ಮಂಗಳವಾರ, ಡಿಸೆಂಬರ್ 1, 2015

ಸಂಗೀತಕ್ಕೆ ಇರುವುದೇ ಏಳು ಸ್ವರ. ಅದರಲ್ಲಿ ನನ್ನದು ಯಾವುದು, ನಿನ್ನದು ಯಾವುದು?

ಡಾ. ಹನುಮಣ್ಣನಾಯಕ ದೊರೆ

ಸೌಜನ್ಯ : ಪ್ರಜಾವಾಣಿ

ಹಿಂದೂಸ್ತಾನಿ ಸಂಗೀತದಲ್ಲಿ ಅನೇಕ ಪ್ರಕಾರಗಳಿವೆ. ಅವುಗಳಲ್ಲಿ ಗಜಲ್ ಕೂಡ ಒಂದು. ಗಜಲ್ ಗಾಯಕರು ಪಾಕಿಸ್ತಾನದಲ್ಲೂ ಇದ್ದಾರೆ, ಭಾರತದಲ್ಲೂ ಇದ್ದಾರೆ.  ಪಾಕಿಸ್ತಾನದ ಶ್ರೇಷ್ಠ ಗಾಯಕರಾದ ಉಸ್ತಾದ ಬಡೇ ಗುಲಾಮ್‌ ಅಲಿಖಾನ್, ನಜಾಕತ್ ಅಲಿ ಸಲಾಮತ್ ಅಲಿ, ಅದ್ನಾನ್ ಸಮಿ, ಮೆಹದಿ ಹಸನ್, ಗುಲಾಮ್ ಅಲಿ ಮುಂತಾದವರ ಗಾಯನವೆಂದರೆ ಭಾರತದಲ್ಲಿ ಅಚ್ಚುಮೆಚ್ಚು. ಇತ್ತೀಚೆಗೆ ಭಾರತದಲ್ಲಿ ಹಾಡಲು ಬಂದ ಗುಲಾಮ್ ಅಲಿಯವರಿಗೆ ಇಲ್ಲಿ ಅಡ್ಡಿಯುಂಟಾಗಿದೆ. ಇದರಿಂದ ಸಂಗೀತ ಲೋಕಕ್ಕೆ ನಿರಾಶೆ, ಆಘಾತವುಂಟಾಗಿದೆ. ಮೇರು ಗಜಲ್‌ ಗಾಯಕ ಗುಲಾಮ್ ಅಲಿ ಅವರು ಭಾರತದಲ್ಲಿ ಹಾಡಬಾರದು ಎಂದಾದರೆ ಭಾರತದಲ್ಲಿ ಯಾರೂ ಕೂಡ ಹಿಂದೂಸ್ತಾನಿ ಸಂಗೀತವನ್ನು ಹಾಡಲು ಸಾಧ್ಯವಿಲ್ಲ ಎನ್ನುವ ಅರ್ಥವೂ ಹೊರಡುತ್ತದೆ. ಯಾರೂ ಎಂದರೆ ಹಿಂದೂ, ಮುಸ್ಲಿಂ, ಫಾರಸಿ, ಜೈನ್, ಕ್ರೈಸ್ತ, ಸಿಖ್ ಮುಂತಾದ ಧರ್ಮಗಳ ಗಾಯಕರು ಎಂದರ್ಥ.

ಪಾಕಿಸ್ತಾನ ಕುರಿತು ಭಾರತದ ಕೆಲವು ಮನಸ್ಸುಗಳಿಗೆ ಇರುವ ಹಲವು ದೃಷ್ಟಿಕೋನಗಳಲ್ಲಿ ಎರಡು ವಿಶೇಷ ಅನಿಸುತ್ತದೆ. ಒಂದು ರಾಷ್ಟ್ರೀಯತೆಯ ದೃಷ್ಟಿಕೋನ, ಮತ್ತೊಂದು ಧಾರ್ಮಿಕತೆಯ ದೃಷ್ಟಿಕೋನ. ಭಾರತದ ರಾಷ್ಟ್ರೀಯತೆಯ ದೃಷ್ಟಿಕೋನವು ಸದಾ ಪಾಕಿಸ್ತಾನವನ್ನು ಎದುರು ದೇಶವೆಂದು ನೋಡುತ್ತದೆ. ಧಾರ್ಮಿಕತೆಯ ದೃಷ್ಟಿಕೋನವು ಪಾಕಿಸ್ತಾನವನ್ನು ಮುಸ್ಲಿಂ ಎಂಬ ಉಪಾಧಿಯಿಂದ ನೋಡುತ್ತದೆ. ಈ ಎರಡೂ ದೃಷ್ಟಿಕೋನಗಳು ಪಾಕಿಸ್ತಾನವು ತನ್ನದಲ್ಲವೆನ್ನುವುದನ್ನೇ ಹಟವಾಗಿ ಸಾಧಿಸುತ್ತವೆ. ಒಂದು ವಿಚಿತ್ರವಾದ ಆತ್ಮಪ್ರಶ್ನೆ ಎಂದರೆ ಅಮುಸ್ಲಿಂ ಭಾರತದ ಅವತಾರವನ್ನು ಪ್ರತ್ಯಕ್ಷೀಕರಣ ಮಾಡಿಕೊಳ್ಳುವುದು ಹೇಗೆ ಎಂಬುದು. ಅಮುಸ್ಲಿಂ ಭಾರತವೊಂದು ಇದೆಯಾ ಅಥವಾ ಅಂಥಾದ್ದು ಇರಲು ಸಾಧ್ಯವೆ? ಹಾಗೆಯೇ ಅಮುಸ್ಲಿಂ ಹಿಂದೂಸ್ತಾನಿ ಸಂಗೀತವನ್ನು ಊಹಿಸಲೂ ಸಾಧ್ಯವಿಲ್ಲ.

ವಿಶೇಷವಾಗಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಮಾತಾಡುವಾಗ ಇಂತಹ ಪ್ರಶ್ನೆಗಳ ಬುಗ್ಗೆಗಳು ಪುಟಪುಟಿದು ಮೇಲೇಳುತ್ತವೆ. ಪಂಡಿತ ಬಸವರಾಜ ಬೆಂಡಿಗೇರಿಯವರೆಂಬ ತಬಲಾವಾದಕರು ಧಾರವಾಡದಲ್ಲಿದ್ದರು. ಬೆಂಡಿಗೇರಿಯವರು, ಮಹಾನ್ ತಬಲಾ ಗುರು ಉಸ್ತಾದ್ ಮೆಹಬೂಬ್‌ಸಾಬ್ ಮಿರಜಕರ್ ಅವರ ಖಾಸಾ ಶಿಷ್ಯರು. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಅವರು ಹೇಳುತ್ತಿದ್ದ ಒಂದು ಮಾತು ಕೇಳಿ ನಾವು ಗಾಬರಿಯಾಗುತ್ತಿದ್ದೆವು. ಉಸ್ತಾದರು ಬೆಂಡಿಗೇರಿಯವರ ಕೈಯಲ್ಲಿ ಮಾರ್ಕೆಟ್‌ನಿಂದ ಮಟನ್ ತರಿಸುತ್ತಿದ್ದರಂತೆ. ಬೆಂಡಿಗೇರಿಯವರೇ ಅದನ್ನು ತೊಳೆದುಕೊಂಡು ಅಡುಗೆ ಮನೆಗೆ ಹೋಗಿ ಗುರುಮಾತೆಗೆ ಕೊಡುತ್ತಿದ್ದರಂತೆ.

ಗುರುಗಳು ತಮ್ಮ ಮಡದಿಗೆ ಹೀಗೆ ಹೇಳುತ್ತಿದ್ದರಂತೆ:‘ಏ ಬಚ್ಚೇಕೋ ದಾಲ ಚಾವಲ ಖಿಲಾವೋ ಕ್ಯೂಂಕೀ ಏ ಹಿಂದೂ ಹೈ, ಏ ಲಿಂಗಾಯತ ಹೈ’ ಗಜಲ್ ಗಾಯಕ ಗುಲಾಮ್ ಅಲಿ ಅವರು ಮೊನ್ನೆ ಆಲ್ ಇಂಡಿಯಾ ರೇಡಿಯೊ ಉರ್ದು ಸರ್ವೀಸ್‌ ಸ್ಟೇಷನ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಶ್ರೇಷ್ಠ ಮಾತುಗಳನ್ನಾಡಿದರು. ಅವರು ಹೀಗೆ ಹೇಳಿದರು. ‘ಬಿಬಿಸಿ ಲಂಡನ್‌ನ ಒಂದು ಸಂದರ್ಶನದಲ್ಲಿ ಪ್ರಖ್ಯಾತ ಸಂಗೀತ ನಿರ್ದೇಶಕ ಮದನ್‌ಮೋಹನ್ ಅವರು ನನ್ನ ಬಗ್ಗೆ ಬಹಳ ಪ್ರೀತಿಯ ಮಾತಾಡಿದ್ದರು’ ಎಂದು. ಸಂದರ್ಶಕರು ಅವರಿಗೆ ಕೇಳಿದ ಒಂದು ಪ್ರಶ್ನೆ ಹೀಗಿತ್ತು. ‘ಹಿಂದೂಸ್ತಾನದಲ್ಲಿ ನಿಮ್ಮ ಇಷ್ಟದ ಉಪ ಶಾಸ್ತ್ರೀಯ ಗಾಯಕರು ಯಾರು?’ ಎಂದು. ಅದಕ್ಕೆ ಗುಲಾಮ್ ಅಲಿ ಅವರು ‘ಮಾಶಲ್ಲಾ ಮಾಶಲ್ಲಾ! ಗಿರಿಜಾದೇವಿ, ನಿರ್ಮಲಾದೇವಿ, ಬೇಗಂ ಅಖ್ತರ್, ಲಕ್ಷ್ಮೀಶಂಕರ್ ಪಂಡಿತ್, ಜಗಜಿತ್‌ ಸಿಂಗ್ ಮುಂತಾದವರು ನನ್ನ ಇಷ್ಟದವರು’ ಎಂದರು. ಅವರು ಭಾರತದ ಗಜಲ್ ಗಾಯಕ ಜಗಜಿತ್‌ ಸಿಂಗ್ ಅವರನ್ನು ‘ಭಾಯಿ’ ಎಂದು ಕರೆಯುತ್ತಿದ್ದರು.

ನಾನು ಮತ್ತು ನನ್ನ ಸಂಗೀತ ಗೆಳೆಯರು ಗುಲಾಮ್ ಅಲಿ ಅವರ  ಹಾಡುಗಾರಿಕೆ ಕೇಳಿ ಮೂಕವಿಸ್ಮಿತರಾಗುತ್ತೇವೆ. ಪಂಡಿತ ಭೀಮಸೇನ ಜೋಶಿ ಅವರ ಗುರು ಸವಾಯಿ ಗಂಧರ್ವರು ಹಿಂದೂಗಳು (ಬ್ರಾಹ್ಮಣರು) ಮತ್ತು ಅವರ ಗುರು ಉಸ್ತಾದ್ ಅಬ್ದುಲ್ ಕರೀಂಖಾನ್ ಸಾಹೇಬರು ಮುಸ್ಲಿಮರು. ಆದರೆ ಅವರನ್ನು ಬರೀ ಧರ್ಮದ ಚೌಕಟ್ಟಿನಲ್ಲಿ ನೋಡಲಾದೀತೇ! ಅವರು ಭೈರವಿ ರಾಗದಲ್ಲಿ ‘ಜಮುನಾಕೇ ತೀರ’ ಎಂಬ ಠುಮ್ರಿಯನ್ನು ಹಾಡುತ್ತಿದ್ದರು. ಪಾಕಿಸ್ತಾನದ ಉಸ್ತಾದ್ ಬಡೇಗುಲಾಮ್ ಅಲಿ ಖಾನ್ ಸಾಹೇಬರು ಪಹಾಡಿ ರಾಗದಲ್ಲಿ ‘ಹರಿ ಓಂ’ ಹಾಡುತ್ತಿದ್ದರು.  ಮಹ್ಮದ್ ರಫಿ ಅವರು ‘ಬೈಜು ಬಾವರಾ’ ಸಿನಿಮಾದಲ್ಲಿ ಮಾಲಕೌಂಸ ರಾಗದಲ್ಲಿ ‘ಹರಿ ಓಂ ಮನ ತರಫತ ಹರಿ ದರುಶನಕೋ ಆಜ’ ಹಾಡಿದ್ದಾರೆ.

