ. ಈ ಬಗೆಯ ಬಿಡುಗಡೆ ಮತ್ತು ರೂಪಾಂತರಗಳು ಬಳ್ಳಾರಿ ಜಿಲ್ಲೆಯಲ್ಲಿ ಸಮೃದ್ಧವಾಗಿದ್ದೂ ಕೊನೆ ಉಸಿರೆಳೆಯುತ್ತಿರುವಂತೆ ತೋರುವ ಬಯಲಾಟಗಳಿಗೆ ಸಿಗಲಿಲ್ಲವೆನ್ನುವುದು ದುರ್ದೈವದ ಸಂಗತಿ. ಈ ಬಯಲಾಟಗಳು ಈಗಲೂ ಒಬ್ಬ ಕಾರಂತರ ಇಲ್ಲವೇ ವೀರಣ್ಣವರಂತಹ ವ್ಯಕ್ತಿಪ್ರತಿಭೆಯ ಸಾಂಸ್ಥಿಕ ಮಧ್ಯಪ್ರವೇಶಕ್ಕೆ ಕಾಯುತ್ತಿವೆ. ವೀರಣ್ಣನವರಿಗೂ ಅವರ ‘ಶ್ರೀರಾಮಾಂಜನೇಯ ತೊಗಲಬೊಂಬೆ ಮೇಳ’ಕ್ಕೂ ಸಿಕ್ಕ ಯಶಸ್ಸು ಮತ್ತು ಮಾನ್ಯತೆ, ಕರ್ನಾಟಕದ ಅನೇಕ ತೊಗಲುಗೆಂಬೆ ಕಲಾವಿದರಿಗೂ ಅವರ ತಂಡಗಳಿಗೂ ಸಿಕ್ಕಿದಂತಿಲ್ಲ. ಜನಪದ ಕಲೆಗಳನ್ನು ಎರಡನೇ ದರ್ಜೆಯಲ್ಲಿ ನಡೆಸಿಕೊಳ್ಳುತ್ತಿರುವ ಸಮಾಜದ ಮನೋಭಾವದ ಬಗ್ಗೆ ವೀರಣ್ಣನವರಲ್ಲಿ ವಿಷಾದ ಮಡುಗಟ್ಟಿತ್ತು. ಜನಪದ ಕಲೆಗಳು ಮತ್ತು ಕಲಾವಿದ ಸಮುದಾಯಗಳು ತಮ್ಮ ಶಾಪಗ್ರಸ್ತ ಸ್ಥಿತಿಯಿಂದ ಹೊರಬರಲು ಜನಪದ ರಂಗಭೂಮಿಯಲ್ಲೇ ಆಧುನಿಕವಾದ ಪಲ್ಲಟಗಳು ಸಂಭವಿಸಬೇಕೊ ಅಥವಾ ಇಂತಹ ಜನಪದ ರಂಗಭೂಮಿಯನ್ನು ನೋಡುವ ಸಮಾಜದ ದೃಷ್ಟಿಕೋನ ಬದಲಾಗಬೇಕೊ ಎಂಬುದು ಮಾತ್ರ ಒಂದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.