ಗುರುವಾರ, ಜನವರಿ 6, 2011
ಬಣ್ಣದ ಬದುಕಿನಿಂದ ಡೊಳ್ಳು ಕುಣಿತಕ್ಕೆ ಮುಂದಾದ ಮಹಿಳೆಯರು
ಭೀಮಣ್ಣ ಗಜಾಪುರ
(ಪುರುಷರು ಮಾತ್ರವೇ ಭಾಗವಹಿಸುತ್ತಿದ್ದ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಇದನ್ನು ಹೇಗೆ ಗ್ರಹಿಸಬೇಕು ಎನ್ನುವ ಬಗ್ಗೆ ತಾತ್ವಿಕವಾಗಿ ಇನ್ನು ಆಲೋಚಿಸಬೇಕಿದೆ. ಆದರೆ ಈ ಬದಲಾವಣೆಯ ಚಹರೆಗಳನ್ನು ಹಿಡಿಯಲು ಸೂಕ್ಷ್ಮವಾಗಿ ಅವುಗಳ ಬೆಳವಣಿಗೆಯನ್ನು ಗಮನಿಸಬೇಕಿದೆ. ವಿರುಪಾಪುರದ ಮಹಿಳೆಯರ ಡೊಳ್ಳು ಕಲೆಯ ಕಥಾನಕವನ್ನು ಕೂಡ್ಲಿಗಿಯ ಕ್ರಿಯಾಶೀಲ ಪತ್ರಕರ್ತ ಭೀಮಣ್ಣ ಗಜಾಪುರ ಅವರು ಇಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. –ಸಂ)
ಬಣ್ಣ ಹಚ್ಚಿ ರಂಗಸಜ್ಜಿಕೆಯ ಮೇಲೆ 25ವಷ೯ಗಳಿಗಿಂತಲೂ ಹೆಚ್ಚು ಕಾಲ ನಟನೆ ಮತ್ತು ನಾಟ್ಯದ ಮೂಲಕ ರಂಗಾಸಕ್ತರನ್ನು ಸೆಳೆದ ಕೂಡ್ಲಿಗಿ ತಾ.ವಿರುಪಾಪುರ ಎಂಬ ಪುಟ್ಟ ಹಳ್ಳಿಯ ಹತ್ತಾರು ಕಲಾವಿದೆಯರು ಈಗ ಇಳಿವಯಸ್ಸಿನಲ್ಲಿಯೂ ತಮ್ಮ ಕ್ರಿಯಾಶೀಲತೆಯಿಂದ ಈಗ ಡೊಳ್ಳುಕುಣಿತ ಕಲಿಯಲು ಮುಂದಾಗಿದ್ದು ಈ ಮೂಲಕ ಹಿರಿಯ ರಂಗಕಲಾವಿದೆಯರು ತಮ್ಮ ಹಳ್ಳಿಯ ಇತರೆ ಕಿರಿಯ ರಂಗನಟಿಯರಿಗೂ ಮರೆಯಾಗುತ್ತಿರುವ ಭಜನೆ,ಕೋಲಾಟ,ಬಯಲಾಟ, ಜಾನಪದ ಸಣ್ಣಾಟ,ಡೊಳ್ಳುಕುಣಿತ ಕಲಿಸುವುದರ ಮೂಲಕ ಇಡೀ ಹಳ್ಳಿಯಲ್ಲಿಯೇ ಸಾಂಸ್ಕ್ರುತಿಕ ವಾತಾವರಣ ಮೂಡಿಸಿರುವುದು ಇಲ್ಲಿಯ ರಂಗನಟಿಯರ ಸಾಧನೆಯಾಗಿದೆ.