ಮೇರುಖಂಡ ಶೈಲಿಯ ಮೇರು ಗಾಯಕ ಉಸ್ತಾದ್ ಅಮೀರ್‌ಖಾನ್ ಸಾಹೇಬರ ಮಾನಸಗುರು ಹಾಗೂ ಮೇರುಖಂಡ ಗಾಯಕಿಯ ಸೃಷ್ಟಿಕರ್ತ ಉಸ್ತಾದ್ ವಹೀದ್ ಖಾನ್ ಸಾಹೇಬರು ಜಂಗಮ ಮೂರ್ತಿಗಳಾಗಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಗುರುಗಳು. ವಹೀದ್‌ಖಾನ್ ಸಾಹೇಬರು ಶಿವಯೋಗ ಮಂದಿರದಲ್ಲಿ ಹಲವು ವರ್ಷ ಇದ್ದು ಪಂಚಾಕ್ಷರ ಗವಾಯಿಗಳಿಗೆ, ಪುಟ್ಟರಾಜ ಗವಾಯಿಗಳಿಗೆ ಮತ್ತು ಬಸವರಾಜ ರಾಜಗುರುಗಳಿಗೆ ಸಂಗೀತ ಕಲಿಸಿ ಹೋಗಿದ್ದಾರೆ. ನಾನು ಭೈರವ ರಾಗದಲ್ಲಿ ವಿಲಂಬಿತ ಏಕತಾಲದಲ್ಲಿ ‘ಅಲ್ಲಾ ಹೋ ಅಕ್ಬರ್’ ಎಂಬ ಚೀಜ್ ಕಟ್ಟಿ ಹಾಡಿದ್ದೇನೆ. ಅದು ಗುಲ್ಬರ್ಗ ಆಕಾಶವಾಣಿಯಿಂದ ಪ್ರಸಾರವಾಗಿದೆ. ಪಂಡಿತ ಮಲ್ಲಿಕಾರ್ಜುನ ಮನ್ಸೂರರು ಶಿವಮತ ಭೈರವ ರಾಗದಲ್ಲಿ ‘ಪ್ರಥಮ ಅಲ್ಲಾ’ ಎಂಬ ಚೀಜನ್ನು ಹಾಡಿದ್ದಾರೆ. ಅವರ ಗುರು ಉಸ್ತಾದ್ ಮಂಜೀಖಾನ್, ಬುರ್ಜಿಖಾನ್‌ರ ತಂದೆ ಉಸ್ತಾದ್ ಅಲ್ಲಾದಿಯಾ ಖಾನ್ ಸಾಹೇಬರು ಬಹಾದ್ದೂರಿ ತೋಡಿ ರಾಗದಲ್ಲಿ ‘ಏ ಮಹಾದೇವ ಪಾರ್ವತಿ ಪತೇ’ ಎಂಬ ಚೀಜನ್ನು ಕಟ್ಟಿ ಹಾಡಿದ್ದಾರೆ ಮತ್ತು ಕಲಿಸಿದ್ದಾರೆ.

ಅವರು ದಿನಾಲೂ ಮುಂಜಾನೆ ತಮ್ಮ ಮಕ್ಕಳೊಂದಿಗೆ ಈ ಚೀಜನ್ನು ಹಾಡುತ್ತಿದ್ದರಂತೆ. ಪರವೀನ್ ಸುಲ್ತಾನಾ ಅವರು ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ಅವರು ಭೈರವಿ ರಾಗದ ‘ಭವಾನಿ ದಯಾನಿ’ ಎಂಬ ಚೀಜನ್ನು ಬಹಳ ಸಂತೋಷದಿಂದ ಹಾಡುತ್ತಾರೆ. ನಮ್ಮ ಗುರುಗಳಾದ ಪಂಡಿತ ಬಸವರಾಜ ರಾಜಗುರು ಅವರು ಉಸ್ತಾದ್ ಅಮಾನ್ ಅಲಿ ಬೆಂಡಿಗೇರಿ ಅವರ ಬಳಿ ಮತ್ತು ತಾವು ಕ್ವೆಟ್ಟಾ, ಕರಾ

ಅವರು ದಿನಾಲೂ ಮುಂಜಾನೆ ತಮ್ಮ ಮಕ್ಕಳೊಂದಿಗೆ ಈ ಚೀಜನ್ನು ಹಾಡುತ್ತಿದ್ದರಂತೆ. ಪರವೀನ್ ಸುಲ್ತಾನಾ ಅವರು ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ಅವರು ಭೈರವಿ ರಾಗದ ‘ಭವಾನಿ ದಯಾನಿ’ ಎಂಬ ಚೀಜನ್ನು ಬಹಳ ಸಂತೋಷದಿಂದ ಹಾಡುತ್ತಾರೆ. ನಮ್ಮ ಗುರುಗಳಾದ ಪಂಡಿತ ಬಸವರಾಜ ರಾಜಗುರು ಅವರು ಉಸ್ತಾದ್ ಅಮಾನ್ ಅಲಿ ಬೆಂಡಿಗೇರಿ ಅವರ ಬಳಿ ಮತ್ತು ತಾವು ಕ್ವೆಟ್ಟಾ, ಕರಾಚಿಯಲ್ಲಿದ್ದಾಗ ಕಲಿತುಬಂದ ‘ಬಾನ ನೈನೋಂಕಾ ಜಾಲಿಂನೇ’ ಮತ್ತು ‘ತೇರಿ ತಿರಚಿ ನಜರಿಯಾಕೇ ಬಾನ್’ ಎಂಬ ಉರ್ದು ಕವ್ವಾಲಿಗಳನ್ನು ಹಾರಾಡಿ ಹಾಡುತ್ತಿದ

ಅಪ್ಪನ ಕಾಯುವ ಪುಟ್ಟ ಮಗಳು

-ಡಾ. ಅನಸೂಯ ಕಾಂಬಳೆ

               { “ಲಾಟೀನ ಬೆಳಕು” ಆತ್ಮಕಥೆಯ ಆಯ್ದ ಭಾಗ}
               ಸೌಜನ್ಯ: http://aniketana.org

  ನನ್ನ ತಂದೆ ಪರಮಾನಂದ ವಾಡಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾನೂ ಅವರ ಶಾಲೆಯಲ್ಲಿಯೇ ಓದುತ್ತಿದ್ದೆ. ನಾನು ಪ್ರತಿದಿನ ತಂದೆಯೊಡನೆಯೇ ಶಾಲೆಗೆ ಹೋಗಿ ಸಂಜೆ ಅವರೊಂದಿಗೆ ಮನೆಗೆ ಮರಳಿ ಬರುತ್ತಿದ್ದೆ. ನನ್ನ ತಮ್ಮ ಹುಟ್ಟಿದ ಮೇಲೆ ನಮ್ಮ ದೊಡ್ಡಪ್ಪ ಅಂದರೆ ನನ್ನ ತಂದೆಯ ದೊಡ್ಡಪ್ಪನ ಮಗ ಹೊಲದಲ್ಲಿ ಪಾಲು ನೀಡುವ ಬಗ್ಗೆ ತಕರಾರು ತೆಗೆದಿದ್ದರಿಂದ ಕೋರ್ಟಿನಲ್ಲಿ ಕೇಸು ನಡೆದಿತ್ತು. ನಮ್ಮ ಹೊಲಗೇರಿಯ ಎಲ್ಲ ಜಗಳಗಳು ನಮ್ಮೂರ ಗೌಡರ ಮನೆಯಲ್ಲೇ ಬಗೆಹರಿಯುತ್ತಿದ್ದವು. ತುಂಬಾ ಸ್ವಾಭಿಮಾನಿಯಾದ ನನ್ನಪ್ಪ ಗೌಡರ ಬಳಿ ಹೋಗದ್ದರಿಂದ ಸಹಜವಾಗಿ ಅವರ ವೈರ ಕಟ್ಟಿಕೊಂಡಿದ್ದ.
ಹೀಗಾಗಿ ನಮ್ಮ ತೋಟದಲ್ಲಿದ್ದ ಅರ್ಧದಷ್ಟು ಜನ ಅಪ್ಪನ ಜೊತೆಗಿದ್ದರು. ಅಲ್ಲದೆ ಗೌಡರ ವಿರೋಧಿಸುವ ಪಾಲಬಾವಿ ಸಾಹುಕಾರರು ಅಪ್ಪನ ಸ್ನೇಹಿತರಾಗಿದ್ದರು. ಪಾಲಬಾವಿ ಸಾಹುಕಾರ ಇಂಚಗೇರಿ ಸಂಪ್ರದಾಯವನ್ನು ಅನುಸರಿಸುತ್ತಾ ಜಾತ್ಯಾತೀತ ಮನೋಭಾವ ಹೊಂದಿದ್ದು ಹಾಗೇ ನಡೆದುಕೊಳ್ಳುತ್ತಿದ್ದರಿಂದ ಅಪ್ಪ ಅವರನ್ನು ಬಲವಾಗಿ ನಂಬಿದ್ದ. ಇದರಿಂದಾಗಿ ಗೌಡರ ಸಿಟ್ಟು ಇಮ್ಮಡಿಯಾಗಿತ್ತು. ಅಪ್ಪನನ್ನು ಮಣಿಸಲು ದೊಡ್ಡಪ್ಪನನ್ನೇ ಬಳಸಿಕೊಳ್ಳುತ್ತಿದ್ದರು.
ನಮ್ಮ ತೋಟದಲ್ಲಿ ನಮ್ಮ ಜನರ ಸುಮಾರು ಇಪ್ಪತ್ತೈದು ಮನೆಗಳಿದ್ದವು. ಅವುಗಳಲ್ಲಿ ಮೂರು ಮಂಗಳೂರು ಹಂಚಿನ ಮನೆಗಳಿದ್ದರೆ ಉಳಿದವು ಚಿಕ್ಕಪುಟ್ಟ ಹರಕು ಗುಡಿಸಲುಗಳೇ ಆಗಿದ್ದವು. ನಮ್ಮದು ಕೂಡ ಒಂದು ಗುಡಿಸಲೇ ಆಗಿತ್ತು. ನನ್ನ ತಂದೆ ಐದನೆಯತ್ತಾ ಓದುತ್ತಿರುವ ನಮ್ಮ ದೊಡ್ಡಪ್ಪ ತನ್ನ ಸ್ವಂತ ಅಕ್ಕನನ್ನೇ ಆಸ್ತಿಗೋಸ್ಕರ ಕೊಲೆ ಮಾಡಿದ್ದರಂತೆ. ಮುಂದೆ ಅವರನ್ನು ಜೈಲಿನಿಂದ ಬಿಡಿಸಲು ವಕೀಲರ ಫೀ ಕಟ್ಟಲು ಹಣಬೇಕೆಂದು ಹೇಳಿದ್ದರಿಂದ ಎಂಟು ಎಕರೆ ಜಮೀನನ್ನು ಮಾರಿದ್ದರು. ತೋಟದಲ್ಲಿರುವ ಎರಡು ಹೊಲಗಳಲ್ಲಿ ಒಂದು ಕಡೆ ನೀನು. ಇನ್ನೊಂದು ಕಡೆ ನಾನು ಎಂದು ಅಪ್ಪ ಮತ್ತು ದೊಡ್ಡಪ್ಪ ಆಗ ಉಳಿದ ಜಮೀನನ್ನು ಹಂಚಿಕೊಂಡಿದ್ದರು. ನಮ್ಮ ಮತ್ತು ದೊಡ್ಡಪ್ಪನ ಹೊಲದ ನಡುವೆ ನಾಲ್ಕೈದು ಜನರ ಹೊಲಗಳಿದ್ದವು. ಅಪ್ಪ ಎಂಟು ಎಕರೆ ಜಮೀನು ಮಾರಲು ಒಪ್ಪಿ ಸಹಿ ಹಾಕಿದ್ದರಿಂದ ಒಂದು ಎಕರೆ ಜಮೀನನ್ನು ತನಗಿಟ್ಟುಕೊಂಡು ಒಂದು ಎಕರೆ ಮೂವತ್ತು ಗುಂಟೆ ಜಮೀನನ್ನು ಅಪ್ಪನಿಗೆ ಕೊಟ್ಟಿದ್ದ. ಮುಂದೆ ಅಪ್ಪ ನೌಕರಿ ದೊರೆತ ಮೇಲೆ ಕುಟುಂಬ ಸ್ವಲ್ಪ ಸುಧಾರಿಸಿದ ಮೇಲೆ ಬುಲ್ಡೋಜರ್ ನಿಂದ ಲೇವಲಿಂಗ ಮಾಡಿಸಿದ್ದರಿಂದ ಹೊಲದಲ್ಲಿ ಚೆನ್ನಾಗಿ ಬೆಳೆ ಬರತೊಡಗಿತು.
ನಾವು ನಾಲ್ಕು ಜನ ಹೆಣ್ಣು ಮಕ್ಕಳು ಹುಟ್ಟಿದ ಮೇಲೆ ನಮಗೊಬ್ಬ ತಮ್ಮ ಹುಟ್ಟಿದ. ನಾವು ಹೆಣ್ಣು ಮಕ್ಕಳು ಹುಟ್ಟಿದಾಗ ತನಗೇ ಹೊಲ ದಕ್ಕುತ್ತದೆಂದು ಅವಣಿಸಿದ್ದ ದೊಡ್ಡಪ್ಪ, ತಮ್ಮ ಹುಟ್ಟಿದ ಮೇಲೆ ಆ ಹೊಲ ತನಗೇ ಸೇರಬೇಕೆಂದು ತಕರಾರು ತೆಗೆದ. ನೀನು ಉಡುಕಿ ಮದುವೆ ಮಾಡಿದವಳಿಗೆ ಹುಟ್ಟಿದ್ದರಿಂದ ನಿನಗೆ ಹೊಲದಲ್ಲಿ ಪಾಲು ಕೊಡಲು ಬರುವುದಿಲ್ಲ ಎಂದು ವಾದಿಸತೊಡಗಿದ. ನಮ್ಮ ಆಯಿ( ತಂದೆಯ ತಾಯಿ) ನನ್ನ ತಂದೆಯ ತಂದೆಗೆ ಎರಡನೆಯ ಹೆಂಡತಿಯಾಗಿದ್ದಳು. ಅವರ ಮೊದಲ ಹೆಂಡತಿ ನಮ್ಮ ಅಜ್ಜನನ್ನು ಏಕೆ ಬಿಟ್ಟು ಹೋಗಿದ್ದಳೆಂದು, ಉಡುಕಿ ಮದುವೆ ಎಂದರೆ ಏನು ಎಂಬುದು ಚಿಕ್ಕವಳಾದ ನನಗೆ ಆಗ ಗೊತ್ತಿರಲಿಲ್ಲ.
ನಮ್ಮ ತೋಟದ ನಮ್ಮ ಓಣಿಯ ಎಲ್ಲ ಹಿರಿಯರು ಸೇರಿ ಉಡುಕಿ ಆದವರ ಮಗನಿಗೆ ಪಾಲಿಲ್ಲ ಅನ್ನುವುದು ತಪ್ಪು, ಹಾಗೆನ್ನಲು ಬರುವುದಿಲ್ಲ ಅಂತ ದೊಡ್ಡಪ್ಪನಿಗೆ ಛೀಮಾರಿ ಹಾಕಿದ್ದರಿಂದ ತನ್ನ ರಾಗವನ್ನು ಬದಲಿಸಿದ. ಆ ಹೊಲದಲ್ಲಿ ಅವನ ಹೆಸರಿಲ್ಲ, ಮಗ್ಗುಲಲ್ಲಿರುವ ಅಣ್ತಮ್ಮರ ಹೊಲದಲ್ಲಿ ಅಕ್ಕನ ಹೆಸರಿದೆ. ಅಲ್ಲೇ ಹೋಗಿ ತಗೋ ಎಂದು ತಕರಾರು ತೆಗೆದು ಮತ್ತೆ ಜಗಳವನ್ನು ಮುಂದುವರಿಸಿದ. ಆಗ ಅಪ್ಪ ಅನಿರ್ವಾಯವಾಗಿ ಹೊಲದ ಹಕ್ಕುಪತ್ರಗಳಲ್ಲಿ ಹೆಸರುಗಳು ಅದಲು ಬದಲಾಗಿ ತಪ್ಪಾಗಿದೆ ಎಂದು ವಾದಿಸಿ ಕೋರ್ಟಿಗೆ ಹೋಗಿ ಕೇಸು ದಾಖಲಿಸಿದರು. ದೊಡ್ಡಪ್ಪ ಜಗಳ ಮುಂದುವರಿಸಿದಾಗ ಪೋಲೀಸು ಕಂಪ್ಲೇಟು ಕೊಟ್ಟಿದ್ದರು. ಆಗ ದೊಡ್ಡಪ್ಪ ಗೌಡರ ಆಶ್ರಯ ಪಡೆದ. ಅಪ್ಪ ಗೌಡರ ಬಳಿ ಹೋಗದೆ ಕೋರ್ಟು ಕಛೇರಿ ಅಂತ ಹೋಗಿದ್ದರಿಂದ ಗೌಡರು ಅಪ್ಪನ ಮೇಲೆ ಹಲ್ಲು ಕಡಿದರು.