ಬಣ್ಣ ಹಚ್ಚಿ ಹಳ್ಳಿಗಳಲ್ಲಿ ಪೌರಾಣಿಕ,ಐತಿಹಾಸಿಕ,ಸಾಮಾಜಿಕ ನಾಟಕಗಳಲ್ಲಿ ನಿರಂತರ 35-40ವಷ೯ಗಳ ಕಾಲ ರಂಗಭೂಮಿಯಲ್ಲಿಯೇ ಬದುಕನ್ನು ಕಂಡ ವಿರುಪಾಪುರದ ಹತ್ತಾರು ಮಹಿಳೆಯರು ಇನ್ನೇನು ನಮ್ಮ ವಯಸ್ಸು ಇಳಿಮುಖವಾಗ್ತಿದೆ ಸಾಕಾಪ್ಪಾ ಈ ನಟನೆ ಸಹವಾಸ ಎಂದು ಮನೆಯಲ್ಲಿ ಇರಬಹುದಾಗಿತ್ತು.
ಆದರೆ ವಿರುಪಾಪುರದ ಈ ಹಿರಿಯ ರಂಗನಟಿಯರು ತಮ್ಮ ಹಳ್ಳಿಯ ಈಗಿನ ಯುವ ವಯಸ್ಸಿನ ರಂಗನಟಿಯರಿಗೆ ಈಗ ಮಾಗ೯ದಶ೯ಕರಾಗಿ ರಂಗಕಲೆಯ ಜೊತೆಗೆ ಅವರಿಗೆ ನಮ್ಮ ಹಳ್ಳಿಗಳಿಂದ ಮರೆಯಾಗುತ್ತಿರುವ ಗ್ರಾಮೀಣ ಕಲೆಗಳನ್ನು ಕಲಿಸುತ್ತಾ ಇದರ ಜೊತೆಗೆ ತಾವು ಅಭಿನಯಿಸುತ್ತಾ ಇಡೀ ಗ್ರಾಮವನ್ನೇ ಕಲೆಯ ತವರೂರಾಗಿ ಮಾಡಿರುವ ಇಲ್ಲಿಯ ಹಿರಿಯ ರಂಗನಟಿಯರ ಕಾಯ೯ ಮಾತ್ರ ಮಾದರಿಯಾಗಿದೆ.
ವಿರುಪಾಪುರ ಗ್ರಾಮದ ಪರಿಶಿಷ್ಠ ಪಂಗಡಕ್ಕೆ ಸೇರಿದ ಇಲ್ಲಿಯ ಹಿರಿಯ ರಂಗನಟಿ ಎಸ್.ಅಂಜಿನಮ್ಮ , ಬಿ.ಗಂಗಮ್ಮ,ಕೆ.ನಾಗರತ್ನಮ್ಮ,ಯು.ಶಾರಾದಾ, ಕೂಡ್ಲಿಗಿ ದುರುಗಮ್ಮ, ಟಿ.ಹಂಪಮ್ಮ, ಬಿ.ನಾಗಮ್ಮ, ಎಸ್.ನಾಗವೇಣಿ, ಕೆ.ರಂಗವೇಣಿ, ಬಿ.ಭಾಗ್ಯ, ಬಿ.ವಿಜಯಲಕ್ಷ್ಮಿ ಸೇರಿದಂತೆ ಇಲ್ಲಿಯ ಹತ್ತಾರು ರಂಗನಟಿಯರು ಈಗಾಗಲೇ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದು ಈಗ ಈ ಎಲ್ಲಾ ರಂಗನಟಿಯರು ಶೖತಿಲಯ ಮಹಿಳಾ ಕಲಾಸಂಘ ರಚಿಸಿಕೊಂಡೂ ಏನಾದರೂ ಸಾಧಿಸಬೇಕು ಎಂದು ನಿಧಾ೯ರ ಕೈಗೊಂಡರು ಆಗ ಪರಿಶಿಷ್ಠ ವಗ೯ದ ಮಹಿಳಾ ಕಲಾವಿದೆಯರಿಗೆ ಕನ್ನಡ ಮತ್ತು ಸಂಸ್ಕ್ಕುತಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ನೀಡುವಲ್ಲಿ ಸಹಾಯಕ ನಿಧೇ೯ಶಕ ಚೋರನೂರು ಕೊಟ್ರಪ್ಪ ಮುಂದೆ ಬಂದರು. ಅಲ್ಲಿಂದ ಶುರವಾಯ್ತು ನೋಡಿ ಈ ಹಳ್ಳಿಯ ದಿಟ್ಟಮಹಿಳೆಯರ ಸಾಧನೆಗಳು ವಿರುಪಾಪುರದಲ್ಲಿಯ ಈ ಶೖತಿಲಯ ಮಹಿಳಾ ಕಲಾ ಸಂಘದ ವತಿಯಿಂದ 2008ರಲ್ಲಿ ಬಳ್ಳಾರಿ ಯುವಜನ ಮೇಳ ಮತ್ತು ಬೀದರ್ ಯುವಜನ ಮೇಳದಲ್ಲಿ ಇಲ್ಲಿಯ ಪ್ರತಿಭಾನ್ವಿತ ನಟಿಯರಿಂದ ಕೋಲಾಟ ಕಾಯ೯ಕ್ರಮ ಯಶಸ್ವಿಯಾಗಿ ನಡೆಸಿದರು. ನಂತರ ಇದೇ ಸಂಘದ ರಂಗನಟಿಯರು ಸಂಪೂಣ೯ ಎಲ್ಲಾ ಪಾತ್ರಗಳನ್ನು ಮಹಿಳೆಯರೇ ನಿವ೯ಹಿಸಿ ಸಂಗ್ಯಾ-ಬಾಳ್ಯಾ ನಾಟಕವನ್ನು ಗಂಡಸರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಅಭಿನಯಿಸಿದರು. ಮರೆಯಾಗುತ್ತಿರುವ ಸಂಗ್ಯಾ-ಬಾಳ್ಯಾ, ಪ್ರಭಾಮಣಿ, ಗಿರಿಜಾ ಕಲ್ಯಾಣ ಎಂಬ ನಮ್ಮ ಜಾನಪದ ಪೌರಣಿಕ ನಾಟಕಗಳನ್ನು ಅಭಿನಯಿಸಿದ ಕೀತಿ೯ ಇಲ್ಲಿಯ ರಂಗನಟಿಯರದ್ದು.
ಡೊಳ್ಳುಕುಣಿತಕ್ಕೆ ಮುಂದಾದ ರಂಗನಟಿಯರುಃ ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆವತಿಯಿಂದ ಗುರು-ಶಿಷ್ಯ ಪರಂಪರೆ ಯೋಜನೆಯಡಿ ಮಹಿಳೆಯರಿಗೆ
ಡೊಳ್ಳು ಕುಣಿತ ತರಭೇತಿ ಕಾಯ೯ಕ್ರಮ 6 ತಿಂಗಳು ಕೂಡ್ಲಿಗಿ ತಾಲೂಕು ವಿರುಪಾಪುರದಲ್ಲಿ ನಡೆಯುತ್ತಿದ್ದು ಬಳ್ಳಾರಿಯ ಸಹಾಯಕ ನಿಧೇ೯ಶಕ ಚೋರನೂರು ಕೊಟ್ರಪ್ಪ ಸಕಾ೯ರದ ಈ ಯೋಜನೆಯ ಸಹಾಯ ಪಡೆದುಕೊಳ್ಳಲು ಆಗಸ್ಟ್ 6ರಂದೇ ವಿರುಪಾಪುರದಲ್ಲಿ ತರಭೇತಿ ಪ್ರಾರಂಭಿಸಿದ್ದಾರೆ. ಇಲ್ಲಿಯ ರಂಗನಟಿಯರಿಗೆ ಡೊಳ್ಳು ಕುಣಿತದ ತರಭೇತಿ ಊರ ಹೊರಗಿನ ತೋಟದ ಮನೆಯಲ್ಲಿ ನಡೆಯುತ್ತಿದೆ. ಮುಖಕ್ಕೆ ಬಣ್ಣ ಹಚ್ಚಿಕೊಂಡು ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ನಟನೆ ಮಾಡುತ್ತಿದ್ದು ರಂಗನಟಿಯರೀಗ ಕೊರಳಿಗೆ ಹದಿನೈದು ಕೆ.