ನಮ್ಮ ಹೊಲದಲ್ಲಿ ನಮ್ಮದೊಂದು ಚಿಕ್ಕ ಗುಡಿಸಲಿತ್ತು ನಾವು ಅದರಲ್ಲೇ ವಾಸಿಸುತ್ತಿದ್ದೆವು. ಆ ಗುಡಿಸಲೊಳಗೆ ಅವ್ವ ಕಲ್ಲು, ಇಟ್ಟಂಗಿ ಜೋಡಿಸಿ ಮಧ್ಯ ಗೋಡೆಯಂತೆ ಅರ್ಧ ಕಟ್ಟಿದ್ದರಿಂದ ಒಂದು ಅಡಿಗೆ ಕೋಣೆ ಮತ್ತು ಒಂದು ಹೊರ ಕೋಣೆಯಂತೆ ಕಾಣುತ್ತಿತ್ತು. ಆಗ ಶಾಲೆಯಲ್ಲಿ ಉಪ್ಪಿಟ್ಟು ಕೊಡುತ್ತಿದ್ದರಿಂದ ನಮ್ಮ ಮನೆಯಲ್ಲಿ ಖಾಲಿ ಎಣ್ಣಿ ಡಬ್ಬಗಳಿದ್ದವು. ಮಕ್ಕಳು ದೊಡ್ಡವರಾಗುತ್ತಿದ್ದಾರೆಂದು ಮಳೆ ನೀರು ಒಳಗೆ ಬರಬಾರದೆಮದು ಆ ಎಣ್ಣಿ ಡಬ್ಬಿಗಳನ್ನು ಕತ್ತರಿಸಿ ಅವ್ವ ಬಾಗಿಲು ಮಾಡಿಸಿದ್ದಳು. ಮಳೆಗಾಲ ಬಂತೆಂದರೆ ಗುಡಿಸಲು ಸೋರಬಾರದೆಂದು ಪ್ರತಿ ವರ್ಷ ಕಬ್ಬಿನ ರವುದಿ ಹೊದಿಸಿ ಬೆಚ್ಚಗೆ ಸೋರದಂತೆ ಮಾಡುತ್ತಿದ್ದಳು.
ಮುಂದೆ ಹೊಲದ ಕೇಸು ಕೋರ್ಟಿನಲ್ಲಿ ಇದ್ದುದರಿಂದ ನಾವು ಬಹಳ ವರ್ಷದಿಂದ ಅಲ್ಲೇ ವಾಸವಾಗಿದ್ದು, ಹೊಲದ ಬೇಸಾಯ ನಾವೇ ಮಾಡುತ್ತಿದ್ದೆವೆಂದು. ಕಬ್ಜಾದಲ್ಲಿ ಹೆಸರು ತಪ್ಪಾಗಿದೆಯೆಂದು ಕೋರ್ಟಿನಲ್ಲಿ ಸಾಬೀತು ಮಾಡಲು ಅಪ್ಪ ಸಾಕ್ಷಿಯಾಗಿ ಇರಲಿ ಎಂದು ಗುಡಿಸಲನ್ನು ರಿಪೇರಿ ಮಾಡಿಸದೆ ಹಾಗೇ ಬಿಟ್ಟ. ಹೀಗಾಗಿ ಗುಡಿಸಲು ಶಿಥಿಲಾವಸ್ಥೆ ತಲುಪಿತ್ತು. ಮಳೆ ಬಂದರೆ ಸೋರುತ್ತಿತ್ತು. ಸೋರುವ ಜಾಗದಲ್ಲೆಲ್ಲ ಪಾತ್ರೆಗಳನ್ನಿಟ್ಟು ಸೋರದ ಕಡೆ ನಮ್ಮನ್ನೆಲ್ಲ ಮಲಗಿಸುತ್ತಿದ್ದರು. ಬಾಗಿಲ ಹತ್ತಿರ ತಗ್ಗು ಮಾಡಿ ನೀರು ಮನೆಯೊಳಗೆ ನುಗ್ಗದಂತೆ ಅವ್ವ ನೋಡಿಕೊಳ್ಳುತ್ತಿದ್ದಳು. ಸೋರುವ ಕಡೆಗಳಲೆಲ್ಲಾ ಪಾತ್ರೆಗಳಲ್ಲಿ ನೀರು ತುಂಬಿದ್ದರೆ ಅವನ್ನು ಬಾಗಿಲು ತೆಗೆದು ಹೊರಗೆ ಸುರುವುತ್ತಿದ್ದಳು. ಒಳ ನುಗ್ಗುವ ನೀರನ್ನು ಬಳಿದು ಹೊರ ಚೆಲ್ಲುತ್ತಿದ್ದಳು.
ಹೀಗಾಗಿ ಮಳೆಗಾಲವು ನಮಗೆ ಭಯಂಕರವಾಗಿರುತ್ತಿತ್ತು. ಇದು ನಮ್ಮ ಪರಿಸ್ಥಿತಿ ಮಾತ್ರವಾಗಿರದೆ ನಮ್ಮ ಜನರ ಗುಡಿಸಲುಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿತ್ತು . ಮತ್ತೆ ಮುಂದಿನ ವರ್ಷದ ಮಳೆಗಾಲಕ್ಕೆ ನಮ್ಮ ಗುಡಿಸಲು ಕುಸಿಯತೊಡಗಿತು. ಜೋಳದ ದಂಟಿನಿಂದ ಕಟ್ಟಿ ಹಾಳು ಮಣ್ಣಿನಿಂದ ಬಳಿದ ಗೋಡೆಗಳು ಹೊರಳಿ ಕಳಚಿಕೊಂಡು ಬೀಳುವಂತಾದಾಗ ಅವು ಬೀಳದಂತೆ-ಆಧಾರಕ್ಕಾಗಿ 