ಜಿ. ತೂಕದ ಪಾರಂಪರಿಕ ಡೊಳ್ಳು ಕೊರಳೊಳಗೆ ಹಾಕಿಕೊಂಡು ತರಭೇತಿ ಪಡೆಯುತ್ತಿದ್ದಾರೆ. ಗಂಡಸರಿಗೆ ಸೀಮಿತವಾಗಿದ್ದ ಡೊಳ್ಳುಕುಣಿತ ಈಗಾಗಲೇ ಸಾಗರ ಮತ್ತು ಬೆಳಗಾಂ ಮುಂತಾದ ಕೈಬೆರಳೆಣಿಕೆಯಷ್ಟು ಮಹಿಳಾ ತಂಡಗಳು ಈಗ ಮುಂದಾಗಿದ್ದು ಬಳ್ಳಾರಿ ಮತ್ತು ಸುತ್ತ ಮುತ್ತ ಜಿಲ್ಲೆಗಳಲ್ಲಿ ಕೂಡ್ಲಿಗಿ ತಾಲೂಕಿನ ವಿರುಪಾಪುರ ಗ್ರಾಮದ ಶೖತಿಲಯ ಕಲಾಸಂಘದ ಮಹಿಳೆಯರು ಡೊಳ್ಳುಕುಣಿತಕ್ಕೆ ಮುಂದಾಗಿರುವುದು ಈ ಭಾಗದಲ್ಲಿ ಮೊದಲಿಗರಾಗಿದ್ದಾರೆ.
ವಿರುಪಾಪುರದ ಹತ್ತಾರು ರಂಗಕಲಾವಿದೆಯರು ತಾವು ಓದಿದ್ದು ಎರಡನೇ ತರಗತಿ ಇಲ್ಲವೇ ಮೂರನೇ ತರಗತಿ ಅಲ್ಲಿಗೆ ಕಲಿಯೋದು ಮುಗೀತು. ಬಡತನದಲ್ಲಿಯೇ ಇರೋ ನಮ್ಮ ಕುಟುಂಬ ಸಲವಲು ಚಿಕ್ಕವಯಸ್ಸಿನಲ್ಲಿಯೇ ತಮ್ಮ ತಾಯಿಂದಿರ ಜೊತೆ ಹಳ್ಳಿಗಾಡಿನಲ್ಲಿ ಹವ್ಯಾಸಿ
ನಾಟಕಗಳಿಗೆ ಸ್ತ್ರೀ ಪಾತ್ರಾ ಮಾಡಲು ಹೋಗಾಬೇಕಾದ ಪರಿಸ್ಥಿತಿ ಬಂತು ಸಾರ್ ಅವರು ಕೊಟ್ಟ ಹತ್ತಾರು ರೂಪಾಯಿಯಿಂದಲೇ ನಮ್ಮಂತ ರಂಗನಟಿಯರ ಬದುಕು ಬೆಳಗ್ತಿತ್ತು. ಈಗ ಕಾಲ ಬದಲಾಗಿದೆ ವಯಸ್ಸಾಗುತ್ತಿದ್ದಂತೆ ನಮ್ಮನ್ನು ಹಳ್ಳಿಗಾಡಿನಲ್ಲಿ ನಾಟಕಕ್ಕೆ ಕರೆಯೋದು ಕಡಿಮೆಯಾಯಾಗ್ತಿದೆ, ಬಯಲಾಟದಲ್ಲಿಯೇ ಬದುಕು ಕಳೆದ ನಮ್ಮ ಜೀವನ ಈಗ ಬಯಲಾಗಿದೇ ಇರಲಿಕ್ಕೆ ಸರಿಯಾದ ಮನೆ ಇಲ್ಲ ಮಕ್ಕಳಿಗೆ ಉನ್ನತ ವಿಧ್ಯಭ್ಯಾಸ ಕೊಡಲು ಆಗ್ತಾ ಇಲ್ಲ ಸಾರ್ ಎನ್ನುತ್ತಾರೆ ವಿರುಪಾಪುರದ ಮತ್ತೊಬ್ಬ ಹಿರಿಯ ಕಲಾವಿದೆ ಬಿ.ಗಂಗಮ್ಮ.