ಕಟಕಿ ಹಚ್ಚಿ ಆಧಾರ ಕೊಟ್ಟು ನಿಲ್ಲಿಸಿದ್ದರಿಂದ ನಾವು ಎಡವಿ ಬೀಳದಂತೆ ಮನೆಯಲ್ಲಿ ಎಚ್ಚರಿಕೆಯಿಂದ ಓಡಾಡಬೇಕಿತ್ತು. ಮೇಲೆ ರವುದಿ ಕೊಳೆತದ್ದರಿಂದ ಮತ್ತೆ ರವುದಿ ಹೊದಿಸಿ ಅಪ್ಪ ಗುಡಿಸಲನ್ನು ಹಾಗೇ ಉಳಿಸಿದ.
ಬರಬರುತ್ತ ದೊಡ್ಡಪ್ಪನ ಕಾಟ ಮತ್ತೂ ಹೆಚ್ಚತೊಡಗಿತು. ಬೆಳೆ ಬೆಳೆಯುವ ಸಂಬಂಧ ಹೊಲಕ್ಕೆ ಗಳೆ ಹೊಡೆಯುವಾಗ ಬಂದು ತಡೆದ. ಗೌಡರ ಮನೆಗೆ ಹೋಗಿ ಹೇಳಿದ. ಇದರಿಂದ ಗೌಡರು ಕೆರಳಿದರು. ನಮ್ಮ ಊರಲ್ಲಾಗಲೀ ತೋಟದಲ್ಲಾಗಲಿ ನಮ್ಮ ಕೇರಿಯ ಹೆಣ್ಣು ಮಕ್ಕಳಾರೂ ಶಾಲೆಗೆ ಹೋಗುತ್ತಿರಲಿಲ್ಲವಾದ್ದರಿಂದ ನಾನು ಅಪ್ಪನ ಜೊತೆಗೇ ಶಾಲೆಗೆ ಹೋಗುತ್ತಿದ್ದೆ. ಶಾಲೆ ಬಿಟ್ಟ ಮೇಲೆ ಅಪ್ಪ ಪಾಲಬಾವಿ ಅವರ ಕಿರಾಣಿ ಅಂಗಡಿಗೆ ಹೋಗಿ ಪೇಪರು ತಗೊಂಡು ಓದುತ್ತಿದ್ದರು. ದಿನದ ಸುದ್ದಿಗಳನ್ನು ಸ್ನೇಹಿತರ ಜೊತೆಗೆ ಚರ್ಚಿಸುತ್ತಿದ್ದರು. ನಾನು ಅವರೊಂದಿಗೆ ಸುಮ್ಮನೆ ಕುಳಿತು ಕೇಳಿಸಿಕೊಳ್ಳುತ್ತಿದ್ದೆ. ಅಪ್ಪನಿಗೆ ತುಂಬಾ ಜನ ಸ್ನೇಹಿತರಿದ್ದರು. ಅವರಿಗೆ ಅಪಾರವಾದ ವಿದ್ಯಾರ್ಥಿ ಬಳಗವೂ ಇತ್ತು. ಇದರಿಂದಾಗಿ ಅಪ್ಪನಿಗೆ ವಿಶೇಷ ಗೌರವ ಸಿಗುತ್ತಿತ್ತು.
ಇದರಿಂದಾಗಿ ಅಪ್ಪನ ಒಡನಾಟದಲ್ಲಿ ನಾನು ಬೆಳೆಯುತ್ತಿದ್ದರಿಂದ ನನಗೆ ಅನೇಕ ವಿಷಯಗಳು, ಸಂಗತಿಗಳು ತಿಳಿಯುತ್ತಿದ್ದವು. ಪೇಪರ್ ಹೆಡ್ ಲೈನ್‍ಗಳು ಆಕರ್ಷಿಸುತ್ತಿದ್ದವು. ರೇಡಿಯೋದಲ್ಲಿ ವಾರ್ತೆ, ಪ್ರದೇಶ ಸಮಾಚಾರ ಕೇಳುವ ರೂಢಿಯಾಯಿತು.
ನಮ್ಮ ತೋಟದಿಂದ ಅಪ್ಪ ನೌಕರಿ ಮಾಡುತ್ತಿದ್ದ ಊರು ಪರಮಾನಂದವಾಡಿ ಸುಮಾರು ಎರಡ್ಮೂರು ಕಿಲೋ ಮೀಟರ್ ದೂರವಿತ್ತು. ನಾನು ಅಪ್ಪನ ಜೊತೆ ನಡದೇ ಹೋಗುತ್ತಿದ್ದೆ ಅಪ್ಪ ಬಹಳ ಅವಸರವಸರವಾಗಿ ನಡೆಯುತ್ತಿದ್ದರಿಂದ ಒಮ್ಮೊಮ್ಮೆ ಹಿಂದೆ ಬೀಳುತ್ತಿದ್ದ ನಾನು ಓಡಬೇಕಾಗಿತ್ತು. ಒಂದು ದಿನ ಹೀಗೆ ಶಾಲೆಗೆ ಹೋಗುತ್ತಿದ್ದಾಗ ನಮ್ಮೂರ ಗೌಡರ ಕಾರು ನಮ್ಮ ಬಳಿ ಬಂದು ನಿಂತಿತು. ಅದರಿಂದ ಮಿರಮಿರ ಮಿರುಗುವ ಬಿಳಿ ಬಟ್ಟೆ ಹಾಕಿದ್ದ ಗೌಡರು ಇಳಿದು ಬಂದು ಅಪ್ಪನ ಮುಂದೆ ನಿಂತರು. ನಮ್ಮ ಮನೆಗೆ ಯಾಕ ಬರೋದಿಲ್ಲೊ ಮಾಸ್ತರ?… ನಾಲ್ಕ ಅಕ್ಷರ ಕಲ್ತ ನೌಕರಿ ಹಿಡದೈದಿ ಅಂತ ಎಷ್ಟ ಸೊಕ್ಕೆ ಬಂದೈತಿ….. ಆ ಸಾವ್ಕಾರನ ಮನಿಗಿ ಹೋಗ್ತಿ. ನಿನ್ನ ಗುಂಡ ಹಾಕಿ ಕೊಂದ ಬಿಡ್ತೀನಿ…. ಅಂತ ಪಿಸ್ತೂಲನ್ನ ಎದೆಗೆ ಹಿಡಿದರು… ಕೊಂದ ಬಿಡ್ರಿ ಗೌಡ್ರ….. ನಾ ನಿಮ್ಮ ಮನಿಗೆ ಯಾಕ ಬರಬೇಕು …. ನಿಮ್ಮಲ್ಲಿ ನ್ಯಾಯ ಸಿಗ್ತತೇನು” ಎಂದು ಅಪ್ಪ ಅಂಜದೆ ಗರ್ಜಿಸಿದರು. “ ಇವತ್ತು ನಿನ್ನು ಸುಮ್ನಬಿಡ್ತುನು …. ಮುಂದೆ ನೋಡ್ತೇನು” ಅಂತ ಸಿಟ್ಟಿನಿಂದ ಬುಸುಗುಟ್ಟುತ್ತಾ ಕಾರು ಹತ್ತಿ ಹೋದರು.
ನನಗೆ ಏನಾಗುತ್ತಿದೆ ಎಂದು ತಿಳಿಯದ ಪಕ್ಕದಲ್ಲೇ ನಿಂತು ಮಿಕಿಮಿಕಿ ನೋಡುತ್ತಿದ್ದೆ. ಆಗ ನನಗೆ ಸಿನೇಮಾ ಬಗ್ಗೆ ಗೊತ್ತಿರಲಿಲ್ಲ. ಸಿನೇಮಾ ನೋಡಿರಲೂ ಇಲ್ಲ. ಹೀಗಾಗಿ ಪಿಸ್ತೂಲು ಹೇಗಿರುತ್ತದೆಂದು ಗೊತ್ತಿರಲಿಲ್ಲ. ಸಂಜೆ ತಿರುಗಿ ಮನೆಗೆ ಬಂದಾಗ ಅಪ್ಪ ನಮ್ಮ ಕಡೆಗಿದ್ದ ಅಣ್ತಮ್ಮರಿಗೆಲ್ಲ ಈ ಸುದ್ದಿ ಹೇಳಿದಾಗ ಅದು ಪಿಸ್ತೂಲೆಂದು. ಅದರಲ್ಲಿ ಗುಂಡುಗಳಿದ್ದು ಜೀವ ತೆಗೆದು ಕೊಲ್ಲುತ್ತದೆಂದು ತಿಳಿದು ಭಯವಾಯಿತು. ಈ ಸುದ್ದಿ ಊರ ತುಂಬ ಹರಿದಾಡಿತು
ಆಗ ಅವ್ವ ನನ್ನ ಕರೆದು ರಾತ್ರಿ ಹತ್ತಿರ ಕೂಡಿಸಿಕೊಂಡು ಊಟ ಮಾಡಿಸಿ. ನಿ ಅವನ ಜೋಡಿ ಹೋಗಾಗ ಹಿಂತ-ಮುಂದ ನೋಡಕೋತ ಹೋಗು…. ಅವ ಮುಂದ ಮಾರಿ ಮಾಡಿ ಹಂಗ ದಗಾದಗಾ ಹೋಗ್ತಿರ್ತಾನು… ಕಂಟ್ಯಾಗ- ಗಿಂಟ್ಯಾಗ ಯಾರರೇ ಕುಂತಿರ್ತಾರು.. ಯಾರರೆ ಅವನ ಕೊಲ್ಲಾಕ ಬಂದ್ರ ನೀ ಜೋರಾಗಿ ಚೀರಿ ಮಂದಿನ ಕರಿ…… ಮಂದಿ ಕೂಡಿದರ ಅವರು ಅಂಜಿ ಓಡಿ ಹೋಗ್ತಾರು….. ಅಂತ ನನ್ನ ಮ್ಯಾಗ ಅಪ್ಪನ ಕಾಯೋ ಭಾರ ಹಾಕಿದಳು.. ಅವ್ವ ಹೇಳಿದಂಗಾ ಮಾಡಕೋತ ನಾ ನಡಿತ್ತದ್ದೆ. ಹಿಂಗಾಗಿ ಬಾಳ ಹಿಂದೆ ಉಳಿತ್ತಿದ್ದೆ. ಮತ್ತ ಮುಂದ ಹೋಗೋ ಅಪ್ಪನ ನೋಡಿ ಹಿಂದ ಹಿಂದ ಓಡುತ್ತಿದ್ದೆ… ಅಪ್ಪನ ಮುಟ್ಟುವ ಧಾವಂತಕ್ಕೆ ಎದ್ದು ಬಿದ್ದು ಓಡುವಾಗ ಆ ಕಚ್ಚಾ ರಸ್ತೆಯಲ್ಲಿ ನನ್ನ ಬರಿಗಾಲಿಗೆ ಮುಳ್ಳುಗಳು ಚುಚ್ಚಿ ಕಾಲು ನೋವಾಗುತ್ತಿತ್ತು.
ರಾತ್ರಿ ಚಿಮಣಿ ಬೆಳಕಲ್ಲಿ ಸೂಜಿಯಿಂದ ಹಡ್ಡಿ ಮುಳ್ಳು ತೆಗೆದುಕೊಳ್ಳುವಾಗ ಬಗ್ಗಿದ್ದರಿಂದ ತುಂಬಾ ದಟ್ಟವಾದ ಕಪ್ಪನೆಯ, ಉದ್ದನೆಯ ನನ್ನ ಸುಂದರವಾದ ತಲೆಗೂದಲು( ನೆತ್ತಿಯಲ್ಲಿ ಮೇಲೆ ಎದ್ದ ಕೂದಲುಗಳು) ಚಿಮಣಿ ದೀಪಕ್ಕೆ ಹತ್ತಿ ಪುರುಪುರು ಸುಡುತ್ತಿದ್ದವು. ಮೂಗಿಗೆ ಸುಡುವ ವಾಸನೆ ಬಂದ ಕೂಡಲೆ ಅವ್ವನಿಗೆ ಗೊತ್ತಾಗದಿರಲಿ ಎಂದು ಮುಳ್ಳು ತೆಗೆಯುವುದನ್ನು ಬಿಟ್ಟು ಬಿಡುತ್ತಿದ್ದೆ. ಮರುದಿನ ನಡೆಯಲು ತ್ರಾಸ ಆಗುತ್ತಿತ್ತು. ನಾನು ಇನ್ನೂ ಹೆಗಲ ಮೇಲೆ ಕೂಡ್ರಿಸಿಕೊಂಡು ದವಾಖಾನೆಗೆ ಕರೆದೊಯ್ದದ್ದು ನೆನಪಾಗಿ ಅಳು ಉಕ್ಕಿ ಬರುತ್ತಿದ್ದು. ಆದರೆ ಈಗ ಅಪ್ಪನಿಗೆ ನೋವಾಗುತ್ತದೆಂದು ಹೇಳುತ್ತಿರಲಿಲ್ಲ. ಅಂದು ಹೋದ ಗೌಡರ ಕಾರು ಮುಂದೆ ಎಂದೂ ಪಿಸ್ತೂಲು ಹಿಡಿದು ಬೆದರಿಸಲು ಬರಲಿಲ್ಲ. ಇನ್ನೂ ಆ ದಾರಿಯೊಳ ಹೊಂಟರೆ ಹೊನೆವಾಡೆರ ತ್ವಾಟದ ಮನಿ ಬಂದ್ರ ಆ ದೃಶ್ಯ ನೆನಪಾಗಿ ಅಪ್ಪ ನಂಗ ಧೈರ್ಯಾ ಇರಬೇಕು ಅಂತ ಅನಸ್ತೈತಿ ಮತ್ತು ಅಪ್ಪನ ಬಗ್ಗೆ ಬಾಳ ಹೆಮ್ಮೆ ಉಕ್ಕಿ ಬರತೈತಿ.