ಡೊಳ್ಳು ಕುಣಿತಕ್ಕೆ ಬೇಕಾದ ಕಾಲಲ್ಲಿಯ ಗೆಜ್ಜೆಗಳು, ಕಂಬಳಿಗಳನ್ನು ಕೊಡಿಸುವುದಾಗಿ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಒಪ್ಪಿಕೊಂಡಿದ್ದು, ಸಕಾ೯ರದಿಂದ ತರಬೇತಿ ಮುಗಿದ ತಕ್ಷಣ ನಮ್ಗೆ ನಾಲ್ಕು ಕೆಜಿ ತೂಕ ಇರೋ ಡೊಳ್ಳು ಕೊಡ್ತೀವಿ ಅಂತ ಚೋರನೂರು ಕೊಟ್ರಪ್ಪಣ್ಣನೋರು ತಿಳಿಸ್ಯಾರ ಸಾರ್, ಸಕಾ೯ರ ನಮ್ಗೆ ಡೊಳ್ಳು ಕುಣಿತಕ್ಕೆ ಸಹಾಯ ಮಾಡ್ತಿದೆ, ಸೊನ್ನ ಗ್ರಾಮದ ಮಲ್ಲೇಶಪ್ಪ ನಮ್ಗೆ ಚೆನ್ನಾಗಿ ಡೊಳ್ಳುಕುಣಿತ ತರಭೇತಿ ನೀಡ್ತಾ ಇದ್ದಾರೆ. ಈ ಸೌಲಭ್ಯ ಪಡೆಯೋದಕ್ಕೆ ಕೂಡ್ಲಿಗಿ ಬ್ಯಾಳಿ ಶಿವಪ್ರಸಾದಗೌಡ, ಕಣವಿ ವೀರಯ್ಯಸ್ವಾಮಿ, ಚಂದ್ರಾಚಾರಿ ಮುಂತಾದೋರು ಸಹಾಯ ಮರೆಯೋಂಗಿಲ್ರೀ ಎನ್ನುತ್ತಾರೆ ವಿರುಪಾಪುರದ ಹಿರಿಯ ರಂಗನಟಿ ಎಸ್.ಅಂಜಿನಮ್ಮ. ಮೂರನೇ ತರಗತಿ ಓದಿದರೂ ಒತ್ತಕ್ಷರಗಳನ್ನು ಯಾವೊಬ್ಬ ಎಂ.ಎ. ಓಧಿದವರಿಗೂ ಕಡಿಮೆ ಇಲ್ಲದೇ ಓದುವ ಇಲ್ಲಿಯ ರಂಗನಟಿಯರ ಛಲ ಅಚಲವಾಗಿದೆ. ಬದುಕು ಬರಡಾದರೂ ಸಮಾಜಮುಖಿಯಾಗಿ ಅಕಾಡೆಮಿಗಳು ಮಾಡದ ಕಾಯ೯ಗಳನ್ನು ಗ್ರಾಮೀಣ ಬಾಗದ ಈ ಅನಕ್ಷರಸ್ಥ ರಂಗನಟಿಯರು ಮರೆಯಾಗುತ್ತಿರುವ ಕಲೆಗಳನ್ನು ಉಳಿಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
1 ಕಾಮೆಂಟ್:
Dear Sir/Madam,
This is Madhusudan from Bangalore I'm web Developmant Student in Aptech Jayanagar center our sir not clearing our doubts so can you help me to clar that doubt sir/madam, i hope you will replay to this mail. my E-Mail ID madhu14n87@gmail.com
Regards,
Madhusudn.p
ಕಾಮೆಂಟ್ ಪೋಸ್ಟ್ ಮಾಡಿ